Category Archives: Blog

Your blog category

ಕಬ್ಬಿನ ಗದ್ದೆಯಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಅರೆ ನಗ್ನ ದೇಹ ಪತ್ತೆ – Kannada News | Uttar Pradesh Burnt Woman’s Body Found In Hapur Sugarcane Field

ಹಾಪುರ್, ಜನವರಿ 08: ಕಬ್ಬಿನ ಗದ್ದೆಯಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಅರೆ ಬೆತ್ತಲೆ ದೇಹ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶ(Uttar Pradesh)ದ ಹಾಪುರ್ ಜಿಲ್ಲೆಯ ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದಲ್ಲಿ ನಡೆದಿದೆ. ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ ಮಹಿಳೆಯ  ದೇಹ ಪತ್ತೆಯಾಗಿದೆ.

ಮಹಿಳೆಯ ಮುಖ ಸುಟ್ಟು ಕರಕಲಾಗಿದ್ದು, ಗುರುತು ಪತ್ತೆ ಹಚ್ಚುವುದು ಅಸಾಧ್ಯವಾಗಿತ್ತು. ಗ್ರಾಮಸ್ಥರ ಪ್ರಕಾರ, ಶವ ಗಬ್ಬಿನ ಗದ್ದೆಯಲ್ಲಿ ಪತ್ತೆಯಾಗಿತ್ತು, ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಹತ್ತಿರದ ರೈತರು ಮತ್ತು ನಿವಾಸಿಗಳು ಸ್ಥಳದಲ್ಲಿ ಜಮಾಯಿಸಿದ್ದರು.

ಪೊಲೀಸರು ಸ್ಥಳಕ್ಕೆ ತಲುಪಿ ಮಹಿಳೆಯ ಗುರುತನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದಾರೆ. ಆದರೆ ಅದು ವಿಫಲವಾಗಿತ್ತು. ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ನಂತರ ಸಾಕ್ಷ್ಯಗಳನ್ನು ನಾಶಮಾಡಲು ಆಕೆಯ ದೇಹವನ್ನು ಸುಟ್ಟು ಹಾಕಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.

ಮತ್ತಷ್ಟು ಓದಿ: ತಿಂಗಳಲ್ಲಿ 15 ದಿನ ಗಂಡನ ಜೊತೆ, 15 ದಿನ ಪ್ರೇಮಿ ಜೊತೆ; ಈ ಮಹಿಳೆಯ ಶೋಕಿಗೆ ಊರವರು ಶಾಕ್!

ಕೊಲೆಯನ್ನು ಬೇರೆಡೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ, ಮೃತರ ಗುರುತು ಮರೆಮಾಡಲು ಶವವನ್ನು ಕಬ್ಬಿನ ಗದ್ದೆಗೆ ತರಲಾಗಿದೆ. ಮಹಿಳೆಯ ಬಟ್ಟೆಗಳು ಭಾಗಶಃ ಸುಟ್ಟುಹೋಗಿವೆ ಮತ್ತು ಆಕೆಯ ದೇಹದ ಹಲವಾರು ಭಾಗಗಳಲ್ಲಿ ತೀವ್ರವಾದ ಸುಟ್ಟ ಗಾಯಗಳಿದ್ದವು. ಸುತ್ತಮುತ್ತಲಿನ ಪ್ರದೇಶದಿಂದ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೂ ಮೊದಲು, ನಂದಗ್ರಾಮ್‌ನ ರಾಜ್‌ನಗರ ಪ್ರದೇಶದಲ್ಲಿ ಬಾಡಿಗೆ ಮಾಲೀಕರ ಶವ ಸೂಟ್​ಕೇಸ್​​ನಲ್ಲಿ ಪತ್ತೆಯಾಗಿತ್ತು, ಬಾಡಿಗೆ ಕೇಳಿದ್ದಕ್ಕೆ ಅವರನ್ನು ಹತ್ಯೆ ಮಾಡಲಾಗಿತ್ತು. ಅವರು ಬಹಳ ಹೊತ್ತು ಮನೆಗೆ ಹಿಂದಿರುಗದ ಕಾರಣ ಆತಂಕ ಹೆಚ್ಚಾಗಿತ್ತು. ಕೆಲಸದವಳು ಮನೆ ಮಾಲೀಕರ ಶವವನ್ನು ಪತ್ತೆ ಹಚ್ಚಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಈ ಬಾರಿ ಬಹಳ ಜನರಿಗೆ ಸಿಕ್ಕಿಲ್ಲ ಇನ್ಕಮ್ ಟ್ಯಾಕ್ಸ್ ರೀಫಂಡ್; ಏನು ಕಾರಣ? – Kannada News | Many tax payers not yet received Income tax refunds, know the reasons for this delay

ನವದೆಹಲಿ, ಜನವರಿ 8: ಈ ಬಾರಿ ಐಟಿ ರಿಟರ್ನ್ಸ್ (Income Tax) ಸಲ್ಲಿಸಿರುವ ಬಹಳ ತೆರಿಗೆ ಪಾವತಿದಾರರಿಗೆ ರೀಫಂಡ್​ಗಳು ಇನ್ನೂ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ. ಹಿಂದಿನ ವರ್ಷಗಳಲ್ಲಿ ರೀಫಂಡ್ ಆಗದೇ ಇರುವ ಪ್ರಕರಣಗಳು ಕಡಿಮೆ ಇದ್ದವು. ಈ ವರ್ಷ ಇದು ಹೆಚ್ಚಾಗಿದೆ. ರೀಫಂಡ್​ಗಳು ಬರುವುದಕ್ಕೆ ಇನ್ನೂ ಸಮಯಾವಕಾಶ ಇದೆಯಾದರೂ ಬಹಳ ಜನರು ತಮಗೆ ರೀಫಂಡ್ ಸಿಗುತ್ತೋ ಇಲ್ಲವೋ ಎನ್ನುವ ಆತಂಕದಲ್ಲಿದ್ದಾರೆ.

ಆದಾಯ ತೆರಿಗೆ ಇಲಾಖೆ ಈ ಬಾರಿ ಹಲವು ಐಟಿಆರ್​ಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಹೆಚ್ಚು ಸಮಯ ತೆಗೆದುಕೊಂಡಿದೆ. ಕಾನೂನು ಪ್ರಕಾರ ಡಿಸೆಂಬರ್ 31ರವರೆಗೂ ಇಲಾಖೆಗೆ ಐಟಿಆರ್​ಗಳ ಪ್ರೋಸಸ್ ಮಾಡಲು ಕಾಲಾವಕಾಶ ಇದೆ. ಹೀಗಾಗಿ, ರೀಫಂಡ್​ಗಳು ವಿಳಂಬವಾಗುವುದು ಸಹಜ.

ಇದನ್ನೂ ಓದಿ: ಕರ್ನಾಟಕದ ಕಾಫಿಗೆ ಯೂರೋಪ್​ನಲ್ಲಿ ಬಲು ಬೇಡಿಕೆ; 2025ರಲ್ಲಿ 2 ಬಿಲಿಯನ್ ಡಾಲರ್ ಮುಟ್ಟಿದ ಭಾರತದ ಒಟ್ಟಾರೆ ಕಾಫಿ ರಫ್ತು

ಹೆಚ್ಚಿನ ಮೌಲ್ಯದ ರೀಫಂಡ್​ಗಳನ್ನು ಕ್ಲೇಮ್ ಮಾಡಿದ್ದರೆ ವಿಳಂಬ

ತೆರಿಗೆ ಪಾವತಿದಾರರು ತಮ್ಮ ಐಟಿಆರ್​ನಲ್ಲಿ ಹೆಚ್ಚಿನ ಮೌಲ್ಯದ ರೀಫಂಡ್​ಗಳಿಗೆ ಕ್ಲೇಮ್ ಮಾಡಿದ್ದರೆ, ಅಂಥ ಪ್ರಕರಣಗಳನ್ನು ಇಲಾಖೆ ಕೂಲಂಕಷವಾಗಿ ಪರಿಶೀಲಿಸುತ್ತದೆ. ರೀಫಂಡ್ ವಿಳಂಬವಾಗಲು ಇದೂ ಒಂದು ಪ್ರಮುಖ ಕಾರಣ.

ಹಾಗೆಯೇ, ತೆರಿಗೆ ಪಾವತಿದಾರರು ಐಟಿಆರ್ ಸಲ್ಲಿಸುವಾಗ ಏನಾದರೂ ತಪ್ಪು ಮಾಡಿದ್ದರೆ ಆಗಲೂ ಕೂಡ ರೀಫಂಡ್ ವಿಳಂಬವಾಗುತ್ತದೆ. ಈ ವರ್ಷ ಇಂಥ ಪ್ರಕರಣಗಳು ಹೆಚ್ಚಾಗಿವೆ ಎನ್ನಲಾಗಿದೆ. ಐಟಿಆರ್​ನಲ್ಲಿ ದೋಷವಾಗಿದ್ದರೆ ಇಲಾಖೆಯು ತೆರಿಗೆಪಾವತಿದಾರರಿಗೆ ನೋಟೀಸ್ ಕೊಟ್ಟು, ಆ ದೋಷ ಸರಿಪಡಿಸಲು ತಿಳಿಸುತ್ತದೆ. ಹೀಗಾಗಿ, ರೀಫಂಡ್ ಪ್ರೋಸಸ್ ಆಗುವುದು ವಿಳಂಬವಾಗುತ್ತದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ಕಂಪನಿ ಶುರು ಮಾಡಿ ಕೆಲಸಗಾರರ ಆಟಕ್ಕೆ ಬೇಸ್ತು ಬಿದ್ದ ಆಸ್ಟ್ರೇಲಿಯನ್ ಉದ್ಯಮಿ

ಕೆಲ ಉದ್ಯೋಗಸ್ಥ ವ್ಯಕ್ತಿಗಳು ತಮ್ಮ ಐಟಿಆರ್​ನಲ್ಲಿ ಸೆಕ್ಷನ್ 80ಸಿ, 80ಡಿ ಇತ್ಯಾದಿ ಅಡಿ ಡಿಡಕ್ಷನ್ ಕ್ಲೇಮ್ ಮಾಡಿರುವುದುಂಟು. ಆದರೆ, ತಾವು ಕೆಲಸ ಮಾಡುವ ಕಂಪನಿ ಬಳಿ ಅದನ್ನು ಡಿಕ್ಲೇರ್ ಮಾಡದೇ ಇದ್ದಿರಬಹುದು. ಇಂಥ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆಯು ಪರಿಶೀಲನೆ ನಡೆಸುತ್ತದೆ. ಇದೂ ಸೇರಿದಂತೆ ಬೇರೆ ಯಾವುದಾದರೂ ವ್ಯತ್ಯಾಸಗಳು ಐಟಿಆರ್​ನಲ್ಲಿ ಕಂಡು ಬಂದಲ್ಲಿ ಇಲಾಖೆ ತೆರಿಗೆ ಪಾವತಿದಾರರಿಗೆ ಎಸ್ಸೆಮ್ಮೆಸ್ ಮೂಲಕವೋ, ಇಮೇಲ್ ಮೂಲಕವೋ ನೋಟೀಸ್ ನೀಡಿ, ಸರಿಪಡಿಸಲು ತಿಳಿಸುತ್ತದೆ. ಇವೆಲ್ಲಾ ಪ್ರಕ್ರಿಯೆಗಳಿಗೆ ಸಮಯ ಹಿಡಿಯುವುದರಿಂದ ಹಲವರಿಗೆ ರೀಫಂಡ್ ಪ್ರೋಸಸ್ ಆಗುವುದು ವಿಳಂಬವಾಗಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹೆತ್ತ ಮಗನನ್ನೇ ಕೊಂದ ತಂದೆ: ಕೊಲೆ ರಹಸ್ಯ ಭೇದಿಸಿದ್ದು ಮೃತನ ಸ್ನೇಹಿತರು! – Kannada News | Chikkodi Man Kills Alcoholic Son, Friends Expose Chilling Murder Plan

ಬೆಳಗಾವಿ, ಜನವರಿ 08: ಕುಡಿದು ಬಂದು ಕಿರಿ ಕಿರಿ ಮಾಡುತ್ತಾನೆ ಎಂಬ ಕಾರಣಕ್ಕೆ ಹೆತ್ತ ತಂದೆಯೇ ಮಗನಿಗೆ ಚಟ್ಟ ಕಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಇಂದಿರಾನಗರದಲ್ಲಿ ನಡೆದಿದೆ. ಕಿರಣ್​ ಆಲೂರೆ (31) ಮೃತ ಯುವಕನಾಗಿದ್ದು, ಆರೋಪಿ ನಿಜಗುಣಿ ಮತ್ತು ಉಸ್ಮಾನ್​​ ಮುಲ್ಲಾ ಎಂಬವರನ್ನು ಪ್ರಕರಣ ಸಂಬಂಧ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಶೇಷ ಅಂದ್ರೆ ಕಿರಣ್​​ ಕೊಲೆ ರಹಸ್ಯವನ್ನು ಇಲ್ಲಿ ಭೇದಿಸಿರೋದು ಆತನ ಸ್ನೇಹಿತರು ಅನ್ನೋದು ಗಮನಾರ್ಹ.

ಮದ್ಯದ ದಾಸನಾಗಿದ್ದ ಮಗ ಕಿರಣ್​​ನ ಕಾಟ ತಾಳಲಾರದೆ ತಂದೆ ನಿಜಗುಣಿ ಆತನ ಕೊಲೆಗೆ ಸ್ಕೆಚ್​​ ಹಾಕಿದ್ದ. ಅದರಂತೆ ತಾನು ಕೆಲಸ ಮಾಡುತ್ತಿದ್ದ ಹೋಟೆಲ್​​ ಮಾಲೀಕ ಉಸ್ಮಾನ ಮುಲ್ಲಾ ಜೊತೆ ಸೇರಿಕೊಂಡು ಮಗನನ್ನು ಮುಗಿಸಿದ್ದ. ಕುತ್ತಿಗೆಗೆ ವೈರ್​​ನಿಂದ ಬಿಗಿದು ಕಿರಣ್​ ಹತ್ಯೆಮಾಡಿದ್ದ ಆರೋಪಿಗಳು, ಕಾರಿನಲ್ಲಿ ಶವ ತೆಗೆದುಕೊಂಡು ಓಡಾಡಿದ್ದರು. ಬಳಿಕ ಕಿರಣ್​​ ಸ್ನೇಹಿತರಿಗೆ ಕರೆಮಾಡಿದ್ದ ನಿಜಗುಣಿ, ಹೃದಯಾಘಾತದಿಂದ ನಿಮ್ಮ ಸ್ನೇಹಿತ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದ. ಜೊತೆಗೆ ತರಾತುರಿಯಲ್ಲಿ ಮೃತದೇಹವನ್ನು ಸುಡಲು ಮುಂದಾಗಿದ್ದ. ಆದರೆ ಅವರ ಸಂಪ್ರದಾಯದಂತೆ ಶವ ಹೂಳಬೇಕಿರುವ ಕಾರಣ ನಿಜಗುಣಿ ನಡೆ ಕಿರಣ್​​ ಸ್ನೇಹಿತರಲ್ಲಿ ಅನುಮಾನ ಮೂಡಿಸಿದೆ.

ಇದನ್ನೂ ಓದಿ: ಸೊಸೆ ಕಾಟಕ್ಕೆ ಅತ್ತೆ ಆತ್ಮಹತ್ಯೆ? ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಕಿರಣ್​​ ತಂದೆ ನಿಜಗುಣಿ ವರ್ತನೆ ಬಗ್ಗೆ ಸಂಶಯಗೊಂಡು ಮೃತದೇಹ ಪರಿಶೀಲನೆ ನಡೆಸಿದಾಗ ಕುತ್ತಿಗೆ ಬಳಿ ಗಾಯ ಮತ್ತು ಕಿವಿಯಲ್ಲಿ ರಕ್ತಸ್ರಾವ ಆಗಿರೋದು ಕಂಡುಬಂದಿದೆ. ತಮ್ಮ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕ ಹಿನ್ನೆಲೆ ನಿಜಗುಣಿ ಕೆಲಸ ಮಾಡುತ್ತಿದ್ದ ಹೋಟೆಲ್ ಮಾಲೀಕ ಉಸ್ಮಾನ ಮುಲ್ಲಾನನ್ನು ಕಿರಣ್​​ ಸ್ನೇಹಿತರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. ಕೂಡಲೇ  ನಿಜಗುಣಿಯನ್ನ ಸ್ಮಶಾನಕ್ಕೆ ಕರೆಸಿ ಆತನನ್ನೂ ಘಟನೆ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಆತ ಕೂಡ ಮಗನನ್ನು ಕೊಲೆ ಮಾಡಿರೋದನ್ನು ಒಪ್ಪಿಕೊಂಡಿದ್ದಾನೆ. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಲಾಗಿದ್ದು, ಆರೋಪಿಗಳ ವಿರುದ್ಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಶ್ವಿನಿ ಆಟಕ್ಕೆ ದಂಗಾದ ಇಡೀ ಮನೆ; ಭೇಷ್ ಎಂದ ಎದುರಾಳಿ ರಘು, ರಕ್ಷಿತಾ – Kannada News | Bigg Boss Kannada: Ashwini Gowda’s Task Win and Raghu Gowda In Shock

ಬಿಗ್ ಬಾಸ್ ಮನೆಯಲ್ಲಿ ವ್ಯಕ್ತಿತ್ವ ಎಷ್ಟು ಮುಖ್ಯವಾಗುತ್ತದೆಯೋ ಟಾಸ್ಕ್ ಆಡೋದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಟಾಸ್ಕ್​​​ ಉತ್ತಮವಾಗಿ ಆಡುತ್ತಾರೆ ಎಂದರೆ ಅವರಿಗೆ ಹೆಚ್ಚು ಸ್ಕೋಪ್ ಸಿಗುತ್ತದೆ. ಈ ಬಾರಿ ಎಲ್ಲರೂ ನಿಯಮಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಆಟವನ್ನು ಹಲವು ಬಾರಿ ಹಾಳು ಮಾಡಿದ್ದಾರೆ. ಅಶ್ವಿನಿ ಅವರು ಈವರೆಗೆ ಟಾಸ್ಕ್ ವಿನ್ ಆಗಿ ಕ್ಯಾಪ್ಟನ್ ಆಗಿಲ್ಲ. ಆದರೆ, ಫಿನಾಲೆ ಸಮೀಪಿಸುವಾಗ ಅವರು ಆಡಿದ ರೀತಿ ಗಮನ ಸೆಳೆದಿದೆ. ಎದುರಾಳಿಗಳು ಕೂಡ ಭೇಷ್ ಎಂದಿದ್ದಾರೆ.

ಅಶ್ವಿನಿ ಗೌಡ ಅವರು ತಮ್ಮ ಮಾತುಗಳಿಂದ ಈ ಮೊದಲಿನಿಂದಲೂ ಚರ್ಚೆ ಆಗುತ್ತಾ ಬರುತ್ತಿದ್ದಾರೆ. ಅವರು ಕೆಟ್ಟ ಪದ ಬಳಕೆ ಮಾಡಿ ಚರ್ಚೆ ಹುಟ್ಟುಹಾಕಿದ್ದು ಇದೆ. ಅವರು ಕೆಲವು ಟಾಸ್ಕ್​​ಗಳಲ್ಲಿ ಉತ್ತಮವಾಗಿ ಆಡಿದ್ದು ಇದೆ. ಆದರೆ, ಕ್ಯಾಪ್ಟನ್ಸಿ ಟಾಸ್ಕ್ ವಿನ್ ಆಗೋಕೆ ಅವರಿಂದ ಸಾಧ್ಯವಾಗಿಲ್ಲ. ಈಗ ಜನವರಿ 7ರ ಎಪಿಸೋಡ್​​​ನಲ್ಲಿ ಅವರು ಉತ್ತಮವಾಗಿ ಟಾಸ್ಕ್ ಆಡಿದ್ದಾರೆ.

‘ಟಾಪ್ 6’ ರೇಸ್​ಗೆ ಸ್ಪರ್ಧಿಗಳಾಗಲು ಬಿಗ್ ಬಾಸ್ ಟಾಸ್ಕ್ ಒಂದನ್ನು ನೀಡಿದ್ದರು. ಇದರ ಅನುಸಾರ ಸ್ಪರ್ಧಿಗಳು ಒಂದು ಕಂಬದ ಮಾದರಿಯ ವಸ್ತುವನ್ನು ಹಿಡಿದು ನಿಲ್ಲಬೇಕು. ಹಿಂಭಾಗದಲ್ಲಿ ಅವರಿಗೆ ತೂಕವನ್ನು ಹೊರಿಸಲಾಗಿತ್ತದೆ. ಇದರ ಜೊತೆಗೆ ಎದುರಿದ್ದವರು ನೀರನ್ನು ಎರಚುತ್ತಾರೆ. ರಘು ಹಾಗೂ ರಾಶಿಕಾ ಒಂದು ತಂಡವಾದರೆ, ಧ್ರುವಂತ್ ಹಾಗೂ ಅಶ್ವಿನಿ ಮತ್ತೊಂದು ಟೀಂನಲ್ಲಿ ಇದ್ದರು.

ಇದನ್ನೂ ಓದಿ: ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ್

ರಾಶಿಕಾ 29.51 ನಿಮಿಷ ಹಾಗೂ ರಘು ಅವರು 70.10 ನಿಮಿಷ ನಿಂತಿದ್ದರು. ಅಶ್ವಿನಿ ಗೌಡ ಹಾಗೂ ಧ್ರುವಂತ್ ಅವರು 70 ನಿಮಿಷದ ದಾಖಲೆಯನ್ನು ಮುರಿದು ಗೆಲುವು ಕಂಡಿದ್ದಾರೆ. ಅಶ್ವಿನಿ ಹಾಗೂ ಧ್ರುವಂತ್ ಅವರು ಅಷ್ಟಾಗಿ ನೀರೆರಚಲು ಹೋಗಿರಲಿಲ್ಲ. ಅಶ್ವಿನಿ-ಧ್ರುವಂತ್ ನಿಂತಾಗ ರಘು ಹಾಗೂ ರಾಶಿಕಾ ಜೋರಾಗಿಯೇ ನೀರು ಎರಚಿದ್ದರು. ಆದರೆ, ಇದೆಲ್ಲವನ್ನೂ ಎದುರಿಸಿ ಅವರು ನಿಂತರು. ಅವರ ಆಟ ನೋಡಿ ರಕ್ಷಿತಾ ಹಾಗೂ ರಘು ಮೆಚ್ಚಿಕೊಂಡರು. ‘ನಿಮ್ಮ ಬಗ್ಗೆ ಹೆಮ್ಮೆ ಆಗುತ್ತಿದೆ’ ಎಂದು ರಕ್ಷಿತಾ ಅವರು ಅಶ್ವಿನಿಗೆ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟೀಮ್ ಇಂಡಿಯಾ ಆಟಗಾರನಿಗೆ ಶಸ್ತ್ರಚಿಕಿತ್ಸೆ… ತಂಡದಿಂದ ಔಟ್..! – Kannada News | Tilak Varma set to miss opening two T20Is vs New Zealand

ಭಾರತ ಮತ್ತು ನ್ಯೂಝಿಲೆಂಡ್ (IND vs NZ) ನಡುವಣ ಸರಣಿಯು ಜನವರಿ 11 ರಿಂದ ಶುರುವಾಗಲಿದೆ. ಭಾರತದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಮೂರು ಏಕದಿನ ಹಾಗೂ ಐದು ಟಿ20 ಪಂದ್ಯಗಳು ನಡೆಯಲಿದೆ. ಈ ಸರಣಿ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾಗೆ ಆಘಾತ ಎದುರಾಗಿದೆ.

ಭಾರತ ಟಿ20 ತಂಡದ ಪ್ರಮುಖ ಆಟಗಾರ ತಿಲಕ್ ವರ್ಮಾ ಗಾಯದ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ವಿಜಯ ಹಝಾರೆ ಟೂರ್ನಿಯ ವೇಳೆ ತೊಡೆಸಂಧು ಸಮಸ್ಯೆಗೆ ಒಳಗಾಗಿದ್ದ ತಿಲಕ್ ಆಸ್ಪತ್ರೆಗೆ ದಾಖಲಾಗಿದ್ದು, ನೋವಿನ ಸಮಸ್ಯೆಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ.

ಹೀಗಾಗಿ ನ್ಯೂಝಿಲೆಂಡ್ ವಿರುದ್ಧದ ಮೊದಲೆರಡು ಟಿ20 ಪಂದ್ಯಗಳಲ್ಲಿ ತಿಲಕ್ ವರ್ಮಾ ಕಾಣಿಸಿಕೊಳ್ಳುವುದಿಲ್ಲ. ಇನ್ನು ಸಂಪೂರ್ಣ ಫಿಟ್​ನೆಸ್ ಸಾಧಿಸಿದರೆ ಮಾತ್ರ ಅವರು ಉಳಿದ ಮೂರು ಮ್ಯಾಚ್​ಗಳ ವೇಳೆ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತ ತಿಲಕ್ ವರ್ಮಾ ಟಿ20 ವಿಶ್ವಕಪ್​ ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಹೀಗಾಗಿ ಅವರ ಫಿಟ್​ನೆಸ್ ಟೀಮ್ ಇಂಡಿಯಾ ಪಾಲಿಗೆ ಅನಿವಾರ್ಯ. ಹಾಗಾಗಿ ಟಿ20 ವಿಶ್ವಕಪ್​ಗೂ ಮುನ್ನ ಬಿಸಿಸಿಐ ವೈದ್ಯಕೀಯ ತಂಡವು ತಿಲಕ್ ವರ್ಮಾ ಅವರನ್ನು ಮೇಲ್ವಿಚಾರಣೆ ಮಾಡಲಿದೆ. ಒಂದು ವೇಳೆ ಅವರು ಫೆಬ್ರವರಿ ಮೊದಲ ವಾರದೊಳಗೆ ಸಂಪೂರ್ಣ ಗುಣಮುಖರಾಗದೇ ಇದ್ದರೆ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬೀಳಬಹುದು.

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

Published On – 12:14 pm, Thu, 8 January 26

Source link

Video: ಬೈಕ್​ ಸವಾರನ ರಕ್ಷಿಸಲು ಹೋಗಿ ಕಾರಿಗೆ ಲಾರಿ ಡಿಕ್ಕಿ, ಮೂವರು ಸಾವು – Kannada News | Andhra Pradesh Highway Mishap Claims Three Lives After Lorry Car Collision

ಶ್ರೀಕಾಕುಳಂ, ಜನವರಿ 08: ಬೈಕ್ ಸವಾರನನ್ನು ರಕ್ಷಿಸಲು ಹೋಗಿ ಲಾರಿಯೊಂದು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ನಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಈ ದುರಂತ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಮನಕಲಕುವ ವೀಡಿಯೊ  ವೈರಲ್ ಆಗಿದೆ. ಭಾರೀ ವಾಹನದ ಮುಂದೆ ಇದ್ದಕ್ಕಿದ್ದಂತೆ ಬಂದ ಬೈಕನ್ನು ತಪ್ಪಿಸಲು ಲಾರಿ ಚಾಲಕ ವಾಹನವನ್ನು ಬಲಕ್ಕೆ ತಿರುಗಿಸಿದ್ದಾನೆ. ಆಗ ಕಾರಿಗೆ ಡಿಕ್ಕಿ ಹೊಡೆದಿದೆ. ಜಿಲ್ಲೆಯ ಕೊರ್ಲಂ ಗ್ರಾಮದ ಬಳಿಯ ಬರುವಾ ಜಂಕ್ಷನ್‌ನಲ್ಲಿ ಈ ಅಪಘಾತ ಸಂಭವಿಸಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಖಾಸಗಿ ಕಂಪನಿಗಳ ಅನುಕೂಲಕ್ಕಾಗಿ ಕರ್ನಾಟಕದ ಚಾಲಕರಿಗೆ ಅನ್ಯಾಯ ಮಾಡಬೇಡಿ: ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ – Kannada News | Kempegowda Airport Taxi Pickup Point Row: Ramalinga Reddy Questions Officials

ಬೆಂಗಳೂರು, ಜ.8: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ (Bengaluru Airport) ಟ್ಯಾಕ್ಸಿಗಳಿಗೆ ನಿರ್ಬಂಧ ಮಾಡಿರುವ ಬಗ್ಗೆ ಸಾರಿಗೆ ಸಚಿವರಿಗೆ ಚಾಲಕರು ದೂರು ನೀಡಿದರು. ಇದೀಗ ದೂರಿನ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿದ್ದಾರೆ. ವಿಮಾನ ನಿಲ್ಥಾಣದ ಟರ್ಮಿನಲ್ 1ರ ಪಿಕಪ್ ಪಾಯಿಂಟ್​​ನಲ್ಲಿ ಕಳೆದ ಡಿಸೆಂಬರ್ 11ರಿಂದ ಹಳದಿ ಬೋರ್ಡ್ ಕ್ಯಾಬ್ಗಳ ಪ್ರವೇಶವನ್ನು ನಿಷೇಧಿಸಲಾಗಿತ್ತು. ಹೀಗಾಗಿ ವಿಮಾನ ನಿಲ್ದಾಣದ ಈ ಹೊಸ ರೂಲ್ಸ್​​ನಿಂದ ಟ್ಯಾಕ್ಸಿ ಚಾಲಕರಿಗೆ ಸಂಕಷ್ಟ ಶುರುವಾಗಿದೆ. ಎಂದಿನಂತೆ ಪಿಕಪ್ ಪಾಯಿಂಟ್ ಗೆ ಅನುಮತಿ ಕೊಡಿಸುವಂತೆ ಚಾಲಕರು ಸಾರಿಗೆ ಸಚಿವರ ಮೊರೆ ಹೋಗಿದ್ದರು. ಇನ್ನು ಚಾಲಕರ ಮನವಿ ಹಿನ್ನಲೆಯಲ್ಲಿ ಸಚಿವರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಪಾರ್ಕಿಂಗ್​​ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಲ್ಲಿನ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಟರ್ಮಿನಲ್ ನಿಂದ ಟ್ಯಾಕ್ಸಿ ಚಾಲಕರಿಗೆ ನೀಡಿರುವ ಪಿಕಪ್ ಪಾಯಿಂಟ್ ದೂರವಿದ್ದು ಪ್ರಯಾಣಿಕರು ಬರಲು ಕಷ್ಟವಾಗುತ್ತೆ ಮೊದಲು ಇದ್ದಲ್ಲೆ ಇವರಿಗೂ ಅವಕಾಶ ನೀಡಬಹುದಲ್ವಾ ಎಂದು ಕೇಳಿದ್ದಾರೆ. ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಸ್ಥಳೀಯ ಟ್ಯಾಕ್ಸಿ ಚಾಲಕರಿಗೆ ಅನ್ಯಾಯ ಮಾಡಲು ಹೊರಟಿದ್ದು ಇದು ಸರಿಯಲ್ಲ ಎಂದು ಅಸಮಧಾನ ಹೊರ ಹಾಕಿದರು. ಟರ್ಮಿನಲ್ 1ರ ಬಿಎಂಟಿಸಿ ಬಸ್ ನಿಲ್ದಾಣದಲ್ಲೂ ಕೂಡ 14 ಇದ್ದ ಬಸ್​​ಗಳನ್ನು 7ಕ್ಕೆ ಇಳಿಸಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುವುದಿಲ್ವಾ? ಎಂದು ಏರ್ಪೋಟ್ ಅಧಿಕಾರಿಗಳ ವಿರುದ್ದ ಗರಂ ಆಗಿದ್ದಾರೆ. ಆಡಳಿತ ಮಂಡಳಿ ಜೊತೆ ಸಭೆ ನಡೆಸಿ ಸೂಕ್ತ ನಿರ್ಧಾರ ತೆಗದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Samudrika Shastra: ದೇಹದ ಈ ಭಾಗದಲ್ಲಿ ಮಚ್ಚೆ ಇರುವವರಿಗೆ ಹಣಕ್ಕೆಂದೂ ಕೊರತೆಯಾಗದು! – Kannada News | Stomach Birthmark Meaning: Unveiling Destiny and Personality by Samudrika Shastra

ಪ್ರತಿಯೊಬ್ಬ ಮನುಷ್ಯನ ದೇಹದಲ್ಲೂ ಯಾವುದಾದರೂ ಒಂದು ಭಾಗದಲ್ಲಿ ಹುಟ್ಟುಮಚ್ಚೆ ಇರುವುದು ಸಹಜ. ಸಾಮಾನ್ಯವಾಗಿ ನಾವು ಇದನ್ನು ಅಷ್ಟಾಗಿ ಗಮನಿಸುವುದಿಲ್ಲ, ಆದರೆ ಸಾಮುದ್ರಿಕ ಶಾಸ್ತ್ರದ ಪ್ರಕಾರ ದೇಹದ ವಿವಿಧ ಭಾಗಗಳಲ್ಲಿ ಇರುವ ಹುಟ್ಟುಮಚ್ಚೆಗಳು ವ್ಯಕ್ತಿಯ ವ್ಯಕ್ತಿತ್ವ, ಅದೃಷ್ಟ ಮತ್ತು ಜೀವನದ ಹಾದಿಯನ್ನು ಸೂಚಿಸುತ್ತವೆ ಎಂದು ನಂಬಲಾಗಿದೆ. ದೇಹದ ಮೇಲಿನ ಮಚ್ಚೆಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತವೆ ಎಂದು ಹೇಳಲಾಗುತ್ತದೆ.

ಸಾಮುದ್ರಿಕ ಶಾಸ್ತ್ರದ ಪ್ರಕಾರ ಹೊಟ್ಟೆಯ ಮೇಲೆ ಇರುವ ಹುಟ್ಟುಮಚ್ಚೆ ಪುರುಷರು ಮತ್ತು ಮಹಿಳೆಯರ ಜೀವನದಲ್ಲಿ ವಿಭಿನ್ನ ರೀತಿಯ ಪರಿಣಾಮಗಳನ್ನು ಉಂಟುಮಾಡುತ್ತದೆ. ಪುರುಷರ ಹೊಟ್ಟೆಯ ಮೇಲೆ ಹುಟ್ಟುಮಚ್ಚೆ ಇದ್ದರೆ ಅವರು ತಮ್ಮ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ ಮತ್ತು ಸಾಮಾನ್ಯವಾಗಿ ಆರ್ಥಿಕ ಕೊರತೆಯನ್ನು ಅನುಭವಿಸುವುದಿಲ್ಲ ಎಂದು ಹೇಳಲಾಗುತ್ತದೆ. ಅದೇ ರೀತಿ ಮಹಿಳೆಯರ ಹೊಟ್ಟೆಯ ಮೇಲೆ ಹುಟ್ಟುಮಚ್ಚೆ ಇದ್ದರೆ ಅವರು ಸಂತೋಷದ ವೈವಾಹಿಕ ಜೀವನ, ಕುಟುಂಬ ಸುಖ ಹಾಗೂ ಮಕ್ಕಳ ಸಂತೋಷವನ್ನು ಅನುಭವಿಸುವ ಅದೃಷ್ಟವನ್ನು ಹೊಂದಿರುತ್ತಾರೆ ಎಂಬ ನಂಬಿಕೆ ಇದೆ.

ಹೊಟ್ಟೆಯ ಎಡಭಾಗದಲ್ಲಿ ಹುಟ್ಟುಮಚ್ಚೆ ಇರುವವರನ್ನು ಸಾಮುದ್ರಿಕ ಶಾಸ್ತ್ರದಲ್ಲಿ ಅದೃಷ್ಟವಂತರೆಂದು ಪರಿಗಣಿಸಲಾಗುತ್ತದೆ. ಇಂತಹವರು ಸ್ಪಷ್ಟ ಗುರಿಗಳನ್ನು ಹೊಂದಿದ್ದು ಅವುಗಳನ್ನು ಸಾಧಿಸುವ ದೃಢಸಂಕಲ್ಪದಿಂದ ಮುಂದುವರೆಯುತ್ತಾರೆ. ವೃತ್ತಿಜೀವನ ಸೇರಿದಂತೆ ಜೀವನದ ಹಲವಾರು ಕ್ಷೇತ್ರಗಳಲ್ಲಿ ಅವರಿಗೆ ಯಶಸ್ಸು ದೊರೆಯುತ್ತದೆ ಮತ್ತು ಹಣಕಾಸಿನ ಸಮಸ್ಯೆಗಳು ಸಾಮಾನ್ಯವಾಗಿ ಎದುರಾಗುವುದಿಲ್ಲ. ಇವರ ವ್ಯಕ್ತಿತ್ವ ಇತರರ ಮೇಲೆ ಪ್ರಭಾವ ಬೀರುವುದರ ಜೊತೆಗೆ ಪ್ರೇಮ ಜೀವನವೂ ಬಹುಶಃ ಸಂತೋಷಕರವಾಗಿರುತ್ತದೆ.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ಆದರೆ ಕೆಲವು ಅಭಿಪ್ರಾಯಗಳ ಪ್ರಕಾರ, ಹೊಟ್ಟೆಯ ಎಡಭಾಗದಲ್ಲಿ ಮಚ್ಚೆ ಇರುವವರು ಜೀವನದಲ್ಲಿ ಆರಂಭದಲ್ಲಿ ಅನೇಕ ಸವಾಲುಗಳು ಮತ್ತು ಅಡೆತಡೆಗಳನ್ನು ಎದುರಿಸಬಹುದು. ಗುರಿಗಳನ್ನು ಸಾಧಿಸುವಲ್ಲಿ ಕಷ್ಟ ಅನುಭವಿಸಿದರೂ, ಪರಿಶ್ರಮ ಮತ್ತು ಸಹನೆಯ ನಂತರ ಅದೃಷ್ಟ ಅವರ ಪರವಾಗುತ್ತದೆ ಎಂದು ಹೇಳಲಾಗುತ್ತದೆ. ಇಂತಹವರು ಮಾತನಾಡುವ ಸ್ವಭಾವ ಹೊಂದಿದ್ದು ಬಹು ಗುಣಗಳು ಹಾಗೂ ವಿಭಿನ್ನ ಪ್ರತಿಭೆಗಳನ್ನು ಹೊಂದಿರುತ್ತಾರೆ.

ಇದಲ್ಲದೆ, ಹೊಟ್ಟೆಯ ಮೇಲಿನ ಹುಟ್ಟುಮಚ್ಚೆಗಳು ಕೆಲವೊಮ್ಮೆ ದುರ್ಬಲ ಜೀರ್ಣಾಂಗ ವ್ಯವಸ್ಥೆಯ ಸೂಚಕವಾಗಿರಬಹುದು ಎಂದು ಸಾಮುದ್ರಿಕ ಶಾಸ್ತ್ರ ಹೇಳುತ್ತದೆ. ಇಂತಹವರು ಸಾಮಾನ್ಯವಾಗಿ ಆಹಾರಪ್ರಿಯರಾಗಿದ್ದು ರುಚಿಕರವಾದ ಆಹಾರಗಳತ್ತ ಹೆಚ್ಚು ಆಕರ್ಷಿತರಾಗಿರುತ್ತಾರೆ ಎಂಬ ನಂಬಿಕೆಯೂ ಇದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Tumakuru: ಸೊಸೆ ಕಾಟಕ್ಕೆ ಅತ್ತೆ ಆತ್ಮಹತ್ಯೆ? ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ – Kannada News | Mother in Law Dies by Suicide; Daughter in Law Accused of Harassment in Tumakuru

ತುಮಕೂರು, ಜನವರಿ 08: ಅತ್ತೆ ಕಾಟಕ್ಕೆ ಸೊಸೆ ಮನೆಬಿಟ್ಟು ಹೋಗೋದು, ಗಂಡನಿಂದಲೇ ದೂರವಾಗೋ ಘಟನೆಗಳು ಮಾಮೂಲಾಗಿ ನಡೆಯುತ್ತಲೇ ಇರುತ್ತವೆ. ಆದ್ರೆ ಕಲ್ಪತರು ನಾಡು ತುಮಕೂರಲ್ಲಿ ಈ ಕೇಸ್​ ಉಲ್ಟಾ ಆಗಿದೆ. ಸೊಸೆ ಕಾಟಕ್ಕೆ ಬೇಸೆತ್ತು ಅತ್ತೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಗುಬ್ಬಿ ತಾಲೂಕಿನ ಕಾರೇಕುರ್ಚಿ ಗ್ರಾಮದಲ್ಲಿ ಘಟನೆ ನಡೆದಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಭ್ರಮರಾಂಬಿಕೆ (60) ಶವ ಪತ್ತೆಯಾಗಿದೆ.

ಘಟನೆ ಏನು?

ಸೊಸೆ ಕಾವ್ಯಶ್ರೀ ಪ್ರತ್ಯೇಕವಾಗಿ ಉಳಿಯಲು ಬಯಸಿದ್ದಳು. ಇದೇ ಕಾರಣಕ್ಕೆ ಅಡುಗೆ ಸೇರಿ ಎಲ್ಲವನ್ನೂ ಪ್ರತ್ಯೇಕವಾಗಿ ಮಾಡಿಕೊಳ್ಳುತ್ತಿದ್ದಳು. ಅಲ್ಲದೆ ಈ ನಡುವೆ ಗಂಡನನ್ನು ಬೆಂಗಳೂರಿಗೆ ಕರೆದೊಯ್ಯುವ ಬಗ್ಗೆಯೂ ಮಾತನಾಡುತ್ತಿದ್ದಳು. ಹೀಗಾಗಿ ಎಲ್ಲಿ ಮಗನನ್ನ ಸೊಸೆ ತನ್ನಿಂದ ದೂರ ಮಾಡ್ತಾಳೋ ಎನ್ನುವ ಭಯಕ್ಕೆ ಅತ್ತೆ ಭ್ರಮರಾಂಬಿಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ನಿನ್ನೆ ಬೆಳಗ್ಗೆ ಅನುಮಾನಾಸ್ಪದ ಸ್ಥಿತಿಯಲ್ಲಿ ಭ್ರಮರಾಂಬಿಕೆ ಶವ ಫಾರ್ಮ್​ಹೌಸ್​​ನಿಂದ 200 ಮೀಟರ್ ದೂರವಿರುವ ಪಂಪ್​ಹೌಸ್​​ನಲ್ಲಿ ಪತ್ತೆಯಾಗಿದೆ. ತಾಯಿ ನೇಣುಬಿಗಿದ ಸ್ಥಿಯಲ್ಲಿರೋದನ್ನು ಕಂಡ ಮಗ ಮನುಕುಮಾರ್ ಶವ ಕೆಳಗಿಳಿಸಿದ್ದ. ಬಳಿಕ ಚೇಳೂರು ಪೊಲೀಸರಿಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಪತ್ನಿ ಮಗ ಇದ್ರೂ ತಂಗಿ ಜತೆ ಅಣ್ಣ ಸಂಸಾರ; ಅಣ್ಣ-ತಂಗಿ ಲವ್ವಿಡವ್ವಿ ಸಾವಿನಲ್ಲಿ ಅಂತ್ಯ!

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಘಟನೆ ಬಗ್ಗೆ ಆರಂಭದಲ್ಲಿ ಅನುಮಾನ ಟಪಟ್ಟಿದ್ದರು. ಮೃತ ಮಹಿಳೆಯ ಒಂದು ಕಣ್ಣಿನ ಗುಡ್ಡೆ ನಾಪತ್ತೆಯಾಗಿದ್ದ ಕಾರಣ, ಇದು ಕೊಲೆಯಾಗಿರಬಹುದೆಂಬ ಲೆಕ್ಕಾಚಾರ ಹಾಕಿದ್ದರು. ಆದರೆ ಈ ಬಗ್ಗೆ ಪರಿಶೀಲನೆ ನಡೆಸಿದಾಗ ಮಧ್ಯರಾತ್ರಿ 1.45ರ ಸುಮಾರಿಗೆ ಫಾರ್ಮ್​​ಹೌಸ್​​ನಿಂದ 200 ಮೀಟರ್ ದೂರದ ಪಂಪ್ ಹೌಸ್​ ಭ್ರಮರಾಂಬಿಕೆ ತಾವೇ ನಡೆದುಕೊಂಡುಬಂದು ಆತ್ಮಹತ್ಯೆಗೆ ಶರಣಾಗಿರೋದು ದೃಢಪಟ್ಟಿದೆ. ನೇಣು ಬಿಗಿದ ಸ್ಥಿತಿಯಲ್ಲಿದ್ದ ಶವ ಕೆಳಗಿಳಿಸುವಾಗ ಕಣ್ಣಿಗೆ ಗಾಯವಾದ ಸಂಗತಿ ಗೊತ್ತಾಗಿದೆ. ಆತ್ಮಹತ್ಯೆಗೆ ಪ್ರೇರಣೆ ನೀಡಿರುವ ಆರೋಪದಡಿ ಸೊಸೆ ಕಾವ್ಯಶ್ರೀ ವಿರುದ್ಧ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕರ್ನಾಟಕದ ಕಾಫಿಗೆ ಯೂರೋಪ್​ನಲ್ಲಿ ಬಲು ಬೇಡಿಕೆ; 2025ರಲ್ಲಿ 2 ಬಿಲಿಯನ್ ಡಾಲರ್ ಮುಟ್ಟಿದ ಭಾರತದ ಒಟ್ಟಾರೆ ಕಾಫಿ ರಫ್ತು – Kannada News | Indian Coffee exports register new milestone of 2 billion USD, as Karnataka has most of country’s coffee production

ಬೆಂಗಳೂರು, ಜನವರಿ 8: ಭಾರತದ ಕಾಫಿ ರಫ್ತು (coffee exports) ಕಳೆದ ವರ್ಷ (2025) ಹೊಸ ಮೈಲಿಗಲ್ಲು ಮುಟ್ಟಿದೆ. ವರದಿಗಳ ಪ್ರಕಾರ 2025ರಲ್ಲಿ ಭಾರತದ ಒಟ್ಟೂ ಕಾಫಿ ರಫ್ತು ಎರಡು ಬಿಲಿಯನ್ ಡಾಲರ್ ಆಗಿದೆ. ಭಾರತದ ಕಾಫಿಗೆ ಜಾಗತಿಕವಾಗಿ ಬಹಳ ಬೇಡಿಕೆ ಇದೆ. ಶೇ. 15ರಷ್ಟು ಸಿಎಜಿಆರ್​ನಲ್ಲಿ ರಫ್ತು ಬೆಳೆಯುತ್ತಿದೆ. 2024-25ರಲ್ಲಿ ಭಾರತದಲ್ಲಿ ಉತ್ಪಾದನೆಯಾದ ಕಾಫಿ 3.6 ಲಕ್ಷ ಟನ್​ಗಳಷ್ಟಿದೆ. 2025-26ರಲ್ಲಿ ಇದು 4 ಲಕ್ಷ ಟನ್ ದಾಟುವ ನಿರೀಕ್ಷೆ ಇದೆ. ಅತಿ ಹೆಚ್ಚು ಕಾಫಿ ಉತ್ಪಾದಿಸುವ ದೇಶಗಳಲ್ಲಿ ಭಾರತ ಏಳನೇ ಸ್ಥಾನದಲ್ಲಿದೆ.

ಕಾಫಿಯಲ್ಲಿ ಅರೇಬಿಕಾ ಮತ್ತು ರೋಬಸ್ಟಾ ಎರಡು ವೈವಿಧ್ಯತೆಗಳಿವೆ. ರೋಬಸ್ಟಾ ಕಡಿಮೆ ಮೌಲ್ಯದದ್ದಾದರೂ ಕಹಿ ಮತ್ತು ಘಾಟು ಹೆಚ್ಚು. ಯೂರೋಪ್​ನಲ್ಲಿ ಈ ಕಾಫಿಗೆ ಬಹಳ ಬೇಡಿಕೆ ಇದೆ. ಭಾರತದ ಹೆಚ್ಚಿನ ರೋಬಸ್ಟಾ ಕಾಫಿ ಕರ್ನಾಟಕದಲ್ಲೇ ತಯಾರಾಗುವುದು. ಇಟಲಿ, ಜರ್ಮನಿ ಮುಂತಾದ ದೇಶಗಳಿಗೆ ಬಹಳ ರಫ್ತಾಗುತ್ತದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ಕಂಪನಿ ಶುರು ಮಾಡಿ ಕೆಲಸಗಾರರ ಆಟಕ್ಕೆ ಬೇಸ್ತು ಬಿದ್ದ ಆಸ್ಟ್ರೇಲಿಯನ್ ಉದ್ಯಮಿ

ಕಾಫಿಯಲ್ಲಿ ಕರ್ನಾಟಕವೇ ಕಿಂಗ್

ಇನ್ನು, ಅರೇಬಿಕಾ ತಳಿಯ ಕಾಫಿಯಲ್ಲಿ ಫ್ಲೇವರ್ ಕಡಿಮೆ. ಆದರೆ, ಇದಕ್ಕೆ ಹೆಚ್ಚಿನ ಮಾರುಕಟ್ಟೆ ಇದೆ. ಅದರಲ್ಲೂ ಪಶ್ಚಿಮ ಏಷ್ಯನ್ ಭಾಗಗಳಿಗೆ ಇದರ ರಫ್ತಾಗುತ್ತದೆ. ಕರ್ನಾಟಕದಲ್ಲಿ ಕೊಡಗು, ಚಿಕ್ಕಮಗಳೂರಿಲ್ಲಿರುವ ಕಾಫಿ ಎಸ್ಟೇಟ್​ಗಳಲ್ಲಿ ಅರೇಬಿಕಾ ಕಾಫಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಕೇರಳದಲ್ಲಿ ಬಹುತೇಕ ಅರೇಬಿಕಾ ಕಾಫಿ ಬೆಳೆಯಲಾಗುತ್ತದೆ.

ಭಾರತದ ಒಟ್ಟಾರೆ ಕಾಫಿ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ. 70ಕ್ಕೂ ಹೆಚ್ಚಿದೆ. ಕೇರಳದಲ್ಲಿ ಶೇ. 20ರಷ್ಟು ಕಾಫಿ ಬೆಳೆಯಲಾಗುತ್ತದೆ. ತಮಿಳುನಾಡಿನಲ್ಲಿ ಶೇ. 5ರಷ್ಟು ಕಾಫಿ ಉತ್ಪಾದನೆ ಇದೆ. ಭಾರತದ ಶೇ. 95ಕ್ಕೂ ಅಧಿಕ ಕಾಫಿಯನ್ನು ದಕ್ಷಿಣ ಭಾರತದಲ್ಲೇ ತಯಾರಿಸಲಾಗುತ್ತದೆ ಎಂಬುದು ವಿಶೇಷ. ಈಶಾನ್ಯ ರಾಜ್ಯಗಳು ಹಾಗೂ ಒಡಿಶಾದಲ್ಲಿ ಸೀಮಿತ ಪ್ರಮಾಣದಲ್ಲಿ ಕಾಫಿ ಬೆಳೆಯಲಾಗುತ್ತದೆ.

ಇದನ್ನೂ ಓದಿ: ಪಿಎಂ ಕಿಸಾನ್ ಸ್ಕೀಮ್- ರೈತರು ಇಕೆವೈಸಿ ಮಾಡಲು 3 ವಿಧಾನಗಳು

ಭಾರತದಲ್ಲಿ ಉತ್ಪಾದನೆಯಾಗುವ ಕಾಫಿಯಲ್ಲಿ ಶೇ. 70ರಷ್ಟನ್ನು ರಫ್ತು ಮಾಡಲಾಗುತ್ತದೆ. 2023-24ರಲ್ಲಿ 1.28 ಬಿಲಿಯನ್ ಡಾಲರ್​ನಷ್ಟು ಕಾಫಿ ರಫ್ತು ಮಾಡಲಾಗಿತ್ತು. 2024-25ರಲ್ಲಿ ಕಾಫಿ ರಫ್ತು ಮೌಲ್ಯ 1.81 ಬಿಲಿಯನ್ ಡಾಲರ್ ಇದೆ. 2025ರ ಕ್ಯಾಲಂಡರ್ ವರ್ಷದಲ್ಲಿ ಇದು 2 ಬಿಲಿಯನ್ ಡಾಲರ್ ಮುಟ್ಟಿದೆ. 2025-26ರ ವರ್ಷದಲ್ಲೂ ಕಾಫಿ ರಫ್ತು 2 ಬಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟುವ ನಿರೀಕ್ಷೆ ಇದೆ.

ಭಾರತ 50ಕ್ಕೂ ಅಧಿಕ ದೇಶಗಳಿಗೆ ಕಾಫಿ ರಫ್ತು ಮಾಡತ್ತದೆ. ಇಟಲಿ ದೇಶಕ್ಕೆ ಅತಿಹೆಚ್ಚು ರಫ್ತಾಗುತ್ತದೆ. ಕರ್ನಾಟಕದ ರೋಬಸ್ಟಾ ಕಾಫಿಗೆ ಯೂರೋಪ್ ಅತಿದೊಡ್ಡ ಮಾರುಕಟ್ಟೆಯಾಗಿದೆ. ಇಟಲಿ, ರಷ್ಯಾ, ಜರ್ಮನಿ, ಯುಎಇ, ಬೆಲ್ಜಿಯಂ, ಅಮೆರಿಕ, ಜಪಾನ್ ಮೊದಲಾದ ದೇಶಗಳು ಭಾರತದ ಕಾಫಿಯನ್ನು ಆಮದು ಮಾಡಿಕೊಳ್ಳುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link