ಕೋಲಾರ: ಬೈಕ್ಗಾಗಿ ಸೆಕ್ಯೂರಿಟಿ ಗಾರ್ಡ್ನ ಬರ್ಬರವಾಗಿ ಕೊಂದ 19 ವರ್ಷದ ಯುವಕ! – Kannada News | Youth Kills Security Guard for Bike Obsession in Kolar
ಆರೋಪಿ ಯುವಕ ಮತ್ತು ಮೃತ ಸೆಕ್ಯೂರಿಟಿ ಗಾರ್ಡ್. ಕೋಲಾರ, ಜನವರಿ 08: ಬೈಕ್ ಮೇಲಿನ ಹುಚ್ಚು ಪ್ರೀತಿಗೆ 19 ವರ್ಷದ ಯುವಕನೋರ್ವ ಸೆಕ್ಯೂರಿಟಿ ಗಾರ್ಡ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರ ತಾಲೂಕಿನ ಉದ್ದಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮುನಿರಾಜು (45) ಕೊಲೆಯಾದ ವ್ಯಕ್ತಿಯಾಗಿದ್ದು, ಆತನ ಸ್ನೇಹಿತ ಗಂಗರಾಜುವೇ ಆರೋಪಿ ಎಂಬುದು ಗೊತ್ತಾಗಿದೆ. ನಾಪತ್ತೆಯಾಗಿದ್ದ ಮುನಿರಾಜು ಶವ ಕೆರೆಯೊಂದರಲ್ಲಿ ಪತ್ತೆಯಾಗಿದ್ದು, ಪ್ರಕರಣದ ತನಿಖೆಗಿಳಿದ ಪೊಲೀಸರೇ ಕೊಲೆಯ ಕಾರಣ ಕಂಡು ಪೊಲೀಸರೇ ದಂಗಾಗಿದ್ದಾರೆ. ಉದ್ದಪ್ಪನಹಳ್ಳಿ ಗ್ರಾಮದ ನಿವಾಸಿ ಮುನಿರಾಜು ತಮ್ಮದೇ…