Category Archives: Blog

Your blog category

ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್: ದೃಶ್ಯ ನೋಡಿದ್ರೆ ಬೆಚ್ಚಿ ಬೀಳ್ತೀರ

ಹುಬ್ಬಳ್ಳಿ, ಜನವರಿ 09: ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ವಿವಿಸ್ತ್ರಗೊಳಿಸಿ ಹಲ್ಲೆ ನಡೆಸಿರುವ ಆರೋಪ ರಾಜ್ಯಾದ್ಯಂತ ಚರ್ಚೆ ಆಗುತ್ತಿರುವ ನಡುವೆ ಆಕೆಯೇ ವ್ಯಕ್ತಿಯೋರ್ವನನ್ನು ಬಟ್ಟೆ ಬಿಚ್ಚಿಸಿ ಥಳಿಸಿರುವ ವಿಡಿಯೋ ವೈರಲ್​​ ಆಗಿದೆ. ಧಾರವಾಡ ಮೂಲದ ತುಕಾರಾಂ ಎಂಬವರನ್ನು ವಿವಸ್ತ್ರಗೊಳಿಸಿ ಸುಜಾತಾ ಮತ್ತು ಆಕೆ ಸಹಚರರು ಥಳಿಸಿದ್ದರು. ಹನಿಟ್ರ್ಯಾಪ್ ಮಾಡಿ ತುಕಾರಾಂನನ್ನು ಅಪಹರಿಸಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು, ಎರಡೂವರೆ ವರ್ಷದ ಹಿಂದೆ ನಡೆದಿದ್ದ ಘಟನೆ ವಿಡಿಯೋ ಈಗ ವೈರಲ್ ಆಗಿದೆ.

ಇನ್ನು BJP ಕಾರ್ಯಕರ್ತೆ ಸುಜಾತಾ ಹಳೆಯ ವಿಡಿಯೋ ರಿಲೀಸ್​ ವಿಚಾರ ಸಂಬಂಧ ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಯಾವ ಸಂದರ್ಭದಲ್ಲಿ ವಿಡಿಯೋ ಆಗಿತ್ತೆಂದು ಸ್ಪಷ್ಟೀಕರಣ ನೀಡಲಿ. ಕಾಂಗ್ರೆಸ್ ಸಹಯೋಗದಲ್ಲಿದ್ದಾಗಲೇ ಇದು ನಡೆದಿದೆ. ಮೊನ್ನೆ ನಡೆದ ಘಟನೆ ಖಂಡಿಸಿ ಮಾತ್ರ ನಾವು ಹೋರಾಟ ಮಾಡ್ತಿದ್ದೇವೆ. ಸುಜಾತಾ ಹಂಡಿ ತಪ್ಪು ಮಾಡಿದ್ರೆ ಕಾನೂನಿನಡಿ ಶಿಕ್ಷೆಯಾಗಲಿ. ಪಾಲಿಕೆ ಸದಸ್ಯೆ ಸುವರ್ಣ ಪ್ರಕರಣಯೊಂದರಲ್ಲಿ ದೋಷಿ ಆಗಿದ್ದು, ಅವರ ಬಗ್ಗೆ ಯಾಕೆ ಕಾಂಗ್ರೆಸ್​ನವರು ಮಾತನಾಡುತ್ತಿಲ್ಲ ಎಂದು ಶಾಸಕರು ಪ್ರಶ್ನಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Video:ಬಾಯಿಂದ ಹರೀತಿತ್ತು ರಕ್ತ, ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ – Kannada News | Dead for 47 Years Iranian Protester’s Message Draws Global Attention

ಇರಾನ್, ಜನವರಿ 09: ಇರಾನ್ ಸರ್ಕಾರ ತನ್ನ ವಿರೋಧಿ ಪ್ರತಿಭಟನೆಗಳನ್ನು ಹತ್ತಿಕ್ಕುವ ಪ್ರಯತ್ನಗಳನ್ನು ತೀವ್ರಗೊಳಿಸುತ್ತಿದ್ದಂತೆ, ಇರಾನ್ ಮಹಿಳೆಯೊಬ್ಬರು ಇಸ್ಲಾಮಿಕ್ ಆಡಳಿತವನ್ನು ಧಿಕ್ಕರಿಸುತ್ತಾ ರಕ್ತ ಸಿಕ್ತವಾದ ಸ್ಥಿತಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ಬಾಯಿಯಿಂದ ರಕ್ತ ಸುರಿಯುತ್ತಿದ್ದರೂ ಮಹಿಳೆ ಟೆಹ್ರಾನ್​ನ ಬೀದಿಯಲ್ಲಿ ಮಹಿಳೆ ಘೋಷಣೆ ಕೂಗುತ್ತಾ ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ನನಗೆ ಭಯವಿಲ್ಲ, ನಾನು ಸತ್ತು 47 ವರ್ಷಗಳಾಯಿತು ಎಂದು ಆಕೆ ಕೂಗುತ್ತಿದ್ದರು.ಇರಾನ್‌ನ ಇಸ್ಲಾಮಿಕ್ ಆಡಳಿತವು 47 ವರ್ಷಗಳ ಹಿಂದೆ 1979 ರ ಇಸ್ಲಾಮಿಕ್ ಕ್ರಾಂತಿಯೊಂದಿಗೆ ಪ್ರಾರಂಭವಾಯಿತು.ಪಾಶ್ಚಿಮಾತ್ಯ ಪರ ಶಾ ಮೊಹಮ್ಮದ್ ರೆಜಾ ಪಹ್ಲವಿಯನ್ನು ಪದಚ್ಯುತಗೊಳಿಸಿ ಅಯತೊಲ್ಲಾ ರುಹೊಲ್ಲಾ ಖೊಮೇನಿ ನೇತೃತ್ವದ ಶಿಯಾ ಇಸ್ಲಾಮಿಕ್ ಪ್ರಭುತ್ವವನ್ನು ಸ್ಥಾಪಿಸಿತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Gold Rate Today Bangalore: ಚಿನ್ನದ ಬೆಲೆ ಏರಿಕೆ, ಬೆಳ್ಳಿ ಬೆಲೆ ಇಳಿಕೆ – Kannada News | Gold Price Today on 9th January 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಜನವರಿ 9: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಶುಕ್ರವಾರ ಭಿನ್ನ ದಾರಿ ತುಳಿದಿವೆ. ಚಿನ್ನದ ಬೆಲೆ (gold rates) ಏರಿದರೆ, ಬೆಳ್ಳಿಗೆ ಬೆಲೆ ಇಳಿದಿವೆ. ನಿನ್ನೆ 130 ರೂ ಕಡಿಮೆಗೊಂಡಿದ್ದ ಚಿನ್ನದ ಬೆಲೆ ಇವತ್ತು 65 ರೂ ಏರಿದೆ. ಆದರೆ, ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದೆ. ಇನ್ನು, ಬೆಳ್ಳಿ ಬೆಲೆ ಇಂದು 3 ರೂ ತಗ್ಗಿದೆ. ಎರಡು ದಿನದಲ್ಲಿ 13 ರೂ ಬೆಲೆ ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,27,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,38,710 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,900 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,27,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,900 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,800 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 9ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,871 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,715 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,403 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 249 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,871 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,715 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 249 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,715 ರೂ
  • ಚೆನ್ನೈ: 12,800 ರೂ
  • ಮುಂಬೈ: 12,715 ರೂ
  • ದೆಹಲಿ: 12,730 ರೂ
  • ಕೋಲ್ಕತಾ: 12,715 ರೂ
  • ಕೇರಳ: 12,715 ರೂ
  • ಅಹ್ಮದಾಬಾದ್: 12,720 ರೂ
  • ಜೈಪುರ್: 12,730 ರೂ
  • ಲಕ್ನೋ: 12,730 ರೂ
  • ಭುವನೇಶ್ವರ್: 12,715 ರೂ

ಇದನ್ನೂ ಓದಿ: ಈ ಬಾರಿ ಬಹಳ ಜನರಿಗೆ ಸಿಕ್ಕಿಲ್ಲ ಇನ್ಕಮ್ ಟ್ಯಾಕ್ಸ್ ರೀಫಂಡ್; ಏನು ಕಾರಣ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 569 ರಿಂಗಿಟ್ (12,598 ರುಪಾಯಿ)
  • ದುಬೈ: 496.75 ಡಿರಾಮ್ (12,168 ರುಪಾಯಿ)
  • ಅಮೆರಿಕ: 138.50 ಡಾಲರ್ (12,462 ರುಪಾಯಿ)
  • ಸಿಂಗಾಪುರ: 179.30 ಸಿಂಗಾಪುರ್ ಡಾಲರ್ (12,551 ರುಪಾಯಿ)
  • ಕತಾರ್: 494.50 ಕತಾರಿ ರಿಯಾಲ್ (12,206 ರೂ)
  • ಸೌದಿ ಅರೇಬಿಯಾ: 506 ಸೌದಿ ರಿಯಾಲ್ (12,141 ರುಪಾಯಿ)
  • ಓಮನ್: 52.65 ಒಮಾನಿ ರಿಯಾಲ್ (12,305 ರುಪಾಯಿ)
  • ಕುವೇತ್: 40.46 ಕುವೇತಿ ದಿನಾರ್ (11,913 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 249 ರೂ
  • ಚೆನ್ನೈ: 268 ರೂ
  • ಮುಂಬೈ: 249 ರೂ
  • ದೆಹಲಿ: 249 ರೂ
  • ಕೋಲ್ಕತಾ: 249 ರೂ
  • ಕೇರಳ: 268 ರೂ
  • ಅಹ್ಮದಾಬಾದ್: 249 ರೂ
  • ಜೈಪುರ್: 249 ರೂ
  • ಲಕ್ನೋ: 249 ರೂ
  • ಭುವನೇಶ್ವರ್: 268 ರೂ
  • ಪುಣೆ: 249

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Weekly Job Horoscope: ನಿಮ್ಮ ರಾಶಿಗನುಗುಣವಾಗಿ ವಾರದ ಉದ್ಯೋಗ ಭವಿಷ್ಯ ತಿಳಿಯಿರಿ – Kannada News | Job Prospects Weekly Horoscope January 11 17, 2026: Challenges and Opportunities

11-01-2026ರಿಂದ 17-01-2026ರವರಗೆ ಉದ್ಯೋಗದಲ್ಲಿ ನಾನಾ ಬಗೆಯ ವಿಷಮತೆಗಳು ಕಂಡುಬಂದರೂ ಅಂತ್ಯದಲ್ಲಿ ಸಮತ್ವ ಉಂಟಾಗಲಿದೆ.‌ ನಿರುದ್ಯೋಗಿಗಳಿಗೆ ಅವರಿಗೆ ಬೇಕಾದ ಕೆಲಸವಿಲ್ಲ ಎಂಬ ಬೇಸರವೇ ಅಧಿಕ. ನಿಮ್ಮ ಮನಸ್ಸಿನ ಮೇಲೆ ಈ ವಾರ ಹೆಚ್ಚು ಪರಿಣಾಮಕಾರಿಯಾದ ಪ್ರಭಾವ ಬೀರಲಿದೆ.

ಮೇಷ ರಾಶಿ:

ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಈ ವಾರ ಉದ್ಯೋಗದಲ್ಲಿರುವವರಿಗೆ ಹೊಸ ಹೊಣೆಗಾರಿಕೆಗಳಿಂದ ಮೆಚ್ಚುಗೆ ಸಿಗುತ್ತದೆ, ನಿರುದ್ಯೋಗಿಗಳಿಗೆ ಅವಕಾಶ ಸೂಚನೆ ಇದ್ದರೂ ಆತುರದ ನಿರ್ಧಾರ ಮತ್ತು ಅಸಮಾಧಾನ ಪ್ರಗತಿಯನ್ನು ಸ್ವಲ್ಪ ತಡೆಯಬಹುದು.

ವೃಷಭ ರಾಶಿ:

ಈ ವಾರದಲ್ಲಿ ಉದ್ಯೋಗಸ್ಥರಿಗೆ ಸ್ಥಿರತೆ ಹಾಗೂ ಆದಾಯ ವೃದ್ಧಿಯ ಸೂಚನೆ, ನಿರುದ್ಯೋಗಿಗಳಿಗೆ ಸಹಾಯ ಸಿಗಬಹುದು, ಆದರೆ ನಿಧಾನಗತಿ ಮತ್ತು ಬದಲಾವಣೆ ಭಯ ಅವಕಾಶಗಳನ್ನು ಕೈ ತಪ್ಪಿಸಬಹುದು.

ಮಿಥುನ ರಾಶಿ:

ಮೂರನೇ ರಾಶಿಯವರಿಗೆ ಈ ವಾರ ಉದ್ಯೋಗದಲ್ಲಿರುವವರಿಗೆ ಹೊಸ ಯೋಜನೆ, ನಿರುದ್ಯೋಗಿಗಳಿಗೆ ಸಂದರ್ಶನ ಯೋಗ ಇದ್ದರೂ ಏಕಾಗ್ರತೆಯ ಕೊರತೆ ಮತ್ತು ಗೊಂದಲ ಸಂಪೂರ್ಣ ಯಶಸ್ಸಿಗೆ ಅಡ್ಡಿಯಾಗಬಹುದು.

ಕರ್ಕಾಟಕ ರಾಶಿ:

ಚಂದ್ರನ ಆಧಿಪತ್ಯದ ಈ ರಾಶಿಯ ಉದ್ಯೋಗಸ್ಥರಿಗೆ ಅಧಿಕೃತ ಕೆಲಸಗಳಲ್ಲಿ ಅನುಕೂಲ, ನಿರುದ್ಯೋಗಿಗಳಿಗೆ ಪ್ರಯತ್ನ ಫಲ ನೀಡಬಹುದು, ಆದರೆ ಮಾತಿನ ಅಸಾವಧಾನತೆ ಮತ್ತು ಮನಸ್ತಾಪ ಮಾನಸಿಕ ಒತ್ತಡ ತರುತ್ತದೆ.

ಸಿಂಹ ರಾಶಿ:

ಈ ವಾರದಲ್ಲಿ ಉದ್ಯೋಗದಲ್ಲಿರುವವರಿಗೆ ನಾಯಕತ್ವ ಮತ್ತು ಗೌರವ, ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಇದ್ದರೂ ಅಹಂಕಾರ ಮತ್ತು ಇತರರ ಅಸೂಯೆ ವಿಳಂಬಕ್ಕೆ ಕಾರಣವಾಗಬಹುದು.

ಕನ್ಯಾ ರಾಶಿ:

ಈ ರಾಶಿಯರಿಗೆ ಎರಡನೇ ವಾರ ಉದ್ಯೋಗಸ್ಥರಿಗೆ ಶಿಸ್ತಿನ ಕೆಲಸದಿಂದ ಮೆಚ್ಚುಗೆ, ನಿರುದ್ಯೋಗಿಗಳಿಗೆ ಅವಕಾಶದ ಸೂಚನೆ ಇದ್ದರೂ ಅಧಿಕ ಒತ್ತಡ ಮತ್ತು ದಣಿವು ಉತ್ಸಾಹ ಕಡಿಮೆ ಮಾಡಬಹುದು.

ತುಲಾ ರಾಶಿ:

ಏಳನೇ ರಾಶಿಯವರಿಗೆ ಉದ್ಯೋಗದಲ್ಲಿರುವವರಿಗೆ ಹೊಸ ಒಪ್ಪಂದ ಲಾಭ, ನಿರುದ್ಯೋಗಿಗಳಿಗೆ ಪರಿಚಯದಿಂದ ಅವಕಾಶ ಸಿಗಬಹುದು, ಆದರೆ ನಿರ್ಧಾರದಲ್ಲಿ ಗೊಂದಲ ಮತ್ತು ವಿಳಂಬವು ಪ್ರಗತಿಯನ್ನು ಕುಗ್ಗಿಸುತ್ತದೆ.

ವೃಶ್ಚಿಕ ರಾಶಿ:

ಕುಜನ ಆಧಿಪತ್ಯದ ಈ ರಾಶಿಯವರಿಗೆ ಉದ್ಯೋಗಸ್ಥರಿಗೆ ಸ್ಪರ್ಧೆಯಲ್ಲಿ ಗೆಲುವು, ನಿರುದ್ಯೋಗಿಗಳಿಗೆ ಅವಕಾಶ ಕಾಣಿಸಿಕೊಳ್ಳಬಹುದು, ಆದರೆ ಶತ್ರುಕಾಟ ಮತ್ತು ರಹಸ್ಯ ವಿಚಾರಗಳು ಒತ್ತಡ ಹೆಚ್ಚಿಸಬಹುದು.

ಧನು ರಾಶಿ:

ಎರಡನೇ ವಾರ ಉದ್ಯೋಗದಲ್ಲಿರುವವರಿಗೆ ಬದಲಾವಣೆ ಅಥವಾ ವಿದೇಶ ಸಂಪರ್ಕ ಲಾಭ, ನಿರುದ್ಯೋಗಿಗಳಿಗೆ ಅವಕಾಶ ಇದ್ದರೂ ಅತಿಯಾದ ನಿರೀಕ್ಷೆ ಅಸ್ಥಿರತೆ ಉಂಟುಮಾಡಬಹುದು.

ಮಕರ ರಾಶಿ:

ಈ ವಾರ ಉದ್ಯೋಗಸ್ಥರಿಗೆ ಶ್ರಮದಿಂದ ಸ್ಥಾನಮಾನ ಹೆಚ್ಚಳ, ನಿರುದ್ಯೋಗಿಗಳಿಗೆ ನಿಧಾನವಾಗಿ ಅವಕಾಶ ಸಿಗುತ್ತದೆ, ಆದರೆ ಫಲ ತಡ ಮತ್ತು ಮಾನಸಿಕ ಒತ್ತಡ ಸಹನೆ ಪರೀಕ್ಷಿಸುತ್ತದೆ.

ಕುಂಭ ರಾಶಿ:

ಜನವರಿಯ ಈ ವಾರ ಉದ್ಯೋಗದಲ್ಲಿರುವವರಿಗೆ ತಾಂತ್ರಿಕ ಪ್ರಗತಿ, ನಿರುದ್ಯೋಗಿಗಳಿಗೆ ಹೊಸ ಆಲೋಚನೆಗಳಿಂದ ಅವಕಾಶ, ಆದರೆ ತಂಡದ ಅಸಮಂಜಸತೆ ಮತ್ತು ವಿಳಂಬ ಅಡ್ಡಿಯಾಗಬಹುದು.

ಮೀನು ರಾಶಿ:

ಈ ವಾರದಲ್ಲಿ ಉದ್ಯೋಗಸ್ಥರಿಗೆ ಸಮಸ್ಯೆ ಪರಿಹಾರ, ನಿರುದ್ಯೋಗಿಗಳಿಗೆ ಕೆಲಸದ ಸೂಚನೆ ಕಂಡರೂ ಆತ್ಮವಿಶ್ವಾಸ ಕೊರತೆ ಮತ್ತು ನಿರ್ಧಾರ ವಿಳಂಬ ಪ್ರಗತಿಯನ್ನು ನಿಧಾನಗೊಳಿಸಬಹುದು.

– ಲೋಹಿತ ಹೆಬ್ಬಾರ್ – 8762924271 (what’s app only)

Source link

ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್: ಆ್ಯಂಬುಲೆನ್ಸ್ ಸಿಲುಕಿ ರೋಗಿ ನರಳಾಟ – Kannada News | Bengaluru–Hosur National Highway Traffic Jam for Kilometres, Ambulance Stuck and Patient Suffers

ಆನೇಕಲ್, ಜನವರಿ 9: ಬೆಂಗಳೂರು–ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಮ್ಮೆ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಚಂದಾಪುರದಿಂದ ಅತ್ತಿಬೆಲೆವರೆಗೆ ಸುಮಾರು ನಾಲ್ಕೈದು ಕಿಲೋಮೀಟರ್‌ಗಳಷ್ಟು ದೂರ ವಾಹನಗಳು ಸರಿಯದೇ ನಿಂತಿದ್ದು, ಹೆದ್ದಾರಿ ಸಂಪೂರ್ಣವಾಗಿ ಸ್ಥಬ್ಧಗೊಂಡಿತ್ತು. ಟ್ರಾಫಿಕ್ ಜಾಮ್ ಮಧ್ಯೆ ಆ್ಯಂಬುಲೆನ್ಸ್ ಸಿಲುಕಿ, ರೋಗಿಯೊಬ್ಬರು ನರಳಾಡುವಂತಾಯಿತು. ರೋಗಿಯನ್ನು ಬೇಗ ಆಸ್ಪತ್ರೆಗೆ ತಲುಪಿಸಲು ಆ್ಯಂಬುಲೆನ್ಸ್ ಚಾಲಕ ಸಾಕಷ್ಟು ಪ್ರಯತ್ನಪಟ್ಟರೂ, ವಾಹನಗಳ ದಟ್ಟಣೆಯಿಂದ ಮುಂದೆ ಸಾಗಲು ಸಾಧ್ಯವಾಗಲಿಲ್ಲ.

ಟ್ರಾಫಿಕ್ ಜಾಮ್‌ನ ಪರಿಣಾಮವಾಗಿ ಶಾಲೆ ಹಾಗೂ ಕಾಲೇಜುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಸಹ ತೀವ್ರ ತೊಂದರೆಗೆ ಒಳಗಾದರು. ಸಮಯಕ್ಕೆ ಶಾಲೆ–ಕಾಲೇಜು ತಲುಪಲು ಸಾಧ್ಯವಾಗದೆ, ಮಕ್ಕಳು ಮತ್ತು ಪೋಷಕರು ಪರದಾಡುವ ಸ್ಥಿತಿ ನಿರ್ಮಾಣವಾಯಿತು.

ಕಳೆದ ಒಂದೂವರೆ ವರ್ಷದಿಂದ ಬೆಂಗಳೂರು–ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದೇ ನಿತ್ಯದ ಟ್ರಾಫಿಕ್ ಜಾಮ್‌ಗೆ ಪ್ರಮುಖ ಕಾರಣ ಎನ್ನಲಾಗಿದೆ. ಚಂದಾಪುರದಿಂದ ಅತ್ತಿಬೆಲೆವರೆಗೆ ಪ್ರತಿದಿನವೂ ಸಂಚಾರ ದುಸ್ಥರವಾಗುತ್ತಿದ್ದು, ವಾಹನ ಸವಾರರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ದಿ ರಾಜಾ ಸಾಬ್’ ಪ್ರೀಮಿಯರ್ ಶೋ: ಚಿತ್ರಮಂದಿರದಲ್ಲಿ ಪ್ರಭಾಸ್ ಫ್ಯಾನ್ಸ್ ಗಲಾಟೆ – Kannada News | Prabhas fans creates rucks in theaters on The Raja Saab premier show

ಪ್ರಭಾಸ್ (Prabhas) ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಇಂದು (ಜನವರಿ 09) ಬಿಡುಗಡೆ ಆಗಿದೆ. ಸಿನಿಮಾದ ಪ್ರೀಮಿಯರ್ ಶೋಗಳು ನಿನ್ನಿ (ಜನವರಿ 08) ರಾತ್ರಿ ಆಂಧ್ರ ಮತ್ತು ತೆಲಂಗಾಣಗಳಲ್ಲಿ ಪ್ರದರ್ಶನವಾಗಿವೆ. ಆದರೆ ತೆಲಂಗಾಣ ನ್ಯಾಯಾಲಯದಿಂದ ವಿಶೇಷ ಶೋ ಮತ್ತು ಟಿಕೆಟ್ ಹೆಚ್ಚಳಕ್ಕೆ ಅನುಮತಿ ಪಡೆಯಬೇಕಿದ್ದ ಕಾರಣದಿಂದಾಗಿ ಸಿನಿಮಾದ ಪ್ರೀಮಿಯರ್ ಶೋಗ ಟಿಕೆಟ್​​ಗಳನ್ನು ಕೊನೆಯ ಹಂತದಲ್ಲಿ ಬಿಡುಗಡೆ ಮಾಡಲಾಯ್ತು. ಇದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಯ್ತು. ಇದೇ ಕಾರಣಕ್ಕೆ ‘ದಿ ರಾಜಾ ಸಾಬ್’ ಸಿನಿಮಾದ ಪ್ರೀಮಿಯರ್ ಶೋ ಪ್ರದರ್ಶನವಾದ ಕೆಲವು ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಗಲಾಟೆ ಮಾಡಿದ್ದು, ಚಿತ್ರಮಂದಿರಗಳಿಗೆ ಹಾನಿ ಮಾಡಿದ್ದಾರೆ.

ಆಂಧ್ರ ಪ್ರದೇಶದಲ್ಲಿ ‘ದಿ ರಾಜಾ ಸಾಬ್’ ಸಿನಿಮಾದ ಪ್ರೀಮಿಯರ್ ಶೋ ಮತ್ತು ಟಿಕೆಟ್ ಹೆಚ್ಚಳಕ್ಕೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ತೆಲಂಗಾಣದಲ್ಲಿ ಅದರಲ್ಲೂ ವಿಶೇಷವಾಗಿ ಹೈದರಾಬಾದ್​​ನಲ್ಲಿ ಕೆಲವು ಚಿತ್ರಮಂದಿರಗಳಲ್ಲಿ ಬಹಳ ತಡವಾಗಿ ಪ್ರೀಮಿಯರ್ ಶೋ ಆಯೋಜನೆ ಮಾಡಲಾಯ್ತು. ಇದರಿಂದಾಗಿ ಸಾಕಷ್ಟು ಗೊಂದಲ ಉಂಟಾಗಿದೆ.

ಹೈದರಾಬಾದ್​​ನ ವಿಮಲ್ ಚಿತ್ರಮಂದಿರಗಳಲ್ಲಿ ಪ್ರಭಾಸ್ ಅಭಿಮಾನಿಗಳು ಗುರುವಾರ ರಾತ್ರಿ ದಾಂಧಲೆ ನಡೆಸಿದ್ದು, ಚಿತ್ರಮಂದಿರದ ಗಾಜುಗಳನ್ನು ಒಡೆದಿದ್ದಾರೆ. ವಿಮಲ್ ಚಿತ್ರಮಂದಿರದಲ್ಲಿ ಶೋ ತಡವಾಗಿದ್ದಕ್ಕೆ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಹೈದರಾಬಾದ್​​ನ ಇನ್ನೂ ಕೆಲವು ಚಿತ್ರಮಂದಿರಗಳಲ್ಲಿಯೂ ಸಹ ಪ್ರಭಾಸ್ ಅಭಿಮಾನಿಗಳು ಗಲಾಟೆ ಮಾಡಿದ್ದಾರೆ. ವಿಮಲ್ ಚಿತ್ರಮಂದಿರದಲ್ಲಿ ಪೊಲೀಸರು ಲಾಠಿಚಾರ್ಜ್ ಸಹ ಮಾಡಿದ್ದಾರೆ. ಕೆಲವು ಅಭಿಮಾನಿಗಳು, ಪೊಲೀಸರಿಂದ ಲಾಠಿ ಕಿತ್ತುಕೊಂಡು ಅವರ ಮೇಲೆಯೇ ದಾಳಿ ಮಾಡಿರುವ ವಿಡಿಯೋಗಳು ಹರಿದಾಡುತ್ತಿವೆ.

ಪ್ರಭಾಸ್ ನಟಿಸಿರುವ ‘ದಿ ರಾಜಾ ಸಾಬ್’ ಸಿನಿಮಾ ಹಾರರ್ ಕಾಮಿಡಿ ಸಿನಿಮಾ ಆಗಿದ್ದು, ಪ್ರಭಾಸ್ ಜೊತೆಗೆ ನಿಧಿ ಅಗರ್ವಾಲ್, ರಿಧ್ಧಿ ಕುಮಾರ್, ಮಾಳವಿಕಾ ಮೋಹನನ್ ನಟಿಸಿದ್ದಾರೆ. ಬೊಮನ್ ಇರಾನಿ ಮತ್ತು ಸಂಜಯ್ ದತ್ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಮಾರುತಿ. ಬಹಳ ವರ್ಷಗಳ ಬಳಿಕ ಪ್ರಭಾಸ್ ಹಾಸ್ಯಕ್ಕೆ ಪ್ರಾಮುಖ್ಯತೆ ಇರುವ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಜನ ನಾಯಗನ್’ ಚಿತ್ರಕ್ಕೆ ದೊಡ್ಡ ಜಯ; ಯುಎ ಪ್ರಮಾಣಪತ್ರ ನೀಡಲು ಕೋರ್ಟ್ ಆದೇಶ – Kannada News | Madras High court Order Censor Board to Grant UA Certificate To Jana Nayagan

ಸಂಕಷ್ಟದಲ್ಲಿದ್ದ ‘ಜನ ನಾಯಗನ್’ ಚಿತ್ರಕ್ಕೆ ದೊಡ್ಡ ಗೆಲುವು ಸಿಕ್ಕಿದೆ. ಈ ಸಿನಿಮಾಗೆ ತಕ್ಷಣವೇ ಸೆನ್ಸಾರ್ ಪತ್ರ ನೀಡುವಂತೆ ಆದೇಶ ಹೊರಡಿಸಿದೆ. ಇದರಿಂದ ತಂಡಕ್ಕೆ ದೊಡ್ಡ ರಿಲೀಫ್ ಸಿಕ್ಕಿದೆ. ಸಿನಿಮಾನ ಯಾವಾಗ ರಿಲೀಸ್ ಮಾಡಬೇಕು ಎಂಬುದರ ಬಗ್ಗೆ ತಂಡ ಶೀಘ್ರವೇ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಸಿನಿಮಾಗೆ ಸೆನ್ಸಾರ್ ಪತ್ರ ನೀಡದ ಬಗ್ಗೆ ಕೆವಿಎನ್ ಸಂಸ್ಥೆ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಸೆನ್ಸಾರ್ ಮಂಡಳಿ ಸೂಚಿಸಿದ ಬದಲಾವಣೆ ಮಾಡಿದರೂ ನಮಗೆ ಪ್ರಮಾಣಪತ್ರ ನೀಡಿಲ್ಲ ಎಂದು ನಿರ್ಮಾಣ ಸಂಸ್ಥೆ ಅಳಲು ತೋಡಿಕೊಂಡಿತ್ತು. ಸಿನಿಮಾಗೆ ದೊಡ್ಡ ಮೊತ್ತದ ಬಂಡವಾಳ ಹೂಡಿದ್ದಾಗಿಯೂ ಹೇಳಿಕೊಂಡಿತ್ತು. ಈಗ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಕೋರ್ಟ್ ಆದೇಶ ನೀಡಿದ್ದು, ‘ಯುಎ’ ಸೆನ್ಸಾರ್ ಪತ್ರ ನೀಡುವಂತೆ ಸೂಚಿಸಿದೆ.

Published On – 11:04 am, Fri, 9 January 26

Source link

ಅಕ್ರಮ ವಾಸಿಗಳಿಗೆ ತೋರಿದ ಕರುಣೆ, ಈ ಸಾಧಕರಿಗೆ ಯಾಕಿಲ್ಲ? ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ ವಸತಿ ಭಾಗ್ಯ ನೀಡದ ಸರ್ಕಾರ – Kannada News | TV9 Exposes Karnataka Governments Housing Disparity: Para Athlete Prasads Five Year Wait

ಬೆಂಗಳೂರು, ಜ.9: ಕೋಗಿಲು ಅಕ್ರಮ ವಾಸಿಗಳು ರಾಜ್ಯ ಸರ್ಕಾರ ವಸತಿ ಭಾಗ್ಯವನ್ನು ನೀಡಲು ಮುಂದಾಗಿದೆ. ಆದರೆ ನಿಜವಾಗಿಯು ಸರ್ಕಾರದಿಂದ ಈ ವಸತಿ ಭಾಗ್ಯ ಸಿಗಬೇಕಾಗಿರುವುದು ಇವರಿಗೆ. ಇದು ಟಿವಿ9 ಕನ್ನಡ ಮಾಡಿದ ವಿಶೇಷ ವರದಿ. ಸಾಧಕರಿಗೆ ಸಿಗಬೇಕಾದ ಸೌಲಭ್ಯ ಅಕ್ರಮವಾಗಿ ಬಂದವರಿಗೆ ಸಿಗುತ್ತಿದೆ ಎಂಬುದನ್ನು ಜನರ ಅಕ್ರೋಶವಾಗಿದೆ. ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮನೆ ಹಂಚಿಕೆಯಲ್ಲಿ ತಾರತಮ್ಯ ಎದ್ದು ಕಾಣುತ್ತಿದೆ. ದೇಶವನ್ನು ಪ್ರತಿನಿಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಪ್ಯಾರಾ-ಅಥ್ಲೀಟ್ ಪ್ರಸಾದ್ ಅವರು, ವಿಕಲಚೇತನ ಕುಟುಂಬದೊಂದಿಗೆ ಐದು ವರ್ಷಗಳಿಂದ ಮನೆಗಾಗಿ ಪರದಾಡುತ್ತಿದ್ದಾರೆ. ಆದರೆ, ಕೋಗಿಲು ಅಕ್ರಮ ವಾಸಿಗಳಿಗೆ 30 ದಿನಗಳಲ್ಲಿ ಮನೆ ಮಂಜೂರಾಗಿದ್ದು, ಅರ್ಹರಿಗೆ ಅನ್ಯಾಯವಾಗುತ್ತಿದೆ. ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮನೆ ಹಂಚಿಕೆಯಲ್ಲಿ ತಾರತಮ್ಯ ನಡೆದಿದೆ. ಕೋಗಿಲು ಪ್ರದೇಶದ 26 ಅತಿಕ್ರಮಣದಾರರಿಗೆ 30 ದಿನಗಳೊಳಗೆ ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ವಸತಿ ಮತ್ತು ಕಂದಾಯ ಸಚಿವರು ದೃಢಪಡಿಸಿದ್ದಾರೆ. ಸರ್ಕಾರವು ಮಾನವೀಯತೆ ದೃಷ್ಟಿಯಿಂದ ಈ ಕ್ರಮ ಕೈಗೊಂಡಿದೆ ಎಂದು ಹೇಳಿದೆ. ಆದರೆ ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ ಪ್ಯಾರಾ-ಅಥ್ಲೀಟ್ ಪ್ರಸಾದ್ ಅವರಿಗೆ ಕಳೆದ ಐದು ವರ್ಷಗಳಿಂದ ಮನೆ ಮಂಜೂರಾಗಿಲ್ಲ. ಪ್ರಸಾದ್ ಅವರ ಕುಟುಂಬದಲ್ಲಿ ತಂದೆ ರಾಮು (70) ಮತ್ತು ತಾಯಿ (65) ಸೇರಿದಂತೆ ಎಲ್ಲರೂ ವಿಕಲಚೇತನರಾಗಿದ್ದಾರೆ. 2001ರಲ್ಲಿ ಮನೆಗಾಗಿ 1 ಲಕ್ಷ ರೂಪಾಯಿ ಪಾವತಿಸಿದ್ದರೂ, ಪ್ರಸಾದ್ ಮತ್ತು ಅವರ ಕುಟುಂಬ ಕಾದು ಕುಳಿತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಾದ್ ಅವರ ಸಾಧನೆಯನ್ನು ಮೆಚ್ಚಿದ್ದರೂ, ವಸತಿ ಸೌಲಭ್ಯ ಒದಗಿಸುವಲ್ಲಿ ವಿಳಂಬವಾಗಿದೆ. ಅರ್ಹರಿಗೆ ಸೂರು ನೀಡುವಲ್ಲಿ ಸರ್ಕಾರವು ತನ್ನ ಕರ್ತವ್ಯವನ್ನು ನಿರ್ಲಕ್ಷಿಸುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಇದೀಗ ಪ್ಯಾರಾಒಲಂಪಿಕ್ ಕ್ರೀಡಾಪಟು ಪ್ರಸಾದ್​​ಗೆ ಮನೆ ನೀಡುವ ಭರವಸೆಯನ್ನು ರಾಜೀವ್ ಗಾಂಧಿ ವಸತಿ ನಿಗಮ ಅಧ್ಯಕ್ಷ ಪರಶುರಾಮ್ ಅವರು ಟಿವಿ9ಗೆ ಹೇಳಿದೆ. ನಮ್ಮ ಇಲಾಖೆಯಿಂದ ಮನೆ ಕೊಡಿಸುವ ಪ್ರಯತ್ನ ಮಾಡುತ್ತೇವೆ. ನಮ್ಮಿಂದ ತಪ್ಪಾಗಿದ್ದರೆ ನಾವು ಕ್ಷಮೆಯಾಚಿಸುತ್ತೇವೆ. ಕೂಡಲೇ ನಮ್ಮ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇವೆ. ಇಂದೇ ಕ್ರೀಡಾಪಟು ಪ್ರಸಾದ್​ ನಮ್ಮ ಕಚೇರಿ ಬಂದು ಭೇಟಿ ನೀಡಲಿ ಎಂದು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

SSLC ವಿದ್ಯಾರ್ಥಿಗಳೇ ಎಚ್ಚರ! ಹಣ ಕೊಟ್ರೆ ಪ್ರಶ್ನೆ ಪತ್ರಿಕೆ ಸಿಗತ್ತೆ ಅಂತಾ ಯಾಮಾರಬೇಡಿ – Kannada News | SSLC Exam Paper Leak Scam: Students Warned Against Fake Papers on Social Media

SSLC ವಿದ್ಯಾರ್ಥಿಗಳೇ ಎಚ್ಚರ! ಹಣ ಕೊಟ್ರೆ ಪ್ರಶ್ನೆ ಪತ್ರಿಕೆ ಸಿಗತ್ತೆ ಅಂತಾ ಯಾಮಾರಬೇಡಿ

ಬೆಂಗಳೂರು, ಜನವರಿ 09: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಿಡಗೇಡಿಗಳು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ. ಪ್ರಶ್ನೆ ಪತ್ರಿಕೆ ಲೀಕ್ ಮಾಡುತ್ತೇವೆ ಎಂದು ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ ಪೋಸ್ಟ್‌ಗಳು, ವೀಡಿಯೊಗಳು ಹಾಗೂ ಬಯೋಗಳಲ್ಲಿ ಪ್ರಕಟಿಸಿ, ಹಣ ಕೇಳಿ ವಿದ್ಯಾರ್ಥಿಗಳನ್ನು ಯಾಮಾರಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.

ನೂರು ರೂ. ಕೊಟ್ಟರೆ ಸಿಗುತ್ತೆ ಪ್ರಶ್ನೆ ಪತ್ರಿಕೆ

ಈಗಾಗಲೇ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮೊದಲನೇ ಹಂತದ ಪೂರ್ವ ಸಿದ್ಧತಾ ಪರೀಕ್ಷೆಗಳು ಆರಂಭವಾಗಿದ್ದು, ಮಾರ್ಚ್​ನಿಂದ ಮುಖ್ಯ ಪರೀಕ್ಷೆ ಆರಂಭವಾಗಲಿದೆ. ಇದರ ನಡುವೆ ಕೆಲ ಕಿಡಗೇಡಿಗಳು ಎಸ್‌ಎಸ್‌ಎಲ್‌ಸಿ, ಪೂರ್ವಭಾವಿ ಪ್ರಶ್ನೆ ಪತ್ರಿಕೆ ಲೀಕ್ ಮಾಡತ್ತೇವೆಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. 100 ರೂಪಾಯಿ ಫೋನ್‌ಪೇ ಅಥವಾ ಆನ್‌ಲೈನ್ ಪಾವತಿ ಮಾಡಿದರೆ ಪ್ರಶ್ನೆ ಪತ್ರಿಕೆ ಕಳುಹಿಸುತ್ತೇವೆ ಎಂದು ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಈ ರೀತಿ ಲೀಕ್​ ಆಗುತ್ತಿರುವ ಪ್ರಶ್ಬೆ ಪತ್ರಿಕೆಗಳು ಸಂಪೂರ್ಣ ನಕಲಿಯಾಗಿದ್ದು, ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯದೊಂದಿಗೆ ಹಣವನ್ನೂ ಕಳೆದುಕೊಳ್ಳುತ್ತಿದ್ದಾರೆ.

ಈ ರೀತಿಯ ವದಂತಿಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದು, ಶಿಕ್ಷಣ ಇಲಾಖೆಯ ಮೇಲೂ ಕಿಡಗೇಡಿಗಳು ಚಾಲೆಂಜ್ ಹಾಕಿದಂತೆ ವರ್ತಿಸುತ್ತಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಮಾತು ಕೇಳಿ ವಿದ್ಯಾರ್ಥಿಗಳು ಆತುರಕ್ಕೆ ಒಳಗಾಗಿ ಮೋಸ ಹೋಗಬಾರದು ಎಂದು ಶಿಕ್ಷಣ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ ಇಂದಿನಿಂದ ಶುರು SSLC ಪೂರ್ವ ಸಿದ್ಧತಾ ಪರೀಕ್ಷೆ; ಮೂರು ಹಂತದಲ್ಲಿ ಎಕ್ಸಾಮ್

ಕಿಡಗೇಡಿಗಳ ವಿರುದ್ಧ ದೂರು

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಖಾಸಗಿ ಶಿಕ್ಷಣ ಇಲಾಖೆ ಹಾಗೂ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ ಆಫ್ ಪ್ರೈಮರಿ ಅಂಡ್ ಸೆಕೆಂಡರಿ ಸ್ಕೂಲ್ಸ್ ಇನ್ ಕರ್ನಾಟಕ ಸಂಘಟನೆಗಳು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದು, ಕಿಡಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ. ವಿದ್ಯಾರ್ಥಿಗಳು ಯಾವುದೇ ಸುಳ್ಳು ಪ್ರಚಾರಕ್ಕೆ ಬಲಿಯಾಗದೆ ಅಧಿಕೃತ ಮಾಹಿತಿ ಮೇಲೆ ಮಾತ್ರ ನಂಬಿಕೆ ಇಡಬೇಕು ಎಂದು ಮನವಿ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಗಿಲ್ಲಿ ನಟನ ಕ್ರೇಜ್ ನೋಡಿ; ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ – Kannada News | Gilli Nata fan Tattooed Gilli Photo on his hand

ಗಿಲ್ಲಿ ನಟ ಅವರು ಸಖತ್ ಕ್ರೇಜ್ ಹೊಂದಿದ್ದಾರೆ. ಅವರು ಇನ್​​ಸ್ಟಾಗ್ರಾಮ್​​ನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅವರ ಕ್ರೇಜ್ ದಿನ ಕಳೆದಂತೆ ಹೆಚ್ಚುತ್ತಿದೆ. ಈಗ ಅಭಿಮಾನಿಯೋರ್ವ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಇದು ಗಿಲ್ಲಿ ಕ್ರೇಜ್​​ಗೆ ಹಿಡಿದ ಕೈಗನ್ನಡಿ ಆಗಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link