ಕೆಲಸದ ಸ್ಥಳಗಳಲ್ಲಿ ಕೆಲ ಉದ್ಯೋಗಿಗಳು (employees) ಅನುಭವಿಸುವ ಒತ್ತಡ ಹೇಳಲಾಗದು. ಆದರೆ ಏನ್ ಮಾಡೋದು, ಕೆಲಸ ಮಾಡದೇ ಇದ್ದರೆ ವಿಧಿಯಿಲ್ಲ. ಅದರಲ್ಲೂ ಈ ಕಾರ್ಪೊರೇಟ್ ಜಗತ್ತಿನಲ್ಲಿ ಒತ್ತಡ ಡಬಲ್ ಆಗಿರುತ್ತದೆ. ಇದಕ್ಕೆ ಸಾಕ್ಷಿಯೆನ್ನುವಂತಿದೆ ಈ ದೃಶ್ಯ. ವ್ಯಕ್ತಿಯೊಬ್ಬ ರಾತ್ರಿ 12 ಗಂಟೆಯಾದ್ರು ಮನೆಗೆ ಹೋಗದೇ ಬೈಕ್‌ನಲ್ಲಿ ಲ್ಯಾಪ್ ಟಾಪ್ ಹಿಡಿದು ಕುಳಿತು ಆಫೀಸ್ ಕೆಲಸ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಈ ವಿಡಿಯೋ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.
@ravi_bhojane ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ನಗರದ ಹೆಚ್ಚಿನ ಜನರು ನಿದ್ರಿಸುತ್ತಿರುವ ಸಮಯದಲ್ಲಿ ಅಂದರೆ ತಡರಾತ್ರಿ 12:15 ಕ್ಕೆ ವ್ಯಕ್ತಿಯೊಬ್ಬ ಬೈಕ್‌ನಲ್ಲಿ ಲ್ಯಾಪ್ ಟಾಪ್ ತೆರೆದು ಕುಳಿತು ಕೆಲಸ ಮಾಡುತ್ತಿರುವುದನ್ನು ಕಾಣಬಹುದು. ಈ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ವ್ಯಕ್ತಿಯೊಬ್ಬ ಸೆರೆ ಹಿಡಿದಿದ್ದು, ಕೆಲಸದಲ್ಲಿ ಬ್ಯುಸಿಯಾಗಿರುವ ವ್ಯಕ್ತಿಯನ್ನು ಮಾತನಾಡಿಸಿದ್ದಾನೆ. ಕೆಲಸ ಮಾಡುತ್ತಿರುವ ಬಗ್ಗೆ ವಿಚಾರಿಸಿದಾಗ ಲ್ಯಾಪ್ ಟಾಪ್ ಹಿಡಿದು ಕುಳಿತ ವ್ಯಕ್ತಿಯೂ ಏನು ಮಾತನಾಡದೇ ನಕ್ಕಿದ್ದಾನೆ.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇದು ಕಾರ್ಪೋರೆಟ್ ಜಗತ್ತು ಎಂದು ಹೇಳಿದ್ದಾರೆ. ಇನ್ನೊಬ್ಬರು, ಅಣ್ಣ ಮನೆಗೆ ಹೋಗಿ ಮಲಗು ಎಂದಿದ್ದಾರೆ. ಮತ್ತೊಬ್ಬರು, ಕಳೆದ ವಾರ ನನ್ನ ಪರಿಸ್ಥಿತಿ ಇದೇ ಆಗಿತ್ತು ಎಂದು ವಾಸ್ತವ ಸ್ಥಿತಿ ವಿವರಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಭಾರತದಲ್ಲಿ ಪ್ರತಿವರ್ಷ ಡೆಂಗ್ಯೂ (Dengue) ಪ್ರಕರಣಗಳು ಹೆಚ್ಚುತ್ತಿದ್ದು, ಅನೇಕ ಮಂದಿ ಇದರ ಪರಿಣಾಮವಾಗಿ ಸಾವನ್ನಪ್ಪುತ್ತಿದ್ದಾರೆ. ಇದುವರೆಗೆ ಡೆಂಗ್ಯೂಗೆ ನಿರ್ದಿಷ್ಟ ಲಸಿಕೆ ಲಭ್ಯವಿರಲಿಲ್ಲ. ಆದರೆ ಈಗ ದೇಶದಲ್ಲಿ ಶೀಘ್ರದಲ್ಲೇ ಡೆಂಗ್ಯೂ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಹೌದು, ‘Qdenga’ ಲಸಿಕೆಯ ಅಂತಿಮ ಹಂತದ ಟ್ರಯಲ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಲಸಿಕೆಯನ್ನು ಜಪಾನ್‌ನ ಪ್ರಸಿದ್ಧ ಔಷಧ ಕಂಪನಿ ಟಕೆಡಾ ಫಾರ್ಮಾಸ್ಯುಟಿಕಲ್ಸ್ (Takeda Pharmaceutical Company) ಅಭಿವೃದ್ಧಿಪಡಿಸಿದ್ದು, ಹೈದರಾಬಾದ್‌ನ ಬಯೋಲಾಜಿಕಲ್ ಇ (Biological E) ಸಂಸ್ಥೆಯೊಂದಿಗೆ ಸಹಭಾಗಿತ್ವದಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಇದೇ ವರ್ಷ ಈ ಲಸಿಕೆ ದೊರಕುವ ನಿರೀಕ್ಷೆಯಿದೆ. ಹಾಗಾದರೆ ಈ ಲಸಿಕೆ ಹೇಗೆ ಕಾರ್ಯ ನಿರ್ವಹಿಸುತ್ತದೆ, ಯಾರು ಯಾವಾಗ ತೆಗೆದುಕೊಳ್ಳಬೇಕು, ನಿಜವಾಗಿಯೂ ಇದು ಕೆಲಸ ಮಾಡುತ್ತದೆಯೇ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
Qdenga (TAK-003) ಎಂಬುದು 4 ರಿಂದ 60 ವರ್ಷ ವಯಸ್ಸಿನವರಿಗೆ ಡೆಂಗ್ಯೂ ತಡೆಗಟ್ಟಲು ಅನುಮೋದಿಸಲಾದ ಟೆಟ್ರಾವಲೆಂಟ್ ಲಸಿಕೆಯಾಗಿದೆ. ಇದು ಎಲ್ಲಾ 4 ಡೆಂಗ್ಯೂ ತಳಿಗಳ ವಿರುದ್ಧ ರಕ್ಷಣೆ ನೀಡುತ್ತದೆ. 3 ತಿಂಗಳ ಅಂತರದಲ್ಲಿ ಎರಡು ಡೋಸ್‌ಗಳನ್ನು ನೀಡಲಾಗುವ ಈ ಲಸಿಕೆ, 2026 ರಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ಲೈವ್ ಅಟೆನ್ಯೂಯೇಟೆಡ್ ಲಸಿಕೆಯಾಗಿದ್ದು, ತೀವ್ರವಾದ ಡೆಂಗ್ಯೂ ಸೋಂಕು ಮತ್ತು ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಲಸಿಕೆಯನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ದ ವಿಷಯ ತಜ್ಞರ ಸಮಿತಿಯು ಭಾರತದಲ್ಲಿ ಬಳಸಲು ಶಿಫಾರಸು ಮಾಡಿದೆ.
40ಕ್ಕೂ ಹೆಚ್ಚು ದೇಶಗಳಲ್ಲಿ ಅನುಮತಿ
ಜಾಗತಿಕವಾಗಿ 28,000 ಕ್ಕೂ ಹೆಚ್ಚು ಜನರ ಮೇಲೆ ಪರೀಕ್ಷಿಸಲಾದ ಈ ಲಸಿಕೆಯನ್ನು ಈಗಾಗಲೇ ಯೂರೋಪ್, ಬ್ರಿಟನ್, ಇಂಡೋನೇಷಿಯಾ ಮತ್ತು ಬ್ರೆಜಿಲ್ ಸೇರಿದಂತೆ 40ಕ್ಕೂ ಹೆಚ್ಚು ದೇಶಗಳಲ್ಲಿ ಬಳಸಲಾಗುತ್ತಿದೆ. ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಯಿಂದ ಪ್ರೀಕ್ವಾಲಿಫಿಕೇಶನ್ ಕೂಡ ಸಿಕ್ಕಿದೆ. ಇದರಿಂದ ಈ ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ ಎಂಬುದಕ್ಕೆ ದೃಢತೆ ಸಿಕ್ಕಿದೆ. ಇದು ಭಾರತದಲ್ಲಿ ಬಿಡುಗಡೆಯಾಗುವಾಗ ಲಸಿಕೆಯ ಬೆಲೆಯನ್ನು ನಿರ್ಧರಿಸಲಾಗುತ್ತದೆ.
ಭಾರತದಲ್ಲಿ ಪ್ರತಿವರ್ಷ ಸಾವಿರಾರು ಡೆಂಗ್ಯೂ ಪ್ರಕರಣಗಳು ದಾಖಲಾಗುತ್ತವೆ. ಹಲವಾರು ಮಂದಿ ಈ ರೋಗದಿಂದ ಸಾವನ್ನಪ್ಪುತ್ತಾರೆ. ಲಸಿಕೆ ಲಭ್ಯವಾದ ಬಳಿಕ, ಮುನ್ನೆಚ್ಚರಿಕೆಯಾಗಿ ಲಸಿಕೆ ನೀಡುವ ಮೂಲಕ ಡೆಂಗ್ಯೂ ಸೋಂಕನ್ನು ತಡೆಯಲು ಸಾಧ್ಯವಾಗುತ್ತದೆ. ಈ ಲಸಿಕೆಯ ವಿಶೇಷತೆಯೆಂದರೆ, ಈಗಾಗಲೇ ಡೆಂಗ್ಯೂ ಆಗಿರುವವರ ಮೇಲೂ ಇದು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಹುದು ಎಂದು ಹೇಳಲಾಗುತ್ತಿದೆ. ಪ್ರಸ್ತುತ ಪರೀಕ್ಷಾ ಹಂತದಲ್ಲಿರುವುದರಿಂದ ಜೊತೆಗೆ ಭಾರತದಲ್ಲಿ ಯಾವುದೇ ಲಸಿಕೆಯನ್ನು ಸಾರ್ವಜನಿಕ ಬಳಕೆಗೆ ಮುನ್ನ ಕೇಂದ್ರೀಯ ಔಷಧಗಳ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಯ ಅನುಮತಿ ಅಗತ್ಯವಿದೆ. ಹಾಗಾಗಿ ಈ ಲಸಿಕೆಗೆ ಇನ್ನೂ ಅಂತಿಮ ಅನುಮೋದನೆ ದೊರಕಿಲ್ಲ. ಅನುಮತಿ ಸಿಕ್ಕ ನಂತರವೇ ಸಾಮಾನ್ಯ ಜನರಿಗೆ ಲಸಿಕೆ ನೀಡಲಾಗುತ್ತದೆ. ಈ ಡೆಂಗ್ಯೂ ಲಸಿಕೆ ಭಾರತದಲ್ಲಿ ಲಭ್ಯವಾದರೆ, ಇದು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಬಹುದು. ಲಸಿಕೆ ಜೊತೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದರಿಂದ ಡೆಂಗ್ಯೂ ವಿರುದ್ಧ ಹೋರಾಟದಲ್ಲಿ ದೊಡ್ಡ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ.
ಜಬಲ್ಪುರ, ಏಪ್ರಿಲ್ 8: ‘ನೀರೊಳಗಿರ್ದುಂ ಬೆಮರ್ತನುರಗಪತಾಕಂ’ ಎಂಬುದು ರನ್ನನ ಗದಾಯುದ್ಧ ಕಾವ್ಯದಲ್ಲಿ ಬರುವ ಮುಖ್ಯವಾದ ಸಾಲು. ಮಹಾಭಾರತದ ಕುರುಕ್ಷೇತ್ರ ಯುದ್ಧದ ಅಂತಿಮ ಘಟ್ಟದಲ್ಲಿ ಭೀಮನಿಂದ ತಪ್ಪಿಸಿಕೊಳ್ಳುವ ಸಲುವಾಗಿ ದುರ್ಯೋಧನ ವೈಶಂಪಾಯನ ಸರೋವರದ ಕೆಳಗೆ ಅಡಗಿರುತ್ತಾನೆ. ಆಗ ಭೀಮನ ಸಿಂಹಘರ್ಜನೆಯನ್ನು ಕೇಳಿ ತಂಪಾದ ನೀರಿನೊಳಗಿದ್ದರೂ ಬೆವರುತ್ತಿರುತ್ತಾನೆ ಎಂದು ರನ್ನ ವರ್ಣಿಸಿದ್ದಾರೆ. ಅದೆಲ್ಲ ಮಹಾಭಾರತದ ಕತೆಯಾದರೆ ಮಧ್ಯಪ್ರದೇಶದಲ್ಲೊಬ್ಬ ಕಳ್ಳ ಕೂಡ ದುರ್ಯೋಧನ ಭೀಮನಿಂದ ತಪ್ಪಿಸಿಕೊಳ್ಳಲು ಮಾಡಿದ ಸಾಹಸದ ರೀತಿಯಲ್ಲೇ ಪೊಲೀಸರಿಂದ ತಪ್ಪಿಸಿಕೊಳ್ಳಲು ಕೊಳದೊಳಗೆ ಬರೋಬ್ಬರಿ 5 ಗಂಟೆ ಅಡಗಿ ಕುಳಿತಿದ್ದಾನೆ!
ನೀರು ತುಂಬಿದ್ದ ಕೊಳದೊಳಗೆ ಅಡಗಿದ್ದ ಆತ ಉಸಿರಾಡಲು ಕಷ್ಟವಾದಾಗ ಟೊಳ್ಳಾಗಿರುವ ತಾವರೆ ಹೂವಿನ ಕಾಂಡವನ್ನು ನೀರಿನಿಂದ ಮೇಲಕ್ಕೆ ಹಿಡಿದು, ನೀರಿನೊಳಗಿಂದ ಆ ಕಾಂಡದ ಮೂಲಕ ಗಾಳಿಯನ್ನು ಉಸಿರಾಡುವ ಪ್ಲಾನ್ ಮಾಡಿದ್ದಾನೆ. ಆತ ಅಲ್ಲಿ ಅಡಗಿದ್ದು ಪೊಲೀಸರಿಗೆ ಗೊತ್ತಾಗಿದ್ದು ಹೇಗೆ? ಆತನನ್ನು ಸೆರೆಹಿಡಿದಿದ್ದು ಹೇಗೆ? ಎಂಬ ಕತೆ ಯಾವ ಸಿನಿಮಾಗೂ ಕಡಿಮೆಯೇನಿಲ್ಲ.
ಈ ಘಟನೆ ನಡೆದಿದ್ದು ಏಪ್ರಿಲ್ 6ರ ಮುಂಜಾನೆ. ಜಬಲ್ಪುರ್ ವಿಭಾಗದ ಸಿಹೋರಾ ರೈಲ್ವೆ ನಿಲ್ದಾಣದಲ್ಲಿ ಬೆಳಗಿನ ಜಾವ 4.50ರ ಸುಮಾರಿಗೆ ಕರ್ತವ್ಯದಲ್ಲಿದ್ದ RPF ಸಿಬ್ಬಂದಿ ರೈಲು ಸಂಖ್ಯೆ 11753 ರೈಲು ನಿಲ್ದಾಣದಿಂದ ಇಳಿಯುತ್ತಿರುವ ಅನುಮಾನಾಸ್ಪದ ವ್ಯಕ್ತಿಯನ್ನು ಗಮನಿಸಿದರು. ಅವರು ನೋಡುತ್ತಿದ್ದಾಗಲೇ ಆ ವ್ಯಕ್ತಿ ಮಹಿಳೆಯೊಬ್ಬರ ಪರ್ಸ್ ಕದಿಯಲು ಪ್ರಯತ್ನಿಸಿದ್ದ. ಬಳಿಕ ಅಲ್ಲಿಂದ ಓಡಿಹೋಗಲು ಪ್ರಯತ್ನಿಸಿದನು. ಆತನನ್ನು ಹಿಂಬಾಲಿಸಿಕೊಂಡು ಅಧಿಕಾರಿಗಳು ಬರುತ್ತಿದ್ದಂತೆ, ಆ ಆರೋಪಿ ಸ್ಥಳೀಯ ಮಾರುಕಟ್ಟೆಯ ಬಳಿಯ ಹತ್ತಿರದ ಪಾಚಿಯಿಂದ ಆವೃತವಾದ ಕೊಳಕ್ಕೆ ಹಾರಿದನು. ಪೊಲೀಸರಿಂದ ತಪ್ಪಿಸಿಕೊಳ್ಳಲು ಅವನು 5 ಗಂಟೆ ಆ ಕೆಸರು ತುಂಬಿದ ಕೊಳದ ನೀರಿನ ಅಡಿಯಲ್ಲಿ ಅಡಗಿಕೊಂಡಿದ್ದನು. ತಾನೆಲ್ಲಿದ್ದೇನೆಂದು ಯಾರೂ ಪತ್ತೆಹಚ್ಚಬಾರದು ಎಂದು ನೀರೊಳಗಿಂದ ಉಸಿರಾಡಲು ಟೊಳ್ಳಾದ ಕಮಲದ ಕಾಂಡವನ್ನು ಬಳಸಿದನು.
ಅವನನ್ನು ತಪ್ಪಿಸಿಕೊಳ್ಳಲು ಬಿಡಬಾರದು ಎಂದು ನಿರ್ಧರಿಸಿದ ಆರ್‌ಪಿಎಫ್ ಸಿಬ್ಬಂದಿ ಅಷ್ಟೂ ಹೊತ್ತು ದಡದಲ್ಲೇ ಕಾದಿದ್ದರು. ಕೊನೆಗೆ ಸ್ಥಳೀಯ ಪೊಲೀಸರೊಂದಿಗೆ ಅವರು ಆ ಕೊಳವನ್ನು ಸ್ವಚ್ಛಗೊಳಿಸಲು ಡೈವರ್‌ಗಳನ್ನು ನಿಯೋಜಿಸಿದರು. ದೀರ್ಘಕಾಲದ ಶೋಧ ಕಾರ್ಯಾಚರಣೆಯ ನಂತರ 5 ಗಂಟೆಗಳ ಕಾಲ ನೀರೊಳಗೆ ಅಡಗಿದ್ದ ಆ ಆರೋಪಿಯನ್ನು ಕೊನೆಗೂ ಪತ್ತೆಹಚ್ಚಿ, ನೀರಿನ ಒಳಗಿಂದ ಹೊರಗೆ ಎಳೆದುಕೊಂಡು ಹೋಗಲಾಯಿತು.
ಆಗಲೂ, ಅವನು ಕೊನೆಯ ಬಾರಿಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು. ಆದರೆ, ಪೊಲೀಸರ ತಂಡ ಆತನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಯಿತು. ಈ ಗಲಾಟೆಯ ಸಮಯದಲ್ಲಿ ಪೊಲೀಸರಿಗೆ ಸಣ್ಣಪುಟ್ಟ ಗಾಯಗಳೂ ಆದವು. ಪೊಲೀಸರನ್ನು ಇಷ್ಟೆಲ್ಲ ಸತಾಯಿಸಿದ ಆರೋಪಿ ಉತ್ತರ ಪ್ರದೇಶದ ಬಿಜ್ನೋರ್ ನಿವಾಸಿ ಹರ್ವಿಂದರ್ ಸಿಂಗ್. 32 ವರ್ಷದ ಹರ್ವಿಂದರ್ ಸಿಂಗ್ ಓರ್ವ ಅಂತರರಾಜ್ಯ ಅಪರಾಧಿ. ರೈಲು ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡಿದ್ದ ಹಲವು ಆರೋಪಗಳು ಇವನ ಮೇಲಿದೆ. ಆತ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಳ್ಳತನ ನಡೆಸಿದ್ದ. ಕೊನೆಗೂ ಆತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಏಪ್ರಿಲ್ 08: ಕರ್ನಾಟಕದಲ್ಲಿ ಉಪಚುನಾವಣೆ (by-election) ಕದನ ಕ್ಲೈಮ್ಯಾಕ್ಸ್ ಘಟ್ಟಕ್ಕೆ ತಲುಪಿದೆ. ಆಡಳಿತಾರೂಢ ಕಾಂಗ್ರೆಸ್‌ಗೆ ಪ್ರತಿಷ್ಠೆ ಮತ್ತು ಪ್ರತಿಪಕ್ಷ ಬಿಜೆಪಿ ಸವಾಲಿನ ಪ್ರಶ್ನೆಯಾಗಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಎರಡು ಕ್ಷೇತ್ರಗಳಲ್ಲಿ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ಒಂದೆಡೆ ಚುನಾವಣೆ ಅಧಿಕಾರಿಗಳು ಕೊನೆಯ ಹಂತದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಮತದಾರರು ಕೂಡ ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ವೋಟ್ ಮಾಡಲು ಸಜ್ಜಾಗಿದ್ದಾರೆ.
ಕ್ಲೈಮ್ಯಾಕ್ಸ್ ಹಂತಕ್ಕೆ ಉಪಚುನಾವಣೆ
ಜಿದ್ದಾಜಿದ್ದಿಗೆ ಸಾಕ್ಷಿಯಾಗಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ 2 ಕ್ಷೇತ್ರಗಳ ಉಪಚುನಾವಣೆ ಸಮರ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಂಗಳವಾರ ಸಂಜೆ 5.30ಕ್ಕೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿತ್ತು. ಕಳೆದೊಂದು ವಾರದಿಂದ ಕ್ಷೇತ್ರದಲ್ಲೇ ಬೀಡುಬಿಟ್ಟು ಬಿರುಸಿನ ಪ್ರಚಾರ ನಡೆಸಿದ್ದ ನಾಯಕರು ಕ್ಷೇತ್ರಬಿಟ್ಟು ವಾಪಸ್ ತೆರಳಿದ್ದಾರೆ. ಇಂದು ಅಭ್ಯರ್ಥಿಗಳು ಮನೆಮನೆ ಪ್ರಚಾರ ನಡೆಸಲಿದ್ದು, ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6ಗಂಟೆಯವರೆೆಗೆ ಮತದಾನ ನಡೆಯಲಿದೆ.
ಬಾಗಲಕೋಟೆ ಕ್ಷೇತ್ರದಲ್ಲಿ ಮತದಾನಕ್ಕೆ ಸಕಲ ಸಿದ್ಧತೆ
ಬಾಗಲಕೋಟೆ ನಗರ ಕ್ಷೇತ್ರ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರಾನೇರಾ ಫೈಟ್ ಕಾರಣವಾಗಿದೆ. ನಾಳೆ ವೋಟಿಂಗ್ ನಡೆಯಲಿದ್ದು, ಅಂತಿಮ ಸಿದ್ಧತೆ ಮಾಡಿಕೊಳ್ಳಲಾಗಿದೆ. ನವನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆಯಿತು. ಮತಗಟ್ಟೆಗಳೊಂದಿಗೆ ಸಿಬ್ಬಂದಿ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳಲ್ಲಿ ತಮ್ಮ ತಮ್ಮ ಬೂತ್‌ಗಳತ್ತ ತೆರಳಿದ್ದಾರೆ.
ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,59,797 ಮತದಾರರಿದ್ದು, ಅವರಲ್ಲಿ ಪುರುಷರು 1,26,999, ಮಹಿಳೆಯರು-1,32,775, ಇತರರು-23 ಮತ್ತು ಅಂಚೆ ಮತದಾರರು-170. ಒಟ್ಟು 09 ಅಭ್ಯರ್ಥಿಗಳು ಕಣದಲ್ಲಿದಿದ್ದಾರೆ. ಒಟ್ಟು 332 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. 1,564 ಚುನಾವಣಾ ಸಿಬ್ಬಂದಿ ನಿಯೋಜಿಸಲಾಗಿದ್ದು, ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಿದ್ದು, ಮತಗಟ್ಟೆಗಳ ಬಳಿ ವ್ಹೀಲ್ ಚೇರ್ ವ್ಯವಸ್ಥೆಯನ್ನು ಮಾಡಲಾಗಿದೆ. ಯುವ ಮತದಾನ ಕೇಂದ್ರ ಮತ್ತು ಮಹಿಳೆಯರಿಗಾಗಿ ಎರಡು ಸಖಿ ಮತಗಟ್ಟೆಗಳನ್ನು ತೆರೆಯಲಾಗಿದ್ದು ಗಮನ ಸೆಳೆಯುತ್ತಿವೆ.
ಬಿಗಿ ಭದ್ರತೆ
ಇನ್ನು 1 ಎಸ್ಪಿ, 2 ಎಎಸ್ಪಿ,10 ಜನ ಡಿವೈಎಸ್ಪಿ, ಸಿಪಿಐ, ಪಿಎಸ್ಐ, ಎಎಸ್ಐ, ಪೊಲೀಸ್ ಕಾನ್ಸ್ಟೇಬಲ್, ಸಿಎಪಿಎಫ್ ಪಡೆ ಸೇರಿ ಒಟ್ಟು 2500 ಜನ ಸೇರಿದಂತೆ ಮತದಾನ ಪ್ರಕ್ರಿಯೆಗೆ 1564 ಸಿಬ್ಬಂದಿಯನ್ನ ಭದ್ರತೆಗೆ ನಿಯೋಜಿಸಲಾಗಿದೆ.
ದಾವಣಗೆರೆ ದಕ್ಷಿಣದಲ್ಲಿ ಒಟ್ಟು 284 ಮತಗಟ್ಟೆಗಳ ನಿರ್ಮಾಣ
ಇತ್ತ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲೂ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ದಾವಣಗೆರೆಯಲ್ಲಿ ಮುಕ್ತ ಮತ್ತು ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಿಬಿ ರಸ್ತೆಯ ಬಳಿ ಇರುವ ಡಿಆರ್‌ಆರ್ ಸ್ಕೂಲ್‌ನಲ್ಲಿ ಬೆಳಗ್ಗೆಯಿಂದಲೇ ಮಸ್ಟರಿಂಗ್ ಕಾರ್ಯ ನಡೆಯಿತು. ಸಿಬ್ಬಂದಿ ತಮ್ಮ ಕೇಂದ್ರದ ಮತಯಂತ್ರವನ್ನ ಪಡೆದುಕೊಂಡು ಮತಗಟ್ಟೆಯತ್ತ ತೆರಳಿದ್ದಾರೆ. ಚುನಾವಣಾ ಕರ್ತವ್ಯಕ್ಕೆ ತೆರಳುವ ಸಿಬ್ಬಂದಿಗೆ ವೈದ್ಯಕೀಯ ಪರೀಕ್ಷೆ ಕೂಡ ಮಾಡಲಾಗಿದೆ.
ದಾವಣಗೆರೆ ದಕ್ಷಿಣದಲ್ಲಿ ಒಟ್ಟು 284 ಮತಗಟ್ಟೆಗಳ ನಿರ್ಮಾಣ ಮಾಡಲಾಗಿದ್ದು, ಇದರಲ್ಲಿ
76 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. 1,489 ಚುನಾವಣಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮತಗಟ್ಟೆಯ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಮಾಡಲಾಗಿದೆ. ಎಲ್ಲ ಮತಗಟ್ಟೆಯಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಇದೆ. ಇನ್ನು ಒಟ್ಟು 2,31072 ಮತದಾರರಿದ್ದು, ಮಹಿಳಾ ಮತದಾರರೇ ಹೆಚ್ಚಿದ್ದಾರೆ. ಕಣದಲ್ಲಿ 25 ಅಭ್ಯರ್ಥಿಗಳಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆ ನಿಯೋಜಿಸಲಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮುಂಬರುವ ಏಪ್ರಿಲ್ 17ರ ಅಮಾವಾಸ್ಯೆಯು ಅತ್ಯಂತ ಮಹತ್ವದ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ. ಈ ದಿನ ಗುರು ಮತ್ತು ಶುಕ್ರ ಗ್ರಹಗಳು ತಮ್ಮ ಸ್ಥಾನಗಳನ್ನು ಬದಲಾಯಿಸುವುದಲ್ಲದೆ, ಚಂದ್ರನು ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶಿಸಲಿದ್ದಾನೆ. ಈ ಗ್ರಹಗಳ ಸಂಚಾರದ ಫಲವಾಗಿ ನಾಲ್ಕು ಪ್ರಮುಖ ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಸಾಮಾನ್ಯವಾಗಿ ಅಮಾವಾಸ್ಯೆಯನ್ನು ಸಂಕಷ್ಟದ ಸಮಯವೆಂದು ಭಾವಿಸಿದರೂ, ಈ ಬಾರಿ ರೂಪುಗೊಳ್ಳುತ್ತಿರುವ ಗ್ರಹಗತಿಗಳು ಕೆಲವು ರಾಶಿಗಳಿಗೆ ರಾಜಯೋಗದ ಫಲ ನೀಡಲಿವೆ.
ಈ ವಿಶೇಷ ದಿನದಂದು ನಾಲ್ಕು ಪ್ರಮುಖ ಗ್ರಹಗಳ ಸಂಯೋಗವು ಏಕಕಾಲದಲ್ಲಿ ಸಂಭವಿಸುತ್ತಿದ್ದು, ಇದರಿಂದ ‘ಬುಧಾದಿತ್ಯ ರಾಜಯೋಗ’ ಮತ್ತು ‘ಮಂಗಳಾದಿತ್ಯ ರಾಜಯೋಗ’ಗಳಂತಹ ಪವಿತ್ರ ಯೋಗಗಳು ಸೃಷ್ಟಿಯಾಗುತ್ತಿವೆ. ಈ ಶುಭ ಯೋಗಗಳ ಪ್ರಭಾವದಿಂದಾಗಿ ಕುಂಭ, ಕರ್ಕಾಟಕ, ಧನು ಮತ್ತು ತುಲಾ ರಾಶಿಯವರಿಗೆ ಆರ್ಥಿಕ ಲಾಭದ ಜೊತೆಗೆ ಜೀವನದ ವಿವಿಧ ಕ್ಷೇತ್ರಗಳಲ್ಲಿ ಅಭೂತಪೂರ್ವ ಯಶಸ್ಸು ಸಿಗಲಿದೆ. ವಿಶೇಷವಾಗಿ ವೃತ್ತಿಜೀವನ ಮತ್ತು ಕೌಟುಂಬಿಕ ಜೀವನದಲ್ಲಿ ಇದ್ದ ಅಡೆತಡೆಗಳು ಈ ದಿನದಿಂದ ನಿವಾರಣೆಯಾಗಲಿವೆ.
ಕುಂಭ ರಾಶಿ:
ಕುಂಭ ರಾಶಿಯವರಿಗೆ ಈ ಅಮಾವಾಸ್ಯೆಯು ಅತ್ಯಂತ ಶುಭದಾಯಕವಾಗಿರಲಿದೆ. ನಾಲ್ಕು ಗ್ರಹಗಳ ಸಂಯೋಗದಿಂದಾಗಿ ನಿಮ್ಮ ದಾಂಪತ್ಯ ಜೀವನದಲ್ಲಿ ಸಾಮರಸ್ಯ ಹೆಚ್ಚಾಗಲಿದ್ದು, ಕುಟುಂಬದೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವಿರಿ. ವಿಶೇಷವಾಗಿ ಮಾಧ್ಯಮ ಮತ್ತು ಸೃಜನಶೀಲ ರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಸಮಾಜದಲ್ಲಿ ಉತ್ತಮ ಮನ್ನಣೆ ಮತ್ತು ಗೌರವ ಪ್ರಾಪ್ತಿಯಾಗಲಿದೆ. ನಿಮ್ಮ ಎಲ್ಲಾ ಪ್ರಯತ್ನಗಳಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಈ ಅವಧಿಯಲ್ಲಿ ದೊರೆಯಲಿದೆ.
ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯ ಜನರಿಗೆ ಇದು ಹೊಸ ಆರಂಭದ ಸಮಯವಾಗಿದೆ. ನೀವು ದೀರ್ಘಕಾಲದಿಂದ ಹೊಸ ವ್ಯವಹಾರ ಅಥವಾ ಉದ್ಯಮವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ಅದಕ್ಕೆ ಇದು ಅತ್ಯಂತ ಸೂಕ್ತ ಕ್ಷಣ. ಕೆಲಸದ ಸ್ಥಳದಲ್ಲಿ ಎದುರಿಸುತ್ತಿದ್ದ ತೊಂದರೆಗಳು ದೂರವಾಗಿ, ಆರ್ಥಿಕವಾಗಿ ಸದೃಢರಾಗುವ ಅವಕಾಶಗಳಿವೆ. ಮನಸ್ಸಿಗೆ ನೆಮ್ಮದಿ ನೀಡುವಂತಹ ವಾತಾವರಣ ಮನೆಯಲ್ಲಿ ನಿರ್ಮಾಣವಾಗಲಿದ್ದು, ಒಟ್ಟಾರೆಯಾಗಿ ಇದು ನಿಮಗೆ ಲಾಭದಾಯಕ ದಿನಗಳಾಗಿರಲಿವೆ.
ಧನು ರಾಶಿಯವರಿಗೆ ಉದ್ಯೋಗ ಮತ್ತು ವೃತ್ತಿಜೀವನದ ದೃಷ್ಟಿಯಿಂದ ಈ ಸಮಯವು ವರದಾನವಾಗಲಿದೆ. ರಾಜಯೋಗದ ಪ್ರಭಾವದಿಂದಾಗಿ ಬಹಳ ದಿನಗಳಿಂದ ನಿರುದ್ಯೋಗಿಗಳಾಗಿರುವವರಿಗೆ ಉತ್ತಮ ಸಂಸ್ಥೆಗಳಲ್ಲಿ ಕೆಲಸ ಸಿಗುವ ಸಾಧ್ಯತೆಗಳು ಹೆಚ್ಚಿವೆ. ವೃತ್ತಿಜೀವನದಲ್ಲಿ ಬಡ್ತಿ ಅಥವಾ ವರ್ಗಾವಣೆಯ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ ಕೇಳಿಬರಲಿದೆ. ಈ ರಾಶಿಯವರು ಆರ್ಥಿಕವಾಗಿ ಚೇತರಿಸಿಕೊಳ್ಳುವುದಲ್ಲದೆ, ತಮ್ಮ ಹಳೆಯ ಸಾಲಗಳಿಂದಲೂ ಮುಕ್ತಿ ಪಡೆಯುವ ಮಾರ್ಗಗಳು ಗೋಚರಿಸಲಿವೆ.
ತುಲಾ ರಾಶಿ:
ಕೊನೆಯದಾಗಿ, ತುಲಾ ರಾಶಿಯವರಿಗೆ ಈ ಅಮಾವಾಸ್ಯೆಯು ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆಯನ್ನು ತಂದುಕೊಡಲಿದೆ. ನೀವು ಕೈಗೊಳ್ಳುವ ಪ್ರತಿಯೊಂದು ನಿರ್ಧಾರವೂ ನಿಮಗೆ ಲಾಭವನ್ನು ತಂದುಕೊಡಲಿದ್ದು, ವೈವಾಹಿಕ ಜೀವನದಲ್ಲಿ ಸುಖ-ಶಾಂತಿ ನೆಲೆಸಲಿದೆ. ಸಮಾಜದ ಪ್ರಭಾವಿ ವ್ಯಕ್ತಿಗಳ ಪರಿಚಯವಾಗಲಿದ್ದು, ಅದು ನಿಮ್ಮ ಮುಂದಿನ ಬೆಳವಣಿಗೆಗೆ ಸಹಕಾರಿಯಾಗಲಿದೆ. ಒಟ್ಟಾರೆಯಾಗಿ, ಈ ಅಮಾವಾಸ್ಯೆಯು ತುಲಾ ರಾಶಿಯವರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಯ ಗಾಳಿ ಬೀಸಲಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮಲಯಾಳಂ ಚಿತ್ರರಂಗದ ಸ್ಟಾರ್ ನಟರುಗಳಲ್ಲಿ ಒಬ್ಬರಾಗಿರುವ ಟೊವಿನೊ ಥಾಮಸ್ (Tovino Thomas) ನಿನ್ನೆ (ಏಪರಿಲ್ 07) ಬೆಂಗಳೂರಿಗೆ ಬಂದಿದ್ದರು. ಅವರ ನಟನೆಯ ಹೊಸ ಪ್ಯಾನ್ ಇಂಡಿಯಾ ಸಿನಿಮಾ ‘ಪಲ್ಲಿಚಟ್ಟಂಬಿ’ ಇದೇ ವಾರ ಬಿಡುಗಡೆ ಆಗುತ್ತಿದ್ದು, ಸಿನಿಮಾದ ಪ್ರಚಾರಕ್ಕಾಗಿ ಅವರು ಆಗಮಿಸಿದ್ದರು. ಈ ವೇಳೆ ಟಿವಿ9 ಜೊತೆಗೆ ಮಾತನಾಡಿದ ಟೊವಿನೊ ಥಾಮಸ್, ತಮ್ಮ ಸಿನಿಮಾದ ಜೊತೆಗೆ ಕನ್ನಡ ಸಿನಿಮಾಗಳ ಬಗ್ಗೆಯೂ ಮಾತನಾಡಿದ್ದಾರೆ. ತಮಗೆ ಇಷ್ಟವಾದ ಕನ್ನಡ ಸಿನಿಮಾ, ಇಷ್ಟವಾದ ಕನ್ನಡದ ನಟರು, ‘ಟಾಕ್ಸಿಕ್’ ಸಿನಿಮಾನಲ್ಲಿ ನಟನೆ ಇನ್ನಿತರೆ ವಿಷಯಗಳ ಬಗ್ಗೆ ಅವರು ಮಾತನಾಡಿದ್ದಾರೆ. ವಿಡಿಯೋ ನೋಡಿ…
ಐಪಿಎಲ್ 2026 ರ 14 ನೇ ಪಂದ್ಯ ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ತನ್ನ ತವರು ಮೈದಾನವಾದ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಆಡಲಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಇತ್ತ ಗುಜರಾತ್ ಟೈಟಾನ್ಸ್ ತಂಡವು ತನ್ನ ಹಿಂದಿನ ಎರಡೂ ಪಂದ್ಯಗಳಲ್ಲಿ ಸೋತಿದ್ದು ತನ್ನ ಮೊದಲ ಗೆಲುವನ್ನು ಎದುರು ನೋಡುತ್ತಿದೆ.
ಐಪಿಎಲ್ 2026 ರ ಆರಂಭದಿಂದಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಂಕಷ್ಟಗಳನ್ನು ಎದುರಿಸುತ್ತಿದೆ. ತಂಡವು ಈಗಾಗಲೇ ಸತತ ಮೂರು ಪಂದ್ಯಗಳನ್ನು ಸೋತಿದ್ದು, ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದೆ. ಮುಂದಿನ ಸುತ್ತಿಗೆ ಅರ್ಹತೆ ಪಡೆಯಬೇಕಾದರೆ ಉಳಿದಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.
ಏತನ್ಮಧ್ಯೆ, ತಂಡದ ಐಕಾನ್ ಮತ್ತು ಮಾಜಿ ನಾಯಕ ಎಂಎಸ್ ಧೋನಿ ಕಾಲಿನ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಧೋನಿ ಸಧ್ಯ ಪುನರ್ವಸತಿಯಲಿದ್ದು, ಮೊದಲ ಎರಡು ವಾರಗಳವರೆಗೆ ಆಡಲು ಸಾಧ್ಯವಾಗುವುದಿಲ್ಲ ಎಂದು ಫ್ರಾಂಚೈಸಿ ಈ ಮೊದಲು ಘೋಷಿಸಿತ್ತು. ಇದರರ್ಥ ಧೋನಿ ಕನಿಷ್ಠ ಮೂರು ಪಂದ್ಯಗಳನ್ನು ಆಡುವುದಿಲ್ಲ ಎಂಬುದು ಫ್ರಾಂಚೈಸಿಯ ಸ್ಪಷ್ಟನೆಯಾಗಿತ್ತು. ಆದಾಗ್ಯೂ, ನಾಲ್ಕನೇ ಪಂದ್ಯಕ್ಕೂ ಧೋನಿ ಲಭ್ಯತೆ ಅನುಮಾನವಾಗಿದೆ.
ಕ್ರಿಕ್ಬಜ್ ವರದಿಯ ಪ್ರಕಾರ, ಧೋನಿ ಇನ್ನೂ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಇನ್ನು ಫಿಟ್ ಆಗಿಲ್ಲ. ಹೀಗಾಗಿ ಧೋನಿ ಚೆನ್ನೈನಲ್ಲೇ ಉಳಿದಿದ್ದಾರೆ. 44 ವರ್ಷದ ಧೋನಿ ಪ್ರಸ್ತುತ ಚೆನ್ನೈನಲ್ಲಿ ತಮ್ಮ ಕುಟುಂಬದೊಂದಿಗೆ ಇದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಕೆಲವು ದಿನಗಳ ಹಿಂದೆ ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದರು. ಆದರೆ ಧೋನಿ ಸಂಪೂರ್ಣವಾಗಿ ಫಿಟ್ ಆಗಲು ಇನ್ನು ಸಮಯ ತೆಗೆದುಕೊಳ್ಳುತ್ತದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಧೋನಿ ಫಿಟ್ ಆಗಲು ಕನಿಷ್ಠ ಇನ್ನೊಂದು ವಾರ ಬೇಕಾಗಬಹುದು. ಪರಿಣಾಮವಾಗಿ, ಏಪ್ರಿಲ್ 11, 2026 ರಂದು ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ತವರಿನ ಪಂದ್ಯದಲ್ಲಿಯೂ ಅವರು ಆಡುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ. ಹಾಗೆಯೇ ಏಪ್ರಿಲ್ 14 ರಂದು ನಡೆಯಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕೂಡ ಧೋನಿ ಆಡುವ ಸಾಧ್ಯತೆಗಳು ಕಡಿಮೆ ಇದೆ.
ಧೋನಿ ಅನುಪಸ್ಥಿತಿಯಲ್ಲಿ ಸಿಎಸ್ಕೆ ತಂಡ ನಿರಾಶಾದಾಯಕ ಆರಂಭವನ್ನು ಕಂಡಿದೆ. ಐದು ಬಾರಿ ಚಾಂಪಿಯನ್ ಆಗಿರುವ ತಂಡವು ಇನ್ನೂ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ತಂಡಕ್ಕೆ ಧೋನಿಯ ಅನುಭವ ಮತ್ತು ಫಿನಿಶಿಂಗ್ ಕೌಶಲ್ಯಗಳು ತೀರಾ ಅಗತ್ಯವಾಗಿವೆ. ಇದಲ್ಲದೆ, ಯುವ ಆಟಗಾರ ಡೆವಾಲ್ಡ್ ಬ್ರೆವಿಸ್ ಅವರನ್ನು ಮೊದಲ ಮೂರು ಪಂದ್ಯಗಳಿಂದ ಹೊರಗಿಡಲಾಗಿದೆ, ಆದರೂ ಅವರು ಚೇತರಿಸಿಕೊಳ್ಳುತ್ತಿದ್ದು, ಮುಂದಿನ ಪಂದ್ಯಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ.
ಧನುಶ್ (Dhanush), ತಮಿಳು ಚಿತ್ರರಂಗದ ಸ್ಟಾರ್ ನಟ, ತೆಲುಗು ರಾಜ್ಯಗಳಲ್ಲಿಯೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಧನುಶ್ ಅವರು ದಕ್ಷಿಣದಲ್ಲಿ ಮಾತ್ರವಲ್ಲ ಹಿಂದಿ ಭಾಷಿಕ ಪ್ರದೇಶದಲ್ಲೂ ದೊಡ್ಡ ಅಭಿಮಾನಿ ವರ್ಗ ಹೊಂದಿದ್ದಾರೆ. ಅದಕ್ಕೆ ಮುಖ್ಯ ಕಾರಣ ಅವರ ನಟನೆಯ ‘ರಾಂಝನಾ’ ಸಿನಿಮಾ. 2013 ರಲ್ಲಿ ಬಿಡುಗಡೆ ಆಗಿದ್ದ ಹಿಂದಿ ಸಿನಿಮಾ ‘ರಾಂಝನಾ’ ಹಿಂದಿಯ ಕಲ್ಟ್ ಕ್ಲಾಸಿಕ್ಗಳಲ್ಲಿ ಒಂದು. ಅದಾದ ಬಳಿಕ ಸತತವಾಗಿ ಧನುಶ್ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಲೇ ಬರುತ್ತಿದ್ದಾರೆ.
ಧನುಶ್ ಮತ್ತು ಬಾಲಿವುಡ್ ನಿರ್ದೇಶಕ ಆನಂದ್ ಎಲ್ ರಾಯ್ ಅವರದ್ದು ಜೋಡಿಯೇ ಆಗಿಬಿಟ್ಟಿದೆ. ಇತ್ತೀಚೆಗಷ್ಟೆ ಧನುಶ್, ಕೃತಿ ಸನೋನ್ ನಟಿಸಿದ್ದ ‘ತೇರೆ ಇಷ್ಕ್ ಮೇ’ ಸಿನಿಮಾವನ್ನು ಆನಂದ್ ಎಲ್ ರಾಯ್ ನಿರ್ದೇಶಿಸಿದ್ದು, ಸಿನಿಮಾ ಸಾಧಾರಣ ಹಿಟ್ ಅಷ್ಟೇ ಆಯ್ತಾದರೂ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯಗಳೇ ವ್ಯಕ್ತವಾಗಿದ್ದವು. ಇದೀಗ ಧನುಶ್ ಅವರು ಮತ್ತೊಮ್ಮೆ ಹಿಂದಿ ಸಿನಿಮಾನಲ್ಲಿ ನಟಿಸಲು ಸಜ್ಜಾಗಿದ್ದಾರೆ. ಮತ್ತೊಮ್ಮೆ ಆನಂದ್ ಅವರೇ ಧನುಶ್ ಅವರ ಸಿನಿಮಾ ನಿರ್ದೇಶಿಸುತ್ತಿದ್ದಾರೆ.
ಈ ವರೆಗೆ ಆನಂದ್ ಅವರು, ಧನುಶ್ ಅನ್ನು ಸ್ಟ್ರೀಟ ಲವ್ವರ್, ಠಪೋರಿ ರೀತಿಯ ಪಾತ್ರಗಳಲ್ಲೇ ತೋರಿಸಿದ್ದರು. ಆದರೆ ಮೊದಲ ಬಾರಿಗೆ ಧನುಶ್ ಅವರಿಗಾಗಿ ಐತಿಹಾಸಿಕ ಕತೆಯನ್ನು ಆನಂದ್ ಅವರು ಹೆಣೆದಿದ್ದಾರೆ. ಆನಂದ್ ಅವರು ಪೀರಿಯಡ್ ಲವ್ ಸ್ಟೋರಿ ಒಂದನ್ನು ಹೆಣೆದಿದ್ದು, ಸಿನಿಮಾನಲ್ಲಿ ಧನುಶ್ ಜೊತೆಗೆ ಕೃತಿ ಸನೋನ್ ನಾಯಕಿಯಾಗಿ ನಟಿಸಲಿದ್ದಾರೆ. ‘ತೇರೆ ಇಷ್ಕ್ ಮೇ’ ಸಿನಿಮಾನಲ್ಲಿಯೂ ಕೃತಿ ಸನೋನ್ ನಾಯಕಿ ಆಗಿದ್ದರು. ಧನುಶ್ ಅಂಥಹಾ ನಟನ ಮುಂದೆ ಸಹ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಹಾಗಾಗಿ ಇದೇ ಜೋಡಿಯನ್ನು ಆನಂದ್ ಅವರು ತಮ್ಮ ಹೊಸ ಸಿನಿಮಾಕ್ಕೂ ಮುಂದುವರೆಸಿದ್ದಾರೆ.
‘ರಾಂಝನಾ’, ‘ಅತರಂಗಿ ರೇ’, ‘ತೇರೆ ಇಷ್ಕ್ ಮೇ’ ಸಿನಿಮಾಗಳು ಧನುಶ್ ಮತ್ತು ಆನಂದ್ ಎಲ್ ರಾಯ್ ಅವರ ಕಾಂಬಿನೇಷನ್ನಲ್ಲಿ ಈ ವರೆಗೆ ಮೂಡಿ ಬಂದಿದ್ದು, ಈ ಮೂರು ಸಿನಿಮಾಗಳು ಅದ್ಭುತ ಪ್ರೇಮಕತೆಯನ್ನು ಒಳಗೊಂಡಿವೆ. ಇದೀಗ ಮೊದಲ ಬಾರಿಗೆ ಆನಂದ್ ಅವರು ಐತಿಹಾಸಿಕ ಹಿನ್ನೆಲೆಯುಳ್ಳ ಪ್ರೇಮಕತೆ ನಿರ್ದೇಶಿಸಲು ಕೈ ಹಾಕಿದ್ದಾರೆ. ಧನುಶ್ ಅವರೂ ಸಹ ಐತಿಹಾಸಿಕ ರೀತಿಯ ಪಾತ್ರಗಳಲ್ಲಿ ನಟಿಸಿರುವುದು ಕಡಿಮೆಯೇ. ಹಾಗಾಗಿ ಸಹಜವಾಗಿಯೇ ಈ ಸಿನಿಮಾದ ಬಗ್ಗೆ ಸಿನಿಮಾ ಪ್ರೇಮಿಗಳಿಗೆ ಕುತೂಹಲ ಇದೆ.
ಬಳ್ಳಾರಿ, ಏಪ್ರಿಲ್ 08: ಜೈಲು ಎಂದರೆ ಮಾಡಿದ ತಪ್ಪಿಗೆ ಅಪರಾಧಿಗಳು ಶಿಕ್ಷೆಯ ಅವಧಿಯನ್ನು ಕಳೆಯಬೇಕಾದ ಮತ್ತು ತಮ್ಮನ್ನು ತಾವು ತಿದ್ದುಕೊಳ್ಳಬೇಕಾದ ಜಾಗ. ಆದರೆ ಪ್ರಸ್ತುತವಾಗಿ ರಾಜ್ಯದ ಜೈಲುಗಳು ಇವಕ್ಕೆ ತದ್ವಿರುದ್ಧವಾಗಿವೆ. ಮನಃ ಪರಿವರ್ತನೆ ಮಾಡಿಕೊಳ್ಳುವ ಬದಲು ಕೈದಿಗಳು ಹೊರಗಿನಗಿಂತಲೂ ಬಂಧೀಖಾನೆಗಳಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಇರೋದು ಕಾರಗೃಹದಲ್ಲಿ ಅನ್ನೋದು ಒಂದನ್ನು ಹೊರತು ಪಡಿಸಿದರೆ ದುಡ್ಡು ಕೊಟ್ಟರೆ ಏನು ಬೇಕಾದರೂ ಇಲ್ಲಿ ಸಿಗುತ್ತೆ ಎಂಬ ಸ್ಥಿತಿ ಇದೆ. ರಾಜಾತಿಥ್ಯ ಪ್ರಕರಣಗಳ ಬಗ್ಗೆ ಸಾಲು ಸಾಲು ವರದಿಯಾಗುತ್ತಿದ್ದರೂ, ಕೈದಿಗಳ ಪುಂಡಾಟಕ್ಕೆ ಮಾತ್ರ ಇನ್ನೂ ಬ್ರೇಕ್ ಬಿದ್ದಿಲ್ಲ.
ಇನ್ನು ಜೈಲು ಸಿಬ್ಬಂದಿಗೆ ಹೆದರಬೇಕಿದ್ದ ಕೈದಿಗಳು ಅವರನ್ನೇ ಹೆದರಿಸುತ್ತಿರೋದು, ಇಲಾಖೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯೇ ಸರಿ. ಮೊನ್ನೆ ಮೊನ್ನೆಯಷ್ಟೇ ಮೊಬೈಲ್ ತಪಾಸಣೆಗೆ ಹೋದ ಸಿಬ್ಬಂದಿಗೆ ಪರಪ್ಪನ ಅಗ್ರಹಾರದ ಕೈದಿಗಳು ಬೆದರಿಕೆ ಹಾಕಿರುವ ಘಟನೆ ಮಾಸುವ ಮುನ್ನವೇ ಇತ್ತ ಬಳ್ಳಾರಿಯಲ್ಲಿಯೂ ಇಂತಹುದೇ ಘಟನೆ ನಡೆದಿದೆ. ಸೆಂಟ್ರಲ್ ಜೈಲಿನಲ್ಲಿ ಬೀಡಿ, ಸಿಗರೇಟ್ ನೀಡದಿರುವ ವಿಚಾರಕ್ಕೆ ಸಿಬ್ಬಂದಿ ಮೇಲೆಯೇ ಕೈದಿಗಳು ಹಲ್ಲೆ ನಡೆಸಿದ್ದಾರೆ. ಜೈಲರ್ ಅಶೋಕ ಹೊಸಮನಿ ಜೊತೆ ಮಾತಿನಚಕಮಕಿ ನಡೆಸಿದ ಕೈದಿಗಳು, ವಾಗ್ವಾದದ ನಂತರ ದಾಳಿ ನಡೆಸಿದ್ದಾರೆ. ಅಲ್ತಾಫ್, ರಶೀದ್ ಸೇರಿದಂತೆ ಐವರು ಕೈದಿಗಳಿಂದ ಅಟ್ಯಾಕ್ ನಡೆದಿದ್ದು, ಈ ಸಂಬಂಧ ಬಳ್ಳಾರಿಯ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ತಂಬಾಕು ಮತ್ತು ಇನ್ನಿತರೆ ಮದಕ ವಸ್ತುಗಳ ಬಳಕೆಗೆ ಆಸ್ಪದ ನೀಡದ ಕಾರಣಕ್ಕೆ ಮೂವರು ಸಿಬ್ಬಂದಿ ಮತ್ತು ಜೈಲರ್ ಮೇಲೆ ಕೈದಿಗಳು ಹಲ್ಲೆಗೆ ಮುಂದಾದ ಘಟನೆ ಕೆಲ ತಿಂಗಳುಗಳ ಹಿಂದೆಯಷ್ಟೇ ಕಾರವಾರ ಜೈಲಿನಲ್ಲಿಯೂ ನಡೆದಿತ್ತು. ಮಂಗಳೂರು ಮೂಲದ ಮೊಹಮ್ಮದ್ ಅಬ್ದುಲ್, ಫಯಾನ್ ಹಾಗೂ ಕೌಶಿಕ್ ನಿಹಾಲ್ ಎಂಬವರು ಅಟ್ಯಾಕ್ಗೆ ಯತ್ನಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ್ದ ಹೆಚ್ಚಿನ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರು.