ಪತ್ನಿ ಜೊತೆ ಸೇರಿ 5 ಎಕರೆ ಭೂಮಿ ಖರೀದಿಸಿದ ವಿರಾಟ್ ಕೊಹ್ಲಿ; ಬೆಲೆ ಎಷ್ಟು ಗೊತ್ತಾ? – Kannada News | Virat Kohli and Anushka Sharma Buy 5 Acre Alibaug Land for 37.86 Cr: Luxury Investment
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದ್ದಾರೆ. ಈ ನಡುವೆ ತಮ್ಮ ಮಡದಿ ಅನುಷ್ಕಾ ಶರ್ಮಾ ಜೊತೆಗೂಡಿ ಭೂಮಿ ಖರೀದಿಯ ಕೆಲಸದಲ್ಲೂ ಬ್ಯುಸಿಯಾಗಿದ್ದಾರೆ. ವರದಿಯ ಪ್ರಕಾರ, ವಿರಾಟ್ ಕೊಹ್ಲಿ ಮತ್ತು ಮಡದಿ ಅನುಷ್ಕಾ ಶರ್ಮಾ ಮಹಾರಾಷ್ಟ್ರದ ಅಲಿಬಾಗ್‌ನಲ್ಲಿ 5 ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ಈ ಒಪ್ಪಂದವನ್ನು ರಿಯಲ್ ಎಸ್ಟೇಟ್ ಮಾಹಿತಿ ಕಂಪನಿ CRE ಮ್ಯಾಟ್ರಿಕ್ಸ್ ಬಹಿರಂಗಪಡಿಸಿದೆ. ವರದಿಯ ಪ್ರಕಾರ, ದಂಪತಿಗಳು ಜಂಟಿಯಾಗಿ 5 ಎಕರೆ ಭೂಮಿ…