‘ಟಾಕ್ಸಿಕ್’ ಪಾತ್ರದ ಬಗ್ಗೆ ಮಾತನಾಡಿದ ಕಿಯಾರಾ ಅಡ್ವಾಣಿ: ಹೇಳಿದ್ದೇನು? – Kannada News | Kiara Advani talks about Toxic movie and her character in it
ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಸದ್ಯಕ್ಕೆ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಮಾರ್ಚ್ 19ರಂದು ಬಿಡುಗಡೆ ಆಗಬೇಕಿದ್ದ ಸಿನಿಮಾ ಇದೀಗ ಜೂನ್ 4ಕ್ಕೆ ಬಿಡುಗಡೆ ಮುಂದೂಡಿಕೊಂಡಿದ್ದು, ಸಿನಿಮಾದ ಪ್ರಚಾರ ಇದೀಗ ನಿಧಾನಕ್ಕೆ ಆರಂಭವಾಗಿದೆ. ‘ರಾಮಾಯಣ’ ಪ್ರಚಾರಕ್ಕಾಗಿ ಲಾಸ್ ಏಂಜಲ್ಸ್ನ ಸಿನಿಮಾಕಾನ್ 2026ನಲ್ಲಿ ಭಾಗಿ ಆಗಿರುವ ಯಶ್ ಅವರಿಗೆ ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಬಹಳ ಪ್ರಶ್ನೆಗಳು ಎದುರಾಗಿದ್ದು, ಯಶ್ ಸಹ ‘ಟಾಕ್ಸಿಕ್’ ಬಗ್ಗೆ ಕುತೂಹಲಕಾರಿ ಅಂಶಗಳನ್ನು ಬಿಟ್ಟುಕೊಟ್ಟಿದ್ದಾರೆ. ಇದೀಗ ಪ್ರತಿಷ್ಠಿತ ಬ್ರ್ಯಾಂಡ್ ಕೊಲ್ಯಾಬರೇಷನ್ನಲ್ಲಿ ನಟಿ…