Category Archives: Blog

Your blog category

ಬೆಂಗಳೂರು ಮ್ಯಾಚ್ ಬಗ್ಗೆ ಆರ್‌ಸಿಬಿ ಬಿಗ್ ಅಪ್‌ಡೇಟ್: ಟಿಕೆಟ್ ಬುಕಿಂಗ್ ಮತ್ತು ಹೊಸ ರೂಲ್ಸ್ ಮಾಹಿತಿ ಇಲ್ಲಿದೆ!

ಬೆಂಗಳೂರು ಮ್ಯಾಚ್ ಬಗ್ಗೆ ಆರ್‌ಸಿಬಿ ಬಿಗ್ ಅಪ್‌ಡೇಟ್: ಟಿಕೆಟ್ ಬುಕಿಂಗ್ ಮತ್ತು ಹೊಸ ರೂಲ್ಸ್ ಮಾಹಿತಿ ಇಲ್ಲಿದೆ!

ಬೆಂಗಳೂರು, ಮಾರ್ಚ್ 24: ಐಪಿಎಲ್ 2026 (IPL 2026) ಸೀಸನ್ ಆರಂಭದ ಹಿನ್ನಲೆಯಲ್ಲಿ ಆರ್‌ಸಿಬಿ (Royal Challengers Bengaluru) ಆಡಳಿತ ಮಂಡಳಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ ತಂಡದ ಉಪಾಧ್ಯಕ್ಷ ರಾಜೇಶ್ ಮೆನನ್ ಹಾಗೂ ಕ್ರಿಕೆಟ್ ಡೈರೆಕ್ಟರ್ ಮೋ ಬೋಬಾಟ್ ಹಲವು ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜೇಶ್ ಮೆನನ್, ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದರು. ಸರ್ಕಾರ ನೀಡಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ತಿಳಿಸಿದರು.

ಐಪಿಎಲ್ ಪಂದ್ಯಕ್ಕೆ ಕಠಿಣ ಭದ್ರತಾ ಕ್ರಮಗಳು

ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭದ್ರತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಗ್ರೌಂಡ್ ಒಳಗೆ ಮತ್ತು ಹೊರಗೆ ಸಿಸಿಟಿವಿ ಕ್ಯಾಮರಾಗಳ ಜೊತೆಗೆ ಎಐ ಆಧಾರಿತ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಜನಸಂದಣಿ ಹೆಚ್ಚಾದ ಸ್ಥಳಗಳನ್ನು ಗುರುತಿಸಿ ತಕ್ಷಣ ಎಚ್ಚರಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಮೂರು ಕಮಾಂಡ್ ಸೆಂಟರ್‌ಗಳನ್ನು ಸ್ಥಾಪಿಸಲಾಗಿದ್ದು, ಎರಡು ಕ್ರೀಡಾಂಗಣದಲ್ಲಿ ಮತ್ತು ಒಂದು ಕಮಿಷನರ್ ಕಚೇರಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಆರ್​ಸಿಬಿ ಆಡಳಿತಮಂಡಳಿ ತಿಳಿಸಿದೆ.

ಟಿಕೆಟ್ ಬುಕಿಂಗ್, ಪ್ರವೇಶ ಮತ್ತು ಪಾರ್ಕಿಂಗ್ ವ್ಯವಸ್ಥೆ ಹೇಗಿರಲಿದೆ?

ಇಂದು ಸಂಜೆ 4 ಗಂಟೆಯಿಂದ ಟಿಕೆಟ್ ಮಾರಾಟ ಆರಂಭವಾಗಲಿದೆ. ಮೆಟ್ರೋ ಟಿಕೆಟ್ ಲಿಂಕ್ ಮಾಡುವ ವ್ಯವಸ್ಥೆ ಜಾರಿಗೆ ತರುವ ಹಿನ್ನೆಲೆಯಲ್ಲಿ ಟಿಕೆಟ್ ಮಾರಾಟ ಸ್ವಲ್ಪ ತಡವಾಗಿದೆ. ಟಿಕೆಟ್ ಜೊತೆ ಪಾರ್ಕಿಂಗ್ ಬುಕ್ಕಿಂಗ್ ಮಾಡುವ ವ್ಯವಸ್ಥೆಯೂ ಇದೆ. ಪಂದ್ಯ ಆರಂಭಕ್ಕೆ ನಾಲ್ಕು ಗಂಟೆಗಳ ಮುಂಚೆಯೇ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುತ್ತದೆ. ಕ್ರೀಡಾಂಗಣದ ಸುತ್ತಮುತ್ತ ಕಾರುಗಳಿಗೆ ಎಂಟ್ರಿ ಇರುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಏತನ್ಮಧ್ಯೆ, ಮೋಸದ ವೆಬ್‌ಸೈಟ್‌ಗಳ ಮೂಲಕ ಟಿಕೆಟ್ ಖರೀದಿಸಬಾರದು ಎಂದು ಆರ್‌ಸಿಬಿ ಮನವಿ ಮಾಡಿದೆ. ಅಧಿಕೃತ ತಾಣಗಳಲ್ಲಿಯೇ ಟಿಕೆಟ್ ಖರೀದಿಸಲು ಸೂಚಿಸಿದೆ.

11 ನಂಬರ್ ಜೆರ್ಸಿ, 11 ಸೀಟ್ ಖಾಲಿ ಬಿಟ್ಟು ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಗೌರವ

ಕಳೆದ ವರ್ಷದ ಕಾಲ್ತುಳಿತ ಘಟನೆಯಲ್ಲಿ ಮೃತಪಟ್ಟ 11 ಅಭಿಮಾನಿಗಳ ಸ್ಮರಣಾರ್ಥ, ಆಟಗಾರರು 11 ನಂಬರ್ ಜರ್ಸಿಯಲ್ಲಿ ಅಭ್ಯಾಸ ನಡೆಸಲಿದ್ದಾರೆ. ಜೊತೆಗೆ ಕ್ರೀಡಾಂಗಣದಲ್ಲಿ 11 ಸೀಟ್‌ಗಳನ್ನು ಖಾಲಿ ಬಿಡುವ ಮೂಲಕ ಗೌರವ ಸಲ್ಲಿಸಲಾಗುತ್ತದೆ ಎಂದು ತಂಡದ ಮ್ಯಾನೇಜ್​ಮೆಂಟ್ ತಿಳಿಸಿದೆ.

ಯಶ್ ದಯಾಳ್ ಆಡಲ್ಲ

ಯಶ್ ದಯಾಳ್ ಈ ಬಾರಿ ಪ್ಲೇಯಿಂಗ್ ಸ್ಕ್ವಾಡ್‌ನಲ್ಲಿ ಇರುವುದಿಲ್ಲ ಎಂದು ಮೋ ಬೋಬಾಟ್ ಸ್ಪಷ್ಟಪಡಿಸಿದರು. ಆದರೆ ಅವರು ತಂಡದ ಜೊತೆ ಮುಂದುವರೆಯಲಿದ್ದಾರೆ ಎಂದರು. ಜೋಶ್ ಹೇಜಲ್‌ವುಡ್ ಶೀಘ್ರದಲ್ಲೇ ತಂಡ ಸೇರಿಕೊಳ್ಳಲಿದ್ದಾರೆ.

ರಾಯಪುರದಲ್ಲೂ ಪಂದ್ಯ

ಈ ಸೀಸನ್‌ನಲ್ಲಿ ರಾಯಪುರದಲ್ಲೂ ಆರ್‌ಸಿಬಿ ಪಂದ್ಯಗಳು ನಡೆಯಲಿವೆ. ಅಲ್ಲಿನ ರಾಜ್ಯ ಸರ್ಕಾರ ಜಿಎಸ್‌ಟಿ ಸಡಿಲಿಕೆ ನೀಡಿರುವುದಾಗಿ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: RCB ಪಂದ್ಯಗಳ ಟಿಕೆಟ್ ಸಿಗಲೇಬೇಕು ಅಂದ್ರೆ ಬುಕ್ ಮಾಡುವಾಗ ಈ ಕ್ರಮ ಅನುಸರಿಸಿ

ಮತ್ತೊಂದೆಡೆ, ಆರ್‌ಸಿಬಿ ತಂಡದ ಮಾಲೀಕತ್ವ ಬದಲಾವಣೆ ಸಾಧ್ಯತೆ ಬಗ್ಗೆ ಮೂಲಗಳಿಂದ ಮಾಹಿತಿ ದೊರೆತಿದ್ದು, ಇಂದ (ಮಾರ್ಚ್ 24) ಸಂಜೆ. ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ. ಸುಮಾರು 15-16 ಸಾವಿರ ಕೋಟಿ ರೂಪಾಯಿಗೆ ತಂಡ ಮಾರಾಟವಾಗುವ ಸಾಧ್ಯತೆ ಇದೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Source link

RCB ಪಂದ್ಯಗಳ ಟಿಕೆಟ್ ಸಿಗಲೇಬೇಕು ಅಂದ್ರೆ ಬುಕ್ ಮಾಡುವಾಗ ಈ ಕ್ರಮ ಅನುಸರಿಸಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಹೋಂಗ್ರೌಂಡ್​ ಅಲ್ಲಿ ಐದು ಪಂದ್ಯಗಳನ್ನು ಆಡುತ್ತಿದೆ ಅನ್ನೋದು ವಿಶೇಷ. ಉಳಿದು ಎರಡು ಹೋಂ ಪಂದ್ಯಗಳನ್ನು ಬೇರೆಡೆ ಆಡುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೆಲಿದೆ. ಆರ್​​ಸಿಬಿ ಹಾಗೂ ಹೈದರಾಬಾದ್ ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲೇ ನಡೆಯಲಿದೆ ಅನ್ನೋದು ವಿಶೇಷ. ಈ ಪಂದ್ಯವನ್ನು ನೊಡಲೇಬೇಕು ಎಂದು ಕಾದು ಕುಳಿತವರಿಗೆ ಟಿಕೆಟ್ ಸಿಗುತ್ತದೆಯೋ ಅಥವಾ ಇಲ್ಲವೋ ಎನ್ನುವ ಆತಂಕ. ಟಿಕೆಟ್ ಬುಕ್ ಮಾಡಬೇಕಾದರೆ ಈ ಕ್ರಮ ಅನುಸರಿಸಿದರೆ ನಿಮಗೆ ಟಿಕೆಟ್ ಸಿಗೋ ಸಾಧ್ಯತೆ ಹೆಚ್ಚು.

ಆರ್​​ಸಿಬಿ ಹೋಂಗ್ರೌಂಡ್​​​ನಲ್ಲಿ ನಡೆಯುವ ಐದು ಪಂದ್ಯಗಳ ಮ್ಯಾಚ್ ಟಿಕೆಟ್ ಆರ್​​ಸಿಬಿಯ ಅಧಿಕೃತ ಆ್ಯಪ್ ಹಾಗೂ ಅಧಿಕೃತ ವೆಬ್​​ಸೈಟ್​​ ಅಲ್ಲಿ ಲಭ್ಯವಿರುತ್ತದೆ. ಎಲ್ಲಾ ಸ್ಟ್ಯಾಂಡ್​​ಗಳ ಟಿಕೆಟ್​ಗಳು ಮಾರಾಟಕ್ಕೆ ಇರಲಿವೆ. 2,300 ರೂಪಾಯಿ ಇಂದ ಆರಂಭ ಆಗಿ, 42 ಸಾವಿರ ರೂಪಾಯಿವರೆಗೂ ಟಿಕೆಟ್​​ಗಳು ಲಭ್ಯ. ವಿವಿಧ ಸ್ಟ್ಯಾಂಡ್​​ಗಳ ಆಧಾರದ ಮೇಲೆ ಟಿಕೆಟ್ ಬೆಲೆ ನಿಗದಿ ಮಾಡಲಾಗುತ್ತದೆ.

ಆರ್​​ಸಿಬಿ ಮ್ಯಾಚ್ ಟಿಕೆಟ್ ಬುಕ್ ಮಾಡಲು ಆ್ಯಪ್ ಇನ್​​ಸ್ಟಾಲ್ ಮಾಡಿಕೊಳ್ಳಬೇಕು. ವೆಬ್​​ಸೈಟ್​​ ಅಲ್ಲಿ ಲಾಗಿನ್ ಆಗಿ ಕೂಡ ಟಿಕೆಟ್ ಖರೀದಿ ಮಾಡಬಹುದು. ಮೊದಲು ಆ್ಯಪ್​​ಗೆ ಲಾಗಿನ್ ಆಗಬೇಕು. ಅಂದಾಗ ಮಾತ್ರ ಟಿಕೆಟ್ ಖರೀದಿ ಮಾಡಲು ಸಾಧ್ಯ. ಹೀಗಾಗಿ, ಲಾಗಿನ್ ಆಗಿ ಎಲ್ಲಾ ಮಾಹಿತಿಯನ್ನು ಮೊದಲೇ ತುಂಬಿಡಬೇಕು. ಆಗ ಟಿಕೆಟ್ ಬುಕ್ ಮಾಡಲು ಸುಲಭ ಆಗಲಿದೆ.

ಇದನ್ನೂ ಓದಿ: ಐಪಿಎಲ್ 2026ರಲ್ಲಿ ನಿವೃತ್ತಿ ಘೋಷಿಸಲಿದ್ದಾರೆ ಈ ಐದು ಆಟಗಾರರು?

ಇನ್ನು, ನೀವು ಟಿಕೆಟ್ ಬುಕ್ ಮಾಡುವಾಗ ತುಂಬಾನೇ ವೇಗದಲ್ಲಿ ಟಿಕೆಟ್ ಬುಕ್ ಮಾಡಬೇಕು. ಅಂದಾಗ ಮಾತ್ರ ನಿಮಗೆ ಟಿಕೆಟ್ ಸಿಗುತ್ತದೆ. ಎಲ್ಲರೂ ಟಿಕೆಟ್​​ಗಾಗಿ ಕಾದು ಕುಳಿತಿರುವುದರಿಂದ ಸ್ಪರ್ಧೆ ಜೋರಿರುತ್ತದೆ. ಹೀಗಾಗಿ, ಟಿಕೆಟ್ ಬುಕ್ ಮಾಡುವಾಗ ಈ ಕ್ರಮ ಅನುಸರಿದರೆ ಟಿಕೆಟ್ ಸಿಗೋ ಸಾಧ್ಯತೆ ಹೆಚ್ಚು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗೃಹಬಳಕೆ ಎಲ್​ಪಿಜಿ ಸಿಲಿಂಡರ್​ಗಾಗಿ ರಾಜಧಾನಿ ಜನರ ಕ್ಯೂ!

ಬೆಂಗಳೂರು, ಮಾರ್ಚ್​ 24: ನಗರವು ಪ್ರಸ್ತುತ ಗೃಹಬಳಕೆ LPG ಸಿಲಿಂಡರ್ ಕೊರತೆಯನ್ನು ಎದುರಿಸುತ್ತಿದೆ. ರಾಜಧಾನಿಯ ಲಿಂಗರಾಜಪುರದಲ್ಲಿರುವ ವಿನಯ್ ಗ್ಯಾಸ್ ಏಜೆನ್ಸಿ ಮುಂಭಾಗದಲ್ಲಿ ಸಿಲಿಂಡರ್‌ಗಳಿಗಾಗಿ ಜನರು ಅರ್ಧ ಕಿಲೋಮೀಟರ್‌ಗೂ ಹೆಚ್ಚು ದೂರ ಕ್ಯೂ ನಿಂತಿರುವುದು ಕಂಡುಬಂದಿದೆ. ಖಾಲಿ ಸಿಲಿಂಡರ್‌ಗಳನ್ನು ರಸ್ತೆಯಲ್ಲಿ ಸಾಲಾಗಿ ಇಟ್ಟ ಗ್ರಾಹಕರು ಬೆಳಿಗ್ಗೆ 8:30 ರಿಂದಲೇ ಕಾಯುತ್ತಿದ್ದಾರೆ. ಕಳೆದ ಒಂದು ವಾರದಿಂದ ಸಪ್ಲೈ ಆಗಿಲ್ಲ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು 10 ರಿಂದ 24 ದಿನಗಳವರೆಗೆ ಸಿಲಿಂಡರ್ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಆಹಾರ ಸಚಿವ ಮುನಿಯಪ್ಪ , ಗ್ಯಾಸ್ ಏಜೆನ್ಸಿಗಳ ಮುಂದೆ ಕ್ಯೂ ನಿಲ್ಲಬೇಡಿ, ಮನೆಬಾಗಿಲಿಗೆ ಸಿಲಿಂಡರ್ ತಲುಪಿಸಲಾಗುವುದು ಎಂದು ಹೇಳಿದರೂ, ವಾಸ್ತವದಲ್ಲಿ ಬೆಂಗಳೂರಿನ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿರವಂತೆ ಕಾಣುತ್ತಿದೆ.

ಸಿಲಿಂಡರ್ ವಿತರಣಾ ಏಜೆನ್ಸಿಯ ಹೇಳುವಂತೆ 5000 ಬುಕಿಂಗ್‌ಗಳಿಗೆ ಕೇವಲ 300-500 ಸಿಲಿಂಡರ್‌ಗಳು ಬರುತ್ತಿವೆ. ಇದಕ್ಕೆ “ಪ್ಯಾನಿಕ್ ಬುಕಿಂಗ್” ಕಾರಣ ಎಂದು ಹೇಳಲಾಗುತ್ತಿದೆ. ಸರ್ಕಾರವು ದೇಶೀಯ ಸಿಲಿಂಡರ್‌ಗಳಿಗೆ ಯಾವುದೇ ಕೊರತೆ ಇಲ್ಲ ಎಂದು ಹೇಳುತ್ತಿದ್ದರೂ, ಬೆಂಗಳೂರಿನಲ್ಲಿ ಜನರು ತಮ್ಮ ದೈನಂದಿನ ಕಾರ್ಯಗಳನ್ನು ಬಿಟ್ಟು ಸಿಲಿಂಡರ್‌ಗಳಿಗಾಗಿ ಕಾಯುತ್ತಿದ್ದಾರೆ. OTP ಬಂದಿದ್ದರೂ ಸಿಲಿಂಡರ್ ಸಿಗದಂತಹ ಪ್ರಕರಣಗಳು ವರದಿಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮುನ್ನೆಚ್ಚರಿಕೆಯ ಹೊರತಾಗಿಯೂ ‘ಧುರಂಧರ್ 2’ ಸಿನಿಮಾಕ್ಕೆ ಭಾರಿ ನಷ್ಟ

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ದೇಶದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಭಾರಿ ದೊಡ್ಡ ಹಿಟ್ ಎನಿಸಿಕೊಂಡಿದೆ. ಸೋಮವಾರವೂ ಸಹ ಶೋಗಳು ಹೌಸ್​​ಫುಲ್ ಆಗಿವೆ. ಜನ ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಬಿಡುಗಡೆ ಆದ ಕೆಲವೇ ದಿನಗಳಲ್ಲಿ ‘ಧುರಂಧರ್ 2’ ಸಿನಿಮಾ 500 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಇಷ್ಟೆಲ್ಲದರ ನಡುವೆಯೂ ‘ಧುರಂಧರ್ 2’ ಸಿನಿಮಾಕ್ಕೆ ಭಾರಿ ನಷ್ಟವೇ ಆಗುತ್ತಿದೆ. ಅದಕ್ಕೆ ಕಾರಣ ಪೈರಸಿ.

ಪಾಕಿಸ್ತಾನದಲ್ಲಿ ಈಗಾಗಲೇ ಸಿನಿಮಾದ ಪೈರಸಿ ಆಗಿದ್ದು, ಗಲ್ಲಿ-ಗಲ್ಲಿಗಳಲ್ಲಿ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾದ ಪೈರಸಿ ಸಿಡಿಗಳು ಸಿಗುತ್ತಿವೆ. ಸಾಮಾನ್ಯ ಜನರು ಮಾತ್ರವೇ ಅಲ್ಲದೆ ಪಾಕಿಸ್ತಾನದ ರಾಜಕಾರಣಿಗಳು ಸಹ ಪೈರಸಿಯಲ್ಲಿ ‘ಧುರಂಧರ್’ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಭಾರತದಲ್ಲಿಯೂ ಸಹ ‘ಧುರಂಧರ್ 2’ ಸಿನಿಮಾಕ್ಕೆ ಪೈರಸಿ ಸಮಸ್ಯೆ ಎದುರಾಗಿದೆ. ಚಿತ್ರತಂಡ ಮೊದಲೇ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರೂ ಸಹ ‘ಧುರಂಧರ್ 2’ ಸಿನಿಮಾಕ್ಕೆ ಪೈರಸಿ ಸಮಸ್ಯೆ ಎದುರಾಗಿದೆ.

ಇದನ್ನೂ ಓದಿ:‘ಧುರಂಧರ್ 2’ ಮೂಲಕ ಪ್ರತೀಕಾರ ತೀರಿಸಿಕೊಂಡ ಅರ್ಜುನ್ ರಾಂಪಾಲ್

ಭಾರತದಲ್ಲಿ ಸಕ್ರಿಯವಾಗಿರುವ ಕ್ಯಾಸ್ಟಲ್, ಮೂವಿರೂಲ್ಜ್ ಇನ್ನೂ ಹಲವಾರು ಪೈರಸಿ ವೆಬ್​​ಸೈಟ್ ಮತ್ತು ಅಪ್ಲಿಕೇಶನ್​​ಗಳಲ್ಲಿ ‘ಧುರಂಧರ್ 2’ ಸಿನಿಮಾ ಅಕ್ರಮವಾಗಿ ಪ್ರದರ್ಶನವಾಗುತ್ತಿದೆ. ಕಾಲೇಜುಗಳಲ್ಲಿ, ಕಚೇರಿಗಳಲ್ಲಿ ‘ಧುರಂಧರ್ 2’ ಸಿನಿಮಾದ ಪೈರಸಿ ಕಾಪಿಯ ವರ್ಗಾವಣೆ ಜೋರಾಗಿ ನಡೆಯುತ್ತಿದೆ. ಥಿಯೇಟರ್ ಪ್ರಿಂಟ್ ಅನ್ನೇ ಜನ ಮೊಬೈಲ್​​ಗಳಲ್ಲಿ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಇದರಿಂದಾಗಿ ಸಿನಿಮಾ ತಂಡಕ್ಕೆ ದೊಡ್ಡ ನಷ್ಟವೇ ಆಗುತ್ತಿದೆ. ಆದರೆ ಈಗಾಗಲೇ ಭಾರಿ ಲಾಭದಲ್ಲಿರುವ ಕಾರಣ ಸಿನಿಮಾ ತಂಡ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಂತಿಲ್ಲ.

ಸಿನಿಮಾ ಬಿಡುಗಡೆಗೆ ಮುಂಚೆಯೇ ಚಿತ್ರತಂಡವು ಸುಮಾರು 12 ಸಾವಿರ ಲಿಂಕ್​​ಗಳನ್ನು ಡಿಲೀಟ್ ಮಾಡಿಸಿತ್ತು. ಅಲ್ಲದೆ ಮದ್ರಾಸ್ ಹೈಕೋರ್ಟ್ ಇಂಜೆಕ್ಷನ್ ಆರ್ಡಸ್ ಸಹ ನೀಡಿ, ಸಿನಿಮಾದ ಅಕ್ರಮ ಪ್ರದರ್ಶನಕ್ಕೆ ತಡೆ ಹಾಕಿತ್ತು. ಇದೆಲ್ಲದರ ನಡುವೆಯೂ ಸಹ ಸಿನಿಮಾದ ಪೈರಸಿ ಕಾಪಿಗಳು ಯೆಥೇಚ್ಛವಾಗಿ ಹರಿದಾಡುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಿರಿಯಾನಿ ಪ್ರಿಯರಿಗೆ ಬಂಪರ್ ಆಫರ್: ಈ ಹೋಟೆಲ್​ಗೆ ಒಂದು ಸಿಲಿಂಡರ್ ತಂದ್ರೆ ಸಾಕು, ತಿಂಗಳು ಪೂರ್ತಿ ಉಚಿತ ಬಿರಿಯಾನಿ ಹಬ್ಬ!

ಬೆಂಗಳೂರು, ಮಾರ್ಚ್ 24: ವಾಣಿಜ್ಯ ಗ್ಯಾಸ್ ಸಿಲಿಂಡರ್ (Commercial LPG) ಕೊರತೆ ಹಿನ್ನೆಲೆ ಹೊಸೂರಿನಲ್ಲಿ ಒಂದು ಹೋಟೆಲ್ ವಿಭಿನ್ನ ಹಾಗೂ ಗಮನಸೆಳೆಯುವ ಆಫರ್ ಘೋಷಿಸಿದೆ. ‘Help Us Cook, We’ll Feed You’ ಎಂಬ ಅಭಿಯಾನವನ್ನು ಆರಂಭಿಸಿರುವ ಈ ಹೋಟೆಲ್, ಗ್ರಾಹಕರ ಸಹಕಾರ ಪಡೆಯಲು ಹೊಸ ರೀತಿಯ ಪ್ರಯತ್ನಕ್ಕೆ ಮುಂದಾಗಿದೆ. ಹೊಸೂರು ರಸ್ತೆಯ ಗ್ರ್ಯಾಂಡ್ ಸಿನೆಮಾಸ್ ಸಮೀಪದಲ್ಲಿರುವ ಈರೋಡ್ ಅಮ್ಮಾಯಿ ಮೆಸ್ ಹೋಟೆಲ್‌ನಲ್ಲಿ ಈ ವಿಶೇಷ ಆಫರ್ ಜಾರಿಗೆ ಬಂದಿದೆ. ಗ್ಯಾಸ್ ಕೊರತೆಯಿಂದ ಅಡುಗೆ ಕಾರ್ಯದಲ್ಲಿ ತೊಂದರೆ ಎದುರಿಸುತ್ತಿರುವ ಹೋಟೆಲ್, ಗ್ರಾಹಕರಿಂದಲೇ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ತರಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ.

ಹೊಸೂರಿನ ಹೋಟೆಲ್ ಆಫರ್ ಏನು?

ಹೋಟೆಲ್ ನೀಡಿರುವ ಆಫರ್ ವಿವರ ಹೀಗಿದ;

  • 1 ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ತಂದರೆ – ಒಂದು ತಿಂಗಳು ಪ್ರತಿದಿನ 1 ಬಿರಿಯಾನಿ ಉಚಿತ
  • 2 ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ತಂದರೆ – ಒಂದು ತಿಂಗಳು ಪ್ರತಿದಿನ 2 ಬಿರಿಯಾನಿ ಉಚಿತ

ಈ ಕುರಿತು ಹೋಟೆಲ್ ಮುಂದೆ ಬೋರ್ಡ್ ಹಾಕಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಈ ಆಫರ್ ವೈರಲ್ ಆಗುತ್ತಿದೆ.

ಹೋಟೆಲ್ ಆಫರ್​ನ ಪೋಸ್ಟರ್

ಗ್ಯಾಸ್ ಕೊರತೆಯಿಂದ ಹೋಟೆಲ್ ಉದ್ಯಮಕ್ಕೆ ಸಂಕಷ್ಟ

ಇಸ್ರೇಲ್, ಇರಾನ್, ಅಮೆರಿಕ ಯುದ್ಧದಿಂದಾಗಿ ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಸರಬರಾಜಿನಲ್ಲಿ ಉಂಟಾದ ವ್ಯತ್ಯಯದಿಂದ ಹಲವು ಹೋಟೆಲ್‌ಗಳು ಸಂಕಷ್ಟಕ್ಕೆ ಸಿಲುಕಿವೆ. ಅಡುಗೆ ಕಾರ್ಯ ನಿರ್ವಹಿಸಲು ಗ್ಯಾಸ್ ಅವಶ್ಯಕವಾಗಿದ್ದು, ಸರಬರಾಜು ಕಡಿಮೆಯಾಗಿರುವುದರಿಂದ ಹೋಟೆಲ್‌ಗಳು ಕಾರ್ಯಾಚರಣೆ ಮುಂದುವರಿಸುವುದು ಕಷ್ಟವಾಗುತ್ತಿದೆ. ಬೆಂಗಳೂರಿನಲ್ಲಂತೂ ಅನೇಕ ಹೋಟೆಲ್​​ಗಳು ಬಂದ್ ಆಗಿವೆ. ಇನ್ನೂ ಅನೇಕ ಹೋಟೆಲ್​ಗಳು ದುಬಾರಿ ದರದಲ್ಲಿ ಕಮರ್ಷಿಯಲ್ ಸಿಲಿಂಡರ್ ಖರೀದಿಸಿ ಗ್ರಾಹಕರಿಗೆ ಹೆಚ್ಚುವರಿ ದರಕ್ಕೆ ತಿಂಡಿ-ತಿನಿಸು ನೀಡುತ್ತಿವೆ. ಹಲವು ಹೋಟೆಲ್​ಗಳಲ್ಲಿ ಬಿಲ್​ನಲ್ಲಿ ‘ಗ್ಯಾಸ್ ಶುಲ್ಕ’ ಸೇರ್ಪಡೆಯಾಗಿವೆ.

ಇದನ್ನೂ ಓದಿ: ಗ್ಯಾಸ್ ಟ್ರಬಲ್: ಹೋಟೆಲ್ ಮಾಲೀಕರು ವಿಲ ವಿಲ; ಸೌದೆ ಒಲೆ ದರ ದುಪ್ಪಟ್ಟು

ಒಟ್ಟಿನಲ್ಲಿ, ಗ್ಯಾಸ್ ಕೊರತೆಯಂತಹ ಸಮಸ್ಯೆಯನ್ನು ಸೃಜನಾತ್ಮಕವಾಗಿ ಎದುರಿಸಲು ಹೊಸೂರು ಹೋಟೆಲ್ ಕೈಗೊಂಡಿರುವ ಈ ಪ್ರಯತ್ನ ಇದೀಗ ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮ ಹೊರತುಪಡಿಸಿ ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್​ಸಿ, ಎಸ್ಟಿ ಸ್ಥಾನಮಾನ ರದ್ದು: ಸುಪ್ರೀಂ

ನವದೆಹಲಿ, ಮಾರ್ಚ್​ 24: ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮಗಳಿಗೆ ಸೇರಿದ ವ್ಯಕ್ತಿಗಳು ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನವನ್ನು ಪಡೆಯಬಹುದು ಮತ್ತು ಕ್ರಿಶ್ಚಿಯನ್ ಧರ್ಮದಂತಹ ಯಾವುದೇ ಇತರ ಧರ್ಮಕ್ಕೆ ಮತಾಂತರ(Conversion)ಗೊಂಡರೆ ಆ ವ್ಯಕ್ತಿ ಪರಿಶಿಷ್ಟ ಜಾತಿ ಸ್ಥಾನಮಾನವನ್ನು ಕಳೆದುಕೊಳ್ಳುತ್ತಾನೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ಹೀಗಾಗಿ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ದಲಿತ ವ್ಯಕ್ತಿಯೊಬ್ಬರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ (ಎಸ್‌ಸಿ,ಎಸ್‌ಟಿ ಕಾಯ್ದೆ)ಯಡಿ ರಕ್ಷಣೆ ಕೇಳುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಪಿಕೆ ಮಿಶ್ರಾ ಮತ್ತು ಮನಮೋಹನ್ ಅವರ ಪೀಠವು ತೀರ್ಪು ನೀಡಿದೆ.

ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಧರ್ಮವನ್ನು ಪ್ರತಿಪಾದಿಸುವ ಯಾವುದೇ ವ್ಯಕ್ತಿ ಪರಿಶಿಷ್ಟ ಜಾತಿಯ ಸದಸ್ಯರಾಗಿರುವುದಿಲ್ಲ. ಬೇರೆ ಯಾವುದೇ ಧರ್ಮಕ್ಕೆ ಮತಾಂತರಗೊಂಡರೆ ಪರಿಶಿಷ್ಟ ಜಾತಿಯ ಸ್ಥಾನಮಾನ ಕಳೆದುಕೊಳ್ಳುತ್ತಾರೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಆಂಧ್ರಪ್ರದೇಶ ಹೈಕೋರ್ಟ್‌ನ ಮೇ 2025 ರ ತೀರ್ಪಿನ ವಿರುದ್ಧ ಚಿಂತಾಡ ಆನಂದ್ ಎಂಬ ಪಾದ್ರಿ ಸಲ್ಲಿಸಿದ ಮೇಲ್ಮನವಿಯ ಮೇರೆಗೆ ಈ ತೀರ್ಪು ನೀಡಲಾಗಿದೆ. ಆನಂದ್ ಅವರು ಅಕ್ಕಲ ರಾಮಿರೆಡ್ಡಿ ಮತ್ತು ಇತರರಿಂದ ಜಾತಿ ತಾರತಮ್ಯ ಮತ್ತು ನಿಂದನೆಯನ್ನು ಎದುರಿಸಿದ್ದಾರೆ ಎಂದು ಆರೋಪಿಸಿದರು. ಅವರು ಅವರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದೂರು ದಾಖಲಿಸಿದರು ಮತ್ತು ಪೊಲೀಸರು ಅದರ ಆಧಾರದ ಮೇಲೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದರು.

ಮತ್ತಷ್ಟು ಓದಿ: ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!

ನಂತರ ರಾಮಿರೆಡ್ಡಿ ಪ್ರಕರಣವನ್ನು ರದ್ದುಗೊಳಿಸುವಂತೆ ಹೈಕೋರ್ಟ್ ಮೊರೆ ಹೋದರು. ಆನಂದ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ನಂತರ ತಮ್ಮ ಎಸ್‌ಸಿ ಸ್ಥಾನಮಾನವನ್ನು ಕಳೆದುಕೊಂಡಿದ್ದಾರೆ ಮತ್ತು ಆದ್ದರಿಂದ ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ರಕ್ಷಣೆ ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎನ್ ಹರಿನಾಥ್ ಅವರು ಎಫ್‌ಐಆರ್ ಅನ್ನು ರದ್ದುಗೊಳಿಸಿದರು. ನಂತರ ಆನಂದ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

 

 

ರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ಮಾಲೀಕರಿಂದ ಕದ್ದು ಮಾಂಸದಂಗಡಿಗೆ ಸಾಗಿಸುತ್ತಿದ್ದ ಟ್ರಕ್​ನಿಂದ ಹಾರಿ ಪ್ರಾಣ ಉಳಿಸಿಕೊಂಡ ನಾಯಿಗಳು

ಚೀನಾ, ಮಾರ್ಚ್​ 24: ಚೀನಾದಲ್ಲಿ ಏಳು ನಾಯಿಗಳು ತಮ್ಮ ಮಾಲೀಕರನ್ನು ಅರಸಿ 17 ಕಿ.ಮೀ ನಡೆದಿರುವ ವಿಡಿಯೋ ವೈರಲ್ ಆಗಿದೆ. ಕೆಲವು ದುಷ್ಟರು ಮಾಲೀಕರಿಂದ ನಾಯಿಗಳನ್ನು ಕದ್ದು, ಅಕ್ರಮವಾಗಿ ಟ್ರಕ್​​ನಲ್ಲಿ ಸಾಗಿಸುತ್ತಿದ್ದರು, ಆದರೆ ಅದೃಷ್ಟವಶಾತ್ ಆ ನಾಯಿಗಳು ಟ್ರಕ್​ನಿಂದ ಕೆಳಗೆ ಹಾರಿ ಪ್ರಾಣ ಉಳಿಸಿಕೊಂಡಿವೆ. ಈ ನಾಯಿಗಳನ್ನು ಅವುಗಳ ಮನೆಗಳಿಂದ ಕದ್ದಿದ್ದು, ನಾಯಿ ಮಾಂಸದ ಅಂಗಡಿಗೆ ಮಾರಾಟ ಮಾಡಲು ಉದ್ದೇಶಿಸಲಾಗಿತ್ತು ಎಂದು ಹೇಳಲಾಗಿದೆ.

ಜರ್ಮನ್ ಶೆಫರ್ಡ್, ಗೋಲ್ಡನ್ ರಿಟ್ರೈವರ್ ಮತ್ತು ಕಾರ್ಗಿ ಸೇರಿದಂತೆ ಈ ಗುಂಪಿನ ನಾಯಿಗಳು ಚಾಂಗ್‌ಶುವಾಂಗ್ ಎಕ್ಸ್‌ಪ್ರೆಸ್‌ವೇಯಲ್ಲಿ ಒಟ್ಟಿಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ. ನಾಯಿಗಳು ಎರಡು ದಿನಗಳ ಕಾಲ 17 ಕಿ.ಮೀ.ಗೂ ಹೆಚ್ಚು ನಡೆದಿವೆ. ಮಾರ್ಚ್ 19 ರಂದು ಅವರು ಸುರಕ್ಷಿತವಾಗಿ ತಮ್ಮ ಮನೆಗಳಿಗೆ ಮರಳಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕ ರೈಲ್ವೆ ಪ್ರಯಾಣಿಕರಿಗೆ ಗುಡ್‌ ನ್ಯೂಸ್! ಯಶವಂತಪುರ-ತಾಳಗುಪ್ಪ ಸೇರಿದಂತೆ 19 ವಿಶೇಷ ರೈಲುಗಳು ಇನ್ನು ಮುಂದೆ ಖಾಯಂ

ಬೆಂಗಳೂರು, ಮಾರ್ಚ್​ 24: ರಾಜ್ಯದ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ದೊರೆತಿದೆ. ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡ ರೈಲ್ವೇ ಮಂಡಳಿ (Railway Board) ಕರ್ನಾಟಕದಲ್ಲಿ ಸಂಚರಿಸುತ್ತಿದ್ದ 19 ವಿಶೇಷ ರೈಲುಗಳನ್ನು ಖಾಯಂ ಸೇವೆಗೆ ಪರಿವರ್ತಿಸಿದೆ. ಇದರಲ್ಲಿ 6 ಎಕ್ಸ್‌ಪ್ರೆಸ್, 9 ಮೆಮು/ಡೆಮು ಹಾಗೂ 4 ಪ್ಯಾಸೆಂಜರ್ ರೈಲುಗಳು ಸೇರಿವೆ. ಈ ನಿರ್ಧಾರದಿಂದ ಬೆಂಗಳೂರು, ಮೈಸೂರು, ಶಿವಮೊಗ್ಗ ಸೇರಿದಂತೆ 15ಕ್ಕೂ ಹೆಚ್ಚು ಜಿಲ್ಲೆಗಳ ಜನರಿಗೆ ಪ್ರಯಾಣ ಸೌಲಭ್ಯ ಹೆಚ್ಚಾಗಲಿದೆ.

ವಿಶೇಷ ರೈಲುಗಳಾಗಿ ಓಡುತ್ತಿದ್ದ ಸೇವೆಗಳು ಸಾಮಾನ್ಯವಾಗಿ ಹೆಚ್ಚಿನ ದರ ಹಾಗೂ ಅನಿಶ್ಚಿತ ವೇಳಾಪಟ್ಟಿಯಿಂದ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುತ್ತಿದ್ದವು. ಈಗ ಖಾಯಂ ಸೇವೆಗೆ ಪರಿವರ್ತನೆಯಾದ ಹಿನ್ನೆಲೆಯಲ್ಲಿ ಟಿಕೆಟ್ ದರದಲ್ಲಿ ಗಮನಾರ್ಹ ಇಳಿಕೆ ಕಂಡುಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಸ್ಲೀಪರ್ ಕೋಚ್​ಗಳಲ್ಲಿ ಸುಮಾರು ಶೇ30 ರವರೆಗೆ ಮತ್ತು ಸಾಮಾನ್ಯ ಟಿಕೆಟ್‌ಗಳಲ್ಲಿ ಶೇ 10-15ರವರೆಗೆ ದರ ಕಡಿಮೆಯಾಗಲಿದೆ.

ಈ 6 ವಿಶೇಷ ರೈಲುಗಳು ಖಾಯಂ

  • ಮೈಸೂರು – ಅಜ್ಮೀರ್‌ ಎಕ್ಸ್‌ಪ್ರೆಸ್‌ ( ರೈ.ಸಂ 16281/16282) ವಾರಕ್ಕೊಮ್ಮೆ ಸಂಚರಿಸಲಿದೆ
  • ಬೆಂಗಳೂರು ದಂಡು – ಕಲಬುರಗಿ ಎಕ್ಸ್‌ಪ್ರೆಸ್‌ (ರೈ.ಸಂ 16563/16564) ವಾರಕ್ಕೊಮ್ಮೆ ಸಂಚರಿಸಲಿದೆ
  • SMVT ಬೆಂಗಳೂರು – ಬೀದರ್‌ ಎಕ್ಸ್‌ಪ್ರೆಸ್‌ (ರೈ.ಸಂ 16559/16560) ವಾರಕ್ಕೊಮ್ಮೆ ಸಂಚರಿಸಲಿದೆ
  • ಯಶವಂತಪುರ – ತಾಳಗುಪ್ಪ ಎಕ್ಸ್‌ಪ್ರೆಸ್ (ರೈ.ಸಂ16555/16556) ವಾರಕ್ಕೊಮ್ಮೆ ಸಂಚರಿಸಲಿದೆ
  • ಹುಬ್ಬಳ್ಳಿ – ಯೋಗನಗರಿ ರಿಷಿಕೇಶ ಎಕ್ಸ್‌ಪ್ರೆಸ್ (ರೈ.ಸಂ17363/17364) ವಾರಕ್ಕೊಮ್ಮೆ ಸಂಚರಿಸಲಿದೆ
  • ಮಡಗಾಂವ್ – ಕಾರವಾರ ಎಕ್ಸ್‌ಪ್ರೆಸ್ (ರೈ.ಸಂ 10109/10110)

9 ಮೆಮು, ಡೆಮು ರೈಲುಗಳ ಓಡಾಟ

  • ಬೆಂಗಳೂರು – ಹೊಸೂರು ಮೆಮು (ರೈ.ಸಂ 66595/96) ಪ್ರತಿದಿನ ಸಂಚರಿಸಲಿದೆ
  • ಹುಬ್ಬಳ್ಳಿ – ವಿಜಯಪುರ ಮೆಮು ( ರೈ.ಸಂ66501/02) ಪ್ರತಿದಿನ ಸಂಚರಿಸಲಿದೆ
  • ಬೆಂಗಳೂರು – ಅಶೋಕಪುರಂ ಮೆಮು (ರೈ.ಸಂ66597/98) ಪ್ರತಿದಿನ ಸಂಚರಿಸಲಿದೆ
  • ಬೆಂಗಳೂರು – ಅಶೋಕಪುರಂ ಮೆಮು (ರೈ.ಸಂ 06213/14) ವಾರಕ್ಕೆ 3 ಬಾರಿ ಸಂಚರಿಸಲಿದೆ
  • ಬಂಗಾರಪೇಟೆ – SMVT ಬೆಂಗಳೂರು ಮೆಮು (ರೈ.ಸಂ 66537/38) ಪ್ರತಿದಿನ ಸಂಚರಿಸಲಿದೆ
  • ಹೊಸಪೇಟೆ – ಹುಬ್ಬಳ್ಳಿ ಡೆಮು (ರೈ.ಸಂ76507/08) ವಾರಕ್ಕೊಮ್ಮೆ ಸಂಚರಿಸಲಿದೆ
  • ಬಳ್ಳಾರಿ – ದಾವಣಗೆರೆ ಡೆಮು (ರೈ.ಸಂ76509/10)ವಾರಕ್ಕೆ 6 ದಿನ ಸಂಚರಿಸಲಿದೆ
  • ಬೆಂಗಳೂರು – ಹಾಸನ ಡೆಮು (ರೈ.ಸಂ66525/26)ವಾರಕ್ಕೆ 6 ದಿನ ಸಂಚರಿಸಲಿದೆ
  • ಬಳ್ಳಾರಿ – ಹೊಸಪೇಟೆ ಡೆಮು (ರೈ.ಸಂ07397/98) ವಾರಕ್ಕೆ 6 ದಿನ ಸಂಚರಿಸಲಿದೆ

ಇದರ ಜೊತೆಗೆ ಬೆಂಗಳೂರು-ಚನ್ನಪಟ್ಟಣ, ಮೈಸೂರು-ಎಸ್‌ಎಂವಿಟಿ ಬೆಂಗಳೂರು, ಯಶವಂತಪುರ-ಹಿಂದೂಪುರ ಹಾಗೂ ಹುಬ್ಬಳ್ಳಿ-ವಿಜಯಪುರ ಪ್ಯಾಸೆಂಜರ್ ರೈಲುಗಳು ಕೂಡ ಖಾಯಂಗೊಂಡಿವೆ. ಈ ಕ್ರಮದಿಂದ ಪ್ರಯಾಣ ಯೋಜನೆ ಸುಲಭವಾಗಿದ್ದು, ಮುಂಗಡ ಕಾಯ್ದಿರಿಸುವಿಕೆ ಮಾಡಲು ಅನುಕೂಲವಾಗಿದೆ. ಒಟ್ಟಾರೆ, ರೈಲ್ವೇ ಮಂಡಳಿಯ ಈ ತೀರ್ಮಾನ ರಾಜ್ಯದ ಸಾವಿರಾರು ಪ್ರಯಾಣಿಕರಿಗೆ ದೊಡ್ಡ ಮಟ್ಟದ ನೆರವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Gold Rates: ಚಿನ್ನದ ಬೆಲೆಯಲ್ಲಿ ಸತತ ಇಳಿಕೆ; ಕರುನಾಡ ಮಹಿಳೆಯರ ಆನಂದಕ್ಕೆ ಪಾರವೇ ಇಲ್ಲ

ಬೆಂಗಳೂರು, ಮಾರ್ಚ್ 24: ಚಿನ್ನದ ಬೆಲೆಯ (Gold Rates) ಸತತ ಇಳಿಕೆ ಮುಂದುವರಿಯುತ್ತಿದೆ. ಆಭರಣ ಪ್ರಿಯ ಮಹಿಳೆಯರ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ. ಚಿನ್ನದ ಬೆಲೆ ಗಗನಕ್ಕೇರಿದ್ದಾಗ ಆತಂಕದಲ್ಲಿ ಚಿನ್ನ ಖರೀದಿ ಬಿಟ್ಟಿರದ ಮಹಿಳೆಯರು ಈಗ ಬಂಗಾರದ ಬೆಲೆ ಸತತವಾಗಿ ಇಳಿಯುತ್ತಿರುವುದರಿಂದ ಚಿನ್ನದಂಗಡಿಗಳಿಗೆ ಲಗ್ಗೆ ಇಡುತ್ತಿದ್ದಾರೆ. ಮಂಗಳವಾರ ಚಿನ್ನದ ಬೆಲೆ ಒಂದೇ ದಿನ 270 ರೂ ಕಡಿಮೆ ಆಗಿದೆ. ಬೆಂಗಳೂರಿನಲ್ಲಿ ಆಭರಣ ಚಿನ್ನದ ಬೆಲೆ 12,865 ರೂ ಮುಟ್ಟಿದೆ. ಇದೇ ವೇಳೆ, ಬೆಳ್ಳಿ ಬೆಲೆಯಲ್ಲಿ ಐದು ರೂ ಹೆಚ್ಚಳವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,28,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,40,350 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,28,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 24ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,035 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,865 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,526 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,035 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,865 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,865 ರೂ
  • ಚೆನ್ನೈ: 13,000 ರೂ
  • ಮುಂಬೈ: 12,865 ರೂ
  • ದೆಹಲಿ: 12,880 ರೂ
  • ಕೋಲ್ಕತಾ: 12,865 ರೂ
  • ಕೇರಳ: 12,865 ರೂ
  • ಅಹ್ಮದಾಬಾದ್: 12,870 ರೂ
  • ಜೈಪುರ್: 12,880 ರೂ
  • ಲಕ್ನೋ: 12,880 ರೂ
  • ಭುವನೇಶ್ವರ್: 12,865 ರೂ

ಇದನ್ನೂ ಓದಿ: ಹೊಸ ಪ್ಯಾನ್ ನಿಯಮದಿಂದ ಹಿಡಿದು ಇನ್ಷೂರೆನ್ಸ್ ಪಾವತಿವರೆಗೆ, ಮಾರ್ಚ್ 31ಕ್ಕೆ ಡೆಡ್​ಲೈನ್ ಇರುವ ಕೆಲ ಪ್ರಮುಖ ಹಣಕಾಸು ಕಾರ್ಯಗಳು

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 541 ರಿಂಗಿಟ್ (12,858 ರುಪಾಯಿ)
  • ದುಬೈ: 498.25 ಡಿರಾಮ್ (12,732 ರುಪಾಯಿ)
  • ಅಮೆರಿಕ: 140 ಡಾಲರ್ (13,138 ರುಪಾಯಿ)
  • ಸಿಂಗಾಪುರ: 171.80 ಸಿಂಗಾಪುರ್ ಡಾಲರ್ (12,600 ರುಪಾಯಿ)
  • ಕತಾರ್: 496.50 ಕತಾರಿ ರಿಯಾಲ್ (12,801 ರೂ)
  • ಸೌದಿ ಅರೇಬಿಯಾ: 507 ಸೌದಿ ರಿಯಾಲ್ (12,679 ರುಪಾಯಿ)
  • ಓಮನ್: 53.30 ಒಮಾನಿ ರಿಯಾಲ್ (12,996 ರುಪಾಯಿ)
  • ಕುವೇತ್: 40.60 ಕುವೇತಿ ದಿನಾರ್ (12,432 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 235 ರೂ
  • ಚೆನ್ನೈ: 240 ರೂ
  • ಮುಂಬೈ: 235 ರೂ
  • ದೆಹಲಿ: 235 ರೂ
  • ಕೋಲ್ಕತಾ: 235 ರೂ
  • ಕೇರಳ: 240 ರೂ
  • ಅಹ್ಮದಾಬಾದ್: 235 ರೂ
  • ಜೈಪುರ್: 235 ರೂ
  • ಲಕ್ನೋ: 235 ರೂ
  • ಭುವನೇಶ್ವರ್: 240 ರೂ
  • ಪುಣೆ: 235

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಧುರಂಧರ್-2 ಎಫೆಕ್ಟ್​, ಪಾಕಿಸ್ತಾನದ ಲಿಯಾರಿಯ ಬೀದಿ ಬೀದಿಗಳಲ್ಲಿ ಭಾರತೀಯ ಸೀಕ್ರೆಟ್ ಏಜೆಂಟ್​ಗಳಿಗಾಗಿ ಹುಡುಕಾಟ

ಇಸ್ಲಾಮಾಬಾದ್, ಮಾರ್ಚ್​ 24: ಬಾಲಿವುಡ್ ಸಿನಿಮಾ ಧುರಂಧರ್ 2 ಯುಗಾದಿಯಂದು ರಿಲೀಸ್ ಆಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ನಾಯಕ ಪಾತ್ರಧಾರಿ ಭಾರತದ ಸೀಕ್ರೆಟ್ ಏಜೆಂಟ್ ಆಗಿದ್ದು, ತನ್ನ ಹೆಸರನ್ನು ಹಮ್ಜಾ ಅಲಿ ಮಜಾರಿ ಎಂದು ಬದಲಿಸಿಕೊಂಡು ಪಾಕಿಸ್ತಾನದಲ್ಲಿ ನೆಲೆಸಿ, ಅಲ್ಲಿ ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗುತ್ತಾನೆ. ಈ ಸಿನಿಮಾವನ್ನು ನೋಡಿದ ಪಾಕಿಸ್ತಾನಿ ಪೊಲೀಸರು ಹಾಗೂ ಸ್ಥಳೀಯರು ಕರಾಚಿಯ ಲಿಯಾರಿಯ ಪ್ರತಿ ಬೀದಿಯಲ್ಲಿ ಭಾರತೀಯ ಸೀಕ್ರೆಟ್ ಏಜೆಂಟ್​ಗಳ ಹುಡುಕಾಟದಲ್ಲಿರುವ ಹಲವು ವಿಡಿಯೋಗಳು ವೈರಲ್ ಆಗಿವೆ. ಅದರಲ್ಲಿ ಪ್ರಮುಖವಾಗಿ ಹಮ್ಜಾ ಅಲಿ ಮಜಾರಿ ಎಂದ ಒಂದೇ ಹೆಸರಿನ ಮೇಲೂ ಎಲ್ಲರ ಕಣ್ಣುಗಳು ನೆಟ್ಟಿವೆ. ಅನುಮಾನಾಸ್ಪದ ವ್ಯಕ್ತಿಗಳು ಅಷ್ಟೇ ಅಲ್ಲ, ಭಿಕ್ಷುಕರನ್ನೂ ಬಿಡದೆ ವಿಚಾರಣೆ ನಡೆಸುತ್ತಿದ್ದಾರೆ. ಧುರಂಧರ್ 2 ಸಿನಿಮಾದಲ್ಲಿ ನಾಯಕ ಪಾತ್ರದಲ್ಲಿ ರಣವೀರ್ ಸಿಂಗ್ ಅಭಿನಯಿಸಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link