Category Archives: Blog

Your blog category

ಲೆಬನಾನ್ ಮೇಲಿನ ದಾಳಿಗೆ ಪ್ರತೀಕಾರ; ಮತ್ತೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ ಇರಾನ್

ಲೆಬನಾನ್ ಮೇಲಿನ ದಾಳಿಗೆ ಪ್ರತೀಕಾರ; ಮತ್ತೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ ಇರಾನ್

ಟೆಹ್ರಾನ್, ಏಪ್ರಿಲ್ 8: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆ ಕದನ ವಿರಾಮ ಘೋಷಿಸಿದ 24 ಗಂಟೆಗಳ ಒಳಗೆ ಲೆಬನಾನ್ (Lebanon Attack) ಮೇಲೆ ಇಸ್ರೇಲ್ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಮತ್ತೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದೆ. ಇಂದು ಮುಂಜಾನೆ ಅಮೆರಿಕ ಮತ್ತು ಇರಾನ್ ಎರಡು ವಾರಗಳ ಕದನ ವಿರಾಮವನ್ನು ಘೋಷಿಸಿದ್ದವು. ಇದರ ಭಾಗವಾಗಿ ಇರಾನ್ ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಒಪ್ಪಿಕೊಂಡಿತ್ತು. ಆದರೆ, ಇಸ್ರೇಲ್ ಲೆಬನಾನ್ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿರುವ ಇರಾನ್ ಮತ್ತೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದೆ. ಅಲ್ಲದೆ, ಕದನವಿರಾಮವನ್ನು ಹಿಂಪಡೆಯುವ ಎಚ್ಚರಿಕೆಯನ್ನೂ ನೀಡಿದೆ.

ಇದೀಗ ಟೆಹ್ರಾನ್ ಮತ್ತೊಮ್ಮೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವುದರಿಂದ, ಅಮೆರಿಕ ಮತ್ತು ಇರಾನ್ ನಡುವೆ ಇಂದು ಘೋಷಿಸಲಾದ ಎರಡು ವಾರಗಳ ಕದನ ವಿರಾಮವು ರದ್ದಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮುಂದುವರಿಸಿದರೆ ಕದನ ವಿರಾಮದಿಂದ ಹಿಂದೆ ಸರಿಯುತ್ತೇವೆ; ಇರಾನ್ ಎಚ್ಚರಿಕೆ

ಇರಾನ್ ಜೊತೆ ಕದನ ವಿರಾಮಕ್ಕೆ ಅಮೆರಿಕದ ನಿರ್ಧಾರಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಾರ್ವಜನಿಕವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಆ ಒಪ್ಪಂದ ಲೆಬನಾನ್ ಅನ್ನು ಒಳಗೊಂಡಿಲ್ಲ ಎಂದು ಹೇಳಿದ್ದಾರೆ.

“ಇರಾನ್ ವಿರುದ್ಧದ ದಾಳಿಗಳನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವನ್ನು ಇಸ್ರೇಲ್ ಬೆಂಬಲಿಸುತ್ತದೆ. ಇದಕ್ಕೆ ಇರಾನ್ ಜಲಸಂಧಿಯನ್ನು ತಕ್ಷಣವೇ ತೆರೆಯಬೇಕು. ಅಮೆರಿಕ, ಇಸ್ರೇಲ್ ಮತ್ತು ಈ ಪ್ರದೇಶದ ದೇಶಗಳ ಮೇಲಿನ ಎಲ್ಲಾ ದಾಳಿಗಳನ್ನು ನಿಲ್ಲಿಸಲಿದೆ” ಎಂದು ನೆತನ್ಯಾಹು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದರು.

ಇದನ್ನೂ ಓದಿ: ಈ ಶಾಂತಿ ಸದಾ ಉಳಿಯಲಿ ಎಂಬುದು ನಮ್ಮ ಆಶಯ, ಅಮೆರಿಕ-ಇರಾನ್ ಕದನ ವಿರಾಮದ ಬಗ್ಗೆ ಭಾರತದ ಮೊದಲ ಪ್ರತಿಕ್ರಿಯೆ

ಇಸ್ರೇಲ್ ಲೆಬನಾನ್‌ನಲ್ಲಿ ಮತ್ತು ಹೆಜ್ಬೊಲ್ಲಾ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರೆಸಿತು. ಈ ದಾಳಿಯಲ್ಲಿ 89 ಜನರು ಮೃತಪಟ್ಟಿದ್ದು, 722 ಜನರು ಗಾಯಗೊಂಡಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇದು ನನ್ನನ್ನು ಕಾಡಿದ ಕಥೆ: ಹೊಸ ಸಿನಿಮಾ ಬಗ್ಗೆ ಬಿಗ್ ಬಾಸ್ ಕಾರ್ತಿಕ್ ಮಹೇಶ್ ಮಾತು

ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ‘ಸೀತಾ ರಾಮ ರಾಜು’ (Seetha Rama Raju) ಸಿನಿಮಾ ಮುಹೂರ್ತ ನಡೆದಿದೆ. ಈ ಸಿನಿಮಾದಲ್ಲಿ ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್ ಅವರು ನಟಿಸುತ್ತಿದ್ದಾರೆ. ‘ಮ್ಯಾಟ್ರಿಕ್ಸ್ ಮೂವೀ ಮೇಕರ್ಸ್’ ಸಂಸ್ಥೆಯ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಸುದ್ದಿಗೋಷ್ಠಿಯಲ್ಲಿ ಕಾರ್ತಿಕ್ ಮಹೇಶ್ ಅವರು ಮಾತನಾಡಿ, ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ‘ನನಗೆ ತುಂಬ ಇಷ್ಟ ಆದ ಕಥೆ ಇದು. ತುಂಬಾ ಒಳ್ಳೆಯ ಲವ್ ಸ್ಟೋರಿ ಇದೆ. ಈ ಕಥೆ ನನ್ನನ್ನು ತುಂಬ ಕಾಡಿದೆ. ಸಂಗೀತಕ್ಕೆ ಈ ಸಿನಿಮಾದಲ್ಲಿ ಒತ್ತು ಇದೆ. ಭಾವುಕ ಸನ್ನಿವೇಶಗಳು ಕೂಡ ಇವೆ. ನಾನು 100 ಪರ್ಸೆಂಟ್​ಗಿಂತ ಹೆಚ್ಚು ಶ್ರಮ ಹಾಕಿ ಕೆಲಸ ಮಾಡುತ್ತೇನೆ’ ಎಂದು ಕಾರ್ತಿಕ್ ಮಹೇಶ್ (Karthik Mahesh) ಅವರು ಹೇಳಿದರು. ಇದೇ ಸಿನಿಮಾದಲ್ಲಿ ಪಿ. ರವಿಶಂಕರ್ ಕೂಡ ಅಭಿನಯಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

DC vs GT: ಕೊನೆಗೂ ಅಬ್ಬರಿಸಿದ ಕೆಎಲ್ ರಾಹುಲ್; ಸಿಡಿಯಿತು 41ನೇ ಅರ್ಧಶತಕ

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಐಪಿಎಲ್ 2026 ರ 14ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್ 211 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡದ ಪರ ಕನ್ನಡಿಗ ಕೆಎಲ್ ರಾಹುಲ್ ಸ್ಫೋಟಕ ಅರ್ಧಶತಕದ ಇನ್ನಿಂಗ್ಸ್ ಆಡಿದರು.

ಈ ಸೀಸನ್​ನಲ್ಲಿ ಇದು ರಾಹುಲ್ ಅವರ ಮೊದಲ ಅರ್ಧಶತಕವಾಗಿದೆ. ಮೊದಲೆರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ರಾಹುಲ್, ಲೀಗ್​ನ ಮೂರನೇ ಪಂದ್ಯದಲ್ಲಿ ಲಯ ಕಂಡುಕೊಂಡು ಕೇವಲ 29 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು. ಇದು ರಾಹುಲ್ ಅವರ ಐಪಿಎಲ್ ವೃತ್ತಿಜೀವನದ 41ನೇ ಅರ್ಧಶತಕವಾಗಿದೆ. ರಾಹುಲ್ ಅವರ ಈ ಅರ್ಧಶತಕದಿಂದಾಗಿ ಡೆಲ್ಲಿ ತಂಡ ಸತತ ಮೂರನೇ ಗೆಲುವಿನತ್ತ ಸಾಗುತ್ತಿದೆ.

Source link

ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮುಂದುವರಿಸಿದರೆ ಕದನ ವಿರಾಮದಿಂದ ಹಿಂದೆ ಸರಿಯುತ್ತೇವೆ; ಇರಾನ್ ಎಚ್ಚರಿಕೆ

ಟೆಹ್ರಾನ್, ಏಪ್ರಿಲ್ 8: ಕದನ ವಿರಾಮ ಘೋಷಿಸಿದ ಕೆಲವು ಗಂಟೆಗಳ ನಂತರ ಇಸ್ರೇಲ್ ಲೆಬನಾನ್ ಮೇಲೆ ದಾಳಿ ನಡೆಸಿದೆ. ಈ ರೀತಿ ಕದನವಿರಾಮವನ್ನು ಉಲ್ಲಂಘಿಸುವುದನ್ನು ಮುಂದುವರಿಸಿದರೆ ಅಮೆರಿಕದ ಕದನವಿರಾಮ (Ceasefire) ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಇರಾನ್ (Iran) ಬೆದರಿಕೆ ಹಾಕಿದೆ.ಇಸ್ರೇಲಿ ಸೈನ್ಯವು 10 ನಿಮಿಷಗಳ ಅವಧಿಯಲ್ಲಿ ಲೆಬನಾನ್‌ನಾದ್ಯಂತ ಅನೇಕ ಸ್ಥಳಗಳಲ್ಲಿ 100 ವೈಮಾನಿಕ ದಾಳಿಗಳನ್ನು ಪ್ರಾರಂಭಿಸಿದಾಗ ಇರಾನ್‌ನಿಂದ ಈ ಹೇಳಿಕೆ ಬಂದಿದೆ.

“ಲೆಬನಾನ್‌ನಲ್ಲಿ ಇಸ್ರೇಲ್ ಮಾಡಿದ ಅಪರಾಧ ಮತ್ತು ಕದನ ವಿರಾಮ ನಿಯಮಗಳ ಉಲ್ಲಂಘನೆಗೆ ಪ್ರತಿಕ್ರಿಯೆಯಾಗಿ ಇರಾನ್ ಇಸ್ರೇಲ್ ಅನ್ನು ಶಿಕ್ಷಿಸುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ ಅಥವಾ ಚೀನಾ, ಅಮೆರಿಕ-ಇರಾನ್ ಕದನ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ಮಾಡಿದ್ಯಾರು?

ಇರಾನ್ ಇಂದು ಹಾರ್ಮುಜ್ ಜಲಸಂಧಿಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆ ಇಸ್ರೇಲ್ ಲೆಬನಾನ್ ಮೇಲೆ ದಾಳಿ ಮುಂದುವರಿಸಿದರೆ ಅಮೆರಿಕದ ಜೊತೆಗಿನ ಕದನ ವಿರಾಮದಿಂದ ಹಿಂದೆ ಸರಿಯುವುದಾಗಿ ಬೆದರಿಕೆ ಹಾಕಿದೆ. ಹಾರ್ಮುಜ್ ಮೂಲಕ ತೈಲ ಟ್ಯಾಂಕರ್‌ಗಳ ಸಾಗಣೆಯನ್ನು ನಿಲ್ಲಿಸಲಾಗಿದೆ ಎಂದು ಇರಾನ್‌ನ ಫಾರ್ಸ್ ನ್ಯೂಸ್ ವರದಿ ಮಾಡಿದೆ.

ಇರಾನ್ ವಿರುದ್ಧದ ದಾಳಿಯನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವನ್ನು ಬೆಂಬಲಿಸುತ್ತಿದ್ದರೂ ಹೆಜ್ಬೊಲ್ಲಾ ಸಂಘಟನೆಯಿಂದಾಗಿ ಕದನ ವಿರಾಮದ ನಿಯಮಗಳು ಮತ್ತು ಷರತ್ತುಗಳು ಲೆಬನಾನ್‌ಗೆ ಅನ್ವಯವಾಗುವುದಿಲ್ಲ ಎಂದು ಇಸ್ರೇಲ್ ಹೇಳಿದೆ.

ಇದನ್ನೂ ಓದಿ: ಕದನವಿರಾಮದ ಬೆನ್ನಲ್ಲೇ ಇರಾನ್​ನ ತೈಲ ಸಂಸ್ಕರಣಾಗಾರದ ಮೇಲೆ ದಾಳಿ

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು ಇರಾನ್ ಮತ್ತು ಲೆಬನಾನ್‌ನಲ್ಲಿ ಇಸ್ರೇಲ್‌ನಿಂದ “ಕದನ ವಿರಾಮ ಉಲ್ಲಂಘನೆ” ಕುರಿತು ಚರ್ಚಿಸಲು ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವಿನ ಕದನ ವಿರಾಮಕ್ಕೆ ಮಧ್ಯವರ್ತಿಯಾಗಿದ್ದ ಪಾಕಿಸ್ತಾನಕ್ಕೆ ಕರೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಬೋನು ಇಟ್ಟಿದ್ದು ಹುಲಿಗೆ, ಬಂದು ಬಿದ್ದಿದ್ದು ಚಿರತೆ: ಮುಂದೇನಾಯ್ತು?

ಚಾಮರಾಜನಗರ, (ಏಪ್ರಿಲ್ 08): ಹುಲಿ (Tiger) ಸೆರೆಗೆ ಇಟ್ಟಿದ್ದ ಬೋನ್​ನಲ್ಲಿ ಚಿರತೆ ಬಂದು ಲಾಕ್ ಆಗಿದೆ. ಚಾಮರಾಜನಗರ (Chamarajnagar) ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದ ಬಳಿ ಇತ್ತೀಚೆಗೆ ಹುಲಿ ಕಾಣಿಸಿಕೊಂಡಿತ್ತು. ಹೀಗಾಗಿ ಸುತ್ತಮುತ್ತಲಿನ ಜನ ಆತಂಕಗೊಂಡಿದ್ದು, ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಹೀಗಾಗಿ ಅರಣ್ಯ ಇಲಾಖೆಯವರು ಬಂದು ಗ್ರಾಮದ ಬಳಿ ಹುಲಿ ಸರೆ ಹಿಡಿಯಲು ಬೋನು ಇಟ್ಟಿದ್ದರು. ಆದ್ರೆ, ಅಚ್ಚರಿ ಎಂಬಂತೆ ಈ ಬೋನಿಗೆ ನಾಲ್ಕು ವರ್ಷದ ಚಿರತೆ ಬಂದು ಬಿದ್ದಿದೆ. ಇದನ್ನು ಕಂಡು ಸ್ಥಳೀಯರು ಅಚ್ಚರಿಗೊಂಡಿದ್ದಾರೆ. ಇನ್ನು ಚಿರತೆ ಬೋನಿಗೆ ಬಿದ್ದರೂ ಸಹ ಗ್ರಾಮಸ್ಥರಲ್ಲಿ ಹುಲಿ ಆತಂಕ ಮನೆ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಒಂದೇ ದಿನ ಮೂರು ಸಿನಿಮಾ ಮುಹೂರ್ತ; ನಟ ರವಿಶಂಕರ್ ಫುಲ್ ಹ್ಯಾಪಿ

‘ಮ್ಯಾಟ್ರಿಕ್ಸ್ ಮೂವೀ ಮೇಕರ್ಸ್’ ಸಂಸ್ಥೆಯಿಂದ ಒಂದೇ ದಿನ ಮೂರು ಸಿನಿಮಾಗಳ (Kannada Cinema) ಮುಹೂರ್ತವನ್ನು ಮಾಡಲಾಗಿದೆ. ಆ ಪೈಕಿ ‘ಸೀತಾ ರಾಮ ರಾಜು’ ಸಿನಿಮಾದಲ್ಲಿ ನಟ ಪಿ. ರವಿಶಂಕರ್ ಅವರು ಅಭಿನಯಿಸುತ್ತಿದ್ದಾರೆ. ಮುಹೂರ್ತದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ರವಿಶಂಕರ್ ಅವರು ಮಾತನಾಡಿದರು. ಸಂತಸ ಹಂಚಿಕೊಂಡರು. ‘ಇಂದು ಸಿನಿಮಾ ಮಾಡುವುದೇ ತುಂಬ ಅಪರೂಪ. ಅಂಥದ್ದರಲ್ಲಿ ಒಂದೇ ದಿನ ಮೂರು ಸಿನಿಮಾಗಳ ಮುಹೂರ್ತ ಮಾಡಿದ್ದಾರೆ ಎಂದರೆ ನಿರ್ಮಾಪಕರಿಗೆ ಹ್ಯಾಟ್ಸ್ ಆಫ್​. ನಿರ್ದೇಶಕ ಕೀರ್ತಿ ತುಂಬ ಹಾರ್ಡ್ ವರ್ಕ್ ಮಾಡುವ ಹುಡುಗ’ ಎಂದು ರವಿಶಂಕರ್ (P Ravishankar) ಅವರು ಹೊಗಳಿದರು. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್​​: ಮಹೇಂದ್ರ ರೆಡ್ಡಿ ಫೋನ್ ಪೇಯಲ್ಲಿ ಪ್ರೇಯಸಿ ಜತೆಗಿನ ಗುಟ್ಟು ರಟ್ಟು

ಬೆಂಗಳೂರು, ಏಪ್ರಿಲ್​ 08: ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್ (Dr. Kruthika Reddy Murder Case) ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಅಸಹಜ ಸಾವು ಎಂದುಕೊಂಡಿದ್ದ ಪ್ರಕರಣ ಮರಣೋತ್ತರ ಪರೀಕ್ಷೆ ಬಳಿಕ ದಿಕ್ಕನ್ನೇ ಬದಲಿಸಿದ್ದು, ಪತಿಯ ಕಳ್ಳಾಟ ಬಯಲು ಮಾಡಿತ್ತು‌. ಸದ್ಯ ಕೊಲೆಗೆ ಸಂಬಂಧಿಸಿದ ಪ್ರಬಲ ಸಾಕ್ಷಿ ಮೊಬೈಲ್ ರಿಟ್ರೀವ್​ನಿಂದ ಬಯಲಾಗಿದೆ. ಆಸಾಮಿಯ ಫೋನ್ ಪೇ ಚಾಟಿಂಗ್ ಎಲ್ಲವನ್ನು ತೆರೆದಿಟ್ಟಿದೆ.

ಏಪ್ರಿಲ್ 2025ರಂದು ಮಾರತ್ತಹಳ್ಳಿಯಲ್ಲಿ ಚರ್ಮರೋಗ ವೈದ್ಯ ಕೃತಿಕಾ ರೆಡ್ಡಿ ಕೊಲೆಯಾಗಿತ್ತು. ಪತಿ ಮಹೇಂದ್ರ ರೆಡ್ಡಿಯೇ ಪ್ರೊಪೋಫೋಲ್ ಎಂಬ ಅನಸ್ತೇಶಿಯಾವನ್ನು ಐವಿ ಫ್ಲೂಯಿಡ್ ಮೂಲಕ ನೀಡಿ ಕೊಂದಿದ್ದ. ಮೊದಮೊದಲು ಕೃತಿಕಾ ರೆಡ್ಡಿ ಸಾವು ಸ್ವಾಭಾವಿಕ ಸಾವು ಎಂದುಕೊಳ್ಳಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆ ಬಳಿಕ ದೇಹದಲ್ಲಿ ಅನಸ್ತೇಶಿಯಾ ನೀಡಿರುವುದು ಗೊತ್ತಾಗಿತ್ತು. ಹಾಗಾಗಿ ಅಸಹಜ ಸಾವು ಪ್ರಕರಣವನ್ನು ಕೊಲೆ ಪ್ರಕರಣ ಎಂದು ಬದಲಾಯಿಸಿಕೊಂಡು ಆರೋಪಿ ಪತಿಯನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: ಇಂಜೆಕ್ಷನ್ ನೀಡಿ ವೈದ್ಯೆಯ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಕೃತಿಕಾ ಸಹೋದರಿ

ಪ್ರಕರಣದ ತನಿಖೆ ಮುಂದುವರೆಸಿರುವ ಮಾರತ್ತಹಳ್ಳಿ ಪೊಲೀಸರು ಕೊಲೆಯ ಹಿಂದಿನ ಕಾರಣವನ್ನು ಬಯಲು ಮಾಡಿದ್ದಾರೆ. 2022ರಿಂದಲೇ ಪ್ರೀತಿಯಲ್ಲಿದ್ದ ಆಸಾಮಿ 2024ರಲ್ಲಿ ಕೃತಿಕಾ ರೆಡ್ಡಿ ವಿವಾಹವಾಗಿದ್ದ. ಹಣದಾಸೆಗೆ ಕೃತಿಕಾ ರೆಡ್ಡಿ ಕೊಂದು ಪ್ರೇಯಸಿ ಜೊತೆಗಿರಲು ಹೊಂಚು ಹಾಕಿದ್ದ. ಅದಕ್ಕೆ ಪೂರಕ ಎಂಬಂತೆ ಕೃತಿಕಾ ರೆಡ್ಡಿ ಕೊಲೆ ಬಳಿಕ ಮಹೇಂದ್ರ ರೆಡ್ಡಿ ಫೋನ್ ಪೇ ಮೂಲಕ ಪ್ರಿಯತಮೆಗೆ ಕಳುಸಿದ್ದ ಮೆಸೇಜ್​ ಅನ್ನು ಪೊಲೀಸರು ರಿಟ್ರೀವ್ ಮಾಡಿದ್ದಾರೆ.

ಮೆಸೇಜ್​​ನಲ್ಲಿ ಏನಿದೆ?

ಮೆಸೇಜ್​​- 1:ಈ ಮೆಸೇಜ್​​ ನೋಡಿದ ನಂತರ ನನಗೆ ಎಲ್ಲಿಯೂ ಮೆಸೇಜ್​​ ಅಥವಾ ಕರೆ ಮಾಡಬೇಡ. ಎಲ್ಲವೂ ಸರಿಯಾದ ನಂತರ ನಾನು ನಿನಗೆ ಫೋನ್ ಮಾಡ್ತೇನೆ. ಪೊಲೀಸರು ನಮ್ಮ ಸಂಬಂಧದ ಬಗ್ಗೆ ಕೇಳಲು ನಿನ್ನನ್ನ ಕರೆಯಬಹುದು. ಆಗ ನಾವು ಸ್ನೇಹಿತರು ಅಂತಷ್ಟೇ ಹೇಳಿ. ನೀವು ಪದೇ ಪದೇ ನನಗೆ ಕರೆ ಮಾಡಿದ್ರಾ ಅಂತಾ ಕೇಳಿದರೆ ಹೌದು ಎಂತಾ ಹೇಳು. ನಾನು ಆಸ್ಪತ್ರೆಯ ಬಗ್ಗೆ ಸಹಾಯ ಕೇಳಿದೆ ಅಂತಾ ಹೇಳು.

ಮೆಸೇಜ್​​- 2: ನಾನು ಬೇಗ ಹೋಗಿ ನನ್ನ ಹೆತ್ತವರಿಗೆ ಮತ್ತು ಕೃತಿಕಾ ಹೆತ್ತವರಿಗೆ ಹೇಳುತ್ತೇನೆ. ನಾನು ಕೃತಿಕಾಳನ್ನು ಕೊಂದಿರುವ ಮತ್ತು ನನ್ನ ಬಳಿ ಪುರಾವೆ ಇಲ್ಲ ಅಂತಾ. ಅಲ್ಲದೆ ನಾನು ಕಂಬಿಗಳ ಹಿಂದೆ ಹೋಗುತ್ತೇನೆ, ಆಗ ನೀನೂ ಸೇರಿದಂತೆ ಎಲ್ಲರೂ ಸಂತೋಷವಾಗಿರುತ್ತೀರಿ ಎಂದು ನಾನು ಭಾವಿಸುತ್ತೇನೆ.

ಮೆಸೇಜ್- 3: ನಾನು ಇದನ್ನು ಇಲ್ಲಿಗೆ ಕೊನೆಗೊಳಿಸುತ್ತಿದ್ದೇನೆ. ಹೋಗಿ ನಿನ್ನ ಜೀವನವನ್ನು ಆನಂದಿಸು. ನೀನು ಬಯಸಿದಂತೆ ನಾನು ದುಖಃದಿಂದ ಬಳಲುತ್ತೇನೆ. ಮತ್ತು ನೀನು ಬಯಸಿದಂತೆ ಸಾಯುತ್ತೇನೆ, ಕೊಲೆಗಾರ ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ನಾನು ಕೊಲೆಗಾರನಾಗಿಯೇ ಜೀವನವನ್ನು ನಡೆಸುತ್ತೇನೆ.

ಇದನ್ನೂ ಓದಿ: ವೈದ್ಯೆ ಕೊಲೆ ಕೇಸ್​​: ಮಾರಕ ಡ್ರಗ್ಸ್​​ನ ಮೂಲ ಬಯಲು; ಕೃತಿಕಾಳ ರೂಮ್​ನಲ್ಲಿ ಔಷಧಗಳು ಪತ್ತೆ

ಹೀಗೆ ಕೊಲೆ ಬಳಿಕ ಮಹೇಂದ್ರ ರೆಡ್ಡಿ ತನ್ನ ಪ್ರಿಯತಮೆಗೆ  ಫೋನ್ ಪೇನಲ್ಲಿ ಮೆಸೇಜ್ ಮಾಡಿದ್ದ. ಸದ್ಯ ಮೊಬೈಲ್ ಎಫ್ಎಸ್​​ಎಲ್​ಗೆ ಕಳುಹಿಸಿದ್ದ ಮಾರತ್ತಹಳ್ಳಿ ಪೊಲೀಸರು, ಈ ಎಲ್ಲಾ ಮೆಸೇಜ್​ಗಳನ್ನು ರಿಟ್ರೀವ್ ಮಾಡಿದ್ದಾರೆ. ಇದು ಕೃತಿಕಾ ರೆಡ್ಡಿ ಕೊಲೆ ಪ್ರಮುಖ ಟೆಕ್ನಿಕಲ್ ಸಾಕ್ಷ್ಯವಾಗಿದೆ.

ಫೋನ್ ಪೇನಲ್ಲಿ 485 ಚಾಟ್ ಪತ್ತೆ

ಇನ್ನು ಇಷ್ಟೇ ಅಲ್ಲದೆ ಆರೋಪಿ ಮಹೇಂದ್ರ ರೆಡ್ಡಿ ಮೊಬೈಲ್ ರಿಟ್ರೀವ್​ನಲ್ಲಿ 485 ಫೋನ್ ಪೇ ಚಾಟ್ ಪತ್ತೆಯಾಗಿದ್ದು, ಈ ಪೈಕಿ ಮೂರು ಮೆಸೇಜ್​ಗಳನ್ನ ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲಾಗಿದೆ. ಆರೋಪಿ ಪ್ರೇಯಸಿ ನರ್ಸ್, ವೈದ್ಯೆ ಕೃತಿಕಾ ಹಾಗೂ ಮಹೇಂದ್ರ ಮೊಬೈಲ್ ರಿಟೀವ್​ನಲ್ಲಿ ಒಟ್ಟು 10 ಲಕ್ಷ 34 ಸಾವಿರ ರೂ ದಷ್ಟು ಡಿಜಿಟಲ್ ಫೈಲ್​ಗಳನ್ನ ರಿಟ್ರೀವ್ ಮಾಡಿರುವ ಪೊಲೀಸರು ಪ್ರಮುಖ ಫೈಲ್​ಗಳನ್ನು ಹೆಚ್ಚುವರಿ‌ ಚಾರ್ಜ್ ಶೀಟ್​ನಲ್ಲಿ ಸಲ್ಲಿಸಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

DC vs GT: 9 ವರ್ಷಗಳ ಐಪಿಎಲ್ ವೃತ್ತಿಜೀವನದಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ ಸುಂದರ್

ಗುಜರಾತ್ ಟೈಟಾನ್ಸ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಐಪಿಎಲ್ 2026 ರ 14ನೇ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ, ತಮ್ಮ ಒಂಬತ್ತು ವರ್ಷಗಳ ಐಪಿಎಲ್ ವೃತ್ತಿಜೀವನದಲ್ಲಿ ಮೊದಲ ಅರ್ಧಶತಕ ದಾಖಲಿಸಿದರು. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಸ್ಫೋಟಕ ಅರ್ಧಶತಕ ಸಿಡಿಸಿದರು. ವಾಸ್ತವವಾಗಿ 2017 ರಿಂದ ಐಪಿಎಲ್‌ನಲ್ಲಿ ಆಡುತ್ತಿರುವ ಸುಂದರ್ ಎಂದಿಗೂ 50 ರನ್‌ಗಳ ಗಡಿಯನ್ನು ತಲುಪಿರಲಿಲ್ಲ. ಆದರೀಗ ಆ ಬರವನ್ನು ನೀಗಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ವಾಷಿಂಗ್ಟನ್ ಸುಂದರ್ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ತಂಡವು ದೊಡ್ಡ ಮೊತ್ತವನ್ನು ತಲುಪುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಸುಂದರ್ 33 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಿತ 55 ರನ್ ಗಳಿಸಿದರು. ತಂಡವು 79 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿದ್ದಾಗ ಬ್ಯಾಟಿಂಗ್​ಗೆ ಬಂದ ಸುಂದರ್, ನಾಯಕ ಶುಭಮನ್ ಗಿಲ್ ಅವರೊಂದಿಗೆ ಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು.

2017 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ವಾಷಿಂಗ್ಟನ್ ಸುಂದರ್ ತಮ್ಮ ಆಫ್-ಸ್ಪಿನ್ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದರು. ಅವರು ಬ್ಯಾಟಿಂಗ್‌ನಲ್ಲಿ ಹಲವಾರು ಉಪಯುಕ್ತ ಇನ್ನಿಂಗ್ಸ್‌ಗಳನ್ನು ಆಡಿದ್ದರು, ಆದರೆ ಒಮ್ಮೆಯೂ ಅರ್ಧಶತಕ ಗಳಿಸಿರಲಿಲ್ಲ. ಇದೀಗ ಅರ್ಧಶತಕಗಳ ಬರ ಇಂದು ಕೊನೆಗೊಂಡಿದೆ. ಕೇವಲ 17 ವರ್ಷ ವಯಸ್ಸಿನಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಸುಂದರ್ ಇಲ್ಲಿಯವರೆಗೆ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ನಾಲ್ಕು ವಿಭಿನ್ನ ತಂಡಗಳಿ ಪರ ಆಡಿದ್ದು ಒಟ್ಟು 69 ಪಂದ್ಯಗಳನ್ನು ಆಡಿದ್ದಾರೆ. ಈ 69 ಪಂದ್ಯಗಳಲ್ಲಿ ಒಟ್ಟು 588 ರನ್ ಗಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮನೆ ಮುಂದಿನ ಹಿಂದೂ ಮಹಿಳೆ ಜತೆ ಮುಸ್ಲಿಂ ವ್ಯಕ್ತಿ ಜೂಟ್: ಕಣ್ಣೀರಿಟ್ಟ ತಾಯಿ

ಹುಬ್ಬಳ್ಳಿ, (ಏಪ್ರಿಲ್ 08): ಹುಬ್ಬಳ್ಳಿಯಲ್ಲಿ ಅನೇಕ ಲವ್ ಜಿಹಾದ್ (Hubballi Love Jihad Cases) ಆರೋಪ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದಕ್ಕೆ ಇದೀಗ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. ವಿವಾಹಿತ ಮುಸ್ಲಿಂ ವ್ಯಕ್ತಿ, ಹಿಂದೂ ಮಹಿಳೆಯನ್ನು (Hindu Woman) ಪುಸಲಾಯಿಸಿ ಕರೆದುಕೊಂಡು ಪರಾರಿಯಾಗಿದ್ದಾನೆ. ಎರಡು ವರ್ಷದ ಹಿಂದೆ ಧಾರವಾಡದ ಕೆಲಗೇರಿಯ ನಿವಾಸಿಯಾಗಿರಯವ 22 ವರ್ಷದ ತಂಗೆಮ್ಮಾ ಎನ್ನುವ ಮಹಿಳೆ, ಮನೆ ಮುಂದಿದ್ದ ಕಾರು ಡ್ರೈವರ್ ಜೊತೆ ಹೋಗಿದ್ದಾಳೆ. ಆದ್ರೆ, ಇತ್ತ ಮಹಿಳೆಯ ಕುಟುಂಬಸ್ಥರು ತಮ್ಮ ಮಗಳನ್ನು ಡ್ರೈವರ್ ಮುನ್ನಾ ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ ಆರೋಪಿಸಿದ್ದಾರೆ.

ಇನ್ನು ಈ ಬಗ್ಗೆ ತಂಗೆಮ್ಮಾ ತಾಯಿ, ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.ತನ್ನ ಮಗಳನ್ನು ಮುಸ್ಲಿಂ ಧರ್ಮದ ವಿವಾಹಿತ ವ್ಯಕ್ತಿ ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ. ಜೊತಗೆ ಮನೆ ಖರೀದಿಸಲು ನೀಡಿದ್ದ ಹತ್ತು ಲಕ್ಷ ರೂ. ಹಣ ಕೂಡಾ ತಗೆದುಕೊಂಡು ಹೋಗಿದ್ದಾನೆ. ಇದೀಗ ಹಣವು ಇಲ್ಲ, ಮಗಳು ಇಲ್ಲ. ದಯವಿಟ್ಟು ಮಗಳನ್ನು ಹುಡುಕಿ ಕೊಡಿ ಎಂದು ಪರಿ ಪರಿಯಾಗಿ ಬೇಡಿಕೊಂಡಿದ್ದಾಳೆ. ಕಳೆದ ಎರಡು ವರ್ಷಗಳಿಂದ ಮಗಳಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

ಇದನ್ನು ಓದಿ: ಹಿಂದೂ ಯುವತಿ ಜೊತೆ ವಿವಾಹಿತ ಮುಸ್ಲಿಂ ವ್ಯಕ್ತಿ ಪರಾರಿ: ಲವ್​​ ಜಿಹಾದ್​​ಗೆ ಒಳಗಾದ ಮಗಳನ್ನು ಹುಡುಕಿಕೊಡಿ ಎಂದು ತಾಯಿಯ ಅಳಲು

Source link

ಕದನವಿರಾಮದ ನಂತರವೂ ಲೆಬನಾನ್ ಮೇಲೆ ಇಸ್ರೇಲ್ ಭೀಕರ ದಾಳಿ; 300ಕ್ಕೂ ಹೆಚ್ಚು ಜನ ಸಾವು

ಲೆಬನಾನ್, ಏಪ್ರಿಲ್ 8: ಕದನವಿರಾಮದ ಬಳಿಕವೂ ಲೆಬನಾನ್‌ ಮೇಲೆ ಇಸ್ರೇಲ್ (Israel) ಸೇನೆ ದಾಳಿ ನಡೆಸಿದೆ. ಇಸ್ರೇಲ್‌ ವಾಯುದಾಳಿಯಿಂದ 300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಲೆಬನಾನ್‌ ಮೇಲಿನ ದಾಳಿ ಹೀಗೆಯೇ ಮುಂದುವರಿಯುತ್ತದೆ ಎಂದು ಇಸ್ರೇಲ್‌ ಸೇನಾ ಮುಖ್ಯಸ್ಥ ಹೇಳಿದ್ದಾರೆ. ಲೆಬನಾನ್‌ನಲ್ಲಿರುವ ಹಿಜಬೊಲ್ಲಾಹ ಉಗ್ರರ ಸರ್ವನಾಶವಾಗೋವರೆಗೆ ದಾಳಿ ಮುಂದುವರಿಸುವುದಾಗಿ ಘೋಷಿಸಿದ್ದಾರೆ.

ಕದನ ವಿರಾಮ ಏರ್ಪಟ್ಟರೂ ಲೆಬನಾನ್‌ನ ಮೇಲಿನ ಇಸ್ರೇಲ್‌ ದಾಳಿಗೆ ಲೆಬನಾನ್‌ ಸರ್ಕಾರ ಹಾಗೂ ಹಿಜಬೊಲ್ಲಾಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆದರೆ, ಇಸ್ರೇಲ್‌-ಅಮೆರಿಕ ಹಾಗೂ ಇರಾನ್‌ ನಡುವಿನ ಕದನ ವಿರಾಮದಲ್ಲಿ ಲೆಬನಾನ್‌ ಸೇರಿಲ್ಲ ಎಂದು ಟ್ರಂಪ್‌ ಹೇಳಿದ್ದಾರೆ. ಲೆಬನಾನ್‌ನಲ್ಲಿರುವ ಹಿಜಬೊಲ್ಲಾಹ ಒಂದು ಉಗ್ರಸಂಘಟನೆಯಾಗಿರುವುದರಿಂದ ಲೆಬನಾನ್‌ ಕದನ ವಿರಾಮದ ವ್ಯಾಪ್ತಿಯಲ್ಲಿಲ್ಲ ಎಂದಿದ್ದಾರೆ. ಹೀಗಾಗಿ ಇಸ್ರೇಲ್‌ ಲೆಬನಾನ್‌ನಲ್ಲಿರುವ ಹಿಜಬೊಲ್ಲಾಹ್‌ ಮೇಲೆ ದಾಳಿ ಮುಂದುವರಿಸುತ್ತದೆ ಎಂದು ಟ್ರಂಪ್‌ ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link