VHT 2025-26: ಮಿಂಚಿದ ಮಯಾಂಕ್, ಪಡಿಕ್ಕಲ್, ಪ್ರಸಿದ್ಧ್; ಕರ್ನಾಟಕಕ್ಕೆ ಸತತ 6ನೇ ಜಯ – Kannada News | Vijay Hazare: Karnataka Extends Unbeaten Run with Dominant Win vs Rajasthan

ಗುಜರಾತ್​ನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ 6ನೇ ಸುತ್ತಿನ ಪಂದ್ಯದಲ್ಲೂ ಕರ್ನಾಟಕ ತಂಡ ಅಮೋಘ ಜಯಭೇರಿ ಬಾರಿಸಿದೆ. ರಾಜಸ್ಥಾನ ವಿರುದ್ಧದ ಪಂದ್ಯವನ್ನು 151 ರನ್​ಗಳಿಂದ ಗೆದ್ದುಕೊಂಡಿರುವ ಕರ್ನಾಟಕ ತಂಡ ಈ ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ ಈ ಆವೃತ್ತಿಯಲ್ಲಿ ಇದುವರೆಗೆ 6 ಪಂದ್ಯಗಳನ್ನು ಆಡಿದ್ದು, ಆಡಿದ ಎಲ್ಲಾ ಪಂದ್ಯಗಳನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿದೆ. ಇದರೊಂದಿಗೆ ಎಲೈಟ್ ಎ ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಇಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ…

Read More

Video:ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು, ಜ್ಯೋತಿರಾದಿತ್ಯ ಸಿಂಧಿಯಾ ಮಗನ ಎದೆಗೆ ಗಾಯ – Kannada News | Sudden Braking Incident Leaves Jyotiraditya Scindia’s Son Injured in Madhya Pradesh

ಶಿವಪುರಿ, ಜನವರಿ 06: ಕೇಂದ್ರ ಸಚಿವರ ಜ್ಯೋತಿರಾದಿತ್ಯ ಸಿಂಧಿಯಾ ಪುತ್ರ ಮಹಾನಾರ್ಯಮನ್ ಸಿಂಧಿಯಾ ಸನ್​ರೂಫ್​ನಿಂದ ಕೈ ಬೀಸುತ್ತಿರುವಾಗ ಕಾರು ಏಕಾಏಕಿ ಬ್ರೇಕ್ ಹಾಕಿದ್ದಕ್ಕೆ ಅವರ ಎದೆಗೆ ಪೆಟ್ಟಾಗಿರುವ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ. ಕೊಲಾರಸ್ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾಗ ಮಹಾನಾರ್ಯಮನ್ ಕಾರಿನ ಸನ್‌ರೂಫ್ ಬಳಿ ನಿಂತು ಬೆಂಬಲಿಗರಿಗೆ ಕೈ ಬೀಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅವರಿಗೆ ಆರಂಭದಲ್ಲಿ ಯಾವುದೇ ಅಸ್ವಸ್ಥತೆ ಅನಿಸಲಿಲ್ಲ ಆದರೆ ನಂತರ ಎದೆ ನೋವು ಕಾಣಿಸಿಕೊಂಡಿತು ಮತ್ತು ಪರೀಕ್ಷೆಗಾಗಿ ಶಿವಪುರಿ ಜಿಲ್ಲಾ ಆಸ್ಪತ್ರೆಗೆ…

Read More

Video: ಹಸಿದ ಶ್ವಾನಕ್ಕೆ ಆಹಾರ ನೀಡಿ ಹಸಿವು ನೀಗಿಸಿದ ಪುಣ್ಯಾತ್ಮ – Kannada News | Young man satisfies dog’s hunger, video goes viral

ಸೋಶಿಯಲ್ ಮೀಡಿಯಾದಲ್ಲಿ ಕೆಲ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗುತ್ತಿರುತ್ತವೆ. ಕೆಲ ದೃಶ್ಯಗಳು ವ್ಯಕ್ತಿಯ ಹೃದಯ ಶ್ರೀಮಂತಿಕೆಗೆ ಸಾಕ್ಷಿಯಾಗುತ್ತದೆ. ಇಲ್ಲೊಬ್ಬ ಯುವಕನು (young man) ಹಸಿದ ಶ್ವಾನಕ್ಕೆ (dog) ಆಹಾರವನ್ನು ನೀಡಿ ಮೂಕ ಪ್ರಾಣಿಯ ಹಸಿವನ್ನು ನೀಗಿಸಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಯುವಕನ ಒಳ್ಳೆತನಕ್ಕೆ ಮೆಚ್ಚುಗೆ ವ್ಯಕ್ತವಾಗಿವೆ. ಮಂಜುನಾಥ್ ಲೋಕಪುರ್ (Manjunath lokapur) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಯುವಕನೊಬ್ಬ ಫುಡ್ ಸ್ಟಾಲ್ ಮುಂಭಾಗದಲ್ಲಿ ನಿಂತು ಕೊಂಡಿದ್ದಾನೆ. ಆತನ ಹಿಂಭಾಗದಲ್ಲಿ ಶ್ವಾನವೊಂದು…

Read More

Udupi Health Dept Recruitment 2025: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನರ್ಸ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ – Kannada News | Udupi Health Dept Recruitment 2025: Nurse and Worker Jobs – Apply by Jan 16!

ಉಡುಪಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಧಿಕೃತ ಅಧಿಸೂಚನೆಯ ಮೂಲಕ ನರ್ಸ್, ಮಲ್ಟಿ ರಿಹ್ಯಾಬಿಲಿಟೇಶನ್ ವರ್ಕರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಡಿಯಲ್ಲಿ ಅದರಲ್ಲೂ ವಿಶೇಷವಾಗಿ ಉಡುಪಿಯಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಜನವರಿ 16ರ ಮೊದಲು ಅರ್ಜಿ ಸಲ್ಲಿಸತಕ್ಕದ್ದು. ಶೈಕ್ಷಣಿಕ ಅರ್ಹತೆ: DHFWS ಉಡುಪಿ ಅಧಿಕೃತ ಅಧಿಸೂಚನೆಯ ಪ್ರಕಾರ…

Read More

ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ಕೆಎನ್​​ ರಾಜಣ್ಣ ಖಡಕ್​​ ಮಾತು – Kannada News | No Siddaramaiah, No Congress Party: Says KN Rajanna

ಬೆಂಗಳೂರು, ಜನವರಿ 06: ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪ ಇಲ್ಲ ಅಂದರೆ ಬಿಜೆಪಿ ಇಲ್ಲ, ಹೆಚ್.ಡಿ.ದೇವೇಗೌಡರು ಇಲ್ಲ ಅಂದರೆ ಜೆಡಿಎಸ್ ಪಕ್ಷ ಇಲ್ಲ. ಹಾಗೆಯೇ ಸಿದ್ದರಾಮಯ್ಯ ಇಲ್ಲ ಅಂದರೆ ಕಾಂಗ್ರೆಸ್ ಪಕ್ಷ ಇಲ್ಲ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ದೀರ್ಘಾವಧಿ ಸಿಎಂ ಆಗಿ ಸಿದ್ದರಾಮಯ್ಯ ದಾಖಲೆ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯಗೆ ಇನ್ನಷ್ಟು ಪುಣ್ಯ, ಶ್ರೇಯಸ್ಸು ಲಭಿಸಲಿ. 2028ರಲ್ಲೂ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ….

Read More

ಇನ್ಫೋಸಿಸ್ ಜಾಗ ಮಾರಾಟ: ಸರ್ಕಾರದಿಂದ ತನಿಖೆಗೆ ಆದೇಶ; ತಾನ್ಯಾವ ಕಾನೂನು ಉಲ್ಲಂಘಿಸಿಲ್ಲವೆಂದ ಇನ್ಫೋಸಿಸ್ – Kannada News | Infosys land sale in Attibele, probe ordered as registration violation alleged

ಬೆಂಗಳೂರು, ಜನವರಿ 6: ಆನೇಕಲ್ ತಾಲೂಕಿನಲ್ಲಿ ಇನ್ಫೋಸಿಸ್​ನಿಂದ (Infosys) 53.5 ಎಕರೆ ಭೂಮಿಯನ್ನು ರಿಯಲ್ ಎಸ್ಟೇಟ್ ಸಂಸ್ಥೆಯಾದ ಪೂರವಂಕರಕ್ಕೆ ಮಾರಾಟ ಮಾಡಿದ ಪ್ರಕರಣ ಈಗ ದೊಡ್ಡ ಸದ್ದು ಮಾಡತೊಡಗಿದೆ. ಬೆಂಗಳೂರು ಜಿಲ್ಲಾಧಿಕಾರಿಗಳು (ಡಿಸಿ) ಈ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ತನಿಖೆಯಲ್ಲಿ ಯಾರೇ ತಪ್ಪಿತಸ್ಥರೆಂದು ಗೊತ್ತಾದರೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೈಗೌಡ ಅವರು ತಿಳಿಸಿದ್ದಾರೆ. ಏನಿದು ಇನ್ಫೋಸಿಸ್ ಜಮೀನು ಮಾರಾಟ? ಇನ್ಫೋಸಿಸ್ ಸಂಸ್ಥೆ ಅನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ತಾನು ಹೊಂದಿರುವ 53.5 ಎಕರೆ…

Read More

ಒಂದೇ ಇನ್ನಿಂಗ್ಸ್​ನಲ್ಲಿ ಬಿಸಿಸಿಐನ 2 ಪ್ರಶ್ನೆಗಳಿಗೆ ಉತ್ತರಿಸಿದ ಶ್ರೇಯಸ್ ಅಯ್ಯರ್

ಸುಮಾರು 2 ತಿಂಗಳ ಬಳಿಕ ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಂಡಿರುವ ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನವೇ ತಮ್ಮ ಫಿಟ್ನೆಸ್ ಸಾಭೀತುಪಡಿಸಿರುವುದಲ್ಲದೆ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಬಿಸಿಸಿಐಗೆ ತಾನು ಸಂಪೂರ್ಣ ಫಿಟ್ ಆಗಿದ್ದೇನೆ ಎಂಬ ಮೆಸೇಜ್ ನೀಡಿದ್ದಾರೆ. ಹೀಗಾಗಿ ಕಿವೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಅಯ್ಯರ್ ಆಡುವುದು ಖಚಿತವಾಗಿದೆ. ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯ ಆರನೇ ಸುತ್ತಿನ ಪಂದ್ಯದಲ್ಲಿ ಮುಂಬೈ ತಂಡದ ಪರ…

Read More

VHT 2025-26: ಕೇವಲ 9 ರನ್​​ಗಳಿಂದ ದಾಖಲೆಯ 5ನೇ ಶತಕದಿಂದ ವಂಚಿತರಾದ ದೇವದತ್ ಪಡಿಕ್ಕಲ್ – Kannada News | Vijay Hazare Trophy Devdutt Padikkal Misses 5th Ton

ವಿಜಯ್ ಹಜಾರೆ ಟೂರ್ನಿಯ (Vijay Hazare Trophy) 6ನೇ ಸುತ್ತಿನ ಪಂದ್ಯಗಳು ಇಂದು ನಡೆಯುತ್ತಿವೆ. ಇಂದಿನ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ರಾಜಸ್ಥಾನ ತಂಡ ( Karnataka vs Rajasthan) ಎದುರಾಗಿದೆ. ಗುಜರಾತ್​ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ ತಂಡ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 324 ರನ್ ಕಲೆಹಾಕಿದೆ. ತಂಡದ ಪರ ನಾಯಕ ಮಯಾಂಕ್ ಅಗರ್ವಾಲ್ ಭರ್ಜರಿ ಶತಕ ಸಿಡಿಸಿದರೆ, ಅತ್ಯುತ್ತಮ ಫಾರ್ಮ್​ನಲ್ಲಿರುವ ದೇವದತ್ ಪಡಿಕ್ಕಲ್ ( Devdutt Padikkal)…

Read More

ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ನೀಡುವುದಾಗಿ ಭರವಸೆ – Kannada News | DK Shivakumar Visits Ballari: Consoles Mother of Slain Congress Worker

ಬಳ್ಳಾರಿ, ಜನವರಿ 06: ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಗೆ ಕಾಂಗ್ರೆಸ್​ ಕಾರ್ಯಕರ್ತ ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ರಾಜಶೇಖರ್ ನಿವಾಸಕ್ಕೆ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್​ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ವೇಳೆ ಡಿ.ಕೆ.ಶಿವಕುಮಾರ್ ಮುಂದೆ ಮೃತ ರಾಜಶೇಖರ ತಾಯಿ ತುಳಸಿ ಅವರು ಕಣ್ಣೀರು ಹಾಕಿದರು. ಇಡೀ ಮನೆಗೆ ರಾಜಶೇಖರ್ ಆಧಾರವಾಗಿದ್ದ ಎಂದು ಕಣ್ಣೀರು ಹಾಕಿದರು. ಇಡೀ ಪಕ್ಷವೇ ರಾಜಶೇಖರ ಕುಟುಂಬಸ್ಥರ ಜೊತೆ ಇದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಸರ್ಕಾರದಿಂದ ಕುಟುಂಬಕ್ಕೆ ಅಗತ್ಯ…

Read More

‘ಧುರಂಧರ್’ ಸಿನಿಮಾದ ಟಿಕೆಟ್ ಬೆಲೆ ತಗ್ಗಿಸಿದ ಚಿತ್ರತಂಡ; ಕಾರಣ ಏನು? – Kannada News | Ranveer Singh starrer Dhurandhar movie ticket price slashed due to this reason

ರಿಯಲ್ ಘಟನೆಯನ್ನು ಆಧರಿಸಿ ತಯಾರಾದ ‘ಧುರಂಧರ್’ (Dhurandhar) ಸಿನಿಮಾ ಬಿಡುಗಡೆ ಆಗಿ ಒಂದು ತಿಂಗಳು ಕಳೆದಿದೆ. ಈಗಲೂ ದೇಶಾದ್ಯಂತ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ರಣವೀರ್ ಸಿಂಗ್, ಸಾರಾ ಅರ್ಜುನ್, ಅಕ್ಷಯ್ ಖನ್ನಾ (Akshaye Khanna) ಮುಂತಾದವರು ನಟಿಸಿದ ಈ ಸಿನಿಮಾಗೆ ಬಹುತೇಕ ಪಾಸಿಟಿವ್ ವಿಮರ್ಶೆ ಸಿಕ್ಕಿದೆ. ಇಷ್ಟು ದಿನಗಳ ತನಕವೂ ಈ ಸಿನಿಮಾದ ಟಿಕೆಟ್ ಬೆಲೆ ದುಬಾರಿ ಆಗಿತ್ತು. ಆದರೆ ಈಗ ಟಿಕೆಟ್ ಬೆಲೆ ಕಡಿಮೆ ಮಾಡಲಾಗಿದೆ. ಆಯ್ದ ಕೆಲವು ಚಿತ್ರಮಂದಿರಗಳಲ್ಲಿ ಈಗ ಕೇವಲ 199…

Read More