ಬಾಡಿಗೆ ಜಗಳಕ್ಕೆ ಮನನೊಂದು ಟೆಲಿಫೋನ್ ಟವರ್ ಏರಿ ಯುವಕನ ಹೈಡ್ರಾಮಾ! – Kannada News | Navanagar: Rent Dispute Leads Youth to Climb Telecom Tower; Police Begin Rescue

ಬಾಗಲಕೋಟೆ, ಏಪ್ರಿಲ್ 18: ಬಾಡಿಗೆ ವಿಚಾರದಲ್ಲಿ ನಡೆದ ಗಲಾಟೆ ಹಿನ್ನೆಲೆ ಯುವಕನೊಬ್ಬ ಟೆಲಿಫೋನ್ ಟವರ್ ಏರಿ ಆತಂಕ ಸೃಷ್ಟಿಸಿದ ಘಟನೆ ನವನಗರದಲ್ಲಿ ನಡೆದಿದೆ. ನಿನ್ನೆ ಬಾಡಿಗೆ ವಿಚಾರದಲ್ಲಿ ತೀವ್ರ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಸೆಕ್ಟರ್ 35ರ ಮನೆಯ ಮಾಲೀಕರ ಮಗ ಭೀಮು ಬಸಪ್ಪ ವಡ್ಡರ್, ಬಾಡಿಗೆದಾರ ಮಹಿಳೆಯೊಂದಿಗೆ ನಡೆದ ವಾಗ್ವಾದದಿಂದ ಮನನೊಂದು ಸೆಕ್ಟರ್ 36ರ ಟವರ್ ಏರಿದ್ದಾನೆ.

ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ನವನಗರ ಪೊಲೀಸ್ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಐಸ್ ಫ್ಯಾಕ್ಟರಿ ಸಮೀಪದ ಟವರ್ ಮೇಲೆ ಯುವಕ ಕುಳಿತಿದ್ದು, ಮನವೊಲಿಸಲು ಅಧಿಕಾರಿಗಳು ಪ್ರಯತ್ನಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *