Category Archives: Blog

Your blog category

ಬಲಮುರಿ-ಎಡಮುರಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಿದ ಮಂಡ್ಯ ಜಿಲ್ಲಾಡಳಿತ: ಕಾರಣ ಇಲ್ಲಿದೆ – Kannada News | Balamuri Edamuri: Mandya District Administration Restricts Tourist Entry Due to Drowning Incidents

ಮಂಡ್ಯ, ಏಪ್ರಿಲ್​​ 19: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಬಲಮುರಿ ಮತ್ತು ಎಡಮುರಿ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿ ಮಂಡ್ಯ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಈ ಪ್ರದೇಶಗಳು ಮೃತ್ಯುಕೂಪವಾಗಿ ಮಾರ್ಪಟ್ಟಿದ್ದು, ನೀರಿನಲ್ಲಿ ಈಜಾಡಲು ಹೋಗಿ ಹಲವರು ಜೀವ ಕಳೆದುಕೊಳ್ಳುತ್ತಿದ್ದಾರೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ಪ್ರವಾಸಿಗರು ಮೃತಪಟ್ಟಿದ್ದಾರೆ. ಕಳೆದ ಏಳೆಂಟು ವರ್ಷಗಳಲ್ಲಿ 80ಕ್ಕೂ ಹೆಚ್ಚು ಜನರು ಇಲ್ಲಿ ಜೀವ ಕಳೆದುಕೊಂಡಿದ್ದಾರೆ. ಈಗ ಬೇಸಿಗೆ ರಜೆ ಇರುವ ಕಾರಣ ಮಕ್ಕಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿರುವ ಹಿನ್ನೆಲೆ, ಮುಂಜಾಗೃತಾ ಕ್ರಮವಾಗಿ ಮಂಡ್ಯ ಜಿಲ್ಲಾಡಳಿತವು ಮುಂದಿನ ಆದೇಶದವರೆಗೆ ಬಲಮುರಿ ಮತ್ತು ಎಡಮುರಿಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿದೆ. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ, ಯಾರೂ ಪ್ರವೇಶಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಜಮೀನಿನ ಕಾಗದಗಳು ಮಿಸ್ಸಿಂಗ್, ನಿಮ್ಮ ಮೆಮೊರಿ ಸುಧಾರಿಸಿಕೊಳ್ಳಿ ಎಂದು ಅಧಿಕಾರಿಯ ಟೇಬಲ್ ಮೇಲೆ ಬಾದಾಮಿ ಎಸೆದ ವ್ಯಕ್ತಿ – Kannada News | Almond Protest: Man Targets Officer Over Missing File in Unusual Way

ಛತ್ತೀಸ್​ಗಢ, ಏಪ್ರಿಲ್ 19: ಸರ್ಕಾರಿ ಕಚೇರಿಗಳಲ್ಲಿ ಫೈಲ್ ಕಳೆದುಹೋಗಿದೆ ಅಥವಾ ನಾಳೆ ಬನ್ನಿ ಎಂಬ ಮಾತುಗಳು ಅದೆಷ್ಟು ಜನಸಾಮಾನ್ಯರ ನಿದ್ದೆ ಗೆಡಿಸಿವೆಯೋ ಗೊತ್ತಿಲ್ಲ. ಆದರೆ ಬಿಲಾಸ್‌ಪುರದ ಟಿಫ್ರಾ ಹೌಸಿಂಗ್ ಬೋರ್ಡ್ ಕಚೇರಿಯಲ್ಲಿ ತರುಣ್ ಸಾಹು ಎಂಬ ಯುವಕ ಈ ನಿರ್ಲಕ್ಷ್ಯಕ್ಕೆ ನೀಡಿದ ಉತ್ತರ ಮಾತ್ರ ಅತ್ಯಂತ ಸೃಜನಶೀಲ ಮತ್ತು ಖಾರವಾಗಿತ್ತು. ತರುಣ್ ಸಾಹು ಒಂದು ವರ್ಷದ ಹಿಂದೆ ಮ ಒಂದು ಫ್ಲಾಟ್ ಖರೀದಿಸಿದ್ದರು. ಆಸ್ತಿಯ ಮಾಲೀಕತ್ವ ಅವರ ಹೆಸರಿಗೆ ಬದಲಾಗಬೇಕಾದರೆ (Mutation) ಹೌಸಿಂಗ್ ಬೋರ್ಡ್‌ನ ಫೈಲ್ ಅತ್ಯಗತ್ಯ. ಆದರೆ ಕಳೆದ ಒಂದು ವರ್ಷದಿಂದ ಅವರು ಕಚೇರಿಗೆ ಅಲೆದರೂ ಸಿಕ್ಕ ಉತ್ತರ ಮಾತ್ರ ಒಂದೇ ನಿಮ್ಮ ಫೈಲ್ ಕಾಣೆಯಾಗಿದೆ.

ಅಧಿಕಾರಿಗಳ ಬೇಜವಾಬ್ದಾರಿಯಿಂದ ಬೇಸತ್ತ ತರುಣ್, ಅವರು ಅದೆಷ್ಟು ಬಾರಿ ಕೇಳಿದರೂ ನೆನಪಿಲ್ಲ ಎಂದು ಹೇಳುತ್ತಿದ್ದುದ್ದನ್ನು ಕಂಡು ಒಂದು ಉಪಾಯ ಮಾಡಿದರು. ಕಚೇರಿಗೆ ಬಂದ ತರುಣ್ ನೇರವಾಗಿ ಡೆಪ್ಯೂಟಿ ರಿಜಿಸ್ಟ್ರಾರ್ ಅವರ ಕೋಣೆಗೆ ನುಗ್ಗಿದರು. ಆದರೆ ಅಲ್ಲಿ ಅವರು ಕೂಗಾಡಲಿಲ್ಲ, ಗಲಾಟೆ ಮಾಡಲಿಲ್ಲ. ಬದಲಿಗೆ, ತಮ್ಮ ಕೈಯಲ್ಲಿದ್ದ ಬಾದಾಮಿಯ ಪೊಟ್ಟಣವನ್ನು ಬಿಚ್ಚಿ ಅಧಿಕಾರಿಯ ಮೇಜಿನ ಮೇಲೆ ಹರಡಿದರು.

ಬಾದಾಮಿ ತಿಂದರೆ ನೆನಪಿನ ಶಕ್ತಿ ಹೆಚ್ಚಾಗುತ್ತದೆ ಎಂಬುದು ನಂಬಿಕೆ. ಅದನ್ನೇ ಅಸ್ತ್ರವಾಗಿ ಬಳಸಿದ ತರುಣ್, ಅಧಿಕಾರಿಗಳೇ, ನಿಮ್ಮ ಸ್ಮರಣಶಕ್ತಿ ತುಂಬಾ ಕಡಿಮೆಯಾಗಿದೆ ಎಂದು ಕಾಣುತ್ತದೆ. ಈ ಬಾದಾಮಿ ತಿನ್ನಿ, ಬಹುಶಃ ಆಗಲಾದರೂ ನನ್ನ ಫೈಲ್ ಎಲ್ಲಿದೆ ಎಂದು ನಿಮಗೆ ನೆನಪಾಗಬಹುದು ಎಂದು ಹೇಳಿದ್ದಾರೆ.

ತರುಣ್ ಸಾಹು ಈ ಇಡೀ ಘಟನೆಯನ್ನು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. ಕೆಲವೇ ಗಂಟೆಗಳಲ್ಲಿ ಈ ವೀಡಿಯೊ ಲಕ್ಷಾಂತರ ಜನರನ್ನು ತಲುಪಿತು. ಸಾಮಾನ್ಯ ನಾಗರಿಕನೊಬ್ಬ ಅಧಿಕಾರಶಾಹಿಯ ವಿಳಂಬ ನೀತಿಗೆ ನೀಡಬಹುದಾದ ಅತ್ಯುತ್ತಮ ಉತ್ತರ ಇದೇ ಎಂದು ನೆಟ್ಟಿಗರು ತರುಣ್ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಈ ವೀಡಿಯೊದ ನಂತರ ಜಿಲ್ಲಾ ಆಡಳಿತದಲ್ಲಿ ಸಂಚಲನ ಮೂಡಿದ್ದು, ಕಾಣೆಯಾದ ದಾಖಲೆಗಳನ್ನು ಪತ್ತೆಹಚ್ಚಲು ಮತ್ತು ಕೂಡಲೇ ರೂಪಾಂತರ ಪ್ರಕ್ರಿಯೆ ಪೂರ್ಣಗೊಳಿಸಲು ಅಧಿಕಾರಿಗಳು ಈಗ ಒತ್ತಡಕ್ಕೆ ಸಿಲುಕಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

IPL 2026: CSK ವಿರುದ್ಧ ಇಷ್ಟು ಸ್ಕೋರ್ ​ಗಳಿಸಿದರೆ ಗೆಲುವು ಖಚಿತ..! – Kannada News | 14th Consecutive loss for CSK while chasing 180+ total in IPL

IPL 2026: ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ (CSK) ಇದೀಗ ಸತತ ಸೋಲುಗಳಿಂದ ಕಂಗೆಟ್ಟಿದೆ. ಅದರಲ್ಲೂ ಸಿಎಸ್​ಕೆ ವಿರುದ್ಧ ಗೆಲ್ಲಬೇಕಿದ್ದರೆ 180+ ರನ್​ಗಳಿಸಿದರೆ ಸಾಕು ಎಂಬಂತಾಗಿದೆ. ಏಕೆಂದರೆ ಚೆನ್ನೈ ಪಡೆಯು 2019 ರಿಂದ ಒಂದು ಬಾರಿ ಕೂಡ 180 ಕ್ಕಿಂತ ಹೆಚ್ಚಿನ ಮೊತ್ತವನ್ನು ಚೇಸ್ ಮಾಡಿ ಗೆದ್ದಿಲ್ಲ.

ಸತತ 14ನೇ ಸೋಲಿನ ಆಘಾತ:

ಏಪ್ರಿಲ್ 18, 2026 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಮ್ಮೆ ಮುಗ್ಗರಿಸಿದೆ. ಎಸ್​ಆರ್​ಹೆಚ್ ನೀಡಿದ್ದ 195 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸಿಎಸ್​ಕೆ, ಕೊನೆಯವರೆಗೂ ಹೋರಾಡಿದರೂ 184 ರನ್‌ಗಳಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 10 ರನ್‌ಗಳಿಂದ ಸೋಲೊಪ್ಪಿಕೊಂಡಿತು.

ಇದು 180+ ರನ್‌ ಬೆನ್ನಟ್ಟುವಾಗ ತಂಡಕ್ಕೆ ಎದುರಾದ ಸತತ 14ನೇ ಸೋಲು ಎಂಬುದೇ ಅಚ್ಚರಿ. ಅಂದರೆ ಸಿಎಸ್​ಕೆ ತಂಡಕ್ಕೆ ಕಳೆದ 14 ಪಂದ್ಯಗಳಲ್ಲಿ 180+ ಸ್ಕೋರ್​ ಅನ್ನು ಚೇಸ್ ಮಾಡಲು ಸಾಧ್ಯವಾಗಿಲ್ಲ.

ಕೊನೆಯ ಬಾರಿ ಗೆದ್ದಿದ್ದು ಯಾವಾಗ?

ಒಂದು ಕಾಲದಲ್ಲಿ CSK ಎಂತಹ ದೊಡ್ಡ ಮೊತ್ತವನ್ನಾದರೂ ಸಲೀಸಾಗಿ ಚೇಸ್ ಮಾಡುತ್ತಿತ್ತು. ಆದರೆ 2018ರಲ್ಲಿ ಪುಣೆಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 180+ ರನ್ ಗುರಿಯನ್ನು ಯಶಸ್ವಿಯಾಗಿ ತಲುಪಿದ್ದೇ ಕೊನೆ. ಅಲ್ಲಿಂದ ಇಲ್ಲಿಯವರೆಗೆ ಅಂದರೆ ಸುಮಾರು ಏಳು ವರ್ಷಗಳಿಂದ ತಂಡಕ್ಕೆ ಈ ಮೈಲಿಗಲ್ಲು ತಲುಪಲು ಸಾಧ್ಯವಾಗಿಲ್ಲ.

ಹಿನ್ನಡೆಗೆ ಪ್ರಮುಖ ಕಾರಣಗಳೇನು?

  •  ನಿಧಾನಗತಿಯ ಆರಂಭ: ಪವರ್‌ಪ್ಲೇ ಅವಧಿಯಲ್ಲಿ ರನ್‌ ಗಳಿಸಲು ವಿಫಲವಾಗುವುದು ಅಥವಾ ವಿಕೆಟ್ ಕಳೆದುಕೊಳ್ಳುವುದು ತಂಡದ ಮೇಲೆ ಒತ್ತಡ ಹೇರುತ್ತಿದೆ.
  • ಮಧ್ಯಮ ಕ್ರಮಾಂಕದ ವೈಫಲ್ಯ: ಆರಂಭಿಕರು ಉತ್ತಮ ಅಡಿಪಾಯ ಹಾಕಿದರೂ, ಮಧ್ಯಮ ಕ್ರಮಾಂಕದಲ್ಲಿ ದೊಡ್ಡ ಹೊಡೆತಗಳನ್ನು ಹೊಡೆಯುವಲ್ಲಿ ಎಡವುತ್ತಿದ್ದಾರೆ.
  • ಹೆಚ್ಚುತ್ತಿರುವ ಗುರಿಗಳು: ಟಿ20 ಕ್ರಿಕೆಟ್ ಬದಲಾಗುತ್ತಿದ್ದು, ಈಗ 180-200 ರನ್‌ಗಳು ಸಾಮಾನ್ಯ ಮೊತ್ತಗಳಾಗಿವೆ. ಆದರೆ CSK ತಂಡದ ಬ್ಯಾಟಿಂಗ್ ಶೈಲಿ ಇನ್ನೂ ಹಳೆಯ ಮಾದರಿಯಲ್ಲೇ ಇರುವುದು ಈ ಸೋಲಿಗೆ ಕಾರಣವಿರಬಹುದು.

14 ಸೋಲುಗಳ ಪಟ್ಟಿ:

ಸೀಸನ್ ಎದುರಾಳಿ ತಂಡ ಗುರಿ CSK ಗಳಿಸಿದ ರನ್ ಫಲಿತಾಂಶ
2026 SRH 195 184/8 10 ರನ್‌ಗಳ ಸೋಲು
2026 RCB 251 207 43 ರನ್‌ಗಳ ಸೋಲು
2025 PBKS 220 170 50 ರನ್‌ಗಳ ಸೋಲು
2025 DC 184 159/9 25 ರನ್‌ಗಳ ಸೋಲು
2025 RCB 197 146/8 51 ರನ್‌ಗಳ ಸೋಲು
2025 RR 183 176/6 7 ರನ್‌ಗಳ ಸೋಲು
2024 RCB 219 191/7 28 ರನ್‌ಗಳ ಸೋಲು
2024 GT 232 196/8 36 ರನ್‌ಗಳ ಸೋಲು
2024 DC 192 171/6 21 ರನ್‌ಗಳ ಸೋಲು
2023 RR 203 170/6 33 ರನ್‌ಗಳ ಸೋಲು
2023 RR 176* 172/6 3 ರನ್‌ಗಳ ಸೋಲು
2022 PBKS 188 176/6 11 ರನ್‌ಗಳ ಸೋಲು
2022 PBKS 181 126 54 ರನ್‌ಗಳ ಸೋಲು
2021 MI 219 218/4 4 ವಿಕೆಟ್‌ಗಳ ಸೋಲು

ಇದನ್ನೂ ಓದಿ: ‘ಇದು ನನ್ನ ಮೈದಾನ’ ಸೆಲೆಬ್ರೇಷನ್ ಪ್ಲ್ಯಾನ್ ಇತ್ತಾ? ಕೆಎಲ್ ರಾಹುಲ್ ಹೇಳಿದ್ದೇನು?

2019 ರಿಂದ 180+ ಗುರಿಯನ್ನು ಬೆನ್ನತ್ತಲು ವಿಫಲವಾಗಿರುವ ಚೆನ್ನೈ ಸೂಪರ್ ಕಿಂಗ್ಸ್​ ತಂಡಕ್ಕೆ ಈ ಅಂಕಿಅಂಶ ಖಂಡಿತವಾಗಿಯೂ ಗೌರವ ತರುವಂತದ್ದಲ್ಲ. ಮುಂಬರುವ ಪಂದ್ಯಗಳಲ್ಲಿ ತಂಡವು ತನ್ನ ತಂತ್ರಗಾರಿಕೆಯನ್ನು ಬದಲಿಸಿಕೊಂಡು, ಈ ‘ಸೋಲಿನ ಸರಣಿ’ಗೆ ಬ್ರೇಕ್ ಹಾಕುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Published On – 8:43 am, Sun, 19 April 26

Source link

‘ಇದು ನನ್ನ ಮೈದಾನ’ ಸೆಲೆಬ್ರೇಷನ್ ಪ್ಲ್ಯಾನ್ ಇತ್ತಾ? ಕೆಎಲ್ ರಾಹುಲ್ ಹೇಳಿದ್ದೇನು? – Kannada News | “This is my ground”: KL Rahul Talked About iconic statement at Chinnaswamy.

ಐಪಿಎಲ್ 2025, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡ 20 ಓವರ್​ಗಳಲ್ಲಿ 163 ರನ್ ಕಲೆಹಾಕಿದ್ದರು. ಈ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಘಾತಕ್ಕೆ ಒಳಗಾದರೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆಎಲ್ ರಾಹುಲ್ (KL Rahul) ಏಕಾಂಗಿ ಹೋರಾಟ ನಡೆಸಿದರು.

ಈ ಏಕಾಂಗಿ ಹೋರಾಟದೊಂದಿಗೆ ಅಜೇಯ 93 ರನ್​ ಬಾರಿಸಿ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಜಯ ತಂದು ಕೊಟ್ಟಿದ್ದರು. ಈ ಗೆಲುವಿನ ಬಳಿಕ ತಮ್ಮ ಬ್ಯಾಟ್ ಅನ್ನು ಮಣ್ಣಿನಲ್ಲಿ ಬಲವಾಗಿ ಊರಿ, “ಇದು ನನ್ನ ಮೈದಾನ”ಎಂದು ಕಾಂತಾರಾ ಸ್ಟ್ರೈಲ್​ನಲ್ಲಿ  ಸಂಭ್ರಮಿಸಿದ್ದರು.

ಇದೀಗ ಮತ್ತೊಮ್ಮೆ ಆರ್​ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ದಾಖಲಿಸಿದೆ. ಈ ಬಾರಿ ಕೂಡ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದು ಕೆಎಲ್ ರಾಹುಲ್. ಆರ್​ಸಿಬಿ ನೀಡಿದ 176 ರನ್​ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಪರ ರಾಹುಲ್ 34 ಎಸೆತಗಳಲ್ಲಿ 57 ರನ್​ ಬಾರಿಸಿದ್ದಾರೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿನಲ್ಲಿ ತನ್ನದೆಯಾದ ಕೊಡುಗೆ ನೀಡಿದ್ದಾರೆ.

ಈ ಗೆಲುವಿನ ಬಳಿಕ ಮಾತನಾಡಿದ ಕೆಎಲ್ ರಾಹುಲ್​​ಗೆ ಈ ಬಾರಿ ಕಾಂತಾರಾ ಸ್ಟೈಲ್​ನಲ್ಲಿ ಸೆಲೆಬ್ರೇಷನ್ ಮಾಡುವ ಪ್ಲ್ಯಾನ್ ಇತ್ತಾ ಎಂದು ಕೇಳಲಾಗಿದೆ. ಈ ಪ್ರಶ್ನೆಗೆ ಉತ್ತರಿಸಿದ ರಾಹುಲ್, ಇಲ್ಲಾ, “ಅದು ಕೇವಲ ಒಂದು ಬಾರಿ ಮಾಡಿದ ಆಚರಣೆಯಷ್ಟೇ, ಇಂದಿನ ಪಂದ್ಯದಲ್ಲಿ ಆ ರೀತಿ ಮಾಡಲು ಯಾವುದೇ ಪ್ಲ್ಯಾನ್ ಇರಲಿಲ್ಲ,” ಎಂದಿದ್ದಾರೆ.

ಇದೇ ವೇಳೆ ಈ ಬಾರಿ ಬ್ಯಾಟಿಂಗ್ ಕಠಿಣವಾಗಿತ್ತು ಎಂದು ಒಪ್ಪಿಕೊಂಡಿರುವ ಕೆಎಲ್ ರಾಹುಲ್, ಆರಂಭದಲ್ಲಿ ಪಿಚ್ ಸ್ವಲ್ಪ ಭಿನ್ನವಾಗಿ ವರ್ತಿಸುತ್ತಿತ್ತು. ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಕೂಡ ಚೆಂಡು ಬರುತ್ತಿದ್ದ ರೀತಿಯ ಬಗ್ಗೆ ಅಸಮಾಧಾನಗೊಂಡಿರುವುದನ್ನು ನಾನು ಗಮನಿಸಿದೆ.

ನಾವು ಮೊದಲ ಆರು ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡಿದ್ದು ನಮಗೆ ಹಿನ್ನಡೆಯಾಯಿತು. ಆದರೆ ನಾವು ಗಳಿಸಬೇಕಾದ ರನ್ ಗತಿ ಏರದಂತೆ ತಡೆಯುವುದು ನಮ್ಮ ಮುಖ್ಯ ಗುರಿಯಾಗಿತ್ತು. ಹೀಗಾಗಿ ನಾನು ಬಿರುಸಿನ ಬ್ಯಾಟಿಂಗ್ ಮುಂದುವರೆಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಇನ್ನು ಟ್ರಿಸ್ಟನ್ ಸ್ಟಬ್ಸ್ ಅವರೊಂದಿಗೆ ಜೊತೆಯಾಟದ ಬಗ್ಗೆ ಮಾತನಾಡಿದ ರಾಹುಲ್, ನಾವಿಬ್ಬರು ನಮ್ಮ ಆಟದ ಶೈಲಿಯನ್ನು ಬದಲಿಸದೆ, ಉತ್ತಮ ಕ್ರಿಕೆಟ್ ಶಾಟ್‌ಗಳನ್ನು ಆಡಲು ನಿರ್ಧರಿಸಿದೆವು. ಬೌಲರ್‌ಗಳ ಮೇಲೆ ಒತ್ತಡ ಹೇರುವುದು ಮುಖ್ಯವಾಗಿತ್ತು. ಕೊನೆಯ ಹಂತದವರೆಗೆ ಪಂದ್ಯವನ್ನು ಕೊಂಡೊಯ್ದರೆ ಗೆಲುವು ಕಷ್ಟವಾಗುತ್ತದೆ ಎಂಬುದು ನಮಗೆ ತಿಳಿದಿತ್ತು.

ಇದಾಗ್ಯೂ ಕೊನೆಯ ಹಂತದಲ್ಲಿ ಪಂದ್ಯ ರೋಚಕ ಹಂತ ತಲುಪಿದರೂ ನಾನು ಗಾಬರಿಗೊಂಡಿರಲಿಲ್ಲ. ಏಕೆಂದರೆ ನನಗೆ ಸ್ಟಬ್ಸ್ ಮತ್ತು ಮಿಲ್ಲರ್ ಮೇಲೆ ಸಂಪೂರ್ಣ ನಂಬಿಕೆ ಇತ್ತು. ಅವರು ಸೌತ್ ಆಫ್ರಿಕಾ ಮತ್ತು ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಹಲವು ಪಂದ್ಯಗಳನ್ನು ಫಿನಿಶ್ ಮಾಡಿದ್ದಾರೆ.

ಇದನ್ನೂ ಓದಿ: IPL 2026: ಹೀಗೊಂದು ‘ಅವಮಾನಕರ’ ದಾಖಲೆ ಬರೆದ RCB

ಅಲ್ಲದೆ ಕೊನೆಯ ಓವರ್​ ಅನ್ನು ರೊಮಾರಿಯೋ ಶೆಫರ್ಡ್ ಅಥವಾ ಸುಯಶ್ ಶರ್ಮಾ ಎಸೆಯುತ್ತಾರೆ ಎಂಬುದು ನಮಗೆ ತಿಳಿದಿತ್ತು. ಈ ವೇಳೆ ಬಿಗ್ ಹಿಟ್ ಬಾರಿಸಲು ಅವಕಾಶ ದೊರೆಯಲಿದೆ ಎಂಬುದು ಗೊತ್ತಿತ್ತು. ಹೀಗಾಗಿ ಪಂದ್ಯವು ಕೊನೆಯ ಓವರ್​ನತ್ತ ಸಾಗಿದರೂ ನಾನು ಚಿಂತಿತನಾಗಿರಲಿಲ್ಲ ಎಂದು ಕೆಎಲ್ ರಾಹುಲ್ ತಿಳಿಸಿದ್ದಾರೆ.

Source link

ಮಗಳ ಪ್ರಿಯಕರನ ಜೊತೆಗೆ ಸೇರಿ ಅಳಿಯನ ಕತೆನೇ ಮುಗಿಸಿದ ತಾಯಿ, ತಮ್ಮ! – Kannada News | Man killed by his Wife’s Lover, Mother and Brother over conflict, accused arrested

ಮಗಳ ಪ್ರಿಯಕರನ ಜೊತೆಗೆ ಸೇರಿ ಅಳಿಯನ ಕತೆನೇ ಮುಗಿಸಿದ ತಾಯಿ, ತಮ್ಮ!

ತುಮಕೂರು, ಏಪ್ರಿಲ್ 19: ಮಗಳ ಸಾವಿನ ನಂತರ ಆಕೆಯ ಪ್ರಿಯಕರನೊಂದಿಗೆ ಸೇರಿ ಆಕೆಯ ಪತಿಯನ್ನು ತಾಯಿ ಹಾಗೂ ತಮ್ಮ ಹತ್ಯೆಗೈದ ಘಟನೆ ತುಮಕೂರಿನ (Tumakuru) ಮಧುಗಿರಿ ತಾಲ್ಲೂಕಿನ ದಂಡೀಪುರ ಗ್ರಾಮದಲ್ಲಿ ನಡೆದಿದೆ. 32 ವರ್ಷದ ನರಸಿಂಹಮೂರ್ತಿ ಕೊಲೆಯಾದ ವ್ಯಕ್ತಿ. ಹೆಂಡತಿ ಸುಜಾತಾಳ ಸಾವಿನ ಬಳಿಕ ಮದ್ಯವ್ಯಸನಿಯಾಗಿದ್ದ ಈತ, ಆಕೆಯ ಪ್ರಿಯಕರ ಆಗಾಗ ಮನೆಗೆ ಬಂದು ಹೋಗುವುದರ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ. ಇದನ್ನೇ ನೆಪವಾಗಿಸಿಕೊಂಡ ಸುಜಾತಾಳ ತಾಯಿ, ತಮ್ಮ ಹಾಗೂ ಪ್ರಿಯಕರ, ನರಸಿಂಹಮೂರ್ತಿಯನ್ನು ಕೊಲೆಗೈದಿದ್ದಾರೆ ಎಂದು ಮೃತನ ಕುಟುಂಬದವರು ಆರೋಪಿಸಿದ್ದಾರೆ. ಈ ಹಿನ್ನೆಲೆ ಕೊಡಿಗೇನಹಳ್ಳಿ ಪೊಲೀಸರು ಮೂವರನ್ನೂ ಬಂಧಿಸಿದ್ದಾರೆ.

ಸುಜಾತಾಳ ಗಂಡು ಮಗು ತನ್ನದೆಂದು ಭಾವಿಸಿದ್ದ ಆಕೆಯ ಪ್ರಿಯಕರ

ಕೆಲ ವರ್ಷಗಳ ಹಿಂದೆ ನರಸಿಂಹಮೂರ್ತಿ ಸುಜಾತಾಳನ್ನು ಪ್ರೀತಿಸಿ ಕುಟುಂಬದವರ ಒಪ್ಪಿಗೆ ಪಡೆದು ವಿವಾಹವಾಗಿದ್ದ. ಮದುವೆಯ ನಂತರ ಸುಜಾತ ಗಾರ್ಮೆಂಟ್ಸ್ ಉದ್ಯೋಗಕ್ಕೆ ಸೇರಿದ್ದಳು. ಈ ವೇಳೆ ಆಕೆಗೆ ಅಮರ್ ಎಂಬ ಯುವಕ ಪರಿಚಯವಾಗಿದ್ದ. ನಂತರ ಅವರಿಬ್ಬರ ಪರಿಚಯ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಇದೇ ಸಮಯದಲ್ಲಿ ಸುಜಾತಾ ಒಂದು ಗಂಡು ಮಗುವಿಗೂ ಜನ್ಮ ಕೊಟ್ಟಿದ್ದಳು. ಆದರೆ ಅನಾರೋಗ್ಯದಿಂದ ಕೆಲವು ತಿಂಗಳ ಹಿಂದೆ ಸುಜಾತ ಸಾವನ್ನಪ್ಪಿದ್ದಳು.

ಪತ್ನಿಯನ್ನು ಕಳೆದುಕೊಂಡ ದುಃಖದಲ್ಲಿ ನರಸಿಂಹಮೂರ್ತಿ ಕುಡಿತದ ದಾಸನಾಗಿದ್ದ. ಮತ್ತೊಂದೆಡೆ ಸುಜಾತಾಳ ಗಂಡು ಮಗು ತನ್ನದೆಂದು ಭಾವಿಸಿದ್ದ ಅಮರ್, ಆಗಾತ ಆಕೆಯ ಮನೆಗೆ ಬಂದು ಹೋಗುತ್ತಿದ್ದ. ಹೀಗೆ ಅಮರ್​ಗೂ ಸುಜತಾಳ ತಾಯಿ ಜಯಮ್ಮ ಹಾಗೂ ಸಹೋದರ ನಂದೀಶ್ಗೂ ಉತ್ತಮ ಸ್ನೇಹ ಬೆಳೆದಿತ್ತು. ಪದೆ ಪದೆ ಅಮರ್ ಮನೆಗೆ ಭೇಟಿ ನೀಡುತ್ತಿದ್ದುದನ್ನು ನರಸಿಂಹಮೂರ್ತಿ ಗಮನಿಸಿದ್ದಲ್ಲದೆ, ಜಯಮ್ಮಳ ಜೊತೆ ಇದೇ ವಿಷಯಕ್ಕೆ ಜಗಳವನ್ನೂ ಆಡಿದ್ದ. ಈ ಜಗಳದ ಬಗ್ಗೆ ಅಮರ್‌ಗೆ ತಿಳಿಸಿದ ಜಯಮ್ಮ, ತನ್ನ ಮಗ ನಂದೀಶ್ ಜೊತೆ ಸೇರಿ ಕೊಲೆ ಸಂಚು ರೂಪಿಸಿದ್ದರೆಂದು ಆರೋಪಿಸಲಾಗಿದೆ.

ಹೆಂಡತಿಯ ನೆನಪಿನಲ್ಲೇ ಕುಡಿತು ಸತ್ತನೆಂಬಂತೆ ಬಿಂಬಿಸಲು ಪ್ರಯತ್ನ!

ಮೂರು ಜನ ರೂಪಿಸಿದ ಸಂಚಿನಂತೆ ನರಸಿಂಹಮೂರ್ತಿಯನ್ನು ಮನೆಗೆ ಕರೆದು ಚಿಕನ್ ಪಾರ್ಟಿ ಹೆಸರಿನಲ್ಲಿ ಮದ್ಯಪಾನ ಮಾಡಿಸಿದ್ದಾರೆ. ಬಳಿಕ ಅಮರ್ ಮತ್ತು ನಂದೀಶ್ ಆತನನ್ನು ಆಟೋದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಗ್ಗದಿಂದ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಗ್ರಾಮದ ಸಮೀಪ ರಸ್ತೆಯ ಬಳಿ ಸುಜಾತಾಳ ಫ್ಲೆಕ್​ಸ್ ಇದ್ದ ಜಾಗದಲ್ಲಿಯೇ ಮೃತದೇಹವನ್ನು ಬಿಸಾಡಿದ್ದಾರೆ. ಹೆಂಡತಿಯ ನೆನಪಿನಲ್ಲಿ ಕುಡಿದು ಬಿದ್ದಿದ್ದಾನೆಂಬಂತೆ ಬಿಂಬಿಸಿದ್ದಾರೆ.

ಇದನ್ನೂ ಓದಿ ಮನೆಯ ಕಿಟಕಿ ಮುರಿದು ಒಳನುಗ್ಗಿ ಚಿನ್ನಾಭರಣ ಕದ್ದ ಖದೀಮರು; 110 ಗ್ರಾಂ ಬಂಗಾರ ಕಳವು

ತಪ್ಪೊಪ್ಪಿಕೊಂಡ ಆರೋಪಿಗಳು

ನರಸಿಂಹಮೂರ್ತಿಗೆ ಎಚ್ಚರವಾಗುತ್ತಿಲ್ಲವೆಂಬಂತೆ ನಾಟಕವಾಡಿ ತಾವೇ ಕೊಡಿಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ನಂತರ ವೈದ್ಯರ ಸಲಹೆ ಮೇರೆಗೆ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಹೋದಾಗ ಆತ ಸಾವನ್ನಪ್ಪಿರೋದಾಗಿ ವೈದ್ಯರು ದೃಢಪಡಿಸಿದ್ದಾರೆ. ಅಷ್ಟೇ ಅಕ್ಕದೆ ಮೃತದೇಹದ ಕುತ್ತಿಗೆ ಸುತ್ತ ಕಪ್ಪು ಕಲೆ ಮತ್ತು ಎಡಕಿವಿಯಲ್ಲಿ ರಕ್ತ ಬಂದಿರುವುದನ್ನೂ ಗಮನಿಸಿದ ವೈದ್ಯರು ಇದು ಸಹಜ ಸಾವಲ್ಲ, ಕೊಲೆಯೆಂದು ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡ ಮೃತನ ಅಕ್ಕ ಗಾಯತ್ರಿ ಪೊಲೀಸರಿಗೆ ದೂರು ನೀಡಿದ್ದು, ವಶಕ್ಕೆ ಪಡೆದ ಆರೋಪಿಗಳ ವಿಚಾರಣೆ ವೇಳೆ ತಾವು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದು ಗಂಟೆಯ ಮ್ಯಾಜಿಕ್, ವಿದ್ಯಾರ್ಥಿನಿಯರ ಬಳಿ ಅಂಗಡಿ ನೋಡಿಕೊಳ್ಳಿ ಎಂದು ಹೇಳಿ ಹೋದ ಮಾಲೀಕ, ಆಮೇಲೇನಾಯ್ತು? – Kannada News | Trust on Display: Vendor Leaves Shop in Hands of Two Students

ಹನೋಯ್, ಏಪ್ರಿಲ್ 19: ವಿಯೆಟ್ನಾಂನ ಒಂದು ಜನನಿಬಿಡ ರಸ್ತೆಯಲ್ಲಿ ಆ ಬೀದಿ ವ್ಯಾಪಾರಿ ಪ್ರತಿದಿನ ಬೆವರು ಸುರಿಸಿ ಸಣ್ಣಪುಟ್ಟ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ. ಅದು ಅವನ ಬದುಕಿನ ಏಕೈಕ ಆಧಾರವಾಗಿತ್ತು. ಆದರೆ ಒಂದು ದಿನ ಅವನಿಗೆ ಅನಿರೀಕ್ಷಿತವಾಗಿ ಒಂದು ತುರ್ತು ಕೆಲಸ ಎದುರಾಯಿತು. ಅಂಗಡಿಯನ್ನು ಹಾಗೆಯೇ ಬಿಟ್ಟು ಹೋಗುವಂತಿರಲಿಲ್ಲ, ಮುಚ್ಚಿದರೆ ಅಂದಿನ ಸಂಪಾದನೆಗೆ ಪೆಟ್ಟು ಬೀಳುತ್ತಿತ್ತು. ಅಂಗಡಿಯ ಹತ್ತಿರವೇ ನಿಂತಿದ್ದ ಇಬ್ಬರು ಪ್ರೌಢಶಾಲಾ ವಿದ್ಯಾರ್ಥಿನಿಯರನ್ನು ಕಂಡ ಆ ವ್ಯಾಪಾರಿ, “ಮಕ್ಕಳೇ, ಒಂದು ತುರ್ತು ಪರಿಸ್ಥಿತಿ ಇದೆ, ದಯವಿಟ್ಟು ಒಂದು ಗಂಟೆ ಕಾಲ ನನ್ನ ಅಂಗಡಿ ನೋಡಿಕೊಳ್ಳುತ್ತೀರಾ ಎಂದು ವಿನಂತಿಸಿದ. ಆ ಮುಗ್ಧ ಹುಡುಗಿಯರು ನಗುನಗುತ್ತಲೇ ಒಪ್ಪಿಕೊಂಡರು. ವ್ಯಾಪಾರಿ ನಿಶ್ಚಿಂತೆಯಿಂದ ತನ್ನ ಕೆಲಸಕ್ಕೆ  ಹೋಗಿದ್ದರು.

ಸರಿಯಾಗಿ ಒಂದು ಗಂಟೆಯ ನಂತರ ವ್ಯಾಪಾರಿ ಸಂಭ್ರಮ ಮತ್ತು ಆತಂಕದ ನಡುವೆ ತನ್ನ ಅಂಗಡಿಗೆ ಓಡಿ ಬಂದ. ಆದರೆ ಅಲ್ಲಿ ಅವನು ಕಂಡ ದೃಶ್ಯ ಅವನನ್ನು ದಿಗ್ಭ್ರಮೆಗೊಳಿಸಿತು, ಅವನ ಅಂಗಡಿಯಲ್ಲಿದ್ದ ಪ್ರತಿಯೊಂದು ವಸ್ತುವೂ ಮಾರಾಟವಾಗಿತ್ತು. ಸಾಮಾನ್ಯವಾಗಿ ಆತ ಇಡೀ ದಿನ ಕುಳಿತು ಮಾರಾಟ ಮಾಡುತ್ತಿದ್ದ ಎಲ್ಲ ಉತ್ಪನ್ನಗಳು ಕೇವಲ 60 ನಿಮಿಷಗಳಲ್ಲಿ ಖಾಲಿಯಾಗಿದ್ದವು.

ವ್ಯಾಪಾರಿಗೆ ತನ್ನ ಕಣ್ಣುಗಳನ್ನು ತಾನೇ ನಂಬಲು ಸಾಧ್ಯವಾಗಲಿಲ್ಲ. ಆ ಹುಡುಗಿಯರು ಸುಮ್ಮನೆ ಕುಳಿತುಕೊಳ್ಳುವ ಬದಲು, ಇಂದಿನ ಕಾಲದ ಮಾರುಕಟ್ಟೆ ತಂತ್ರಗಳನ್ನು ಬಳಸಿದ್ದರು. ಅವರು ರಸ್ತೆಯಲ್ಲಿ ಹೋಗುವವರನ್ನು ಆತ್ಮೀಯವಾಗಿ ಮಾತನಾಡಿಸಿ, ವಸ್ತುಗಳ ವಿಶೇಷತೆಯನ್ನು ವಿವರಿಸಿ, ಅತ್ಯಂತ ಲವಲವಿಕೆಯಿಂದ ವ್ಯಾಪಾರ ಮಾಡಿದ್ದರು. ಶಾಲಾ ಬಾಲಕಿಯರ ಆ ಉತ್ಸಾಹ ಮತ್ತು ಪ್ರಾಮಾಣಿಕತೆಯನ್ನು ಕಂಡ ಜನರು ಖುಷಿಯಿಂದ ವಸ್ತುಗಳನ್ನು ಖರೀದಿಸಿದ್ದರು.

ಖಾಲಿಯಾದ ಬುಟ್ಟಿಗಳು ಮತ್ತು ಕೈಯಲ್ಲಿದ್ದ ಹಣವನ್ನು ನೋಡಿದ ಆ ವ್ಯಕ್ತಿ ದಂಗಾಗಿ ಹೋದ. ಒಂದು ಗಂಟೆಯ ಮೊದಲು ತಾನು ಅಸಹಾಯಕನಾಗಿ ನೋಡುತ್ತಿದ್ದ ವ್ಯಾಪಾರಿಗೆ ಈಗ ಅನಿರೀಕ್ಷಿತ ಲಾಭ ಸಿಕ್ಕಿತ್ತು. ಆ ಹುಡುಗಿಯರ ಸಮಯಪ್ರಜ್ಞೆ ಮತ್ತು ಸಹಾಯ ಮನೋಭಾವವನ್ನು ಕಂಡು ಅವನ ಕಣ್ಣಾಲಿಗಳು ತುಂಬಿ ಬಂದವು. ಕೇವಲ ಒಂದು ಗಂಟೆಯಲ್ಲಿ ಅವರು ಅವನ ಒಂದು ದಿನದ ಕಷ್ಟವನ್ನು ಸುಲಭವಾಗಿಸಿದ್ದರು.

ಈ ಕಥೆಯು ನಮಗೆ ಎರಡು ಪಾಠಗಳನ್ನು ಕಲಿಸುತ್ತದೆ: ಮೊದಲನೆಯದು, ನಂಬಿಕೆಯೇ ಪ್ರಪಂಚದ ಅತಿ ದೊಡ್ಡ ಶಕ್ತಿ. ಎರಡನೆಯದು, ನಾವು ಯುವ ಪೀಳಿಗೆಗೆ ಅವಕಾಶ ನೀಡಿದರೆ ಅವರು ತಮ್ಮ ಕೌಶಲ್ಯದಿಂದ ಅದ್ಭುತಗಳನ್ನೇ ಸೃಷ್ಟಿಸಬಲ್ಲರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹಾರರ್ ಚಿತ್ರಕ್ಕಾಗಿ ‘ಮೈತ್ರಿ ಮೂವೀ ಮೇಕರ್ಸ್’ ಜೊತೆ ಕೈ ಜೋಡಿಸಿದ ಪ್ರಶಾಂತ್ ನೀಲ್ – Kannada News | Mythri Movie Makers Prashanth Neel horror movie 418 title revealed

ಟಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವೀ ಮೇಕರ್ಸ್’ (Mythri Movie Makers) ದೊಡ್ಡ ಮಟ್ಟದ ಕಮರ್ಷಿಯಲ್ ಚಿತ್ರಗಳಿಗೆ ಹೆಸರಾಗಿದೆ. ಇದೀಗ ಇದೇ ಮೊದಲ ಬಾರಿಗೆ ಈ ಸಂಸ್ಥೆ ಹಾರರ್ ಜಗತ್ತಿಗೆ ಕಾಲಿಟ್ಟಿದೆ. ಹೊಸ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಿದೆ. ಈ ಚಿತ್ರಕ್ಕೆ ‘418’ ಎಂದು ಹೆಸರಿಡಲಾಗಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಕೆಜಿಎಫ್ ಮತ್ತು ಸಲಾರ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಈ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ ಎಂಬುದು ವಿಶೇಷ. ಪ್ರಶಾಂತ್ ನೀಲ್ ಅವರ ಗರಡಿಯಲ್ಲಿ ಪಳಗಿದ ಕೀರ್ತನ್ ನಾಡಗೌಡ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಹಾರರ್ ಸಿನಿಮಾಗಳು ಅಂದ್ರೆ ಅಲ್ಲಿ ಕಾಮಿಡಿ ಕೂಡ ಬೆರೆತಿರುತ್ತಿತ್ತು. ಆದರೆ ‘418’ ಸಿನಿಮಾ ಈ ಸಂಪ್ರದಾಯವನ್ನು ಮುರಿಯಲು ಹೊರಟಿದೆ. ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಚಿತ್ರತಂಡ, ‘ಹಾರರ್ ಸಿನಿಮಾಗಳಲ್ಲಿ ನಗಿಸಿದ್ದು ಸಾಕು, ಈಗ ಹೆದರುವ ಸಮಯ’ ಎಂಬ ಪಂಚ್ ಲೈನ್ ನೀಡುವ ಮೂಲಕ ಇದೊಂದು ಕಂಪ್ಲೀಟ್ ಭಯಾನಕ ಚಿತ್ರ ಎಂದು ಸಾಬೀತುಪಡಿಸಿದೆ.

ನಿರ್ದೇಶಕ ಕೀರ್ತನ್ ಅವರು ‘ಕೆಜಿಎಫ್’ ಫ್ರಾಂಚೈಸಿ ಮತ್ತು ‘ಸಲಾರ್’ ಚಿತ್ರಗಳಲ್ಲಿ ಸೆಕೆಂಡ್ ಯೂನಿಟ್ ಡೈರೆಕ್ಟರ್ ಹಾಗೂ ಸಹಾಯಕ ನಿರ್ದೇಶಕರಾಗಿ ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2025ರ ನವೆಂಬರ್‌ನಲ್ಲಿ ‘418’ ಚಿತ್ರದ ಮುಹೂರ್ತ ನೆರವೇರಿತ್ತು. ಇದೊಂದು ‘ಭಯಾನಕ ಪ್ರಯಾಣ’ ಎಂದು ಕೀರ್ತನ್ ಅವರು ಬಣ್ಣಿಸಿದ್ದಾರೆ.

‘ಕೆಜಿಎಫ್’ ಯಶಸ್ಸಿನ ನಂತರ ಪ್ರಭಾಸ್ ಜೊತೆ ‘ಸಲಾರ್’ ಸಿನಿಮಾ ಮಾಡಿದ ಪ್ರಶಾಂತ್ ನೀಲ್ ಅವರು ತೆಲುಗು ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದರು. ಈಗ ಅವರು ‘418’ ಸಿನಿಮಾವನ್ನು ಪ್ರಸೆಂಟ್ ಮಾಡುವ ಸಲುವಾಗಿ ‘ಮೈತ್ರಿ ಮೂವೀ ಮೇಕರ್ಸ್’ ಜೊತೆ ಕೈ ಜೋಡಿಸಿದ್ದಾರೆ. ಪ್ರಶಾಂತ್ ನೀಲ್ ಅವರ ಬ್ರ್ಯಾಂಡ್ ಮೌಲ್ಯ ಈ ಚಿತ್ರಕ್ಕೆ ದೊಡ್ಡ ಬಲ ತಂದುಕೊಟ್ಟಿದೆ.

ಇದನ್ನೂ ಓದಿ: ‘ಡ್ರ್ಯಾಗನ್’ ಸಿನಿಮಾ ಶೂಟಿಂಗ್ ನಿಲ್ಲಿಸಿದ ಪ್ರಶಾಂತ್ ನೀಲ್, ಜೂ. ಎನ್​ಟಿಆರ್; ಕಾರಣ ಏನು?

ಈ ಹಾರರ್ ಥ್ರಿಲ್ಲರ್ ಚಿತ್ರದಲ್ಲಿ ಸೂರ್ಯ ರಾಜ್, ಚರಣ್ ಲಕ್ಕರಾಜು ಮತ್ತು ಪ್ರೀತಿ ಪಗಡಾಲ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಈ ಸಿನಿಮಾ ಸದ್ದು ಮಾಡುವ ನಿರೀಕ್ಷೆಯಿದೆ. ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಲವು ಸರ್ಕಾರಿ ನೌಕರರಿಗೆ ಇನ್ನೂ ಆಗಿಲ್ಲ ಮಾರ್ಚ್​​ ಸಂಬಳ: ಗೃಹಲಕ್ಷ್ಮೀಗೆ ಬಳಕೆಯಾಯ್ತಾ ಹಣ? – Kannada News | March Salary Withheld for Karnataka Govt Staff: Financial Crisis or Glitch?

ಬೆಂಗಳೂರು, ಏಪ್ರಿಲ್​​ 19: ಸಾಮಾನ್ಯವಾಗಿ ತಿಂಗಳ ಮೊದಲವಾರವೇ ರಾಜ್ಯದ ಸರ್ಕಾರಿ ನೌಕರರಿಗೆ ಪಾವತಿಯಾಗುತ್ತಿದ್ದ ಹಿಂದಿನಿ ತಿಂಗಳ ಸಂಬಳ ಈ ಸಲ ಭಾರಿ ವಿಳಂಬವಾಗಿರೋದು ಆತಂಕಕ್ಕೆ ಕಾರಣವಾಗಿದೆ. ಏಪ್ರಿಲ್​​ 18 ಕಳೆದರೂ ಹಲವು ಇಲಾಖೆಗಳ ನೌಕರರಿಗೆ ಮಾರ್ಚ್​​ ಸಂಬಳ ಇನ್ನೂ ಕೈ ಸೇರಿಲ್ಲ. ಇದರಿಂದಾಗಿ ಆದಾಯ, ಶಿಕ್ಷಣ, ಪೊಲೀಸ್, ಪಶುಸಂಗೋಪನೆ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸೇರಿದಂತೆ ಪ್ರಮುಖ ಇಲಾಖೆಗಳ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವರಿಗೆ ಏಪ್ರಿಲ್ 9–10ರಂದು ಸಂಬಳ ಬಂದಿದೆಯಾದರೂ, ಬಹಳಷ್ಟು ಮಂದಿ ಇನ್ನೂ ಕಾಯುತ್ತಿದ್ದಾರೆ ಎನ್ನಲಾಗಿದೆ.

ಹಣದ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಸೋಮವಾರದೊಳಗೆ ಸಂಬಳ ಪಾವತಿ ಆಗಬಹುದು ಎಂದು ಖಜಾನೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ರಾಜ್ಯದ ಸುಮಾರು 6.4 ಲಕ್ಷ ನೌಕರರಲ್ಲಿ ಇನ್ನೂ ಅನಿಶ್ಚಿತತೆ ಮುಂದುವರಿದಿದೆ. ಮೂಲಗಳ ಪ್ರಕಾರ ತಾಂತ್ರಿಕ ಸಮಸ್ಯೆಗಳು ಮತ್ತು ಹಣಕಾಸಿನ ಕೊರತೆಯೇ ಮಾರ್ಚ್​​ ತಿಂಗಳಿನ ಸಂಬಳ ವಿಳಂಬಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಹಣಕಾಸು ವರ್ಷದ ಅಂತ್ಯದಲ್ಲಿ ಒಂದು-ಎರಡು ವಾರ ಸಂಬಳ ವಿಳಂಬ ಆಗುವುದುಂಟು. ಆದರೆ ಇಷ್ಟು ವಿಳಂಬ ಅಪರೂಪ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಮಹಿಳಾ ವಿರೋಧಿ ಎಂದ ಬಿಜೆಪಿ; ದೇಶದ ಮಹಿಳೆಯರ ಗೆಲುವು ಎಂದ ಕೈ

ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಗೂ ಮುನ್ನ ಗೃಹಲಕ್ಷ್ಮಿ ಯೋಜನೆಗೆ 6,000 ಕೋಟಿ ಹಣ ನೀಡಲಾಗಿದೆ. ಸುಮಾರು ಮೂರು ತಿಂಗಳ ಬಾಕಿ ಪಾವತಿಗಾಗಿ ದೊಡ್ಡ ಮೊತ್ತದ ಹಣವನ್ನು ವ್ಯಯಿಸಿರುವ ಕಾರಣಕ್ಕೆ ಈಗ ಸರ್ಕಾರಿ ನೌಕರರ ಸಂಬಳಕ್ಕೆ ದುಡ್ಡಿನ ಸಮಸ್ಯೆಯಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ , ಗೃಹಲಕ್ಷ್ಮಿ ಯೋಜನೆಗೆ ಸಂಬಳದ ಹಣವನ್ನು ನೀಡಲಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ್ದಾರೆ. ಕೆಲವು ಇಲಾಖೆಗಳ ಡಿಡಿಒಗಳು ನಿಧಾನವಾಗಿದ್ದಾರೆ. ಸಂಬಳ ಪಾವತಿ ಇಲಾಖೆಯ ಮುಖ್ಯಸ್ಥರ ಹೊಣೆ ಎಂದು ತಿಳಿಸಿದ್ದಾರೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಜಾಗತಿಕ ರಾಜಕೀಯದಲ್ಲಿ ಸಂಚಲನ, ಟ್ರಂಪ್ ಮತ್ತು ಪಾಕ್ ಸೇನಾ ಮುಖ್ಯಸ್ಥರ ‘ದೋಸ್ತಿ’ ಮೇಲೆ ಅಮೆರಿಕ ಗುಪ್ತಚರ ಇಲಾಖೆ ಕಣ್ಣು – Kannada News | US Report Flags Concerns as Trump Engages Pakistan’s Asim Munir

ಡೊನಾಲ್ಡ್​ ಟ್ರಂಪ್, ಮುನೀರ್ Image Credit source: Moneycontrol.com

ವಾಷಿಂಗ್ಟನ್, ಏಪ್ರಿಲ್ 19:ಅಮೆರಿಕ ಮತ್ತು ಇರಾನ್(Iran) ನಡುವಿನ ಸಂಘರ್ಷ ಉಲ್ಬಣಗೊಂಡ ನಂತರ ಟೆಹ್ರಾನ್‌ಗೆ ಭೇಟಿ ನೀಡಿದ ಮೊದಲ ವಿದೇಶಿ ನಾಯಕ ಎಂಬ ಹೆಗ್ಗಳಿಕೆಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಪಾತ್ರರಾಗಿದ್ದಾರೆ. ಆದರೆ, ಈ ಭೇಟಿಯು ಶಾಂತಿಗಾಗಿ ನಡೆದ ಪ್ರಯತ್ನವೋ ಅಥವಾ ಅಮೆರಿಕಕ್ಕೆ ನೀಡುತ್ತಿರುವ ಎಚ್ಚರಿಕೆಯೋ ಎಂಬ ಚರ್ಚೆ ಈಗ ಶುರುವಾಗಿದೆ. ಫಾಕ್ಸ್ ನ್ಯೂಸ್ ವರದಿಯ ಪ್ರಕಾರ, ಮುನೀರ್ ಅವರು ಕೇವಲ ರಾಜತಾಂತ್ರಿಕ ಅಧಿಕಾರಿಯಲ್ಲ. ಅವರು 2016-17ರಲ್ಲಿ ಪಾಕಿಸ್ತಾನದ ಮಿಲಿಟರಿ ಗುಪ್ತಚರ ಮುಖ್ಯಸ್ಥರಾಗಿದ್ದ ಕಾಲದಿಂದಲೂ ಇರಾನ್‌ನ ಅತ್ಯಂತ ಪ್ರಭಾವಶಾಲಿ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (IRGC) ನೊಂದಿಗೆ ಆಳವಾದ ಸಂಬಂಧ ಹೊಂದಿದ್ದಾರೆ.

ಅಮೆರಿಕ ಮತ್ತು ಇಸ್ರೇಲ್ ದಾಳಿಯಲ್ಲಿ ಕೊಲ್ಲಲ್ಪಟ್ಟ ಇರಾನ್‌ನ ಪ್ರಮುಖ ಕಮಾಂಡರ್‌ಗಳಾದ ಖಾಸಿಮ್ ಸೊಲೈಮಾನಿ ಮತ್ತು ಹೊಸೈನ್ ಸಲಾಮಿ ಅವರೊಂದಿಗೆ ಮುನೀರ್ ವೈಯಕ್ತಿಕ ಸ್ನೇಹ ಹೊಂದಿದ್ದರು ಎಂಬುದು ಈಗ ಬಯಲಾಗಿದೆ. ಮುನೀರ್ ಅವರ ಈ ಹಿನ್ನೆಲೆಯು ಅಮೆರಿಕದ ಭದ್ರತಾ ತಜ್ಞರಲ್ಲಿ ಆತಂಕ ಮೂಡಿಸಿದೆ. ‘ಫೌಂಡೇಶನ್ ಫಾರ್ ಡಿಫೆನ್ಸ್ ಆಫ್ ಡೆಮಾಕ್ರಸೀಸ್’ನ ಬಿಲ್ ರೊಗ್ಗಿಯೊ ಅವರು ಟ್ರಂಪ್ ಆಡಳಿತಕ್ಕೆ ಕಠಿಣ ಸಂದೇಶ ನೀಡಿದ್ದಾರೆ:

ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನವು ನಮ್ಮ ಮಿತ್ರನಂತೆ ನಟಿಸಿ ತಾಲಿಬಾನ್‌ಗೆ ಬೆಂಬಲ ನೀಡಿದ ವಿಶ್ವಾಸಘಾತುಕ ಇತಿಹಾಸ ಹೊಂದಿದೆ. ಈಗ ಐಆರ್‌ಜಿಸಿ (IRGC) ಜೊತೆ ಮುನೀರ್ ಹೊಂದಿರುವ ನಿಕಟ ಸಂಬಂಧಗಳು ಟ್ರಂಪ್ ಆಡಳಿತಕ್ಕೆ ಮುಂದೊಂದು ದಿನ ದೊಡ್ಡ ಹೊಡೆತ ನೀಡಬಹುದು ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ಅಮೆರಿಕದಿಂದಾಗಿ ಮತ್ತೆ ಹಾರ್ಮುಜ್ ಜಲಸಂಧಿ ಮುಚ್ಚಿದ ಇರಾನ್

ರಾಜಕೀಯ ವಿಶ್ಲೇಷಕ ರಜಾ ರೂಮಿ ಅವರ ಪ್ರಕಾರ, ಮುನೀರ್ ಅವರಂತಹ ವ್ಯಕ್ತಿಗಳ ಪ್ರಭಾವವು ಪಾಕಿಸ್ತಾನದ ನಾಗರಿಕ ಸರ್ಕಾರವನ್ನು ಮಿಲಿಟರಿ ಹೇಗೆ ಸಂಪೂರ್ಣವಾಗಿ ಮರೆಮಾಡುತ್ತಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ವಿದೇಶಾಂಗ ನೀತಿಯ ನಿರ್ಧಾರಗಳನ್ನು ಚುನಾಯಿತ ನಾಯಕರಿಗಿಂತ ಹೆಚ್ಚಾಗಿ ಸೇನಾ ಮುಖ್ಯಸ್ಥರೇ ತೆಗೆದುಕೊಳ್ಳುತ್ತಿರುವುದು ಪಾಕ್ ಪ್ರಜಾಪ್ರಭುತ್ವದ ಅಸಹಾಯಕತೆಯನ್ನು ತೋರಿಸುತ್ತಿದೆ.

ಶನಿವಾರವಷ್ಟೇ ಇರಾನ್‌ನ ಮೂರು ದಿನಗಳ ಭೇಟಿ ಮುಗಿಸಿದ ಮುನೀರ್, ಅಲ್ಲಿನ ಅಧ್ಯಕ್ಷರು ಮತ್ತು ಮಿಲಿಟರಿ ಮುಖ್ಯಸ್ಥರೊಂದಿಗೆ ಶಾಂತಿ ಒಪ್ಪಂದದ ಬಗ್ಗೆ ಚರ್ಚಿಸಿದ್ದಾರೆ. ಇದರ ಬೆನ್ನಲ್ಲೇ ಈ ವಾರ ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಎರಡನೇ ಸುತ್ತಿನ ಮಾತುಕತೆ ನಡೆಯುವ ನಿರೀಕ್ಷೆಯಿದೆ. ಈ ಮಾತುಕತೆಯಲ್ಲಿ ಮುನೀರ್ ಅವರೇ ‘ಸೂತ್ರಧಾರ’ನ ಪಾತ್ರ ವಹಿಸುತ್ತಿರುವುದು ಜಾಗತಿಕ ರಾಜಕೀಯದ ಕುತೂಹಲಕಾರಿ ಬೆಳವಣಿಗೆಯಾಗಿದೆ.

ಒಂದೆಡೆ ಟ್ರಂಪ್ ಅವರೊಂದಿಗೆ ಸ್ನೇಹ ಪ್ರದರ್ಶಿಸುತ್ತಲೇ, ಮತ್ತೊಂದೆಡೆ ಅಮೆರಿಕದ ಬದ್ಧ ವೈರಿ ಇರಾನ್‌ನ ಮಿಲಿಟರಿ ನಾಯಕರೊಂದಿಗೆ ‘ವೈಯಕ್ತಿಕ ಸಮೀಕರಣ’ ಹೊಂದಿರುವ ಆಸಿಮ್ ಮುನೀರ್ ಅವರ ನಡೆ ಅಮೆರಿಕದ ಭದ್ರತೆಗೆ ಸವಾಲಾಗಬಹುದು. ಪಾಕಿಸ್ತಾನದ ಈ ‘ದ್ವಂದ್ವ ನೀತಿ’ಯನ್ನು ಟ್ರಂಪ್ ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ದಕ್ಷಿಣ ಏಷ್ಯಾದ ಭವಿಷ್ಯ ನಿಂತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮನೆಯ ಕಿಟಕಿ ಮುರಿದು ಒಳನುಗ್ಗಿ ಚಿನ್ನಾಭರಣ ಕದ್ದ ಖದೀಮರು; 110 ಗ್ರಾಂ ಬಂಗಾರ ಕಳವು – Kannada News | Mysuru Burglary: Thieves Break House Window, Steal 110 Grams of Gold Jewellery

ಮನೆಯಲ್ಲಿದ್ದ ಚಿನ್ನಾಭರಣ ಕಳವುImage Credit source: Tv9 Kannada

ಮೈಸೂರು, ಏಪ್ರಿಲ್​​ 19: ಮನೆಯ ಕಿಟಕಿ ಮುರಿದು ಖದೀಮರು ಚಿನ್ನಾಭರಣ ಕಳ್ಳತನ ನಡೆಸಿರುವ ಘಟನೆ ಮೈಸೂರು ತಾಲೂಕು ಹುಲ್ಯಾಳು ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಜುಬೇರ್ ಎಂಬುವವರ ಮನೆಯಲ್ಲಿ ಕಳ್ಳರು ಕೈಚಳಕ ತೋರಿದ್ದು, ಸುಮಾರು 110ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಜುಬೇರ್ ಕುಟುಂಬ ನಾಲ್ಕು ದಿನಗಳ ಹಿಂದೆ ಊರಿಗೆ ತೆರಳಿದ್ದು, ನಿನ್ನೆ ಮಧ್ಯಾಹ್ನ ಹಿಂತಿರುಗಿ ಬಂದು ನೋಡಿದಾಗ ಕಳ್ಳತನದ ವಿಚಾರ ಗೊತ್ತಾಗಿದೆ. ಮನೆಯ ಕೊಠಡಿಯ ಬೀರುವಿನಲ್ಲಿದ್ದ ಚಿನ್ನ ಕಳುವಾಗಿದ್ದು, ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿಗಳಿದ್ದ ಮನೆಗೆ ನುಗ್ಗಿ ದರೋಡೆ

ಮನೆಗೆ ನುಗ್ಗಿದ ಆರು ಮಂದಿ ಅಪರಿಚಿತರು ಕೇರಳ ಮೂಲದ ಮೂವರು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿ ದರೋಡೆ ನಡೆಸಿರುವ ಘಟನೆ ಬೆಂಗಳೂರಿನ ಕೊಣನಕುಂಟೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಪೊಲೀಸರ ಮಾಹಿತಿ ಪ್ರಕಾರ, ಖಾಸಗಿ ಕಾಲೇಜಿನಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಬಾಡಿಗೆ ಮನೆಯಲ್ಲಿ ವಾಸವಿದ್ದರು. ರಾತ್ರಿ ಸುಮಾರು 11 ಗಂಟೆಗೆ ಬಾಗಿಲು ಲಾಕ್ ಇದ್ದರೂ ಹಿಂಭಾಗದ ಮೂಲಕ ಆರೋಪಿಗಳು ಮನೆಗೆ ನುಗ್ಗಿದ್ದರು ಎನ್ನಲಾಗಿದೆ. ಗ್ಯಾಂಗ್ ವಿದ್ಯಾರ್ಥಿಗಳ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬೆದರಿಕೆ ಹಾಕಿ, ಮೂರು ಮೊಬೈಲ್ ಫೋನ್‌ಗಳು ಹಾಗೂ ಸುಮಾರು 10,000 ರೂ. ನಗದು ದೋಚಿಕೊಂಡು ಪರಾರಿಯಾಗಿದೆ. ಈ ವೇಳೆ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಆರೋಪಿಗಳು ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಈ ಸಂಬಂಧ ಕೊಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಕಸ್ಟಡಿಯಿಂದ ಎಸ್ಕೇಪ್ ಆದ ಆರೋಪಿ!

ಲಕ್ಷಾಂತರ ಮೌಲ್ಯದ ದಾಳಿಂಬೆ ಕಳ್ಳತನಕ್ಕೆ ಯತ್ನ

ಜಮೀನಿಗೆ ನುಗ್ಗಿರುವ 8-10 ಜನರ ಗುಂಪೊಂದು ಲಕ್ಷಾಂತರ ಮೌಲ್ಯದ ದಾಳಿಂಬೆ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಕೊಪ್ಪಳ ಜಿಲ್ಲೆ ಕನಕಗಿರಿ ಹೊರವಲಯದಲ್ಲಿ ನಡೆದಿದೆ. ಸೂರ್ಯನಾರಾಯಣ ರಾಜು ಅವರಿಗೆ ಸೇರಿದ ಜಮೀನಿಗೆ ಲಗ್ಗೆ ಇಟ್ಟಿದ್ದ ಆರೋಪಿಗಳು ದಾಳಿಂಬೆ ಕಳವಿಗೆ ಯತ್ನಿಸಿದ್ದಾರೆ. ಈ ವೇಳೆ ನಾಯಿ ಬೊಗಳಿದ ಕಾರಣ, ತಂದಿದ್ದ ಆಟೋ ಬಿಟ್ಟು ಖದೀಮರು ಓಡಿ ಹೋಗಿದ್ದಾರೆ. ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:45 am, Sun, 19 April 26

Source link