ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ರಾತ್ರಿಪೂರ್ತಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಆನೇಕಲ್, ಜನವರಿ 08: ಹಳೆ ದ್ವೇಷದ ಹಿನ್ನೆಲೆ ರೌಡಿಶೀಟರ್ ಗಂಗಾ ಮತ್ತು ಆತನ ಗ್ಯಾಂಗ್, ರೌಡಿಶೀಟರ್ ಕಾರ್ತಿಕ್ ಅಲಿಯಾಸ್ ಸಲಗನನ್ನು ಅಪಹರಿಸಿ ರಾತ್ರಿಪೂರ್ತಿ ಚಿತ್ರಹಿಂಸೆ ನೀಡಿದೆ. ಆನೇಕಲ್ ತಾಲೂಕಿನ ಹುಸ್ಕೂರು ಬಳಿ ಈ ಘಟನೆ ನಡೆದಿದ್ದು, ಕಾರ್ತಿಕ್‌ನನ್ನು ಕಿಡ್ನ್ಯಾಪ್ ಮಾಡುವುದಲ್ಲದೆ, ಆತನ ಬೆರಳನ್ನು ಕತ್ತರಿಸಿ ಕ್ರೂರವಾಗಿ ಹಲ್ಲೆ ಮಾಡಲಾಗಿದೆ. ಇಡೀ ರಾತ್ರಿ ಚಿತ್ರಹಿಂಸೆ ನೀಡಿದ ನಂತರ, ಗ್ಯಾಂಗ್ ಕಾರ್ತಿಕ್‌ನನ್ನು ಹುಸ್ಕೂರು ಬಳಿಯೇ ರಸ್ತೆಗೆ ಎಸೆದು ಪರಾರಿಯಾಗಿದೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಕಾರ್ತಿಕ್‌ನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ…