Category Archives: Blog

Your blog category

ಮಂಗಳೂರು ಯುವಕನ ಆತ್ಮಹತ್ಯೆ ಕೇಸ್​​ಗೆ ಟ್ವಿಸ್ಟ್​​: ಪ್ರೀತಿಸಿದ ಯುವತಿಯಿಂದಾದ ಅವಮಾನಕ್ಕೆ ನೊಂದು ಆತ್ಮಹತ್ಯೆ?

ಮಂಗಳೂರು ಯುವಕನ ಆತ್ಮಹತ್ಯೆ ಕೇಸ್​​ಗೆ ಟ್ವಿಸ್ಟ್​​: ಪ್ರೀತಿಸಿದ ಯುವತಿಯಿಂದಾದ ಅವಮಾನಕ್ಕೆ ನೊಂದು ಆತ್ಮಹತ್ಯೆ?

ಮಂಗಳೂರು, ಏಪ್ರಿಲ್​​ 12: ಮೂಡುಶೆಡ್ಡೆಯ ಎದುರುಪದವು ನಿವಾಸಿ ಮಹಮ್ಮದ್ ಆಶಿಕ್(22) ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್​ಟ್​ ಸಿಕ್ಕಿದೆ. ಪ್ರೀತಿಸಿದ ಯುವತಿಯ ಕಿರುಕುಳವೇ ಸಾವಿಗೆ ಕಾರಣ ಎನ್ನಲಾಗಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಯುವತಿ ಮತ್ತು ಆಕೆಯ ತಾಯಿ ಸೇರಿದಂತೆ ಮೂವರ ವಿರುದ್ಧ ಮಂಗಳೂರಿನ (Mangaluru) ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಚ್ 21ರಂದು ಈದ್ ಹಬ್ಬದ ದಿನವೇ ಆಶಿಕ್​​ ಆತ್ಮಹತ್ಯೆ ಮಾಡಿಕೊಂಡಿದ್ದರು. ಆರಂಭದಲ್ಲಿ ಯಾವುದೋ ಕಾರಣಕ್ಕೆ ಮನನೊಂದು ಆಶಿಕ್​​ ಈ ನಿರ್ಧಾರ ಕೈಗೊಂಡಿರಬಹುದು ಎಂದು ಭಾವಿಸಲಾಗಿತ್ತಾದರೂ, ಮೊಬೈಲ್​​ ಪರಿಶೀಲನೆ ವೇಳೆ ಪ್ರೇಮ‌ ಪ್ರಕರಣ ಬೆಳಕಿಗೆ ಬಂದಿದೆ.

ಕಾಲೇಜು ಸಹಪಾಠಿಯಾಗಿದ್ದ ಉಳ್ಳಾಲ ಮೂಲದ ಯುವತಿಯನ್ನು ಆಶಿಕ್ ಪ್ರೀತಿಸುತ್ತಿದ್ದರು. ಸಾಲದ್ದಕ್ಕೆ ಇವರಿಬ್ಬರು ಕ್ಲೋಸ್​​ ಆಗಿರುವ ವಿಚಾರ ಬಗ್ಗೆ ಎರಡೂ ಕುಟುಂಬಕ್ಕೆ ಗೊತ್ತಿತ್ತು. ಈ ನಡುವೆ ಕೆಲ‌ ಸಮಯದಿಂದ ಆಶಿಕ್​​ನಿಂದ ಯುವತಿ ದೂರವಾಗತೊಡಗಿದ್ದಳು. ಹೀಗಾಗಿ ಸಾವಿಗೂ ಮುನ್ನ ನೀನು ನನಗೆ ಮೋಸ ಮಾಡುತ್ತಿದ್ದೀಯಾ ಎಂಬ ಬಗ್ಗೆ ಆಶಿಕ್​​ ಆಕೆಯನ್ನು ಕೇಳಿದ್ದು, ಈ ವೇಖೆ ನೀನು ಎಲ್ಲಿಯಾದರೂ ಸತ್ತು ಹೋಗು. ನಾನು ಮತ್ತು ನನ್ನ ಗೆಳೆಯರು ನಿನ್ನ ಮೃತದೇಹದ ಕೂದಲನ್ನು ತೆಗೆಯಲು ಬರುತ್ತೇವೆ ಎಂದು ಯುವತಿ ಹೇಳಿದ್ದಳು ಎಂಬ ಆರೋಪವೀಗ ಕೇಳಿಬಂದಿದೆ. ಈ ಬಗ್ಗೆ ಸಾವಿಗೂ ಮುನ್ನ ನಡೆದಿರುವ ಮಾತುಕತೆಗಳು ವಾಟ್ಸ್ಯಾಪ್​​ ಚಾಟ್​​ನನಲ್ಲಿ ಬಹಿರಂಗವಾಗಿದೆ ಎನ್ನಲಾಗಿದ್ದು, ಸಾವಿಗೂ ಮುನ್ನ ವಿಡಿಯೋ ಕಾಲ್​​ನಲ್ಲಿ ಇಬ್ಬರು ಮಾತನಾಡಿದ್ದರು ಎಂಬುದೂ ಗೊತ್ತಾಗಿದೆ.

ಇದನ್ನೂ ಓದಿ: ಸುದೀಪ್ ಆತ್ಮಹತ್ಯೆ ಪ್ರಕರಣ; ಪತಿ ಸಾವಿಗೆ ಕಾರಣ ಬಿಚ್ಚಿಟ್ಟ ಉದ್ಯಮಿ ಪತ್ನಿ ಸೌಮ್ಯಾ

ಆಶಿಕ್​​ ಜೊತೆ ಮಾತನಾಡುವ ವೇಳೆ ಅವಾಚ್ಯ ಶಬ್ದಗಳಿಂದ ಯುವತಿ ನಿಂದಿಸಿದ್ದು, ಇದರಿಂದ ಆಶಿಕ್​​ ಮಾನಸಿಕವಾಗಿ ನೊಂದು ಅದೇ ದಿನ ರಾತ್ರಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವತಿ ಪ್ರೀತಿಯ ನಾಟಕವಾಡಿ ಹಲವಾರು ಉಡುಗೊರೆ ಪಡೆದು ಖರ್ಚು ವೆಚ್ಚ ಮಾಡಿಸಿದ್ದಲ್ಲದೆ, ಮಾನಸಿಕವಾಗಿಯೂ ಆಶಿಕ್​​ಗೆ ಹಿಂಸೆ ನೀಡಿದ ಆರೋಪವೀಗ ಕೇಳಿಬಂದಿದೆ. ಹೀಗಾಗಿ ಯುವತಿ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯುವಕನ ತಂದೆ ನೀಡಿದ್ದ ದೂರಿನ ಅನ್ವಯ ಕಾವೂರು ಠಾಣೆ ಪೊಲೀಸರು BNS 108, 352,351(3),3(5) ಸೆಕ್ಷನ್ ಅಡಿ ಪ್ರಕರಣ ದಾಖಲು ಮಾಡಿಕೊಂಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಪ್ಪಾಜಿ ಇಲ್ಲದೇ 20 ವರ್ಷ ಆಗಿದೆ ಅಂತ ನಂಬೋಕೆ ಆಗಲ್ಲ: ರಾಘವೇಂದ್ರ ರಾಜ್​ಕುಮಾರ್

ಮೇರುನಟ ಡಾ. ರಾಜ್​ಕುಮಾರ್ ಅವರ ಪುಣ್ಯಸ್ಮರಣೆ (Death Anniversary) ಪ್ರಯುಕ್ತ ಇಂದು (ಏಪ್ರಿಲ್ 12) ಕುಟುಂಬದವರು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಅಭಿಮಾನಿಗಳು ಕೂಡ ಅಪಾರ ಸಂಖ್ಯೆಯಲ್ಲಿ ಬಂದು ಅಣ್ಣಾವ್ರಿಗೆ ನಮಿಸಿದ್ದಾರೆ. ರಾಜ್​ಕುಮಾರ್ (Dr Rajkumar) ನಿಧನರಾಗಿ 20 ವರ್ಷಗಳು ಕಳೆದಿವೆ. ಆ ಬಗ್ಗೆ ರಾಘವೇಂದ್ರ ರಾಜ್​ಕುಮಾರ್ ಅವರು ಮಾತನಾಡಿದ್ದಾರೆ. ‘20 ವರ್ಷ ಆಯ್ತು ಅಂತ ನಂಬೋಕೆ ಆಗುತ್ತಿಲ್ಲ. ಅವರು ನಮ್ಮ ಜೊತೆ ಇನ್ನೂ ಇದ್ದಾರೆ ಅಂತ ಅಂದುಕೊಂಡಿದ್ದೇವೆ. ಅವರು ಸಂಪಾದನೆ ಮಾಡಿದ್ದು ಅಭಿಮಾನಿಗಳನ್ನು ಮಾತ್ರ. ಇಷ್ಟು ವರ್ಷ ಆದರೂ ಜನರು ಬಂದು ನಮಸ್ಕಾರ ಮಾಡುತ್ತಿದ್ದಾರೆ. ಅವರ ಸಿನಿಮಾಗಳಿಗೆ ಸಾವಿಲ್ಲ. ಅವೆಲ್ಲ ಲೈಬ್ರರಿ ಇದ್ದಂತೆ. ಯಾವಾಗಲೂ ಜನರು ನೋಡುತ್ತಾ ಇರುತ್ತಾರೆ. ಎಷ್ಟು ವರ್ಷ ಕಳೆದರೂ ಜನರು ಹೀಗೆ ಬರುತ್ತಾ ಇರುತ್ತಾರೆ. ಇದು ಆ ರೀತಿಯ ಸ್ಥಳ ಆಗಿದೆ’ ಎಂದು ರಾಘವೇಂದ್ರ ರಾಜ್​ಕುಮಾರ್ (Raghavendra Rajkumar) ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದೇವಸ್ಥಾನದೊಳಗೆ ಹಣ ಕದ್ದು ಅಲ್ಲೇ ನಿದ್ರೆಗೆ ಜಾರಿದ ಕಳ್ಳ

ಚೆನ್ನೈ, ಏಪ್ರಿಲ್ 12: ತಮಿಳುನಾಡಿನ ಅಂಬೂರಿನ ಕುಡಪ್ಪನಮೂಡಿನಲ್ಲಿರುವ ಕುಳುವಲ್ವತ್ತಂ ಶ್ರೀ ಭಗತಿ ದೇವಸ್ಥಾನ(Temple)ದಲ್ಲಿ ಶನಿವಾರ ಬೆಳಗ್ಗೆ ಒಂದು ವಿಚಿತ್ರ ದೃಶ್ಯ ಕಂಡುಬಂದಿದೆ. ದೇವಸ್ಥಾನದ ಕಚೇರಿಗೆ ಕನ್ನ ಹಾಕಿ ಹಣ ಕದ್ದ ಕಳ್ಳನೊಬ್ಬ, ಅಲ್ಲಿಂದ ಪರಾರಿಯಾಗುವ ಬದಲು ಸುಸ್ತಾಗಿ ಅಲ್ಲೇ ಗಾಢ ನಿದ್ರೆಗೆ ಜಾರಿದ್ದ. ದಿನದಂತೆ ಶನಿವಾರ ಬೆಳಗ್ಗೆ 5.30ಕ್ಕೆ ದೇವಸ್ಥಾನದ ಸಮಿತಿ ಸದಸ್ಯರು ಕಚೇರಿಗೆ ಬಂದಾಗ, ಬಾಗಿಲು ಮುರಿದಿರುವುದನ್ನು ಕಂಡು ಆತಂಕಕ್ಕೊಳಗಾದರು. ಯಾವುದೋ ದೊಡ್ಡ ಕಳ್ಳತನವಾಗಿದೆ ಎಂದು ಒಳಗೆ ಹೋಗಿ ನೋಡಿದವರಿಗೆ ಆಶ್ಚರ್ಯ ಕಾದಿತ್ತು. ಕಚೇರಿಯ ಹಣದ ಪೆಟ್ಟಿಗೆಯಿಂದ ನಗದು ಮಾಯವಾಗಿತ್ತು, ಆದರೆ ಕಳ್ಳ ಮಾತ್ರ ಪಕ್ಕದಲ್ಲೇ ಅತ್ಯಂತ ಆರಾಮವಾಗಿ ಗೊರಕೆ ಹೊಡೆಯುತ್ತಾ ಮಲಗಿದ್ದ.

ಪೊಲೀಸರ ತನಿಖೆಯ ಪ್ರಕಾರ, ಬಂಧಿತ ಆರೋಪಿಯನ್ನು ತಮಿಳುನಾಡು ಮೂಲದ ಸೆಂಥಿಲ್ (40) ಎಂದು ಗುರುತಿಸಲಾಗಿದೆ. ಈತ ಹಳೇ ಕಳ್ಳನಾಗಿದ್ದು, ಈಗಾಗಲೇ ಹಲವಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ನಡೆದಿದ್ದು ಹೇಗೆ?
ಶುಕ್ರವಾರ ತಡರಾತ್ರಿ ದೇವಸ್ಥಾನದ ಕಚೇರಿಯ ಬಾಗಿಲು ಒಡೆದು ಒಳನುಗ್ಗಿದ ಸೆಂಥಿಲ್, ಅಲ್ಲಿದ್ದ 8,500 ರೂಪಾಯಿ ನಗದನ್ನು ಕದ್ದಿದ್ದಾನೆ. ಕಳ್ಳತನದ ನಂತರ ಅಲ್ಲಿಂದ ಓಡಿಹೋಗುವ ಬದಲು, ಬಹುಶಃ ಹಗಲಿಡೀ ಅಲೆದಾಡಿ ಸುಸ್ತಾಗಿದ್ದ ಸೆಂಥಿಲ್‌ಗೆ ಆ ತಂಪಾದ ಕಚೇರಿಯ ಒಳಗೆ ಕಣ್ಣು ಮುಚ್ಚಿದ ತಕ್ಷಣ ನಿದ್ರೆ ಹತ್ತಿದೆ.

ಮತ್ತಷ್ಟು ಓದಿ: ಈ ದೇವಸ್ಥಾನದಲ್ಲಿ ಪ್ರಸಾದವಾಗಿ ನೂಡಲ್ಸ್, ಪಿಜ್ಜಾ ಕೊಡ್ತಾರೆ!

ಬೆಳಗ್ಗೆ ದೇವಸ್ಥಾನದ ಸಿಬ್ಬಂದಿ ಬರುವವರೆಗೂ ಈತ ತಾನು ಕದ್ದ ಹಣದ ಮೇಲೆ ಕೈಯಿಟ್ಟುಕೊಂಡು ಗಾಢ ನಿದ್ರೆಯಲ್ಲೇ ಇದ್ದ. ದೇವಸ್ಥಾನದ ಸಿಬ್ಬಂದಿ ತಕ್ಷಣ ವೆಲ್ಲರಡ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ನಿದ್ರೆಯಲ್ಲಿದ್ದ ಸೆಂಥಿಲ್‌ನನ್ನು ಎಬ್ಬಿಸಿ ಕೈಕೋಳ ತೊಡಿಸಿದ್ದಾರೆ. ಕದ್ದ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

“ಮಾಡಿದ್ದುಣ್ಣೋ ಮಹಾರಾಯ” ಎನ್ನುವಂತೆ, ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಸೆಂಥಿಲ್ ತಾನು ಎಸ್ಕೇಪ್ ಆಗುವ ಪ್ಲಾನ್ ಮರೆತು ನಿದ್ರೆಗೆ ಜಾರಿದ್ದು ಈಗ ಅಂಬೂರಿನಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ. ಪೊಲೀಸರ ಪಾಲಿಗೆ ಇದು ಅತ್ಯಂತ ಸುಲಭವಾದ ಇನ್ವೆಸ್ಟಿಗೇಷನ್ ಎನಿಸಿಕೊಂಡಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮೈದಾನಕ್ಕಿಳಿಯದಿದ್ದರೂ ನಿತೀಶ್ ರಾಣಾಗೆ ಬಿತ್ತು ಭಾರೀ ದಂಡ..!

IPL 2026: ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧದ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡದ ಆಟಗಾರ ನಿತೀಶ್ ರಾಣಾ (Nitish Rana) ಅವರು ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಪಂದ್ಯದ ಸಂಭಾವನೆಯ ಶೇಕಡಾ 25ರಷ್ಟು ದಂಡಕ್ಕೆ ಗುರಿಯಾಗಿದ್ದಾರೆ. ಇದರೊಂದಿಗೆ ಅವರಿಗೆ ಒಂದು ‘ಡಿಮೆರಿಟ್’ ಪಾಯಿಂಟ್ ಕೂಡ ನೀಡಲಾಗಿದೆ. ಕುತೂಹಲಕಾರಿ ವಿಷಯ ಎಂದರೆ ಈ ಪಂದ್ಯದಲ್ಲಿ ನಿತೀಶ್ ರಾಣಾ ಕಣಕ್ಕಿಳಿದಿರಲಿಲ್ಲ ಎಂಬುದು.

ಏಪ್ರಿಲ್ 11, 2026 ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 18ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದ ವೇಳೆ ನಿತೀಶ್ ರಾಣಾ ಲೈನ್ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದರು.

ಪಂದ್ಯದ ವೇಳೆ ಡೆಲ್ಲಿ ಬ್ಯಾಟರ್ ಟ್ರಿಸ್ಟನ್ ಸ್ಟಬ್ಸ್ ಅವರ ಗ್ಲೌಸ್ ಬದಲಾಯಿಸಲು ಮಾಡಿದ ಮನವಿಯನ್ನು ಅಂಪೈರ್ ತಿರಸ್ಕರಿಸಿದ್ದರು. ಈ ಸಂದರ್ಭದಲ್ಲಿ ಇಂಪ್ಯಾಕ್ಟ್ ಸಬ್‌ಸ್ಟಿಟ್ಯೂಟ್ ಆಗಿದ್ದ ನಿತೀಶ್ ರಾಣಾ, ಮೈದಾನದ ಹೊರಗಿನಿಂದ ನಾಲ್ಕನೇ ಅಂಪೈರ್ ಜೊತೆ ತೀವ್ರ ವಾಗ್ವಾದಕ್ಕಿಳಿದರು.

ಈ ವೇಳೆ ಅವರು ಅಸಭ್ಯ ಪದಗಳನ್ನು ಬಳಸಿದ್ದಾರೆ ಎಂಬುದು ಸಾಬೀತಾಗಿದೆ. ಇದು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.3 ರ ಅಡಿಯಲ್ಲಿ ‘ಲೆವೆಲ್ 1’ ಅಪರಾಧವೆಂದು ಪರಿಗಣಿಸಲಾಗಿದೆ.

ಶಿಕ್ಷೆಯ ಪ್ರಮಾಣ:

ನಿತೀಶ್ ರಾಣಾ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಮ್ಯಾಚ್ ರೆಫರಿ ವಿಧಿಸಿದ ಶಿಕ್ಷೆಯನ್ನು ಅಂಗೀಕರಿಸಿದ್ದಾರೆ. ಹೀಗಾಗಿ ಈ ನಿರ್ಧಾರವೇ ಅಂತಿಮವಾಗಿದೆ. ಅದರಂತೆ ಇದೀಗ ನಿತೀಶ್ ರಾಣಾಗೆ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ವಿಧಿಸಲಾಗಿದೆ.

ಇನ್ನು ಈ ಪಂದ್ಯದಲ್ಲಿ ಕೇವಲ ರಾಣಾಗೆ ಮಾತ್ರವಲ್ಲದೆ, ನಿಧಾನಗತಿಯ ಓವರ್ ರೇಟ್ ಕಾರಣಕ್ಕಾಗಿ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಅವರಿಗೂ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ದಂಡದ ಮೊತ್ತ ಎಷ್ಟು?

ನಿತೀಶ್ ರಾಣಾ ಅವರಿಗೆ ವಿಧಿಸಲಾದ ಶೇ. 25ರಷ್ಟು ದಂಡದ ಅಂದಾಜು ಮೊತ್ತ ₹7.5 ಲಕ್ಷ ರೂ.  ಐಪಿಎಲ್ ನಿಯಮಗಳ ಪ್ರಕಾರ ಆಟಗಾರರ ದಂಡವನ್ನು ಈ ಕೆಳಗಿನಂತೆ ಲೆಕ್ಕ ಹಾಕಲಾಗುತ್ತದೆ…

  • ನಿತೀಶ್ ರಾಣಾ ಅವರ ಒಟ್ಟು ಸಂಭಾವನೆ: ಐಪಿಎಲ್ 2026ರ ಸೀಸನ್‌ಗಾಗಿ ನಿತೀಶ್ ರಾಣಾ ಅವರ ಸಂಭಾವನೆ ₹4.20 ಕೋಟಿ.
  • ಪ್ರತಿ ಪಂದ್ಯದ ಸಂಭಾವನೆ: ಐಪಿಎಲ್‌ನ ಲೀಗ್ ಹಂತದಲ್ಲಿ ಒಟ್ಟು 14 ಪಂದ್ಯಗಳಿರುತ್ತವೆ. ಆದ್ದರಿಂದ ಒಂದು ಪಂದ್ಯದ ಸಂಭಾವನೆಯು ₹4.20 ಕೋಟಿ / 14 = ₹30 ಲಕ್ಷ ಆಗುತ್ತದೆ.
  • ದಂಡದ ಲೆಕ್ಕಾಚಾರ: ಈ ₹30 ಲಕ್ಷದ ಶೇ. 25ರಷ್ಟು ಅಂದರೆ (30,00,000 * 0.25) = ₹7,50,000.

ಇದನ್ನೂ ಓದಿ: VIDEO: ಚೆನ್ನೈನಲ್ಲಿ ಹೈಡ್ರಾಮಾ: ಅಂಪೈರ್​ ಜೊತೆ ನಿತೀಶ್ ರಾಣಾ ವಾಗ್ವಾದ!

ಒಟ್ಟಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯದೇ ಇದೀಗ ನಿತೀಶ್ ರಾಣಾ ದಂಡದ ಶಿಕ್ದೆಗೆ ಗುರಿಯಾಗಿ ಸುದ್ದಿಯಾಗಿದ್ದಾರೆ.

Source link

ಮದುವೆ ಬಳಿಕ ‘ರಣಬಾಲಿ’ ಚಿತ್ರೀಕರಣಕ್ಕೆ ಬಂದ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ

ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಮದುವೆ ಸಲುವಾಗಿ ಇಷ್ಟು ದಿನ ಬ್ರೇಕ್ ಪಡೆದುಕೊಂಡಿದ್ದರು. ಈಗ ಅವರ ‘ರಣಬಾಲಿ’ (Ranabaali) ಸಿನಿಮಾದ ಚಿತ್ರೀಕರಣಕ್ಕೆ ಮರಳಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ಚಿತ್ರತಂಡದ ಜೊತೆ ಅವರು ತೆಗೆದುಕೊಂಡ ಫೋಟೋ ವೈರಲ್ ಆಗಿದೆ. ವಿವಾಹದ ನಂತರ ಮೊದಲ ಬಾರಿಗೆ ಚಿತ್ರೀಕರಣಕ್ಕೆ ಹಾಜರಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರಿಗೆ ಚಿತ್ರತಂಡದವರು ಅತ್ಯಂತ ಪ್ರೀತಿಯಿಂದ ಸ್ವಾಗತ ಕೋರಿದ್ದಾರೆ.

ಶೂಟಿಂಗ್ ಸೆಟ್‌ನಲ್ಲಿ ವಿಶೇಷವಾಗಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಲಾಗಿದೆ. ಇಡೀ ಚಿತ್ರತಂಡವು ವಿಜಯ್ ಮತ್ತು ರಶ್ಮಿಕಾ ಅವರಿಗೆ ಹೂಗುಚ್ಛ ನೀಡಿ, ಸುಖಿ ದಾಂಪತ್ಯ ಜೀವನಕ್ಕೆ ಶುಭ ಹಾರೈಸಿತು. ‘ಹ್ಯಾಪಿ ಮ್ಯಾರೀಡ್ ಲೈಫ್, ಮಿಸ್ಟರ್ ಆ್ಯಂಡ್ ಮಿಸಸ್ ರಣಬಾಲಿ’ ಎಂದು ಹಾರೈಸಲಾಗಿದೆ. ‘ರಣಬಾಲಿ’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ.

ಈ ಚಿತ್ರವನ್ನು ರಾಹುಲ್ ಸಂಕೃತ್ಯನ್ ನಿರ್ದೇಶಿಸುತ್ತಿದ್ದಾರೆ. ಖ್ಯಾತ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವೀ ಮೇಕರ್ಸ್’ ಬೃಹತ್ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದೆ. ‘ರಣಬಾಲಿ’ ಕೇವಲ ಪ್ರೇಮಕಥೆಯಲ್ಲ. ಇದು 19ನೇ ಶತಮಾನದ ಬ್ರಿಟಿಷ್ ಆಳ್ವಿಕೆಯ ಹಿನ್ನೆಲೆಯಲ್ಲಿ ನಡೆಯುವ ಕಥೆಯಾಗಿದೆ. ವಿಜಯ್ ದೇವರಕೊಂಡ ಅವರು ವೀರ ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜಯಮ್ಮ ಎಂಬ ಪಾತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ.

ಜನ ನಾಯಗನ್ ಲೀಕ್: ದೇವರಕೊಂಡ ಬೇಸರ

ದಳಪತಿ ವಿಜಯ್ ನಟನೆಯ ‘ಜನ ನಾಯಗನ’ ಸಿನಿಮಾ ಲೀಕ್ ಆಗಿದ್ದಕ್ಕೆ ವಿಜಯ್ ದೇವರಕೊಂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಜನ ನಾಯಕನ್ ಚಿತ್ರದ ಲೀಕ್ ವಿಚಾರ ನನಗೆ ತುಂಬಾ ಕೋಪ ತರುತ್ತಿದೆ. ವೃತ್ತಿಜೀವನದ ಆರಂಭದಲ್ಲಿ ಇಂತಹ ಘಟನೆಗಳಿಂದ ಆಗುವ ನೋವು ಮತ್ತು ನಷ್ಟದ ಅನುಭವ ನನಗೇ ಇದೆ. ಇದು ನನ್ನ ವಿಷಯ ಮಾತ್ರವಲ್ಲ, ಸಹನಟರು, ನಿರ್ದೇಶಕರು, ನಿರ್ಮಾಪಕರು ಮತ್ತು ತಮ್ಮ ಕನಸುಗಳನ್ನು ಹೂಡಿಕೆ ಮಾಡಿದ ಅನೇಕ ಜನರ ವಿಚಾರವೂ ಆಗಿದೆ’ ಎಂದು ದೇವರಕೊಂಡ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಮದುವೆ ಬಳಿಕ ಮೊದಲ ಬಾರಿ ತವರಿಗೆ ಬಂದ ರಶ್ಮಿಕಾ: ಮಗಳಿಗೆ ಬಂಗಲೆ ಗಿಫ್ಟ್ ಕೊಟ್ಟ ತಂದೆ

‘ಈ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಬೇಕು ಮತ್ತು ಇದಕ್ಕೆ ಕಾರಣರಾದವರನ್ನು ಪತ್ತೆಹಚ್ಚಬೇಕು. ಹಾಗಾಗದಿದ್ದರೆ ಅದು ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ. ಜನರು ಎಷ್ಟು ಅನಾಸಕ್ತಿ ಹೊಂದಿರಬಹುದು ಮತ್ತು ಇನ್ನೊಬ್ಬರಿಗೆ ಹಾನಿ ಮಾಡಲು ಎಷ್ಟರ ಮಟ್ಟಿಗೆ ಹೋಗುತ್ತಾರೆ ಎಂಬುದನ್ನು ಇದು ಮತ್ತೆ ಮತ್ತೆ ನೆನಪಿಸುತ್ತದೆ’ ಎಂದು ವಿಜಯ್ ದೇವರಕೊಂಡ ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಸದ ರಾಶಿಗೆ ರಸ್ತೆ, ಫುಟ್​ಪಾತ್ ಮಾಯ! ಜಿಬಿಎ ವಿರುದ್ಧ ರೊಚ್ಚಿಗೆದ್ದ ಜನ

ಬೆಂಗಳೂರು, ಏಪ್ರಿಲ್ 12: ನಗರದ ಹಳೆ ಗುರಪ್ಪನಪಾಳ್ಯದ ವಾರ್ಡ್ ನಂಬರ್ 171 ರಲ್ಲಿ ಕಸ ನಿರ್ವಹಣೆಯು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ತಿಂಗಳುಗಟ್ಟಲೆ ಕಸ ಸಂಗ್ರಹವಾಗಿದ್ದು ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳು ಸಂಪೂರ್ಣವಾಗಿ ಮುಚ್ಚಿಹೋಗಿವೆ. ಜಿಬಿಎ ಮತ್ತು ಬೆಂಗಳೂರು ದಕ್ಷಿಣ ನಗರಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಪರಿಸ್ಥಿತಿ ಉದ್ಭವಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.

ಸ್ಥಳೀಯ ನಿವಾಸಿಗಳಾದ ಜಾಕೀರ್ ಹುಸೇನ್ ಅವರ ನೇತೃತ್ವದಲ್ಲಿ ನಾಗರಿಕರು ತಮ್ಮ ಸ್ವಂತ ವೆಚ್ಚದಲ್ಲಿ ಜೆಸಿಬಿ ಕರೆಸಿ ಕಸವನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಕಸದ ರಾಶಿಗಳಿಂದ ಹುಳುಗಳು, ಸೊಳ್ಳೆಗಳ ಹಾವಳಿ ಹೆಚ್ಚಾಗಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಬ್ರ್ಯಾಂಡ್ ಬೆಂಗಳೂರು “ಬ್ಯಾಡ್ ಬೆಂಗಳೂರು” ಆಗುತ್ತಿದ್ದು, ಕಸ ನಿರ್ವಹಣೆಗಾಗಿ ಹಂಚಿಕೆಯಾದ 1400 ಕೋಟಿ ರೂಪಾಯಿಗಳ ಅನುದಾನದ ಸದ್ಬಳಕೆ ಬಗ್ಗೆ ನಾಗರಿಕರು ಪ್ರಶ್ನಿಸಿದ್ದಾರೆ. ನಗರ ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಈ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Weekly Horoscope: ನಿಮ್ಮ ರಾಶಿಗನುಗುಣವಾಗಿ ಏಪ್ರಿಲ್ ಎರಡನೇ ವಾರದ ಭವಿಷ್ಯ ಇಲ್ಲಿ ತಿಳಿದುಕೊಳ್ಳಿ

ಇದು 2026ರ ಏಪ್ರಿಲ್ ನ ಎರಡನೇ ವಾರವಾಗಿದ್ದು, ಅಭಿವೃದ್ಧಿಗೆ ಸಹಕಾರ, ಸ್ಪರ್ಧಾತ್ಮಕ ಚಿಂತೆ, ಅತ್ಯಾಪ್ತರ ಜೊತೆ ಕಲಹ, ಕ್ರಿಯಾತ್ಮಕ ಕಾರ್ಯಕ್ಕೆ ಒತ್ತು, ಅನೇಕ ದಿನದ ದುಃಖಕ್ಕೆ ವಿರಾಮ ಇವೆಲ್ಲ ಈ ವಾರದಲ್ಲಿ ಆಗಲಿದೆ.

​ಮೇಷ:

ಈ ವಾರ ನಿಮಗೆ ಮಿಶ್ರಫಲವಿದೆ. ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಬರಲಿವೆ. ಹಣಕಾಸಿನ ಹರಿವು ಸಾಧಾರಣವಾಗಿದ್ದರೂ, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಆರೋಗ್ಯದ ಕಡೆ ಗಮನವಿರಲಿ, ಹಿರಿಯರ ಸಲಹೆ ಪಡೆದು ಮುನ್ನಡೆಯಿರಿ.

​ವೃಷಭ:

ಆರ್ಥಿಕವಾಗಿ ಅಭಿವೃದ್ಧಿ ಕಾಣುವಿರಿ. ಸ್ಥಿರಾಸ್ತಿ ಖರೀದಿ ಅಥವಾ ಹೂಡಿಕೆಗೆ ಸಕಾಲ. ಕುಟುಂಬದಲ್ಲಿ ಶುಭ ಕಾರ್ಯಗಳು ಜರುಗಲಿವೆ. ನಿಮ್ಮ ತಾಳ್ಮೆಯು ಸಂಕೀರ್ಣ ಸಮಸ್ಯೆಗಳನ್ನು ಬಗೆಹರಿಸಲು ಸಹಕಾರಿ. ಸಹೋದ್ಯೋಗಿಗಳ ಸಹಕಾರ ಸಿಗಲಿದೆ.

​ಮಿಥುನ:

ಈ ವಾರ ದೂರದ ಪ್ರಯಾಣದ ಯೋಗವಿದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಮಾತಿನ ಮೇಲೆ ಹಿಡಿತವಿರಲಿ, ಇಲ್ಲವಾದರೆ ಸಂಬಂಧಗಳಲ್ಲಿ ಬಿರುಕು ಬರಬಹುದು. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಹೆಚ್ಚಿನ ಶ್ರಮ ವಹಿಸಬೇಕಾದ ಅಗತ್ಯವಿದೆ.

​ಕರ್ಕಾಟಕ:

ಮಾನಸಿಕ ನೆಮ್ಮದಿಗಾಗಿ ದೇವತಾರಾಧನೆ ಮಾಡಿ. ವ್ಯಾಪಾರದಲ್ಲಿ ಲಾಭ ಕಂಡುಬಂದರೂ ಶತ್ರುಗಳ ಕಾಟವಿರಬಹುದು. ಮನೆಯಲ್ಲಿ ಸಂತಸದ ವಾತಾವರಣವಿರುತ್ತದೆ. ನಿಮ್ಮ ದಕ್ಷತೆಗೆ ಮೇಲಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಲಿದೆ.

​ಸಿಂಹ:

ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಮಾಜದಲ್ಲಿ ಗೌರವ ಲಭಿಸುತ್ತದೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರ ಬೇಡ. ಹಳೆಯ ಮಿತ್ರರ ಭೇಟಿಯಿಂದ ಮನಸ್ಸು ಹಗುರವಾಗಲಿದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

​ಕನ್ಯಾ:

ಈ ವಾರ ಅನಿರೀಕ್ಷಿತ ಧನಲಾಭವಾಗಲಿದೆ. ನೂತನ ಕಾರ್ಯಾರಂಭಕ್ಕೆ ಇದು ಸಕಾಲ. ನೆರೆ ಹೊರೆಯವರೊಂದಿಗೆ ಸಾಮರಸ್ಯದಿಂದ ವರ್ತಿಸಿ. ಆಧ್ಯಾತ್ಮಿಕ ಚಿಂತನೆಗಳು ನಿಮ್ಮನ್ನು ಸನ್ಮಾರ್ಗದಲ್ಲಿ ನಡೆಸಲಿವೆ. ಪ್ರಯಾಣದ ವೇಳೆ ಜಾಗರೂಕರಾಗಿರಿ.

​ತುಲಾ:

ವೈವಾಹಿಕ ಜೀವನದಲ್ಲಿ ಮಧುರತೆ ಇರಲಿದೆ. ಕೃಷಿಕರಿಗೆ ಉತ್ತಮ ಆದಾಯದ ನಿರೀಕ್ಷೆಯಿದೆ. ಭೂಮಿ ಸಂಬಂಧಿತ ವಿವಾದಗಳು ಬಗೆಹರಿಯಲಿವೆ. ಕಲಾತ್ಮಕ ಕೆಲಸಗಳಲ್ಲಿ ಆಸಕ್ತಿ ಹೆಚ್ಚಲಿದೆ. ಆರ್ಥಿಕ ಸಮತೋಲನ ಕಾಯ್ದುಕೊಳ್ಳುವುದು ಈ ವಾರ ಮುಖ್ಯ.

​ವೃಶ್ಚಿಕ:

ವೃತ್ತಿಜೀವನದಲ್ಲಿ ಸವಾಲುಗಳು ಎದುರಾಗಬಹುದು. ಎದುರಾಳಿಗಳನ್ನು ಧೈರ್ಯದಿಂದ ಎದುರಿಸುವಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಮಕ್ಕಳ ಸಾಧನೆಯಿಂದ ಹೆಮ್ಮೆ ಪಡುವಿರಿ. ಹೂಡಿಕೆಯ ವಿಷಯದಲ್ಲಿ ಅನುಭವಿಗಳ ಮಾರ್ಗದರ್ಶನ ಬಹಳ ಅವಶ್ಯಕ.

​ಧನುಸ್ಸು:

ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ದೂರದ ಸಂಬಂಧಿಗಳಿಂದ ಶುಭ ವಾರ್ತೆ ಕೇಳುವಿರಿ. ಸಂಶೋಧನಾ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ. ಕೋಪವನ್ನು ನಿಯಂತ್ರಿಸಿ, ಸೌಮ್ಯವಾಗಿ ವರ್ತಿಸುವುದು ವೃತ್ತಿಯಲ್ಲಿ ಯಶಸ್ಸು ತಂದುಕೊಡಲಿದೆ.

​ಮಕರ:

ವೃತ್ತಿರಂಗದಲ್ಲಿ ಒತ್ತಡವಿದ್ದರೂ ಕಾರ್ಯಸಿದ್ಧಿಯಾಗಲಿದೆ. ವಾಹನ ಚಾಲನೆಯಲ್ಲಿ ಎಚ್ಚರವಿರಲಿ. ತಂದೆಯ ಕಡೆಯಿಂದ ಆಸ್ತಿ ಲಾಭವಾಗುವ ಸಾಧ್ಯತೆ ಇದೆ. ಸೃಜನಶೀಲ ಕೆಲಸಗಳಿಗೆ ಈ ವಾರ ಪೂರಕವಾಗಿದ್ದು, ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಬಹುದು.

​ಕುಂಭ:

ಆತ್ಮೀಯರೊಂದಿಗೆ ಸಮಯ ಕಳೆಯುವಿರಿ. ವಾಣಿಜ್ಯ ವ್ಯವಹಾರಗಳಲ್ಲಿ ಲಾಭದ ಪ್ರಮಾಣ ಹೆಚ್ಚಾಗಲಿದೆ. ಹೊಸ ಬಟ್ಟೆ ಅಥವಾ ಆಭರಣ ಖರೀದಿಸುವ ಯೋಗವಿದೆ. ದೈಹಿಕ ವ್ಯಾಯಾಮಕ್ಕೆ ಆದ್ಯತೆ ನೀಡಿ, ಮಾನಸಿಕ ನೆಮ್ಮದಿಗೆ ಯೋಗಾಭ್ಯಾಸ ಮಾಡಿ.

​ಮೀನ:

ಅಂದುಕೊಂಡ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿವೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದ್ದು, ಸಾಲದ ಹೊರೆ ಕಡಿಮೆಯಾಗಲಿದೆ. ಪ್ರೇಮ ಜೀವನದಲ್ಲಿ ಹೊಸ ತಿರುವು ಬರಬಹುದು. ಸಂಗಾತಿಯ ಪ್ರೀತಿ ಮತ್ತು ಬೆಂಬಲ ಸದಾ ನಿಮ್ಮೊಂದಿಗಿರಲಿದೆ.

– ಲೋಹಿತ ಹೆಬ್ಬಾರ್ – 8762924271 (what’s app only)

Source link

Video: ನವಜಾತ ಶಿಶುವಿನ ಜತೆ ಹೈಕೋರ್ಟ್​ನ 5ನೇ ಮಹಡಿಯಿಂದ ಹಾರಲು ಮಹಿಳೆ ಯತ್ನ

ಲಕ್ನೋ, ಏಪ್ರಿಲ್ 12: ವಿಚ್ಛೇದನ ಪ್ರಕರಣದಿಂದ ಬೇಸತ್ತ ಮಹಿಳೆಯೊಬ್ಬರು ತನ್ನ ನವಜಾತ ಶಿಶುವಿನ ಜತೆ ಲಕ್ನೋ ಹೈಕೋರ್ಟ್​​ನ 5ನೇ ಮಹಡಿಯಿಂದ ಹಾರಲು ಯತ್ನಿಸಿರುವ ಘಟನೆ ನಡೆದಿದೆ. ಎಸ್‌ಐ ಧೈರ್ಯದಿಂದ ಮಧ್ಯಪ್ರವೇಶಿಸಿ ಎರಡೂ ಜೀವಗಳನ್ನು ಉಳಿಸಿದ್ದಾರೆ. ಮಹಿಳೆಯೊಬ್ಬರು ಕೋರ್ಟ್​​ನ ಐದನೇ ಮಹಡಿಯ ತುದಿಯಲ್ಲಿ ಮಗುವನ್ನು ಕೈಯಲ್ಲಿ ಎತ್ತಿಕೊಂಡು ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಎಲ್ಲರೂ ಮನವೊಲಿಸಲು ಯತ್ನಿಸಿರುವುದನ್ನು ನೊಡಬಹುದು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪ್ರಯಾಣಿಕರೇ ಗಮನಿಸಿ: ತೀರ್ಥಹಳ್ಳಿ, ಕುಂದಾಪುರ ರಾಜ್ಯ ಹೆದ್ದಾರಿ ಬಂದ್​​; ಬದಲಿ ಮಾರ್ಗಗಳ ಮಾಹಿತಿ ಇಲ್ಲಿದೆ

ಶಿವಮೊಗ್ಗ, ಏಪ್ರಿಲ್​​ 12: ಹುಲಿಕಲ್ ಘಾಟಿಯಲ್ಲಿ ಸುಮಾರು 5 ಅಡಿ ಅಗಲದವರೆಗೆ ಮತ್ತೊಮ್ಮೆ ಭೂಕುಸಿತ ಉಂಟಾದ ಹಿನ್ನೆಲೆ ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ. ಕಾಂಕ್ರೀಟ್ ರಸ್ತೆಯಲ್ಲಿ ಅಲ್ಲಲ್ಲಿ ಬಿರುಕುಗಳು ಕಂಡು ಬಂದ ಹಿನ್ನೆಲೆ ಸುರಕ್ಷತಾ ದೃಷ್ಟಿಯಿಂದ ರಸ್ತೆಯು ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಘಾಟ್​​ನ ಹೇರ್‌ಪಿನ್ ತಿರುವಿನಲ್ಲಿ ರಕ್ಷಣಾತ್ಮಕ ಕಾಮಗಾರಿಯೂ ಪೂರ್ಣಗೊಳ್ಳುವವರೆಗೆ ಈ ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಎಲ್ಲಾ ಮಾದರಿಯ ವಾಹನಗಳ ಸಂಚಾರಕ್ಕೂ ಇದು ಅನ್ವಯವಾಗಲಿದೆ. ಪರ್ಯಾಯ ಮಾರ್ಗಗಳಲ್ಲಿ ತಾತ್ಕಾಲಿಕವಾಗಿ ಸಂಚರಿಸಲು ಸೂಚಿಸಲಾಗಿದೆ.

ಪರ್ಯಾಯ ಮಾರ್ಗಗಳು

  • ತೀರ್ಥಹಳ್ಳಿ ಕಡೆಯಿಂದ ಕುಂದಾಪುರ ಕಡೆಗೆ ತೆರಳುವ ವಾಹನಗಳು, ತೀರ್ಥಹಳ್ಳಿ-ರಾವೆ-ಕಾನುಗೋಡು-ನಗರ-ಕೊಲ್ಲೂರು ಮೂಲಕ ಕುಂದಾಪುರಕ್ಕೆ ತೆರಳಬೇಕು.
  • ತೀರ್ಥಹಳ್ಳಿಯಿಂದ ಯಡೂರು, ಹುಲಿಕಲ್​​ ಮಾರ್ಗವಾಗಿ ತೆರಳುವವರು ತೀರ್ಥಹಳ್ಳಿ-ಯಡೂರು, ಮಾಸ್ತಿಕಟ್ಟೆ- ಕಾನುಗೋಡು-ನಗರ-ಕೊಲ್ಲೂರು ಮೂಲಕ ಕುಂದಾಪುರಕ್ಕೆ ಸಂಚರಿಸಬೇಕು.
  • ಶಿವಮೊಗ್ಗ/ಸಾಗರ ಕಡೆಯಿಂದ ಹೊಸನಗರ ಮೂಲಕ ತೆರಳುವವರು ಶಿವಮೊಗ್ಗ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳಿ ಭಟ್ಕಳ-ಬೈಂದೂರು ಮಾರ್ಗವಾಗಿ ಕುಂದಾಪುರಕ್ಕೆ ತೆರಳಬೇಕು.

ಇದನ್ನೂ ಓದಿ: ಗಂಡನ ಮನೆಯವರ ಕಿರುಕುಳಕ್ಕೆ ಜೀವಬಿಟ್ಟ 4 ತಿಂಗಳ ಗರ್ಭಿಣಿ: ಪತಿ ಮನೆಯವರಿಂದಲೇ ಕೊಲೆಯೆಂದು ಪೋಷಕರ ಆರೋಪ

ರಸ್ತೆ ಕಾಮಗಾರಿ ವೇಳೆ ಗುಡ್ಡ ಕುಸಿದು ಮೃತಪಟ್ಟಿದ್ದ ಮೂವರು

ಹುಲಿಕಲ್ ಘಾಟ್​ನಲ್ಲಿ ರಸ್ತೆ ಕಾಮಗಾರಿ ವೇಳೆ ಗುಡ್ಡ ಕುಸಿದು ಓರ್ವ ಹೊರ ರಾಜ್ಯದ ಕಾರ್ಮಿಕ ಸೇರಿ ಮೂವರು ಮೃತಪಟ್ಟಿರುವ ಘಟನೆ ಮೊನ್ನೆ ಮೊನ್ನೆಯಷ್ಟೇ ನಡೆದಿತ್ತು. ಅವಘಡದಲ್ಲಿ ರಾಘವೇಂದ್ರ(37), ರಾಜು(30) ಮತ್ತು ಶಬ್ಬೀರ್(40) ಮೃತಪಟ್ಟಿದ್ದರು. ಸುಮಂತ ಮತ್ತು ಪರಮೇಶ್​ ಸೇರಿ ನಾಲ್ವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ರಸ್ತೆಯ ಕೆಲವೆಡೆ ಅಪಾಯದ ಮುನ್ಸೂಚನೆ ಸಿಕ್ಕ ಹಿನ್ನೆಲೆ ಜಿಲ್ಲಅಧಿಕಾರಿಗಳು ಮಹತ್ವದ ಆದೇಶ ಹೊರಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಫೋನ್ ಎತ್ಕೊಂಡು ಹೋಗ್ಬಿಡು: ಟಿಮ್ ಡೇವಿಡ್ ವಿಡಿಯೋ ವೈರಲ್

IPL 2026: ಐಪಿಎಲ್ ಎಂದರೆ ಕೇವಲ ಸಿಕ್ಸರ್-ಬೌಂಡರಿಗಳ ಅಬ್ಬರವಲ್ಲ, ಅಲ್ಲಿ ಆಟಗಾರರ ನಡವಳಿಕೆಯೂ ಅಷ್ಟೇ ಮುಖ್ಯವಾಗುತ್ತದೆ. ಪ್ರಸಕ್ತ 2026ರ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ಸ್ಫೋಟಕ ಬ್ಯಾಟರ್ ಟಿಮ್ ಡೇವಿಡ್, ತಮ್ಮ ಬ್ಯಾಟಿಂಗ್ ಮಾತ್ರವಲ್ಲದೆ ತಮ್ಮ ಸಮಾಧಾನದ ಗುಣದಿಂದಲೂ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಇತ್ತೀಚಿನ ಪಂದ್ಯವೊಂದರ ಮುಕ್ತಾಯದ ನಂತರ, ಟಿಮ್ ಡೇವಿಡ್ ಮೈದಾನದಿಂದ ಹೊರಹೋಗುತ್ತಿದ್ದಾಗ ಅಭಿಮಾನಿಯೊಬ್ಬರು ಅತೀ ಉತ್ಸಾಹದಿಂದ ಅವರ ಬಳಿ ಬಂದು ಸೆಲ್ಫಿಗಾಗಿ ವಿನಂತಿಸಿದರು. ಈ ವೇಳೆ ಆ ಅಭಿಮಾನಿ ಡೇವಿಡ್ ಅವರಿಗೆ ತೀರಾ ಹತ್ತಿರ ಬಂದಿದ್ದರೂ, ಅವರು ಕಿರಿಕಿರಿ ಮಾಡಿಕೊಳ್ಳದೆ ಬಹಳ ಶಾಂತವಾಗಿ ಆತನ ಮೊಬೈಲ್ ಫೋನ್ ಪಡೆದು, ಅದನ್ನು ಹಿಂತಿರುಗಿಸಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, “ನಿಜವಾದ ಕ್ರೀಡಾ ಮನೋಭಾವ” ಎಂದು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಮೈದಾನದಲ್ಲಿ ದೈತ್ಯ ಸಿಕ್ಸರ್‌ಗಳನ್ನು ಹೊಡೆಯುವ ಈ ಆಟಗಾರ, ಮೈದಾನದ ಹೊರಗೆ ಕಿರಿ ಕಿರಿ ಅನುಭವಿಸಿದರೂ ಎಷ್ಟೊಂದು ವಿನಯವಾಗಿ ವರ್ತಿಸಿದ್ದಾರೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸದ್ಯ ಮುಂಬೈನಲ್ಲಿರುವ ಟಿಮ್ ಡೇವಿಡ್ ಅ್ಯಂಡ್ ಆರ್​ಸಿಬಿ ಪಡೆ ಇಂದು (ಏ.12) ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಆರ್​ಸಿಬಿ ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದೆ.

 

Source link