ಚಳಿಗಾಲದಲ್ಲೇಕೆ ಕೀಲು ನೋವು ಹೆಚ್ಚಾಗಿ ಕಂಡುಬರುತ್ತೆ ಗೊತ್ತಾ? ತಡೆಯಲು ಈ ಸಲಹೆ ಪಾಲಿಸುವುದನ್ನು ಮರೆಯಬೇಡಿ – Kannada News | Winter Joint Pain: Causes & Effective Solutions

ಚಳಿಗಾಲದಲ್ಲಿ ಕಂಡುಬರುವ ಕೀಲು ನೋವು ಚಳಿಗಾಲದಲ್ಲಿ, ಅನೇಕರಿಗೆ ಕೀಲು ನೋವು (Joint Pain), ಬಿಗಿತದಿಂದ ನಡೆಯಲು ಅಥವಾ ಕುಳಿತುಕೊಳ್ಳಲು ತೊಂದರೆಯಾಗುತ್ತದೆ. ಅದರಲ್ಲಿಯೂ ಬೆಳಿಗ್ಗೆಯಿಂದ ಸಂಜೆವರೆಗೆ ಒಂದೇ ಜಾಗದಲ್ಲಿ ಕುಳಿತಲ್ಲಿಯೇ ಇದ್ದರೆ ಇಂತಹ ನೋವುಗಳು ಹೆಚ್ಚಾಗುತ್ತದೆ. ಶೀತ ಹೆಚ್ಚಾದಂತೆ, ದೇಹದ ಚಟುವಟಿಕೆಯೂ ಸೀಮಿತವಾಗುತ್ತದೆ, ಇದು ಕೀಲುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಅನೇಕರು ಇದನ್ನು ನಿರ್ಲಕ್ಷಿಸುತ್ತಾರೆ, ಆದರೆ ಇದು ದಿನಕಳೆದಂತೆ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಅದರಲ್ಲಿಯೂ ಚಳಿಗಾಲದಲ್ಲಿ ಕೀಲು ನೋವು ವಯಸ್ಸಾದವರಿಗೆ ಮಾತ್ರವಲ್ಲ ಯುವ ಜನರಲ್ಲಿಯೂ…

Read More

ಆತ್ಮಹತ್ಯೆ ಮಾಡಿಕೊಳ್ಳಲು ಕಾಡಿಗೆ ಹೋದವನಿಗೆ ವಿಷ್ಣುವಿನ ದರ್ಶನ; ದೇವಾಲಯ ಕಟ್ಟಿ ಪೂಜಿಸಿದ ಬೀದರ್​​​ನ ಜನ – Kannada News | Karnataka’s 1000 Year Old Vishnu Temple: Bidar Forest Finds Healing Waters

ಬೀದರ್, ಡಿ.31: ಇಂದಿನ ಆಧುನಿಕ ಕಾಲದಲ್ಲೂ ಆಧ್ಯಾತ್ಮಿಕ ವಿಚಾರಗಳ ಮೇಲೆ ನಂಬಿಕೆ ಇದೆ. ಈ ನಂಬಿಕೆಗೆ ಕೆಲವೊಂದು ಅಚ್ಚರಿಯ ಸಂಗತಿಗಳು ಕಾರಣ. ಭಾರತದ ಅನೇಕ ಕಡೆ ಕಳೆದ 10 ವರ್ಷಗಳಿಂದ ಪುರಾತನ ದೇವಾಲಯಗಳು ಪತ್ತೆಯಾಗುತ್ತಿದೆ. ಜತೆಗೆ ಅವುಗಳ ಜೀರ್ಣೋದ್ಧಾರ ಕೂಡ ನಡೆಯುತ್ತಿದೆ. ಇದೀಗ ಇಂತಹದೇ ಘಟನೆಯೊಂದು ಬೀದರ್​​ನಲ್ಲಿ ನಡೆದಿದೆ. ಜಿಲ್ಲೆಯ ಭಾಲ್ಕಿ ತಾಲೂಕಿನ ಸೇವಾನಗರ ತಾಂಡಾದ ಬಳಿಯ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಪುರಾತನ ವಿಷ್ಣು ದೇವಸ್ಥಾನಯೊಂದು (Bidar Ancient Vishnu Temple) ಐದು ವರ್ಷಗಳ ಹಿಂದೆ ಪತ್ತೆಯಾಗಿತ್ತು….

Read More

ಕರ್ನಾಟಕ ರಾಜ್ಯ ‘ಗುರುಧರ್ಮ ಪ್ರಚಾರಣ ಯುವಜನ ಸಭಾ’ಕ್ಕೆ ನೂತನ ಸಾರಥಿ; ಗೋಪಿ ಕೃಷ್ಣಪ್ಪ ಅಧ್ಯಕ್ಷರಾಗಿ ನೇಮಕ! – Kannada News | Gopi Krishnappa Leads Karnataka Gurudharma Sabha: Spreading Shree Narayana Guru’s Ideals

ಕರ್ನಾಟಕ ರಾಜ್ಯ ‘ಗುರುಧರ್ಮ ಪ್ರಚಾರಣ ಯುವಜನ ಸಭಾ’ಕ್ಕೆ ನೂತನ ಸಾರಥಿ ಬೆಂಗಳೂರು, ಡಿಸೆಂಬರ್ 31: ಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಪಸರಿಸುವ ನಿಟ್ಟಿನಲ್ಲಿ ಕೇರಳದ ಶಿವಗಿರಿ ಮಠದ ಶ್ರೀ ನಾರಾಯಣ ಧರ್ಮ ಸಂಘಂ ಟ್ರಸ್ಟ್ ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ ರಾಜ್ಯ ಗುರುಧರ್ಮ ಪ್ರಚಾರಣ ಯುವಜನ ಸಭಾದ ನೂತನ ಅಧ್ಯಕ್ಷರಾಗಿ ಗೋಪಿ ಕೃಷ್ಣಪ್ಪ ಅವರನ್ನು ಅಧಿಕೃತವಾಗಿ ನೇಮಕ ಮಾಡಲಾಗಿದೆ. ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತಗಳನ್ನು ಯುವಜನತೆಯಲ್ಲಿ ಮೂಡಿಸುವ ನಿಟ್ಟಿನಲ್ಲಿ ಶಿವಗಿರಿ ಮಠದ ಗುರುಧರ್ಮ…

Read More

‘ತೀರ್ಥರೂಪ ತಂದೆಯವರಿಗೆ’ ವಿಮರ್ಶೆ: ಭಾವನೆಗಳ ಪಯಣದಲಿ ‘ಹೊಂದಿಸಿ ಬರೆಯಿರಿ’ ಆಟ – Kannada News | Nihar Mukesh and Rachana Inder Starrer Ramenahalli Jagannatha Directional Theertharoopa Thandeyavarige Movie Review in Kannada

ತೀರ್ಥರೂಪ ತಂದೆಯವರಿಗೆ ಸಿನಿಮಾ ವಿಮರ್ಶೆ 2023ರಲ್ಲಿ ಬಂದ ‘ಹೊಂದಿಸಿ ಬರೆಯಿರಿ’ ಸಿನಿಮಾ ಗಮನ ಸೆಳೆಯಿತು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ರಾಮೇನಹಳ್ಳಿ ಜಗನ್ನಾಥ. ಈಗ ಅವರು ‘ತೀರ್ಥರೂಪ ತಂದೆಯವರಿಗೆ’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸ್ಟಾರ್ ಕಲಾವಿದರು ಇಲ್ಲದೆ ಇದ್ದರೂ ಟ್ರೇಲರ್ ಮೂಲಕ ಈ ಸಿನಿಮಾ ಗಮನ ಸೆಳೆದಿದೆ. ಆ ಚಿತ್ರದ ವಿಮರ್ಶೆ ಇಲ್ಲಿದೆ. ಜಾನಕಿ (ಸಿತಾರಾ) ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡವಳು. ಈಗ ಆಕೆಗೆ ಮಗನೇ ಪ್ರಪಂಚ. ಆದರೆ, ಮಗ ಪೃಥ್ವಿ ಸಂಚಾರಿ (ನಿಹಾರ್ ಮುಕೇಶ್​​)…

Read More

ಕೋಲಾರ: ಒಂದುವರೆ ಗಂಟೆಯಲ್ಲಿ 21 ಜನರಿಗೆ ಕಚ್ಚಿ ಗಾಯ ಮಾಡಿದ ಬೀದಿ ನಾಯಿ – Kannada News | Karnataka Stray Dog Menace: Kolar Incident Sparks Safety Concerns

ಕೋಲಾರ, ಡಿ.31: ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಈ ಬೀದಿಗಳು ಸಾರ್ವಜನಿಕರಿಗೆ ಕಚ್ಚಿರುವ ಹಲವು ಪ್ರಕರಣಗಳು ವರದಿಯಾಗಿವೆ. ಇದೀಗ ಕೋಲಾರದಲ್ಲಿ ಬೀದಿ ನಾಯಿ ಕಚ್ಚಿರುವ ವಿಡಿಯೋವೊಂದು ವೈರಲ್​​ ಆಗಿದೆ. ಈ ಬಗ್ಗೆ ಸಿಸಿಟಿವಿ ವಿಡಿಯೋ ಲಭ್ಯವಾಗಿದ್ದು, ಒಂದುವರೆ ಗಂಟೆ ಅವಧಿಯಲ್ಲಿ ಸುಮಾರು 21 ಜನರಿಗೆ ಕಚ್ಚಿ ಗಾಯಗೊಳಿಸಿದೆ. ಈ ನಾಯಿ ಕೋಲಾರ ಆರ್​.ಟಿ.ಓ ಆಫೀಸ್​, ಹಳೇ ಹಂಚಿನ ಕಾರ್ಖಾನೆ ಬಡಾವಣೆ, ಬೆತ್ಲಹೆಮ್ ನಗರ, ಸೇರಿ ಹಲವೆಡೆ ಜನರ ಮೇಲೆ ದಾಳಿ ಮಾಡಿದೆ. ಗಾಯಾಳುಗಳನ್ನು ಕೋಲಾರ ಜಿಲ್ಲಾಸ್ಪತ್ರೆಗೆ…

Read More

Forgot UAN: ನಿಮ್ಮ EPF UAN ಸಂಖ್ಯೆ ಮರೆತಿದ್ದೀರಾ? ಚಿಂತಿಸಬೇಡಿ, ಈ ರೀತಿ ಸುಲಭವಾಗಿ ಮರುಪಡೆಯಿರಿ – Kannada News | Forgot UAN? Retrieve Your EPF UAN in Minutes

ಪ್ರತಿ ತಿಂಗಳು ಸಂಬಳದಿಂದ ಪಿಎಫ್ ಕಡಿತಗೊಳಿಸಲಾಗುತ್ತದೆ. ಪಿಎಫ್ ಖಾತೆಗೆ ಸಂಬಂಧಿಸಿದ ಪ್ರತಿಯೊಂದು ಸೌಲಭ್ಯಕ್ಕೂ ಈ 12-ಅಂಕಿಯ ಯುನಿವರ್ಸಲ್ ಅಕೌಂಟ್ ಸಂಖ್ಯೆ (ಯುಎಎನ್) ಅಗತ್ಯವಿದೆ. ಆದರೆ ಅನೇಕ ಬಾರಿ ಉದ್ಯೋಗಿಗಳು ತಮ್ಮ ಯುಎಎನ್ ಸಂಖ್ಯೆಯನ್ನು ಮರೆತುಬಿಡುತ್ತಾರೆ. ಇಪಿಎಫ್ ಸೈಟ್‌ಗೆ ನಿಯಮಿತವಾಗಿ ಲಾಗಿನ್ ಆಗದಿರುವುದು ಸೇರಿದಂತೆ ಹಲವು ಕಾರಣಗಳಿವೆ. ಪ್ರತಿಯೊಬ್ಬ ಉದ್ಯೋಗಿ ತಮ್ಮ ವೃತ್ತಿಜೀವನದುದ್ದಕ್ಕೂ ಒಂದೇ ಯುಎಎನ್ ಅನ್ನು ಹೊಂದಿರುತ್ತಾರೆ. ನೀವು ಅದನ್ನು ಮರೆತರೂ ಚಿಂತಿಸಬೇಕಾಗಿಲ್ಲ. ಏಕೆಂದರೆ ಈಗ ನೀವು ನಿಮ್ಮ ಯುಎಎನ್ ಅನ್ನು ನಿಮಿಷಗಳಲ್ಲಿ ಮರಳಿ ಪಡೆಯಬಹುದು. ನೀವು…

Read More

ಸರ್ಕಾರದ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​​ಗೆ ಜೆಡಿಎಸ್​​ ​ದೂರು: ಆರೋಪವೇನು? – Kannada News | JDS Approaches Governor Against Karnataka Government Over Hate Speech Bill

ಬೆಂಗಳೂರು, ಡಿಸೆಂಬರ್​​ 31: ರಾಜ್ಯ ಸರ್ಕಾರದ ದ್ವೇಷ ಭಾಷಣ ಮಸೂದೆ, ರೈತರಿಗೆ ಪರಿಹಾರ ನೀಡುವಲ್ಲಿನ ವಿಳಂಬ ಮತ್ತು ಕೋಗಿಲು ಲೇಔಟ್‌ನಲ್ಲಿ ಮನೆಗಳ ತೆರವು ಕಾರ್ಯಾಚರಣೆ ವಿರುದ್ಧ ರಾಜ್ಯಪಾಲರಿಗೆ ಜೆಡಿಎಸ್​​ ದೂರು ಸಲ್ಲಿಸಿದೆ. ದ್ವೇಷ ಭಾಷಣ ಮಸೂದೆಯನ್ನು ಚರ್ಚೆಯಿಲ್ಲದೆ ಅಂಗೀಕರಿಸಲಾಗಿದೆ. ಇದು ವಾಕ್​​ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕಾನೂನಾಗಿರುವ ಕಾರಣ ಬಿಲ್ ತಿರಸ್ಕಾರ ಮಾಡುವಂತೆ ಆಗ್ರಹಿಸಲಾಗಿದೆ.  ಕಲಬುರಗಿ, ಬೀದರ್, ಯಾದಗಿರಿ ಸೇರಿದಂತೆ ಹತ್ತು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಬೆಳೆಗಳು ನಾಶವಾಗಿದ್ದರೂ ಸರ್ಕಾರ ಸೂಕ್ತ ಪರಿಹಾರ ನೀಡಲು ವಿಫಲವಾಗಿದೆ. ಬೆಳಗಾವಿ…

Read More

ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅಂತ್ಯಕ್ರಿಯೆ; ಕುಟುಂಬಕ್ಕೆ ಪ್ರಧಾನಿ ಮೋದಿಯ ಪತ್ರ ನೀಡಿದ ಸಚಿವ ಜೈಶಂಕರ್ – Kannada News | Khaleda Zia’s Funeral Minister Jaishankar Hands Over PM Modi’s Letter To BNP Leaders family

ನವದೆಹಲಿ, ಡಿಸೆಂಬರ್ 31: ಬಾಂಗ್ಲಾದೇಶದ (Bangladesh) ಮಾಜಿ ಪ್ರಧಾನಿ ಮತ್ತು ಬಿಎನ್‌ಪಿ ಮುಖ್ಯಸ್ಥೆ ಖಲೀದಾ ಜಿಯಾ ಅವರ ಅಂತ್ಯಕ್ರಿಯೆಯ ಹಿನ್ನೆಲೆಯಲ್ಲಿ ಅಂತಿಮ ದರ್ಶನಕ್ಕಾಗಿ ಇಂದು ಢಾಕಾದಲ್ಲಿ ಲಕ್ಷಾಂತರ ಜನರು ಸೇರಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದಾಗಿ ಖಲೀದಾ ಜಿಯಾ ಮಂಗಳವಾರ ತಮ್ಮ 80ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಹಲವು ದಶಕಗಳಿಂದ ಬಾಂಗ್ಲಾದೇಶದ ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿದ್ದ ಖಲೀದಾ ಜಿಯಾ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿದ್ದರು. ರಾಷ್ಟ್ರೀಯ ಸಂಸತ್ ಭವನದ ದಕ್ಷಿಣ ಪ್ಲಾಜಾದಲ್ಲಿ ಖಲೀದಾ ಜಿಯಾ ಅವರ ಅಂತ್ಯಕ್ರಿಯೆಗಾಗಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ…

Read More

2025ರಲ್ಲಿ ಕನ್ನಡ ಸಿನಿಮಾಗಳು ಸೋತಿದ್ದೇ ಜಾಸ್ತಿ; ಬುದ್ಧಿ ಕಲಿಯಬೇಕಾಗಿದ್ದು ಯಾರು? – Kannada News | Kannada Film Industry witnesses more failure than success in year 2025

2025ರಲ್ಲಿ ಗೆದ್ದ ಕನ್ನಡ ಸಿನಿಮಾಗಳ (Kannada Movies) ಸಂಖ್ಯೆ ಕಡಿಮೆ. ಸೋಲಿನ ಸಂಖ್ಯೆಯೇ ಬಹುಪಾಲು ಇದೆ. ಆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಕನ್ನಡ ಚಿತ್ರರಂಗ (Kannada Film Industry) ಎಲ್ಲಿ ಎಡವುತ್ತಿದೆ? ತಪ್ಪು ತಿದ್ದಿಕೊಳ್ಳಬೇಕಾಗಿದ್ದು ಯಾರು? ಯಾವ ರೀತಿ ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಬಗ್ಗೆ ‘ಕರ್ನಾಟಕ ಬಾಕ್ಸ್ ಆಫೀಸ್’ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ‘2025 ಕನ್ನಡ ಚಿತ್ರರಂಗದ ಪಾಲಿಗೆ ಸವಾಲಿನ ವರ್ಷವಾಗಿತ್ತು ಎಂಬುದನ್ನು ಭಾರವಾದ ಹೃದಯದಿಂದ ಹೇಳುತ್ತಿದ್ದೇವೆ’ ಎನ್ನುವ ಮೂಲಕ ಈ…

Read More

KSRTC ಬಸ್​​-ಲಾರಿ ನಡುವೆ ಭೀಕರ ಅಪಘಾತ: ತುಂಡಾದ ಚಾಲಕನ ಕಾಲು; ಹಲವರು ಗಂಭೀರ – Kannada News | KSRTC Bus and Lorry Accident on the Outskirts of Lokapur, Bagalakot

ಬಾಗಲಕೋಟೆ, ಡಿಸೆಂಬರ್​​ 31: ಕೆಎಸ್​​ಆರ್​ಟಿಸಿ ಬಸ್​ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬಸ್​​ ಚಾಲಕನ ಕಾಲು ತುಂಡಾಗಿರುವ ಜೊತೆಗೆ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಲೋಕಾಪುರ ಹೊರವಲಯದಲ್ಲಿ ನಡೆದಿದೆ. ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ನಡೆದಿರುವ ಈ ಅಪಘಾತದಲ್ಲಿ ಗಾಯಗೊಂಡವರನ್ನು ಲೋಕಾಪೂರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಡಿಕ್ಕಿಯ ರಭಸಕ್ಕೆ ಬಸ್​​ ಮತ್ತು ಲಾರಿಯ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ಲೋಕಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​…

Read More