Category Archives: Blog

Your blog category

RCB vs DC: 74 ಸಿಕ್ಸರ್‌, 64 ಬೌಂಡರಿ.! 560 ಎಸೆತಗಳಲ್ಲಿ ಇತಿಹಾಸ ಸೃಷ್ಟಿಸಿದ ಟಿಮ್ ಡೇವಿಡ್

Source link

Akshaya Tritiya: ಅಕ್ಷಯ ತೃತೀಯದಂದು ವಾಹನ ಖರೀದಿಸುತ್ತಿದ್ದೀರಾ? ನಿಮ್ಮ ರಾಶಿಗೆ ಅನುಗುಣವಾಗಿ ಇಲ್ಲಿದೆ ಬಣ್ಣಗಳ ಆಯ್ಕೆ! – Kannada News | Akshaya Tritiya Vehicle Purchase: Astrological Guide for Lucky Colors and Blessings

ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯವನ್ನು ವರ್ಷದ ಅತ್ಯಂತ ಶ್ರೇಷ್ಠ ಮತ್ತು ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಮಾಡಿದ ಯಾವುದೇ ಹೂಡಿಕೆ ಅಥವಾ ಖರೀದಿ ಅಕ್ಷಯವಾಗಿ ಬೆಳೆಯುತ್ತದೆ ಎಂಬ ಅಚಲ ನಂಬಿಕೆಯಿದೆ. ಸಾಮಾನ್ಯವಾಗಿ ಜನರು ಈ ದಿನ ಚಿನ್ನ ಅಥವಾ ಬೆಳ್ಳಿಯ ಆಭರಣಗಳನ್ನು ಖರೀದಿಸಲು ಆದ್ಯತೆ ನೀಡುತ್ತಾರೆ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಶುಭ ಮುಹೂರ್ತದಲ್ಲಿ ಹೊಸ ವಾಹನವನ್ನು ಮನೆಗೆ ತರುವುದು ಕೂಡ ಅಷ್ಟೇ ಅದೃಷ್ಟದಾಯಕವಾಗಿದೆ. ವಾಹನವು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದ್ದು, ಈ ಪವಿತ್ರ ದಿನದಂದು ಅದನ್ನು ಖರೀದಿಸುವುದರಿಂದ ಪ್ರಯಾಣ ಸುಖಕರವಾಗುವುದಲ್ಲದೆ, ಜೀವನದಲ್ಲಿ ಪ್ರಗತಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.

ವಾಹನ ಖರೀದಿಸುವಾಗ ಬಣ್ಣದ ಆಯ್ಕೆಯು ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ರಾಶಿಯು ಒಂದು ನಿರ್ದಿಷ್ಟ ಗ್ರಹದ ಆಧಿಪತ್ಯಕ್ಕೆ ಒಳಪಟ್ಟಿರುತ್ತದೆ. ಆದ್ದರಿಂದ ಆಯಾ ರಾಶಿಗೆ ಒಪ್ಪುವ ಬಣ್ಣದ ವಾಹನವನ್ನು ಆರಿಸಿಕೊಂಡಾಗ ಅದು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಉದಾಹರಣೆಗೆ, ಮೇಷ ರಾಶಿಯವರು ಕೆಂಪು ಅಥವಾ ಹೊಳೆಯುವ ಬಣ್ಣದ ವಾಹನಗಳನ್ನು ಖರೀದಿಸಿದರೆ, ವೃಷಭ ಮತ್ತು ಕರ್ಕ ರಾಶಿಯವರಿಗೆ ಬಿಳಿ ಅಥವಾ ಕೆನೆ ಬಣ್ಣದ ವಾಹನಗಳು ಶ್ರೇಯಸ್ಕರ. ಮಿಥುನ ಮತ್ತು ಕನ್ಯಾ ರಾಶಿಯವರು ಹಸಿರು ಬಣ್ಣದ ಛಾಯೆಗಳನ್ನು ಆರಿಸಿಕೊಳ್ಳುವುದು ಉತ್ತಮವಾದರೆ, ಸಿಂಹ ರಾಶಿಯವರಿಗೆ ಮೆರೂನ್ ಅಥವಾ ಚಾಕೊಲೇಟ್ ಬಣ್ಣಗಳು ಹೆಚ್ಚು ಅದೃಷ್ಟವನ್ನು ತರುತ್ತವೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಇನ್ನುಳಿದ ರಾಶಿಗಳಾದ ವೃಶ್ಚಿಕದವರಿಗೆ ಗಾಢ ಕೆಂಪು, ಧನು ರಾಶಿಯವರಿಗೆ ಹಳದಿ ಮತ್ತು ಮಕರ ಹಾಗೂ ಕುಂಭ ರಾಶಿಯವರಿಗೆ ನೀಲಿ ಅಥವಾ ಕಂದು ಬಣ್ಣದ ವಾಹನಗಳು ಪ್ರಶಸ್ತವೆಂದು ಪರಿಗಣಿಸಲಾಗಿದೆ. ಅಕ್ಷಯ ತೃತೀಯವು ‘ಅಬೂಜ ಮುಹೂರ್ತ’ವಾಗಿರುವುದರಿಂದ ಅಂದು ವಾಹನ ಖರೀದಿಸಲು ಯಾವುದೇ ವಿಶೇಷ ಘಳಿಗೆಯನ್ನು ಕಾಯುವ ಅಗತ್ಯವಿಲ್ಲ, ದಿನವಿಡೀ ಶುಭಫಲಗಳೇ ಲಭಿಸುತ್ತವೆ. ವಾಹನವನ್ನು ಖರೀದಿಸಿದ ನಂತರ ಈ ಪುಣ್ಯ ದಿನದಂದು ಶಾಸ್ತ್ರೋಕ್ತವಾಗಿ ಪೂಜೆ ಮಾಡಿಸುವುದರಿಂದ ವಾಹನ ದೋಷಗಳು ನಿವಾರಣೆಯಾಗಿ, ದೇವಿಯ ಅನುಗ್ರಹ ಸದಾಕಾಲ ನಿಮ್ಮ ಮೇಲಿರುತ್ತದೆ ಎಂಬ ನಂಬಿಕೆಯಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಲೋಕಾಯುಕ್ತದ 40 ವರ್ಷಗಳ ಸಾರ್ಥಕ ಪಯಣ: ಸಾಧನೆಯ ಹಾದಿ ಮೆಲುಕು ಹಾಕಿದ ನ್ಯಾಯಮೂರ್ತಿಗಳು – Kannada News | Karnataka Lokayukta: 40 Years of Anti Corruption Service and Good Governance

ಕರ್ನಾಟಕ ಲೋಕಾಯುಕ್ತ Image Credit source: lokayukta.karnataka.gov.in

ಬೆಂಗಳೂರು, ಏಪ್ರಿಲ್​ 18: ಕರ್ನಾಟಕ ಲೋಕಾಯುಕ್ತ (Karnataka Lokayukta) ಸಂಸ್ಥೆಯು ತನ್ನ ಅರ್ಥಪೂರ್ಣ ಹಾಗೂ ಅವಿರತ ಸೇವೆಯ 40 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ ಹಿನ್ನೆಲೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ನಾಲ್ಕು ದಶಕಗಳ ಕಾರ್ಯಸೇವೆ ಮೆಲುಕು ಹಾಕುವ ಮೂಲಕ ವಿವಿಧ ಗೋಷ್ಠಿ ಹಾಗೂ ವಿಚಾರ ಸಂಕೀರ್ಣಕ್ಕೆ ಇಂದಿನ ಕಾರ್ಯಕ್ರಮ ಸಾಕ್ಷಿಯಾಗಿತ್ತು.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಿಷ್ಟು 

ಕರ್ನಾಟಕ ಲೋಕಾಯುಕ್ತದ 4 ದಶಕಗಳ ಸಾರ್ಥಕ ಪಯಣ ಪೂರೈಸಿದೆ. ಹೀಗಾಗಿ ಶಕ್ತಿಸೌಧ ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್​ನಲ್ಲಿ ನಡೆದ ಕಾರ್ಯಕ್ರಮವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಲೋಕಾಯುಕ್ತದ 40 ವರ್ಷದ ಸಾಧನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಖುಷಿ ತಂದಿದೆ. ಕರ್ನಾಟಕದ ಲೋಕಾಯುಕ್ತ ಒಳ್ಳೆಯ ಕೆಲಸ ಮಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಲೋಕಾಯುಕ್ತ ಕೆಲಸ ಮಾಡುತ್ತಿದೆ. ಭ್ರಷ್ಟಾಚಾರದ ವಿರುದ್ಧ ಏನು ಕ್ರಮ ಆಗಲಿದೆ ನಾಗರಿಕರು ಗಮನಿಸಿರುತ್ತಾರೆ. ಸಮಾಜದ ಅಂಕುಕೊಂಡುಗಳನ್ನ ತಿದ್ದುವ ಕೆಲಸ ಮಾಡ್ತಿದೆ. ರಿಮೋಟ್ ಏರಿಯಾಗಳಲ್ಲೂ ಲೋಕಾಯುಕ್ತ ಸೇವೆ ಅಗ್ರಗಣ್ಯ. ಉತ್ತಮ ಸ್ವತಂತ್ರ ಸಂಸ್ಥೆಯಾಗಿ ಕರ್ನಾಟಕದ ಲೋಕಾಯುಕ್ತ ಕೆಲಸ ನಿರ್ವಹಿಸುತ್ತಿದೆ ಅಂತ ಪ್ರಶಂಸೆ ವ್ಯಕ್ತಪಡಿಸಿದರು.

ಕರ್ನಾಟಕದ ಲೋಕಾಯುಕ್ತ ಒಳ್ಳೆಯ ಕೆಲಸ ಮಾಡುತ್ತಿದೆ: ಮುಖ್ಯ ನ್ಯಾ.ಅರವಿಂದ್ ಕುಮಾರ್

ಮುಖ್ಯ ನ್ಯಾ.ಅರವಿಂದ್ ಕುಮಾರ್ ಮಾತನಾಡಿ, 40 ವರ್ಷಗಳ ಸಾಧನೆ ಸಾಮಾನ್ಯವಾದದ್ದಲ್ಲ. 1984ರಲ್ಲಿ ಕರ್ನಾಟಕದಲ್ಲಿ ಲೋಕಾಯುಕ್ತ ಪ್ರಾರಂಭ ಆಯ್ತು. ಕರ್ನಾಟಕದಲ್ಲೇ ಮೊದಲ ಬಾರಿಗೆ ಪ್ರಾರಂಭ ಆದ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ. ಕಾವಲು ನಾಯಿಯಂತೆ ಕೆಲಸ ಮಾಡುವುದು ಸುಲಭವಲ್ಲ. ಸಂತೋಷ್ ಹೆಗಡೆ ಸೇರಿ ಹಲವರು ಪಾರದರ್ಶಕತೆಯಿಂದ ಕೆಲಸ ಮಾಡಿದ್ದಾರೆ. ಭ್ರಷ್ಟಾಚಾರವನ್ನ ಬಯಲಿಗೆ ಎಳೆದು ಪಾರದರ್ಶಕತೆ ಎತ್ತಿ ಹಿಡಿದಿದ್ದಾರೆ. ರಾಜಕೀಯ ಒತ್ತಡ ಬಾರದೇ ಲೋಕಾಯುಕ್ತ ತನ್ನನ್ನ ರಕ್ಷಿಸಿಕೊಂಡಿದೆ ಎಂದರು. 

ಕರ್ನಾಟಕ ಲೋಕಾಯುಕ್ತ ಬಿ.ಎಸ್.ಪಾಟೀಲ್ ಹೇಳಿದ್ದಿಷ್ಟು 

ಇನ್ನು ಕಾರ್ಯಕ್ರಮವನ್ನ ಉದ್ದೇಶಿಸಿ ಭಾಷಣ ಮಾಡಿದ ಕರ್ನಾಟಕ ಲೋಕಾಯುಕ್ತ ಬಿ.ಎಸ್.ಪಾಟೀಲ್, ನಂಬಿಕೆ ಮತ್ತು ವಿಶ್ವಾಸಾರ್ಹ ಸಂಸ್ಥೆ ಲೋಕಾಯುಕ್ತ ಸಂಸ್ಥೆ. ಲೋಕಾಯುಕ್ತ, ಉಪ ಲೋಕಾಯುಕ್ತ ದೂರುಗಳ ಬಂದ ಕೂಡಲೇ ತ್ವರಿತ ಗತಿಯಲ್ಲಿ‌ ಕೆಲಸ ಮಾಡುತ್ತಿದೆ. ಭ್ರಷ್ಟಾಚಾರ ನಿರ್ಮೂಲನೆಗಾಗಿ ಅನೇಕ ಕಾರ್ಯಾಗಾರ ಹಮ್ಮಿಕೊಂಡಿದೆ. ಸುಮಾರು 9,800 ಎಕರೆ ಜಮೀನು ಒತ್ತುವರಿ, ಕೆರೆ ಒತ್ತುವರಿ ತೆರವು ಮಾಡಲಾಗಿದೆ. ಜಿಲ್ಲಾ ಹಂತದಲ್ಲಿ ಉತ್ತಮ ಕೆಲಸ ಮಾಡಲಾಗುತ್ತಿದೆ. ಬೆಂಗಳೂರಿನ 83 ಹಾಸ್ಟೆಲ್​​ಗೆ ದಿಢೀರ್ ಭೇಟಿ ಕೊಟ್ಟಿದ್ದೇವೆ. ತಾಲ್ಲೂಕು, ಪಂಚಾಯತ್ ಹಂತದ ಕೇಸ್​ಗಳನ್ನ ಗಮನಿಸಿ ಕೂಡಲೇ ಕ್ರಮ ಜರುಗಿಸಲಾಗಿದೆ. ರಾಜ್ಯಾದ್ಯಂತ ಉತ್ತಮ ಕೆಲಸ ಮಾಡಲಾಗಿದೆ ಅಂತ ನಾಲ್ಕು ದಶಕಗಳ ಸೇವೆಯನ್ನ ಮೆಲುಕು ಹಾಕಿದರು.

ಇದನ್ನೂ ಓದಿ: 6 ಕೆಜಿ ಚಿನ್ನ, 5 ಕೆಜಿ ಬೆಳ್ಳಿ, 14 ಕೋಟಿ ರೂ. ಅಕ್ರಮ ಆಸ್ತಿ! ಬೆಳಗಾವಿ ನಗರಾಭಿವೃದ್ಧಿ ಇಂಜಿನಿಯರ್ ಆಸ್ತಿ ಕಂಡು ಲೋಕಾಯುಕ್ತರೇ ಶಾಕ್

ಭಾರತದ ಮುಖ್ಯನ್ಯಾಯಮೂರ್ತಿ ಸೂರ್ಯ ಕಾಂತ್, ಲೋಕಾಯುಕ್ತ ನಿಯತಕಾಲಿಕೆಯನ್ನು ಬಿಡುಗಡೆ ಮಾಡಿ, ಬಳಿಕ ಚುನಾಯಿತ ಪ್ರತಿನಿಧಿಗಳ ಆಸ್ತಿ ಮತ್ತು ಹೊಣೆಗಾರಿಕೆಗಳ ಹೊಸ ಪೋರ್ಟಲ್ ಹಾಗೂ ಆನ್‍ಲೈನ್ ತನಿಖಾ ಮಾಡ್ಯೂಲ್‍ಗೆ ಚಾಲನೆ ನೀಡಿದರು. ಬಳಿಕ‌ ಮಾಜಿ ಲೋಕಾಯುಕ್ತರು ಮತ್ತು ಉಪಲೋಕಾಯುಕ್ತರನ್ನು ಮುಖ್ಯ ನ್ಯಾ‌. ಸೂರ್ಯ ಕಾಂತ್ ಸನ್ಮಾನಿಸಿದರು.

ಭ್ರಷ್ಟಾಚಾರ ಮತ್ತು ದುರಾಡಳಿತ ವಿರುದ್ಧ ಹೋರಾಟದ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಮಾತನಾಡಿದ್ರು. ಲೋಕಾಯುಕ್ತ ಕಾಯ್ದೆಯಡಿ ಕುಂದುಕೊರತೆಗಳ ಪರಿಹಾರ ವಿಷಯದ ಮೇಲೆ ನಿವೃತ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಮಾಹಿತಿ ಹಂಚಿಕೊಂಡ್ರೆ, ಭ್ರಷ್ಟಾಚಾರ ತಡೆಗಟ್ಟುವುದು ಹೇಗೆ? ಎಂಬುದರ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ವಿಚಾರಗೋಷ್ಠಿ ನಡೆಸಿದರು.

ಒಟ್ಟಾರೆ ಪ್ರಾಮಾಣಿಕ ವ್ಯಕ್ತಿಗಳನ್ನು ಬೆಳೆಸುವಲ್ಲಿ ನಾವು ವಿಫಲವಾದರೆ ಅನ್ಯಾಯವು ಗೆದ್ದು, ನ್ಯಾಯವು ಮರೆಯಾಗುವ ಅಪಾಯವಿದೆ ಎಂದು ಸಂಸ್ಥೆ ಎಚ್ಚರಿಸಿದೆ. ಸವಾಲುಗಳೇ ವ್ಯಕ್ತಿಯನ್ನು ಪರಿಪೂರ್ಣಗೊಳಿಸುತ್ತವೆ ಎಂಬ ಧ್ಯೇಯವಾಕ್ಯದೊಂದಿಗೆ ಲೋಕಾಯುಕ್ತವು ನಾಲ್ಕು ದಶಕಗಳನ್ನು ದಾಟಿ ಮುಂದಿನ ಹೆಜ್ಜೆಯನ್ನು ಇಡುತ್ತಿದೆ.

ಇದನ್ನೂ ಓದಿ: 1.2 ಲಕ್ಷ ಹಣ ಪಡೆಯುವಾಗ ಪಿಡಿಓ, ಯುಟ್ಯೂಬರ್ ಲೋಕಾಯುಕ್ತ ಬಲೆಗೆ

ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್, ಕರ್ನಾಟಕದ ಲೋಕಾಯುಕ್ತ ಬಿ.ಎಸ್. ಪಾಟೀಲ್, ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ ಮತ್ತು ಬಿ. ವೀರಪ್ಪ, ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಹಾಗೂ ಕರ್ನಾಟಕದ ಐಎಎಸ್‌ ಹಾಗೂ ಐಪಿಎಸ್ ಅಧಿಕಾರಿಗಳು ಸೇರಿ ಹಲವರು ಉಪಸ್ಥಿತರಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 6:06 pm, Sat, 18 April 26

Source link

“ವಾಸ್ತು ಹೇಳುವ ನೆಪದಲ್ಲಿ ನನ್ನ ಎದೆಯ ಭಾಗ ಮುಟ್ಟಿದ್ದಾರೆ”: ಮಹಿಳೆಯ ಗಂಭೀರ ಆರೋಪ, ಇದು ಹನಿಟ್ರಾಪ್ ಎಂದ ಮಾಲೀಕ! – Kannada News | Vijayanagar FIRs: Vastu Consultant Faces Assault Charge, Alleges Extortion and Attack

ವಾಸ್ತು ಹೇಳುವವನ ಮೇಲೆ ದೌರ್ಜನ್ಯದ ಆರೋಪ

ಬೆಂಗಳೂರು, ಏ.18: ನಗರದ ವಿಜಯನಗರದಲ್ಲಿರುವ ‘ಶ್ರೀ ಅನಂತ್ ಮೆಡಿಕಲ್ ಸಲ್ಯೂಷನ್ಸ್’ ಕಚೇರಿಯಲ್ಲಿ ನಡೆದ ಘಟನೆಯೊಂದು ಈಗ ಪೊಲೀಸ್ ಮೆಟ್ಟಿಲೇರಿದೆ. ವಾಸ್ತು ಕೇಳಲು ಹೋದ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದ ಬೆನ್ನಲ್ಲೇ, ಇದು ಹಣಕ್ಕಾಗಿ ನಡೆಸಿದ ಬ್ಲ್ಯಾಕ್‌ಮೇಲ್ ತಂತ್ರ ಎಂದು ಆರೋಪಿಗಳು ಮರುದೂರು ನೀಡಿದ್ದಾರೆ.

ಸಂತ್ರಸ್ತ ಮಹಿಳೆಯು ಏಪ್ರಿಲ್ 4ರಂದು ತನ್ನ ಮನೆಯ ವಾಸ್ತು ಕೇಳಲು ಶಾಂತಕುಮಾರ್ ಎಂಬುವವರ ಕಚೇರಿಗೆ ತೆರಳಿದ್ದರು. ಈ ವೇಳೆ ಶಾಂತಕುಮಾರ್ ಅವರು ವಾಸ್ತು ಹೇಳುವ ನೆಪದಲ್ಲಿ ತನ್ನ ಎದೆಯ ಭಾಗ ಹಾಗೂ ಹೊಟ್ಟೆಯನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನು ಪ್ರಶ್ನಿಸಿದಾಗ ಅಲ್ಲಿದ್ದ ಭರತ್, ಶಾಂತಕುಮಾರ್ ಪತ್ನಿ ಮತ್ತು ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಾಸ್ತು ಸಲಹೆಗಾಗಿ 15 ಸಾವಿರ ರೂಪಾಯಿ ನಗದು ಪಡೆದೂ ದೌರ್ಜನ್ಯ ಎಸಗಿದ್ದಾರೆ ಎಂಬುದು ಇವರ ಆರೋಪ.

ಇದನ್ನೂ ಓದಿ: ಹಾಸನ ಪೊಲೀಸರ ಭರ್ಜರಿ ಕಾರ್ಯಾಚರಣೆ: 15 ವರ್ಷಗಳ ಹಿಂದೆ ಜೈಲಿನಿಂದ ತಪ್ಪಿಸಿಕೊಂಡಿದ್ದ ಆರೋಪಿ ಗೋವಾದಲ್ಲಿ ಅರೆಸ್ಟ್!

ಮಹಿಳೆಯ ಆರೋಪವನ್ನು ತಳ್ಳಿಹಾಕಿರುವ ಶಾಂತರಾಜು, ಇದೊಂದು ವ್ಯವಸ್ಥಿತ ಬ್ಲ್ಯಾಕ್‌ಮೇಲ್ ದಂಧೆ ಎಂದು ದೂರಿದ್ದಾರೆ. ಸುನೀಲತಾ ಎಂಬ ಮಹಿಳೆ ತನ್ನನ್ನು ಮೀಡಿಯಾ ಮತ್ತು ಪೊಲೀಸ್ ಎಂದು ಪರಿಚಯಿಸಿಕೊಂಡು, ಜಮಾಲ್ ಮತ್ತು ಅಮೃತಲಿಂಗಂ ಎಂಬುವವರ ಜೊತೆ ಬಂದು ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಹಣ ನೀಡದಿದ್ದರೆ ಮಾನ ಹರಾಜು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಶಾಂತರಾಜು ಅವರ ಪತ್ನಿಯ ಮೇಲೆಯೂ ಹಲ್ಲೆ ನಡೆಸಿ, ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಗೋವಿಂದರಾಜನಗರ ಪೊಲೀಸರು ಎರಡೂ ಕಡೆಯ ದೂರುಗಳನ್ನು ಆಧರಿಸಿ ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ. ಒಂದು ಕಡೆ ಲೈಂಗಿಕ ದೌರ್ಜನ್ಯದ ಆರೋಪವಿದ್ದರೆ, ಮತ್ತೊಂದು ಕಡೆ ಸುಲಿಗೆ, ಹಲ್ಲೆ ಮತ್ತು ಬ್ಲ್ಯಾಕ್‌ಮೇಲ್ ಆರೋಪಗಳಿವೆ.

ವರದಿ: ವಿಕಾಸ್​​​ ಟಿವಿ9 ಕ್ರೈಂ 

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:25 pm, Sat, 18 April 26

Source link

Vasthu Tips: ಬೆಳಿಗ್ಗೆ ಎದ್ದ ತಕ್ಷಣ ಆಲಸ್ಯ ಅಥವಾ ಕಿರಿಕಿರಿ ಉಂಟಾಗುತ್ತಿದೆಯೇ? ಬೆಡ್‌ರೂಮ್‌ನ ಈ ವಾಸ್ತು ದೋಷವೇ ಕಾರಣವಿರಬಹುದು! – Kannada News | Vastu Tips for Better Sleep: Fix Bedroom Bathroom Defects Easily

ದಿನವಿಡೀ ಕಚೇರಿ ಕೆಲಸ, ಟ್ರಾಫಿಕ್ ಕಿರಿಕಿರಿ ಎದುರಿಸಿ ಮನೆಗೆ ಬಂದಾಗ ನಮಗೆ ಬೇಕಿರುವುದು ನೆಮ್ಮದಿಯ ನಿದ್ರೆ. ಆದರೆ, ಸಾಕಷ್ಟು ನಿದ್ರೆ ಮಾಡಿದರೂ ಮರುದಿನ ಬೆಳಿಗ್ಗೆ ಉತ್ಸಾಹವಿಲ್ಲದೆ, ಆಲಸ್ಯ ಅಥವಾ ಕಿರಿಕಿರಿ ಅನುಭವಿಸುತ್ತಿದ್ದರೆ ಅದು ನಿಮ್ಮ ತಪ್ಪಲ್ಲ; ನಿಮ್ಮ ಮನೆಯ ವಿನ್ಯಾಸದ ದೋಷವಿರಬಹುದು!

ಹಾಸಿಗೆಯ ಎದುರು ಬಾತ್‌ರೂಮ್ ಬಾಗಿಲು:

ಆಧುನಿಕ ಅಪಾರ್ಟ್‌ಮೆಂಟ್‌ಗಳಲ್ಲಿ ಜಾಗದ ಮಿತಿಯಿಂದಾಗಿ ಹಾಸಿಗೆಯ ಎದುರಿಗೇ ಶೌಚಾಲಯದ ಬಾಗಿಲು ಇರುವ ವಿನ್ಯಾಸ ಸಾಮಾನ್ಯವಾಗಿದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಇದು ದೊಡ್ಡ ದೋಷ. ಶೌಚಾಲಯವು ಅಶುದ್ಧ ಸ್ಥಳವಾಗಿದ್ದು, ಅಲ್ಲಿಂದ ಹೊರಹೊಮ್ಮುವ ನಕಾರಾತ್ಮಕ ಶಕ್ತಿಯು ನೇರವಾಗಿ ನಿಮ್ಮ ಹಾಸಿಗೆಯ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ನಿದ್ರಾಹೀನತೆ ಮತ್ತು ಮಾನಸಿಕ ಅಸ್ಥಿರತೆ ಉಂಟಾಗಬಹುದು. ಇದಲ್ಲದೇ ಜೀರ್ಣಕ್ರಿಯೆ ತೊಂದರೆ ಮತ್ತು ಮೂಳೆ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ದಂಪತಿಗಳ ನಡುವೆ ಅನಗತ್ಯ ಮನಸ್ತಾಪ ಮತ್ತು ಕಹಿಯನ್ನು ಇದು ಉಂಟುಮಾಡಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.

ವಾಸ್ತು ದೋಷ ನಿವಾರಣೆಗೆ ಇಲ್ಲಿವೆ 5 ಸರಳ ಮಾರ್ಗಗಳು

ಮನೆಯ ಗೋಡೆಗಳನ್ನು ಒಡೆಯಲು ಅಥವಾ ವಿನ್ಯಾಸ ಬದಲಿಸಲು ಸಾಧ್ಯವಾಗದಿದ್ದಾಗ, ಈ ಸುಲಭ ಉಪಾಯಗಳನ್ನು ಅನುಸರಿಸಿ ನಕಾರಾತ್ಮಕ ಶಕ್ತಿಯನ್ನು ತಡೆಯಬಹುದು.

ಪರದೆಯ ಬಳಕೆ:

ಶೌಚಾಲಯದ ಬಾಗಿಲನ್ನು ಯಾವಾಗಲೂ ಮುಚ್ಚಿಡಿ. ಅಷ್ಟೇ ಅಲ್ಲದೆ, ಬಾಗಿಲಿನ ಮೇಲೆ ದಪ್ಪನೆಯ ಮತ್ತು ಗಾಢ ಬಣ್ಣದ ಪರದೆಯನ್ನು ನೇತುಹಾಕಿ. ಇದು ನಕಾರಾತ್ಮಕ ಶಕ್ತಿಯ ವಿರುದ್ಧ ಗುರಾಣಿಯಂತೆ ಕಾರ್ಯನಿರ್ವಹಿಸುತ್ತದೆ. ಶೌಚಾಲಯವನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ತೇವವಿಲ್ಲದಂತೆ ಒಣಗಿಸಿಡಿ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಸಮುದ್ರದ ಉಪ್ಪಿನ ಶಕ್ತಿ:

ಒಂದು ಗಾಜಿನ ಬಟ್ಟಲಿನಲ್ಲಿ ಕಲ್ಲು ಉಪ್ಪನ್ನು (ಸಮುದ್ರದ ಉಪ್ಪು) ತುಂಬಿಸಿ ಸ್ನಾನಗೃಹದ ಮೂಲೆಯಲ್ಲಿಡಿ. ಇದು ಗಾಳಿಯಲ್ಲಿರುವ ವಿಷಕಾರಿ ಅಂಶಗಳನ್ನು ಹೀರಿಕೊಳ್ಳುತ್ತದೆ. ಆದರೆ ನೆನಪಿಡಿ, ಪ್ರತಿ 15 ದಿನಕ್ಕೊಮ್ಮೆ ಈ ಉಪ್ಪನ್ನು ಬದಲಿಸಬೇಕು.

ಕನ್ನಡಿಯ ತಂತ್ರ:

ಸ್ನಾನಗೃಹದ ಬಾಗಿಲಿನ ಹೊರಭಾಗದಲ್ಲಿ ಒಂದು ಸಣ್ಣ ಕನ್ನಡಿಯನ್ನು ಅಳವಡಿಸಿ. ಇದು ರೂಮಿನೊಳಗೆ ಬರಲು ಪ್ರಯತ್ನಿಸುವ ನಕಾರಾತ್ಮಕ ಶಕ್ತಿಯನ್ನು ಪ್ರತಿಫಲಿಸಿ ಮರಳಿ ಕಳುಹಿಸುತ್ತದೆ.

ಬೆಳಕು ಮತ್ತು ಸುಗಂಧ:

ಕತ್ತಲೆಯಾದ ಬಾತ್‌ರೂಮ್ ನಕಾರಾತ್ಮಕತೆಯ ಕೇಂದ್ರ. ಆದ್ದರಿಂದ ಅಲ್ಲಿ ಪ್ರಕಾಶಮಾನವಾದ ಬಿಳಿ ಎಲ್ಇಡಿ ದೀಪಗಳನ್ನು ಬಳಸಿ. ಧನಾತ್ಮಕತೆ ಹೆಚ್ಚಿಸಲು ಕರ್ಪೂರ ಅಥವಾ ಲೆಮನ್ ಗ್ರಾಸ್ (ನಿಂಬೆ ಹುಲ್ಲು) ಎಣ್ಣೆಯ ಸುಗಂಧವನ್ನು ಬಳಸಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದಿಂದ ಗುಡ್ ನ್ಯೂಸ್; ಶೇ. 2ರಷ್ಟು ತುಟ್ಟಿ ಭತ್ಯೆ ಹೆಚ್ಚಳ – Kannada News | Good News for central government employees; Modi Cabinet approves 2 per cent DA hike

ನವದೆಹಲಿ, ಏಪ್ರಿಲ್ 18: ಕೇಂದ್ರ ಸಚಿವ ಸಂಪುಟವು (Cabinet Meeting) ಕೇಂದ್ರ ಸರ್ಕಾರಿ ನೌಕರರು ಮತ್ತು ಕೇಂದ್ರ ಪಿಂಚಣಿದಾರರಿಗೆ ಶೇ. 2ರಷ್ಟು ಡಿಎ (ತುಟ್ಟಿ ಭತ್ಯೆ) ಹೆಚ್ಚಿಸುವುದಾಗಿ ಘೋಷಿಸಿದೆ. ಇದರಿಂದಾಗಿ ಒಟ್ಟು ತುಟ್ಟಿ ಭತ್ಯೆ (Dearness Allowance) ಶೇ. 58ರಿಂದ ಮೂಲ ವೇತನದ ಶೇ. 60ಕ್ಕೆ ಏರಿಕೆಯಾಗಲಿದೆ. ಪರಿಷ್ಕೃತ ಡಿಎ ಜನವರಿ 2026ರಿಂದ ಅನ್ವಯವಾಗಲಿದೆ. ಪಿಂಚಣಿದಾರರಿಗೂ ಇದು ಅನ್ವಯಿಸುತ್ತದೆ. ಇಂದು ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕದಲ್ಲಿನ (ಸಿಪಿಐ-ಐಡಬ್ಲ್ಯೂ) ಬದಲಾವಣೆಗಳ ಆಧಾರದ ಮೇಲೆ ವರ್ಷಕ್ಕೆ 2 ಬಾರಿ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗುವುದು. ಜನವರಿಯಲ್ಲಿ ಒಮ್ಮೆ ಮತ್ತು ಜುಲೈನಲ್ಲಿ ಮತ್ತೊಮ್ಮೆ ತುಟ್ಟಿ ಭತ್ಯೆಯನ್ನು ಪರಿಷ್ಕರಿಸಲಾಗುತ್ತದೆ. ಈ ತುಟ್ಟಿ ಭತ್ಯೆ ಹೆಚ್ಚಳವು ಸುಮಾರು 49.19 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.72 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡಲಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ವಾರ್ಷಿಕವಾಗಿ ಹೆಚ್ಚುವರಿಯಾಗಿ 6,791 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.

ಇದನ್ನೂ ಓದಿ: ಬೆಂಗಳೂರಿಗೆ 11 ಎಲಿವೇಟೆಡ್ ಕಾರಿಡಾರ್, ಪ್ರಮುಖ ಆಸ್ತಿಗಳಿಗೆ ತೆರಿಗೆ ವಿನಾಯಿತಿ! ಸಚಿವ ಸಂಪುಟ ಮಹತ್ವದ ನಿರ್ಧಾರ

ಈ ಶೇ. 2ರಷ್ಟು ತುಟ್ಟಿ ಭತ್ಯೆ ಹೆಚ್ಚಳದಿಂದ 30,000 ರೂ. ಮೂಲ ವೇತನ ಹೊಂದಿರುವ ಉದ್ಯೋಗಿಗೆ ಪರಿಷ್ಕರಣೆಯ ನಂತರ ತಿಂಗಳಿಗೆ 600 ರೂ. ಹೆಚ್ಚಳವಾಗುತ್ತದೆ. ನೌಕರರ ಗುಂಪುಗಳು ವೇತನ ರಚನೆಯಲ್ಲಿ ವ್ಯಾಪಕ ಬದಲಾವಣೆಗಳಿಗೆ ಕರೆ ನೀಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮವನ್ನು ತೆಗೆದುಕೊಂಡಿದೆ. ಈ ಬೇಡಿಕೆಗಳು ಪ್ರಸ್ತಾವಿತ 8ನೇ ವೇತನ ಆಯೋಗಕ್ಕೆ ಸಂಬಂಧಿಸಿವೆ.

ಸಂಪುಟದ ಪ್ರಕಟಣೆಯ ಪ್ರಕಾರ, ಈ ವರ್ಷದ ಜನವರಿ 1ರಿಂದ ಈ ಹೆಚ್ಚಳ ಅನ್ವಯವಾಗಲಿದೆ. ಅಂದರೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಕೆಲವು ತಿಂಗಳ ಬಾಕಿ ವೇತನವನ್ನು ಕೂಡ ಪಡೆಯಲಿದ್ದಾರೆ. ಹಣದುಬ್ಬರದ ಪರಿಣಾಮವನ್ನು ಸರಿದೂಗಿಸುವ ಗುರಿಯನ್ನು ಹೊಂದಿರುವ ಈ ಹೆಚ್ಚಳವು ಸುಮಾರು 49.19 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.72 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡುವ ಉದ್ದೇಶವನ್ನು ಹೊಂದಿದೆ.

ಇದನ್ನೂ ಓದಿ: ಸರ್ಕಾರಿ ಉದ್ಯೋಗಿಗಳಿಗೆ ಖುಷಿ ಸುದ್ದಿ; 8ನೇ ವೇತನ ಆಯೋಗ ಜಾರಿಯಾದರೆ ಶೇ. 34ರಷ್ಟು ಸಂಬಳ ಹೆಚ್ಚಳ?

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟವು ಅಕ್ಟೋಬರ್ 2025ರಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಶೇ. 3ರಷ್ಟು ತುಟ್ಟಿ ಭತ್ಯೆ ಹೆಚ್ಚಳಕ್ಕೆ ಅನುಮೋದನೆ ನೀಡಿತ್ತು. ಈ ನಿರ್ಧಾರವು ಜುಲೈ 1, 2025ರಿಂದ ಜಾರಿಗೆ ಬಂದಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB vs DC: ಡೆಲ್ಲಿ ಎದುರು 20 ರನ್ ಗಡಿ ದಾಟದ ಆರ್​​ಸಿಬಿಯ 8 ಬ್ಯಾಟರ್ಸ್ – Kannada News | IPL 2026: Phil Salt’s Fifty Powers RCB to 175 vs Delhi Capitals; Batting Struggles Persist

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2026 ರ 26ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗಳನ್ನು ಕಳೆದುಕೊಂಡು ಕೇವಲ 175 ರನ್ ಕಲೆಹಾಕಿತು. ಆರ್​​ಸಿಬಿ ಪರ ಇಬ್ಬರು ಬ್ಯಾಟ್ಸ್‌ಮನ್​ಗಳನ್ನು ಹೊರತುಪಡಿಸಿ ಉಳಿದ 8 ಬ್ಯಾಟ್ಸ್‌ಮನ್​ಗಳಿಗೆ 20 ರನ್​ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಇತ್ತ ಬಲಿಷ್ಠ ಬ್ಯಾಟಿಂಗ್‌ ವಿಭಾಗವನ್ನು ಹೊಂದಿರುವ ಆರ್​ಸಿಬಿ ಬ್ಯಾಟರ್​ಗಳನ್ನು ಕಟ್ಟಿಹಾಕುವಲ್ಲಿ ಡೆಲ್ಲಿ ಬೌಲರ್ಸ್​ಗಳು ಯಶಸ್ವಿಯಾದರು. ಇದರೊಂದಿಗೆ ಆರ್​ಸಿಬಿ ಈ ಆವೃತ್ತಿಯಲ್ಲಿ ಮೊದಲು ಬ್ಯಾಟಿಂಗ್‌ ಮಾಡಿ 200 ರನ್​ಗಳ ಗಡಿ ದಾಟದೆ ಇರುವುದು ಇದೇ ಮೊದಲ ಬಾರಿ.

ಎಂದಿನಂತೆ ಈ ಪಂದ್ಯದಲ್ಲೂ ಆರ್​ಸಿಬಿಗೆ ಉತ್ತಮ ಆರಂಭ ಸಿಕ್ಕಿತು. ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಜೋಡಿ ಮೊದಲ ವಿಕೆಟ್​ಗೆ 52 ರನ್​ಗಳ ಜೊತೆಯಾಟ ನೀಡಿದರು. ಆದರೆ ವಿರಾಟ್ ಕೊಹ್ಲಿಯ ವಿಕೆಟ್ ಪತನದೊಂದಿಗೆ ಈ ಜೊತೆಯಾಟ ಮುರಿದುಬಿತ್ತು. ಕೊಹ್ಲಿ 19 ರನ್​ಗಳಿಸಿ ಪೆವಿಲಿಯನ್ ಸೇರಿಕೊಂಡರು. ಕೊಹ್ಲಿ ಬಳಿಕ ಬಂದ ದೇವದತ್ ಪಡಿಕ್ಕಲ್ ಹಾಗೂ ನಾಯಕ ರಜತ್ ಪಾಟಿದರ್​ಗೆ ಈ ಪಂದ್ಯದಲ್ಲಿ ಹೆಚ್ಚಿನದನ್ನು ಮಾಡಲು ಸಾಧ್ಯವಾಗಲಿಲ್ಲ.

ತವರಿನಲ್ಲಿ ಆಡುತ್ತಿದ್ದ ಪಡಿಕ್ಕಲ್ ಕೇವಲ 18 ರನ್​​ಗಳಿಗೆ ಸುಸ್ತಾದರೆ, ನಾಯಕ ರಜತ್ ಪಾಟಿದರ್ ಕೇವಲ 8 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆದಾಗ್ಯೂ ಆರಂಭಿಕರಾಗಿ ಕಣಕ್ಕಿಳಿದಿದ್ದ ಸಾಲ್ಟ್ ತನ್ನ ಎಂದಿನ ಆಟವನ್ನು ಮುಂದುವರೆಸಿ ಸತತ ಎರಡನೇ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ತಮ್ಮ ಇನ್ನಿಂಗ್ಸ್​ನಲ್ಲಿ 38 ಎಸೆತಗಳನ್ನು ಎದುರಿಸಿದ ಸಾಲ್ಟ್ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅತ್ಯಧಿಕ 63 ರನ್​ಗಳ ಕೊಡುಗೆ ನೀಡಿದರು.

Source link

50 ಕೋಟಿ ಗಳಿಸಿದ ‘ಡಕಾಯತ್’ ಬೆಂಗಳೂರಲ್ಲಿ ಹೀಗಿತ್ತು ಸಂಭ್ರಮಾಚರಣೆ

Source link

ಮಧುಮೇಹಿಗಳಿಗೆ ಸಿಹಿ ಸುದ್ದಿ: ನೀಡಲ್ ಸಹಾಯವಿಲ್ಲದೆ ಉಸಿರಿನಿಂದಲೇ ಶುಗರ್ ಪರೀಕ್ಷೆ! – Kannada News | Nagpur University Develops Needle Free Diabetes Testing Device

ಮಧುಮೇಹ (Diabetes) ರೋಗಿಗಳಿಗೆ ದಿನನಿತ್ಯ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಲು ಸೂಜಿ ಚುಚ್ಚುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಆದರೆ ಇದು ನೋವು ಹಾಗೂ ಕಿರಿಕಿರಿ ಉಂಟುಮಾಡುತ್ತದೆ. ಇದೀಗ ಈ ಸಮಸ್ಯೆಗೆ ಪರಿಹಾರವಾಗಿ ನಾಗ್ಪುರದ ರಾಷ್ಟ್ರಸಂತ ತುಕಡೋಜಿ ಮಹಾರಾಜ್ ನಾಗ್ಪುರ ವಿಶ್ವವಿದ್ಯಾಲಯದ (RTMNU) ಸಂಶೋಧಕರು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸಾಧನದ ಮೂಲಕ ಕೇವಲ ಉಸಿರಿನ ಸಹಾಯದಿಂದಲೇ ಶುಗರ್ ಮಟ್ಟವನ್ನು ಪರೀಕ್ಷಿಸಬಹುದಾಗಿದೆ. ಹೌದು, ಕೇಳುವಾಗ ಆಶ್ಚರ್ಯ ಹುಟ್ಟಿಸಿದರೂ ಕೂಡ ಇದರಿಂದ ಅನೇಕರಿಗೆ ಅನುಕೂಲವಾಗುವುದರಲ್ಲಿ ಸಂಶಯವಿಲ್ಲ. ಹಾಗಾದರೆ ಈ ಹೊಸ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂಬಿತ್ಯಾದಿ ಮಾಹಿತಿಗಳನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೊಸ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ?

ಈ ಸಾಧನವು ‘ನಾನ್- ಇನ್ವೇಸಿವ್’ ತಂತ್ರಜ್ಞಾನವನ್ನು ಆಧರಿಸಿದೆ. ಅಂದರೆ ದೇಹಕ್ಕೆ ಯಾವುದೇ ರೀತಿಯ ಹಾನಿ ಮಾಡದೇ ಪರೀಕ್ಷೆ ನಡೆಸಬಹುದು. ವ್ಯಕ್ತಿಯ ಉಸಿರಿನಲ್ಲಿರುವ ರಾಸಾಯನಿಕ ಅಂಶಗಳನ್ನು ವಿಶ್ಲೇಷಿಸಿ, ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ಅಂದಾಜು ಮಾಡುತ್ತದೆ. ಈ ತಂತ್ರಜ್ಞಾನವು ಶುದ್ಧ, ವೇಗವಾದ ಮತ್ತು ನೋವಿಲ್ಲದ ಪರೀಕ್ಷೆಗೆ ಸಹಾಯ ಮಾಡುತ್ತದೆ. ಈ ಆವಿಷ್ಕಾರಕ್ಕೆ ಯುಕೆ ಡಿಸೈನ್ ಪ್ರಮಾಣಪತ್ರ ದೊರೆತಿದ್ದು, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸಂಶೋಧನೆಯ ಮಹತ್ವವನ್ನು ತೋರಿಸುತ್ತದೆ. ಈ ಸಾಧನ ಅಭಿವೃದ್ಧಿಯಲ್ಲಿ ಡಾ. ವರ್ಷಾ ಧುರ್ವೆ, ಹರ್ಷ ತಿವಾರಿ, ಸಬ್ರೀನ್ ಬಾನು ಸೇರಿದಂತೆ ಹಲವು ತಜ್ಞರು ಪ್ರಮುಖ ಪಾತ್ರವಹಿಸಿದ್ದಾರೆ. ಇತರ ದೇಶಗಳ ವಿಜ್ಞಾನಿಗಳ ಸಹಕಾರವೂ ಇದರಲ್ಲಿ ಇದೆ ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ: ಪದೇ ಪದೇ ಹಸಿವಾಗುವುದು ಮಧುಮೇಹದ ಆರಂಭಿಕ ಲಕ್ಷಣವೇ? ಇಲ್ಲಿದೆ ತಜ್ಞರ ಉತ್ತರ

ಭವಿಷ್ಯದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ;

ಈ ಸಾಧನವು ಯಶಸ್ವಿಯಾಗಿ ಮಾರುಕಟ್ಟೆಗೆ ಬಂದರೆ, ಮಧುಮೇಹಿಗಳಿಗೆ ದಿನನಿತ್ಯದ ಪರೀಕ್ಷೆ ಸುಲಭವಾಗುತ್ತದೆ. ಮನೆಲ್ಲಿಯೇ ಸರಳವಾಗಿ ಪರೀಕ್ಷೆ ನಡೆಸಬಹುದು ಮತ್ತು ಆಸ್ಪತ್ರೆಗೆ ಹೋಗುವ ಅಗತ್ಯ ಕಡಿಮೆಯಾಗುತ್ತದೆ. ಇದರಿಂದ ಚಿಕಿತ್ಸೆ ಪ್ರಕ್ರಿಯೆ ಹೆಚ್ಚು ಸುಗಮವಾಗುವ ಸಾಧ್ಯತೆ ಇದೆ. ಪ್ರಸ್ತುತ ಈ ಸಾಧನದ ಶುದ್ಧತೆ ಮತ್ತು ನಿಖರತೆಯನ್ನು ಖಚಿತಪಡಿಸಲು ವಿವಿಧ ಪರೀಕ್ಷೆಗಳು ನಡೆಯುತ್ತಿವೆ. ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದ ನಂತರ ಇದು ಸಾರ್ವಜನಿಕರಿಗೆ ಲಭ್ಯವಾಗಲಿದೆ. ಒಟ್ಟಿನಲ್ಲಿ, ಈ ಹೊಸ ತಂತ್ರಜ್ಞಾನ ಮಧುಮೇಹಿಗಳ ಜೀವನವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯಾಗಲಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಹಿಳಾ ಮೀಸಲಾತಿ ಮಸೂದೆಗೆ ಸೋಲು; ಇಂದು ರಾತ್ರಿ 8.30ಕ್ಕೆ ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ – Kannada News | PM Modi will address the nation tonight at 8.30 after womens reservation bill defeat in Lok Sabha

ನವದೆಹಲಿ, ಏಪ್ರಿಲ್ 18: ದೇಶದಲ್ಲಿ ಮಹಿಳಾ ಮೀಸಲಾತಿ (Women’s Quota Bill) ಜಾರಿಗೆ ತರುವ ಮಸೂದೆ ಲೋಕಸಭೆಯಲ್ಲಿ ಸೋತ ಹಿನ್ನೆಲೆಯಲ್ಲಿ ಇಂದು ರಾತ್ರಿ 8.30ಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಹಿಳಾ ಮೀಸಲಾತಿ ಅನುಷ್ಠಾನದ ವಿಷಯ ಮತ್ತು ವಿರೋಧ ಪಕ್ಷಗಳು ಶುಕ್ರವಾರ ಸಂವಿಧಾನ (131ನೇ ತಿದ್ದುಪಡಿ) ಮಸೂದೆಯ ವಿರುದ್ಧ ಮತ ಚಲಾಯಿಸಿದ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಪ್ರಧಾನಿ ಮೋದಿ ಇಂದು ರಾತ್ರಿ ಚರ್ಚಿಸುವ ನಿರೀಕ್ಷೆಯಿದೆ.

2011ರ ಜನಗಣತಿಯ ಆಧಾರದ ಮೇಲೆ ನಡೆದ ಸೀಮಾ ನಿರ್ಣಯದ ನಂತರ 2029ರ ಸಂಸತ್ ಚುನಾವಣೆಗೆ ಮುಂಚಿತವಾಗಿ ಮಹಿಳಾ ಮೀಸಲಾತಿ ಕಾನೂನನ್ನು ಕಾರ್ಯಗತಗೊಳಿಸಲು ಈ ಮಸೂದೆಯಡಿಯಲ್ಲಿ ಲೋಕಸಭಾ ಸ್ಥಾನಗಳನ್ನು ಪ್ರಸ್ತುತ 543ರಿಂದ 816ಕ್ಕೆ ಹೆಚ್ಚಿಸಬೇಕಾಗಿತ್ತು. ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭಾ ಸ್ಥಾನಗಳನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಸರ್ಕಾರ ಹೇಳಿತ್ತು.

ಇದನ್ನೂ ಓದಿ: ಮಹಿಳಾ ಮೀಸಲಾತಿಗೆ ವಿರೋಧಿಸಿದ್ದಕ್ಕೆ ವಿಪಕ್ಷ ಬೆಲೆ ತೆರಬೇಕಾಗುತ್ತದೆ; ಪಿಎಂ ಮೋದಿ ವಾಗ್ದಾಳಿ

ಈ ನಿರ್ಣಾಯಕ ಮಸೂದೆಯನ್ನು ಅಂಗೀಕರಿಸಲು ಮೂರನೇ ಎರಡರಷ್ಟು ಬಹುಮತದ ಅಗತ್ಯವಿತ್ತು. ಆದರೆ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್​ಡಿಎ ಬಹುಮತದ ಸಂಖ್ಯೆಗಳನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಶುಕ್ರವಾರ ರಾತ್ರಿ ಲೋಕಸಭೆಯಲ್ಲಿ ಮಸೂದೆಯ ಮೇಲಿನ ಮತದಾನದ ಸಮಯದಲ್ಲಿ 298 ಸದಸ್ಯರು ಈ ಮಸೂದೆಯ ಪರವಾಗಿ ಮತ ಚಲಾಯಿಸಿದರೆ, 230 ಸಂಸದರು ಅದರ ವಿರುದ್ಧ ಮತ ಚಲಾಯಿಸಿದರು. ಮತ ಚಲಾಯಿಸಿದ 528 ಸದಸ್ಯರಲ್ಲಿ ಮಸೂದೆಗೆ ಮೂರನೇ ಎರಡರಷ್ಟು ಬಹುಮತಕ್ಕೆ 352 ಮತಗಳು ಬೇಕಾಗಿದ್ದವು. ಹೀಗಾಗಿ, ಈ ಮಸೂದೆ ಅಂಗೀಕಾರವಾಗಲಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link