Category Archives: Blog

Your blog category

Chanakya Niti: ಈ ಗುಣಗಳಿರುವ ಸ್ನೇಹಿತರು ಎಂದಿಗೂ ಮೋಸ ಮಾಡಲಾರರು ಎನ್ನುತ್ತಾರೆ ಚಾಣಕ್ಯ – Kannada News | Chanakya Niti: According to Acharya Chanakya, friends with these qualities are very good

ಸ್ನೇಹ (Friendship) ಎನ್ನುವುದು ಭಾಷೆ, ಜಾತಿ, ಧರ್ಮ ಎಲ್ಲವನ್ನು ಮೀರಿದ ಸುಂದರ ಬಂಧ. ಪ್ರತಿಯೊಬ್ಬರ ಜೀವನದಲ್ಲೂ ಫ್ರೆಂಡ್ಸ್‌ ಇದ್ದೇ ಇರುತ್ತಾರೆ. ಸ್ನೇಹಿತರು ನಮ್ಮ ಇಡೀ ಜೀವನವನ್ನು ಸುಂದರವಾಗಿಸಬಲ್ಲರು. ಅಲ್ಲದೆ ನಮ್ಮ ಜೀವನವನ್ನು ಉತ್ತಮವಾಗಿಸಬಲ್ಲರು. ಅದೇ ರೀತಿ ಕೆಲವು ಸ್ನೇಹಿತರು ಸ್ವಾರ್ಥ ಮತ್ತು ದುರಾಸೆಯಿಂದ ಇನ್ನೊಬ್ಬರ ಜೀವನವನ್ನೇ ಹಾಳು ಮಾಡಬಲ್ಲರು. ಇನ್ನೂ ಕೆಲ ಸ್ನೇಹಿತರು ಪ್ರತಿಯೊಂದು ಹಂತದಲ್ಲೂ ನಿಮಗೆ ಬೆಂಬಲವಾಗಿ ನಿಲ್ಲುತ್ತಾರೆ. ಅವರು ಎಂದಿಗೂ ಮೋಸ ಮಾಡಲಾರರು ಎಂದು ಆಚಾರ್ಯ ಚಾಣಕ್ಯರು. ಹಾಗಿದ್ರೆ ಯಾವ ಗುಣಗಳನ್ನು ಹೊಂದಿರುವ ಸ್ನೇಹಿತರು ಉತ್ತಮರು ಎಂಬುದನ್ನು ನೋಡೋಣ.

ಇಂತಹ ಸ್ನೇಹಿತರು ಎಂದಿಗೂ ಮೋಸ ಮಾಡಲಾರರು:

 ಮುಕ್ತ ಮತ್ತು ಸ್ಪಷ್ಟವಾಗಿ ಮಾತನಾಡುವ ಜನರು: ಚಾಣಕ್ಯರ ಪ್ರಕಾರ, ಮುಕ್ತ ಮತ್ತು ಪ್ರಾಮಾಣಿಕವಾಗಿ ಮಾತನಾಡುವ ಜನರು ಯಾರಿಗೂ ನೋವುಂಟು ಮಾಡಲು ಬಯಸುವುದಿಲ್ಲ. ಅವರು ಪರಿಶುದ್ಧ ಹೃದಯವನ್ನು ಹೊಂದಿದ್ದು, ನೀವು ಇಂತಹ ಜನರೊಂದಿಗೆ ಸ್ನೇಹಿತರಾಗಿದ್ದರೆ, ಅವರು ಎಂದಿಗೂ ನಿಮಗೆ ದ್ರೋಹ ಮಾಡುವುದಿಲ್ಲ.

ದುರಾಸೆಯಿಲ್ಲದ ವ್ಯಕ್ತಿ: ದುರಾಸೆಯಿಲ್ಲದ ನಿಸ್ವಾರ್ಥ ಜನರನ್ನು ಕಣ್ಣು ಮುಚ್ಚಿ ನಂಬಬಹುದು ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಇತರರ ವಸ್ತುಗಳ ಮೇಲೆ ಆಸೆ ಪಡದ ಜನರು ಯಾರಿಗೂ ಮೋಸ ಮಾಡುವುದಿಲ್ಲ. ಅಂತಹ ಜನರೊಂದಿಗೆ ಸ್ನೇಹ ಬೆಳೆಸುವುದು ಉತ್ತಮ.

ಸಹಾಯ ಮಾಡುವ ಜನರು: ಜೀವನದಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡುವ ಜನರೊಂದಿಗೆ ಯಾವಾಗಲೂ ಸ್ನೇಹಿತರಾಗಿರಬೇಕು. ಅಂತಹ ಜನರು ಎಂದಿಗೂ ಯಾರಿಗೂ ಯಾವುದೇ ಹಾನಿ ಮಾಡುವುದಿಲ್ಲ. ಅವರು ಸದಾ ನಿಮಗೆ ಒಳ್ಳೆಯದನ್ನೇ ಬಯಸುತ್ತಾರೆ ಎನ್ನುತ್ತಾರೆ ಚಾಣಕ್ಯ.

ಇದನ್ನೂ ಓದಿ: 2026 ರಲ್ಲಿ ಯಶಸ್ಸು ನಿಮ್ಮದಾಗಲು ಆಚಾರ್ಯ ಚಾಣಕ್ಯರ ಸಲಹೆಗಳನ್ನು ಅನುಸರಿಸಿ

ಸತ್ಯವಂತರು: ನಿಮಗೆ ಯಾವಾಗಲೂ ಸತ್ಯವನ್ನೇ ಹೇಳುವ ಸ್ನೇಹಿತರಿದ್ದರೆ, ನೀವು ಅದೃಷ್ಟವಂತರು. ಅವರು ಎಂದಿಗೂ ಮೋಸ ಮಾಡುವುದಿಲ್ಲ, ಅವರು ಸದಾ ನಿಮ್ಮೊಂದಿಗೆ ಇರುತ್ತಾರೆ ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಇದಲ್ಲದೆ ಇತರರ ವ್ಯವಹಾರಗಳಲ್ಲಿ ಮೂಗು ತುರಿಸದೆ ತಮ್ಮ ಪಾಡಿಗೆ ಇರುವ ಜನರು ಸಹ ಯಾರಿಗೂ ಹಾನಿ ಮಾಡುವುದಿಲ್ಲ. ಅವರು ಶುದ್ಧ ಹೃದಯವರಾಗಿರುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

BOI Recruitment 2025: ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ರೆಡಿಟ್ ಆಫೀಸರ್ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ – Kannada News | Boi credit officer recruitment 2025 514 posts last day to apply by jan 5

ನೀವು ಬ್ಯಾಂಕಿಂಗ್ ವೃತ್ತಿ ಪಡೆಯಲು ತಯಾರಿ ನಡೆಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಬ್ಯಾಂಕ್ ಆಫ್ ಇಂಡಿಯಾ (BOI) ಕ್ರೆಡಿಟ್ ಆಫೀಸರ್ ನೇಮಕಾತಿ ಅರ್ಜಿ ಪ್ರಕ್ರಿಯೆಯು ನಾಳೆ, ಜನವರಿ 5 ರಂದು ಮುಕ್ತಾಯಗೊಳ್ಳುತ್ತದೆ. ಇನ್ನೂ ಅರ್ಜಿ ಸಲ್ಲಿಸದ ಅಭ್ಯರ್ಥಿಗಳಿಗೆ ಒಂದು ಕೊನೆಯ ಅವಕಾಶವಿದೆ. ಈ ನೇಮಕಾತಿ ಡ್ರೈವ್ ಜನರಲ್ ಬ್ಯಾಂಕಿಂಗ್ ಆಫೀಸರ್ (GBO) ಸ್ಟ್ರೀಮ್‌ನಲ್ಲಿ ಒಟ್ಟು 514 ಕ್ರೆಡಿಟ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡುತ್ತದೆ.

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಜನವರಿ 5 ರ ಸಂಜೆಯ ಮೊದಲು ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್ bankofindia.bank.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಒಟ್ಟು 514 ಹುದ್ದೆಗಳನ್ನು ಮೂರು ನಿರ್ವಹಣಾ ಹಂತಗಳಾಗಿ ವಿಂಗಡಿಸಲಾಗಿದೆ. SC, ST, OBC, EWS, ಮತ್ತು ಅಂಗವಿಕಲ ವ್ಯಕ್ತಿಗಳ (PwBD) ಕೋಟಾಗಳಿಗೆ ಮೀಸಲಾತಿಗಳು ಭಾರತ ಸರ್ಕಾರದ ನಿಯಮಗಳ ಪ್ರಕಾರ ಅನ್ವಯವಾಗುತ್ತವೆ. ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಹೊಂದಿರಬೇಕು. CA, CFA, ICWA, ಅಥವಾ MBA/PGDBM (ಬ್ಯಾಂಕಿಂಗ್ ಅಥವಾ ಹಣಕಾಸು) ನಂತಹ ವೃತ್ತಿಪರ ಅರ್ಹತೆಗಳಿಗೆ ಆದ್ಯತೆ ನೀಡಲಾಗುತ್ತದೆ. ಹುದ್ದೆ ಮತ್ತು ಪ್ರಮಾಣದ ಆಧಾರದ ಮೇಲೆ ಅರ್ಹತೆಗಳು ಬದಲಾಗಬಹುದು.

ಅರ್ಜಿ ಸಲ್ಲಿಸುವುದು ಹೇಗೆ?

  • bankofindia.bank.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಕೆರಿಯರ್ಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
  • GBO ಸ್ಟ್ರೀಮ್ 2025-26 ರಲ್ಲಿ ಕ್ರೆಡಿಟ್ ಅಧಿಕಾರಿಗಳ ನೇಮಕಾತಿ ಲಿಂಕ್ ತೆರೆಯಿರಿ.
  • “ಆನ್‌ಲೈನ್‌ನಲ್ಲಿ ಅನ್ವಯಿಸು” ಮೇಲೆ ಕ್ಲಿಕ್ ಮಾಡಿ.
  • ನೋಂದಣಿಯನ್ನು ಪೂರ್ಣಗೊಳಿಸಿ ಮತ್ತು ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ಉಳಿಸಿ.
  • ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ.
  • ಅರ್ಜಿ ನಮೂನೆಯನ್ನು ಸಲ್ಲಿಸಿ.
  • ದೃಢೀಕರಣ ಪುಟದ ಸ್ಕ್ರೀನ್‌ಶಾಟ್ ತೆಗೆದುಕೊಂಡು ಅದನ್ನು ಸುರಕ್ಷಿತವಾಗಿಡಿ.

ಇದನ್ನೂ ಓದಿ: ಭಾರತೀಯ ನೌಕಾಪಡೆಯಲ್ಲಿ ನೇಮಕಾತಿ; ಪಿಯುಸಿ ಪಾಸಾಗಿದ್ರೆ ಕೂಡಲೇ ಅರ್ಜಿ ಸಲ್ಲಿಸಿ

ಆಯ್ಕೆ ಪ್ರಕ್ರಿಯೆ ಏನು?

ಆಯ್ಕೆ ಪ್ರಕ್ರಿಯೆಯು ಅರ್ಜಿಗಳನ್ನು ಶಾರ್ಟ್‌ಲಿಸ್ಟ್ ಮಾಡುವುದನ್ನು ಒಳಗೊಂಡಿರುತ್ತದೆ. ನಂತರ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆಗೆ ಕರೆಯಲಾಗುತ್ತದೆ ಮತ್ತು ನಂತರ ಸಂದರ್ಶನವನ್ನು ನಡೆಸಲಾಗುತ್ತದೆ. ಪರೀಕ್ಷೆಯು ವೃತ್ತಿಪರ ಜ್ಞಾನ, ತಾರ್ಕಿಕತೆ, ಪರಿಮಾಣಾತ್ಮಕ ಯೋಗ್ಯತೆ, ಕ್ರೆಡಿಟ್ ಮತ್ತು ಅಪಾಯ ನಿರ್ವಹಣೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೆಹಲಿಯ ಪಂಚತಾರಾ ಹೋಟೆಲ್​ನಿಂದ ಹಾರಿ ವ್ಯಕ್ತಿ ಆತ್ಮಹತ್ಯೆ – Kannada News | Delhi: Man Dies By Suicide After Jumping From Delhi Hotel

ನವದೆಹಲಿ, ಜನವರಿ 04: ದೆಹಲಿಯ ಪಂಚತಾರಾ ಹೋಟೆಲ್‌ನಿಂದ ಕೆಳಗೆ ಹಾರಿ 50 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾರೆ. ಕೇಂದ್ರ ದೆಹಲಿಯ ಲಿ ಮೆರಿಡಿಯನ್‌ನಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆ ವ್ಯಕ್ತಿಯನ್ನು ಪರ್ವಿಂದರ್ ಸಿಂಗ್ ಜುನೇಜಾ ಎಂದು ಗುರುತಿಸಲಾಗಿದೆ. ಅವರು ಆತ್ಮಹತ್ಯೆ ಮಾಡಿಕೊಂಡ ಅದೇ ದಿನ ಹೋಟೆಲ್‌ಗೆ ಭೇಟಿ ನೀಡಿದ್ದರು. ಕ್ರಿಸ್‌ಮಸ್‌ ಸಮಯದಲ್ಲಿ ಅವರು ಕೆಲವು ದಿನಗಳ ಹಿಂದೆ ಅಲ್ಲಿಯೇ ತಂಗಿದ್ದರು. ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಮಧ್ಯಾಹ್ನ ಅವರು ಹೋಟೆಲ್‌ಗೆ ಪ್ರವೇಶಿಸಿ, ಲಿಫ್ಟ್ ಬಳಸಿ ಮೇಲಿನ ಮಹಡಿಗೆ ಹೋಗಿ ಕಟ್ಟಡದಿಂದ ಹಾರಿದ್ದಾರೆ. ಮಧ್ಯಾಹ್ನ ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಸಿಂಗ್ ಸ್ಥಳದಲ್ಲೇ ಮೃತಪಟ್ಟರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪರ್ವಿಂದರ್ ಸಿಂಗ್ ಎಂದು ಗುರುತಿಸಲಾದ ವ್ಯಕ್ತಿ ಲೆ ಮೆರಿಡಿಯನ್ ಹೋಟೆಲ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತನಿಖೆ ನಡೆಯುತ್ತಿದೆ, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ” ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಪಂಚತಾರಾ ಹೋಟೆಲ್‌ನ 12 ನೇ ಮಹಡಿಯಲ್ಲಿ ರೆಸ್ಟೋರೆಂಟ್ ಇದ್ದು, ಅಲ್ಲಿಂದ ಅವರು ಹಾರಿ ಸಾವನ್ನಪ್ಪಿದ್ದಾರೆ.ಈ ಘಟನೆ ಮಧ್ಯಾಹ್ನ 12.30 ರ ಸುಮಾರಿಗೆ ವರದಿಯಾಗಿದೆ.

ಮತ್ತಷ್ಟು ಓದಿ: ಆತ್ಮಹತ್ಯೆ ಮಾಡಿಕೊಳ್ಳಲು ಕಾಡಿಗೆ ಹೋದವನಿಗೆ ವಿಷ್ಣುವಿನ ದರ್ಶನ; ದೇವಾಲಯ ಕಟ್ಟಿ ಪೂಜಿಸಿದ ಬೀದರ್​​​ನ ಜನ

ಮೃತರನ್ನು ನಗರದ ಲಜಪತ್ ನಗರದ ನಿವಾಸಿ ಪರ್ವಿಂದರ್ ಸಿಂಗ್ ಜುನೇಜಾ ಎಂದು ಗುರುತಿಸಲಾಗಿದೆ. ಜುನೇಜಾ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ನನ್ನ ತಂಗಿ ಎಷ್ಟು  ಮುದ್ದಾಗಿದ್ದಾಳೆ; ನವಜಾತ ಶಿಶುವನ್ನು ಕಂಡೊಡನೆ ಮುದ್ದಾಗಿ ರಿಯಾಕ್ಷನ್ ಕೊಟ್ಟ ಪುಟ್ಟ ಹುಡುಗ – Kannada News | Little boy’s reaction upon seeing a new born baby

ಮನೆಯಲ್ಲಿ ಮಕ್ಕಳಿದ್ದರೆ ತಮ್ಮ ಮನೆಗೆ ಮತ್ತೊಂದು ಪುಟ್ಟ ಮಗು (little boy) ಬರುತ್ತದೆಯೆಂದರೆ ಅವರ ಖುಷಿ ಎಲ್ಲೇ ಮೀರುತ್ತದೆ. ಇನ್ನು ಆಗ ತಾನೇ ಹುಟ್ಟಿದ ಮಗುವನ್ನು ನೋಡಿದ ಬಳಿಕ ಪುಟ್ಟ ಮಕ್ಕಳು ಮುದ್ದಾಗಿ ರಿಯಾಕ್ಷನ್ ನೀಡುವುದನ್ನು  ನೀವು ನೋಡಿರಬಹುದು. ಆದ್ರೆ ಇಲ್ಲೊಬ್ಬ ಪುಟ್ಟ ಹುಡುಗ ಆಗ ತಾನೇ ಹುಟ್ಟಿದ ನವಜಾತ ಸಹೋದರಿಯನ್ನು ನೋಡಲು ಆಸ್ಪತ್ರೆಗೆ ಬಂದಿದ್ದಾನೆ. ಮಗುವನ್ನು ನೋಡುತ್ತಿದ್ದಂತೆ ಕ್ಯೂಟ್ ರಿಯಾಕ್ಷನ್‌ನೊಂದಿಗೆ ತನ್ನ ತಾಯಿಯ ಬಳಿ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ್ದಾನೆ.

ರಿಚಾ ಅಗರ್ವಾಲ್ (baniya2bengali) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ಒಬ್ಬ ತಾಯಿಯ ನೋವು ಅಗೋಚರವಾಗಿರುತ್ತದೆ. ಆಕೆಯ ತ್ಯಾಗ ಸಾಮಾನ್ಯವಾದ ಪರಿಗಣನೆ ಆಗಿರುತ್ತದೆ ಎಂಬ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ಪುಟಾಣಿಯೊಂದು ತನ್ನ ನವಜಾತ ಸಹೋದರಿಯನ್ನು ನೋಡಲು ಆಸ್ಪತ್ರೆಗೆ ಬಂದಿದ್ದಾನೆ. ತನ್ನ ತಾಯಿ ಹಾಗೂ ಪುಟಾಣಿಯನ್ನು ನೋಡುತ್ತಿದ್ದು, ಆ ಬಳಿಕ ತಾಯಿಯ ಬಳಿ ನಾನಾ ಪ್ರಶ್ನೆಗಳನ್ನು ಕೇಳುತ್ತಿದ್ದಾನೆ. ತನ್ನ ತಾಯಿಯನ್ನು ನೈಟ್ ಸೂಟ್ ಧರಿಸಿದ್ದೀರಾ ಎಂದು ಕೇಳುತ್ತಾನೆ. ಆ ಬಳಿಕ ಮಗುವು ನಿಜವೇ, ಆಟಿಕೆಯೇ ಎಂದು ಪ್ರಶ್ನೆ ಕೇಳುವುದನ್ನು ನೋಡಬಹುದು. ಆದರೆ ಮಗು ನಿಜ ಎಂದು ಅವನಿಗೆ ತಿಳಿದಾಗ, ಪುಟ್ಟ ಕಂದಮ್ಮನನ್ನು ನೋಡುತ್ತಾನೆ. ಗಂಡು ಮಗುವೋ ಅಥವಾ ಹೆಣ್ಣು ಮಗುವೋ ಎಂದು ಈ ಪುಟ್ಟ ಬಾಲಕ ಕೇಳಿದ್ದು, ಹೆಣ್ಣು ಮಗು ಎಂದು ಹೆತ್ತವರು ಉತ್ತರಿಸುವುದನ್ನು ನೋಡಬಹುದು.

ಇದನ್ನೂ ಓದಿ:ಮುದ್ದು ಕಂದನ ಬಾಯಲ್ಲಿ ಶ್ರೀ ಕೃಷ್ಣನ ಭಜನೆ ಹಾಡು, ವೈರಲ್ ಆಯ್ತು ದೃಶ್ಯ

ಈ ವಿಡಿಯೋ ಹನ್ನೆರಡು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ಕೊಂಡಿದ್ದು, ಒಬ್ಬ ಬಳಕೆದಾರ ಮುದ್ದಾಗಿದೆ ಎಂದಿದ್ದಾರೆ. ಇನ್ನೊಬ್ಬರು, ಪುಟ್ಟ ಹುಡುಗನು ಅಮ್ಮನ ಬಗ್ಗೆ ಕಾಳಜಿ ವಹಿಸುತ್ತಾನೆ. ಜೀವನದಲ್ಲಿ ಒಳ್ಳೆಯ ಮಗ ಮತ್ತು ಸಹೋದರನಾಗುತ್ತಾನೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದೇ ವರ್ಷದಲ್ಲಿ ಅಕ್ಷಯ್ ಖನ್ನಾ ಸಿನಿಮಾಗಳ ಕಲೆಕ್ಷನ್ 2 ಸಾವಿರ ಕೋಟಿ ರೂಪಾಯಿ! – Kannada News | Akshaye Khanna starrer Chhaava and Dhurandhar movie collection Rs 2000 Cr in 2025

ನಟ ಅಕ್ಷಯ್ ಖನ್ನಾ (Akshaye Khanna) ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹೀರೋ, ಪೋಷಕ ಪಾತ್ರ ಹಾಗೂ ವಿಲನ್ ಆಗಿ ಕೂಡ ಅವರು ಜನಮನ ಗೆದ್ದಿದ್ದಾರೆ. ಅಕ್ಷಯ್ ಖನ್ನಾ ಅವರಿಗೆ 2025ರ ವರ್ಷ ತುಂಬಾ ಸ್ಪೆಷಲ್ ಆಗಿತ್ತು. ಅವರು ನಟಿಸಿದ ಎರಡು ಸಿನಿಮಾಗಳು ಸೂಪರ್ ಹಿಟ್ ಆದವು. ‘ಛಾವ’ ಮತ್ತು ‘ಧುರಂಧರ್’ (Dhurandhar) ಸಿನಿಮಾದಲ್ಲಿ ಅಕ್ಷಯ್ ಖನ್ನಾ ವಿಲನ್ ಪಾತ್ರ ಮಾಡಿದ್ದಾರೆ. ಈ ಸಿನಿಮಾಗಳಿಂದ ಆಗಿರುವ ಒಟ್ಟು ಕಲೆಕ್ಷನ್ 2 ಸಾವಿರ ಕೋಟಿ ರೂಪಾಯಿ ಮೀರಿದೆ. ಇದರಿಂದಾಗಿ ಅಕ್ಷಯ್ ಖನ್ನಾ ಅವರ ಖ್ಯಾತಿ ಹೆಚ್ಚಾಗಿದೆ.

‘ಛಾವ’ ಸಿನಿಮಾ 2025ರ ಫೆಬ್ರವರಿ 14ರಂದು ಬಿಡುಗಡೆ ಆಯಿತು. ಆ ಸಿನಿಮಾಗೆ ವಿಕ್ಕಿ ಕೌಶಲ್ ಹೀರೋ. ಐತಿಹಾಸಿಕ ಕಥಾಹಂದರ ಹೊಂದಿದ್ದ ಆ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಅವರು ಔರಂಗಜೇಬ್ ಪಾತ್ರವನ್ನು ಮಾಡಿದರು. ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ಸಿಕ್ಕಿತು. ಚಿತ್ರದ ಗೆಲುವಿನಲ್ಲಿ ಅಕ್ಷಯ್ ಖನ್ನಾ ಅವರ ಕೊಡುಗೆ ಕೂಡ ದೊಡ್ಡದಿದೆ. ಆ ಸಿನಿಮಾ ವಿಶ್ವಾದ್ಯಂತ 809 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು.

‘ಧುರಂಧರ್’ ಸಿನಿಮಾ 2025ರ ಡಿಸೆಂಬರ್ 5ರಂದು ರಿಲೀಸ್ ಆಯಿತು. ರಣವೀರ್ ಸಿಂಗ್ ಅವರು ಹೀರೋ ಆಗಿ ನಟಿಸಿರುವ ಈ ಚಿತ್ರದಲ್ಲಿ ಅಕ್ಷಯ್ ಖನ್ನಾ ಅವರು ವಿಲನ್ ಪಾತ್ರ ಮಾಡಿದ್ದಾರೆ. ರೆಹಮಾನ್ ಡಕಾಯಿತ್ ಎಂಬ ಪಾತ್ರದಲ್ಲಿ ಅವರು ಜೀವಿಸಿದ್ದಾರೆ. ‘ಧುರಂಧರ್’ ನೋಡಿದ ಎಲ್ಲರೂ ಅಕ್ಷಯ್ ಖನ್ನಾ ಅವರ ನಟನೆಯನ್ನು ಕೊಂಡಾಡುತ್ತಿದ್ದಾರೆ. ಈ ಸಿನಿಮಾ ಈಗಾಗಲೇ 1167 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.

ಇನ್ನು ಕೆಲವೇ ದಿನಗಳಲ್ಲಿ ‘ಧುರಂಧರ್’ ಸಿನಿಮಾದ ಒಟ್ಟು ಕಲೆಕ್ಷನ್ 1200 ಕೋಟಿ ರೂಪಾಯಿ ಆಗಲಿದೆ. ‘ಛಾವ’ ಚಿತ್ರದ ಗಳಿಕೆಯನ್ನೂ ಸೇರಿಸಿದರೆ ಅಕ್ಷಯ್ ಖನ್ನಾ ನಟಿಸಿದ ಈ ಸಿನಿಮಾಗಳ ಒಟ್ಟು ಕಲೆಕ್ಷನ್ 2000 ಕೋಟಿ ರೂಪಾಯಿ ಆಗುತ್ತದೆ. ಆ ಮೂಲಕ ಒಂದೇ ವರ್ಷದಲ್ಲಿ ಅಕ್ಷಯ್ ಖನ್ನಾ ಅಭಿನಯದ ಸಿನಿಮಾಗಳಿಂದ 2 ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಆದಂತೆ ಆಗಿದೆ.

ಇದನ್ನೂ ಓದಿ: ಮುಂಬೈನಲ್ಲಿ ‘ಧುರಂಧರ್’ ಬಗ್ಗೆ ಮನಸಾರೆ ಮಾತಾಡಿದ ಶಿವರಾಜ್​ಕುಮಾರ್

ಈ ರೀತಿ ಸಾಧನೆ ಮಾಡಿದ ಮತ್ತೋರ್ವ ನಟ ಎಂದರೆ ಅದು ಶಾರುಖ್ ಖಾನ್. ಅವರು ನಟಿಸಿದ ‘ಪಠಾಣ್’, ‘ಜವಾನ್’ ಮತ್ತು ‘ಡಂಕಿ’ ಸಿನಿಮಾಗಳು 2023ರಲ್ಲಿ ಬಿಡುಗಡೆ ಆದವು. ಈ ಮೂರು ಸಿನಿಮಾಗಳಿಂದ 2685 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಹಾಗಾಗಿ ಅವರು ನಂಬರ್ ಸ್ಥಾನದಲ್ಲಿ ಇದ್ದಾರೆ. ಈಗ ಅಕ್ಷಯ್ ಖನ್ನಾ ಅವರಿಗೆ ‘ಧುರಂಧರ್’ ಮತ್ತು ‘ಛಾವ’ ಸಿನಿಮಾಗಳಿಂದ 2ನೇ ಸ್ಥಾನ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪವಿತ್ರಾ ಮನೆಯೂಟಕ್ಕೆ ತಡೆ ಒಡ್ಡಲು ಮುಂದಾದ ಪೊಲೀಸರು: ಜೈಲೂಟವೇ ಗತಿ? – Kannada News | Pavithra Gowda got home food in Jail, police to file application to court

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣ ಆರೋಪಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನಗಳನ್ನು ದೂಡುತ್ತಿದ್ದಾರೆ. ಸುಪ್ರೀಂಕೋರ್ಟ್​​ನಲ್ಲಿ ಕೊಲೆ ಆರೋಪಿಗಳ ಜಾಮೀನು ರದ್ದಾದ ಬಳಿಕ ಪವಿತ್ರಾ ಗೌಡ ಸತತವಾಗಿ ಜಾಮೀನಿಗಾಗಿ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ ಜಾಮೀನು ಸಿಕ್ಕಿಲ್ಲ. ಆದರೆ ಈಗ ಜೈಲಿನಲ್ಲಿಯೇ ಕೆಲವು ಸವಲತ್ತುಗಳನ್ನು ಪಡೆದುಕೊಳ್ಳಲು ನ್ಯಾಯಾಲಯದ ಮೊರೆ ಹೋಗಿದ್ದರು. ಅದರಲ್ಲಿ ಮನೆಯೂಟವೂ ಒಂದಾಗಿತ್ತು. ಪವಿತ್ರಾ ಗೌಡ ಅವರ ಮನೆ ಊಟದ ಬೇಡಿಕೆಯನ್ನು ಇತ್ತೀಚೆಗಷ್ಟೆ ನ್ಯಾಯಾಲಯ ಒಪ್ಪಿತ್ತು. ಅದರಂತೆ ಜನವರಿ 2 ರಿಂದ ಪವಿತ್ರಾಗೆ ಜೈಲಿನಲ್ಲಿ ಮನೆ ಊಟ ಲಭ್ಯವಾಗುತ್ತಿದೆ. ಆದರೆ ಇದಕ್ಕೆ ಪೊಲೀಸರು ಅಸಮಾಧಾನ ವ್ಯಕ್ತಪಡಿಸಿದ್ದು, ಪವಿತ್ರಾಗೆ ಸರಬರಾಜಾಗುತ್ತಿರುವ ಮನೆ ಊಟ ತಡೆಯಲು ಪೊಲೀಸರು ಮೇಲ್ಮನವಿ ಸಲ್ಲಿಸಿಕೆಗೆ ಮುಂದಾಗಿದ್ದಾರೆ.

ಪವಿತ್ರಾ ಗೌಡಗೆ ನೀಡಲಾಗಿರುವ ವಿಶೇಷ ಸೌಲಭ್ಯದ ವಿರುದ್ಧ ಜೈಲಧಿಕಾರಿಗಳು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದು, ಈ ಬಗ್ಗೆ ಎಸ್​ಎಸ್​​ಪಿ ಜೊತೆಗೆ ಚರ್ಚೆ ನಡೆಸಿರುವ ಜೈಲಧಿಕಾರಿಗಳು ಸೋಮವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ. ಪವಿತ್ರಾ ಗೌಡಗೆ ಜೈಲಿನಲ್ಲಿ ಮನೆ ಊಟ ನೀಡಿದರೆ ಇತರೆ ಕೈದಿಗಳು ಮತ್ತು ನ್ಯಾಯಾಂಗ ಬಂಧಿತರ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಎಲ್ಲರೂ ಬೇಡಿಕೆ ಇಡುವ ಸಾಧ್ಯತೆ ಇದೆ ಎಂಬುದು ಪೊಲೀಸರ ವಾದ.

ಇದನ್ನೂ ಓದಿ:ರೇಣುಕಾಸ್ವಾಮಿ ಕೇಸ್: ಎ1 ಪವಿತ್ರಾ ಗೌಡ ಇರುವ ಸೆಲ್​ಗೆ ಟಿವಿ ನೀಡಲು ಕೋರ್ಟ್ ಸೂಚನೆ

ಮಾತ್ರವಲ್ಲದೆ ಜೈಲಿನ ಊಟ ಉತ್ತಮವಾಗಿ, ಶುಚಿಯಾಗಿ, ರುಚಿಯಾಗಿಯೇ ಇದ್ದು, ಈ ವರೆಗೆ ಜೈಲಿನಲ್ಲಿ ಊಟ ತಿಂದು ಪವಿತ್ರಾ ಸೇರಿದಂತೆ ಇನ್ಯಾರೂ ಸಹ ಅಸ್ತವ್ಯಸ್ತಗೊಂಡಿಲ್ಲ ಹೀಗಿರುವಾಗ ಪ್ರತ್ಯೇಕವಾಗಿ ಮನೆ ಊಟದ ಅವಶ್ಯಕತೆ ಇಲ್ಲ ಎಂದು ಪೊಲೀಸರು ವಾದಿಸಲಿದ್ದಾರೆ. ಜೈಲಿನಲ್ಲಿ 4700 ಕೈದಿಗಳು, ನ್ಯಾಯಾಂಗ ಬಂಧಿತರು ಎಲ್ಲರಿಗೂ ಒಂದೇ ರೀತಿಯ ಆಹಾರ ನೀಡಲಾಗುತ್ತಿದೆ. ಈಗ ಪವಿತ್ರಾಗೆ ಮನೆ ಊಟ ನೀಡಿದರೆ ಇತರೆ ಕೈದಿಗಳು ಸಹ ತಮಗೆ ಮನೆ ಊಟ ಬೇಕು ಎಂದು ಬೇಡಿಕೆ ಇಟ್ಟರೆ ಜೈಲಿನ ವ್ಯವಸ್ಥೆಗೆ ಧಕ್ಕೆ ಬರಲಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮನದಟ್ಟು ಮಾಡುವ ಪ್ರಯತ್ನ ಮಾಡಲಿದ್ದಾರೆ.

ಪವಿತ್ರಾ ಗೌಡ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಆಗಿದ್ದಾರೆ. ದರ್ಶನ್ ಎ2 ಆರೋಪಿ ಆಗಿದ್ದಾರೆ. ಈ ಹಿಂದೆ ದರ್ಶನ್ ಸಹ ತಮಗೆ ಜೈಲಿನಲ್ಲಿ ಕೆಲವು ಸವಲತ್ತುಗಳು ಬೇಕು ಎಂದು ಮನವಿ ಮಾಡಿ ನ್ಯಾಯಾಲಯಕ್ಕೆ ಹೋಗಿದ್ದಾಗಲೂ ಸಹ ಪೊಲೀಸರು ಸೌಲಭ್ಯಗಳನ್ನು ನೀಡಲು ನಿರಾಕರಿಸಿದ್ದರು. ಹಾಸಿಗೆ, ದಿಂಬಿಗಾಗಿ ಸಾಕಷ್ಟು ಹೋರಾಟವನ್ನು ದರ್ಶನ್, ನ್ಯಾಯಾಲಯದಲ್ಲಿ ಮಾಡಬೇಕಾಗಿ ಬಂತು. ಈಗ ಪವಿತ್ರಾ ಗೌಡ ಸಹ ವಿಶೇಷ ಸವಲತ್ತುಗಳಿಗಾಗಿ ನ್ಯಾಯಾಲಯದ ಮೂಲಕ ಹೋರಾಟ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 2:53 pm, Sun, 4 January 26

Source link

ದೇಗುಲದ ಸಮೀಪವೇ ಅಪಘಾತ; ಕಾಪಾಡಲಿಲ್ಲ ಮಾದೇಶ್ವರ!

ಬೆಂಗಳೂರು, ಜನವರಿ 04: ನಗರದ ನಾಗರಬಾವಿಯ ಮಲೇ ಮಹದೇಶ್ವರ ದೇವಸ್ಥಾನದ ಸಮೀಪ ಹೋಗುತ್ತಿದ್ದ ಬೈಕ್​ಗೆ ಲಾರಿಯೊಂದು ಹಿಂದಿನಿಂದ ಬಂದು ಗುದ್ದಿದ್ದು, ಸವಾರ ಕೊನೆಯುಸಿರೆಳೆದಿದ್ದಾನೆ. ಇನ್ನೊಂದೆಡೆ ಚಾಮರಾಜನಗರದಲ್ಲಿ ವಾಹನವೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ಚಾಲಕ ಪವಾಡದಂತೆ ಪ್ರಾಣಾಪಾಯದಿಂದ ಪಾರಾಗಿದ ಘಟನೆ ನಡೆದಿದೆ.

ಮಾರ್ಗ ಮಧ್ಯೆಯೇ ಸಾವು

ನಿನ್ನೆ ರಾತ್ರಿ ಸುಮಾರು 10:30ರ ವೇಳೆಗೆ ನಾಗರಭಾವಿಯ ನಮ್ಮೂರ ತಿಂಡಿ ಸಮೀಪದ ಮಲೇ ಮಹದೇಶ್ವರ ದೇವಸ್ಥಾನದ ಬಳಿ ಭೀಕರ ಅಪಘಾತ ಸಂಭವಿಸಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತುಮರಿ ಗ್ರಾಮದ ನಿವಾಸಿ ಪ್ರಕಾಶ್ ಎಂ. ಡಿ. (29) ಬೈಕ್‌ನಲ್ಲಿ ಸ್ನೇಹಿತನೊಂದಿಗೆ ಪರಿಚಿತನ ಮಗುವಿನ ಜನ್ಮದಿನ ಕಾರ್ಯಕ್ರಮಕ್ಕೆ ಹೋಗಿ ಮರಳುವ ವೇಳೆ, ಹಿಂದಿನಿಂದ ಬಂದ ಲಾರಿಯೊಂದು ಬೈಕ್‌ಗೆ ಗುದ್ದಿತ್ತು. ಅಪಘಾತದಲ್ಲಿ ಪ್ರಕಾಶ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

ಬೈಕ್‌ನಲ್ಲಿ ಜೊತೆಗಿದ್ದ  ಸ್ನೇಹಿತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಗೋಲ್ಡ್ ಲೋನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ್ ಸಾವಿಗೆ ಕುಟುಂಬಸ್ಥರಲ್ಲಿ ಶೋಕ ಆವರಿಸಿದ್ದು, ಮಾಜಿ ಸಚಿವ ಹರತಾಳು ಹಾಲಪ್ಪ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ಕಾಣದೆ ಡಿವೈಡರ್​ಗೆ ಗುದ್ದಿದ ಕ್ಯಾಂಟರ್

ಇಂದು ಬೆಳಗ್ಗೆ ಚಾಮರಾಜನಗರ ತಾಲೂಕಿನ ವೆಂಕಟಯ್ಯನ ಛತ್ರದ ಬಳಿ ದಟ್ಟ ಮಂಜಿನಿಂದಾಗಿ ಈಚರ್ ವಾಹನ ಚಾಲಕನಿಗೆ ರಸ್ತೆ ಕಾಣದೆ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ವಾಹನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಚಾಲಕನಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ತಮಿಳುನಾಡಿನಿಂದ ವೆಸ್ಟ್ ಪೇಪರ್ ತುಂಬಿಕೊಂಡು ಬರುತ್ತಿದ್ದ ವಾಹನ ಎಲ್ಲಿ ಸಾಗುತ್ತಿತ್ತು ಎಂಬುದರ ಕುರಿತು ಸಂಚಾರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮಹಾರಾಷ್ಟ್ರ: ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷ ವಿನೋದ್ ಕುಲಕರ್ಣಿ ಮೇಲೆ ಅಮಾನುಷ ಹಲ್ಲೆ – Kannada News | Brutal Attack On Sahitya Sammelan Working President Vinod Kulkarni in Maharashtra

ಸತಾರ, ಜನವರಿ 04: ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷ ವಿನೋದ್ ಕುಲಕರ್ಣಿ ಮೇಲೆ ಅಮಾನುಷ ದಾಳಿ(Attack) ನಡೆಸಿರುವ ಘಟನೆ ಸತಾರದಲ್ಲಿ ನಡೆದಿದೆ. ಅಪರಿಚಿತ ದುಷ್ಕರ್ಮಿಯೊಬ್ಬರು ಅವರನ್ನು ಅಡ್ಡಗಟ್ಟಿ, ಅವರ ಕಣ್ಣು ಮತ್ತು ಮುಖಕ್ಕೆ ಕಪ್ಪು ಪುಡಿಯ ಪದಾರ್ಥವನ್ನು ಎಸೆದು, ಕೊಲೆ ಬೆದರಿಕೆ ಹಾಕಿದ್ದಾರೆಂದು ವರದಿಯಾಗಿದೆ. ದಾಳಿಯ ತೀವ್ರತೆಯು ಕುಲಕರ್ಣಿ ಅವರ ಕಣ್ಣಿಗೆ ಗಂಭೀರ ಗಾಯವನ್ನುಂಟುಮಾಡಿದೆ.

ಈ ಹಲ್ಲೆಯನ್ನು ತೀವ್ರವಾಗಿ ಖಂಡಿಸಿರುವ ಲೋಕೋಪಯೋಗಿ ಸಚಿವ ಶಿವೇಂದ್ರಸಿಂಹ ಭೋಸಲೆ, ಇದು ‘ಹೇಡಿತನದ ಕೃತ್ಯ’ ಎಂದು ಬಣ್ಣಿಸಿದ್ದು, ನಾಗರಿಕ ಸಮಾಜದಲ್ಲಿ ಇದಕ್ಕೆ ಸ್ಥಾನವಿಲ್ಲ. ಯಾರಿಗಾದರೂ ಕುಂದುಕೊರತೆಗಳು ಅಥವಾ ಭಿನ್ನಾಭಿಪ್ರಾಯಗಳಿದ್ದರೆ, ಅವರು ಹಿಂಸಾಚಾರಕ್ಕೆ ಇಳಿಯುವ ಬದಲು ಸರಿಯಾದ ವೇದಿಕೆಗಳ ಮೂಲಕ ಅದನ್ನು ವ್ಯಕ್ತಪಡಿಸಬೇಕು ಎಂದು ಸಚಿವರು ಒತ್ತಿ ಹೇಳಿದರು.

ಸರ್ಕಾರವು ಸಂವಾದಕ್ಕೆ ವೇದಿಕೆ ಒದಗಿಸಲು ಸಿದ್ಧವಾಗಿದೆ ಆದರೆ ಅಂತಹ ದೈಹಿಕ ಆಕ್ರಮಣವನ್ನು ಸಹಿಸುವುದಿಲ್ಲ ಎಂದು ಅವರು ಹೇಳಿದರು. ಘಟನೆಯ ಮೂಲ ಕಾರಣವನ್ನು ಬಹಿರಂಗಪಡಿಸಲು ಮತ್ತು ಅಪರಾಧಿಯು ಕಾನೂನಿನ ಪೂರ್ಣ ವ್ಯಾಪ್ತಿಯನ್ನು ಎದುರಿಸುವಂತೆ ಖಚಿತಪಡಿಸಿಕೊಳ್ಳಲು ಸಮಗ್ರ ತನಿಖೆ ನಡೆಸುವಂತೆ ಸಚಿವ ಭೋಸಲೆ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

ವಿನೋದ್ ಕುಲಕರ್ಣಿ ಮಾತನಾಡಿ, ದಾಳಿಕೋರ ಆಯುಧವೊಂದನ್ನು ಹಿಡಿದಿರುವಂತೆ ಕಂಡುಬಂದಿತ್ತು ಮತ್ತು ಹೊಂಚುದಾಳಿಯ ಸಮಯದಲ್ಲಿ ನಾನು ನಿನ್ನನ್ನು ಮುಗಿಸುತ್ತೇನೆ ಎಂದು ಕೂಗಿದ್ದ ಎಂದು ಉಲ್ಲೇಖಿಸಿದ್ದಾರೆ.

ಮತ್ತಷ್ಟು ಓದಿ: Video: ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ದ ವೃದ್ಧೆ ಮೇಲೆ ಕೋತಿಗಳ ದಾಳಿ

ಈ ವಸ್ತುವಿನಿಂದ ಉಂಟಾದ ಆಘಾತ ಮತ್ತು ತಾತ್ಕಾಲಿಕ ದೃಷ್ಟಿ ನಷ್ಟದ ಹೊರತಾಗಿಯೂ, ಕುಲಕರ್ಣಿ ವೈದ್ಯಕೀಯ ಚಿಕಿತ್ಸೆ ಪಡೆದ ನಂತರ ಸಮಾವೇಶದ ಸ್ಥಳಕ್ಕೆ ಮರಳಿದ್ದರು. ಅವರು ಮರಾಠಿ ಭಾಷೆಗೆ ತಮ್ಮ ಬದ್ಧತೆಯನ್ನು ಮತ್ತು ಸರ್ಕಾರಿ ನೀತಿಗಳು ಮತ್ತು ಬಲವಂತದ ಹಿಂದಿ ಹೇರಿಕೆಯ ವಿರುದ್ಧದ ತಮ್ಮ ನಿಲುವುಗಳನ್ನು ತೋರಿಸುವುದನ್ನು ಮುಂದುವರೆಸಿದರು.

ಸ್ಥಳೀಯ ಪತ್ರಕರ್ತರ ತುರ್ತು ಬೇಡಿಕೆಯ ಮೇರೆಗೆ, ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ಮ್ಹಾತ್ರೆ ಅವರು ಭದ್ರತೆ ಒದಗಿಸಲು ತ್ವರಿತವಾಗಿ ಕಾರ್ಯನಿರ್ವಹಿಸಿದರು. ದಾಳಿಯ ಹಿಂದಿನ ಉದ್ದೇಶಗಳ ಬಗ್ಗೆ ತನಿಖೆ ಮುಂದುವರಿದಿದ್ದು, ವಿನೋದ್ ಕುಲಕರ್ಣಿ ಮತ್ತು ಸಾಹಿತ್ಯ ಮಹಾಮಂಡಲದ ಅಧ್ಯಕ್ಷ ಪ್ರೊ. ಮಿಲಿಂದ್ ಜೋಶಿ ಇಬ್ಬರಿಗೂ ಸಶಸ್ತ್ರ ಪೊಲೀಸ್ ರಕ್ಷಣೆಯನ್ನು ಅಧಿಕೃತವಾಗಿ ನೀಡಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಿಗ್ ಬಾಸ್​ ಟಿಕೆಟ್​ ಟು ಫಿನಾಲೆಯಲ್ಲಿ ಹಲ್ಲೆ; ಇಬ್ಬರಿಗೆ ರೆಡ್ ಕಾರ್ಡ್ ಕೊಟ್ಟು ಎಲಿಮಿನೇಷನ್ – Kannada News | Red Card To VJ Paaru and Kamrudin In Tamil Bigg Boss Vijay Sethupathi Angry Speech after Sandra Car Task

ತಮಿಳು ಬಿಗ್ ಬಾಸ್ ಸೀಸನ್ 9 ಸಾಕಷ್ಟು ಚರ್ಚೆ ಆಗುತ್ತಿದೆ. ಜನಪ್ರಿಯ ನಾಯಕ ವಿಜಯ್ ಸೇತುಪತಿ ಈ ಶೋ ನಡೆಸಿಕೊಡುತ್ತಿದ್ದಾರೆ. ಅವರು ಪಾರ್ವತಿ ಮತ್ತು ಕಮ್ರುದ್ದೀನ್ ಹೆಸರಿನ ಇಬ್ಬರು ಸ್ಪರ್ಧಿಗಳಿಗೆ ರೆಡ್ ಕಾರ್ಡ್ ತೋರಿಸಿದ್ದಾರೆ. ಆರಂಭದಿಂದಲೂ, ಇಬ್ಬರ ನಡವಳಿಕೆ ಮತ್ತು ಶೈಲಿ ಸರಿಯಾಗಿಲ್ಲ ಎಂಬ ಟೀಕೆ ಇದೆ. ವಿಜಯ್ ಸೇತುಪತಿ ಇಲ್ಲಿಯವರೆಗೆ ಇಬ್ಬರಿಗೆ ಅನೇಕ ಬಾರಿ ಎಚ್ಚರಿಕೆಯನ್ನು ಸಹ ನೀಡಿದ್ದರು. ಆದರೆ, ಇಬ್ಬರಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈಗ ಇವರು ಎಲಿಮಿನೇಟ್ ಆಗಿದ್ದಾರೆ.

ಜನವರಿ 2ರಂದು ಫಿನಾಲೆಯ ಟಿಕೆಟ್‌ಗಾಗಿ ಮನೆಯಲ್ಲಿ ಕಾರ್ ಟಾಸ್ಕ್ ನಡೆಸಲಾಯಿತು. ಈ ಟಾಸ್ಕ್ ಸಮಯದಲ್ಲಿ, ಕಮ್ರುದ್ದೀನ್ ಮತ್ತು ವಿಜೆ ಪಾರ್ವತಿ ಮತ್ತೊಬ್ಬ ಸ್ಪರ್ಧಿ ಸಾಂಡ್ರಾಳನ್ನು ಕಾರಿನಿಂದ ಬಲವಂತವಾಗಿ ಹೊರಗೆ ತಳ್ಳಿದರು. ಇತರ ಸ್ಪರ್ಧಿಗಳು ಹಲ್ಲೆ ಮಾಡಬೇಡಿ ಎಂದು ಕೂಗುತ್ತಿದ್ದರೂ, ಇಬ್ಬರೂ ಅದನ್ನು ಲೆಕ್ಕಿಸಲಿಲ್ಲ. ಅವರು ಅವಳನ್ನು ತಮ್ಮ ಕಾಲುಗಳಿಂದ ಒದ್ದು ಮತ್ತು ಹೊಡೆದು ಹೊರಗೆ ತಳ್ಳಲು ಪ್ರಯತ್ನಿಸಿದರು. ಪರಿಣಾಮವಾಗಿ, ಅವಳು ಕಾರಿನಿಂದ ಹೊರಗೆ ಬಿದ್ದು ತಲೆಗೆ ತೀವ್ರ ಗಾಯವಾಯಿತು.

ಸಾಂಡ್ರಾ ಕಾರಿನಿಂದ ಬಿದ್ದಾಗ, ವಿಕಲ್ಸ್ ವಿಕ್ರಮ್, ಶಬರಿನಾಥನ್ ಮತ್ತು ಗಾನಾ ವಿನೋದ್ ಪ್ರಥಮ ಚಿಕಿತ್ಸೆ ನೀಡಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು. ಆದರೆ, ಅವರು ಚೇತರಿಸಿಕೊಳ್ಳಲಿಲ್ಲ. ತಕ್ಷಣ ಮನೆಗೆ ಆಗಮಿಸಿದ ವೈದ್ಯಕೀಯ ತಂಡವು ಸಾಂಡ್ರಾಗೆ ಅಗತ್ಯ ಚಿಕಿತ್ಸೆ ನೀಡಿತು. ಪರಿಣಾಮವಾಗಿ, ಅವರು ಚೇತರಿಸಿಕೊಂಡರು. ಸಹಾಯ ಮಾಡಲು ಧಾವಿಸಿದ ಮೂವರಿಗೂ ಪ್ರಶಂಸೆ ವ್ಯಕ್ತವಾಗುತ್ತಿದೆ.

ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಹಂಚಿಕೊಂಡು ಕೋಪ ಹೊರಹಾಕಿದರು. ಈ ಇಬ್ಬರಿಂದಾಗಿ ಇತರ ಸ್ಪರ್ಧಿಗಳ ಜೀವ ಅಪಾಯದಲ್ಲಿದೆ ಎಂದು ಅನೇಕರು ಹೇಳುತ್ತಿದ್ದರು. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: ‘ಜೈಲರ್ 2’ ಸಿನಿಮಾದಿಂದ ಬಾಲಯ್ಯ ಔಟ್? ವಿಜಯ್ ಸೇತುಪತಿಗೆ ದೊಡ್ಡ ಚಾನ್ಸ್

ನಿರೂಪಕ ವಿಜಯ್ ಸೇತುಪತಿ ಇಬ್ಬರ ಮೇಲೆ ಕೋಪಗೊಂಡಿದ್ದಾರೆ. ಕಾರ್ ಟಾಸ್ಕ್‌ನಲ್ಲಿ ಅನುಚಿತವಾಗಿ ವರ್ತಿಸಿದ ಕಮರುದ್ದೀನ್ ಮತ್ತು ಪಾರ್ವತಿ ಇಬ್ಬರಿಗೂ ರೆಡ್ ಕಾರ್ಡ್ ನೀಡಿದರು. ಅಲ್ಲಿದ್ದ ಪ್ರೇಕ್ಷಕರು ಸಂತೋಷದಿಂದ ಕುಣಿದಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 9:59 am, Sun, 4 January 26

Source link

ಬಳ್ಳಾರಿ ಎಸ್​​ಪಿ ಪವನ್ ನೆಜ್ಜೂರ್ ಅಮಾನತು: ಶೋಭಾ ಕರಂದ್ಲಾಜೆ ಸ್ಫೋಟಕ ಆರೋಪ – Kannada News | Shobha Karandlaje Alleges Corruption and Cover up in Ballari SP Pavan Nejjurs Suspension

ಬೆಂಗಳೂರು, ಜನವರಿ 04: ಬಳ್ಳಾರಿ ಎಸ್‌ಪಿ ಪವನ್ ನೆಜ್ಜೂರ್ ಅಮಾನತು ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ. ಘಟನೆ ನಡೆದ ಸ್ಥಳದಲ್ಲೇ ಪವನ್ ನೆಜ್ಜೂರ್ ಇದ್ದರು ಎಂಬುದಕ್ಕೆ ಮಾಧ್ಯಮ ವರದಿಗಳು ಪುರಾವೆ ಒದಗಿಸಿವೆ. ಆದರೆ ಅವರ ಮೇಲಿನ ಯಾವ ದ್ವೇಷಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂಬುದು ಗೊತ್ತಾಗಬೇಕು. ಜಮೀರ್​​ ಖಾನ್​​ ಅವರು ಬಳ್ಳಾರಿ ಎಸ್​​ಪಿಗೆ ಎಷ್ಟು ಬಿಡ್ಡಿಂಗ್​ ಮಾಡಿದ್ದರು ಎಂದು ಪ್ರಶ್ನಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ವರ್ಗಾವಣೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಇದರಿಂದ ರಾಜ್ಯದ ಪೊಲೀಸ್ ಅಧಿಕಾರಿಗಳ ನೈತಿಕ ಬಲ ಕುಗ್ಗುತ್ತಿದೆ ಎಂದೂ ಶೋಭಾ ಆರೋಪಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link