ಐಪಿಎಲ್ 2026 ರ 15 ನೇ ಪಂದ್ಯವು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಲಿದೆ. ಕೋಲ್ಕತ್ತಾ ತಮ್ಮ ತವರು ಮೈದಾನವಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಆಡಲಿದ್ದು, ಅಲ್ಲಿ ತನ್ನ ಮೊದಲ ಗೆಲುವನ್ನು ಎದುರು ನೋಡುತ್ತಿದೆ. ಏತನ್ಮಧ್ಯೆ, ಹಿಂದಿನ ಪಂದ್ಯದಲ್ಲಿ ಜಯ ಸಾಧಿಸಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡ ತನ್ನ ಅಜೇಯ ಓಟವನ್ನು ಮುಂದುವರೆಸುವ ಇರಾದೆಯಲ್ಲಿದೆ.
ಈ ಬಾರಿಯ ಐಪಿಎಲ್ನಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿದ್ದ ಶುಭ್ಮನ್ ಗಿಲ್ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ತಂಡವು ತನ್ನ ಗೆಲುವಿನ ಖಾತೆ ತೆರೆದಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯವನ್ನು 1 ರನ್ಗಳಿಂದ ರೋಚಕವಾಗಿ ಗೆದ್ದುಕೊಂಡ ಗುಜರಾತ್ ತಂಡಕ್ಕೆ ಎರಡು ಅಂಕಗಳು ಸಿಕ್ಕಿವೆ. ಇದರಿಂದ ಗುಜರಾತ್ ತಂಡ ಪಾಯಿಂಟ್ ಟೇಬಲ್ನಲ್ಲಿ ತಮ್ಮ ಖಾತೆಯನ್ನು ತೆರೆದಿದೆ.
ಆದಾಗ್ಯೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ ನಿಧಾನಗತಿಯ ಓವರ್ ನಿಯಮವನ್ನು ಗುಜರಾತ್ ಟೈಟಾನ್ಸ್ ತಂಡ ಉಲ್ಲಂಘಿಸಿದೆ. ಹೀಗಾಗಿ ತಂಡದ ನಾಯಕ ಶುಭ್ಮನ್ ಗಿಲ್ಗೆ 12 ಲಕ್ಷ ರೂಪಾಯಿ ದಂಡ ವಿಧಿಸಿ ಬಿಸಿಸಿಐ ಆದೇಶ ಹೊರಡಿಸಿದೆ.
ಐಪಿಎಲ್ 2026 ರ 14 ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ನಿಧಾನಗತಿಯ ಓವರ್ ದರಕ್ಕಾಗಿ ಗುಜರಾತ್ ನಾಯಕ ಗಿಲ್ ಅವರಿಗೆ ದಂಡ ವಿಧಿಸಲಾಗಿದೆ. ಇದು ಪ್ರಸಕ್ತ ಸೀಸನ್ನಲ್ಲಿ ತಂಡವು ಐಪಿಎಲ್ ನೀತಿ ಸಂಹಿತೆ 2.22 ಅನ್ನು ಉಲ್ಲಂಘಿಸಿದ ಮೊದಲ ಪ್ರಕರಣವಾಗಿದ್ದು, ಇದರ ಪರಿಣಾಮವಾಗಿ ದಂಡ ವಿಧಿಸಲಾಗಿದೆ. ಗಿಲ್ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ರೀತಿಯಾಗಿ ಬಿಸಿಸಿಐನಿಂದ ದಂಡನೆಗೆ ಒಳಗಾಗುತ್ತಿರುವ ಮೊದಲ ನಾಯಕ ಶುಭ್ಮನ್ ಗಿಲ್ ಅಲ್ಲ. ಗಿಲ್ಗೂ ಮೊದಲು ಶ್ರೇಯಸ್ ಅಯ್ಯರ್ ಎರಡು ಬಾರಿ ಈ ಅಪರಾಧ ಮಾಡಿದ್ದಾರೆ. ಮೊದಲ ಬಾರಿಗೆ ಶ್ರೇಯಸ್ ಅಯ್ಯರ್ ಗೆ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಎರಡನೇ ಬಾರಿ ಅದನ್ನು 25 ಲಕ್ಷ ರೂ.ಗೆ ಹೆಚ್ಚಿಸಲಾಯಿತು. ಅಯ್ಯರ್ ಮತ್ತೆ ಈ ನಿಯಮ ಮುರಿದರೆ ಅವರನ್ನು ಒಂದು ಪಂದ್ಯದಿಂದ ಹೊರಗಿಡಲಾಗುತ್ತದೆ.
ಇನ್ನು ಈ ಪಂದ್ಯದ ವಿಚಾರಕ್ಕೆ ಬರುವುದಾದರೆ.. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ಶುಭಮನ್ ಗಿಲ್, ಜೋಸ್ ಬಟ್ಲರ್ ಮತ್ತು ವಾಷಿಂಗ್ಟನ್ ಸುಂದರ್ ಅವರ ಅರ್ಧಶತಕಗಳ ಸಹಾಯದಿಂದ 210 ರನ್ಗಳ ಬೃಹತ್ ಸ್ಕೋರ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಎಸೆತದಲ್ಲಿ 1 ರನ್ಗಳ ವೀರೋಚಿತ ಸೋಲು ಅನುಭವಿಸಿತು.
ಜೀವನದಲ್ಲಿ ಯಶಸ್ವಿಯಾಗಲು (success), ಯಶಸ್ವಿ ಜೀವನವನ್ನು ನಡೆಸಲು ನಾವು ಮಾಡುವ ಪ್ರತಿಯೊಂದರ ಬಗ್ಗೆಯೂ ನೂರು ಬಾರಿ ಯೋಚಿಸಬೇಕು, ಸಾವಿರ ಬಾರಿ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಒಂದು ವೇಳೆ ಆತುರದಲ್ಲಿ ಮಾಡುವ ಯಾವುದೇ ಕೆಲಸವಾದರೂ ಸರಿ, ಅದು ನಮ್ಮ ಭವಿಷ್ಯವನ್ನೇ ಹಾಳು ಮಾಡುತ್ತದೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ. ಅದರಲ್ಲೂ ನಾವು ಈ ಕೆಲವು ಕೆಲಸಗಳನ್ನು ಆತುರದಿಂದ ಮತ್ತು ಯೋಚಿಸದೆ ಮಾಡಿದರೆ, ಭವಿಷ್ಯದಲ್ಲಿ ಸಾಕಷ್ಟು ಕಷ್ಟ ನಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಹಾಗಿದ್ರೆ ಯಾವ ಕೆಲಸಗಳನ್ನು ಮಾಡುವ ಮುನ್ನ ನೂರು ಬಾರಿ ಯೋಚಿಸಬೇಕು ಎಂಬುದನ್ನು ನೋಡೋಣ ಬನ್ನಿ.
ಈ ಕೆಲಸಗಳನ್ನು ಮಾಡೋ ಮುನ್ನ ಇರಲಿ ಎಚ್ಚರ:
ಮಾತನಾಡುವ ಮೊದಲು ಯೋಚಿಸಿ: ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬ ಮಾತಿನಂತೆ, ಒಮ್ಮೆ ಮಾತನಾಡಿದ ಮಾತನ್ನು ಹಿಂದಕ್ಕೆ ಪಡೆಯಲು ಸಾಧ್ಯವೇ ಇಲ್ಲ. ನಾವು ಯೋಚಿಸದೆ ಮಾತನಾಡಿದರೆ, ನಮ್ಮ ಮಾತುಗಳಿಂದ ಇತರರು ನೋಯುತ್ತಾರೆ. ಇದು ಸಂಬಂಧಗಳಿಗೆ ಹಾನಿ ಉಂಟು ಮಾಡಬಹುದು. ಆದ್ದರಿಂದ, ಮಾತನಾಡುವ ಮೊದಲು ನೂರು ಬಾರಿ ಯೋಚಿಸುವುದು ಬಹಳ ಮುಖ್ಯ ಎನ್ನುತ್ತಾರೆ ಚಾಣಕ್ಯ.
ಕೆಟ್ಟ ಸಹವಾಸ ಮಾಡುವ ಮುನ್ನ ಇರಲಿ ಎಚ್ಚರ: ನಾವು ಸಹವಾಸ ಮಾಡುವ ಜನರು ನಮ್ಮ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತಾರೆ. ಕೆಟ್ಟ ಸಹವಾಸವು ನಮ್ಮನ್ನು ದಾರಿ ತಪ್ಪಿಸಬಹುದು, ನಮ್ಮ ಭವಿಷ್ಯವನ್ನೇ ಹಾಳು ಮಾಡಬಹುದು. ಅದಕ್ಕಾಗಿಯೇ ನಾವು ಸ್ನೇಹಿತರು ಮತ್ತು ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ತುಂಬಾನೇ ಜಾಗರೂಕರಾಗಿರಬೇಕು ಎನ್ನುತ್ತಾರೆ ಚಾಣಕ್ಯ.
ನಿರ್ಧಾರ ತೆಗೆದುಕೊಳ್ಳುವ ಮೊದಲು ಯೋಚಿಸಿ: ಜೀವನದಲ್ಲಿ ತಾಳ್ಮೆ ಎನ್ನುವಂತಹದ್ದು ತುಂಬಾನೇ ಮುಖ್ಯ. ಯಾವಾಗಲೂ ಅಷ್ಟೇ ಯೋಚಿಸದೇ, ಕೂಲಂಕುಷವಾಗಿ ಪರೀಕ್ಷಿಸದೇ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಏಕೆಂದರೆ ಆತುರದ ನಿರ್ಧಾರಗಳು ನಮ್ಮ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರಬಹುದು. ಆದ್ದರಿಂದ, ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಾಧಕ-ಬಾಧಕಗಳನ್ನು ಅಳೆಯುವುದು ಅವಶ್ಯಕ ಎಂದಿದ್ದಾರೆ ಚಾಣಕ್ಯ.
ಕೋಪದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ: ಕೋಪ ಬಂದಾಗ ನಮ್ಮ ಯೋಚನಾ ಶಕ್ತಿ ಕಡಿಮೆಯಾಗುತ್ತದೆ. ಅಲ್ಲದೆ ಕೋಪದಲ್ಲಿ ನಾವು ಏನು ಮಾಡುತ್ತೇವೆ ಎಂಬ ಅರಿವು ಸಹ ನಮಗಿರುವುದಿಲ್ಲ. ಆ ಸಮಯದಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ತಪ್ಪಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ, ಕೋಪ ಕಡಿಮೆಯಾದ ನಂತರವೇ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ, ಕೋಪದ ಕೈಗೆ ಯಾವತ್ತೂ ಬುದ್ಧಿ ಕೊಡಬಾರದು ಎಂದಿದ್ದಾರೆ ಚಾಣಕ್ಯ.
ಯೋಜನೆಗಳನ್ನು ಹಂಚಿಕೊಳ್ಳಬೇಡಿ: ಯಾವುದೋ ಉತ್ಸಾಹದಲ್ಲಿ, ಆತುರದಲ್ಲಿ ನಿಮ್ಮ ಗುರಿ ಮತ್ತು ಯೋಜನೆಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳಬೇಡಿ. ಇದರಿಂದ ಭವಿಷ್ಯದಲ್ಲಿ ಸಾಕಷ್ಟು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ, ನೀವು ಅಂದುಕೊಂಡ ಗುರಿಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಆದ್ದರಿಂದ ಈ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳುವ ಮುನ್ನ ನೂರು ಬಾರಿ ಯೋಚಿಸಿ.
ಬೆಂಗಳೂರು, (ಏಪ್ರಿಲ್ 09): ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿರುವ ಲಕ್ಷಾಂತರ ವಿದ್ಯಾರ್ಥಿಗಳ ಕಾಯುವಿಕೆ ಅಂತ್ಯವಾಗಿದೆ. ಹೌದು…2026ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಆನ್ಲೈನ್ನಲ್ಲಿ ಪ್ರಕಟವಾಗಿದೆ. ಈ ಮೊದಲು ಶಿಕ್ಷಣ ಸಚಿವರು ಸುದ್ದಿಗೋಷ್ಠಿ ನಡೆಸಿ ಬಳಿಕ ಫಲಿತಾಂಶ ಪ್ರಕಟಿಸುವುದು ವಾಡಿಕೆ. ಆದ್ರೆ, ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭೆ ಉಪಚುನಾವಣೆಯ ಸಂಬಂಧ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮೊದಲು ವೈಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟಿಸಲಾಗಿದ್ದು, ಇದೀಗ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಸುದ್ದಿಗೋಷ್ಠಿ ಫಲಿತಾಂಶವನ್ನು ಪ್ರಕಟಿಸಿದ್ದು, ಯಾರು ಟಾಪರ್, ಯಾವ ಜಿಲ್ಲೆ ಫಸ್ಟ್ ಎನ್ನುವುದನ್ನು ನೋಡಿ.
ಪ್ರಸ್ತುತ ಆಕಾಶಮಂಡಲದಲ್ಲಿ ಗುರುವು ಮಿಥುನ ರಾಶಿಯಲ್ಲಿ ಸಂಚರಿಸುತ್ತಿರುವುದು ಮತ್ತು ಶನಿಯು ಮೀನ ರಾಶಿಯಲ್ಲಿ ಇರುವುದು ರಾಜ್ಯದ ಆಡಳಿತಾರೂಢರಿಗೆ ಸವಾಲು ಮತ್ತು ಅವಕಾಶ ಎರಡನ್ನೂ ಒಟ್ಟಿಗೆ ತರುತ್ತಿದೆ. ಗುರುವಿನ ಪ್ರಭಾವದಿಂದಾಗಿ ಹೊಸ ಯೋಜನೆಗಳ ಘೋಷಣೆಯಾಗಬಹುದು, ಆದರೆ ಶನಿಯ ಪ್ರಭಾವದಿಂದಾಗಿ ಆ ಯೋಜನೆಗಳ ಅನುಷ್ಠಾನದಲ್ಲಿ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಲಿದೆ.
ಗೆಲುವು ಪಡೆಯುವ ರಾಶಿಗಳು:
ಮೇಷ: ಸೂರ್ಯನು ನಿಮ್ಮ ರಾಶಿಯಲ್ಲಿ ಉಚ್ಚ ಸ್ಥಾನದಲ್ಲಿರುವುದರಿಂದ, ಈ ರಾಶಿಯ ನಾಯಕರಿಗೆ ಸಿಂಹ ಬಲ ಬರಲಿದೆ. ಅನಿರೀಕ್ಷಿತವಾಗಿ ದೊಡ್ಡ ಜವಾಬ್ದಾರಿಗಳು ಹುಡುಕಿಕೊಂಡು ಬರಬಹುದು. ಸರ್ಕಾರಿ ಮಟ್ಟದ ಮಾತುಕತೆಗಳಲ್ಲಿ ನಿಮ್ಮದೇ ಮೇಲುಗೈ ಆಗಲಿದೆ.
ಕುಂಭ: ನಿಮ್ಮ ರಾಶ್ಯಾಧಿಪತಿ ಶನಿಯು ಎರಡನೇ ಮನೆಯಲ್ಲಿರುವುದರಿಂದ ಆರ್ಥಿಕ ಮತ್ತು ಸಂಪನ್ಮೂಲ ಕ್ರೋಢೀಕರಣದಲ್ಲಿ ಯಶಸ್ಸು ಸಿಗಲಿದೆ. ಗುಪ್ತವಾಗಿ ನಡೆಸುವ ರಾಜಕೀಯ ತಂತ್ರಗಳು ಫಲಪ್ರದವಾಗಲಿವೆ.
ಮಿಶ್ರ ಫಲದ ರಾಶಿಗಳು:
ಕರ್ಕಾಟಕ: ಚಂದ್ರನ ಚಲನೆಯಿಂದಾಗಿ ವಾರದ ಆರಂಭದಲ್ಲಿ ಅಸ್ಥಿರತೆ ಇರಲಿದ್ದರೂ, ವಾರಾಂತ್ಯಕ್ಕೆ ಪರಿಸ್ಥಿತಿ ಸುಧಾರಿಸಲಿದೆ. ಸಾರ್ವಜನಿಕ ಭಾಷಣ ಮಾಡುವಾಗ ಎಚ್ಚರವಿರಲಿ; ಮಾತು ತಪ್ಪಾಗಿ ಅರ್ಥೈಸಲ್ಪಡಬಹುದು.
ಮಕರ: ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ, ಆದರೆ ವಿರೋಧಿಗಳ ಕುತಂತ್ರದಿಂದಾಗಿ ಗೆಲುವು ಸ್ವಲ್ಪ ವಿಳಂಬವಾಗಬಹುದು. ತಾಳ್ಮೆಯೇ ನಿಮ್ಮ ಯಶಸ್ಸಿನ ಮಂತ್ರ.
ಸೋಲುವ ರಾಶಿಗಳು:
ಕನ್ಯಾ: ಸಪ್ತಮ ಸ್ಥಾನದಲ್ಲಿ ರಾಹುವಿನ ಸಂಚಾರವಿರುವುದರಿಂದ ಮಿತ್ರ ಪಕ್ಷಗಳಿಂದ ಅಥವಾ ಆಪ್ತರಿಂದಲೇ ನಂಬಿಕೆ ದ್ರೋಹವಾಗುವ ಸಾಧ್ಯತೆಯಿದೆ. ಒಪ್ಪಂದಗಳಿಗೆ ಸಹಿ ಹಾಕುವ ಮುನ್ನ ಎಚ್ಚರಿಕೆ ಅಗತ್ಯ.
ಮಿಥುನ: ಹತ್ತನೇ ಮನೆಯಲ್ಲಿ ರಾಹು-ಬುಧರ ಯುತಿಯಿಂದಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗೊಂದಲ ಉಂಟಾಗಬಹುದು. ತಪ್ಪು ಮಾಹಿತಿಯ ಆಧಾರದ ಮೇಲೆ ನೀವು ಇಡುವ ಹೆಜ್ಜೆ ರಾಜಕೀಯವಾಗಿ ದೊಡ್ಡ ಬೆಲೆ ತೆರುವಂತೆ ಮಾಡಬಹುದು.
ವಿಶೇಷ ಸೂಚನೆ ಎಂದರೆ ಮಂಗಳನು ಶನಿಯೊಂದಿಗೆ ಯುತಿಯಲ್ಲಿರುವುದರಿಂದ ರಾಜಕೀಯ ವಲಯದಲ್ಲಿ ತೀವ್ರ ಸ್ವರೂಪದ ವಾಕ್ಸಮರ ಅಥವಾ ಆಂತರಿಕ ಬಂಡಾಯ ಏಳುವ ಸಾಧ್ಯತೆಯಿದೆ. ಹಳೆಯ ನಾಯಕರ ಪ್ರಭಾವ ಕಡಿಮೆಯಾಗಿ, ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ಸಿಗುವಂತಹ ಬೆಳವಣಿಗೆಗಳು ತೆರೆಮರೆಯಲ್ಲಿ ನಡೆಯಲಿವೆ. ಈ ಬದಲಾವಣೆಗಳು ವಿಶೇಷವಾಗಿ ಏಪ್ರಿಲ್ ೧೪ರ ಸೌರಮಾನ ಯುಗಾದಿ ಅನಂತರ ವೇಗ ಪಡೆಯಲಿವೆ.
ಕೊಪ್ಪಳ, ಏಪ್ರಿಲ್ 09: ಇಲ್ಲಿನ ಗೌರಿ ಅಂಗಳ ನಿವಾಸಿ ನಾಗರಾಜ್ ಎಂಬವರನ್ನು ವಿವಾಹವಾಗಿದ್ದ ರಾಯಚೂರು ಜಿಲ್ಲೆಯ ಸಿಂದನೂರಿನ ಸಂಜನಾ ಎಂಬಾಕೆ ಮದುವೆಯಾಗಿ ಎರಡು ತಿಂಗಳಲ್ಲೇ ಪತಿ ಬಿಟ್ಟು ನಾಪತ್ತೆ ಆಗಿದ್ದಳು. ವಿಷಯ ತಿಳಿದ ಮಾವ ಅಂದರೆ ಪತಿಯ ತಂದೆ ಹೃದಯಾಘಾತದಿಂದ ಮೃತಪಟ್ಟ ಕಾರಣ ಘಟನೆ ಭಾರಿ ಸುದ್ದಿಯಾಗಿತ್ತು. ಈ ಪ್ರಕರಣಕ್ಕೀಗ ಭರ್ಜರಿ ಟ್ವಿಸ್ಟ್ ಸಿಕ್ಕಿದ್ದು, ಕಳೆದ 20 ದಿನಗಳ ಹಿಂದೆ ಮಿಸ್ ಆಗಿದ್ದ ಯುವತಿ ಸಂಜನಾ ಮುಸ್ಲಿಂ ಯುವಕನೋರ್ವನ ಜೊತೆ ನಿನ್ನೆ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾಳೆ. ರಾಜಾಭಕ್ಷಿ ಎಂಬಾತನ ಜೊತೆ ನವ ವಿವಾಹಿತೆಯನ್ನು ಪತ್ತೆ ಮಾಡಿರುವ ಪೊಲೀಸರು, ಇಬ್ಬರನ್ನೂ ಕೊಪ್ಪಳದ ಮಹಿಳಾ ಠಾಣೆಗೆ ಕರೆತಂದಿದ್ದಾರೆ.
ಮೂಲತಃ ಗದಗ ಜಿಲ್ಲೆ ನಿವಾಸಿಯಾಗಿರೋ ರಾಜಾಭಕ್ಷಿ ಆಟೋ ಚಾಲಕನಾಗಿದ್ದು, ಅದಾಗಲೇ ಈತನಿಗೆ ಮದುವೆ ಕೂಡ ಆಗಿದೆ. ಹೀಗಿದ್ದರೂ ಆತ ಸಂಜನಾಳನ್ನು ಕರೆದುಕೊಂಡು ಹೋಗಿದ್ದ ಎಂಬ ವಿಚಾರವೀಗ ಬಯಲಾಗಿದೆ. ಇನ್ನು ಇವರಿಬ್ಬರನ್ನು ಪೊಲೀಸ್ ಠಾಣೆಗೆ ಕರೆತರುತ್ತಿದ್ದಂತೆ ಸಂಜನಾ ಪತಿ ಸೇರಿ ಸಂಬಂಧಿಕರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ನಡುವೆಯೂ ತನಗೆ ರಾಜಾಭಕ್ಷಿನೇ ಬೇಕು ಎಂದು ಸಂಜನಾ ಹಠ ಹಿಡಿದಿದ್ದರೆ, ಈಕೆಯ ಹುಚ್ಚಾಟಕ್ಕೆ ಅದಾಗಲೇ ನಮ್ಮ ಮನೆಯಲ್ಲಿ ಇಂದು ಜೀವ ಹೋಗಿದೆ. ಹೀಗಾಗಿ ನಮಗೆ ಪರಿಹಾರ ಬೇಕು ಎಂದು ನಾಗರಾಜ್ ಕುಟುಂಬ ಪಟ್ಟು ಹಿಡಿದಿದೆ.
ಎರಡೂ ಕುಟುಂಬಳ ಪರಸ್ಪರ ಒಪ್ಪಿಗೆಯ ಮೇಲೆಯೇ ಕೊಪ್ಪಳದ ಪಾರ್ಥಾ ಕಲ್ಯಾಣ ಮಂಟಪದಲ್ಲಿ ಫೆಬ್ರವರಿ 8ರಂದು ನಾಗರಾಜ್ ಮತ್ತು ಸಂಜನಾ ವಿವಾಹ ನಡೆದಿತ್ತು. ಆ ಬಳಿಕ ದಂಪತಿ ನಾಗರಾಜ್ ಅವರ ಮನೆಯ ಮೇಲಿನ ಮಹಡಿಯಲ್ಲಿ ವಾಸವಿದ್ದರು. ಈ ನಡುವೆ ಮಾರ್ಚ್ 21ರ ರಾತ್ರಿ ರಾತ್ರಿ 8.30ರ ಸುಮಾರಿಗೆ ಸಂಜನಾ ತನಗೆ ಆರೋಗ್ಯ ಸರಿ ಇಲ್ಲದ ಕಾರಣ ಔಷಧ ತರುವಂತೆ ಪತಿ ನಾಗರಾಜ್ಗೆ ತಿಳಿಸಿದ್ದಾಳೆ. ಹೀಗಾಗಿ ಮಾತ್ರೆ ತರಲೆಂದು ತೆರಳಿದ್ದ ನಾಗರಾಜ್ 15 ನಿಮಿಷಗಳ ಬಳಿಕ ಮನೆಗೆ ಹಿಂದಿರುಗಿದ್ದಾರೆ. ಆದರೆ ಆ ವೇಳೆ ಹೆಂಡತಿ ಸಂಜನಾ ಮನೆಯಲ್ಲಿ ಇಲ್ಲದಿರೋದು ಗಮನಕ್ಕೆ ಬಂದಿದೆ. ಹೀಗಾಗಿ ಕೆಳ ಮಹಡಿಯಲ್ಲಿರುವ ಸಹೋದರನ ಮನೆಗೆ ತೆರಳಿ ನಾಗರಾಜ್ ಪತ್ನಿ ಬಗ್ಗೆ ವಿಚಾರಿಸಿದ್ದಾರೆ. ಆದರೆ ಆಕೆ ಇಲ್ಲಿಗೆ ಬಂದಿಲ್ಲ ಎಂಬ ಉತ್ತರ ದೊರೆತಿದೆ. ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದಾಗಲೂ ಆಕೆಯ ಬಗ್ಗೆ ಮಾಹಿತಿ ಸಿಗದ ಕಾರಣ ಪತಿ ನಾಗರಾಜ್ ಈ ಬಗ್ಗೆ ದೂರು ದಾಖಲಿಸಿದ್ದರು. ಆ ಬೆನ್ನಲ್ಲೇ ಸೊಸೆ ನಾಪತ್ತೆಯಾಗಿರುವ ವಿಚಾರ ತಿಳಿದ ನಾಗರಾಜ್ ತಂದೆ ಖಂಡೆಪ್ಪ ಹೃದಯಾಘಾತದಿಂದ ಮೃತಪಟ್ಟಿದ್ದರು.
ಐಪಿಎಲ್‌ನ (IPL 2026) ಹಾಲಿ ಚಾಂಪಿಯನ್ ಆಗಿರುವ ಆರ್ಸಿಬಿ (RCB) ಇದುವರೆಗೆ ಆಡಿರುವ ಮೊದಲ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ತನ್ನ ತವರಿನಲ್ಲಿ ಮೊದಲ ಎರಡು ಪಂದ್ಯಗಳನ್ನು ಆಡಿದ ಆರ್ಸಿಬಿ ಎರಡು ಪಂದ್ಯಗಳಲ್ಲೂ ಏಕಪಕ್ಷೀಯ ಗೆಲುವು ಸಾಧಿಸಿದೆ. ಲೀಗ್ನ ಉದ್ಘಾಟನಾ ಪಂದ್ಯದಲ್ಲಿ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿರುವ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿದ್ದ ಆರ್ಸಿಬಿ, ಅದಾದ ಬಳಿಕ ನಡೆದಿದ್ದ ಎರಡನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಸಿಎಸ್ಕೆ ತಂಡವನ್ನು ಕೂಡ ಏಕಪಕ್ಷೀಯವಾಗಿ ಸೋಲಿಸಿತ್ತು. ಇದೀಗ ತವರಿನಿಂದ ಹೊರಗೆ ಮೊದಲ ಪಂದ್ಯವನ್ನಾಡಲು ರಜತ್ ಪಡೆ ಸಜ್ಜಾಗಿದೆ. ಹೀಗಾಗಿ ತವರಿನ ಹೊರಗೆ ಆರ್ಸಿಬಿ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.
ಆರ್ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16 ನೇ ಪಂದ್ಯ ಯಾವಾಗ ನಡೆಯಲಿದೆ?
ಆರ್ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16 ನೇ ಪಂದ್ಯವು ಏಪ್ರಿಲ್ 10 ರ ಶುಕ್ರವಾರದಂದು ನಡೆಯಲಿದೆ.
ಆರ್ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16 ನೇ ಪಂದ್ಯ ಎಲ್ಲಿ ನಡೆಯಲಿದೆ?
ಆರ್ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16 ನೇ ಪಂದ್ಯ ಬರ್ಸಾಪರ ಸ್ಟೇಡಿಯಂ, ಗುವಾಹಟಿಯಲ್ಲಿ ನಡೆಯಲಿದೆ.
ಆರ್ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16 ನೇ ಪಂದ್ಯ ಯಾವ ಸಮಯಕ್ಕೆ ಪ್ರಾರಂಭವಾಗುತ್ತದೆ?
ಆರ್ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16 ನೇ ಪಂದ್ಯವು ಭಾರತೀಯ ಕಾಲಮಾನ ಸಂಜೆ 7:30 ಕ್ಕೆ ಪ್ರಾರಂಭವಾಗಲಿದ್ದು, ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ.
ಆರ್ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16 ನೇ ಪಂದ್ಯವನ್ನು ಟಿವಿಯಲ್ಲಿ ವೀಕ್ಷಿಸುವುದು ಹೇಗೆ?
ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿಯಲ್ಲಿ ಆರ್ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16 ನೇ ಪಂದ್ಯವನ್ನು ವೀಕ್ಷಿಸಬಹುದು.
ಆರ್ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16 ನೇ ಪಂದ್ಯವನ್ನು ಮೊಬೈಲ್‌ನಲ್ಲಿ ವೀಕ್ಷಿಸುವುದು ಹೇಗೆ?
ಜಿಯೋ-ಹಾಟ್‌ಸ್ಟಾರ್ ಅಪ್ಲಿಕೇಶನ್ ಬಳಸಿಕೊಂಡು ನಿಮ್ಮ ಮೊಬೈಲ್ಲ್ಲಿ ಆರ್ಸಿಬಿ ಮತ್ತು ರಾಜಸ್ಥಾನ್ ನಡುವಿನ ಐಪಿಎಲ್ 2026 ರ 16ನೇ ಪಂದ್ಯವನ್ನು ನೀವು ವೀಕ್ಷಿಸಬಹುದು.
ಮಂಗಳೂರಿನಂತಹ ಕರಾವಳಿ ಪ್ರದೇಶಗಳಲ್ಲಿ ಬೇಸಿಗೆ ಸಮಯದಲ್ಲಿ ಅತಿ ಹೆಚ್ಚು ಉಷ್ಣತೆ ಮತ್ತು ಆರ್ದ್ರತೆ ಕಂಡುಬರುತ್ತದೆ ಎಂಬುದು ತಿಳಿದಿರುವ ವಿಚಾರ. ಈ ರೀತಿ ಬಿಸಿಲಿನ ತಾಪಮಾನ ಹೆಚ್ಚಾಗಿರುವಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಸರಿಯಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ಬೇಸಿಗೆಯಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆಗಳಿಂದ ಅನಾಯಾಸವಾಗಿ ತಪ್ಪಿಸಿಕೊಳ್ಳಬಹುದು. ಆಯುರ್ವೇದದ ಪ್ರಕಾರ ಈ ಕಾಲವನ್ನು ಗ್ರೀಷ್ಮ ಋತು ಎಂದು ಕರೆಯಲಾಗುತ್ತದೆ. ಬೇಸಿಗೆಯ ಸಮಯದಲ್ಲಿ ದೇಹದಲ್ಲಿ ಪಿತ್ತದ ಪ್ರಮಾಣ ಹೆಚ್ಚಾಗುತ್ತದೆ. ಮಂಗಳೂರುಂತಹ ತೇವಾಂಶ ಇರುವ ಪ್ರದೇಶದಲ್ಲಿ ಇದು ಇನ್ನಷ್ಟು ಪರಿಣಾಮ ಬೀರುತ್ತದೆ. ಆದ್ದರಿಂದ ಗ್ರೀಷ್ಮ ಋತುಚರ್ಯೆಯನ್ನು ಅನುಸರಿಸುವುದು ಅತ್ಯವಶ್ಯಕ. ಅದಕ್ಕಾಗಿಯೇ ಟಿವಿ9 ಕನ್ನಡ ಈ ವಿಷಯದ ಕುರಿತು ಮತ್ತಷ್ಟು ಮಾಹಿತಿ ಕಲೆ ಹಾಕಲು ಉಡುಪಿ ಎಸ್‌ಡಿಎಮ್ ಆಯುರ್ವೇದ ಕಾಲೇಜು (SDM College of Ayurveda, Udupi)ಮತ್ತು ಆಸ್ಪತ್ರೆಯ ಕಾಯಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಮೋನಿಷಾಪಿ ಅವರನ್ನು ಸಂಪರ್ಕಿಸಿದ್ದು ಅವರು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ.
ಈ ಸಮಯದಲ್ಲಿ ಸೂರ್ಯನ ಬೆಳಕು ಮಿತವಾಗಿ ಉಪಯುಕ್ತವಾಗಬಹುದು, ವಿಟಮಿನ್ ಡಿ ಮಟ್ಟವನ್ನು ಹೆಚ್ಚಿಸಲು, ಮನಸ್ಥಿತಿಗಳನ್ನು ನಿಯಂತ್ರಿಸಲು ಮತ್ತು ಆರೋಗ್ಯ ಪ್ರಯೋಜನಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಆದರೂ ಕೂಡ ಹೆಚ್ಚಿನ ಪ್ರಮಾಣವು ಪಿತ್ತ ಮಟ್ಟವನ್ನು ಹೆಚ್ಚಿಸುತ್ತದೆ, ಅಂಗಾಂಶಗಳನ್ನು ಒಣಗಿಸುತ್ತದೆ ಮತ್ತು ದೇಹದಲ್ಲಿನ ಓಜಸ್ (ಪ್ರಮುಖ ಶಕ್ತಿ) ಅನ್ನು ದುರ್ಬಲಗೊಳಿಸುತ್ತದೆ, ಇದು ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ದೇಹದ ಬಲ ಕಡಿಮೆಯಾಗುತ್ತದೆ ಹಾಗೂ ಪಚನ ಶಕ್ತಿ ಕೂಡ ಕಡಿಮೆ ಇರುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ಶೀತಲ, ಮಧುರ ಮತ್ತು ದ್ರವ ಆಹಾರಗಳನ್ನು ಸೇವಿಸಬೇಕು. ಹಾಲು, ಮಜ್ಜಿಗೆ, ತೆಂಗಿನಕಾಯಿ ನೀರು ಮತ್ತು ಹಣ್ಣುಗಳ ರಸಗಳು ದೇಹಕ್ಕೆ ತಂಪು ನೀಡುತ್ತವೆ.
ಬೇಸಿಗೆಗೆ ತಂಪಾಗಿಸುವ ಆಹಾರಗಳು:
ನಾವು ಈ ಸಮಯದಲ್ಲಿ ನೈಸರ್ಗಿಕವಾಗಿ ತಂಪಾಗಿಸುವ, ರಸಭರಿತವಾದ ಮತ್ತು ಜೀರ್ಣಿಸಿಕೊಳ್ಳಲು ಸುಲಭವಾದ ಆಹಾರಗಳನ್ನು ಸೇವಿಸಬೇಕು.
ಮಜ್ಜಿಗೆ: ಹಗುರ, ಜೀರ್ಣಕ್ರಿಯೆಗೆ ಅನುಕೂಲಕರ ಮತ್ತು ತಂಪಾಗಿಸುವ ಪಾನೀಯ. ಮಜ್ಜಿಗೆಯಲ್ಲಿ ಒಂದು ಚಿಟಿಕೆ ಜೀರಿಗೆ ಸೇರಿಸುವುದರಿಂದ ಅದರ ಪರಿಣಾಮ ಹೆಚ್ಚಾಗುತ್ತದೆ. ಎಳನೀರು: ಇದು ಪ್ರಕೃತಿಯ ಪರಿಪೂರ್ಣ ಎಲೆಕ್ಟ್ರೋಲೈಟ್ ಪಾನೀಯವಾಗಿದ್ದು, ಇದನ್ನು ಬೆಳಿಗ್ಗೆ ಮಧ್ಯಾಹ್ನದ ಸಮಯದಲ್ಲಿ ಸೇವಿಸುವುದು ಉತ್ತಮ. ಗಿಡಮೂಲಿಕೆಗಳ ಕಷಾಯ: ಕೊತ್ತಂಬರಿ ಬೀಜ ಅಥವಾ ಸೋಂಪು ಬೀಜದ ನೀರು ಶಾಖ ಮತ್ತು ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ. ಆಮ್ಲಾ ಜ್ಯೂಸ್: ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಹಣ್ಣುಗಳು: ಕಲ್ಲಂಗಡಿ, ದ್ರಾಕ್ಷಿ ಮತ್ತು ದಾಳಿಂಬೆ. ತರಕಾರಿಗಳು: ಸೌತೆಕಾಯಿಗಳು, ಸೋರೆಕಾಯಿಗಳು ಮತ್ತು ಎಲೆಗಳ ತರಕಾರಿಗಳು. ಧಾನ್ಯ: ಅಕ್ಕಿ ಮತ್ತು ಬಾರ್ಲಿ. ಡೈರಿ: ಪಿತ್ತ ಸಮತೋಲನಕ್ಕೆ ತಾಜಾ ಹಾಲು ಮತ್ತು ತುಪ್ಪದ ಸೇವನೆಯ ಮಿತಿಯ ಅಗತ್ಯವಿದೆ.
ಸಾಮಾನ್ಯವಾಗಿ ಈ ಸಮಯದಲ್ಲಿ ಹೆಚ್ಚು ಖಾರ ಮತ್ತು ಎಣ್ಣೆಯ ಪದಾರ್ಥಗಳನ್ನು ಕಡಿಮೆ ಬಳಸುವುದು ಉತ್ತಮ, ದಿನವಡಿ ಸಾಕಷ್ಟು ನೀರು ಕುಡಿಯಬೇಕು ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳಬೇಕು, ಬಿಸಿಲಿನಿಂದ ರಕ್ಷಣೆ ಪಡೆಯಲು ಹತ್ತಿ ಬಟ್ಟೆಗಳನ್ನು ಧರಿಸಬೇಕು, ಛತ್ರಿ- ಸನ್ ಗ್ಲಾಸ್ ಬಳಸುವುದರಿಂದ ಕಣ್ಣು ಮತ್ತು ಚರ್ಮವನ್ನು ರಕ್ಷಿಸಬಹುದು. ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು ಮತ್ತು ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ಸರಿಯಾದ ನಿದ್ರೆ, ನಿಯಮಿತ ಸ್ನಾನ ಮತ್ತು ಸ್ವಚ್ಛತೆ ಕೂಡ ಮುಖ್ಯ ಬೆವರು ಕಾರಣದಿಂದ ಚರ್ಮದ ಸಮಸ್ಯೆಗಳು ಉಂಟಾಗಬಹುದು ಆದ್ದರಿಂದ ದಿನಕ್ಕೆ ಎರಡು ಬಾರಿ ಸ್ನಾನ ಮಾಡುವುದು ಉತ್ತಮ. ಯೋಗ ಮತ್ತು ಧ್ಯಾನದಿಂದ ಮಾನಸಿಕ ಸಮತೋಲನವನ್ನು ಕಾಪಾಡಬಹುದು.
ಸುಡುವ ಬಿಸಿಲಿನ ನಡುವೆ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸೇರಿದಂತೆ ಒಟ್ಟಾರೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಗಮನಹರಿಸಬೇಕು. ಜಾಗತಿಕ ತಾಪಮಾನವು ಪ್ರಸ್ತುತ ಮಟ್ಟಕ್ಕಿಂತ ಹೆಚ್ಚಾದರೆ, ಜನರು ಬಿಸಿ ಮತ್ತು ಆರ್ದ್ರ ವಾತಾವರಣದಿಂದ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಆದ್ದರಿಂದ ಈ ಕ್ರಮಗಳನ್ನು ಅನುಸರಿಸಿದರೆ ಮಂಗಳೂರು ಬೇಸಿಗೆಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ನಾಸಿಕ್, ಏಪ್ರಿಲ್ 9: ಮಹಾರಾಷ್ಟ್ರದ (Maharashtra) ನಾಸಿಕ್‌ನ ಪ್ರತಿಷ್ಠಿತ ಬಹುರಾಷ್ಟ್ರೀಯ ಐಟಿ ಕಂಪನಿಯೊಂದರಲ್ಲಿ ಮಹಿಳಾ ಸಹೋದ್ಯೋಗಿಗಳಿಗೆ ಕಿರುಕುಳ, ಲೈಂಗಿಕ ದೌರ್ಜನ್ಯ ಮತ್ತು ಬ್ಲ್ಯಾಕ್‌ಮೇಲ್ ಮಾಡಿದ್ದಕ್ಕಾಗಿ ಆಸಿಫ್ ಅನ್ಸಾರಿ, ಶಫಿ ಶೇಖ್, ಶಾರುಖ್ ಖುರೇಷಿ, ರಜಾ ಮೆಮನ್ ಮತ್ತು ತೌಸಿಫ್ ಅತ್ತರ್ ಅವರನ್ನು ಬಂಧಿಸಲಾಗಿದೆ. ಒಟ್ಟು 8 ಮಹಿಳಾ ಉದ್ಯೋಗಿಗಳು ದೂರುಗಳನ್ನು ದಾಖಲಿಸಿದ್ದಾರೆ ಮತ್ತು ಒಬ್ಬ ಪುರುಷ ಉದ್ಯೋಗಿಯಿಂದ ಒಂದು ದೂರು ದಾಖಲಾಗಿದೆ. ಅವರ ಮೇಲೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹೇರಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರನ್ನು ಬಂಧಿಸಲಾಗಿದೆ.
ನಾಸಿಕ್‌ನ ಪ್ರಸಿದ್ಧ ಬಹುರಾಷ್ಟ್ರೀಯ ಕಂಪನಿಯ ಆಘಾತಕಾರಿ ಪ್ರಕರಣಗಳು ಬಹಿರಂಗಗೊಂಡಿವೆ. ಈ ಕಂಪನಿಯಲ್ಲಿ ಕೆಲಸ ಮಾಡುವ ಯುವತಿಯರಿಗೆ ಉತ್ತಮ ವೃತ್ತಿಜೀವನದ ಆಮಿಷವೊಡ್ಡಲಾಯಿತು. ಆ ಕಂಪನಿಯಲ್ಲಿ ಕೆಲಸ ಮಾಡುವ 8 ಯುವತಿಯರನ್ನು ಲೈಂಗಿಕವಾಗಿ ಶೋಷಿಸುತ್ತಿದ್ದರು. ಮತಾಂತರಕ್ಕೆ ಅವರ ಮೇಲೆ ಒತ್ತಡ ಹೇರಲು ಪ್ರಯತ್ನಿಸಲಾಗುತ್ತಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಪ್ರಕರಣವು ರಾಜ್ಯಾದ್ಯಂತ ಕೋಲಾಹಲವನ್ನು ಸೃಷ್ಟಿಸಿದೆ.
ಕಂಪನಿಯ ಕೆಲವು ತಂಡದ ನಾಯಕರು ಯುವತಿಯರನ್ನು ವ್ಯವಸ್ಥಿತವಾಗಿ ಬ್ರೈನ್ ವಾಶ್ ಮಾಡುತ್ತಿದ್ದರು. ಅವರನ್ನು ಪ್ರೀತಿಯ ಬಲೆಗೆ ಬೀಳಿಸಿ ಮದುವೆಗೆ ಆಮಿಷ ಒಡ್ಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ವಿವಾಹಿತ ಮಹಿಳೆಯರು ಸೇರಿದಂತೆ 8 ಯುವತಿಯರು ಒಟ್ಟು 9 ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ಪ್ರಕರಣಗಳನ್ನು ದಾಖಲಿಸಿದ್ದರು. ಮಹಿಳೆಯರನ್ನು ಮಾತ್ರವಲ್ಲದೆ ಒಬ್ಬ ಯುವಕನನ್ನೂ ಬಲವಂತವಾಗಿ ಮತಾಂತರಿಸಲಾಗಿದೆ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಏಪ್ರಿಲ್ 09: ದೇಶೀಯ ವಿಮಾನ ಪ್ರಯಾಣಿಕರಿಗೆ ಈಗಾಗಲೇ ಅತ್ಯಾಧುನಿಕ ‘ಡಿಜಿ ಯಾತ್ರಾ’ ಸೌಲಭ್ಯವನ್ನು ಒದಗಿಸುತ್ತಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA), ಇದೀಗ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ಮುಖಚಹರೆ (Biometric) ಆಧಾರಿತ ಸ್ಪರ್ಶರಹಿತ ಪ್ರಯಾಣದ ಅನುಭವ ನೀಡಲು ಸಜ್ಜಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (BIAL), ಇಂಡಿಗೋ, ಡಿಜಿ ಯಾತ್ರಾ ಫೌಂಡೇಶನ್ ಹಾಗೂ ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಘಟನೆ (IATA) ಜಂಟಿಯಾಗಿ, ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ ಟಿಕೆಟ್ ಬುಕಿಂಗ್‌ನಿಂದ ಹಿಡಿದು ಬೋರ್ಡಿಂಗ್‌ವರೆಗಿನ ಸಂಪೂರ್ಣ ಸಂಪರ್ಕರಹಿತ ಪ್ರಯಾಣದ ತಾಂತ್ರಿಕ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿವೆ.
ಭಾರತದಲ್ಲಿ ಇದೇ ಮೊದಲು!
ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹದೊಂದು ವಿನೂತನ ಪ್ರಯೋಗ ನಡೆದಿದ್ದು, ಜಾಗತಿಕ ಮಟ್ಟದಲ್ಲಿ ತಡೆರಹಿತ ವಿಮಾನ ಪ್ರಯಾಣ ವ್ಯವಸ್ಥೆಯ ಅನುಷ್ಠಾನದತ್ತ ಇದು ಮಹತ್ವದ ಹೆಜ್ಜೆ ಎಂದೇ ಪರಿಗಣಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಇಂಡಿಗೋ ಹಾಗೂ ಡಿಜಿ ಯಾತ್ರಾ ಫೌಂಡೇಶನ್ ಸಂಸ್ಥೆಗಳು, ಪ್ರಯಾಣಿಕರ ದತ್ತಾಂಶ ಸುರಕ್ಷತೆಗಾಗಿ ‘ಸೆಲ್ಫ್-ಸೋವರಿನ್ ಐಡೆಂಟಿಟಿ’ (ಎಸ್‌ಎಸ್‌ಐ) ಎಂಬ ಸ್ವಯಂ-ಗುರುತು ವ್ಯವಸ್ಥೆ ಹಾಗೂ ಬೋರ್ಡಿಂಗ್ ಪಾಸ್‌ಗಳನ್ನು ಸುಲಭವಾಗಿ ವರ್ಗಾಯಿಸಲು ‘ಆ್ಯಪ್-ಟು-ಆ್ಯಪ್’ ತಂತ್ರಜ್ಞಾನವನ್ನು ಪರಿಚಯಿಸಿದ್ದವು. ಇದೇ ಯಶಸ್ವಿ ಮಾದರಿಯನ್ನು ಇದೀಗ ಬಿಐಎಎಲ್ ನೆರವಿನೊಂದಿಗೆ ಅಂತಾರಾಷ್ಟ್ರೀಯ ಪ್ರಯಾಣಕ್ಕೂ ವಿಸ್ತರಿಸಿ, ಅದರ ಕಾರ್ಯಸಾಧ್ಯತೆಯನ್ನು ಯಶಸ್ವಿಯಾಗಿ ಸಾಬೀತುಪಡಿಸಲಾಗಿದೆ.
ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಈ ತಂತ್ರಜ್ಞಾನದ ಅಳವಡಿಕೆಯು ಪ್ರಯಾಣದ ಸಮಯವನ್ನು ಉಳಿಸುವುದಲ್ಲದೆ, ಭದ್ರತೆಯನ್ನೂ ಹೆಚ್ಚಿಸಲಿದೆ. ವಿಶೇಷವೆಂದರೆ, ಸ್ಪರ್ಶರಹಿತ ಪ್ರಯಾಣ ವ್ಯವಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಜಾರಿಗೆ ತರುವ ಈ ಪ್ರತಿಷ್ಠಿತ ಯೋಜನೆಯಲ್ಲಿ ಪಾಲ್ಗೊಂಡಿರುವ ಭಾರತದ ಏಕೈಕ ಏರ್ಪೋರ್ಟ್ಎಂಬ ಹೆಗ್ಗಳಿಕೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾಜನವಾಗಿದೆ.
ಕಾರ್ಯನಿರ್ವಹಣೆ ಹೇಗೆ?
ಪ್ರಯಾಣಿಕರ ಗುರುತನ್ನು ಮುಂಚಿತವಾಗಿಯೇ ಸುರಕ್ಷಿತವಾಗಿ ದೃಢೀಕರಿಸಿ, ವಿಮಾನ ನಿಲ್ದಾಣದ ಎಲ್ಲಾ ಹಂತಗಳಲ್ಲಿ ಮುಖ ಗುರುತಿನ (ಫೇಸ್ ರೆಕಗ್ನಿಷನ್) ಮೂಲಕ ಪರಿಶೀಲಿಸುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಈ ವ್ಯವಸ್ಥೆ ಟಿಕೆಟ್ ಬುಕ್ಕಿಂಗ್‌ನಿಂದ ಹಿಡಿದು ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸುವವರೆಗಿನ ಸಂಪೂರ್ಣ ಪ್ರಯಾಣವನ್ನು ಒಳಗೊಂಡಿದೆ. ಎಲ್ಲಾ ಭದ್ರತಾ ತಪಾಸಣೆಗಳಲ್ಲಿ ಬಯೋಮೆಟ್ರಿಕ್ ತಂತ್ರಜ್ಞಾನ ಬಳಸಲಾಗಿದೆ. ಆ ಮೂಲಕ ಇನ್ನು ಮುಂದೆ ಪಾಸ್‌ಪೋರ್ಟ್ ಅಥವಾ ಬೋರ್ಡಿಂಗ್ ಪಾಸ್ ತೋರಿಸುವ ಬದಲು, ಪ್ರಯಾಣಿಕರು ತಮ್ಮ ಮುಖವನ್ನು ಸ್ಕ್ಯಾನ್ ಮಾಡಿಸುವ ಮೂಲಕ ಸುಲಭವಾಗಿ ಪ್ರಯಾಣ ಮಾಡಬಹುದಾಗಿದೆ.
ಈ ತಂತ್ರಜ್ಞಾನ ‘ಸೆಲ್ಫ್-ಸೋವೆರಿನ್ ಐಡೆಂಟಿಟಿ’ (SSI) ಮಾದರಿಯನ್ವಯ ಕೆಲಸ ಮಾಡಲಿದೆ. ಇದರಿಂದ ವ್ಯಕ್ತಿಯ ಗುರುತು ಸುರಕ್ಷಿತವಾಗಿ ಸಂಗ್ರಹವಾಗಿದ್ದು, ತಕ್ಷಣವೇ ವಿವಿಧ ವ್ಯವಸ್ಥೆಗಳ ಮೂಲಕ ಪರಿಶೀಲನೆಗೊಳಗಾಗುತ್ತದೆ. ಇದಲ್ಲದೆ, ಏರ್‌ಲೈನ್ ಆ್ಯಪ್‌ಗಳು ಮತ್ತು ವಿಮಾನ ನಿಲ್ದಾಣ ವ್ಯವಸ್ಥೆಗಳು ಪರಸ್ಪರ ಸಂಪರ್ಕ ಹೊಂದಿದ್ದು, ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ಮತ್ತು ಪ್ರಯಾಣ ವಿವರಗಳು ಸ್ವಯಂಚಾಲಿತವಾಗಿ ಲಭ್ಯವಾಗುತ್ತವೆ.