Category Archives: Blog

Your blog category

ಪತ್ನಿಯ ಅಕ್ರಮ ಸಂಬಂಧ: “ಪವಿತ್ರಾ ನನಗೇ ಬೇಕು” ಎಂಬ ಹಠಕ್ಕೆ ಕಿರಾತಕ ಪ್ರಿಯತಮ ಮಾಡಿದ್ದೇನು ನೋಡಿ? – Kannada News | Bangalore Rural Crime: Hoskote Man Murdered for Illicit Affair, Lover Arrested

ಹೊಸಕೋಟೆ, ಏ.18: ಅನೈತಿಕ ಸಂಬಂಧದ ಹಪಾಹಪಿಗೆ ಬಿದ್ದ ಪ್ರಿಯಕರನೊಬ್ಬ, ತನ್ನ ಪ್ರಿಯತಮೆಯ ಗಂಡನನ್ನೇ ದಾರಿ ತಪ್ಪಿಸಲು ಹೊಂಚು ಹಾಕಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಗ್ರಾಮಾಂತರದ ಹೊಸಕೋಟೆ ತಾಲೂಕಿನ ದಬ್ಬಗುಂಟನಹಳ್ಳಿಯಲ್ಲಿ ನಡೆದಿದೆ. ಮದುವೆಯಾದ ಮಹಿಳೆಯ ಮೇಲಿನ ವ್ಯಾಮೋಹಕ್ಕೆ ಬಿದ್ದ ಕಿರಾತಕ, ಈಗ ಕಂಬಿ ಎಣಿಸುತ್ತಿದ್ದಾನೆ.

ದಬ್ಬಗುಂಟನಹಳ್ಳಿ ಗ್ರಾಮದ ಶಿವಶಂಕರ್ ಎಂಬ ಯುವಕ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡಿಕೊಂಡು ತಾಯಿ, ಪತ್ನಿ ಪವಿತ್ರಾ ಮತ್ತು ಮಕ್ಕಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದ. ಕಳೆದ ಏಪ್ರಿಲ್ 13ರ ಸೋಮವಾರ ರಾತ್ರಿ, ಕೆಲಸ ಮುಗಿಸಿ ಬಂದಿದ್ದ ಶಿವಶಂಕರ್ ಸೆಕೆಯಿಂದಾಗಿ ಗಾಳಿ ಸೇವಿಸಲು ಮತ್ತು ಫೋನ್‌ನಲ್ಲಿ ಮಾತನಾಡಲು ಮನೆಯಿಂದ ಹೊರಗೆ ಬಂದಿದ್ದ. ಇದನ್ನೇ ಕಾಯುತ್ತಿದ್ದ ಹಂತಕ ಅನಿಲ್ ಕುಮಾರ್, ಕತ್ತಲಲ್ಲಿ ಶಿವಶಂಕರ್ ಮೇಲೆ ಮಚ್ಚಿನಿಂದ ಮಾರಣಾಂತಿಕ ದಾಳಿ ನಡೆಸಿ ಪರಾರಿಯಾಗಿದ್ದ. ಮುಂಜಾನೆ ಶೌಚಾಲಯಕ್ಕೆ ಬಂದ ತಾಯಿ ಗೌರಮ್ಮನಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗನ ಶವ ಕಂಡು ಎದೆ ಒಡೆದಂತಾಗಿದೆ.

ಕೊಲೆಯಾದ ಶಿವಶಂಕರ್ ಯಾರ ತಂಟೆಗೂ ಹೋಗದ ವ್ಯಕ್ತಿಯಾಗಿದ್ದ ಕಾರಣ ಪೊಲೀಸರಿಗೆ ಆರಂಭದಲ್ಲಿ ಕೊಲೆಯ ಕಾರಣ ನಿಗೂಢವಾಗಿತ್ತು. ಆದರೆ ತನಿಖೆ ತೀವ್ರಗೊಳಿಸಿದಾಗ ಶಿವಶಂಕರ್ ಪತ್ನಿ ಪವಿತ್ರಾ ಮತ್ತು ಆರೋಪಿ ಅನಿಲ್ ಕುಮಾರ್ ನಡುವಿನ ಅನೈತಿಕ ಸಂಬಂಧ ಬಯಲಿಗೆ ಬಂದಿದೆ. ಕಳೆದ 4 ವರ್ಷಗಳಿಂದ ಇವರಿಬ್ಬರ ನಡುವೆ ಸ್ನೇಹವಿತ್ತು. ಆದರೆ ಇತ್ತೀಚೆಗೆ ಕುಟುಂಬದವರ ಬುದ್ಧಿವಾದದಿಂದ ಪವಿತ್ರಾ ಈ ಸಂಬಂಧವನ್ನು ಕಡಿದುಕೊಳ್ಳಲು ಮುಂದಾಗಿದ್ದರು. “ನಿನ್ನ ಪಾಡಿಗೆ ನೀನಿರು, ಮದುವೆಯಾಗು” ಎಂದು ಅನಿಲ್ನಿಗೆ ತಿಳಿಸಿದ್ದರು.

ಪವಿತ್ರಾಳನ್ನು ಹೇಗಾದರೂ ಮಾಡಿ ತನ್ನವಳನ್ನಾಗಿಸಿಕೊಳ್ಳಬೇಕು ಎಂಬ ಹಠಕ್ಕೆ ಬಿದ್ದ ಅನಿಲ್, ಆಕೆಯ ಗಂಡ ಅಡ್ಡಿಯಾಗುತ್ತಿದ್ದಾನೆ ಎಂದು ಭಾವಿಸಿದ. ಶಿವಶಂಕರ್‌ನನ್ನು ಮುಗಿಸಿದರೆ ಪವಿತ್ರಾ ತನ್ನ ಬಳಿ ಬರುತ್ತಾಳೆ ಎಂದು ಸಂಚು ರೂಪಿಸಿ, ರಾತ್ರಿ ವೇಳೆಯಲ್ಲಿ ಹೊಂಚು ಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಯಾವುದೂ ಅರಿಯದವನಂತೆ ತನ್ನ ಊರಿನಲ್ಲಿ ಓಡಾಡಿಕೊಂಡಿದ್ದ ಅನಿಲ್‌ನನ್ನು ಪೊಲೀಸರು ಎಡೆಮುರಿ ಕಟ್ಟಿದ್ದಾರೆ.

ಇದನ್ನೂ ಓದಿ: ಗೊಂಬೆಯಂತಿದ್ದ ಹೆಂಡತಿಯನ್ನು ಬಿಟ್ಟು ಪರಸ್ತ್ರೀ ಜತೆಗೆ ಸಂಬಂಧ: ಪೆನ್ ಡ್ರೈವ್​​ನಲ್ಲಿತ್ತು ಗಂಡನ ರಾಸಲೀಲೆ, ಕಿರುಕುಳದ ಸಾಕ್ಷಿ!

ಹೊಸಕೋಟೆ ಪೊಲೀಸರು ಮೃತ ಶಿವಶಂಕರ್ ಪತ್ನಿ ಪವಿತ್ರಾಳನ್ನೂ ವಿಚಾರಣೆಗೆ ಒಳಪಡಿಸಿದ್ದರು. ಆದರೆ ಕೊಲೆ ಸಂಚಿನಲ್ಲಿ ಆಕೆಯ ಪಾತ್ರವಿಲ್ಲದಿರುವುದು ಕಾಲ್ ಲಿಸ್ಟ್ ಮತ್ತು ಸಂದೇಶಗಳ ಪರಿಶೀಲನೆಯಿಂದ ದೃಢಪಟ್ಟಿದೆ. ಸದ್ಯಕ್ಕೆ ಪ್ರಮುಖ ಆರೋಪಿ ಅನಿಲ್ ಕುಮಾರ್‌ನನ್ನು ಜೈಲಿಗಟ್ಟಲಾಗಿದ್ದು, ಹೊಸಕೋಟೆ ಪೊಲೀಸರು ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB vs DC: ಜನ್ಮ ದಿನದಂದು ಆರ್​ಸಿಬಿ ವಿರುದ್ಧ ಅಬ್ಬರಿಸಿದ ಕೆಎಲ್ ರಾಹುಲ್ – Kannada News | KL Rahul’s Birthday Fifty Powers Delhi Capitals to Dramatic Win Over RCB at Chinnaswamy

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರೋಮಾಂಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಆರ್​​ಸಿಬಿ ನೀಡದ 175 ರನ್​ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಕನ್ನಡಿಗ ಕೆಎಲ್ ರಾಹುಲ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅರ್ಧಶತಕಗಳ ಇನ್ನಿಂಗ್ಸ್ ಆಡಿದರೆ, ಕೊನೆಯ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸಿ ಡೆಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟರು.

ವಾಸ್ತವವಾಗಿ ಆರ್​​ಸಿಬಿ ನೀಡಿದ ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಪ್ರಮುಖ 3 ವಿಕೆಟ್​ಗಳು ಮೊದಲ 3 ಓವರ್​ಗಳಲ್ಲಿಯೇ ಪತನಗೊಂಡವು. ಆಗ ಡೆಲ್ಲಿ ತಂಡದ ಮೊತ್ತ ಕೇವಲ 18 ರನ್​ಗಳಾಗಿದ್ದವು. ಅಲ್ಲಿಂದ ಟ್ರಿಸ್ಟಾನ್ ಸ್ಟಬ್ಸ್ ಜೊತೆಗೂಡಿ ತಂಡದ ಇನ್ನಿಂಗ್ಸ್ ಕಟ್ಟಿದ ಕೆಎಲ್ ರಾಹುಲ್ ತ್ವರಿತವಾಗಿ ರನ್ ಗಳಿಸಿದರು. ಇದರ ಜೊತೆಗೆ ರಾಹುಲ್ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಇದು ಅವರ ವೃತ್ತಿಜೀವನದ 42 ನೇ ಐಪಿಎಲ್ ಅರ್ಧಶತಕವಾಗಿದ್ದರೆ, ಆರ್‌ಸಿಬಿ ವಿರುದ್ಧ ಅವರ ಐದನೇ ಶತಕವೂ ಆಗಿತ್ತು. ಈ ಇನ್ನಿಂಗ್ಸ್ ಅವರ ಹುಟ್ಟುಹಬ್ಬದಂದು ಬಂದಿದ್ದು, ಅದರ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿತ್ತು. ಹಾಗೆಯೇ ಆರ್​ಸಿಬಿ ಸೋಲಿಗೆ ಪ್ರಮುಖ ಕಾರಣವೂ ಆಯಿತು.

Source link

SRH vs CSK IPL 2026 Live Score: ಸನ್​ರೈಸರ್ಸ್​ ಬ್ಯಾಟಿಂಗ್ ಆರಂಭ – Kannada News | Sunrisers Hyderabad vs Chennai Super Kings IPL 2026 Live Cricket Score SRH vs CSK Match on 18th April latest news in Kannada

ಇಂದು ಐಪಿಎಲ್ 2026 ರ 27 ನೇ ಪಂದ್ಯದಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯುತ್ತಿದೆ. ಪಂದ್ಯಕ್ಕೂ ಮೊದಲು, ಎರಡೂ ತಂಡಗಳ ನಾಯಕರ ನಡುವೆ ಟಾಸ್ ನಡೆಯಿತು, ಇದರಲ್ಲಿ ಸಿಎಸ್‌ಕೆ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು, ಅಂದರೆ ಈ ಪಂದ್ಯದಲ್ಲಿ ಎಸ್‌ಆರ್‌ಹೆಚ್ ಮೊದಲು ಬ್ಯಾಟಿಂಗ್ ಮಾಡಲಿದೆ. ಎಸ್‌ಆರ್‌ಹೆಚ್ ಮತ್ತು ಸಿಎಸ್‌ಕೆ ಎರಡೂ ಈ ಋತುವಿನ ಐದನೇ ಪಂದ್ಯವನ್ನು ಆಡುತ್ತಿವೆ. ಎರಡೂ ತಂಡಗಳು ಪಂದ್ಯವನ್ನು ಗೆಲ್ಲಲು ಪ್ರಯತ್ನಿಸುತ್ತವೆ.

Source link

ದೆಹಲಿಯಲ್ಲಿ ತಪ್ಪಿದ ದುರಂತ; ಆಟಿಕೆ ಕಾರು ಬಳಸಿ ದಾಳಿಗೆ ಸಂಚು ರೂಪಿಸಿದ್ದ 4 ಉಗ್ರರ ಬಂಧನ – Kannada News | 4 terror suspects arrested IED seized in Delhi who were planning to attacks using toy cars

ನವದೆಹಲಿ, ಏಪ್ರಿಲ್ 18: ದೆಹಲಿ ಪೊಲೀಸರು ಇಂದು ಮಹಾರಾಷ್ಟ್ರ, ಒಡಿಶಾ ಮತ್ತು ಬಿಹಾರದ ನಾಲ್ವರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಅವರು ದೆಹಲಿಯಲ್ಲಿ (Delhi) ಆಟಿಕೆ ಕಾರುಗಳನ್ನು ಬಳಸಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಯೋಜಿಸಿದ್ದರು. ಅದಕ್ಕಾಗಿ ಸೂಕ್ಷ್ಮ ಸ್ಥಳಗಳ ಪರಿಶೀಲನೆ ನಡೆಸಿದ್ದರು. ಎನ್‌ಕ್ರಿಪ್ಟ್ ಮಾಡಲಾದ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಇತರರನ್ನು ನೇಮಿಸಿಕೊಳ್ಳಲು ಪ್ರಯತ್ನಿಸಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಾರ್ಯಾಚರಣೆಯ ಸಮಯದಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಮತ್ತು ಸಂಬಂಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜನದಟ್ಟಣೆಯ ಸ್ಥಳಗಳನ್ನು ಗುರಿಯಾಗಿಸಲು ಐಇಡಿ ಅಳವಡಿಸಲಾದ ರಿಮೋಟ್-ಕಂಟ್ರೋಲ್ ಆಟಿಕೆ ಕಾರನ್ನು ಜೋಡಿಸುವ ಪ್ರಕ್ರಿಯೆಯಲ್ಲಿ ಇಬ್ಬರು ಆರೋಪಿಗಳು ಭಾಗಿಯಾಗಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.

ಇದನ್ನೂ ಓದಿ: ತಪ್ಪಿದ ಭಾರೀ ದುರಂತ; ದೆಹಲಿ ವಿಮಾನ ನಿಲ್ದಾಣದಲ್ಲಿ ಆಕಾಶ ವಿಮಾನಕ್ಕೆ ಡಿಕ್ಕಿ ಹೊಡೆದ ಸ್ಪೈಸ್‌ಜೆಟ್

ಈ ಕಾರ್ಯಾಚರಣೆಯಲ್ಲಿ ಮಹಾರಾಷ್ಟ್ರದ ಇಬ್ಬರು, ಒಡಿಶಾ ಮತ್ತು ಬಿಹಾರದಿಂದ ತಲಾ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳು ಎನ್‌ಕ್ರಿಪ್ಟ್ ಮಾಡಲಾದ ಸಾಮಾಜಿಕ ಮಾಧ್ಯಮ ಗುಂಪುಗಳಲ್ಲಿ ಸಕ್ರಿಯರಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಜಿಹಾದ್, ಉಗ್ರಗಾಮಿ ಸಿದ್ಧಾಂತ ಮತ್ತು ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ವಿಷಯವನ್ನು ಹಂಚಿಕೊಳ್ಳಲಾದ ಎನ್‌ಕ್ರಿಪ್ಟ್ ಮಾಡಲಾದ ಸಾಮಾಜಿಕ ಮಾಧ್ಯಮ ಗುಂಪುಗಳಲ್ಲಿ ಆರೋಪಿಗಳು ಸಕ್ರಿಯರಾಗಿದ್ದರು ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB vs DC: W,W,W.. ಒಂದೇ ಓವರ್​ನಲ್ಲಿ 2 ವಿಕೆಟ್ ಉರುಳಿಸಿದ ಭುವಿ

ಐಪಿಎಲ್ 2026 ರ 26 ನೇ ಪಂದ್ಯ ಆರ್​ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್​​ಸಿಬಿ 175 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್​ಗೆ ಆರ್​ಸಿಬಿ ವೇಗಿ ಭುವನೇಶ್ವರ್ ಕುಮಾರ್ ಮೊದಲ ಓವರ್​ನಲ್ಲೇ ಶಾಕ್ ನೀಡಿದರು. ಈ ಓವರ್​ನ ನಾಲ್ಕನೇ ಎಸೆತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಪಾತುಮ್ ನಿಸ್ಸಾಂಕ ಅವರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ಸಿಸ್ಸಾಂಕ ಕೇವಲ 1 ರನ್​ಗೆ ಸುಸ್ತಾದರು.

ಆ ನಂತರ ಇನ್ನಿಂಗ್ಸ್​ನ ಮೂರನೇ ಓವರ್ ಬೌಲ್ ಮಾಡಲು ಬಂದ ಭುವನೇಶ್ವರ್ ಈ ಓವರ್‌ನಲ್ಲಿ ಕರುಣ್ ನಾಯರ್ ಮತ್ತು ಸಮೀರ್ ರಿಜ್ವಿ ಅವರನ್ನು ಔಟ್ ಮಾಡಿದರು. ಓವರ್​ನ ಎರಡನೇ ಎಸೆತದಲ್ಲಿ ಸಾಲ್ಟ್ ಹಿಡಿದ ಅದ್ಭುತ ಕ್ಯಾಚ್​ಗೆ 5 ರನ್ ಬಾರಿಸಿದ್ದ ಕರುಣ್ ನಾಯರ್ ಬಲಿಯಾದರೆ, ಆ ನಂತರ ಬಂದ ಸಮೀರ್ ರಿಜ್ವಿ ಕೂಡ ಓವರ್​ನ ಐದನೇ ಎಸೆತದಲ್ಲಿ ವಿಕೆಟ್‌ಕೀಪರ್‌ ಜಿತೇಶ್ ಶರ್ಮಾ ಹಿಡಿದ ಸೂಪರ್​ಮ್ಯಾನ್ ಕ್ಯಾಚ್​ಗೆ ಕೇವಲ 2 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು.

Source link

‘ಪರಿಹಾರ ಕೊಡಿ’: ಬಿಗ್ ಬಾಸ್​​ಗೆ ನೊಟೀಸ್ ಕಳಿಸಿದ ಮಾಜಿ ಸ್ಪರ್ಧಿ – Kannada News | Ex contestant Sonali Raut sends legal notice to Bigg Boss Marathi

ಬಿಗ್​​ಬಾಸ್ (Bigg Boss) ಭಾರತದ ಬಲು ಜನಪ್ರಿಯ ರಿಯಾಲಿಟಿ ಶೋ. ಹಿಂದಿ, ತಮಿಳು, ತೆಲುಗು, ಕನ್ನಡ, ಮರಾಠಿ, ಮಲಯಾಳಂ ಹೀಗೆ ಬೇರೆ ಬೇರೆ ಭಾಷೆಗಳಲ್ಲಿ ಬಿಗ್​ಬಾಸ್ ಪ್ರಸಾರ ಆಗುತ್ತದೆ. ಪ್ರತಿ ಭಾಷೆಗೆ ಬೇರೆ ಬೇರೆ ನಿರೂಪಕರು ಆದರೆ ಮಾದರಿ ಮಾತ್ರ ಒಂದೇ. ಸ್ಪರ್ಧಿಗಳನ್ನು ಕೂಡಿ ಹಾಕುವ ಬಿಗ್​​ಬಾಸ್ ಮನೆಯಲ್ಲಿ ಐಶಾರಾಮಿಯಾಗಿ ಆಯೋಜಕರು ನಿರ್ಮಿಸಿರುತ್ತಾರೆ. ಮನೆ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಹಣವನ್ನು ಸಹ ಖರ್ಚು ಮಾಡಲಾಗುತ್ತದೆ. ಆದರೆ ಇದೀಗ ಮಾಜಿ ಬಿಗ್​​ಬಾಸ್ ಸ್ಪರ್ಧಿಯೊಬ್ಬರು, ತಮಗೆ ಬಿಗ್​​ಬಾಸ್ ಇಂದಾಗಿ, ಅಲ್ಲಿ ಸ್ವಚ್ಛತೆ ಇಲ್ಲದೇ ಇರುವ ಕಾರಣಕ್ಕೆ ಚರ್ಮ ರೋಗ ಬಂದಿದೆ. ಇದರಿಂದಾಗಿ ತಮಗೆ ನಷ್ಟ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಬಿಗ್​​ಬಾಸ್​​ಗೆ ನೊಟೀಸ್ ಕಳಿಸಿದ್ದಾರೆ.

ಬಿಗ್​​ಬಾಸ್ ಮರಾಠಿಯಲ್ಲಿ ಭಾಗಿ ಆಗಿರುವ ಸ್ಪರ್ಧಿ ಸೊನಾಲಿ ರೌತ್ ಇದೀಗ ‘ಬಿಗ್ ಬಾಸ್ ಮರಾಠಿ 6’ಗೆ ನೊಟೀಸ್ ಕಳಿಸಿದ್ದಾರೆ. ಬಿಗ್​​ಬಾಸ್ ಮರಾಠಿ 6 ರಿಯಾಲಿಟಿ ಶೋ ಪ್ರಸ್ತುತ ಚಾಲ್ತಿಯಲ್ಲಿದ್ದು, ಇನ್ನೇನು ಅಂತಿಮ ಹಂತದಲ್ಲಿದೆ. ಇದೇ ಸೀಸನ್​​ನ ಸ್ಪರ್ಧಿ ಆಗಿದ್ದ ಸೋನಾಲಿ ರಾವತ್ ಹೊರಗೆ ಬಂದ ಬಳಿಕ ಬಿಗ್​ಬಾಸ್ ಮನೆಯೊಳಗಿನ ಪರಿಸ್ಥಿತಿಯ ಮಾಹಿತಿ ಹಂಚಿಕೊಂಡಿರುವುದು ಇದು ಆತಂಕಕ್ಕೆ ಕಾರಣವಾಗಿದೆ. ಕೇವಲ ಮನರಂಜನೆಗಾಗಿ ಸ್ಪರ್ಧಿಗಳ ಆರೋಗ್ಯದ ಜೊತೆ ಆಟವಾಡಲಾಗುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿನ ಸ್ವಲ್ಪವೂ ಸ್ವಚ್ಛತೆ ಇಲ್ಲ. ಅನೈರ್ಮಲ್ಯದಿಂದಾಗಿ ತಮಗೆ ‘ಸ್ಕ್ಯಾಬೀಸ್’ ಎಂಬ ಚರ್ಮದ ಕಾಯಿಲೆ ಬಂದಿದೆ ಎಂದಿರುವ ಸೊನಾಲಿ ಅದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಸಹ ಹಂಚಿಕೊಂಡಿದ್ದಾರೆ. ಸೊನಾಲಿ ಹಂಚಿಕೊಂಡಿರುವ ವಿಡಿಯೋನಲ್ಲಿ ಸೊನಾಲಿ ಅವರಿಗೆ ದೇಹದ ಹಲವು ಕಡೆ ಗುಳ್ಳೆಗಳು, ಗಾಯಗಳು ಆಗಿವೆ.

ಇದನ್ನೂ ಓದಿ:ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು

ಅಡುಗೆ ಮನೆಯಲ್ಲಿ ದೊಡ್ಡ ದೊಡ್ಡ ಇಲಿಗಳು ಓಡಾಡುತ್ತಿರುತ್ತವೆ. ಅವು ತಿಂದು ಉಳಿಸಿದ ಆಹಾರ ಪದಾರ್ಥಗಳನ್ನೇ ಸ್ಪರ್ಧಿಗಳಿಗೆ ಅಡುಗೆ ಮಾಡಲು ಬಳಸಲಾಗುತ್ತಿತ್ತು ಎಂದು ವಿಡಿಯೋನಲ್ಲಿ ಸೊನಾಲಿ ಹೇಳಿದ್ದಾರೆ. ಅಷ್ಟೇ ಅಲ್ಲದೆ, ವೀಕೆಂಡ್‌ನಲ್ಲಿ ಬರುವ ಆಹಾರದಲ್ಲಿ ಜಿರಳೆಗಳು ಪತ್ತೆಯಾಗುತ್ತಿದ್ದವು ಎಂದು ಕಿಡಿಕಾರಿದ್ದಾರೆ. 17 ಜನ ಸ್ಪರ್ಧಿಗಳಿಗೆ ಕೆಲವೇ ವಾಶ್‌ರೂಮ್ ಬಳಸಲು ನೀಡಲಾಗಿತ್ತು. ಸ್ಪರ್ಧಿಗಳು ಅಲ್ಲಿಯೇ ಸಿಗರೇಟ್ ಸೇದುವುದು ಮಾಡುತ್ತಿದ್ದರು. ಟವೆಲ್‌ಗಳು ಮತ್ತು ರೇಜರ್‌ಗಳಂತಹ ವೈಯಕ್ತಿಕ ವಸ್ತುಗಳನ್ನು ಸಹ ಪರಸ್ಪರ ಹಂಚಿಕೊಳ್ಳುವಂತೆ ಒತ್ತಾಯಿಸಲಾಗುತ್ತಿತ್ತು ಎಂದಿದ್ದಾರೆ ನಟಿ. ಈ ಎಲ್ಲ ದೈಹಿಕ ಮತ್ತು ಮಾನಸಿಕ ಕಿರುಕುಳದ ವಿರುದ್ಧ ಸೋನಾಲಿ ರಾವತ್ ಈಗಾಗಲೇ ಶೋನ ನಿರ್ಮಾಣ ಸಂಸ್ಥೆಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

ಸೋನಾಲಿ ರಾವತ್ ಅವರು ಈ ಹಿಂದೆ ‘ಬಿಗ್ ಬಾಸ್ ಹಿಂದಿ 8’ ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಮರಾಠಿ ಸೀಸನ್ 6 ಕ್ಕೆ ಅವರು ವೈಲ್ಡ್ ಕಾರ್ಡ್ ಅಥವಾ ವಿಶೇಷ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಆದರೆ ಆರೋಗ್ಯ ಸಮಸ್ಯೆಗಳಿಂದಾಗಿ ಅವರು ಶೀಘ್ರವೇ ಮನೆಯಿಂದ ಹೊರಬರಬೇಕಾಯಿತು. ಹೊರಬಂದ ಬಳಿಕ ಇದೀಗ ಮರಾಠಿ ಬಿಗ್​​ಬಾಸ್​​ನ ಅವ್ಯವಸ್ಥೆಯನ್ನು, ಅನೈರ್ಮಲ್ಯವನ್ನು ಬಯಲಿಗೆಳೆಯುತ್ತಿದ್ದಾರೆ. ನಿರೂಪಕ ರಿತೇಶ್ ದೇಶ್​ಮುಖ್ ವಿರುದ್ಧವೂ ಅವರು ಅಸಮಾಧಾನ ಹೊರಹಾಕಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:46 pm, Sat, 18 April 26

Source link

ಟುರ್‌ ಪದ ಬಳಕೆ: ಕುರುಬ ಸಮುದಾಯದ ಆಕ್ರೋಶ ಬೆನ್ನಲ್ಲೇ ವಿಷಾದ ವ್ಯಕ್ತಪಡಿಸಿದ ಬಿಜೆಪಿ ಶಾಸಕ – Kannada News | BJP MLA CC Patil expresses regret over use his statements following anger from Kuruba community

ಗದಗ, ಏಪ್ರಿಲ್​ 18: ಉಪಚುನಾವಣೆಯ ಪ್ರಚಾರದ ವೇಳೆ ಕುರುಬ ಸಮುದಾಯದ ಕುರಿತು ವಿವಾದಾತ್ಮಕ ಪದ ಬಳಕೆ ಮಾಡಿದ ಆರೋಪ ಎದುರಿಸುತ್ತಿದ್ದ ಬಿಜೆಪಿ ಶಾಸಕ ಸಿಸಿ ಪಾಟೀಲ್​​, ಸಮುದಾಯದ ಆಕ್ರೋಶಕ್ಕೆ ಮಣಿದು ಇದೀಗ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿಡಿಯೋ ಹೇಳಿಕೆ ಹಂಚಿಕೊಂಡಿರುವ ಅವರು, ಉಪಚುನಾವಣೆಯ ಪ್ರಚಾರ ವೇಳೆ ಹಾಲುಮತ, ಅಲ್ಪಸಂಖ್ಯಾತ ಸಮಾಜದ ಒಗ್ಗಟ್ಟು ನೋಡಿ ಕಲಿಯಿರಿ ಎಂಬ ಭರದಲ್ಲಿ ಹೇಳಿದ್ದೆ ಎಂದಿದ್ದಾರೆ. ಶಾಸಕರ ಹೇಳಿಕೆ ಕುರುಬ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಪರಿಗಣಿಸಿದ ಸಮುದಾಯದ ಮುಖಂಡರು ಮತ್ತು ಕಾರ್ಯಕರ್ತರು ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಗೊಂಬೆಯಂತಿದ್ದ ಹೆಂಡತಿಯನ್ನು ಬಿಟ್ಟು ಪರಸ್ತ್ರೀ ಜತೆಗೆ ಸಂಬಂಧ: ಪೆನ್ ಡ್ರೈವ್​​ನಲ್ಲಿತ್ತು ಗಂಡನ ರಾಸಲೀಲೆ, ಕಿರುಕುಳದ ಸಾಕ್ಷಿ! – Kannada News | Davangere Murder: Govt Employee Kills Wife; Dowry Harassment, Affair Suspected

ದಾವಣಗೆರೆ ಪತ್ನಿ ಕೊಲೆ,Image Credit source: tv9 kannada

ದಾವಣಗೆರೆ, ಏ.18: ಮದುವೆಯ ಹೊತ್ತಿನಲ್ಲಿ ಆ ದಂಪತಿಗಳು ಸ್ವರ್ಗದಿಂದ ಇಳಿದು ಬಂದ ಜೋಡಿಯಂತೆ ಕಂಡಿದ್ದರು. ಎಲ್ಲರೂ, ವಾವ್ಹ್ ಏನ್ ಚೆನ್ನಾಗಿದೆ ಜೋಡಿ, ಅದರಲ್ಲೂ ಹುಡುಗಿಯನ್ನು ಸುಂದರ ಹುಡುಗಿ ಎಂದು ಹೇಳಿದ್ದರು. ಅವರು ಅದ್ಧೂರಿ ಪ್ರೀ ವೆಡ್ಡಿಂಗ್ ಶೂಟಿಂಗ್, ಮದುವೆ ಮಾಡಿಕೊಂಡಿದ್ದರು. ಎಲ್ಲವೂ ಸುಖಾಂತ್ಯ ಕಾಣಬೇಕಿತ್ತು. ಆದರೆ, ಎರಡೇ ವರ್ಷಕ್ಕೆ ಆ ಸುಂದರ ಸಂಸಾರ ಚಿತೆಯೇರಿದೆ. ಪರಸ್ತ್ರೀ ಸಂಘಕ್ಕೆ ಬಿದ್ದ ಪತಿ, ತನ್ನನ್ನೇ ನಂಬಿ ಬಂದ ಪತ್ನಿಯನ್ನು ಚಿತ್ರಹಿಂಸೆ ನೀಡಿ ಕೊಂದಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ದಾವಣಗೆರೆ ತಾಲೂಕಿನ ಮಂಡಲೂರು ಗ್ರಾಮದ ಬಡ ಕುಟುಂಬದ ಕನ್ಯೆ ಕಾವ್ಯಾ ಹಾಗೂ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದ ಮನು ಎಂಬುವವರಿಗೆ ಎರಡು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಮನು ಅಂಚೆ ಇಲಾಖೆಯಲ್ಲಿ ಸರ್ಕಾರಿ ನೌಕರನಾಗಿದ್ದ ಎಂಬ ಕಾರಣಕ್ಕೆ, ಕಾವ್ಯಾ ಪೋಷಕರು ಸಾಲಸೋಲ ಮಾಡಿ 2.50 ಲಕ್ಷ ರೂಪಾಯಿ ನಗದು ಮತ್ತು 70 ಗ್ರಾಂ ಚಿನ್ನ ನೀಡಿ ಮದುವೆ ಮಾಡಿದ್ದರು. ಈ ದಂಪತಿ ದಾವಣಗೆರೆ ನಗರದ ಅರಸು ಬಡಾವಣೆಯ ಕ್ವಾರ್ಟರ್ಸ್‌ನಲ್ಲಿ ವಾಸವಿದ್ದರು.

ನಿನ್ನೆ (ಏಪ್ರಿಲ್ 17) ಕಾವ್ಯಾ ತನ್ನ ತಾಯಿಯೊಂದಿಗೆ ಮಂತ್ರಾಲಯಕ್ಕೆ ಹೋಗಲು ಸಿದ್ಧತೆ ನಡೆಸಿದ್ದಳು. ಮನೆಯ ಮುಂದೆ ವಾಹನ ನಿಂತು ಎಲ್ಲರೂ ಕಾಯುತ್ತಿದ್ದರು. ಮಧ್ಯಾಹ್ನದಿಂದ ಕಾವ್ಯಾಳ ಫೋನ್ ಸ್ವಿಚ್ ಆಫ್ ಆಗಿತ್ತು. ರಾತ್ರಿ ವೇಳೆ ಮನು ತನ್ನ ಅತ್ತೆಗೆ ಫೋನ್ ಮಾಡಿ “ಕಾವ್ಯಾ ಮಾತನಾಡುತ್ತಿಲ್ಲ” ಎಂದು ತಿಳಿಸಿದ್ದಾನೆ. ಗಾಬರಿಗೊಂಡ ಸಂಬಂಧಿಕರು ಧಾವಿಸಿದಾಗ ಕಾವ್ಯಾ ನಿಶ್ಚಲವಾಗಿ ಮಲಗಿದ್ದಳು. ಮನು ಅಲ್ಲಿಂದ ಪರಾರಿಯಾಗಿದ್ದನು. ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲೇ ಕಾವ್ಯಾ ಸಾವನ್ನಪ್ಪಿದ್ದಳು.

ಕಾವ್ಯಾಳ ಪತಿ ಮನುಗೆ ಮತ್ತೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿತ್ತು ಮತ್ತು ಆತ ಮಾದಕ ಚಟಕ್ಕೆ ಬಲಿಯಾಗಿದ್ದ ಎನ್ನಲಾಗಿದೆ. ಈ ಬಗ್ಗೆ ಕಾವ್ಯಾ ತನ್ನ ಪೋಷಕರಿಗೆ ತಿಳಿಸಿ ಅಳಲು ತೋಡಿಕೊಂಡಿದ್ದಳು. ಪತಿ ನೀಡುತ್ತಿದ್ದ ಕಿರುಕುಳ ಮತ್ತು ಆತನ ಅನೈತಿಕ ಸಂಬಂಧದ ಸಾಕ್ಷ್ಯಗಳನ್ನು ಕಾವ್ಯಾ ಒಂದು ಪೆನ್ ಡ್ರೈವ್ ನಲ್ಲಿ ಸಂಗ್ರಹಿಸಿಟ್ಟಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಈ ಪೆನ್ ಡ್ರೈವ್ ಈಗ ಈ ಕೊಲೆ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ನ್ಯಾಯಕ್ಕಾಗಿ ಆಗ್ರಹಿಸಿ ಕಾವ್ಯಾಳ ಸಂಬಂಧಿಕರು ದಾವಣಗೆರೆ ಮಹಿಳಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಮಗಳ ಸಾವಿನಿಂದ ತಾಯಿ ಶಶಿಕಲಾ ಪ್ರಜ್ಞೆ ತಪ್ಪಿ ಆಸ್ಪತ್ರೆ ಸೇರಿದ್ದಾರೆ. ಸದ್ಯ ಪೊಲೀಸರು ಆರೋಪಿ ಮನು ನನ್ನು ವಶಕ್ಕೆ ಪಡೆದಿದ್ದು, ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಶಂಕೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ! – Kannada News | Peresandra Tragedy: 18 Year Old Suicide After Kitchen Advice; Youth Mental Health Crisis

ಪೆರೇಸಂದ್ರ ಗ್ರಾಮದ ನಿವಾಸಿ ಶ್ರುತಿ

ಚಿಕ್ಕಬಳ್ಳಾಪುರ, ಏ, 18: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿದ್ದಳು. ಪಿಯುಸಿ ಫಲಿತಾಂಶ ಬಂದ ಸಮಯದಲ್ಲೂ ವಿದ್ಯಾರ್ಥಿನಿಯೊಬ್ಬಳು ದುಡುಕಿ ಪ್ರಾಣ ಕಳೆದುಕೊಂಡಿದ್ದಳು. ಇದೀಗ ಇಂತಹದೇ ಮತ್ತೊಂದು ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಜಿಲ್ಲೆಯ ಪೆರೇಸಂದ್ರ ಗ್ರಾಮದಲ್ಲಿ 18 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಸಂಭವಿಸಿದೆ. ಮನೆಯಲ್ಲಿ ಅತ್ತೆ ಅಡುಗೆ ಮಾಡುವಂತೆ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಪೆರೇಸಂದ್ರ ಗ್ರಾಮದ ನಿವಾಸಿ ಶ್ರುತಿ (18) ಎಂಬ ಯುವತಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ. ಅತ್ತೆ ಮನೆಯಲ್ಲಿ ಇರುವಾಗ ಸ್ವಲ್ಪ ಕೆಲಸ ಮಾಡಬೇಕಮ್ಮ, ನನಗೂ ಸ್ವಲ್ಪ ಸಹಾಯ ಆಗುತ್ತದೆ. ಸುಮ್ಮನೆ ಇರುವ ಬದಲು ಅಡುಗೆ ಮಾಡುವುದನ್ನು ಕಲಿ ಎಂದು ಹೇಳಿದರು. ಅತ್ತೆ ಹೇಳಿದ ರೀತಿ ಇಲ್ಲ ಎಂದು ಶ್ರುತಿ ಅಪಾರ್ಥ ಮಾಡಿಕೊಂಡು ಇದರಿಂದ ತೀವ್ರವಾಗಿ ಮನನೊಂದುಕೊಂಡಿದ್ದಾಳೆ.

ಇದನ್ನೂ ಓದಿ: “ವಾಸ್ತು ಹೇಳುವ ನೆಪದಲ್ಲಿ ನನ್ನ ಎದೆಯ ಭಾಗ ಮುಟ್ಟಿದ್ದಾರೆ”: ಮಹಿಳೆಯ ಗಂಭೀರ ಆರೋಪ, ಇದು ಹನಿಟ್ರಾಪ್ ಎಂದ ಮಾಲೀಕ!

ಅತ್ತೆಯ ಮಾತನ್ನು ತುಂಬಾ ಮನಸ್ಸಿಗೆ ತೆಗೆದುಕೊಂಡು, ಮನೆಯಲ್ಲಿದ್ದ ವಿಷಸೇವನೆ ಮಾಡಿದ್ದಾಳೆ. ತಕ್ಷಣ ಶೃತಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂಸಾರದ ಸಣ್ಣಪುಟ್ಟ ವಿಚಾರಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದು ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ. ಇಂತಹ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದು ತಪ್ಪು, ಇಂತಹ ಕ್ಷುಲ್ಲಕ ಕಾರಣಕ್ಕೆ ಜೀವ ಕಳೆದುಕೊಳ್ಳುವುದು ಸರಿಯಲ್ಲ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

RCB vs DC: 74 ಸಿಕ್ಸರ್‌, 64 ಬೌಂಡರಿ.! 560 ಎಸೆತಗಳಲ್ಲಿ ಇತಿಹಾಸ ಸೃಷ್ಟಿಸಿದ ಟಿಮ್ ಡೇವಿಡ್

Source link