Headlines

ವಾಹನ ಸವಾರರೇ ಗಮನಿಸಿ: ಬೆಂಗಳೂರಿನಲ್ಲಿ ಮತ್ತೆ ಶುರುವಾಗುತ್ತಿದೆ ಟೋಯಿಂಗ್! ದಂಡದ ಮೊತ್ತ ಎಷ್ಟು ಗೊತ್ತೇ?

ಬೆಂಗಳೂರು, ಮಾರ್ಚ್ 24: ಬೆಂಗಳೂರು (Bangalore) ನಗರದ ವಾಹನ ಸವಾರರು ಇನ್ನು ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡಿ ಹೋಗುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗಲಿದೆ. 2022ರಲ್ಲಿ ನಿಲ್ಲಿಸಲಾಗಿದ್ದ ಟೋಯಿಂಗ್ ವ್ಯವಸ್ಥೆಯನ್ನು ಇದೀಗ ಮತ್ತೆ ಆರಂಭಿಸಲು ಬೆಂಗಳೂರು ಟ್ರಫಿಕ್ ಪೊಲೀಸರು ನಿರ್ಧರಿಸಿದ್ದಾರೆ. ಮಾರ್ಚ್ 25 ರಿಂದಲೇ ಬೆಂಗಳೂರಿನಲ್ಲಿ ಟೋಯಿಂಗ್ ಪ್ರಕ್ರಿಯೆ ಪುನರಾರಂಭವಾಗುವ ಸಾಧ್ಯತೆ ಇದೆ. ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್ ಮಾಡುತ್ತಿರುವ ಸಮಸ್ಯೆಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಪ್ರತಿ ಪಾಲಿಕೆ ವ್ಯಾಪ್ತಿಗೆ…

Read More

ಮತ್ತೊಂದು ಸಿನಿಮಾ ಮಾಡ್ತಾರಾ ಪವನ್ ಕಲ್ಯಾಣ್? ಸತ್ಯಾಂಶವೇನು?

ಜನಸೇನಾ ಪಕ್ಷದ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಸದ್ಯ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ರಾಜಕೀಯದ ನಡುವೆಯೂ ಮೂರು ಸಿನಿಮಾಗಳನ್ನು ಅವರು ಮುಗಿಸಿದ್ದಾರೆ. ಪವನ್ ಅವರು ಡಿಸಿಎಂ ಆದ ಬಳಿಕ ‘ಹರಿ ಹರ ವೀರ ಮಲ್ಲು’, ‘ಓಜಿ’ ಮತ್ತು ಇತ್ತೀಚೆಗಷ್ಟೆ ಅವರ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳು ಬಿಡುಗಡೆ ಆಗಿವೆ. ಅಸಲಿಗೆ ಈ ಮೂರೂ ಸಿನಿಮಾಗಳನ್ನು ಅವರು ಚುನಾವಣೆಗೆ ಧುಮುಕುವ ಮೊದಲೇ ಒಪ್ಪಿಕೊಂಡಿದ್ದರು. ಇದೀಗ ಪವನ್ ಕಲ್ಯಾಣ್ ಅವರು ಹೊಸದೊಂದು ಸಿನಿಮಾ…

Read More

ತೆಲುಗಿಗೆ ಹೊರಟ ಕಿರಣ್​ ರಾಜ್, ನಮ್ರತಾ, ಭವ್ಯಾ

‘ಕರ್ಣ’ ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರ ಕಂಡು ಗಮನ ಸೆಳೆದಿದೆ. ಈಗ ಈ ಧಾರಾವಾಹಿ ತೆಲುಗಿಗೆ ಡಬ್ ಆಗಿದೆ. ಜೀ ತೆಲುಗಿನಲ್ಲಿ ಸೀರಿಯಲ್ ಪ್ರಸಾರ ಕೂಡ ಆರಂಭಿಸಿದೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ. ಕಿರಣ್ ರಾಜ್, ನಮ್ರತಾ ಗೌಡ ಹಾಗೂ ಭವ್ಯಾ ಗೌಡ ಇನ್ನು ತೆಲುಗು ವೀಕ್ಷಕರಿಗೂ ಪರಿಚಯಗೊಳ್ಳಲಿದ್ದಾರೆ. ಕನ್ನಡದಲ್ಲಿ ಧಾರಾವಾಹಿ ನಂಬರ್ 1 ಸ್ಥಾನದಲ್ಲಿದೆ. ಇನ್ನು ಪರಭಾಷೆಯ ಜನರು ಇದನ್ನು ಹೇಗೆ ಸ್ವಾಗತಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ….

Read More

ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ಕೇಸ್: ಡ್ರೈವರ್ ಟ್ಯಾಲೆಂಟ್ ಮೆಚ್ಚಬೇಕೆಂದ ಲಾಯರ್!

ಬೆಂಗಳೂರು, ಮಾರ್ಚ್ 24: ಬೆಂಗಳೂರಿನ ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ನಡೆದ ಲಂಬೋರ್ಗಿನಿ ಕಾರ್ ಡ್ರಿಫ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ, ರಿಕ್ಕಿ ರೈ ಪರ ವಕೀಲ ನಾರಾಯಣ ಸ್ವಾಮಿ ಜಿ. ಸ್ಪಷ್ಟನೆ ನೀಡಿದ್ದಾರೆ. ಈ ಘಟನೆ ಉದ್ದೇಶಪೂರ್ವಕ ಡ್ರಿಫ್ಟಿಂಗ್ ಆಗಿರದೆ, ಕಾರಿನ ಬ್ರೇಕ್ ಸಮಸ್ಯೆಯಿಂದ ಅಥವಾ ರಸ್ತೆಯ ಮರಳಿನ ಕಾರಣದಿಂದ ಉಂಟಾದ ಆಕಸ್ಮಿಕ ಸ್ಕಿಡ್ ಆಗಿದೆ ಎಂದು ಅವರು ತಿಳಿಸಿದ್ದಾರೆ. ಘಟನೆ ನಡೆದ ರಾತ್ರಿ ರಿಕ್ಕಿ ರೈ ಕಾರಿನಲ್ಲಿದ್ದರು. ಆದರೆ, ಅವರು ರಷ್ಯಾದಿಂದ ಭಾರತಕ್ಕೆ ಬಂದ ಕೇವಲ ಎರಡು ದಿನಗಳ…

Read More

ಎಸ್ಟಿಯವರ ಜಮೀನಿನಲ್ಲಿ ಎಸ್ಸಿ ಯುವಕ ನೀರು ಕುಡಿದಿದ್ದಕ್ಕೆ ಭಾರೀ ಗಲಾಟೆ; 24 ಮಂದಿಗೆ ಗಾಯ!

ಗದಗ, ಮಾರ್ಚ್​ 24: ಇಂದಿಗೂ ಸಮಾಜದಲ್ಲಿ ಜಾತಿಯಲ್ಲಿ ಮೇಲು ಕೀಳು ಎಂಬ ಭಾವನೆ ಜೀವಂತವಾಗಿದೆ ಎನ್ನುವುದಕ್ಕೆ ಹಲವು ಉದಾಹರಣೆಗಳು ಕಂಡು ಬಂದಿವೆ. ಈ ಹಿಂದೆಯೂ ಜಾತಿ ವಿಷಯಕ್ಕೆ, ಅಸ್ಪರ್ಷತೆ ವಿಚಾರಕ್ಕೆ ಸವರ್ಣೀಯರು ದಲಿತರನ್ನು ನಿಂದಿಸಿದ, ಅವರೊಂದಿಗೆ ಹೊಡೆದಾಟಕ್ಕಿಳಿದ (caste conflict) ನಿದರ್ಶನಗಳಿವೆ. ಆದರೆ ಎಸ್ಟಿಯವರ ಜಮೀನಿನಲ್ಲಿ ಎಸ್ಸಿ ಯುವಕ ನೀರು ಕುಡಿದ ಎಂಬ ವಿಚಾರಕ್ಕೆ ಮಾರಾಮಾರಿ ನಡೆದಿದ್ದು, 24 ಜನರು ಗಾಯಗೊಂಡ ಘಟನೆ ಗದಗ (Gadag) ಜಿಲ್ಲೆಯ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ನಡೆದಿದೆ. ಕೊಡ್ಲಿ, ಕಲ್ಲಿನಿಂದ…

Read More

‘ಬಂದರೋ ಬಂದರೋ ಭಾವ ಬಂದರೋ’ ಎಂದು ರಿಕ್ಕಿ ರೈ ಲಾಯರ್ ಕಾಲೆಳೆದ ಪೊಲೀಸರು!

ಬೆಂಗಳೂರು, ಮಾರ್ಚ್​ 24: ಲ್ಯಾಂಬೋರ್ಗಿನಿ ಕಾರ್ ಡ್ರಿಫ್ಟಿಂಗ್ ಪ್ರಕರಣದಲ್ಲಿ ರಿಕ್ಕಿ ರೈ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ ಹೊಸ ವಿವಾದ ಸೃಷ್ಟಿಯಾಗಿದೆ. ಜಾಮೀನು ಪಡೆದು ವಿಚಾರಣೆಗೆ ಹಾಜರಾದ ರಿಕ್ಕಿ ರೈ ಪರ ವಕೀಲ ನಾರಾಯಣಸ್ವಾಮಿ, ಚಾಲಕನ ಸೃಜನಶೀಲತೆಯಿಂದ ಕಾರು ಸ್ಕಿಡ್ ಆಗಿದೆ ಎಂದು ಸಮರ್ಥಿಸಿಕೊಂಡಿದ್ದರು. ರಸ್ತೆ ಇತ್ತೀಚೆಗೆ ದುರಸ್ತಿ ಮಾಡಿದ್ದರಿಂದ ಬ್ರೇಕ್ ಹೊಡೆದಾಗ ನಿಯಂತ್ರಣ ತಪ್ಪಿದೆ ಎಂದೂ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಬೆಂಗಳೂರು ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಗಿ ಪೋಸ್ಟ್ ಮಾಡಿ, ಸೃಜನಶೀಲತೆ ಪ್ರದರ್ಶನಕ್ಕೆ ಸಿಗ್ನಲ್‌ಗಳು ವೇದಿಕೆಯಲ್ಲ…

Read More

Bomb Threat: ವಿಧಾನಸಭಾ ಸ್ಪೀಕರ್​ಗೆ ಬಾಂಬ್ ಬೆದರಿಕೆ, ಮೆಟ್ರೋ ನಿಲ್ದಾಣವನ್ನೂ ಸ್ಫೋಟಿಸುವುದಾಗಿ ಬಂತು ಇ-ಮೇಲ್

ನವದೆಹಲಿ, ಮಾರ್ಚ್​ 24: ದೆಹಲಿ ವಿಧಾನಸಭಾ ಸ್ಪೀಕರ್ ವಿಜೇಂದರ್ ಗುಪ್ತಾ ಅವರಿಗೆ ಬಾಂಬ್ ಬೆದರಿಕೆ(Bomb Threat) ಇ-ಮೇಲ್ ಬಂದಿದೆ. ವಿಧಾನಸಭೆ ಕಟ್ಟಡ ಮತ್ತು ದೆಹಲಿ ಮೆಟ್ರೋ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ದೆಹಲಿ ವಿಧಾನಸಭಾ ಸ್ಪೀಕರ್ ಕಚೇರಿಯ ಪ್ರಕಾರ, ಲೆಫ್ಟಿನೆಂಟ್ ಗವರ್ನರ್ ತರಂಜಿತ್ ಸಿಂಗ್ ಸಂಧು ಅವರಿಗೂ ಬೆದರಿಕೆ ಹಾಕಲಾಗಿದೆ. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಅವರಿಗೂ ಬೆದರಿಕೆ ಹಾಕಲಾಗಿದೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು…

Read More

‘ಧುರಂಧರ್ 2’ ಬ್ಯಾನ್ ಮಾಡಿ, ವಕೀಲನಿಂದ ಹೈಕೋರ್ಟ್​​ಗೆ ಅರ್ಜಿ

ರಣ್ವೀರ್ ಸಿಂಗ್ (Ranveer Singh) ನಟಿಸಿ, ಆದಿತ್ಯ ಧರ್ ನಿರ್ದೇಶನ ಮಾಡಿರುವ ‘ಧುರಂಧರ್ 2’ ಸಿನಿಮಾ ಬಿಡುಗಡೆ ಆಗಿ ಕೆಲ ದಿನಗಳಾಗಿದ್ದು, ಎಲ್ಲೆಡೆ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ಧಕ್ಕುತ್ತಿದೆ. ಕೆಲವೇ ದಿನಗಳಲ್ಲಿ ಸಿನಿಮಾ 500 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಮಲ್ಟಿಪ್ಲೆಕ್ಸ್​​ಗಳಲ್ಲಿ ಬೆಳಿಗಿನಿಂದ ಮಧ್ಯ ರಾತ್ರಿ ವರೆಗೆ ಸತತವಾಗಿ ಶೋಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ಕೆಲವರು ಸಿನಿಮಾ ಬಗ್ಗೆ ಅಸಮಾಧಾನ ಸಹ ವ್ಯಕ್ತಪಡಿಸಿದ್ದಾರೆ. ಆದರೆ ಇದೀಗ ಚೆನ್ನೈನ ವಕೀಲರೊಬ್ಬರು, ಸಿನಿಮಾ ವಿರುದ್ಧ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದು, ಸಿನಿಮಾದ…

Read More

‘ಧುರಂಧರ್ 2’ ಮೂಲಕ ಪ್ರತೀಕಾರ ತೀರಿಸಿಕೊಂಡ ಅರ್ಜುನ್ ರಾಂಪಾಲ್

‘ಧುರಂಧರ್ 2’ ಚಿತ್ರದ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ನಟ ಅರ್ಜುನ್ ರಾಂಪಾಲ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಚಿತ್ರದಲ್ಲಿ ಅರ್ಜುನ್ ಮೇಜರ್ ಇಕ್ಬಾಲ್ ಪಾತ್ರದಲ್ಲಿ ನಟಿಸಿದ್ದಾರೆ. ನಟನಿಗೆ ‘ಧುರಂಧರ್’ ಚಿತ್ರ ಕೇವಲ ಒಂದು ಸಿನಿಮಾ ಮಾತ್ರವಲ್ಲ, 2008 ರಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ಮುಂಬೈ ಮೇಲೆ ನಡೆಸಿದ ದಾಳಿಗೆ ಪ್ರತೀಕಾರವೂ ಆಗಿದೆ. ಮುಂಬೈ ಮೇಲಿನ ದಾಳಿಯಲ್ಲಿ ಅನೇಕ ಜನರು ಪ್ರಾಣ ಕಳೆದುಕೊಂಡರು. ದಾಳಿ ನಡೆದಾಗ ನಟ ಅರ್ಜುನ್ ರಾಂಪಾಲ್ ಎಲ್ಲಿ ಮತ್ತು ಯಾವ ಸ್ಥಿತಿಯಲ್ಲಿದ್ದರು ಎಂಬುದರ…

Read More

Video: ಎಳನೀರಿನ ಗೆರಟೆಯಲ್ಲಿ ಮಗನಿಂದ ಮೂತ್ರ ಮಾಡಿಸಿ ರಸ್ತೆಗೆ ಎಸೆದ ಮಹಿಳೆ

ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗುವ ಕೆಲ ದೃಶ್ಯಗಳನ್ನು ಕಂಡಾಗ ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂದೆನಿಸುವುದು ಸಹಜ. ತಿಳಿದವರೇ ಈ ರೀತಿ ಮಾಡಿದ್ರೆ ಏನು ಅರಿಯದವರೇ ಯಾವ ರೀತಿ ವರ್ತಿಸಬೇಕು. ಇಲ್ಲೊಬ್ಬ ಮಹಿಳೆ (Woman) ನಾಗರಿಕ ಪ್ರಜ್ಞೆ ಮರೆತು ನಡೆದುಕೊಂಡಿದ್ದು, ಎಳನೀರಿನ ಗೆರಟೆಯಲ್ಲಿ ಮಗನಿಂದ ಮೂತ್ರ ಮಾಡಿಸಿ ರಸ್ತೆಗೆ ಎಸೆದಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೇಹಾ (Neha) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಕ್ಲಿಪಿಂಗ್‌ನಲ್ಲಿ ಮಹಿಳೆಯೊಬ್ಬರು ಎಳನೀರು ಕುಡಿದ…

Read More