Category Archives: Blog

Your blog category

ದಕ್ಷಿಣ ಕನ್ನಡಕ್ಕೆ ಹಾರ್ಟ್ ಅಟ್ಯಾಕ್ ಶಾಕ್: ಒಂದೇ ವರ್ಷದಲ್ಲಿ ಶೇ.120ರಷ್ಟು ಭಾರಿ ಏರಿಕೆ! – Kannada News | Mangaluru Heart Attack Cases Skyrocket: 7,212 Incidents, Urgent Health Alert

ಮಂಗಳೂರು, ಏ.24 : ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಸುನಾಮಿಯಂತೆ ಅಪ್ಪಳಿಸುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳ ಪ್ರಮಾಣದಲ್ಲಿ ಬರೋಬ್ಬರಿ ಶೇ. 120ರಷ್ಟು ಭಾರಿ ಏರಿಕೆಯಾಗಿರುವುದು ಇತ್ತೀಚಿನ ಆರೋಗ್ಯ ಅಂಕಿಅಂಶಗಳಿಂದ ಬಹಿರಂಗವಾಗಿದೆ. ಈ ಬಗ್ಗೆ ದಾಯ್ಜಿವರ್ಲ್ಡ್ ವರದಿಯನ್ನು ಮಾಡಿದೆ. ಇದಿಗ ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ. ಆರೋಗ್ಯ ಇಲಾಖೆಯು ಎರಡು ಅವಧಿಗಳ (ಏಪ್ರಿಲ್ 2024 – ಮಾರ್ಚ್ 2025 ಮತ್ತು ಏಪ್ರಿಲ್ 2025 – ಫೆಬ್ರವರಿ 2026) ನಡುವೆ ನಡೆಸಿದ ತುಲನಾತ್ಮಕ ವರದಿಯಲ್ಲಿ ಈ ಆಘಾತಕಾರಿ ಸತ್ಯ ಹೊರಬಂದಿದೆ. ಜಿಲ್ಲೆಯಲ್ಲಿ ಒಟ್ಟು ಹೃದಯಾಘಾತ ಪ್ರಕರಣಗಳ ಸಂಖ್ಯೆ 3,278 ರಿಂದ 7,212 ಕ್ಕೆ ಜಿಗಿದಿದೆ ಎಂದು ವರದಿ ಹೇಳಿದೆ.

ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಒಟ್ಟು ಪ್ರಕರಣಗಳು: 1,752 ರಿಂದ 3,320 ಕ್ಕೆ ಏರಿಕೆ.

STEMI (ತೀವ್ರ ಹೃದಯಾಘಾತ): 400 ರಿಂದ 908 ಕ್ಕೆ ಹೆಚ್ಚಳ.

ಇತರ ಹೃದಯಾಘಾತಗಳು: 1,352 ರಿಂದ 2,412 ಕ್ಕೆ ಏರಿಕೆ.

ಕೇವಲ ಮಂಗಳೂರು ಮಾತ್ರವಲ್ಲದೆ ಜಿಲ್ಲೆಯ ಇತರ ತಾಲೂಕುಗಳಲ್ಲೂ ಪ್ರಕರಣಗಳು ಹೆಚ್ಚುತ್ತಿವೆ:

ಬಂಟ್ವಾಳ ತಾಲೂಕು ಆಸ್ಪತ್ರೆ: 552 ರಿಂದ 850 ಪ್ರಕರಣಗಳು.

ಸುಳ್ಯ ತಾಲೂಕು ಆಸ್ಪತ್ರೆ: 664 ರಿಂದ 720 ಪ್ರಕರಣಗಳು.

ಬೆಳ್ತಂಗಡಿ ತಾಲೂಕು ಆಸ್ಪತ್ರೆ: 310 ರಿಂದ 350 ಪ್ರಕರಣಗಳು.

ಇದನ್ನೂ ಓದಿ: “ನೀನು ತುಂಬಾ ಸಣ್ಣಗಿದ್ದೀಯ, ಜಿಮ್‌ಗೆ ಹೋದ್ರೆ ಸೆಕ್ಸಿಯಾಗಿ ಕಾಣ್ತೀಯ”: ಟಿಸಿಎಸ್ ಸಹೋದ್ಯೋಗಿ ಬಗ್ಗೆ ಯುವತಿ ಸ್ಫೋಟಕ ಹೇಳಿಕೆ

ಖಾಸಗಿ ಆಸ್ಪತ್ರೆಗಳ ಅಂಕಿಅಂಶಗಳನ್ನು ಗಮನಿಸಿದರೆ, ಅಲ್ಲಿಯೂ 1,972 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 1,056 ತೀವ್ರ ಸ್ವರೂಪದ ಹೃದಯಾಘಾತಗಳಾಗಿವೆ. ಕೇವಲ 11 ತಿಂಗಳ ಅವಧಿಯಲ್ಲಿ ಪ್ರಕರಣಗಳು ಇಷ್ಟೊಂದು ಪ್ರಮಾಣದಲ್ಲಿ ದ್ವಿಗುಣಗೊಂಡಿರುವುದು ಆರೋಗ್ಯ ಇಲಾಖೆಯನ್ನು ಚಿಂತೆಗೀಡುಮಾಡಿದೆ. ಜೀವನಶೈಲಿ ಬದಲಾವಣೆ, ಆಹಾರ ಪದ್ಧತಿ ಅಥವಾ ಒತ್ತಡ ಇವುಗಳಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಸಾರ್ವಜನಿಕರು ಎದೆಯ ನೋವು ಅಥವಾ ಉಸಿರಾಟದ ತೊಂದರೆ ಕಂಡುಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೇಜ್ರಿವಾಲ್​ಗೆ ಭಾರೀ ಹೊಡೆತ; 6 ಸಂಸದರೊಂದಿಗೆ ಆಮ್ ಆದ್ಮಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ರಾಘವ್ ಚಡ್ಡಾ – Kannada News | Raghav Chadha and 6 other Rajya Sabha MPs quit AAP and Announce To Merge With BJP

ನವದೆಹಲಿ, ಏಪ್ರಿಲ್ 24: ರಾಘವ್ ಚಡ್ಡಾ ಅವರನ್ನು ರಾಜ್ಯಸಭಾ ಉಪನಾಯಕನ ಸ್ಥಾನದಿಂದ ವಜಾಗೊಳಿಸಿ ಪಕ್ಷದಲ್ಲಿ ಮೂಲೆಗುಂಪು ಮಾಡಿದ್ದ ಆಮ್ ಆದ್ಮಿ ಪಕ್ಷದ (AAm Aadmi Party) ವಿರುದ್ಧ ಪಕ್ಷದೊಳಗೇ ಅಸಮಾಧಾನ ಉಂಟಾಗಿತ್ತು. ಈ ಬಗ್ಗೆ ರಾಘವ್ ಚಡ್ಡಾ ಅವರೂ ವಿಡಿಯೋ ಸಂದೇಶದ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದರು. ಇದೀಗ ತಾವು ತೆಗೆದುಕೊಂಡ ನಿರ್ಧಾರಕ್ಕೆ ಅರವಿಂದ್ ಕೇಜ್ರಿವಾಲ್ ಭಾರೀ ಬೆಲೆ ತೆರುವಂತಾಗಿದೆ. ಏಕೆಂದರೆ, ರಾಘವ್ ಚಡ್ಡಾ (Raghav Chadha) ಸೇರಿದಂತೆ ಒಟ್ಟು 7 ಸಂಸದರು ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಜೊತೆ ಸೇರುವುದಾಗಿ ಘೋಷಿಸಿದ್ದಾರೆ. ಇದರಿಂದ ಕೇಜ್ರಿವಾಲ್​ಗೆ ಭಾರೀ ಹೊಡೆತ ಬಿದ್ದಿದೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಪ್ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದರಲ್ಲಿ 2/3ರಷ್ಟು ಜನರು ಬಿಜೆಪಿಯೊಂದಿಗೆ ವಿಲೀನವಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ರಾಜ್ಯಸಭಾ ಸಂಸದರಾದ ರಾಘವ್ ಚಡ್ಡಾ, ಅಶೋಕ್ ಮಿತ್ತಲ್ ಮತ್ತು ಸಂದೀಪ್ ಪಾಠಕ್ ಅವರು ಇಂದು ಕೇಜ್ರಿವಾಲ್ ಅವರನ್ನು ತೀವ್ರವಾಗಿ ಕೆಣಕುವ ರೀತಿಯಲ್ಲಿ ಎಎಪಿ ತೊರೆದು ಬಿಜೆಪಿಗೆ ಸೇರಿದ್ದಾರೆ.

ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಘವ್ ಚಡ್ಡಾ, “ರಾಜ್ಯಸಭೆಯಲ್ಲಿ ಎಎಪಿಗೆ ಸೇರಿದ 2/3ನೇ ಸದಸ್ಯರಾದ ನಾವು ಭಾರತದ ಸಂವಿಧಾನದ ನಿಬಂಧನೆಗಳನ್ನು ಚಲಾಯಿಸಲು ಮತ್ತು ಬಿಜೆಪಿಯೊಂದಿಗೆ ನಮ್ಮನ್ನು ವಿಲೀನಗೊಳಿಸಲು ನಿರ್ಧರಿಸಿದ್ದೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾ ವಜಾ

ರಾಘವ್ ಚಡ್ಡಾ, ಅಶೋಕ್ ಕುಮಾರ್ ಮಿತ್ತಲ್ ಮತ್ತು ಸಂದೀಪ್ ಪಾಠಕ್ ಅವರು 2022ರಿಂದ ಆಮ್ ಆದ್ಮಿ ಪಕ್ಷದಿಂದ (AAP) ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ರಾಘವ್ ಚಡ್ಡಾ ಅವರು, “ನಾನು ನನ್ನ ರಕ್ತ ಮತ್ತು ಬೆವರಿನಿಂದ ಆಮ್ ಆದ್ಮಿ ಪಕ್ಷವನ್ನು ಪೋಷಿಸಿ ನನ್ನ ಯೌವನದ 15 ವರ್ಷಗಳನ್ನು ಆ ಪಕ್ಷಕ್ಕಾಗಿ ನೀಡಿದ್ದೆ. ಆದರೆ, ಆ ಆಮ್ ಆದ್ಮಿ ಪಕ್ಷವು ಈಗ ಅದರ ತತ್ವಗಳು, ಮೌಲ್ಯಗಳು ಮತ್ತು ಮೂಲ ನೈತಿಕತೆಗಳಿಂದ ಸಂಪೂರ್ಣವಾಗಿ ವಿಮುಖವಾಗಿದೆ. ಪಕ್ಷವು ಈಗ ದೇಶಕ್ಕಾಗಿ ಅಥವಾ ರಾಷ್ಟ್ರೀಯ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿಲ್ಲ. ಕೇವಲ ವೈಯಕ್ತಿಕ ಲಾಭಕ್ಕಾಗಿ ಕೆಲಸ ಮಾಡುತ್ತಿದೆ. ನಿಮ್ಮಲ್ಲಿ ಹಲವರು ಕಳೆದ ಕೆಲವು ವರ್ಷಗಳಿಂದ ಇದನ್ನು ನನಗೆ ಹೇಳುತ್ತಲೇ ಇದ್ದೀರಿ. ನಾನು ತಪ್ಪಾದ ಪಕ್ಷದಲ್ಲಿರುವ ಸರಿಯಾದ ವ್ಯಕ್ತಿ ಎಂದು ನಿಮ್ಮಂತೆ ನಾನು ಕೂಡ ಭಾವಿಸಿದ್ದೇನೆ. ಆದ್ದರಿಂದ, ಇಂದು ನಾನು ಆಮ್ ಆದ್ಮಿ ಪಕ್ಷದಿಂದ ದೂರವಿದ್ದು ಜನರ ಬಳಿಗೆ ಹೋಗುತ್ತಿದ್ದೇನೆ ಎಂದು ಘೋಷಿಸುತ್ತೇನೆ” ಎಂದಿದ್ದಾರೆ.

ಇದನ್ನೂ ಓದಿ: ರಾಜ್ಯಸಭೆಯಲ್ಲಿ ರಾಘವ್ ಚಡ್ಡಾರನ್ನು ಪಕ್ಷದ ಹಂಗಾಮಿ ನಾಯಕರನ್ನಾಗಿ ನೇಮಿಸುವಂತೆ ಎಎಪಿ ಮನವಿ ತಿರಸ್ಕೃತ

“ರಾಜ್ಯಸಭೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರಿದ ಸಂಸತ್ತಿನ ಮೂರನೇ ಎರಡರಷ್ಟು ಸದಸ್ಯರಾದ ನಾವು ಭಾರತೀಯ ಜನತಾ ಪಕ್ಷದೊಂದಿಗೆ (BJP) ವಿಲೀನಗೊಳ್ಳುತ್ತೇವೆ.” ಎಂದು ರಾಘವ್ ಚಡ್ಡಾ ಹೇಳಿದ್ದಾರೆ. ಸ್ವಾತಿ ಮಲಿವಾಲ್, ಹರ್ಭಜನ್ ಸಿಂಗ್, ರಾಜಿಂದರ್ ಗುಪ್ತಾ ಮತ್ತು ವಿಕ್ರಮ್‌ಜಿತ್ ಸಿಂಗ್ ಸಾಹ್ನಿ ಕೂಡ ಎಎಪಿ ತೊರೆದು ಬಿಜೆಪಿ ಸೇರಿದ್ದಾರೆ ಎಂದು ರಾಘವ್ ಚಡ್ಡಾ ಹೇಳಿದ್ದಾರೆ.

“ರಾಜ್ಯಸಭೆಯಲ್ಲಿ 10 ಎಎಪಿ ಸಂಸದರಿದ್ದಾರೆ, ಅವರಲ್ಲಿ 2/3ಕ್ಕಿಂತ ಹೆಚ್ಚು ಜನರು ನಮ್ಮೊಂದಿಗಿದ್ದಾರೆ. ಅವರು ಸಹಿ ಮಾಡಿದ್ದಾರೆ. ಇಂದು ಬೆಳಿಗ್ಗೆ ನಾವು ಸಹಿ ಮಾಡಿದ ಪತ್ರ ಮತ್ತು ದಾಖಲೆಗಳನ್ನು ರಾಜ್ಯಸಭಾ ಅಧ್ಯಕ್ಷರಿಗೆ ಸಲ್ಲಿಸಿದ್ದೇವೆ. ಅವರಲ್ಲಿ ಮೂವರು ನಿಮ್ಮ ಮುಂದೆ ಇದ್ದಾರೆ. ನಮ್ಮ ಜೊತೆಗೆ, ಹರ್ಭಜನ್ ಸಿಂಗ್, ರಾಜಿಂದರ್ ಗುಪ್ತಾ, ವಿಕ್ರಮ್ ಸಾಹ್ನಿ ಮತ್ತು ಸ್ವಾತಿ ಮಲಿವಾಲ್ ಇದ್ದಾರೆ.” ಎಂದು ರಾಘವ್ ಚಡ್ಡಾ ಘೋಷಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Anant Ambani’s Shiva watch: ಅನಂತ್ ಅಂಬಾನಿ ಕೈಯಲ್ಲಿದೆ 12 ಕೋಟಿಯ ‘ಶಿವ’ ವಾಚ್; ಈ ವಜ್ರಖಚಿತ ಗಡಿಯಾರದ ವಿಶೇಷತೆ ತಿಳಿದರೆ ಅಚ್ಚರಿ ಪಡುತ್ತೀರಿ! – Kannada News | Anant Ambani’s Rs 12 Cr ‘Shiva’ Watch: Jacob and Co Luxury and Tech Marvel

ಭಾರತದ ಪ್ರಭಾವಿ ಉದ್ಯಮಿ ಮುಖೇಶ್ ಅಂಬಾನಿ ಅವರ ಕುಟುಂಬವು ತನ್ನ ಐಷಾರಾಮಿ ಜೀವನಶೈಲಿಯಿಂದಲೇ ಸದಾ ಸುದ್ದಿಯಲ್ಲಿರುತ್ತದೆ. ಇತ್ತೀಚೆಗೆ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಧರಿಸಿದ್ದ ‘ಒಪೇರಾ ಗಾಡ್‌ಫಾದರ್ ಬ್ಯಾಗೆಟ್ ಶಿವ’ (Opera Godfather Baguette Shiva) ಎಂಬ ವಾಚ್​ ಜಾಗತಿಕ ಮಟ್ಟದಲ್ಲಿ ಎಲ್ಲರ ಗಮನ ಸೆಳೆದಿದೆ. ವಿಶ್ವಪ್ರಸಿದ್ಧ ಜಾಕೋಬ್ ಆ್ಯಂಡ್ ಕಂಪನಿ (Jacob & Co) ತಯಾರಿಸಿದ ಈ ಕಸ್ಟಮ್ ವಾಚ್, ಅತ್ಯಾಧುನಿಕ ತಂತ್ರಜ್ಞಾನದ ಜೊತೆಗೆ ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾಕೃತಿಯಂತೆ ವಿನ್ಯಾಸಗೊಳಿಸಲಾಗಿದೆ.

ವಿನ್ಯಾಸ ಮತ್ತು ಬೆಲೆಯ ಬೆರಗು:

ವರದಿಗಳ ಪ್ರಕಾರ, ಈ ಒಂದು ವಾಚ್​ ಅಂದಾಜು ಮೌಲ್ಯ ಸರಿಸುಮಾರು 12 ಕೋಟಿ ರೂಪಾಯಿಗಳು ಎಂದು ಹೇಳಲಾಗುತ್ತಿದೆ. ಇದರ ವಿನ್ಯಾಸವು ಅತ್ಯಂತ ಶ್ರೀಮಂತವಾಗಿದ್ದು, ವಾಚ್‌ನ ಹೊರಕವಚವನ್ನು 18 ಕ್ಯಾರೆಟ್ ರೋಸ್ ಗೋಲ್ಡ್‌ನಿಂದ ತಯಾರಿಸಲಾಗಿದೆ. ಗಡಿಯಾರದ ಅಂದವನ್ನು ಹೆಚ್ಚಿಸಲು ಇದರ ಮೇಲೆ 300ಕ್ಕೂ ಹೆಚ್ಚು ಬ್ಯಾಗೆಟ್ ಕಟ್ ವಜ್ರಗಳನ್ನು ಅಳವಡಿಸಲಾಗಿದ್ದು, ಒಟ್ಟಾರೆಯಾಗಿ ಸಾವಿರಕ್ಕೂ ಅಧಿಕ ವಜ್ರಗಳನ್ನು ಈ ಒಂದು ವಾಚ್ ಒಳಗೊಂಡಿದೆ. ಇದು ಕೇವಲ ಒಂದು ವಸ್ತು ಮಾತ್ರವಲ್ಲದೆ, ಕೌಶಲಭರಿತ ಕುಸುರಿ ಕೆಲಸದ ಪ್ರತಿರೂಪವಾಗಿದೆ.

ಶಿವನ ವಿಗ್ರಹ ಮತ್ತು ತಾಂತ್ರಿಕ ವಿಶೇಷತೆ:

ಈ ವಾಚ್‌ನ ಪ್ರಮುಖ ಆಕರ್ಷಣೆಯೆಂದರೆ ಅದರ ಮಧ್ಯಭಾಗದಲ್ಲಿ ಕೆತ್ತಲಾದ ಧ್ಯಾನಸ್ಥ ಸ್ಥಿತಿಯಲ್ಲಿರುವ ಶಿವನ ಪುಟ್ಟ ವಿಗ್ರಹ. ಈ ವಿಗ್ರಹದ ಪಕ್ಕದಲ್ಲಿ ಪವಿತ್ರ ‘ಓಂ’ ಚಿಹ್ನೆಯನ್ನೂ ಕೆತ್ತಲಾಗಿದ್ದು, ಇದು ಧಾರ್ಮಿಕ ನಂಬಿಕೆಯನ್ನು ಐಷಾರಾಮಿ ಜೀವನಕ್ಕೆ ಬೆಸೆದಿದೆ. ತಾಂತ್ರಿಕವಾಗಿ ಅತ್ಯಂತ ಸಂಕೀರ್ಣವಾಗಿರುವ ಈ ವಾಚ್ 658 ಸಣ್ಣ ಬಿಡಿಭಾಗಗಳನ್ನು ಹೊಂದಿದ್ದು, ‘ಟ್ರಿಪಲ್-ಆಕ್ಸಿಸ್ ಟೂರ್‌ಬಿಲ್ಲನ್’ ತಂತ್ರಜ್ಞಾನವನ್ನು ಒಳಗೊಂಡಿದೆ. ಇದು ಸಮಯದ ನಿಖರತೆಯನ್ನು ಕಾಪಾಡುವಲ್ಲಿ ಜಗತ್ತಿನಲ್ಲೇ ಶ್ರೇಷ್ಠ ಎನಿಸಿಕೊಂಡಿದೆ.

ಸಂಗೀತ ಮತ್ತು ಇತರ ಆಕರ್ಷಣೆಗಳು:

ಇದು ಮ್ಯೂಸಿಕಲ್ ವಾಚ್ ಆಗಿರುವುದು ಇದರ ಮತ್ತೊಂದು ವಿಶೇಷ. ಇದರಲ್ಲಿರುವ 120-ನೋಟ್ ಮ್ಯೂಸಿಕ್ ಬಾಕ್ಸ್ ಸಿಸ್ಟಮ್ ಮೂಲಕ ಒಂದು ಬಟನ್ ಒತ್ತಿದರೆ ‘ದಿ ಗಾಡ್‌ಫಾದರ್’ ಸಿನಿಮಾದ ಪ್ರಸಿದ್ಧ ಟ್ಯೂನ್ ಅನ್ನು ಪ್ಲೇ ಮಾಡಬಹುದು. ಸಂಗೀತ ನುಡಿಯುತ್ತಿರುವಾಗ ವಾಚ್‌ನ ಒಳಗಿನ ಭಾಗಗಳು ಚಲಿಸುವ ರೀತಿ ನೋಡುಗರಿಗೆ ಆಶ್ಚರ್ಯವನ್ನುಂಟು ಮಾಡುತ್ತದೆ.

ಅಪಾರ ಮೌಲ್ಯದ ವಾಚ್ ಸಂಗ್ರಹ:

ಅನಂತ್ ಅಂಬಾನಿ ಅವರ ಬಳಿ ಇಂತಹ ಹತ್ತಾರು ಅಪರೂಪದ ವಾಚ್‌ಗಳ ದೊಡ್ಡ ಸಂಗ್ರಹವೇ ಇದೆ. ವರದಿಗಳ ಪ್ರಕಾರ ಇವರ ವಾಚ್ ಸಂಗ್ರಹದ ಒಟ್ಟು ಮೌಲ್ಯ 200 ಕೋಟಿ ರೂಪಾಯಿಗಳಿಗೂ ಅಧಿಕವಾಗಿದೆ. ಇವರ ಸಂಗ್ರಹದಲ್ಲಿ ಪಟೆಕ್ ಫಿಲಿಪ್ ಮತ್ತು ರಿಚರ್ಡ್ ಮಿಲ್ಲೆಯಂತಹ ಜಗತ್ತಿನ ಅತಿ ದುಬಾರಿ ಬ್ರ್ಯಾಂಡ್‌ಗಳಿದ್ದು, ಅವುಗಳು ಕೇವಲ ವಿಶ್ವದ ಕೆಲವೇ ಜನ ಶ್ರೀಮಂತರಿಗೆ ಮಾತ್ರ ಲಭ್ಯವಿರುತ್ತವೆ. ಈ ಹಿಂದೆ ಮಾರ್ಕ್ ಜುಕರ್‌ಬರ್ಗ್ ಅವರು ಕೂಡ ಅನಂತ್ ಅವರ ವಾಚ್ ಸಂಗ್ರಹ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇನ್ಫೋಸಿಸ್ ಉದ್ಯೋಗಿಗಳ ಸ್ಯಾಲರಿ ಹೈಕ್​ಗೆ ತಡೆ; ಸಿಇಒಗೆ 52 ಕೋಟಿ ರೂ ಮೌಲ್ಯದ ಸ್ಟಾಕ್ ಭತ್ಯೆ – Kannada News | Infosys approves stock incentives of worth Rs 52 crore for CEO, even as salary hike for employees put on hold

ಬೆಂಗಳೂರು, ಏಪ್ರಿಲ್ 24: ಇನ್ಫೋಸಿಸ್ (Infosys) ಸಂಸ್ಥೆಯು ತನ್ನ ಸಿಇಒ ಸಲೀಲ್ ಪರೇಖ್ (Salil Parekh) ಅವರಿಗೆ ಭಾರಿ ಮೊತ್ತದ ಸ್ಟಾಕ್ ಆಪ್ಷನ್ಸ್ (ESOPs) ನೀಡಿದ್ದು, ಅದೇ ಸಮಯದಲ್ಲಿ ಉದ್ಯೋಗಿಗಳ ವೇತನ ಹೆಚ್ಚಳವನ್ನು ತಡೆಹಿಡಿದಿರುವ ಬಗ್ಗೆ ವರದಿಯಾಗಿದೆ. ಸಿಇಒ ಮತ್ತು ಎಂಡಿಯಾಗಿರುವ ಸಲೀಲ್ ಪರೇಖ್ ಅವರಿಗೆ ಸುಮಾರು 52 ಕೋಟಿ ರೂಪಾಯಿ (51.75 ಕೋಟಿ ರೂ) ಮೌಲ್ಯದ ಎಂಪ್ಲಾಯಿ ಸ್ಟಾಕ್ ಓನರ್‌ಶಿಪ್ ಪ್ಲಾನ್ (ESOPs) ಅಥವಾ ರೆಸ್ಟ್ರಿಕ್ಟೆಡ್ ಸ್ಟಾಕ್ ಯೂನಿಟ್‌ಗಳನ್ನು (RSUs) ಮಂಜೂರು ಮಾಡಿದೆ.

ಇದು ಕಂಪನಿಯ 2015 ರ ಸ್ಟಾಕ್ ಇನ್ಸೆಂಟಿವ್ ಯೋಜನೆ ಮತ್ತು ವಿಸ್ತರಿತ ಸ್ಟಾಕ್ ಮಾಲೀಕತ್ವದ ಕಾರ್ಯಕ್ರಮದ ಭಾಗವಾಗಿದೆ. ಅವರ ಉತ್ತಮ ಕಾರ್ಯಕ್ಷಮತೆ ಮತ್ತು ಕಂಪನಿಯ ಬೆಳವಣಿಗೆಯ ಆಧಾರದ ಮೇಲೆ ಈ ಷೇರುಗಳನ್ನು ನೀಡಲಾಗಿದೆ. ಇನ್ಫೋಸಿಸ್ ಅನ್ನು ಲಾಭದಾಯಕ ಸ್ಥಿತಿಯಲ್ಲಿ ಸ್ಥಿರವಾಗಿ ಮುನ್ನಡೆಸಿದ್ದಕ್ಕೆ ಸಿಇಒಗೆ ಸಿಕ್ಕಿರುವ ಗಿಫ್ಟ್ ಇದು. ಮಾರ್ಚ್ ಕ್ವಾರ್ಟರ್​ನಲ್ಲಿ ಇನ್ಫೋಸಿಸ್​ನ ನಿವ್ವಳ ಲಾಭ 8,501 ಕೋಟಿ ರೂ ದಾಖಲಾಗಿದೆ. ಹಿಂದಿನ ಕ್ವಾರ್ಟರ್​ಗಿಂತ ಶೇ. 27.8ರಷ್ಟು ಲಾಭದಲ್ಲಿ ಏರಿಕೆ ಆಗಿದೆ. ಅದರ ಆದಾಯ 46,402 ಕೋಟಿ ರೂ ಇದೆ.

ಇದನ್ನೂ ಓದಿ: ಭಾರತದ ಆರ್ಥಿಕ ಪ್ರಗತಿಗೆ ತೊಡಕಾಗಿರುವ ಅಂಶಗಳೇನು? ಬರ್ನ್​ಸ್ಟೈನ್ ಸಲಹೆ ನೀಡಿರುವ ಪರಿಹಾರಗಳೇನು?

ಉದ್ಯೋಗಿಗಳ ವೇತನ ಹೆಚ್ಚಳ ವಿಳಂಬ

ಒಂದು ಕಡೆ ಸಿಇಒಗೆ ಭಾರಿ ಮೊತ್ತದ ಷೇರುಗಳನ್ನು ನೀಡಲಾಗಿದ್ದರೆ, ಮತ್ತೊಂದು ಕಡೆ ಕಂಪನಿಯು ತನ್ನ ಸಾಮಾನ್ಯ ಉದ್ಯೋಗಿಗಳ ವೇತನ ಹೆಚ್ಚಳವನ್ನು (Salary Hike) ಸದ್ಯಕ್ಕೆ ತಡೆಹಿಡಿದಿದೆ ಅಥವಾ ವಿಳಂಬಗೊಳಿಸಿದೆ.

ಐಟಿ ಕ್ಷೇತ್ರದಲ್ಲಿನ ಪ್ರಸ್ತುತ ಆರ್ಥಿಕ ಅನಿಶ್ಚಿತತೆ ಮತ್ತು ಬೇಡಿಕೆಯಲ್ಲಿನ ಕುಸಿತದಿಂದಾಗಿ ವೆಚ್ಚ ಕಡಿತದ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಪ್ರತೀ ಷೇರಿಗೆ 22 ರೂ ಡಿವಿಡೆಂಡ್

ಇನ್ಫೋಸಿಸ್ ತನ್ನ ನಾಲ್ಕನೇ ತ್ರೈಮಾಸಿಕದ ಫಲಿತಾಂಶದ ವೇಳೆ ಪ್ರತಿ ಷೇರಿಗೆ ₹22 ಅಂತಿಮ ಲಾಭಾಂಶವನ್ನು (Dividend) ಘೋಷಿಸಿದೆ. ಆದರೂ, ಕಂಪನಿಯ ಆದಾಯದ ಬೆಳವಣಿಗೆಯ ಮುನ್ಸೂಚನೆಯು ನಿರೀಕ್ಷೆಗಿಂತ ಕಡಿಮೆಯಿರುವುದು ಹೂಡಿಕೆದಾರರಲ್ಲಿ ಮತ್ತು ಉದ್ಯೋಗಿಗಳಲ್ಲಿ ಆತಂಕ ಮೂಡಿಸಿದೆ.

ಇದನ್ನೂ ಓದಿ: ಏಪ್ರಿಲ್‌ನಲ್ಲಿ ಭಾರತದ ಖಾಸಗಿ ವಲಯ ಭರ್ಜರಿ ಏರಿಕೆ: ಉತ್ಪಾದನಾ, ಸೇವಾ ವಲಯಗಳ PMI ವರದಿಯಲ್ಲಿ ಗಮನಾರ್ಹ ಸಂಗತಿಗಳು

ಸಿಇಒಗೆ ಮಾತ್ರವೇ ಕೊಡುಗೆ: ಉದ್ಯೋಗಿಗಳ ಅಸಮಾಧಾನ

ಸಿಇಒ ಅವರ ಸಂಭಾವನೆ ಮತ್ತು ಸಾಮಾನ್ಯ ಉದ್ಯೋಗಿಗಳ ವೇತನದ ನಡುವಿನ ಈ ಭಾರಿ ವ್ಯತ್ಯಾಸವು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಐಟಿ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಕಂಪನಿಯ ಲಾಭದಲ್ಲಿ ಉದ್ಯೋಗಿಗಳ ಪಾತ್ರವೂ ದೊಡ್ಡದಿದೆ, ಆದರೆ ಅವರಿಗೆ ಸಿಗಬೇಕಾದ ವೇತನ ಹೆಚ್ಚಳ ವಿಳಂಬವಾಗುತ್ತಿರುವುದು ಟೀಕೆಗೆ ಗುರಿಯಾಗಿದೆ.

ಒಟ್ಟಾರೆಯಾಗಿ, ಇನ್ಫೋಸಿಸ್ ತನ್ನ ಉನ್ನತ ಮಟ್ಟದ ನಾಯಕತ್ವವನ್ನು ಉಳಿಸಿಕೊಳ್ಳಲು ದೊಡ್ಡ ಮೊತ್ತದ ಹೂಡಿಕೆ ಮಾಡುತ್ತಿದ್ದರೂ, ಕೆಳಹಂತದ ಉದ್ಯೋಗಿಗಳ ಆರ್ಥಿಕ ಹಿತಾಸಕ್ತಿಯನ್ನು ಸದ್ಯಕ್ಕೆ ಕಡೆಗಣಿಸಿದೆ ಎಂಬುದು ಚರ್ಚೆಯ ವಿಚಾರ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಿನ್ನೆ ಫೇಲ್​​, ಇಂದು ಶಾಲೆಗೆ ಟಾಪರ್​​? ಅಂಧ ವಿದ್ಯಾರ್ಥಿನಿಯ SSLC ರಿಸಲ್ಟ್ ಗೊಂದಲ – Kannada News | Karwar: Failed yesterday, topper for school today? Blind student’s SSLC result confused

ವಿದ್ಯಾರ್ಥಿನಿ ಲೀಸಾ ಖಾನಮ್Image Credit source: tv9 kannada

ಕಾರವಾರ, ಏಪ್ರಿಲ್​ 24: ಪರೀಕ್ಷಾ ಪ್ರಾಧಿಕಾರದ ಎಡವಟ್ಟಿನಿಂದ ಎಸ್​​ಎಸ್​ಎಲ್​ಸಿಯಲ್ಲಿ (SSLC Result) ಫೇಲ್​​ ಆಗಿದ್ದ ಅಂಧ ವಿದ್ಯಾರ್ಥಿನಿ ಲೀಸಾ ಖಾನಮ್​​ ಇದೀಗ ಶಾಲೆಗೆ ಟಾಪರ್​ ಆಗಿದ್ದಾರೆ. ಗುರುವಾರ ಬಂದಿದ್ದ ಅಧಿಕೃತ ರಿಸಲ್ಟ್​ನಲ್ಲಿ ಸಮಾಜ-ವಿಜ್ಞಾನ ವಿಷಯದಲ್ಲಿ ಗೈರು ಅಂತ ಬಂದಿತ್ತು. ಇಂದು ಪರೀಕ್ಷಾ ಪ್ರಾಧಿಕಾರದಿಂದ ಬಂದ ರಿಸಲ್ಟ್​​ನಲ್ಲಿ ವಿದ್ಯಾರ್ಥಿನಿ ಲೀಸಾ ಖಾನಮ್​​ ಶಾಲೆಗೆ ಟಾಪರ್​ ಆಗಿದ್ದಾರೆ. ಆದರೆ ಶಿರಸಿ ಡಿಡಿಪಿಐ ಇದು ಅಧಿಕೃತ ಪ್ರತಿ ಅಲ್ಲ ಎನ್ನುತ್ತಿದ್ದು, ವಿದ್ಯಾರ್ಥಿನಿಯ ಫಲಿತಾಂಶದ ಬಗ್ಗೆ ಸ್ಪಷ್ಟತೆ ಸಿಗುತ್ತಿಲ್ಲ. ಹೀಗಾಗಿ ಇದು ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಶಿರಸಿಯ ಇಂದಿರಾ ನಗರದಲ್ಲಿರುವ ಯೂನಿಯನ್ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿ ಲೀಸಾ ಖಾನಮ್,​ ಎಸ್​​ಎಸ್​ಎಲ್​ಸಿಯಲ್ಲಿ ಎಲ್ಲಾ ಪರೀಕ್ಷೆ ಬರೆದಿದ್ದರು. ಆದರೆ ಎಸ್​​ಎಸ್​ಎಲ್​ಸಿ ಪರೀಕ್ಷಾ ಪ್ರಾಧಿಕಾರ ಅದೊಂದು ಎಡವಟ್ಟಿನಿಂದ ಸಮಾಜ-ವಿಜ್ಞಾನ ಪರೀಕ್ಷೆಗೆ ಗೈರು ಅಂತ ನಮೂದು ಮಾಡಲಾಗಿತ್ತು. ಹೀಗಾಗಿ 84.16 % ಫಲಿತಾಂಶ ಬಂದಿದ್ದರು ಕೂಡ ರಿಸಲ್ಟ್‌ ಮಾತ್ರ ಫೇಲ್ ಅಂತ ಬಂದಿತ್ತು.

ಇದನ್ನೂ ಓದಿ: SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್

ಈ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮರುಪರಿಶೀಲನೆ ನಡೆಸಿದಾಗ, ಇಂದು ಬಂದಿರುವ ಪ್ರಾಧಿಕಾರದ ಮಾಹಿತಿಯ ಪ್ರಕಾರ ಅದೇ ವಿಷಯದಲ್ಲಿ ಆಕೆಗೆ 97 ಅಂಕಗಳು ಲಭಿಸಿದ್ದು, ಆಕೆ ಶಾಲೆಯ ಟಾಪರ್ ಆಗಿ ಹೊರಹೊಮ್ಮಿದ್ದಾಳೆ ಎನ್ನಲಾಗುತ್ತಿದೆ.

ಇದು ಅಧಿಕೃತ ಪ್ರತಿ ಅಲ್ಲ ಎಂದ ಶಿರಸಿ ಡಿಡಿಪಿಐ

ಇನ್ನು ಈ ಬಗ್ಗೆ ಶಿರಸಿ ಡಿಡಿಪಿಐ ಮಾತನಾಡಿದ್ದು, ಈವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಈಗ ಹರಿದಾಡುತ್ತಿರುವ ರಿಸಲ್ಟ್ ಅಧಿಕೃತ ಪ್ರತಿಯಲ್ಲ. ವಿದ್ಯಾರ್ಥಿನಿಯ ಪೇಪರ್ ಮಿಸ್ ಆಗಿದ್ದು ನಿಜ, ಅದರ ಪರಿಶೀಲನೆ ನಡೆಯುತ್ತಿದೆ. ಅಧಿಕೃತ ರಿಸಲ್ಟ್ ಬರಲು ಇನ್ನೂ ಎರಡು ದಿನಗಳ ಕಾಲಾವಕಾಶ ಬೇಕು. ಅಷ್ಟು ಬೇಗ ಫಲಿತಾಂಶ ಹೊರಬರಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ತಂದೆ ಸಾವಿನ ನಡುವೆಯೂ SSLC ಪರೀಕ್ಷೆ ಬರೆದು ಉತ್ತೀರ್ಣನಾದ ಶಿವಮೊಗ್ಗದ ವಿದ್ಯಾರ್ಥಿ

ಸದ್ಯ ಪರೀಕ್ಷಾ ಪ್ರಾಧಿಕಾರದ ಎಡವಟ್ಟಿನಿಂದಾಗಿ ಪ್ರತಿಭಾವಂತ ಅಂಧ ವಿದ್ಯಾರ್ಥಿನಿಯ ಎಸ್​​ಎಸ್​ಎಲ್​ಸಿ ಫಲಿತಾಂಶ ಸದ್ಯ ಅತಂತ್ರ ಸ್ಥಿತಿಗೆ ತಲುಪಿದೆ. ಭಾರಿ ಚರ್ಚೆಗೂ ಗ್ರಾಸವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಿಇಟಿ ಕೇಂದ್ರದಲ್ಲಿ ವಿದ್ಯಾರ್ಥಿ ಜನಿವಾರ ತೆಗೆಸಿದ ಆರೋಪ: ಕೃಪಾನಿಧಿ ಕಾಲೇಜಿನ ಮೂವರು ಸಿಬ್ಬಂದಿ ಅಮಾನತು – Kannada News | CET Janivara Row: 3 Krupanidhi College Staff Suspended

ಬೆಂಗಳೂರು, ಏಪ್ರಿಲ್​​ 24: ಸಿಇಟಿ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ವಿಚಾರ ಭಾರಿ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಬೆಂಗಳೂರಿನ ಮಡಿವಾಳದಲ್ಲಿರುವ ಕೃಪಾನಿಧಿ ಕಾಲೇಜಿನ ಮೂವರು ಸಿಬ್ಬಂದಿ ಅಮಾನತು ಮಾಡಲಾಗಿದೆ. ಸಿಬ್ಬಂದಿಯಾದ ಸುಧಾಕರ್, ಗಿರಿಜಮ್ಮ, ಆರ್​.ಸರಿತಾ ಸಸ್ಪೆಂಡ್​ ಆಗಿದ್ದಾರೆ. ಜನಿವಾರ ತೆಗೆಸಿದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಡಿಸಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (KEA) ಪತ್ರ ಬರೆಯಲಾಗಿತ್ತು. ವಸ್ತ್ರಸಂಹಿತೆ ಅಧಿಕಾರಿಗಳ ನೇಮಕ ಮಾಡಿದ್ರೂ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳ ಜನಿವಾರ ತೆಗೆಸದಂತೆ ಸೂಚನೆ ನೀಡಲಾಗಿತ್ತು. ಆದ್ರೂ ಜನಿವಾರ ತೆಗೆಸಿದ್ದು ಉದ್ದೇಶಪೂರ್ವಕ ಘಟನೆಯಂತೆ ಕಂಡಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಿ ಕ್ರಮವಹಿಸಿದ ವಿವರ ನೀಡುವಂತೆ ಪತ್ರ ಮುಖೇನೆ KEA ಆಗ್ರಹಿಸಿತ್ತು.

2026ನೇ ಸಾಲಿನ ಸಿಇಟಿ ಪರೀಕ್ಷೆ ವೇಳೆ ಬೆಂಗಳೂರು ಕೇಂದ್ರದಲ್ಲಿ ಏಪ್ರಿಲ್​​ 23ರ ಭೌತಶಾಸ್ತ್ರ ವಿಷಯದ ಪರೀಕ್ಷೆಗೆ ಹಾಜರಾಗಲು ಬಂದಿದ್ದ ಕೆಲವು ಅಭ್ಯರ್ಥಿಗಳ ಜನಿವಾರವನ್ನು ತೆಗೆಸಲು ಅಲ್ಲಿಯ ಸಿಬ್ಬಂದಿಗಳು ಸೂಚಿಸಿರುತ್ತಾರೆಂದು, ನಂತರ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಿರುತ್ತಾರೆ ಎಂದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಹಳ ಸ್ಪಷ್ಟವಾಗಿ ವಸ್ತ್ರ ಸಂಹಿತೆಯ ಬಗ್ಗೆ ವಿವರಿಸಿದೆ. ಕಳೆದ ವರ್ಷದಲ್ಲಿ ನಡೆದ ಇದೇ ತರಹದ ಘಟನೆ ಉಲ್ಲೇಖಿಸಿ ಜನಿವಾರ, ಲಿಂಗ ಇತ್ಯಾದಿ ಧಾರ್ಮಿಕ ದಿರಿಸುಗಳನ್ನು ತೆಗೆಯಬಾರದೆಂದು ಸ್ಪಷ್ಟವಾಗಿ ತರಬೇತಿಯಲ್ಲಿ ತಿಳಿಸಲಾಗಿದೆ. ಆದರೂ ಇಂತಹ ಘಟನೆ ನಡೆದಿದ್ದರೆ ಯಾರೋ ಉದ್ದೇಶ ಪೂರ್ವಕವಾಗಿ ಮಾಡಿದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹೀಗಾಗಿ ಈ ಬಗ್ಗೆ ಹಿರಿಯ ಅಧಿಕಾರಿಗಳಿಂದ ವಿಚಾರಣೆ ನಡೆಸಿ ನಿಯಮಾನುಸಾರ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಪೂರ್ಣ ವರದಿ ಸಲ್ಲಿಸುವಂತೆ ಬೆಂಗಳೂರು ನಗರ ಡಿಸಿಗೆ ಬರೆದ ಪತ್ರದಲ್ಲಿ KEA ಆಗ್ರಹಿಸಿತ್ತು.

ಇದನ್ನೂ ಓದಿ: ಬೆಂಗಳೂರಿನ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಸಿಬ್ಬಂದಿ; ಸಿಇಟಿ ಪರೀಕ್ಷೆಯೊಂದಿಗೇ ಮತ್ತೆ ಶುರುವಾಯ್ತು ವಿವಾದ

ಜನಿವಾರ ತೆಗೆಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಅಶೋಕ್​​

ಸಿಇಟಿ ಬರೆಯಲು ಬಂದಿದ್ದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಆರೋಪ ಸಂಬಂಧ ಎಕ್ಸ್ ಮೂಲಕ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಸರ್ಕಾರದಿಂದ ಮಾಂಗಲ್ಯ, ಜನಿವಾರ ತೆಗೆಸುವ ಹಿಂದೂ ವಿರೋಧಿ ಕೃತ್ಯಗಳು ನಡೆಯುತ್ತಿವೆ. ಕಾಂಗ್ರೆಸ್‌ ಸರ್ಕಾರ ಈ ವರ್ಷವೂ ತನ್ನ ಹಳೆಯ ಚಾಳಿ ಮುಂದುವರಿಸಿದೆ. ಬೆಂಗಳೂರಿನ ಕೋರಮಂಗಲದ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬನ ಜನಿವಾರ ತೆಗೆಸಿ ಪರೀಕ್ಷೆ ಬರೆಯುವಂತೆ ಒತ್ತಾಯಿಸುವ ಮೂಲಕ ಮತ್ತೊಮ್ಮೆ ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದಿದೆ. ಹಿಂದೆ KPSC ಪರೀಕ್ಷೆ ವೇಳೆ ಮಹಿಳೆಯೊಬ್ಬರ ಮಾಂಗಲ್ಯ ಸರ ತೆಗೆಸಿದ್ದರು ಎಂದು ಕಿಡಿ ಕಾರಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:48 pm, Fri, 24 April 26

Source link

ಡಿಕೆ ಹೇಳಿಕೆ, ಸಿಎಂ ನಡೆ ನೋಡಿದ್ರೆ ಕಾಂತ್ರಿ ಆಗುತ್ತೆ, ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ – Kannada News | Political Kranti after May 5th And President rule will be coming In Karnataka Says BJP MLA B Suresh Gowda

ತುಮಕೂರು, (ಏಪ್ರಿಲ್ 24): ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಸಂಬಂಧ ಕರ್ನಾಟಕ ಕಾಂಗ್ರೆಸ್​​ನಲ್ಲಿ ರಾಜಕೀಯ ಪ್ರಹಸನಗಳು ನಡೆಯುತ್ತಿವೆ. ಇದರ ಮಧ್ಯೆ ಬಿಜೆಪಿ ಶಾಸಕ ಬಿ.ಸುರೇಶ್​​ ಗೌಡ ಮಾತನಾಡಿ, ಡಿಕೆ ಹೇಳಿಕೆ, ಸಿಎಂ ನಡೆ ನೋಡಿದರೆ ಮೇ 5ರ ನಂತರ ರಾಜ್ಯ ರಾಜಕಾರಣದಲ್ಲಿ ಕ್ರಾಂತಿ ಆಗುತ್ತದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ. ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಚ್ಚಾಟ ಹೆಚ್ಚಾಗಿದ್ದು, ಡಿಕೆ ಹೇಳಿಕೆ, ಸಿಎಂ ನಡೆ ನೋಡಿದರೆ ಪಂಚರಾಜ್ಯ ಚುನಾವಣೆ ನಂತರ ರಾಜಕೀಯ ಬದಲಾವಣೆ ಆಗುತ್ತೆ. ಮುಖ್ಯಮಂತ್ರಿ ಆಗಬೇಕು ಅಂತ ಜಿ.ಪರಮೇಶ್ವರ್ ರೇಸ್​ನಲ್ಲಿದ್ದಾರೆ. ಸತೀಶ್ ಜಾರಕಿಹೊಳಿ ಕೂಡ ಮುಖ್ಯಮಂತ್ರಿ ರೇಸ್​ನಲ್ಲಿ ಇದ್ದಾರೆ. ಅತ್ತ ಎಂ.ಬಿ.ಪಾಟೀಲ್ ಸಹ ಮುಖ್ಯಮಂತ್ರಿ ಆಗಬೇಕು ಅಂತಿದ್ದಾರೆ. ಡಿ.ಕೆ.ಶಿವಕುಮಾರ್​ ಈಗಾಗಲೇ ಮುಖ್ಯಮಂತ್ರಿ ಆಗೋಗಿದ್ದಾರೆ. ಮೇ 10ಕ್ಕೆ ಡೇಟ್ ಕೂಡ ಫಿಕ್ಸ್ ಆಗಿದೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

30 ವರ್ಷಗಳ ಬಳಿಕ ಕಿಸ್ ಮಾಡಲು ಕಾಜೋಲ್ ಒಪ್ಪಿಕೊಂಡಿದ್ದೇಕೆ? ಸಿಕ್ತು ಉತ್ತರ – Kannada News | Kajol breaks silence on kissing scene in The Trial web series reason revealed

ಬಾಲಿವುಡ್‌ ನಟಿ ಕಾಜೋಲ್ (Kajol) ಅವರು ಚಿತ್ರರಂಗಕ್ಕೆ ಕಾಲಿಟ್ಟು ಮೂರು ದಶಕಗಳೇ ಕಳೆದಿವೆ. ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’, ‘ಕುಚ್ ಕುಚ್ ಹೋತಾ ಹೈ’ ರೀತಿಯ ಐಕಾನಿಕ್ ಸಿನಿಮಾಗಳ ಮೂಲಕ ಮನೆಮಾತಾಗಿರುವ ಈ ನಟಿ 30 ವರ್ಷಗಳ ಕಾಲ ಒಂದು ಕಟ್ಟುನಿಟ್ಟಿನ ನಿಯಮ ಪಾಲಿಸಿದ್ದರು. ಸಿನಿಮಾದಲ್ಲಿ ಅವರು ಸಹ-ನಟರ ಜೊತೆ ಕಿಸ್ (Kiss) ಮಾಡಿರಲಿಲ್ಲ. ಆದರೆ ‘ದಿ ಟ್ರಯಲ್’ (The Trial) ವೆಬ್ ಸರಣಿಯ ಮೂಲಕ ಒಟಿಟಿ ಲೋಕಕ್ಕೆ ಕಾಲಿಟ್ಟ ಕಾಜೋಲ್ ಅವರು ಮೊದಲ ಬಾರಿಗೆ ಕಿಸ್ ಮಾಡಿದರು. ಆ ಬಗ್ಗೆ ಅವರೀಗ ಪ್ರತಿಕ್ರಿಯೆ ನೀಡಿದ್ದಾರೆ.

‘ದಿ ಟ್ರಯಲ್’ ಸರಣಿಯು ಬಿಡುಗಡೆಯಾದಾಗ ಕಾಜೋಲ್ ಅವರ ಕಿಸ್ಸಿಂಗ್ ಸೀನ್ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಸಿನಿಮಾರಂಗದಲ್ಲಿ ಸುಮಾರು 30 ವರ್ಷಗಳಿಂದ ತಾವು ಪಾಲಿಸಿಕೊಂಡು ಬಂದಿದ್ದ ನಿಯಮವನ್ನು ಕಾಜೋಲ್ ಅದೇ ಮೊದಲ ಬಾರಿಗೆ ಮುರಿದಿದ್ದರು. ಸಹ-ನಟ ಜಿಶು ಸೇನ್‌ಗುಪ್ತಾ ಅವರೊಂದಿಗೆ ಅವರು ಕಿಸ್ಸಿಂಗ್ ದೃಶ್ಯದಲ್ಲಿ ನಟಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ತಾವು ಅಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬುದನ್ನು ಅವರು ಈಗ ಬಹಿರಂಗಪಡಿಸಿದ್ದಾರೆ.

ಖ್ಯಾತ ಯೂಟ್ಯೂಬರ್ ಲಿಲ್ಲಿ ಸಿಂಗ್ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಕಾಜೋಲ್, ಈ ನಿರ್ಧಾರದ ಬಗ್ಗೆ ಕೇಳಿದಾಗ ಕೆಲ ಕ್ಷಣ ಮೌನಕ್ಕೆ ಶರಣಾದರು. ನಂತರ ಉತ್ತರಿಸುತ್ತಾ, ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅದು ನಾನು ನಿರ್ವಹಿಸುತ್ತಿದ್ದ ಪಾತ್ರದ ಬೇಡಿಕೆಯಾಗಿತ್ತು. ಅದು ಕೇವಲ ಒಂದು ಮುತ್ತಿನ ದೃಶ್ಯವಾಗಿರಲಿಲ್ಲ. ಆಕೆಯ (ಪಾತ್ರ) ಆಲೋಚನೆಗಳು, ಆಕೆಯ ನಂಬಿಕೆಗಳು ಮತ್ತು ಆಕೆ ಏನನ್ನು ಬಯಸುತ್ತಿದ್ದಳು ಎಂಬುದನ್ನು ತೋರಿಸಲು ಅದು ಅನಿವಾರ್ಯವಾಗಿತ್ತು’ ಎಂದಿದ್ದಾರೆ.

‘ಅದು ಚಿತ್ರಕಥೆಯ ಅವಿಭಾಜ್ಯ ಅಂಗವಾಗಿತ್ತು. ಆ ದೃಶ್ಯವನ್ನು ತೆಗೆದುಹಾಕಿದ್ದರೆ ಆ ಪಾತ್ರದ ಆಳವನ್ನೇ ಕಳೆದುಕೊಳ್ಳಬೇಕಾಗುತ್ತಿತ್ತು. ಹಾಗಾಗಿಯೇ ನಾನು ಆ ನಿರ್ಧಾರ ಮಾಡಿದೆ’ ಎಂದು ಕಾಜೋಲ್ ಸ್ಪಷ್ಟಪಡಿಸಿದ್ದಾರೆ. ‘ವೈಯಕ್ತಿಕವಾಗಿ ನೀವು ಬದಲಾಗಿದ್ದರಿಂದ ಈ ದೃಶ್ಯಕ್ಕೆ ಒಪ್ಪಿಕೊಂಡಿರಾ’ ಎಂದು ಕೇಳಿದಾಗ ಕಾಜೋಲ್ ಕುತೂಹಲಕಾರಿ ಉತ್ತರ ನೀಡಿದರು.

ಇದನ್ನೂ ಓದಿ: ರಾಮೋಜಿ ಫಿಲ್ಮ್​ ಸಿಟಿಯಲ್ಲಿ ದೆವ್ವ ಇದೆ ಎಂದು ಹೇಳಿ ಉಲ್ಟಾ ಹೊಡೆದ ಕಾಜೋಲ್

‘ನಾನು ಆ ದೃಶ್ಯದ ಬಗ್ಗೆ ಅತೀವ ಮುಜುಗರ ಅನುಭವಿಸುತ್ತಿದ್ದೆ. ಸೆಟ್‌ನಲ್ಲಿ ನಿಲ್ಲುವವರೆಗೂ ನನಗೆ ಆ ಕಲ್ಪನೆಯೇ ಸರಿ ಅನ್ನಿಸುತ್ತಿರಲಿಲ್ಲ. ಸ್ಕ್ರಿಪ್ಟ್ ಓದುವಾಗ ಚೆನ್ನಾಗಿದೆ ಅನ್ನಿಸಿತ್ತು, ಆದರೆ ಅದನ್ನು ಮಾಡುವಾಗ ಮಾತ್ರ – ಕಟ್! ಇದು ನನ್ನಿಂದ ಸಾಧ್ಯವಿಲ್ಲ- ಎಂದು ಹೇಳಿಬಿಡೋಣ ಅಂತ ಯೋಚಿಸುತ್ತಿದ್ದೆ. ಆದರೆ ಅಂತಿಮವಾಗಿ ಅದೊಂದು ವೃತ್ತಿಪರ ನಿರ್ಧಾರವಾಗಿತ್ತು’ ಎಂದು ಕಾಜೋಲ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೊದಲ ಹಂತದ ಚುನಾವಣೆ ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ – Kannada News | PM Narendra Modi called West Bengal phase 1 polling is beginning of end for TMCs jungle raj

ಕೊಲ್ಕತ್ತಾ, ಏಪ್ರಿಲ್ 24: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ (West Bengal Assembly Elections) ಮೊದಲ ಹಂತದ ದಾಖಲೆಯ ಮತದಾನವನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ)ನ ಜಂಗಲ್ ರಾಜ್​ನ ಅಂತ್ಯದ ಆರಂಭ ಎಂದು ಪ್ರಧಾನಿ ನರೇಂದ್ರ ಮೋದಿ ಕರೆದಿದ್ದಾರರೆ. ಮೇ 4ರಂದು ಚುನಾವಣಾ ಫಲಿತಾಂಶಗಳು ಪ್ರಕಟವಾದ ನಂತರ ಖಂಡಿತವಾಗಿಯೂ ಬಿಜೆಪಿ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಸರ್ಕಾರ ರಚಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಮಹಿಳಾ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಜೊತೆಗೆ ಟಿಎಂಸಿಯನ್ನು ಮಹಿಳಾ ವಿರೋಧಿ ಪಕ್ಷ ಎಂದು ಮೋದಿ ಟೀಕಿಸಿದ್ದಾರೆ. ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಟಿಎಂಸಿ ಮಹಿಳೆಯರು ಬೆಳೆಯುವುದನ್ನು ಬಯಸುವುದಿಲ್ಲ. ಆದರೆ, ಮಹಿಳೆಯರ ಸುರಕ್ಷತೆಯೇ ಬಿಜೆಪಿಯ ಆದ್ಯತೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಮೊದಲ ಸಂಪುಟ ಸಭೆಯ ನಂತರ ಪಶ್ಚಿಮ ಬಂಗಾಳದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತರಲಾಗುವುದು. ಈ ಯೋಜನೆಯಡಿ ಫಲಾನುಭವಿಗಳಿಗೆ 5 ಲಕ್ಷ ರೂ.ಗಳವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗುವುದು. ಬಿಜೆಪಿ ಕೊನೆಯ ಹಂತದ ವಿತರಣೆಯ ಮೇಲೆ ಕೇಂದ್ರೀಕರಿಸಿದೆ. ಅದಕ್ಕಾಗಿಯೇ ಅದು ನಿರಂತರವಾಗಿ ಜನರ ಬೆಂಬಲವನ್ನು ಪಡೆಯುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CBSE 10 Second Board Exam: CBSE 10ನೇ ತರಗತಿ ಎರಡನೇ ಬಾರಿಯ ಬೋರ್ಡ್ ಪರೀಕ್ಷಾ ವೇಳಾಪಟ್ಟಿ ಪ್ರಕಟ; ಮೇ 15ರಿಂದ ಪರೀಕ್ಷೆ ಆರಂಭ – Kannada News | CBSE Class 10th 2026 Second Board Exam Date Sheet Released: May 15 21 Schedule

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (CBSE) 2026ರ ಸಾಲಿನ 10ನೇ ತರಗತಿಯ ಎರಡನೇ ಬಾರಿಯ ಬೋರ್ಡ್ ಪರೀಕ್ಷೆಯ ದಿನಾಂಕ ಪಟ್ಟಿಯನ್ನು (Date Sheet) ಅಧಿಕೃತವಾಗಿ ಬಿಡುಗಡೆ ಮಾಡಿದೆ. ಮೊದಲ ಪ್ರಯತ್ನದಲ್ಲಿ ಅಂಕಗಳನ್ನು ಸುಧಾರಿಸಿಕೊಳ್ಳಲು ಬಯಸುವ ಅಥವಾ ಪರೀಕ್ಷೆಯಲ್ಲಿ ಹಿನ್ನಡೆ ಅನುಭವಿಸಿದ ವಿದ್ಯಾರ್ಥಿಗಳಿಗೆ ಇದು ಸುವರ್ಣವಕಾಶವಾಗಲಿದೆ.

ಪರೀಕ್ಷಾ ಅವಧಿ ಮತ್ತು ವೇಳಾಪಟ್ಟಿ:

ಮಂಡಳಿಯ ಪ್ರಕಟಣೆಯಂತೆ, ಈ ವಿಶೇಷ ಪರೀಕ್ಷೆಗಳು ಮೇ 15 ರಿಂದ ಪ್ರಾರಂಭವಾಗಿ ಮೇ 21ರವರೆಗೆ ನಡೆಯಲಿವೆ. ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಕೇವಲ ಒಂದು ವಾರದ ಅವಧಿಯಲ್ಲಿ ಎಲ್ಲಾ ಪ್ರಮುಖ ವಿಷಯಗಳ ಪರೀಕ್ಷೆಗಳನ್ನು ಪೂರ್ಣಗೊಳಿಸಲು ಸಿಬಿಎಸ್‌ಇ ನಿರ್ಧರಿಸಿದೆ. ಪ್ರತಿ ವಿಷಯಕ್ಕೂ ಸಾಕಷ್ಟು ಸಮಯಾವಕಾಶ ಸಿಗುವಂತೆ ವೇಳಾಪಟ್ಟಿಯನ್ನು ರೂಪಿಸಲಾಗಿದ್ದು, ವಿದ್ಯಾರ್ಥಿಗಳು ಆಯಾ ದಿನಾಂಕಕ್ಕೆ ಅನುಗುಣವಾಗಿ ಸಿದ್ಧತೆ ನಡೆಸಬಹುದಾಗಿದೆ.

ಪ್ರಮುಖ ವಿಷಯಗಳ ಪರೀಕ್ಷಾ ದಿನಾಂಕಗಳು:

ಪರೀಕ್ಷೆಯ ಮೊದಲ ದಿನವಾದ ಮೇ 15 ರಂದೇ ಗಣಿತ (Standard & Basic) ಪತ್ರಿಕೆ ನಡೆಯಲಿದೆ. ಮೇ 16 ರಂದು ಇಂಗ್ಲಿಷ್ ಭಾಷೆಯ ಎರಡೂ ಪತ್ರಿಕೆಗಳು ಹಾಗೂ ಮೇ 18 ರಂದು ವಿಜ್ಞಾನ ವಿಷಯದ ಪರೀಕ್ಷೆ ನಡೆಯಲಿದೆ. ಮೇ 19 ರಂದು ಹಿಂದಿ, ಉರ್ದು, ಪಂಜಾಬಿ, ಬಂಗಾಳಿ ಸೇರಿದಂತೆ ಪ್ರಾದೇಶಿಕ ಮತ್ತು ವಿದೇಶಿ ಭಾಷೆಗಳ ಪರೀಕ್ಷೆಗಳನ್ನು ನಿಗದಿಪಡಿಸಲಾಗಿದೆ. ಪರೀಕ್ಷೆಯ ಅವಧಿಯು ವಿಷಯಗಳ ಆಧಾರದ ಮೇಲೆ ಎರಡು ಅಥವಾ ಮೂರು ಗಂಟೆಗಳ ಕಾಲ ಇರಲಿದೆ.

ಇದನ್ನೂ ಓದಿ: SSLC District Wise Result: ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ

ಅಂತಿಮ ಹಂತದ ಪರೀಕ್ಷೆಗಳು:

ಮೇ 20 ರಂದು ಸಂಸ್ಕೃತ, ಮಾಹಿತಿ ತಂತ್ರಜ್ಞಾನ (IT), ಕೃತಕ ಬುದ್ಧಿಮತ್ತೆ (AI) ಮತ್ತು ಚಿತ್ರಕಲೆಯಂತಹ ಐಚ್ಛಿಕ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಸರಣಿಯ ಅಂತಿಮ ದಿನವಾದ ಮೇ 21 ರಂದು ಸಮಾಜ ವಿಜ್ಞಾನ ಪತ್ರಿಕೆಯೊಂದಿಗೆ 2026ರ ಎರಡನೇ ಬೋರ್ಡ್ ಪರೀಕ್ಷೆಗಳು ಮುಕ್ತಾಯಗೊಳ್ಳಲಿವೆ. ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದ ಮುಂದಿನ ಹಂತಕ್ಕೆ ತ್ವರಿತವಾಗಿ ಸಿದ್ಧರಾಗಲು ಅನುಕೂೂಲವಾಗಲಿದೆ.

ಮಂಡಳಿಯಿಂದ ವಿದ್ಯಾರ್ಥಿಗಳಿಗೆ ಸಲಹೆ:

ಈ ಪರೀಕ್ಷೆಯು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದ್ದು, ಸರಿಯಾದ ಅಧ್ಯಯನ ಯೋಜನೆ ಮತ್ತು ನಿರಂತರ ಅಭ್ಯಾಸದ ಮೂಲಕ ಉತ್ತಮ ಅಂಕ ಗಳಿಸಲು ಮಂಡಳಿ ಉತ್ತೇಜಿಸಿದೆ. ನಿಗದಿತ ಸಮಯದೊಳಗೆ ಸಿದ್ಧತೆಗಳನ್ನು ಪೂರ್ಣಗೊಳಿಸಿ, ಪರೀಕ್ಷಾ ಕೇಂದ್ರದ ನಿಯಮಗಳನ್ನು ಪಾಲಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:54 pm, Fri, 24 April 26

Source link