Category Archives: Blog

Your blog category

Airport Jobs: ವಿಮಾನ ನಿಲ್ದಾಣದಲ್ಲಿ 2,442 ಹುದ್ದೆಗಳಿಗೆ ಭರ್ಜರಿ ನೇಮಕಾತಿ; 10th, ಪಿಯುಸಿ ಪಾಸ್​​ ಆಗಿದ್ರೆ ಸಾಕು – Kannada News | Jewar Airport Jobs: 2442 Freshers Vacancies for Ground Staff and Cargo | No Diploma Needed

ನೋಯ್ಡಾದ ಜೇವರ್‌ನಲ್ಲಿ ನಿರ್ಮಾಣವಾಗುತ್ತಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ವಿಮಾನ ನಿಲ್ದಾಣದ ಕಾರ್ಯಾಚರಣೆ ಶೀಘ್ರದಲ್ಲೇ ಆರಂಭವಾಗಲಿರುವ ಹಿನ್ನೆಲೆಯಲ್ಲಿ, ಒಟ್ಟು 2,442 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಈ ನೇಮಕಾತಿಯಲ್ಲಿ ಗ್ರೌಂಡ್ ಸ್ಟಾಫ್, ಕಾರ್ಗೋ ಎಕ್ಸಿಕ್ಯೂಟಿವ್ ಮತ್ತು ಲೋಡರ್ ಹುದ್ದೆಗಳಿದ್ದು, ವಿಶೇಷವೆಂದರೆ ಯಾವುದೇ ಏವಿಯೇಷನ್ ಡಿಪ್ಲೊಮಾ ಅಥವಾ ವಿಶೇಷ ತರಬೇತಿಯ ಅಗತ್ಯವಿಲ್ಲದೆ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಗ್ರೌಂಡ್ ಸ್ಟಾಫ್ ಮತ್ತು ಕಾರ್ಗೋ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ 12ನೇ ತರಗತಿ ಪಾಸಾದ 18 ರಿಂದ 30 ವರ್ಷದೊಳಗಿನ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶವಿದ್ದು, ಇವರಿಗೆ ಮಾಸಿಕ 25,000 ರಿಂದ 35,000ರೂ. ವರೆಗೆ ವೇತನ ಸಿಗಲಿದೆ. ಇನ್ನು ಲೋಡರ್ ಹುದ್ದೆಗೆ 10ನೇ ತರಗತಿ ಪಾಸಾದ 20 ರಿಂದ 40 ವರ್ಷದೊಳಗಿನ ಪುರುಷರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದ್ದು, 15,000 ರಿಂದ 25,000ರೂ. ವರೆಗೆ ವೇತನ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಆಸಕ್ತ ಅಭ್ಯರ್ಥಿಗಳು ಜೂನ್ 15, 2026 ರೊಳಗೆ ಅಧಿಕೃತ ವೆಬ್‌ಸೈಟ್ www.niasjewar.com ಮೂಲಕ ತಮ್ಮ ಇಮೇಲ್ ಮತ್ತು ಮೊಬೈಲ್ ಸಂಖ್ಯೆಯನ್ನು ಬಳಸಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಅರ್ಜಿಯ ಜೊತೆಗೆ ಅಗತ್ಯ ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ. ವಿಮಾನಯಾನ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಲು ಬಯಸುವ ಹೊಸಬರಿಗೆ (Freshers) ಇದೊಂದು ಅತ್ಯುತ್ತಮ ವೇದಿಕೆಯಾಗಿದ್ದು, ಕೊನೆಯ ದಿನಾಂಕದ ಮುಂಚಿತವಾಗಿ ಅರ್ಜಿ ಸಲ್ಲಿಸಿ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಸೂಚಿಸಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್​​ಗೆ ಬೆಂಕಿ, ರಸ್ತೆ ಪಕ್ಕದ ಅರಣ್ಯಕ್ಕೂ ಅವರಿಸಿದ ಜ್ವಾಲೆ – Kannada News | Moving tanker fire reaches Road side Forest In Ankola

ಕಾರವಾರ, ಏಪ್ರಿಲ್ 16): ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್​​ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿರುವ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲಾ ತಾಲೂಕಿನ ಕಂಚಿನಾಬಾಗಿಲು ಬಳಿಯ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ನಡೆದಿದೆ. ಮಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಮೊದಲೇ ಪೆಟ್ರೋಲ್ ಇದ್ದಿದ್ದರಿಂದ ನೋಡ ನೋಡುತ್ತಿದ್ದಂತೇ ಟ್ಯಾಂಕರ್ ಹೊತ್ತಿ ಉರಿದಿದೆ. ಅಲ್ಲದೇ ಬೆಂಕಿಯ ಜ್ವಾಲೆ ರಸ್ತೆ ಪಕ್ಕದ ಅರಣ್ಯಕ್ಕೂ ವ್ಯಾಪಿಸಿದ್ದು, ಬೆಂಕಿ ನಂದಿಸಲು ಆಗ್ನಿಶಾಮಕ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಾಗಲಕೋಟೆ ಲವ್‌ ಜಿಹಾದ್​ ಆರೋಪಕ್ಕೆ ಬಿಗ್ ಟ್ವಿಸ್ಟ್: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಸ್ಪಿ – Kannada News | Bagalkot love jihad case Big twist; SP Siddharth Goyal reveals explosive information

ಎಸ್ಪಿ ಸಿದ್ದಾರ್ಥ ಗೋಯೆಲ್, ಯುವಕ, ಮರತ ಯುವತಿImage Credit source: tv9 kannada

ಬಾಗಲಕೋಟೆ, ಏಪ್ರಿಲ್​ 16: ಆಕೆ‌ ಹಿಂದೂ ಹುಡುಗಿ, ಆತ‌ ಮುಸ್ಲಿಂ ಹುಡುಗ. ಇಬ್ಬರ ಮಧ್ಯೆ ನಾಲ್ಕು ವರ್ಷದಿಂದ ಪ್ರೀತಿ ಇತ್ತಂತೆ. ಆದರೆ ಹುಡುಗಿ ನಿನ್ನೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಳು (death). ಈ ಬೆನ್ನಲ್ಲೇ ಲವ್‌ ಜಿಹಾದ್​ (Love Jihad) ಆರೋಪ ಕೇಳಿಬಂದಿತ್ತು. ಹುಡುಗನ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಸಂಬಂಧಿಕರು ಗಂಭೀರ ಆರೋಪ ಕೂಡ ಮಾಡಿದ್ದಾರೆ. ಈ ಮಧ್ಯೆ ಹುಡುಗಿಯ ತಾಯಿ ನೀಡಿದ ದೂರಿನಲ್ಲಿ ಹಲವು ವರ್ಷಗಳಿಂದ ಹುಡುಗ ರಿಲೇಷನ್‌ಶಿಪ್​​​ನಲ್ಲಿದ್ದ ಎಂಬ ಸ್ಫೋಟಕ ವಿಚಾರವನ್ನು ಬಾಗಲಕೋಟೆ ಎಸ್​​ಪಿ ಸಿದ್ದಾರ್ಥ ಗೋಯೆಲ್​ ಬಹಿರಂಗ ಮಾಡಿದ್ದಾರೆ.

ಎಸ್​​ಪಿ ಸಿದ್ದಾರ್ಥ ಗೋಯೆಲ್ ಹೇಳಿದ್ದಿಷ್ಟು

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್​​ಪಿ ಸಿದ್ದಾರ್ಥ ಗೋಯೆಲ್​, ನಿನ್ನೆ ಭೂಮಿಕಾ ಮೋಹನ್ ತಿಪ್ಪಣ್ಣವರ ಎಂಬ 19 ವರ್ಷದ ಯುವತಿ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಕ್ಷಣ ನಾವು ಹಾಗೂ ನಮ್ಮ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದೆವು. ಸೀನ್ ಆಫ್ ಕ್ರೈಂ ಅಧಿಕಾರಿಗಳು ಕೂಡ ಬಂದಿದ್ದರು. ಹುಡುಗಿಯ ಫೋನ್ ಸೀಜ್ ಮಾಡಿದ್ದೇವೆ. ಡೊಂಗ್ರಿ ಸಾಬ್ ನದಾಫ್ ಎಂಬ ಹುಡುಗನ ಮೇಲೆ ಯುವತಿ ತಾಯಿ ಕೊಟ್ಟ ದೂರಿನ ಮೇಲೆ ಎಫ್​ಐಆರ್​ ದಾಖಲಿಸಿದ್ದೇವೆ. ಆತನ ಫೋನ್ ಕೂಡ ಸೀಜ್ ಮಾಡಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಅನ್ಯಕೋಮಿನ ಯುವಕನನ್ನ ಪ್ರೀತಿಸುತ್ತಿದ್ದ ಯುವತಿ ಆತ್ಮಹತ್ಯೆ, ಲವ್ ಜಿಹಾದ್ ಆರೋಪ

ಕ್ರೈಂ ನಂ 68/2026, ಬಿಎನ್​ಎಸ್ 108 ಆತ್ಮಹತ್ಯೆಗೆ ಪ್ರೇರಣೆ ಅಡಿ ಪ್ರಕರಣ ದಾಖಲಿಸಿದ್ದೇವೆ. ಈಗಾಗಲೇ ಆ ಹುಡುಗನನ್ನು ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ. ಅವರ ತಾಯಿ ಹೇಳುವ ಪ್ರಕಾರ  ಹುಡುಗಿಯ ಜೊತೆ ಹಲವು ವರ್ಷಗಳಿಂದ ಹುಡುಗ ರಿಲೇಷನ್‌ಶಿಪ್​​ನಲ್ಲಿದ್ದ​. ಮದುವೆ ಮಾಡಿಕೊಳ್ಳಲು ಆತ ಒತ್ತಾಯ ಮಾಡುತ್ತಿದ್ದ ಎಂದು ಹೇಳಲಾಗಿದೆ. ಆದ ಕಾರಣ ಮಾನಸಿಕವಾಗಿ ನೊಂದು ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ತಾಯಿ ದೂರದಲ್ಲಿ ಉಲ್ಲೇಖಿಸಿದ್ದಾರೆ ಎಂದರು.

ಡೆತ್ ನೋಟ್ ಸಿಕ್ಕಿಲ್ಲ ಎಂದ ಎಸ್​​ಪಿ

ಯುವತಿಗೆ ಯಾವ ರೀತಿ ಟಾರ್ಚರ್ ಕೊಡಿತ್ತಿದ್ದರು, ಏನೆಲ್ಲಾ ತೊಂದರೆ ಕೊಡುತ್ತಿದ್ದರು ಅದರ ಬಗ್ಗೆ ಸಂಪೂರ್ಣ ವಿಚಾರಣೆ ಮಾಡಿ ನಾವು ಕೋರ್ಟ್​ಗೆ ಚಾರ್ಜ್ ಶೀಟ್ ಸಲ್ಲಿಸುತ್ತೇವೆ. ಎರಡು ಸಮುದಾಯದವರೆಗೂ ನಾವು ಮನವಿ ಮಾಡುತ್ತೇವೆ ದಯವಿಟ್ಟು ಶಾಂತಿ ಕಾಪಾಡಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಪ್ರಕಾರ ನಾವು ಕ್ರಮಕೈಗೊಳ್ಳುತ್ತೇವೆ. ಡೆತ್ ನೋಟ್ ಏನು ಸಿಕ್ಕಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರೇಮ ಸಂಬಂಧವೋ? ಲವ್​​ ಜಿಹಾದೋ?: ಅಸಲಿಗೆ ಹುಬ್ಬಳ್ಳಿ, ಧಾರವಾಡದಲ್ಲಿ ಆಗ್ತಿರೋದೇನು?

ಇನ್ನು ಹಿಂದೂಪರ ಸಂಘಟನೆಯಿಂದ ಲವ್ ಜಿಹಾದ್ ಆರೋಪ‌ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ತಾಯಿಯ ದೂರಿನಲ್ಲಿ ಸದ್ಯಕ್ಕೆ ಅಂತಹ ಯಾವುದೇ ವಿಷಯಗಳ ಉಲ್ಲೇಖವಿಲ್ಲ. ಅವರಿಗೆ ಅವಕಾಶ ಇದೆ, ಇನ್ನೊಂದು ಸಾರಿ ದೂರು ಕೊಡುವುದಕ್ಕೆ. ಅವರು ಏನೆಲ್ಲಾ ವಿಷಯಗಳನ್ನು ಉಲ್ಲೇಖ ಮಾಡುತ್ತಾರೆ ಅದರ ಪ್ರಕಾರ ಕ್ರಮಕೈಗೊಳ್ಳುತ್ತೇವೆ ಎಂದು ಎಸ್​​ಪಿ ಸಿದ್ದಾರ್ಥ ಗೋಯೆಲ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 4:42 pm, Thu, 16 April 26

Source link

ದರ್ಶನ್ ಅವರಿಗೆ 1 ಕೋಟಿ ಮೋಸ ಮಾಡಿದರೇ ಮಾಜಿ ಮ್ಯಾನೇಜರ್? – Kannada News | Darshan’s ex manager talks about allegations on him

ನಟ ದರ್ಶನ್ (Darshan) ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ಹಠಾತ್ತನೆ ಸುದ್ದಿಗೋಷ್ಠಿ ನಡೆಸಿದ್ದು, ತಾವು ಹಠಾತ್ತನೇ ನಾಪತ್ತೆ ಆಗಿದ್ದೇಕೆ ಎಂದು ವಿವರಿಸಿದ್ದಾರೆ. ತಮ್ಮ ಮೇಲಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಅರ್ಜುನ್ ಸರ್ಜಾ ಅವರು ನೀಡಿದ ದೂರಿನ ಕುರಿತು ಮಾತನಾಡಿರುವ ಮಲ್ಲಿಕಾರ್ಜುನ, ದರ್ಶನ್ ಅವರಿಗೂ 1 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆಯೇ ಎಂಬ ಪ್ರಶ್ನೆಗೂ ಸಹ ಮಲ್ಲಿಕಾರ್ಜುನ ಉತ್ತರ ನೀಡಿದ್ದಾರೆ. ಮಲ್ಲಿಕಾರ್ಜುನ ಹೇಳೀದ್ದೇನು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Source link

ಎನ್​ಬಿಎಫ್​ಸಿಗಳಿಗೆ ಆರ್​ಬಿಐ ನಿಯಮಗಳು ಸಡಿಲ; ಪೂರ್ವಾನುಮತಿ ಇಲ್ಲದೇ ಹೊಸ ಶಾಖೆಗಳ ಸ್ಥಾಪನೆಗೆ ಅವಕಾಶ – Kannada News | RBI Eases NBFC Branch Rules: Boosting Financial Sector & Business Growth in India

ನವದೆಹಲಿ, ಏಪ್ರಿಲ್ 16: ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಣಕಾಸು ವಲಯದಲ್ಲಿ ಮಹತ್ವದ ಸುಧಾರಣೆ ತಂದಿದ್ದು, ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (NBFC) ಶಾಖೆಗಳನ್ನು ತೆರೆಯುವ ನಿಯಮಗಳನ್ನು ಸಡಿಲಗೊಳಿಸಿದೆ. ರಿಸರ್ವ್ ಬ್ಯಾಂಕ್ ಈಗ NBFC ಸಂಸ್ಥೆಗಳಿಗೆ ತನ್ನ ಪೂರ್ವಾನುಮತಿ ಇಲ್ಲದೆಯೇ ಹೊಸ ಶಾಖೆಗಳನ್ನು ತೆರೆಯಲು ಮುಕ್ತ ಅವಕಾಶ ನೀಡಿದೆ. ಈ ಕ್ರಮವು ಈ ಸಂಸ್ಥೆಗಳ ಕಾರ್ಯನಿರ್ವಹಣಾ ಸ್ವಾತಂತ್ರ್ಯವನ್ನು ಹೆಚ್ಚಿಸಲು ಮತ್ತು ವ್ಯವಹಾರವನ್ನು ಸುಲಭಗೊಳಿಸಲು (Ease of Doing Business) ಸಹಕಾರಿಯಾಗಲಿದೆ.

ಈ ಮುಂಚೆ ಕೆಲ ನಿರ್ದಿಷ್ಟ ವಿಭಾಗಗಳಿಗೆ ಶಾಖೆಗಳನ್ನು ತೆರೆಯಲು ಪೂರ್ವಾನುಮತಿ ಪಡೆಯುವ ಅಗತ್ಯ ಇತ್ತು. ಈಗ ಎನ್​ಬಿಎಫ್​ಸಿಗಳು ಸಾಮಾನ್ಯವಾಗಿ ಮುಕ್ತವಾಗಿ ಹೊಸ ಶಾಖೆಗಳನ್ನು ತೆರೆಯಲು ಸಾಧ್ಯವಾಗಲಿದೆ.

ಠೇವಣಿ ಪಡೆಯುವ NBFCಗಳಿಗೆ ಆರ್​ಬಿಐನ ಮಾರ್ಗಸೂಚಿಗಳು

ಸಾರ್ವಜನಿಕರಿಂದ ಠೇವಣಿ ಪಡೆಯುವ NBFCಗಳ ಹೂಡಿಕೆ ಸಾಮರ್ಥ್ಯ ಮತ್ತು ಕ್ರೆಡಿಟ್ ರೇಟಿಂಗ್ ಆಧಾರದ ಮೇಲೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ:

  • 50 ಕೋಟಿ ರೂಗಿಂತ ಕಡಿಮೆ ನಿವ್ವಳ ಹಣ (Net Owned Funds) ಹೊಂದಿರುವ ಅಥವಾ ‘AA’ ಗಿಂತ ಕಡಿಮೆ ಕ್ರೆಡಿಟ್ ರೇಟಿಂಗ್ ಹೊಂದಿರುವ ಸಂಸ್ಥೆಗಳು ತಮ್ಮ ನೋಂದಾಯಿತ ಕಚೇರಿ ಇರುವ ರಾಜ್ಯದಲ್ಲಿ ಮಾತ್ರ ಶಾಖೆಗಳನ್ನು ತೆರೆಯಬಹುದು.
  • 50 ಕೋಟಿ ರೂಗಿಂತ ಹೆಚ್ಚು ನಿವ್ವಳ ಹಣ ಮತ್ತು ‘AA’ ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ರೇಟಿಂಗ್ ಹೊಂದಿರುವ NBFCಗಳು ಭಾರತದಾದ್ಯಂತ ಎಲ್ಲಿ ಬೇಕಾದರೂ ಶಾಖೆಗಳನ್ನು ಆರಂಭಿಸಬಹುದು.
  • 50 ಕೋಟಿ ರೂಗಿಂತ ಹೆಚ್ಚು ನಿವ್ವಳ ಹಣ ಇದ್ದು, ‘AA’ ಗಿಂತಲೂ ಕಡಿಮೆ ಕ್ರೆಡಿಟ್ ರೇಟಿಂಗ್ ಹೊಂದಿರುವ ಎನ್​ಬಿಎಫ್​ಸಿಗಳು ತಮ್ಮ ಮೂಲ ರಾಜ್ಯ ಬಿಟ್ಟು ಬೇರೆಡೆ ವಿಸ್ತರಣೆ ಮಾಡಲು ಅವಕಾಶ ಇರದು.

ಇದನ್ನೂ ಓದಿ: ಚೀನಾ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ: ಅಮೆರಿಕ ಹಿಂದಿಕ್ಕಿ ಅಗ್ರಸ್ಥಾನ, ಹೆಚ್ಚಿದ ವ್ಯಾಪಾರ ಕೊರತೆ

ಕೋರ್ ಇನ್ವೆಸ್ಟ್‌ಮೆಂಟ್ ಕಂಪನಿಗಳಿಗೂ (CIC) ಬದಲಾವಣೆ

ಕೋರ್ ಇನ್ವೆಸ್ಟ್‌ಮೆಂಟ್ ಕಂಪನಿಗಳ ವಿದೇಶಿ ಪ್ರತಿನಿಧಿ ಕಚೇರಿಗಳ ವಿಷಯದಲ್ಲೂ RBI ತನ್ನ ಧೋರಣೆಯನ್ನು ಬದಲಿಸಿದೆ. ಈ ಹಿಂದೆ ನಿಯಮ ಉಲ್ಲಂಘನೆಯಾದಲ್ಲಿ ಕಚೇರಿಗಳನ್ನು ಮುಚ್ಚಲು ಆದೇಶಿಸುತ್ತಿದ್ದ RBI, ಈಗ ಅಂತಹ ಕಚೇರಿಗಳಿಗೆ ನೀಡಲಾದ ಅನುಮತಿಯನ್ನು ಮರುಪರಿಶೀಲಿಸುವ ಅಥವಾ ಹಿಂಪಡೆಯುವ ಅಧಿಕಾರವನ್ನು ತನ್ನ ಬಳಿ ಇಟ್ಟುಕೊಂಡಿದೆ. ಇದು ಹೆಚ್ಚು ಫ್ಲೆಕ್ಸಿಬಿಲಿಟಿಯಿಂದ ಕೂಡಿದ ನಿಯಂತ್ರಣಾ ಕ್ರಮವಾಗಿದೆ.

ಈ ಹೊಸ ನಿಯಮಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪದೇ ಪದೇ ಕೇಳಿಬಂದ ಮದುವೆ, ಡೇಟಿಂಗ್ ವದಂತಿಗೆ ಮೃಣಾಲ್ ಠಾಕೂರ್ ಬ್ರೇಕ್ – Kannada News | Mrunal Thakur clarifies marriage rumours No time for dating due to busy schedule

ಚಿತ್ರರಂಗದ ತಾರೆಯರ ಬಗ್ಗೆ ವದಂತಿಗಳು ಹರಡುವುದು ಹೊಸದೇನಲ್ಲ. ಸದ್ಯ ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ನಟಿ ಮೃಣಾಲ್ ಠಾಕೂರ್ (Mrunal Thakur) ಈಗ ಇಂಥದ್ದೇ ಗಾಸಿಪ್‌ಗಳಿಗೆ ಖಡಕ್ ಆಗಿ ಉತ್ತರ ನೀಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಮೃಣಾಲ್ ಠಾಕೂರ್ ಮತ್ತು ದಕ್ಷಿಣ ಭಾರತದ ಖ್ಯಾತ ನಟ ಧನುಷ್ (Dhanush) ಪ್ರೀತಿಸುತ್ತಿದ್ದಾರೆ ಹಾಗೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿಬಂದಿತ್ತು. ಆದರೆ, ಇಬ್ಬರೂ ಈ ಸುದ್ದಿಯನ್ನು ನಗುನಗುತ್ತಲೇ ತಳ್ಳಿಹಾಕಿದ್ದರು.

ಇದಾದ ಬೆನ್ನಲ್ಲೇ, ಹಿಂದಿ ಚಿತ್ರವೊಂದರ ಸಹನಟನ ಜೊತೆ ಮೃಣಾಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ತಮ್ಮ ಮದುವೆ ಮತ್ತು ಸಂಬಂಧದ ಬಗ್ಗೆ ಕೇಳಲಾದ ಪ್ರಶ್ನೆಗೆ ಮೃಣಾಲ್ ಬಹಳ ತಮಾಷೆಯಾಗಿ ಉತ್ತರಿಸಿದ್ದಾರೆ. ಸದ್ಯಕ್ಕೆ ತಮಗೆ ಪ್ರೀತಿ ಅಥವಾ ಮದುವೆಗೆ ಸಮಯವೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಇತ್ತೀಚೆಗೆ ನನ್ನ ಕಾಲಿನ ಪೆಟ್ಟಾಗಿದೆ. ನನ್ನ ಕೆಲಸದ ಒತ್ತಡ ಎಷ್ಟಿದೆ ಎಂದರೆ, ಕಾಲಿಗೆ ಸರಿಯಾಗಿ ಚಿಕಿತ್ಸೆ ಕೊಡಿಸಿಕೊಳ್ಳಲು ಕೂಡ ನನಗೆ ಸಮಯ ಸಿಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ, ಸಂಬಂಧ ಬೆಳೆಸಲು ನನಗೆ ಸಮಯ ಎಲ್ಲಿಂದ ಸಿಗಬೇಕು? ನಾನು ಮಾಡುತ್ತಿರುವ ಕೆಲಸದಿಂದ ನನ್ನನ್ನು ಗುರುತಿಸಬೇಕೇ ಹೊರತು, ನಾನು ಯಾರ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ ಎನ್ನುವುದರ ಮೇಲಲ್ಲ’ ಎಂದು ಮೃಣಾಲ್ ಹೇಳಿದ್ದಾರೆ.

ಮಾಧ್ಯಮಗಳಲ್ಲಿ ಸದಾ ತಮ್ಮ ಬಗ್ಗೆ ಏನಾದರೂ ಒಂದು ಸುದ್ದಿ ಇರುತ್ತದೆ ಎಂದು ಮೃಣಾಲ್ ಅಭಿಪ್ರಾಯಪಟ್ಟಿದ್ದಾರೆ. ‘ಕೆಲವೊಮ್ಮೆ ನಾನು ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂಬ ಸುದ್ದಿ ಬರುತ್ತದೆ. ಇನ್ನು ಕೆಲವು ಬಾರಿ ಸಿನಿಮಾದಿಂದ ಹೊರಬಂದಿದ್ದೇನೆ ಎನ್ನಲಾಗುತ್ತದೆ. ಮಗದೊಮ್ಮೆ ನನ್ನ ವೈಯಕ್ತಿಕ ಜೀವನದ ಬಗ್ಗೆ ಚರ್ಚೆ ನಡೆಯುತ್ತದೆ. ನಾನು ಇಂತಹ ಯಾವುದೇ ವದಂತಿಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:  ತೆಲುಗು ಕುಟುಂಬದ ಸೊಸೆ ಆಗುತ್ತಾರಾ ಮೃಣಾಲ್ ಠಾಕೂರ್?

ಸದ್ಯಕ್ಕೆ ಸಿನಿಮಾ ವೃತ್ತಿಜೀವನವೇ ತಮ್ಮ ಮೊದಲ ಆದ್ಯತೆ ಎಂದು ಮೃಣಾಲ್ ಠಾಕೂರ್ ಸ್ಪಷ್ಟವಾಗಿ ಹೇಳುವ ಮೂಲಕ ಎಲ್ಲಾ ಗಾಳಿ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ. ಅವರು ನಟಿಸಿದ ತೆಲುಗಿನ ‘ಡಕಾಯಿತ್: ಎ ಲವ್ ಸ್ಟೋರಿ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿ ಸಾಧಾರಣ ಕಲೆಕ್ಷನ್ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹನುಮನ ಭಕ್ತರ ಗಮನಕ್ಕೆ: ಆಂಜನೇಯನ ಜನ್ಮಸ್ಥಳ ಅಂಜನಾದ್ರಿಗೆ ಬರುವ ಭಕ್ತರಿಗೆ ಸಮಯ ನಿಗದಿ – Kannada News | New Rules for devotees, timing Set to Koppal anjanadri hanuman darshan Over temperature

ಕೊಪ್ಪಳ, (ಏಪ್ರಿಲ್ 16): ಆಂಜನೇಯನ ಜನ್ಮಸ್ಥಳ ಕೊಪ್ಪಳದ (Koppal) ಅಂಜನಾದ್ರಿಯಲ್ಲಿ (anjanadri Betta) ಸೂರ್ಯನ ಪ್ರತಾಪ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹೀಗಾಗಿ ಬೆಟ್ಟ ಏರುವ ಭಕ್ತರು ಬಿಸಿಲಿನ ತಾಪಕ್ಕೆ ತತ್ತರಿಸಿ ಹೋಗುತ್ತಿದ್ದು, ಅಸ್ವಸ್ಥಗೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೊಪ್ಪಳ ಜಿಲ್ಲಾಡಳಿತ, ಮಧ್ಯಾಹ್ನದ ವೇಳೆ ಬೆಟ್ಟ ಏರುವುದನ್ನು ನಿಷೇಧಿಸಿ ಮಹತ್ವದ ಆದೇಶ ಹೊರಡಿಸಿದೆ. ಇನ್ಮುಂದೆ ಪ್ರತಿದಿನ ಬೆಳಗ್ಗೆ 11 ಗಂಟೆಯೊಳಗೆ ಮತ್ತು ಸಂಜೆ ನಾಲ್ಕು ಗಂಟೆಯ ಬಳಿಕ ಮಾತ್ರ ಭಕ್ತರಿಗೆ ಬೆಟ್ಟ ಏರಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಇದೇ ಸಮಯದಲ್ಲಿ ಭಕ್ತರು  ಬಂದ್ರೆ ಮಾತ್ರ ಅಂಜನಾದ್ರಿ ಬೆಟ್ಟ ಹತ್ತಬಹುದು.

ಅಂಜನಾದ್ರೆ ಬೆಟ್ಟ ಹತ್ತಲು ಸಮಯ ನಿಗದಿ

ಅಂಜನಾದ್ರಿ ದೇವರ ದರ್ಶನಕ್ಕೆಂದು ಸ್ಥಳೀಯರು ಮಾತ್ರವಲ್ಲ, ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದರೆ ಇನ್ನು ಮುಂದೆ ಹನುಮಪ್ಪನ ದರ್ಶನಕ್ಕೆ ಬರುವ ಭಕ್ತರಿಗೆ ಸಮಯದ ಬ್ರೇಕ್ ಬೀಳಲಿದೆ. ಸದ್ಯಕ್ಕೆ ಸಮಯ ಮಿತಿ ಇಲ್ಲದೇ ದೇವರ ದರ್ಶನಕ್ಕೆ ಹೋಗುತ್ತಿರುವ ಭಕ್ತರಿಗೆ ಇನ್ಮುಂದೆ ಸಮಯ ನಿಗದಿ ಮಾಡಲಾಗಿದ್ದು, ಬೆಳಗ್ಗೆ 11 ಗಂಟೆ ವರೆಗೆ ಮಾತ್ರ ಬೆಟ್ಟ ಹತ್ತು ಸಮಯ ನಿಗದಿಪಡಿಸಲಾಗಿದೆ. ಬಳಿಕ ಸಂಜೆ 4 ಗಂಟೆಗೆ ಅಂಜನಾದ್ರಿ ಬೆಟ್ಟ ಗೇಟ್ ಓಪನ್ ಆಗಲಿದೆ.

ಇದನ್ನೂ ಓದಿ: ಪುಣೆ–ಬೆಂಗಳೂರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ: ಕಾಮಗಾರಿ ಯಾವಾಗ ಶುರು? ಏನೆಲ್ಲ ಉಪಯೋಗ?

ಸಮಯದ ಮಿತಿ ಯಾಕೆ?

ಹನುಮನ ಜನ್ಮಭೂಮಿ, ಗಂಗಾವತಿ ತಾಲೂಕಿನ ಹನುಮನಹಳ್ಳಿಯಲ್ಲಿರುವ ಅಂಜನಾದ್ರಿ ಪರ್ವತ ಈಗ ಅಕ್ಷರಶಃ ಕೆಂಡದಂತಾಗಿದೆ. ಮುಂಜಾನೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತರು, 575 ಮೆಟ್ಟಿಲುಗಳನ್ನು ಹತ್ತಿ ಹನುಮನ ದರ್ಶನ ಪಡೆಯಬೇಕಿದೆ. ಆದರೆ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದಾಗಿ ಬೆಟ್ಟ ಏರುವ ಭಕ್ತರಲ್ಲಿ ತೀವ್ರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ನಿರ್ಜಲೀಕರಣ (Dehydration) ಮತ್ತು ಸುಸ್ತಿನಿಂದಾಗಿ ಹಲವರು ಮೆಟ್ಟಿಲುಗಳ ಮೇಲೆಯೇ ಕುಸಿದು ಬಿದ್ದಿದ್ದಾರೆ. ಕೆಲ ಭಕ್ತರು ಹೃದಯಾಘಾತದಿಂದ ಸಾವನ್ನಪ್ಪಿದ್ದು ಇದೆ. ಈ ಗಂಭೀರ ಪರಿಸ್ಥಿತಿಯನ್ನು ಪರಿಗಣಿಸಿದ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ ಇಟ್ನಾಳ್, ಭಕ್ತರ ಆರೋಗ್ಯದ ಹಿತದೃಷ್ಟಿಯಿಂದ ಹೊಸ ಆದೇಶ ಜಾರಿ ಮಾಡಿದ್ದಾರೆ. ​ಬೆಳಿಗ್ಗೆ 11 ರಿಂದ ಸಂಜೆ 4 ರವರೆಗೆ ಭಕ್ತರಿಗೆ ಬೆಟ್ಟ ಏರಲು ಪ್ರವೇಶ ನಿಷೇಧಸಿದ್ದಾರೆ.

ಸಂಜೆ 4 ಗಂಟೆಯ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ‌. ​ಜಿಲ್ಲಾಡಳಿತದ ಈ ನಿರ್ಧಾರವನ್ನು ಭಕ್ತರು ಸ್ವಾಗತಿಸಿದ್ದಾರೆ. ಪ್ರಾಣಾಪಾಯ ತಡೆಯಲು ಈ ಕ್ರಮ ಅನಿವಾರ್ಯವಾಗಿತ್ತು ಅನ್ನೋದು ಕೆಲ ಪ್ರವಾಸಿಗರ ಅಭಿಪ್ರಾಯವಾಗಿದೆ. ಬಿಸಿಲು ತುಂಬಾ ಜಾಸ್ತಿ ಇದೆ, ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆಯಾಗುತ್ತಿದೆ. ಜಿಲ್ಲಾಧಿಕಾರಿಗಳ ನಿರ್ಧಾರ ಒಳ್ಳೆಯದು. ಆದರೆ ಬೆಟ್ಟದ ಮೇಲೆ ತುರ್ತು ಪರಿಸ್ಥಿತಿಗೆ ತಕ್ಷಣ ಸ್ಪಂದಿಸಲು ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ನೇಮಿಸಬೇಕು ಎಂದು ಭಕ್ತರು ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ, ಬೇಸಿಗೆಯ ಪ್ರಖರತೆ ಕಡಿಮೆಯಾಗುವವರೆಗೂ ಹನುಮಪ್ಪನ ದರ್ಶನಕ್ಕೆ ಬರುವ ಭಕ್ತರು ಸಮಯದ ಬದಲಾವಣೆಯನ್ನು ಗಮನಿಸಬೇಕಾದ ಅನಿವಾರ್ಯತೆ ಇದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Hindu Death Rituals: ಸತ್ತವರ ಬಾಯಲ್ಲಿ ಚಿನ್ನ, ತುಳಸಿ ಮತ್ತು ಗಂಗಾ ಜಲವನ್ನು ಏಕೆ ಇಡಲಾಗುತ್ತದೆ? – Kannada News | Hindu Death Rituals: Sacred Items for Moksha and Soul’s Journey

ಸನಾತನ ನಂಬಿಕೆಗಳ ಪ್ರಕಾರ, ಸಾವು ಎಂಬುದು ಅಂತ್ಯವಲ್ಲ, ಅದು ಕೇವಲ ಒಂದು ಬದಲಾವಣೆ. “ಜಾತಸ್ಯ ಹಿ ಧ್ರುವೋ ಮೃತ್ಯುಃ” ಎನ್ನುವಂತೆ ಹುಟ್ಟಿದವನಿಗೆ ಸಾವು ನಿಶ್ಚಿತ. ಆದರೆ ಈ ಐಹಿಕ ಪ್ರಪಂಚವನ್ನು ತೊರೆದು ಅಜ್ಞಾತ ಲೋಕದ ಕಡೆಗೆ ಸಾಗುವ ಆತ್ಮಕ್ಕೆ ದಾರಿದೀಪವಾಗುವುದು ನಮ್ಮ ಶಾಸ್ತ್ರೋಕ್ತ ಆಚರಣೆಗಳು. ಗರುಡ ಪುರಾಣದಂತಹ ಪವಿತ್ರ ಗ್ರಂಥಗಳು ಉಲ್ಲೇಖಿಸುವಂತೆ, ಆತ್ಮವು ಯಮನ ಹಿಡಿತದಿಂದ ಮುಕ್ತವಾಗಿ ಮೋಕ್ಷದ ಹಾದಿ ಹಿಡಿಯಲು ಕೆಲವು ಪವಿತ್ರ ವಸ್ತುಗಳು ‘ದೈವಿಕ ಗುರಾಣಿ’ಯಾಗಿ ಕಾರ್ಯನಿರ್ವಹಿಸುತ್ತವೆ.

ಚಿನ್ನ- ಆಧ್ಯಾತ್ಮಿಕ ಶುದ್ಧೀಕರಣದ ಸಂಕೇತ:

ಚಿನ್ನವು ಕೇವಲ ಲೋಹವಲ್ಲ, ಅದು ಅಗ್ನಿ ದೇವರ ಸಾಕಾರ ರೂಪ. ಇದನ್ನು ಅತ್ಯಂತ ಪವಿತ್ರ ಮತ್ತು ದೈವಿಕ ಶುದ್ಧತೆಯ ಪ್ರತೀಕವೆಂದು ಪರಿಗಣಿಸಲಾಗುತ್ತದೆ. ಮರಣದ ಸಮಯದಲ್ಲಿ ಬಾಯಿಯಲ್ಲಿ ಚಿನ್ನದ ತುಣುಕನ್ನು ಇಡುವುದರಿಂದ ಆತ್ಮಕ್ಕೆ ಆಧ್ಯಾತ್ಮಿಕ ಶುದ್ಧೀಕರಣ ದೊರೆಯುತ್ತದೆ. ಚಿನ್ನದ ದೈವಿಕ ಅಂಶವು ಆತ್ಮವನ್ನು ಕತ್ತಲೆಯಿಂದ ಬೆಳಕಿನೆಡೆಗೆ, ಅಂದರೆ ಉನ್ನತ ಲೋಕಗಳ ಕಡೆಗೆ ಮುನ್ನಡೆಸುವ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹಿರಿಯರು ನಂಬುತ್ತಾರೆ.

ಗಂಗಾ ಜಲ-ಪಾಪ ವಿಮೋಚನೆಯ ಸಂಜೀವಿನಿ:

ಸ್ವರ್ಗದಿಂದ ಧರೆಗಿಳಿದ ಗಂಗೆಗೆ ಪಾಪಗಳನ್ನು ತೊಳೆಯುವ ಅದ್ಭುತ ಶಕ್ತಿಯಿದೆ. ಜೀವನದುದ್ದಕ್ಕೂ ಅರಿತೋ ಅರಿಯದೋ ಮಾಡಿದ ತಪ್ಪುಗಳ ನಿವಾರಣೆಗೆ ಗಂಗಾ ಜಲವು ರಾಮಬಾಣ. ಮರಣದ ಶಯ್ಯೆಯಲ್ಲಿರುವಾಗ ಅಥವಾ ನಂತರ ಬಾಯಿಗೆ ಗಂಗಾ ಜಲವನ್ನು ಸುರಿಯುವುದರಿಂದ ಆತ್ಮವು ಯಾವುದೇ ನೋವಿಲ್ಲದೆ, ದುಷ್ಟಶಕ್ತಿಗಳ ಬಾಧೆಯಿಲ್ಲದೆ ದೇಹವನ್ನು ತ್ಯಜಿಸಲು ಸಹಕಾರಿಯಾಗುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ತುಳಸಿ ವೈಕುಂಠ ಪ್ರಾಪ್ತಿಯ ದಾರಿ:

ತುಳಸಿಯನ್ನು ಸಾಕ್ಷಾತ್ ಮಹಾಲಕ್ಷ್ಮಿಯ ರೂಪ ಮತ್ತು ವಿಷ್ಣುವಿನ ಅತ್ಯಂತ ಪ್ರಿಯವಾದ ಅಂಶವೆಂದು ಪೂಜಿಸಲಾಗುತ್ತದೆ. ಗರುಡ ಪುರಾಣದ ಉಲ್ಲೇಖದಂತೆ, ಮೃತರ ಬಾಯಿಯಲ್ಲಿ ತುಳಸಿ ಎಲೆಯನ್ನು ಇಡುವುದರಿಂದ ಅವರು ಯಮಧರ್ಮನ ಕಠಿಣ ಶಿಕ್ಷೆಗಳಿಂದ ತಪ್ಪಿಸಿಕೊಳ್ಳುತ್ತಾರೆ. ತುಳಸಿಯ ಸಾನ್ನಿಧ್ಯವು ಆತ್ಮವನ್ನು ನೇರವಾಗಿ ಭಗವಾನ್ ವಿಷ್ಣುವಿನ ಪರಮಪದವಾದ ‘ವೈಕುಂಠ’ಕ್ಕೆ ಕೊಂಡೊಯ್ಯುತ್ತದೆ ಎಂಬ ಗಾಢ ನಂಬಿಕೆಯಿದೆ.

ಮಾನಸಿಕ ಶಾಂತಿ ಮತ್ತು ಸಂಪ್ರದಾಯದ ಗೌರವ:

ಈ ಆಚರಣೆಗಳು ಕೇವಲ ವಿಧಿವಿಧಾನಗಳಲ್ಲ, ಇವು ಅಗಲಿದ ಜೀವಕ್ಕೆ ನೀಡುವ ಅಂತಿಮ ಗೌರವ. ತಮ್ಮ ಪ್ರೀತಿಪಾತ್ರರಿಗೆ ಅಂತಿಮ ಕ್ಷಣದಲ್ಲಿ ಪವಿತ್ರವಾದದ್ದನ್ನು ನೀಡಿದೆವು ಎಂಬ ತೃಪ್ತಿ ಮೃತರ ಕುಟುಂಬಕ್ಕೆ ಮಾನಸಿಕ ಶಾಂತಿ ನೀಡುತ್ತದೆ. ಸಾವಿರಾರು ವರ್ಷಗಳಿಂದ ನಡೆದುಬಂದ ಈ ಸಂಪ್ರದಾಯಗಳು ನಮ್ಮ ಸಂಸ್ಕೃತಿಯಲ್ಲಿ ಸಾವನ್ನು ಒಂದು ಪವಿತ್ರ ಪರಿವರ್ತನೆಯಾಗಿ ಕಾಣುವ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಾಕಿಸ್ತಾನದ ನಂ.1, ಏಷ್ಯಾದ ನಂ.2, ವಿಶ್ವದ ನಂ.3..! ಬಾಬರ್ ಐತಿಹಾಸಿಕ ಸಾಧನೆ

Source link

ದೇಶದ ಮಹಿಳೆಯರು ನಿಮ್ಮನ್ನೆಂದೂ ಕ್ಷಮಿಸುವುದಿಲ್ಲ; ವಿಪಕ್ಷಗಳಿಗೆ ಮೋದಿ ಎಚ್ಚರಿಕೆ – Kannada News | Those who oppose the bill will not be spared by the women of India PM Modis warning to Opposition

ನವದೆಹಲಿ, ಏಪ್ರಿಲ್ 16: ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ಸಂಸತ್ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi), ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸುವವರನ್ನು ಭಾರತದ ಮಹಿಳೆಯರು ಖಂಡಿತ ಕ್ಷಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. “ಒಬ್ಬ ಸ್ನೇಹಿತನಾಗಿ ಮಹಿಳಾ ಮಸೂದೆಯನ್ನು ವಿರೋಧಿಸುವವರಿಗೆ ನನ್ನ ಬಳಿ ಕೆಲವು ಸಲಹೆಗಳಿವೆ. ಯಾವುದೇ ಕ್ಷೇತ್ರದಲ್ಲಿ ಮಹಿಳಾ ಮೀಸಲಾತಿಯನ್ನು ವಿರೋಧಿಸಿದ ಯಾರನ್ನೂ ಭಾರತದ ಮಹಿಳೆಯರು ಕ್ಷಮಿಸಿಲ್ಲ” ಎಂದು ಮೋದಿ ಹೇಳಿದ್ದಾರೆ.

2023ರಲ್ಲಿ ಮೊದಲು ಮಂಡಿಸಲಾದ ಮಹಿಳಾ ಮೀಸಲಾತಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಆದರೆ ವಿಳಂಬವಾದ ಜನಗಣತಿ ಪ್ರಕ್ರಿಯೆಯಿಂದಾಗಿ ಜಾರಿಗೆ ತರಲಾಗಿಲ್ಲ. ಆದರೆ, 2011ರ ಜನಗಣತಿಯ ಆಧಾರದ ಮೇಲೆ ಈ ಮಸೂದೆಯನ್ನು ಸಾಧ್ಯವಾದಷ್ಟು ಬೇಗ ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರವು ಈಗ ಒತ್ತಾಯಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link