Category Archives: Blog

Your blog category

NHAI Recruitment 2026: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಡೆಪ್ಯೂಟಿ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ – Kannada News | NHAI Deputy Manager Recruitment 2026: Apply Online for Civil Engg Jobs

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಅಧಿಕೃತ ಅಧಿಸೂಚನೆಯ ಮೂಲಕ ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತ ಸರ್ಕಾರದಡಿಯಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 09ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಶೈಕ್ಷಣಿಕ ಅರ್ಹತೆ:

NHAI ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ BE/ B.Tech ಪೂರ್ಣಗೊಳಿಸಿರಬೇಕು .

ವಯಸ್ಸಿನ ಮಿತಿ:

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 09-02-2026 ರಂತೆ 30 ವರ್ಷಗಳು.

ವಯೋಮಿತಿ ಸಡಿಲಿಕೆ:

  • ಒಬಿಸಿ ಅಭ್ಯರ್ಥಿಗಳು: 3 ವರ್ಷಗಳು
  • SC/ST ಅಭ್ಯರ್ಥಿಗಳು: 5 ವರ್ಷಗಳು
  • ಪಿಡಬ್ಲ್ಯೂಬಿಡಿ (ಸಾಮಾನ್ಯ) ಅಭ್ಯರ್ಥಿಗಳು: 10 ವರ್ಷಗಳು
  • ಪಿಡಬ್ಲ್ಯೂಬಿಡಿ (ಒಬಿಸಿ) ಅಭ್ಯರ್ಥಿಗಳು: 13 ವರ್ಷಗಳು
  • ಪಿಡಬ್ಲ್ಯೂಬಿಡಿ (ಎಸ್‌ಸಿ/ಎಸ್‌ಟಿ) ಅಭ್ಯರ್ಥಿಗಳು: 15 ವರ್ಷಗಳು

ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲನೆಯದಾಗಿ NHAI ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
  • NHAI ಡೆಪ್ಯೂಟಿ ಮ್ಯಾನೇಜರ್ ಹುದ್ದೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • NHAI ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ (ಅನ್ವಯಿಸಿದರೆ) ಅಪ್‌ಲೋಡ್ ಮಾಡಿ.
  • ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೊನೆಯದಾಗಿ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.

Source link

SSLC ಪ್ರಶ್ನೆಪತ್ರಿಕೆ ಸೋರಿಕೆ: ಟಿವಿ9 ವರದಿ ಬೆನ್ನಲ್ಲೇ ಸೆಂಟರ್ ಪತ್ತೆ, ಡಿಡಿಪಿಐ ಸ್ಥಳಕ್ಕೆ ಭೇಟಿ – Kannada News | TV9 Identifies Exam Centre Where SSLC Question Paper Was Leaked

ಬೆಳಗಾವಿ, ಜನವರಿ 10: ಎಸ್​​ಎಸ್​​ಎಲ್​ಸಿ ಪೂರ್ವಸಿದ್ಧತಾ ಪರೀಕ್ಷೆಯ ಸಮಾಜ ವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆ ಸೋರಿಕೆ (SSLC Exam Paper Leak) ಆರೋಪ ಕೇಳಬಂದಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಮಾಜ ವಿಜ್ಞಾನ ಪ್ರಶ್ನೆಪತ್ರಿಕೆ ವೈರಲ್ ಆಗಿದೆ. ಆದರೆ ಇದೀಗ ಪ್ರಶ್ನೆಪತ್ರಿಕೆ ಲೀಕ್​ ಆದ ಪರೀಕ್ಷಾ ಕೇಂದ್ರ ಪತ್ತೆ ಆಗಿದೆ. ಟಿವಿ9 ವರದಿ ಗಮನಿಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಸೆಂಟರ್ ಪತ್ತೆ ಮಾಡಲಾಗಿದೆ. ಬೆಳಗಾವಿಯ ಪರೀಕ್ಷಾ ಕೇಂದ್ರವಾಗಿದ್ದು, ಲಕ್ಷ್ಮೀನಗರದಲ್ಲಿರುವ ಸೇಂಟ್ ಮೀರಾ ಶಾಲೆಯಿಂದ ಸೋರಿಕೆಯಾಗಿರುವ ಸಂಶಯ ವ್ಯಕ್ತವಾಗಿದೆ.

ಪ್ರಶ್ನೆಪತ್ರಿಕೆ ಮೇಲಿರುವ ಕೋಡ್ ಸೇಂಟ್ ಮೂಲಕ ಸೆಂಟರ್ ಪತ್ತೆ

ಪ್ರಶ್ನೆಪತ್ರಿಕೆ ಮೇಲಿರುವ ಕೋಡ್ ಸೇಂಟ್ ಮೀರಾ ಶಾಲೆಯದ್ದು ಆಗಿದೆ. ಟಿವಿ9 ವರದಿ ಬೆನ್ನಲ್ಲೇ ಶಾಲೆಗೆ ಡಿಡಿಪಿಐ ಲೀಲಾವತಿ ಭೇಟಿ ನೀಡಿದ್ದು, ಬೆಳಗ್ಗೆಯಿಂದ ಪರೀಕ್ಷೆ ಆರಂಭವಾಗುವವರೆಗಿನ ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ.

ಟಿವಿ9 ವರದಿ ಗಮನಿಸಿ ಸೆಂಟರ್ ಪತ್ತೆ: ಡಿಡಿಪಿಐ ಲೀಲಾವತಿ

ಇನ್ನು ಈ ಬಗ್ಗೆ ಟಿವಿ9ಗೆ ಬೆಳಗಾವಿ ಡಿಡಿಪಿಐ ಲೀಲಾವತಿ ಪ್ರತಿಕ್ರಿಯಿಸಿದ್ದು, ಟಿವಿ9 ವರದಿ ಗಮನಿಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಸೆಂಟರ್ ಪತ್ತೆ ಹಚ್ಚಲಾಗಿದೆ. ಬೆಳಗಾವಿ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯ ಕೋಡ್​ ಇದ್ದು, ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಪ್ರಶ್ನೆಪತ್ರಿಕೆ ಲೀಕ್ ! ಸಮಾಜ ವಿಜ್ಞಾನ ಪ್ರಶ್ನೆಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಬೆಳಗಾವಿ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 17 ವಿದ್ಯಾರ್ಥಿಗಳು 10ನೇ ತರಗತಿ ಓದುತ್ತಿದ್ದಾರೆ. ವಿದ್ಯಾರ್ಥಿಗಳಿಂದಲೂ ಮಾಹಿತಿ ಪಡೆದಿದ್ದೇವೆ. ಹೆಚ್​ಎಂ ಸೇರಿ ಶಿಕ್ಷಕರಿಂದಲೂ ಈ ಬಗ್ಗೆ ಮಾಹಿತಿ ಪಡೆದಿದ್ದೇನೆ. ಎಲ್ಲಾ ಮಾಹಿತಿಯ ವರದಿ ಸಿದ್ಧಪಡಿಸಿ ಇಲಾಖೆಗೆ ಕಳುಹಿಸುತ್ತೇನೆ ಎಂದು ಬೆಳಗಾವಿ ಡಿಡಿಪಿಐ ಲೀಲಾವತಿ ಹೇಳಿದ್ದಾರೆ.

ಇದನ್ನೂ ಓದಿ: SSLC ವಿದ್ಯಾರ್ಥಿಗಳೇ ಎಚ್ಚರ! ಹಣ ಕೊಟ್ರೆ ಪ್ರಶ್ನೆ ಪತ್ರಿಕೆ ಸಿಗತ್ತೆ ಅಂತಾ ಯಾಮಾರಬೇಡಿ

ಡೆಲ್ಟಾ ಎಸ್‌ಎಸ್‌ಎಲ್‌ಸಿ ಎಂಬ ಇನ್​​ಸ್ಟಾಗ್ರಾಂ ಖಾತೆಯಿಂದ ವೈರಲ್ ಮಾಡಲಾಗಿದೆ. ಪ್ರತಿವರ್ಷವೂ ಈ ಖಾತೆ ಪರೀಕ್ಷೆ ಸಮಯದಲ್ಲಿ ಸಕ್ರಿಯವಾಗುತ್ತೆ. ಕಳೆದ ವರ್ಷವೂ ಇದೇ ಖಾತೆಯಿಂದ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು, ಆದರೆ ಪರೀಕ್ಷಾ ಮಂಡಳಿ ಅಧಿಕಾರಿಗಳಿಂದ ದಿವ್ಯ ನಿರ್ಲಕ್ಷ್ಯವಹಿಸಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ – Kannada News | Yash mother visited Hasan police station regarding compound demolition case

ಯಶ್ (Yash) ಅವರ ತಾಯಿ ಪುಷ್ಪ ಅವರಿಗೆ ಸೇರಿದ್ದು ಎನ್ನಲಾಗುತ್ತಿರುವ ಹಾಸನದಲ್ಲಿರುವ ಸೈಟ್​​ನ ಕಾಂಪೌಂಡ್ ಅನ್ನು ಆ ಜಾಗದ ಸದ್ಯದ ಮಾಲೀಕರು ಎಂದು ಹೇಳಿಕೊಂಡಿರುವ ದೇವರಾಜ್ ಹೆಸರಿನ ವ್ಯಕ್ತಿಯೊಬ್ಬರು ಕೆಲ ದಿನಗಳ ಹಿಂದೆ ನೆಲಸಮಗೊಳಿಸಿದ್ದರು. ಆ ಬಗ್ಗೆ ಪುಷ್ಪ ಅವರ ಪರವಾಗಿ ಯಶ್ ಅವರ ಸಂಬಂಧಿ ದುರ್ಗಾಪ್ರಸಾದ್ ಅವರು ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಕೆಲ ದಿನಗಳ ಹಿಂದೆ ದೂರು ಸಲ್ಲಿಸಿದ್ದರು. ಇದೀಗ ಸ್ವತಃ ಪುಷ್ಪ ಅವರು ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸರೊಟ್ಟಿಗೆ ಘಟನೆ ಕುರಿತಾಗಿ ಮಾತುಕತೆ ನಡೆಸಿದ್ದಾರೆ.

ಹಾಸನ ನಗರದ ವಿದ್ಯಾನಗರದಲ್ಲಿರುವ ಪುಷ್ಪ ಅವರ ಮನೆಯ ಕೌಂಪೌಂಡ್‌ ಅನ್ನು ವ್ಯಕ್ತಿಯೊಬ್ಬರು ವಾರದ ಹಿಂದೆ ಜೆಸಿಬಿ ಬಳಸಿ ನೆಲಸಮಗೊಳಿಸಿದ್ದರು. ಕೋರ್ಟ್ ಅನುಮತಿಯ ಮೇರೆಗೆ ತಾವು ಕಾಂಪೌಂಡ್ ಅನ್ನು ತೆರವುಗೊಳಿಸಿರುವುದಾಗಿ ಅವರು ಹೇಳಿದ್ದರು. ಆದರೆ ಪುಷ್ಪ ಅವರ ಪರ ವಕೀಲರು, ವಿವಾದಿತ ಸ್ಥಳ ಪುಷ್ಪ ಅವರಿಗೇ ಸೇರಿದ್ದು, ಯಾವುದೇ ಕೋರ್ಟ್ ಅನುಮತಿ ಇಲ್ಲದೆ ಕಾಂಪೌಂಡ್ ಅನ್ನು ನೆಲಸಮ ಮಾಡಿದ್ದಾರೆ. ಇದರ ವಿರುದ್ಧ ದಾವೆ ಹೂಡಲಿದ್ದೇವೆ ಎಂದಿದ್ದರು.

ಇದೀಗ ಪೊಲೀಸ್ ಠಾಣೆಗೆ ಭೇಟಿ ನೀಡಿರುವ ಪುಷ್ಪ, ಅವರು ತಮ್ಮ ಸಂಬಂಧಿ ತಮ್ಮ ಪರವಾಗಿ ನೀಡಿದ್ದ ದೂರಿನ ಕುರಿತಾಗಿ ಪೊಲೀಸರ ಬಳಿ ಪ್ರಶ್ನೆ ಮಾಡಿದ್ದಾರೆ. ತಾವು ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು ಅಕ್ರಮವಾಗಿ ನಮ್ಮ ಸ್ಥಳದಲ್ಲಿ ಜೆಸಿಬಿ ನುಗ್ಗಿಸಿ ನಮ್ಮ ಕಾಂಪೌಂಡ್ ಅನ್ನು ನೆಲಸಮಗೊಳಿಸಿದ್ದಾರೆ. ಈ ಬಗ್ಗೆ ದೂರು ಸಹ ನೀಡಲಾಗಿದ್ದು, ದೂರಿಗೆ ತೆಗೆದುಕೊಂಡಿರುವ ಪ್ರಕ್ರಿಯೆ ಏನು ಎಂದು ಪುಷ್ಪ ಅವರು ಪೊಲೀಸರ ಬಳಿ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಯಶ್ ತಾಯಿ ಪುಷ್ಪಾ ಮನೆ ಕಾಂಪೌಂಡ್ ಧ್ವಂಸ: ಲಾಯರ್ ಮೊದಲ ಪ್ರತಿಕ್ರಿಯೆ

1500 ಅಡಿಗಳ ಜಾಗಕ್ಕೆ ಪುಷ್ಪ ಅವರು ಕಾಂಪೌಂಡ್ ಹಾಕಿದ್ದರು. ಕಾಂಪೌಂಡ್ ಅನ್ನು ದೇವರಾಜ್ ಹೆಸರಿನ ವ್ಯಕ್ತಿ ಕೆಡವಿದ್ದಾರೆ. ದೇವರಾಜ್ ಹೇಳಿರುವಂತೆ ಸದರಿ ಸ್ಥಳ ಲಕ್ಷ್ಮಮ್ಮ ಎಂಬುವರಿಗೆ ಸೇರಿದ್ದಾಗಿದ್ದು, ಪ್ರಸ್ತುತ ಅವರು (ದೇವರಾಜ್) ಆ ಸ್ಥಳದ ಜಿಪಿಎ ಮಾಲೀಕರು ಎಂದು ಹೇಳಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ತಾವು ಕಾಂಪೌಂಡ್ ಕೆಡವಿದ್ದಾಗಿ ಹೇಳಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 2:52 pm, Sat, 10 January 26

Source link

ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಲು ನೆಲ ಒರೆಸುವ ನೀರಿಗೆ ಈ ಎರಡು ವಸ್ತುಗಳನ್ನು ಸೇರಿಸಿ – Kannada News | To prevent mosquitoes from entering the house Add these two things to mop water

ಸೊಳ್ಳೆ (mosquitoes), ಕೀಟಗಳ ಕಾಟ ಪ್ರತಿ ಮನೆಯಲ್ಲೂ ಇದ್ದಿದ್ದೆ. ಇವುಗಳ ಕಚ್ಚಿ ಕಿರಿಕಿರಿಯನ್ನು ಉಂಟು ಮಾಡುವುದರ ಜೊತೆಗೆ ರಾತ್ರಿ ನಿದ್ರೆಗೂ ಭಂಗ ತರುತ್ತವೆ. ಹಾಗಾಗಿ ಇವುಗಳ ಕಾಟದಿಂದ ಮುಕ್ತಿ ಪಡೆಯಲು ರಾಸಾಯನಿಕಯುಕ್ತ ಸ್ಪ್ರೇ, ಸೊಳ್ಳೆ ಕಾಯಿಲ್‌ಗಳನ್ನು ಹೆಚ್ಚಿನವರು ಬಳಕೆ ಮಾಡುತ್ತಾರೆ. ಇವುಗಳ ಬಳಕೆಯಿಂದ ಶಾಶ್ವತವಾಗಿ ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಲು ಸಾಧ್ಯವಿಲ್ಲ ಜೊತೆಗೆ ನಮ್ಮ ಆರೋಗ್ಯದ ದೃಷ್ಟಿಯಿಂದ ಇವುಗಳ ಬಳಕೆ ಅಷ್ಟು ಸೂಕ್ತವಲ್ಲ.  ಹೀಗಿರುವಾಗ ಸೊಳ್ಳೆ, ಕೀಟಗಳ ಹಾವಳಿಯಿಂದ ಶಾಶ್ವತ ಪರಿಹಾರವನ್ನು ಪಡೆಯಲು ಆಲಂ ಕಲ್ಲು (ಪಟಿಕ) ಮತ್ತು ನಿಂಬೆರಸವನ್ನು ನೆಲ ಒರೆಸುವ ನೀರಿಗೆ ಸೇರಿಸಿ. ಈ ಎರಡು ವಸ್ತುಗಳನ್ನು ನೆಲ ಒರೆಸುವ ನೀರಿಗೆ ಸೇರಿಸಿ ಮನೆಯನ್ನು ಕ್ಲೀನ್‌ ಮಾಡುವುದರಿಂದ ಸೊಳ್ಳೆ, ಕೀಟಗಳು ಎಂದಿಗೂ ಮನೆಯನ್ನು ಪ್ರವೇಶಿಸುವುದಿಲ್ಲ.

ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಲು ಸುಲಭ ಮನೆಮದ್ದು:

ನಿಂಬೆ ರಸ ಮತ್ತು ಪಟಿಕ ಎರಡೂ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರನಾಶಕ ಗುಣಗಳನ್ನು ಹೊಂದಿದ್ದು, ಇವು  ಬ್ಯಾಕ್ಟೀರಿಯಾ, ಸೂಕ್ಷ್ಮಜೀವಿಗಳು, ಸೊಳ್ಳೆಗಳು ಮತ್ತು ನೊಣಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ನಿಂಬೆಯ ರಿಫ್ರೆಶ್ ಆಮ್ಲೀಯ ಗುಣಗಳು ಸೊಳ್ಳೆಗಳು ಮತ್ತು ನೋಣಗಳನ್ನು ಮನೆಯಿಂದ ದೂರವಿಡುವಲ್ಲಿ ಪರಿಣಾಮಕಾರಿಯಾಗಿದೆ.  ಆದರೆ ಪಟಿಕದ ಕೀಟನಾಶಕ ಗುಣಗಳು ಅವುಗಳನ್ನು ಮನೆಯಿಂದ ಹೊರಗಿಡಲು ಸಹಾಯ ಮಾಡುತ್ತದೆ. ಈ ಎರಡೂ ವಸ್ತುಗಳನ್ನು ನೆಲ ಒರೆಸುವ ನೀರಿಗೆ ಸೇರಿಸಿ ಮನೆ ಕ್ಲೀನ್‌ ಮಾಡುವುದರಿಂದ ಸೊಳ್ಳೆ, ಕೀಟಗಳ ಕಾಟದಿಂದ ಮುಕ್ತಿ ಪಡೆಯಬಹುದು.

ಸೊಳ್ಳೆ ನಿವಾರಕ ದ್ರಾವಣವನ್ನು ತಯಾರಿಸುವುದು ಹೇಗೆ?

  • ಒಂದು ಬಕೆಟ್ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ.
  • ಅದಕ್ಕೆ 2 ನಿಂಬೆಹಣ್ಣಿನ ರಸವನ್ನು ಹಿಂಡಿ ಮತ್ತು ಅರ್ಧ ಟೀ ಚಮಚ ಪಟಿಕ ಪುಡಿಯನ್ನು ಸೇರಿಸಿ.
  • ಈಗ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ.
  • ಈ ನೀರಿನಿಂದ ವಾರಕ್ಕೆ 2-3 ಬಾರಿ ಮನೆಯನ್ನು ಒರೆಸಿ.
  • ಬಯಸಿದರೆ, ನೀವು ಈ ದ್ರಾವಣವನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಮನೆಯ ಮೂಲೆಗಳಲ್ಲಿ, ಕಿಟಕಿಗಳು, ಬಾಗಿಲುಗಳ ಬಳಿ ಮತ್ತು ಸೊಳ್ಳೆ, ಕೀಟಗಳು ಹೆಚ್ಚು ಓಡಾಡುವ ಸ್ಥಳಗಳಲ್ಲಿ ಸಿಂಪಡಿಸಬಹುದು.

ಇದನ್ನೂ ಓದಿ: ಮನೆಯಲ್ಲಿ ಲಭ್ಯವಿರುವ ವಸ್ತುಗಳನ್ನು ಬಳಸಿ ನಿಮಿಷಗಳಲ್ಲಿ ಗ್ಯಾಸ್‌ ಸ್ಟೌವ್ ಕ್ಲೀನ್‌ ಮಾಡಬಹುದು

ಈ ಮನೆಮದ್ದು ಸೊಳ್ಳೆಗಳ ಕಾಟದಿಂದ ಮುಕ್ತಿ ನೀಡುವುದು ಮಾತ್ರವಲ್ಲ, ನೊಣಗಳು ಮತ್ತು ಸಣ್ಣ ಕೀಟಗಳನ್ನು ಸಹ ಕಡಿಮೆ ಮಾಡುತ್ತದೆ. ಮನೆಗೆ ತಾಜಾ ಮತ್ತು ಸ್ವಚ್ಛವಾದ ಸುವಾಸನೆಯನ್ನು ನೀಡುತ್ತದೆ. ಸೊಳ್ಳೆ ನಿವಾರಕ ಸ್ಪ್ರೇಗಳನ್ನು ಪದೇ ಪದೇ ಬಳಸಿ, ಯಾವುದೇ ರಿಸಲ್ಟ್‌ ಸಿಕ್ಕಿಲ್ಲ ಎಂದಾದ್ರೆ, ಸೊಳ್ಳೆಗಳನ್ನು ಓಡಿಸಲು ಒಮ್ಮೆ ಈ ಮನೆಮದ್ದನ್ನು ಟ್ರೈ ಮಾಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರೈಲು ಪ್ರಯಾಣಿಕರಿಗೆ ಮಕರ ಸಂಕ್ರಾಂತಿಗೆ ಸಿಹಿಸುದ್ದಿ: ಬೆಂಗಳೂರಿನಿಂದ ಊರಿಗೆ ಹೋಗಲು ವಿಶೇಷ ರೈಲು – Kannada News | SWR Sankranti Special Trains: Bengaluru Bidar, Yeshwantpur Talaguppa Extended

ಬೆಂಗಳೂರು , ಜ.10: ಹೊಸ ವರ್ಷ ಆರಂಭ ಆಗುತ್ತಿದ್ದಂತೆ, ಸಾಲು ಸಾಲು ಹಬ್ಬಗಳು ಬರುತ್ತಿದೆ. ಈ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ, ಈ ಹಬ್ಬ ತುಂಬಾ ವಿಶೇಷವಾಗಿದೆ. ಮಕರ ಸಂಕ್ರಾಂತಿ ದಕ್ಷಿಣ ಭಾರತಕ್ಕೆ ಮಾತ್ರವಲ್ಲದೆ. ಉತ್ತರ ಭಾರತಕ್ಕೂ ತುಂಬಾ ವಿಶೇಷವಾಗಿದೆ. ಶಬರಿಮಲೆ ಹೋಗುವ ಭಕ್ತರಿಗೂ ಈ ಹಬ್ಬ ಇನ್ನೂ ವಿಶೇಷವಾಗಿರುತ್ತದೆ. ಇನ್ನು ಮಕರ ಸಂಕ್ರಾಂತಿಗೆ ಊರಿಗೆ ಹೋಗಲು ಪ್ಲಾನ್​​​ ಹಾಕಿಕೊಂಡವರಿಗೆ ಬಿಗ್​​​ ಗುಡ್​​​​​ನ್ಯೂಸ್​​​ ಇದೆ. ಮಕರ ಸಂಕ್ರಾಂತಿ ಹಬ್ಬದ (Makar Sankranti special trains) ಪ್ರಯುಕ್ತ ವಿಶೇಷ ರೈಲುಗಳನ್ನು ಇಲಾಖೆ ಘೋಷಣೆ ಮಾಡಿದೆ. ಹಬ್ಬದಂದು ಆಗುವ ಜನದಟ್ಟಣೆಯನ್ನು ನಿರ್ವಹಿಸಲು ಮತ್ತು ಸಾವಿರಾರು ಪ್ರಯಾಣಿಕರ ಪ್ರಯಾಣವನ್ನು ಸುಗಮಗೊಳಿಸಲು, ನೈಋತ್ಯ ರೈಲ್ವೆ ಯಶವಂತಪುರ ಮತ್ತು ತಾಳಗುಪ್ಪ ನಡುವೆ ವಿಶೇಷ ಎಕ್ಸ್‌ಪ್ರೆಸ್ ಸೇವೆಗಳನ್ನು ಘೋಷಿಸಿದೆ ಮತ್ತು ಬೆಂಗಳೂರು-ಬೀದರ್ ವಿಶೇಷ ರೈಲಿನ ವಿಸ್ತರಣೆಯನ್ನು ಘೋಷಿಸಿದೆ. ಶಿವಮೊಗ್ಗ, ಸಾಗರ, ತುಮಕೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರಿಗೆ ಕೂಡ ಈ ರೈಲು ಭಾಗ್ಯ ಸಿಗಲಿದೆ.

ಸಂಕ್ರಾಂತಿ ರಜಾದಿನಗಳಲ್ಲಿ ಪ್ರಯಾಣಿಕರ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ನೈಋತ್ಯ ರೈಲ್ವೆ ಜನವರಿಯಲ್ಲಿ ಆಯ್ದ ದಿನಗಳಲ್ಲಿ ಎರಡು ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈ ಸೇವೆಗಳು ಸಾಮಾನ್ಯ ರೈಲುಗಳಲ್ಲಿನ ಜನದಟ್ಟಣೆಯನ್ನು ಕಡಿಮೆ ಮಾಡುವ ಮತ್ತು ಪ್ರಯಾಣದ ದಿನಗಳಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಮಾಡಲಾಗಿದೆ. ಯಶವಂತಪುರ ಮತ್ತು ತಾಳಗುಪ್ಪ ನಡುವಿನ ವಿಶೇಷ ರೈಲುಗಳು ಜನವರಿ 13, 14, 23 ಮತ್ತು 24 ರಂದು ತನ್ನ ಸೇವೆಯನ್ನು ನೀಡಲಿದೆ ಎಂದು ಇಲಾಖೆ ಹೇಳಿದೆ. ಈ ದಿನಾಂಕಗಳು ಹಬ್ಬದ ಅವಧಿ ಹಾಗೂ ಮತ್ತೆ ಊರಿನಿಂದ ಬರುವವರಿಗೆ ಅನುಕೂಲವಾಗಲಿದೆ.

ಇದನ್ನೂ ಓದಿ: ಬೆಂಗಳೂರು ರೈಲು ಪ್ರಯಾಣಿಕರು ಗಮನಿಸಿ: KSR ಟರ್ಮಿನಲ್ ಬದಲಾವಣೆ, ಹೊಸ ನಿಲ್ದಾಣಗಳು ಇಲ್ಲಿವೆ

ವಿಶೇಷ ರೈಲುಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ:

ಈ ರೈಲು ರಾತ್ರಿ ಹಾಗೂ ಹಗಲಿನಲ್ಲಿ ಸಂಚಾರಿಸಲು ಅನುಕೂಲ ಆಗುವಂತೆ ಸಂಯೋಜಿಸಲಾಗಿದೆ. ಪ್ರಯಾಣಿಕರು ರಾತ್ರಿ ಪ್ರಯಾಣಿಸಲು ಬಯಸಿದ್ರೆ ಕೂಡ ರೈಲು ಸೇವೆ ಇದೆ. ಇನ್ನು ಹಗಲು ಹೊತ್ತು ಪ್ರಕೃತಿಯನ್ನು ವೀಕ್ಷಣೆ ಮಾಡಿಕೊಂಡು ಸಂಚಾರಿಸಬೇಕು ಎಂದು ಬಯಸಿದ್ರೆ ಆ ಅವಕಾಶ ಕೂಡ ಇದೆ. ಈ ವಿಶೇಷ ರೈಲುಗಳು ವಿವಿಧ ನಿಲ್ದಾಣಗಳಲ್ಲಿಯೂ ನಿಲುಗಡೆ ಆಗಲಿದೆ. ಇದರಿಂದ ಕರಾವಳಿ ಪ್ರಯಾಣಿಕರಿಗೂ ಕೂಡ ಅನುಕೂಲ ಆಗಲಿದೆ. ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ ಪಟ್ಟಣ, ಆನಂದಪುರಂ ಮತ್ತು ಸಾಗರ ಜಂಬಗಾರು ನಿಲ್ದಾಣಗಳಲ್ಲಿ ನಿಲುಗಡೆಗೆ ಅವಕಾಶ ಇದೆ.

ಪಟ್ಟಣಗಳ ನಿವಾಸಿಗಳಿಗೆ, ಹಬ್ಬದ ಪ್ರಯಾಣವು ಸಾಮಾನ್ಯವಾಗಿ ಸೀಮಿತ ರೈಲು ಆಯ್ಕೆಗಳು ಅಥವಾ ಕಿಕ್ಕಿರಿದ ಬಸ್‌ಗಳು ಇರುವ ಕಾರಣ. ಈ ಹೆಚ್ಚುವರಿ ನಿಲ್ದಾಣಗಳು ವಿಶೇಷ ಸೇವೆಯನ್ನು ನೀಡಲಿದೆ. ತಾಳಗುಪ್ಪ ವಿಶೇಷ ರೈಲುಗಳ ಜೊತೆಗೆ, ನೈಋತ್ಯ ರೈಲ್ವೆಯು SMVT ಬೆಂಗಳೂರು ಮತ್ತು ಬೀದರ್ ನಡುವಿನ ವಿಶೇಷ ಎಕ್ಸ್‌ಪ್ರೆಸ್ ಸೇವೆಯನ್ನು ವಿಸ್ತರಿಸುವುದಾಗಿ ಘೋಷಿಸಿದೆ. ಹಬ್ಬದ ಜನದಟ್ಟಣೆಯನ್ನು ನಿಭಾಯಿಸಲು, ಈ ಎರಡು ವಾರಗಳ ಸೇವೆಯು ಈಗ ದೀರ್ಘಕಾಲದವರೆಗೆ ಕಾರ್ಯನಿರ್ವಹಿಸಲಿದೆ. ಬೆಂಗಳೂರಿನಿಂದ ಬೀದರ್‌ಗೆ ರೈಲು ಜನವರಿ 2 ರಿಂದ ಫೆಬ್ರವರಿ 27 ರವರೆಗೆ ಪ್ರತಿ ಶುಕ್ರವಾರ ಮತ್ತು ಭಾನುವಾರ ಕಾರ್ಯನಿರ್ವಹಿಸುತ್ತದೆ. ಬೀದರ್‌ನಿಂದ ಬೆಂಗಳೂರಿಗೆ ಹಿಂದಿರುಗುವ ಸೇವೆ ಜನವರಿ 3 ರಿಂದ ಫೆಬ್ರವರಿ 28 ರವರೆಗೆ ಪ್ರತಿ ಶನಿವಾರ ಮತ್ತು ಸೋಮವಾರ ಕಾರ್ಯನಿರ್ವಹಿಸುತ್ತದೆ ಎಂದು ಇಲಾಖೆ ಹೇಳಿದೆ.

ಒಟ್ಟಾರೆಯಾಗಿ, ಈ ವಿಸ್ತರಣೆಯು 17 ಟ್ರಿಪ್‌ಗಳನ್ನು ಒಳಗೊಂಡಿದ್ದು, ಹಬ್ಬ ಮತ್ತು ಹಬ್ಬದ ನಂತರದ ಅವಧಿಯಲ್ಲಿ ಪ್ರಯಾಣಿಕರಿಗೆ ಒಳ್ಳೆಯ ಆಯ್ಕೆಯನ್ನು ನೀಡಲಿದೆ. ಸಮಯ, ನಿಲುಗಡೆಗಳು ಅಥವಾ ಕೋಚ್ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಇನ್ನು ಪ್ರಯಾಣಿಕರು ಈ ವಿಚಾರವನ್ನು ಗಮನಿಸಲೇಬೇಕು. ಜ.16ರಿಂದ ಮಾ.11ರವರೆಗೆ ಕೆಲವು ರೈಲುಗಳ ಟರ್ಮಿನಲ್ ನಿಲ್ದಾಣಗಳಲ್ಲಿ ಬದಲಾವಣೆ ಮಾಡಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:34 pm, Sat, 10 January 26

Source link

ಎಸ್‌ಎಸ್‌ಎಲ್‌ಸಿ ಪ್ರಶ್ನೆಪತ್ರಿಕೆ ಲೀಕ್ ! ಸಮಾಜ ವಿಜ್ಞಾನ ಪ್ರಶ್ನೆಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ – Kannada News | Belagavi SSLC Exam Paper Leak: Social Science Subject Goes Viral online

ಸೋರಿಕೆಯಾದ ಸಮಾಜ ವಿಜ್ಞಾನ ಪ್ರಶ್ನೆಪತ್ರಿಕೆ

ಬೆಳಗಾವಿ, ಜನವರಿ 10: 2026ರ ರಾಜ್ಯಮಟ್ಟದ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ–1ಕ್ಕೆ ಸಂಬಂಧಿಸಿದ ಸಮಾಜ ವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇಂದು ನಡೆಯುತ್ತಿರುವ ಪೂರ್ವಭಾವಿ ಪರೀಕ್ಷೆಯ ವೇಳೆ ಬೆಳಗಾವಿ ಕೇಂದ್ರದಿಂದ ಪ್ರಶ್ನೆಪತ್ರಿಕೆ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ಆತಂಕ ಮೂಡಿಸಿದೆ.

Delta SSLC ಇನ್‌ಸ್ಟಾಗ್ರಾಮ್ ಖಾತೆಯಿಂದ ಪ್ರಶ್ನೆಪತ್ರಿಕೆ ಲೀಕ್

ಸಮಾಜ ವಿಜ್ಞಾನ ಪರೀಕ್ಷೆಯ ಪ್ರಶ್ನೆಪತ್ರಿಕೆ ಪರೀಕ್ಷೆ ಆರಂಭಕ್ಕೂ ಮುನ್ನವೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಗೊಂದಲ ಉಂಟಾಗಿದೆ. “Delta SSLC” ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಪ್ರಶ್ನೆಪತ್ರಿಕೆ ವೈರಲ್ ಆಗಿರುವುದು ಬೆಳಕಿಗೆ ಬಂದಿದೆ. ಈ ಖಾತೆ ಪ್ರತಿವರ್ಷವೂ ಪರೀಕ್ಷೆ ಸಮಯದಲ್ಲಿ ಸಕ್ರಿಯವಾಗುತ್ತಿದ್ದು, ಕಳೆದ ವರ್ಷವೂ ಇದೇ ಖಾತೆಯಿಂದ ಪ್ರಶ್ನೆಪತ್ರಿಕೆ ಸೋರಿಕೆಯಾದ ಆರೋಪಗಳು ಕೇಳಿಬಂದಿದ್ದವು. ಆದರೂ, ಈ ಬಗ್ಗೆ ಪರೀಕ್ಷಾ ಮಂಡಳಿ ಅಧಿಕಾರಿಗಳು ಸಮರ್ಪಕ ಕ್ರಮ ಕೈಗೊಂಡಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ.

ಪದೇ ಪದೇ ನಡೆಯುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಪರೀಕ್ಷಾ ವ್ಯವಸ್ಥೆಯ ಭದ್ರತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿವೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗುವಂತಹ ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ವಿಷಯದ ಕುರಿತು ಇನ್ನೂ ಪರೀಕ್ಷಾ ಮಂಡಳಿಯಿಂದ ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ. ಪ್ರಶ್ನೆಪತ್ರಿಕೆ ಸೋರಿಕೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆಹಚ್ಚುವಂತೆ ಶಿಕ್ಷಣ ಇಲಾಖೆ ಮೇಲೆ ಒತ್ತಡ ಹೆಚ್ಚುತ್ತಿದೆ.

ಇದನ್ನೂ ಓದಿ SSLC ವಿದ್ಯಾರ್ಥಿಗಳೇ ಎಚ್ಚರ! ಹಣ ಕೊಟ್ರೆ ಪ್ರಶ್ನೆ ಪತ್ರಿಕೆ ಸಿಗತ್ತೆ ಅಂತಾ ಯಾಮಾರಬೇಡಿ

ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ ಶಿಕ್ಷಣ ಇಲಾಖೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪಿಸುತ್ತಿದ್ದಂತೆ, ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪ್ರಶ್ನೆ ಪತ್ರಿಕೆಗಳನ್ನು ಲೀಕ್ ಮಾಡುವುದಾಗಿ ವಿದ್ಯಾರ್ಥಿಗಳನ್ನು ವಂಚಿಸುತ್ತಿದ್ದಾರೆ. 100 ರೂಪಾಯಿಗೆ ನಕಲಿ ಪತ್ರಿಕೆ ನೀಡಿ, ವಿದ್ಯಾರ್ಥಿಗಳ ಹಣ ಹಾಗೂ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆ ಮತ್ತು ತಜ್ಞರು ಈ ವದಂತಿಗಳಿಗೆ ಬಲಿಯಾಗದಂತೆ ಮಕ್ಕಳಿಗೆ ಎಚ್ಚರಿಕೆ ನೀಡಿದ್ದು, ಅಧಿಕೃತ ಮಾಹಿತಿಗಳನ್ನಷ್ಟೇ ನಂಬಲು ಮನವಿ ಮಾಡಿದ್ದಾರೆ. ವಂಚಕರ ವಿರುದ್ಧ ದೂರು ದಾಖಲಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Engineering Career After PUC: ಪಿಯುಸಿ ನಂತರ ವೃತ್ತಿಜೀವನಕ್ಕೆ ಬಿ.ಟೆಕ್ ಅಥವಾ ಪಾಲಿಟೆಕ್ನಿಕ್, ಯಾವುದು ಉತ್ತಮ? – Kannada News | Engineering Career After PUC: B.Tech or Polytechnic? Complete Guide and Comparison

ಪಿಯುಸಿ ನಂತರ ಎಂಜಿನಿಯರಿಂಗ್ ವೃತ್ತಿಜೀವನವನ್ನು ಪರಿಗಣಿಸುವ ವಿದ್ಯಾರ್ಥಿಗಳು ಎದುರಿಸುತ್ತಿರುವ ದೊಡ್ಡ ಪ್ರಶ್ನೆಯೆಂದರೆ ಬಿ.ಟೆಕ್ ಅಥವಾ ಪಾಲಿಟೆಕ್ನಿಕ್. ಎರಡೂ ಕೋರ್ಸ್‌ಗಳು ತಾಂತ್ರಿಕ ಶಿಕ್ಷಣವನ್ನು ಒಳಗೊಂಡಿರುತ್ತವೆ, ಆದರೆ ಅವುಗಳ ಪಠ್ಯಕ್ರಮ, ಅವಧಿ, ವೆಚ್ಚ ಮತ್ತು ಉದ್ಯೋಗಾವಕಾಶಗಳು ಭಿನ್ನವಾಗಿರುತ್ತವೆ. ಕೆಲವು ವಿದ್ಯಾರ್ಥಿಗಳು ಪದವಿಗೆ ಆದ್ಯತೆ ನೀಡಿದರೆ, ಇತರರು ಉದ್ಯೋಗ ಮತ್ತು ಕೌಶಲ್ಯಗಳನ್ನು ತ್ವರಿತವಾಗಿ ಪಡೆಯುವತ್ತ ಗಮನಹರಿಸುತ್ತಾರೆ. ಉದ್ಯಮದ ಅಗತ್ಯತೆಗಳು ಸಹ ಬದಲಾಗುತ್ತಿವೆ, ಅಲ್ಲಿ ಪ್ರಾಯೋಗಿಕ ಜ್ಞಾನ ಮತ್ತು ಕೆಲಸದ ಸಾಮರ್ಥ್ಯವು ಪದವಿಗೆ ಮಾತ್ರವಲ್ಲ, ಹೆಚ್ಚು ಮೌಲ್ಯಯುತವಾಗಿದೆ. ಆದ್ದರಿಂದ, ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ನಿರ್ಣಾಯಕವಾಗುತ್ತದೆ.

ಬಿ.ಟೆಕ್ ಮತ್ತು ಪಾಲಿಟೆಕ್ನಿಕ್ ನಡುವಿನ ವ್ಯತ್ಯಾಸವೇನು?

ಬಿ.ಟೆಕ್ ಮತ್ತು ಪಾಲಿಟೆಕ್ನಿಕ್ ಅನ್ನು ವಿಶಾಲವಾಗಿ ಪದವಿಗಳು ಮತ್ತು ಡಿಪ್ಲೊಮಾಗಳು ಎಂದು ವಿವರಿಸಬಹುದು. ಬಿ.ಟೆಕ್ ನಾಲ್ಕು ವರ್ಷಗಳ ಎಂಜಿನಿಯರಿಂಗ್ ಪದವಿ ಕೋರ್ಸ್ ಆಗಿದ್ದರೆ, ಪಾಲಿಟೆಕ್ನಿಕ್ ಮೂರು ವರ್ಷಗಳ ಡಿಪ್ಲೊಮಾ ಕಾರ್ಯಕ್ರಮವಾಗಿದೆ. ಬಿ.ಟೆಕ್ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಸಿದ್ಧಾಂತ, ವಿನ್ಯಾಸ ಮತ್ತು ಸಂಶೋಧನೆಯ ಆಳವಾದ ಜ್ಞಾನವನ್ನು ಒದಗಿಸುತ್ತದೆ. ಮತ್ತೊಂದೆಡೆ, ಪಾಲಿಟೆಕ್ನಿಕ್ ಮೂಲಭೂತ ತಾಂತ್ರಿಕ ಜ್ಞಾನವನ್ನು ಒದಗಿಸುವುದರ ಜೊತೆಗೆ ಪ್ರಾಯೋಗಿಕ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿಯ ಮೇಲೆ ಹೆಚ್ಚು ಗಮನಹರಿಸುತ್ತದೆ. ಬಿ.ಟೆಕ್ ವಿದ್ಯಾರ್ಥಿಗಳನ್ನು ನಿರ್ವಹಣೆ ಮತ್ತು ನಾಯಕತ್ವದ ಪಾತ್ರಗಳಿಗೆ ಸಿದ್ಧಪಡಿಸಲಾಗುತ್ತದೆ, ಆದರೆ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಕ್ಷೇತ್ರಕಾರ್ಯ ಮತ್ತು ತಾಂತ್ರಿಕ ಕೌಶಲ್ಯಗಳಲ್ಲಿ ತರಬೇತಿ ನೀಡಲಾಗುತ್ತದೆ.

ತಜ್ಞರು ಯಾವುದನ್ನು ಉತ್ತಮ ಆಯ್ಕೆ ಎಂದು ಪರಿಗಣಿಸುತ್ತಾರೆ?

ದೆಹಲಿ ತಾಂತ್ರಿಕ ಶಿಕ್ಷಣದ ಮಾಜಿ ಮಾಧ್ಯಮ ಸಲಹೆಗಾರ ಮನೋಜ್ ವರ್ಗೀಸ್ ಅವರ ಪ್ರಕಾರ, ಬಿ.ಟೆಕ್ ಮತ್ತು ಪಾಲಿಟೆಕ್ನಿಕ್ ಅನ್ನು ನೇರವಾಗಿ ಹೋಲಿಸುವುದು ಸರಿಯಲ್ಲ. ಎರಡಕ್ಕೂ ತಮ್ಮದೇ ಆದ ವಿಶಿಷ್ಟ ಗುರುತುಗಳು ಮತ್ತು ಅಗತ್ಯಗಳಿವೆ. ಬಿ.ಟೆಕ್ ಪದವಿ ತನ್ನದೇ ಆದ ಮೌಲ್ಯವನ್ನು ಹೊಂದಿದೆ, ಆದರೆ ಪಾಲಿಟೆಕ್ನಿಕ್ ಡಿಪ್ಲೊಮಾವನ್ನು ಉದ್ಯಮದ ಬೆನ್ನೆಲುಬು ಎಂದು ಪರಿಗಣಿಸಲಾಗಿದೆ. ಪ್ರಸ್ತುತ, ಸರ್ಕಾರಗಳು ಕೌಶಲ್ಯ ಆಧಾರಿತ ಶಿಕ್ಷಣವನ್ನು ಉತ್ತೇಜಿಸುತ್ತಿವೆ, ಅದಕ್ಕಾಗಿಯೇ ಪಾಲಿಟೆಕ್ನಿಕ್ ಕೋರ್ಸ್‌ಗಳು ವಿಶೇಷ ಗಮನವನ್ನು ಪಡೆಯುತ್ತಿವೆ.

ಇದನ್ನೂ ಓದಿ: ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ರೆಡಿಟ್ ಆಫೀಸರ್ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ

ಯಾವುದರಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳಿವೆ?

ಪಾಲಿಟೆಕ್ನಿಕ್ ಡಿಪ್ಲೊಮಾ ಹೊಂದಿರುವವರು ಬೇಗನೆ ಉದ್ಯೋಗಗಳನ್ನು ಕಂಡುಕೊಳ್ಳುತ್ತಾರೆ ಏಕೆಂದರೆ ಉದ್ಯಮವು ತಾಂತ್ರಿಕ ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ಬಯಸುತ್ತದೆ ಎಂದು ತಜ್ಞರು ನಂಬುತ್ತಾರೆ. ಬಿ.ಟೆಕ್ ಪದವಿಗಳು ಸಾಮಾನ್ಯವಾಗಿ ವೈಟ್-ಕಾಲರ್ ಉದ್ಯೋಗಗಳಿಗೆ ಕಾರಣವಾಗುತ್ತವೆ, ಆದರೆ ಇತ್ತೀಚಿನ ವರ್ಷಗಳಲ್ಲಿ ಬಿ.ಟೆಕ್ ಪದವಿ ಹೊಂದಿರುವವರಿಗೆ ಸ್ಪರ್ಧೆ ಹೆಚ್ಚಾಗಿದೆ. ಬಿ.ಟೆಕ್ ಪದವೀಧರರು ಒಂದು ಯೋಜನೆಯಲ್ಲಿ ತಂಡವನ್ನು ಮುನ್ನಡೆಸಬಹುದು, ಆದರೆ ಅವರ ತಂಡದಲ್ಲಿ ಹಲವಾರು ಡಿಪ್ಲೊಮಾ ಹೊಂದಿರುವವರು ಇರಬಹುದು.

ಪಾಲಿಟೆಕ್ನಿಕ್ ನಂತರ ಬಿ.ಟೆಕ್ ಹಾದಿ:

ಒಬ್ಬ ವಿದ್ಯಾರ್ಥಿಯು ಅನುಭವ ಮತ್ತು ಬೇಗನೆ ಉದ್ಯೋಗ ಪಡೆಯಲು ಬಯಸಿದರೆ, ಪಾಲಿಟೆಕ್ನಿಕ್ ಒಂದು ಉತ್ತಮ ಆಯ್ಕೆಯಾಗಿದೆ. ಕುತೂಹಲಕಾರಿಯಾಗಿ, ಪಾಲಿಟೆಕ್ನಿಕ್ ನಂತರ ಬಿ.ಟೆಕ್ ಅನ್ನು ಮುಂದುವರಿಸಬಹುದು. ಲ್ಯಾಟರಲ್ ಎಂಟ್ರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ, ವಿದ್ಯಾರ್ಥಿಗಳು ನೇರವಾಗಿ ಬಿ.ಟೆಕ್‌ನ ಎರಡನೇ ವರ್ಷಕ್ಕೆ ದಾಖಲಾಗಬಹುದು. ಈ ರೀತಿಯಾಗಿ, ವಿದ್ಯಾರ್ಥಿಗಳು ಕೌಶಲ್ಯ ಮತ್ತು ಪದವಿ ಎರಡರಿಂದಲೂ ಪ್ರಯೋಜನ ಪಡೆಯಬಹುದು.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಲ್ಕು ವರ್ಷಗಳ ಹೋರಾಟಕ್ಕೆ ಜಯ: ಚಾಮರಾಜನಗರ ಆಕ್ಸಿಜನ್ ದುರಂತ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ – Kannada News | Chamarajanagar Oxygen Tragedy: Victims’ Families Get Government Jobs

ಚಾಮರಾಜನಗರ ಆಕ್ಸಿಜನ್ ದುರಂತ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ

ಚಾಮರಾಜನಗರ, ಜನವರಿ 10:  ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತ ಪ್ರಕರಣದ ಸಂತ್ರಸ್ತ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಕೊನೆಗೂ ಸಿಹಿ ಸುದ್ದಿ ಲಭಿಸಿದೆ. ಸಂತ್ರಸ್ತ ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಲು ಸರ್ಕಾರ ಮುಂದಾಗಿದ್ದು, ಗಣರಾಜ್ಯೋವದ ದಿನವೇ ನೇಮಕಾತಿ ಆದೇಶಗಳನ್ನು ನೀಡಲಾಗುವುದು ಎಂದು ಹೇಳಲಾಗಿದೆ.

ಗಣರಾಜ್ಯೋತ್ಸವದಂದೇ ನೇಮಕಾತಿ

2021ರ ಮೇ 3ರಂದು ಆಕ್ಸಿಜನ್ ಕೊರತೆಯಿಂದ ಕೋವಿಡ್ ಸೋಂಕಿತ 36 ರೋಗಿಗಳು ಮೃತಪಟ್ಟಿದ್ದ ಈ ದುರಂತ ಪ್ರಕರಣಕ್ಕೆ ಸಂಬಂಧಿಸಿ, ಸಂತ್ರಸ್ತ ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವದ ದಿನವೇ ನೇಮಕಾತಿ ಆದೇಶಗಳನ್ನು ವಿತರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಚಾಮರಾಜನಗರದಲ್ಲಿ ತಿಳಿಸಿದ್ದಾರೆ.

ಸಂತ್ರಸ್ತರಿಗೆ ನೀಡಿದ ಭರವಸೆ ಈಡೇರಿಸಿದ ಕಾಂಗ್ರೆಸ್

ಸತತ ನಾಲ್ಕು ವರ್ಷಗಳ ಕಾಲ ಸುದೀರ್ಘ ಹೋರಾಟ ನಡೆಸಿದ ಸಂತ್ರಸ್ತ ಕುಟುಂಬಗಳಿಗೆ ಇದೀಗ ನ್ಯಾಯ ಸಿಕ್ಕಂತಾಗಿದೆ. ಕೋವಿಡ್ ಮಹಾಮಾರಿ ಕಾಲದಲ್ಲಿ ನಡೆದ ಈ ದುರ್ಘಟನೆಯು ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ಆಕ್ಸಿಜನ್ ಸರಬರಾಜು ಕೊರತೆಯಿಂದ 36 ರೋಗಿಗಳು ಪ್ರಾಣ ಕಳೆದುಕೊಂಡಿದ್ದರು. ಅಂದು ವಿಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ್ ಪಕ್ಷವು ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡುವ ಭರವಸೆ ನೀಡಿತ್ತು. ವಿಶೇಷವಾಗಿ, ಸಂತ್ರಸ್ತರ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಲಾಗಿತ್ತು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ವೇಳೆ ಕೂಡ, ಪಕ್ಷ ಅಧಿಕಾರಕ್ಕೆ ಬಂದರೆ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ಘೋಷಿಸಿದ್ದರು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ಹಿನ್ನೆಲೆಯಲ್ಲಿ, ನೀಡಿದ್ದ ಭರವಸೆಯನ್ನು ಈಡೇರಿಸುವ ಮೂಲಕ ಸಂತ್ರಸ್ತ ಕುಟುಂಬಗಳಿಗೆ ಆಶಾಕಿರಣ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಜೆಡಿಎಸ್​​ ಪಕ್ಷದ ಚಿಹ್ನೆಗೆ ಹೊಸ ಟಚ್​​? ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್ – Kannada News | JDS Planning a New Look for Its Party Symbol

ಬೆಂಗಳೂರು, ಜನವರಿ 10: ಜೆಡಿಎಸ್​ ಮತ್ತು ಕಾಂಗ್ರೆಸ್​ ನಡುವೆ ಟ್ವೀಟ್​ ವಾರ್​​ ಶುರುವಾಗಿದೆ. ಸೋಶಿಯಲ್​ ಮೀಡಿಯಾದಲ್ಲೇ ಒಬ್ಬರಿಗೊಬ್ಬರು ಟಾಂಗ್​​ ನೀಡುತ್ತಿದ್ದಾರೆ. ಈ ಮಧ್ಯೆ ಜೆಡಿಎಸ್​​ ಪಕ್ಷದ ಚಿಹ್ನೆಗೆ ಹೊಸ ಟಚ್​​ ನೀಡಲು ಮುಂದಾಗುತ್ತಿದೆ ಎನ್ನಲಾಗುತ್ತಿದೆ. ಈ ಬಗ್ಗೆ ನಿನ್ನೆ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸಲಹೆ ನೀಡಿದ್ದಾರೆ. ಪ್ರಸ್ತುತ ಇರುವ ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಚಿಂತನೆ ನಡೆದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರು ರೈಲು ಪ್ರಯಾಣಿಕರು ಗಮನಿಸಿ: KSR ಟರ್ಮಿನಲ್ ಬದಲಾವಣೆ, ಹೊಸ ನಿಲ್ದಾಣಗಳು ಇಲ್ಲಿವೆ

Source link