ಛತ್ತೀಸ್‌ಗಢದ ವಿದ್ಯುತ್ ಸ್ಥಾವರದಲ್ಲಿ ಬಾಯ್ಲರ್ ಸ್ಫೋಟ; 9 ಕಾರ್ಮಿಕರು ಸಾವು, 15 ಜನರಿಗೆ ಗಾಯ – Kannada News | 9 workers killed, 15 injured in boiler blast at Vedanta power plant in Chhattisgarh
ನವದೆಹಲಿ, ಏಪ್ರಿಲ್ 14: ಛತ್ತೀಸ್‌ಗಢದ (Chhattisgarh) ಶಕ್ತಿ ಜಿಲ್ಲೆಯ ವಿದ್ಯುತ್ ಸ್ಥಾವರದಲ್ಲಿ ಬಾಯ್ಲರ್ ಸ್ಫೋಟಗೊಂಡ ನಂತರ 9 ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು 15 ಜನರು ಗಾಯಗೊಂಡಿದ್ದಾರೆ. ಇಂದು ಮಧ್ಯಾಹ್ನ ಸಿಂಗಿತರೈ ಗ್ರಾಮದಲ್ಲಿರುವ ವೇದಾಂತ ಲಿಮಿಟೆಡ್ ವಿದ್ಯುತ್ ಸ್ಥಾವರದಲ್ಲಿನ ಬಾಯ್ಲರ್ ಟ್ಯೂಬ್‌ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಶಕ್ತಿ ಪೊಲೀಸ್ ಅಧೀಕ್ಷಕ (SP) ಪ್ರಫುಲ್ ಠಾಕೂರ್ ಹೇಳಿದ್ದಾರೆ. ಸುಮಾರು 30ರಿಂದ 40 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ಅವರನ್ನು ತಕ್ಷಣದ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ….