ಅಕ್ಕನ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿ ಎನ್ಕೌಂಟರ್ನಲ್ಲಿ ಸಾವು – Kannada News | Ghaziabad Encounter: Man Accused in Child’s Murder Case Shot Dead
ಗಾಜಿಯಾಬಾದ್, ಏಪ್ರಿಲ್ 20: ಅಕ್ಕನ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಎನ್ಕೌಂಟರ್ನಲ್ಲಿ ಹತ್ಯೆ(Murder) ಮಾಡಿರುವ ಘಟನೆ ಗಾಜಿಯಾಬಾದ್ನಲ್ಲಿ ನಡೆದಿದೆ. ಜಸೀಮ್ ಅಲಿಯಾಸ್ ಛೋಟು ಎಂಬ ಆರೋಪಿಗಾಗಿ ವಾರಗಟ್ಟಲೆ ಹುಡುಕಾಟ ನಡೆಸಿದ ನಂತರ ನಗರದ ಬಂತ್ಲಾ ಕಾಲುವೆ ಕಟ್ ಬಳಿ ಈ ಎನ್ಕೌಂಟರ್ ನಡೆದಿದೆ. ಮೃತ ಬಾಲಕಿಗೆ ಕೇವಲ ನಾಲ್ಕು ವರ್ಷ ವಯಸ್ಸು. ಏಪ್ರಿಲ್ 11 ರಂದು ಬಾಲಕಿ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು. ದಿನಗೂಲಿ ಕಾರ್ಮಿಕರಾಗಿದ್ದ ಬಾಲಕಿಯ ಪೋಷಕರು ಕೆಲಸಕ್ಕೆ ಹೋಗಿದ್ದಾಗ, ಆರೋಪಿ, ಸಂತ್ರಸ್ತೆಯ…