Bengaluru: ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ; ಪ್ರಯಾಣಿಕರು ಬದುಕಿದ್ದೇ ಪವಾಡ! – Kannada News | Auto Accident in Mahalakshmi Layout, Bengaluru Caught on CCTV
ಬೆಂಗಳೂರು, ಜನವರಿ 11: ರಸ್ತೆಗುಂಡಿಗೆ ಇಳಿದ ಪರಿಣಾಮ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿ ಆಟೋ ಪಲ್ಟಿಯಾಗಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನ ನಾಲ್ಕನೇ ಕ್ರಾಸ್ನಲ್ಲಿ ನಡೆದಿದೆ. ಪಲ್ಟಿಯಾದ ರಭಸಕ್ಕೆ ಆಟೋದಿಂದ ಪ್ರಯಾಣಿಕ ಹಾರಿ ಬಿದ್ದಿದ್ದರೆ, ಗ್ಲಾಸ್ ಒಡೆದು ಚಾಲಕ ಹೊರ ಬಂದಿದ್ದಾನೆ. ನೀರು ಲೀಕೇಜ್ ಆಗಿ ರಸ್ತೆಯಲ್ಲಿ ಗುಂಡಿ ಆಗಿದ್ದರೂ ಅದರ ಸುತ್ತ ಯಾವುದೇ ಬ್ಯಾರಿಕೇಡ್ ಹಾಕದಿರುವುದೇ ಅನಾಹುತಕ್ಕೆ ಕಾರಣ ಎನ್ನಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮತ್ತಷ್ಟು…