ಅಯೋಧ್ಯೆಯ ರಾಮನ ದರ್ಶನಕ್ಕೆ 450 ಕಿ.ಮೀ ಸ್ಕೇಟಿಂಗ್ ಮಾಡಿದ 9 ವರ್ಷದ ಬಾಲಕಿ – Kannada News | Viral Video 9 Year Old Vanshika Yadav Skates 450 Km To Ayodhya For Ram Lalla Darshan

ಅಯೋಧ್ಯೆ, ಜನವರಿ 10: ಉತ್ತರ ಪ್ರದೇಶದಲ್ಲಿ ತೀವ್ರವಾದ ಚಳಿಯಿದೆ. ಈ ಚಳಿಯಲ್ಲೂ ಫಿರೋಜಾಬಾದ್​​ನಿಂದ 450 ಕಿ.ಮೀ ದೂರದವರೆಗೆ ಸ್ಕೇಟಿಂಗ್ ಮಾಡಿ 9 ವರ್ಷದ ಬಾಲಕಿ ವಂಶಿಕಾ ಯಾದವ್ ಎಂಬಾಕೆ ಅಯೋಧ್ಯೆಯ (Ayodhya) ರಾಮ ಲಲ್ಲಾನ ದರ್ಶನ ಪಡೆದಿದ್ದಾಳೆ. ಈ ಮೂಲಕ 9 ವರ್ಷದ ವಂಶಿಕಾ ಭಗವಾನ್ ರಾಮನ ಮೇಲಿನ ತನ್ನ ಭಕ್ತಿಯನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾಳೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಜನರು ಈ ಬಾಲಕಿಯ ಭಕ್ತಿಯನ್ನು ಮೆಚ್ಚುತ್ತಿದ್ದಾರೆ. ವಂಶಿಕಾ…

Read More

Somnath Swabhiman Parv: ಸೋಮನಾಥ ದೇವಾಲಯದಲ್ಲಿ ನಡೆಯುವ 72 ಗಂಟೆಗಳ ಓಂ ಪಠಣದಲ್ಲಿ ಪ್ರಧಾನಿ ಮೋದಿ ಭಾಗಿ – Kannada News | PM Narendra Modi attends 72 hour long Aum chanting at Somnath Temple

ಸೋಮನಾಥ, ಜನವರಿ 10: ಗುಜರಾತಿನ ಸೋಮನಾಥ ದೇವಾಲಯದಲ್ಲಿ (Somnath Temple) ಜನವರಿ 11ರವರೆಗೆ ಸೋಮನಾಥ ಸ್ವಾಭಿಮಾನ ಪರ್ವ (Somnath Swabhiman Parv) ನಡೆಯುತ್ತಿದೆ. ಇದರ ಭಾಗವಾಗಿ ಇಂದು ನಡೆಯಲಿರುವ 72 ಗಂಟೆಗಳ ಕಾಲ ‘ಓಂ’ ಪಠಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದಾರೆ. ಇಂದು ಸಂಜೆ ತಮ್ಮ 3 ದಿನಗಳ ಭೇಟಿಗೆ ಗುಜರಾತಿಗೆ ಆಗಮಿಸಿದ ಪ್ರಧಾನಿ ಮೋದಿ ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ ಆಗಸದಲ್ಲಿ ಡ್ರೋನ್ ಚಿತ್ತಾರಗಳನ್ನು ವೀಕ್ಷಿಸಿದರು. ಬಳಿಕ, ಓಂ ಪಠಣದಲ್ಲಿ ತೊಡಗಿಸಿಕೊಂಡು ತಾವು ಕೂಡ…

Read More

8ನೇ ತರಗತಿಯ ವಿದ್ಯಾರ್ಥಿ ಕಣ್ಣಿಗೆ ಬಿದ್ದ ನಿಧಿಯ ಪಾತ್ರೆ: ಈ ಚಿನ್ನ ಯಾರಿಗೆ ಸೇರಲಿದೆ ಗೊತ್ತಾ? – Kannada News | Ancient Gold Unearthed in Lakkundi: Prajwal Rittis Integrity Praised in Historic Find

ಗದಗ, ಜ.10: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ರಾಜರ ಕಾಲದ ಅಪಾರ ಚಿನ್ನಾಭರಣಗಳ ನಿಧಿ ಪತ್ತೆಯಾಗಿದ್ದು, ಇದು ಇಡೀ ರಾಜ್ಯದ ಗಮನ ಸೆಳೆದಿದೆ. ಲಕ್ಕುಂಡಿ ಗ್ರಾಮದ ವಾರ್ಡ್ ನಂಬರ್ ನಾಲ್ಕರಲ್ಲಿರುವ ಗಂಗವ್ವ ಬಸವರಾಜ ರಿತ್ತಿ ಅವರ ಮನೆ ಜಾಗದಲ್ಲಿ ಅಡಿಪಾಯ ಅಗೆಯುವ ಸಂದರ್ಭದಲ್ಲಿ, 8ನೇ ತರಗತಿ ವಿದ್ಯಾರ್ಥಿ ಪ್ರಜ್ವಲ್ ರಿತ್ತಿ ಎಂಬುವರಿಗೆ ಒಂದು ತಾಮ್ರದ ಚಂಬಿನಲ್ಲಿ ಚಿನ್ನಾಭರಣಗಳು ಸಿಕ್ಕಿವೆ. ಪ್ರಾಥಮಿಕ ಮಾಹಿತಿ ಪ್ರಕಾರ, ಪ್ರಜ್ವಲ್​ಗೆ ತಾಮ್ರದ ಮಡಿಕೆಯಲ್ಲಿ ನಿಧಿ ಸಿಕ್ಕಿದೆ ಎಂಬ ಮಾಹಿತಿ ಮಧ್ಯಾಹ್ನ 2:30 ರಿಂದ…

Read More

ಪ್ರೀತಿಸುವಂತೆ ಕಾಟ: ಜೆಡಿಎಸ್‌ ಸ್ಥಳೀಯ ನಾಯಕಿಯ ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ – Kannada News | Young Girl Dies by Suicide After Alleged Harassment by Son of JDS Local Woman Leader

ಕಾರವಾರ, ಜನವರಿ 10: ಜೆಡಿಎಸ್‌ (JDS) ಸ್ಥಳೀಯ ನಾಯಕಿಯ ಪುತ್ರನ ಕಿರುಕುಳಕ್ಕೆ ಮನನೊಂದು ಯುವತಿ ಆತ್ಮಹತ್ಯೆ (Suicide) ಮಾಡಿಕೊಂಡಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾ ಗ್ರಾಮದಲ್ಲಿ ನಡೆದಿದೆ. ರಿಶಾಲ್‌ ಡಿಸೋಜಾ‌(20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಚೈತ್ರಾ ಕೋಠಾರಕರ ಪುತ್ರ ಚಿರಾಗ್​​ ಪ್ರೀತಿಸುವಂತೆ ಪೀಡಿಸುತ್ತಿದ್ದ ಆರೋಪ ಕೇಳಿಬಂದಿದೆ. ಸದ್ಯ ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರೀತಿಸುವಂತೆ ಕಾಟ ಚೈತ್ರಾ ಕೋಠಾರಕರ ಪುತ್ರ ಚಿರಾಗ್​​, ಕದ್ರಾ ಗ್ರಾಮದ ಕೆಪಿಸಿಎಲ್ ಕಾಲೋನಿ ನಿವಾಸಿ ರಿಶಾಲ್‌ ಡಿಸೋಜಾ‌ಗೆ…

Read More

ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗಕ್ಕೂ ಬಂತು ಕುತ್ತು: ಜನ ಓಡಾಡುವ ದಾರಿಯಲ್ಲಿ ಕಾಂಕ್ರೀಟ್ ಬ್ಲಾಕ್​​ಗಳ ಹಾವಳಿ – Kannada News | Bagmane Tech Park Pedestrian Peril: Bengaluru’s Footpaths Blocked by Concrete

ಬೆಂಗಳೂರು, ಜ.10: ಬೆಂಗಳೂರು (Bengaluru) ಸಿಲಿಕಾನ್​​ ಸಿಟಿ, ಇಲ್ಲಿ ಎಲ್ಲವೂ ಪರ್ಫೆಕ್ಟ್ ಆಗಿರಬೇಕು. ಆದರೆ ಇತ್ತೀಚಿಗೆ ಇಲ್ಲಿ ಯಾವುದೂ ಸರಿ ಇಲ್ಲ. ದಿನಕ್ಕೊಂದು ಸಮಸ್ಯೆಗಳ ದೂರು ಬರುತ್ತಿರುತ್ತದೆ. ಒಂದು ಕಡೆ ರಸ್ತೆ ಸಮಸ್ಯೆ, ಇನ್ನೊಂದು ಕಡೆ ಟ್ರಾಫಿಕ್​​​​, ಇದೀಗ ಇದರ ಜತೆಗೆ ಪಾದಚಾರಿಗಳ ಮಾರ್ಗ ಕೂಡ ಸರಿ ಇಲ್ಲ. ಪಾದಚಾರಿಗಳ ಮಾರ್ಗದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಎಕ್ಸ್​​ನಲ್ಲಿ ಈ ವಿಚಾರವಾಗಿ ಪೋಸ್ಟ್​​ವೊಂದನ್ನು ಮಹಿಳೆಯೊಬ್ಬರು ಹಂಚಿಕೊಂಡಿದ್ದಾರೆ. ಮೊದಲೇ ಈ ಪಾದಚಾರಿ ಮಾರ್ಗದಲ್ಲಿ ಓಡಾಡಲು…

Read More

Somnath Swabhiman Parv: ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ – Kannada News | PM Narendra Modi receives a rousing welcome after he arrives at Somnath Temple

ಸೋಮನಾಥ, ಜನವರಿ 10: ಗುಜರಾತಿನ ಐತಿಹಾಸಿಕ ಸೋಮನಾಥ ದೇವಾಲಯದಲ್ಲಿ (Somnath Temple) ನಡೆಯುತ್ತಿರುವ ಪ್ರಮುಖ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮವಾದ ಸೋಮನಾಥ ಸ್ವಾಭಿಮಾನ್ ಪರ್ವದಲ್ಲಿ (Somnath Swabhiman Parv) ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಗುಜರಾತ್‌ನ ಸೋಮನಾಥಕ್ಕೆ ಆಗಮಿಸಿದರು. ಈ ವೇಳೆ ದಾರಿಯುದ್ದಕ್ಕೂ ಸಾರ್ವಜನಿಕರು ಕೇಸರಿ ಬಾವುಟಗಳನ್ನು ಹಿಡಿದು, “ಮೋದಿ, ಮೋದಿ” ಎಂದು ಘೋಷಣೆ ಕೂಗುತ್ತಾ ಅದ್ದೂರಿಯಾಗಿ ಸ್ವಾಗತ ಕೋರಿದರು. ಜನವರಿ 8ರಿಂದ 11ರವರೆಗೆ ಆಯೋಜಿಸಲಾಗುತ್ತಿರುವ ಸೋಮನಾಥ ಸ್ವಾಭಿಮಾನ ಪರ್ವದಲ್ಲಿ ಭಾಗವಹಿಸಲು…

Read More

Somnath Temple: ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ – Kannada News | Somnath Swabhiman Parv PM Modi offers prayers at Somnath temple

ಸೋಮನಾಥ, ಜನವರಿ 10: ಸೋಮನಾಥ ಸ್ವಾಭಿಮಾನ ಪರ್ವದಲ್ಲಿ (Somnath Swabhiman Parv) ಭಾಗವಹಿಸಲು ಗುಜರಾತಿನ ಸೋಮನಾಥಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ರಾತ್ರಿ ನಡೆಯಲಿರುವ ಶೌರ್ಯ ಪರ್ವ ಯಾತ್ರೆಗೂ ಮುನ್ನ ಸೋಮನಾಥ ದೇವಾಲಯಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಗುಜರಾತ್‌ನ ಸೋಮನಾಥ ದೇವಾಲಯದಲ್ಲಿ 1000 ವರ್ಷಗಳ ನಂಬಿಕೆಯನ್ನು ಮತ್ತು ಭಾರತದ ಇತಿಹಾಸವನ್ನು ಪವಿತ್ರ ದೇವಾಲಯದಲ್ಲಿ ಆಚರಿಸಲಾಗುತ್ತಿದೆ. ನಾಳೆ (ಭಾನುವಾರ) ಸೋಮನಾಥ ಸ್ವಾಭಿಮಾನ ಯಾತ್ರೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ಸೋಮನಾಥಕ್ಕೆ…

Read More

ಅಯೋಧ್ಯೆಯ ರಾಮ ಮಂದಿರದಲ್ಲಿ ನಮಾಜ್ ಮಾಡಲು ಯತ್ನಿಸಿದ ವ್ಯಕ್ತಿ ಯಾರು? – Kannada News | Muslim Man held for trying to offer Namaz at Ayodhya Ram Temple

ಅಯೋಧ್ಯೆ, ಜನವರಿ 10: ಅಯೋಧ್ಯೆಯ ರಾಮ ಮಂದಿರದಲ್ಲಿ (Ram Mandir) ನಮಾಜ್ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. 55 ವರ್ಷದ ವ್ಯಕ್ತಿಯನ್ನು ಅಬ್ದುಲ್ ಅಹ್ಮದ್ ಶೇಖ್ ಎಂದು ಗುರುತಿಸಲಾಗಿದೆ. ಅವರು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ನಿವಾಸಿ. ಆ ವ್ಯಕ್ತಿ ಶುಕ್ರವಾರ ರಾಮ ಮಂದಿರಕ್ಕೆ ಪ್ರವೇಶಿಸಿದ್ದಾರೆ ಎನ್ನಲಾಗಿದೆ. ಆವರಣವನ್ನು ಪ್ರವೇಶಿಸಿದ ನಂತರ, ಸೀತಾ ರಸೋಯಿ ಬಳಿ ಕುಳಿತು ನಮಾಜ್ ಮಾಡಲು ಸಿದ್ಧರಾದಾಗ ಅದನ್ನು ಕಂಡ ಭದ್ರತಾ ಪಡೆಯ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಆ ವ್ಯಕ್ತಿಯನ್ನು…

Read More

ಸಿಸಿಎಲ್ 2026: ವೇಳಾಪಟ್ಟಿ ಬಿಡುಗಡೆ, ಸುದೀಪ್ ಆಡುತ್ತಾರಾ?

ಭಾರತದಲ್ಲಿ ಕ್ರಿಕೆಟ್ (Cricket) ಮತ್ತು ಸಿನಿಮಾ ಅತಿ ದೊಡ್ಡ ಎಂಟರ್ಟೈನರ್​​ಗಳು. ಅತಿ ದೊಡ್ಡ ಉದ್ಯಮಗಳೂ ಸಹ ಹೌದು. ಕ್ರಿಕೆಟ್ಟಿಗರು ಸಿನಿಮಾ ರಂಗದವರನ್ನು ಮದುವೆ ಆಗುವುದು, ಸಿನಿಮಾಗಳಲ್ಲಿ ನಟಿಸುವುದು ಸಾಮಾನ್ಯ. ಸಿನಿಮಾ ರಂಗದವರು ತಮ್ಮ ಸಿನಿಮಾ ಪ್ರಚಾರಕ್ಕೆ ಕ್ರಿಕೆಟ್ಟಿಗರನ್ನು ಅವಲಂಬಿಸುವುದು ಸಾಮಾನ್ಯ. ಸಿನಿಮಾದವರೇ ಕ್ರಿಕೆಟ್ಟಿಗರಾಗಿಬಿಟ್ಟರೆ? ಇದೇ ಆಲೋಚನೆಯಿಂದ ಹುಟ್ಟಿದ್ದೆ ಸಿಸಿಎಲ್. ಸೆಲೆಬ್ರಿಟಿ ಕ್ರಿಕೆಟ್ ಲೀಗ್, ಭಾರತದಲ್ಲಿ ನಡೆಯುವ ಪ್ರಮುಖ ಕ್ರಿಕೆಟ್ ಲೀಗ್​​ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದು, 11 ಸೀಸನ್ ಮುಗಿಸಿ ಇದೀಗ 12ನೇ ಸೀಸನ್​​ಗೆ ಕಾಲಿಟ್ಟಿದೆ. ಭಾರತದ ಬೇರೆ ಬೇರೆ…

Read More

ಕನ್ನಡಪರ ಮಾತನಾಡಿ ಕೋಗಿಲು ಆಗು, ಇಲ್ಲದಿದ್ರೆ ಕಾಗೆ ಆಗ್ತೀಯಾ: ವೇಣುಗೋಪಾಲ್​​ಗೆ ಅಶೋಕ್ ಟಾಂಗ್ – Kannada News | R. Ashoka Sparks on KC Venugopal Over Malayalam Language Bill

ಬೆಂಗಳೂರು, ಜನವರಿ 10: ಕನ್ನಡಪರ ಮಾತನಾಡಿ ಕೋಗಿಲು ಆಗು, ಇಲ್ಲದಿದ್ದರೆ ಕಾಗೆ ಆಗ್ತೀಯಾ ಎಂದು ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್​​ಗೆ ವಿಪಕ್ಷ ನಾಯಕ ಆರ್​.ಅಶೋಕ್ ಟಾಂಗ್ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆ.ಸಿ.ವೇಣುಗೋಪಾಲ್ ಕೋಗಿಲು ಕೂಗಿದ ತಕ್ಷಣ ಇಲ್ಲಿ ಎಲ್ಲ ದಾಖಲೆಗಳು ಚೇಂಜ್ ಆದವು. ಆದರೆ, ಕೇರಳದಲ್ಲಿ ಕನ್ನಡ ಬಂದಾಗ ಆ ಕೋಗಿಲೆ ಕೂಗಲೇ ಇಲ್ಲ. ದೆಹಲಿಯಲ್ಲೇ ಸ್ಟ್ರಕ್ ಆಗೋಗಿದೆ, ಇವಾಗ ಕೂಗಪ್ಪ. ನೀನು ಕಾಗೆನೋ ಕೋಗಿಲೆನೋ ಅಂತಾ ಗೊತ್ತಾಗಬೇಕು. ಕನ್ನಡಿಗರಿಗೆ ದ್ರೋಹ ಎಸಗಿದರೆ ನೀನು ಕಾಗೇನೆ…

Read More