Category Archives: Blog

Your blog category

ಬೆಂಕಿ ಬೌಲಿಂಗ್​… 6 ಎಸೆತಗಳಲ್ಲಿ ರಬಾಡ ಹೊಸ ವಿಶ್ವ ದಾಖಲೆ  – Kannada News | Kagiso Rabada Creates New World Record in T20 Cricket

ಆರ್​ಸಿಬಿ ವಿರುದ್ಧದ ಈ ಪಂದ್ಯದ ನಾಲ್ಕನೇ ಓವರ್​ನ ಮೊದಲ ಎಸೆತವನ್ನು ರಬಾಡ 153 kmph ವೇಗದಲ್ಲಿ ಎಸೆದಿದ್ದರು. ಇನ್ನು ಎರಡನೇ ಎಸೆತವು  151 kmph ವೇಗದಲ್ಲಿ ಸಾಗಿತು. ಮೂರನೇ ಎಸೆದ ಮೂಡಿ ಬಂದಿದ್ದು ಬರೋಬ್ಬರಿ  154 kmph ವೇಗದಲ್ಲಿ. ನಾಲ್ಕನೇ ಎಸೆತ 152 kmph ವೇಗದಲ್ಲಿ ಸಾಗಿದರೆ, ಐದನೇ ಎಸೆದ ವೇಗ 152 kmph ನಲ್ಲಿತ್ತು. ಇನ್ನು ಕೊನೆಯ ಎಸೆತವನ್ನು 
 151 kmph ವೇಗದಲ್ಲಿ ಎಸೆದಿದ್ದಾರೆ.

Source link

ಅಂಬಿಕಾ ಮರಳಿ ಬರೋ ಸಮಯ ಬಂದಾಯ್ತು; ನಡೆಯುತ್ತಿದೆ ಶರತ್-ದುರ್ಗಾ ಮರು ಮಾಂಗಲ್ಯ – Kannada News | Naa Ninna Bidalare Serial: Ambika’s Return Nears as Sharath and Durga Prepare for Re marriage

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಈಗ ಮಹತ್ವದ ತಿರುವು ಎದುರಾಗಿದೆ. ಅಂಬಿಕಾಳನ್ನು ಮಾಳವಿಕಾ ತನ್ನ ಶಕ್ತಿಯಿಂದ ಬಂಧಿಸಿಟ್ಟಿದ್ದಾಳೆ. ದುರ್ಗಾಳ ಬಳಿ ಇದ್ದ ತಾಳಿಯನ್ನು ಕಸಿದುಕೊಂಡ ಅವಳು, ಅಂಬಿಕಾಳನ್ನು ಸಂಪೂರ್ಣವಾಗಿ ಹಿಡಿತಕ್ಕೆ ತೆಗೆದುಕೊಂಡಳು. ಈಗ ಆಕೆಯ ಶ್ರಾದ್ಧ ಕೂಡ ಮಾಡಾಗಿದೆ. ಹೀಗಿರುವಾಗಲೇ ಅಂಬಿಕಾ ಮರಳಿ ಬರುವ ಸಮಯ ಬಂದಿದೆ. ಇದಕ್ಕೆ ಒಂದು ಅವಕಾಶ ಸಿಕ್ಕಿದೆ.

ಅಂಬಿಕಾ ಪಾತ್ರ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ತುಂಬಾನೇ ಪ್ರಾಮುಖ್ಯತೆ ಪಡೆದಿದೆ. ಏಕೆಂದರೆ, ಈ ಧಾರಾವಾಹಿಯಲ್ಲಿ ಆಕೆಯೇ ಮುಖ್ಯ ಪಾತ್ರಧಾರಿ. ಆಕೆಯನ್ನು ಸಾಯಿಸಲಾಗಿದ್ದು, ಆತ್ಮದ ರೂಪದಲ್ಲಿ ಓಡಾಡುತ್ತಿದ್ದಾಳೆ. ಹೀಗಿರುವಾಗ ಅಂಬಿಕಾ ಆತ್ಮವನ್ನು ಬಂಧಿಸಿಡುವ ಕೆಲಸ ಆಗಿದೆ. ಈ ಕೆಲಸ ಮಾಡಿದ್ದು ಮಾಳವಿಕಾ. ಈ ಮಧ್ಯೆ ಒಂದು ಮುಖ್ಯ ಬೆಳವಣಿಗೆ ನಡೆದಿತ್ತು.

ಅಂಬಿಕಾ ಹಾಗೂ ದುರ್ಗಾ ಅಕ್ಕ-ತಂಗಿ. ಈ ವಿಷಯ ಅಂಬಿಕಾಗೆ ಮಾತ್ರ ಗೊತ್ತಿತ್ತು. ಇದು ದುರ್ಗಾಗೆ ತಿಳಿದಿರಲೇ ಇಲ್ಲ. ಅಂಬಿಕಾ ಆತ್ಮ ಮಾಯಾವಾದ ಬಳಿಕ ಈ ವಿಷಯ ಗೊತ್ತಾಗಿದೆ. ಈಗ ಅಂಬಿಕಾಳನ್ನು ಮತ್ತೆ ಕರೆತರುವ ಪ್ರಯತ್ನದಲ್ಲಿ ದುರ್ಗಾ ಇದ್ದಾಳೆ. ಆದರೆ, ಅದು ಅಷ್ಟು ಸುಲಭದಲ್ಲಿ ಇಲ್ಲ ಎನ್ನಬಹುದು. ಮಾಳವಿಕಾ ತುಂಬಾನೇ ಕೆಟ್ಟವಳು. ಆಕೆ ಉದ್ದೇಶಪೂರ್ವಕವಾಗಿ ದುರ್ಗಾ ತಾಳಿಯನ್ನು (ಮೊದಲು ಅಂಬಿಕಾ ತಾಳಿ ಆಗಿತ್ತು) ಕಸಿದುಕೊಂಡಿದ್ದಾಳೆ. ಈ ಮೂಲಕ ತನ್ನ ಕಾರ್ಯಸಾಧನೆ ಮಾಡಿದ್ದಾಳೆ. ಅವಳ ಬಳಿ ಹೋಗಿ ತಾಳಿ ಕೊಡಿ ಎಂದರೆ ಅವಳು ಯಾವುದೇ ಕಾರಣಕ್ಕೂ ತಾಳಿ ಕೊಡುವುದಿಲ್ಲ.

ಇದನ್ನೂ ಓದಿ: ‘ನಾ ನಿನ್ನ ಬಿಡಲಾರೆ’: ದುರ್ಗಾಗೆ ಗೊತ್ತಾಯ್ತು ಅಂಬಿಕಾ ತನ್ನ ಅಕ್ಕ ಅನ್ನೋ ಸತ್ಯ

ಸದ್ಯ ದುರ್ಗಾಳ ತಂದೆ ಮಾರ್ಗವನ್ನು ಸೂಚಿಸಿದ್ದಾನೆ. ‘ಅಂಬಿಕಾ ತಾಳಿಯನ್ನು ಮರಳಿ ತಂದರೆ ಆಕೆ ಮರಳುತ್ತಾಳೆ’ ಎಂದು ಹೇಳಿದ್ದಾನೆ. ನಿಜಕ್ಕೂ ಆಕೆ ಮರಳುತ್ತಾಳಾ? ಇದಕ್ಕೆ ಎಷ್ಟು ಕಷ್ಟಪಡಬೇಕು ಎಂಬುದು ಮುಂದಿನ ದಿನಗಳಲ್ಲಿ ನೋಡಬೇಕಿದೆ. ಈಗಾಗಲೇ ಆಕೆ ಹೊಗಿ ತಾಳಿ ಕೇಳಿದ್ದಾಳೆ. ಇದನ್ನು ಕೇಳಿ ಮಾಳವಿಕಾ ಶಾಕ್ ಆಗಿದ್ದಾಳೆ. ಆಕೆ ತಾಳಿ ಕೊಟ್ಟಿದ್ದು, ಮರು ಮಾಂಗಲ್ಯಕ್ಕೆ ಸಿದ್ಧತೆ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಮಂಗಳೂರಿಗರೇ ಎಚ್ಚರ! ಅಪಾಯಕಾರಿಯಾಗಿದೆ ತಲುಪಿದೆ ನಗರದ ವಾಯು ಗುಣಮಟ್ಟ – Kannada News | Bangalore Air Pollution Crisis: Manglore Air Quality gets worse

ಮಂಗಳೂರಿಗರೇ ಎಚ್ಚರ!ಅಪಾಯದ ಮಟ್ಟ ತಲುಪಿದೆ ನಗರದ ವಾಯು ಗುಣಮಟ್ಟ

ಬೆಂಗಳೂರು, ಏಪ್ರಿಲ್ 25: ರಾಜ್ಯದ ಏರ್ ಕ್ವಾಲಿಟಿಯಲ್ಲಿ (Bengaluru Air Quality) ಹಲವು ದಿನಗಳಿಂದ ಸುಧಾರಣೆ ಕಂಡಿತ್ತು. ಆದರೆ ಇಂದು ಏಕಾಏಕಿ ಮಂಗಳೂರಿನ ಏರ್ ಕ್ವಾಲಿಟಿ ಕುಸಿದಿದ್ದು, ಆತಂಕಕಾರಿ ಮಟ್ಟ ತಲುಪಿದೆ. ಜೊತೆಗೆ ಉಡುಪಿಯ ಗಾಳಿಯೂ ಉಸಿರಾಟಕ್ಕೆ ಯೋಗ್ಯವಲ್ಲದ ಹಂತದಲ್ಲಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ AQI ಸಧ್ಯಕ್ಕೆ ಒಳ್ಳೆಯ ಮಟ್ಟದಲ್ಲಿದ್ದು, ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 110ಕ್ಕೆ ತಲುಪಿದೆ. ಮಂಗಳೂರು ಮತ್ತು ಉಡುಪಿಯ AQI 150ಕ್ಕಿಂತ ಹೆಚ್ಚಿದ್ದು, ಅನಾರೋಗ್ಯಕರ ಮಟ್ಟದಲ್ಲಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು – 110
  • ಮಂಗಳೂರು-156
  • ಮೈಸೂರು – 134
  • ಬೆಳಗಾವಿ – 136
  • ಕಲಬುರ್ಗಿ-136
  • ಶಿವಮೊಗ್ಗ –116
  • ಬಳ್ಳಾರಿ – 151
  • ಹುಬ್ಬಳ್ಳಿ- 100
  • ಉಡುಪಿ –125
  • ವಿಜಯಪುರ – 109

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಥೈಲ್ಯಾಂಡ್​ ಫೋಟೋಗೆ ಕೆಟ್ಟದಾಗಿ ಕಮೆಂಟ್ ಮಾಡಿದವರಿಗೆ ಪಾಯಲ್ ಚೆಂಗಪ್ಪ ಖಡಕ್ ಉತ್ತರ – Kannada News | Payal Chengappa Slams Trolls Over Thailand Backless Photo Controversy

ಪಾಯಲ್ ಚೆಂಗಪ್ಪ ಅವರು (Payal) ಇತ್ತೀಚೆಗೆ ಥೈಲ್ಯಾಂಡ್​​ಗೆ ತೆರಳಿದ್ದರು. ಅಲ್ಲಿ ಬ್ಯಾಕ್​​ಲೆಸ್ ಫೋಟೋ ಹಾಕಿ ಗಮನ ಸೆಳೆದಿದ್ದರು. ಈ ಫೋಟೋಗೆ ಸಾಕಷ್ಟು ಲೈಕ್ಸ್ ಸಿಕ್ಕಿವೆ. ಅವರನ್ನು ಬೋಲ್ಡ್ ಅವತಾರದಲ್ಲಿ ನೋಡಿ ಅನೇಕರಿಗೆ ಅಚ್ಚರಿ ಆಗಿದೆ. ಇನ್ನೂ ಕೆಲವರು ನೆಗೆಟಿವ್ ಕಮೆಂಟ್ ಮಾಡುವ ಕೆಲಸ ಮಾಡಿದ್ದಾರೆ. ಇದಕ್ಕೆ ಪಾಯಲ್ ಖಡಕ್ ಆಗಿ ಉತ್ತರಿಸಿದ್ದಾರೆ. ಅವರು ಟೀಕೆ ಮಾಡುವವರಿಗೆ ಸರಿಯಾಗಿ ಉತ್ತರ ಕೊಟ್ಟಿದ್ದಾರೆ. ಈ ರೀತಿಯ ಕಮೆಂಟ್​​ಗಳು ಅವರ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲವಂತೆ.

ಹೀರೋಯಿನ್​​ಗಳು ಥೈಲ್ಯಾಂಡ್ ಮೊದಲಾದ ಕಡೆಗಳಲ್ಲಿ ತೆರಳಿ ಬೀಚ್​​ಗಳಲ್ಲಿ ನಿಂತು ಪೋಸ್ ಕೊಡುತ್ತಾರೆ. ಕೆಲವರು ಬೋಲ್ಡ್ ಆಗಿ ಕಾಣಿಸುತ್ತಾರೆ. ಈ ಫೋಟೋಗಳನ್ನು ಹಂಚಿಕೊಳ್ಳುವುದರಲ್ಲಿ ಅವರಿಗೆ ಯಾವುದೇ ಹಿಂಜರಿಕೆ ಇರುವುದಿಲ್ಲ. ಆದರೆ, ಕೆಲವೊಮ್ಮೆ ಈ ಫೋಟೋಗಳ ಕಾರಣಕ್ಕೆ ಅವರು ಟೀಕೆ ಎದುರಿಸಬೇಕಾಗುತ್ತದೆ. ಈ ಟೀಕೆಗಳನ್ನು ಎಲ್ಲರೂ ಒಂದೇ ರೀತಿಯಲ್ಲಿ ತೆಗೆದುಕೊಳ್ಳುವುದಿಲ್ಲ. ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೇನೆ ಎಂದು ಪಾಯಲ್ ವಿವರಿಸಿದ್ದಾರೆ.

ಅದು ಬೀಚ್ ಡ್ರೆಸ್ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ ಪಾಯಲ್. ‘ಅದು ಬಿಕಿನಿ ಕೂಡ ಆಗಿರಲಿಲ್ಲ, ಬ್ಯಾಕ್​​ಲೆಸ್ ಟಾಪ್ ಆಗಿತ್ತು’ ಎಂದು ಅವರು ಖಡಕ್ ಆಗಿ ಹೇಳಿದ್ದಾರೆ. ಸಾಕಷ್ಟು ಟ್ರೆಡಿಷನಲ್ ಫೋಟೋಗಳನ್ನು ಹಾಕಿದಾಗ ಯಾರೊಬ್ಬರೂ ಕಮೆಂಟ್ ಮಾಡದೆ, ಈ ರೀತಿಯ ಫೋಟೋ ಹಾಕಿದಾಗಷ್ಟೇ ಎಲ್ಲರೂ ಎದ್ದು ಬರೋದು ಏಕೆ ಎಂಬುದು ಪಾಯಲ್ ಪ್ರಶ್ನೆ ಮಾಡಿದ್ದಾರೆ.

ಇತ್ತೀಚೆಗೆ ನಕಲಿ ಖಾತೆ ಸೃಷ್ಟಿ ಮಾಡಿಕೊಂಡು ಕಮೆಂಟ್ ಹಾಕುವವರ ಸಂಖ್ಯೆ ಹೆಚ್ಚಿದೆ. ಈಗಲೂ ಅದೇ ಆಗಿದೆ ಎಂದು ಪಾಯಲ್ ಹೇಳುತ್ತಾರೆ. ಕಾಲೆಳೆಯುವ ಉದ್ದೇಶದಿಂದ ಈ ರೀತಿಯ ಖಾತೆ ಮಾಡಿಕೊಂಡು ಕಮೆಂಟ್ ಹಾಕುತ್ತಾರೆ ಎಂದು ಅವರು ಬಲವಾಗಿ ನಂಬುತ್ತಾರೆ. ಈ ಕಾರಣಕ್ಕೆ ಅವರು ಈ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಳ್ಳುವುದಿಲ್ಲ.

ಕೆಲವು ಸೆಲೆಬ್ರಿಟಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಆದರೆ, ಪಾಯಲ್ ಆ ರೀತಿ ಅಲ್ಲ. ಈ ರೀತಿಯ ಪರಿಸ್ಥಿತಿಯನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎಂಬುದು ಅವರಿಗೆ ಗೊತ್ತಿದೆಯಂತೆ. ಈ ಕಾರಣದಿಂದ ಅವರಿಗೆ ಇದು ಒತ್ತಡ ತರುವುದಿಲ್ಲ.

ಇದನ್ನೂ ಓದಿ: ಥೈಲ್ಯಾಂಡ್​ ಬೀಚ್​​ನಲ್ಲಿ ಮಿಂಚಿದ ನಟಿ ಪಾಯಲ್ ಚೆಂಗಪ್ಪ; ಇಲ್ಲಿವೆ ಫೋಟೋಸ್

ಪಾಯಲ್ ಅವರು ‘ಜೆರಾಕ್ಸ್’ ಹೆಸರಿನ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ನಾಗಭೂಷಣ್ ಮೊದಲಾದವರು ಇದರಲ್ಲಿ ನಟಿಸಿದ್ದು, ಜೀ5ನಲ್ಲಿ ಇದು ಪ್ರಸಾರ ಆರಂಭಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮದ್ಯಪ್ರಿಯರಿಗೆ ರಾಜ್ಯ ಸರ್ಕಾರದಿಂದ 5ನೇ ಬಾರಿ ಶಾಕ್: ಮೇ 1 ರಿಂದ ಮದ್ಯದ ದರ ಭಾರಿ ಏರಿಕೆ ಸಾಧ್ಯತೆ! – Kannada News | Karnataka Liquor Price Hike: Alcohol Rates to Increase by 20 percent from May 1 Under New AIB Policy

ಬೆಂಗಳೂರು, ಏಪ್ರಿಲ್ 25: ಕರ್ನಾಟಕದಲ್ಲಿ (Karnataka) ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈಗಾಗಲೇ ಮೂರ್ನಾಲ್ಕು ಬಾರಿ ಮದ್ಯದ ದರವನ್ನು ಏರಿಕೆ ಮಾಡಲಾಗಿದೆ. ಇದೀಗ ಐದನೇ ಬಾರಿಗೆ ಅಬಕಾರಿ ಸುಂಕವನ್ನು ಪರಿಷ್ಕರಿಸಲು ಸರ್ಕಾರ ಸಜ್ಜಾಗಿದ್ದು, ಮೇ 1 ರಿಂದ ಹೊಸ ದರಗಳು ಜಾರಿಗೆ ಬರುವ ಸಾಧ್ಯತೆಯಿದೆ. ಇದು ರಾಜ್ಯದ ಮಧ್ಯಮ ಮತ್ತು ಕೆಳವರ್ಗದ ಮದ್ಯಪ್ರಿಯರ ಜೇಬಿಗೆ ಕತ್ತರಿ ಹಾಕಲಿದೆ.

ಏನಿದು ಹೊಸ ಎಐಬಿ (AIB) ನೀತಿ?

ಸರ್ಕಾರವು ಹೊರಡಿಸಿರುವ ಕರಡು ಅಧಿಸೂಚನೆಯಂತೆ, ಇನ್ನು ಮುಂದೆ ಮದ್ಯದ ಬಾಟಲಿಯಲ್ಲಿರುವ ಆಲ್ಕೋಹಾಲ್ ಪ್ರಮಾಣದ (Alcohol-in-Beverage) ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಅಂದರೆ, ಮದ್ಯದಲ್ಲಿ ಆಲ್ಕೋಹಾಲ್ ಅಂಶ ಹೆಚ್ಚಿದ್ದಷ್ಟೂ ತೆರಿಗೆ ಹೆಚ್ಚಾಗಲಿದೆ. ಈ ಹೊಸ ನೀತಿಯಿಂದಾಗಿ ಕಡಿಮೆ ಆಲ್ಕೋಹಾಲ್ ಹೊಂದಿರುವ ಪ್ರೀಮಿಯಂ ಮದ್ಯದ ಬೆಲೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆಯಿದ್ದರೂ, ಸಾಮಾನ್ಯ ಜನರು ಬಳಸುವ ಮದ್ಯದ ಬೆಲೆ ಶೇ 20ರಷ್ಟು ಏರಿಕೆಯಾಗಲಿದೆ.

ಯಾವ ಸ್ಲ್ಯಾಬ್‌ಗಳಿಗೆ ಎಷ್ಟು ಏರಿಕೆ?

ರಾಜ್ಯದ ಒಟ್ಟು ಅಬಕಾರಿ ಆದಾಯದಲ್ಲಿ ಶೇ 80ರಷ್ಟು ಪಾಲು ಹೊಂದಿರುವ ಮೊದಲ ನಾಲ್ಕು ಸ್ಲ್ಯಾಬ್‌ಗಳ ಮದ್ಯದ ಬೆಲೆ ಗಣನೀಯವಾಗಿ ಹೆಚ್ಚಾಗಲಿದೆ. ವಿಸ್ಕಿ, ರಮ್, ಬ್ರಾಂಡಿ ಮತ್ತು ಜಿನ್ ಬೆಲೆಯಲ್ಲಿ ಒಂದು ಕ್ವಾರ್ಟರ್‌ಗೆ 15 ರಿಂದ 25 ರೂಪಾಯಿಗಳಷ್ಟು ಏರಿಕೆಯಾಗುವ ಅಂದಾಜಿದೆ.

ಎಷ್ಟು ಹೆಚ್ಚಾಗಲಿದೆ ಮದ್ಯದ ದರ?

  • ಸ್ಲ್ಯಾಬ್-1: ₹80 ರಿಂದ ₹95ಕ್ಕೆ ಏರಿಕೆ (₹15 ಹೆಚ್ಚಳ)
  • ಸ್ಲ್ಯಾಬ್-2: ₹95 ರಿಂದ ₹110ಕ್ಕೆ ಏರಿಕೆ (₹15 ಹೆಚ್ಚಳ)
  • ಸ್ಲ್ಯಾಬ್-3: ₹120 ರಿಂದ ₹135ಕ್ಕೆ ಏರಿಕೆ (₹15 ಹೆಚ್ಚಳ)
  • ಸ್ಲ್ಯಾಬ್-4: ₹150 ರಿಂದ ₹170ಕ್ಕೆ ಏರಿಕೆ (₹20 ಹೆಚ್ಚಳ)

ಒಂದು ಫುಲ್ ಬಾಟಲ್ ಮದ್ಯದ ಮೇಲೆ ಎಂಆರ್‌ಪಿ (MRP) ದರದಲ್ಲಿ ಸುಮಾರು 50 ರಿಂದ 100 ರೂಪಾಯಿಗಳಷ್ಟು ಹೆಚ್ಚಳವಾಗಲಿದ್ದು, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸರ್ವಿಸ್ ಚಾರ್ಜ್ ಸೇರಿ ಈ ಹೊರೆ ಮತ್ತಷ್ಟು ಹೆಚ್ಚಾಗಲಿದೆ.

ಮದ್ಯಪ್ರಿಯರ ಆಕ್ರೋಶ

ಮೂರು ವರ್ಷಗಳ ಅವಧಿಯಲ್ಲಿ ಐದನೇ ಬಾರಿಗೆ ದರ ಏರಿಕೆ ಮಾಡುತ್ತಿರುವುದಕ್ಕೆ ಮದ್ಯಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪದೇ ಪದೇ ಕುಡುಕರನ್ನೇ ಟಾರ್ಗೆಟ್ ಮಾಡುತ್ತಿದೆ” ಎಂದು ಮದ್ಯದ ವ್ಯಾಪಾರಿಗಳು ಹಾಗೂ ಗ್ರಾಹಕರು ಕಿಡಿಕಾರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Virat Kohli: ಈ ಒಂದು ವಿಶ್ವ ದಾಖಲೆ ಬರೆದಿರುವುದು ವಿರಾಟ್ ಕೊಹ್ಲಿ ಒಬ್ಬರೇ..! – Kannada News | Virat Kohli Scripts New World Record in T20 Cricket

ಇದರೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಒಂದೇ ದೇಶದಲ್ಲಿ 10 ಸಾವಿರ ರನ್​ ಕಲೆಹಾಕಿದ ವಿಶ್ವದ ಮೊದಲ ಬ್ಯಾಟರ್ ಎಂಬ ವಿಶ್ವ ದಾಖಲೆಯು ಕಿಂಗ್ ಕೊಹ್ಲಿಯ ಪಾಲಾಗಿದೆ. ಕೊಹ್ಲಿ ಭಾರತದಲ್ಲಿ ಐಪಿಎಲ್​ನಲ್ಲಿ 7,933 ರನ್​ ಗಳಿಸಿದರೆ, ಚಾಂಪಿಯನ್ಸ್​ ಟ್ರೋಫಿ ಟಿ20 ಲೀಗ್​ನಲ್ಲಿ 311 ರನ್​ ಬಾರಿಸಿದ್ದಾರೆ. ಇನ್ನು ಟೀಮ್ ಇಂಡಿಯಾ ಪರ ಕಣಕ್ಕಿಳಿದಾಗ ಭಾರತದ ಪಿಚ್​ನಲ್ಲಿ 1577 ರನ್​ಗಳಿಸಿದ್ದಾರೆ. ಹಾಗೆಯೇ ಸೈಯದ್ಯ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ 179 ರನ್​ ಬಾರಿಸಿದ್ದಾರೆ.

Source link

ಹೀಗೂ ಸಂಬಂಧದಲ್ಲಿ ಇರ್ತಾರಾ? ತಮ್ಮ ಬಗ್ಗೆ ಶಾಕಿಂಗ್ ವಿಷಯ ರಿವೀಲ್ ಮಾಡಿದ ರಕುಲ್ – Kannada News | Rakul Preet and Jackky’s Situationship Marriage: Actress Clarifies Misinterpretation

ರಕುಲ್ ಪ್ರೀತ್ ಸಿಂಗ್ (Rakul) ಹಾಗೂ ಜಾಕಿ ಭಗ್ನಾನಿ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇವರದ್ದು ಲವ್ ಮ್ಯಾರೇಜ್. ರಕುಲ್ ಅವರು ನಟಿ. ಜಾಕಿ ಬಾಲಿವುಡ್​​ನ ಖ್ಯಾತ ನಿರ್ಮಾಪಕ. ಈಗ ಅವರು ಸಂದರ್ಶನ ಒಂದರಲ್ಲಿ ಮಾತನಾಡಿರುವ ವಿಷಯ ಚರ್ಚೆಗೆ ಗ್ರಾಸವಾಗಿದೆ. ‘ನಾವು ಸಿಚ್ಯುವೇಶನ್​ಶಿಪ್​ನಲ್ಲಿ ಇದ್ದೇವೆ’ ಎಂದಿದ್ದಾರೆ. ಸಿಚ್ಯುವೇಶನ್​​ಶಿಪ್ ಎಂದರೆ ಯಾವುದೇ ಕಮಿಟ್​​ಮೆಂಟ್ ಇಲ್ಲದೆ ಸಂಬಂಧವನ್ನು ಮುಂದುವರಿಸುವುದು. ಅವರ ಹೇಳಿಕೆಯನ್ನು ನಾನಾ ರೀತಿಯಲ್ಲಿ ಅರ್ಥೈಸಲಾಗುತ್ತಿದೆ.

ರಕುಲ್ ಹಾಗೂ ಜಾಕಿ ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ತಮ್ಮ ವಿವಾಹದ ಬಗ್ಗೆ ಜಾಕಿ ಒಂದು ಅಚ್ಚರಿಯ ವಿಷಯ ರಿವೀಲ್ ಮಾಡಿದ್ದಾರೆ. ‘ರಕುಲ್ ಮತ್ತು ನಾನು ವಿವಾಹಿತರು. ಆದರೆ ನಾವು ಸಿಚ್ಯುವೇಶನ್​​ಶಿಪ್​ನಲ್ಲಿದ್ದೇವೆ. ಆದಾಗ್ಯೂ ನಮ್ಮ ಮಧ್ಯೆ ಬದ್ಧತೆ ಇದೆ. ಏಕೆಂದರೆ ನಾವು ಮದುವೆ ಆಗಿದ್ದೇವೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ನಾನು ಅವಳೊಂದಿಗೆ ಯಾವುದೇ ವಿಷಯದ ಬಗ್ಗೆ ಮಾತನಾಡಬಲ್ಲೆ’ ಎಂದು ಜಾಕಿ ಹೇಳಿದ್ದಾರೆ.

‘ನಮಗೆ ಈಗ 20-21 ವರ್ಷ ಅಲ್ಲ ಎಂದು ಒಬ್ಬರಿಗೊಬ್ಬರು ಹೇಳಿಕೊಂಡೆವು. ನಾವಿಬ್ಬರೂ ಅನೇಕ ಏರಿಳಿತಗಳನ್ನು ಕಂಡಿದ್ದೇವೆ. ನಾನು ಯಾವಾಗಲೂ ಖುಷಿಯಿಂದ ಇರುವ ವ್ಯಕ್ತಿ. ನಾನು ಖುಷಿಯಾಗಿರಲು ಇನ್ಯಾರೋ ಬೇಕಿಲ್ಲ. ಒಂದೊಮ್ಮೆ ನಾನು ಖಿನ್ನತೆಗೆ ಒಳಗಾಗಿದ್ದೆ ಎಂದರೆ ಯಾರೇ ಬಂದರೂ ನಾನು ಖಿನ್ನತೆಯಿಂದಲೇ ಇರುತ್ತೇನೆ. ರಕುಲ್ ಸದಾ ಖುಷಿಯಿಂದ ಇರುವ ಹುಡುಗಿ. ನಾನು ಕೂಡ. ಹೀಗಾಗಿ ಇಬ್ಬರೂ ಸೇರಿ ಮತ್ತಷ್ಟು ಖುಷಿಯಾಗಿದ್ದೇವೆ’ ಎಂದರು ಜಾಕಿ.

ಜಾಕಿ ಮಾತನಾಡಿದ ವಿಷಯದಲ್ಲಿ ಸಿಚ್ಯುವೇಶನ್​ಶಿಪ್ ವಿಷಯ ತುಂಬಾನೇ ಹೈಲೈಟ್ ಆಗಿದೆ. ಈ ವಿಷಯ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಸೋಶಿಯಲ್ ಮೀಡಿಯಾದಲ್ಲಿ ಇದುವೇ ಚರ್ಚೆ ಆಗಿದೆ. ಇದಕ್ಕೆ ರಕುಲ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ರಕುಲ್ ಪ್ರೀತ್ ಮಾವನಿಂದ ಐಷಾರಾಮಿ ಪ್ರಾಪರ್ಟಿ ಖರೀದಿಸಿದ ಖ್ಯಾತ ಕ್ರಿಕೆಟರ್

‘ನಾವು ತುಂಬಾನೇ ಮಾತನಾಡಿದ್ದೇವೆ. ಆದರೆ, ಒಂದೇ ಒಂದು ಸಾಲನ್ನು ಹೇಗೆ ಹೆಡ್​​ಲೈನ್ ಮಾಡಲಾಗುತ್ತದೆ ಎಂಬುದನ್ನು ನೋಡಿ ನಗು ಬಂತು. ಸಂದರ್ಭ ಅನ್ನೋದು ಮುಖ್ಯವಾಗುತ್ತದೆ’ ಎಂದು ಅವರು ಹೇಳಿದ್ದಾರೆ. ಉಳಿದ ಸಂಬಂಧಗಳಂತೆ ನಮ್ಮ ಸಂಬಂಧದಲ್ಲಿ ಹೆಚ್ಚು ಕಮಿಟ್​​ಮೆಂಟ್ ಇಲ್ಲ ಎಂದು ಹೇಳುವ ಪ್ರಯತ್ನವನ್ನು ಅವರು ಮಾಡಿದ್ದರು ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ಹವಾಮಾನ ವರದಿ: ಕಾದ ಕೆಂಡದಂತಾಗಿರುವ ರಾಜ್ಯದಲ್ಲಿಂದು ಗುಡುಗು ಸಹಿತ ಆಲಿಕಲ್ಲು ಮಳೆ! 4 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ – Kannada News | Karnataka Weather Forecast: Heatwave in Coastal area, Hailstorm in North interior Karnataka, Orange alert

ಕಾದ ಕೆಂಡದಂತಾಗಿರುವ ರಾಜ್ಯದಲ್ಲಿಂದು ಗುಡುಗು ಸಹಿತ ಆಲಿಕಲ್ಲು ಮಳೆ!Image Credit source: MediaForge AI

ಬೆಂಗಳೂರು, ಏಪ್ರಿಲ್ 25: ಬೆಂಗಳೂರು ಸೇರಿದಂತೆ ಹಲವೆಡೆ ತಾಪಮಾನ  (Karnataka Weather) ಹೆಚ್ಚಾಗಿದ್ದು, ಈಗಾಗಲೇ ಕರಾವಳಿ ಹಾಗೂ ಕಲ್ಯಾಣ ಕರ್ನಾಟಕವು ಬಿಸಿಲಿನ ಬೇಗೆ ತತ್ತರಿಸಿದೆ. ಇಂದು ಕರಾವಳಿಯಲ್ಲಿ ಉಷ್ಣ ಅಲೆಯ ಆರ್ಭಟವಿರಲಿದ್ದು ಜೊತೆಗೆ ರಾಜ್ಯದ ಹಲವೆಡೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆಯಿದೆ. ಹೀಗಾಗಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಅನಗತ್ಯವಾಗಿ ಹೊರಗೆ ಬರಬೇಡಿ, ಹೆಚ್ಚು ನೀರು ಸೇವಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ

ಉತ್ತರ ಒಳನಾಡಿನ ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗಲಿದ್ದು, ಈ ನಾಲ್ಕು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ನೀಡಲಾಗಿದೆ. ಉಳಿದೆಡೆ ಒಣ ಹವೆಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೊತೆಗೆ 30-40 ಕಿ. ಮೀ ವೇಗದಲ್ಲಿ ಗಾಳಿಯೂ ಬೀಸಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿಯೂ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಉಷ್ಣ ಅಲೆ

ಕರಾವಳಿಯ ತಾಪಮಾನದಲ್ಲಿ ಏರುಪೇರಾಗುತ್ತಿದ್ದು, ಬಿಸಿಲ ಬೇಗೆಗೆ ಜನರು ತತ್ತರಿಸಿಹೋಗಿದ್ದಾರೆ. ಇಂದು ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೀಟ್​ ವೇವ್ ಅಲರ್ಟ್​ ಘೋಷಿಸಲಾಗಿದೆ. ಅದರ ಜೊತೆಗೆ ಗುಡುಗು ಸಹಿತ ಗಾಳಿ-ಮಳೆಯಾಗುವ ಸಂಭವವೂ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 5 ದಿನದವರೆಗೂ ಕರಾವಳಿಯಲ್ಲಿ ಇದೇ ರೀತಿಯ ವಾತಾವರಣವಿರಲಿದೆ ಎಂದು ಇಲಾಖೆ ತಿಳಿಸಿದೆ.

ಉಷ್ಣಾಘಾತದಿಂದ ರಕ್ಷಣೆ ಹೇಗೆ?

ಮುಂಬರುವ ದಿನಗಳಲ್ಲಿ ರಾಜ್ಯದೆಲ್ಲೆಡೆ ತಾಪಮಾನ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಅವಶ್ಯಕತೆ ಇಲ್ಲದೆ ಮನೆಯಿಂದ ಹೊರಬರುವುದನ್ನು ತಪ್ಪಿಸುಂತೆ ಹೇಳಲಾಗಿದೆ. ಬೇಸಿಗೆ ರಜೆಯಲ್ಲಿ ಮಕ್ಕಳು ಬಿಸಿಲಲ್ಲಿ ಆಟವಾಡುವುದನ್ನು ಆದಷ್ಟು ನಿಯಂತ್ರಿಸುವಂತೆ ಸೂಚಿಸಲಾಗಿದೆ.

ಉಷ್ಣ ಅಲೆ ಹಾಗೂ ಉಷ್ಣಾಘಾತದಿಂದ (ಹೀಟ್ ಸ್ಟ್ರೋಕ್) ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಸೂರ್ಯನ ಬೆಳಕಿಗೆ ನೇರ ಮೈಯೊಡ್ಡುವುದನ್ನು ಆದಷ್ಟು ತಪ್ಪಿಸಿ. ನಿಯಮಿತವಾಗಿ ನೀರು ಕುಡಿಯಿರಿ. ಎಳನೀರು, ಮಜ್ಜಿಗೆ ಅಥವಾ ಮನೆಯಲ್ಲಿ ತಯಾರಿಸಿದ ಹಣ್ಣಿನ ರಸಗಳನ್ನು ಸೇವಿಸಿ. ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿಯನ್ನು ಬಳಸಿ. ಕೆಫೀನ್ (ಕಾಫಿ/ಟೀ) ಮತ್ತು ಹೆಚ್ಚಿನ ಸಕ್ಕರೆಯುಕ್ತ ಪಾನೀಯಗಳ ಸೇವನೆ ಕಡಿಮೆ ಮಾಡಿ, ಇವು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೆಚ್ಚುತ್ತಿದೆ ಬಿಸಿಲ ಬೇಗೆ: ಹೀಟ್ ಸ್ಟ್ರೋಕ್ ಎದುರಿಸಲು ಆರೋಗ್ಯ ಇಲಾಖೆ ಸಜ್ಜು, ಏನೇನು ಕ್ರಮ? ಇಲ್ಲಿದೆ ವಿವರ – Kannada News | Karnataka Heatwave Alert: Health Department Opens Special Heatstroke Wards in Hospitals Across the State

ಸಾಂದರ್ಭಿಕ ಎಐ ಚಿತ್ರImage Credit source: MediaForge AI

ಬೆಂಗಳೂರು, ಏಪ್ರಿಲ್ 25: ಕರ್ನಾಟದಲ್ಲಿ ಸೂರ್ಯನ ಪ್ರತಾಪ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈ ಹಿಂದೆ ಬಳ್ಳಾರಿ, ಕಲಬುರಗಿ, ರಾಯಚೂರಿನಂತಹ ಜಿಲ್ಲೆಗಳಿಗೆ ಸೀಮಿತವಾಗಿದ್ದ ಉಷ್ಣ ಅಲೆ (Heat Wave) ಈಗ ಬೆಂಗಳೂರಿಗರನ್ನೂ (Bangalore) ಬೆವರಿಸುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಉಷ್ಣಾಂಶ ಈಗಾಗಲೇ 36 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದ್ದು, ಅತಿಯಾದ ಶಾಖದಿಂದ ಜನರು ಆರೋಗ್ಯ ಸಮಸ್ಯೆಗಳಿಗೆ ಒಳಗಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ರಾಜ್ಯಾದ್ಯಂತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಆಸ್ಪತ್ರೆಗಳಲ್ಲಿ ‘ನಿರ್ವಹಣಾ ಕೊಠಡಿ’ ಸ್ಥಾಪನೆ

ಬಿಸಿಗಾಳಿ ಹಾಗೂ ಹೀಟ್ ಸ್ಟ್ರೋಕ್‌ನಿಂದ ಬಾಧಿತರಾಗುವವರಿಗೆ ತುರ್ತು ಚಿಕಿತ್ಸೆ ನೀಡಲು ಸರ್ಕಾರ ವಿಶೇಷ ಸುತ್ತೋಲೆ ಹೊರಡಿಸಿದೆ. ಜುಲೈ 31ರವರೆಗೆ ಜಾರಿಯಲ್ಲಿರುವಂತೆ ರಾಜ್ಯದಾದ್ಯಂತ ವಿಶೇಷ ವಾರ್ಡ್‌ಗಳನ್ನು ತೆರೆಯಲಾಗುತ್ತಿದೆ.

  • ಸಮುದಾಯ ಆರೋಗ್ಯ ಕೇಂದ್ರಗಳು: ತಲಾ 2 ಬೆಡ್‌ಗಳು
  • ತಾಲೂಕು ಆಸ್ಪತ್ರೆಗಳು: ತಲಾ 5 ಬೆಡ್‌ಗಳು
  • ಜಿಲ್ಲಾಸ್ಪತ್ರೆಗಳು: ತಲಾ 10 ಬೆಡ್‌ಗಳ ಪ್ರತ್ಯೇಕ ನಿರ್ವಹಣಾ ಕೊಠಡಿ

ಈ ಕೊಠಡಿಗಳಲ್ಲಿ ಫ್ಯಾನ್, ಏರ್ ಕೂಲರ್, ಐಸ್ ಕ್ಯೂಬ್ಸ್, ಥರ್ಮಾಮೀಟರ್ ಮತ್ತು ಓಆರ್‌ಎಸ್ (ORS) ಕಾರ್ನರ್‌ಗಳನ್ನು ಕಡ್ಡಾಯವಾಗಿ ಸ್ಥಾಪಿಸಲು ಸೂಚಿಸಲಾಗಿದೆ.

ಕೆಸಿ ಜನರಲ್ ಆಸ್ಪತ್ರೆಯಲ್ಲಿ ಸಕಲ ಸಿದ್ಧತೆ

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಈಗಾಗಲೇ 5 ಬೆಡ್‌ಗಳ ಪ್ರತ್ಯೇಕ ‘ಹೀಟ್ ಸ್ಟ್ರೋಕ್ ವಾರ್ಡ್’ ಸಜ್ಜಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆಸ್ಪತ್ರೆಯ ಡೀನ್ ಡಾ. ಲಕ್ಷ್ಮೀಪತಿ ಅವರು, ‘ಬಿಸಿಲಿನಿಂದ ಅಸ್ವಸ್ಥರಾಗುವವರಿಗೆ ಚಿಕಿತ್ಸೆ ನೀಡಲು ಅಗತ್ಯ ಔಷಧಿಗಳು ಹಾಗೂ ತಂಪಾದ ವಾತಾವರಣದ ವ್ಯವಸ್ಥೆ ಮಾಡಲಾಗಿದೆ’ ಎಂದಿದ್ದಾರೆ. ಇದೇ ರೀತಿ ದೊಡ್ಡಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲೂ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪ್ರಾಣಿ-ಪಕ್ಷಿಗಳಿಗೂ ಹಸಿರು ರಕ್ಷಣೆ

ಬಿಸಿಲಿನ ಪ್ರಭಾವ ಕೇವಲ ಮನುಷ್ಯರ ಮೇಲಷ್ಟೇ ಅಲ್ಲದೆ ಪ್ರಾಣಿ-ಪಕ್ಷಿಗಳ ಮೇಲೂ ಆಗುತ್ತಿದೆ. ಬೆಳಗಾವಿಯ ಪಕ್ಷಿ ಸಂಗ್ರಹಾಲಯದಲ್ಲಿ ಸ್ಪ್ರಿಂಕ್ಲರ್‌ಗಳ (Sprinklers) ವ್ಯವಸ್ಥೆ ಮಾಡಲಾಗಿದ್ದು, ಪಕ್ಷಿಗಳ ಆಹಾರ ಕ್ರಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮಹತ್ವದ ಬದಲಾವಣೆ ಮಾಡಿದ್ದಾರೆ.

ಇದನ್ನೂ ಓದಿ: ಹೀಟ್ ವೇವ್ ಎದುರಿಸಲು ಮೈಸೂರಿನ ಆಸ್ಪತ್ರೆ ಸನ್ನದ್ಧ; ರೋಗಿಗಳಿಗಾಗಿ ಬೆಡ್ ಮೀಸಲು, ವಾರ್ಡ್‌ನಲ್ಲಿ ಎಸಿ, ಫ್ಯಾನ್ ಅಳವಡಿಕೆ!

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇಲಾಖೆಯ ಎಲ್ಲಾ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ಹೀಟ್ ಸ್ಟ್ರೋಕ್ ನಿರ್ವಹಣೆ ಕುರಿತು ತರಬೇತಿ ನೀಡಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today: ಇಂದು ಈ ರಾಶಿಯವರಿಗೆ ಮನೆ ಖರೀದಿ ಯೋಗ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 25, ಶನಿವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಇದು ಪರಾಭವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಶುಕ್ಲ ಪಕ್ಷ, ಅಷ್ಟಮಿ ತಿಥಿ ಇರುವ ಈ ಶುಭ ದಿನದ ಕುರಿತು ಗುರೂಜಿ ವಿವರಣೆ ನೀಡಿದ್ದಾರೆ.

ರವಿ ಗ್ರಹವು ಮೇಷ ರಾಶಿಯಲ್ಲಿ ಮತ್ತು ಚಂದ್ರ ಗ್ರಹವು ಕರ್ಕಾಟಕ ರಾಶಿಯ ಆಶ್ಲೇಷ ನಕ್ಷತ್ರದಲ್ಲಿ ಸಂಚರಿಸುತ್ತಿವೆ. ಈ ದಿನವನ್ನು ಸೀತಾ ನವಮಿ, ಸೌರ ಶ್ರೀರಾಮ ನವಮಿ ಹಾಗೂ ವಿಶ್ವ ಮಲೇರಿಯಾ ದಿನವನ್ನಾಗಿ ಆಚರಿಸಲಾಗುತ್ತದೆ. ಗುರೂಜಿ ಅವರು ದ್ವಾದಶ ರಾಶಿಗಳಾದ ಮೇಷದಿಂದ ಮೀನದವರೆಗೆ ಪ್ರತಿಯೊಂದು ರಾಶಿಗೂ ಗ್ರಹಗಳ ಸಂಚಾರದ ಆಧಾರದ ಮೇಲೆ ವೈಯಕ್ತಿಕ ಫಲಾಫಲಗಳನ್ನು ವಿವರಿಸಿದ್ದಾರೆ.

 

 

 

Source link