Headlines

ಮಾವನ ಜೊತೆ ಸೇರಿ ಧ್ರುವ್ ರಾಠಿಗೆ ಟಾಂಗ್ ಕೊಟ್ಟ ರಣ್ವೀರ್ ಸಿಂಗ್ – Kannada News | Ranveer Singh’s new advertisement with Prakash Padukone took dig at Dhruv Rathee

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಭರ್ಜರಿ ಹಿಟ್ ಆಗಿದೆ. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಹಲವು ದಾಖಲೆಗಳನ್ನು ಬರೆಯುತ್ತಿದೆ. ಆದರೆ ಕೆಲವರು ಈ ಸಿನಿಮಾವನ್ನು ಪ್ರಪೊಗಾಂಡ ಸಿನಿಮಾ ಎಂದು. ಒಂದು ರಾಜಕೀಯ ಪಕ್ಷಕ್ಕೆ ಸಹಾಯ ಮಾಡಲೆಂದು ನಿರ್ಮಿಸಲಾದ ಸಿನಿಮಾ ಎಂದು ಆರೋಪಿಸಿದ್ದಾರೆ. ಸಿನಿಮಾದಲ್ಲಿರುವ ಕೆಲ ತಪ್ಪುಗಳನ್ನು ಎತ್ತಿ ತೋರಿಸಿ ಟೀಕಿಸಿದ್ದಾರೆ. ವಿಶೇಷವಾಗಿ ಪ್ರಮುಖ ಯೂಟ್ಯೂಬರ್ ಧ್ರುವ್ ರಾಠಿ ಈ ಸಿನಿಮಾವನ್ನು ಟೀಕೆ ಮಾಡಿದ್ದು, ಇದೀಗ ಪರೋಕ್ಷವಾಗಿ ನಟ ರಣ್ವೀರ್ ಸಿಂಗ್, ‘ಧ್ರುವ್ ರಾಠಿ’ಗೆ ಟಾಂಗ್ ನೀಡಿದ್ದಾರೆ.

ಧ್ರುವ್ ರಾಠಿ ತಮ್ಮ ವಿಡಿಯೋ ಒಂದರಲ್ಲಿ ‘ಧುರಂಧರ್’ ಅನ್ನು ಟೀಕೆ ಮಾಡುತ್ತಾ ಸಿನಿಮಾವನ್ನು ‘ಭವಂಧರ್’ ಎಂದು ಕರೆದಿದ್ದರು. ಇದೀಗ ರಣ್ವೀರ್ ಸಿಂಗ್ ಅವರ ಹೊಸ ಜಾಹೀರಾತೊಂದು ಬಿಡುಗಡೆ ಆಗಿದ್ದು, ಜಾಹೀರಾತಿನಲ್ಲಿ ನಟ ರಣ್ವೀರ್ ಸಿಂಗ್ ಅವರು ಇದನ್ನೇ ಇರಿಸಿಕೊಂಡು ಧ್ರುವ್ ರಾಠಿಗೆ ಟಾಂಗ್ ನೀಡಿದ್ದಾರೆ. ಇದೀಗ ಆ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಗಿ ಟ್ರೆಂಡ್ ಸಹ ಆಗುತ್ತಿದೆ.

ನಟ ರಣವೀರ್ ಸಿಂಗ್ ತಮ್ಮ ಮಾವ, ಖ್ಯಾತ ಬ್ಯಾಡ್​​ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರೊಂದಿಗೆ ನಟಿಸಿರುವ ಹೊಸ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸ್ವದೇಶಿ ಹಣ ಪಾವತಿ ಸೇವಾ ಆ್ಯಪ್ (RuPay) ಹೊಸ ಜಾಹೀರಾತಿನಲ್ಲಿ ರಣವೀರ್ ಸಿಂಗ್ ಮತ್ತು ಮಾಜಿ ಬ್ಯಾಡ್ಮಿಂಟನ್ ಚಾಂಪಿಯನ್ ಹಾಗೂ ದೀಪಿಕಾ ಪಡುಕೋಣೆಯ ತಂದೆ ಪ್ರಕಾಶ್ ಪಡುಕೋಣೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿನಲ್ಲಿ ರಣವೀರ್ ಅವರು ಪ್ರಕಾಶ್ ಪಡುಕೋಣೆ ಅವರನ್ನು ‘ಪಪ್ಪಾ’ ಎಂದು ಕರೆಯುವುದು ಮತ್ತು ಬ್ಯಾಡ್ಮಿಂಟನ್ ಆಡುವ ದೃಶ್ಯಗಳು ಅಭಿಮಾನಿಗಳ ಮನ ಗೆದ್ದಿವೆ.

ಇದನ್ನೂ ಓದಿ:ಹೊಟ್ಟೆಗೆ ಕ್ಲಿಪ್ ಹಾಕಿಕೊಂಡು ನಟನೆ: ರಣ್ವೀರ್ ಸಿಂಗ್ ಡೆಡಿಕೇಷನ್ ಎಂಥಹದ್ದು ಗೊತ್ತೆ?

ಅದೇ ಜಾಹೀರಾತಿನ ಹಿನ್ನೆಲೆಯಲ್ಲಿ ಕಾಣಿಸುವ ಒಂದು ಪೋಸ್ಟರ್ ಈಗ ಚರ್ಚೆಗೆ ಕಾರಣವಾಗಿದೆ. ಆ ಪೋಸ್ಟರ್‌ನಲ್ಲಿ ‘ಭವಂದರ್: ದಿ ಟೊರ್ನಾಡೋ’ ಎಂಬ ಹೆಸರಿನ ಸಿನಿಮಾದ ಪೋಸ್ಟರ್ ಇದೆ. ಧ್ರುವ್ ರಾಠಿ, ಈ ಹಿಂದೆ ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸರಣಿಯನ್ನು ಟೀಕಿಸಿದ್ದರು. ಆ ಸಿನಿಮಾಗಳನ್ನು ರಾಜಕೀಯ ಪ್ರೇರಿತ ಎಂದು ಕರೆದಿದ್ದ ಅವರು, ತಮ್ಮ ವಿಡಿಯೋವೊಂದರಲ್ಲಿ ‘ಆಪರೇಷನ್ ಭವಂದರ್’ ಎಂಬ ಕಾಲ್ಪನಿಕ ಚಿತ್ರದ ಹೆಸರನ್ನು ಉಲ್ಲೇಖಿಸಿ ಟೀಕೆ ಮಾಡಿದ್ದರು. ಈಗ ಜಾಹೀರಾತಿನಲ್ಲಿ ಅದೇ ಹೆಸರಿನ ಪೋಸ್ಟರ್ ಬಳಸಿದ್ದು, ಧ್ರುವ್ ರಾಠಿಗೆ ಟಾಂಗ್ ನೀಡಲೆಂದೇ ಹೀಗೆ ಮಾಡಲಾಗಿರುವುದು ಸ್ಪಷ್ಟ.

ಟೀಕೆಗಳ ನಡುವೆಯೂ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾ ಭಾರತೀಯ ಚಿತ್ರರಂಗದ ಎಲ್ಲ ದಾಖಲೆಗಳನ್ನು ಅಳಿಸಿಹಾಕಿದೆ. ಈ ಚಿತ್ರ ಸರಣಿಯು ವಿಶ್ವಾದ್ಯಂತ ಸುಮಾರು 1700 ಕೋಟಿಗೂ ಹೆಚ್ಚಿನ ಮೊತ್ತ ಗಳಿಕೆ ಮಾಡಿದೆ. ಭಾರತದ ಅತಿಹೆಚ್ಚು ಮೊತ್ತ ಗಳಿಸಿದ ಸಿನಿಮಾಗಳಾದ ‘ಪುಷ್ಪ 2’, ‘ಬಾಹುಬಲಿ 2’ ಸಿನಿಮಾಗಳ ದಾಖಲೆಯನ್ನು ಅಳಿಸುವ ಹೊಸ್ತಿಲಲ್ಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *