Category Archives: Blog

Your blog category

ಇಂದು ಈ ರಾಶಿಯವರಿಗೆ ವಸಂತ ಕಾಲ: ಎಲ್ಲವೂ ನೀವು ಹೇಳಿದಂತೆ ನಡೆಯುತ್ತದೆ

ಇಂದು ಈ ರಾಶಿಯವರಿಗೆ ವಸಂತ ಕಾಲ: ಎಲ್ಲವೂ ನೀವು ಹೇಳಿದಂತೆ ನಡೆಯುತ್ತದೆ

ಬೆಂಗಳೂರು, ಏ.9: ಪ್ರಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 2026ರ ಏಪ್ರಿಲ್ 9, ಗುರುವಾರದ ದೈನಂದಿನ ರಾಶಿಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ಪರಾಭವನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಕೃಷ್ಣ ಪಕ್ಷದ ಸಪ್ತಮಿ, ಪೂರ್ವಾಷಾಡ ನಕ್ಷತ್ರ, ಪರಿಘ ಯೋಗ ಮತ್ತು ಭವಕರಣಗಳನ್ನು ಒಳಗೊಂಡಿದೆ. ರಾಹುಕಾಲ ಮಧ್ಯಾಹ್ನ 1:52 ರಿಂದ 3:25 ರವರೆಗೆ ಇದ್ದು, ಸರ್ವಸಿದ್ಧಿ, ಸಂಕಲ್ಪ ಹಾಗೂ ಶುಭಕಾಲ ಮಧ್ಯಾಹ್ನ 12:21 ರಿಂದ 1:54 ರವರೆಗೆ ಇರುತ್ತದೆ. ರವಿ ಮೀನ ರಾಶಿಯಲ್ಲಿ ಮತ್ತು ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ ಮಾಡುತ್ತಿದ್ದು, ಇದು ದ್ವಾದಶ ರಾಶಿಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಮೇಷ ರಾಶಿಯವರಿಗೆ ಆರ್ಥಿಕವಾಗಿ ಉತ್ತಮವಾಗಿದ್ದು, ಕೆಲಸ ಕಾರ್ಯಗಳಲ್ಲಿ ಶ್ರದ್ಧೆ ವಹಿಸಲು ಸೂಚಿಸಲಾಗಿದೆ. ವೃಷಭ ರಾಶಿಯವರು ಪ್ರಯತ್ನಗಳಿಗೆ ತಕ್ಕ ಫಲ, ಆದರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮಿಥುನ ರಾಶಿಯವರಿಗೆ ಆರ್ಥಿಕವಾಗಿ ಸಣ್ಣಪುಟ್ಟ ಸಂಕಷ್ಟಗಳಿರಬಹುದು, ಕಾನೂನು ವಿಚಾರಗಳಲ್ಲಿ ಜಾಗೃತಿ ಅಗತ್ಯ. ಕರ್ಕಾಟಕ ರಾಶಿಯವರಿಗೆ ಕುಟುಂಬ ಸೌಖ್ಯ, ಉತ್ತಮ ಆರೋಗ್ಯ ಮತ್ತು ಆಸ್ತಿ ವಿಷಯಗಳಲ್ಲಿ ಶುಭಫಲವಿರಲಿದೆ. ಪ್ರತಿಯೊಂದು ರಾಶಿಗೆ ಅದೃಷ್ಟ ಸಂಖ್ಯೆ, ಬಣ್ಣ, ದಿಕ್ಕು ಮತ್ತು ಜಪಿಸಬೇಕಾದ ಮಂತ್ರಗಳನ್ನು ಗುರೂಜಿ ವಿವರಿಸಿದ್ದಾರೆ. ಈ ದಿನದಂದು ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸುವವರಿಗೆ ಶುಭ ಹಾರೈಕೆಗಳನ್ನು ಸಲ್ಲಿಸಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಿಲ್ಲರ್ ಮಾಡಿದ ಒಂದು ತಪ್ಪಿನಿಂದಾಗಿ ಸೋತ ಡೆಲ್ಲಿ ಕ್ಯಾಪಿಟಲ್ಸ್

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 14ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವು ಕೇವಲ 1 ರನ್​​ನಿಂದ ಸೋತಿದೆ. ಗೆಲುವಿನ ಹೊಸ್ತಿಲಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಡೇವಿಡ್ ಮಿಲ್ಲರ್ ಅವರ ಒಂದು ನಿರ್ಧಾರದಿಂದಾಗಿ ಸೋಲೊಪ್ಪಿಕೊಳ್ಳಬೇಕಾಯಿತು ಎಂದರೆ ತಪ್ಪಾಗಲಾರದು.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್​ಗಳಲ್ಲಿ 210 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೊನೆಯ ಓವರ್‌ನಲ್ಲಿ 13 ರನ್‌ಗಳ ಅಗತ್ಯವಿತ್ತು. ಕ್ರೀಸ್‌ನಲ್ಲಿದ್ದ ಸ್ಫೋಟಕ ಬ್ಯಾಟರ್ ಡೇವಿಡ್ ಮಿಲ್ಲರ್ ಅಬ್ಬರದ ಬ್ಯಾಟಿಂಗ್ ನಡೆಸಿ ಪಂದ್ಯವನ್ನು ಕೊನೆಯ ಎರಡು ಎಸೆತಗಳಲ್ಲಿ 2 ರನ್‌ಗಳ ಅಗತ್ಯಕ್ಕೆ ತಂದಿಟ್ಟರು.

19.5ನೇ ಎಸೆತದಲ್ಲಿ ಪ್ರಸಿದ್ಧ್ ಕೃಷ್ಣ ಅವರ ಬೌಲಿಂಗ್‌ನಲ್ಲಿ ಮಿಲ್ಲರ್ ಚೆಂಡನ್ನು ಡೀಪ್ ಸ್ಕ್ವೇರ್ ಲೆಗ್‌ಗೆ ಹೊಡೆದರು. ಈ ವೇಳೆ ಸುಲಭವಾಗಿ ಒಂದು ರನ್ ಓಡುವ ಅವಕಾಶವಿತ್ತು. ಆದರೆ, ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಮಿಲ್ಲರ್, ನಾನ್-ಸ್ಟ್ರೈಕರ್ ಎಂಡ್‌ನಲ್ಲಿದ್ದ ಕುಲ್ದೀಪ್ ಯಾದವ್ ಅವರನ್ನು ವಾಪಸ್ ಕಳುಹಿಸಿ ಸಿಂಗಲ್ ಓಡಲು ನಿರಾಕರಿಸಿದರು.

ಪರಿಣಾಮ ಕೊನೆಯ ಎಸೆತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಗೆಲ್ಲಲು 2 ರನ್ ಬೇಕಿತ್ತು (ಸಿಂಗಲ್ ತೆಗೆದುಕೊಂಡಿದ್ದರೆ ಪಂದ್ಯ ಟೈ ಆಗುತ್ತಿತ್ತು). ಆದರೆ ಅಂತಿಮ ಎಸೆತದಲ್ಲಿ ಮಿಲ್ಲರ್ ರನ್ ಹೊಡೆಯಲು ವಿಫಲರಾದರು. ಇದಾಗ್ಯೂ  ಬೈ ರನ್ ಓಡಲು ಪ್ರಯತ್ನಿಸಿದ ಕುಲ್ದೀಪ್ ಯಾದವ್ ಅವರನ್ನು ಜೋಸ್ ಬಟ್ಲರ್ ಅದ್ಭುತವಾಗಿ ರನ್ ಔಟ್ ಮಾಡಿದರು. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡವು 1 ರನ್​ನ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.

ಒಂದು ವೇಳೆ ಡೇವಿಡ್ ಮಿಲ್ಲರ್ 5ನೇ ಎಸೆತದಲ್ಲಿ ಒಂದು ರನ್ ಓಡಿದ್ದರೆ ಪಂದ್ಯವನ್ನು ಟೈ ಮಾಡಿ ಸೋಲನ್ನು ತಪ್ಪಿಸಿಕೊಳ್ಳಬಹುದಿತ್ತು. ಆದರೆ ಆ ಒಂದು ನಿರಾಕರಣೆಗೆ ಡೆಲ್ಲಿ ಕ್ಯಾಪಿಟಲ್ಸ್ ಸೋಲಿನ ಬೆಲೆ ತೆರಬೇಕಾಗಿ ಬಂದಿದೆ.

ಇದೀಗ ಮಿಲ್ಲರ್ ಅವರ ಈ ನಿರ್ಧಾರ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅವರು ಕುಲ್ದೀಪ್ ಯಾದವ್ ಅವರ ಮೇಲೆ ಭರವಸೆ ಇಡಲಿಲ್ಲವೇ? ಅಥವಾ ತಾನೇ ಪಂದ್ಯ ಮುಗಿಸುತ್ತೇನೆಂಬ ಅತಿಯಾದ ಆತ್ಮವಿಶ್ವಾಸ ಮುಳುವಾಯಿತೇ? ಎಂಬ ಪ್ರಶ್ನೆಗಳು ಎದ್ದಿವೆ. ಒಂದು ವೇಳೆ ಸಿಂಗಲ್ ಪಡೆದಿದ್ದರೆ ಪಂದ್ಯ ಕನಿಷ್ಠ ಪಕ್ಷ ‘ಸೂಪರ್ ಓವರ್’ ಹಂತಕ್ಕೆ ತಲುಪುತ್ತಿತ್ತು.

ಒಟ್ಟಿನಲ್ಲಿ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಸೋಲುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಂಕಪಟ್ಟಿಯಲ್ಲಿ ಮಹತ್ವದ ಸ್ಥಾನ ಕಳೆದುಕೊಂಡರೆ, ಗುಜರಾತ್ ಟೈಟಾನ್ಸ್ ತಂಡವು ಅದೃಷ್ಟದ ಗೆಲುವಿನೊಂದಿಗೆ ಸಂಭ್ರಮಿಸಿದೆ.

 

Source link

ಇರಾನಿನ ಸ್ನೇಹ, ಅಮೆರಿಕದ ನಂಟು: ಮಧ್ಯಪ್ರಾಚ್ಯದ ಶಾಂತಿ ದೂತನಾಗಿ ಪಾಕಿಸ್ತಾನ ಹೊರಹೊಮ್ಮಿದ್ಹೇಗೆ?

ವಾಷಿಂಗ್ಟನ್, ಏಪ್ರಿಲ್ 09: ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿದ್ದ ಯುದ್ಧದ ಜ್ವಾಲೆಗೆ ತಕ್ಷಣದ ವಿರಾಮ ಬಿದ್ದಿದೆ. ಇರಾನ್(Iran) ಮತ್ತು ಅಮೆರಿಕ ನಡುವೆ ಎರಡು ವಾರಗಳ ಕಾಲದ ಕದನ ವಿರಾಮ ಏರ್ಪಟ್ಟಿದ್ದು, ಈ ಐತಿಹಾಸಿಕ ಒಪ್ಪಂದದ ಹಿಂದೆ ಪಾಕಿಸ್ತಾನದ “ಚಾಣಕ್ಯ ನೀತಿ” ಕೆಲಸ ಮಾಡಿದೆ ಎಂದು ವರದಿಯಾಗಿದೆ. ಆದರೂ ಇಸ್ರೇಲ್ ಲೆಬನಾನ್ ಮೇಲೆ ದಾಳಿ ನಡೆಸಿದ್ದು, ಇದರ ಪರಿಣಾಮ ಇರಾನ್ ಮತ್ತೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದೆ.

ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು ‘ನನ್ನ ಪ್ರೀತಿಯ ಸಹೋದರರು’ ಎಂದು ಕರೆದು ಕೃತಜ್ಞತೆ ಸಲ್ಲಿಸಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಕಿಸ್ತಾನದ ಶಾಂತಿ ಪ್ರಯತ್ನಗಳನ್ನು ಶ್ವೇತಭವನದ ಪರವಾಗಿ ಒಪ್ಪಿಕೊಂಡಿದ್ದಾರೆ. ಏಪ್ರಿಲ್ 10 ರಂದು ಪಾಕಿಸ್ತಾನದಲ್ಲಿ ಎರಡೂ ದೇಶಗಳ ನಿಯೋಗಗಳು ಮುಂದಿನ ಹಂತದ ಮಾತುಕತೆ ನಡೆಸಲಿವೆ.

ಪಾಕಿಸ್ತಾನ ಹೇಗೆ ಮಧ್ಯವರ್ತಿಯಾಯಿತು?
ಒಂದು ಕಡೆ ಇರಾನ್‌ನೊಂದಿಗೆ ಹಂಚಿಕೊಂಡಿರುವ ಭೌಗೋಳಿಕ ಗಡಿ ಮತ್ತು ಧಾರ್ಮಿಕ ನಂಟು, ಇನ್ನೊಂದು ಕಡೆ ಅಮೆರಿಕದೊಂದಿಗೆ ಸುಧಾರಿಸುತ್ತಿರುವ ಮಿಲಿಟರಿ ಸಂಬಂಧಗಳು ಪಾಕಿಸ್ತಾನವನ್ನು ವಿಶ್ವಾಸಾರ್ಹ ಕೊಂಡಿಯನ್ನಾಗಿ ಮಾಡಿದೆ.

ವಿಶ್ವಾಸಕ್ಕೆ ಕಾರಣಗಳು

ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂಧವಿಲ್ಲದಿರುವುದು, ಟ್ರಂಪ್ ಅವರ ‘ಶಾಂತಿ ಮಂಡಳಿ’ಯಲ್ಲಿ ಪಾಕಿಸ್ತಾನದ ಸದಸ್ಯತ್ವವಿರುವುದು, ಇರಾನ್​ಗೆ ಅರಘ್ಚಿ ಮತ್ತು ಮುನೀರ್ ನಡುವಿನ ನಿಕಟ ಸಂಪರ್ಕವಿದೆ, ಇನ್ನು ಅಮೆರಿಕ ವಿಚಾರಕ್ಕೆ ಬಂದರೆ ಮುನೀರ್ ಅವರು ಟ್ರಂಪ್ ಅವರ ನೆಚ್ಚಿನ ಫೀಲ್ಡ್ ಮಾರ್ಷಲ್.ಪಾಕ್ ಇರಾನ್​ನ 15 ಅಂಶಗಳ ಪ್ರಸ್ತಾವನೆಯನ್ನು ತಲುಪಿಸುವಲ್ಲಿ ಮಧ್ಯಸ್ಥಿಕೆವಹಿಸಿತ್ತು. ಪಾಕಿಸ್ತಾನಕ್ಕೆ ಉನ್ನತ ಮಟ್ಟದ ಅಮೆರಿಕನ್ ಅಧಿಕಾರಿಗಳೊಂದಿಗೆ ಸತತ ಸಂಪರ್ಕವನ್ನೂ ಹೊಂದಿದ್ದಾರೆ.

ಮತ್ತಷ್ಟು ಓದಿ: ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮುಂದುವರಿಸಿದರೆ ಕದನ ವಿರಾಮದಿಂದ ಹಿಂದೆ ಸರಿಯುತ್ತೇವೆ; ಇರಾನ್ ಎಚ್ಚರಿಕೆ

ಈ ಕದನ ವಿರಾಮವು ಅತ್ಯಂತ ದುರ್ಬಲವಾಗಿದ್ದು, ಯಾವುದೇ ಕ್ಷಣದಲ್ಲಿ ಮುರಿಯಬಹುದು. ಮಾತುಕತೆ ವಿಫಲವಾದರೆ ಅದರ ಹೊಣೆಗಾರಿಕೆ ಪಾಕಿಸ್ತಾನದ ಮೇಲೆ ಬೀಳುವ ಸಾಧ್ಯತೆಯಿದೆ. ಒಪ್ಪಂದವನ್ನು ಬಲವಂತವಾಗಿ ಜಾರಿಗೊಳಿಸುವ ಮಿಲಿಟರಿ ಅಥವಾ ಆರ್ಥಿಕ ಶಕ್ತಿ ಇಸ್ಲಾಮಾಬಾದ್‌ಗೆ ಇಲ್ಲ. ಯುದ್ಧ ಮುಂದುವರೆದರೆ ಇಂಧನ ಬೆಲೆ ಏರಿಕೆ ಮತ್ತು ಅಫ್ಘಾನಿಸ್ತಾನ ಗಡಿಯ ಬಿಕ್ಕಟ್ಟು ಪಾಕಿಸ್ತಾನವನ್ನು ಮತ್ತಷ್ಟು ಹೈರಾಣಾಗಿಸಬಹುದು.

ಪಾಕಿಸ್ತಾನವು ಸದ್ಯಕ್ಕೆ ಜಾಗತಿಕ ವೇದಿಕೆಯಲ್ಲಿ ದೊಡ್ಡ ಮಟ್ಟದ ರಾಜತಾಂತ್ರಿಕ ಅಂಕಗಳನ್ನು ಗಳಿಸಿದೆ. ಆದರೆ, ಇಸ್ಲಾಮಾಬಾದ್ ಮಾತುಕತೆಯು ಕೇವಲ ತಾತ್ಕಾಲಿಕ ವಿರಾಮವೋ ಅಥವಾ ಶಾಶ್ವತ ಶಾಂತಿಯೋ ಎಂಬುದು ಏಪ್ರಿಲ್ 10 ರಂದು ನಿರ್ಧಾರವಾಗಲಿದೆ. ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮವು ಅತ್ಯಂತ ದುರ್ಬಲವಾಗಿದ್ದು, ಮುಂಬರುವ ದಿನಗಳು ವಾಷಿಂಗ್ಟನ್ ಮತ್ತು ಟೆಹ್ರಾನ್ ಮಾತುಕತೆಗಳನ್ನು ಹೇಗೆ ಮುಂದಕ್ಕೆ ಕೊಂಡೊಯ್ಯುತ್ತವೆ ಎಂಬುದನ್ನು ತೋರಿಸುತ್ತವೆ.

ಆದ್ದರಿಂದ ಪಾಕಿಸ್ತಾನವು ಮಧ್ಯವರ್ತಿಯಾಗಿ ಹೊರಹೊಮ್ಮುವ ಮೂಲಕ ರಾಜತಾಂತ್ರಿಕ ಅಂಕಗಳನ್ನು ಗಳಿಸಬಹುದು, ಆದರೆ ಈ ಒಪ್ಪಂದದ ಕುಸಿತವು ಅದರ ವಿಶ್ವಾಸಾರ್ಹತೆಗೆ ದೊಡ್ಡ ಹೊಡೆತವಾಗುತ್ತದೆ. ತನ್ನದೇ ಆದ ಆರ್ಥಿಕ ಮತ್ತು ಗಡಿ ಬಿಕ್ಕಟ್ಟುಗಳ ನಡುವೆಯೂ, ಪಾಕಿಸ್ತಾನವು ಎರಡೂ ಕಡೆಯವರೊಂದಿಗೆ ಸಮಾನ ದೂರ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಈ ರಾಜತಾಂತ್ರಿಕ ವಿಜಯಕ್ಕೆ ಕಾರಣವಾಯಿತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Assembly Elections 2026 Voting Live: ಕರ್ನಾಟಕ, ಕೇರಳ, ಅಸ್ಸಾಂ, ಪುದುಚೇರಿಯಲ್ಲಿ ಮತದಾನ ಶುರು – Kannada News | Assam, Kerala, Puducherry Assembly Elections Davangere South and Bagalkot ByPoll 2026 Voting Live Updates; BJP, Congress, LDF, UDF, CPI latest news

ವಿಧಾನಸಭೆ ಚುನಾವಣೆ ಲೈವ್ (ಸಾಂದರ್ಭಿಕ ಚಿತ್ರ)

ಬೆಂಗಳೂರು/ನವದೆಹಲಿ, ಏಪ್ರಿಲ್ 9: ಕರ್ನಾಟಕದ ದಾವಣಗೆರೆ ದಕ್ಷಿಣ, ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ (Karnataka By-Election) ನಡೆಯುತ್ತಿದೆ. ಮತ್ತೊಂದೆಡೆ, ಕೇರಳದ 140 ಕ್ಷೇತ್ರ, ಅಸ್ಸಾಂನ 126 ಕ್ಷೇತ್ರ, ಪುದುಚೇರಿಯ 30 ಕ್ಷೇತ್ರಗಳಿಗೆ (Assembly Elections) ವೋಟಿಂಗ್ ನಡೆಯುತ್ತಿದೆ. ಬಾಗಲಕೋಟೆಯಲ್ಲಿ 322 ಮತಗಟ್ಟೆ ತೆರೆಯಲಾಗಿದ್ದು, ದಾವಣಗೆರೆ ದಕ್ಷಿಣದಲ್ಲಿ 284 ಮತಗಟ್ಟೆಗಳಿವೆ. ಸುಮಾರು ಎರಡೂವರೆ ಸಾವಿರ ಚುನಾವಣಾ ಸಿಬ್ಬಂದಿಯನ್ನ ಬಾಗಲಕೋಟೆಯಲ್ಲಿ ನಿಯೋಜಿಸಲಾಗಿದ್ದು, ದಾವಣಗೆರೆಯಲ್ಲಿ 1ಸಾವಿರದ 489 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಬಾಗಲಕೋಟೆ ಕಣದಲ್ಲಿ ಒಟ್ಟು 9 ಅಬ್ಯರ್ಥಿಗಳಿದ್ರೆ, ದಾವಣಗೆರೆ ದಕ್ಷಿಣದಲ್ಲಿ ಬರೋಬ್ಬರಿ 25 ಅಭ್ಯರ್ಥಿಗಳಿದ್ದಾರೆ. ಹಾಗೆಯೇ ಬಾಗಲಕೋಟೆಯಲ್ಲಿ ಒಟ್ಟು 2ಲಕ್ಷದ 59 ಸಾವಿರದ 797 ಮತದಾರರಿದ್ರೆ, ದಾವಣಗೆರೆಯಲ್ಲಿ 2ಲಕ್ಷದ 31 ಸಾವಿರದ 72 ಮತದಾರರಿದ್ದಾರೆ. ಬಾಗಲೋಟೆಯಲ್ಲಿ 1ಲಕ್ಷದ 26ಸಾವಿರದ 999 ಪುರುಷ ಮತದಾರರಿದ್ರೆ, ದಾವಣಗೆರೆಯಲ್ಲಿ 1ಲಕ್ಷದ 13 ಸಾವಿರದ 399 ಮತದಾರರಿದ್ದಾರೆ. ಹಾಗೆಯೇ ಬಾಗಲಕೋಟೆಯಲ್ಲಿ 1ಲಕ್ಷದ 32ಸಾವಿರದ 775 ಮಹಿಳಾ ಮತದಾರರಿದ್ದು, ದಾವಣಗೆರೆಯಲ್ಲಿ 1ಲಕ್ಷದ 17 ಸಾವಿರದ 690 ಮಹಿಳಾ ಮತದಾರರಿದ್ದಾರೆ.

ಇನ್ನು ಕೇರಳ, ಅಸ್ಸಾಂ, ಪುದುಚೇರಿಯಲ್ಲಿ ಇಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಕೇರಳದ 140 ವಿಧಾನಸಭಾ ಸ್ಥಾನಗಳು, ಅಸ್ಸಾಂನಲ್ಲಿ 126 ಮತ್ತು ಪುದುಚೇರಿಯ 30 ವಿಧಾನಸಭಾ ಸ್ಥಾನಗಳಿಗೆ ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದೆ. ಕೇರಳದಲ್ಲಿ, 2.71 ಕೋಟಿ ಮತದಾರರು 883 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಇದರಲ್ಲಿ 1.32 ಕೋಟಿ ಪುರುಷರು, 1.39 ಕೋಟಿ ಮಹಿಳೆಯರು ಮತ್ತು 273 ಟ್ರಾನ್ಸ್‌ಜೆಂಡರ್ ಮತದಾರರು ಸೇರಿದ್ದಾರೆ. ಅಸ್ಸಾಂನಲ್ಲಿ ಒಟ್ಟು 2.50 ಕೋಟಿ ಮತದಾರರಿದ್ದು, ಅವರು 31,490 ಮತಗಟ್ಟೆಗಳಲ್ಲಿ ತಮ್ಮ ಮತ ಚಲಾಯಿಸಲಿದ್ದಾರೆ. ಮೇ 4 ರಂದು ಮತ ಎಣಿಕೆ ನಡೆಯಲಿದೆ.

ಚುನಾವಣೆ ಸಂಬಂಧಿತ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬ್ರೇಕಪ್​​ನಲ್ಲಿ ಕೊನೆ ಆಯ್ತು ಸಾನ್ಯಾ-ರಿಷಬ್ ಸಂಬಂಧ; ಮೌನ ತಾಳಿದ ನಟಿ

ಬಾಲಿವುಡ್ ನಟಿ ಸಾನ್ಯಾ ಮಲ್ಹೋತ್ರ (Sanya Malhotra) ಈಗ ವೈಯಕ್ತಿಕ ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. ಅವರು ಸಿತಾರ್ ವಾದಕ ರಿಷಬ್ ರಿಖಿರಾಮ್ ಶರ್ಮಾ ಜೊತೆ ಕಳೆದು ಒಂದು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಈಗ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರೂ ಪರಸ್ಪರ ಅನ್​​ಫಾಲೋ ಮಾಡಿಕೊಂಡಿದ್ದಾರೆ. ಇದರಿಂದ ಇಬ್ಬರೂ ಬೇರೆ ಆಗಿದ್ದಾರೆ ಎಂಬ ವದಂತಿ ದಟ್ಟವಾಗಿದೆ.

ಸಾನ್ಯಾ ಮಲ್ಹೋತ್ರ ಅವರು ‘ದಂಗಲ್’ ಸಿನಿಮಾ ಮೂಲಕ ಫೇಮಸ್ ಆದರು. ಅವರ ನಟನೆಗೆ ಭಾರೀ ಮೆಚ್ಚುಗೆ ಬಂತು. ಆ ಬಳಿಕ ಅವರು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಅವರ ಸಿನಿಮಾಗಳು ಕೈ ಹಿಡಿಯುತ್ತಿಲ್ಲ. ಹೀಗಿರುವಾಗಲೇ ಸಾನ್ಯಾ ಅವರ ವಿಚ್ಛೇದನ ವಿಷಯ ಸಾಕಷ್ಟು ಚರ್ಚೆಗೆ ಕಾರಣ ಆಗಿದೆ.

ಸಾನ್ಯಾ ಹಾಗೂ ರಿಷಬ್ ಅವರು ತಮ್ಮ ರಿಲೇಶನ್​​ಶಿಪ್ ಬಗ್ಗೆ ಎಲ್ಲಿಯೂ ಓಪನ್ ಆಗಿ ಮಾತನಾಡಿಲ್ಲ. ಒಂದು ವರ್ಷಕ್ಕೂ ಅಧಿಕ ಕಾಲ ಇವರು ಸುತ್ತಾಡಿದರು. ಆ ಬಳಿಕ ಇವರು ಬೇರೆ ಆಗುವ ನಿರ್ಧಾರ ಕೈಗೊಂಡಿದ್ದಾರೆ. ಈ ವಿಷಯವನ್ನು ಕೂಡ ಇವರು ಎಲ್ಲಿಯೂ ರಿವೀಲ್ ಮಾಡಿಲ್ಲ. ಇವರ ಬ್ರೇಕಪ್​​ಗೆ ಕಾರಣವೂ ರಿವೀಲ್ ಆಗಿಲ್ಲ.

ಇದನ್ನೂ ಓದಿ: sಬೀಚ್ ಪಕ್ಕ ದುಬಾರಿ ಮನೆ ಖರೀದಿಸಿದ ‘ದಂಗಲ್’ ಸಿನಿಮಾ ನಟಿ ಸಾನ್ಯಾ ಮಲ್ಹೋತ್ರ

2024ರ ಡಿಸೆಂಬರ್ ಒಂದರ ಈವೆಂಟ್ ಅಲ್ಲಿ ರಿಷಬ್ ಹಾಗೂ ಸಾನ್ಯಾ ಒಟ್ಟಾಗಿ ಕಾಣಿಸಿಕೊಂಡರು. ಈ ವೇಳೆ ಇಬ್ಬರ ಮಧ್ಯೆ ಪರಿಚಯ ಬೆಳೆಯಿತು ಎನ್ನಲಾಗಿದೆ. 2025ರ ಆರಂಭದಲ್ಲಿ ಸಾನ್ಯಾ ಹಾಗೂ ರಿಷಬ್ ಒಟ್ಟಿಗೆ ಇರುವ ಫೋಟೋಗಳು ವೈರಲ್ ಆದವು. ಅಭಿಮಾನಿಯೋರ್ವ ರಿಷಬ್ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ. ಆ ಸಂದರ್ಭದಲ್ಲಿ ಸಾನ್ಯಾ ಕೂಡ ಅಲ್ಲಿಯೇ ಇದ್ದರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಆ ಬಳಿಕ ಕೆಲವು ಈವೆಂಟ್​​​ಗಳಲ್ಲಿ ಇವರು ಒಟ್ಟಿಗೆ ಕಾಣಿಸಿಕೊಂಡರೂ, ಪ್ರತ್ಯೇಕವಾಗಿಯೇ ತೆರಳುವ ಮೂಲಕ ವದಂತಿ ಮತ್ತಷ್ಟು ಹರಡದಂತೆ ನೋಡಿಕೊಂಡಿದ್ದರು.

ಸಿನಿಮಾ ವಿಷಯಕ್ಕೆ ಬರೋದಾದರೆ, ಸಾನ್ಯಾ ಅವರು 2025ರ ‘ಸನ್​​ಸ್ಕಾರಿ ಕಿ ತುಳಸಿ ಕುಮಾರಿ’ ಸಿನಿಮಾದಲ್ಲಿ ಅವರು ಕಾಣಿಸಿಕೊಂಡಿದ್ದರು. ‘ಟೋಸ್ಟರ್’ ಹೆಸರಿನ ಸಿನಿಮಾ ಮಾಡುತ್ತಿದ್ದು ರಾಜ್​​​ಕುಮಾರ್ ರಾವ್ ಇದಕ್ಕೆ ಹೀರೋ. ಈ ಚಿತ್ರ ಏಪ್ರಿಲ್ 15ರಂದು ನೆಟ್​​ಫ್ಲಿಕ್ಸ್​​ನಲ್ಲಿ ರಿಲೀಸ್ ಆಗಲಿದೆ. ರಿಷಬ್ ರಿಖಿರಾಮ್ ಅವರು ವಿವಿಧ ಕಡೆಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ನೆಲಮಂಗಲ: ಖಾಸಗಿ ಕಂಪನಿಯ ಗೋದಾಮಿನಲ್ಲಿ ಭಾರಿ ಅಗ್ನಿ ಅವಘಡ, ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ

ನೆಲಮಂಗಲ, ಏಪ್ರಿಲ್ 9: ನೆಲಮಂಗಲದ ಅಡಕಮಾರನಹಳ್ಳಿಯಲ್ಲಿನ ಆಹಾರ ಸಂಗ್ರಹ ಗೋದಾಮಿನಲ್ಲಿ ಬುಧವಾರ ರಾತ್ರಿ ಭೀಕರ ಬೆಂಕಿ ಅವಘಡ ಸಂಭವಿಸಿದೆ. ಆಂಜನೇಯ ದೇಗುಲದ ಬಳಿ ಇರುವ ಗೋದಾಮಿನಲ್ಲಿ ಸಂಭವಿಸಿದ ಈ ದುರ್ಘಟನೆಯಲ್ಲಿ ಗೋದಾಮಿನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಆಹಾರ ಪದಾರ್ಥಗಳು ಬೆಂಕಿಗೆ ಆಹುತಿಯಾಗಿ ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಅವಘಡದ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ನೆಲಮಂಗಲ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ರಾತ್ರಿ ಸುಮಾರು 10 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್​ನಿಂದ ಅಗ್ನಿ ದುರಂತ ಸಂಭವಿಸಿರಬಹುದು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಈ ಗೋದಾಮು 18 ವರ್ಷಗಳ ಹಿಂದೆ 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ರಾತ್ರಿ ವೇಳೆ ಘಟನೆ ಸಂಭವಿಸಿದ್ದರಿಂದ ಯಾವುದೇ ಕಾರ್ಮಿಕರು ಸ್ಥಳದಲ್ಲಿ ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಾಪಾಯ ಅಥವಾ ಗಾಯಗಳಾಗಿಲ್ಲ ಎಂದು ಗೋದಾಮಿನ ಮಾಲಿಕ ಪದ್ಮರಾಜ್ ತಿಳಿಸಿದ್ದಾರೆ.

ವರದಿ: ಮಂಜುನಾಥ್, ಟಿವಿ9 ನೆಲಮಂಗಲ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka 2nd PUC Results 2026: ಇಂದೇ ದ್ವಿತೀಯ ಪಿಯುಸಿ ಫಲಿತಾಂಶ: ವಿದ್ಯಾರ್ಥಿಗಳೇ ಈ ವಿಚಾರವನ್ನು ಕಡ್ಡಾಯವಾಗಿ ತಿಳಿದುಕೊಳ್ಳಬೇಕು

ಬೆಂಗಳೂರು, ಏ.9: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ಇಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಿದೆ. ರಾಜ್ಯದಾದ್ಯಂತ ಸುಮಾರು 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದ ಪರೀಕ್ಷೆಯ ಫಲಿತಾಂಶ ಮತ್ತು ಅಂಕಪಟ್ಟಿ ಡೌನ್‌ಲೋಡ್ ಮಾಡಲು ಸಮಯ ನಿಗದಿಯಾಗಿದೆ. ಇಂದು (ಏಪ್ರಿಲ್ 9, 2026) ಇಂದು ಮಧ್ಯಾಹ್ನ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಫಲಿತಾಂಶ ಘೋಷಿಸಲಿದ್ದಾರೆ.

ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಇಂದು ಸಂಜೆ 5:00 ಗಂಟೆಯ ನಂತರ ವಿದ್ಯಾರ್ಥಿಗಳು ತಮ್ಮ ‘ಮಾರ್ಕ್ಸ್ ಮೆಮೊ’ ಅಥವಾ ಅಂಕಪಟ್ಟಿಯನ್ನು ವೀಕ್ಷಿಸಬಹುದು ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದು. karresults.nic.in ಮತ್ತು kseab.karnataka.gov.in ನಲ್ಲಿ ನಿಮ್ಮ ಫಲಿತಾಂಶವನ್ನು ನೋಡಬಹುದು.

ಅಂಕಪಟ್ಟಿ ಡೌನ್‌ಲೋಡ್ ಮಾಡುವುದು ಹೇಗೆ?

ಮೊದಲಿಗೆ ಅಧಿಕೃತ ವೆಬ್‌ಸೈಟ್ karresults.nic.in ಗೆ ಭೇಟಿ ನೀಡಿ.

ಮುಖಪುಟದಲ್ಲಿ “2nd PUC Result 2026” ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಿಮ್ಮ ನೋಂದಣಿ ಸಂಖ್ಯೆ (Registration Number) ಮತ್ತು ವಿಷಯದ ಗುಂಪನ್ನು (Stream – Science/Arts/Commerce) ನಮೂದಿಸಿ.

‘Submit’ ಬಟನ್ ಒತ್ತಿದಾಗ ನಿಮ್ಮ ಫಲಿತಾಂಶ ಪರದೆಯ ಮೇಲೆ ಕಾಣಿಸುತ್ತದೆ.

ನಿಮ್ಮ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

ಇದನ್ನೂ ಓದಿ: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2026: ಸರ್ವರ್ ಕಿರಿಕಿರಿಗೆ ಬೈ ಹೇಳಿ, ವೆಬ್‌ಸೈಟ್‌ಗಿಂತಲೂ ಮೊದಲೇ ದ್ವಿತೀಯ PUC ರಿಸಲ್ಟ್​ ನೋಡಿ

ಹಿಂದಿನ ವರ್ಷದ ಪಿಯುಸಿ ಫಲಿತಾಂಶಗಳನ್ನು ಏಪ್ರಿಲ್ 8, 2025 ರಂದು ಪ್ರಕಟಿಸಲಾಯಿತು , ಒಟ್ಟಾರೆ ಉತ್ತೀರ್ಣ ಶೇಕಡಾ 73.45%. ಸುಮಾರು 6.37 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 3.4 ಲಕ್ಷ ಮಹಿಳಾ ಅಭ್ಯರ್ಥಿಗಳಲ್ಲಿ ಹುಡುಗಿಯರು ಹುಡುಗರಿಗಿಂತ ಹೆಚ್ಚಿನ ಸಾಧನೆ ಮಾಡಿದ್ದಾರೆ, ಶೇ. 77.8 ರಷ್ಟು ಉತ್ತೀರ್ಣರಾಗಿದ್ದರೆ, 2.9 ಲಕ್ಷ ಪುರುಷ ವಿದ್ಯಾರ್ಥಿಗಳಲ್ಲಿ ಶೇ. 68.2 ರಷ್ಟು ಮಾತ್ರ ಉತ್ತೀರ್ಣರಾಗಿದ್ದಾರೆ.

ಇನ್ನು ಈ ವರ್ಷವೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದ ವಿದ್ಯಾರ್ಥಿಗಳು ಧೃತಿಗೆಡಬೇಕಿಲ್ಲ. ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ಹೊಸ ಮೂರು ಪರೀಕ್ಷೆಗಳ ವ್ಯವಸ್ಥೆಯಡಿ (Exam 1, 2, & 3) ನಿಮಗೆ ಅಂಕ ಸುಧಾರಿಸಿಕೊಳ್ಳಲು ಹಾಗೂ ಅನುತ್ತೀರ್ಣರಾದ ವಿಷಯಗಳನ್ನು ಪಾಸು ಮಾಡಲು ಉತ್ತಮ ಅವಕಾಶವಿದೆ. ಫಲಿತಾಂಶದಲ್ಲಿ ಕಡಿಮೆ ಅಂಕ ಬಂದಿದೆ ಎನಿಸಿದರೆ, ಅಂಕಗಳನ್ನು ಹೆಚ್ಚಿಸಿಕೊಳ್ಳಲು ಈ ಪರೀಕ್ಷೆ ಬರೆಯಬಹುದು. ಎರಡೂ ಪರೀಕ್ಷೆಗಳಲ್ಲಿ ಯಾವುದರಲ್ಲಿ ಹೆಚ್ಚು ಅಂಕ ಬರುತ್ತದೆಯೋ ಅದನ್ನು ಪರಿಗಣಿಸಲಾಗುತ್ತದೆ. ಒಂದು ವೇಳೆ ಪರೀಕ್ಷೆ-2 ರಲ್ಲೂ ಅನುತ್ತೀರ್ಣರಾದರೆ ಅಥವಾ ಅಂಕ ತೃಪ್ತಿ ನೀಡದಿದ್ದರೆ, ಜೂನ್ 2026 ರಲ್ಲಿ ನಡೆಯಲಿರುವ ಪರೀಕ್ಷೆ-3 (Exam 3) ಕ್ಕೆ ಹಾಜರಾಗಲು ಮತ್ತೊಂದು ಅವಕಾಶವಿರುತ್ತದೆ.

ಮತ್ತಷ್ಟು ಶಿಕ್ಷಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಾವಣಗೆರೆ ಬಾಗಲಕೋಟೆ ಉಪಚುನಾವಣೆ 2026: ಇಂದು ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

ದಾವಣಗೆರೆ, ಬಾಗಲಕೋಟೆ, ಏಪ್ರಿಲ್ 9: ಕರ್ನಾಟಕದ (Karnataka By Elections) ವಿಧಾನಸಭೆ ಕ್ಷೇತ್ರಗಳಾದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ (Assembly ByPolls) ನಡೆಯುತ್ತಿದೆ. ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಮತ್ತು ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಈ ಸ್ಥಾನಗಳಿಗೆ ಇಂದು ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಮತದಾರರು ಯಾರ ಕೈ ಹಿಡಿಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಆಡಳಿತಾರೂಢ ಕಾಂಗ್ರೆಸ್​​ಗೆ ಎರಡೂ ಕ್ಷೇತ್ರಗಳು ಪ್ರತಿಷ್ಠೆಯ ಕಣವಾಗಿದ್ದು, ಅತ್ತ ಪ್ರತಿಪಕ್ಷ ಬಿಜೆಪಿ ಸಹ ಗೆಲುವಿಗೆ ಶತಾಯಗತಾಯ ಶ್ರಮಿಸುತ್ತಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ವಿವರ

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ್ ಮತ್ತು ಬಿಜೆಪಿಯಿಂದ ಶ್ರೀನಿವಾಸ್ ಟಿ. ದಾಸಕರಿಯಪ್ಪ ಸೇರಿದಂತೆ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಬಾಗಲಕೋಟೆ ಕ್ಷೇತ್ರದ ವಿವರ

ಕಾಂಗ್ರೆಸ್‌ನ ಉಮೇಶ್ ಮೇಟಿ ಮತ್ತು ಬಿಜೆಪಿಯ ವೀರಣ್ಣ ಚರಂತಿಮಠ ಸೇರಿದಂತೆ ಒಟ್ಟು 20 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ ನಡೆಯುತ್ತಿದೆ.

ಸಿಬ್ಬಂದಿ ಮತ್ತು ಭದ್ರತೆ

ಚುನಾವಣಾ ಕರ್ತವ್ಯಕ್ಕಾಗಿ 1,430ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೃದಯಾಘಾತ ಮತ್ತು ಬಿಪಿ ಸಮಸ್ಯೆ ಇರುವ ಸಿಬ್ಬಂದಿಗಾಗಿ ಪ್ರತಿ ಕೇಂದ್ರದಲ್ಲೂ ಹೆಲ್ತ್ ಚೆಕಪ್ ವ್ಯವಸ್ಥೆ ಮಾಡಲಾಗಿದೆ ಎರಡೂ ಕ್ಷೇತ್ರಗಳಾದ್ಯಂತ ವ್ಯಾಪಕ ಬಂದೋಬಸ್ತ್ ನಡುವೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮತದಾನದ ಸಮಯ ಮತ್ತು ಸೌಲಭ್ಯ

ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಿರಿಯ ನಾಗರಿಕರು ಮತ್ತು ಅಂಗವಿಕಲರನ್ನು ಮತಗಟ್ಟೆಗೆ ಕರೆತರಲು ಜಿಲ್ಲಾಡಳಿತವು ಉಚಿತ ವಾಹನ ಸೌಲಭ್ಯವನ್ನು ಒದಗಿಸಿದೆ. ಸುಡು ಬಿಸಿಲಿನ ಹಿನ್ನೆಲೆಯಲ್ಲಿ ಮತಗಟ್ಟೆಗಳಲ್ಲಿ ಕುಡಿಯುವ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡಲಾಗಿದೆ. ಇಂದು ದಾಖಲಾಗುವ ಮತಗಳ ಎಣಿಕೆಯು ಮೇ 4ರಂದು ನಡೆಯಲಿದ್ದು, ಅಂದು ಫಲಿತಾಂಶ ಪ್ರಕಟವಾಗಲಿದೆ.

ನಡೆದಿತ್ತು ಭರ್ಜರಿ ಪ್ರಚಾರ

ಈ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಂಪುಟ ಸಚಿವರು ಬಿರುಸಿನ ಪ್ರಚಾರ ನಡೆಸಿದ್ದಾರೆ. ಬಾಗಲಕೋಟೆಯಲ್ಲಂತೂ ಸಿದ್ದರಾಮಯ್ಯನವರೇ ಖುದ್ದು ನಾಲ್ಕೈದು ದಿನ ಪ್ರಚಾರ ನಡೆಸಿದ್ದಾರೆ.

ಇದನ್ನೂ ಓದಿ: ಇಂದು ಕೇರಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಮತದಾನ

ಅತ್ತ ಪ್ರತಿಪಕ್ಷ ಬಿಜೆಪಿಯಿಂದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಪ್ರಚಾರದ ಮುಂಚೂಣಿಯಲ್ಲಿದ್ದರು. ಅದರಲ್ಲೂ ಬಾಗಲಕೋಟೆಯಲ್ಲಿ ವೀರಣ್ಣ ಚರಂತಿಮಠ ಪರವಾಗಿ ಬಿ.ವೈ. ವಿಜಯೇಂದ್ರ ಅವರು ಬಿರುಸಿನ ರೋಡ್ ಶೋ ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೇರ ಸವಾಲು ಹಾಕಿದರು. ಇನ್ನು ದಾವಣಗೆರೆಯಲ್ಲಿ ಶ್ರೀನಿವಾಸ್ ಟಿ. ದಾಸಕರಿಯಪ್ಪ ಪರವಾಗಿ ಸ್ಥಳೀಯ ನಾಯಕರು ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು. ವಿಶೇಷವೆಂದರೆ, ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದರೂ ಸಹ, ಬಾಗಲಕೋಟೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪಕ್ಷದ ಅಭ್ಯರ್ಥಿ ಪರವಾಗಿ ಅಬ್ಬರದ ಪ್ರಚಾರ ನಡೆಸಿ ಗಮನ ಸೆಳೆದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Assembly Elections 2026 Voting: ಇಂದು ಕೇರಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಮತದಾನ

ದೆಹಲಿ, ಏ.9: ದೇಶದ ಗಮನ ಸೆಳೆದಿರುವ ಕೇರಳ, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಇಂದು ವಿಧಾನಸಭಾ ಚುನಾವಣೆಯ (Assembly Elections 2026 Voting) ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ. ಈ ಮೂರೂ ರಾಜ್ಯಗಳಲ್ಲಿ ಸರ್ಕಾರ ರಚನೆಗಾಗಿ ರಾಜಕೀಯ ಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಕೇರಳ: ಕೇರಳದ 140 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಆಡಳಿತಾರೂಢ ಎಲ್‌ಡಿಎಫ್ (LDF) ಮತ್ತು ಪ್ರತಿಪಕ್ಷ ಯುಡಿಎಫ್ (UDF) ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದರೆ, ಬಿಜೆಪಿ ಕೂಡ ಪ್ರಬಲ ಪೈಪೋಟಿ ನೀಡುತ್ತಿದೆ.

ಅಸ್ಸಾಂ: ಅಸ್ಸಾಂನಲ್ಲಿ ಇಂದು ಮತದಾನ ನಡೆಯುತ್ತಿದೆ. ಇಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್ ಮೈತ್ರಿಕೂಟ ಅಧಿಕಾರ ಹಿಡಿಯಲು ಕಸರತ್ತು ನಡೆಸುತ್ತಿದೆ.

ಪುದುಚೇರಿ: 30 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪುದುಚೇರಿಯಲ್ಲಿ ಇಂದು ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಎನ್‌ಆರ್‌ಸಿ (NRC) ಮತ್ತು ಬಿಜೆಪಿ ಮೈತ್ರಿಕೂಟ ಹಾಗೂ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ನಡುವೆ ಇಲ್ಲಿ ಸಮರ ಏರ್ಪಟ್ಟಿದೆ.

ಇದನ್ನೂ ಓದಿ: ಇಂದು ಕೇರಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆ, ಮೇ 4ಕ್ಕೆ ಫಲಿತಾಂಶ

ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಲಿದೆ, ಜನರು ಉತ್ಸಾಹದಿಂದ ಮತಗಟ್ಟೆಗಳತ್ತ ಧಾವಿಸುತ್ತಿದ್ದಾರೆ. ಬಿಸಿಲಿನ ತಾಪ ಹೆಚ್ಚಾಗುವ ಮುನ್ನವೇ ಮತ ಚಲಾಯಿಸಲು ಹಿರಿಯ ನಾಗರಿಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ದಿನ ಭವಿಷ್ಯ: ಇಂದು ಈ ರಾಶಿಯವರು ಕೇವಲ ಮಾತಿನಿಂದ ತಮ್ಮ ಕೆಲಸವನ್ನು ಮಾಡಿಸಿಕೊಳ್ಳುವರು

ಮೇಷ ರಾಶಿ:

ವಿದ್ಯಾರ್ಥಿಗಳು ಪರಿಶ್ರಮದ ಓದಿಗೆ ಫಲಸಿಗಬಹುದು. ಸಂಗಾತಿಯ ಪರೀಕ್ಷೆ ನಡೆಯುವುದು. ಉತ್ಸಾಹಕ್ಕೆ ತೊಂದರೆ ಬರುವ ಕಡೆ ನೀವು ಇರಲಾರಿರಿ. ಕಾರ್ಯಸ್ಥಾನದಲ್ಲಿ ಗೊಂದಲದ, ಹತಾಶೆಯ ವಾತಾವರಣ ಇರಬಹುದು. ಇಂದು ನಿಮ್ಮ ಮಾತಿನಲ್ಲಿ ಕಠೋರತೆ ಇರಲಿದ್ದು, ಅದನ್ನು ಕಡಿಮೆ‌ ಮಾಡಿಕೊಳ್ಳಬೇಕು. ಕಾರ್ಯಕ್ಷೇತ್ರದಲ್ಲಿ ನಿಮ್ಮ ಯೋಗ್ಯತೆಗೆ ತಕ್ಕಂತೆ ಕೆಲಸ ಸಿಗುತ್ತದೆ. ಹಿರಿಯರ ಸೇವೆಯಲ್ಲಿ ನೀವು ಇರುವಿರಿ. ನಕಾರಾತ್ಮಕ ಆಲೋಚನೆಗಳನ್ನು ತಲೆಯಿಂದ ತೆಗೆಯಿರಿ.

ವೃಷಭ ರಾಶಿ:

ನಿಮ್ಮ ಮೇಲೆ ಸಹಾನುಭೂತಿಯು ಉಂಟಾಗುವ ಸಾಧ್ಯತೆ ಇದೆ. ನಿಮ್ಮನ್ನು ನೀವೇ ಕಾಪಾಡಿಕೊಳ್ಳಿ. ಹಲವು ದಿನಗಳಿಂದ ಸೋಲಿನ ವಾರ್ತೆ ಕೇಳಿದ್ದ ನಿಮಗೆ ಗೆಲವಿನ ಸೂಚನೆ ಸಿಗಲಿದ್ದು ಉತ್ಸಾಹ ಬರಲಿದೆ. ನೀವು ಅಪರಿಚಿತರ ಸಂಪರ್ಕವನ್ನು ಹೆಚ್ಚು ಮಾಡುವಿರಿ. ಹೂಡಿಕೆಯಲ್ಲಿ ದೀರ್ಘಾವಧಿಯ ಯೋಜನೆಗಳು ಮಾಡಿಕೊಳ್ಳಿ. ಪ್ರಭಾವಿಗಳ ಭೇಟಿಯಿಂದ ಸಂತೋಷವಾಗಲಿದೆ. ಬೇರೆ ಸ್ಥಳದಲ್ಲಿ ನಿಮ್ಮ ವಾಸವು ಇರಬಹುದು. ಯಾರದೋ ಸಂತೋಷಕ್ಕಾಗಿ ನೀವು ದುಡಿಯಬೇಕಾಗಬಹುದು.

ಮಿಥುನ ರಾಶಿ:

ಇಂದು ನಿಮ್ಮ ಸಾಮಾರ್ಥ್ಯವನ್ನು ವ್ಯಕ್ತಪಡಿಸಲು ಸಕಾಲ. ಎಲ್ಲವುದೂ ಅಂದುಕೊಂಡಂತೆ ಆಗದು. ಸಹೋದರರಿಂದ ಸಲಹೆ ಪಡೆದು ಮುನ್ನಡೆಯಿರಿ. ಗಾಳಿ ಸುದ್ದಿಗಳು ನಿಮ್ಮ ಮನಸ್ಸಿಗೆ ತೊಂದರೆ ಕೊಡುವುದು. ಭೂಮಿಯ ವ್ಯವಹಾರದಲ್ಲಿ ನಿಮಗೆ ಅನುಕೂಲ ಕಡಿಮೆ ಇರುವುದು. ನಿಮ್ಮ ಜವಾಬ್ದಾರಿಯನ್ನು ಇತರರು ಮಾಡಬೇಕಾಗಬಹುದು. ನಿಮಗೆ ಬೇಕಾದ ಆರ್ಥಿಕಬೆಂಬಲವನ್ನು ಯಾರೂ ಸೂಚಿಸದೇ ಇರಬಹುದು. ಮಹಿಳೆಯರು ಉನ್ನತ ಅಧಿಕಾರವನ್ನು ಪಡೆದು ಅಹಂಕಾರ ಮಡುವುದು ಬೇಡ.

ಕರ್ಕಾಟಕ ರಾಶಿ:

ನಿಮ್ಮ ಸಾಹಿತ್ಯದ ಅಭಿರುಚಿ ಇಂದು ಪ್ರಸಿದ್ಧಿಗೆ ಬರುವುದು. ಮಕ್ಕಳಿಗೆ ಯೋಗ್ಯವಾದ ಮಾರ್ಗದರ್ಶನವನ್ನು ಮಾಡಿ. ನಿಮ್ಮ ಇಷ್ಟದ ವಿಷಯಗಳಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತೀರಿ. ನಿಮ್ಮವರ ವಿಶ್ವಾಸವನ್ನು ನೀವು ಸುಲಭವಾಗಿ ಗೆಲ್ಲಲು ಸಾಧ್ಯವಾಗುತ್ತದೆ. ಮನೆಯ ಸ್ಥಳವನ್ನು ಬದಲಾಯಿಸುವ ಅನಿವಾರ್ಯತೆ ಬಂದೀತು. ಅನ್ಯಾನ್ಯ ಮಾರ್ಗಗಳಿಂದ ಹಣವು ಬರಬಹುದು. ‌ಕಳೆದಕೊಂಡ ವಸ್ತುವಿಗೆ ತೀವ್ರ ಹುಡುಕಾಟ ಇರುವುದು.‌

ಸಿಂಹ ರಾಶಿ:

ಮಾತು ಕಡಿಮೆ, ಕಾರ್ಯ ಹೆಚ್ಚು ಮಾಡುವತ್ತ ಗಮನ ಹರಿಸುವುದು ಉತ್ತಮ. ಪ್ರಭಾವೀ ವ್ಯಕ್ತಿಗಳ ಭೇಟಿ ನಿಮ್ಮ ಮನೋಬಲವನ್ನು ಹೆಚ್ಚಿಸುತ್ತದೆ. ಕುಟುಂಬದೊಂದಿಗೆ ಸಮಸ್ಯೆಗಳನ್ನು ಹಂಚಿಕೊಳ್ಳಿ. ನಿಮ್ಮ ಗೆಳತಿಯ ಜೊತೆ ಅಸಭ್ಯವಾಗಿ ನಡೆದುಕೊಳ್ಳಬೇಡಿ. ಕೈಗೆ ಬಂದ ಹಣ ಆಸ್ಪತ್ರೆಯ ಪಾಲಾಗಬಹುದು. ನೀವು ಇಂದು ಆರಂಭಿಸುವ ಕೆಲಸವು ಹೆಚ್ಚು ಸಮಯವನ್ನು ಪಡೆಯಬಹುದು. ಅಕಾರಣವಾಗಿ ಸಂತೋಷಪಡುವಿರಿ. ಈ ದಿನದ ಆರಂಭವು ಬಹಳ ಉತ್ಸಾಹದಿಂದ ಇರುವುದು.

ಕನ್ಯಾ ರಾಶಿ:

ನಿಮ್ಮ ನೋವು ಕುಟುಂಬದ ಅಸಮಾಧಾನಕ್ಕೆ ಕಾರಣವಾಗಬಹುದು. ಮಕ್ಕಳ ಆರೋಗ್ಯದ ವಿಷಯದಲ್ಲಿ ಗಮನವಿರಲಿ. ಪ್ರಣಯದ ಸಂಬಂಧಿಸಿದಂತೆ ಹೆಚ್ಚು ಬೇಡಿಕೆಗಳು ಬರಬಹುದು. ಹಳೆಯ ನೆನಪುಗಳು ನಿಮ್ಮನ್ನು ಘಾಸಿಮಾಡಬಹುದು. ನಿಮ್ಮ ಸಂಬಂಧಿಕರಿಂದ ಕೆಲವು ಉತ್ತಮ ಸಲಹೆಯನ್ನು ಪಡೆಯಬಹುದು. ಕಾನೂನು ಪ್ರಕರಣದಲ್ಲಿ ನೀವು ಗೆಲ್ಲುವ ಎಲ್ಲ ಸಾಧ್ಯತೆಗಳಿವೆ. ನಿಮ್ಮ ಉದ್ಯೋಗವನ್ನು ಅಪಹಾಸ್ಯ ಮಾಡುವರು.

ತುಲಾ ರಾಶಿ:

ನೀವು ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಉತ್ತಮ. ಏನಾದರೂ ಬಾಲಿಶವಾದದ್ದನ್ನು ಮಾಡುವ ಮೊದಲು ನಿಮ್ಮ ವರ್ತನೆಯ ಪರಿಣಾಮದ ಬಗ್ಗೆ ಆಲೋಚಿಸಿ. ರಾತ್ರಿ ವೇಳೆ‌ಪ್ರಯಾಣ ಬೇಡ. ದಾಂಪತ್ಯಜೀವನ ಅಪರೂಪದ ಕ್ಷಣಗಳ ಇಂದಿರಲಿವೆ. ನೀವು ಹೆಚ್ಚು ಭೌತಿಕ ವಿಷಯಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸುವಿರಿ. ಅನಿರೀಕ್ಷಿತ ದೂರ ಪ್ರಯಾಣವನ್ನು ಮಾಡಲಿದ್ದೀರಿ. ಇಂದು ಹಣದ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗುವುದು. ಇನ್ನೊಬ್ಬರ ಬಗ್ಗೆ ಆಡಿಕೊಳ್ಳುವುದು ಸರಿ ಎನಿಸದು.

ವೃಶ್ಚಿಕ ರಾಶಿ:

ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಸ್ಪರ್ಧಾತ್ಮಕ ಕ್ರೀಡೆಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ. ಪ್ರೇಯಸಿ ಜೊತೆ ಸುತ್ತಾಟ ಮಾಡುವಿರಿ. ಸಂಸ್ಥೆಯ ಪ್ರಮುಖರಿಗೆ ಒಳಗನವರಿಂದ ಆತಂಕ. ವ್ಯಾಪಾರಿಗಳಿಗೆ ಹಳೆಯ ಹೂಡಿಕೆಯ ಕಾರಣದಿಂದಾಗಿ ಇಂದು ನಷ್ಟವಾಗುವ ಸಾಧ್ಯತೆ ಇದೆ. ನೀವು ಯಾರಿಗಾದರೂ ಹಣವನ್ನು ಸಾಲವಾಗಿ ನೀಡಿದ್ದರೆ, ಅದನ್ನು ಮರಳಿ ಪಡೆಯುವ ಸಾಧ್ಯತೆ ತುಂಬಾ ಕಡಿಮೆ. ಯಾರದೋ ಮಾತಿನಿಂದ ನಿಮ್ಮ ನೆಮ್ಮದಿಯನ್ನು ಕಳೆದುಕೊಳ್ಳುವ ಅವಶ್ಯಕತೆ ಇಲ್ಲ.

ಧನು ರಾಶಿ:

ನೀವು ವ್ಯಾಪಾರದ ಕಾರಣಕ್ಕೆ ಕೈಗೊಂಡ ಪ್ರಯಾಣವು ದೀರ್ಘಾವಧಿಯಲ್ಲಿ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಅನಿರೀಕ್ಷಿತ ರೂಪದಲ್ಲಿ ವೈವಾಹಿಕ ಸಂಬಂಧಗಳು ಕೂಡಿ ಬರಲಿದೆ. ಸಣ್ಣ ನೌಕರರಿಗೆ ಜೀವನದ ಮೇಲೆ ಉತ್ಸಾಹ ಆರಂಭವಾಗಲಿದೆ. ಕೂಡಲೇ ಬೇಕಾದ ಚಿಕಿತ್ಸೆಗೆ ಗಮನಕೊಡಿ. ರಾಜಕೀಯದಲ್ಲಿ ನಿಮಗೆ ಜನಬೆಂಬಲ ಹೆಚ್ಚಾಗಬಹುದು. ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಶ್ರದ್ಧೆ ಹೆಚ್ಚಿರುವುದು. ಇನ್ನೊಬ್ಬರನ್ನು ಹಿಂದಿಕ್ಕಲು ಪ್ರಯತ್ನ ಪೂರ್ವಕವಾಗಿ ಕಾರ್ಯ ಮಾಡುವಿರಿ.

ಮಕರ ರಾಶಿ:

ಸುತ್ತಲೂ ನಿಮ್ಮ ಪ್ರಿಯತಮೆಯ ಪ್ರೀತಿಯನ್ನು ಅನುಭವಿಸುತ್ತೀರಿ.‌ ಕುಟುಂಬದಲ್ಲಿ ಕೆಲವು ಸಮಸ್ಯೆಗಳಿರುತ್ತವೆ. ಇಂದು ಪುಣ್ಯಕಾರ್ಯದಿಂದ ಪ್ರಾಣಾಪಾಯ ತಪ್ಪಿರುವುದು. ಸಹೋದ್ಯೋಗಿಗಳ ಬಗ್ಗೆ ಪೂರ್ವಾಗ್ರಹವಿರುವುದು. ನೀವು ಸಂಬಂಧಿಕರ ಜೊತೆ ಸ್ವಲ್ಪ ಸಮಯ ಒಟ್ಟಿಗೆ ಕುಳಿತು ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಿರಿ. ಕ್ರಿಯಾಶೀಲತೆಯು ನಿಮ್ಮ ಅಧಿಕಾರಕ್ಕೆ ಪೂರಕವಾಗಿರುವುದು. ನಿಮ್ಮ ಸಹನೆಯನ್ನು ಪರೀಕ್ಷಿಸುವ ಸಂದರ್ಭಗಳು ಬರಬಹುದು.

ಕುಂಭ ರಾಶಿ:

ಸಾಮಾಜಿಕ ಕಾರ್ಯಗಳಿಗೆ ಹಾಜರಾಗಲು ಅವಕಾಶಗಳಿರಬಹುದು ಹಾಗೂ ಇದು ನಿಮ್ಮನ್ನು ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಹೊಂದುವಂತೆ ಮಾಡಬಹುದು. ಮನೆಯವರು ನಿಮ್ಮ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಬಹುದು. ಇಂದು ನಿಮಗಾಗಿ ಯಾರಾದರೂ ಸಹಕಾರವನ್ನು ನೀಡಲು ಬರಬಹುದು. ಹೆಚ್ಚುತ್ತಿರುವ ವೆಚ್ಚಗಳನ್ನು ಕಡಿವಾಣ ಹಾಕಿಕೊಳ್ಳಿ. ಉನ್ನತ ಸ್ಥಾನಕ್ಕೆ ಹೋಗುವ ಆಯ್ಕೆಯ ಪಟ್ಟಿಯಲ್ಲಿ ನೀವಿರುವಿರಿ.

ಮೀನ ರಾಶಿ :

ನೀವು ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಉತ್ತಮ. ಇತರರಿಗೆ ಒಳ್ಳೆಯದನ್ನು ಮಾಡುವ ಕಾರ್ಯಕ್ಕೆ ಪ್ರತಿಫಲವಿದೆ. ರಾಜಕೀಯ ನಾಯಕರಿಗೆ ಅನಿರೀಕ್ಷಿತ ಬೆಂಬಲ. ಕಾರ್ಯಕ್ಕೆ ಮತ್ತಷ್ಟು ಉತ್ಸಾಹ. ನೀವು ಒಳ್ಳೆಯ ಅಭಿವೃದ್ಧಿ ಸಾಧಿಸುತ್ತಿದ್ದ ಹಾಗೆ ಪ್ರೇಮ ಜೀವನ ಒಳ್ಳೆಯ ತಿರುವು ತೆಗೆದುಕೊಳ್ಳುತ್ತದೆ. ನೀವು ನಿರಾಸೆ ಅನುಭವಿಸುತ್ತೀರಿ. ನಿಮ್ಮ ಆರ್ಥಿಕ ಪರಿಸ್ಥಿತಿಯು ಮೊದಲಿಗಿಂತ ಉತ್ತಮವಾಗಿದ್ದು, ಹೂಡಿಕೆಯ ಕಡೆ ಗಮನವಿರುವುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ರೇವತೀ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಪೂರ್ವಾಷಾಢಾ, ಯೋಗ : ವರಿಯಾನ್, ಕರಣ : ತೈತಿಲ, ಸೂರ್ಯೋದಯ – 06 – 16 am, ಸೂರ್ಯಾಸ್ತ – 06 – 36 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:59 – 15:31, ಯಮಗಂಡ ಕಾಲ 06:16 – 07:49, ಗುಳಿಕ ಕಾಲ 19:21 – 10:54

-ಲೋಹಿತ ಹೆಬ್ಬಾರ್-8762924271 (what’s app only)

Source link