Category Archives: Blog

Your blog category

ವಾಹನ ಸವಾರರೇ ಗಮನಿಸಿ: ಬೆಂಗಳೂರಿನಲ್ಲಿ ಮತ್ತೆ ಶುರುವಾಗುತ್ತಿದೆ ಟೋಯಿಂಗ್! ದಂಡದ ಮೊತ್ತ ಎಷ್ಟು ಗೊತ್ತೇ?

ವಾಹನ ಸವಾರರೇ ಗಮನಿಸಿ: ಬೆಂಗಳೂರಿನಲ್ಲಿ ಮತ್ತೆ ಶುರುವಾಗುತ್ತಿದೆ ಟೋಯಿಂಗ್! ದಂಡದ ಮೊತ್ತ ಎಷ್ಟು ಗೊತ್ತೇ?

ಬೆಂಗಳೂರು, ಮಾರ್ಚ್ 24: ಬೆಂಗಳೂರು (Bangalore) ನಗರದ ವಾಹನ ಸವಾರರು ಇನ್ನು ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡಿ ಹೋಗುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗಲಿದೆ. 2022ರಲ್ಲಿ ನಿಲ್ಲಿಸಲಾಗಿದ್ದ ಟೋಯಿಂಗ್ ವ್ಯವಸ್ಥೆಯನ್ನು ಇದೀಗ ಮತ್ತೆ ಆರಂಭಿಸಲು ಬೆಂಗಳೂರು ಟ್ರಫಿಕ್ ಪೊಲೀಸರು ನಿರ್ಧರಿಸಿದ್ದಾರೆ. ಮಾರ್ಚ್ 25 ರಿಂದಲೇ ಬೆಂಗಳೂರಿನಲ್ಲಿ ಟೋಯಿಂಗ್ ಪ್ರಕ್ರಿಯೆ ಪುನರಾರಂಭವಾಗುವ ಸಾಧ್ಯತೆ ಇದೆ. ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್ ಮಾಡುತ್ತಿರುವ ಸಮಸ್ಯೆಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಪ್ರತಿ ಪಾಲಿಕೆ ವ್ಯಾಪ್ತಿಗೆ 2 ಟೋಯಿಂಗ್ ವಾಹನಗಳಂತೆ ಒಟ್ಟು 10 ವಾಹನಗಳನ್ನು ಒದಗಿಸಲಾಗಿದೆ.

ಜಿಬಿಎ ಸಹಯೋಗದಲ್ಲಿ ಟೋಯಿಂಗ್ ಕಾರ್ಯಾಚರಣೆ

ಈ ಟೋಯಿಂಗ್ ಕಾರ್ಯಾಚರಣೆ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಸಹಯೋಗದಲ್ಲಿ ನಡೆಯಲಿದ್ದು, ಟೋಯಿಂಗ್ ಕಾರ್ಯಕ್ಕೆ ಅಗತ್ಯ ಸಿಬ್ಬಂದಿಯನ್ನು ಜಿಬಿಎ ವತಿಯಿಂದ ನಿಯೋಜಿಸಲಾಗುತ್ತದೆ. ಸಂಚಾರಿ ಪೊಲೀಸರು ದಂಡ ವಿಧಿಸುವ ಕೆಲಸ ಮಾಡಲಿದ್ದು, ಟೋಯಿಂಗ್ ಕಾರ್ಯವನ್ನು ಜಿಬಿಎ ಸಿಬ್ಬಂದಿ ನಿರ್ವಹಿಸಲಿದ್ದಾರೆ.

ದಂಡ ಮತ್ತು ಟೋಯಿಂಗ್ ಚಾರ್ಜ್ ಎಷ್ಟು?

ನೋ ಪಾರ್ಕಿಂಗ್ ಉಲ್ಲಂಘನೆಗೆ ಈಗಾಗಲೇ 500 ರೂ. ದಂಡ ನಿಗದಿ ಮಾಡಲಾಗಿದೆ. ಇದಕ್ಕೆ ಹೆಚ್ಚುವರಿಯಾಗಿ ವಾಹನಗಳ ಆಧಾರದಲ್ಲಿ ಟೋಯಿಂಗ್ ಚಾರ್ಜ್ ನಿಗದಿಪಡಿಸಲಾಗಿದೆ. ದ್ವಿಚಕ್ರ ವಾಹನಗಳಿಗೆ 650 ರೂ. ಟೋಯಿಂಗ್ ಚಾರ್ಜ್ ನಿಗದಿಪಡಿಸಲಾಗಿದ್ದು, ನಾಲ್ಕು ಚಕ್ರದ ವಾಹನಗಳಿಗೆ 1000 ರೂ. ಟೋಯಿಂಗ್ ಚಾರ್ಜ್ ನಿಗದಿ ಮಾಡಲಾಗಿದೆ.

ಸಿಸಿಟಿವಿ ಮತ್ತು ಬಾಡಿ ವಾರ್ನ್ ಕ್ಯಾಮರಾ ಕಡ್ಡಾಯ

ಹಿಂದಿನಂತೆ ಟೋಯಿಂಗ್ ವೇಳೆ ಸಾರ್ವಜನಿಕರು ಮತ್ತು ಸಿಬ್ಬಂದಿ ನಡುವೆ ಗಲಾಟೆಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ, ಈ ಬಾರಿ ಟೋಯಿಂಗ್ ವಾಹನಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತದೆ. ಜೊತೆಗೆ ಟೋಯಿಂಗ್ ಸಿಬ್ಬಂದಿಗೆ ಬಾಡಿ ವಾರ್ನ್ ಕ್ಯಾಮರಾ ಕಡ್ಡಾಯಗೊಳಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕ ವಾಹನ ಸವಾರರಿಗೆ ಶಾಕ್, ಏಪ್ರಿಲ್ 1 ರಿಂದ ಟೋಲ್ ದರ ಹೆಚ್ಚಳ

ನಗರದಲ್ಲಿ ಅಸಮರ್ಪಕ ಪಾರ್ಕಿಂಗ್ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಂಚಾರ ನಿಯಂತ್ರಣ ಮತ್ತು ಶಿಸ್ತಿನ ಪಾಲನೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮತ್ತೊಂದು ಸಿನಿಮಾ ಮಾಡ್ತಾರಾ ಪವನ್ ಕಲ್ಯಾಣ್? ಸತ್ಯಾಂಶವೇನು?

ಜನಸೇನಾ ಪಕ್ಷದ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಸದ್ಯ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ರಾಜಕೀಯದ ನಡುವೆಯೂ ಮೂರು ಸಿನಿಮಾಗಳನ್ನು ಅವರು ಮುಗಿಸಿದ್ದಾರೆ. ಪವನ್ ಅವರು ಡಿಸಿಎಂ ಆದ ಬಳಿಕ ‘ಹರಿ ಹರ ವೀರ ಮಲ್ಲು’, ‘ಓಜಿ’ ಮತ್ತು ಇತ್ತೀಚೆಗಷ್ಟೆ ಅವರ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳು ಬಿಡುಗಡೆ ಆಗಿವೆ. ಅಸಲಿಗೆ ಈ ಮೂರೂ ಸಿನಿಮಾಗಳನ್ನು ಅವರು ಚುನಾವಣೆಗೆ ಧುಮುಕುವ ಮೊದಲೇ ಒಪ್ಪಿಕೊಂಡಿದ್ದರು. ಇದೀಗ ಪವನ್ ಕಲ್ಯಾಣ್ ಅವರು ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಪವನ್ ಕಲ್ಯಾಣ್ ಅವರು ಡಿಸಿಎಂ ಆಗುವ ಮುಂಚೆ ಒಪ್ಪಿಕೊಂಡಿದ್ದ ಸಿನಿಮಾಗಳನ್ನು ಮುಗಿಸಿ ಆ ನಂತರ ಯಾವುದೂ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದಿದ್ದರು. ಆದರೆ ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿಗಳು ಹರಿದಾಡಲು ಆರಂಭಿಸಿವೆ. ಇದು ಅಭಿಮಾನಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಇದೀಗ ಪವನ್ ಕಲ್ಯಾಣ್ ತಂಡದವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಪವನ್ ಕಲ್ಯಾಣ್ ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ ಎಂದಿದ್ದಾರೆ. ಪವನ್ ಕಲ್ಯಾಣ್ ಅವರು ಹೊಸ ನಿರ್ದೇಶಕರೊಂದಿಗೆ ಸಿನಿಮಾ ಮಾಡಲಿದ್ದಾರೆ ಮತ್ತು ಕೆಲವು ದೊಡ್ಡ ಬ್ಯಾನರ್‌ಗಳ ಅಡಿಯಲ್ಲಿ ಚಿತ್ರಗಳಿಗೆ ಒಪ್ಪಿಗೆ ನೀಡಿದ್ದಾರೆ ಎಂಬ ಸುದ್ದಿಗಳು ಹರಡಿದ್ದವು. ಆದರೆ, ಸದ್ಯಕ್ಕೆ ಅವರು ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ ಎಂದು ಅವರ ತಂಡ ಸ್ಪಷ್ಟಪಡಿಸಿದೆ.

ಇದನ್ನೂ ಓದಿ:ಶ್ರೀಲೀಲಾ ಜೊತೆ ಕಾಣಿಸಿಕೊಳ್ಳುವುದು ಇಷ್ಟವಿಲ್ಲ ಎಂದ ಪವನ್ ಕಲ್ಯಾಣ್: ಕಾರಣ?

ಪವನ್ ಕಲ್ಯಾಣ್ ಅವರು ಈ ಮೊದಲೇ ಒಪ್ಪಿಕೊಂಡಿದ್ದ ಕಾರಣಕ್ಕಾಗಿ ಮಾತ್ರವೇ ‘ಹರಿ ಹರ ವೀರ ಮಲ್ಲು’ ‘OG’ ಮತ್ತು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳನ್ನು ತಮ್ಮ ರಾಜಕೀಯದ ಜವಾಬ್ದಾರಿಗಳ ನಡುವೆಯೂ ಮುಗಿಸಿಕೊಟ್ಟಿದ್ದಾರೆ. ಆದರೆ ಇನ್ನು ಮುಂದೆ ಪವನ್ ಕಲ್ಯಾಣ್ ಅವರು ಸಂಪೂರ್ಣವಾಗಿ ಆಡಳಿತದಲ್ಲಿಯೇ ತೊಡಗಿಕೊಳ್ಳಲಿದ್ದಾರೆ ಎಂದು ಅವರ ಆಪ್ತವಲಯ ಸ್ಪಷ್ಟಪಡಿಸಿದೆ.

ಉಪಮುಖ್ಯಮಂತ್ರಿಯಾಗಿ ರಾಜ್ಯದ ಜವಾಬ್ದಾರಿಗಳನ್ನು ನಿಭಾಯಿಸುತ್ತಿರುವುದರಿಂದ, ಸಿನಿಮಾಗಳಿಗೆ ಸಮಯ ಮೀಸಲಿಡುವುದು ಅವರಿಗೆ ಸವಾಲಾಗಿದೆ. ಯಾವುದೇ ಅಧಿಕೃತ ಘೋಷಣೆ ಹೊರಬರುವವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವದಂತಿಗಳನ್ನು ನಂಬಬೇಡಿ ಎಂದು ಪವನ್ ಅವರ ತಂಡ ಅಭಿಮಾನಿಗಳಲ್ಲಿ ವಿನಂತಿಸಿದೆ. ಪವನ್ ನಟಿಸಿದ್ದ ‘ಓಜಿ’ ಸಿನಿಮಾದ ಸೀಕ್ವೆಲ್​​ನಲ್ಲಿ ನಟಿಸುವ ಆಸೆ ಅವರಿಗೆ ಇದ್ದು, ಒಂದೊಮ್ಮೆ ಪವನ್ ಕಲ್ಯಾಣ್ ಮುಂದಿನ ದಿನಗಳಲ್ಲಿ ನಟಿಸಿದರೆ ‘ಓಜಿ’ ಸಿನಿಮಾದ ಸೀಕ್ವೆಲ್ ಮಾತ್ರವೇ ಆಗಿರಲಿದೆ ಎನ್ನಲಾಗುತ್ತಿದೆ. ಆದರೆ ಪ್ರಸ್ತುತ ಅವರು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ತೆಲುಗಿಗೆ ಹೊರಟ ಕಿರಣ್​ ರಾಜ್, ನಮ್ರತಾ, ಭವ್ಯಾ

‘ಕರ್ಣ’ ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರ ಕಂಡು ಗಮನ ಸೆಳೆದಿದೆ. ಈಗ ಈ ಧಾರಾವಾಹಿ ತೆಲುಗಿಗೆ ಡಬ್ ಆಗಿದೆ. ಜೀ ತೆಲುಗಿನಲ್ಲಿ ಸೀರಿಯಲ್ ಪ್ರಸಾರ ಕೂಡ ಆರಂಭಿಸಿದೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ. ಕಿರಣ್ ರಾಜ್, ನಮ್ರತಾ ಗೌಡ ಹಾಗೂ ಭವ್ಯಾ ಗೌಡ ಇನ್ನು ತೆಲುಗು ವೀಕ್ಷಕರಿಗೂ ಪರಿಚಯಗೊಳ್ಳಲಿದ್ದಾರೆ. ಕನ್ನಡದಲ್ಲಿ ಧಾರಾವಾಹಿ ನಂಬರ್ 1 ಸ್ಥಾನದಲ್ಲಿದೆ. ಇನ್ನು ಪರಭಾಷೆಯ ಜನರು ಇದನ್ನು ಹೇಗೆ ಸ್ವಾಗತಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ಕೇಸ್: ಡ್ರೈವರ್ ಟ್ಯಾಲೆಂಟ್ ಮೆಚ್ಚಬೇಕೆಂದ ಲಾಯರ್!

ಬೆಂಗಳೂರು, ಮಾರ್ಚ್ 24: ಬೆಂಗಳೂರಿನ ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ನಡೆದ ಲಂಬೋರ್ಗಿನಿ ಕಾರ್ ಡ್ರಿಫ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ, ರಿಕ್ಕಿ ರೈ ಪರ ವಕೀಲ ನಾರಾಯಣ ಸ್ವಾಮಿ ಜಿ. ಸ್ಪಷ್ಟನೆ ನೀಡಿದ್ದಾರೆ. ಈ ಘಟನೆ ಉದ್ದೇಶಪೂರ್ವಕ ಡ್ರಿಫ್ಟಿಂಗ್ ಆಗಿರದೆ, ಕಾರಿನ ಬ್ರೇಕ್ ಸಮಸ್ಯೆಯಿಂದ ಅಥವಾ ರಸ್ತೆಯ ಮರಳಿನ ಕಾರಣದಿಂದ ಉಂಟಾದ ಆಕಸ್ಮಿಕ ಸ್ಕಿಡ್ ಆಗಿದೆ ಎಂದು ಅವರು ತಿಳಿಸಿದ್ದಾರೆ. ಘಟನೆ ನಡೆದ ರಾತ್ರಿ ರಿಕ್ಕಿ ರೈ ಕಾರಿನಲ್ಲಿದ್ದರು. ಆದರೆ, ಅವರು ರಷ್ಯಾದಿಂದ ಭಾರತಕ್ಕೆ ಬಂದ ಕೇವಲ ಎರಡು ದಿನಗಳ ನಂತರ ಈ ಘಟನೆ ಸಂಭವಿಸಿದೆ. ಕಾರು ಸರ್ವೀಸ್‌ನಿಂದ ಹಿಂದಿರುಗಿಸುವಾಗ ಡ್ರೈವರ್ ಇದನ್ನು ಚಲಾಯಿಸುತ್ತಿದ್ದರು ಎಂದು ವಕೀಲರು ಸ್ಪಷ್ಟಪಡಿಸಿದ್ದಾರೆ.

ರಿಕ್ಕಿ ರೈ ಕಾರಿನಲ್ಲಿದ್ದರು. ಆದರೆ, ಅವರು ಚಲಾಯಿಸುತ್ತಿರಲಿಲ್ಲ. ಆಕಸ್ಮಿಕವಾಗಿ ಕಾರು ಸ್ಕಿಡ್ ಆದಾಗ ಚಾಲಕ ಅದನ್ನು ನಿಯಂತ್ರಿಸಿ ಕಾರು ನಿಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಕಾರು ಡ್ರೈವರ್​​ನ ಟ್ಯಾಲೆಂಟ್ ಮೆಚ್ಚಬೇಕು ಎಂದು ವಕೀಲರು ಹೇಳಿದ್ದಾರೆ. ಆದರೆ, ಲಾಯರ್ ಈ ಹೇಳಿಕೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್​ಗೆ ಗುರಿಯಾಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಸ್ಟಿಯವರ ಜಮೀನಿನಲ್ಲಿ ಎಸ್ಸಿ ಯುವಕ ನೀರು ಕುಡಿದಿದ್ದಕ್ಕೆ ಭಾರೀ ಗಲಾಟೆ; 24 ಮಂದಿಗೆ ಗಾಯ!

ಗದಗ, ಮಾರ್ಚ್​ 24: ಇಂದಿಗೂ ಸಮಾಜದಲ್ಲಿ ಜಾತಿಯಲ್ಲಿ ಮೇಲು ಕೀಳು ಎಂಬ ಭಾವನೆ ಜೀವಂತವಾಗಿದೆ ಎನ್ನುವುದಕ್ಕೆ ಹಲವು ಉದಾಹರಣೆಗಳು ಕಂಡು ಬಂದಿವೆ. ಈ ಹಿಂದೆಯೂ ಜಾತಿ ವಿಷಯಕ್ಕೆ, ಅಸ್ಪರ್ಷತೆ ವಿಚಾರಕ್ಕೆ ಸವರ್ಣೀಯರು ದಲಿತರನ್ನು ನಿಂದಿಸಿದ, ಅವರೊಂದಿಗೆ ಹೊಡೆದಾಟಕ್ಕಿಳಿದ (caste conflict) ನಿದರ್ಶನಗಳಿವೆ. ಆದರೆ ಎಸ್ಟಿಯವರ ಜಮೀನಿನಲ್ಲಿ ಎಸ್ಸಿ ಯುವಕ ನೀರು ಕುಡಿದ ಎಂಬ ವಿಚಾರಕ್ಕೆ ಮಾರಾಮಾರಿ ನಡೆದಿದ್ದು, 24 ಜನರು ಗಾಯಗೊಂಡ ಘಟನೆ ಗದಗ (Gadag) ಜಿಲ್ಲೆಯ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ನಡೆದಿದೆ.

ಕೊಡ್ಲಿ, ಕಲ್ಲಿನಿಂದ ಹೊಡೆದುಕೊಂಡವರು ಜಿಮ್ಸ್ ಆಸ್ಪತ್ರೆಗೆ

ಎಸ್ಟಿ ಸಮುದಾಯದ ಜಮೀನಿನಲ್ಲಿ ಎಸ್ಸಿ ಸಮುದಾಯದ ಯುವಕ ನೀರು ಕುಡಿದ ವಿಚಾರಕ್ಕೆ ಉದ್ಭವಿಸಿದ ವಾಗ್ವಾದ ತೀವ್ರಗೊಂಡು, ಎರಡೂ ಸಮುದಾಯಗಳ ನಡುವೆ ಹೊಡೆದಾಟ ನಡೆದಿದೆ. ಕೊಡ್ಲಿ, ಬಡಿಗೆ ಮತ್ತು ಕಲ್ಲುಗಳನ್ನು ಬಳಸಿಕೊಂಡು ಒಬ್ಬರ ಮೇಲೊಬ್ಬರು ನಡೆಸಿದ ದಾಳಿಯಲ್ಲಿ ಎಸ್ಸಿ ಸಮುದಾಯದ ಮಹಿಳೆಯರು ಸೇರಿ ಒಟ್ಟು 24 ಮಂದಿ ಗಾಯಗೊಂಡಿದ್ದು, ಮೂವರ ತಲೆಗೆ ಗಂಭೀರ ಗಾಯಗಳಾಗಿವೆ. ಹಲವರಿಗೆ ಕೈ-ಕಾಲು ಮುರಿದಿದ್ದು, ಇನ್ನೂ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯ ಮೂರು ವಾರ್ಡ್‌ಗಳಿಗೆ ಪೊಲೀಸರು ಕಟ್ಟು ನಿಟ್ಟಿನ ಭದ್ರತೆ ಒದಗಿಸಿದ್ದಾರೆ.

ಇದನ್ನೂ ಓದಿ ಕೆಐಎಡಿಬಿ ಕಚೇರಿಯಲ್ಲಿ 16 ಕೋಟಿ ಲೂಟಿ! ಗುತ್ತಿಗೆ ನೌಕರ ಸೇರಿ ಏಳು ಮಂದಿ ಮೇಲೆ ಎಫ್ಐಆರ್

ಗಲಾಟೆಗೆ ಹಳೆಯ ವೈಷಮ್ಯವೂ ಕಾರಣವಿರಬಹುದಾ?

ಇನ್ನೊಂದೆಡೆ, ಎಸ್ಟಿ ಸಮುದಾಯದ ಒಂಬತ್ತು ಮಂದಿ ಗಾಯಗೊಂಡಿದ್ದು, ಮುಂಡರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಹಳೆಯ ವೈಷಮ್ಯವೂ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿದ ಎಸಿ ಗಂಗಪ್ಪ ಗಾಯಾಳುಗಳ ಆರೋಗ್ಯ ವಿಚಾರಿಸಿ, ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಸದ್ಯ ಪರಿಸ್ಥಿತಿ ಶಾಂತವಾಗಿದ್ದು, ಶಾಂತಿ ಸಭೆ ನಡೆಸಲು ಜಿಲ್ಲಾಡಳಿತ ಮುಂದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಬಂದರೋ ಬಂದರೋ ಭಾವ ಬಂದರೋ’ ಎಂದು ರಿಕ್ಕಿ ರೈ ಲಾಯರ್ ಕಾಲೆಳೆದ ಪೊಲೀಸರು!

ಬೆಂಗಳೂರು, ಮಾರ್ಚ್​ 24: ಲ್ಯಾಂಬೋರ್ಗಿನಿ ಕಾರ್ ಡ್ರಿಫ್ಟಿಂಗ್ ಪ್ರಕರಣದಲ್ಲಿ ರಿಕ್ಕಿ ರೈ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ ಹೊಸ ವಿವಾದ ಸೃಷ್ಟಿಯಾಗಿದೆ. ಜಾಮೀನು ಪಡೆದು ವಿಚಾರಣೆಗೆ ಹಾಜರಾದ ರಿಕ್ಕಿ ರೈ ಪರ ವಕೀಲ ನಾರಾಯಣಸ್ವಾಮಿ, ಚಾಲಕನ ಸೃಜನಶೀಲತೆಯಿಂದ ಕಾರು ಸ್ಕಿಡ್ ಆಗಿದೆ ಎಂದು ಸಮರ್ಥಿಸಿಕೊಂಡಿದ್ದರು. ರಸ್ತೆ ಇತ್ತೀಚೆಗೆ ದುರಸ್ತಿ ಮಾಡಿದ್ದರಿಂದ ಬ್ರೇಕ್ ಹೊಡೆದಾಗ ನಿಯಂತ್ರಣ ತಪ್ಪಿದೆ ಎಂದೂ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಬೆಂಗಳೂರು ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಗಿ ಪೋಸ್ಟ್ ಮಾಡಿ, ಸೃಜನಶೀಲತೆ ಪ್ರದರ್ಶನಕ್ಕೆ ಸಿಗ್ನಲ್‌ಗಳು ವೇದಿಕೆಯಲ್ಲ ಎಂದು ಟೀಕಿಸಿದ್ದಾರೆ. ಜೊತೆಗೆ “ಬಂದರೋ ಬಂದರೋ ಭಾವ ಬಂದರೋ” ಎಂದು ಕಾಲೆಳೆದಿದ್ದಾರೆ. ಈ ಪೋಸ್ಟ್ ಇದೀಗ ವೈರಲ್ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Bomb Threat: ವಿಧಾನಸಭಾ ಸ್ಪೀಕರ್​ಗೆ ಬಾಂಬ್ ಬೆದರಿಕೆ, ಮೆಟ್ರೋ ನಿಲ್ದಾಣವನ್ನೂ ಸ್ಫೋಟಿಸುವುದಾಗಿ ಬಂತು ಇ-ಮೇಲ್

ನವದೆಹಲಿ, ಮಾರ್ಚ್​ 24: ದೆಹಲಿ ವಿಧಾನಸಭಾ ಸ್ಪೀಕರ್ ವಿಜೇಂದರ್ ಗುಪ್ತಾ ಅವರಿಗೆ ಬಾಂಬ್ ಬೆದರಿಕೆ(Bomb Threat) ಇ-ಮೇಲ್ ಬಂದಿದೆ. ವಿಧಾನಸಭೆ ಕಟ್ಟಡ ಮತ್ತು ದೆಹಲಿ ಮೆಟ್ರೋ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ದೆಹಲಿ ವಿಧಾನಸಭಾ ಸ್ಪೀಕರ್ ಕಚೇರಿಯ ಪ್ರಕಾರ, ಲೆಫ್ಟಿನೆಂಟ್ ಗವರ್ನರ್ ತರಂಜಿತ್ ಸಿಂಗ್ ಸಂಧು ಅವರಿಗೂ ಬೆದರಿಕೆ ಹಾಕಲಾಗಿದೆ. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಅವರಿಗೂ ಬೆದರಿಕೆ ಹಾಕಲಾಗಿದೆ.

ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರಿಗೂ ಬೆದರಿಕೆ ಹಾಕಲಾಗಿದೆ. ಸ್ಪೀಕರ್ ವಿಜೇಂದರ್ ಗುಪ್ತಾ ಅವರಿಗೆ ಬೆಳಗ್ಗೆ 7.49 ಕ್ಕೆ ಇಮೇಲ್ ಬಂದಿದ್ದು, ವಿಧಾನಸಭೆಗೆ ಬೆಳಗ್ಗೆ 7.28 ಕ್ಕೆ ಇಮೇಲ್ ಬಂದಿತು.ಬೆದರಿಕೆ ಕರೆ ಬಂದ ನಂತರ, ಭದ್ರತಾ ಸಿಬ್ಬಂದಿ ವಿಧಾನಸಭೆ ಸ್ಪೀಕರ್ ಕೊಠಡಿಗೆ ತೆರಳಿ ತನಿಖೆ ನಡೆಸಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಇಮೇಲ್‌ ನಲ್ಲಿ ಸರಣಿ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ದೆಹಲಿ ವಿಧಾನಸಭೆ ದೆಹಲಿ ಅಸೆಂಬ್ಲಿ, ಸಚಿವಾಲಯ, ಕೆಂಪುಕೋಟೆ ಮತ್ತು ಎರಡು ಶಾಲೆಗಳು ಸೇರಿದಂತೆ ಹಲವು ಸಂಸ್ಥೆಗಳಿಗೆ ಇಂದು ಬೆಳಗ್ಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಭದ್ರತಾ ಪಡೆಗಳು ತೀವ್ರ ತಪಾಸಣೆ ನಂತರ ಅದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ದೃಢಪಟ್ಟಿತ್ತು.

ಮತ್ತಷ್ಟು ಓದಿ: ಮುಂಬೈನಲ್ಲಿರುವ ಮಹಾರಾಷ್ಟ್ರ ವಿಧಾನ ಭವನಕ್ಕೆ ಬಾಂಬ್ ಬೆದರಿಕೆ

ಕೆಲವು ದುಷ್ಕರ್ಮಿಗಳು ಬಾಂಬ್ ಬೆದರಿಕೆ ಸಂದೇಶ ಕಳುಹಿಸಿಸಲು ಬಳಸಿದ ಐಪಿ ವಿಳಾಸ ಪತ್ತೆಗಾಗಿ ಸೈಬರ್ ತಂಡಗಳು ಪ್ರಯತ್ನಿಸುತ್ತಿವೆ. ಅಂತಹ ಅಪರಾಧಿಗಳು ಪೋಲೀಸ್ ತನಿಖೆಯನ್ನು ದಾರಿ ತಪ್ಪಿಸಲು ಇಮೇಲ್‌ ಕಳುಹಿಸಲು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ (VPN) ಬಳಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

‘ಧುರಂಧರ್ 2’ ಬ್ಯಾನ್ ಮಾಡಿ, ವಕೀಲನಿಂದ ಹೈಕೋರ್ಟ್​​ಗೆ ಅರ್ಜಿ

ರಣ್ವೀರ್ ಸಿಂಗ್ (Ranveer Singh) ನಟಿಸಿ, ಆದಿತ್ಯ ಧರ್ ನಿರ್ದೇಶನ ಮಾಡಿರುವ ‘ಧುರಂಧರ್ 2’ ಸಿನಿಮಾ ಬಿಡುಗಡೆ ಆಗಿ ಕೆಲ ದಿನಗಳಾಗಿದ್ದು, ಎಲ್ಲೆಡೆ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ಧಕ್ಕುತ್ತಿದೆ. ಕೆಲವೇ ದಿನಗಳಲ್ಲಿ ಸಿನಿಮಾ 500 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಮಲ್ಟಿಪ್ಲೆಕ್ಸ್​​ಗಳಲ್ಲಿ ಬೆಳಿಗಿನಿಂದ ಮಧ್ಯ ರಾತ್ರಿ ವರೆಗೆ ಸತತವಾಗಿ ಶೋಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ಕೆಲವರು ಸಿನಿಮಾ ಬಗ್ಗೆ ಅಸಮಾಧಾನ ಸಹ ವ್ಯಕ್ತಪಡಿಸಿದ್ದಾರೆ. ಆದರೆ ಇದೀಗ ಚೆನ್ನೈನ ವಕೀಲರೊಬ್ಬರು, ಸಿನಿಮಾ ವಿರುದ್ಧ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದು, ಸಿನಿಮಾದ ಮೇಲೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿದ್ದಾರೆ.

ವಕೀಲರೊಬ್ಬರು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸುಶ್ರುತ್ ಅರವಿಂದ್ ಧರ್ಮಾಧಿಕಾರಿ ಮತ್ತು ನ್ಯಾಯಮೂರ್ತಿ ಜಿ ಅರುಳ್ ಮುರುಗನ್ ಅವರನ್ನೊಳಗೊಂಡ ಪೀಠದ ಮುಂದೆ ಈ ಅರ್ಜಿ ಸಲ್ಲಿಸಿ, ವಾದ ಮಂಡಿಸಿದ್ದು. ‘ಧುರಂಧರ್ 2’ ಸಿನಿಮಾವು ರಾಜಕೀಯ ವಿಷಯಗಳನ್ನು ಒಳಗೊಂಡಿದ್ದು, ಚುನಾವಣಾ ಸಮಯದಲ್ಲಿ ಇದು ಮತದಾರರ ಮೇಲೆ ಪ್ರಭಾವ ಬೀರಬಹುದು ಎಂದು ಅರ್ಜಿದಾರರು ವಾದಿಸಿದ್ದಾರೆ.

ತಮಿಳುನಾಡಿನಲ್ಲಿ ಚುನಾವಣೆ ಘೋಷಣೆ ಆಗಿದ್ದು ಏಪ್ರಿಲ್ 23 ರಂದು ಮತದಾನ ನಡೆಯಲಿದೆ. ಪ್ರಸ್ತುತ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಇಂತಹ ಸಂದರ್ಭದಲ್ಲಿ ರಾಜಕೀಯ ಪ್ರೇರಿತ ಅಥವಾ ವಿವಾದಾತ್ಮಕ ವಿಷಯಗಳಿರುವ ಚಿತ್ರಗಳ ಬಿಡುಗಡೆಯು ನೀತಿ ಸಂಹಿತೆಯ ಉಲ್ಲಂಘನೆಯಾಗಬಹುದು ಎಂಬುದು ಅರ್ಜಿದಾರ ವಾದವಾಗಿದೆ. ಅರ್ಜಿದಾರರ ಮೌಖಿಕ ಮನವಿಯನ್ನು ಆಲಿಸಿದ ನ್ಯಾಯಪೀಠವು, ಈ ವಿಷಯದ ಕುರಿತು ಅಧಿಕೃತ ರಿಟ್ ಅರ್ಜಿಯನ್ನು ಸಲ್ಲಿಸುವಂತೆ ಸೂಚಿಸಿದೆ. ಅರ್ಜಿ ಸಲ್ಲಿಕೆಯಾದ ನಂತರವಷ್ಟೇ ಇದರ ತುರ್ತು ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.

ಇದನ್ನೂ ಓದಿ:ಮತ್ತೆ ಬಂತು ಬೆದರಿಕೆ: ರಣ್ವೀರ್ ಸಿಂಗ್-ದೀಪಿಕಾಗೆ ಭದ್ರತೆ ಹೆಚ್ಚಳ

ಚುನಾವಣಾ ಸಮಯದಲ್ಲಿ ರಾಜಕೀಯ ಸಂವೇದನಾಶೀಲ ವಿಷಯಗಳಿರುವ ಚಲನಚಿತ್ರಗಳು ಹೆಚ್ಚಾಗಿ ಕಾನೂನು ಹೋರಾಟಗಳನ್ನು ಎದುರಿಸುತ್ತವೆ. ಮದ್ರಾಸ್ ಹೈಕೋರ್ಟ್ ಈ ಅರ್ಜಿಯನ್ನು ಅಧಿಕೃತವಾಗಿ ಸ್ವೀಕರಿಸಿದ ನಂತರ ಚಿತ್ರದ ಭವಿಷ್ಯ ನಿರ್ಧರವಾಗಲಿದೆ. ಇದೇ ರೀತಿಯ ವಿವಾದವು ನಟ ವಿಜಯ್ ಅವರ ‘ಜನನಾಯಕನ್’ ಚಿತ್ರಕ್ಕೂ ಎದುರಾಗಿದೆ. ಸೆನ್ಸಾರ್ ಮಂಡಳಿಯು ಈ ಚಿತ್ರದ ಪ್ರಮಾಣಪತ್ರವನ್ನು ತಡೆಹಿಡಿದಿದ್ದು, ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಪರಿಶೀಲನೆಗಾಗಿ ಭಾರತೀಯ ಚುನಾವಣಾ ಆಯೋಗಕ್ಕೆ ಕಳುಹಿಸಿದೆ.

ಆದಿತ್ಯ ಧರ್ ನಿರ್ದೇಶನದ ಈ ಚಿತ್ರವು ಕರಾಚಿಯ ಲಿಯಾರಿ ಎಂಬ ಭೂಗತ ಜಗತ್ತಿನ ಹಿನ್ನೆಲೆಯಲ್ಲಿ ನಡೆಯುವ ಕಥೆಯಾಗಿದೆ. ಸಿನಿಮಾನಲ್ಲಿ ರಣವೀರ್ ಸಿಂಗ್, ಮಾಧವನ್ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭಾರತದ ಸೈನಿಕನೊಬ್ಬ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಉಗ್ರರನ್ನು ಸೆದೆ ಬಡಿಯುವ ಕತೆಯನ್ನು ಒಳಗೊಂಡಿದೆ. ‘ಧುರಂಧರ್ 2’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದ್ದು, ಬಿಡುಗಡೆಯಾದ ಮೊದಲ ನಾಲ್ಕು ದಿನಗಳಲ್ಲೇ ವಿಶ್ವದಾದ್ಯ ಸುಮಾರು 750 ಕೋಟಿಗೂ ಹೆಚ್ಚು ಮೊತ್ತ ಗಳಿಸಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್ 2’ ಮೂಲಕ ಪ್ರತೀಕಾರ ತೀರಿಸಿಕೊಂಡ ಅರ್ಜುನ್ ರಾಂಪಾಲ್

‘ಧುರಂಧರ್ 2’ ಚಿತ್ರದ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ನಟ ಅರ್ಜುನ್ ರಾಂಪಾಲ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಚಿತ್ರದಲ್ಲಿ ಅರ್ಜುನ್ ಮೇಜರ್ ಇಕ್ಬಾಲ್ ಪಾತ್ರದಲ್ಲಿ ನಟಿಸಿದ್ದಾರೆ. ನಟನಿಗೆ ‘ಧುರಂಧರ್’ ಚಿತ್ರ ಕೇವಲ ಒಂದು ಸಿನಿಮಾ ಮಾತ್ರವಲ್ಲ, 2008 ರಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ಮುಂಬೈ ಮೇಲೆ ನಡೆಸಿದ ದಾಳಿಗೆ ಪ್ರತೀಕಾರವೂ ಆಗಿದೆ. ಮುಂಬೈ ಮೇಲಿನ ದಾಳಿಯಲ್ಲಿ ಅನೇಕ ಜನರು ಪ್ರಾಣ ಕಳೆದುಕೊಂಡರು. ದಾಳಿ ನಡೆದಾಗ ನಟ ಅರ್ಜುನ್ ರಾಂಪಾಲ್ ಎಲ್ಲಿ ಮತ್ತು ಯಾವ ಸ್ಥಿತಿಯಲ್ಲಿದ್ದರು ಎಂಬುದರ ಬಗ್ಗೆ ನಟ ಹೇಳಿದ್ದಾರೆ. ಅಷ್ಟೇ ಅಲ್ಲ, ದಾಳಿಯ 17 ವರ್ಷಗಳ ನಂತರ ರಾಂಪಾಲ್ ಈ ಬಗ್ಗೆ ಮಾತನಾಡಿದ್ದಾರೆ.

ಭಾನುವಾರ ನಡೆದ ಸಮಾರಂಭದಲ್ಲಿ ಅರ್ಜುನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ, ಅರ್ಜುನ್ ಮಾತನಾಡಿದರು. ‘2008ರ ಮುಂಬೈ ದಾಳಿ ಸಮಯದಲ್ಲಿ , ನನ್ನ ಸ್ನೇಹಿತ ತಡವಾಗಿ ಬರದಿದ್ದರೆ ನಾನು ತಾಜ್ ಹೋಟೆಲ್‌ನಲ್ಲಿ ಇರುತ್ತಿದ್ದೆ. ಆ ದಿನ ನನ್ನ ಹುಟ್ಟುಹಬ್ಬ. ನನ್ನ ಹುಟ್ಟುಹಬ್ಬವನ್ನು ಆಚರಿಸಲು ನಾನು ನನ್ನ ಸ್ನೇಹಿತರೊಂದಿಗೆ ತಾಜ್ ಹೋಟೆಲ್‌ಗೆ ಹೋಗುತ್ತಿದ್ದೆ. ಆದರೆ ಒಬ್ಬ ಸ್ನೇಹಿತ ತಡವಾಗಿ ಬಂದ. ಅವನಿಗೆ ದೇವರು ಒಳ್ಳೆಯದು ಮಾಡಲಿ. ಉಳಿದವರು ಬಾರ್‌ನಲ್ಲಿ ಕುಳಿತು ಅವನಿಗಾಗಿ ಕಾಯುತ್ತಿದ್ದೆವು. ನಾವು ಪಾನೀಯವನ್ನು ಆರ್ಡರ್ ಮಾಡಿದೆವು. ನಂತರ ಮಾಹಿಮ್ ಬಳಿ ದೊಡ್ಡ ಬಾಂಬ್ ಸ್ಫೋಟಿಸಿತು’ ಎಂದಿದ್ದಾರೆ ಅವರು.

‘ನಾವು ಆ ಶಬ್ದವನ್ನು ಕೇಳಿದ್ದೆವು. 10 ನಿಮಿಷಗಳಲ್ಲಿ ನಮ್ಮ ಫೋನ್‌ಗಳು ರಿಂಗಣಿಸಲು ಪ್ರಾರಂಭಿಸಿದವು ಮತ್ತು ಯಾರೋ ಹೇಳಿದರು, ಕೊಲಾಬಾದಲ್ಲಿ ಗ್ಯಾಂಗ್ ವಾರ್ ನಡೆಯುತ್ತಿದೆ. ಇಡೀ ‘ಫೋರ್ ಸೀಸನ್ಸ್’ ಹೋಟೆಲ್ ಅನ್ನು 20-30 ನಿಮಿಷಗಳ ಕಾಲ ಸುತ್ತುವರೆದರು… ನಂತರ ಆದರ್ಶ್ ಜಟಿಯಾ ನಮಗೆ, ‘ನೀವು ಇಂದು ರಾತ್ರಿ ಇಲ್ಲೇ ಇರಿ… ಆದ್ದರಿಂದ ನಾವು ಯಾರನ್ನೂ ಹೊರಗೆ ಹೋಗಲು ಬಿಡಲಿಲ್ಲ. ನನ್ನ ಹುಟ್ಟುಹಬ್ಬದಂದು ಈ ಭಯಾನಕ ದಾಳಿ ನಡೆಯುವುದನ್ನು ನಾನು ಹೀಗೆ ನೋಡಿದೆ’ ಎಂದು ನಟ ಕೂಡ ಹೇಳಿದರು.

ಇದನ್ನೂ ಓದಿ: ‘ಧುರಂಧರ್ 2’ ಎಫೆಕ್ಟ್​​: ಪಾಕ್​​ನಲ್ಲಿ ಭಾರತೀಯ ಸ್ಪೈಗಾಗಿ ಹುಡುಕಾಟ? ವಿಡಿಯೋ ವೈರಲ್

‘ನಾನು ಖಂಡಿತವಾಗಿಯೂ ಈ ಸೇಡು ತೀರಿಸಿಕೊಳ್ಳುತ್ತೇನೆ ಎಂದು ನನಗೆ ತಿಳಿದಿತ್ತು ಮತ್ತು ನಾನು ಧುರಂಧರ್ ಚಿತ್ರದಲ್ಲಿಯೂ ಅದನ್ನೇ ಮಾಡಿದ್ದೇನೆ.ಮತ್ತು ಈಗ ಮಾತ್ರ ನಾನು ಭಾರತ್ ಮಾತಾ ಕಿ ಜೈ ಎಂದು ಹೇಳುತ್ತೇನೆ’ ಎನ್ನುತ್ತಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

Video: ಎಳನೀರಿನ ಗೆರಟೆಯಲ್ಲಿ ಮಗನಿಂದ ಮೂತ್ರ ಮಾಡಿಸಿ ರಸ್ತೆಗೆ ಎಸೆದ ಮಹಿಳೆ

ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗುವ ಕೆಲ ದೃಶ್ಯಗಳನ್ನು ಕಂಡಾಗ ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂದೆನಿಸುವುದು ಸಹಜ. ತಿಳಿದವರೇ ಈ ರೀತಿ ಮಾಡಿದ್ರೆ ಏನು ಅರಿಯದವರೇ ಯಾವ ರೀತಿ ವರ್ತಿಸಬೇಕು. ಇಲ್ಲೊಬ್ಬ ಮಹಿಳೆ (Woman) ನಾಗರಿಕ ಪ್ರಜ್ಞೆ ಮರೆತು ನಡೆದುಕೊಂಡಿದ್ದು, ಎಳನೀರಿನ ಗೆರಟೆಯಲ್ಲಿ ಮಗನಿಂದ ಮೂತ್ರ ಮಾಡಿಸಿ ರಸ್ತೆಗೆ ಎಸೆದಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೇಹಾ (Neha) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಕ್ಲಿಪಿಂಗ್‌ನಲ್ಲಿ ಮಹಿಳೆಯೊಬ್ಬರು ಎಳನೀರು ಕುಡಿದ ಬಳಿಕ ಉಳಿಯುವ ಗೆರಟೆಯಲ್ಲಿ ಮಗನಿಂದ ಮೂತ್ರ ಮಾಡಿಸಿದ್ದಾರೆ. ಆ ಬಳಿಕ ಈ ಗೆರಟೆಯನ್ನು ರಸ್ತೆಗೆ ಎಸೆದಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮೊದಲ ಬಾರಿಗೆ ಆನ್ಲೈನ್ ಪೇಮೆಂಟ್ ಮಾಡಿ ಗೆದ್ದಂತೆ ಸಂಭ್ರಮಿಸಿದ ಮಹಿಳೆ

ಈ ವಿಡಿಯೋ ಏಳು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ, ಭಾರತೀಯ ತಾಯಿ ಎಂದರೆ, ಮತ್ತೊಬ್ಬರು, ನಾಗರಿಕ ಪ್ರಜ್ಞೆಯ ಕೊರತೆ ಎದ್ದು ಕಾಣುತ್ತಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಪ್ರತಿಯೊಂದು ಸಮಸ್ಯೆಗೆ ಪರಿಹಾರ ಕಂಡುಹಿಡಿಯೋದರಲ್ಲಿ ಭಾರತೀಯ ಹೆಣ್ಣು ಮಕ್ಕಳು ಎತ್ತಿದ ಕೈ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

Source link