Viral Video: ಕಾಲೇಜಿಗೆಂದು ಹೋದ ಮಗಳು ಲಾಡ್ಜ್‌ನಲ್ಲಿ ಪ್ರಿಯಕರನ ಜೊತೆ ಪತ್ತೆ; ವಿಡಿಯೋ ವೈರಲ್​ – Kannada News | Viral Hotel Room Drama: Mother Catches Daughter with Boyfriend; Video Sparks Debate

ಮಗಳು ಲಾಡ್ಜ್‌ನಲ್ಲಿ ಪ್ರಿಯಕರನ ಜೊತೆ ಪತ್ತೆImage Credit source: Twitter

“ಅಮ್ಮಾ ಕಾಲೇಜಿಗೆ ಹೋಗಿ ಬರುತ್ತೇನೆ” ಎಂದು ಹೇಳಿ ಮನೆಯಿಂದ ಹೊರಟ ಮಗಳೊಬ್ಬಳು, ದಾರಿ ಮಧ್ಯೆ ಪ್ರಿಯಕರನ ಕೈ ಹಿಡಿದು ಹೋಟೆಲ್ ರೂಮ್ ಸೇರಿದ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಗ್ರಾಮಸ್ಥರ ನೆರವಿನಿಂದ ಮಗಳು ಎಲ್ಲಿದ್ದಾಳೆ ಎಂಬ ಸುಳಿವು ಸಿಕ್ಕ ಬೆನ್ನಲ್ಲೇ ಆಕೆಯ ತಾಯಿ ಸ್ಥಳಕ್ಕೆ ಧಾವಿಸಿದ್ದು, ಅಲ್ಲಿ ನಡೆದ ಹೈಡ್ರಾಮಾ ಈಗ ಎಲ್ಲೆಡೆ ವೈರಲ್ ಆಗಿದೆ.

ಲಾಡ್ಜ್‌ನಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಜೋಡಿ:

ಮಗಳ ಮೇಲೆ ಅನುಮಾನಗೊಂಡ ತಾಯಿ, ಗ್ರಾಮದ ಕೆಲವರ ಸಹಾಯದೊಂದಿಗೆ ಲಾಡ್ಜ್‌ ಮೇಲೆ ದಾಳಿ ನಡೆಸಿದ್ದಾರೆ. ರೂಮಿನ ಬಾಗಿಲು ತೆರೆದಾಗ ಮಗಳು ತನ್ನ ಪ್ರಿಯಕರನ ಜೊತೆ ಇರುವುದು ಕಂಡುಬಂದಿದೆ. ಇದನ್ನು ಕಂಡು ಆಕ್ರೋಶಗೊಂಡ ತಾಯಿ, ಸ್ಥಳದಲ್ಲೇ ಮಗಳ ಕೆನ್ನೆಗೆ ಬಾರಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಆಕೆಯ ಜೊತೆಗಿದ್ದ ಯುವಕನಿಗೂ ಸರಿಯಾಗಿಯೇ ಧರ್ಮದೇಟು ನೀಡಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ಪೊಲೀಸರ ಮಧ್ಯಪ್ರವೇಶ:

ಹೋಟೆಲ್ ರೂಮ್‌ನಲ್ಲಿ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆ, ಅಲ್ಲಿಗೆ ಬಂದ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ಕೋಪಗೊಂಡ ತಾಯಿಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ವಾತಾವರಣ ತೀರಾ ಉದ್ವಿಗ್ನಗೊಂಡಿದ್ದು, ರೂಮಿನಲ್ಲಿದ್ದ ಯಾರೋ ಒಬ್ಬರು ಈ ಇಡೀ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಈಗ ‘ಎಕ್ಸ್’ (ಟ್ವಿಟ್ಟರ್) ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲ್; ಈ ಚಿತ್ರದಲ್ಲಿ ಅಡಗಿರುವ ಪಕ್ಷಿಯನ್ನು ಕಂಡುಹಿಡಿಯಬಲ್ಲಿರಾ

ಇದು ನಿಜವೋ ಅಥವಾ ‘ಸ್ಕ್ರಿಪ್ಟೆಡ್’ ವಿಡಿಯೋವೋ?

@desHi__chora ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಕೇವಲ ಒಂದೇ ದಿನದಲ್ಲಿ 7 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಆದರೆ, ವಿಡಿಯೋ ನೋಡಿದ ಬಹುಪಾಲು ನೆಟ್ಟಿಗರು ಇದು ನಿಜವಾದ ಘಟನೆಯಲ್ಲ ಎಂದು ವಾದಿಸುತ್ತಿದ್ದಾರೆ. “ಇದು ಕೇವಲ ಸೋಷಿಯಲ್ ಮೀಡಿಯಾದಲ್ಲಿ ವ್ಯೂಸ್ ಮತ್ತು ಸಬ್‌ಸ್ಕ್ರೈಬರ್ಸ್‌ಗಳನ್ನು ಹೆಚ್ಚಿಸಿಕೊಳ್ಳಲು ಮಾಡಿದ ‘ಸ್ಕ್ರಿಪ್ಟೆಡ್’ ಅಥವಾ ನಕಲಿ ವಿಡಿಯೋ ಇರಬಹುದು” ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಚಾರಕ್ಕಾಗಿ ನಾಟಕೀಯ ವಿಡಿಯೋಗಳನ್ನು ಚಿತ್ರೀಕರಿಸಿ ವೈರಲ್ ಮಾಡುವುದು ಸಾಮಾನ್ಯವಾಗುತ್ತಿರುವುದು ಜನರ ಈ ಅನುಮಾನಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಈ ‘ಹೈಡ್ರಾಮಾ’ ವಿಡಿಯೋ ಮಾತ್ರ ಅಂತರ್ಜಾಲದಲ್ಲಿ ಸಂಚಲನ ಮೂಡಿಸಿರುವುದಂತೂ ಸುಳ್ಳಲ್ಲ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *