Category Archives: Blog

Your blog category

ಇಂಗ್ಲೆಂಡ್‌ ನಾಯಕ ಹ್ಯಾರಿ ಬ್ರೂಕ್​ಗೆ 36 ಲಕ್ಷ ರೂ. ದಂಡ – Kannada News | Ashes Aftermath: Harry Brook Faces Huge Fine for New Zealand Bar Brawl

ಆಶಸ್ ಸರಣಿಯಲ್ಲಿ ಇಂಗ್ಲೆಂಡ್‌ ಪರ ಆಡಿದ್ದ ಸ್ಟಾರ್ ಆಟಗಾರ ಹ್ಯಾರಿ ಬ್ರೂಕ್, ಬಾರ್‌ನಲ್ಲಿ ಬೌನ್ಸರ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ತಪ್ಪಿತಸ್ಥರೆಂದು ಸಾಭೀತಾಗಿದ್ದು, ಅವರಿಗೆ ಬರೋಬ್ಬರಿ 36 ಲಕ್ಷ ರೂಗಳನ್ನು ದಂಡವಾಗಿ ವಿಧಿಸಲಾಗಿದೆ. ವಾಸ್ತವವಾಗಿ ಆಶಸ್‌ಗೂ ಮೊದಲು ನಡೆದಿದ್ದ ನ್ಯೂಜಿಲೆಂಡ್‌ ಪ್ರವಾಸದಲ್ಲಿ ಬ್ರೂಕ್, ಬಾರ್ ಬೌನ್ಸರ್ ಜೊತೆ ಜಗಳವಾಡಿದ್ದರು.

Source link

‘ಧುರಂಧರ್ 2’ Vs ‘ಟಾಕ್ಸಿಕ್’: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು – Kannada News | K Manju talks about Yash starrer Toxic movie clash with Ranveer Singh starrer Dhurandhar 2

ನಿರ್ಮಾಪಕ ಕೆ. ಮಂಜು ಅವರು ಯಶ್ (Yash) ಜೊತೆ ‘ರಾಜಾಹುಲಿ’, ‘ಸಂತು ಸ್ಟ್ರೇಟ್ ಫಾರ್ವರ್ಡ್’ ಸಿನಿಮಾಗಳನ್ನು ಮಾಡಿದ್ದರು. ಈಗ ಯಶ್ ಬೆಳವಣಿಗೆಯನ್ನು ನೋಡಿ ಕೆ. ಮಂಜು ಖುಷಿಪಟ್ಟಿದ್ದಾರೆ. ಯಶ್ ನಟನೆಯ ‘ಟಾಕ್ಸಿಕ್’ (Toxic) ಹಾಗೂ ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ಆ ಕ್ಲ್ಯಾಶ್ ಬಗ್ಗೆ ಕೆ. ಮಂಜು ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ಟಾಕ್ಸಿಕ್ ಸಿನಿಮಾವನ್ನು ಧುರಂಧರ್ ಚಿತ್ರಕ್ಕೆ ಹೋಲಿಸಬೇಡಿ. ಧುರಂದರ್ ಒಂದು ಕಂಟೆಂಟ್ ಓರಿಯೆಂಟೆಡ್ ಸಿನಿಮಾ. ಟಾಕ್ಸಿಕ್ ಕೇವಲ ಭಾರತೀಯ ಸಿನಿಮಾ ಅಲ್ಲ. ಇದರ ಕಥೆ ಡಿಫರೆಂಟ್ ಆಗಿರುತ್ತದೆ. ಟಾಕ್ಸಿಕ್ ಮತ್ತು ಧರುಂದರ್ 2 ಕೂಡ ದೊಡ್ಡ ಹಿಟ್ ಆಗುತ್ತವೆ. ಟಾಕ್ಸಿಕ್ ಸಿನಿಮಾವನ್ನು 5 ಸಾವಿರದಿಂದ 6 ಸಾವಿರ ಚಿತ್ರಮಂದಿರಗಳಲ್ಲಿ ಹಾಕಬೇಕು ಅಂತ ಇದ್ದಾರೆ. ಒಂದೆರಡು ಸಾವಿರ ಚಿತ್ರಮಂದಿರ ಕಡಿಮೆ ಆಗಬಹುದು ಬಿಟ್ಟರೆ ಬೇರೆ ಏನೂ ಆಗಲ್ಲ. ಟಾಕ್ಸಿಕ್ ಖಂಡಿತಾ ಬಿಗ್ ಹಿಟ್ ಆಗುತ್ತದೆ’ ಎಂದು ಕೆ. ಮಂಜು (K Manju) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಕಾಂತಾರ: ಚಾಪ್ಟರ್ 1’ ಕ್ಲೈಮ್ಯಾಕ್ಸ್​​ ಬಗ್ಗೆ ‘ಕುಲಶೇಖರ’ನಿಗೆ ಅಸಮಾಧಾನ? – Kannada News | Did Gulshan Devaiah upset that his character in Kantara Chapter 1 died early

ರಿಷಬ್ ಶೆಟ್ಟಿ (Rishab Shetty) ನಟಿಸಿ ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಭಾರಿ ದೊಡ್ಡ ಹಿಟ್ ಆಗಿದೆ. ಭಾಷೆ, ಗಡಿಯ ಹಂಗಿಲ್ಲದೇ ದೇಶದಾದ್ಯಂತ ಬಹುತೇಕ ಬಿಡುಗಡೆ ಆದ ಎಲ್ಲ ರಾಜ್ಯಗಳಲ್ಲಿಯೂ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಹಿಟ್ ಎನಿಸಿಕೊಂಡಿದೆ. 2022ರ ‘ಕಾಂತಾರ’ಕ್ಕೆ ಹೋಲಿಸಿದರೆ ಭಾರಿ ಬಜೆಟ್, ದೊಡ್ಡ ತಂಡದ ನೆರವಿನೊಂದಿಗೆ ಹಲವು ಜನಪ್ರಿಯ ನಟರನ್ನು ಒಳಗಾಗಿಸಿಕೊಂಡು ಸಿನಿಮಾವನ್ನು ನಿರ್ದೇಶಕ ರಿಷಬ್ ಶೆಟ್ಟಿ ಕಟ್ಟಿದ್ದರು. ಸಿನಿಮಾ ನೋಡಿದ ಬಹುತೇಕರು ಉಘೆ ಎಂದಿದ್ದಾರೆ. ಆದರೆ ಸಿನಿಮಾದ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ ಕಲಾವಿದರೊಬ್ಬರಿಗೆ ‘ಕಾಂತಾರ: ಚಾಪ್ಟರ್ 1’ ಕ್ಲೈಮ್ಯಾಕ್ಸ್ ಬಗ್ಗೆ ಸಣ್ಣ ಅಸಮಾಧಾನ ಇದೆಯೇ ಎಂಬ ಅನುಮಾನ ಇದೀಗ ಮೂಡಿದೆ.

ಸಿನಿಮಾಲ್ಲಿ ರಿಷಬ್ ಶೆಟ್ಟಿ ಪಾತ್ರ ಬಹಳ ಪ್ರಧಾನವಾದುದಾಗಿತ್ತು. ಸಿನಿಮಾದ ವಿಲನ್ ಪಾತ್ರದಲ್ಲಿ ರುಕ್ಮಿಣಿ ವಸಂತ್ ಅದ್ಭುತವಾಗಿ ನಟಿಸಿದ್ದರು. ಆದರೆ ಅವರು ವಿಲನ್ ಆಗಿ ಬದಲಾಗುವುದು ಸಿನಿಮಾದ ಕ್ಲೈಮ್ಯಾಕ್ಸ್​​ನಲ್ಲಿ ಮಾತ್ರ. ಆದರೆ ಸಿನಿಮಾದ ಆರಂಭದಿಂದಲೂ ನಾಯಕನಿಗೆ ಎದುರಾಗಿ ನಿಂತಿರುವ ಪಾತ್ರವೆಂದರೆ ಅದು ಕುಲಶೇಖರನದ್ದು. ಬೇಜವಾಬ್ದಾರಿ, ಹಾಸ್ಯ ಪ್ರವೃತ್ತಿಯ, ಮುಂದಾಲೋಚನೆ ಇಲ್ಲದ, ದ್ವೇಷ ತುಂಬಿಕೊಂಡಿರುವ, ಹಿರಿಯರು, ಸಂಸ್ಕೃತಿಯ ಬಗ್ಗೆ ಗೌರವ ಇಲ್ಲದ ರಾಜ ಪುತ್ರನ ಪಾತ್ರ ಕುಲಶೇಖರನದ್ದು, ಈ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ ಕನ್ನಡದವರೇ ಆದ ಗುಲ್ಷನ್ ದೇವಯ್ಯ.

ಕನ್ನಡಿಗರೇ ಆದರೂ ಬಾಲಿವುಡ್​​ನಲ್ಲಿ ಹೆಚ್ಚು ಜನಪ್ರಿಯರಾಗಿರುವ ಗುಲ್ಷನ್ ದೇವಯ್ಯ ಅವರಿಗೆ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕ್ಲೈಮ್ಯಾಕ್ಸ್ ಬಗ್ಗೆ ಅಸಮಾಧಾನ ಇದೇಯೇ ಎಂಬ ಅನುಮಾನ ಶುರುವಾಗಿದೆ. ಅದಕ್ಕೆ ಕಾರಣವಾಗಿರುವುದು ಅವರು ಇತ್ತೀಚೆಗೆ ನೀಡಿರುವ ಒಂದು ಸಂದರ್ಶನ. ಆ ಸಂದರ್ಶನದಲ್ಲಿ ಗುಲ್ಷನ್ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ:ರಿಷಬ್ ಶೆಟ್ಟಿ-ರಾಜ್ ಬಿ ಶೆಟ್ಟಿ ನಡುವೆ ಮೂಡಿದೆಯಾ ಮನಸ್ತಾಪ?

ಅರ್ಧ ಸಿನಿಮಾ ಆಗುತ್ತಲೇ ನಿಮ್ಮ ಕುಲಶೇಖರ ಪಾತ್ರ ಸತ್ತು ಹೋಗುತ್ತದೆ ಇದು ನಿಮಗೆ ನಟನಾಗಿ ಬೇಸರ ಮೂಡಿಸಿತೆ? ಎಂಬ ಸಂದರ್ಶಕನ ಪ್ರಶ್ನೆಗೆ ಉತ್ತರಿಸಿರುವ ಗುಲ್ಷನ್ ದೇವಯ್ಯ, ‘ನನ್ನ ಭಾಗದ ಶೂಟಿಂಗ್ ಪ್ರಾರಂಭವಾದ ಬಹಳ ದಿನಗಳ ವರೆಗೆ ನನಗೆ ಕ್ಲೈಮ್ಯಾಕ್ಸ್ ಏನೆಂಬುದು ಗೊತ್ತೇ ಇರಲಿಲ್ಲ. ಆದರೆ ನನ್ನ ಪಾತ್ರ ಕ್ಲೈಮ್ಯಾಕ್ಸ್​​ಗಿಂತಲೂ ಬೇಗನೆ ಸಾಯುತ್ತದೆ ಎಂದು ಗೊತ್ತಾದಾಗ ನನಗಿದ್ದ ಊಹೆ ಏನೆಂದರೆ ನನ್ನ ಪಾತ್ರವನ್ನೂ ದೆವ್ವದ ರೂಪದಲ್ಲಿ ಮತ್ತೆ ತರುತ್ತಾರೇನೋ ಎಂದುಕೊಂಡೆ. ಆದರೆ ಹಾಗಾಗಲಿಲ್ಲ, ಒಮ್ಮೆ ನಾನು ರಿಷಬ್ ಅನ್ನು ಕ್ಲೈಮ್ಯಾಕ್ಸ್ ಬಗ್ಗೆ ಕೇಳಿದೆ. ರಿಷಬ್ ಸಹ ಪೂರ್ಣ ಕತೆ ಹೇಳಿದರು. ಆಗ ನನಗೆ ಗೊತ್ತಾಯ್ತು, ಓಕೆ ಹಾಗಿದ್ದರೆ ನಾನು ಪೂರ್ಣ ಸತ್ತಂತೆ ಎಂದುಕೊಂಡೆ’ ಎಂದಿದ್ದಾರೆ.

ಆದರೆ ಗುಲ್ಷನ್ ದೇವಯ್ಯ ಅವರು ಇದನ್ನೆಲ್ಲ ಗಂಭೀರವಾಗಿ ಹೇಳಿಲ್ಲ, ಬದಲಿಗೆ ತಾವೂ ಸಹ ಕ್ಲೈಮ್ಯಾಕ್ಸ್ ನಲ್ಲಿ ಇದ್ದಿದ್ದರೆ ಒಳ್ಳೆಯದಿತ್ತು ಎಂಬ ಆಸೆಯಲ್ಲಿ ಹೇಳಿದ್ದಾರಷ್ಟೆ. ಒಬ್ಬ ನಟನಿಗೆ ಇರಬಹುದಾದ ಸಹಜ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಗುಲ್ಷನ್ ದೇವಯ್ಯ ಅವರು ತಮ್ಮ ಹಲವು ಸಂದರ್ಶನಗಳಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಕನ್ನಡ ಚಿತ್ರರಂಗದಿಂದ ಅವಕಾಶ ಸಿಕ್ಕರೆ ಬೆಂಗಳೂರಿನಲ್ಲೇ ನೆಲೆಸುವೆ ಎಂದು ಸಹ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಮತ್ತೆ ಗರ್ಜಿಸಿದ ಜೆಸಿಬಿ: ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ

ಬೆಂಗಳೂರು, (ಜನವರಿ 08): ಬೆಂಗಳೂರಿನಲ್ಲಿ ಅಕ್ರಮ ಮನೆಗಳ ತೆರವು ಕಾರ್ಯಾಚರಣೆ ಮುಂದುವರೆದಿದೆ. ಇತ್ತೀಚೆಗಷ್ಟೇ ಯಲಹಂಕದ ಕೋಗಿಲು ಬಳಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮನೆಗಳನ್ನು ತೆರವು ಮಾಡಲಾಗಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಸರ್ಕಾರ ಅರ್ಹರಿಗೆ ಪರ್ಯಾಯ ಮನೆ ನೀಡಲು ಮುಂದಾಗಿದೆ. ಇದೀಗ ನಾಗವಾರ ಬಳಿಯ ಥಣಿಸಂದ್ರದ ಅಶ್ವತ್ಥ್​​ ನಗರದಲ್ಲಿ ಅಕ್ರಮ ಮನೆಗಳ ತೆರವು ಕಾರ್ಯ ನಡೆದಿದೆ. ಸುಮಾರು 60 ಮನೆಗಳನ್ನು ತೆರವು ಮಾಡಿರುವ ಬಗ್ಗೆ ಬಿಡಿಎ ಮಾಹಿತಿ ನೀಡಿದೆ. ಆದ್ರೆ, ಯಾವುದೇ ಮಾಹಿತಿ ಅಥವಾ ನೋಟಿಸ್ ನೀಡದೆ ಮನೆಗಳ ತೆರವು ಮಾಡಲಾಗುತ್ತಿದೆ ಎಂದು ಬಿಡಿಎ ಅಧಿಕಾರಿಗಳ ವಿರುದ್ಧ ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಶೇಂಗಾ ತಿಂದ್ರೆ ತೂಕ ಕಡಿಮೆಯಾಗುತ್ತಾ ಅಥವಾ ಹೆಚ್ಚಾಗುತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ – Kannada News | How Peanuts Affect Your Weight

ಚಳಿಗಾಲದಲ್ಲಿ ಕಡಲೆಕಾಯಿ ಅಥವಾ ಶೇಂಗಾ (Peanuts) ಸೇವನೆಯನ್ನು ಯಥೇಚ್ಛವಾಗಿ ಮಾಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನಲಾಗುತ್ತದೆ. ಈ ವಾತಾವರಣಕ್ಕೆ ಮಾತ್ರವಲ್ಲ, ಎಲ್ಲಾ ಕಾಲಕ್ಕೂ ಇದು ಒಳ್ಳೆಯದು. ಆದರೆ ಕಡಲೆಕಾಯಿ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎಂಬುದು ಕೆಲವರ ನಂಬಿಕೆ, ಇನ್ನು ಕೆಲವರು ಇದು ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎನ್ನುತ್ತಾರೆ. ಇವೆರಡರಲ್ಲಿ ಯಾವುದು ಸತ್ಯ! ಕಡಲೆಕಾಯಿ ಅಥವಾ ಶೇಂಗಾದಲ್ಲಿರುವ ಕ್ಯಾಲೊರಿಗಳು, ತೂಕ (Weight) ಹೆಚ್ಚಾಗುವುದಕ್ಕೆ ಸಹಾಯ ಮಾಡುತ್ತದೆಯೋ ಅಥವಾ ಕಡಿಮೆ ಮಾಡುತ್ತದೆಯೋ, ಜೊತೆಗೆ ಯಾರು ಇದನ್ನು ಸೇವನೆ ಮಾಡಬಾರದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಇಲ್ಲಿದೆ.

ಶೇಂಗಾ ಸೇವನೆಯಿಂದ ತೂಕ ಕಡಿಮೆಯಾಗುತ್ತಾ ಅಥವಾ ಹೆಚ್ಚುತ್ತಾ?

ದೆಹಲಿಯ ಜಿಟಿಬಿ ಆಸ್ಪತ್ರೆಯ ಮಾಜಿ ಆಹಾರ ತಜ್ಞೆ ಡಾ. ಅನಾಮಿಕಾ ಗೌರ್ ತಿಳಿಸಿರುವ ಮಾಹಿತಿ ಅನುಸಾರ, ಶೇಂಗಾದಲ್ಲಿ ಪ್ರೋಟೀನ್ ಅಧಿಕವಾಗಿದ್ದು ಸಂಶೋಧನೆಗಳ ಪ್ರಕಾರ, ಪ್ರೋಟೀನ್ ಹೆಚ್ಚಿರುವ ಆಹಾರ ಸೇವನೆಯಿಂದ ತೂಕ ಹೆಚ್ಚಾಗುವುದಿಲ್ಲ. ಅದರಲ್ಲಿಯೂ ಕಡಲೆಕಾಯಿಯಲ್ಲಿರುವ ಸುಮಾರು 25% ಕ್ಯಾಲೊರಿಗಳು ಪ್ರೋಟೀನ್‌ನಿಂದ ಬರುತ್ತವೆ. ಸಸ್ಯ ಆಧಾರಿತ ಪ್ರೋಟೀನ್ ದೇಹವನ್ನು ಪ್ರವೇಶಿಸಿದಾಗ, ಅದು ಹೊಟ್ಟೆ ತುಂಬಿದ ಭಾವನೆಯನ್ನು ಉಂಟುಮಾಡುತ್ತದೆ. ಹೀಗಾಗಿ ಹಸಿವು ಕಡಿಮೆಯಾಗಿ, ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಇದು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಶೇಂಗಾದಲ್ಲಿ ಫೈಬರ್ ಅಂಶವಿದ್ದು ಇದು ಹೊಟ್ಟೆಗೂ ಒಳ್ಳೆಯದು. ಆದರೆ ತುಪ್ಪ ಅಥವಾ ಎಣ್ಣೆಯಲ್ಲಿ ಹುರಿದ ಕಡಲೆಕಾಯಿಯನ್ನು ತಿಂದರೆ ತೂಕ ಹೆಚ್ಚಾಗುತ್ತದೆ.

ಬೆಲ್ಲದೊಂದಿಗೆ ಶೇಂಗಾ ಸೇವನೆ ಮಾಡಿ:

ಸಾಮಾನ್ಯವಾಗಿ ಬೆಲ್ಲದೊಂದಿಗೆ ಕಡಲೆಕಾಯಿ ಅಥವಾ ಶೇಂಗಾ ತಿನ್ನುವ ಅಭ್ಯಾಸ ದೇಹಕ್ಕೆ ಸಾಕಷ್ಟು ಪ್ರಯೋಜನಕಾರಿ. ಬೆಲ್ಲದಲ್ಲಿ ಉತ್ಕರ್ಷಣ ನಿರೋಧಕಗಳಿವೆ ಮತ್ತು ಶೇಂಗಾದಲ್ಲಿ ಪ್ರೋಟೀನ್ ಇರುತ್ತದೆ. ಹಾಗಾಗಿ ಈ ಸಂಯೋಜನೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಕೆಲವರು ಮಾತ್ರ ಶೇಂಗಾ ತಿನ್ನುವುದನ್ನು ಕಡಿಮೆ ಮಾಡಬೇಕು. ಅಲ್ಲದೆ, ದಿನಕ್ಕೆ 25 ಗ್ರಾಂ ಗಿಂತ ಹೆಚ್ಚು ತಿನ್ನಬಾರದು.

ಇದನ್ನೂ ಓದಿ: ಸುಲಭವಾಗಿ ತೂಕ ಇಳಿಸಿಕೊಳ್ಳಲು ಬಯಸಿದರೆ ಪ್ರತಿದಿನ ಬೆಳಗ್ಗೆ ಈ ನಾಲ್ಕು ಕೆಲಸಗಳನ್ನು ಮಾಡಿ

ಶೇಂಗಾ ಯಾರಿಗೆ ಒಳ್ಳೆಯದಲ್ಲ:

  • ಮಲಬದ್ಧತೆ ಸಮಸ್ಯೆ ಇರುವವರಿಗೆ.
  • ಕಡಲೆಕಾಯಿಂದ ಅಲರ್ಜಿ ಇರುವವರಿಗೆ.
  • ತುಂಬಾ ಕಡಿಮೆ ತೂಕ ಇರುವವರಿಗೆ.
  • ಅಧಿಕ ರಕ್ತದೊತ್ತಡ ಮತ್ತು ಮೂತ್ರಪಿಂಡ ಕಾಯಿಲೆ ಇರುವ ರೋಗಿಗಳಿಗೆ ಒಳ್ಳೆಯದಲ್ಲ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿದ್ದರಾಮಯ್ಯ ವಿರುದ್ಧ ಪ್ರಲ್ಹಾದ್​​ ಜೋಶಿ ವಾಗ್ದಾಳಿ – Kannada News | Pralhad Joshi Condemns Hubballi Incident, Sparks of Siddaramaiah and Police

ಬೆಂಗಳೂರು, ಜನವರಿ 08: ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆಯನ್ನ ಅರೆನಗ್ನಗೊಳಿಸಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ ಪೊಲೀಸರ ನಡೆ ಮತ್ತು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರೆಸ್ಟ್ ಮಾಡಲು ಹೋದಾಗ ಬಿಜೆಪಿ ಕಾರ್ಯಕರ್ತೆಯೇ ಬಟ್ಟೆ ಬಿಚ್ಚಿಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿಕೆ ಕೊಡುತ್ತಾರೆ, ನಾಚಿಕೆ ಆಗಲ್ವಾ ನಿಮಗೆ ಎಂದಿದ್ದಾರೆ. ಇನ್ನು ಅವರು ಬಟ್ಟೆ ಬಿಚ್ಚಿವಾಗ ಪೊಲೀಸರು ಶೂಟಿಂಗ್ ಮಾಡುತ್ತಾ ನಿಂತಿದ್ದರಾ ಎಂದು ಪ್ರಶ್ನಿಸಿದ್ದಾರೆ. ಪ್ರಕರಣ ನ್ಯಾಯೋಚಿತ ತನಿಖೆ ಆಗದಿದ್ದರೆ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Source link

ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಮಲ್ಟಿಪ್ಲೆಕ್ಸ್ – Kannada News | Allu Arjun owned Allu Cinemas to Open New Branch In Kokapet Here is the theater Look

ಅಲ್ಲು ಅರ್ಜುನ್ ಅವರು ‘ಅಲ್ಲು ಸಿನಿಮಾಸ್’ ಹೊಂದಿದ್ದಾರೆ. ಇದರ ಹೊಸ ಶಾಖೆ ಹೈದರಾಬಾದ್​​ನ ಕೋಕಾಪೇಟೆಯಲ್ಲಿ ಆರಂಭ ಆಗುತ್ತಿದೆ. ಸಂಕ್ರಾಂತಿ ಸಂದರ್ಭದಲ್ಲಿ ಇದು ಉದ್ಘಾಟನೆ ಆಗುವ ನಿರೀಕ್ಷೆ ಇದೆ. ಈ ಥಿಯೇಟರ್ ಝಲಕ್​​ನ ಅವರು ಹಂಚಿಕೊಂಡಿದ್ದಾರೆ. ಈ ಥಿಯೇಟರ್ ಹೇಗಿದೆ ಎಂಬುದರ ವಿಡಿಯೋನ ಮೇಲೆ ನೋಡಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಳಸಿದ ಟೀ ಪುಡಿಯನ್ನು ಎಸೆಯುವ ಬದಲು ಈ ರೀತಿ ಉಪಯೋಗಿಸಿ – Kannada News | You can reuse Leftover tea leaves in this way

ಹೆಚ್ಚಿನ ಮನೆಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಟೀ ಮಾಡೇ ಮಾಡ್ತಾರೆ. ಮತ್ತು ಚಹಾ ಮಾಡಿದ ಬಳಿಕ ಬಳಸಿದ ಚಹಾ ಪುಡಿಯನ್ನು (tea leaves) ಕಸದ ಬುಟ್ಟಿಗೆ ಎಸೆಯುವ ತಪ್ಪನ್ನು ಸಹ ಮಾಡುತ್ತಾರೆ. ಹೀಗೆ ಎಸೆಯುವ ಬದಲು ಬಳಸಿದ ಚಹಾ ಪುಡಿಯನ್ನು ಹಲವು ರೀತಿಯಲ್ಲಿ ಮರು ಬಳಕೆ ಮಾಡಬಹುದು. ಚಹಾ ಎಲೆಗಳು ಲೆಕ್ಕವಿಲ್ಲದಷ್ಟು ಪ್ರಯೋಜನಗಳನ್ನು ಹೊಂದಿದ್ದು, ಬಳಸಿದ ಟೀ  ಪುಡಿಯನ್ನು ಹೇಗೆಲ್ಲಾ ಮರು ಬಳಕೆ ಮಾಡಬಹುದು, ಅವುಗಳಿಂದ ಏನೆಲ್ಲಾ ಉಪಯೋಗಗಳಿವೆ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ಬಳಸಿದ ಚಹಾ ಪುಡಿಯನ್ನು ಈ ರೀತಿ ಮರುಬಳಕೆ ಮಾಡಿ:

ಗಿಡಗಳಿಗೆ ಗೊಬ್ಬರ: ಬಳಸಿದ ಚಹಾ ಪುಡಿ ಸಸ್ಯಗಳಿಗೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಅವು ಮಣ್ಣಿಗೆ ಸಾವಯವ ಪದಾರ್ಥ ಮತ್ತು ಸ್ವಲ್ಪ ಆಮ್ಲೀಯ ಅಂಶವನ್ನು ಒದಗಿಸುತ್ತವೆ, ಇದು ಹೂಬಿಡುವ ಸಸ್ಯಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ ಬಳಸಿದ ಚಹಾ ಪುಡಿಯನ್ನು ಯಾವುದೇ ಹಾಲು ಅಥವಾ ಸಕ್ಕರೆ ಕಣಗಳು ಉಳಿಯದಂತೆ ನೀರಿನಿಂದ ತೊಳೆದು ಒಣಗಿಸಿ ನೇರವಾಗಿ ಮಣ್ಣಿನಲ್ಲಿ ಮಿಶ್ರಣ ಮಾಡಿ ಅಥವಾ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಗಿಡಗಳ ಬುಡಕ್ಕೆ ಹಾಕಿ.

ಪಾತ್ರೆಗಳನ್ನು ಸ್ವಚ್ಛಗೊಳಿಸಬಹುದು: ನಾನ್-ಸ್ಟಿಕ್ ಪಾತ್ರೆಗಳು ಸರಿಯಾಗಿ ಕ್ಲೀನ್‌ ಆಗದಿದ್ದರೆ, ಬಳಸಿದ ಚಹಾ ಪುಡಿಯನ್ನು ನೀರಿನಲ್ಲಿ ಕುದಿಸಿ ಅದಕ್ಕೆ ಸ್ವಲ್ಪ ವಿನೆಗರ್‌ ಸೇರಿಸಿ ಈ ದ್ರಾವಣವನ್ನು ನಾನ್‌ಸ್ಟಿಕ್‌ ಪಾತ್ರೆಗೆ ಸೇರಿಸಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ನಂತರ ಆ ಪಾತ್ರೆಯನ್ನು ಡಿಶ್‌ವಾಶ್‌ ಲಿಕ್ವಿಡ್‌ನಿಂದ ಸ್ವಚ್ಛಗೊಳಿಸಿ. ಇದು ಯಾವುದೇ ಹಾನಿಯಾಗದಂತೆ ನಾನ್‌ಸ್ಟಿಕ್‌ ಪಾತ್ರೆಗಳನ್ನು ಸ್ವಚ್ಛಗೊಳಿಸುತ್ತವೆ ಮತ್ತು ವಾಸನೆಯನ್ನು ತೆಗೆದುಹಾಕುತ್ತದೆ.

ಫ್ರಿಡ್ಜ್‌ ವಾಸನೆಯನ್ನು ತೆಗೆದುಹಾಕುತ್ತದೆ: ರೆಫ್ರಿಜರೇಟರ್‌ನಿಂದ ಬರುವ ಕೆಟ್ಟ ವಾಸನೆಯನ್ನು ತೆಗೆದುಹಾಕಲು ಚಹಾ ಪುಡಿ ಸಹಕಾರಿ. ಇದಕ್ಕಾಗಿ ನೀವು ಬಳಸಿದ ಚಹಾ ಪುಡಿಯನ್ನು ಚೆನ್ನಾಗಿ ತೊಳೆದು ಹತ್ತಿ ಬಟ್ಟೆಯಲ್ಲಿ ಸುತ್ತಿ ಫ್ರಿಡ್ಜ್‌ನ ಒಂದು ಮೂಲೆಯಲ್ಲಿ ಇಟ್ಟು ಬಿಡಿ. ಇದು ಫ್ರಿಡ್ಜ್‌ನಿಂದ ಬರುವ ದುರ್ವಾಸನೆಯನ್ನು ಪರಿಣಾಮಕಾರಿಯಾಗಿ ತೊಡೆದು ಹಾಕುತ್ತದೆ.

ಇದನ್ನೂ ಓದಿ: ಎಲೆಕೋಸನ್ನು ಕ್ಲೀನ್‌ ಮಾಡುವ ಸರಿಯಾದ ವಿಧಾನ ಯಾವುದು? ನೀವು ತಿಳಿಯಲೇಬೇಕಾದ ಮಾಹಿತಿಯಿದು

ಚರ್ಮಕ್ಕೆ ಪ್ರಯೋಜನಕಾರಿ: ಬಳಸಿದ ಚಹಾ ಪುಡಿ ನಿಮ್ಮ ಚರ್ಮಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ. ನೀವು ಅವುಗಳನ್ನು ಬಳಸಿ ಎಕ್ಸ್‌ಫೋಲಿಯೇಟಿಂಗ್ ಸ್ಕ್ರಬ್ ತಯಾರಿಸಬಹುದು. ಜೊತೆಗೆ  ಬಳಸಿದ ಚಹಾ ಎಲೆಗಳನ್ನು ಪುಡಿಮಾಡಿ ಜೇನುತುಪ್ಪ, ಮೊಸರು ಅಥವಾ ನಿಂಬೆ ಸೇರಿಸಿ ಫೇಸ್‌ ಪ್ಯಾಕ್‌ ಕೂಡ ತಯಾರಿಸಬಹುದು.  ಇದಲ್ಲದೆ ಬಳಸಿದ ಚಹಾ ಪುಡಿಯನ್ನು ಬಿಸಿ ನೀರಿನಲ್ಲಿ ನೆನೆಸಿ ಅದರಲ್ಲಿ ನಿಮ್ಮ ಪಾದಗಳನ್ನು ಇಡುವುದರಿಂದ ಪಾದದ ಬಿರುಕುಗಳು ಕಡಿಮೆಯಾಗುತ್ತವೆ, ಸ್ನಾಯುಗಳು ಸಡಿಲಗೊಳ್ಳುತ್ತವೆ ಮತ್ತು ನೋವು ಕಡಿಮೆಯಾಗುತ್ತದೆ.

ನೈಸರ್ಗಿಕ ಕಂಡೀಷನರ್:‌ ಚಹಾ ಎಲೆಗಳು ಕೂದಲಿಗೆ ಪ್ರಯೋಜನಕಾರಿ. ಚಹಾ ಎಲೆಗಳು ಹೊಳಪನ್ನು ಹೆಚ್ಚಿಸುವುದಲ್ಲದೆ ಕಂಡಿಷನರ್ ಆಗಿಯೂ ಕಾರ್ಯನಿರ್ವಹಿಸುತ್ತವೆ. ಚಹಾ ತಯಾರಿಸಿದ ನಂತರ, ಉಳಿದ ಚಹಾ ಪುಡಿಯನ್ನು ಎಸೆಯುವ ಬದಲು ಅದನ್ನು ಶುದ್ಧ ನೀರಿನಿಂದ ತೊಳೆಯಿರಿ ಮತ್ತು ಜರಡಿ ಮೂಲಕ ಸೋಸಿ. ನಂತರ ಒಂದು ಪಾತ್ರೆಯಲ್ಲಿ ನೀರನ್ನು ಸೇರಿಸಿ ಅದಕ್ಕೆ ಚಹಾಪುಡಿ ಹಾಕಿ ಮತ್ತೆ ಕುದಿಸಿ. ಈ ನೀರಿನಿಂದ ನಿಮ್ಮ ಕೂದಲನ್ನು ನಿಯಮಿತವಾಗಿ ತೊಳೆಯಿರಿ. ಇದು ನಿಮ್ಮ ಕೂದಲಿಗೆ ಹೊಳಪನ್ನು ನೀಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: ಬೆಂಗಳೂರು ಜೀವನ ದುಬಾರಿಯಲ್ಲ; ತಿಂಗಳ ಖರ್ಚು ವೆಚ್ಚ ಹಂಚಿಕೊಂಡ ಯುವಕ – Kannada News | Young man says life in Bangalore is not that expensive

ಬೆಂಗಳೂರು, ಜನವರಿ 08: ಈಗೇನಿದ್ದರೂ ಕೈಯಲ್ಲಿ ದುಡ್ಡಿದರೆ (money) ಮಾತ್ರ ಜೀವನ ನಡೆಸಲು ಸಾಧ್ಯ. ಬೆಂಗಳೂರು (Bengaluru) ಅಂದ್ರೆ ಎಷ್ಟು ದುಡಿದ್ರು ಸಾಕಲ್ಲ ಅನ್ನೋದು ಅನೇಕರ ಅಭಿಪ್ರಾಯ. ಆದರೆ, ಬೆಂಗಳೂರಿನಲ್ಲಿ ವಾಸಿಸುವ 24 ವರ್ಷದ ಕೇರಳಿಗನೊಬ್ಬ ತನ್ನ ಮಾಸಿಕ ಖರ್ಚು ವೆಚ್ಚದ ಬಗ್ಗೆ ಹಂಚಿಕೊಂಡಿದ್ದಾನೆ. ತಿಂಗಳಿಗೆ 27,300 ರೂ ಖರ್ಚು ಆಗುತ್ತಿದ್ದು, ಈ ನಗರವು ತುಂಬಾ ದುಬಾರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ. ಈ ರೆಡ್ಡಿಟ್ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನಾನಾ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿವೆ.

ಪರ್ಸನಲ್ ಫೈನಾನ್ಸ್ ಇಂಡಿಯಾ (Personalfinanceindia) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಯುವಕನೊಬ್ಬ ತಿಂಗಳ ಖರ್ಚು ವೆಚ್ಚಗಳ ಬಗ್ಗೆ ವಿವರಿಸಿರುವುದನ್ನು ಕಾಣಬಹುದು. ಒಂಟಿಯಾಗಿ 1 ವರ್ಷ ಇಲ್ಲಿ ವಾಸಿಸಿದ ನಂತರ ನನ್ನ ಖರ್ಚುಗಳು ಇಲ್ಲಿವೆ” ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.

ವೈರಲ್‌ ಪೋಸ್ಟ್‌ ಇಲ್ಲಿದೆ

1 Year of living alone and here are my expenses
byu/adarshhehe inpersonalfinanceindia

ನಾನು ರೂಮ್‌ಮೇಟ್‌ನೊಂದಿಗೆ 1BHK ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದೇನೆ. ಒಟ್ಟು ಬಾಡಿಗೆ 13,000 ರೂ, ಆದರೆ ರೂಮ್‌ಮೇಟ್‌ ಇರುವುದರಿಂದ ನಾನು 7000 ರೂ ನೀಡಬೇಕಾಗುತ್ತದೆ. ಹೀಗಾಗಿ ನನ್ನ ಒಟ್ಟು ಮಾಸಿಕ ಬಾಡಿಗೆ 7,000 ರೂ, ಆಹಾರ ವೆಚ್ಚ 10,800 ರೂ, ಪ್ರಯಾಣದ ವೆಚ್ಚ 1,000 ರೂ, ಊರ ಪ್ರಯಾಣದ ವೆಚ್ಚ 4,000 ರೂ, ವೈ-ಫೈ 500 ರೂ, ನೀರು (ಬಿಲ್ + ಕುಡಿಯುವ ಶುಲ್ಕ) 450 ರೂ, ಜಿಮ್ 570 ರೂ ಹಾಗೂ ಇತರೆ ಖರ್ಚು 3,000 ರೂ  ತಿಂಗಳ ಒಟ್ಟು ಖರ್ಚು 27,300 ರೂ ಆಗುತ್ತದೆ ಎಂದು ವಿವರಿಸಿದ್ದಾನೆ.

ಕೇವಲ 3 ಕಿಲೋಮೀಟರ್ ದೂರದಲ್ಲಿ ವಾಸಿಸುವ ನನ್ನ ಕೆಲ ಸ್ನೇಹಿತರು ತಿಂಗಳಿಗೆ 45,000 ರೂ ಖರ್ಚು ಮಾಡುತ್ತಾರೆ. ನನ್ನ ಸ್ನೇಹಿತರ 1BHK ಮನೆ ಬಾಡಿಗೆ 26,000 ರೂ ಆಗಿದೆ. ನಿಮ್ಮ ಜೀವನಶೈಲಿ ನಿಮ್ಮ ನಿಯಂತ್ರಣದಲ್ಲಿದ್ದರೆ ಬೆಂಗಳೂರು ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅಷ್ಟು ದುಬಾರಿಯಲ್ಲ ಎಂದು ಹೇಳಿದ್ದಾನೆ.

ಇದನ್ನೂ ಓದಿ:2025ರಲ್ಲಿ 47 ಲಕ್ಷ ರೂ. ಖರ್ಚು ಮಾಡಿದ ಬೆಂಗಳೂರಿನ ದಂಪತಿ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರ ನೀವು ತುಂಬಾ ಬುದ್ಧಿವಂತರು ಮತ್ತು ಬಜೆಟ್‌ನಲ್ಲಿ ಮನೆಯನ್ನು ಹೇಗೆ ನಡೆಸಬೇಕೆಂದು ತಿಳಿದಿದ್ದೀರಿ.. ನಿಮ್ಮನ್ನು ಅತ್ಯುತ್ತಮ ರೀತಿಯಲ್ಲಿ ಬೆಳೆಸಿದ ನಿಮ್ಮ ಪೋಷಕರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ. ಇನ್ನೊಬ್ಬರು ಖರ್ಚು ವೆಚ್ಚಗಳು ನಿಯಂತ್ರಣದಲ್ಲಿದ್ದರೆ ಬೆಂಗಳೂರು ಜೀವನ ಆರಾಮದಾಯಕ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಕ್ಕದ ಮನೆಯವರ ಮೇಲೆ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸುವಂತಿಲ್ಲ: ಕರ್ನಾಟಕ ಹೈಕೋರ್ಟ್​​ – Kannada News | IPC 498A Not Applicable to Neighbours: Karnataka High Court

ಬೆಂಗಳೂರು, ಜನವರಿ 08: ವರದಕ್ಷಿಣೆ ಕಿರುಕುಳ ಪ್ರಕರಣದ ವಿಚಾರವಾಗಿ ಕರ್ನಾಟಕ ಹೈಕೋರ್ಟ್​​ ಮಹತ್ವದ ಆದೇಶ ನೀಡಿದೆ. ಪಕ್ಕದ ಮನೆಯವರ ಮೇಲೆ 498ಎ ಅಡಿ ಕೇಸ್ ದಾಖಲಿಸುವಂತಿಲ್ಲ ಎಂದಿರುವ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಪೀಠ, ತಮ್ಮ ಮೇಲೆ ದಾಖಲಾಗಿರುವ ಕೇಸ್​​ ರದ್ದುಪಡಿಸುವಂತೆ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯಮಾಡಿ ದೂರು ರದ್ದುಗೊಳಿಸಿದೆ. ಮುನಿರತ್ನಮ್ಮ ಎಂಬಾಕೆ ಪತಿ, ಅತ್ತೆ, ಮಾವ, ನಾದಿನಿ ಹಾಗೂ ಪಕ್ಕದ ಮನೆ ಮಹಿಳೆ ಮೇಲೆಯೂ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆಂದು ದೂರು ದಾಖಲಿಸಿದ್ದರು. ಆದರೆ 498ಎ ಅಡಿ ಸಂಬಂಧಿಗಳ ವಿರುದ್ಧ ದೂರು ದಾಖಲಿಸಬಹುದೇ ಹೊರತು, ಪಕ್ಕದ ಮನೆಯವರ ವಿರುದ್ಧ ದೂರಿಗೆ ಅವಕಾಶವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ವೈವಾಹಿಕ ವಿವಾದದಲ್ಲಿ ಪತಿ, ಪತ್ನಿ ಅಥವಾ ಇತರ ಕುಟುಂಬ ಸದಸ್ಯರ ನಡುವಿನ ವಿಷಯದಲ್ಲಿ ಪರಿಚಿತವಲ್ಲದ ವ್ಯಕ್ತಿ ಅಥವಾ ನೆರೆಹೊರೆಯವರನ್ನು IPC ಸೆಕ್ಷನ್ 498A ಅಡಿಯಲ್ಲಿ ಪ್ರಕರಣಕ್ಕೆ ಒಳಪಡಿಸಲು ಸಾಧ್ಯವಿಲ್ಲ ಎಂದು ಕೋರ್ಟ್​​ ಹೇಳಿದೆ. ಜೊತೆಗೆ ಆಶಾ ಎಂಬುವರ ವಿರುದ್ಧದ ದೂರು ರದ್ದುಪಡಿಸಿದೆ. ಆಶಾ ಅವರ ವಿರುದ್ಧ IPC ಸೆಕ್ಷನ್‌ 498A, 504, 506, 323 ಹಾಗೂ 34 ಅಡಿಯಲ್ಲಿ ಆರೋಪಿಯಾಗಿಸಲಾಗಿತ್ತು.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್​​ನಲ್ಲಿ ಉದ್ಯೋಗವಕಾಶ; ಸಂಶೋಧನಾ ಸಹಾಯಕ ಹುದ್ದೆಗೆ ನೇಮಕಾತಿ

ಹೈಕೋರ್ಟ್​ನಲ್ಲಿ ಕೆಲಸ ಕೊಡಿಸೋದಾಗಿ ವಂಚನೆ

ಹೈಕೋರ್ಟ್​ನಲ್ಲಿ ಕಾಯಂ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ಐವರಿಂದ 54 ಲಕ್ಷ ಹಣ ಪಡೆದು ವಂಚಿಸಿರುವ ಆರೋಪ ಸಂಬಂಧ 7 ಮಂದಿ ವಿರುದ್ಧ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. 2023ರಲ್ಲಿ ಹೈಕೋರ್ಟ್​​ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಈ ವೇಳೆ ಕಾಯಂ ಕೆಲಸ ಕೊಡಿಸೋದಾಗಿ ಹೇಳಿ ಸುಮಿತ್, ಶಿವಕುಮಾರ್, ಮಹಿಮಾ, ಹರ್ಷ, ಹರ್ಷಿತಾ ಎಂಬವರಿಗೆ ಮೋಸ ಮಾಡಲಾಗಿದೆ. ಈ ಸಂಬಂಧ ಸುದರ್ಶನ್ ಆಡ್ಯಾಂತಾಯ್, ಲವಿನಾ ಜನೆಟ್ ಮೆಂಟೋರ್, ಮಹೇಂದ್ರ, ಜೈಸನ್ ಡಿಸೋಜಾ ಸೇರಿದಂತೆ 7 ಜನರ ವಿರುದ್ಧ ದೂರು ದಾಖಲಾಗಿದೆ. ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ದಾಖಲೆ ನಕಲಿ ಮಾಡಿ ದೋಖಾ ಎಸಗಲಾಗಿದೆ. ಅಲ್ಲದೆ FDA, SDA ಹಾಗೂ ಜಾರಿಕಾರ ಹುದ್ದೆಗಳಿಗೆ ಆಹ್ವಾನಿಸಿದ್ದ ಅರ್ಜಿಗಳ ದಾಖಲೆಗಳನ್ನೇ ತಿರುಚಿ ಕೆಲಸ ಕೊಡಿಸೋದಾಗಿ ವಂಚನೆ ಮಾಡಿರುವ ಬಗ್ಗೆ ಆರೋಪ ಕೇಳಿಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link