ತನ್ನದೇ ಕಾರಲ್ಲಿ ಶವವಾಗಿ ಪತ್ತೆಯಾದ 56 ವರ್ಷದ ವ್ಯಕ್ತಿ: ಸಾವಿಗೆ ಕಾರಣ ನಿಗೂಢ – Kannada News | Bengaluru: 56 Year Old Real Estate Businessman Found Dead in Car; Cause Mysterious
ಬೆಂಗಳೂರು, ಏಪ್ರಿಲ್ 20: ರಿಯಲ್ ಎಸ್ಟೇಟ್ ಮತ್ತು ಸಣ್ಣ ಮಟ್ಟದ ಹಣಕಾಸು ವ್ಯವಹಾರ ನಡೆಸುತ್ತಿದ್ದ 56 ವರ್ಷದ ವ್ಯಕ್ತಿಯೋರ್ವರು ತಮ್ಮದೇ ಕಾರಿನಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಂಗಳೂರಿನ (Bengaluru) ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ನಡೆದಿದೆ. ಮೃತರನ್ನು ಬಸಾಪುರ ನಿವಾಸಿ ನಾರಾಯಣಪ್ಪ ಎಂದು ಗುರುತಿಸಲಾಗಿದ್ದು, ಕಾರಿನೊಳಗೆ ಚಾಲಕನ ಪಕ್ಕದ ಸೀಟ್ನಲ್ಲಿ ಅಚಲವಾಗಿ ಕುಳಿತಿದ್ದ ನಾರಾಯಣಪ್ಪ ಅವರನ್ನು ಗಮನಿಸಿದ ಸಾರ್ವಜನಿಕರು ಈ ಬಗ್ಗೆ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿದಾಗ ಅವರು ಅದಾಗಲೇ ಮೃತಪಟ್ಟಿರೋದು…