Category Archives: Blog

Your blog category

KSRTC ಬಸ್​​-ಲಾರಿ ನಡುವೆ ಭೀಕರ ಅಪಘಾತ: ತುಂಡಾದ ಚಾಲಕನ ಕಾಲು; ಹಲವರು ಗಂಭೀರ – Kannada News | KSRTC Bus and Lorry Accident on the Outskirts of Lokapur, Bagalakot

ಬಾಗಲಕೋಟೆ, ಡಿಸೆಂಬರ್​​ 31: ಕೆಎಸ್​​ಆರ್​ಟಿಸಿ ಬಸ್​ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬಸ್​​ ಚಾಲಕನ ಕಾಲು ತುಂಡಾಗಿರುವ ಜೊತೆಗೆ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಲೋಕಾಪುರ ಹೊರವಲಯದಲ್ಲಿ ನಡೆದಿದೆ. ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ನಡೆದಿರುವ ಈ ಅಪಘಾತದಲ್ಲಿ ಗಾಯಗೊಂಡವರನ್ನು ಲೋಕಾಪೂರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಡಿಕ್ಕಿಯ ರಭಸಕ್ಕೆ ಬಸ್​​ ಮತ್ತು ಲಾರಿಯ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ಲೋಕಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರು ಜನರ ದೋಚುತ್ತಿರುವ ‘ಜನ ನಾಯಕ’ ವಿಜಯ್ – Kannada News | Jana Nayagan movie advance booking open in Bengaluru with high ticket price

ದಳಪತಿ ವಿಜಯ್ (Thalapathy Vijay) ತಮ್ಮ ಕೊನೆಯ ಸಿನಿಮಾಕ್ಕೆ ‘ಜನ ನಾಯಗನ್’ ಎಂದು ಹೆಸರಿಟ್ಟಿದ್ದಾರೆ. ವಿಜಯ್ ರಾಜಕೀಯಕ್ಕೆ ಪ್ರವೇಶಿಸಿದ್ದು, ಸಿನಿಮಾ ಅನ್ನು ತಮ್ಮ ರಾಜಕೀಯ ಅಜೆಂಡಕ್ಕೆ ಪ್ರಚಾರ ಕೊಡಲು ಟೂಲ್ ಆಗಿ ಬಳಸುತ್ತಿದ್ದಾರೆ. ವಿಪರ್ಯಾಸವೆಂದರೆ ‘ಜನ ನಾಯಗನ್’ (ಜನ ನಾಯಕ) ಎಂದು ಹೆಸರಿಟ್ಟುಕೊಂಡು ಬೆಂಗಳೂರಿನ ಸಿನಿಮಾ ಪ್ರೇಮಿಗಳ ಲೂಟಿಗೆ ಇಳಿದಿದ್ದಾರೆ ನಟ ವಿಜಯ್ ಮತ್ತು ‘ಜನ ನಾಯಗನ್’ ಚಿತ್ರತಂಡ. ಹೇಗದು? ವಿವರ ಇಲ್ಲಿದೆ ನೋಡಿ…

‘ಜನ ನಾಯಗನ್’ ತಮಿಳು (ಕನ್ನಡ ಡಬ್ ಇಲ್ಲ) ಸಿನಿಮಾ ಜನವರಿ 09 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಆರಂಭವಾಗಿದೆ. ಜನವರಿ 09ರ ಬೆಳಿಗ್ಗೆ 6:30ಕ್ಕೆ ವಿಶೇಷ ಶೋ ಪ್ರದರ್ಶನವಾಗುತ್ತಿದ್ದು, ಬೆಂಗಳೂರಿನಲ್ಲೂ ಮುಂಗಡ ಬುಕಿಂಗ್ ಓಪನ್ ಆಗಿದ್ದು, ಬೆಂಗಳೂರಿನಲ್ಲಿ ಪ್ರತಿ ಟಿಕೆಟ್ ದರ 1000 ರೂಪಾಯಿಗಳಿಗೂ ಹೆಚ್ಚಿದೆ. ಪ್ರಸ್ತುತ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಮಾತ್ರವೇ ಮುಂಗಡ ಬುಕಿಂಗ್ ಓಪನ್ ಆಗಿದ್ದು, ಸಿಂಗಲ್ ಸ್ಕ್ರೀನ್​​ಗಳಲ್ಲಿಯೇ ಟಿಕೆಟ್ ದರ 800 ರಿಂದ ಪ್ರಾರಂಭವಾಗುತ್ತಿದ್ದು, ಕೆಲವೆಡೆ 1200-1500 ರೂಪಾಯಿಗಳು ಸಹ ನಿಗದಿಪಡಿಸಲಾಗಿದೆ.

ಮಧ್ಯಮ ವರ್ಗದ ಚಿತ್ರಮಂದಿರಗಳು ಎನಿಸಿಕೊಂಡಿದ್ದ ವೀರೇಶ್, ನವರಂಗ ಅಂಥಹಾ ಚಿತ್ರಮಂದಿರಗಳಲ್ಲಿಯೂ ಸಹ ‘ಜನ ನಾಯಗನ್’ ಸಿನಿಮಾದ ಟಿಕೆಟ್​ನ ಆರಂಭಿಕ ದರವೇ 800 ರೂಪಾಯಿಗಳಿವೆ. ಬಾಲ್ಕನಿ ಟಿಕೆಟ್ ದರ 1000 ರೂಪಾಯಿಗಳಿದೆ. ಮಲ್ಟಿಪ್ಲೆಕ್ಸ್​​ಗಳಲ್ಲಿ ಮುಂಗಡ ಬುಕಿಂಗ್ ಇನ್ನೂ ಆರಂಭ ಆಗಿಲ್ಲ, ಸಿಂಗಲ್ ಸ್ಕ್ರೀನ್​​ಗಳಲ್ಲಿಯೇ 1000 ರೂಪಾಯಿ ಇರುವ ಟಿಕೆಟ್ ದರ ಮಲ್ಟಿಪ್ಲೆಕ್ಸ್​​ಗಳಲ್ಲಿ ದುಪ್ಪಟ್ಟಾಗುವ ಸಾಧ್ಯತೆ ಇದೆ. ಒಟ್ಟಾರೆ, ವಿಜಯ್, ಬೆಂಗಳೂರಿನ ಸಿನಿಮಾ ಪ್ರೇಮಿಗಳನ್ನು ದೋಚಲೆಂದೇ ಬಂದಂತಿದೆ.

ಇದನ್ನೂ ಓದಿ:ಕರೂರು ಘಟನೆಯಿಂದ ‘ಜನ ನಾಯಗನ್’ ರಿಲೀಸ್ ಮುಂದಕ್ಕೆ? ಇಲ್ಲಿದೆ ಹೊಸ ಅಪ್​ಡೇಟ್

ಲೂಟಿಗೆ ಬೆಂಗಳೂರನ್ನೇ ಆಯ್ಕೆ ಮಾಡಿಕೊಂಡಂತಿದೆ ‘ಜನ ನಾಯಗನ್’ ಚಿತ್ರತಂಡ, ಏಕೆಂದರೆ ಈ ಮುಂಗಡ ಬುಕಿಂಗ್, ವಿಶೇಷ ಶೋ ಸದ್ಯಕ್ಕೆ ಬೆಂಗಳೂರಿನಲ್ಲಿ ಮಾತ್ರ. ಚೆನ್ನೈ, ಹೈದರಾಬಾದ್​​ನಲ್ಲಿ ಇನ್ನೂ ಮುಂಗಡ ಬುಕಿಂಗ್ ಆರಂಭವೇ ಆಗಿಲ್ಲ. ಆರಂಭ ಆದರೂ ಸಹ ಚೆನ್ನೈನಲ್ಲಿ ತೀರ ಹೆಚ್ಚೆಂದರೆ 300 ರೂಪಾಯಿ ವಿಶೇಷ ಶೋಗೆ ಹಾಗೂ 100 ರೂಪಾಯಿ ಸಾಮಾನ್ಯ ಶೋಗೆ ಬೆಲೆ ಇರಲಿದೆ. ವಿಜಯ್ ಅವರ ಈ ಹಿಂದಿನ ಸಿನಿಮಾಗಳಿಗೆ ಚೆನ್ನೈನಲ್ಲಿ ಇಷ್ಟೆ ಟಿಕೆಟ್ ಬೆಲೆ ಇತ್ತು. ಹೈದರಾಬಾದ್​​ನಲ್ಲಿಯೂ ಸಹ ಇದೇ ಪರಿಸ್ಥಿತಿ ಇರಲಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ನಾಲ್ಕು ಪಟ್ಟು ಹೆಚ್ಚು ಬೆಲೆಗೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ.

‘ಜನ ನಾಯಗನ್’ ವಿಜಯ್ ಅವರ ಕೊನೆಯ ಸಿನಿಮಾ ಆಗಿರಲಿದೆ. ರಾಜಕೀಯ ಪಕ್ಷ ಕಟ್ಟಿರುವ ವಿಜಯ್, ‘ಜನ ನಾಯಗನ್’ ಬಳಿಕ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಳ್ಳುವುದಾಗಿ ಹೇಳಿದ್ದಾರೆ. ‘ಜನ ನಾಯಗನ್’ ಸಿನಿಮಾ ತೆಲುಗಿನ ‘ಭಗವಂತ್ ಕೇಸರಿ’ ಸಿನಿಮಾದ ರೀಮೇಕ್ ಆಗಿದ್ದು, ಸಿನಿಮಾನಲ್ಲಿ ಪೂಜಾ ಹೆಗ್ಡೆ ನಾಯಕಿ, ಮಲಯಾಳಂ ನಟಿ ಮಮಿತಾ ಬಿಜು ಸಹ ನಟಿಸಿದ್ದಾರೆ. ಬಾಬಿ ಡಿಯೋಲ್ ವಿಲನ್. ಎಚ್ ವಿನೋದ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಕೆವಿಎನ್ ಪ್ರೊಡಕ್ಷನ್ಸ್. ಕನ್ನಡದ ‘ಸಖತ್’, ‘ಬೈ ಟು ಲವ್’ ಸಿನಿಮಾಗಳನ್ನು ನಿರ್ಮಿಸಿರುವ ಕೆವಿಎನ್, ಪ್ರಸ್ತುತ ‘ಟಾಕ್ಸಿಕ್’, ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾವನ್ನೂ ನಿರ್ಮಾಣ ಮಾಡುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನೆಲಮಂಗಲ: ಎಣ್ಣೆ ನಶೆಯಲ್ಲಿ ತಮಾಷೆ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವಕ – Kannada News | Drunken Prank Leads to Death: Youth Tragically Dies in Nelamangala

ನೆಲಮಂಗಲ, ಡಿಸೆಂಬರ್​​ 31: ಮದ್ಯದ ನಶೆಯಲ್ಲಿ ತಾಯಿಯ ಜೊತೆ ತಮಾಷೆ ಮಾಡಲು ಹೋಗಿ ನೇಣಿಗೆ ಸಿಲುಕಿ ಯುವಕನೋರ್ವ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ರೋಹಿತ್​​ ನಗರದಲ್ಲಿ ನಡೆದಿದೆ. ವಿಜಯಕುಮಾರ್(28) ಮೃತ ದುರ್ದೈವಿಯಾಗಿದ್ದು, ಮಗನ ಹುಚ್ಚಾಟಕ್ಕೆ ತಾಯಿ ಹಾಗೂ ಸಂಬಂಧಿಕರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

ನಿನ್ನೆ ಸಂಜೆ ಮದ್ಯ ಸೇವಿಸಿ ಮನೆಗೆ ತೆರಳಿದ್ದ ವಿಜಯ್ ಕುಮಾರ್ ತಾಯಿ ಬಳಿ ಖರ್ಚಿಗೆ ಹಣ ನೀಡುವಂತೆ ಕೇಳಿದ್ದ. ಈ ವೇಳೆ ಆಕೆ ಕೊಡಲ್ಲ ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ತೀನಿ ಎಂದು ಬೆದರಿಕೆ ಹಾಕಿದ್ದ. ಬಳಿಕ ತಮಾಷೆ ಮಾಡಲು ಹೋಗಿ ನೇಣಿನ ಕುಣಿಕೆಗೆ ಸಿಲುಕಿ ವಿಜಯ್ ಮೃತಪಟ್ಟಿದ್ದಾರೆ. ನಿನ್ನೆ ರಾತ್ರಿ 8 ಗಂಟೆಗೆ ಘಟನೆ ನಡೆದಿದ್ದು, ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ನೆಲಮಂಗಲ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ.

ಇದನ್ನೂ ಓದಿ: ಲಿಫ್ಟ್​ ಕೊಡುವುದಾಗಿ ಹತ್ತಿಸಿಕೊಂಡು ಕಾರಿನಲ್ಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಇದೇ ರೀತಿ ಹಿಂದೆಯೂ ತಮಾಷೆ ಮಾಡಿದ್ದ ವಿಜಯ್​​

ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್ ಆಗಿದ್ದ ವಿಜಯ್​​ಕುಮಾರ್​​ಗೆ ಮದುವೆ ಮಾಡಬೇಕೆಂದು ತಾಯಿ ಕನಸು ಕಂಡಿದ್ದರು. ಚೆನ್ನಾಗಿ ಮಾತನಾಡುತ್ತಾ ತಮಾಷೆಯ ಸ್ವಾಭಾವ ಹೊಂದಿದ್ದ ವಿಜಯ್​​ ಮದ್ಯಪಾನ ಮಾಡಿ ಬಂದಿದ್ದಕ್ಕೆ ತಾಯಿ ಬೈದಿದ್ದರು. ಆ ವೇಳೆ ಆಕೆಯನ್ನು ತಮಾಷೆಗೆ ಹೆದರಿಸಲು ಹೋಗಿ ವಿಜಯ್​​ ನೇಣಿನ ಕುಣಿಕೆಗೆ ಸಿಲುಕಿದ್ದು, ಮನೆಯವರಿಗೆ ಇದು ಗಮನಕ್ಕೆ ಬರುವಷ್ಟರಲ್ಲಿ ಆತನ​​ ಪ್ರಾಣಪಕ್ಷಿ ಹಾರಿ ಹೋಗಿತ್ತು. ಹೆತ್ತವರ ಬಳಿ ಇದೇ ರೀತಿ ಹಲವು ಬಾರಿ ಈತ ತಮಾಷೆ ಮಾಡಿದ್ದು, ಸಾವಿನ ವಿಚಾರದಲ್ಲಿ ತಮಾಷೆ ಮಾಡಬೇಡ ಕಣೋ ಎಂದು ಹಲವು ಬಾರಿ ತಾಯಿಯೂ ವಿಜಯ್​​ಗೆ ಬುದ್ಧಿ ಹೇಳಿದ್ದರು. ಆದರೂ ಅದೇ ಚಾಳಿ ಮುಂದುವರಿಸಿದ್ದ ಕಾರಣ ಈಗ ಮಗ ಪ್ರಾಣವನ್ನೇ ಕಳೆದುಕೊಂಡಿದ್ದಾನೆ ಎಂದು ಕುಟುಂಬಸ್ಥರು ಅಲವತ್ತುಕೊಂಡಿದ್ದಾರೆ.

ವರದಿ: ಮಂಜುನಾಥ್​​, ಡಿವಿ9 ನೆಲಮಂಗಲ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಜೆಸ್ಟಿಕ್ ಮೆಟ್ರೋದಲ್ಲಿ ಭದ್ರತೆಗೇ ಇಲ್ಲ ಭದ್ರತೆ: ಸರದಿ ಪಾಲಿಸುವಂತೆ ಹೇಳಿದ್ದ ಸಿಬ್ಬಂದಿಗೆ ಪ್ರಯಾಣಿಕರಿಂದ 7 ಬಾರಿ ಕಪಾಳಮೋಕ್ಷ – Kannada News | Bengaluru Majestic Metro: Security Guard Assaulted for Queue Instruction

ಸರದಿ ಪಾಲಿಸುವಂತೆ ಹೇಳಿದ್ದ ಸಿಬ್ಬಂದಿಗೆ ಪ್ರಯಾಣಿಕರಿಂದ 7 ಬಾರಿ ಕಪಾಳಮೋಕ್ಷ

ಬೆಂಗಳೂರು, ಡಿಸೆಂಬರ್ 31: ಬೆಂಗಳೂರಿನ ಕೆಂಪೇಗೌಡ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣದ ಮಜೆಸ್ಟಿಕ್‌ನಲ್ಲಿ ಭಾನುವಾರ ಮಧ್ಯಾಹ್ನ ಮೆಟ್ರೋ (Namma Metro) ಭದ್ರತಾ ಸಿಬ್ಬಂದಿಯೊಬ್ಬರ ಮೇಲೆ ನಾಲ್ವರು ಪ್ರಯಾಣಿಕರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಗ್ರೀನ್ ಲೈನ್ ರೈಲು ಹತ್ತುವಾಗ ಸರದಿಯಲ್ಲಿ ನಿಲ್ಲುವಂತೆ ಸೂಚಿಸಿದ್ದಕ್ಕೆ ಕೋಪಗೊಂಡ ಆರೋಪಿಗಳು ಸಿಬ್ಬಂದಿಯನ್ನು ಥಳಿಸಿದ್ದಾರೆ.

ಭದ್ರತಾ ಸಿಬ್ಬಂದಿಗೇ ಕಾಲಿನಿಂದ ಒದ್ದ ಪ್ರಯಾಣಿಕ

ಹಲ್ಲೆಗೊಳಗಾದ ಭದ್ರತಾ ಸಿಬ್ಬಂದಿಯ ಹೆಸರು ಇಂದ್ರಜಿತ್. ಮಧ್ಯಾಹ್ನ 12.45ರ ಸುಮಾರಿಗೆ ಗ್ರೀನ್ ಲೈನ್‌ನ ಪ್ಲಾಟ್‌ಫಾರ್ಮ್ 3ರಲ್ಲಿ ಈ ಘಟನೆ ನಡೆದಿದೆ. ಮಡವಾರದ ಕಡೆ ಪ್ರಯಾಣಿಸಲು ಬಂದಿದ್ದ ನಾಲ್ವರು ಯುವಕರು ಪ್ಲಾಟ್‌ಫಾರ್ಮ್‌ನಲ್ಲಿ ಸರದಿ ಪಾಲಿಸದೆ ರೈಲಿಗೆ ಏರಲು ಯತ್ನಿಸಿದರು. ಸುರಕ್ಷತೆಯ ದೃಷ್ಟಿಯಿಂದ ಖಾಲಿ ಸ್ಥಳದಲ್ಲಿ ಸರದಿ ರೂಪಿಸಿಕೊಳ್ಳುವಂತೆ ಇಂದ್ರಜಿತ್ ಸೂಚನೆ ನೀಡಿದರು. ಆದರೆ ಅವರು ಸೂಚನೆ ಪಾಲಿಸದೆ 12.47ಕ್ಕೆ ಬಂದ ರೈಲನ್ನು ತಪ್ಪಿಸಿಕೊಂಡರು.

ಇದನ್ನೂ ಓದಿ ಮೆಟ್ರೋ ಪ್ರಯಾಣಿಕರಿಗೆ ಶುಭಸುದ್ದಿ: ಹಸಿರು ಮಾರ್ಗಕ್ಕೆ ಸೇರ್ಪಡೆಗೊಳ್ಳಲಿವೆ 21 ಹೊಸ ರೈಲುಗಳು

ಮುಂದಿನ ರೈಲಿಗೆ ಸರದಿಯಲ್ಲಿ ನಿಲ್ಲುವಂತೆ ಪುನಃ ಹೇಳಿದಾಗ, ಆರೋಪಿಗಳಲ್ಲಿ ಒಬ್ಬರು ಇಂದ್ರಜಿತ್‌ಗೆ ಏಳು ಬಾರಿ ಕಪಾಳಮೋಕ್ಷ ಮಾಡಿದ್ದು, ಮತ್ತೊಬ್ಬರು ಕಾಲಿನಿಂದ ಒದ್ದಿದ್ದಾರೆ ಎನ್ನಲಾಗಿದೆ. ಹಲ್ಲೆಯ ಬಳಿಕ ಮೆಟ್ರೋ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಈ ವೇಳೆ ಇಬ್ಬರು ವಯೋವೃದ್ಧ ಪ್ರಯಾಣಿಕರು ಆರೋಪಿಗಳನ್ನು ಪ್ರಶ್ನಿಸಿ ಮುಂದಿನ ರೈಲಿಗೆ ಏರದಂತೆ ತಡೆದಿದ್ದಾರೆ. ಉಪ್ಪಾರಪೇಟೆ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ನಾಲ್ವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದುದೊಯ್ದಿದ್ದು, ಇಂದ್ರಜಿತ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಎಲೆಕ್ಟ್ರಾನಿಕ್ ಸಿಟಿ ಜನರೇ ಇಲ್ಲಿ ಗಮನಿಸಿ, ಇಂದು ಸಂಜೆಯಿಂದ ಈ ರಸ್ತೆ ಬಂದ್ – Kannada News | Bengaluru: Electronic City Flyover Closed Tonight for New Year Safety

ಬೆಂಗಳೂರು, ಡಿ. 31: ಬೆಂಗಳೂರಿನ ಅತಿ ಉದ್ದದ ಪ್ಲೈ ಓವರ್ ಆಗಿರುವ ಎಲೆಕ್ಟ್ರಾನಿಕ್ ಸಿಟಿ ಪ್ಲೈ ಓವರ್ ಇಂದು ಬಂದ್​​​ ಆಗಲಿದೆ. ಸಿಲ್ಕ್ ಬೋರ್ಡ್​​​ನಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ ಇರುವ 9 ಕಿ.ಲೋ ಮೀಟರ್​​​​ ಉದ್ದವಾಗಿರುವ ಈ ಪ್ಲೈ ಓವರ್ ಹೊಸ ವರ್ಷದ ಪ್ರಯುಕ್ತ ಕ್ಲೋಸ್​​​ ಮಾಡಲಾಗುವುದು. ಇಂದು ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೆ ಈ ಪ್ಲೈ ಓವರ್ ಬಂದ್​​​​ ಮಾಡಲಾಗುವುದು ಎಂದು ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗ ಪೊಲೀಸರು ಮನವಿ ಮಾಡಿದ್ದಾರೆ. ಬೈಕ್, ಕಾರು, ಬಸ್ ಟ್ರಕ್ ಎಲ್ಲಾ ವಾಹನಗಳಿಗೆ ನಿರ್ಬಂಧ ಮಾಡಲಾಗಿದೆ. ಹೊಸ ವರ್ಷಾಚರಣೆ ನಶೆಯಲ್ಲಿ ಅಪಘಾತಗಳು ಆಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಈ ಪ್ಲೈ ಓವರ್ ಬಂದ್​​ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೊಲೀಸರ ಮೇಲೆ ವಿಜಯಲಕ್ಷ್ಮಿ ದರ್ಶನ್ ಆರೋಪ: ಅಸಲಿ ವಿಷಯ ತಿಳಿಸಿದ ಕಮಿಷನರ್ – Kannada News | Bengaluru Police Commissioner Seemanth Kumar Singh reaction to Vijayalakshmi Darshan allegations

ಅಶ್ಲೀಲ ಕಮೆಂಟ್ ಹಾಗೂ ಮೆಸೇಜ್ ಮಾಡಿದವರ ವಿರುದ್ಧ ದರ್ಶನ್ (Darshan) ಪತ್ನಿ ವಿಜಯಲಕ್ಷ್ಮಿ ಅವರು ದೂರು ನೀಡಿದ್ದರು. ಆದರೆ ಪೊಲೀಸರು ಈ ಬಗ್ಗೆ ಕ್ರಮ ತೆಗೆದಕೊಂಡಿಲ್ಲ ಎಂದು ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ಅವರು ಆರೋಪಿಸಿದ್ದರು. ತಮ್ಮ ದೂರನ್ನು ನಿರ್ಲಕ್ಷಿಸಲಾಗಿದೆ ಎಂದು ಅವರು ಹೇಳಿದ್ದರು. ಅದಕ್ಕೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ನನ್ನ ಪ್ರಕಾರ, ವಿಜಯಲಕ್ಷ್ಮಿ ಅವರ ಆರೋಪ ಸುಳ್ಳು. ಎಲ್ಲರಿಗೋಸ್ಕರ ನಾವು ಪೊಲೀಸರು ಇದ್ದೇವೆ. ಯಾವುದೇ ಒಂದು ವರ್ಗಕ್ಕಾಗಿ ಅಲ್ಲ. ನಾವು ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಈ ಪ್ರಕರಣದಲ್ಲಿ ಕೂಡ ನಮ್ಮವರು ತಕ್ಷಣ ಕೇಸ್ ದಾಖಲಿಸಿಕೊಂಡಿದ್ದಾರೆ. ಸಿಸಿಬಿ ಹಂತದಲ್ಲಿ ಮಾಡಿದ್ದೇವೆ. ಡಿಸಿಪಿ ಹಂತದಲ್ಲಿ ತನಿಖೆ ನಡೆಯುತ್ತಿದೆ. ಕೆಲವೊಮ್ಮೆ ತಕ್ಷಣಕ್ಕೆ ಸುಳಿವು ಸಿಗುತ್ತದೆ. ಕೆಲವೊಮ್ಮ ವಿಳಂಬ ಆಗುತ್ತದೆ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶ ಇಲ್ಲ. ಯಾವುದೇ ಕೇಸ್​​ನಲ್ಲಿ ಪೊಲೀಸರು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಮಾಡಿದರೆ ಅಂಥ ಅಧಿಕಾರಿಗಳ ಮೇಲೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಸೀಮಂತ್ ಕುಮಾರ್ (Seemanth Kumar Singh) ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭರ್ಜರಿ ಸೆಂಚುರಿ ಸಿಡಿಸಿದ ದೇವದತ್ ಪಡಿಕ್ಕಲ್, ಮಯಾಂಕ್ ಅಗರ್ವಾಲ್ – Kannada News | Devdutt Padikkal and Mayank Agarwal Smashed Century in VHT

ಅಹಮದಾಬಾದ್​ನ ರೈಲ್ವೇಸ್ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ವಿಜಯ ಹಝಾರೆ ಟೂರ್ನಿಯ ಗ್ರೂಪ್-ಎ ಪಂದ್ಯದಲ್ಲಿ ಕರ್ನಾಟಕ ತಂಡ ಬೃಹತ್ ಮೊತ್ತ ಪೇರಿಸಿದೆ. ಪುದುಚೇರಿ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡಕ್ಕೆ ನಾಯಕ ಮಯಾಂಕ್ ಅಗರ್ವಾಲ್ ಹಾಗೂ ದೇವದತ್ ಪಡಿಕ್ಕಲ್ ಭರ್ಜರಿ ಆರಂಭ ಒದಗಿಸಿದ್ದರು.

ಆರಂಭದಿಂದಲೇ ಉತ್ತಮ ಜೊತೆಯಾಟ ಪ್ರದರ್ಶಿಸಿದ ಈ ಜೋಡಿಯು ಮೊದಲ ವಿಕೆಟ್​ಗೆ ಪೇರಿಸಿದ್ದು ಬರೋಬ್ಬರಿ 228 ರನ್​ಗಳು. ಇದರ ನಡುವೆ 116 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 113 ರನ್ ಬಾರಿಸಿ ದೇವದತ್ ಪಡಿಕ್ಕಲ್ ಔಟಾದರು.

ಇದಾಗ್ಯೂ ಮತ್ತೊಂದೆಡೆ ಇನಿಂಗ್ಸ್ ಕಟ್ಟುವ ಕಾಯಕ ಮುಂದುವರೆಸಿದ ಮಯಾಂಕ್ ಅಗರ್ವಾಲ್ 124 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 15 ಫೋರ್​ಗಳನ್ನು ಬಾರಿಸಿದರು. ಈ ಮೂಲಕ 132 ರನ್​ಗಳನ್ನು ಬಾರಿಸಿ ಮಯಾಂಕ್​​ ವಿಕೆಟ್ ಒಪ್ಪಿಸಿದರು.

ಆ ಬಳಿಕ ಬಂದ ಕರುಣ್ ನಾಯರ್ ತಮ್ಮ ಅನುಭವಯನ್ನು ಧಾರೆಯೆದರು. ಈ ಮೂಲಕ 34 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ ಅಜೇಯ 64 ರನ್ ಬಾರಿಸಿದರು.

ಇನ್ನು ಸ್ಮರಣ್ ರವಿಚಂದ್ರನ್ 21 ರನ್​ಗಳ ಕೊಡುಗೆ ನೀಡಿದರೆ, ಅಭಿನವ್ ಮನೋಹರ್ 6 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ ಅಜೇಯ 21 ರನ್ ಬಾರಿಸಿದರು. ಈ ಮೂಲಕ ಕರ್ನಾಟಕ ತಂಡವು 50 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 363 ರನ್​ ಕಲೆಹಾಕಿದೆ.

ಪುದುಚೇರಿ (ಪ್ಲೇಯಿಂಗ್ XI): ಸಿದಕ್ ಸಿಂಗ್, ವಿಶಾಲ್ ಖೋಖರ್, ಅಜಯ್ ರೊಹೆರಾ (ವಿಕೆಟ್ ಕೀಪರ್), ನೆಯಾನ್ ಶ್ಯಾಮ್ ಕಂಗಾಯನ್, ಜಶ್ವಂತ್ ಶ್ರೀರಾಮ್, ಮೋಹಿತ್ ಕಾಳೆ, ಪಾರ್ಥ್ ವಘಾನಿ, ಅಮಾನ್ ಖಾನ್ (ನಾಯಕ), ಜಯಂತ್ ಯಾದವ್, ಸಾಗರ್ ಉದೇಶಿ, ವಿಕನೇಶ್ವರನ್ ಮರಿಮುತ್ತು.

ಇದನ್ನೂ ಓದಿ: ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಅಭಿಷೇಕ್ ಶರ್ಮಾ

ಕರ್ನಾಟಕ (ಪ್ಲೇಯಿಂಗ್ XI): ಮಯಾಂಕ್ ಅಗರ್ವಾಲ್ (ನಾಯಕ), ದೇವದತ್ ಪಡಿಕ್ಕಲ್, ಕರುಣ್ ನಾಯರ್, ಸ್ಮರಣ್ ರವಿಚಂದ್ರನ್, ಕೃಷ್ಣನ್ ಶ್ರೀಜಿತ್ (ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ಅಭಿನವ್ ಮನೋಹರ್, ಶ್ರೀಶ ಆಚಾರ್, ಅಭಿಲಾಷ್ ಶೆಟ್ಟಿ, ವಿಧ್ವತ್ ಕಾವೇರಪ್ಪ, ಮನ್ವಂತ್ ಕುಮಾರ್.

Source link

Happy New Year 2026: ಹೊಸ ವರ್ಷದ ದಿನ ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿ ಶುಭಾಶಯಗಳನ್ನು ತಿಳಿಸಿ – Kannada News | Happy New Year 2026: Celebrate the New Year by sending these meaningful wishes to your loved ones

2025 ಕ್ಕೆ ವಿದಾಯ ಹೇಳಿ 2026 ನೇ ಸಂವತ್ಸರವನ್ನು ಸ್ವಾಗತಿಸುವ ಸಂಭ್ರಮದ ಕ್ಷಣವಿದು. ಹೊಸ ವರ್ಷ (New Year) ಹೊಸ ಅವಕಾಶಗಳು, ಹೊಸ ಭರವಸೆಗಳು ಮತ್ತು ಯಶಸ್ಸಿನ ಆರಂಭದ ಸೂಚಕವಾಗಿದ್ದು,  ಈ ಸಂಭ್ರಮದ ಕ್ಷಣದಲ್ಲಿ ಮೋಜು ಮಸ್ತಿಯ ಜೊತೆ ಜೊತೆಗೆ ಮುಂಬರುವ ಹೊಸ ವರ್ಷವು ಸಮೃದ್ಧಿ, ಯಶಸ್ಸು ಮತ್ತು ಸಂತೋಷವನ್ನು ತರಲಿ ಎಂದು ಎಲ್ಲರೂ ಬಯಸುತ್ತಾರೆ. ಹಾಗೆಯೇ ಹೊಸ ವರ್ಷದ ಸಂದರ್ಭದಲ್ಲಿ, ಪ್ರತಿಯೊಬ್ಬರ ಜೀವನವು ಸಂತೋಷದಿಂದ ತುಂಬಿರಲಿ ಎಂದು ಆಶಿಸುತ್ತಾ ನಾವು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ಅಂತೆಯೇ 2026 ರ ಹೊಸ ವರ್ಷದ ಸಂದರ್ಭದಲ್ಲಿ  ನಿಮ್ಮ ಪ್ರೀತಿಪಾತ್ರರ ಹೃದಯಕ್ಕೆ ಇನ್ನಷ್ಟು ಹತ್ತಿರವಾಗಲು ಈ ರೀತಿಯ ಅರ್ಥಪೂರ್ಣ ಶುಭಾಶಯಗಳನ್ನು ತಿಳಿಸಿ.

ಹೊಸ ವರ್ಷದ ಶುಭಾಶಯಗಳನ್ನು ತಿಳಿಸಲು ಇಲ್ಲಿವೆ ಸಂದೇಶ:

  • ಮರಳಿ ಬಂದಿದೆ ಹೊಸ ವರುಷ, ಮರಳಿ ತಂದಿದೆ ರಸ ನಿಮಿಷ. ನೋವು ನವಿಲಿದೆ ಪ್ರತಿ ದಿವಸ, ಹೊತ್ತು ಬರುತಿದೆ ಹೊಂಗನಸ… ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
  • ಜೀವನವು ಒಂದು ಪ್ರವಾಸ ಇದ್ದಂತೆ, 2026 ರ ನಿಮ್ಮ ಜೀವನ ಪ್ರಯಾಣ ಸಂತೋಷದಾಯಕವಾಗಿರಲಿ. ಹ್ಯಾಪಿ ನ್ಯೂ ಇಯರ್.‌
  • ಹೊಸ ವರ್ಷ ಎಂದರೆ ಕೇವಲ ಕ್ಯಾಲೆಂಡರ್‌ ಬದಲಿಸುವ ದಿನವಲ್ಲ. ಅದು ನಮ್ಮನ್ನು ನಾವು ಸುಧಾರಿಸಿಕೊಳ್ಳಲು, ಹಿಂದಿನ ಕಹಿ, ನೋವುಗಳನ್ನು ಮರೆತು ಹೊಸ ಜೀವನವನ್ನು ಆರಂಭಿಸಲಿರುವ ಒಂದು ಅವಕಾಶ. ಈ ಹೊಸ ವರುಷ ನಿಮ್ಮ ಜೀವನದಲ್ಲಿ ಹರುಷವನ್ನು ತರಲೆಂದು ಹಾರೈಸುತ್ತೇನೆ.
  • ಹಿಂದಿನ ವರ್ಷದ ನೋವುಗಳನ್ನು, ಕಹಿ ನೆನಪುಗಳನ್ನು ಮರೆತು ಈ ವರ್ಷವನ್ನು ಸಂತೋಷದಿಂದ ಕಳೆಯಿರಿ, ಹೊಸ ವರ್ಷದ ಶುಭಾಶಯಗಳು.
  • ಹೊಸ ವರ್ಷ ನಿಮ್ಮ ಬಾಳಲ್ಲಿ ಹೊಸ ಹರ್ಷ ತರಲಿ, ನಿಮ್ಮ ಕನಸುಗಳೆಲ್ಲಾ ನನಸಾಗಲಿ, ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
  • ಹ್ಯಾಪಿ ನ್ಯೂ ಇಯರ್.‌ 2026 ರ ಹೊಸ ಆರಂಭವು ನಿಮ್ಮ ಜೀವನದಲ್ಲಿ ಹೆಚ್ಚು ಸಂತೋಷ ಮತ್ತು ಯಶಸ್ಸನ್ನು ತರಲಿ ಎಂದು ನಾನು ಹಾರೈಸುತ್ತೇನೆ.
  • 2026 ರ ಈ ವರ್ಷ ಆರೋಗ್ಯ, ಸಂಪತ್ತು, ಸಮೃದ್ಧಿ, ಸಂತೋಷ ನಿಮ್ಮದಾಗಲಿ ಎಂದು ಬಯಸುತ್ತೇನೆ. ಹೊಸ ವರ್ಷದ ಶುಭಾಶಯಗಳು.
  • ಹಳೆಯ ನೋವು, ಸೋಲಿನಿಂದ ಹೊರ ಬಂದು ಹೊಸ ಜೀವನವನ್ನು ಆರಂಭಿಸಿ. ನಿಮಗೂ ನಿಮ್ಮ ಮನೆಯವರಿಗೂ ಹೊಸ ವರ್ಷದ ಶುಭಾಶಯಗಳು.
  • ಪ್ರತಿ ಅಂತ್ಯದೊಂದಿಗೆ ಹೊಸ ಆರಂಭ ಶುರುವಾಗುತ್ತದೆ. ಹೊಸ ವರ್ಷವು ನಿಮಗೆ ಪ್ರತಿದಿನ ಸಂತೋಷ, ಯಶಸ್ಸು ಮತ್ತು ಪ್ರೀತಿಯನ್ನು ತರಲಿ.
  • ನೀವು ಕಂಡಂತಹ ಕನಸು, ಆಸೆಗಳೆಲ್ಲಾ ಈ ವರ್ಷ ನನಸಾಗಲಿ ಎಂದು ಹಾರೈಸುತ್ತೇನೆ. ನಿಮಗೂ ನಿಮ್ಮ ಕುಟುಂಬಕ್ಕೂ ಹೊಸ ವರ್ಷದ ಶುಭಾಶಯಗಳು.
  • ಹಳೆಯ ಕಹಿಯನ್ನು ಮರೆಯೋಣ, ಹೊಸತನವನ್ನು ಸ್ವಾಗತಿಸೋಣ, ಹೊಸ ವರ್ಷದ ಹಾರ್ದಿಕ ಶುಭಾಶಯಗಳು
  • ಹೊಸ ವರ್ಷದ ಶುಭಾಶಯಗಳು, ಈ ಹೊಸ ವರ್ಷದೊಂದಿಗೆ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿ, ನಿಮ್ಮ ಆಸೆಗಳೆಲ್ಲಾ ಈಡೇರಲಿ.
  • ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು 365 ಪುಟಗಳ ಹೊಸ ಪುಸ್ತಕ ನಿನ್ನ ಕೈ ಸೇರಿದೆ. ಅದನ್ನು ಸರಿಯಾಗಿ ಬಳಸಿಕೋ ಗೆಳೆಯ. ಹ್ಯಾಪಿ ನ್ಯೂ ಇಯರ್.‌
  • ನೀವು ಇಡುವ ಪ್ರತಿ ಹೆಜ್ಜೆಯೂ ಯಶಸ್ಸಿನ ಪಥವಾಗಲಿ, ನಿಮ್ಮ ಈ ವರುಷ ಲವಲವಿಕೆಯಿಂದ ಕೂಡಿರಲಿ.
  • ಕಾಲ ಬದಲಾದರೂ ಗುಣವನ್ನು ಬದಲಿಸದೆ ನನ್ನೊಂದಿಗೆ ಸದಾ ಜೊತೆಯಾಗಿ ನಿಂತಿರುವ ಜೀವದ ಗೆಳತಿಗೆ ಹೊಸ ವರ್ಷದ ಶುಭಾಶಯಗಳು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:56 pm, Wed, 31 December 25

Source link

VHT ಯಲ್ಲಿ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ ಪ್ಲೇಯರ್ಸ್ ಪಟ್ಟಿ ಇಲ್ಲಿದೆ – Kannada News | Virat Kohli, KL Rahul and Jadeja to play Vijay Hazare Trophy in January

ವಿಜಯ ಹಝಾರೆ ಟೂರ್ನಿಯ ಮೊದಲ ಸುತ್ತಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದ ಟೀಮ್ ಇಂಡಿಯಾ ಕೆಲ ಆಟಗಾರರು ಜನವರಿಯಲ್ಲಿ ನಡೆಯಲಿರುವ ದ್ವಿತೀಯ ಸುತ್ತಿನಲ್ಲೂ ಕಣಕ್ಕಿಳಿಯಲಿದ್ದಾರೆ. ಅದರಲ್ಲೂ ಭಾರತ ಏಕದಿನ ತಂಡದ ಆಟಗಾರರು ಜನವರಿ ಮೊದಲ ವಾರದಲ್ಲಿ ದೇಶೀಯ ಟೂರ್ನಿಯಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ.

ಅದರಂತೆ ಭಾರತ ಟೆಸ್ಟ್ ಮತ್ತು ಏಕದಿನ ತಂಡದ ನಾಯಕರಾಗಿರುವ ಶುಭ್​​ಮನ್ ಗಿಲ್ ಜನವರಿ 3 ಮತ್ತು 6 ರಂದು ಪಂಜಾಬ್ ಪರ ಪಂದ್ಯಗಳನ್ನು ಆಡಲಿದ್ದಾರೆ ಎಂದು ತಿಳಿದು ಬಂದಿದೆ. ಪ್ರಸ್ತುತ ಮಾಹಿತಿ ಪ್ರಕಾರ, ಶುಭ್​ಮನ್ ಗಿಲ್ ಸಿಕ್ಕಿಂ ಹಾಗೂ ಗೋವಾ ವಿರುದ್ಧದ ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದಾರೆ.

ಜನವರಿ 6 ಮತ್ತು 8 ರಂದು ನಡೆಯಲಿರುವ ಪಂದ್ಯಗಳಲ್ಲಿ ಸರ್ವಿಸಸ್ ಮತ್ತು ಗುಜರಾತ್ ವಿರುದ್ಧದ ಪಂದ್ಯಗಳಲ್ಲಿ ಕಣಕ್ಕಿಳಿಯುವುದಾಗಿ ಟೀಮ್ ಇಂಡಿಯಾ ಆಲ್​ರೌಂಡರ್ ರವೀಂದ್ರ ಜಡೇಜಾ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​(ಎಸ್‌ಸಿಎ)ಗೆ ತಿಳಿಸಿದ್ದಾರೆ. 

ಕೆಎಲ್ ರಾಹುಲ್ ಜನವರಿ ಮೊದಲ ವಾರದಲ್ಲಿ ಕರ್ನಾಟಕ ತಂಡವನ್ನು ಸೇರಿಕೊಳ್ಳಲಿದ್ದಾರೆ. ಕರ್ನಾಟಕ ತಂಡವುಜನವರಿ 3 ಮತ್ತು 6 ರಂದು ಅಹಮದಾಬಾದ್‌ನಲ್ಲಿ ತ್ರಿಪುರ ಮತ್ತು ರಾಜಸ್ಥಾನ್ ವಿರುದ್ಧ ಕಣಕ್ಕಿಳಿಯಲಿವೆ. ಈ ಪಂದ್ಯಗಳಲ್ಲಿ ಕೆಎಲ್ ರಾಹುಲ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಏತನ್ಮಧ್ಯೆ, ಯಶಸ್ವಿ ಜೈಸ್ವಾಲ್ ಜೈಪುರ ತಲುಪಿದ್ದಾರೆ. ಅದರಂತೆ ಬುಧವಾರ (ಡಿಸೆಂಬರ್ 31) ಗೋವಾ ವಿರುದ್ಧ ಮುಂಬೈ ಪರ ಕಣಕ್ಕಿಳಿಯುವ ನಿರೀಕ್ಷೆಯಿದೆ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​(ಎಂಸಿಎ) ತಿಳಿಸಿದೆ

ಇನ್ನು ಎರಡು ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ, ಜನವರಿ 6 ರಂದು ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ. ಆದರೆ ಮುಂಬೈ ಪರ ಮೊದಲೆರಡು ಮ್ಯಾಚ್​ಗಳನ್ನಾಡಿದ್ದ ರೋಹಿತ್ ಶರ್ಮಾ ಜನವರಿ ಮೊದಲ ವಾರದಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ತಿಳಿದು ಬಂದಿದೆ.

ಈ ಎಲ್ಲಾ ಪಂದ್ಯಗಳ ಬಳಿಕ ಟೀಮ್ ಇಂಡಿಯಾ ಆಟಗಾರರು ಭಾರತ ಏಕದಿನ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಅಂದರೆ ಟೀಮ್ ಇಂಡಿಯಾ ನ್ಯೂಝಿಲೆಂಡ್ ವಿರುದ್ಧದ ಸರಣಿಗಾಗಿ ಜನವರಿ 7-8 ರಂದು ಬರೋಡಾದಲ್ಲಿ ಸೇರುವ ನಿರೀಕ್ಷೆಯಿದೆ. ಹೀಗಾಗಿ ಭಾರತ ಏಕದಿನ ತಂಡದಲ್ಲಿರುವ ಆಟಗಾರರು ಜನವರಿ ಮೊದಲ ವಾರದ ಬಳಿಕ ವಿಜಯ ಹಝಾರೆ ಟೂರ್ನಿಯಲ್ಲಿ ಕಣಕ್ಕಿಳಿಯುವುದಿಲ್ಲ.

ಇದನ್ನೂ ಓದಿ: ಟಿ20 ವಿಶ್ವಕಪ್​ಗೆ 3 ತಂಡಗಳು ಪ್ರಕಟ

ಜನವರಿ ಮೊದಲ ವಾರದಲ್ಲಿ ವಿಜಯ ಹಝಾರೆ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…

  • ವಿರಾಟ್ ಕೊಹ್ಲಿ (ದೆಹಲಿ)
  • ಕೆಎಲ್ ರಾಹುಲ್ (ಕರ್ನಾಟಕ)
  • ಶುಭ್​ಮನ್ ಗಿಲ್ (ಪಂಜಾಬ್)
  • ಯಶಸ್ವಿ ಜೈಸ್ವಾಲ್ (ಮುಂಬೈ)
  • ರವೀಂದ್ರ ಜಡೇಜಾ (ಗುಜರಾತ್)
  • ಸೂರ್ಯಕುಮಾರ್ ಯಾದವ್ (ಮುಂಬೈ)

Source link

ವೈಕುಂಠ ಏಕಾದಶಿ ಕಾರ್ಯಕ್ರಮದ ವೇಳೆ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ವ್ಯಕ್ತಿ – Kannada News | Knife Wielding Man Lunges at Policeman in Tamil Nadu, Incident Caught on Camera

ತಿರುಪುರ, ಡಿಸೆಂಬರ್ 31: ವೈಕುಂಠ ಏಕಾದಶಿ(Vaikunta Ekadashi) ಕಾರ್ಯಕ್ರಮದ ವೇಳೆ ದೇವಸ್ಥಾನದ ಸಮೀಪ ವ್ಯಕ್ತಿಯೊಬ್ಬ ಪೊಲೀಸ್ ಅಧಿಕಾರಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ತಮಿಳುನಾಡಿನ ತಿರುಪುರದಲ್ಲಿ ಡಿ.30ರಂದು ನಡೆದಿದೆ. ಧಾರ್ಮಿಕ ಕಾರ್ಯಕ್ರಮ ಸಮಯದಲ್ಲಿ ಈ ಘಟನೆ ನಡೆದಿದ್ದು, ಜನರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಪೊಲೀಸ್ ಕಾನ್​ಸ್ಟೆಬಲ್ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ, ಪೊಲೀಸರ ಪ್ರಕಾರ ಡಿಸೆಂಬರ್ 30ರಂದು ವೀರರಾಘವ ಪೆರುಮಾಳ್ ದೇವಸ್ಥಾನದ ಹೊರಗೆ ಈ ಘಟನೆ ನಡೆದಿದ್ದು, ಅಲ್ಲಿ ಉತ್ಸವವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಭಕ್ತರು ಸೇರಿದ್ದರು.

ಆ ವ್ಯಕ್ತಿ ಭಕ್ತರ ಮೇಲೆ ಹಲ್ಲೆಗೆ ಮುಂದಾಗಿದ್ದ ಅಧಿಕಾರಿಗಳು ತಿಳಿಸಿದ್ದಾರೆ, ಈ ಸಂದರ್ಭದಲ್ಲಿ ಸ್ಥಳದಲ್ಲಿ ನಿಯೋಜಿಸಲಾದ ಪೊಲೀಸ್ ಕಾನ್‌ಸ್ಟೆಬಲ್ ಮಧ್ಯಪ್ರವೇಶಿಸಿದ್ದರು ಆಗ ಅವರ ಮೇಲೂ ಹಲ್ಲೆಗೆ ಯತ್ನಿಸಿದ್ದ. ವೈರಲ್ ಆಗಿರುವ ವೀಡಿಯೊದಲ್ಲಿ, ಆ ವ್ಯಕ್ತಿ ಪೊಲೀಸರನ್ನು ಆಕ್ರಮಣಕಾರಿಯಾಗಿ ಬೆನ್ನಟ್ಟುತ್ತಿರುವುದನ್ನು ಕಾಣಬಹುದು, ಆದರೆ ಪೊಲೀಸ್ ಸಿಬ್ಬಂದಿ ರಕ್ಷಣಾತ್ಮಕ ಕ್ರಮವಾಗಿ ತಮ್ಮ ಬೆಲ್ಟ್‌ಗಳನ್ನು ಬಳಸಿ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ನಂತರ ಪೊಲೀಸರು ಆ ವ್ಯಕ್ತಿಯನ್ನು ಸುರಕ್ಷಿತವಾಗಿ ತಿರುಪುರ್ ದಕ್ಷಿಣ ಪೊಲೀಸ್ ಠಾಣೆಗೆ ಕರೆದೊಯ್ದರು.

ತಿರುಪುರ ಜಿಲ್ಲೆಯಲ್ಲಿ ದೇವಾಲಯ ಉತ್ಸವದ ಸಂದರ್ಭದಲ್ಲಿ ಯುವಕನೊಬ್ಬ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ಮಾಡಲು ಯತ್ನಿಸಿದ್ದಾನೆ. ಆತ ಸಾರ್ವಜನಿಕರ ಮೇಲೆ ದೌರ್ಜನ್ಯ ಎಸಗಿದ್ದಾನೆ. ಮತ್ತು ಒಬ್ಬ ಕಾನ್‌ಸ್ಟೆಬಲ್ ಅವನನ್ನು ತಡೆಯಲು ಪ್ರಯತ್ನಿಸಿದಾಗ, ಅವನು ಹೆಚ್ಚು ಚಾಕುವಿನಿಂದ ಹಲ್ಲೆ ಮಾಡಲು ಪ್ರಯತ್ನಿಸಿದ್ದಾನೆ. ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಮತ್ತಷ್ಟು ಓದಿ: ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ: ಚಾಕುವಿನಿಂದ ಇರಿದು ಯುವಕನಿಗೆ ಹಲ್ಲೆ

ಪ್ರಾಥಮಿಕ ತನಿಖೆಯ ಪ್ರಕಾರ, ಯುವಕ ಮಾನಸಿಕ ಅಸ್ವಸ್ಥನಂತೆ ಕಂಡಿದ್ದಾನೆ ಮತ್ತು ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾನೆ. ವೈದ್ಯರು ಮಾನಸಿಕ ಸಮಸ್ಯೆಗಳನ್ನು ದೃಢಪಡಿಸಿದರೆ, ಮುಂದಿನ ಕ್ರಮವನ್ನು ಕೈಬಿಡಬಹುದು. ಆತ ಮಾನಸಿಕವಾಗಿ ಸದೃಢನೆಂದು ಕಂಡುಬಂದರೆ, ಜೈಲಿಗೆ ಕಳುಹಿಸಲಾಗುತ್ತದೆ. ಸ್ಥಳೀಯರು ಮಾತನಾಡಿ, ಈ ಹಿಂದೆಯೂ ಈ ಪ್ರದೇಶದಲ್ಲಿ ಆತ ಆಕ್ರಮಣಕಾರಿಯಾಗಿ ವರ್ತಿಸಿದ್ದಾನೆ ಎಂದು ಹೇಳಿದ್ದಾರೆ.

ಹಲ್ಲೆ ವಿಡಿಯೋ

ಇತ್ತೀಚೆಗೆ ತಿರುವಲ್ಲೂರು ಜಿಲ್ಲೆಯಲ್ಲಿ ಐವರು ಬಾಲಾಪರಾಧಿಗಳ ಗುಂಪೊಂದು ಒಡಿಶಾ ಯುವಕನ ಮೇಲೆ ಹಲ್ಲೆ ನಡೆಸಿ, ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಈ ಘಟನೆ ನಡೆದಿದೆ. ಕಾನೂನು ಸುವ್ಯವಸ್ಥೆಯ ಬಗ್ಗೆ ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿವೆ. ಈ ಬೆಳವಣಿಗೆಗಳ ನಡುವೆ, ತಿರುಪುರದ ಘಟನೆ ಹೊಸ ಚರ್ಚೆಗೆ ನಾಂದಿ ಹಾಡಿದೆ. ಆದರೆ, ಈ ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿ ಘಟನೆ ನಡೆದ ಸಮಯದಲ್ಲಿ ಮದ್ಯದ ಅಮಲಿನಲ್ಲಿ ಇರಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link