ಒಂದು ಗಂಟೆಯ ಮ್ಯಾಜಿಕ್, ವಿದ್ಯಾರ್ಥಿನಿಯರ ಬಳಿ ಅಂಗಡಿ ನೋಡಿಕೊಳ್ಳಿ ಎಂದು ಹೇಳಿ ಹೋದ ಮಾಲೀಕ, ಆಮೇಲೇನಾಯ್ತು? – Kannada News | Trust on Display: Vendor Leaves Shop in Hands of Two Students
ಹನೋಯ್, ಏಪ್ರಿಲ್ 19: ವಿಯೆಟ್ನಾಂನ ಒಂದು ಜನನಿಬಿಡ ರಸ್ತೆಯಲ್ಲಿ ಆ ಬೀದಿ ವ್ಯಾಪಾರಿ ಪ್ರತಿದಿನ ಬೆವರು ಸುರಿಸಿ ಸಣ್ಣಪುಟ್ಟ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ. ಅದು ಅವನ ಬದುಕಿನ ಏಕೈಕ ಆಧಾರವಾಗಿತ್ತು. ಆದರೆ ಒಂದು ದಿನ ಅವನಿಗೆ ಅನಿರೀಕ್ಷಿತವಾಗಿ ಒಂದು ತುರ್ತು ಕೆಲಸ ಎದುರಾಯಿತು. ಅಂಗಡಿಯನ್ನು ಹಾಗೆಯೇ ಬಿಟ್ಟು ಹೋಗುವಂತಿರಲಿಲ್ಲ, ಮುಚ್ಚಿದರೆ ಅಂದಿನ ಸಂಪಾದನೆಗೆ ಪೆಟ್ಟು ಬೀಳುತ್ತಿತ್ತು. ಅಂಗಡಿಯ ಹತ್ತಿರವೇ ನಿಂತಿದ್ದ ಇಬ್ಬರು ಪ್ರೌಢಶಾಲಾ ವಿದ್ಯಾರ್ಥಿನಿಯರನ್ನು ಕಂಡ ಆ ವ್ಯಾಪಾರಿ, “ಮಕ್ಕಳೇ, ಒಂದು ತುರ್ತು ಪರಿಸ್ಥಿತಿ ಇದೆ, ದಯವಿಟ್ಟು…