Category Archives: Blog

Your blog category

ಅವಳಿ ಸುರಂಗ ಮಾರ್ಗ, ಮೇಲ್ಸೇತುವೆಗಳಿಗೆ ಬೇಕಿದೆ ಡಿಫೆನ್ಸ್ ಜಾಗ; ಸಚಿವ ರಾಜನಾಥ್ ಸಿಂಗ್​ಗೆ ಡಿ ಕೆ ಶಿವಕುಮಾರ್ ಮನವಿ – Kannada News | Bengaluru Infra: DK Shivakumar Seeks Defense Land for Twin Tunnels, Flyovers, Roads

ಕೇಂದ್ರ ಸಚಿವರ ಜೊತೆ ಡಿಸಿಎಂ ಡಿ.ಕೆ.ಶಿ ಮಹತ್ವದ ಚರ್ಚೆ

ನವದೆಹಲಿ, ಏಪ್ರಿಲ್ 25: ಡಿ.ಕೆ. ಶಿವಕುಮಾರ್ (DK Shivakumar) ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಶುಕ್ರವಾರ ಭೇಟಿ ಮಾಡಿ ಬೆಂಗಳೂರಿನ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ರಕ್ಷಣಾ ಇಲಾಖೆ ಭೂಮಿಯನ್ನು ಒದಗಿಸುವಂತೆ ಹಾಗೂ ವಿಮಾನ ನಿಲ್ದಾಣಗಳ ಸುತ್ತಮುತ್ತಲ ಕಟ್ಟಡ ಎತ್ತರದ ನಿರ್ಬಂಧಗಳನ್ನು ಸಡಿಲಿಸುವಂತೆ ಮನವಿ ಸಲ್ಲಿಸಿದ್ದಾರೆ.

ನಿರ್ಬಂಧ ಸಡಿಲಗೊಳಿಸುವಂತೆ ಕೋರಿಕೆ

ನವದೆಹಲಿಯಲ್ಲಿ ನಡೆದ ಈ ಸಭೆಯಲ್ಲಿ ಬೆಂಗಳೂರು ನಗರದ ವೇಗವಾದ ಅಭಿವೃದ್ಧಿಗೆ ಕೆಲವು ರಕ್ಷಣಾ ನೀತಿಗಳು ಅಡ್ಡಿಯಾಗುತ್ತಿರುವ ಬಗ್ಗೆ ಶಿವಕುಮಾರ್ ವಿವರಿಸಿದ್ದಾರೆ. ವಿಶೇಷವಾಗಿ ಹೆಚ್ಎಎಲ್ ವಿಮಾನ ನಿಲ್ದಾಣ ಹಾಗೂ ಯಲಹಂಕ ವಾಯುನೆಲೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ನೀಡಲಾಗುತ್ತಿರುವ ನಿರಾಕ್ಷೇಪಣಾ ಪತ್ರ (NOC) ಪ್ರಕ್ರಿಯೆಯಲ್ಲಿ ಕಠಿಣ ನಿಯಮಗಳನ್ನು ವಿಧಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ರಕ್ಷಣಾ ಇಲಾಖೆ ವಿಮಾನ ನಿಲ್ದಾಣಗಳ ಸುತ್ತಮುತ್ತಲ ಪ್ರದೇಶದಲ್ಲಿ ವಿಧಿಸಲಾಗಿರುವ ಕಟ್ಟಡಗಳ ಎತ್ತರದ ನಿರ್ಬಂಧಗಳ ಸಡಿಲಿಕೆ, ಅವಳಿ ಸುರಂಗ ಮಾರ್ಗ, ರೋಟರಿ ಮೇಲ್ಸೇತುವೆ ಸೇರಿದಂತೆ ವಿವಿಧ ಯೋಜನೆ ಜಾರಿಗೆ ರಕ್ಷಣಾ ಇಲಾಖೆ ಜಾಗಗಳನ್ನು ನೀಡುವಂತೆ ಹಾಗೂ ಸುರಕ್ಷತೆ ಹಾಗೂ ಪ್ರಗತಿಯ ವಿಚಾರವನ್ನು ಗಮನದಲ್ಲಿಟ್ಟುಕೊಂಡು ನಿರ್ಬಂಧಗಳನ್ನು ಸಡಿಲಗೊಳಿಸಿ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ.

ವಿವಿಧ ಯೋಜನೆ ಜಾರಿಗೆ ಬೇಕಿದೆ ರಕ್ಷಣಾ ಇಲಾಖೆ ಜಾಗ

ಬೆಂಗಳೂರಿನಲ್ಲಿ ಸಂಚಾರಿ ದಟ್ಟಣೆ ನಿವಾರಣೆಗೆ ಕೈಗೊಂಡಿರುವ ವಿವಿಧ ಯೋಜನೆಗಳಿಗೆ ಅಗತ್ಯವಿರುವ ರಕ್ಷಣಾ ಇಲಾಖೆ ಜಾಗ ನೀಡುವ ಬಗ್ಗೆ ಚರ್ಚಿಸಿ ಮನವಿ ಸಲ್ಲಿಸಿದರು.ಬೆಂಗಳೂರು ಸಂಚಾರ ದಟ್ಟಣೆಗೆ ಪರಿಹಾರವಾಗಿ ರೂಪಿಸಲಾಗಿರುವ ಅವಳಿ ಸುರಂಗ ಯೋಜನೆಗೆ ಹೆಬ್ಬಾಳದ ಬಳಿ 2.039 ಎಕರೆ ಜಾಗ ಅಗತ್ಯವಿದೆ. ಬೈಯ್ಯಪ್ಪನ ಹಳ್ಳಿ ರೈಲ್ವೆ ಜಂಕ್ಷನ್ ಗೆ ಸಂಪರ್ಕ ಸಾಧಿಸುವ ರೋಟರಿ ಮೇಲ್ಸೇತುವೆಗೆ 1.197 ಎಕರೆ ಜಾಗ ಅಗತ್ಯವಿದೆ. ಏರ್ ಪೋರ್ಟ್ ರಸ್ತೆ (ಬಳ್ಳಾರಿ ರಸ್ತೆ)ಯಿಂದ ಸರೋವರ ಬಡಾವಣೆಗೆ ನಿರ್ಮಿಸಲು ಉದ್ದೇಶಿಸಿರುವ 60 ಅಡಿ ಸಂಪರ್ಕ ರಸ್ತೆ ಡಿಫೆನ್ಸ್ ಡೈರಿ ಫಾರ್ಮ್ ಬಳಿ ಹಾದು ಹೋಗಲಿದೆ. ಈ ಯೋಜನೆಗೆ ಬಳಕೆಯಾಗುವ ಜಾಗಕ್ಕೆ ಬದಲಿ ಜಾಗ ನೀಡಿ ಸಹಕರಿಸಬೇಕೆಂಬ ಮನವಿಗಳನ್ನು ಸಚಿವರ ಮುಂದಿಟ್ಟಿದ್ದಾರೆ.

ಲೋವರ್ ಆಗರಂ ರಸ್ತೆಯ ಸರ್ಕಾರಿ ಆಸ್ಪತ್ರೆಯಿಂದ ಸರ್ಜಾಪುರ ರಸ್ತೆ ಮಾರ್ಗವಾಗಿ ಈಜಿಪುರ ಜಂಕ್ಷನ್ ವರೆಗೂ 24 ಮೀಟರ್ ರಸ್ತೆ ನಿರ್ಮಾಣಕ್ಕೆ 13.709 ಎಕರೆ ಜಾಗದ ಅಗತ್ಯವಿದೆ. ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಈ ಎಲ್ಲಾ ಜಾಗವನ್ನು ತ್ವರಿತವಾಗಿ ಹಸ್ತಾಂತರ ಮಾಡಬೇಕಾಗಿದೆ. ಈ ಜಾಗಗಳ ಹಸ್ತಾಂತರದಿಂದ ರಕ್ಷಣಾ ಇಲಾಖೆ ಕಾರ್ಯಚರಣೆಗೆ ಯಾವುದೇ ಅಡ್ಡಿಯಾಗುವುದಿಲ್ಲ. ಹೀಗಾಗಿ ಈ ಜಾಗಗಳನ್ನು ಸಮಾನ ಮೌಲ್ಯ ಭೂಮಿ (EVL) ಅಥವಾ ಸಮಾನ ಮೌಲ್ಯ ಮೂಲಸೌಕರ್ಯ (EVI) ನೀತಿ ಅಡಿಯಲ್ಲಿ ಹಸ್ತಾಂತರ ಮಾಡಬೇಕು ಎಂದು ಮನವಿ ಮಾಡಲಾಗಿದೆ ಎಂದು ಶಿವಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ಮನವಿ ಪತ್ರದಲ್ಲೇನಿದೆ?

ರಕ್ಷಣಾ ಇಲಾಖೆಯ ಕೆಲವು ನೀತಿಗಳಿಂದ ಬೆಂಗಳೂರಿನ ಪ್ರಗತಿಗೆ ಅಡ್ಡಿಯಾಗಿದೆ. ಬೆಂಗಳೂರಿನ ರಕ್ಷಣಾ ವಿಮಾನ ನಿಲ್ದಾಣಗಳ 20 ಕಿ.ಮೀ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ನಿರಾಕ್ಷೇಪಣಾ ಪತ್ರ (NOC) ನೀಡುವಾಗ ವಿಮಾನ ನಿಲ್ದಾಣದ ಅಧಿಕಾರಿಗಳು ವಿಪರೀತ ನಿರ್ಬಂಧಗಳನ್ನು ವಿಧಿಸುತ್ತಿದ್ದಾರೆ. ಬೆಂಗಳೂರು ವಿಶ್ವದ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ಹೆಚ್ಎಎಲ್ ವಿಮಾನ ನಿಲ್ದಾಣ ಬೆಂಗಳೂರಿನ ಹೃದಯ ಭಾಗದಲ್ಲಿದ್ದು, ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಹೆಚ್ಚುವರಿಯಾಗಿ ವಿಧಿಸಲಾಗಿರುವ ನಿರ್ಬಂಧಗಳು ಈ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಅಡ್ಡಿಯಾಗಿವೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಈ ವಿಚಾರವಾಗಿ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿಗಳು, ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆ ಕಾರ್ಯದರ್ಶಿಗಳು ಹಾಗೂ ರಕ್ಷಣಾ ಕಾರ್ಯದರ್ಶಿಗಳಿಗೆ ಪತ್ರಗಳನ್ನು ಬರೆಯಲಾಗಿದೆ. ವಿಮಾನ ಸುರಕ್ಷತೆ ಹಾಗೂ ನಗರದ ಅಭಿವೃದ್ಧಿ ಎರಡರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಪರಿಶೀಲನೆ ನಡೆಸಿ, ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಎಂದು ಡಿಸಿಎಂ ಮನವಿ ಮಾಡಿದ್ದಾರೆ.

ಇದನ್ನೂ ಓದಿ ಸಿದ್ದರಾಮಯ್ಯ ಆಪ್ತರಿಂದ ಸಭೆ, ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ: ಸಿಎಂ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ಬರೋ ಸುಳಿವು

ಬೆಂಗಳೂರಿನ ಅಭಿವೃದ್ಧಿಗೆ ಇರುವ ನಿರ್ಬಂಧಗಳ ಕುರಿತು ವಿವರಿಸಿರುವ ಡಿಸಿಎಂ

ಬೆಂಗಳೂರಿನಲ್ಲಿ ನಾಲ್ಕು ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ ಹೆಚ್ಎಎಲ್ ಹಾಗೂ ಯಲಹಂಕ ವಾಯುನೆಲೆ ರಕ್ಷಣಾ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ವಿಮಾನ ನಿಲ್ದಾಣಗಳ ಸುತ್ತಮುತ್ತಲ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಮಾಡಲು ವಿಮಾನ ನಿಲ್ದಾಣ ಅಧಿಕಾರಿಗಳಿಂದ ನಿರಾಕ್ಷೇಪಣ ಪತ್ರ ಪಡೆಯಬೇಕಾಗಿದೆ. ವಿಮಾನ ನಿಲ್ದಾಣದ ಸುತ್ತಮುತ್ತಲ 15 ಕಿ.ಮೀ ವ್ಯಾಪ್ತಿಯಲ್ಲಿ ಕಟ್ಟಡಗಳ ಎತ್ತರದ ಮಿತಿಯನ್ನು 150 ಮೀ. ನಿಗದಿಪಡಿಸಲಾಗಿದೆ ಎಂದು ಜಿ.ಎಸ್.ಆರ್ 751 (ಇ) ನಿಯಮದಲ್ಲಿ ಸೂಚಿಸಲಾಗಿದೆ. ಆದರೆ ರಕ್ಷಣಾ ಇಲಾಖೆ ವಿಮಾನ ನಿಲ್ದಾಣಗಳು ಈ ವಿಪರೀತ ನಿರ್ಬಂಧ ಹೇರುವುದರ ಜತೆಗೆ 150 ಮೀ. ಎತ್ತರದ ಮಿತಿಯನ್ನು 15 ಕಿ.ಮೀ ಮೀರಿ 20 ಕಿ.ಮೀ ವರೆಗೂ ವಿಸ್ತರಿಸಿವೆ. ಈ ನಿರ್ಬಂಧಗಳು ಈ ಬೆಂಗಳೂರು ನಗರದ ಪ್ರಗತಿಗೆ ಮಾರಕವಾಗಿವೆ ಎಂದು ಡಿ ಕೆ ಶಿವಕುಮಾರ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಕ್ಷಯ್ ಕುಮಾರ್ ಮಗಳ ಬಳಿಯೇ ಬೆತ್ತಲೆ ಫೋಟೋ ಕಳುಹಿಸಲು ಬೇಡಿಕೆ ಇಟ್ಟ ಖದೀಮ; ಮುಂದೇನಾಯ್ತ? – Kannada News | Akshay Kumar’s Daughter Faces Cyber Harassment: Dress less Photo Request Leads to Arrest

ಸೋಶಿಯಲ್ ಮೀಡಿಯಾದಲ್ಲಿ ನೀಡುವ ಕಿರುಕುಳವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆ ನೀಡುವ ಕೆಲಸ ಆಗುತ್ತಿದೆ. ಇಷ್ಟಾದರೂ ಅನೇಕರಿಗೆ ಬುದ್ಧಿ ಬಂದಿಲ್ಲ. ಅಕ್ಷಯ್ ಕುಮಾರ್ ಮಗಳು ನಿತಾರಾ ಕುಮಾರ್​​ಗೆ ಬೆತ್ತಲೆ ಫೋಟೋ ಕಳಿಸುವಂತೆ ವ್ಯಕ್ತಿಯೋರ್ವ ಕೇಳಿದ್ದ. ಆತನನ್ನು ಹುಡುಕಿ ಬಂಧಿಸುವ ಕೆಲಸ ಆಗಿದೆ. ಈ ಬಗ್ಗೆ ಮಹಾರಾಷ್ಟ್ರ ಸೈಬರ್ ವಿಭಾಗದವರು ಮಾಹಿತಿ ನೀಡಿದ್ದಾರೆ.

ನಿತಾರಾ ಕುಮಾರ್ ಅವರು ಆನ್​​ಲೈನ್ ಅಲ್ಲಿ ಗೇಮ್ ಆಡುತ್ತಿದ್ದರು. ಈ ವೇಳೆ ನಿತಾರಾ ಬಳಿ ಬೆತ್ತಲೆ ಫೋಟೋ ಕಳಿಸುವಂತೆ ಅಪರಿಚಿತ ವ್ಯಕ್ತಿ ಮೆಸೇಜ್ ಮಾಡಿದ್ದ. ಈ ವಿಷಯವನ್ನು ನಿತಾರಾ ಕುಟುಂಬದ ಗಮನಕ್ಕೆ ತಂದಿದ್ದರು. ಅವರು ಸೈಬರ್ ಠಾಣೆಗೆ ದೂರು ದಾಖಲು ಮಾಡಿದ್ದರು. ದೂರಿನ ಅನ್ವಯ ಓರ್ವನ ಬಂಧನ ಆಗಿದೆ.
ಮಹಾರಾಷ್ಟ್ರ ಸೈಬರ್ ವಿಭಾಗ ಮುಂಬೈನ ಆರ್.ಡಿ. ನ್ಯಾಷನಲ್ ಕಾಲೇಜಿನಲ್ಲಿ ಸೈಬರ್ ಜಾಗೃತಿಗಾಗಿ ವಿಶೇಷ ಅಧಿವೇಶನವನ್ನು ಆಯೋಜಿಸಿತ್ತು. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಇಲ್ಲಿ ಆಗಿದೆ. ಈ ಈವೆಂಟ್​​ನಲ್ಲಿ ಒಂದು ಶಾಕಿಂಗ್ ವಿಷಯ ಬೆಳಕಿಗೆ ಬಂದಿದೆ. ಆನ್​ಲೈನ್ ಅಲ್ಲಿ ಕಿರುಕುಳ ನೀಡುವವರು ಅಕ್ಷಯ್ ಕುಮಾರ್ ಮಗಳನ್ನು ಬಿಟ್ಟಿರಲಿಲ್ಲ.

‘ಅಕ್ಷಯ್ ಕುಮಾರ್ ನಮ್ಮ ಜೊತೆ ಒಂದು ಶಾಕಿಂಗ್ ಸುದ್ದಿ ಹೇಳಿದ್ದರು. ಮಗಳಿಗೆ ಆದ ಸೈಬರ್ ಕಿರುಕುಳದ ಬಗ್ಗೆ ಅವರು ವಿವರಿಸಿದ್ದರು. ಆ ಹುಡುಗಿ ತುಂಬಾ ಧೈರ್ಯಶಾಲಿಯಾಗಿದ್ದಳು. ಹೀಗಾಗಿ ಈ ವಿಷಯವನ್ನು ಹೆತ್ತವರಿಗೆ ತಿಳಿಸಿದಳು. ಅವರು ನಮಗೆ ದೂರು ನೀಡಿದರು’ ಎಂದು ಮಹಾರಾಷ್ಟ್ರ ಸೈಬರ್ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಯಶಸ್ವಿ ಯಾದವ್ ಹೇಳಿದ್ದಾರೆ. ಈ ವೇಳೆ ಅಕ್ಷಯ್ ವಿವರಿಸಿದ ಘಟನಯನ್ನು ಯಶಸ್ವಿ ಯಾದವ್ ತೋರಿಸಿದ್ದಾರೆ.

‘ಕೆಲವು ತಿಂಗಳ ಹಿಂದೆ ನನ್ನ ಮನೆಯಲ್ಲಿ ನಡೆದ ಒಂದು ಸಣ್ಣ ಘಟನೆಯ ಬಗ್ಗೆ ನಿಮಗೆ ಹೇಳಬೇಕು. ನನ್ನ ಮಗಳು ವಿಡಿಯೋ ಗೇಮ್ ಆಡುತ್ತಿದ್ದಳು. ಅಪರಿತ ವ್ಯಕ್ತಿ ಇವಳಿಗೆ ಎದುರಾದ. ನೀವು ಚೆನ್ನಾಗಿ ಆಡುತ್ತೀರಾ ಎಂದೇನಾದರೂ ಹೇಳಬಹುದು. ಆದರೆ, ಆತ ನಿಮ್ಮದು ಯಾವ ಊರು ಎಂದು ಕೇಳಿದ. ಇದಕ್ಕೆ ಆಕೆ ಮುಂಬೈ ಎಂದಳು. ಅವನು ಸಾಮಾನ್ಯರಂತೆ ಮಾತನಾಡುತ್ತಿದ್ದ’ ಎಂದು ಅಕ್ಷಯ್ ವಿವರಿಸಿದ್ದರು.

ಇದನ್ನೂ ಓದಿ: ‘ನನಗೆ ಆ ರೀತಿ ಮೀಸೆ ಬರಲ್ಲ’: ನೇರವಾಗಿ ಒಪ್ಪಿಕೊಂಡು ಜನರ ಕ್ಷಮೆ ಕೇಳಿದ ಅಕ್ಷಯ್ ಕುಮಾರ್

‘ನೀವು ಹುಡುಗನೋ ಅಥವಾ ಹುಡುಗಿಯೋ ಎಂಬ ಪ್ರಶ್ನೆ ಬಂತು. ನನ್ನ ಮಗಳು ಹುಡುಗಿ ಎಂದು ಉತ್ತರಿಸಿದಳು. ‘ನಿಮ್ಮ ನಗ್ನ ಚಿತ್ರವನ್ನು ನನಗೆ ಕಳುಹಿಸಬಹುದೇ?’ ಎಂಬ ಸಂದೇಶವನ್ನು ಆತ ಕಳುಹಿಸಿದನು. ನನ್ನ ಮಗಳು, ಎಲ್ಲವನ್ನೂ ಆಫ್ ಮಾಡಿದಳು. ಅವಳು ಹೋಗಿ ನನ್ನ ಹೆಂಡತಿಗೆ (ಟ್ವಿಂಕಲ್ ಖನ್ನಾ) ಈ ವಿಷಯ ಹೇಳಿದಳು’ ಎಂದು ಅಕ್ಷಯ್ ವಿವರಿಸಿದ್ದರು. ಈ ಪ್ರಕರಣ ಸೈಬರ್ ಠಾಣೆಗೆ ಬಂದಿತ್ತು. ಈ ಸಂಬಂಧ ಓರ್ವನ ಬಂಧನ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ಮುಖಕ್ಕೆ ಚೆಂಡು ಬಡಿದು ಯುವ ಆಟಗಾರನಿಗೆ ಗಂಭೀರ ಗಾಯ! – Kannada News | IPL 2026: DC’s Sahil Parakh Stretchered Off Following Brutal Blow in Nets

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 35ನೇ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಭ್ಯಾಸದ ವೇಳೆ ಯುವ ಬ್ಯಾಟರ್ ಸಾಹಿಲ್ ಪರಾಖ್ ಅವರ ಮುಖಕ್ಕೆ ಬಲವಾಗಿ ಚೆಂಡು ಬಡಿದು, ತೀವ್ರ ಗಾಯಗೊಂಡ ಘಟನೆ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದೆ.

ಘಟನೆ ನಡೆದಿದ್ದು ಹೇಗೆ?

ಶುಕ್ರವಾರ ಸಂಜೆ ನಡೆದ ತರಬೇತಿ ಅವಧಿಯಲ್ಲಿ ಈ ಘಟನೆ ಸಂಭವಿಸಿದೆ. 18 ವರ್ಷದ ಸಾಹಿಲ್ ಪರಾಖ್ ಅವರು ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ, ವೇಗದ ಬೌಲರ್ ಎಸೆದ ಬೌನ್ಸರ್ ಅನ್ನು ಎದುರಿಸುವಲ್ಲಿ ವಿಫಲರಾದರು. ಚೆಂಡು ನೇರವಾಗಿ ಅವರ ಮುಖಕ್ಕೆ (ಹೆಲ್ಮೆಟ್‌ನ ಗ್ರಿಲ್ ನಡುವಿನಿಂದ) ಬಡಿದಿದೆ ಎಂದು ವರದಿಯಾಗಿದೆ. ಚೆಂಡು ತಗುಲಿದ ತಕ್ಷಣ ಸಾಹಿಲ್ ಮೈದಾನದಲ್ಲೇ ಕುಸಿದು ಬಿದ್ದರು.

ಮುಖಕ್ಕೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಸಾಹಿಲ್ ಅವರ ಮುಖದಿಂದ ತೀವ್ರ ರಕ್ತಸ್ರಾವವಾಗುತ್ತಿತ್ತು. ತಕ್ಷಣವೇ ತಂಡದ ವೈದ್ಯಕೀಯ ಸಿಬ್ಬಂದಿ ಮೈದಾನಕ್ಕೆ ಧಾವಿಸಿ ಪ್ರಥಮ ಚಿಕಿತ್ಸೆ ನೀಡಿದರು. ಗಾಯದ ತೀವ್ರತೆ ಹೆಚ್ಚಿದ್ದರಿಂದ, ಅವರನ್ನು ಸ್ಟ್ರೆಚರ್ ಮೂಲಕ ಮೈದಾನದಿಂದ ಹೊರಕ್ಕೆ ಕರೆತರಲಾಯಿತು. ಬಳಿಕ ಕ್ರೀಡಾಂಗಣಕ್ಕೆ ಆಂಬ್ಯುಲೆನ್ಸ್ ತರಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಯಾರು ಈ ಸಾಹಿಲ್ ಪರಾಖ್?

ಮಹಾರಾಷ್ಟ್ರದ ನಾಸಿಕ್ ಮೂಲದ ಸಾಹಿಲ್ ಪರಾಖ್ ಒಬ್ಬ ಪ್ರತಿಭಾವಂತ ಎಡಗೈ ಬ್ಯಾಟರ್. ಈ ಬಾರಿಯ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅವರನ್ನು ₹30 ಲಕ್ಷಕ್ಕೆ ಖರೀದಿಸಿತ್ತು.  ಸದ್ಯ ಸಾಹಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮುಖದ ಮೂಳೆ ಮುರಿತವಾಗಿದೆಯೇ ಎಂದು ಪರೀಕ್ಷಿಸಲು ಸ್ಕ್ಯಾನಿಂಗ್ ನಡೆಸಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಮ್ಯಾನೇಜ್‌ಮೆಂಟ್ ಈ ಬಗ್ಗೆ ಇನ್ನು ಅಧಿಕೃತ ಪ್ರಕಟಣೆ ನೀಡಿಲ್ಲವಾದರೂ, ಸಹ ಆಟಗಾರರು ಮತ್ತು ಅಭಿಮಾನಿಗಳು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಆಶಿಸುತ್ತಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್​ vs ಪಂಜಾಬ್ ಕಿಂಗ್ಸ್​:

ಇಂಡಿಯನ್ ಪ್ರೀಮಿಯರ್ ಲೀಗ್​ನ 35ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಸಂಜೆ 3.30 ಕ್ಕೆ ಶುರುವಾಗಲಿದೆ. ಈ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್ ಪಾಲಿಗೆ ತುಂಬಾ ಮಹತ್ವದ್ದು.

ಏಕೆಂದರೆ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲನುಭವಿಸಿತ್ತು. ಇದೀಗ ಮೊದಲಾರ್ಧದ ಮುಕ್ತಾಯಕ್ಕೂ ಮುನ್ನ ಅಂಕ ಪಟ್ಟಿಯಲ್ಲಿ ಟಾಪ್-4 ನಲ್ಲಿ ಕಾಣಿಸಿಕೊಳ್ಳಬೇಕಿದ್ದರೆ ಈ ಮ್ಯಾಚ್​ನಲ್ಲಿ ಡೆಲ್ಲಿ ಪಡೆ ಗೆಲ್ಲಲೇಬೇಕು.

ಇದನ್ನೂ ಓದಿ: ನಮ್ಮ ಸೋಲಿಗೆ ಆ ಮೂರು ಓವರ್‌ಗಳೇ ಕಾರಣ: ಶುಭ್​ಮನ್ ಗಿಲ್ ಬೇಸರ

ಅತ್ತ ಪಂಜಾಬ್ ಕಿಂಗ್ಸ್ ತಂಡವು ಆಡಿರುವ 6 ಮ್ಯಾಚ್​ಗಳಲ್ಲಿ 5 ಗೆಲುವು ದಾಖಲಿಸಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಇಂದಿನ ಪಂದ್ಯದಲ್ಲಿ ಸೋತರೂ ಅಥವಾ ಗೆದ್ದರೂ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳಲಿದೆ.

Published On – 9:52 am, Sat, 25 April 26

Source link

ಲಿಂಬೆಹಣ್ಣಿನ ಶರಬತ್​ನಂತೆಯೇ ಕಾಣ್ಸುತ್ತೆ, ಕುಡಿದ್ರೆ ಇಡೀ ದಿನ ನಶೆಯಲ್ಲಿ ತೇಲಾಡೋದು ಪಕ್ಕಾ! ಶರಬತ್ ಸೇಂದಿ ನೋಡಿ ಪೊಲೀಸರೇ ಶಾಕ್ – Kannada News | Raichur Crime: 1325 Liters of Adulterated Toddy Seized; Kingpin Bruce Lee Escapes During Police Raid

ರಾಯಚೂರು, ಏಪ್ರಿಲ್ 25: ರಾಯಚೂರಿನಲ್ಲಿ ಅಬಕಾರಿ ಇಲಾಖೆ ಮತ್ತು ಸ್ಥಳೀಯ ಪೊಲೀಸರು ಅಕ್ರಮ ಸೇಂದಿ ದಂಧೆ ವಿರುದ್ಧ ಕಾರ್ಯಾಚರಣೆ ನಡೆಸಿ, ಕುಖ್ಯಾತ ಕಿಂಗ್‌ಪಿನ್ ನರಸಿಂಹಲು ಅಲಿಯಾಸ್ ಬ್ರೂಸ್ ಲೀ ಎಂಬಾತನ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಚಂದ್ರಬಂಡಾ ರಸ್ತೆಯ ನಿವಾಸದಲ್ಲಿ ನಡೆದ ಈ ದಾಳಿಯಲ್ಲಿ, ಸಿಎಚ್ ಪೌಡರ್ ಮತ್ತು ಅಲ್ಪಜೋಲಂ ಸೇರಿದಂತೆ ನಿಷಿದ್ಧ ರಾಸಾಯನಿಕಗಳನ್ನು ಬಳಸಿ ತಯಾರಿಸಿದ 1325 ಲೀಟರ್ ಸೇಂದಿ ವಶಪಡಿಸಿಕೊಳ್ಳಲಾಗಿದೆ. ನರಸಿಂಹಲು ವಿರುದ್ಧ ಈಗಾಗಲೇ 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಈ ಹಿಂದೆಯೂ ಆತ ಗೂಂಡಾ ಕಾಯ್ದೆಯಡಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ದಾಳಿಯ ವೇಳೆ ನರಸಿಂಹಲು, ರಮೇಶ್ ಮತ್ತು ಮಹೇಶ್ ಎಂಬ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಅಬಕಾರಿ ಅಧಿಕಾರಿಗಳು ಇವರ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಬೇಸಿಗೆಯಲ್ಲಿ ಸೇಂದಿ ದಂಧೆ ಹೆಚ್ಚಾಗುತ್ತಿದ್ದು, ಅಮಾಯಕ ಕಾರ್ಮಿಕರನ್ನು ಗುರಿಯಾಗಿಸಿ ಶರಬತ್ ರೀತಿಯಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂಬುದು ಗೊತ್ತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಣಿಪಾಲ: ಪಬ್ಲಿಕ್​ನಲ್ಲೇ ಯುವಜೋಡಿಯ ಸರಸ ಸಲ್ಲಾಪ! ವಿಡಿಯೋ ವೈರಲ್ – Kannada News | Viral Video: Couple Caught Behaving Indecently on Public Road in Manipal; Locals Lash Out

ಉಡುಪಿ, ಏಪ್ರಿಲ್ 25: ಮಣಿಪಾಲದಲ್ಲಿ ಯುವಜೋಡಿಯೊಂದು ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುವ ಮೂಲಕ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ. ತಡರಾತ್ರಿ ನಡೆದ ಈ ಹೈಡ್ರಾಮಾದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಗುಣಮಟ್ಟದ ಶಿಕ್ಷಣ ಪಡೆಯಲು ದೇಶದ ವಿವಿಧ ಮೂಲೆಗಳಿಂದ ವಿದ್ಯಾರ್ಥಿಗಳು ಮಣಿಪಾಲಕ್ಕೆ ಆಗಮಿಸುತ್ತಾರೆ. ಆದರೆ, ಇಲ್ಲಿನ ಹೈಟೆಕ್ ವ್ಯವಸ್ಥೆ ಮತ್ತು ಪಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ಕೆಲವು ಯುವಕ-ಯುವತಿಯರು ಸಾರ್ವಜನಿಕ ಸ್ಥಳ ಎಂಬ ಅರಿವಿಲ್ಲದೆ ವಿದೇಶಿ ಪ್ರೇಮಿಗಳಂತೆ ವರ್ತಿಸುತ್ತಿದ್ದಾರೆ. ಸಾರ್ವಜನಿಕ ರಸ್ತೆಯಲ್ಲೇ ಪ್ರಣಯ ಸಲ್ಲಾಪಕ್ಕೆ ಇಳಿದಿದ್ದ ಈ ಜೋಡಿಯನ್ನು ಕಂಡ ಸ್ಥಳೀಯರು ತಕ್ಷಣವೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಹೊಸ ವರ್ಷ ಅಥವಾ ವ್ಯಾಲೆಂಟೈನ್ಸ್ ಡೇ ದಿನಗಳಲ್ಲಿ ಇಂತಹ ದೃಶ್ಯಗಳು ಸಾಮಾನ್ಯವಾಗಿ ಬಿಟ್ಟಿವೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಉಡುಪಿ ಜನ, ಮಣಿಪಾಲದ ಘನತೆಗೆ ಧಕ್ಕೆ ತರುವಂತಹ ಈ ರೀತಿಯ ಅಸಭ್ಯ ವರ್ತನೆಗಳು ಕೂಡಲೇ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ. ಸ್ಥಳೀಯರು ಪ್ರಶ್ನಿಸಿದಾಗ ಜೋಡಿ ಅಸಹಜವಾಗಿ ವರ್ತಿಸಿದ್ದು, ಈ ವೇಳೆ ಮಾತಿನ ಚಕಮಕಿಯೂ ನಡೆದಿದೆ ಎನ್ನಲಾಗಿದೆ. ಯುವಜೋಡಿಯ ವಿಕೃತಿಯನ್ನು ಸ್ಥಳೀಯರು ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದು, ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೊಲೀಸರು ಇಂತಹ ಘಟನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟ್ರಾಫಿಕ್ ಪೊಲೀಸ್ ಬೈಕ್​ನಲ್ಲಿ ಅಡಗಿತ್ತು ಹಾವು! ವೀಡಿಯೋ ನೋಡಿ

ಕೋಲಾರ, ಏಪ್ರಿಲ್ 25: ಜಿಲ್ಲೆಯ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದ ಸಂಚಾರಿ ಪೊಲೀಸ್ ದ್ವಿಚಕ್ರ ವಾಹನದಲ್ಲಿ ಸೇರಿಕೊಂಡಿದ್ದ ಅಪರೂಪದ ಬಿಲ್ಲೂರ ಹಾವನ್ನು ಉರಗ ರಕ್ಷಕ ನಾಗರಾಜ್ ಯಶಸ್ವಿಯಾಗಿ ರಕ್ಷಿಸಿದ್ದಾರೆ. ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಹಾವಿರುವುದು ಪತ್ತೆಯಾಗಿದ್ದು, ಕೂಡಲೇ ನಾಗರಾಜ್ ಅವರಿಗೆ ಕರೆ ಮಾಡಲಾಗಿತ್ತು. ಸ್ಥಳಕ್ಕೆ ಧಾವಿಸಿದ ಅವರು ಹಾವನ್ನು ಸುರಕ್ಷಿತವಾಗಿ ಹೊರತೆಗೆದು, ನಂತರ ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಮ್ಮ ಸೋಲಿಗೆ ಆ ಮೂರು ಓವರ್‌ಗಳೇ ಕಾರಣ: ಶುಭ್​ಮನ್ ಗಿಲ್ ಬೇಸರ – Kannada News | Shubman gill post Match Interview after rcb vs gt

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಗುಜರಾತ್ ಟೈಟಾನ್ಸ್ (GT) ತಂಡ ಸೋಲನುಭವಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್​ಗಳಲ್ಲಿ 205 ರನ್​ ಕಲೆಹಾಕಿದ್ದರು. ಈ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18.5 ಓವರ್​ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಆರ್​ಸಿಬಿ 5 ವಿಕೆಟ್​ಗಳ ಗೆಲುವು ದಾಖಲಿಸಿದೆ.

ಈ ಸೋಲಿನ ಬಳಿಕ ಮಾತನಾಡಿದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್​ಮನ್ ಗಿಲ್, ನಿರ್ಣಾಯಕ ಹಂತದಲ್ಲಿ ಬೌಂಡರಿಗಳನ್ನು ಬಾರಿಸಲು ವಿಫಲರಾದದ್ದು ಮತ್ತು ಮಧ್ಯಂತರ ಓವರ್‌ಗಳಲ್ಲಿ ವಿಕೆಟ್ ಪಡೆಯದಿದ್ದದ್ದು ಸೋಲಿಗೆ ಮುಖ್ಯ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ಬ್ಯಾಟರ್​ಗಳಿಗೆ 16 ರಿಂದ 19ನೇ ಓವರ್‌ಗಳ ನಡುವೆ ನಾವು ಒಂದೂ ಬೌಂಡರಿ ಬಾರಿಸಲು ಸಾಧ್ಯವಾಗಲಿಲ್ಲ. ಈ ಮೂರು ಓವರ್‌ಗಳಲ್ಲಿ ನಾವು ನಿರೀಕ್ಷಿತ ರನ್ ಗಳಿಸಲಿಲ್ಲ, ಇದು ನಮ್ಮ ಪಾಲಿಗೆ ಬಹಳ ನಿರ್ಣಾಯಕವಾಯಿತು. ಪವರ್‌ಪ್ಲೇ ಅಂತ್ಯಕ್ಕೆ ನಾವು ಉತ್ತಮ ಸ್ಥಿತಿಯಲ್ಲಿದ್ದೆವು, ಆದರೆ ಅಂತಿಮ ಹಂತದಲ್ಲಿ ಲಯ ತಪ್ಪಿದೆವು. ಈ ಮೂರು ಓವರ್​ಗಳಲ್ಲಿ ಒಂದೇ ಒಂದು ಬೌಂಡರಿ ಬಾರಿಸದೇ ಇರುವುದು ಸೋಲಿಗೆ ಕಾರಣವಾಯ್ತು ಎಂದು ಶುಭ್​​ಮನ್ ಗಿಲ್ ಹೇಳಿದ್ದಾರೆ.

ಇದೇ ವೇಳೆ  ವಾಷಿಂಗ್ಟನ್ ಸುಂದರ್​ ಮೊದಲ ಓವರ್​ನಲ್ಲೇ ವಿರಾಟ್ ಕೊಹ್ಲಿಯ ಕ್ಯಾಚ್ ಕೈಬಿಟ್ಟ ಬಗ್ಗೆ ಪ್ರತಿಕ್ರಿಯಿಸಿದ ಗಿಲ್, ಫೀಲ್ಡರ್ ಆಗಿ ಅದು ಕಷ್ಟದ ಸಮಯ. ಇಂತಹ ಅವಕಾಶವನ್ನು ಕೈ ಚೆಲ್ಲಿದ ಬಳಿಕ ನಾವು ಪಂದ್ಯದಲ್ಲಿ ಹೇಗೆ ಕಂಬ್ಯಾಕ್ ಮಾಡುತ್ತೇವೆ ಎಂಬುದು ಮುಖ್ಯ. ಬೌಲಿಂಗ್‌ನಲ್ಲಿ ನಾವು ಕೆಲವು ಉತ್ತಮ ಕ್ಷಣಗಳನ್ನು ಹೊಂದಿದ್ದರೂ, ಈ ಪಿಚ್​ನಲ್ಲಿ ಅಗತ್ಯವಿದ್ದ ‘ಲೆಂತ್ ಬಾಲ್’ಗಳನ್ನು ನಿರಂತರವಾಗಿ ಎಸೆಯಲು ನಮಗೆ ಸಾಧ್ಯವಾಗಲಿಲ್ಲ.

ಇದಾಗ್ಯೂ ಮಾನವ್ ಸುತಾರ್ ಉತ್ತಮ ಓವರ್​ ಎಸೆದಿದ್ದರು. ಅವರಿಗೆ ಚೆಂಡು ನೀಡಲು ಮುಖ್ಯ ಕಾರಣ, ನಾನು ಬ್ಯಾಟಿಂಗ್ ಮಾಡುತ್ತಿದ್ದಾಗ ಕೃನಾಲ್ ಪಾಂಡ್ಯ ಎಸೆದ ನಿಧಾನಗತಿಯ ಎಸೆತಗಳು ಸ್ವಲ್ಪ ಗ್ರಿಪ್ ಆಗುತ್ತಿದ್ದವು. ಹಾಗಾಗಿ ಸುತಾರ್ ಮೂಲಕ ಒಂದು ಪ್ರಯತ್ನ ನಡೆಸಿದೆವು. ಒಂದು ವೇಳೆ ಅಲ್ಲಿ ಒಂದೆರಡು ವಿಕೆಟ್ ಬಿದ್ದಿದ್ದರೆ ಪಂದ್ಯದ ಚಿತ್ರಣ ಬದಲಾಗುತ್ತಿತ್ತು ಎಂದು ಶುಭ್​ಮನ್ ಗಿಲ್ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಸಾಯಿ ಸುದರ್ಶನ್ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶುಭ್​​ಮನ್ ಗಿಲ್, ಕಳೆದ ಕೆಲವು ಪಂದ್ಯಗಳ ವೈಫಲ್ಯದಿಂದ ಸಾಯಿ ಬೇಸರಗೊಂಡಿದ್ದರು, ಆದರೆ ಈ ಪಂದ್ಯದಲ್ಲಿ ಅವರು ಉತ್ತಮವಾಗಿ ಆಡಿದ್ದಾರೆ. ಆದರೆ ಮುಂದಿನ ಪಂದ್ಯಗಳಲ್ಲಿ ಪವರ್‌ಪ್ಲೇ ಅವಧಿಯಲ್ಲಿ ಅವರು ನನಗೆ ಇನ್ನಷ್ಟು ಸ್ಟ್ರೈಕ್ ನೀಡುತ್ತಾರೆಂದು ಭಾವಿಸುತ್ತೇನೆ” ಎಂದು ಹಾಸ್ಯಮಯವಾಗಿ ಮಾತು ಮುಗಿಸಿದರು.

ಇದನ್ನೂ ಓದಿ: IPL 2026: RCB ಜಸ್ಟ್ 3 ಪಂದ್ಯ ಗೆದ್ದರೆ ಸಾಕು!

ಸದ್ಯ ಮೊದಲಾರ್ಧ ಮುಗಿಸಿರುವ ಗುಜರಾತ್ ಟೈಟಾನ್ಸ್ ತಂಡವು 3 ಗೆಲುವುಗಳೊಂದಿಗೆ ಅಂಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ದ್ವಿತೀಯಾರ್ಧದಲ್ಲಿ ಕನಿಷ್ಠ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ ಮಾತ್ರ ಗುಜರಾತ್ ಟೈಟಾನ್ಸ್ ತಂಡವು ನೇರವಾಗಿ ಪ್ಲೇಆಫ್​ಗೇರಬಹುದು.

Source link

ಅದ್ಭುತವಾಗಿ ‘ಅಂದೊಂದಿತ್ತು ಕಾಲ’ ಹಾಡನ್ನು ಹಾಡಿದ ರಾಮನಗರದ ಝೋಹಾನ್ – Kannada News | Saregamapa Little Champ Ramanagara Zohan Sings next Level

ಸರಿಗಮಪ ಲಿಟ್ಲ್​ ಚಾಂಪ್ಸ್  ಜೀ ಕನ್ನಡದಲ್ಲಿ ಪ್ರಸಾರ ಆರಂಭಿಸಿದೆ. ಆಡಿಷನ್​ ಅಲ್ಲಿ ಒಂದಷ್ಟು ಮಕ್ಕಳನ್ನು ಕರೆದು ತರಲಾಗಿದೆ. ಇವರ ಪೈಕಿ ಉತ್ತಮರನ್ನು ಸ್ಪರ್ಧಿಗಳನ್ನಾಗಿ ಆಯ್ಕೆ ಮಾಡುವ ಕೆಲಸ ನಡೆಯುತ್ತಿದೆ. ರಾಮನಗರದ ಝೋಹಾನ್ ಎಂಬ ಬಾಲಕ ‘ಅಂದೊಂದಿತ್ತು ಕಾಲ’ ಹಾಡನ್ನು ಸೂಪರ್ ಹಾಗಿ ಹಾಡಿದ್ದಾನೆ. ಅವನ ಕಂಠಕ್ಕೆ ಜಡ್ಜ್​​ಗಳು ಫಿದಾ ಆಗಿದ್ದು, ಸ್ಪರ್ಧಿಯಾಗಿ ಪರಿಗಣಿಸಿದ್ದಾರೆ. ಮೂರು ವರ್ಷದಿಂದ 15 ವರ್ಷದ ಮಕ್ಕಳು ಇದರಲ್ಲಿ ಭಾಗವಹಿಸಬಹುದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

‘ಅಣ್ಣಾವ್ರ ಸಾಂಗ್​ನ ಹೇಗೆ ಹಾಡಿದ್ದೀನಿ ನೋಡಿ’; ಶಿವಣ್ಣನಿಗೆ ವಿಡಿಯೋ ತೋರಿಸಿದ ಮೋಹನ್​ಲಾಲ್ – Kannada News | Mohanlal Sings Dr. Rajkumar’s Endendu Ninnanu Song; Shows Viral Video to Shivarajkumar

ರಾಜ್​ಕುಮಾರ್ ಮೃತಪಟ್ಟು ಅದೆಷ್ಟೋ ವರ್ಷಗಳು ಕಳೆದಿವೆ. ಆದಾಗ್ಯೂ ಅವರು ಹಾಕಿಕೊಟ್ಟ ಮಾರ್ಗದರ್ಶನ, ಅವರ ವರ್ಚಸ್ಸು ಈಗಲೂ ಹಾಗೆಯೇ ಇದೆ. ಕನ್ನಡಿಗರು ಮಾತ್ರ ಅಲ್ಲ, ಪರಭಾಷಿಗರೂ ರಾಜ್​​ಕುಮಾರ್ ಅವರನ್ನು ತುಂಬಾನೇ ಇಷ್ಟಪಡುತ್ತಾರೆ. ಇತ್ತೀಚೆಗೆ ಮಲಯಾಳಂ ನಟ ಮೋಹನ್​ಲಾಲ್ ಅವರು ರಾಜ್​​ಕುಮಾರ್ ಹಾಡನ್ನು ಹಾಡಿದ್ದರು. ಈಗ ಈ ವಿಡಿಯೋನ ಶಿವರಾಜ್​​ಕುಮಾರ್ ಅವರಿಗೆ ತೋರಿಸಿದ್ದಾರೆ. ಈ ಸಂದರ್ಭದ ವಿಡಿಯೋ ಗಮನ ಸೆಳೆದಿದೆ.

ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೋಹನ್​ಲಾಲ್ ಅವರು ಭಾಗಿ ಆಗಿದ್ದರು. ವೇದಿಕೆ ಮೇಲೆ ಅವರು ಹಾಡು ಹಾಡಿದ್ದಾರೆ. ಅದು ಕೂಡ ರಾಜ್​ಕುಮಾರ್ ಮತ್ತು ಮಂಜುಳಾ ನಟನೆಯ ‘ಎರಡು ಕನಸು’ ಸಿನಿಮಾದ್ದು. ಈ ಚಿತ್ರದ ಎವರ್​​ಗ್ರೀನ್ ಹಾಡು ‘ಎಂದೆಂದೂ ನಿನ್ನನು ಮರೆತು ಬದುಕಿರಲಾರೆ’ ಗೀತೆ ಮೋಹನ್​ಲಾಲ್ ಕಂಠದಿಂದ ಮೂಡಿ ಬಂದಿದೆ.

ಇದನ್ನೂ ಓದಿ: ಡಾ. ರಾಜ್​ಕುಮಾರ್ ಮೇಲಿನ ಅಭಿಮಾನಕ್ಕೆ ಅಮೆರಿಕದಲ್ಲಿ ಕನ್ನಡ ಗೀತೆ ಹಾಡಿದ ಮೋಹನ್​ಲಾಲ್

ಏಪ್ರಿಲ್ 24 ರಾಜ್​​ಕುಮಾರ್ ಜನ್ಮದಿನ. ಈ ವಿಶೇಷ ಸಂದರ್ಭದಲ್ಲಿ ಈ ಹಾಡು ವೈರಲ್ ಆಗಿತ್ತು. ಇದಾದ ಬೆನ್ನಲ್ಲೇ ಇದರ ಮುಂದಿನ ವರ್ಷನ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ತಾವು ಹಾಡಿದ ಹಾಡನ್ನು ಶಿವರಾಜ್​​ಕುಮಾರ್ ಅವರಿಗೆ ಮೋಹನ್​ಲಾಲ್ ಅವರು ತೋರಿಸಿದ್ದಾರೆ. ಮೋಹನ್​ಲಾಲ್ ಹಾಡಿದ ಹಾಡಿನ ವಿಡಿಯೋ ನೋಡುತ್ತಾ ಶಿವಣ್ಣ ತಲೆದೂಗಿದ್ದಾರೆ. ‘ನಾನು ಅಣ್ಣಾವ್ರ ಹಾಡನ್ನು ಹಾಡಿದ್ದೀನಿ ಹೇಗಿದೆ ನೋಡಿ’ ಎಂದು ಶಿವಣ್ಣಗೆ ಮೋಹನ್​​ಲಾಲ್ ಹೇಳಿದಂತಿದೆ.

ಶಿವರಾಜ್​​ಕುಮಾರ್ ಹಾಗೂ ಮೋಹನ್​ಲಾಲ್ ಅವರು ‘ಜೈಲರ್ 2’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ರಜನಿಕಾಂತ್ ಹೀರೋ. ಮೊದಲ ಭಾಗದಲ್ಲಿ ಶಿವಣ್ಣ ಹಾಗೂ ಮೋಹನ್​ಲಾಲ್ ಅವರದ್ದು ಅತಿಥಿ ಪಾತ್ರ ಆಗಿತ್ತು. ಎರಡೂ ಪಾತ್ರಗಳು ಜನಮೆಚ್ಚುಗೆ ಪಡೆದಿದ್ದವು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ: ಪಲ್ಲಕ್ಕಿ ಉರುಳಿಬಿದ್ದು ಅವಘಡ, ವಿಡಿಯೋ ವೈರಲ್ – Kannada News | Mangaluru Shocking Video: Footbridge Collapses During Daiva Bhandara Procession in Moodabidri; 8 Injured

ಮಂಗಳೂರು, ಏಪ್ರಿಲ್ 25: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಪುಚ್ಚೆಮೊಗರು ಎಂಬಲ್ಲಿ ದೈವದ ಭಂಡಾರ ಮೆರವಣಿಗೆಯ ಸಂದರ್ಭದಲ್ಲಿ ಸಣ್ಣ ಸೇತುವೆ (ಕಾಲು ಸಂಕ) ಮುರಿದು ಬಿದ್ದು ಸಂಭವಿಸಿದ ಅವಘಡದಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ. ಪಲ್ಲಕ್ಕಿಯಲ್ಲಿ ದೈವದ ಭಂಡಾರವನ್ನು ಹೊತ್ತು ಸಾಗುತ್ತಿದ್ದಾಗಲೇ ಈ ದುರ್ಘಟನೆ ಸಂಭವಿಸಿದೆ. ಪುಚ್ಚೆಮೊಗರು ಬಾವದಬೈಲು ಎಂಬಲ್ಲಿಂದ ದೈವದ ಭಂಡಾರವನ್ನು ತಾಕೋಡೆ ಬರ್ಕೆ ಧರ್ಮನೇಮೋತ್ಸವಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತಿತ್ತು. ಕೊಂಬು, ಬ್ಯಾಂಡ್ ವಾದ್ಯಗಳೊಂದಿಗೆ ಭಕ್ತಿ-ಸಂಭ್ರಮದಿಂದ ಮೆರವಣಿಗೆ ಸಾಗುತ್ತಿತ್ತು. ಈ ವೇಳೆ ಹಳ್ಳವೊಂದಕ್ಕೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಕಿರು ಸೇತುವೆಯನ್ನು ಪಲ್ಲಕ್ಕಿ ಹೊತ್ತವರು ದಾಟುತ್ತಿದ್ದಾಗ, ಜನದಟ್ಟಣೆಯ ಭಾರಕ್ಕೆ ಸಂಕವು ಏಕಾಏಕಿ ಕುಸಿದು ಬಿದ್ದಿದೆ.

ಸಂಕ ಮುರಿದು ಬಿದ್ದ ರಭಸಕ್ಕೆ ಪಲ್ಲಕ್ಕಿ ಉರುಳಿದ್ದು, ಸಂಕದ ಮೇಲ್ಭಾಗದ ಬೀಮ್ (ತೊಲೆ) ಪಲ್ಲಕ್ಕಿ ಹೊತ್ತವರ ಮೇಲೆಯೇ ಬಿದ್ದಿದೆ. ಪರಿಣಾಮ ಮಾರೂರಿನ ಸುನಿಲ್ ಶೆಟ್ಟಿ ಮುಕಾಲ್ದಿ, ಲೋಕೇಶ್ ಭಂಡಾರಿ ಸೇರಿದಂತೆ ಪಲ್ಲಕ್ಕಿ ಹೊತ್ತಿದ್ದ ಒಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಘಡದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಲ್ಲಕ್ಕಿ ಉರುಳಿ ಬಿದ್ದ ಪರಿಣಾಮ ಅದರಲ್ಲಿದ್ದ ಮೊಗಮೂರ್ತಿ ಹಾಗೂ ಇತರ ಪವಿತ್ರ ಧಾರ್ಮಿಕ ಪರಿಕರಗಳಿಗೆ ಹಾನಿಯಾಗಿದೆ ಎನ್ನಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link