Category Archives: Blog

Your blog category

ಈ ಎಸ್​ಎಂಬಿಯಲ್ಲಿ ಆಕರ್ಷಕ ಬಡ್ಡಿ ಆಫರ್; ನಿತ್ಯವೂ ಚಕ್ರಬಡ್ಡಿ; ಏನಿದರ ಅನುಕೂಲ? – Kannada News | This small finance bank offers repo level interest rates and daily compounding for savings accounts

ನವದೆಹಲಿ, ಜನವರಿ 6: ಸ್ಲೈಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Slice Small Finance Bank) ತನ್ನ ಸೇವಿಂಗ್ಸ್ ಅಕೌಂಟ್​ಗಳಿಗೆ ಫಿಕ್ಸೆಡ್ ಡೆಪಾಸಿಟ್​ನಷ್ಟು (Fixed Deposit) ಬಡ್ಡಿ ಆಫರ್ ಮಾಡುತ್ತಿದೆ. ಅಷ್ಟೇ ಅಲ್ಲ, ಕ್ವಾರ್ಟರ್ ಬದಲು ನಿತ್ಯವೂ ಚಕ್ರ ಬಡ್ಡಿ (interest compounding) ಜಮೆ ಮಾಡುತ್ತದೆ. ಸೇವಿಂಗ್​ ಅಕೌಂಟ್​ಗಳಿಗೆ ಸಾಮಾನ್ಯವಾಗಿ ಶೇ. 3ಕ್ಕಿಂತ ಹೆಚ್ಚು ಬಡ್ಡಿ ಸಿಗುವುದು ವಿರಳ. ಅಂಥದ್ದರಲ್ಲಿ ಸ್ಲೈಸ್ ಬ್ಯಾಂಕ್ ತನ್ನಲ್ಲಿರುವ ಸೇವಿಂಗ್ಸ್ ಅಕೌಂಟ್​ಗಳಿಗೆ ಶೇ. 5.25ರವಷ್ಟು ವಾರ್ಷಿಕ ಬಡ್ಡಿ ಕೊಡುತ್ತಿದೆ.

ನಿತ್ಯವೂ ಚಕ್ರಬಡ್ಡಿ ಸಿಗುತ್ತೆ…

ಸ್ಲೈಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನಲ್ಲಿ ತೆರೆಯಲಾಗುವ ಉಳಿತಾಯ ಖಾತೆಗಳಿಗೆ ಶೇ. 5.25 ವಾರ್ಷಿಕ ಬಡ್ಡಿ ಜೊತೆಗೆ ನಿತ್ಯ ಚಕ್ರ ಬಡ್ಡಿ ಜಮೆ ಆಗುತ್ತದೆ. ಬೇರೆ ಬ್ಯಾಂಕುಗಳಲ್ಲಿ ತ್ರೈಮಾಸಿಕವಾಗಿ ಬಡ್ಡಿ ಕಾಂಪೌಂಡಿಂಗ್ ಆಗುತ್ತದೆ. ಈ ಸಣ್ಣ ಬ್ಯಾಂಕಲ್ಲಿ ನಿತ್ಯವೂ ಕಾಂಪೌಂಡಿಂಗ್ ಆಗುತ್ತದೆ. ಒಂದು ದಿನದಲ್ಲಿ ಸೇವಿಂಗ್ಸ್ ಅಕೌಂಟ್​ನಲ್ಲಿ ಎಷ್ಟೇ ಬ್ಯಾಲನ್ಸ್ ಇರಲಿ ಅಷ್ಟಕ್ಕೂ ಆ ದಿನದ ಬಡ್ಡಿ ಸೇರಿಸಲಾಗುತ್ತದೆ.

ಇದನ್ನೂ ಓದಿ: 50 ವರ್ಷದಲ್ಲಿ ವಿಶ್ವ ಹೇಗಿರುತ್ತೆ? ಫ್ರಾನ್ಸ್, ಜಪಾನ್, ಜರ್ಮನಿಯನ್ನೂ ಹಿಂದಿಕ್ಕುತ್ತಾ ಪಾಕಿಸ್ತಾನ? ಭಾರತ ಹೇಗಿದ್ದೀತು?

ದಿನವೂ ಚಕ್ರಬಡ್ಡಿ ಸೇರ್ಪಡೆಯಾದರೆ ಎಷ್ಟು ಲಾಭ?

ಬೇರೆ ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್​ಗಳಿಗೆ ಬಡ್ಡಿ ಮೂರು ತಿಂಗಳಿಗೊಮ್ಮೆ ಕಾಂಪೌಂಡಿಂಗ್ ಆಗುತ್ತದೆ. ಕಾಂಪೌಂಡಿಂಗ್ ಎಂದರೆ ಬಡ್ಡಿ ಹಣಕ್ಕೂ ಬಡ್ಡಿ ಸೇರಿಸುವ ಚಕ್ರಬಡ್ಡಿ. ನೀವು ವಾರ್ಷಿಕ ಶೇ. 7.75 ಬಡ್ಡಿ ಇರುವ ಫಿಕ್ಸೆಡ್ ಡೆಪಾಸಿಟ್​ನಲ್ಲಿ 1 ಲಕ್ಷ ರೂ ಠೇವಣಿ ಇಟ್ಟಾಗ, ತ್ರೈಮಾಸಿಕವಾಗಿ ಚಕ್ರಬಡ್ಡಿ ಜಮೆ ಆದರೆ ಒಂದು ವರ್ಷದಲ್ಲಿ 7,946 ರೂ ಬಡ್ಡಿ ಸಿಗುತ್ತದೆ.

ಅದೇ ದಿನದ ಚಕ್ರಬಡ್ಡಿಯಾದರೆ ಒಂದು ವರ್ಷದಲ್ಲಿ ಒಂದು ಲಕ್ಷ ರೂ ಹಣಕ್ಕೆ ಸಿಗುವ ಬಡ್ಡಿ ಹಣ 7,980 ರೂ ಆಗುತ್ತದೆ. ತ್ರೈಮಾಸಿಕ ಚಕ್ರಬಡ್ಡಿಗೆ ಹೋಲಿಸಿದರೆ ದಿನದ ಚಕ್ರಬಡ್ಡಿಯಿಂದ ಸಿಗುವ ಲಾಭ ಸಣ್ಣದಾದರೂ ಅದು ಲಾಭವೇ.

ಇದನ್ನೂ ಓದಿ: ಇತ್ತ ಅಧ್ಯಕ್ಷರ ಸೆರೆ, ಅತ್ತ ವೆನೆಜುವೆಲಾ ಮಾರುಕಟ್ಟೆ ಹಿಗ್ಗು; ಕುಸಿಯಬೇಕಿದ್ದ ಷೇರುಪೇಟೆ ಹಿರಿಹಿರಿ ಹಿಗ್ಗುತ್ತಿರುವುದೇಕೆ?

ವಾರ್ಷಿಕ ಬಡ್ಡಿದರ ಶೇ. 5.25 ಇದ್ದಲ್ಲಿ ಒಂದು ಲಕ್ಷ ರೂ ಹಣಕ್ಕೆ ಒಂದು ವರ್ಷದಲ್ಲಿ ನಿತ್ಯದ ಚಕ್ರಬಡ್ಡಿ ಹಾಕಿದಾಗ 22 ರೂ ಹೆಚ್ಚು ರಿಟರ್ನ್ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಿಜಯ್ ಕೊನೆಯ ಸಿನಿಮಾ ಸೌದಿ ಅರೆಬಿಯಾನಲ್ಲಿ ಬ್ಯಾನ್: ಕಾರಣವೇನು? – Kannada News | Vijay starrer Jana Nayagan movie facing ban in Saudi Arabia

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಬೆಂಗಳೂರು ಸೇರಿದಂತೆ ಇನ್ನೂ ಕೆಲವು ನಗರಗಳಲ್ಲಿ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಓಪನ್ ಆಗಿದೆ. ರಾಜಕೀಯಕ್ಕೆ ಎಂಟ್ರಿ ನೀಡಿರುವ ದಳಪತಿ ವಿಜಯ್, ‘ಜನ ನಾಯಗನ್’ ಬಳಿಕ ತಾವು ಇನ್ಯಾವುದೇ ಸಿನಿಮಾನಲ್ಲಿ ನಟಿಸುವುದಿಲ್ಲ ಎಂದಿದ್ದಾರೆ. ಹೀಗಾಗಿ ಸಿನಿಮಾ ವೀಕ್ಷಿಸಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ವಿಜಯ್​ಗೆ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಮೆರಿಕ, ಮಲೇಷ್ಯಾ, ಸಿಂಗಪುರ, ಗಲ್ಫ್ ರಾಷ್ಟ್ರಗಳಲ್ಲೂ ಅಭಿಮಾನಿಗಳನ್ನು ವಿಜಯ್ ಹೊಂದಿದ್ದಾರೆ. ಆದರೆ ಇದೀಗ ಸೌದಿ ಅರೆಬಿಯಾನಲ್ಲಿ ವಿಜಯ್ ಅವರ ‘ಜನ ನಾಯಗನ್’ ಸಿನಿಮಾದ ಮೇಲೆ ನಿಷೇಧ ಹೇರಲಾಗಿದೆಯಂತೆ.

ಸೌದಿ ರಾಷ್ಟ್ರಗಳಲ್ಲಿ ಭಾರತೀಯ ಸಿನಿಮಾಗಳಿಗೆ ಒಳ್ಳೆಯ ಮಾರುಕಟ್ಟೆ ಇದೆ. ಅಲ್ಲಿನ ಅನಿವಾಸಿ ಭಾರತೀಯರ ಜೊತೆಗೆ ಸ್ವತಃ ಸೌದಿ ಜನರೂ ಸಹ ಭಾರತದ ಸಿನಿಮಾಗಳ ಅಭಿಮಾನಿಗಳಾಗಿದ್ದಾರೆ. ಆದರೆ ಆಗಾಗ್ಗೆ ಕೆಲವು ಭಾರತೀಯ ಸಿನಿಮಾಗಳ ಮೇಲೆ ನಿಷೇಧಗಳನ್ನು ಹೇರುತ್ತಲೇ ಬಂದಿವೆ ಗಲ್ಫ್ ರಾಷ್ಟ್ರಗಳು. ಇತ್ತೀಚೆಗಷ್ಟೆ ಬಿಡುಗಡೆ ಆಗಿ ಭಾರತದಲ್ಲಿ ಬ್ಲಾಕ್ ಬಸ್ಟರ್ ಆಗಿರುವ ‘ಧುರಂಧರ್’ ಸಿನಿಮಾಕ್ಕೂ ಸಹ ಸೌದಿ ರಾಷ್ಟ್ರ ನಿಷೇಧ ಹೇರಿದೆ. ಇದೀಗ ವಿಜಯ್ ಅವರ ಕೊನೆಯ ಸಿನಿಮಾಕ್ಕೂ ನಿಷೇಧ ಹೇರಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ಜನ ನಾಯಗನ್’ ರಿಲೀಸ್​ಗೆ ಸಂಕಷ್ಟ? ಇನ್ನೂ ಸಿಕ್ಕಿಲ್ಲ ಸೆನ್ಸಾರ್ ಪತ್ರ

ಸಾಮಾನ್ಯವಾಗಿ ಪಾಕಿಸ್ತಾನ ಅಥವಾ ಯಾವುದೇ ಮುಸ್ಲಿಂ ರಾಷ್ಟ್ರ ವಿರೋಧಿ ಅಂಶಗಳು ಅಥವಾ ಇಸ್ಲಾಂ ಧರ್ಮವನ್ನು ಟೀಕಿಸುವ, ಮುಸ್ಲಿಂ ರಾಷ್ಟ್ರಗಳನ್ನು ಖಳರಂತೆ ಬಿಂಬಿಸುವ ಸಿನಿಮಾಗಳನ್ನು ಸೌದಿ ರಾಷ್ಟ್ರಗಳು ನಿಷೇಧಿಸುತ್ತಾ ಬಂದಿವೆ. ‘ಧುರಂಧರ್’ ಸಿನಿಮಾ ನಿಷೇಧಕ್ಕೂ ಇದೇ ಕಾರಣವಾಗಿತ್ತು. ಇದೀಗ ‘ಜನ ನಾಯಗನ್’ ನಿಷೇಧಕ್ಕೂ ಇದೇ ಕಾರಣ ಎನ್ನಲಾಗುತ್ತಿದೆ.

‘ಜನ ನಾಯಗನ್’ ಸಿನಿಮಾದ ವಿಲನ್ ಪಾಕಿಸ್ತಾನದ ವ್ಯಕ್ತಿಯಾಗಿದ್ದು, ಸಿನಿಮಾನಲ್ಲಿ ಸಹ ಪಾಕಿಸ್ತಾನದ ವಿರುದ್ಧ, ಪಾಕ್ ಸೈನ್ಯದ ವಿರುದ್ಧ ಸಂಭಾಷಣೆಗಳು, ದೃಶ್ಯಗಳು ಇವೆ. ಟ್ರೈಲರ್​​ನಲ್ಲಿ ಸಹ ಕೆಲವು ದೃಶ್ಯಗಳನ್ನು ಸೇರಿಸಲಾಗಿದೆ. ಇದೇ ಕಾರಣಕ್ಕೆ ‘ಜನ ನಾಯಗನ್’ ಸಿನಿಮಾಕ್ಕೆ ಸೌದಿಯಲ್ಲಿ ಸೆನ್ಸಾರ್ ನಿರಾಕರಿಸಲಾಗಿದೆಯಂತೆ. ಆದರೆ ಚಿತ್ರತಂಡವು, ಕೆಲವು ಸಂಭಾಷಣೆಗಳನ್ನು ಬದಲಾಯಿಸಿ, ಮ್ಯೂಟ್ ಮಾಡಿ ಹಾಗೂ ಕೆಲವನ್ನು ಡಿಲೀಟ್ ಮಾಡುವ ಮೂಲಕ ‘ಜನ ನಾಯಗನ್’ ಸಿನಿಮಾಕ್ಕೆ ಸೆನ್ಸಾರ್ ಪಡೆಯಲು ಮುಂದಾಗಿದೆ ಎನ್ನಲಾಗುತ್ತಿದೆ.

‘ಜನ ನಾಯಗನ್’ ಸಿನಿಮಾ ತೆಲುಗಿನ ‘ಭಗವಂತ ಕೇಸರಿ’ ಸಿನಿಮಾದ ರೀಮೇಕ್ ಆಗಿದ್ದು, ಸಿನಿಮಾನಲ್ಲಿ ವಿಜಯ್ ಸಾಕು ಪುತ್ರಿಯಾಗಿ ಮಲಯಾಳಂ ನಟಿ ಮಮಿತಾ ಬಿಜು ನಟಿಸಿದ್ದಾರೆ. ನಾಯಕಿಯಾಗಿ ಪೂಜಾ ಹೆಗ್ಡೆ ಇದ್ದಾರೆ. ಸಿನಿಮಾವನ್ನು ಎಚ್ ವಿನೋದ್ ನಿರ್ದೇಶನ ಮಾಡಿದ್ದಾರೆ. ‘ಭಗವಂತ ಕೇಸರಿ’ ರೀಮೇಕ್ ಆದರೂ ಸಹ ಕೆಲವು ಹೆಚ್ಚುವರಿ ದೃಶ್ಯಗಳನ್ನು ಸಿನಿಮಾನಲ್ಲಿ ಸೇರಿಸಲಾಗಿದ್ದು, ವಿಜಯ್ ಅವರ ರಾಜಕೀಯಕ್ಕೆ ಸಹಾಯವಾಗುವಂಥ ದೃಶ್ಯಗಳು, ಸಂಭಾಷಣೆಗಳು ಸಿನಿಮಾನಲ್ಲಿ ಹೇರಳವಾಗಿ ಇರಲಿವೆಯಂತೆ. ಸಿನಿಮಾ ಜನವರಿ 09 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

600 ಕ್ಕೂ ಹೆಚ್ಚು ರನ್‌ಗಳ ಹ್ಯಾಟ್ರಿಕ್; ಮಹಾ ದಾಖಲೆ ಬರೆದ ದೇವದತ್ ಪಡಿಕ್ಕಲ್

Source link

ಮದುವೆಗೂ ಮುನ್ನ ವಿದೇಶದಲ್ಲಿ ಕಾಲ ಕಳೆದು ಬಂದ ರಶ್ಮಿಕಾ, ವಿಜಯ್ ದೇವರಕೊಂಡ – Kannada News | Vijay Deverakonda and Rashmika Mandanna return to India from Italy vacation

ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರು ನಟ ವಿಜಯ್ ದೇವರಕೊಂಡ (Vijay Deverakonda) ಜೊತೆ ಕ್ಲೋಸ್ ಆಗಿರುವುದು ಗೊತ್ತೇ ಇದೆ. ಶೀಘ್ರದಲ್ಲೇ ಅವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಅದಕ್ಕೂ ಮುನ್ನ ಒಟ್ಟಿಗೆ ವಿದೇಶ ಪ್ರವಾಸ ಮಾಡಿ ಬಂದಿದ್ದಾರೆ. ಇದನ್ನು ಅವರು ಜಗಜ್ಜಾಹೀರು ಮಾಡಿಲ್ಲ. ಬದಲಿಗೆ, ಸಾಧ್ಯವಾದಷ್ಟು ಗುಟ್ಟಾಗಿ ಕಾಲ ಕಳೆದು ಬಂದಿದ್ದಾರೆ. ಆದರೂ ಕೂಡ ಭಾರತಕ್ಕೆ ವಾಪಸ್ ಬಂದ ಕೂಡಲೇ ವಿಮಾನ ನಿಲ್ದಾಣದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಎಲ್ಲವೂ ಗೊತ್ತಾಗಿದೆ.

ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಸಿನಿಮಾ ಕೆಲಸಗಳಿಂದ ಬಿಡುವು ಪಡೆದುಕೊಂಡಿದ್ದರು. ರಜೆಯ ಮಜಾ ಸವಿಯಲು ಅವರು ವಿದೇಶಕ್ಕೆ ತೆರಳಿದ್ದರು. ಇಟಲಿಯಲ್ಲಿ ಅವರಿಬ್ಬರು ಜೊತೆಯಾಗಿ ಕಾಲ ಕಳೆದಿದ್ದಾರೆ. ಆದರೆ ತಾವಿಬ್ಬರು ಒಟ್ಟಿಗೆ ಇರುವ ಯಾವುದೇ ಫೋಟೋವನ್ನು ಅವರು ಹಂಚಿಕೊಂಡಿಲ್ಲ.

ಜನವರಿ 5ರಂದು ಇಟಲಿಯಿಂದ ಭಾರತಕ್ಕೆ ಮರಳಿದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಈ ವೇಳೆ ಅವರಿಬ್ಬರು ಸಿಂಪಲ್ ಉಡುಗೆ ಧರಿಸಿದ್ದರು. ಇಬ್ಬರೂ ಕೂಡ ಮಾಸ್ಕ್ ಹಾಕಿಕೊಂಡಿದ್ದರು. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

2025ರ ದಸರಾ ಹಬ್ಬದ ಸಂದರ್ಭದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ಅದನ್ನು ಅವರು ಗುಟ್ಟಾಗಿಯೇ ಇಟ್ಟಿದ್ದಾರೆ. ಎರಡೂ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಗೌಪ್ಯವಾಗಿ ಎಂಗೇಜ್​ಮೆಂಟ್ ನಡೆದಿತ್ತು. ಯಾವುದೇ ಫೋಟೋಗಳು ಹೊರಬಂದಿಲ್ಲ. ಈಗ ಮದುವೆಯ ತಯಾರಿ ನಡೆಯುತ್ತಿದೆ.

ಇದನ್ನೂ ಓದಿ: ರೋಮ್​​​ನಲ್ಲಿ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ರೊಮ್ಯಾನ್ಸ್

ಮೂಲಗಳ ಪ್ರಕಾರ, ಫೆಬ್ರವರಿ 26ರಂದು ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ನಡೆಯಲಿದೆ. ಎಂಗೇಜ್​​ಮೆಂಟ್ ರೀತಿಯೇ ಮದುವೆಯನ್ನು ಕೂಡ ಕೆಲವೇ ಕೆಲವು ಅತಿಥಿಗಳ ಸಮ್ಮುಖದಲ್ಲಿ ಮಾಡಿಕೊಳ್ಳಲು ಈ ಜೋಡಿ ನಿರ್ಧರಿಸಿದೆ ಎನ್ನಲಾಗಿದೆ. ಮದುವೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವೆನೆಜುವೆಲಾದ ಮಧ್ಯಂತರ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್​​ಗಿದೆ ಭಾರತದ ನಂಟು; ಇವರೂ ಕೂಡ ಸಾಯಿ ಬಾಬಾ ಭಕ್ತೆ! – Kannada News | Venezuela’s Interim President Delcy Rodriguez is a worshiper of Sri Sathya Sai Baba

ನವದೆಹಲಿ, ಜನವರಿ 6: ಅಮೆರಿಕದ ವಶದಲ್ಲಿರುವ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಬದಲಾಗಿ ವೆನೆಜುವೆಲಾದ (Venezuela) ಉಪಾಧ್ಯಕ್ಷೆ ಮತ್ತು ತೈಲ ಸಚಿವೆ ಡೆಲ್ಸಿ ರೊಡ್ರಿಗಸ್ ಅಲ್ಲಿನ ಮಧ್ಯಂತರ ಸರ್ಕಾರದ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ವಿಶೇಷವೆಂದರೆ ಡೆಲ್ಸಿಗೂ ಭಾರತದ ನಂಟಿದೆ. ಮಡುರೋ ಅವರಂತೆಯೇ ಡೆಲ್ಸಿ ಕೂಡ ಪುಟ್ಟಪರ್ತಿ ಸತ್ಯ ಸಾಯಿ ಬಾಬಾ ಭಕ್ತೆ. ಅವರು ಆಗಾಗ ಭಾರತಕ್ಕೆ ಆಗಮಿಸುತ್ತಿರುತ್ತಾರೆ.

ವೆನೆಜುವೆಲಾದ ಮಧ್ಯಂತರ ಅಧ್ಯಕ್ಷೆಯಾಗಿ ಪ್ರಮಾಣವಚನ ಸ್ವೀಕರಿಸಿದ ಡೆಲ್ಸಿ ರೊಡ್ರಿಗಸ್ ಆಂಧ್ರಪ್ರದೇಶದಲ್ಲಿರುವ ಸತ್ಯಸಾಯಿ ಬಾಬಾ ಅವರ ಪ್ರಶಾಂತಿ ನಿಲಯಂ ಆಶ್ರಮಕ್ಕೆ ಆಗಾಗ ಭೇಟಿ ನೀಡುವ ಮೂಲಕ ಭಾರತದ ಸಂಪರ್ಕ ಹೊಂದಿದ್ದಾರೆ. ಅವರು ಆಗಸ್ಟ್ 2023ರಲ್ಲಿ ಜಿ 20 ಶೃಂಗಸಭೆಯ ಸಮಯದಲ್ಲಿ ಮತ್ತು ಅಕ್ಟೋಬರ್ 2024ರಲ್ಲಿ ಸತ್ಯ ಸಾಯಿ ಬಾಬಾ ಆಶ್ರಮಕ್ಕೆ ಭೇಟಿ ನೀಡಿದ್ದರು.

ಯುನೈಟೆಡ್ ಸ್ಟೇಟ್ಸ್ ಪಡೆಗಳು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ವಶಕ್ಕೆ ಪಡೆದು ನ್ಯೂಯಾರ್ಕ್‌ನಲ್ಲಿ ಕೋರ್ಟ್​ ಮುಂದೆ ಹಾಜರುಪಡಿಸಿ ವಿಚಾರಣೆಯನ್ನು ನಡೆಸುತ್ತಿವೆ. ಇದರ ನಡುವೆ ಸೋಮವಾರ ಡೆಲ್ಸಿ ರೊಡ್ರಿಗಸ್ ವೆನೆಜುವೆಲಾದ ಮಧ್ಯಂತರ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: Video: ವೆನೆಜುವೆಲಾದ ಅಧ್ಯಕ್ಷೀಯ ಭವನದ ಬಳಿ ಗುಂಡಿನ ದಾಳಿ, ಸ್ಫೋಟದ ಸದ್ದು

ವೆನೆಜುವೆಲಾದ ಸಂಸತ್ತಿನಿಂದ ಪ್ರಮಾಣವಚನ ಸ್ವೀಕರಿಸಿದ ಕೂಡಲೇ, ಡೆಲ್ಸಿ ರೊಡ್ರಿಗಸ್ ಅವರ ಹಲವಾರು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡವು. ಈ ಹಿಂದಿನ ಅಧ್ಯಕ್ಷ ಮಡುರೋ ಮತ್ತು ಅವರ ಪತ್ನಿಯಂತೆ ಡೆಲ್ಸಿ ಕೂಡ ಭಾರತೀಯ ಆಧ್ಯಾತ್ಮಿಕ ನಾಯಕ ಸತ್ಯಸಾಯಿ ಬಾಬಾ ಅವರ ಭಕ್ತೆ ಎಂಬುದು ಬೆಳಕಿಗೆ ಬಂದಿದೆ.

ವರದಿಗಳ ಪ್ರಕಾರ, ಡೆಲ್ಸಿ ರೊಡ್ರಿಗಸ್ ಇತ್ತೀಚಿನ ವರ್ಷಗಳಲ್ಲಿ 2023 ಮತ್ತು 2024ರಲ್ಲಿ 2 ಬಾರಿ ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿರುವ ಸತ್ಯ ಸಾಯಿ ಬಾಬಾ ಅವರ ಆಧ್ಯಾತ್ಮಿಕ ಕೇಂದ್ರ ಮತ್ತು ಸಮಾಧಿ ಮಂದಿರವಾದ ಪ್ರಶಾಂತಿ ನಿಲಯಂ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಪ್ರಶಾಂತಿ ನಿಲಯಕ್ಕೆ 2ನೇ ಬಾರ ಭೇಟಿ ನೀಡಿದ ಬಗ್ಗೆ ಡೆಲ್ಸಿ ರೊಡ್ರಿಗಸ್ ತೀವ್ರ ಸಂತೋಷ ವ್ಯಕ್ತಪಡಿಸಿದ್ದರು. ಸತ್ಯ ಸಾಯಿ ಬಾಬಾ ಅವರ ದೈವಿಕ ಸನ್ನಿಧಿಯಲ್ಲಿರುವುದು ತನಗೆ ಶಾಂತಿ ಮತ್ತು ನೆಮ್ಮದಿಯ ಭಾವನೆಯನ್ನು ನೀಡಿತು ಎಂದು ಹೇಳಿದ್ದರು ಎಂದು ಸತ್ಯ ಸಾಯಿಬಾಬಾ ಟ್ರಸ್ಟ್ ತಿಳಿಸಿದೆ.

ಇದನ್ನೂ ಓದಿ: ತೈಲ ಸಂಪತ್ತಿನ ಮೇಲೆ ಕಣ್ಣಿಟ್ಟರಾ ಟ್ರಂಪ್? ವೆನೆಜುವೆಲಾ ಮೇಲಿನ ಅಮೆರಿಕ ದಾಳಿ ಕುರಿತ ಕುತೂಹಲಕಾರಿ ಸಂಗತಿ ಇಲ್ಲಿದೆ

ಸತ್ಯ ಸಾಯಿ ಬಾಬಾ, ಬ್ರಹ್ಮ ಕುಮಾರಿಯರು ಮತ್ತು ರಾಧಾ ಸ್ವಾಮಿ ಅವರ ಅನುಯಾಯಿಗಳು ಸೇರಿದಂತೆ ಭಾರತೀಯ ಗುರುಗಳು ಮತ್ತು ಸಂಸ್ಥೆಗಳು ವೆನೆಜುವೆಲಾದಲ್ಲಿ ಹಲವಾರು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ಸ್ಥಾಪಿಸಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಇದು ಎರಡೂ ದೇಶಗಳ ನಡುವಿನ ಶಾಶ್ವತ ಆಧ್ಯಾತ್ಮಿಕ ಸಂಬಂಧಗಳನ್ನು ಪ್ರತಿಬಿಂಬಿಸುತ್ತದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:10 pm, Tue, 6 January 26

Source link

ಕುತ್ತಿಗೆಯ ಭಾಗದಲ್ಲಿ ನೋವು ಬಂದು ತಲೆ ಭಾರವೆನಿಸುವುದು ಸರ್ವಿಕಲ್ ಸ್ಪಾಂಡಿಲೋಸಿಸ್‌ನ ಆರಂಭವಾಗಿರಬಹುದು ಎಚ್ಚರ! – Kannada News | Neck Pain? Know About Cervical Spondylosis

ಇತ್ತೀಚಿನ ದಿನಗಳಲ್ಲಿ ಕುತ್ತಿಗೆ ನೋವು (Neck Pain) ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಇದಕ್ಕೆ ಕಾರಣಗಳು ಹಲವಾರಿರಬಹುದು. ಆದರೆ ಈ ರೀತಿ ಕುತ್ತಿಗೆ ನೋವಿನ ಜೊತೆಗೆ ತಲೆ ನೋವು ಮತ್ತು ಭುಜಗಳಲ್ಲಿ ಬಿಗಿತ ನಿರಂತರವಾಗಿ ಕಂಡುಬರುತ್ತಿದ್ದರೆ, ಅದನ್ನು ಹಗುರವಾಗಿ ಪರಿಗಣಿಸಬೇಡಿ. ಹೌದು, ಆರೋಗ್ಯ ತಜ್ಞರು ಹೇಳುವ ಪ್ರಕಾರ, ಇದು ಸರ್ವಿಕಲ್ ಸ್ಪಾಂಡಿಲೋಸಿಸ್ (Cervical Spondylosis) ಎಂಬ ಕಾಯಿಲೆಯ ಲಕ್ಷಣವಾಗಿರಬಹುದು. ಘಂಟೆಗಟ್ಟಲೆ ಒಂದೇ ಜಾಗದಲ್ಲಿ ಕುಳಿತು ಕೆಲಸ ಮಾಡುವುದು ಮತ್ತು ಮೊಬೈಲ್ ಫೋನ್‌ಗಳ ವ್ಯಾಪಕ ಬಳಕೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಕಳೆದ ಕೆಲವು ವರ್ಷಗಳಿಂದ, ಈ ಸಮಸ್ಯೆ ಗಮನಾರ್ಹವಾಗಿ ಹೆಚ್ಚುತ್ತಿದ್ದು ಯುವಜನತೆಯಲ್ಲಿ ಹೆಚ್ಚೆಚ್ಚು ವರದಿಯಾಗುತ್ತಿವೆ. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳಲು ಇದರ ಬಗ್ಗೆ ಸರಿಯಾಗಿ ತಿಳಿದಿರುವುದು ಬಹಳ ಮುಖ್ಯವಾಗಿದೆ. ಹಾಗಾದರೆ ಸರ್ವಿಕಲ್ ಸ್ಪಾಂಡಿಲೋಸಿಸ್‌ ಎಂದರೇನು, ಲಕ್ಷಣಗಳು ಹೇಗಿರುತ್ತವೆ, ಇದನ್ನು ತಡೆಯಲು ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಇತ್ತೀಚಿನ ವರ್ಷಗಳಲ್ಲಿ ಸರ್ವಿಕಲ್ ಸ್ಪಾಂಡಿಲೋಸಿಸ್ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಾಗಿದ್ದು ಒಂದೇ ಜಾಗದಲ್ಲಿ ಘಂಟೆಗಟ್ಟಲೆ ಕುಳಿತು ಕೆಲಸ ಮಾಡುವವರ ಮೇಲೆ ಇದು ಹೆಚ್ಚಾಗಿ ಪರಿಣಾಮ ಬೀರುತ್ತಿದೆ. ಜನರ ಫೋನ್ ಬಳಕೆ ಹೆಚ್ಚಾಗಿದ್ದು, ಫೋನ್‌ಗಳನ್ನು ಗಂಟೆಗಟ್ಟಲೆ ನೋಡುತ್ತಾ ಸಮಯ ಕಳೆಯುತ್ತಾರೆ, ಇದು ಕುತ್ತಿಗೆಯ ಮೂಳೆಗಳ ಮೇಲೆ ಪರಿಣಾಮ ಬೀರುತ್ತದೆ. ಅಷ್ಟು ಮಾತ್ರವಲ್ಲ, ಕಳವಳಕಾರಿ ವಿಷಯವೆಂದರೆ ಈ ಸಮಸ್ಯೆ ಎಲ್ಲಾ ವಯಸ್ಸಿನವರಲ್ಲಿಯೂ ಕಂಡುಬರುತ್ತಿದೆ. 20 ರಿಂದ 30 ವರ್ಷ ವಯಸ್ಸಿನವರು ಸಹ ಈ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗೆ ಮುಖ್ಯ ಕಾರಣ ಸರಿಯಾಗಿ ಕುಳಿತುಕೊಳ್ಳದಿರುವುದಾಗಿದೆ.

ಸರ್ವಿಕಲ್ ಸ್ಪಾಂಡಿಲೋಸಿಸ್ ಎಂದರೇನು?

ತುಂಬಾ ಸಮಯ ಒಂದೇ ಭಂಗಿಯಲ್ಲಿ ಕುಳಿತಿರುವುದು ಅಥವಾ ಸರಿಯಾಗಿ ಕುಳಿತುಕೊಳ್ಳದಿದ್ದರೆ ನಮಗೆ ತಿಳಿಯದಂತೆ ಕುತ್ತಿಗೆಯ ಮೂಳೆಗಳು ಮತ್ತು ಅವುಗಳ ನಡುವಿನ ಡಿಸ್ಕ್‌ಗಳಲ್ಲಿ ಸವೆತ ಉಂಟಾಗುತ್ತದೆ. ಇದು ಜೀವನಶೈಲಿಯನ್ನು ಸರಿಯಾಗಿ ಇಟ್ಟುಕೊಳ್ಳದಿದ್ದರೆ ಅಥವಾ ವಯಸ್ಸಾಗುವುದರಿಂದ ಮತ್ತು ದೇಹದಲ್ಲಿನ ಪೌಷ್ಟಿಕಾಂಶದ ಕೊರತೆಯಿಂದಲೂ ಸಂಭವಿಸಬಹುದು. ಈ ಸವೆತದಿಂದಾಗಿ, ಡಿಸ್ಕ್‌ಗಳು ತೆಳುವಾಗಲು ಪ್ರಾರಂಭಿಸುತ್ತವೆ. ಕೆಲವರಲ್ಲಿ, ಮೂಳೆ ಸ್ಪರ್ಸ್ ಸಹ ಬೆಳೆಯಬಹುದು. ಈ ಸ್ಥಿತಿಯನ್ನು ಸರಿಪಡಿಸಿಕೊಳ್ಳದಿದ್ದರೆ, ಇದು ಬೆನ್ನುಮೂಳೆಯ ಮೇಲೂ ಪರಿಣಾಮ ಬೀರಬಹುದು.

ಇದನ್ನೂ ಓದಿ: ಸಣ್ಣ ತಲೆನೋವು ಎಂದು ನಿರ್ಲಕ್ಷ್ಯ ಮಾಡಿದರೆ ದೃಷ್ಟಿ ಕಳೆದುಕೊಳ್ಳಬೇಕಾದೀತು ಎಚ್ಚರ!

ಸರ್ವಿಕಲ್ ಸ್ಪಾಂಡಿಲೋಸಿಸ್ ನ ಆರಂಭಿಕ ಲಕ್ಷಣಗಳು:

  • ನಿರಂತರ ಕುತ್ತಿಗೆ ನೋವು
  • ಕುತ್ತಿಗೆಯಲ್ಲಿ ಬಿಗಿತ
  • ತಲೆ ಭಾರವಾದ ಭಾವನೆ ಅಥವಾ ತಲೆನೋವು, ಬೆನ್ನು ನೋವು
  • ಭುಜಗಳು ಮತ್ತು ತೋಳುಗಳಲ್ಲಿ ನೋವು
  • ಕೈಗಳಲ್ಲಿ ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆ

ಸರ್ವಿಕಲ್ ಸ್ಪಾಂಡಿಲೋಸಿಸ್ ತಡೆಗಟ್ಟಲು ಸಲಹೆಗಳು:

  • ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಿರಿ.
  • ಪ್ರತಿದಿನ ಲಘು ವ್ಯಾಯಾಮಗಳನ್ನು ಮಾಡಿ.
  • ಹೆಚ್ಚು ಹೊತ್ತು ಒಂದೇ ಭಂಗಿಯಲ್ಲಿ ಕುಳಿತುಕೊಳ್ಳಬೇಡಿ.
  • ಕೆಲಸ ಮಾಡುವಾಗ ಕಂಪ್ಯೂಟರ್‌ನ ಪರದೆ ಕಣ್ಣಿನ ಮಟ್ಟದಲ್ಲಿರಲಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಲೆಕೋಸನ್ನು ಕ್ಲೀನ್‌ ಮಾಡುವ ಸರಿಯಾದ ವಿಧಾನ ಯಾವುದು? ನೀವು ತಿಳಿಯಲೇಬೇಕಾದ ಮಾಹಿತಿಯಿದು – Kannada News | This is how to clean cabbage properly

ಕ್ಯಾಬೇಜ್‌ ಕ್ಲೀನಿಂಗ್

Image Credit source: Pinterest

ಎಲೆಕೋಸು (cabbage) ಬಹುತೇಕರ ನೆಚ್ಚಿನ ತರಕಾರಿ. ಪಲ್ಯ, ಮಂಚೂರಿಯನ್‌, ಸಲಾಡ್‌ಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಇದನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ, ಆದರೆ ಹೆಚ್ಚಿನವರು ಎಲೆಕೋಸನ್ನು ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ, ಜೊತೆಗೆ ಇದನ್ನು ಕ್ಲೀನ್‌ ಮಾಡುವ ಸರಿಯಾದ ವಿಧಾನವೂ ಅನೇಕರಿಗೆ ಗೊತ್ತಿಲ್ಲ. ಎಷ್ಟೇ ಸ್ವಚ್ಛಗೊಳಿಸಿದರೂ ಎಲೆಕೋಸಿನಲ್ಲಿ ಕೊಳಕು, ಕೀಟಗಳು, ಹುಳು, ಬ್ಯಾಕ್ಟೀರಿಯಾ ಮತ್ತು ಕೀಟನಾಶಕಗಳ ಅಂಶ ಹಾಗೆಯೇ ಉಳಿದು ಬಿಡುತ್ತವೆ. ಇದು ಆರೋಗ್ಯಕ್ಕೆ ಹಾನಿಕಾರಕ. ಆದ್ದರಿಂದ, ಆಹಾರವು ರುಚಿಕರ ಮತ್ತು ಆರೋಗ್ಯಕರವಾಗಿರಲು ಅದನ್ನು ಸರಿಯಾಗಿ ತೊಳೆಯುವುದು ಬಹಳ ಮುಖ್ಯ. ಹಾಗಿದ್ದರೆ ಎಲೆಕೋಸನ್ನು ತೊಳೆಯುವ ಸರಿಯಾದ ವಿಧಾನ ಯಾವುದೆಂಬುದನ್ನು ನೋಡೋಣ ಬನ್ನಿ.

ಎಲೆಕೋಸನ್ನು ತೊಳೆಯುವ ಸರಿಯಾದ ವಿಧಾನ ಯಾವುದು?

ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ: ಎಲೆಕೋಸು ಕತ್ತರಿಸಿದ ನಂತರ, ಅದನ್ನು ಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆಯಿರಿ. ಇದನ್ನು ಮಾಡಲು, ಮೊದಲು ಎಲೆಕೋಸಿನ ಮೇಲಿನ ಎರಡರಿಂದ ಮೂರು ಪದರಗಳನ್ನು ತೆಗೆಯಿರಿ. ಏಕೆಂದರೆ ಇವು ಅತ್ಯಂತ ಕೊಳಕಾಗಿರುತ್ತವೆ, ಧೂಳು ಮತ್ತು ಕೀಟನಾಶಕಗಳನ್ನು ಹೊಂದಿರುತ್ತವೆ. ಈ ಎಲೆಗಳನ್ನು ತೆಗೆದುಹಾಕುವುದರಿಂದ ಗಮನಾರ್ಹ ಪ್ರಮಾಣದ ಕೊಳೆಯನ್ನು ತೆಗೆದು ಹಾಕಬಹುದು. ಈಗ ಒಂದು ಪಾತ್ರೆಗೆ ಬಿಸಿ ನೀರು ಮತ್ತು ಉಪ್ಪನ್ನು ಸೇರಿಸಿ, ಅದರಲ್ಲಿ ಎಲೆಕೋಸನ್ನು 15 ರಿಂದ 20 ನಿಮಿಷಗಳ ಕಾಲ ಇಟ್ಟು ಕ್ಲೀನ್‌ ಮಾಡಿ ನಂತರವೇ ಬೇಯಿಸಿ. ಈ ಪ್ರಕ್ರಿಯೆಯು ಕೀಟಗಳನ್ನು ಕೊಲ್ಲಲು ಸಹಕಾರಿ.

ವಿನೆಗರ್ ಬಳಸಬಹುದು: ಎಲೆಕೋಸನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ನೀವು ವಿನೆಗರ್ ಸಹ ಬಳಸಬಹುದು. ಇದು ನೈಸರ್ಗಿಕ ಸೋಂಕುನಿವಾರಕವಾಗಿದ್ದು, ಇದು ತರಕಾರಿಯಿಂದ ಎಲ್ಲಾ ಕೊಳೆಯನ್ನು ತೆಗೆದುಹಾಕುತ್ತದೆ. ಇದನ್ನು ಮಾಡಲು, ಒಂದು ಪಾತ್ರೆಗೆ ಉಗುರು ಬೆಚ್ಚಗಿನ ನೀರನ್ನು ತುಂಬಿಸಿ. ಮೂರರಿಂದ ನಾಲ್ಕು ಟೀ ಚಮಚ ವಿನೆಗರ್ ಸೇರಿಸಿ ಬಳಿಕ ಅದರಲ್ಲಿ ಎಲೆಕೋಸನ್ನು ಇಟ್ಟು 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಬಳಿಕ ಇನ್ನೊಮ್ಮೆ ಸ್ವಚ್ಛಗೊಳಿಸಿ ಎಲೆಕೋಸನ್ನು ಕತ್ತರಿಸಿ.  ಇದಲ್ಲದೆ ಅಡಿಗೆ ಸೋಡಾವನ್ನು ಸಹ ಸೇರಿಸಬಹುದು, ಇದು ಕೀಟನಾಶಕಗಳ ಪರಿಣಾಮಕಾರಿತ್ವವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಬಾತ್‌ರೂಮ್‌ ಟ್ಯಾಪ್, ಕನ್ನಡಿಯ ಮೇಲಿನ ಹಠಮಾರಿ ಕಲೆಗಳನ್ನು ಹೋಗಲಾಡಿಸಲು ಇಲ್ಲಿದೆ ಸಿಂಪಲ್‌ ಸಲಹೆ

ಇದು ಮಾತ್ರವಲ್ಲದೆ ಎಲೆಕೋಸನ್ನು ಸಂಪೂರ್ಣವಾಗಿ ಕತ್ತರಿಸಿ ಬಳಿಕ ಬಿಸಿನೀರಿಗೆ ವಿನೆಗರ್‌ ಅಥವಾ ಅಡಿಗೆ ಸೋಡಾವನ್ನು ಸೇರಿಸಿ ಅದರಲ್ಲಿ ಕ್ಲೀನ್‌ ಮಾಡು. ತೊಳೆದ ನಂತರ, ಎಲೆಕೋಸನ್ನು ಒಂದು ಜರಡಿಯಲ್ಲಿ ಇರಿಸಿ ಅಥವಾ ಹೆಚ್ಚುವರಿ ನೀರನ್ನು ಹೊರಹಾಕಲು ಸ್ವಚ್ಛವಾದ ಬಟ್ಟೆಯ ಮೇಲೆ ಅದನ್ನು ಹರಡಿ.  ಈ ರೀತಿ ಎಲೆಕೋಸನ್ನು ಸರಿಯಾಗಿ ತೊಳೆಯುವುದರಿಂದ ಅದರ ರುಚಿ ಸುಧಾರಿಸುವುದಲ್ಲದೆ, ನಿಮ್ಮ ಆರೋಗ್ಯವೂ ಸುರಕ್ಷಿತವಾಗಿರುತ್ತದೆ. ಆದ್ದರಿಂದ, ಮುಂದಿನ ಬಾರಿ ನೀವು ಎಲೆಕೋಸು ಕ್ಲೀನ್‌ ಮಾಡುವಾಗ ಅದನ್ನು ತೊಳೆಯಲು ಆತುರಪಡಬೇಡಿ, ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇವರೇ ನೋಡಿ ‘ಟಾಕ್ಸಿಕ್’ ಸಿನಿಮಾದ ‘ಬ್ಯಾಡ್ ಗರ್ಲ್ಸ್’ – Kannada News | Yash starrer Toxic movie heroines photo gallery

ಬಾಲಿವುಡ್ ನಟಿ ಹುಮಾ ಖುರೇಷಿ ಸಹ ‘ಟಾಕ್ಸಿಕ್’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರದ ಹೆಸರು ಎಲಿಜಬೆತ್. ಪೋಸ್ಟರ್ ನೋಡಿದರೆ ಕ್ಯೂಟ್ ಆದ, ಮುಗ್ಧತೆಯಿಂದ ಕೂಡಿದ ಪಾತ್ರದಲ್ಲಿ ಹುಮಾ ನಟಿಸಿದಂತಿದೆ.

Source link

50 ವರ್ಷದಲ್ಲಿ ವಿಶ್ವ ಹೇಗಿರುತ್ತೆ? ಫ್ರಾನ್ಸ್, ಜಪಾನ್, ಜರ್ಮನಿಯನ್ನೂ ಹಿಂದಿಕ್ಕುತ್ತಾ ಪಾಕಿಸ್ತಾನ? ಭಾರತ ಹೇಗಿದ್ದೀತು? – Kannada News | India may overtake USA economy in 2075 says Goldman Sachs report, here are top economies in next 50 years

ನವದೆಹಲಿ, ಜನವರಿ 6: ಭಾರತದ ಆರ್ಥಿಕತೆ (India GDP) ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಅಪಾರ ವೇಗದಲ್ಲಿ ಬೆಳೆಯುತ್ತಿದೆ. ಕಳೆದೆರಡು ವರ್ಷದಲ್ಲಿ ಫ್ರಾನ್ಸ್, ಬ್ರಿಟನ್ ಆರ್ಥಿಕತೆಗಳನ್ನು ಹಿಂದಿಕ್ಕಿದೆ. ಈಗ ಜಪಾನ್ ಜಿಡಿಪಿಯನ್ನೂ ಮೀರಿಸಿ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯ ದೇಶವೆನಿಸಿದೆ ಭಾರತ. ಮುಂದಿನೆರಡು ವರ್ಷದಲ್ಲಿ ಜರ್ಮನಿಯನ್ನೂ ಹಿಂದಿಕ್ಕಿ ನಂ. 3 ಸ್ಥಾನಕ್ಕೆ ಏರುವ ನಿರೀಕ್ಷೆ ಇದೆ. ಆದರೆ, ಎರಡನೇ ಸ್ಥಾನಕ್ಕೇರಲು ಭಾರತಕ್ಕೆ ಬಹಳ ಸಮಯ ಬೇಕು. ಗೋಲ್ಡ್​ಮನ್ ಸ್ಯಾಕ್ಸ್ (Goldman Sachs) ವರದಿಯೊಂದರ ಪ್ರಕಾರ ಭಾರತ ಎರಡನೇ ಸ್ಥಾನಕ್ಕೇರಲು 2075 ಆಗಬಹುದು.

2075ರಲ್ಲಿ ಟಾಪ್ ಆರ್ಥಿಕತೆಗಳು

ಗೋಲ್ಡ್​ಮನ್ ಸ್ಯಾಕ್ಸ್ ಸಂಸ್ಥೆ ಮುಂದಿನ 50 ವರ್ಷದಲ್ಲಿ ಜಾಗತಿಕ ಆರ್ಥಿಕತೆಗಳು ಹೇಗೆ ಬೆಳೆಯುತ್ತವೆ ಎಂಬುದನ್ನು ವಿಶ್ಲೇಷಿಸಿದೆ. ಇವತ್ತಿನ ಅನೇಕ ಮುಂದುವರಿದ ದೇಶಗಳು ಕೆಳಗಿಳಿಯುತ್ತವೆ. ಅಭಿವೃದ್ಧಿ ಮಂದಗೊಳ್ಳುತ್ತಿರುವುದು ಹಾಗು ಜನಸಂಖ್ಯೆ ಕಡಿಮೆ ಆಗುತ್ತಿರುವುದು ಅನೇಕ ಮುಂದುವರಿದ ದೇಶಗಳಿಗೆ ಹಿನ್ನಡೆಯ ಅಂಶಗಳೆನಿಸಿವೆ.

ಇದನ್ನೂ ಓದಿ: ಇತ್ತ ಅಧ್ಯಕ್ಷರ ಸೆರೆ, ಅತ್ತ ವೆನೆಜುವೆಲಾ ಮಾರುಕಟ್ಟೆ ಹಿಗ್ಗು; ಕುಸಿಯಬೇಕಿದ್ದ ಷೇರುಪೇಟೆ ಹಿರಿಹಿರಿ ಹಿಗ್ಗುತ್ತಿರುವುದೇಕೆ?

ಯುವಜನರ ಸಂಖ್ಯೆ ಹೆಚ್ಚಿರುವ ಭಾರತ ಮುಂದಿನ ಕೆಲ ದಶಕಗಳಲ್ಲಿ ಅಪಾರ ಬೆಳವಣಿಗೆ ಕಾಣಲಿದೆ. 2075ರಲ್ಲಿ ಅದು 52.5 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿರಲಿದೆ. ಅಮೆರಿಕವನ್ನು ಅದು ಹಿಂದಿಕ್ಕುತ್ತದೆ. 2075ರಲ್ಲಿ ಅಮೆರಿಕದ ಜಿಡಿಪಿ 51.5 ಟ್ರಿಲಿಯನ್ ಡಾಲರ್ ಇರುತ್ತದೆ. ಆದರೆ, ಚೀನಾ 57 ಟ್ರಿಲಿಯನ್ ಡಾಲರ್​ನೊಂದಿಗೆ ಅಗ್ರಸ್ಥಾನದಲ್ಲಿರುತ್ತದೆ ಎಂಬುದು ಗೋಲ್ಡ್​ಮನ್ ಸ್ಯಾಕ್ಸ್​ನ ವರದಿಯಲ್ಲಿ ತಿಳಿಸಲಾಗಿರುವ ಅಂಶ.

ಪಾಕಿಸ್ತಾನ ನಂ. 6

ಪಾಕಿಸ್ತಾನ, ಇಂಡೋನೇಷ್ಯಾ, ನೈಜೀರಿಯಾ ಇತ್ಯಾದಿ ಹೆಚ್ಚಿನ ಜನಸಂಖ್ಯೆ ಹಾಗೂ ಯುವಜನರ ಸಂಖ್ಯೆ ಹೆಚ್ಚಿರುವ ದೇಶಗಳಲ್ಲಿ ಸರಿಯಾದ ಆರ್ಥಿಕ ನೀತಿ ಜಾರಿಗೆ ಬಂದರೆ ವೇಗದ ಬೆಳವಣಿಗೆ ಕಾಣಬಹುದು ಎಂಬುದು ಈ ವರದಿಯಲ್ಲಿ ಸೂಚಿಸಲಾಗಿದೆ. ಪಾಕಿಸ್ತಾನ 2075ರಲ್ಲಿ 12.3 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಿರುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ರಾಮ್​ಜೆಟ್ ಶಕ್ತ ಆರ್ಟಿಲರಿ ಶೆಲ್ ಹೊಂದಿರುವ ವಿಶ್ವದ ಮೊದಲ ಸೇನೆ ಭಾರತದ್ದು; ಏನಿದರ ವಿಶೇಷತೆ?

ಗೋಲ್ಡ್​ಮನ್ ಸ್ಯಾಕ್ಸ್ ರಿಪೋರ್ಟ್; 2075ರಲ್ಲಿ ಟಾಪ್-12 ಆರ್ಥಿಕತೆಗಳಿವು…

  1. ಚೀನಾ: 57 ಟ್ರಿಲಿಯನ್ ಡಾಲರ್
  2. ಭಾರತ: 52.5 ಟ್ರಿಲಿಯನ್ ಡಾಲರ್
  3. ಅಮೆರಿಕ: 51.5 ಟ್ರಿಲಿಯನ್ ಡಾಲರ್
  4. ಇಂಡೋನೇಷ್ಯಾ: 13.7 ಟ್ರಿಲಿಯನ್ ಡಾಲರ್
  5. ನೈಜೀರಿಯಾ: 13.1 ಟ್ರಿಲಿಯನ್ ಡಾಲರ್
  6. ಪಾಕಿಸ್ತಾನ: 12.3 ಟ್ರಿಲಿಯನ್ ಡಾಲರ್
  7. ಈಜಿಪ್ಟ್: 10.5 ಟ್ರಿಲಿಯನ್ ಡಾಲರ್
  8. ಬ್ರೆಜಿಲ್: 8.7 ಟ್ರಿಲಿಯನ್ ಡಾಲರ್
  9. ಜರ್ಮನಿ: 8.1 ಟ್ರಿಲಿಯನ್ ಡಾಲರ್
  10. ಮೆಕ್ಸಿಕೋ: 7.6 ಟ್ರಿಲಿಯನ್ ಡಾಲರ್
  11. ಬ್ರಿಟನ್: 7.6 ಟ್ರಿಲಿಯನ್ ಡಾಲರ್
  12. ಜಪಾನ್: 7.5 ಟ್ರಿಲಿಯನ್ ಡಾಲರ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ – Kannada News | Bigg Boss Kannada 12: Gilli fight with Rashika for Rakshita

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಫಿನಾಲೆಗೆ ಕೆಲವೇ ದಿನಗಳು ಬಾಕಿ ಇದೆ. ಮನೆಯಲ್ಲಿ ಕೇವಲ ಎಂಟು ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಬಿಗ್​​ಬಾಸ್, ಟಾಸ್ಕ್​​ಗಳ ಮೇಲೆ ಟಾಸ್ಕ್​​ಗಳನ್ನು ಕೊಡುತ್ತಿದ್ದಾರೆ. ತಂಡ ಮಾಡಿಕೊಳ್ಳುವಂತೆ ಬಿಗ್​​ಬಾಸ್ ಹೇಳಿದಾಗ ರಾಶಿಕಾಗೆ ರಕ್ಷಿತಾರನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಇಷ್ಟವಾಗಿಲ್ಲ. ಇದೇ ಕಾರಣಕ್ಕೆ ರಕ್ಷಿತಾ ಮತ್ತು ರಾಶಿಕಾ ನಡುವೆ ಜಗಳವಾಗಿದೆ. ಆಗ ರಕ್ಷಿತಾ ಪರ ನಿಂತ ಗಿಲ್ಲಿ ಮೇಲೂ ರಾಶಿಕಾ ಕೂಗಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link