Video: ನಾನೂ ಒಬ್ಬ ಅಪ್ಪ, ಅಣ್ಣ… ಹೆದರಬೇಡಿ, ನನ್ನ ಆಟೋದಲ್ಲಿ ನೀವು ಸೇಫ್: ಆಟೋ ಚಾಲಕನ ಸೀಟಿನ ಹಿಂಬದಿ ಬರೆದ ಸಾಲುಗಳು ವೈರಲ್ – Kannada News | I am also a father, a brother… Don’t be afraid: Lines written on the back of the auto driver’s seat go viral
ಮುಂಬೈ, ಏಪ್ರಿಲ್ 17: ಕಾಲ ತುಂಬಾನೇ ಕೆಟ್ಟಿದೆ. ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲ. ರಾತ್ರಿ ಬಿಡಿ ಹಗಲಿನಲ್ಲಿ ಹೆಣ್ಣು ಮಕ್ಕಳು ಓಡಾಡುವುದು ಕಷ್ಟ. ಹೀಗಾಗಿ ಎಷ್ಟೋ ಹೆಣ್ಣು ಮಕ್ಕಳು ರಾತ್ರಿ ಬಿಡಿ, ಹಗಲಿನಲ್ಲಿ ಓಡಾಡಲು ಭಯ ಪಡ್ತಾರೆ. ಅದಲ್ಲದೇ, ಬಸ್, ಕ್ಯಾಬ್, ಆಟೋದಲ್ಲಿ ಪ್ರಯಾಣಿಸುವ ವೇಳೆ ಮಹಿಳೆಯರಿಗೆ ಅಹಿತಕರ ಅನುಭವವಾಗಿರುತ್ತದೆ. ಇದಕ್ಕೆ ವ್ಯಕತಿರಿಕ್ತವಾಗಿ ಆಟೋದಲ್ಲಿ ಬರೆದ ಸಾಲುಗಳು. ಮುಂಬೈ ಆಟೋ ಡ್ರೈವರ್‌ರೊಬ್ಬರು (Mumbai auto driver) ತಮ್ಮ ಸೀಟಿನ ಹಿಂಭಾಗದಲ್ಲಿ ನಿಮ್ಮ ಸುರಕ್ಷತೆ ನನಗೆ ಮುಖ್ಯ, ಯಾವುದೇ…