Category Archives: Blog

Your blog category

ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಪರಲೋಕಕ್ಕೆ ಕಳುಹಿಸಿದ ಪತ್ನಿ! – Kannada News | Mysuru Murder: Wife, Lover Arrested for Javarappa’s Death Over Illicit Affair in Kurneegala

ಮೃತ ವ್ಯಕ್ತಿ ಮತ್ತು ಆರೋಪಿಗಳುImage Credit source: Tv9 Kannada

ಮೈಸೂರು, ಏಪ್ರಿಲ್​​ 19: ಸರಗೂರು ತಾಲೂಕಿನ ಕುರ್ಣೇಗಾಲ ಗ್ರಾಮದಲ್ಲಿ ವ್ಯಕ್ತಿ ಅನುಮಾನಾಸ್ಪಾದ ಸಾವು ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್​​ ಸಿಕ್ಕಿದೆ. ಪ್ರಿಯಕರನ ಜೊತೆ ಸೇರಿ ಪತ್ನಿಯೇ ಪತಿಯನ್ನು ಕೊಲೆ ಮಾಡಿರುವ ವಿಚಾರ ಪೊಲೀಸ್​​ ತನಿಖೆ ವೇಳೆ ಬಯಲಾಗಿದೆ. ಜವರಪ್ಪ ಕೊಲೆಯಾದ ದುರ್ದೈವಿಯಾಗಿದ್ದು, ಪ್ರಕರಣ ಸಂಬಂಧ ಮೈಸೂರು ತಾಲೂಕಿನ ಮಾವಿನಹಳ್ಳಿ ಗ್ರಾಮದ ಸಿದ್ದೇಶ್ (32) ಮತ್ತು ಕುರ್ಣೆಗಾಲ ಗ್ರಾಮದ ಅಮೃತಾ(26)ಳನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮ ಸಂಬಂಧ ಅಡ್ಡಿಯಾಗುತ್ತಿದ್ದಾನೆ ಎಂಬ ಕಾರಣಕ್ಕೆ ಕೊಲೆ ನಡೆದಿದೆ ಎನ್ನಲಾಗ್ತಿದೆ.

ಕುರ್ಣೇಗಾಲದಲ್ಲಿ ಮೊನ್ನೆಯಷ್ಟೇ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಜವರಪ್ಪ ಶವ ರಸ್ತೆಬದಿಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆ ಜವರಪ್ಪ ಸಹೋದರ ರವಿ ನೀಡಿದ್ದ ದೂರಿನ ಅನ್ವಯ ತನಿಖೆಗಿಳಿದ ಪೊಲೀಸರು ಸಾವಿನ ಹಿಂದಿನ ಸತ್ಯವನ್ನು ರಿವೀಲ್​​ ಮಾಡಿದ್ದಾರೆ. ಆರೋಪಿ ಸಿದ್ದೇಶ್​​ಗೆ ಜವರಪ್ಪ ಪತ್ನಿ ಅಮೃತಾ ಜೊತೆಗೆ ಅಕ್ರಮ ಸಂಬಂಧ ಇತ್ತು. ಹೀಗಾಗಿ ಆತ ಇದ್ದರೆ ತಮ್ಮ ಸಂಬಂಧಕ್ಕೆ ತೊಂದರೆ ಆಗುತ್ತೆ ಎಂದು ಆರೋಪಿಗಳು ಜವರಪ್ಪನ ಕೊಲೆಗೆ ಪ್ಲ್ಯಾನ್​​ ಮಾಡಿದ್ದರು. ಅದರಂತೆ ಅಮೃತಾ ಕುಮ್ಮಕ್ಕಿನಿಂದ ಆಕೆಯ ಪ್ರಿಯಕರ ಸಿದ್ದೇಶ್​​ನೇ ಕೊಲೆ ಮಾಡಿರೋದು ಗೊತ್ತಾಗಿದೆ.

ಇದನ್ನೂ ಓದಿ: ಅನಿಲ್‌ನನ್ನು ‘ಅಕ್ಷತಾ’ ಮಾಡಿದ್ದ ಮಂಗಳಮುಖಿಯರು; ಮಂಗಳೂರು-ಕೇರಳದಲ್ಲಿ ಅನೈತಿಕ ಚಟುವಟಿಕೆಗೆ ಬಳಕೆ, ಲಿಂಗ ಬದಲಾವಣೆಗೂ ಸ್ಕೆಚ್

ಕುರ್ಣೇಗಾಲ ಗ್ರಾಮದ ಜವರಪ್ಪ ನಂಜನಗೂಡು ತಾಲೂಕಿನ ಹಾಡ್ಯ ಗ್ರಾಮದ ಅಮೃತಾಳನ್ನ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಸಣ್ಣಪುಟ್ಟ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದ್ದು, 12 ದಿನಗಳ ಹಿಂದೆ ಮಕ್ಕಳೊಂದಿಗೆ ಹಬ್ಬಕ್ಕೆಂದು ಅಮೃತಾ ತವರಿಗೆ ಹೋಗಿದ್ದಳು.ಏ.16ರಂದು ಹೆಂಡತಿ ಮನೆಗೆ ಹೋಗಿ ಬರುತ್ತೇನೆಂದು ಹೋಗಿದ್ದ ಜವರಪ್ಪ, ಮನೆಗೆ ಹಿಂದಿರುಗಿ ಬಂದಿರಲಿಲ್ಲ. ಬದಲಾಗಿ ಮರುದಿನ ಬೆಳಗ್ಗೆ 6.30ಕ್ಕೆ ಗ್ರಾಮದ ಸಮೀಪದ ರಸ್ತೆ ಬದಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ತನಿಖೆಗಾಗಿ ಎಸ್. ಪಿ. ಮಲ್ಲಿಕಾರ್ಜುನ ಬಾಲದಂಡಿ ಮೂರು ತಂಡಗಳನ್ನು ರಚನೆ ಮಾಡಿದ್ದರು. ಅಂತಿಮವಾಗಿ ಜವರಪ್ಪ ಸಾವಿನ ಸತ್ಯ ಹೊರಬಂದಿದ್ದು, ಪ್ರಿಯಕರನ ಜೊತೆ ಸೇರಿ ಪತ್ನಿಯೇ ಆತನ ಸಾವಿಗೆ ಕಾರಣವಾಗಿರೋದು ನಿಜಕ್ಕೂ ದುರ್ದೈವವೇ ಸರಿ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 10:39 am, Sun, 19 April 26

Source link

ಅಕ್ಷಯ್ ಕುಮಾರ್ ಪುತ್ರ ಆರವ್ ಭಾಟಿಯಾ ತಿಂಗಳ ಸಂಬಳ ಕೇವಲ 4,500 ರೂಪಾಯಿ – Kannada News | Akshay Kumar son Aarav Bhatia Salary 4500 Rupees per month

ಬಾಲಿವುಡ್‌ ನಟ ಅಕ್ಷಯ್ ಕುಮಾರ್ (Akshay Kumar) ದಶಕಗಳಿಂದ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ವರ್ಷಕ್ಕೆ ನಾಲ್ಕೈದು ಸಿನಿಮಾ ಮಾಡುವ ಅಕ್ಷಯ್ ಕುಮಾರ್ ಅವರ ಆಸ್ತಿ ಕೋಟ್ಯಂತರ ರೂಪಾಯಿ. ಆದರೆ, ಇವರ ಪುತ್ರ ಆರವ್ ಭಾಟಿಯಾ (Aarav Bhatia) ಮಾತ್ರ ತಂದೆಯ ಹಾದಿ ತುಳಿಯದೇ, ಸಂಪೂರ್ಣ ಭಿನ್ನವಾದ ಹಾದಿ ಆರಿಸಿಕೊಂಡಿದ್ದಾರೆ. ಅಚ್ಚರಿಯ ವಿಷಯವೆಂದರೆ, 23 ವರ್ಷದ ಆರವ್ ಈಗ ಕೇವಲ 4,500 ರೂಪಾಯಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಸ್ವತಃ ಅಕ್ಷಯ್ ಕುಮಾರ್ ಅವರು ಈ ವಿಷಯ ತಿಳಿಸಿದ್ದಾರೆ. ತಮ್ಮ ಮಗನಿಗೆ ಸಿನಿಮಾ ರಂಗಕ್ಕೆ ಬರುವ ಪ್ಲ್ಯಾನ್ ಇಲ್ಲ ಎಂದು ಕೂಡ ಅವರು ಹೇಳಿದ್ದಾರೆ.

ಸಾಮಾನ್ಯವಾಗಿ ಸ್ಟಾರ್ ನಟರ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಸಿನಿಮಾಗೆ ಬರುವುದು ವಾಡಿಕೆ. ಆದರೆ ಆರವ್‌ ಭಾಟಿಯಾಗೆ ನಟನೆಯಲ್ಲಿ ಆಸಕ್ತಿ ಇಲ್ಲವಂತೆ. ಇತ್ತೀಚೆಗೆ ಶುಭಂಕರ್ ಮಿಶ್ರಾ ಅವರೊಂದಿಗೆ ಮಾತನಾಡಿದ ಅಕ್ಷಯ್ ಕುಮಾರ್ ಅವರು ತಮ್ಮ ಮಗನ ಬಗ್ಗೆ ಹೆಮ್ಮೆಯ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ವಿಷಯ ಕೇಳಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ.

‘ಆರವ್‌ಗೆ ಸಿನಿಮಾಗೆ ಸೇರುವ ಯಾವುದೇ ಉದ್ದೇಶವಿಲ್ಲ. ಆತನಿಗೆ ಫ್ಯಾಷನ್ ರಂಗದಲ್ಲಿ ಸಾಧನೆ ಮಾಡುವ ಕನಸಿದೆ. ಅದಕ್ಕಾಗಿ ಆತ ಹಗಲಿರುಳು ಶ್ರಮಿಸುತ್ತಿದ್ದಾನೆ. ಈಗಲೂ ಆತ ಕೇವಲ 4,500 ರೂಪಾಯಿ ಸಂಬಳದ ಕೆಲಸ ಮಾಡುತ್ತಿದ್ದಾನೆ. ಇದು ಒಳ್ಳೆಯದೇ ತಾನೇ?’ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.

ಆರವ್ ಅವರು ಫ್ಯಾಷನ್ ಬಗ್ಗೆ ತಳಮಟ್ಟದಿಂದ ಕಲಿಯಲು ಇಷ್ಟಪಡುತ್ತಿದ್ದಾರೆ. ‘ಆತ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸಾಂಪ್ರದಾಯಿಕ ಪ್ರಿಂಟ್‌ಗಳು ಮತ್ತು ವಿನ್ಯಾಸಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದಾನೆ. ನಾನು ಆತನಿಗೆ ಹೆಚ್ಚು ಉಪದೇಶ ಮಾಡುವುದಿಲ್ಲ, ಆದರೆ ಯಾರಿಗೂ ತೊಂದರೆ ಕೊಡಬೇಡ ಎಂದು ಮಾತ್ರ ಹೇಳಿದ್ದೇನೆ’ ಎಂದು ಅಕ್ಷಯ್ ಕುಮಾರ್ ತಮ್ಮ ಮಗನ ಶಿಸ್ತಿನ ಬಗ್ಗೆ ಹೇಳಿದ್ದಾರೆ.

ಇದನ್ನೂ ಓದಿ: ವಿದ್ಯಾ ಬಾಲನ್ ಕಂಡರೆ ಬೆಚ್ಚಿ ಬೀಳುತ್ತಿದ್ದ ಅಕ್ಷಯ್ ಕುಮಾರ್ ಮಗ; ಕಾರಣ ಏನು?

ಇದೇ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ಒಂದು ತಮಾಷೆಯ ಕಥೆಯನ್ನು ನೆನಪಿಸಿಕೊಂಡಿದ್ದಾರೆ. ಆರವ್ ಚಿಕ್ಕವನಿದ್ದಾಗ ಸುಮಾರು 6 ವರ್ಷಗಳ ಕಾಲ ನಟಿ ವಿದ್ಯಾ ಬಾಲನ್ ಅವರನ್ನು ನೋಡಿ ಹೆದರುತ್ತಿದ್ದರಂತೆ. ‘ಭೂಲ್ ಭುಲಯ್ಯ’ ಸಿನಿಮಾದಲ್ಲಿ ವಿದ್ಯಾ ಬಾಲನ್ ಅವರು ಮಂಜುಲಿಕಾ ಎಂಬ ಪಾತ್ರ ಮಾಡಿದ್ದನ್ನು ನೋಡಿ, ಅವರೇ ಅಸಲಿ ದೆವ್ವ ಎಂದು ಆರವ್ ನಂಬಿದ್ದರಂತೆ. ಪ್ರತಿ ಬಾರಿ ವಿದ್ಯಾ ಬಾಲನ್ ಭೇಟಿ ಆದಾಗ ಆರವ್ ಬೆಚ್ಚಿ ಬೀಳುತ್ತಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

CSK ಫ್ಯಾನ್ಸ್​ನ ಸೈಲೆಂಟ್ ಮಾಡಿದ್ದೇವೆ… ಕಾವ್ಯ ಮಾರನ್ ವಿಡಿಯೋ ವೈರಲ್ – Kannada News | Kaviya Maran’s Viral ‘Silence’ Celebration Lights Up IPL 2026

ಐಪಿಎಲ್ 2026ರ 27ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ (SRH) 10 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ ಎಸ್‌ಆರ್‌ಎಚ್ ತಂಡದ ಮಾಲೀಕಿ ಕಾವ್ಯಾ ಮಾರನ್ ಅವರ ಸಂಭ್ರಮದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ 194 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 184 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಎಸ್​ಆರ್​ಹೆಚ್ ಪಡೆ 10 ರನ್​ಗಳ ರೋಚಕ ಜಯ ಸಾಧಿಸಿತು.

ಈ ಪಂದ್ಯದುದ್ದಕ್ಕೂ ಗ್ಯಾಲರಿಯಲ್ಲಿ ಕುಳಿತು ತಂಡವನ್ನು ಹುರಿದುಂಬಿಸುತ್ತಿದ್ದ ಎಸ್​ಆರ್​ಹೆಚ್​ ಮಾಲಕಿ ಕಾವ್ಯಾ ಮಾರನ್, ಕೊನೆಯ ಓವರ್‌ನಲ್ಲಿ ಎಸ್‌ಆರ್‌ಎಚ್ ಗೆಲುವು ಖಚಿತವಾಗುತ್ತಿದ್ದಂತೆ ಕುಣಿದು ಕುಪ್ಪಳಿಸಿದರು.

ಗಾಳಿಯಲ್ಲಿ ಕೈಬೀಸುತ್ತಾ, ಚಪ್ಪಾಳೆ ತಟ್ಟುತ್ತಾ ಅವರು ತೋರಿದ ಉತ್ಸಾಹ ಅಭಿಮಾನಿಗಳ ಗಮನ ಸೆಳೆಯಿತು. ಅದರಲ್ಲೂ ಬಾಯಿ ಮೇಲೆ ಬೆರಳಿಟ್ಟು ಸಿಎಸ್​ಕೆ ಅಭಿಮಾನಿಗಳನ್ನು ‘ಸೈಲೆಂಟ್’ ಮಾಡಿದ್ದೇವೆ ಎಂದು ಸನ್ನೆ ಮಾಡಿ ಸಂಭ್ರಮಿಸಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಗೆಲುವಿನೊಂದಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದೆ. ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ 3 ಗೆಲುವು ದಾಖಲಿಸಿರುವ ಎಸ್‌ಆರ್‌ಎಚ್, ಪ್ಲೇ-ಆಫ್ ರೇಸ್‌ನಲ್ಲಿ ಮುನ್ನಡೆ ಸಾಧಿಸಿದೆ. ಮತ್ತೊಂದೆಡೆ, ಈ ಸೋಲು ಸಿಎಸ್‌ಕೆ ತಂಡಕ್ಕೆ ಭಾರಿ ಹಿನ್ನಡೆ ತಂದಿದ್ದು, ಅಂಕ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿದೆ.

Source link

Swapna Shastra: ಅಕ್ಷಯ ತೃತೀಯದಂದು ಬೀಳುವ ಈ ಕನಸುಗಳು ನಿಮ್ಮ ಅದೃಷ್ಟವನ್ನೇ ಬದಲಿಸಬಲ್ಲವು! – Kannada News | Akshaya Tritiya Dreams: Auspicious Omens for Wealth and Prosperity Revealed

ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ನಮಗೆ ಬೀಳುವ ಕನಸುಗಳಿಗೂ ವಿಶೇಷ ಅರ್ಥವಿದೆ ಎಂದು ಸ್ವಪ್ನ ಶಾಸ್ತ್ರ ತಜ್ಞರು ಹೇಳುತ್ತಾರೆ. ಈ ದಿನ ಕೆಲವು ನಿರ್ದಿಷ್ಟ ವಸ್ತುಗಳು ಕನಸಿನಲ್ಲಿ ಕಾಣಿಸಿಕೊಂಡರೆ, ಅದು ನಿಮ್ಮ ಜೀವನದಲ್ಲಿ ಬರಲಿರುವ ಸೌಭಾಗ್ಯದ ಮುನ್ಸೂಚನೆಯಾಗಿದೆ. ಅಕ್ಷಯ ತೃತೀಯದಂದು ಯಾವ ಕನಸುಗಳು ಬಿದ್ದರೆ ಶುಭ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಕನಸಿನಲ್ಲಿ ಚಿನ್ನ ಅಥವಾ ಬೆಳ್ಳಿ ಕಾಣುವುದು:

ಅಕ್ಷಯ ತೃತೀಯದಂದು ಚಿನ್ನದ ಮಹತ್ವ ಎಲ್ಲರಿಗೂ ತಿಳಿದಿದೆ. ಒಂದು ವೇಳೆ ಈ ದಿನದಂದು ನಿಮ್ಮ ಕನಸಿನಲ್ಲಿ ಚಿನ್ನ ಅಥವಾ ಬೆಳ್ಳಿ ಕಾಣಿಸಿಕೊಂಡರೆ, ಅದು ಅತ್ಯಂತ ಶುಭ ಸಂಕೇತ. ಇದರರ್ಥ ನಿಮ್ಮ ಸಂಪತ್ತು ವೃದ್ಧಿಯಾಗುವುದಲ್ಲದೆ, ಅನಿರೀಕ್ಷಿತ ಮೂಲಗಳಿಂದ ನಿಮಗೆ ಧನ ಲಾಭವಾಗಲಿದೆ.

ಲಕ್ಷ್ಮಿ ದೇವಿಯ ದರ್ಶನ:

ಕನಸಿನಲ್ಲಿ ತಾಯಿ ಲಕ್ಷ್ಮಿ ದೇವಿಯ ವಿಗ್ರಹ ಅಥವಾ ಫೋಟೋ ಕಾಣಿಸಿಕೊಂಡರೆ, ನೀವು ಶೀಘ್ರದಲ್ಲೇ ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ಪಡೆಯಲಿದ್ದೀರಿ ಎಂದರ್ಥ. ಲಕ್ಷ್ಮಿ ದೇವಿಯ ಕೃಪೆಯಿಂದ ನಿಮ್ಮ ಅದೃಷ್ಟ ದ್ವಿಗುಣಗೊಳ್ಳಲಿದ್ದು, ಜೀವನದಲ್ಲಿ ಸುಖ-ಸಂತೋಷ ನೆಲೆಸಲಿದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಕುಬೇರ ದೇವನ ದರ್ಶನ:

ಧನದೇವತೆಯಾದ ಕುಬೇರನು ಕನಸಿನಲ್ಲಿ ಕಾಣಿಸಿಕೊಂಡರೆ, ನಿಮ್ಮ ಬಡತನ ದೂರವಾಗಿ ಶ್ರೀಮಂತಿಕೆ ಒಲಿಯಲಿದೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ. ಇದು ನಿಮ್ಮ ವೃತ್ತಿ ಅಥವಾ ವ್ಯವಹಾರದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಸೂಚಿಸುತ್ತದೆ.

ಪ್ರಕೃತಿಯ ಶುಭ ಸಂಕೇತಗಳು:

ಕೇವಲ ದೇವತೆಗಳಷ್ಟೇ ಅಲ್ಲದೆ, ಪ್ರಕೃತಿಯ ಈ ಕೆಳಗಿನ ಅಂಶಗಳು ಕನಸಿನಲ್ಲಿ ಬಂದರೂ ಅದು ಅದೃಷ್ಟವೇ.

  • ಶುದ್ಧ ನೀರು: ಜೀವನದಲ್ಲಿ ಶಾಂತಿ ಮತ್ತು ಸಮೃದ್ಧಿಯ ಸಂಕೇತ.
  • ಹೂವು ಮತ್ತು ಹಣ್ಣುಗಳು: ಹೊಸ ಅವಕಾಶಗಳು ಮತ್ತು ಸಂತೋಷದ ಮುನ್ಸೂಚನೆ.
  • ಸೂರ್ಯನ ಬೆಳಕು: ಸಮಾಜದಲ್ಲಿ ಗೌರವ ಹೆಚ್ಚಾಗುವುದಲ್ಲದೆ, ಹೊಸ ಚೈತನ್ಯದ ಉದಯವನ್ನು ಇದು ಸೂಚಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

World Liver Day 2026: ಲಿವರ್‌ ಆರೋಗ್ಯಕರವಾಗಿರಬೇಕಂದ್ರೆ ತಪ್ಪದೇ ಈ ಆಹಾರಗಳನ್ನು ಸೇವನೆ ಮಾಡಲೇಬೇಕು – Kannada News | World Liver Day 2026: Know the history and significance of World Liver Day

ಯಕೃತ್ತು (Liver) ನಮ್ಮ ದೇಹದಲ್ಲಿನ ಒಂದು ಪ್ರಮುಖ ಅಂಗವಾಗಿದ್ದು, ಇದನ್ನು ದೇಹದ ಶಕ್ತಿಕೇಂದ್ರ ಎಂದೂ ಕರೆಯಲಾಗುತ್ತದೆ. ಇದು ದೇಹದಲ್ಲಿನ ವಿಷಕಾರಿ ವಸ್ತುಗಳನ್ನು ತೆಗೆದು ಹಾಕುವುದು, ರಕ್ತವನ್ನು ಶುದ್ಧೀಕರಿಸುವುದು, ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಸೇರಿದಂತೆ ಅನೇಕ ಅಗತ್ಯ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಇದು ನಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.  ಹಾಗಾಗಿ ಲಿವರ್‌ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಆದರೆ ಇಂದಿನ ಕಳಪೆ ಜೀವನಶೈಲಿ, ಆನಾರೋಗ್ಯಕ ಆಹಾರ ಪದ್ಧತಿ ಯಕೃತ್ತಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಿವೆ. ಹಾಗಾಗಿ ಲಿವರ್‌ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಏಪ್ರಿಲ್‌ 19 ವಿಶ್ವ ಯಕೃತ್ತು ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ವಿಶ್ವ ಯಕೃತ್ತಿನ ದಿನದ ಇತಿಹಾಸವೇನು?

2010 ರಲ್ಲಿ, ಯುರೋಪಿಯನ್ ಅಸೋಸಿಯೇಷನ್ ​​ಫಾರ್ ದಿ ಸ್ಟಡಿ ಆಫ್ ದಿ ಲಿವರ್ (EASL) 1966 ರಲ್ಲಿ ಪ್ರಾರಂಭವಾದ EASL ನ ಸ್ಥಾಪನಾ ವಾರ್ಷಿಕೋತ್ಸವದ ಗೌರವಾರ್ಥವಾಗಿ ಮೊದಲ ಬಾರಿಗೆ ವಿಶ್ವ ಲಿವರ್ ದಿನವನ್ನು ಆಚರಿಸಿತು. ಅಂದಿನಿಂದ ಯಕೃತ್ತಿನ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಏಪ್ರಿಲ್ 19 ರಂದು ವಿಶ್ವ ಲಿವರ್ ದಿನವನ್ನಾಗಿ ಆಚರಿಸಲಾಗುತ್ತದೆ.

ವಿಶ್ವ ಯಕೃತ್ತಿನ ದಿನದ ಮಹತ್ವವೇನು?

  • ವಿಶ್ವ ಯಕೃತ್ತಿನ ದಿನದ ವಿಶೇಷ ಸಂದರ್ಭದಲ್ಲಿ, ಜನರಿಗೆ ಯಕೃತ್ತಿಗೆ ಸಂಬಂಧಿಸಿದ ವಿವಿಧ ಕಾಯಿಲೆಗಳು ಹಾಗೂ ಅದರ ಚಿಕಿತ್ಸೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
  • ಒಮ್ಮೆ ಲಿವರ್ ಹಾನಿಗೊಳಗಾದರೆ, ಅದಕ್ಕೆ ಚಿಕಿತ್ಸೆ ನೀಡುವುದು ಕಷ್ಟಕರ ಮತ್ತು ದುಬಾರಿಯಾಗಬಹುದು. ಆದ್ದರಿಂದ, ಇಂದಿನಿಂದ ನಾವು ನಮ್ಮ ಲಿವರ್ ಆರೋಗ್ಯವನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ಒಂದು ಸಣ್ಣ ಬದಲಾವಣೆಯೂ ಸಹ ನಮ್ಮ ಜೀವನವನ್ನು ದೀರ್ಘ ಮತ್ತು ಉತ್ತಮಗೊಳಿಸುತ್ತದೆ ಎಂದು ವಿಶ್ವ ಲಿವರ್ ದಿನ ನಮಗೆ ನೆನಪಿಸುತ್ತದೆ.
  • ಈ ದಿನ ಆರೋಗ್ಯಕರ ಆಹಾರ ಪದ್ಧತಿ ಮತ್ತು ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಜನರಿಗೆ ಪ್ರೋತ್ಸಾಹ ನೀಡಲಾಗುತ್ತದೆ.

ಇದನ್ನೂ ಓದಿ: ಲಿವರ್ ಡಿಟಾಕ್ಸ್ ಡ್ರಿಂಕ್ಸ್: ನಿಜವಾಗಿಯೂ ಪ್ರಯೋಜನಕಾರಿಯೇ ಅಥವಾ ಕೇವಲ ಟ್ರೆಂಡಿ ಪಾನೀಯವೇ?

ಲಿವರ್‌ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೇವಿಸಬೇಕಾದ ಆಹಾರಗಳು:

ಹಸಿರು ಎಲೆ ತರಕಾರಿಗಳು: ಪಾಲಕ್ ಮತ್ತು ಎಲೆಕೋಸು ಸೇರಿದಂತೆ ಹೆಚ್ಚಿನ ಹಸಿರು ತರಕಾರಿಗಳು ಯಕೃತ್ತಿಗೆ ಬಹಳ ಪ್ರಯೋಜನಕಾರಿ. ಅವು ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ಪೋಷಕಾಂಶಗಳ ಉತ್ತಮ ಮೂಲವಾಗಿದ್ದು, ಇವು ಯಕೃತ್ತಿನಲ್ಲಿ ಸಂಗ್ರಹವಾಗಿರುವ ವಿಷಕಾರಿ ಅಂಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿರುವ ಸಲ್ಫರ್ ಸಂಯುಕ್ತಗಳು ಯಕೃತ್ತಿನ ಕಿಣ್ವಗಳನ್ನು ಸಕ್ರಿಯಗೊಳಿಸುತ್ತವೆ, ಇದು ದೇಹದ ನಿರ್ವಿಶೀಕರಣ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದು ಹಾನಿಕಾರಕ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಯಕೃತ್ತನ್ನು ಸೋಂಕುಗಳಿಂದ ರಕ್ಷಿಸುತ್ತದೆ.

ನಿಂಬೆಹಣ್ಣು: ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಆಮ್ಲಾ, ಕಿತ್ತಳೆ ಮತ್ತು ನಿಂಬೆಹಣ್ಣಿನಂತಹ ಸಿಟ್ರಸ್ ಹಣ್ಣುಗಳು ಯಕೃತ್ತಿಗೆ ಅತ್ಯುತ್ತಮವಾಗಿವೆ. ಇವು ಯಕೃತ್ತನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ. ಯಕೃತ್ತಿನಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅರಿಶಿನ: ಅರಿಶಿನದಲ್ಲಿರುವ ಅಂಶಗಳು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಯಕೃತ್ತಿನ ಕೋಶಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಇದು ಯಕೃತ್ತನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ.ಅರಿಶಿನವು ದೀರ್ಘಕಾಲದವರೆಗೆ ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಬೀಟ್ರೂಟ್ ರಸ: ಬೀಟ್ರೂಟ್ ರಸವು ನೈಟ್ರೇಟ್‌ಗಳು ಮತ್ತು ಬೀಟಾಲೈನ್‌ಗಳು ಎಂದು ಕರೆಯಲ್ಪಡುವ ಉತ್ಕರ್ಷಣ ನಿರೋಧಕಗಳ ಮೂಲವಾಗಿದೆ. ಬೀಟ್ರೂಟ್ ರಸವು ಯಕೃತ್ತನ್ನು ಆಕ್ಸಿಡೇಟಿವ್ ಹಾನಿ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಟೊಮೆಟೊ: ಟೊಮೆಟೊಗಳು ಜೀರ್ಣಕಾರಿ ಕಿಣ್ವಗಳು ಮತ್ತು ಯಕೃತ್ತಿನ ಕಿಣ್ವಗಳ ಚಟುವಟಿಕೆಯನ್ನು ಉತ್ತೇಜಿಸಿ ಉತ್ತಮ ಯಕೃತ್ತಿನ ಕಾರ್ಯವನ್ನು ಕಾಪಾಡಿಕೊಳ್ಳಲು ಮತ್ತು ಯಕೃತ್ತನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.

ಗ್ರೀನ್‌ ಟೀ ಚಹಾ: ಗ್ರೀನ್‌ ಟೀಯಲ್ಲಿರುವ ಕ್ಯಾಟೆಚಿನ್‌ಗಳು ಯಕೃತ್ತನ್ನು ನಿರ್ವಿಷಗೊಳಿಸಲು ಮತ್ತು ಫ್ಯಾಟಿ ಲಿವರ್‌ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿನ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ, ಇದರಿಂದಾಗಿ ಯಕೃತ್ತಿನ ಮೇಲೆ ಹೆಚ್ಚುವರಿ ಕೊಬ್ಬು ಸಂಗ್ರಹವಾಗುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

ದಾಳಿಂಬೆ: ದಾಳಿಂಬೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಯಕೃತ್ತಿನ ಕೋಶಗಳನ್ನು ಹಾನಿಯಿಂದ ರಕ್ಷಿಸುತ್ತವೆ ಮತ್ತು ರಕ್ತವನ್ನು ಶುದ್ಧವಾಗಿಡಲು ಸಹಾಯ ಮಾಡುತ್ತದೆ.

ವಿಷಯಗಳನ್ನು ನೆನಪಿನಲ್ಲಿಡಿ:

ಕರಿದ ಆಹಾರಗಳು, ಜಂಕ್ ಫುಡ್ ಮತ್ತು ಆಲ್ಕೋಹಾಲ್ ನಿಂದ ದೂರವಿರುವುದು ಮುಖ್ಯ. ನಿಯಮಿತ ವ್ಯಾಯಾಮ ಮತ್ತು ಸಾಕಷ್ಟು ನಿದ್ರೆ ಕೂಡ ಯಕೃತ್ತಿಗೆ ಅತ್ಯಗತ್ಯ. ಹೀಗೆ ಆರೋಗ್ಯಕರ ಆಹಾರ ಪದ್ಧತಿ, ಉತ್ತಮ ಜೀವನಶೈಲಿಯನ್ನು ಅನುಸರಿಸುವ ಮೂಲಕ ಯಕೃತ್ತನ್ನು ದೀರ್ಘಕಾಲದವರೆಗೆ ಆರೋಗ್ಯವಾಗಿಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL Black Ticket: ಐಪಿಎಲ್ ಬ್ಲ್ಯಾಕ್ ಟಿಕೆಟ್ ಮಾರಾಟ ದಂಧೆ, ಡಿಎನ್‌ಎ ಸಂಸ್ಥೆಗೆ ಸಿಸಿಬಿ ಶಾಕ್! – Kannada News | Bengaluru IPL Ticket Racket: DNA Organization got Notice as CCB Uncovers Black Market Link

ಐಪಿಎಲ್ ಬ್ಲ್ಯಾಕ್ ಟಿಕೆಟ್ ಮಾರಾಟ ದಂಧೆ, ಡಿಎನ್‌ಎ ಸಂಸ್ಥೆಗೆ ಸಿಸಿಬಿ ಶಾಕ್!
Image Credit source: dnanetworks.com

ಬೆಂಗಳೂರು, ಏಪ್ರಿಲ್ 19: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ (IPL) ಟಿಕೆಟ್‌ಗಳನ್ನು ಹೆಚ್ಚಿನ ಬೆಲೆಗೆ ಬ್ಲಾಕ್​ನಲ್ಲಿ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಸದಸ್ಯನೋರ್ವ ಈ ದಂಧೆಯ ಹಿಂದಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆ ಆರ್​ಸಿಬಿ ಟಿಕೆಟ್ ನಿರ್ವಹಣೆ ಮಾಡುವ ಡಿಎನ್ಎ (DNA) ಸಂಸ್ಥೆಗೆ ಸಂಕಷ್ಟ ಬಂದೊದಗಿದೆ. ಕೆಎಸ್​ಸಿಎ (KSCA) ಸದಸ್ಯ ಗಣೇಶ್ ಹರಿಕೇಶ್ ವಿರುದ್ಧ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಸಿಸಿಬಿ ಪೊಲೀಸರು ಡಿಎನ್ಎ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದಾರೆ.

ಕ್ಯಾಂಟೀನ್‌ ಕೆಲಸಗಾರನ ಮೂಲಕವೇ ದಂಧೆ

ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ಚಂದ್ರಶೇಖರ್ ಎಂಬ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದಾಗ ವಿಚಾರಣೆ ವೇಳೆ ಆತ ಕೆಎಸ್​ಸಿಎ ಸದಸ್ಯ ಹರಿಕೇಶ್ ಹೆಸರನ್ನು ಬಹಿರಂಗಪಡಿಸಿದ್ದ. ಚಂದ್ರಶೇಖರ್ ಚಿನ್ನಸ್ವಾಮಿ ಸ್ಟೇಡಿಯಂನ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಾಗಿದ್ದು, ಅವನ ಮೂಲಕವೇ ಟಿಕೆಟ್‌ಗಳನ್ನು ಬ್ಲ್ಯಾಕ್​ನಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿ ಹೊರಬಂದಿದೆ.

ಈ ಬಗ್ಗೆ ತನಿಖೆ ನಡೆಸಿದಾಗ ಗಣೇಶ್ ಹರಿಕೇಶ್ ಸ್ವಸ್ತಿಕ್ ಹೆವಿ ಇಂಜಿನಿಯರಿಂಗ್ ಆ್ಯಂಡ್ ಇಂಡಸ್ಟ್ರಿಯಲ್ ಆಟೋಮೋಟಿವ್ ಹಾಗೂ ಧರಣಿ ಕಂಪ್ಯೂಟರ್ಸ್ ಎಂಬ ಎರಡು ಖಾಸಗಿ ಕಂಪನಿಗಳ ಹೆಸರಿನಲ್ಲಿ ಆನ್‌ಲೈನ್ ಮೂಲಕ ದೊಡ್ಡ ಪ್ರಮಾಣದಲ್ಲಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದನು ಎಂಬುದು ತಿಳಿದುಬಂದಿದೆ. ಈ ಕಂಪನಿಗಳ ಮೂಲಕ ಟಿಕೆಟ್‌ಗಳನ್ನು ಪಡೆಯುತ್ತಿದ್ದ ಗಣೇಶ್, ಬಳಿಕ ಅವುಗಳನ್ನು ಚಂದ್ರಶೇಖರ್​ನಿಂದ ಹೆಚ್ಚಿನ ಬೆಲೆಗೆ ಮಾರಾಟ ಮಾಡಿಸುತ್ತಿದ್ದ ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ KSCA ಸದಸ್ಯನಿಂದಲೇ IPL ಬ್ಲಾಕ್ ಟಿಕೆಟ್ ದಂಧೆ! ಚಿನ್ನಸ್ವಾಮಿ ಸ್ಟೇಡಿಯಂ ಹೋಟೆಲ್ ಕ್ಯಾಪ್ಟನ್ ಜೊತೆ ಸೇರಿ ಕೃತ್ಯ

ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್ವರ್ಕ್ಸ್ ಸಂಸ್ಥೆಯ ಮೇಲೂ ಅನುಮಾನ

ಪ್ರಾಥಮಿಕ ತನಿಖೆಯಲ್ಲಿ ಆರ್‌ಸಿಬಿಯ ಮೊದಲ ಪಂದ್ಯದಲ್ಲಿ 81 ಟಿಕೆಟ್‌ಗಳನ್ನು ಬ್ಲ್ಯಾಕ್​ನಲ್ಲಿ ಮಾರಾಟ ಮಾಡಿರುವುದು ಪತ್ತೆಯಾಗಿದೆ. ನಂತರದ ಪಂದ್ಯಕ್ಕಾಗಿ 100 ಟಿಕೆಟ್‌ಗಳನ್ನು ಸಿದ್ಧಪಡಿಸಿಕೊಂಡಿದ್ದರು. ಒಟ್ಟಾರೆ ಸುಮಾರು 17 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ 181 ಟಿಕೆಟ್‌ಗಳನ್ನು ಖರೀದಿಸಲಾಗಿದ್ದು, ಅವುಗಳ ಪೈಕಿ ಕನಿಷ್ಠ 100 ಟಿಕೆಟ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದರ ನಡುವೆ ಟಿಕೆಟ್ ನಿರ್ವಹಣೆಯನ್ನು ಹೊತ್ತಿರುವ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್ವರ್ಕ್ಸ್ ಸಂಸ್ಥೆಯ ಮೇಲೂ ಅನುಮಾನ ವ್ಯಕ್ತವಾಗಿದೆ. ಟಿಕೆಟ್‌ಗಳು ಆರೋಪಿಗಳ ಕೈಗೆ ಹೇಗೆ ತಲುಪಿದವು ಎಂಬುದನ್ನು ತಿಳಿದುಕೊಳ್ಳಲು ಹೊಟ ಸಿಸಿಬಿ ಪೊಲೀಸರು ಡಿಎನ್‌ಎ ಸಂಸ್ಥೆಗೆ ನೋಟಿಸ್ ನೀಡಿದ್ದಾರೆ. ಎರಡು ಖಾಸಗಿ ಕಂಪನಿಗಳಿಗೆ ಟಿಕೆಟ್ ನೀಡಿದ ಹಿನ್ನೆಲೆ, ಅವುಗಳ ಮ್ಯಾನೇಜಿಂಗ್ ಡೈರೆಕ್ಟರ್‌ಗಳ ಮೇಲೂ ಅನುಮಾನ ವ್ಯಕ್ತವಾಗಿದ್ದು, ಪ್ರಕರಣದ ಮೂಲವನ್ನು ಪತ್ತೆಹಚ್ಚಲು ಪೊಲೀಸರು ಮುಂದುವರಿದ ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯೋಗೇಶ್​​ ಗೌಡ ಹತ್ಯೆ ಪ್ರಕರಣವನ್ನು ಸಿಬಿಐ ಭೇದಿಸಿದ್ದೇಗೆ? ಇಲ್ಲಿವೆ ಕೆಲ ಇಂಟರೆಸ್ಟಿಂಗ್​​ ವಿಚಾರಗಳು – Kannada News | How CBI Cracked the Yogesh Gowda Murder Case: Key Twists and Revelations

ಯೋಗೇಶ್​​ ಗೌಡ ಹತ್ಯೆ ಪ್ರಕರಣವನ್ನು ಸಿಬಿಐ ಭೇದಿಸಿದ್ದೇಗೆ?

ಬೆಂಗಳೂರು, ಏಪ್ರಿಲ್​​ 19: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗಿಶ್ ಗೌಡ ಕೊಲೆ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳ ತನಿಖೆ ವೇಳೆ ಹಲವು ವಿಚಾರಗಳು ಬೆಳಕಿಗೆ ಬಂದಿತ್ತೆಂಬ ವಿಚಾರವೀಗ ಬಯಲಾಗಿದೆ. ಎ1 ಬಸವರಾಜ್ ಮುತ್ತಗಿ ಜೊತೆಗೆ ಮಾತಾಡಲೆಂದು ವಿನಯ್ ಕುಲಕರ್ಣಿ ಪತ್ನಿ ಹೆಸರಿನಲ್ಲಿ ಸಿಮ್ ಖರೀದಿ ಮಾಡಿದ್ದರು. ಅದೇ ಸಿಮ್ ಕಾರ್ಡ್ ಬಳಸಿ 94 ಬಾರಿ ಮುತ್ತಗಿ ಜೊತೆಗೆ ವಿನಯ್​ ಮಾತಾಡಿದ್ದರು. ಅಲ್ಲದೇ ಯೋಗಿಶ್ ಗೌಡ ಕೊಲೆಯಾದ ನಂತರ ಆರು ತಿಂಗಳಲ್ಲಿ ಬಸವರಾಜ್ ಮುತ್ತಗಿಯನ್ನು 57 ಬಾರಿ ವಿನಯ್ ಕುಲಕರ್ಣಿ ಸಂಪರ್ಕಿಸಿದ್ದರು. ಈ ಪೈಕಿ ಆರು ಬಾರಿ ಇಬ್ಬರೂ ಇಂದೇ ಪ್ರದೇಶದಲ್ಲಿ ಇರೋದು ತನಿಖೆ ವೇಳೆ ಗೊತ್ತಾಗಿದೆ ಎನ್ನಲಾಗಿದೆ

ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇ ಯೋಗಿಶ್ ಗೌಡ ಕೊಲೆಗೆ ಕಾರಣವಾಗಿದ್ದು, ಬಸವರಾಜ್ ಮುತ್ತಗಿ ಮತ್ತು ಆತನ ಬಾವ ಚಂದ್ರಶೇಖರ ಇಂಡಿಗೆ ವಿನಯ್ ಕುಲಕರ್ಣಿ ಸುಪಾರಿ ನೀಡಿದ್ದರು. ಆದರೆ ಬಸವರಾಜ್ ಮುತ್ತಗಿ ಮಾಫಿ ಸಾಕ್ಷ್ಯ ಆಗಿದ್ದೇ ಈಗ ವಿನಯ್ ಕುಲಕರ್ಣಿಗೆ ಕಂಟಕವಾಗಿದೆ. ಯೋಗಿಶ್ ಗೌಡ ಹತ್ಯೆ ವೇಳೆ ಎ7 ರಿಂದ ಎ14ರ ವರೆಗಿನ ಆರೋಪಿಗಳು ಆಯುಧ ಬಳಸಿ ಕೊಲೆ ಮಾಡಿರುವ ದೃಶ್ಯ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿತ್ತು. ಆದರೆ ಪೊಲೀಸರು ಎ1 ರಿಂದ ಎ6 ಆರೋಪಿಗಳನ್ನು ಬಂಧಿಸಿ, ಆಯುಧಗಳು ವಶಕ್ಕೆ ಅಂತಾ ಉಲ್ಲೇಖಿಸಿದ್ದರು. ಬಸವರಾಜ್ ಮುತ್ತಗಿ ಮತ್ತು ಯೋಗಿಶ್ ಗೌಡ ನಡುವಿನ ಭೂ ವ್ಯಾಜ್ಯ ಕೊಲೆ ಗೆ ಕಾರಣ ಎಂದು ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದರು. ಆದ್ರೆ ಧಾರವಾಡ ಪೊಲೀಸರ ತನಿಖೆಯ ತಪ್ಪುಗಳನ್ನು ಸಿಬಿಐ ಎಳೆ ಏಳೆಯಾಗಿ ಬಿಚ್ಚಿಟ್ಟಿದೆ.

ಇದನ್ನೂ ಓದಿ: ಯೋಗೀಶ್ ಗೌಡ ಕೊಲೆ ಕೇಸ್; ಶಾಸಕ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ

ಜೈಲಲ್ಲಿ ಚಿಂತೆಗೀಡಾದ ವಿನಯ್​​ ಕುಲಕರ್ಣಿ

ಕೊಲೆ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವಿನಯ್ ಕುಲಕರ್ಣಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿನಲ್ಲಿ ಒಬ್ಬರೇ ಕುಳಿತು ಚಿಂತೆಗೀಡಾಗಿದ್ದಾರೆ. ರಾತ್ರಿ ಇಡೀ ನಿದ್ದರೆ ಮಾಡದೆ ಸಿಬ್ಬಂದಿ ನೀಡಿದ ಊಟವನ್ನೂ ಮಾಡದೆ ಅವರು ಹಾಗೇ ಇದ್ದಾರೆ ಎಂಬುದು ಗೊತ್ತಾಗಿದೆ. ಜೈಲಿನ ಮೆನುವಿನಂತೆ ಮುದ್ದೆ, ಚಪಾತಿ, ಅನ್ನ ಸಾಂಬರ್ ನೀಡಲಾಗಿತ್ತು. ಸಹಕೈದಿಗಳು ಹೇಳಿದರೂ ಸಹ ಊಟ ಮಾಡದ ವಿನಯ್ ಕುಲಕರ್ಣಿ, ಏಕಾಂಗಿಯಾಗಿ ಕುಳಿತು ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ. ಇನ್ನು ಸೆರೆವಾಸದಲ್ಲಿರುವ ವಿನಯ್ ಕುಲಕರ್ಣಿ, ವಿನಯ್ ಸೇರಿ 17 ಅಪರಾಧಿಗಳಿಗೆ ಜೈಲು ಸಿಬ್ಬಂದಿ ಸಜಾಕೈದಿ ನಂಬರ್ ನೀಡಿದ್ದಾರೆ. ವಿನಯ್ ಕುಲಕರ್ಣಿ ಸಜಾಬಂಧಿ ನಂಬರ್ 16110 ಆಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಳ್ಳಂ ಬೆಳಿಗ್ಗೆ ರೌಡಿಶೀಟರ್‌ಗಳ ಬೆವರಿಳಿಸಿದ ಕೆಜಿಎಫ್​​ ಪೊಲೀಸರು: ದಾಳಿ ವೇಳೆ ಪತ್ತೆಯಾದ ಮಾರಾಕಾಸ್ತ್ರಗಳ ಜಪ್ತಿ – Kannada News | Kolar KGF Police Raid Rowdy Sheeters Homes, Seize Weapons

ಕೋಲಾರ, ಏಪ್ರಿಲ್​​ 19: ಜಿಲ್ಲೆಯ ಕೆಜಿಎಫ್ ಮತ್ತು ಬಂಗಾರಪೇಟೆ ಪಟ್ಟಣದ ವ್ಯಾಪ್ತಿಯಲ್ಲಿನ ರೌಡಿಶೀಟರ್‌ಗಳ ಮನೆಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಕೆಜಿಎಫ್ ಎಸ್‌ಪಿ ಶಿವಾಂಶು ರಜಪೂತ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಕೆಜಿಎಫ್ ನಗರದ ಆಂಡರ್ಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸೂಸೆಪಾಳ್ಯ, ಸೊರೆಕಾಯಿ ಪೇಟೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಒಟ್ಟು 10 ರೌಡಿಗಳ ಮನೆಗಳನ್ನು ಪರಿಶೀಲಿಸಲಾಗಿದೆ. ದಾಳಿ ನಡೆಸಲು ಐದು ಸಬ್-ಇನ್ಸ್‌ಪೆಕ್ಟರ್‌ಗಳು ಮತ್ತು ಐದು ಇನ್ಸ್‌ಪೆಕ್ಟರ್‌ಗಳ ತಂಡವನ್ನು ರಚಿಸಲಾಗಿತ್ತು. ಪ್ರತಿಯೊಬ್ಬ ರೌಡಿಶೀಟರ್‌ಗಳಿಗೂ ಒಂದೊಂದು ತಂಡವನ್ನು ನಿಯೋಜಿಸಲಾಗಿತ್ತು. ಈ ಶೋಧ ಕಾರ್ಯಾಚರಣೆ ವೇಳೆ ಇಬ್ಬರು ರೌಡಿಗಳ ಮನೆಗಳಲ್ಲಿ ಲಾಂಗ್ ಮತ್ತು ಮಚ್ಚು ಸೇರಿದಂತೆ ಹಲವು ಮಾರಕಾಸ್ತ್ರಗಳು ಪತ್ತೆಯಾಗಿದ್ದು, ಅವನ್ನು ವಶಕ್ಕೆ ಪಡೆಯಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಧುರಂಧರ್ 2’ ಬಾಕ್ಸ್ ಆಫೀಸ್ ಅಬ್ಬರಕ್ಕೆ ಬ್ರೇಕ್ ಹಾಕಿದ ಅಕ್ಷಯ್ ಕುಮಾರ್ ಸಿನಿಮಾ ‘ಭೂತ್ ಬಂಗ್ಲ’ – Kannada News | Ranveer Singh Dhurandhar 2 Box Office Collection slows down after Bhooth Bangla release

ಬಾಲಿವುಡ್‌ನ ಸ್ಟಾರ್ ನಟ ರಣವೀರ್ ಸಿಂಗ್ ಮತ್ತು ನಿರ್ದೇಶಕ ಆದಿತ್ಯ ಧರ್ ಕಾಂಬಿನೇಷನ್‌ನ ಸ್ಪೈ ಥ್ರಿಲ್ಲರ್ ‘ಧುರಂಧರ್ 2’ ಬಾಕ್ಸ್ ಆಫೀಸ್‌ನಲ್ಲಿ ಈಗಾಗಲೇ ಇತಿಹಾಸ ಬರೆದಿದೆ. ಆದರೆ ಬಿಡುಗಡೆಯಾದ ಮೊದಲ ನಾಲ್ಕು ವಾರಗಳ ಕಾಲ ಅಡೆತಡೆಯಿಲ್ಲದೆ ಸಾಗಿದ್ದ ಈ ಚಿತ್ರದ ಓಟಕ್ಕೆ ಈಗ ಅಕ್ಷಯ್ ಕುಮಾರ್ ಅವರ ‘ಭೂತ್ ಬಂಗ್ಲ’ (Bhooth Bangla) ಸಿನಿಮಾ ಅಡ್ಡಿಯಾದಂತೆ ತೋರುತ್ತಿದೆ. ಹೌದು, ‘ಭೂತ್ ಬಂಗ್ಲ’ ಬಿಡುಗಡೆ ಆದ ಬಳಿಕ ‘ಧುರಂಧರ್ 2’ (Dhurandhar 2) ಸಿನಿಮಾದ ಕಲೆಕ್ಷನ್ ಗಣನೀಯವಾಗಿ ಕುಸಿದಿದೆ.

ಭಾರತೀಯ ಚಿತ್ರರಂಗದ ದೈತ್ಯ ಸಿನಿಮಾಗಳ ದಾಖಲೆಗಳನ್ನು ‘ಧುರಂಧರ್ 2’ ಸಿನಿಮಾ ಮುರಿದಿದೆ. Sacnilk ವರದಿಯ ಪ್ರಕಾರ, ಈ ಸಿನಿಮಾ ಭಾರತದಲ್ಲಿ ಇದುವರೆಗೆ ದಾಖಲೆಯ 1110.47 ಕೋಟಿ ರೂಪಾಯಿ (Net) ಕಲೆಕ್ಷನ್ ಮಾಡಿದೆ. ಈ ಮೂಲಕ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂಪಾಯಿ ಗಳಿಸಿದ ಮೊದಲ ಬಾಲಿವುಡ್ ಸಿನಿಮಾ ಎಂಬ ಕೀರ್ತಿಗೆ ಇದು ಪಾತ್ರವಾಗಿದೆ.

ಕೆಜಿಎಫ್: ಚಾಪ್ಟರ್ 2 (859.70 ಕೋಟಿ), ಆರ್​ಆರ್​ಆರ್ ( 782.20 ಕೋಟಿ), ಕಲ್ಕಿ 2898 ಎಡಿ (646 ಕೋಟಿ) ಜೊತೆಗೆ ‘ಜವಾನ್’, ‘ಪಠಾಣ್’ ಮತ್ತು ‘ಅನಿಮಲ್’ ಚಿತ್ರಗಳ ದಾಖಲೆಗಳನ್ನೂ ‘ಧುರಂಧರ್ 2’ ಅಳಿಸಿಹಾಕಿದೆ. ಇಷ್ಟೆಲ್ಲ ಸಿನಿಮಾಗಳನ್ನು ಹಿಂದಿಕ್ಕಿ ಮುಂದೆ ಸಾಗುತ್ತಿದ್ದ ಈ ಸಿನಿಮಾದ ನಾಗಾಲೋಟಕ್ಕೆ ಈಗ ಬ್ರೇಕ್ ಬಿದ್ದಿದೆ.

ಕಳೆದ ನಾಲ್ಕು ವಾರಗಳಿಂದ ಅಬ್ಬರಿಸುತ್ತಿದ್ದ ‘ಧುರಂಧರ್ 2’ ವೇಗ ಈಗ ಕುಂಠಿತವಾಗಿದೆ. ಅಕ್ಷಯ್ ಕುಮಾರ್ ಮತ್ತು ಟಬು ನಟನೆಯ ಹಾರರ್-ಕಾಮಿಡಿ ‘ಭೂತ್ ಬಂಗ್ಲ’ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಶನಿವಾರದಂದು ‘ಭೂತ್ ಬಂಗ್ಲ’ 15 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದರೆ, ‘ಧುರಂಧರ್ 2’ ಕೇವಲ 4.65 ಕೋಟಿ ರೂಪಾಯಿ ಸಂಗ್ರಹಿಸಿದೆ. ಇದು ಶುಕ್ರವಾರದ ಕಲೆಕ್ಷನ್‌ಗಿಂತ (2.70 ಕೋಟಿ) ಸ್ವಲ್ಪ ಸುಧಾರಣೆಯಾಗಿದ್ದರೂ, ನಿರೀಕ್ಷಿತ ಮಟ್ಟದಲ್ಲಿಲ್ಲ.

ಇದನ್ನೂ ಓದಿ: ‘ಧುರಂಧರ್ 2’ ಸಿನಿಮಾದಲ್ಲಿ ಅದು ಸರಿಯಿಲ್ಲ: ಮೊದಲ ಬಾರಿ ಟೀಕಿಸಿದ ರಾಮ್ ಗೋಪಾಲ್ ವರ್ಮಾ

ಒಂದು ವೇಳೆ ‘ಭೂತ್ ಬಂಗ್ಲ’ ಸಿನಿಮಾಗೆ ಜನಬೆಂಬಲ ಮುಂದುವರಿದರೆ ಈ ಚಿತ್ರ ಹೆಚ್ಚು ಪರದೆಗಳನ್ನು ಪಡೆದುಕೊಳ್ಳಲಿದೆ. ಇದರಿಂದಾಗಿ ‘ಧುರಂಧರ್ 2’ ಕಲೆಕ್ಷನ್ ಇನ್ನಷ್ಟು ಕುಸಿಯುವ ಸಾಧ್ಯತೆ ಇರುತ್ತದೆ. ‘ಧುರಂಧರ್ 2’ ಸಿನಿಮಾದಲ್ಲಿ ರಣವೀರ್ ಸಿಂಗ್ ಜೊತೆ ಆರ್. ಮಾಧವನ್, ಸಂಜಯ್ ದತ್, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು… ಸೋಲಿನ ಬಳಿಕ ರಜತ್ ಪಾಟಿದಾರ್ ಖಡಕ್ ಸೂಚನೆ – Kannada News | Rajat patidar post match interview after RCB Vs DC Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 27ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ ಕೇವಲ ಒಂದು ಎಸೆತ ಬಾಕಿ ಇರುವಂತೆ ಸೋಲೊಪ್ಪಿಕೊಂಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡವು 20 ಓವರ್​ಗಳಲ್ಲಿ 175 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 19.5 ಓವರ್​ಗಳಲ್ಲಿ 178 ರನ್​ಗಳಿಸಿ ರೋಚಕ ಜಯ ಸಾಧಿಸಿದೆ. ಈ ಮೂಲಕ ಆರ್​ಸಿಬಿ ಪಡೆ ತವರಿನಲ್ಲಿ 6 ವಿಕೆಟ್​ಗಳಿಂದ ಸೋಲೊಪ್ಪಿಕೊಂಡಿದೆ.

ಈ ಸೋಲಿನ ಬಳಿಕ ಮಾತನಾಡಿದ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್, ತಂಡದ ಬ್ಯಾಟಿಂಗ್ ವೈಫಲ್ಯವೇ ಈ ಸೋಲಿಗೆ ಪ್ರಮುಖ ಕಾರಣ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಖಂಡಿತವಾಗಿಯೂ ಇದು ಗೆಲ್ಲುವಂತಹ ಪಂದ್ಯವಾಗಿತ್ತು. ಆದರೆ ನಾವು ಬ್ಯಾಟಿಂಗ್‌ನಲ್ಲಿ 15-20 ರನ್ ಕಡಿಮೆ ಗಳಿಸಿದೆವು ಎಂದು ನನಗನ್ನಿಸುತ್ತದೆ. ಆರಂಭದಲ್ಲಿ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಆದರೆ 12-13ನೇ ಓವರ್ ನಂತರ ದಿಢೀರ್ ವಿಕೆಟ್ ಕಳೆದುಕೊಂಡಿದ್ದು ನಮಗೆ ಹಿನ್ನಡೆಯಾಯಿತು.

ಮುಂದಿನ ಪಂದ್ಯಕ್ಕೂ ಮುನ್ನ ಈ ತಪ್ಪುಗಳನ್ನು ನಾವು ಸರಿಪಡಿಸಿಕೊಳ್ಳಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಬೇಗನೆ ವಿಕೆಟ್ ಕಳೆದುಕೊಳ್ಳುತ್ತಿರುವುದು ಆರ್​ಸಿಬಿ ಪಾಲಿಗೆ ಹಿನ್ನಡೆಯಾಗುತ್ತಿದೆ. ಹೀಗಾಗಿ ನಮ್ಮ ಮಿಡಲ್ ಆರ್ಡರ್ ಬ್ಯಾಟರ್​ಗಳು ಶೀಘ್ರವೇ ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.

ನಾವು ಉತ್ತಮ ಆರಂಭ ಪಡೆದರೂ, ಮಧ್ಯೆದಲ್ಲಿ ಒಂದೆಡರಡು ವಿಕೆಟ್​ಗಳನ್ನು ಬೇಗನೆ ಕಳೆದುಕೊಂಡರೂ ಅದು ತಂಡಕ್ಕೆ ಹಿನ್ನಡೆಯನ್ನು ಉಂಟು ಮಾಡುತ್ತದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೂಡ ಆಗಿದ್ದು ಅದೇ. ಸಾಲ್ಟ್, ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೂ ನಾವು ಮಧ್ಯಮ ಕ್ರಮಾಂಕದಲ್ಲಿ ಎಡವಿದೆವು. ಹೀಗಾಗಿ ಈ ಸೋಲಿಗೆ ಬ್ಯಾಟರ್​ಗಳು ಕಾರಣ ಎಂದು ರಜತ್ ಪಾಟಿದಾರ್ ಅಭಿಪ್ರಾಯಪಟ್ಟಿದ್ದಾರೆ.

ಈ ಸೋಲಿನ ಹೊರತಾಗಿಯೂ ನಾವು ಪಂದ್ಯವನ್ನು ಕೊನೆಯ ಓವರ್​ ತನಕ ಕೊಂಡೊಯ್ದಿರುವುದು ಸಕಾರಾತ್ಮಕ ಅಂಶ. ಬೌಲರ್​ಗಳು ತಮ್ಮ ಕಾರ್ಯತೆಯ ಬಗ್ಗೆ ಸ್ಪಷ್ಟತೆ ಹೊಂದಿದ್ದರು. ಇದು ದೀರ್ಘಾವಧಿಯ ಟೂರ್ನಿ. ಹೀಗಾಗಿ ನಾವು ಎಲ್ಲಿ ತಪ್ಪುಗಳನ್ನು ಮಾಡಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲು ಅವಕಾಶವಿದೆ. ಆ ತಪ್ಪುಗಳನ್ನು  ಸರಿಪಡಿಸಿ ಮುಂದಿನ ಪಂದ್ಯಗಳಲ್ಲಿ ಕಂಬ್ಯಾಕ್ ಮಾಡುತ್ತೇವೆ ಎಂಬ ವಿಶ್ವಾಸವಿದೆ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.

ಸಂಕ್ಷಿಪ್ತ ಸ್ಕೋರ್ ಕಾರ್ಡ್:

  • RCB: 175/8 (20 ಓವರ್) – ಫಿಲ್ ಸಾಲ್ಟ್ 63, ಅಕ್ಷರ್ ಪಟೇಲ್ 2/18.
  • DC: 179/4 (19.5 ಓವರ್) – ಟ್ರಿಸ್ಟನ್ ಸ್ಟಬ್ಸ್ 60*, ಭುವನೇಶ್ವರ್ ಕುಮಾರ್ 3/26.
  •  ಫಲಿತಾಂಶ: ಡೆಲ್ಲಿ ಕ್ಯಾಪಿಟಲ್ಸ್‌ಗೆ 6 ವಿಕೆಟ್ ಜಯ.

ಇದನ್ನೂ ಓದಿ: IPL 2026: ಹೀಗೊಂದು ‘ಅವಮಾನಕರ’ ದಾಖಲೆ ಬರೆದ RCB

ಈ ಸೋಲಿನ ಹೊರತಾಗಿಯೂ ಆರ್​ಸಿಬಿ ತನ್ನ ಮುಂದಿನ ಪಂದ್ಯಗಳಲ್ಲಿ ಪುಟಿದೇಳುವ ವಿಶ್ವಾಸದಲ್ಲಿದೆ. ಅದರಂತೆ ಏಪ್ರಿಲ್ 24 ರಂದು ನಡೆಯಲಿರುವ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆ ಗೆಲುವಿನ ಲಯಕ್ಕೆ ಮರಳಲಿದೆಯಾ ಕಾದು ನೋಡಬೇಕಿದೆ.

Source link