ಬೆಂಗಳೂರು, ಜ.8: ಇಂದು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ (Karnataka Weather Update) ವಾತಾವರಣ ಸಾಮಾನ್ಯವಾಗಿ ಶುಷ್ಕ, ಬಿಸಿಲಿನ ವಾತಾವರಣವಿದ್ದು, ತುಂಬಾ ಪ್ರಶಾಂತವಾಗಿರಲಿದೆ. ಇಂದು ರಾತ್ರಿ ಚಳಿಯ ಮಟ್ಟ ಹೆಚ್ಚಾಗಬಹುದು. ತಾಪಮಾನವು ಸ್ವಲ್ಪ ಮಟ್ಟಿಗೆ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಸ್ವಲ್ಪ ಕಡಿಮೆಯಾಗುವ ಸಾಧ್ಯತೆಯಿದೆ. ಹಗಲು ಬಿಸಿಲಿನಿಂದ ಕೂಡಿದ್ದು, ರಾತ್ರಿ ಗರಿಷ್ಠ ತಾಪಮಾನ 26°C ಮತ್ತು ಕನಿಷ್ಠ ತಾಪಮಾನ 14°C ಇರುತ್ತದೆ. ಇಂದು ಬೆಳಗಿನ ಜಾವ ಮಂಜು ಮತ್ತು ಮಬ್ಬು ಆವರಿಸಿದ್ದು, ಇದು ವಾಹನ ಸವಾರರ ಮೇಲೆ ಪರಿಣಾಮ ಬೀರಲಿದೆ.
ಇನ್ನು ಕರಾವಳಿ ಪ್ರದೇಶಗಳಾದ ಮಂಗಳೂರು, ಉಡುಪಿ ಭಾಗದಲ್ಲಿ ತಾಪಮಾನವು ಬೆಚ್ಚಗಿರುತ್ತದೆ, ಗರಿಷ್ಠ 28°C ಮತ್ತು 33°C ನಡುವೆ ಮತ್ತು ರಾತ್ರಿಯ ಕನಿಷ್ಠ 20°C ನಿಂದ 22°C ವರೆಗೆ ಇರುತ್ತದೆ . ಉತ್ತರ ಕರ್ನಾಟಕದ ಕಲಬುರ್ಗಿ, ಬೆಳಗಾವಿ ಭಾಗದಲ್ಲಿ ಸಾಮಾನ್ಯವಾಗಿ ವಾತಾವರಣವೂ ಶುಭ್ರವಾಗಿರುತ್ತದೆ, ಹಗಲಿನಲ್ಲಿ ಗರಿಷ್ಠ ತಾಪಮಾನ 19°C ನಿಂದ 20°C ವರೆಗೆ ಇರುತ್ತದೆ ಮತ್ತು ರಾತ್ರಿಗಳು ತಂಪಾಗಿರುತ್ತವೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಳೆಯಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.
ರಾಜ್ಯದ ಬಯಲು ಪ್ರದೇಶಗಳಲ್ಲೇ ಧಾರವಾಡ, ಗದಗ ಮತ್ತು ಬೀದರ್‌ನಲ್ಲಿ ಕನಿಷ್ಠ ತಾಪಮಾನ 11.6°C ದಾಖಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. ಮುಂದಿನ 48 ಗಂಟೆಗಳಲ್ಲಿ ಇದೇ ರೀತಿಯ ಹವಾಮಾನ ಮುಂದುವರಿಯುವ ನಿರೀಕ್ಷೆಯಿದೆ, ತಾಪಮಾನವು ಇದೇ ರೀತಿ ಇರುತ್ತದೆ ಮತ್ತು ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ.
ಉತ್ತರ ಒಳನಾಡಿನಲ್ಲಿ ಶೀತಗಾಳಿ ಸಕ್ರಿಯವಾಗಿದೆ. ಬೀದರ್, ಕಲಬುರ್ಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ ಮತ್ತು ಗದಗ ಸೇರಿದಂತೆ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-5°C ಕಡಿಮೆ ಇರಲಿದೆ ಎಂದು ಹೇಳಲಾಗಿದೆ.
ಬೆಂಗಳೂರು, ಜನವರಿ 8: ಕೋಗಿಲು ಲೇಔಟ್ನಲ್ಲಿ (Kogilu Layout) ಬೀದಿಗೆ ಬಿದ್ದವರು ಮನೆಗಾಗಿ ಎದುರು ನೋಡುತ್ತಿದ್ದಾರೆ. ಪರ-ವಿರೋಧದ ಮಧ್ಯೆಯೇ ಕಾಂಗ್ರೆಸ್ ಸರ್ಕಾರ ನಿರಾಶ್ರಿತರಿಗೆ ಮನೆ ಕೊಡುವುದಕ್ಕೆ ಮುಂದಾಗಿದೆ. ಅರ್ಹತೆ ಹೊಂದಿರುವವರಿಗೆ ಮಾತ್ರವೇ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮನೆ ಕೊಡಲುನಿರ್ಧರಿಸಿದೆ. ಪ್ರಾಥಮಿಕ ಹಂತದಲ್ಲಿ ಅಂದಾಜು 37 ಅರ್ಜಿಗಳು ಮಾತ್ರ ಅರ್ಹತೆ ಹೊಂದಿವೆ. 5 ವರ್ಷಗಳಿಗಿಂತ ಹಳೆಯ ದಾಖಲೆಗಳು ಇದ್ದು, ಅವರು ಇಲ್ಲೇ ನೆಲೆಸಿದ್ದಾರೆ ಎಂಬುದನ್ನು ದೃಢಪಡಿಸಿಕೊಂಡಿದ್ದಾರೆ. ಆದರೆ ಈಗ ಅಕ್ರಮ ಒತ್ತುವರಿ ಪ್ರಕರಣದಲ್ಲಿ ಒಂದೊಂದೇ ಸ್ಫೋಟಕ ವಿಚಾರಗಳು ಬಯಲಾಗುತ್ತಿವೆ. ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡವರು ತಲಾ ಒಂದರಿಂದ 2 ಲಕ್ಷ ರೂಪಾಯಿ ನೀಡಿರುವ ವಿಚಾರವೂ ಬಹಿರಂಗವಾಗಿದೆ.
ಭೂ ಕಬಳಿಕೆಯಲ್ಲಿ ಭಾಗಿಯಾಗಿದ್ದ ನಾಲ್ವರ ವಿರುದ್ಧ ಎಫ್ಐಆರ್
ಅಕ್ರಮವಾಗಿ ಮನೆ ನಿರ್ಮಿಸಲು ಹಣ ಪಡೆದವರಿಗೀಗ ಸಂಕಷ್ಟ ಎದುರಾಗಿದೆ. ಆರೋಪಿಗಳಾದ ವಿಜಯ್, ವಸೀಂ, ಮುನಿ ಆಂಜಿನಪ್ಪ, ರಾಬಿನ್ ಹೀಗೆ ನಾಲ್ವರ ವಿರುದ್ಧ ಜನರಿಂದ ಹಣ ಪಡೆದು, ಸರ್ಕಾರ ಜಾಗ ಅತಿಕ್ರಮಣ ಮಾಡಿದ ಆರೋಪದಡಿ ಕೇಸ್ ದಾಖಲಾಗಿದೆ. ಅದರಲ್ಲೂ A2 ವಾಸೀಂ, ಸರ್ಕಾರಿ ಜಾಗ ಅತಿಕ್ರಮ ಮಾಡಿದ್ದು ಅಲ್ಲದೇ, ಆ ಜಾಗಕ್ಕೆ ವಾಸೀಂ ಲೇಔಟ್ ಅಂತಾ ಹೆಸರಿಟ್ಟಿದ್ದ. ಕೇಸ್ ದಾಖಲಾಗುತ್ತಿದ್ದಂತೆಯೇ ಆರೋಪಿಗಳಾದ ವಾಸಿಮ್ ಬೇಗ್ ಮತ್ತು ವಿಜಯ್‌ಕುಮಾರ್‌ನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಕೋರ್ಟ್‌ಮುಂದೆ ಹಾಜರುಪಡಿಸಿ ಕಸ್ಟಡಿಗೆ ಪಡೆದಿದ್ದಾರೆ.
ಸರ್ಕಾರಿ ಜಾಗ ಕಬಳಿಸಿ ಆ ಜಾಗಕ್ಕೆ ತಮ್ಮದೇ ಹೆಸರಿಟ್ಟಿದ ಆರೋಪಿಗಳು!
2023ರಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿತ್ತು. ಆ ಪ್ರಕಾರ 14 ಎಕರೆ 36 ಗುಂಟೆ ಜಮೀನಿನಲ್ಲಿ ಘಟಕ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಲಾಗಿತ್ತು. BSWML ವತಿಯಿಂದ 2023 ರಲ್ಲಿ ಬಯೋಮೆಥನೈಸೇಷನ್ ಘಟಕ, ಪ್ರಾಣಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಮಾಡಲು ಟೆಂಡರ್ ಆಹ್ವಾನಿಸಲಾಗಿತ್ತು ಆದರೆ ಘಟಕ ನಿರ್ಮಾಣಕ್ಕೂ ಮೊದಲೇ 4 ಎಕರೆ ಪ್ರದೇಶ ಒತ್ತುವರಿ ಮಾಡಿದ್ದು ಗೊತ್ತಾಗಿದೆ. ಆ ಬಳಿಕ 167 ಕಚ್ಚಾ ಮನೆಗಳನ್ನು ಒತ್ತುವರಿ ತೆರವು ಮಾಡಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ವೇಳೆ ಮನೆ ಕಟ್ಟಿಕೊಳ್ಳಲು ಹಣ ಪಡೆದು ಅವಕಾಶ ನೀಡಿದ್ದು ಬೆಳಕಿಗೆ ಬಂದಿದೆ.
ಹೈಕೋರ್ಟ್‌ನಲ್ಲಿ ಕೋಗಿಲು ವಿಚಾರವಾಗಿ ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆ ಬುಧವಾರ ನಡೆದಿದೆ. ಮನೆ ತೆರವಿನಿಂದ ವಸತಿ ರಹಿರತರಾಗಿದ್ದಾರೆ, ಅವರಿಗೆ ಪುನರ್ವಸತಿ ಕಲ್ಪಿಸಬೇಕು ಪರಿಹಾರ ನೀಡಬೇಕು ಎಂದು ಅರ್ಜಿದಾರರ ವಾದಿಸಿದರು. ಇದಕ್ಕೆ ಆಕ್ಷೇಪವೆತ್ತಿದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, 28 ವರ್ಷಗಳಿಂದ ವಾಸಿಸುತ್ತಿದ್ದಾರೆಂಬುದು ಸುಳ್ಳು ಎಂದರು. ಸರ್ಕಾರದಿಂದ ಊಟ, ವೈದ್ಯಕೀಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರತಿವಾದ ಮಂಡಿಸಿದರು. ಆಕ್ಷೇಪಣೆ ಸಲ್ಲಿಸಲು ಒಂದು ವಾರ ಕಾಲಾವಕಾಶವನ್ನು ಸರ್ಕಾರ ಕೋರಿದ್ದರಿಂದ ವಿಚಾರಣೆಯನ್ನು ಜನವರಿ 22ಕ್ಕೆ ಮುಂದೂಡಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ದಳಪತಿ ವಿಜಯ್ (Thalapathy Vijay) ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದವರು. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಈಗ ರಾಜಕೀಯಕ್ಕೆ ಬರಲು ಅವರು ಅಡಿಯಾಗುತ್ತಿದ್ದಾರೆ. ಅವರ ಕೊನೆಯ ಚಿತ್ರ ‘ಜನ ನಾಯಗನ್’ಗಾಗಿ ಅಭಿಮಾನಿಗಳು ಕಾತುರದಿಂದ ಕಾದಿದ್ದರು. ಆದರೆ, ಈಗ ಸಿನಿಮಾ ರಿಲೀಸ್ ತಾತ್ಕಲಿಕವಾಗಿ ಮುಂದಕ್ಕೆ ಹೋಗಿದೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ. ಇದರ ಹಿಂದೆ ರಾಜಕೀಯದ ಕೆಸರೆರೆಚಾಟ ಇರಬಹುದು ಎಂದು ಕೂಡ ಊಹಿಸಲಾಗುತ್ತಿದೆ.
ಜನ ನಾಯಗನ್ ಚಿತ್ರಕ್ಕೆ ಸೆನ್ಸಾರ್ ಮಾಡಿಸಲು ‘ಕೆವಿಎನ್’ ಸಂಸ್ಥೆ ಡಿಸೆಂಬರ್ 18ರಂದೇ ಸಿನಿಮಾ ಸಲ್ಲಿಕೆ ಮಾಡಿತ್ತು. ಸಿನಿಮಾ ನೋಡಿದ ಮಂಡಳಿ 27 ಕಡೆ ಬದಲವಾಣೆ/ಕಟ್ಗೆ ಸೂಚನೆ ನೀಡಿತ್ತು. ಇದನ್ನು ಸಿನಿಮಾ ಪಾಲಿಸಿತ್ತು. ನಂತರ ಸಿನಿಮಾನ ಮರು ಸಲ್ಲಿಕೆ ಮಾಡಿತ್ತು. ಆದರೆ, ಇದನ್ನು ಮಂಡಳಿ ಒಪ್ಪಿಲ್ಲ. ವಿಶೇಷ ಮಂಡಳಿಗೆ ಸಿನಿಮಾ ವೀಕ್ಷಿಸಲು ಶಿಫಾರಸು ಮಾಡಲು ಸೂಚನೆ ನೀಡಿತ್ತು. ಸೆನ್ಸಾರ್ ಮಂಡಳಿಯಿಂದ ಸರಿಯಾದ ರೆಸ್ಪಾನ್ಸ್ ಇಲ್ಲ ಆರೋಪವನ್ನೂ ತಂಡ ಮಾಡಿದೆ. ಈ ಎಲ್ಲಾ ಕಾರಣದಿಂದ ಸಿನಿಮಾ ತಂಡ ಆಕ್ರೋಶ ಹೊರಹಾಕಿತ್ತು.
ಈ ವಿಷಯವಾಗಿ ಕೆವಿಎನ್ ನಿರ್ಮಾಣ ಸಂಸ್ಥೆ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ. ಸಿನಿಮಾ ತಂಡ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದ್ದು, ಜನವರಿ 9ಕ್ಕೆ ನೀಡುವ ಸಾಧ್ಯತೆ ಇದೆ. ಸೆನ್ಸಾರ್ ಪ್ರಮಾಣಪತ್ರ ಸಿಗದ ಹಿನ್ನೆಲೆಯಲ್ಲಿ ಸಿನಿಮಾ ರಿಲೀಸ್ ತಾತ್ಕಾಲಿಕವಾಗಿ ಮುಂದಕ್ಕೆ ಹೋಗಿದೆ.ಈ ಬಗ್ಗೆ ಕೆವಿಎನ್ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಮಾಹಿತಿ ನೀಡಿದೆ.
ದಳಪತಿ ವಿಜಯ್ ಕೊನೆಯ ಸಿನಿಮಾ ಎಂಬ ಕಾರಣದಿಂದ ‘ಜನ ನಾಯಗನ್’ ಮೇಲಿನ ನಿರೀಕ್ಷೆ ಹೆಚ್ಚಿತ್ತು. ರಿಲೀಸ್ಗೂ ಮೊದಲೇ ಮುಂಗಡ ಟಿಕೆಟ್ ಬುಕಿಂಗ್ನಿಂದ ಸಿನಿಮಾ ಕೋಟಿ ಕೋಟಿ ಬಿಸ್ನೆಸ್ ಮಾಡಿತ್ತು. ಆದರೆ, ಈಗ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿರುವುದರಿಂದ ಆ ಹಣವನ್ನು ಪ್ರೇಕ್ಷಕನಿಗೆ ಮರಳಿ ನೀಡಬೇಕಾದ ಸವಾಲು ಇದೆ. ಒಂದೊಮ್ಮೆ ವಾರದ ಒಳಗೆ ಎಲ್ಲವೂ ಕ್ಲಿಯರ್ ಆದರೆ, ಜನವರಿ 14ರಂದೇ ಸಿನಿಮಾ ರಿಲೀಸ್ ಆಗಬಹುದು ಎನ್ನಲಾಗುತ್ತಿದೆ.
ಹಿಂದೂ ಧರ್ಮ ಮತ್ತು ಸನಾತನ ಸಂಸ್ಕೃತಿಯಲ್ಲಿ ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಎಂಬುದು ಒಂದು ಪ್ರಮುಖ ನಂಬಿಕೆಯಾಗಿದೆ. ಹಿರಿಯರು ಸಹ ಈ ಮಾತನ್ನು ಹೇಳುತ್ತಾರೆ. ಸತ್ತವರ ಸದ್ಗುಣಗಳು ಮತ್ತು ಅವರು ಮಾಡಿದ ಉತ್ತಮ ಕಾರ್ಯಗಳ ಬಗ್ಗೆ ಮಾತನಾಡುವುದು ಶುಭಕರ. ಆದರೆ, ಅವರ ಬಗ್ಗೆ ಟೀಕೆ ಅಥವಾ ನಕಾರಾತ್ಮಕ ಮಾತುಗಳನ್ನು ಆಡುವುದು ಶಾಸ್ತ್ರೋಕ್ತವಾಗಿ ಅಶುಭ ಎಂದು ಪರಿಗಣಿಸಲಾಗುತ್ತದೆ. ಮನುಸ್ಮೃತಿಯ ಪ್ರಕಾರ, ಮೃತ ವ್ಯಕ್ತಿಗಳು ಭೌತಿಕವಾಗಿ ಇಲ್ಲದಿದ್ದರೂ, ಅವರ ಬಗ್ಗೆ ಮಾತನಾಡುವುದು ಅಥವಾ ಅವರನ್ನು ನೆನಪಿಸಿಕೊಳ್ಳುವುದು ನಮ್ಮ ಮನಸ್ಸು ಮತ್ತು ಜೀವನದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಇಂತಹ ನಕಾರಾತ್ಮಕ ಮಾತುಗಳು ನಮ್ಮ ಪಾಪಗಳನ್ನು ಹೆಚ್ಚಿಸಿ, ದೈವಬಲವನ್ನು ಕುಗ್ಗಿಸುತ್ತವೆ ಎಂದು ಹೇಳಲಾಗುತ್ತದೆ. ಮಹಾಭಾರತದಲ್ಲಿ, ಯುಧಿಷ್ಠಿರರು ಭೀಷ್ಮರಿಂದ ಮರಣಿಸಿದವರನ್ನು ಅವಮಾನಿಸಬಾರದು ಎಂಬ ಪಾಠವನ್ನು ಕಲಿತರು. ಹೀಗೆ ಮಾಡುವುದರಿಂದ ನಮ್ಮ ವಂಶ ಮತ್ತು ಕುಟುಂಬಕ್ಕೆ ಕಷ್ಟಗಳು ಎದುರಾಗಬಹುದು ಎಂದು ನಂಬಲಾಗಿದೆ. ಸೂರ್ಯೋದಯ, ಸೂರ್ಯಾಸ್ತ, ಮಧ್ಯಾಹ್ನ, ಮನೆಯಲ್ಲಿ, ದೇವಸ್ಥಾನದಲ್ಲಿ ಅಥವಾ ಪ್ರಯಾಣದ ಸಮಯದಲ್ಲಿ ಸತ್ತವರ ಬಗ್ಗೆ ಧನಾತ್ಮಕವಾಗಿ ಮಾತನಾಡುವುದು ಶುಭಕರ ಎಂದು ಧರ್ಮಗ್ರಂಥಗಳು ತಿಳಿಸುತ್ತವೆ. ಒಟ್ಟಾರೆ, ಮೃತ ವ್ಯಕ್ತಿಗಳ ಬಗ್ಗೆ ಕೆಟ್ಟದಾಗಿ ಮಾತನಾಡುವುದರಿಂದ ಆರೋಗ್ಯ ಸಮಸ್ಯೆಗಳು, ಆರ್ಥಿಕ ತೊಂದರೆಗಳು ಮತ್ತು ಆಕಸ್ಮಿಕ ಅಪಘಾತಗಳಂತಹ ಕೆಟ್ಟ ಪರಿಣಾಮಗಳು ಎದುರಾಗಬಹುದು ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.
ಬೆಂಗಳೂರು, ಜನವರಿ 8: ಬೆಂಗಳೂರಿನಲ್ಲಿ ಆಟೋ ಮತ್ತು ಕ್ಯಾಬ್ ಸೇವೆಗಳಿಗೆ ಹೆಸರುವಾಸಿಯಾದ ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಮುಂತಾದ ಅಗ್ರಿಗೇಟರ್ ಕಂಪನಿಗಳು ಪ್ರಯಾಣಿಕರಿಂದ ಕಡ್ಡಾಯವಾಗಿ ಟಿಪ್ಸ್ ಪಡೆಯುವ ನೀತಿಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ. ಇದುವರೆಗೆ, ಕ್ಯಾಬ್ ಬುಕ್ ಮಾಡುವಾಗ ಆ್ಯಪ್ಗಳಲ್ಲಿ ಪ್ರಯಾಣ ದರದ ಜೊತೆಗೆ 20, 40, 60 ರೂಪಾಯಿ ಟಿಪ್ಸ್ ನೀಡುವ ಆಯ್ಕೆ ಇದ್ದು, ಅದನ್ನು ಆಯ್ಕೆ ಮಾಡದಿದ್ದರೆ ಬೇಗನೆ ಕ್ಯಾಬ್ ಬುಕ್ ಆಗುತ್ತಿರಲಿಲ್ಲ. ಈ ಟಿಪ್ಸ್ ನೀಡಿದರೆ ವಾಹನಗಳು ಬೇಗ ಸಿಗುತ್ತವೆ ಎಂಬ ಅಲಿಖಿತ ನಿಯಮ ಗ್ರಾಹಕರ ಸುಲಿಗೆಗೆ ಕಾರಣವಾಗಿತ್ತು.
ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಆದೇಶದ ಪ್ರಕಾರ, ಅಪ್ಲಿಕೇಷನ್‌ಗಳಲ್ಲಿ ಹೆಚ್ಚುವರಿ ಟಿಪ್ಸ್ ಆಯ್ಕೆಯನ್ನು ಕಡ್ಡಾಯವಾಗಿ ನೀಡುವಂತಿಲ್ಲ. ಟ್ರಿಪ್ ಮುಗಿದ ನಂತರ ಗ್ರಾಹಕರು ಸ್ವಯಂಪ್ರೇರಿತವಾಗಿ ಟಿಪ್ಸ್ ನೀಡಬಹುದು. ಈ ಟಿಪ್ಸ್ ಸಂಪೂರ್ಣವಾಗಿ ಚಾಲಕರ ಖಾತೆಗೆ ನೇರವಾಗಿ ಹೋಗಬೇಕು, ಇದರಲ್ಲಿ ಅಗ್ರಿಗೇಟರ್ ಕಂಪನಿಗಳು ಯಾವುದೇ ಪಾಲನ್ನು ಕೇಳುವಂತಿಲ್ಲ. ಈ ನಿರ್ಧಾರದಿಂದ ಬೆಂಗಳೂರಿನ ಪ್ರಯಾಣಿಕರು ಮತ್ತು ಆಟೋ, ಕ್ಯಾಬ್ ಚಾಲಕರು ಸಂತಸಗೊಂಡಿದ್ದಾರೆ. ಅಲ್ಲದೆ, ಮಹಿಳಾ ಸುರಕ್ಷತೆಗಾಗಿ ಮಹಿಳಾ ಚಾಲಕರ ಆಯ್ಕೆಗೂ ಅವಕಾಶ ನೀಡುವಂತೆ ಸೂಚಿಸಲಾಗಿದೆ.
ಈ ಹೊಸ ನಿಯಮಕ್ಕೆ ಪ್ರಯಾಣಿಕರು ವ್ಯಾಪಕವಾಗಿ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರತಿದಿನ ಕೆಲಸಕ್ಕೆ ತೆರಳುವವರಿಗೆ 10, 20, 30 ರೂಪಾಯಿ ಟಿಪ್ಸ್ ನೀಡುವುದು ಆರ್ಥಿಕವಾಗಿ ಕಷ್ಟಕರವಾಗಿತ್ತು. ಇದು ಅವರ ಜೇಬಿಗೆ ಹೊರೆಯಾಗುತ್ತಿತ್ತು ಎಂದು ಗ್ರಾಹಕರೊಬ್ಬರು ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ಈ ವಿಷಯದಲ್ಲಿ ಮಧ್ಯಪ್ರವೇಶಿಸಿರುವುದು ಬಹಳ ಅವಶ್ಯಕವಾಗಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪರಿಷ್ಕೃತ ನಿಯಮಗಳನ್ನು ದೇಶದ ಎಲ್ಲಾ ರಾಜ್ಯಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜನವರಿ 8, ಗುರುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಸಿದ್ದಾರೆ. ಈ ದಿನವು ಪುಬ್ಬಾ ನಕ್ಷತ್ರದಲ್ಲಿ ಚಂದ್ರನ ಸಂಚಾರದೊಂದಿಗೆ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ಈ ದಿನದ ರಾಹುಕಾಲವು ಮಧ್ಯಾಹ್ನ 1:51 ರಿಂದ 3:17 ರವರೆಗೆ ಇರುತ್ತದೆ. ಸರ್ವಸಿದ್ಧಿ, ಸಂಕಲ್ಪ ಹಾಗೂ ಶುಭ ಕಾಲವು ಮಧ್ಯಾಹ್ನ 12:26 ರಿಂದ 1:50 ರವರೆಗೆ ಇರುತ್ತದೆ. ಸೂರ್ಯನು ಧನು ರಾಶಿಯಲ್ಲಿ ಮತ್ತು ಚಂದ್ರನು ಸಿಂಹ ರಾಶಿಯಲ್ಲಿ ಸಂಚರಿಸುತ್ತಾನೆ. ಮಕರ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ ಮತ್ತು ವ್ಯವಹಾರದಲ್ಲಿ ಲಾಭದ ಯೋಗವಿದೆ. ಕನ್ಯಾ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ನಿಧಾನ ಗತಿ ಕಂಡರೂ ಸಂಧ್ಯಾಕಾಲಕ್ಕೆ ಶುಭವಾಗಲಿದೆ. ಪ್ರಯಾಣ ಯೋಗ, ಆರ್ಥಿಕ ಸ್ಥಿತಿ, ಸಂಬಂಧಗಳಲ್ಲಿನ ಬದಲಾವಣೆಗಳು ಮತ್ತು ಆರೋಗ್ಯದ ಕುರಿತು ಪ್ರತಿಯೊಂದು ರಾಶಿಗಳಿಗೂ ಗುರೂಜಿ ಅವರು ಮಾರ್ಗದರ್ಶನ ನೀಡಿದ್ದಾರೆ. ಅಲ್ಲದೆ, ಪ್ರತಿಯೊಂದು ರಾಶಿಯವರಿಗೂ ಅದೃಷ್ಟದ ಸಂಖ್ಯೆ, ಬಣ್ಣ ಮತ್ತು ಜಪಿಸಬೇಕಾದ ಮಂತ್ರವನ್ನೂ ಸೂಚಿಸಲಾಗಿದೆ.
ಸ್ತ್ರೀಯರಿಗೆ ಮಾತುಗಾರಿಕೆಯಿಂದ ಪ್ರಶಂಸೆ ಸಿಗಲಿದೆ. ನಯವಾದ ಮಾತಿನಿಂದ ನಿಮ್ಮನ್ನು ಕಾರ್ಯಕ್ಕೆ ಒಲಿಸಿಬಹುದು. ಉದ್ಯೋಗದಲ್ಲಿ ಭಡ್ತಿ ಸಿಗುವ ಸಾಧ್ಯತೆ ಇದೆ. ಗೊಂದಲದಿಂದ ಇರುವ ಮನಸ್ಸು ಇಂದು ಪ್ರಶಾಂತವಾಗಲಿದೆ. ಆತ್ಮೀಯರ ಭೇಟಿಯಿಂದ ನಿಮಗೆ ಸಮಾಧಾನ ಸಿಗಲಿದೆ. ಅವರ ಜೊತೆ ಸಂತೋಷದ ಸಮಯವನ್ನು ನೆನಪಿಸಿಕೊಳ್ಳುವಿರಿ. ನೀವು ಪ್ರಸಿದ್ಧಿಯನ್ನು ಪಡೆಯಲು ಆಸಕ್ತಿಯು ಹೆಚ್ಚುವುದು. ಕೆಲವು ವಿಚಾರವನ್ನು ನೀವೇ ದೊಡ್ಡ ಮಾಡಿಕೊಂಡು ತಲೆಯನ್ನು ಹಾಳು ಮಾಡಿಕೊಳ್ಳುವಿರಿ. ಬಹಳ ದಿನಗಳಿಂದ ಕಾರ್ಮಿಕರ ವಿಚಾರದಲ್ಲಿ ನಿಮಗೆ ಅಸಮಾಧಾನವಿದ್ದು ಅದನ್ನು ತೋರ್ಪಡಿಸುವಿರಿ. ಸಾಹಸದಿಂದ ಯಶಸ್ಸು ಸಿಗುತ್ತದೆ ಎಂಬ ಭ್ರಮೆ ಬರಬಹುದು.
ವೃಷಭ ರಾಶಿ:
ಅನಿರೀಕ್ಷಿತ ಪ್ರಯಾಣದಿಂದ ಆಯಾಸವು ಅಧಿಕವಾದೀತು. ಯಾವುದಕ್ಕೂ ನಿರಾಸೆ ಇಟ್ಟುಕೊಳ್ಳುವುದು ಬೇಡ. ಸಮಯವು ಬೇಕಾಗಬಹುದು. ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚು ಖರ್ಚು ಮಾಡಬೇಕಾಗಿಬರಬಹುದು. ಗೊಂದಲದಿಂದ ಹೊರಬರಲು ಸಹಾಯವನ್ನು ಪಡೆಯಿರಿ. ಮನಸ್ಸಿಗೆ ನಿಮ್ಮವರು ಆಡಿದ ಮಾತುಗಳು ಹಿಂಸೆಯನ್ನು ಕೊಡಬಹುದು. ತಾಯಿಯಿಂದ ನಿಮಗೆ ಲಾಭವಾಗಬಹುದು. ಇಂದಿನ ವ್ಯರ್ಥ ಓಡಾಟದಿಂದ ನಿಮಗೆ ಆಯಾಸವಾಗುವುದು. ಇಷ್ಟರೊಳಗೆ ಆಗಬೇಕಾದ ಸರ್ಕಾರಿ ಕೆಲಸವು ಮತ್ತೂ ಮುಂದಕ್ಕೆ ಹೋಗುವುದು. ಯಂತ್ರಗಳಿಂದ ದೇಹಕ್ಕೆ ತೊಂದರೆ ಆಗಬಹುದು. ಬಂದ ಅವಕಾಶವನ್ನು ಬಿಟ್ಟು ಅನಂತರ ದುಃಖಿಸುವುದರಲ್ಲಿ ಅರ್ಥವಿರದು. ಆರ್ಥಿಕ ತೊಂದರೆಗೆ ನೀವು ಬಂಧುಗಳ ಸಹಾಯವನ್ನು ಪಡೆಯಬಹುದು.
ಮಿಥುನ ರಾಶಿ:
ನಿಮ್ಮ ಪಾಲಿಗೆ ಎಲ್ಲ ಬಾಂಧವ್ಯಗಳೂ ಸಮಯಕ್ಕೆ ಆಗಲಾರವು. ಸಹೋದ್ಯೋಗಿಗಳಿಂದ ಕಾರ್ಯಗಳಿಗೆ ವಿಘ್ನವುಂಟಾಗುವುದು. ತಪ್ಪು ನಿರ್ಧಾರಗಳಿಂದ ಆರ್ಥಿಕ ಹೊಡೆತವನ್ನು ತಿನ್ನಬೇಕಾಗುವುದು. ಸ್ಥಿರಾಸ್ತಿಯ ಸಂಪಾದನೆಗೆ ಆಪ್ತರ ಮಾರ್ಗದರ್ಶನವನ್ನು ಪಡೆದುಕೊಳ್ಳುವುದು ಉತ್ತಮ. ಇಂದು ವಿದೇಶಕ್ಕೆ ಪ್ರಯಾಣ ಹೋಗುವ ಅವಕಾಶಗಳು ತೆರೆದುಕೊಳ್ಳಬಹುದು. ನಿಮ್ಮ ಪ್ರಯತ್ನಕ್ಕೆ ಫಲವು ಇಂದೇ ಸಿಗಲಿ ಎಂಬ ನಿರೀಕ್ಷೆ ಬೇಡ. ಇಂದು ನೀವು ತಂದೆಯವರಿಗೆ ಎದುರು ಮಾತನಾಡಿ ಅವರ ಮನಸ್ಸನ್ನು ನೋಯಿಸುವಿರಿ. ಪಾಲುದಾರಿಕೆಯಲ್ಲಿ ವ್ಯತ್ಯಾಸವನ್ನು ಮಾಡಬೇಕಾದೀತು. ಸುಮ್ಮನೇ ಎಲ್ಲಗಾದರೂ ಹೋಗಬೇಕು ಎಂದು ಅನ್ನಿಸುವುದು.
ಕರ್ಕಾಟಕ ರಾಶಿ:
ವಾಹನ ಸಂಚಾರದಲ್ಲಿ ವ್ಯತ್ಯಯವಾಗುವುದು. ಆರ್ಥಿಕಲಾಭವನ್ನು ಕೇವಲ ತರ್ಕದಿಂದ ಸಾಧಿಸಲಾಗದು. ಎಲ್ಲ ರೀತಿಯಿಂದಲೂ ಅನುಕೂಲವಾಗಲಿ ಎಂಬ ಮನೋಭಾವವು ಇರಲಿದೆ. ಹಿತಶತ್ರುಗಳ ತೊಂದರೆಯ ನಡುವೆಯೂ ನಿಮ್ಮ ಅಭಿವೃದ್ಧಿಯು ಆಗಲಿದೆ. ಇದರಿಂದ ನಿಮ್ಮ ಅಳಿದುಳಿದ ಶತ್ರುಗಳು ನಾಶವಾಗುವರು. ನಿಮ್ಮದೇ ಶ್ರಮದಿಂದ ಭೂಲಾಭವನ್ನು ಮಾಡಿಕೊಂಡರೂ ನಿಮಗೆ ಸಲ್ಲದ ಮಾತುಗಳನ್ನು ಕೇಳಬೇಕಾದೀತು. ಆಸ್ತಿಯ ಗಳಿಕೆಯಲ್ಲಿ ಎಲ್ಲವೂ ಅನಾಯಾಸವಾಗಿ ನಡೆಯದು. ಪ್ರಯೋಗಾತ್ಮಕ ವಿಚಾರಕ್ಕೆ ಒಲವು ಹೆಚ್ಚಾಗುವುದು. ಸಣ್ಣ ವಿಚಾರಕ್ಕೆ ನೀವು ಕೋಪಗೊಂಡು ಮನಸ್ಸನ್ನು ಹಾಳು ಮಾಡಿಕೊಳ್ಳುವಿರಿ. ಇನ್ನೊಬ್ಬರನ್ನು ನಿಂದಿಸುವ ಮಾತು ವಿವಾದಕ್ಕೆ ಗುರಿಯಾಗಬಹುದು. ಬೇಕಾದಲ್ಲಿ ಮಾತ್ರ ನಿಮ್ಮ ಪ್ರಭಾವವನ್ನು ಬಳಸುವಿರಿ.
ಸಿಂಹ ರಾಶಿ:
ಶುಭ ಕಾರ್ಯದಲ್ಲಿ ನಿಮಗೆ ಹೆಚ್ಚು ಆಸಕ್ತಿಯು ಇರಲಿದೆ. ಆಸ್ತಿಯ ಮಾರಾಟದಿಂದ ನಿಮಗೆ ಹೆಚ್ಚಿನ ಲಾಭವು ಸಿಗಲಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ನಿಮ್ಮ ಅಸ್ತಿತ್ವವು ಹೆಚ್ಚಾಗಿ ತೋರುವುಸು. ಭೂಸ್ವಾದೀನವನ್ನು ಮಾಡಿಕೊಳ್ಳುವ ಸಂದರ್ಭವು ಬರಬಹುದು. ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಲು ಸಿದ್ಧರಿರುವಿರಿ. ನಿಮ್ಮ ತಪ್ಪೇ ಇದ್ದರೂ ಅದನ್ನು ನೀವು ಒಪ್ಪಿಕೊಳ್ಳಲಾರಿರಿ. ಸಹೋದರರ ನಡುವೆ ವಾಗ್ವಾದವು ಆಗಬಹುದು. ಇಂದಿನ ವ್ಯವಹಾರವು ಎಚ್ಚರಿಕೆಯಿಂದ ಇರಲಿ. ಕೆಲವೊಮ್ಮೆ ನಿಮ್ಮ ಮಾತುಗಳೇ ನಿಮಗೆ ಮುಳುವಾಗಬಹುದು. ಮನೋವಿಕಾರಕ್ಕೆ ಕಾರ್ಯದಲ್ಲಿ ಮಗ್ನರಾಗುವುದು ಬಿಟ್ಟರೆ ಬೇರೆ ಗತಿಯಿಲ್ಲ. ಶತ್ರುಗಳನ್ನು ನಿಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನವನ್ನು ಮಾಡುವಿರಿ.
ಕನ್ಯಾ ರಾಶಿ:
ಬಾಂಧವರ ನಡುವೆ ವ್ಯವಹಾರದ ಕಾರಣ ಭಿನ್ನಾಭಿಪ್ರಾಯ ಬರಬಹುದು. ಇಂದಿನ ಮನೆಯ ವಾತಾವರಣದುಮನದ ನಿಮ್ಮ ಅಧ್ಯಯನಕ್ಕೆ ತೊಡಬಲಕಾಗಬಹುದು. ದಾಯಾದಿಗಳು ನಿಮ್ಮ ಮೇಲೆ ಅಪವಾದವನ್ನು ಮಾಡಬಹುದು. ಕಾರ್ಯದಲ್ಲಿ ಜಯವಿದ್ದರೂ ಆರ್ಥಿಕ ನಷ್ಟವು ಆಗಬಹುದು. ಹಿತಶತ್ರುಗಳ ಕಾರಣದಿಂದ ಇಂದಿನ ವ್ಯವಹಾರವು ಹಿಂದೆ ಸಾಗಲಿದೆ. ಒಳ್ಳೆಯದನ್ನು ಮಾಡಲು ಅನುಕೂಲವಿದ್ದರೂ ಮಾಡುವ ಮನಸ್ಸು ಬಾರದು. ತಂದೆಯ ಜೊತೆ ನಿಮ್ಮ ಭವಿಷ್ಯದ ಚಿಂತನೆಯನ್ನು ಮಾಡಲಿದ್ದೀರಿ. ಇಂದಿನ ಶುಭವಾರ್ತೆಯು ನಿಮ್ಮ ಕಾರ್ಯಕ್ಕೆ ಉತ್ಸಾಹವನ್ನು ಕೊಡುವುದು. ನೀವು ಇನ್ನೊಬ್ಬರ ಮೇಲಿನ ಅವಲಂಬನೆಯನ್ನು ಕಡಿಮೆಮಾಡುವಿರಿ. ಸಣ್ಣ ಉಳಿತಾಯಕ್ಕೆ ಇಂದು ಬೆಲೆಯು ಬಂದಂತಾಗುವುದು.
ತುಲಾ ರಾಶಿ:
ಕಛೇರಿಯ ಕಾರ್ಯದ ನಿಮಿತ್ತ ಓಡಾಟವನ್ನು ಮಾಡಬೇಕಾಗಿದ್ದು ನಿಮಗೆ ಕಷ್ಟವಾದೀತು. ವಿತಂಡ ವಾದವನ್ನು ಮಾಡಿ ಎಲ್ಲರಿಂದ ದೂರಾಗುವಿರಿ. ಶತ್ರುಗಳು ಮಾನಸಿಕ ಕಿರುಕುಳವನ್ನು ಯಾವ ರೀತಿಯಿಂದಲೂ ಕೊಡಬಹುದು. ನಿಮ್ಮ ಕೆಲಸಕ್ಕೆ ಸಮಯದ ಮಿತಿಯನ್ನು ಇಟ್ಟುಕೊಳ್ಳುವುದು ಉತ್ತಮ. ಹಿರಿಯರ ತಿಳಿವಳಿಕೆಯು ಅಪಮಾನದಂತೆ ಕಾಣಬಹುದು. ಆಲಸ್ಯವೆನ್ನುವ ಶತ್ರುವನ್ನು ಮಟ್ಟಹಾಕಿ ಜೀವನಿಗೆಲ್ಲಬೇಕು. ಕಛೇರಿಯ ಸ್ಥಳದಲ್ಲಿ ಬಹಳ ಎಚ್ಚರಿಕೆಯಿಂದ ಇರಿ. ಮಿತವಾದ ಮಾತಿರಲಿ. ಯಾರಿಂದಲಾದರೂ ಆರ್ಥಿಕ ಬೆಂಬಲವನ್ನು ನಿರೀಕ್ಷಿಸುವಿರಿ. ವ್ಯವಹಾರದಲ್ಲಿ ಬರುವ ಸಮಸ್ಯೆಯನ್ನು ಮೊದಲೇ ಯೋಚಿಸಿ ಅದಕ್ಕೆ ಬೇಕಾದ ಸಿದ್ಧತೆಯಲ್ಲಿ ಮಾಡಿ.
ವೃಶ್ಚಿಕ ರಾಶಿ:
ಅಕ್ರಮ ವ್ಯವಹಾರಗಳು ಎಲ್ಲರಿಗೂ ಗೊತ್ತಾದೀತು. ಉದ್ಯೋಗದಲ್ಲಿ ಪ್ರಗತಿ ಇಲ್ಲ ಎಂದು ಬೇಸರಗೊಂಡಿದ್ದರೆ ನಿಮಗೆ ಅಲ್ಪ ನೆಮ್ಮದಿಯ ಸಂಗತಿಯು ಇರಲಿದೆ. ನೌಕರರ ಕಾರ್ಯವು ನಿಮಗೆ ಸಂತೋಷವನ್ನು ತರದು. ಮುಖಸ್ತುತಿ ಕೆಲವೊಮ್ಮೆ ನಿಮಗೆ ಪ್ರಯೋಜನವಾಗಲಿದೆ. ಪ್ರತಿಷ್ಠಿತ ಸಂಸ್ಥೆಯ ಉನ್ನತ ಅಧಿಕಾರಕ್ಕೆ ಕರೆ ಬರಬಹುದು. ಲಾಭವಿಲ್ಲದ ಕಾರ್ಯದಲ್ಲಿ ಆಸಕ್ತಿಯು ಇರದು. ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ. ಕಣ್ಣಿನ ತೊಂದರೆಯು ಹೆಚ್ಚಾಗಬಹುದು. ಸಮಾರಂಭಗಳಿಗೆ ನೀವು ಮುಖ್ಯರಾಗಿ ಇರುವಿರಿ. ನಿಮ್ಮ ಮೇಲಧಿಕಾರಿಗಳು ನಿಮ್ಮ ಕೆಲಸಕ್ಕೆ ಅಸಮಾಧಾನಗೊಳ್ಳುವರು. ನಿಮಗೆ ಗೊತ್ತಿಲ್ಲದೇ ಇರುವ ವಿಚಾರಗಳನ್ನು ಕೇಳಿ ಪಡೆಯಿರಿ.
ಧನು ರಾಶಿ:
ದೀರ್ಘಕಾಲದ ಪ್ರೇಮವು ಸಾಕೆನಿಸುವುದು. ಏನನ್ನೂ ಮಾಡದೇ ಸುಮ್ಮನಿರಲಾರಿರಿ. ಸಂತಾನ ಪ್ರಾಪ್ತಿಯಿಂದ ನಿಮಗೆ ಖುಷಿ ಸಿಗಲಿದೆ. ಅವಿವಾಹಿತರಿಗೆ ವಿವಾಹದಿಂದ ಮನೆಯಲ್ಲಿ ನೆಮ್ಮದಿಯು ಇರುವುದು. ಆಸ್ತಿಯ ಖರೀದಿಗೆ ಬೇಕಾದ ಹಣವನ್ನು ನೀವು ಇನ್ನೊಬ್ಬರಿಂದ ಸಾಲವಾಗಿ ಪಡೆಯುವಿರಿ. ಭವಿಷ್ಯದ ಬಗ್ಗೆ ಮನಸ್ಸಿನಲ್ಲಿ ನಾನಾ ಚಿಂತೆಗಳು ಹುಟ್ಟಬಹುದು. ಕೆಲವು ಸನ್ನಿವೇಶವನ್ನು ನೀವು ನಗಣ್ಯ ಮಾಡುವುದು ಉತ್ತಮ. ಸಂಗಾತಿಯ ಸಲಹೆಯನ್ನೂ ಪಡೆದು ಸರಿಯಾದ ನಿರ್ಧಾರಕ್ಕೆ ಬನ್ನಿ. ಇಂದು ಸ್ತ್ರೀಯರಿಗೆ ಸೌಂದರ್ಯಪ್ರಜ್ಞೆಯು ಅಧಿಕವಾಗಿದ್ದು ಹೆಚ್ಚು ಸಮಯವನ್ನು ಕೊಡುವಿರಿ. ಉದ್ಯೋಗದ ಸ್ಥಳವು ಬೆಲೆಯು ಕಡಿಮೆ ಆದಂತೆ ತೋರುವುದು. ಕ್ಷಣಿಕ ಸುಖಕ್ಕಾಗಿ ಸಂಪತ್ತನ್ನು ಅಧಿಕವಾಗಿ ತ್ಯಾಗ ಮಾಡುವಿರಿ.
ಮಕರ ರಾಶಿ:
ನೀವು ಹಿರಿಯರ ಜೊತೆ ಗೌರವಯುತವಾಗಿ ವರ್ತಿಸಿ. ಕೆಲವರು ಅಕಾರಣವಾಗಿ ಬಿಟ್ಟುಹೋಗಬಹುದು. ಅಲ್ಪ ಪ್ರಗತಿಯೂ ನಿಮಗೆ ಸಂತೋಷವನ್ನು ಕೊಡುವುದು. ನಿಮ್ಮ ಸಮಸ್ಯೆಯು ಗಂಭೀರ ರೂಪವನ್ನು ಪಡೆಯಬಹುದು. ಕಾರ್ಯಗಳನ್ನು ಸರಳವಾಗಿ ಮಾಡುವುದನ್ನು ರೂಢಿಸಿಕೊಳ್ಳಬೇಕು. ವಾಹನದಲ್ಲಿ ಸಂಚರಿಸುವಾಗ ಮರಣಭೀತಿಯು ನೆನಪಾಗುವುದು. ಎಲ್ಲರಿಂದ ದೂರವಾಗಲು ಬಯಸುವಿರಿ. ಇಂದು ನಿಮ್ಮ ಅಗತ್ಯ ಕಾರ್ಯಗಳಿಗೆ ಸಮಯವನ್ನು ಕೊಡುವುದು ಕಷ್ಟವಾದೀತು. ನೀವು ಮನೆಯನ್ನು ಖರೀದಿಸುವ ಅಲೋಚನೆಯಲ್ಲಿ ಇರುವಿರಿ. ಉದ್ಯೋಗದಲ್ಲಿ ದೂರದೃಷ್ಟಿ ಇರಲಿ. ಕೃಷಿ ಚಟುವಟಿಕೆಯಲ್ಲಿ ಆಸಕ್ತಿಯು ಅಧಿಕವಾಗಬಹುದು.
ಕುಂಭ ರಾಶಿ:
ಸಾಮರಸ್ಯದ ಅಭಾವದಿಂದ ಮಾನಸಿಕ ಸ್ಥಿತಿಯು ಅಸಮತೋಲನವಾಗಲಿದೆ. ನಿರೀಕ್ಷಿತ ಲಾಭವು ಆಗದಿದ್ದರೂ ನೆಮ್ಮದಿಗೆ ಕೊರತೆ ಕಾಣದು. ಅಪವಾದವನ್ನು ಸರಿ ಮಾಡಿಕೊಳ್ಳಲು ಬಹಳ ಪ್ರಯತ್ನಿಸುವಿರಿ. ಚಂಚಲವಾದ ಮನಸ್ಸಿನಿಂದ ನಿಮ್ಮ ನಿರ್ಧಾರವು ಪೂರ್ಣವಾಗದು. ವಿಶ್ವಾಸಘಾತದಿಂದ ನಿಮಗೆ ಬೇಸರವಾಗಬಹುದು. ಶುಭ ಕಾರ್ಯವೇ ಆಗಿದ್ದರೆ ದೈವಾನುಗ್ರಹ ನಿಮ್ಮ ಪಾಲಿಗೆ ಇದೆ. ನಿಮ್ಮ ಮಾತನಿಂದ ಇನ್ನೊಬ್ಬರನ್ನು ಘಾಸಿ ಮಾಡುವಿರಿ. ಕಿವಿಯ ನೋವಿನಿಂದ ಸಂಕಟವಾಗುವುದು. ಇಂದು ಫಲವನ್ನು ಅತಿಯಾಗಿ ನಿರೀಕ್ಷಿಸಿ ಸಿಗದೇ ಬೇಸರಗೊಳ್ಳುವಿರಿ. ಸ್ನೇಹಿತರ ಒತ್ತಾಯದ ಮೇರೆಗೆ ಪ್ರಯಾಣ ಮಾಡುವಿರಿ.
ಮೀನ ರಾಶಿ:
ಅನಿರೀಕ್ಷಿತ ತಿರುವುಗಳು ನಿಮ್ಮನ್ನು ಉದ್ವಿಗ್ನಗೊಳಿಸಬಹುದು. ಹೋರಾಟದ ಮನೋಭಾವವು ಇಂದು ಎದ್ದು ತೋರುವುದು. ಕಛೇರಿಯ ಕೆಲಸವು ನಿಮಗೆ ಸಮಾಧಾನ ಕೊಡದು. ನಿದ್ರೆಯು ಸರಿಯಾಗಿ ಆಗದೇ ಕಷ್ಟವಾದೀತು. ಪ್ರೀತಿಪಾತ್ರರ ಜೊತೆ ಧನಾತ್ಮಕವಾದ ಚಿಂತನೆಯನ್ನು ಮಾಡುವಿರಿ. ಉದ್ಯೋಗದಲ್ಲಿ ಸ್ಥಿರತೆಯು ಕಾಣದ ಕಾರಣ ಬದಲಿಸುವಿರಿ. ನಿರಂತರ ಅಸ್ತಿತ್ವದಲ್ಲಿ ಇರುವಂತೆ ನಿಮ್ಮನ್ನು ಇರಿಸಿಕೊಳ್ಳಿ. ನಿಮ್ಮ ಆದಾಯ ಮೂಲವನ್ನು ಎಲ್ಲರ ಜೊತೆ ಹಂಚಿಕೊಳ್ಳುವ ಸಂದರ್ಭವು ಬರಬಹುದು. ನಿಮ್ಮ ಪಾಲಿಗೆ ಬಂದಿದ್ದನ್ನು ಜೋಪಾನವಾಗಿ ರಕ್ಷಿಸಿಕೊಳ್ಳಿ. ಸಂಬಂಧಗಳನ್ನು ಚೆನ್ನಾಗಿ ಇಟ್ಟಕೊಳ್ಳಲು ಇಷ್ಟಪಡುವಿರಿ.
ಜನವರಿ 08, 2026ರ ಪಂಚಾಂಗ:
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಶ್ರವಣಾ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ಷಷ್ಠೀ ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ ಯೋಗ : ಸೌಭಾಗ್ಯ, ಕರಣ : ಗರಜ, ಸೂರ್ಯೋದಯ – 06 – 52 am, ಸೂರ್ಯಾಸ್ತ – 06 – 09 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13-56 – 15:21, ಯಮಗಂಡ ಕಾಲ 06:52 – 08:17, ಗುಳಿಕ ಕಾಲ 09:42 – 11:06
ಮಾನಸಿಕವಾಗಿ ನಿಮಗೆ ಎಷ್ಟೇ ಉತ್ಸಾಹ ಇದ್ದರೂ ಕೆಲಸ- ಕಾರ್ಯಗಳಲ್ಲಿ ತೊಡಗುವ ಮುನ್ನ ದೈಹಿಕವಾದ ಸಾಮರ್ಥ್ಯ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. ಈ ದಿನ ನೀವು ವಿಶ್ರಾಂತಿಗೆ ಆದ್ಯತೆ ನೀಡುವುದು ಒಳ್ಳೆಯದು. ಮಾನಸಿಕವಾಗಿಯೂ ದಿನದ ಎರಡನೇ ಭಾಗದಲ್ಲಿ ಸ್ವಲ್ಪ ಗೊಂದಲವಿರಬಹುದು, ನಿರ್ಧಾರಗಳನ್ನು ಮುಂದೂಡಿ. ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವಿಕೆ ನೆಮ್ಮದಿ ತರಲಿದೆ. ಪ್ರೀತಿ-ಪ್ರೇಮದ ವಿಚಾರದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಮೂಡಬಹುದು. ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಲಾಭದ ನಿರೀಕ್ಷೆ ಇರಲಿದೆ.
ಷೇರು, ಮಲ್ಟಿ ಕಮಾಡಿಟಿಗಳಲ್ಲಿ ಹಣ ತೊಡಗಿಸಿದವರಿಗೆ, ಲೇವಾ ದೇವಿ ವ್ಯವಹಾರ ಮಾಡುವಂಥವರಿಗೆ ಇಂದು ಆಕಸ್ಮಿಕ ಧನ ಲಾಭದ ಯೋಗವಿದೆ. ಆದರೆ ಹತ್ತಿರದವರೇ ನಿಮ್ಮ ಕಾಲೆಳೆಯುವ ಸಾಧ್ಯತೆ ಇರುವುದರಿಂದ ಅಂತರಂಗದ- ವ್ಯವಹಾರದ ಒಳ ಗುಟ್ಟುಗಳನ್ನು ಬಿಟ್ಟುಕೊಡಬೇಡಿ. ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಸವಾಲಿನ ದಿನ. ಸಣ್ಣ ಪ್ರವಾಸಕ್ಕೆ ಯೋಜನೆ ರೂಪಿಸುವಿರಿ. ಕಣ್ಣಿನ ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸಿ. ಶಾರ್ಟ್‌ಕಟ್ ಮೂಲಕ ನಿಮಗೆ ಹಣ ಗಳಿಸುವ ಅವಕಾಶ ಸಿಕ್ಕರೂ ಅತ್ತ ಸುಳಿಯಬೇಡಿ.
ಮಹಿಳೆಯರಿಗೆ ಸ್ವಲ್ಪ ಮಟ್ಟಿಗೆ ಸವಾಲಿನ ದಿನ ಇದಾಗಿರಲಿದೆ. ಮನೆಯ- ಕುಟುಂಬದ ಜವಾಬ್ದಾರಿಗಳು ಇಂದು ಹೆಚ್ಚಾಗಲಿವೆ. ಕಚೇರಿಯಲ್ಲಿ ಬಾಕಿ ಉಳಿದಿದ್ದ ಕೆಲಸಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಶ್ರಮ ಬೇಕಾಗಬಹುದು. ಈ ಹಿಂದೆ ನೀಡಿದ್ದ ಗಡುವಿಗಿಂತ ಮುಂಚಿತವಾಗಿ ಕೆಲಸ ಮುಗಿಸುವಂತೆ ಹೇಳಬಹುದು. ನೆರೆಹೊರೆಯವರ ಜೊತೆ ವಾಗ್ವಾದಕ್ಕೆ ಇಳಿಯಬೇಡಿ. ಆರ್ಥಿಕ ಲಾಭಕ್ಕಿಂತ ಖರ್ಚು ಅಧಿಕವಾಗಿರಲಿದೆ. ಹಳೆ ಬಾಕಿ ಪಾವತಿಸಲು ಅನುಕೂಲಕರ ಸಮಯವಿದು. ಸಂಗಾತಿಯ ಬೆಂಬಲ ನಿಮಗಿರಲಿದೆ.
ಇಂದು ನೀವು ಅಂದುಕೊಂಡ ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ. ಇದೇ ಕಾರಣಕ್ಕೆ ನಿಮ್ಮ ಆತ್ಮವಿಶ್ವಾಸ ಸ್ವಲ್ಪ ಮಟ್ಟಿಗೆ ಕಡಿಮೆ ಆದರೂ ಪ್ರಯತ್ನವೇ ಮಾಡದಂತೆ ಸುಮ್ಮನೆ ಇರುವುದು ಸರಿಯಲ್ಲ. ಆರ್ಥಿಕವಾಗಿ ಸಾಲ ಕೊಡುವ ಅಥವಾ ತೆಗೆದುಕೊಳ್ಳುವ ವ್ಯವಹಾರದಿಂದ ದೂರವಿರುವುದು ಒಳ್ಳೆಯದು. ಸಾಮಾಜಿಕ ಸೇವೆ- ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. ಮನೆಯಲ್ಲಿ ಸಣ್ಣಪುಟ್ಟ ರಿಪೇರಿ ಕೆಲಸಗಳಿಗಾಗಿ ಹಣ ವ್ಯಯವಾಗಬಹುದು. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಇರಲಿ.
ದಿನದ ಆರಂಭದಲ್ಲಿ ಮನಸ್ಸಿಗೆ ಸ್ವಲ್ಪ ಬೇಸರ ಎನಿಸಿದರೂ, ಸಂಜೆಯ ವೇಳೆಗೆ ಶುಭ ಸುದ್ದಿಯೊಂದು ಬರಲಿದೆ. ವಾಹನ ಚಾಲನೆ ಮಾಡುವಾಗ ಏಕಾಗ್ರತೆ ಬಹಳ ಮುಖ್ಯ. ಜತೆಗೆ ಇರುವವರು ಏನು ಹೇಳುತ್ತಿದ್ದಾರೆ ಎಂಬ ಧ್ವನಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಕಿರಿಕಿರಿ ಇರಬಹುದು, ಮೌನವಾಗಿರುವುದು ಸೂಕ್ತ. ಹಳೆಯ ಸ್ನೇಹಿತರ ಭೇಟಿಯಿಂದ ಹಳೆಯ ನೆನಪುಗಳು ಮರುಕಳಿಸಲಿವೆ. ಹೊಟ್ಟೆಯ ಆರೋಗ್ಯಕ್ಕೆ ಸಂಬಂಧಿಸಿದಂತೆ ತೊಂದರೆಯಾದಲ್ಲಿ ಆಹಾರ ಪಥ್ಯ ಮಾಡುವುದು ಅಗತ್ಯ.
ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳಲು ಇಂದು ಸಕಾಲವಲ್ಲ. ಮುಖ್ಯವಾದ ಕಡತಗಳ ಬಗ್ಗೆ ಗಮನವಿರಲಿ, ಕೆಲವು ಫೈಲ್ ಗಳು ಕಳೆದುಕೊಳ್ಳುವ ಸಾಧ್ಯತೆ ಇದೆ. ವಾಹನ ಸಂಚಾರದಲ್ಲಿ ಜಾಗರೂಕತೆ ಇರಲಿ. ಎಷ್ಟು ಖರ್ಚಾದರೂ ಪರವಾಗಿಲ್ಲ ಎಂಬ ಮಾತನ್ನು ನೀವು ಎಲ್ಲಿಯೇ ಆಡುವುದಕ್ಕೂ ಮುನ್ನ ನಾಲ್ಕಾರು ಬಾರಿ ಆಲೋಚಿಸುವುದು ಮುಖ್ಯ. ಇನ್ನು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಓಡಾಟ ನಡೆಸಬೇಕಾಗಬಹುದು. ಇಂದು ಯಾವುದೇ ಹೂಡಿಕೆ ಮಾಡುವ ಮುನ್ನ ಅನುಭವಿಗಳ ಸಲಹೆ ಪಡೆಯಿರಿ.
ಕ್ರೆಡಿಟ್ ಕಾರ್ಡ್ ಬಳಕೆ ಮಾಡುವವರಾದಲ್ಲಿ ಹೊಸ ವಸ್ತುಗಳನ್ನು ಖರೀದಿಸಲು ಮನಸ್ಸು ಮಾಡುವಿರಿ. ದಿನಸಿ ಪದಾರ್ಥಗಳು, ಬೇಕರಿ ಪದಾರ್ಥಗಳ ಖರೀದಿಗೆ ಹಣವನ್ನು ಖರ್ಚು ಮಾಡಲಿದ್ದೀರಿ. ಅನಿರೀಕ್ಷಿತ ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಇರಲಿದೆ. ಯೋಗ ಮತ್ತು ಧ್ಯಾನದಿಂದ ದೈಹಿಕ ಶಕ್ತಿ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಹೊಸ ಗ್ರಾಹಕರ ಸಂಪರ್ಕ ಸಾಧ್ಯವಾಗಲಿದೆ. ಬೆಲೆಬಾಳುವ ವಸ್ತುಗಳನ್ನು, ಸಣ್ಣ- ಪುಟ್ಟ ಚಿನ್ನ- ಬೆಳ್ಳಿ ಒಡವೆಗಳನ್ನು ಜೋಪಾನವಾಗಿಡಿ. ಸರ್ಕಾರಿ ಸವಲತ್ತುಗಳು ಸಿಗುವ ಸಾಧ್ಯತೆ ಇದೆ.
ಎಲ್ಲ ಬೆಳವಣಿಗೆಗಳಿಗೂ ಪ್ರತಿಕ್ರಿಯೆ ನೀಡಲೇ ಬೇಕು ಎಂಬುದು ಕಡ್ಡಾಯ ಏನೂ ಅಲ್ಲ. ಆದ್ದರಿಂದ ನಿಮಗೆ ಸಂಬಂಧ ಪಡದ ವಿಷಯಗಳಲ್ಲಿ ಮೌನಕ್ಕೆ ಶರಣಾಗುವುದು ನಿಮ್ಮ ಕೆಲಸಗಳಿಗೆ ಹೆಚ್ಚು ಪೂರಕವಾಗಲಿದೆ. ಶತ್ರುಗಳ ಕಾಟ ತಗ್ಗಲಿದೆ. ವೃತ್ತಿ ಜೀವನದಲ್ಲಿ ಬದಲಾವಣೆ ಬಯಸುವವರಿಗೆ ಈ ಬಗ್ಗೆ ಮರು ಚಿಂತನೆ ನಡೆಸಲು ಸೂಕ್ತ ದಿನ. ಯಂತ್ರೋಪಕರಣಗಳ ಬಳಕೆಯಲ್ಲಿ ಜಾಗ್ತೆ ಇರಲಿ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಹೂಡಿಕೆಯಲ್ಲಿ ತಾಳ್ಮೆಯಿರಲಿ.
ನಿಮ್ಮ ಜವಾಬ್ದಾರಿಗಳನ್ನು ಇತರರಿಗೂ ಹಂಚಿ, ಗಡುವಿನೊಳಗೆ ಕೆಲಸ ಮುಗಿಸುವ ಕಡೆಗೆ ಗಮನವನ್ನು ನೀಡುವುದು ಉತ್ತಮ. ಎಲ್ಲವನ್ನೂ ನಾನೇ ನಿಭಾಯಿಸುತ್ತೇನೆ ಎಂಬ ಧೋರಣೆ ಬೇಡ. ಹೂಡಿಕೆ- ವೃತ್ತಿಯಲ್ಲಿ ಬದಲಾವಣೆ ಅಳವಡಿಸಿಕೊಳ್ಳುವ ಇರಾದೆ ಇರುವವರು ಇತರರ ಸಹಾಯವನ್ನೂ ಪಡೆಯಿರಿ. ಉದ್ಯೋಗ ಬದಲಾವಣೆಗೆ ಇದು ಸಕಾಲವಲ್ಲ. ಬೆನ್ನು ನೋವು ಅಥವಾ ಮೊಣಕಾಲು ನೋವು ಕಾಡಬಹುದು. ಆರ್ಥಿಕವಾಗಿ ಸಾಧಾರಣ ಫಲಿತಾಂಶ ದೊರೆಯಲಿದೆ. ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಯೋಗವಿದೆ.