Headlines

ಗುಜರಾತ್​ನಲ್ಲಿ ಬೈಕ್ ಓವರ್ ಟೇಕ್ ಮಾಡುವ ವಿಚಾರಕ್ಕೆ ಜಗಳ, ಕೊಲೆ, ಕೋಮುಗಲಭೆ – Kannada News | Minor Road Dispute Turns Deadly in Dhandhuka, Triggers Arson and Arrests

ಅಹಮದಾಬಾದ್, ಏಪ್ರಿಲ್ 19: ರಸ್ತೆಯಲ್ಲಿ ಸಂಚರಿಸುವಾಗ ಸಾಮಾನ್ಯ ಎನಿಸುವ ‘ಓವರ್‌ಟೇಕಿಂಗ್’ ವಿಚಾರವು ಧಂಧುಕಾ ಪಟ್ಟಣದಲ್ಲಿ ರಕ್ತಪಾತಕ್ಕೆ ನಾಂದಿ ಹಾಡಿತು. 35 ವರ್ಷದ ಧರ್ಮೇಶ್ ಎಂಬ ಯುವಕ ಮತ್ತು ಇಬ್ಬರು ಹಿಂದೂಯೇತರ ಯುವಕರ ನಡುವೆ ಬೈಕ್ ಓವರ್‌ಟೇಕ್ ಮಾಡುವ ವಿಚಾರದಲ್ಲಿ ಮಾತಿನ ಚಕಮಕಿ ನಡೆಯಿತು. ಆದರೆ ಈ ಕ್ಷುಲ್ಲಕ ಕಾರಣವೇ ಅಂತಿಮವಾಗಿ ಕೊಲೆ(Murder)ಯಲ್ಲಿ ಅಂತ್ಯವಾಯಿತು. ಬಳಿಕ ಕೋಮುಗಲಭೆಗೆ ಕಾರಣವಾಯಿತು. ವಾಗ್ವಾದ, ಹತ್ಯೆ ಮತ್ತು ಆಕ್ರೋಶ ಘಟನೆಯ ವೇಳೆ ಧರ್ಮೇಶ್ ಮತ್ತು ಎದುರಾಳಿಗಳ ನಡುವಿನ ವಾಗ್ವಾದ ವಿಕೋಪಕ್ಕೆ ಹೋಗಿ, ಧರ್ಮೇಶ್‌ಗೆ…

Read More

Gold Rates: ಹತ್ತು ಗ್ರಾಮ್ ಚಿನ್ನದ ಬೆಲೆ 10 ದಿನದಲ್ಲಿ 6,100 ರೂ ಏರಿಕೆ – Kannada News | Gold Price Today on 19th April 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಏಪ್ರಿಲ್ 19: ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold Rates) ತೂಗುಯ್ಯಾಲೆಯಂತೆ ಆಡುತ್ತಿವೆ. ಈ ವಾರಾಂತ್ಯದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 145 ರೂ ಏರಿಕೆಯಾಗಿದೆ. ಬೆಳ್ಳಿ ಬೆಲೆ 10 ರೂ ಹಿಗ್ಗಿದೆ. ಕಳೆದ ಎರಡು ವಾರಗಳಿಂದ ಕಣ್ಣಾಮುಚ್ಚಾಳೆ ಆಡುತ್ತಿದ್ದರೂ ಹತ್ತು ದಿನದಲ್ಲಿ ಇವೆರಡರ ಬೆಲೆಗಳು ಸಖತ್ತಾಗಿ ಏರಿವೆ. ಚಿನ್ನದ ಬೆಲೆ ಭಾರತದಲ್ಲಿ 10 ದಿನದಲ್ಲಿ ಸುಮಾರು 600ಕ್ಕೂ ಅಧಿಕ ಮೊತ್ತದಷ್ಟು ಹೆಚ್ಚಳ ಕಂಡಿದೆ. ಬೆಳ್ಳಿ ಬೆಲೆ 25 ರೂಗಳಷ್ಟು ದುಬಾರಿಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ…

Read More

ಮಮತೆಯ ಮುಂದೆ ಮಣಿದ ವೈಕಲ್ಯ, ಬಾಯಿಯಿಂದ ಬಟ್ಟೆ ಹೊಲಿಯುತ್ತಾ ಮಕ್ಕಳ ಬಾಳು ಬೆಳಗಿದ ಮಹಿಳೆಯ ಅಪೂರ್ವ ಸಾಹಸ – Kannada News | Defying Limits: 81 Year Old Woman Without Limbs Raises Three Children

ಬೈಯಿಮ್, ಏಪ್ರಿಲ್ 19: ಜೀವನದಲ್ಲಿ ಸಣ್ಣಪುಟ್ಟ ಕಷ್ಟ ಬಂದಾಗ ನಾವು ಕುಗ್ಗಿಹೋಗುತ್ತೇವೆ. ಆದರೆ ಚೀನಾದ ಗನ್ಸು ಪ್ರಾಂತ್ಯದ ವಾಂಗ್ ಯುಶಿ ಎಂಬ 81 ವರ್ಷದ ವೃದ್ಧೆಯ ಕಥೆ ಕೇಳಿದರೆ, ನಮ್ಮ ಸಮಸ್ಯೆಗಳೆಲ್ಲವೂ ಅತ್ಯಂತ ಚಿಕ್ಕವು ಎನಿಸುತ್ತವೆ. ಹುಟ್ಟುತ್ತಲೇ ಕೈಕಾಲುಗಳಿಲ್ಲದಿದ್ದರೂ, ಶೂನ್ಯದಿಂದ ಬದುಕು ಕಟ್ಟಿಕೊಂಡ ಈಕೆ ಇಂದು ಚೀನಾದಲ್ಲಿ “ಅತ್ಯಂತ ಬಲಿಷ್ಠ ತಾಯಿ” ಎಂದು ಕರೆಸಿಕೊಳ್ಳುತ್ತಿದ್ದಾರೆ. ಹೆಸರಿಲ್ಲದ 27 ವರ್ಷಗಳು ಮತ್ತು ಅತಂತ್ರ ಬಾಲ್ಯ ವಾಂಗ್ ಅವರ ಬದುಕು ಹೋರಾಟದಿಂದಲೇ ಆರಂಭವಾಯಿತು. ಜನ್ಮಜಾತ ವೈಕಲ್ಯದಿಂದ ಹುಟ್ಟಿದ ಈಕೆಗೆ ಇಪ್ಪತ್ತರ…

Read More

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಶೀರ್ಷಿಕೆ ಗೀತೆ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ – Kannada News | CM Siddaramaiah released Sarkari Nyaya Bele Angadi Kannada movie title song ft Ragini Dwivedi

ಶೀರ್ಷಿಕೆಯ ಕಾರಣದಿಂದಲೇ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ (Sarkari Nyaya Bele Angadi) ಸಿನಿಮಾ ಕೌತುಕ ಸೃಷ್ಟಿ ಮಾಡಿದೆ. ಈ ಸಿನಿಮಾದಲ್ಲಿ ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಸಾಮಾಜಿಕ ಕಥಾಹಂದರವನ್ನು ಇಟ್ಟುಕೊಂಡು ತಯಾರಾಗಿರುವ ಈ ಚಿತ್ರ ಈಗ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿವೆ. ಇತ್ತೀಚೆಗೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದ ಟೈಟಲ್ ಸಾಂಗ್ ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಶೀರ್ಷಿಕೆ…

Read More

Kumkumarchan: ಮನೆಯಲ್ಲಿ ಕುಂಕುಮಾರ್ಚನೆ ಮಾಡಬಹುದೇ? ವಾಸ್ತು ತಜ್ಞರ ಸಲಹೆ ಇಲ್ಲಿದೆ – Kannada News | Kumkumarchana at Home: Understanding the Ritual and Its Benefits

ಮನೆಯಲ್ಲಿ ಕುಂಕುಮಾರ್ಚನೆImage Credit source: Pinterest ಸಾಮಾನ್ಯವಾಗಿ ಕುಂಕುಮಾರ್ಚನೆ ಎಂದರೆ ದೇವಾಲಯಗಳಲ್ಲಿ ಅರ್ಚಕರು ದೇವಿಯ ಪಾದಗಳಿಗೆ, ಮೇರು ಚಕ್ರಕ್ಕೆ ಅಥವಾ ವೀಳೆದೆಲೆಯ ಮೇಲೆ ಕುಂಕುಮವನ್ನು ಅರ್ಪಿಸುವುದನ್ನು ನಾವು ನೋಡುತ್ತೇವೆ. ಈ ಸಂದರ್ಭದಲ್ಲಿ, ಮನೆಯಲ್ಲಿ ಕುಂಕುಮಾರ್ಚನೆಯನ್ನು ಮಾಡಬಹುದೇ ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು ಹೇಳುವಂತೆ, ಮನೆಯಲ್ಲಿ ಕುಂಕುಮಾರ್ಚನೆಯನ್ನು ಖಂಡಿತವಾಗಿಯೂ ಮಾಡಬಹುದು. ಇದಕ್ಕಾಗಿ ಅರಿಶಿನದಿಂದ ತಯಾರಿಸಿದ…

Read More

ಸಿಲಿಂಡರ್ ಸ್ಫೋಟಕ್ಕೆ ಹೊತ್ತಿ ಉರಿದ ಮನೆ; 3 ಲಕ್ಷ ನಗದು ಸೇರಿ ಚಿನ್ನಾಭರಣ ಭಸ್ಮ! – Kannada News | Chitradurga: Cylinder blast burns down house, Rs 3 Lakh cash, Gold jewellery gone

ಚಿತ್ರದುರ್ಗ, ಏಪ್ರಿಲ್ 19: ಜಿಲ್ಲೆಯಲ್ಲಿ ಸಿಲಿಂಡರ್ ಸ್ಫೋಟದಿಂದ ಗುಡಿಸಲು ಮನೆ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಪ್ಪಗೊಂಡನಹಳ್ಳಿ ಗ್ರಾಮದಲ್ಲಿ ಚಿತ್ರಲಿಂಗಪ್ಪ ಅವರಿಗೆ ಸೇರಿದ ಮನೆ ಬೆಂಕಿಗೆ ಆಹುತಿಯಾಗಿದೆ. ಸಿಲಿಂಡರ್ ಸ್ಫೋಟದಿಂದ ಉಂಟಾದ ಬೆಂಕಿಯಲ್ಲಿ ಮನೆಯಲ್ಲಿದ್ದ ಸುಮಾರು 3 ಲಕ್ಷ ರೂಪಾಯಿ ನಗದು, ಚಿನ್ನಾಭರಣ ಹಾಗೂ ದವಸ ಧಾನ್ಯಗಳು ಸುಟ್ಟು ಭಸ್ಮವಾಗಿವೆ. ಅಗ್ನಿಶಾಮಕ ದಳವು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದು, ಘಟನೆ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ….

Read More

ಹೊಸಪೇಟೆಯ ಡಾಣಾಪುರ ಬಳಿ ಸರಣಿ ಅಪಘಾತ: ಬೈಕ್, ಕಾರು, ಬಸ್​ಗೆ ಡಿಕ್ಕಿ ಹೊಡೆದು ಲಾರಿ ಪಲ್ಟಿ; ನಾಲ್ವರು ಸಾವು? – Kannada News | 4 Feared Dead in Serial Accident Near Hosapete in Vijayanagara District

ಪಲ್ಟಿಯಾಗಿರುವ ಲಾರಿImage Credit source: Tv9 Kannada ವಿಜಯನಗರ, ಏಪ್ರಿಲ್​​ 19: ಹೊಸಪೇಟೆ ತಾಲೂಕಿನ ಡಾಣಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸರಣಿ ಅಪಘಾತ ಸಂಭವಿಸಿದೆ. ಬೈಕ್, ಕಾರು, ಬಸ್​ಗೆ ಲಾರಿ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ನಾಲ್ವರು ಮೃತಪಟ್ಟಿರುವ ಶಂಕೆ ಇದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮೇಲೆ ಲಾರಿ ಪಲ್ಟಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್​​…

Read More

ಸೂರ್ಯನಿಗೆ ಗೇಟ್ ಪಾಸ್ ಖಚಿತ: ಇವರಂತೆ ಟೀಮ್ ಇಂಡಿಯಾದ ಮುಂದಿನ ನಾಯಕ..! – Kannada News | Shreyas Iyer: The Frontrunner for India’s T20I Captaincy?

ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆಯಾಗುವುದು ಖಚಿತವಾಗಿದೆ. ಅದು ಕೂಡ ಪ್ರಸ್ತುತ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ತಲೆದಂಡದೊಂದಿಗೆ. ಅಂದರೆ ಟೀಮ್ ಇಂಡಿಯಾದ ನಾಯಕನ ಸ್ಥಾನದಿಂದ ಸೂರ್ಯಕುಮಾರ್ ಯಾದವ್ ಅವರನ್ನು ಕೆಳಗಿಳಿಸುವುದು ಬಹುತೇಕ ಖಚಿತವಾಗಿದೆ. ಪ್ರಸ್ತುತ ಮಾಹಿತಿ ಪ್ರಕಾರ, ಭಾರತ ಟಿ20 ತಂಡದಿಂದ ಸೂರ್ಯಕುಮಾರ್ ಯಾದವ್ ಅವರನ್ನು ಕೈ ಬಿಡಲಿದ್ದಾರೆ. ಅವರ ಬದಲಿಗೆ ಮಧ್ಯಮ ಕ್ರಮಾಂಕಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಲು ಬಿಸಿಸಿಐ ಆಯ್ಕೆ ಸಮಿತಿ…

Read More

ಪತ್ನಿಯಿಂದ ತಪ್ಪಿಸಿಕೊಂಡು ಗಂಡ ಓಡಿದ್ದು, ನಾಯಿಯಿಂದ ತಪ್ಪಿಸಿಕೊಂಡು ಬೆಕ್ಕು , ಪೊಲೀಸರಿಂದ ತಪ್ಪಿಸಿಕೊಂಡು ಕಳ್ಳ ಓಡಿದ್ದು ಒಂದೇ ಟೈಂ, ಒಂದೇ ಜಾಗ – Kannada News | Triple Chase Chaos: Husband, Cat, and Thief All Flee at Once in Viral Clip

ಬ್ರೆಜಿಲ್, ಏಪ್ರಿಲ್ 19: ಸಾಮಾನ್ಯವಾಗಿ ಸಿಸಿಟಿವಿ (CCTV) ಕ್ಯಾಮೆರಾಗಳು ಅಪರಾಧ ಅಥವಾ ಅಪಘಾತಗಳನ್ನು ಸೆರೆಹಿಡಿಯುತ್ತವೆ. ಆದರೆ ಬ್ರೆಜಿಲ್‌ನ ಈ ಸಿಸಿಟಿವಿ ಕ್ಯಾಮೆರಾ ಮಾತ್ರ ಇಡೀ ಜಗತ್ತು ನಗುವಂತಹ ಒಂದು ವಿಚಿತ್ರ ಮತ್ತು ಹಾಸ್ಯಮಯ ಕ್ಷಣವನ್ನು ಸೆರೆಹಿಡಿದಿದೆ.ಬೀದಿಯು ಶಾಂತವಾಗಿತ್ತು, ಆದರೆ ಅಚಾನಕ್ಕಾಗಿ ಅಲ್ಲಿ ಮೂರು ಗುಂಪುಗಳು ಓಡಲು ಆರಂಭಿಸಿದವು. ವಿಶೇಷವೆಂದರೆ ಇವರಾರೂ ಒಬ್ಬರಿಗೊಬ್ಬರು ಸಂಬಂಧಪಟ್ಟವರಲ್ಲ. ಒಬ್ಬ ಪತಿ ತನ್ನ ಹೆಂಡತಿಯಿಂದ ತಪ್ಪಿಸಿಕೊಳ್ಳಲು ಪ್ರಾಣಭಯದಿಂದ ಓಡುತ್ತಿದ್ದಾನೆ. ಅವಳು ಏನೋ ಕಾರಣಕ್ಕೆ ಸಿಟ್ಟಾಗಿ ಆತನನ್ನು ಬೆನ್ನಟ್ಟುತ್ತಿದ್ದಾಳೆ. ಅದೇ ಕ್ಷಣದಲ್ಲಿ ಪಕ್ಕದ ಗಲ್ಲಿಯಿಂದ…

Read More

ಲಕ್ಷ ಲಕ್ಷ ಖರ್ಚು ಮಾಡಿ ಬೆಳೆದ ಗುಲಾಬಿ ಈರುಳ್ಳಿಯನ್ನು ಕೇಳೋರೆ ಇಲ್ಲ! – Kannada News | Rose Onion Crisis: Karnataka Farmers Suffer Huge Losses Amidst Export Halt

ಚಿಕ್ಕಬಳ್ಳಾಪುರ, ಏಪ್ರಿಲ್ 19: ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಪ್ರದೇಶಗಳಲ್ಲಿ ರೋಸ್ ಆನಿಯನ್ (ಗುಲಾಬಿ ಈರುಳ್ಳಿ) ಎಂಬ ವಿಶೇಷ ಈರುಳ್ಳಿ ತಳಿಯನ್ನು ಬೆಳೆಯಲಾಗುತ್ತದೆ. ತನ್ನ ವಿಶಿಷ್ಟವಾದ ಗಾಢ ಕೆಂಪು ಬಣ್ಣ, ತೀಕ್ಷ್ಣವಾದ ಖಾರ ಹಾಗೂ ದೀರ್ಘಕಾಲದ ಬಾಳಿಕೆಗೆ (Shelf life) ಇದು ಜಗತ್ತಿನಾದ್ಯಂತ ಹೆಸರುವಾಸಿಯಾಗಿದೆ. ಹೀಗೆ ಬೆಳೆದ ಗುಲಾಬಿ ಈರುಳ್ಳಿಯನ್ನು ಹೆಚ್ಚಾಗಿ ಮಲೇಶಿಯಾ, ಥೈಲ್ಯಾಂಡ್, ಸಿಂಗಾಪೂರ್ ಸೇರಿ ಹಲವು ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಆದರೆ ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಚಿಕ್ಕಬಳ್ಳಾಪುರ ಜಿಲ್ಲೆಯ ರೋಸ್ ಆನಿಯನ್…

Read More