Headlines

‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಮಾ ಟೀಸರ್ ನೋಡಿ ಮೆಚ್ಚಿಕೊಂಡ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ – Kannada News | Lakshmi Hebbalkar talks about Daali Dhananjay starrer Anna from Mexico movie teaser

ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಕುಟುಂಬ ಈ ಚಿತ್ರರಂಗಕ್ಕೂ ಕಾಲಿಟ್ಟಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಬಿ. ಹಟ್ಟಿಹೊಳಿ ಅವರು ‘ಐರಾ ಫಿಲ್ಮ್ಸ್’ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಈ ಸಂಸ್ಥೆಯ ಮೂಲಕ ‘ಅಣ್ಣ ಫ್ರಮ್ ಮೆಕ್ಸಿಕೋ’ (Anna From Mexico) ಸಿನಿಮಾ ನಿರ್ಮಾಣ ಆಗಿದೆ. ‘ದಿ ರಾಯಲ ಸ್ಟುಡಿಯೋಸ್’ ಕೈ ಜೋಡಿಸಿದೆ. ಈಗ ಈ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ನಟ ಡಾಲಿ ಧನಂಜಯ್ (Daali Dhananjay) ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಟೀಸರ್…

Read More

ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ! – Kannada News | Kolar Heatwave: Soaring Demand for Traditional Clay Pots Amidst Extreme Temperatures

ಕೋಲಾರ, ಏಪ್ರಿಲ್ 24: ಕೋಲಾರ ಜಿಲ್ಲೆಯಲ್ಲಿ ತಾಪಮಾನ ಏರಿಕೆಯಾದ ಹಿನ್ನೆಲೆಯಲ್ಲಿ ಮಣ್ಣಿನ ಮಡಿಕೆಗಳ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಜಿಲ್ಲೆಯ ಕುಂಬಾರ ಬೀದಿಯು ಮಣ್ಣಿನ ಮಡಿಕೆಗಳ ಮಾರಾಟಕ್ಕೆ ಹೆಸರುವಾಸಿಯಾಗಿದ್ದು, ಬೇಸಿಗೆ ಆರಂಭವಾದಾಗಿನಿಂದ ಇಲ್ಲಿ ಉತ್ತಮ ವ್ಯಾಪಾರ ನಡೆಯುತ್ತಿದೆ. ಮಣ್ಣಿನ ಮಡಿಕೆಯಲ್ಲಿ ಇಟ್ಟ ನೀರು ಆರೋಗ್ಯಕ್ಕೆ ಉತ್ತಮ ಎಂಬ ನಂಬಿಕೆ ಮತ್ತು ಫ್ರಿಡ್ಜ್ ನೀರಿಗಿಂತ ತಂಪಾಗಿರುತ್ತದೆ ಎಂಬ ಕಾರಣಕ್ಕೆ ಜನ ಇವುಗಳನ್ನು ಹೆಚ್ಚು ಖರೀದಿಸುತ್ತಿದ್ದಾರೆ. ಮಡಿಕೆ ತಯಾರಕರು ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಆಗಿದ್ದು, ಸಾಂಪ್ರದಾಯಿಕ ಮಡಿಕೆಗಳ ಜೊತೆಗೆ ಮಣ್ಣಿನ ಬಾಟಲಿಗಳು,…

Read More

IPL 2026: ಈ ಐದು ತಂಡಗಳಿಗೆ ನಾಯಕರೇ ಹೊರೆ

ಐಪಿಎಲ್ 2026 ರಲ್ಲಿ ಅನೇಕ ಯುವ ಹಾಗೂ ಅನುಭವಿ ಆಟಗಾರರು ಉತ್ತಮ ಪ್ರದರ್ಶನ ನೀಡುವ ಮೂಲಕ ತಮ್ಮ ತಮ್ಮ ತಂಡಗಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಇದು ತಂಡದ ನಾಯಕರ ಯಶಸ್ಸಿಗೂ ಸಹಕಾರಿಯಾಗಿದೆ. ಆದರೆ ಇನ್ನು ಕೆಲವು ತಂಡಗಳಿಗೆ ನಾಯಕರೇ ಹೊರ ಆಗಿದ್ದಾರೆ. ಬ್ಯಾಟಿಂಗ್‌ ಅಥವಾ ಬೌಲಿಂಗ್​ ಜೊತೆಗೆ ಅವರ ನಾಯಕತ್ವದ ನಿರ್ಧಾರಗಳು ಕೂಡ ತಂಡದ ಸೋಲಿಗೆ ಕಾರಣವಾಗುತ್ತಿವೆ. ಹೀಗಾಗಿ ತಮ್ಮ ಕಳಪೆ ಪ್ರದರ್ಶನದಿಂದ ತಂಡಕ್ಕೆ ಹೊರೆಯಾಗಿರುವುದು ಕೇವಲ ಒಬ್ಬರು ಅಥವಾ ಇಬ್ಬರು ಅಲ್ಲ, ಬರೋಬ್ಬರಿ ಐದು ತಂಡಗಳ…

Read More

ಶೌಚಾಲಯದಲ್ಲಿ ಸಿರಿಂಜ್‌ಗಳು ಪತ್ತೆ: ತುಮಕೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಉದ್ದೀಪನ ಶಂಕೆ! – Kannada News | National Games Kick Off; but Syringes Found on Opening Day

ಕ್ರೀಡಾಕೂಟದ ಮೊದಲ ದಿನ ಸಿರಿಂಜ್​ಗಳು ಪತ್ತೆ Image Credit source: tv9 kannada ತುಮಕೂರು, ಏಪ್ರಿಲ್​ 24: ಜಿಲ್ಲೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ (National level Sports) ಕಲ್ಪತರು ನಾಡು ತುಮಕೂರು (Tumkur) ಸಾಕ್ಷಿಯಾಗಿದೆ. 20 ವರ್ಷದೊಳಗಿನವರ (U-20) 24ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಇಂದು ಅದ್ದೂರಿ ಚಾಲನೆ ಸಿಕ್ಕಿದ್ದು, ದೇಶದ ವಿವಿಧ ಭಾಗಗಳಿಂದ ಬಂದ ನೂರಾರು ಯುವ ಪ್ರತಿಭೆಗಳು ತಮ್ಮ ಸಾಧನೆ ಪ್ರದರ್ಶಿಸಲು ಸಜ್ಜಾಗಿದ್ದಾರೆ. ಆದರೆ, ಆರಂಭದ ದಿನವೇ ಕ್ರೀಡಾಂಗಣದ ಶೌಚಾಲಯದಲ್ಲಿ ಸಿರಿಂಜ್‌ಗಳು…

Read More

ಮೆಟಾ, ಮೈಕ್ರೋಸಾಫ್ಟ್​ನಲ್ಲಿ ಎಐ ಸಂಚಲನ; 23,000 ಉದ್ಯೋಗಗಳಿಗೆ ಕುತ್ತು – Kannada News | AI effect, Meta and Microsoft take steps that can affect 23,000 jobs

ನವದೆಹಲಿ, ಏಪ್ರಿಲ್ 24: ಟೆಕ್ ದೈತ್ಯ ಸಂಸ್ಥೆಗಳಾದ ಮೆಟಾ (ಫೇಸ್‌ಬುಕ್‌ನ ಮಾತೃಸಂಸ್ಥೆ) ಮತ್ತು ಮೈಕ್ರೋಸಾಫ್ಟ್ ಜಾಗತಿಕವಾಗಿ ಸುಮಾರು 23,000 ಉದ್ಯೋಗಗಳ ಮೇಲೆ ಪರಿಣಾಮ ಬೀರಬಲ್ಲ ಬೃಹತ್ ಉದ್ಯೋಗ ಕಡಿತ ಮತ್ತು ಬೈಔಟ್ (Buyout) ಯೋಜನೆಗಳನ್ನು ಪ್ರಕಟಿಸಿವೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲು ಮತ್ತು ವೆಚ್ಚ ಕಡಿತಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಮೆಟಾ ತನ್ನ ಒಟ್ಟು ಉದ್ಯೋಗಿಬಳಗದ ಶೇಕಡಾ 10 ರಷ್ಟು, ಅಂದರೆ ಸುಮಾರು 8,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ. ಮೇ 20 ರಿಂದ…

Read More

ವಿಶೇಷ ಸಂಪುಟ ಸಭೆ ಅಂತ್ಯ: ಒಳ ಮೀಸಲಾತಿ ಹಂಚಿಕೆಗೆ ಕ್ರಾಂತಿಕಾರಿ ನಿರ್ಣಯ, ಯಾರಿಗೆ ಎಷ್ಟು? – Kannada News | Karnataka Cabinet Finalized SC Internal Reservation, here Is Details

ಬೆಂಗಳೂರು, (ಏಪ್ರಿಲ್ 24): ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ (SC Internal Reservation)  ಕುರಿತು ಸಿದ್ದರಾಮಯ್ಯ ಸರ್ಕಾರ ನಿರ್ಣಾಯಕ ತೀರ್ಮಾನ ಕೈಗೊಂಡಿದೆ. ಪರಿಶಿಷ್ಟ ಜಾತಿಗಳಿಗೆ ಲಭ್ಯವಿರುವ ಶೇ.15 ರಷ್ಟು ಮೀಸಲಾತಿಯಲ್ಲಿ ಸಮಾನವಾಗಿ ಹಂಚಿಕೆಗೆ ತೀರ್ಮಾನಿಸಿದೆ. ಅಂದರೆ ದಲಿತ ಎಡಗೈ 5, ಬಲಗೈ 5, ಇತರರಿಗೆ 5ರಷ್ಟು ಹಂಚಿಕೆಗೆ ನಿರ್ಧರಿಸಲಾಗಿದೆ. ಇದರೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವ ಕ್ರಾಂತಿಕಾರಿ ನಿರ್ಣಯ ಕೈಗೊಂಡಿದೆ. Source link

Read More

ಡೆಲಿವರಿ ನಂತರ ಮಹಿಳೆಯರಲ್ಲಿ ಕಾಣಿಸಿಕೊಳ್ಳಬಹುದಾದ 5 ಆರೋಗ್ಯ ಸಮಸ್ಯೆಗಳು ಯಾವುದು ಗೊತ್ತಾ? – Kannada News | After Delivery Care: 5 Common Health Issues in New Mothers

ಗರ್ಭಧಾರಣೆ ಎನ್ನುವಂತದ್ದು ಒಂದು ಹೆಣ್ಣಿನ ಜೀವನದಲ್ಲಿ ಮುಖ್ಯವಾದ ಘಟ್ಟ. ಈ ಅವಧಿಯಲ್ಲಿ ಮಹಿಳೆಯರು ಆರೋಗ್ಯದ ಕಡೆ ಹೆಚ್ಚಿನ ಗಮನ ವಹಿಸುವುದು ಅತ್ಯಂತ ಮುಖ್ಯ. ಜೊತೆಗೆ ಅದಕ್ಕೂ ಹೆಚ್ಚಿನ ಕಾಳಜಿ ಡೆಲಿವರಿ (Delivery) ನಂತರ ಮಾಡಬೇಕಾಗುತ್ತದೆ. ಎಲ್ಲರಿಗೂ ತಿಳಿದಿರುವಂತೆ ಡೆಲಿವರಿ ನಂತರ ಮಹಿಳೆಯ ದೇಹದಲ್ಲಿ ಹಾರ್ಮೋನ್ ಬದಲಾವಣೆಗಳು ಮುಂದುವರಿಯುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಆದಷ್ಟು ಎಚ್ಚರಿಕೆ ವಹಿಸುವುದು ಬಹಳ ಅನಿವಾರ್ಯ. ಅದರ ಜೊತೆಗೆ ಯಾವ ರೀತಿಯ ಸಮಸ್ಯೆಗಳು ಕಂಡುಬರುತ್ತದೆ ಅದನ್ನು ತಡೆಯಲು ಏನು…

Read More

BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಬಂಧನ: ಅಂತಾರಾಜ್ಯ ಕಳ್ಳರಿಗೆ ಬಿಗ್​​ ಶಾಕ್​​ ಕೊಟ್ಟ ಖಾಕಿ – Kannada News | Bengaluru Police Arrest Three for BSNL Copper Wire and Module Theft

ಬೆಂಗಳೂರು, ಏಪ್ರಿಲ್​​ 24: ಯಶವಂತಪುರ ಪೊಲೀಸರು ಬಿಎಸ್‌ಎನ್‌ಎಲ್ ಮಾಡ್ಯೂಲ್‌ಗಳು ಮತ್ತು ಕಾಪರ್ ವೈರ್‌ಗಳನ್ನು ಕದಿಯುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಉತ್ತರಪ್ರದೇಶ ಮೂಲದವರಾದ ರವಿ ಚೌಹಾಣ್, ಸಂದೀಪ್ ಮತ್ತು ಸೈಯದ್ ಜಾಹೇದ್ ಎಂಬುವವರನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ. ಈ ಖದೀಮರು ಬಿಎಸ್‌ಎನ್‌ಎಲ್ ಸಿಬ್ಬಂದಿಯ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದರು. ಕಳ್ಳತನಕ್ಕಾಗಿ ನೀಲಿ ಸಮವಸ್ತ್ರವನ್ನು ಧರಿಸಿ ರಿಪೇರಿ ಕೆಲಸದ ನೆಪದಲ್ಲಿ ಬರುತ್ತಿದ್ದರು. ಫುಟ್‌ಪಾತ್‌ಗಳಲ್ಲಿ ಅಳವಡಿಸಿದ್ದ ಬಿಎಸ್‌ಎನ್‌ಎಲ್ ಟೆಲಿಫೋನ್ ಮತ್ತು ಇಂಟರ್ನೆಟ್ LAN ಕೇಬಲ್‌ಗಳನ್ನು ಹೊಂದಿದ್ದ ಕಬ್ಬಿಣದ ಪಿಲ್ಲರ್‌ಗಳನ್ನು ಪಿಕಾಸಿ, ಸುತ್ತಿಗೆ,…

Read More

ದಕ್ಷಿಣ ಕನ್ನಡಕ್ಕೆ ಹಾರ್ಟ್ ಅಟ್ಯಾಕ್ ಶಾಕ್: ಒಂದೇ ವರ್ಷದಲ್ಲಿ ಶೇ.120ರಷ್ಟು ಭಾರಿ ಏರಿಕೆ! – Kannada News | Mangaluru Heart Attack Cases Skyrocket: 7,212 Incidents, Urgent Health Alert

ಮಂಗಳೂರು, ಏ.24 : ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಸುನಾಮಿಯಂತೆ ಅಪ್ಪಳಿಸುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳ ಪ್ರಮಾಣದಲ್ಲಿ ಬರೋಬ್ಬರಿ ಶೇ. 120ರಷ್ಟು ಭಾರಿ ಏರಿಕೆಯಾಗಿರುವುದು ಇತ್ತೀಚಿನ ಆರೋಗ್ಯ ಅಂಕಿಅಂಶಗಳಿಂದ ಬಹಿರಂಗವಾಗಿದೆ. ಈ ಬಗ್ಗೆ ದಾಯ್ಜಿವರ್ಲ್ಡ್ ವರದಿಯನ್ನು ಮಾಡಿದೆ. ಇದಿಗ ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ. ಆರೋಗ್ಯ ಇಲಾಖೆಯು ಎರಡು ಅವಧಿಗಳ (ಏಪ್ರಿಲ್ 2024 – ಮಾರ್ಚ್ 2025 ಮತ್ತು ಏಪ್ರಿಲ್ 2025 –…

Read More

ಕೇಜ್ರಿವಾಲ್​ಗೆ ಭಾರೀ ಹೊಡೆತ; 6 ಸಂಸದರೊಂದಿಗೆ ಆಮ್ ಆದ್ಮಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ರಾಘವ್ ಚಡ್ಡಾ – Kannada News | Raghav Chadha and 6 other Rajya Sabha MPs quit AAP and Announce To Merge With BJP

ನವದೆಹಲಿ, ಏಪ್ರಿಲ್ 24: ರಾಘವ್ ಚಡ್ಡಾ ಅವರನ್ನು ರಾಜ್ಯಸಭಾ ಉಪನಾಯಕನ ಸ್ಥಾನದಿಂದ ವಜಾಗೊಳಿಸಿ ಪಕ್ಷದಲ್ಲಿ ಮೂಲೆಗುಂಪು ಮಾಡಿದ್ದ ಆಮ್ ಆದ್ಮಿ ಪಕ್ಷದ (AAm Aadmi Party) ವಿರುದ್ಧ ಪಕ್ಷದೊಳಗೇ ಅಸಮಾಧಾನ ಉಂಟಾಗಿತ್ತು. ಈ ಬಗ್ಗೆ ರಾಘವ್ ಚಡ್ಡಾ ಅವರೂ ವಿಡಿಯೋ ಸಂದೇಶದ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದರು. ಇದೀಗ ತಾವು ತೆಗೆದುಕೊಂಡ ನಿರ್ಧಾರಕ್ಕೆ ಅರವಿಂದ್ ಕೇಜ್ರಿವಾಲ್ ಭಾರೀ ಬೆಲೆ ತೆರುವಂತಾಗಿದೆ. ಏಕೆಂದರೆ, ರಾಘವ್ ಚಡ್ಡಾ (Raghav Chadha) ಸೇರಿದಂತೆ ಒಟ್ಟು 7 ಸಂಸದರು ಆಮ್ ಆದ್ಮಿ ಪಕ್ಷಕ್ಕೆ…

Read More