ಕ್ರೆಡಿಟ್ ಕಾರ್ಡ್ ಇದ್ದೂ ಅದನ್ನು ಬಳಸದೇ ಇದ್ದರೆ ಏನಾಗುತ್ತೆ? ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ? – Kannada News | Know what happens if Credit Card not used for long time, how it affects credit score
ಕ್ರೆಡಿಟ್ ಕಾರ್ಡ್ ಎಂದರೆ ಬಹಳ ಜನರು ಹೌಹಾರಿ ದೂರ ಓಡುತ್ತಾರೆ. ಇನ್ನೂ ಹಲವರು ಸಾಲು ಸಾಲಾಗಿ ಕ್ರೆಡಿಟ್ ಕಾರ್ಡ್ಗಳನ್ನು ಪಡೆದು ಇಎಂಐಗಳ ಗಾಳಕ್ಕೆ ಬೀಳುತ್ತಾರೆ. ಇನ್ನೂ ಕೆಲವರು ಕ್ರೆಡಿಟ್ ಕಾರ್ಡ್ (Credit Card) ಪಡೆದು, ಅದನ್ನು ಬಳಸದೆ ಹಾಗೇ ಬಿಟ್ಟಿರುತ್ತಾರೆ. ಕಾರ್ಡ್ ಬಳಸದೆ ಬಹಳ ಕಾಲ ಬಿಟ್ಟರೆ ಏನಾಗುತ್ತೆ? ಕಾರ್ಡ್ ಬಳಸದೇ ಇರುವುದು ಹಣಕಾಸು ದೃಷ್ಟಿಯಿಂದ ಉತ್ತಮ ಕ್ರಮ ಅನಿಸಬಹುದು. ಆದರೆ, ಕ್ರೆಡಿಟ್ ಸ್ಕೋರ್ ದೃಷ್ಟಿಯಿಂದ ಇದು ತುಸು ಸಂಕೀರ್ಣವಾಗಿದೆ. ‘ಕ್ರೆಡಿಟ್ ಕಾರ್ಡ್ ಬಳಕೆ ನಿಲ್ಲಿಸಿದರೆ ಕ್ರೆಡಿಟ್…