Headlines

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ! – Kannada News | Peresandra Tragedy: 18 Year Old Suicide After Kitchen Advice; Youth Mental Health Crisis

ಪೆರೇಸಂದ್ರ ಗ್ರಾಮದ ನಿವಾಸಿ ಶ್ರುತಿ ಚಿಕ್ಕಬಳ್ಳಾಪುರ, ಏ, 18: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿದ್ದಳು. ಪಿಯುಸಿ ಫಲಿತಾಂಶ ಬಂದ ಸಮಯದಲ್ಲೂ ವಿದ್ಯಾರ್ಥಿನಿಯೊಬ್ಬಳು ದುಡುಕಿ ಪ್ರಾಣ ಕಳೆದುಕೊಂಡಿದ್ದಳು. ಇದೀಗ ಇಂತಹದೇ ಮತ್ತೊಂದು ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಜಿಲ್ಲೆಯ ಪೆರೇಸಂದ್ರ ಗ್ರಾಮದಲ್ಲಿ 18 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಸಂಭವಿಸಿದೆ. ಮನೆಯಲ್ಲಿ ಅತ್ತೆ ಅಡುಗೆ ಮಾಡುವಂತೆ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಈ…

Read More

RCB vs DC: 74 ಸಿಕ್ಸರ್‌, 64 ಬೌಂಡರಿ.! 560 ಎಸೆತಗಳಲ್ಲಿ ಇತಿಹಾಸ ಸೃಷ್ಟಿಸಿದ ಟಿಮ್ ಡೇವಿಡ್

ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರು, ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದವರು ಮತ್ತು ಅತಿ ಹೆಚ್ಚು ಬೌಂಡರಿಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳೆ ಮುಂಚೂಣಿಯಲ್ಲಿದ್ದಾರೆ. ಆದರೆ ಇದೆಲ್ಲದರ ನಡುವೆ ಅತಿ ವೇಗವಾಗಿ ರನ್ ಪೂರೈಸಿದ ಆಟಗಾರರ ಪಟ್ಟಿಯಲ್ಲಿ ಆರ್​ಸಿಬಿಯ ಸ್ಫೋಟಕ ದಾಂಡಿಗ ಟಿಮ್ ಡೇವಿಡ್ ಇದೀಗ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಐಪಿಎಲ್ 2026 ರ 26 ನೇ ಪಂದ್ಯ ಆರ್​ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ 26 ರನ್​ಗಳ ಇನ್ನಿಂಗ್ಸ್ ಆಡಿದ…

Read More

Akshaya Tritiya: ಅಕ್ಷಯ ತೃತೀಯದಂದು ವಾಹನ ಖರೀದಿಸುತ್ತಿದ್ದೀರಾ? ನಿಮ್ಮ ರಾಶಿಗೆ ಅನುಗುಣವಾಗಿ ಇಲ್ಲಿದೆ ಬಣ್ಣಗಳ ಆಯ್ಕೆ! – Kannada News | Akshaya Tritiya Vehicle Purchase: Astrological Guide for Lucky Colors and Blessings

ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯವನ್ನು ವರ್ಷದ ಅತ್ಯಂತ ಶ್ರೇಷ್ಠ ಮತ್ತು ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಮಾಡಿದ ಯಾವುದೇ ಹೂಡಿಕೆ ಅಥವಾ ಖರೀದಿ ಅಕ್ಷಯವಾಗಿ ಬೆಳೆಯುತ್ತದೆ ಎಂಬ ಅಚಲ ನಂಬಿಕೆಯಿದೆ. ಸಾಮಾನ್ಯವಾಗಿ ಜನರು ಈ ದಿನ ಚಿನ್ನ ಅಥವಾ ಬೆಳ್ಳಿಯ ಆಭರಣಗಳನ್ನು ಖರೀದಿಸಲು ಆದ್ಯತೆ ನೀಡುತ್ತಾರೆ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಶುಭ ಮುಹೂರ್ತದಲ್ಲಿ ಹೊಸ ವಾಹನವನ್ನು ಮನೆಗೆ ತರುವುದು ಕೂಡ ಅಷ್ಟೇ ಅದೃಷ್ಟದಾಯಕವಾಗಿದೆ. ವಾಹನವು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದ್ದು, ಈ…

Read More

ಕರ್ನಾಟಕ ಲೋಕಾಯುಕ್ತದ 40 ವರ್ಷಗಳ ಸಾರ್ಥಕ ಪಯಣ: ಸಾಧನೆಯ ಹಾದಿ ಮೆಲುಕು ಹಾಕಿದ ನ್ಯಾಯಮೂರ್ತಿಗಳು – Kannada News | Karnataka Lokayukta: 40 Years of Anti Corruption Service and Good Governance

ಕರ್ನಾಟಕ ಲೋಕಾಯುಕ್ತ Image Credit source: lokayukta.karnataka.gov.in ಬೆಂಗಳೂರು, ಏಪ್ರಿಲ್​ 18: ಕರ್ನಾಟಕ ಲೋಕಾಯುಕ್ತ (Karnataka Lokayukta) ಸಂಸ್ಥೆಯು ತನ್ನ ಅರ್ಥಪೂರ್ಣ ಹಾಗೂ ಅವಿರತ ಸೇವೆಯ 40 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ ಹಿನ್ನೆಲೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ನಾಲ್ಕು ದಶಕಗಳ ಕಾರ್ಯಸೇವೆ ಮೆಲುಕು ಹಾಕುವ ಮೂಲಕ ವಿವಿಧ ಗೋಷ್ಠಿ ಹಾಗೂ ವಿಚಾರ ಸಂಕೀರ್ಣಕ್ಕೆ ಇಂದಿನ ಕಾರ್ಯಕ್ರಮ ಸಾಕ್ಷಿಯಾಗಿತ್ತು. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಿಷ್ಟು  ಕರ್ನಾಟಕ ಲೋಕಾಯುಕ್ತದ 4 ದಶಕಗಳ…

Read More

“ವಾಸ್ತು ಹೇಳುವ ನೆಪದಲ್ಲಿ ನನ್ನ ಎದೆಯ ಭಾಗ ಮುಟ್ಟಿದ್ದಾರೆ”: ಮಹಿಳೆಯ ಗಂಭೀರ ಆರೋಪ, ಇದು ಹನಿಟ್ರಾಪ್ ಎಂದ ಮಾಲೀಕ! – Kannada News | Vijayanagar FIRs: Vastu Consultant Faces Assault Charge, Alleges Extortion and Attack

ವಾಸ್ತು ಹೇಳುವವನ ಮೇಲೆ ದೌರ್ಜನ್ಯದ ಆರೋಪ ಬೆಂಗಳೂರು, ಏ.18: ನಗರದ ವಿಜಯನಗರದಲ್ಲಿರುವ ‘ಶ್ರೀ ಅನಂತ್ ಮೆಡಿಕಲ್ ಸಲ್ಯೂಷನ್ಸ್’ ಕಚೇರಿಯಲ್ಲಿ ನಡೆದ ಘಟನೆಯೊಂದು ಈಗ ಪೊಲೀಸ್ ಮೆಟ್ಟಿಲೇರಿದೆ. ವಾಸ್ತು ಕೇಳಲು ಹೋದ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದ ಬೆನ್ನಲ್ಲೇ, ಇದು ಹಣಕ್ಕಾಗಿ ನಡೆಸಿದ ಬ್ಲ್ಯಾಕ್‌ಮೇಲ್ ತಂತ್ರ ಎಂದು ಆರೋಪಿಗಳು ಮರುದೂರು ನೀಡಿದ್ದಾರೆ. ಸಂತ್ರಸ್ತ ಮಹಿಳೆಯು ಏಪ್ರಿಲ್ 4ರಂದು ತನ್ನ ಮನೆಯ ವಾಸ್ತು ಕೇಳಲು ಶಾಂತಕುಮಾರ್ ಎಂಬುವವರ ಕಚೇರಿಗೆ ತೆರಳಿದ್ದರು. ಈ ವೇಳೆ ಶಾಂತಕುಮಾರ್…

Read More

Vasthu Tips: ಬೆಳಿಗ್ಗೆ ಎದ್ದ ತಕ್ಷಣ ಆಲಸ್ಯ ಅಥವಾ ಕಿರಿಕಿರಿ ಉಂಟಾಗುತ್ತಿದೆಯೇ? ಬೆಡ್‌ರೂಮ್‌ನ ಈ ವಾಸ್ತು ದೋಷವೇ ಕಾರಣವಿರಬಹುದು! – Kannada News | Vastu Tips for Better Sleep: Fix Bedroom Bathroom Defects Easily

ದಿನವಿಡೀ ಕಚೇರಿ ಕೆಲಸ, ಟ್ರಾಫಿಕ್ ಕಿರಿಕಿರಿ ಎದುರಿಸಿ ಮನೆಗೆ ಬಂದಾಗ ನಮಗೆ ಬೇಕಿರುವುದು ನೆಮ್ಮದಿಯ ನಿದ್ರೆ. ಆದರೆ, ಸಾಕಷ್ಟು ನಿದ್ರೆ ಮಾಡಿದರೂ ಮರುದಿನ ಬೆಳಿಗ್ಗೆ ಉತ್ಸಾಹವಿಲ್ಲದೆ, ಆಲಸ್ಯ ಅಥವಾ ಕಿರಿಕಿರಿ ಅನುಭವಿಸುತ್ತಿದ್ದರೆ ಅದು ನಿಮ್ಮ ತಪ್ಪಲ್ಲ; ನಿಮ್ಮ ಮನೆಯ ವಿನ್ಯಾಸದ ದೋಷವಿರಬಹುದು! ಹಾಸಿಗೆಯ ಎದುರು ಬಾತ್‌ರೂಮ್ ಬಾಗಿಲು: ಆಧುನಿಕ ಅಪಾರ್ಟ್‌ಮೆಂಟ್‌ಗಳಲ್ಲಿ ಜಾಗದ ಮಿತಿಯಿಂದಾಗಿ ಹಾಸಿಗೆಯ ಎದುರಿಗೇ ಶೌಚಾಲಯದ ಬಾಗಿಲು ಇರುವ ವಿನ್ಯಾಸ ಸಾಮಾನ್ಯವಾಗಿದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಇದು ದೊಡ್ಡ ದೋಷ. ಶೌಚಾಲಯವು ಅಶುದ್ಧ ಸ್ಥಳವಾಗಿದ್ದು,…

Read More

ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದಿಂದ ಗುಡ್ ನ್ಯೂಸ್; ಶೇ. 2ರಷ್ಟು ತುಟ್ಟಿ ಭತ್ಯೆ ಹೆಚ್ಚಳ – Kannada News | Good News for central government employees; Modi Cabinet approves 2 per cent DA hike

ನವದೆಹಲಿ, ಏಪ್ರಿಲ್ 18: ಕೇಂದ್ರ ಸಚಿವ ಸಂಪುಟವು (Cabinet Meeting) ಕೇಂದ್ರ ಸರ್ಕಾರಿ ನೌಕರರು ಮತ್ತು ಕೇಂದ್ರ ಪಿಂಚಣಿದಾರರಿಗೆ ಶೇ. 2ರಷ್ಟು ಡಿಎ (ತುಟ್ಟಿ ಭತ್ಯೆ) ಹೆಚ್ಚಿಸುವುದಾಗಿ ಘೋಷಿಸಿದೆ. ಇದರಿಂದಾಗಿ ಒಟ್ಟು ತುಟ್ಟಿ ಭತ್ಯೆ (Dearness Allowance) ಶೇ. 58ರಿಂದ ಮೂಲ ವೇತನದ ಶೇ. 60ಕ್ಕೆ ಏರಿಕೆಯಾಗಲಿದೆ. ಪರಿಷ್ಕೃತ ಡಿಎ ಜನವರಿ 2026ರಿಂದ ಅನ್ವಯವಾಗಲಿದೆ. ಪಿಂಚಣಿದಾರರಿಗೂ ಇದು ಅನ್ವಯಿಸುತ್ತದೆ. ಇಂದು ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕದಲ್ಲಿನ (ಸಿಪಿಐ-ಐಡಬ್ಲ್ಯೂ)…

Read More

RCB vs DC: ಡೆಲ್ಲಿ ಎದುರು 20 ರನ್ ಗಡಿ ದಾಟದ ಆರ್​​ಸಿಬಿಯ 8 ಬ್ಯಾಟರ್ಸ್ – Kannada News | IPL 2026: Phil Salt’s Fifty Powers RCB to 175 vs Delhi Capitals; Batting Struggles Persist

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2026 ರ 26ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗಳನ್ನು ಕಳೆದುಕೊಂಡು ಕೇವಲ 175 ರನ್ ಕಲೆಹಾಕಿತು. ಆರ್​​ಸಿಬಿ ಪರ ಇಬ್ಬರು ಬ್ಯಾಟ್ಸ್‌ಮನ್​ಗಳನ್ನು ಹೊರತುಪಡಿಸಿ ಉಳಿದ 8 ಬ್ಯಾಟ್ಸ್‌ಮನ್​ಗಳಿಗೆ 20 ರನ್​ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಇತ್ತ ಬಲಿಷ್ಠ ಬ್ಯಾಟಿಂಗ್‌ ವಿಭಾಗವನ್ನು ಹೊಂದಿರುವ ಆರ್​ಸಿಬಿ ಬ್ಯಾಟರ್​ಗಳನ್ನು ಕಟ್ಟಿಹಾಕುವಲ್ಲಿ ಡೆಲ್ಲಿ ಬೌಲರ್ಸ್​ಗಳು ಯಶಸ್ವಿಯಾದರು….

Read More

50 ಕೋಟಿ ಗಳಿಸಿದ ‘ಡಕಾಯತ್’ ಬೆಂಗಳೂರಲ್ಲಿ ಹೀಗಿತ್ತು ಸಂಭ್ರಮಾಚರಣೆ

ಅಡಿವಿ ಶೇಷ್, ಮೃಣಾಲ್ ಠಾಕೂರ್ ಮತ್ತು ಅನುರಾಗ್ ಕಶ್ಯಪ್ ನಟನೆಯ ‘ಡಕೈತ್’ ಸಿನಿಮಾ ಕಳೆದ ವಾರ ಬಿಡುಗಡೆ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾ 50 ಕೋಟಿ ಗಳಿಕೆಯನ್ನೂ ಸಹ ಮಾಡಿದೆ. ಇದೀಗ ‘ಡಕೈತ್’ ತಂಡ ಬೆಂಗಳೂರಿಗೆ ಬಂದಿದ್ದು, ‘ಡಕೈತ್’ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿರುವುದಕ್ಕೆ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ಸಹ ಮಾಡಿದ್ದಾರೆ. ಅಡವಿಶೇಷ್, ಅನುರಾಗ್ ಕಶ್ಯಪ್ ಅವರುಗಳು ನಿನ್ನೆ ಬೆಂಗಳೂರಿಗೆ ಬಂದಿದ್ದು, ಬೆಂಗಳೂರಿನ ಜಿಟಿ ಮಾಲ್​​ಗೆ ಭೇಟಿ ನೀಡಿ ಸಿನಿಮಾ ನೋಡುತ್ತಿದ್ದವರೊಟ್ಟಿಗೆ ಮಾತನಾಡಿದರು. ಸಿನಿಮಾಕ್ಕೆ ಬೆಂಬಲಿಸುತ್ತಿರುವುದಕ್ಕೆ ಧನ್ಯವಾದ…

Read More

ಮಧುಮೇಹಿಗಳಿಗೆ ಸಿಹಿ ಸುದ್ದಿ: ನೀಡಲ್ ಸಹಾಯವಿಲ್ಲದೆ ಉಸಿರಿನಿಂದಲೇ ಶುಗರ್ ಪರೀಕ್ಷೆ! – Kannada News | Nagpur University Develops Needle Free Diabetes Testing Device

ಮಧುಮೇಹ (Diabetes) ರೋಗಿಗಳಿಗೆ ದಿನನಿತ್ಯ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಲು ಸೂಜಿ ಚುಚ್ಚುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಆದರೆ ಇದು ನೋವು ಹಾಗೂ ಕಿರಿಕಿರಿ ಉಂಟುಮಾಡುತ್ತದೆ. ಇದೀಗ ಈ ಸಮಸ್ಯೆಗೆ ಪರಿಹಾರವಾಗಿ ನಾಗ್ಪುರದ ರಾಷ್ಟ್ರಸಂತ ತುಕಡೋಜಿ ಮಹಾರಾಜ್ ನಾಗ್ಪುರ ವಿಶ್ವವಿದ್ಯಾಲಯದ (RTMNU) ಸಂಶೋಧಕರು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸಾಧನದ ಮೂಲಕ ಕೇವಲ ಉಸಿರಿನ ಸಹಾಯದಿಂದಲೇ ಶುಗರ್ ಮಟ್ಟವನ್ನು ಪರೀಕ್ಷಿಸಬಹುದಾಗಿದೆ. ಹೌದು, ಕೇಳುವಾಗ ಆಶ್ಚರ್ಯ ಹುಟ್ಟಿಸಿದರೂ ಕೂಡ ಇದರಿಂದ ಅನೇಕರಿಗೆ ಅನುಕೂಲವಾಗುವುದರಲ್ಲಿ ಸಂಶಯವಿಲ್ಲ. ಹಾಗಾದರೆ ಈ ಹೊಸ ತಂತ್ರಜ್ಞಾನ…

Read More