Category Archives: Blog

Your blog category

ದೆಹಲಿಯ ಗೋದಾಮಿನಲ್ಲಿ ಅಗ್ನಿ ದುರಂತ, ಪಕ್ಕದ ಗುಡಿಸಲುಗಳಿಗೆ ತಗುಲಿದ ಬೆಂಕಿ, ಒಂದು ಮಗು ಸೇರಿ ಮೂವರು ಸಜೀವದಹನ – Kannada News | Blaze Turns Deadly in Rohini: Three Killed as Fire Sweeps Through Shanties

ನವದೆಹಲಿ, ಏಪ್ರಿಲ್ 15: ದೆಹಲಿಯ ರೋಹಿಣಿ ಪ್ರದೇಶದಲ್ಲಿ ಗುರುವಾರ ತಡರಾತ್ರಿ ಭೀಕರ ಅಗ್ನಿ ದುರಂತ(Fire Accident) ಸಂಭವಿಸಿದೆ. ಮಂಗೇರಾಮ್ ಪಾರ್ಕ್‌ನಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣಾ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ, ಅಲ್ಲಿಯೇ ನಿರ್ಮಿಸಲಾಗಿದ್ದ ಗುಡಿಸಲುಗಳನ್ನು ಆಹುತಿ ಪಡೆದಿದೆ. ಈ ಘೋರ ಘಟನೆಯಲ್ಲಿ ಮಗುವೂ ಸೇರಿದಂತೆ ಒಂದೇ ಕುಟುಂಬದ ಮೂವರು ಸಜೀವ ದಹನವಾಗಿದ್ದಾರೆ.

ಬುದ್ಧ ವಿಹಾರ್ ಬಳಿಯ ಸುಮಾರು 400 ಚದರ ಗಜಗಳಷ್ಟು ವಿಸ್ತೀರ್ಣದ ಜಾಗದಲ್ಲಿ ಈ ಅನಾಹುತ ಸಂಭವಿಸಿದೆ. ಇಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿಡಲಾಗಿತ್ತು ಮತ್ತು ಅದರ ಪಕ್ಕದಲ್ಲೇ ಕಾರ್ಮಿಕರು ತಾತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದರು. ಬೆಳಗಿನ ಜಾವ ಸುಮಾರು 1.25 ರ ಸುಮಾರಿಗೆ ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಪ್ಲಾಸ್ಟಿಕ್ ವಸ್ತುಗಳಿದ್ದ ಕಾರಣ ಜ್ವಾಲೆಗಳು ಕ್ಷಣಾರ್ಧದಲ್ಲಿ ವ್ಯಾಪಿಸಿ ಇಡೀ ಪ್ರದೇಶವನ್ನು ಆವರಿಸಿಕೊಂಡಿವೆ.

ಕಾರ್ಯಾಚರಣೆಗೆ ಅಡ್ಡಿಯಾದ ಕಿರಿದಾದ ರಸ್ತೆಗಳು
ಬೆಂಕಿಯ ಸುದ್ದಿ ತಿಳಿಯುತ್ತಿದ್ದಂತೆಯೇ ಆರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಆದರೆ, ಈ ಪ್ರದೇಶದ ರಸ್ತೆಗಳು ಅತ್ಯಂತ ಕಿರಿದಾಗಿದ್ದರಿಂದ ದೊಡ್ಡ ವಾಹನಗಳು ಘಟನಾ ಸ್ಥಳವನ್ನು ತಲುಪಲು ಹರಸಾಹಸ ಪಡಬೇಕಾಯಿತು. ಅಗ್ನಿಶಾಮಕ ಅಧಿಕಾರಿ ಅಜಯ್ ಶರ್ಮಾ ನೇತೃತ್ವದಲ್ಲಿ ದೀರ್ಘಕಾಲದ ಕಾರ್ಯಾಚರಣೆಯ ನಂತರ ಬೆಂಕಿಯನ್ನು ಹತೋಟಿಗೆ ತರಲಾಯಿತು. ದುರದೃಷ್ಟವಶಾತ್, ಅಗ್ನಿಶಾಮಕ ದಳದವರು ಸ್ಥಳಕ್ಕೆ ತಲುಪುವಷ್ಟರಲ್ಲೇ ಮೂವರು ಪ್ರಾಣ ಕಳೆದುಕೊಂಡಿದ್ದರು.

ಮತ್ತಷ್ಟು ಓದಿ: ದೆಹಲಿಯಲ್ಲಿ ಕಟ್ಟಡಕ್ಕೆ ಬೆಂಕಿ; ಮೂರು ಮಕ್ಕಳು ಸೇರಿ ಆರು ಮಂದಿ ಬಲಿ

ಸಾವನ್ನಪ್ಪಿದವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಅವಶೇಷಗಳಡಿಯಿಂದ ಅವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. “ಈ ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯ ಬೆಂಕಿ ಸಂಪೂರ್ಣ ನಿಯಂತ್ರಣದಲ್ಲಿದೆ, ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು ಮತ್ತು ವಿಪತ್ತು ನಿರ್ವಹಣಾ ತಂಡಗಳು (CATS) ಸ್ಥಳದಲ್ಲಿ ಮೊಕ್ಕಾಂ ಹೂಡಿವೆ.

ರಾಜ್‌ಘಾಟ್ ಬಳಿಯೂ ಬೆಂಕಿ ಅವಘಡ
ದೆಹಲಿಯಲ್ಲಿ ಹೆಚ್ಚುತ್ತಿರುವ ತಾಪಮಾನದ ನಡುವೆ ಅಗ್ನಿ ಅವಘಡಗಳ ಸರಣಿ ಮುಂದುವರೆಯುತ್ತಿದೆ. ಇದೇ ಏಪ್ರಿಲ್ 12 ರಂದು ರಾಜ್‌ಘಾಟ್ ಬಸ್ ಡಿಪೋ ಬಳಿಯ ಪೊದೆಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು. ಒಣಗಿದ ಗಿಡಗಂಟಿಗಳು ಮತ್ತು ಕಸಕ್ಕೆ ಹತ್ತಿದ ಬೆಂಕಿ ವೇಗವಾಗಿ ಹರಡಿ ಆತಂಕ ಮೂಡಿಸಿತ್ತು. ಅಗ್ನಿಶಾಮಕ ದಳದ ಎಡಿಒ ಭೂಪೇಂದ್ರ ಪ್ರಕಾಶ್ ನೇತೃತ್ವದಲ್ಲಿ ಹಲವಾರು ಘಟಕಗಳು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದವು. ಅದೃಷ್ಟವಶಾತ್ ಆ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ.

ಬೇಸಿಗೆಯ ಆರಂಭದ ದಿನಗಳಲ್ಲಿ ಪ್ಲಾಸ್ಟಿಕ್ ಮತ್ತು ಒಣ ತ್ಯಾಜ್ಯ ಸಂಗ್ರಹಣಾ ಪ್ರದೇಶಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ರೋಹಿಣಿಯ ಈ ಘಟನೆ ರಾಜಧಾನಿಯ ಕೊಳೆಗೇರಿಗಳಲ್ಲಿನ ಸುರಕ್ಷತೆಯ ಬಗ್ಗೆ ಮತ್ತೆ ಪ್ರಶ್ನೆ ಎತ್ತುವಂತೆ ಮಾಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

RCB vs LSG ಪಂದ್ಯಕ್ಕೆ 4 ಆಟಗಾರರು ಅಲಭ್ಯ..!

Source link

ಇರಾನ್ ಜತೆ ಅಮೆರಿಕ ಮಾತುಕತೆ: ಮತ್ತೆ ಪಾಕಿಸ್ತಾನವೇ ಅಂಗಳ, 48 ಗಂಟೆಗಳಲ್ಲಿ ನಿರ್ಣಾಯಕ ಬೆಳವಣಿಗೆ – Kannada News | US Iran Peace Talks: Pakistan Hosts Crucial Next Round in 48 Hours, Trump Confident

ಇಸ್ಲಾಮಾಬಾದ್, ಏಪ್ರಿಲ್ 15: ಪಶ್ಚಿಮ ಏಷ್ಯಾದಲ್ಲಿ ಹೊತ್ತಿ ಉರಿಯುತ್ತಿರುವ ಯುದ್ಧದ ಜ್ವಾಲೆಯನ್ನು ಆರಿಸಲು ವಿಶ್ವದ ದೊಡ್ಡಣ್ಣ ಅಮೆರಿಕ ಈಗ ಮತ್ತೊಂದು ನಿರ್ಣಾಯಕ ಹೆಜ್ಜೆಯನ್ನಿಟ್ಟಿದೆ. ಇಸ್ಲಾಮಾಬಾದ್‌ನಲ್ಲಿ ನಡೆದ ಮೊದಲ ಸುತ್ತಿನ ಮಾತುಕತೆಗಳು ಅನಿರೀಕ್ಷಿತವಾಗಿ ವಿಫಲವಾದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಈಗ ಸಂಚಲನ ಮೂಡಿಸುವ ಹೇಳಿಕೆ ನೀಡಿದ್ದಾರೆ.”ಮುಂದಿನ ಎರಡು ದಿನಗಳಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗಳು ಪುನರಾರಂಭಗೊಳ್ಳಲಿವೆ” ಎಂದು ಟ್ರಂಪ್ ಘೋಷಿಸಿದ್ದು, ಇಡೀ ಜಗತ್ತಿನ ಗಮನ ಈಗ ಪಾಕಿಸ್ತಾನದತ್ತ ನೆಟ್ಟಿದೆ.

ಯುರೋಪ್ ಬೇಡ, ಪಾಕಿಸ್ತಾನವೇ ಸಾಕು
ನ್ಯೂಯಾರ್ಕ್ ಪೋಸ್ಟ್ ಜೊತೆಗಿನ ವಿಶೇಷ ದೂರವಾಣಿ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಆರಂಭದಲ್ಲಿ ಎರಡನೇ ಸುತ್ತಿನ ಮಾತುಕತೆಗಳನ್ನು ಯುರೋಪ್‌ನಲ್ಲಿ ನಡೆಸುವ ಬಗ್ಗೆ ಚಿಂತಿಸಲಾಗಿತ್ತು ಎಂದು ಒಪ್ಪಿಕೊಂಡರು. ಆದರೆ, ಕೇವಲ ಅರ್ಧ ಗಂಟೆಯ ನಂತರ ತಮ್ಮ ನಿರ್ಧಾರ ಬದಲಿಸಿದ ಅವರು, ಸ್ಥಳ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿದರು. “ನಾವು ಪಾಕಿಸ್ತಾನಕ್ಕೆ ಮರಳುವ ಸಾಧ್ಯತೆಗಳೇ ದಟ್ಟವಾಗಿವೆ. ನಮಗೆ ಸಂಬಂಧವೇ ಇಲ್ಲದ ದೇಶಕ್ಕೆ ನಾವು ಏಕೆ ಹೋಗಬೇಕು?” ಎಂದು ಪ್ರಶ್ನಿಸುವ ಮೂಲಕ ಪಾಕಿಸ್ತಾನದ ಮೇಲಿನ ತಮ್ಮ ಒಲವನ್ನು ವ್ಯಕ್ತಪಡಿಸಿದರು.

ಫೀಲ್ಡ್ ಮಾರ್ಷಲ್ ಮುನೀರ್ ಕಾರ್ಯವೈಖರಿಗೆ ಟ್ರಂಪ್ ಫಿದಾ
ಟ್ರಂಪ್ ಅವರ ಈ ನಿರ್ಧಾರದ ಹಿಂದೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರ ಪಾತ್ರ ದೊಡ್ಡದಿದೆ. ಮುನೀರ್ ಅವರನ್ನು ‘ಫೀಲ್ಡ್ ಮಾರ್ಷಲ್’ ಎಂದು ಸಂಬೋಧಿಸಿದ ಟ್ರಂಪ್, “ಅವರು ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮೇಲಿನ ವಿಶ್ವಾಸದಿಂದಲೇ ನಾವು ಮತ್ತೆ ಇಸ್ಲಾಮಾಬಾದ್‌ಗೆ ಹೋಗಲು ನಿರ್ಧರಿಸಿದ್ದೇವೆ” ಎಂದಿದ್ದಾರೆ. ಪಾಕಿಸ್ತಾನದ ಮಧ್ಯಸ್ಥಿಕೆ ಮತ್ತು ಭದ್ರತಾ ವ್ಯವಸ್ಥೆಯು ಅಮೆರಿಕದ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ ಎಂಬುದಕ್ಕೆ ಇದು ಸಾಕ್ಷಿ.

ಮಾತುಕತೆಯ ಉದ್ದೇಶ?
ಕಳೆದ ಏಳು ವಾರಗಳಿಂದ ಇರಾನ್ ಮತ್ತು ಅಮೆರಿಕ-ಇಸ್ರೇಲ್ ಪಡೆಗಳ ನಡುವೆ ನಡೆಯುತ್ತಿರುವ ಸಂಘರ್ಷವು ಭೀಕರ ರೂಪ ಪಡೆದಿದೆ. ಇರಾನ್ ನಾಯಕತ್ವದ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಿಂದ ಉದ್ವಿಗ್ನತೆ ಮಿತಿಮೀರಿದೆ. ಈ ಯುದ್ಧವನ್ನು ಕೊನೆಗೊಳಿಸಿ, ಪಶ್ಚಿಮ ಏಷ್ಯಾದಲ್ಲಿ ಶಾಂತಿ ಪುನಃಸ್ಥಾಪಿಸುವುದು ಈ ಮಾತುಕತೆಯ ಮುಖ್ಯ ಅಜೆಂಡಾ.
ಏಪ್ರಿಲ್ 10 ರಿಂದ 12 ರವರೆಗೆ ಇಸ್ಲಾಮಾಬಾದ್‌ನ ಸೆರೆನಾ ಹೋಟೆಲ್‌ನಲ್ಲಿ ಮೊದಲ ಸುತ್ತಿನ ಮಾತುಕತೆ ನಡೆದಿತ್ತು. ಅದು ಯಶಸ್ವಿಯಾಗದಿದ್ದರೂ, ಎರಡನೇ ಪ್ರಯತ್ನದಲ್ಲಿ ಒಪ್ಪಂದಕ್ಕೆ ಬರಲು ಎರಡೂ ದೇಶಗಳು ಉತ್ಸುಕವಾಗಿವೆ.

ಮತ್ತಷ್ಟು ಓದಿ: ಇರಾನ್ ಮತ್ತೆ ಮಾತುಕತೆಗೆ ಬರಲಿ, ಬರ್ದೇ ಇರ್ಲಿ ಡೋಂಟ್ ಕೇರ್: ಡೊನಾಲ್ಡ್​ ಟ್ರಂಪ್

ಅನಿಶ್ಚಿತತೆಯ ನಡುವೆಯೂ ನಿರೀಕ್ಷೆ
ಎರಡನೇ ಸುತ್ತಿನ ಈ ಸಭೆಯಲ್ಲಿ ಯಾರ್ಯಾರು ಭಾಗವಹಿಸಲಿದ್ದಾರೆ ಎಂಬುದು ಇನ್ನೂ ನಿಗೂಢವಾಗಿದೆ. ಮೊದಲ ಸುತ್ತಿನಲ್ಲಿದ್ದ ನಾಯಕರೇ ಇರುತ್ತಾರೋ ಅಥವಾ ಹೊಸ ರಾಜತಾಂತ್ರಿಕರು ಸೇರ್ಪಡೆಯಾಗುತ್ತಾರೋ ಎಂಬುದು ಕುತೂಹಲ ಮೂಡಿಸಿದೆ. ಸ್ಥಳ ಮತ್ತು ಸಮಯದ ಬಗ್ಗೆ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಒಮ್ಮತ ಮೂಡಿದ ತಕ್ಷಣ ಅಧಿಕೃತ ಘೋಷಣೆ ಹೊರಬೀಳಲಿದೆ.

ಒಟ್ಟಾರೆಯಾಗಿ, ಮುಂದಿನ 48 ಗಂಟೆಗಳು ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಅತ್ಯಂತ ನಿರ್ಣಾಯಕವಾಗಿದ್ದು, ಪಾಕಿಸ್ತಾನದ ನೆಲದಲ್ಲಿ ಜಾಗತಿಕ ಶಾಂತಿಯ ಹೊಸ ಹಾದಿ ತೆರೆಯುತ್ತದೆಯೇ ಎಂದು ಕಾದು ನೋಡಬೇಕಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಹೋಮ, ಹವನ, ಪೂಜೆ ಸಮಯದಲ್ಲಿಎದ್ದು ಓಡಾಡುವುದು ಅಶುಭವೇ? – Kannada News | The Sacred Discipline: Why Interrupting Homa and Pooja Rituals is Inauspicious

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಹೋಮ, ಹವನ, ಪೂಜೆ ಸಮಯದಲ್ಲಿಎದ್ದು ಓಡಾಡುವುದು ಅಶುಭವೇ ಎಂದು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ.ಯಾವುದೇ ಪೂಜೆ ಅಥವಾ ವ್ರತವನ್ನು ಸಂಕಲ್ಪ ದೊಂದಿಗೆ ಪ್ರಾರಂಭಿಸಲಾಗುತ್ತದೆ. ಒಮ್ಮೆ ಸಂಕಲ್ಪ ಮಾಡಿದ ನಂತರ, ಪೂಜಾ ಸ್ಥಳವನ್ನು ಬಿಟ್ಟು ಹೊರಗೆ ಹೋಗಬಾರದು ಎಂಬುದು ಧಾರ್ಮಿಕ ನಿಯಮ. ಫೋನ್ ಕರೆಗಳು, ವಿಐಪಿ ಭೇಟಿಗಳು ಅಥವಾ ಇತರೆ ಯಾವುದೇ ಕಾರಣಗಳಿಗಾಗಿ ಪೂಜೆಯ ಮಧ್ಯದಲ್ಲಿ ಎದ್ದು ಓಡಾಡಿದರೆ, ಆ ಪೂಜೆಯು ಪರಿಪೂರ್ಣವಾಗುವುದಿಲ್ಲ ಮತ್ತು ಅದರ ಫಲ ಲಭಿಸುವುದಿಲ್ಲ. ಇದು ಶ್ರದ್ಧೆ, ಭಕ್ತಿ ಮತ್ತು ಶಿಸ್ತಿಗೆ ವಿರುದ್ಧವಾಗಿದೆ. ಹಾಗಾಗಿ, ಯಾವುದೇ ಧಾರ್ಮಿಕ ವಿಧಿಯನ್ನು ಆರಂಭಿಸಿದರೆ ಅದನ್ನು ಸಂಪೂರ್ಣವಾಗಿ ನೆರವೇರಿಸುವುದು ಅತ್ಯಗತ್ಯ ಎಂದು ಗುರೂಜಿ ಹೇಳಿದ್ದಾರೆ.

 

 

 

Source link

‘ಧುರಂಧರ್ 2’ ಕಲೆಕ್ಷನ್: ‘ಪುಷ್ಪ 2’, ‘ಬಾಹುಬಲಿ 2’ ದಾಖಲೆ ಮುರಿಯಲು ಇನ್ನೆಷ್ಟು ಕೋಟಿ ಬಾಕಿ – Kannada News | Dhurandhar 2 collection report: Movie about break Pushpa 2 and Bahubali 2 record

ಧುರಂಧರ್ 2’ (Dhurandhar 2) ಸಿನಿಮಾ ಬಿಡುಡಗೆ ಆಗಿ ಇಂದಿಗೆ 28 ದಿನಗಳಾಗಿವೆ. ಸಿನಿಮಾ ಭರ್ಜರಿ ಗಳಿಕೆಯನ್ನು ಮುಂದುವರೆಸಿದೆ. ಇತ್ತೀಚೆಗೆ ಗಳಿಕೆಯಲ್ಲಿ ಸಣ್ಣ ಇಳಿಕೆ ಕಂಡು ಬಂದಿದೆಯಾದರೂ ಸಿನಿಮಾದ ಒಟ್ಟಾರೆ ಗಳಿಕೆ ಸಂಖ್ಯೆ ದೊಡ್ಡದಾಗಿಯೇ ಇವೆ. ‘ಧುರಂಧರ್ 2’ ಸಿನಿಮಾದ ಸುಮಾರು 10 ಸಾವಿರಕ್ಕೂ ಹೆಚ್ಚು ಶೋಗಳು ಈಗಲೂ ದೇಶದಾದ್ಯಂತ ಪ್ರದರ್ಶನವಾಗುತ್ತಿದ್ದು, ದಿನವಹಿ ಕಲೆಕ್ಷನ್ 7 ರಿಂದ 10 ಕೋಟಿ ಇದೆ. ಸಿನಿಮಾ ಬಿಡುಗಡೆ ಆಗಿ ತಿಂಗಳಾಗುತ್ತಾ ಬಂದರೂ ಕೋಟಿಗಳಲ್ಲಿ ಗಳಿಕೆ ಮಾಡುತ್ತಿರುವುದು ಸಾಮಾನ್ಯವಲ್ಲ. ಇದೀಗ ಈ ಸಿನಿಮಾ ‘ಪುಷ್ಪ 2’ ಮತ್ತು ‘ಬಾಹುಬಲಿ 2’ ದಾಖಲೆಗಳನ್ನು ಮುರಿಯುವ ಹೊಸ್ತಿಲಲ್ಲಿದೆ.

‘ಧುರಂಧರ್ 2’ ಸಿನಿಮಾ 27 ದಿನಗಳ ಬಳಿಕ ಭಾರತದಾದ್ಯಂತ 1311 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಿಶ್ವ ಬಾಕ್ಸ್ ಆಫೀಸ್​​ನಲ್ಲಿ 1727 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಆಗಿದೆ. ಈ ಮೂಲಕ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ದಾಖಲೆಯನ್ನು ‘ಧುರಂಧರ್ 2’ ಸಿನಿಮಾ ಮುರಿಯಲು ಕೆಲವೇ ಕೋಟಿಗಳು ಬಾಕಿ ಇದೆ. ‘ಪುಷ್ಪ 2’ ಸಿನಿಮಾ ಭಾರತದಲ್ಲಿ 1471 ಕೋಟಿ (ಗ್ರಾಸ್ ಕಲೆಕ್ಷನ್) ಮಾಡಿದೆ ಎನ್ನಲಾಗಿದೆ. ಇನ್ನು ‘ಬಾಹುಬಲಿ 2’ ಸಿನಿಮಾ ಭಾರತದಲ್ಲಿ 1416 ಕೋಟಿ ಗಳಿಕೆ ಮಾಡಿತ್ತು. ಈ ಎರಡೂ ಸಿನಿಮಾಗಳ ದಾಖಲೆಗಳನ್ನು ಶೀಘ್ರವೇ ಮುರಿಯಲಿದೆ ‘ಧುರಂಧರ್ 2’.

‘ಧುರಂಧರ್ 2’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ 1727 ಕೋಟಿ ಗಳಿಕೆ ಮಾಡಿದ್ದು, ‘ಪುಷ್ಪ 2’ ಸಿನಿಮಾದ ವರ್ಲ್ಡ್ ಬಾಕ್ಸ್ ಆಫೀಸ್ ಕಲೆಕ್ಷನ್ 1742 ಕೋಟಿ ರೂಪಾಯಿಗಳಾಗಿವೆ. ಈ ದಾಖಲೆಯನ್ನು ಅತ್ಯಂತ ಶೀಘ್ರದಲ್ಲೇ ‘ಧುರಂಧರ್ 2’ ಸಿನಿಮಾ ಮುರಿಯಲಿದೆ. ಆದರೆ ‘ಬಾಹುಬಲಿ 2’ ಸಿನಿಮಾದ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ ಸುಮಾರು 1800 ಕೋಟಿ ಇದ್ದು, ಈ ದಾಖಲೆ ಮುರಿಯಲು ‘ಧುರಂಧರ್ 2’ಗೆ ಇನ್ನಷ್ಟು ಹೆಚ್ಚಿನ ಸಮಯ ಬೇಕಾಗಬಹುದು.

ಇದನ್ನೂ ಓದಿ:RCB ತಂಡದಲ್ಲಿ ಧುರಂಧರ ದಂಡೇ ಇದೆ: ಎದುರಾಳಿಗಳು ನಡುಗುತ್ತಿದ್ದಾರೆ!

‘ಐಪಿಎಲ್’, ನಾಲ್ಕು ರಾಜ್ಯಗಳ ಚುನಾವಣೆ, ಇತರೆ ಸಿನಿಮಾಗಳ ಬಿಡುಗಡೆ ಇನ್ನಿತರೆಗಳು ಇರುವ ಕಾರಣ ‘ಧುರಂಧರ್ 2’ ಸಿನಿಮಾದ ಗಳಿಕೆಯಲ್ಲಿ ತುಸು ಇಳಿಕೆ ಕಂಡು ಬಂದಿದೆ. ಮಂಗಳವಾರದಂದು ‘ಧುರಂಧರ್ 2’ ಸಿನಿಮಾ ಭಾರತದಲ್ಲಿ ಸುಮಾರು 7.5 ಕೋಟಿ ಗಳಿಕೆ ಮಾಡಿದೆ. ಕಳೆದ ಭಾನುವಾರ 14 ಕೋಟಿಗೂ ಹೆಚ್ಚು ಮೊತ್ತ ಗಳಿಸಿತ್ತು. ಇದೇ ವೇಗದಲ್ಲಿ ಮುಂದುವರೆದರೂ ಸಹ ಇನ್ನೊಂದು ವಾರದಲ್ಲಿ ವಿಶ್ವ ಬಾಕ್ಸ್ ಆಫೀಸ್ ಲೆಕ್ಕಾಚಾರದಲ್ಲಿ ‘ಪುಷ್ಪ 2’ ಮತ್ತು ‘ಬಾಹುಬಲಿ 2’ ಸಿನಿಮಾದ ದಾಖಲೆ ಮುರಿಯುವುದು ಖಾತ್ರಿ.

‘ಧುರಂಧರ್ 2’ ಸಿನಿಮಾ ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಭಾರತದ ಸೈನಿಕನೋರ್ವ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಉಗ್ರರನ್ನು ಮಟ್ಟ ಹಾಕುವ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ರಣ್ವೀರ್ ಸಿಂಗ್, ಅರ್ಜುನ್ ರಾಂಪಾಲ್, ಅಕ್ಷಯ್ ಖನ್ನಾ, ಸಂಜಯ್ ದತ್ ಮತ್ತು ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಆದಿತ್ಯ ಧರ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆಸ್ಟ್ರೇಲಿಯಾದಲ್ಲಿ ಐಪಿಎಲ್ ಪಂದ್ಯ..!

Source link

ಜಮೀರ್​​ಗೆ ಸಿಎಂ ಸಿದ್ದರಾಮಯ್ಯ ಬಿಗ್ ಶಾಕ್!: ಹೈಕಮಾಂಡ್ ನಿನ್ನ ಮೇಲೆ ಸಿಟ್ಟಾಗಿದೆ, ನೀನೇ ಸಮಜಾಯಿಷಿ ನೀಡಬೇಕು – Kannada News | Davangere By poll Fallout: Zameer Accused of Inciting Congress Muslim Leaders’ Revolt

ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್

ಬೆಂಗಳೂರು, ಏ.15: ದಾವಣಗೆರೆ ಉಪಚುನಾವಣೆ ಟಿಕೆಟ್ ಘೋಷಣೆಯ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಬಂಡಾಯದ ಕಿಚ್ಚು ಈಗ ಸಚಿವ ಜಮೀರ್ ಅಹ್ಮದ್ ಅವರ ಬುಡಕ್ಕೆ ಬಂದಿದೆ. ಮುಸ್ಲಿಂ ನಾಯಕರ ತಲೆದಂಡ ಆಗುತ್ತಿದೆ. ದಾವಣಗೆರೆ ಉಪಚುನಾವಣೆ ಕಾಂಗ್ರೆಸ್​​​​ಗೆ ಪ್ರತಿಷ್ಠೆಯ ಚುನಾವಣೆ ಆಗಿತ್ತು. ಇದೀಗ ಅಲ್ಪಸಂಖ್ಯಾತ ನಾಯಕರ ಅಸಮಾಧನದಿಂದ ಕಾಂಗ್ರೆಸ್​​ ಇಲ್ಲಿ ಗೆಲ್ಲುವುದು ಅನುಮಾನವಾಗಿದೆ, ಈ ಕಾರಣಕ್ಕೆ ನಜೀರ್ ಅಹಮದ್, ಅಬ್ದುಲ್ ಜಬ್ಬರ್ ಅವರು ರಾಜೀನಾಮೆ ನೀಡಿದ್ದಾರೆ. ಆದರೆ ಇದರಲ್ಲಿ ಪ್ರಮುಖ ಪಾತ್​ರವಹಿಸಿ ಸಚೀವ ಜಮೀರ್​ ಎಂದು ಹೇಳಲಾಗಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಜಮೀರ್ ಅವರೊಂದಿಗೆ ಸುಮಾರು ಎರಡೂವರೆ ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿ, ತಮ್ಮ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಪಕ್ಷದೊಳಗೆ ಟಿಕೆಟ್ ವಿಚಾರವಾಗಿ ಬಂಡಾಯ ಎದ್ದಿರುವ ನಾಯಕರಿಗೆ ಜಮೀರ್ ಅಹ್ಮದ್ ಪ್ರಚೋದನೆ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ದೂರುಗಳು ಸಲ್ಲಿಕೆಯಾಗಿರುವುದು ಸಿಎಂ ಸಿದ್ದರಾಮಯ್ಯ ಅವರ ಕೆಂಗಣ್ಣಿಗೆ ಕಾರಣವಾಗಿದೆ. ಬಂಡಾಯದ ವಿಚಾರವಾಗಿ ಹೈಕಮಾಂಡ್ ನಿನ್ನ ಮೇಲೆ ಸಿಟ್ಟಾಗಿದೆ. ನೀನೇ ದೆಹಲಿಗೆ ಹೋಗಿ ಸೂಕ್ತ ಸಮಜಾಯಿಷಿ ನೀಡಬೇಕು” ಎಂದು ಸಿದ್ದರಾಮಯ್ಯ ಅವರು ಜಮೀರ್ ಅವರಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಜತೆ ರಹಸ್ಯ ಮಾತುಕತೆ ನಡೆಸಿ ಹೊರಟ ಜಮೀರ್ ಅಹ್ಮದ್, ಮಂತ್ರಿ ಕಥೆ ಏನು?

ಸಿಎಂ ಪ್ರಶ್ನೆಗಳಿಗೆ ಉತ್ತರಿಸಿರುವ ಜಮೀರ್ ಅಹ್ಮದ್, ತಾನು ಕೇರಳ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದೆ ಮತ್ತು ವೈಯಕ್ತಿಕ ಕಾರಣಗಳಿಗಾಗಿ ಮುಂಬೈಗೆ ತೆರಳಿದ್ದೆ ಹೊರತು, ಬಂಡಾಯಕ್ಕೆ ಪ್ರಚೋದನೆ ನೀಡಿಲ್ಲ ಎಂದು ವಿವರಣೆ ನೀಡಿದ್ದಾರೆ. ಈಗಾಗಲೇ ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹ್ಮದ್ ಅವರ ರಾಜೀನಾಮೆ ವಿಚಾರ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಈಗ ಪ್ರಭಾವಿ ಸಚಿವ ಜಮೀರ್ ಅಹ್ಮದ್ ವಿರುದ್ಧವೇ ದೂರುಗಳು ಹೋಗಿರುವುದು ಪಕ್ಷದ ಒಗ್ಗಟ್ಟಿಗೆ ಪೆಟ್ಟು ನೀಡುವ ಸಾಧ್ಯತೆ ಇದೆ. ಈ ಕಾರಣಕ್ಕೆ ಈ ವಿಚಾರಕ್ಕೆ ಅಂತ್ಯ ಹಾಡಬೇಕು ಎಂಬುದು ಸಿದ್ಧರಾಮಯ್ಯ ಅವರ ಯೋಚನೆ ಆಗಿದೆ, ಇದರ ಜತೆಗೆ ಹೈಕಮಾಂಡ್​​​ಗೂ ಸೂಕ್ತ ಉತ್ತರ ಹಾಗೂ ಮನವರಿಕೆ ಮಾಡಬೇಕಾಗಿದೆ. ಒಟ್ಟಿನಲ್ಲಿ ಈಗಾಗಲೇ ಈ ವಿಚಾರವಾಗಿ ಇಬ್ಬರ ತಲೆದಂಡವಾಗಿದೆ. ಮುಂದೆ ಜಮೀರ್​​ ಮೇಲೆಯೂ ಕ್ರಮ ಕೈಗೊಳ್ಳುವ ಸಾಧ್ಯತೆಗಳು ಇದೆ ಎಂದು ಹೇಳಲಾಗಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಘೋರ ದುರಂತ: ಚಿಕ್ಕಮಗಳೂರಿನಲ್ಲಿ ಮೆರವಣಿಗೆ ಮೇಲೆ ಹರಿದ ಕಾರು; 7 ವರ್ಷದ ಬಾಲಕಿ ಸಾವು, 9 ಮಂದಿಗೆ ಗಂಭೀರ ಗಾಯ! – Kannada News | Horrific Chikkamagaluru Accident: Car Rams Ambedkar Jayanti Procession, 7 Year Old Killed

ಚಿಕ್ಕಮಗಳೂರು, ಏ.15: ಜಿಲ್ಲೆಯ ಬಿಳೆಕಲ್ಲು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಮೆರವಣಿಗೆಯ ಸಂಭ್ರಮದ ನಡುವೆಯೇ ಮೃತ್ಯು ಕಾರಿನ ರೂಪದಲ್ಲಿ ಬಂದಪ್ಪಳಿಸಿದೆ. ವೇಗವಾಗಿ ಬಂದ ಕಾರೊಂದು ಮೆರವಣಿಗೆಯಲ್ಲಿದ್ದ ಜನರ ಮೇಲೆ ಹರಿದ ಪರಿಣಾಮ 7 ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದು, ಒಂಬತ್ತು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಬಿಳೆಕಲ್ಲು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಮೆರವಣಿಗೆ ನಡೆಯುತ್ತಿದ್ದಾಗ, ನಿಯಂತ್ರಣ ತಪ್ಪಿದ ಕಾರೊಂದು ಏಕಾಏಕಿ ಜನರ ಗುಂಪಿಗೆ ನುಗ್ಗಿ ಪಲ್ಟಿಯಾಗಿದೆ. ಈ ಘಟನೆಯು ಹಾಸನದ ಗಣಪತಿ ಮೆರವಣಿಗೆಯ ವೇಳೆ ನಡೆದಿದ್ದ ದುರಂತವನ್ನು ನೆನಪಿಸುವಂತಿದೆ.ಇಂದಾವರ ಗ್ರಾಮದಿಂದ ಬಿಳೆಕಲ್ಲು ಗ್ರಾಮದ ತನ್ನ ತಂಗಿ ಮನೆಗೆ ಹೋಗಿದ್ದ ಸಾನ್ವಿ (7) ಎಂಬ ಬಾಲಕಿ ಕಾರು ಗುದ್ದಿದ ರಭಸಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಅಪಘಾತದಲ್ಲಿ ನಿಶ್ಚಿತ (11), ತೃಪ್ತಿ (11), ತಿಮ್ಮರಾಜು (45), ಉಷಾ (22), ಸೃಷ್ಟಿ (18), ನಾಗರಾಜು (28), ಚೇತನ್ (16) ಸೇರಿದಂತೆ ಒಟ್ಟು 9 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಎಂಟು ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಕಾರಿನಲ್ಲಿದ್ದ ಸುಧಾಕರ್ ಎಂಬುವವರಿಗೂ ಗಾಯಗಳಾಗಿದ್ದು, ಅವರ ಸ್ಥಿತಿಯೂ ಗಂಭೀರವಾಗಿದೆ.

ಇದನ್ನೂ ಓದಿ: ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಬದುಕುತ್ತಿದ್ದ: ಅಣ್ಣನ ಭಾವುಕ ಮಾತು

ಘಟನೆಯಿಂದ ರೊಚ್ಚಿಗೆದ್ದ ನೂರಾರು ಗ್ರಾಮಸ್ಥರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆ ಮುಂಭಾಗ ಜಮಾಯಿಸಿದ್ದಾರೆ. ಗಾಯಾಳು ಕಾರು ಚಾಲಕನನ್ನು ಹಾಸನಕ್ಕೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಅನ್ನು ತಡೆದು ಆಕ್ರೋಶ ಹೊರಹಾಕಿದ್ದರಿಂದ ಆಸ್ಪತ್ರೆ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರ ಮೇಲೆ ಮಾಡಿದ ಆರೋಪಕ್ಕೆ ಹುರುಳಿರದು – Kannada News | Horoscope April 15 Wednedday 2026; Dina Rashi Bhavishya Today, Checkout the details here

ಮೇಷ ರಾಶಿ:

ಕಾರ್ಯದ ಶಿಸ್ತಿನಿಂದ ಸಾಗಲು ಸಹೋದ್ಯೋಗಿಗಳ ಸಹಾಯ ಪಡೆಯಿರಿ. ಮನೆಯ ಹಿರಿಯರ ಜೊತೆ ವಾಗ್ವಾದವನ್ನು ಮಾಡುವುದು ಸರಿ ಕಾಣದು. ಯಾವುದೇ ಕೆಲಸವು ತಪ್ಪಾಗಿದ್ದರೆ, ಅನಂತರ ನಿಧಾನವಾಗಿ ವಿವರಿಸಿ. ಉನ್ನತಸ್ಥಾನಕ್ಕೆ ಏರಲು ನಿಮಗೆ ಎಲ್ಲ ಮಾರ್ಗಗಳೂ ಮುಚ್ಚಿದಂತೆನಿಸುವುದು. ನಿಮ್ಮ ಮಾತಿನಿಂದ ನಿಮಗಾಗದವರು ಹುಟ್ಟಿಕೊಳ್ಳುವರು. ಕೆಲವು ಸಂದರ್ಭವು ನಿಮ್ಮ ನಿಯಂತ್ರಣವನ್ನು ಮೀರಿ ತಪ್ಪು ಆಗಬಹುದು. ಅದನ್ನು ಕ್ಷಮಾಪಣೆಯಿಂದ ಸರಿಮಾಡಿಕೊಳ್ಳಿ.

ವೃಷಭ ರಾಶಿ:

ರಾಜಕೀಯದಲ್ಲಿ ಆಸಕ್ತಿ ಹೊಂದಿರುವವರಿಗೆ ಈಗ ಅವಕಾಶಗಳು ಸಿಗುವ ಸಾಧ್ಯತೆ ಇದೆ, ಅವರು ಪ್ರಯತ್ನಿಸಬೇಕು. ಇತರರ ತಪ್ಪು ಕೆಲಸದಿಂದ ನಿಮಗೆ ತೊಂದರೆ. ನೀವು ಅದನ್ನು ತಿದ್ಸಬೇಕಸದೀತು. ಕಡಿಮೆ ಪ್ರಯತ್ನದಲ್ಲಿ ಹೆಚ್ಚಿನ ಯಶಸ್ಸು ಪಡೆಯುವ ಸಾಧ್ಯತೆಗಳಿವೆ. ಯಾರ ಮೇಲೂ ಹಗುರಾದ ಮನೋಭಾವ ಬೇಡ. ದುಃಸ್ವಪ್ನವು ನಿಮ್ಮ ನಿದ್ರೆಯನ್ನು ಕೆಡಿಸೀತು. ದೀರ್ಘಕಾಲದ ಗೆಳೆತನವು ಮಾತಿನಿಂದ ಒಡೆದುಹೋಗಬಹುದು. ಮನೆಯಲ್ಲಿ ಭಿನ್ನಾಭಿಪ್ರಾಯವು ಬರಬಹುದು.

ಮಿಥುನ ರಾಶಿ:

ನಿಮ್ಮ ಕೆಲಸದ ಗುಣಮಟ್ಟವನ್ನು ಸುಧಾರಿಸಲು ಪ್ರಯತ್ನಿಸಿ. ಪರಿಣಾಮಗಳನ್ನು ಪರಿಗಣಿಸಿ ಮುನ್ನಡೆಯಬೇಕು. ಅಸಂಬದ್ಧ ವಿಚಾರದಲ್ಲಿ ನಿಮಗೆ ಆಸಕ್ತಿಯು ಹೆಚ್ಚಾಗಿ ಇರುವುದು. ಸಂಗಾತಿಯನ್ನು ಎಲ್ಲಿಗಾದರೂ ದೂರ ಕರೆದುಕೊಂಡು ಹೋಗಲು ಆಸೆಯಾಗುವುದು. ಹಣಕಾಸಿನ ವ್ಯವಹಾರವನ್ನು ಬಹಳ ಜಾಗರೂಕತೆಯಿಂದ ಮಾಡಿಕೊಳ್ಳಿ. ಸಂಗಾತಿಯ ವರ್ತನೆಯು ಹಿಡಿಸದೇ ಇದ್ದೀತು. ವಿದೇಶದಲ್ಲಿ ಇರವವರಿಗೆ ಅಸಮಾಧಾನ ಹೆಚ್ಚಿರುವುದು.

ಕರ್ಕಾಟಕ ರಾಶಿ:

ನಿಮ್ಮ ಅಧಿಕೃತ ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಕುಟುಂಬ ವಿಷಯಗಳಲ್ಲಿ ಪ್ರೀತಿಪಾತ್ರರ ಸಲಹೆಯ ಅಗತ್ಯವಿರುತ್ತದೆ. ನಿಮ್ಮ ಇಷ್ಟದ ಜನರಿಂದ ನೀವು ಬೆಂಬಲವನ್ನು ಪಡೆಯುತ್ತಿರುವಿರಿ. ಶೀಘ್ರದಲ್ಲೇ ಸಂಬಂಧಗಳನ್ನು ಸುಧಾರಿಸುವ ಅವಕಾಶವನ್ನು ನೀವು ಪಡೆಯಬಹುದು. ಮನಸ್ಸಿಗೆ ನೆಮ್ಮದಿಯು ಬೇಕೆಂದು ಅನ್ನಿಸುವುದು. ಕೆಲವು ಸವಾಲುಗಳನ್ನು ನೀವು ಎದುರಿಸುವುದು ಅನಿವಾರ್ಯವಾದೀತು. ಮಕ್ಕಳಿಗಾಗಿ ಹಣವನ್ನು ಖರ್ಚು ಮಾಡುವಿರಿ.

ಸಿಂಹ ರಾಶಿ:

ಗುರು ಹಿರಿಯರಿಂದ ಒಳ್ಳೆಯ ಕಾರ್ಯಕ್ಕೆ ಪ್ರೋತ್ಸಾಹ. ಉನ್ನತ ಅಧಿಕಾರಿಯ ಜೊತೆ ಆಗಬೇಕಾದ ವಿಚಾರದ ಬಗ್ಗೆ ಚರ್ಚೆ ಮಾಡಲಿದ್ದೀರಿ. ನಿಮ್ಮ ಸಲಹೆಯನ್ನು ಅಧಿಕಾರಿ ವರ್ಗ ಸ್ವೀಕರಿಸುವುದು. ನಿಮ್ಮ ಗುಣಮಟ್ಟವು ನಿಮ್ಮದೇ ಕಾರಣದಿಂದ ತಗ್ಗಬಹುದು. ಆಡಳಿತದಲ್ಲಿ ಆಗಬೇಕಾದ ಬದಲಾವಣೆಯನ್ನು ನೀವು ತರುವಿರಿ. ಎಲ್ಲರ ಜೊತೆ ವಾದಕ್ಕಿಳಿಯುವ ಮನಸ್ಸಿನಲ್ಲಿ ಇರುವಿರಿ. ಶಿಸ್ತಿನಿಂದ ಇಂದಿನ ಕಾರ್ಯವನ್ನು ಮಾಡುವಿರಿ. ನಿಮ್ಮ ಬಗ್ಗೆ ಸುಳ್ಳು ವಿಚಾರವನ್ನು ಹೇಳುವರು.

ಕನ್ಯಾ ರಾಶಿ:

ವ್ಯಾಪಾರ ಮಾಡುವಾಗ ಹಣದ ಕುರಿತು ಬಹಳ ಎಚ್ಚರಿಕೆ ಅಗತ್ಯವಾಗಿ ಮಾಡಿ. ಇಂದು ಅನಿವಾರ್ಯ ಓಡಾಟವು ಬರಲಿದ್ದು ವಾಹನ ಚಲಾಯಿಸುವಾಗ ನಿಮಗೆ ಜಾಗರೂಕತೆ ಬೇಕಾಗುವುದು. ಕೊಡಬೇಕಾದವರಿಗೆ ಸರಿಯಾದ ಗೌರವವನ್ನು ಕೊಡಿ. ಯಾವುದೇ ಊಹೆಗಳಿಗೆ ಬೆಲೆ ಕೊಡದೇ ಸ್ಪಷ್ಟವಾದುದನ್ನು ನಂಬಿ. ಸಂಗಾತಿಯ ಇಷ್ಟವನ್ನು ಕೇಳಿ ಅವರಿಗೆ ಸಂತೋಷವನ್ನು ನೀಡುವಿರಿ. ಹಣಕಾಸಿನಲ್ಲಿ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ.

ತುಲಾ ರಾಶಿ:

ಸರ್ಕಾರಿ ಕೆಲಸ ಮಾಡುವವರು ತಪ್ಪು ಆಗದಂತೆ ಎಚ್ಚರಿಕೆ ವಹಿಸಬೇಕು. ಬದಲಾಗುತ್ತಿರುವ ವ್ಯಕ್ತಿಗಳಿಗೆ ತಕ್ಕಂತೆ ಬದಲಾವಣೆಗಳನ್ನು ನೀವೇ ಮಾಡುಕೊಳ್ಳುವಿರಿ.. ಕುಟುಂಬಕ್ಕೆ ನಿಮ್ಮ ಸಂಗಾತಿಯ ಸಮರ್ಪಣೆಯು ನಿಮ್ಮನ್ನು ಒತ್ತಡದಿಂದ ಮುಕ್ತಗೊಳಿಸುತ್ತದೆ. ಹೊಸ ಉದ್ಯೋಗಿಗಳನ್ನು ನಿಯೋಜಿಸಿಕೊಂಡು ಕಾರ್ಯವನ್ನು ವಿಸ್ತರಿಸಿ ಲಾಭವನ್ನು ಪಡೆಯುವ ದೀರ್ಘಕಾಲದ ಯೋಜನೆಯ ಕನಸನ್ನು ಕಾಣುವಿರಿ. ನೇರವಾಗಿ ಯಾರನ್ನೂ ದೂರುವುದಿಲ್ಲ. ಎಂತಹ ನೈಪುಣ್ಯವಿದ್ದರೂ ವ್ಯವಹಾರದಲ್ಲಿ ಒಮ್ಮೆ ಎಚ್ಚರ ತಪ್ಪುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ:

ಬಟ್ಟೆ ವ್ಯಾಪಾರಿಗಳು ಮಾತಿನಿಂದ ಯೋಗ್ಯವಾದ ರೀತಿಯಲ್ಲಿ ವ್ಯಾಪಾರ ನಡೆಸಿ ಲಾಭ ಗಳಿಸುವೆರು. ನಿಮ್ಮ ಕುಟುಂಬದಲ್ಲಿ ಹೊರಗಿನವರಿಗೆ ಹಸ್ತಕ್ಷೇಪ ಮಾಡಲು ಬಿಡುವುದು ಬೇಡ. ನೀವು ಇಂದು ಉದ್ಯಮದ ಕಾರಣಕ್ಕೆ ಸ್ನೇಹಬಂಧವನ್ನು ಬಿಗಿ ಮಾಡಿಕೊಳ್ಳುವಿರಿ. ಕಚೇರಿಯಲ್ಲಿ ನೀವು ತಗ್ಗಿ ಬಗ್ಗಿ ನಡೆಯುವುದು ಒಳ್ಳೆಯದು. ನಿಮ್ಮ ಸಂಕಟವನ್ನು ಹೇಳಿಕೊಂಡರೂ ತೊಂದರೆ, ಸುಮ್ಮನೆ ಇದ್ದರೂ ತೊಂದರೆ ಆಗುವುದು. ಅಪರಿಚಿತ ಕರೆಗಳು ಹೆಚ್ಚಾಗುವುದು. ನಿಮ್ಮನ್ನು ನೀವು ಕೆಲಸದ ಮೂಲಕ ಪರಿಚಯಿಸಿಕೊಳ್ಳುವಿರಿ. ನಿಮ್ಮ ಸ್ವಾಭಿಮಾನಕ್ಕೆ ತೊಂದರೆಯನ್ನು ತಂದುಕೊಳ್ಳಲಾರಿರಿ.

ಧನು ರಾಶಿ:

ವಿದ್ಯಾರ್ಥಿಗಳು ಕಷ್ಟಕರವಾದ ವಿಷಯಗಳ ಮೇಲೆ ಹೆಚ್ಚು ಗಮನಹರಿಸಬೇಕು. ಬಹು ಮೌಲ್ಯದ ವಸ್ತುಗಳನ್ನು ಕಳೆದುಕೊಳ್ಳುವ ಸಂದರ್ಭವು ಬರಬಹುದು. ಉದ್ಯಮಿಗಳು ಇಂದು ಹಣವನ್ನು ಗಳಿಸುವ ಸಾಧ್ಯತೆಯಿದೆ, ಉತ್ಪಾದದನಾ ಕ್ಷೇತ್ರದಲ್ಲಿ ಕೊಂಚ ಹಿನ್ನಡೆ ಆಗಬಹುದು. ನಿಮಗೆ ಸಿಕ್ಕ ಬೆಂಬಲವನ್ನು ಇನ್ನೊಬ್ಬರಿಗೂ ಕೊಡುವ ಮನಸ್ಸು ಮಾಡಿ. ದೈಹಿಕ ಕಸರತ್ತನ್ನು ಮಿತವಾಗಿ ಮಾಡಿ. ಅತಿಯಾದ ಸಲುಗೆಯಿಂದ ನಿಮಗೆ ತೊಂದರೆ ಆಗಬಹುದು. ಅಂದುಕೊಂಡಷ್ಟು ಸರಳವಾಗಿ ಇಂದಿನ ಕಾರ್ಯವು ಸಮಾಪ್ತಿಯಾಗದು.

ಮಕರ ರಾಶಿ:

ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ದೂರದೃಷ್ಟಿಯ ಅಗತ್ಯವಿದೆ. ಕುಟುಂಬ ಸದಸ್ಯರ ಜೊತೆ ಚರ್ಚಿಸಿದ ಅನಂತರವೇ ನಿರ್ಧಾರಗಳನ್ನು ತೆಗೆದುಕೊಳ್ಳಿ. ಅತಿಯಾದ ದುರಾಸೆಯಿಂದ ನೀವು ಕಷ್ಟದಲ್ಲಿ ಸಿಕ್ಕಿಕೊಳ್ಳಬಹುದು. ಸಂಬಂಧವನ್ನು ಚೆನ್ನಾಗಿ ನಿಭಾಯಿಸುವ ಕಲೆಯು ಗೊತ್ತಿದೆ. ಹಳೆಯ ಸ್ನೇಹಿತರನ್ನು ನೀವು ಭೇಟಿಯಾಗಿ ಎಲ್ಲ ಸಂಗತಿಗಳನ್ನು ಹಂಚಿಕೊಳ್ಳುವಿರಿ. ಚರಾಸ್ತಿಯ ವಿಷಯದಲ್ಲಿ ನೀವು ಅಸ್ವತಂತ್ರರಾಗಿ ಇರುವಿರಿ. ಮನೆಯ ಕಾರ್ಯದಲ್ಲಿ ನಿಮಗೆ ಒತ್ತಡವು ಅಧಿಕವಾಗಿ ಇರಲಿದೆ. ಯಾವುದೋ ಅಜ್ಞಾತ ಸಂಸ್ಥೆಯಲ್ಲಿ ಹಣ ಹೂಡಿಕೆಯನ್ನು ಮಾಡಲು ಹೋಗುವಿರಿ.

ಕುಂಭ ರಾಶಿ:

ಜಾಗರೂಕತೆಯಿಂದ ವಾಹನ ಚಾಲನೆ ಮಾಡಬೇಕು.‌ ವ್ಯವಹಾರದಲ್ಲಿ ಕಠಿಣ ಪರಿಶ್ರಮವಿರುತ್ತದೆ, ಯೋಜನೆಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ. ಕಛೇರಿಯಲ್ಲಿ ಸಹೋದ್ಯೋಗಿಗಳ ಜೊತೆಗೆ ನಿಮ್ಮ ವರ್ತನೆ ಬದಲಾದೀತು. ನಿಮಗೆ ಅನೇಕರು ಪ್ರಭಾವಿತರಾಗಬಹುದು.‌ ಆರೋಗ್ಯದ ಸಮಸ್ಯೆಯನ್ನು ತಳ್ಳಿಹಾಕುವುದು ಬೇಡ. ಗುರಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ವೈಫಲ್ಯಕ್ಕೆ ಕಾರಣವಾಗುವುದು. ದುರ್ಬಲವಾದ ಮನಸ್ಸನ್ನು ನೀವು ಬಲಮಾಡಿಕೊಳ್ಳುವ ಅವಶ್ಯಕತೆ ಇರಲಿದೆ.

ಮೀನ ರಾಶಿ:

ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ. ಉದ್ಯೋಗದ ಸಂದರ್ಭದಲ್ಲಿ ಕೆಲಸಗಳ ಮೇಲೆ ಗಮನ ಹೆಚ್ಚಿಸಬೇಕು. ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅಹಂಕಾರವು ಬಂದೀತು, ನಿಮಗೆ ಸಾಮಾನ್ಯರ ಜೊತೆ ಸಾಮಾನ್ಯರಂತೆ ವರ್ತಿಸುವುದು ಇಷ್ಟವಾಗುವುದು. ನಿಮ್ಮ ಆತ್ಮೀಯವಾದ ಮಾತಿನಿಂದ ಅಪರಿಚಿತರ ಸ್ನೇಹವನ್ನು ಗಳಿಸುವಿರಿ. ಆಕಸ್ಮಿಕವಾಗಿ ದ್ರವ್ಯಪ್ರಾಪ್ತಿಯಾಗುವುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೇಷ, ಮಹಾನಕ್ಷತ್ರ : ಅಶ್ವಿನೀ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ಶುಕ್ಲ, ಕರಣ : ಬಾಲವ, ಸೂರ್ಯೋದಯ – 06 – 12 am, ಸೂರ್ಯಾಸ್ತ – 06 – 36 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:25 – 13:58, ಯಮಗಂಡ ಕಾಲ 07:45 – 09:18, ಗುಳಿಕ ಕಾಲ 10:51 – 12:25

– ಲೋಹಿತ ಹೆಬ್ಬಾರ್ – 8762924271 (what’s app only)

Source link

CSK vs KKR: ಸತತ ನಾಲ್ಕನೇ ಪಂದ್ಯದಲ್ಲೂ ಸೋತ ಕೆಕೆಆರ್

IPL 2026: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 21ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ ತಂಡಕ್ಕೆ ಸಂಜು ಸ್ಯಾಮ್ಸನ್ (48) ಸ್ಫೋಟಕ ಆರಂಭ ಒದಗಿಸಿದ್ದರು. ಮತ್ತೊಂದೆಡೆ ಆಯುಷ್ ಮ್ಹಾತ್ರೆ ಕೂಡ 17 ಎಸೆತಗಳಲ್ಲಿ 38 ರನ್ ಚಚ್ಚಿದ್ದರು.

ಇವರ ಬಳಿಕ ಬಂದ ಡೆವಾಲ್ಡ್ ಬ್ರೆವಿಸ್ 41 ರನ್​ಗಳ ಕೊಡುಗೆ ನೀಡಿದರೆ, ಸರ್ಫರಾಝ್ ಖಾನ್ 23 ರನ್ ಬಾರಿಸಿದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 192 ರನ್​ ಕಲೆಹಾಕಿತು.

193 ರನ್​ಗಳ ಗುರಿ:

193 ರನ್​ಗಳ ಸ್ಪರ್ಧಾತ್ಮಕ ಗುರಿ ಪಡೆದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಫಿನ್ ಅಲೆನ್ ಕೇವಲ 1 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇನ್ನು ಓಪನರ್ ಆಗಿ ಕಣಕ್ಕಿಳಿದ ಸುನಿಲ್ ನರೈನ್ 24 ರನ್​ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದರೆ, ಅಂಗ್​ಕ್ರಿಶ್ ರಘುವಂಶಿ 27 ರನ್​ಗಳೊಂದಿಗೆ ಪೆವಿಲಿಯನ್​ಗೆ ಹಿಂತಿರುಗಿದರು.

ಇದರ ಬೆನ್ನಲ್ಲೇ ನಾಯಕ ಅಜಿಂಕ್ಯ ರಹಾನೆ (28) ಕೂಡ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ಕ್ಯಾಮರೋನ್ ಗ್ರೀನ್ (0) ರನ್ನು ಶೂನ್ಯಕ್ಕೆ ಕ್ಲೀನ್ ಬೌಲ್ಡ್ ಮಾಡುವಲ್ಲಿ ಸ್ಪಿನ್ನರ್ ನೂರ್ ಅಹ್ಮದ್ ಯಶಸ್ವಿಯಾದರು. ಇದರ ಬೆನ್ನಲ್ಲೇ ರಿಂಕು ಸಿಂಗ್ (6) ಕೂಡ ಔಟಾದರು.

ಪರಿಣಾಮ ಕೊನೆಯ 5 ಓವರ್​ಗಳಲ್ಲಿ ಕೆಕೆಆರ್ ತಂಡಕ್ಕೆ ಗೆಲ್ಲಲು ಬರೋಬ್ಬರಿ 86 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಜೊತೆಗೂಡಿದ ರಮಣ್​ದೀಪ್ ಸಿಂಗ್ ಹಾಗೂ ರೋವ್​ಮನ್ ಪೊವೆಲ್ ಒಂದಷ್ಟು ಹೊತ್ತು ಕ್ರೀಸ್ ಕಚ್ಚಿ ನಿಂತರೂ ತಂಡವನ್ನು ಗೆಲುವಿನ ಸಮೀಪಕ್ಕೆ ತಲುಪಿಸಲು ಸಾಧ್ಯವಾಗಿಲ್ಲ.

ಅಂತಿಮವಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್​​ಗಳಲ್ಲಿ 7 ವಿಕೆಟ್ ಕಳೆದುಕೊಂಡು 160 ರನ್​ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದೆ. ಈ ಮೂಲಕ ಸಿಎಸ್​ಕೆ ತಂಡ 32 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅಂಕ ಪಟ್ಟಿಯಲ್ಲಿ 8ನೇ ಸ್ಥಾನಕ್ಕೇರಿದೆ.

ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್ (ನಾಯಕ), ಆಯುಷ್ ಮ್ಹಾತ್ರೆ, ಸರ್ಫರಾಝ್ ಖಾನ್, ಶಿವಂ ದುಬೆ, ಡೆವಾಲ್ಡ್ ಬ್ರೆವಿಸ್, ಜೇಮಿ ಓವರ್ಟನ್, ನೂರ್ ಅಹ್ಮದ್, ಅನ್ಶುಲ್ ಕಂಬೋಜ್, ಗುರ್ಜಪ್ನೀತ್ ಸಿಂಗ್, ಖಲೀಲ್ ಅಹ್ಮದ್, ಅಕಿಲ್ ಹೊಸೈನ್ (ಇಂಪ್ಯಾಕ್ಟ್ ಪ್ಲೇಯರ್)

ಇದನ್ನೂ ಓದಿ: RCB vs LSG: ವಿರಾಟ್ ಕೊಹ್ಲಿ ಆಡ್ತಾರಾ, ಇಲ್ವಾ? ಕೊನೆಗೂ ಸಿಕ್ತು ಉತ್ತರ

ಕೊಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ XI): ಅಜಿಂಕ್ಯ ರಹಾನೆ (ನಾಯಕ), ಕ್ಯಾಮರೋನ್ ಗ್ರೀನ್, ಆಂಗ್​ಕ್ರಿಶ್ ರಘುವಂಶಿ (ವಿಕೆಟ್ ಕೀಪರ್), ರೋವ್​ಮನ್ ಪೊವೆಲ್, ರಿಂಕು ಸಿಂಗ್, ಸುನಿಲ್ ನರೈನ್, ರಮಣ್​ದೀಪ್ ಸಿಂಗ್, ಅನುಕುಲ್ ರಾಯ್, ವರುಣ್ ಚಕ್ರವರ್ತಿ, ವೈಭವ್ ಅರೋರಾ, ಕಾರ್ತಿಕ್ ತ್ಯಾಗಿ.

 

 

Source link