Category Archives: Blog

Your blog category

IND-W vs SL-W: ವಿಶ್ವ ದಾಖಲೆ ಸೃಷ್ಟಿಸುವ ಹೊಸ್ತಿಲಿನಲ್ಲಿ ಶಫಾಲಿ ವರ್ಮಾ

Source link

ರಾಜ್ ಬಿ. ಶೆಟ್ಟಿ ನಟನೆಯ ‘ರಕ್ಕಸಪುರದೋಳ್’ ಟೀಸರ್: ಮತ್ತೊಂದು ಹಿಟ್ ಗ್ಯಾರಂಟಿ – Kannada News | Raj B Shetty starrer Rakkasapuradhol Kannada Movie Official Teaser Released

ನಟ ರಾಜ್ ಬಿ. ಶೆಟ್ಟಿ (Raj B Shetty) ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. 2025ರಲ್ಲಿ ಅವರು ‘ಸು ಫ್ರಮ್ ಸೋ’ ಸಿನಿಮಾದಿಂದ ಭರ್ಜರಿ ಗೆಲವು ಕಂಡರು. ಅವರ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ‘45’ ಸಿನಿಮಾದಲ್ಲಿ ಕೂಡ ರಾಜ್ ಬಿ. ಶೆಟ್ಟಿ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಈಗ ಅವರ ಹೊಸ ಸಿನಿಮಾ ‘ರಕ್ಕಸಪುರದೋಳ್’ (Rakkasapuradhol) ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರಾಜ್ ಬಿ. ಶೆಟ್ಟಿ ಅವರ ಪಾತ್ರದ ಝಲಕ್ ನೋಡಿ ಅಭಿಮಾನಿಗಳಿಗೆ ಸಿನಿಮಾ ಮೇಲಿನ ಕೌತುಕ ಡಬಲ್ ಆಗಿದೆ.

ನಿರ್ದೇಶಕ ‘ಜೋಗಿ’ ಪ್ರೇಮ್ ಶಿಷ್ಯ ರವಿ ಸಾರಂಗ ಅವರು ‘ರಕ್ಕಸಪುರದೋಳ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ಎರಡು ಮುಖಗಳು ಇರುತ್ತವೆ. ಒಂದು ಒಳ್ಳೆಯದು ಮತ್ತು ಇನ್ನೊಂದು ಕೆಟ್ಟದ್ದು. ಆ ಥೀಮ್​​ನ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗುವುದು. ಒಟ್ಟಾರೆ ಸಿನಿಮಾ ಹೇಗಿರಲಿದೆ ಎಂಬುದರ ಝಜಲ್ ಈ ಟೀಸರ್​ನಲ್ಲಿ ಕಾಣಿಸಿದೆ.

ಹಲವು ಕಾರಣಗಳಿಂದ ನಿರೀಕ್ಷೆ ಮೂಡಿಸಿರುವ ‘ರಕ್ಕಸಪುರದೋಳ್’ ಸಿನಿಮಾ 2026ರ ಫೆಬ್ರವರಿ 6ರಂದು ಬಿಡುಗಡೆ ಆಗಲಿದೆ. ಟೀಸರ್ ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸಿನಿಮಾದಲ್ಲಿ ಮನರಂಜನೆಯ ಸಾಕಷ್ಟು ಅಂಶಗಳು ಇವೆ ಎಂಬ ಭರವಸೆ ಪ್ರೇಕ್ಷಕರಿಗೆ ಮೂಡಿದೆ. ‘ಈ ಸಿನಿಮಾದ ಮೂಲಕ ರಾಜ್ ಬಿ. ಶೆಟ್ಟಿ ಅವರಿಗೆ ಮತ್ತೊಂದು ಹಿಟ್ ಗ್ಯಾರಂಟಿ’ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.

‘ರಕ್ಕಸಪುರದೋಳ್’ ಸಿನಿಮಾ ಟೀಸರ್:

‘ರಕ್ಕಸಪುರದೋಳ್’ ಸಿನಿಮಾಗೆ ಖ್ಯಾತ ಸಾಹಸ ನಿರ್ದೇಶಕ ರವಿವರ್ಮಾ ಅವರು ಬಂಡವಾಳ ಹೂಡಿದ್ದಾರೆ. ಈ ಸಿನಿಮಾಗೆ ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದಾರೆ. ದಟ್ಟ ಕಾನನ, ಮಾಟ ಮಂತ್ರ, ಸರಣಿ ಸಾವು ಮುಂತಾದ ಅಂಶಗಳು ಈ ಟೀಸರ್​ನಲ್ಲಿ ಹೈಲೈಟ್ ಆಗಿವೆ. ರಾಜ್ ಬಿ. ಶೆಟ್ಟಿ ಜೊತೆ ಬಿ. ಸುರೇಶ, ಸ್ವಾದಿಷ್ಟ ಕೃಷ್ಣ, ಅರ್ಚನಾ ಕೊಟ್ಟಿಗೆ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ: ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿದ್ದಕ್ಕೆ ಸ್ಪಷ್ಟನೆ ನೀಡಿದ ರಾಜ್ ಬಿ. ಶೆಟ್ಟಿ

ಕೆ.ಎಂ. ಪ್ರಕಾಶ್ ಅವರ ಸಂಕಲನ, ವಿಲಿಯನ್ ಡೇವಿಡ್ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. ಮೋಹನ್ ಬಿ. ಕೆರೆ ಅವರು ಕಲಾ ನಿರ್ದೇಶನ ಮಾಡಿದ್ದಾರೆ. ಟೀಸರ್​ನಲ್ಲಿ ಎಲ್ಲ ತಂತ್ರಜ್ಞರ ಕೆಲಸ ಎದ್ದು ಕಾಣುತ್ತಿದೆ. ಸದ್ಯ ಈ ಟೀಸರ್ ವೈರಲ್ ಆಗುತ್ತಿದೆ. ರಾಜ್ ಬಿ. ಶೆಟ್ಟಿ ಅವರ ವೃತ್ತಿ ಜೀವನದಲ್ಲಿ ಇದು ಒಂದು ಡಿಫರೆಂಟ್ ಸಿನಿಮಾ ಆಗಲಿದೆ ಎಂಬ ಸೂಚನೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND-W vs SL-W: ಈ ವರ್ಷದ ಕೊನೆಯ ಪಂದ್ಯವನ್ನಾಡಲಿದೆ ಟೀಂ ಇಂಡಿಯಾ; ಪಂದ್ಯ ಎಷ್ಟು ಗಂಟೆಗೆ ಆರಂಭ? – Kannada News | India vs Sri Lanka Women’s 5th T20: India Aims for 5 0 Sweep; Match Details and Teams

ಭಾರತ ಮತ್ತು ಶ್ರೀಲಂಕಾ (India vs Sri Lanka) ಮಹಿಳಾ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯ ಮಂಗಳವಾರ ತಿರುವನಂತಪುರದಲ್ಲಿ ನಡೆಯಲಿದೆ. ಭಾರತ ತಂಡ ಈಗಾಗಲೇ ಸರಣಿಯನ್ನು ಗೆದ್ದಿದ್ದು, ಐದನೇ ಟಿ20ಪಂದ್ಯವನ್ನು ಗೆಲ್ಲುವ ಮೂಲಕ ಶ್ರೀಲಂಕಾವನ್ನು 5-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡುವ ಗುರಿಯನ್ನು ಹೊಂದಿದೆ. ಇದು ಭಾರತೀಯ ತಂಡದ ವರ್ಷದ ಕೊನೆಯ ಪಂದ್ಯವಾಗಿದ್ದು, ತಂಡವು ವರ್ಷವನ್ನು ಗೆಲುವಿನೊಂದಿಗೆ ಕೊನೆಗೊಳಿಸುವ ಗುರಿಯನ್ನು ಹೊಂದಿದೆ. ಇತ್ತ ಸರಣಿಯ ಕೊನೆಯ ಪಂದ್ಯವನ್ನಾದರೂ ಗೆದ್ದು, ಈ ಪ್ರವಾಸವನ್ನು ಗೆಲುವಿನೊಂದಿಗೆ ಅಂತ್ಯಗೊಳಿಸುವ ಇರಾದೆಯಲ್ಲಿ ಲಂಕಾ ತಂಡವಿದೆ.

ವಿಶ್ವಕಪ್​ ತಯಾರಿಗೆ ಅತ್ಯವಶ್ಯಕ

ಭಾರತ ಮತ್ತು ಶ್ರೀಲಂಕಾ ನಡುವಿನ ಈ ಸರಣಿಯು ಮುಂದಿನ ವರ್ಷ ಜೂನ್-ಜುಲೈನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನ ಸಿದ್ಧತೆಯ ಪ್ರಮುಖ ಭಾಗವಾಗಿದೆ. ಶ್ರೀಲಂಕಾ ವಿರುದ್ಧದ ಪ್ರಸ್ತುತ ಸರಣಿಯ ನಂತರ, ಭಾರತ ತಂಡವು ವಿಶ್ವಕಪ್‌ಗೆ ಮೊದಲು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ತಲಾ ಮೂರು ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ.

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ಐದನೇ ಟಿ20 ಪಂದ್ಯ ಯಾವಾಗ ನಡೆಯಲಿದೆ?

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ಐದನೇ ಟಿ20 ಪಂದ್ಯ ಡಿಸೆಂಬರ್ 30 ರಂದು ನಡೆಯಲಿದೆ.

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ಐದನೇ ಟಿ20 ಪಂದ್ಯ ಎಲ್ಲಿ ನಡೆಯಲಿದೆ?

ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡದ ನಡುವಿನ ಐದನೇ ಟಿ20 ಪಂದ್ಯ ನಡೆಯಲಿದೆ.

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ಐದನೇ ಟಿ20 ಪಂದ್ಯ ಯಾವಾಗ ಪ್ರಾರಂಭವಾಗುತ್ತದೆ?

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ಐದನೇ ಟಿ20 ಪಂದ್ಯ ಸಂಜೆ 7:00 ಗಂಟೆಗೆ ಆರಂಭವಾಗಲಿದ್ದು, ಟಾಸ್ ಸಂಜೆ 6:30 ಕ್ಕೆ ನಡೆಯಲಿದೆ.

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ಐದನೇ ಟಿ20 ಪಂದ್ಯವನ್ನು ಟಿವಿಯಲ್ಲಿ ಎಲ್ಲಿ ನೋಡಬಹುದು?

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡದ ನಡುವಿನ ಐದನೇ ಟಿ20 ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು.

ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡದ ನಡುವಿನ ಐದನೇ ಟಿ20 ಪಂದ್ಯವನ್ನು ಮೊಬೈಲ್‌ನಲ್ಲಿ ಎಲ್ಲಿ ವೀಕ್ಷಿಸಬಹುದು?

ಜಿಯೋ-ಹಾಟ್‌ಸ್ಟಾರ್ ಅಪ್ಲಿಕೇಶನ್ ಬಳಸಿ ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ ಐದನೇ ಟಿ20 ಪಂದ್ಯವನ್ನು ನಿಮ್ಮ ಮೊಬೈಲ್ ಫೋನ್‌ನಲ್ಲಿ ವೀಕ್ಷಿಸಬಹುದು.

ಉಭಯ ತಂಡಗಳು

ಭಾರತ ತಂಡ: ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಅಮಂಜೋತ್ ಕೌರ್, ವೈಷ್ಣವಿ ಶರ್ಮಾ, ಕ್ರಾಂತಿ ಗೌಡ್, ರೇಣುಕಾ ಸಿಂಗ್ ಠಾಕೂರ್, ಶ್ರೀ ಚರಣಿ, ಜಿ ಕಮಲಿನಿ, ಹರ್ಲೀನ್ ಡಿಯೋಲ್, ಅರುಂಧಾ ರೆಡ್ಡಿ, ಸ್ನೇಹ್ ರೆಡ್ಡಿ.

ಶ್ರೀಲಂಕಾ ತಂಡ: ಚಾಮರಿ ಅಟಪಟ್ಟು (ನಾಯಕಿ), ಹಾಸಿನಿ ಪೆರೇರಾ, ವಿಶ್ಮಿ ಗುಣರತ್ನೆ, ಹರ್ಷಿತಾ ಸಮರವಿಕ್ರಮ, ನೀಲಾಕ್ಷಿಕಾ ಡಿ ಸಿಲ್ವಾ, ಕವಿಶಾ ದಿಲ್ಹಾರಿ, ಇಮೇಶಾ ದುಲಾನಿ, ಕೌಶಿನಿ ನುತ್ಯಾಂಗನಾ, ಮಲ್ಶಾ ಶೆಹಾನಿ, ಇನೋಕಾ ರಣವೀರ, ಶಶಿನಿ ಗಿಮ್ಹಾನಿ, ನಿಮೇಶ್ ಮದುಶಾನಿ, ಕಾವ್ಯಾ ಕವಿಂದಿ, ರಶ್ಮಿಕಾ ಸೆವ್ವಂದಿ, ಮಾಲ್ಕಿ ಮಾದರ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Nandini CM: ಸರ್ಕಾರಿ ಕೆಲಸದ ಅವಕಾಶ ಇದ್ದರೂ ಇಷ್ಟವಿಲ್ಲದೇ ನೇಣಿಗೆ ಶರಣಾದ ನಟಿ ನಂದಿನಿ ಸಿಎಂ – Kannada News | Gauri Serial actor Nandini CM Death Friend Thanuja reaction

ಕನ್ನಡ ಕಿರುತೆರೆ ಲೋಕದಲ್ಲಿ ಹೆಸರು ಮಾಡಿ, ತಮಿಳಿನ ‘ಗೌರಿ’ (Gauri Serial) ಧಾರಾವಾಹಿಯಲ್ಲಿ ದ್ವಿಪಾತ್ರ ಮಾಡುತ್ತಿದ್ದ ನಟಿ ನಂದಿನಿ ಸಿಎಂ ಅವರು ಆತ್ಮಹತ್ಯೆ ಮಾಡಿಕೊಂಡು ನಿಧನರಾಗಿದ್ದಾರೆ. ಡಿಸೆಂಬರ್ 28ರ ರಾತ್ರಿ ಈ ಘಟನೆ ನಡೆದಿದೆ. ಬೆಂಗಳೂರಿನ ಕೆಂಗೇರಿ ಠಾಣಾ ವ್ಯಾಪ್ತಿಯ ಪಿಜಿಯಲ್ಲಿ ನಂದಿನಿ ಸಿಎಂ ಅವರು ಆತ್ಮಹತ್ಯೆ ಮಾಡಿಕೊಂಡರು. ‘ಜೀವ ಹೂವಾಗಿದೆ’, ‘ನೀನಾದೆ ನಾ’, ‘ಸಂಘರ್ಷ’, ‘ಮಧುಮಗಳು’, ‘ಅಣ್ಣ-ತಂಗಿ’ ಮುಂತಾದ ಸೀರಿಯಲ್​​ಗಳಲ್ಲಿ ಅವರು ನಟಿಸಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ನಂದಿನಿ ಸಿಎಂ (Nandini CM) ಬಗ್ಗೆ ಅವರ ಸ್ನೇಹಿತೆ ತನುಜಾ ಪ್ರತಿಕ್ರಿಯೆ ನೀಡಿದ್ದಾರೆ.

‘ನಿಜವಾದ ಕಾರಣ ಏನು ಎಂಬುದು ಗೊತ್ತಿಲ್ಲ. ಅವರ ತಂದೆ ತೀರಿಕೊಂಡಿದ್ದರು. ತಂದೆಯ ಸರ್ಕಾರಿ ಕೆಲಸ ಇವಳಿಗೆ ಬಂದಿತ್ತು. ಆದರೆ ಆ ಕೆಲಸ ಮಾಡಲು ನಂದಿನಿಗೆ ಇಷ್ಟ ಇರಲಿಲ್ಲ. 10 ವರ್ಷದಿಂದ ಕಷ್ಟಪಟ್ಟು ನಟನೆಯಲ್ಲಿ ಈ ಸ್ಥಾನಕ್ಕೆ ಬಂದಿದ್ದಳು. ಹಾಗಾಗಿ ಸರ್ಕಾರಿ ಕೆಲಸ ಬೇಡ ಅಂತ ಹೇಳುತ್ತಿದ್ದರು. ಸರ್ಕಾರಿ ಕೆಲಸಕ್ಕೆ ಸೇರು ಎಂದು ಕುಟುಂಬದವರು ಹೇಳಿದ್ದರು. ಚಿತ್ರರಂಗ ಬೇಡ ಅಂತ ಮನೆಯವರು ಹೇಳಿದ್ದರು. ಆ ಬಗ್ಗೆ ಮಾತುಕಥೆ ನಡೆಯುತ್ತಿತ್ತು. ಹಾಗಾಗಿ ಖಿನ್ನತೆಯಲ್ಲಿ ಇದ್ದಳು’ ಎಂದು ತನುಜಾ ಹೇಳಿದ್ದಾರೆ.

‘ಯಾಕೆ ಈ ಮಾಡಿಕೊಂಡಳು ಎಂಬುದು ಗೊತ್ತಿಲ್ಲ. ನಾನು ಅವಳ ಜೊತೆ ಮಾತನಾಡಿ 3 ದಿನ ಆಯಿತು. ನಾನು ಮಡಿಕೇರಿಯಲ್ಲಿ ಇದ್ದಾಗ ಸಾವಿನ ಸುದ್ದಿ ಬಂತು. ನಾನು ಹೊರಟು ಬಂದೆ. ತಾಯಿ ಹಾಗೂ ಕುಟುಂಬದ ಸದಸ್ಯರು ಬಂದು ಮೃತದೇಹವನ್ನು ಹುಟ್ಟೂರಿಗೆ ತೆಗೆದುಕೊಂಡು ಹೋದರು. ನನಗೆ ಕಳೆದ 5 ವರ್ಷದಿಂದ ಗೊತ್ತಿದ್ದ ಹುಡುಗಿ. ಯಾಕೆ ಈ ನಿರ್ಧಾರ ತೆಗೆದುಕೊಂಡಳೋ ಗೊತ್ತಿಲ್ಲ. ಕೊನೇ ಬಾರಿ ನನಗೆ ಅವಳು ಕರೆ ಮಾಡಬಹುದಿತ್ತು’ ಎಂದಿದ್ದಾರೆ ತನುಜಾ.

‘ಇನ್ನೂ ಒಳ್ಳೆಯ ಪ್ರಾಜೆಕ್ಟ್​ ಮಾಡಬೇಕು ಎಂಬ ಗುರಿ ಅವಳಿಗೆ ಇತ್ತು. ಆತ್ಮಹತ್ಯೆಯೇ ಎಲ್ಲದಕ್ಕೂ ಪರಿಹಾರ ಅಲ್ಲ. ಅವಳು ಇರಬಹುದಿತ್ತು. ಈಗ ಏನು ಸಾಧಿಸಿದಂತೆ ಆಯಿತು? ಏನೂ ಸಾಧನೆ ಮಾಡಿದಂತೆ ಆಗಲೇ ಇಲ್ಲ. ಬದುಕುವ ಮನಸ್ಸು ಮಾಡಬಹುದಿತ್ತು’ ಎಂದು ನಂದಿನಿ ಸ್ನೇಹಿತೆ ತನುಜಾ ಅವರು ದುಃಖ ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ‘ಗೌರಿ’ ಧಾರಾವಾಹಿ ನಟಿ ನಂದಿನಿ ನಿಧನ: ಬೆಂಗಳೂರಲ್ಲಿ ದುರಂತ ಅಂತ್ಯ

ಡಿಸೆಂಬರ್ 29ರ ಬೆಳಗಿನ ಜಾವ ಆರ್​ಆರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಯಿತು. ಮೂಲತಃ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರಾದ ನಂದಿನಿ ವೈಯುಕ್ತಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಕೇಳಿಬಂದಿದೆ. ಅಲ್ಲದೇ ಅವರಿಗೆ ಆರೋಗ್ಯ ಸಮಸ್ಯೆ ಕೂಡ ಇತ್ತು ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಮ್ಮ ಪಕ್ಷದಲ್ಲೂ ಶಿಸ್ತು ಬೇಕು; ಆರ್​​ಎಸ್​ಎಸ್​ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಶಶಿ ತರೂರ್ ಬೆಂಬಲ – Kannada News | There should be discipline Shashi Tharoor supports Digvijaya Singh’s RSS BJP Praise

ನವದೆಹಲಿ, ಡಿಸೆಂಬರ್ 29: ಕಾಂಗ್ರೆಸ್ ಪಕ್ಷದೊಳಗೆ ಹೆಚ್ಚಿನ ಶಿಸ್ತು ಮತ್ತು ಒಗ್ಗಟ್ಟಿನ ಅಗತ್ಯತೆಯ ಬಗ್ಗೆ ಪಕ್ಷದ ಹಿರಿಯ ನಾಯಕ ದಿಗ್ವಿಜಯ ಸಿಂಗ್ (Digvijay Singh) ಅವರ ಇತ್ತೀಚಿನ ಹೇಳಿಕೆಗಳಿಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಸಾಂಸ್ಥಿಕ ಬಲದ ಕುರಿತು ದಿಗ್ವಿಜಯ ಸಿಂಗ್ ಹೇಳಿಕೆ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಕಾಂಗ್ರೆಸ್‌ನೊಳಗೆ ಬಲವಾದ ಸಂಘಟನೆಗಾಗಿ ಶಿಸ್ತು ಬಹಳ ಮುಖ್ಯ ಎಂದು ದಿಗ್ವಿಜಯ ಸಿಂಗ್ ಅವರಿಗೆ ಶಶಿ ತರೂರ್ ಬೆಂಬಲಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ಇಬ್ಬರು ಗೇಮಿಂಗ್ ಸ್ಟಾರ್​ಗಳು MOBA Legends 5v5 ಪ್ರವೇಶ; ಗೇಮಿಂಗ್ ಲೋಕದಲ್ಲಿ ಹೊಸ ಸಂಚಲನ – Kannada News | Rai Star & Gyan Gaming Join MOBA Legends 5v5: Indian Esports Strategic Shift

ಭಾರತೀಯ ಈ-ಸ್ಪೋರ್ಟ್ಸ್ ಕ್ಷೇತ್ರದಲ್ಲಿ ಕೆಲವು ನಿರ್ಧಾರಗಳು ಕೇವಲ ಸ್ಟ್ರಾಟಿಜಿಕ್ ಇರುತ್ತವೆ ಎಂದಲ್ಲ, ಅವು ಒಳಗಿನಿಂದ ಹುಟ್ಟುವ ಎಮೋಶನ್ಸ್​ಗಳ ಪ್ರತಿಬಿಂಬವಾಗಿರುತ್ತವೆ. ಭಾರತೀಯ ಗೇಮಿಂಗ್ ಸ್ಟಾರ್​ಗಳೆನಿಸಿರುವ ರೈಸ್ಟಾರ್ (Rai Star) ಮತ್ತು ಗ್ಯಾನ್ ಗೇಮಿಂಗ್ (Gyan Gaming) ಅವರುಗಳು MOBA Legends 5v5 ಗೆ ಪ್ರವೇಶಿಸಿರುವುದು ಅಂತಹದ್ದೇ ಒಂದು ಕ್ಷಣ. ಇವರು ಹಿಂದೆ ಆಡುತ್ತಿದ್ದ ಗೇಮ್​ಗಳಿಂದ ಬಹಳ ಫೇಮಸ್ ಆದವರು. ಈಗ ಇವರ ಹೊಸ ಗೇಮ್ ಆಯ್ಕೆಯು ಕೇವಲ ಒಂದು ಘೋಷಣೆ ಮಾತ್ರವಲ್ಲ, ದೀರ್ಘ ಪ್ರಯಾಣದ ದಿಕ್ಕು ಬದಲಾವಣೆ.

ಡಿಸೆಂಬರ್ 21ರಂದು ನಡೆದ ಈ ಪ್ರಕಟಣೆ ಗೇಮಿಂಗ್ ಸಮುದಾಯದಲ್ಲಿ ದೊಡ್ಡ ಪ್ರತಿಕ್ರಿಯೆಯನ್ನೇ ಸೃಷ್ಟಿಸಿದೆ. ಕೆಲವರಿಗೆ ಇದು ಅಚ್ಚರಿ, ಕೆಲವರಿಗೆ ಉತ್ಸಾಹ, ಇನ್ನೂ ಹಲವರಿಗೆ ಮೌನವಾದ ಎಮೋಷನಲ್ ಎಫೆಕ್ಟ್.

ರೈಸ್ಟಾರ್ ಮತ್ತು ಗ್ಯಾನ್ ಗೇಮಿಂಗ್ ಇಬ್ಬರಿಗೂ ಅವರು ಹಿಂದೆ ಕಟ್ಟಿಕೊಂಡ ಜಗತ್ತು ಕೇವಲ ಕಂಟೆಂಟ್ ಮಾತ್ರವಲ್ಲ, ಅದು ಗುರುತು, ನಂಬಿಕೆ, ಮತ್ತು ಲಕ್ಷಾಂತರ ಅಭಿಮಾನಿಗಳೊಂದಿಗೆ ಬೆಸೆದ ಸಂಬಂಧ. ಆ ಪರಿಧಿಯನ್ನು ಬಿಟ್ಟು ಮುಂದೆ ಸಾಗುವುದು ಸುಲಭ ನಿರ್ಧಾರವಲ್ಲ. ಆದರೆ ಸಮಯದೊಂದಿಗೆ ಒಂದು ಮೌನ ಪ್ರಶ್ನೆ ಹುಟ್ಟುತ್ತದೆ. ಇದೇ ಸಾಕೆ, ಇಲ್ಲಿಂದ ಮುಂದೆ ಇನ್ನಷ್ಟು ಆಳವಾದ ಅನುಭವ ಬೇಕಲ್ಲವೇ..!

ಇದನ್ನೂ ಓದಿ: 27 ವರ್ಷಗಳಲ್ಲಿ ಅಮೆರಿಕದ ಈಕ್ವಿಟಿ ಹಾಗೂ ಚಿನ್ನವನ್ನೂ ಮೀರಿಸಿದ್ಯಾ ಭಾರತದ ನಿಫ್ಟಿ?; ಹೇಗೆ ಹೂಡಿಕೆ ಮಾಡುವುದು ನಿಫ್ಟಿ50ಯಲ್ಲಿ?

ಆ ಪ್ರಶ್ನೆಗೆ ಉತ್ತರವಾಗಿ ಬಂದಿದೆ MOBA Legends 5v5

ಇಲ್ಲಿ ಆಟ ಕೇವಲ ಪ್ರತಿಕ್ರಿಯೆಯಲ್ಲ, ಚಿಂತನೆ. ಕೇವಲ ವೈಯಕ್ತಿಕ ಪ್ರದರ್ಶನವಲ್ಲ, ತಂಡದ ನಂಬಿಕೆ. ಪ್ರತಿಯೊಂದು ನಿರ್ಧಾರಕ್ಕೂ ಪರಿಣಾಮವಿದೆ. ಐದು ಮಂದಿಯ ತಂಡದಲ್ಲಿ ಪ್ರತಿಯೊಬ್ಬರ ಪಾತ್ರವೂ ನಿರ್ಣಾಯಕ. ಇದು ಆಟಗಾರನ ಮನಸ್ಥಿತಿಯಲ್ಲಿ ಸಹಜವಾಗಿ ಒಂದು ಪರಿವರ್ತನೆ ತರುತ್ತದೆ. ವೇಗದಿಂದ ಸಹನೆಗೆ, ಸ್ವತಂತ್ರತೆಯಿಂದ ಸಂಯೋಜನೆಗೆ ಪರಿವರ್ತನೆ ಇರುತ್ತದೆ.

ಈ ಪಯಣದಲ್ಲಿ ಗ್ಯಾನ್ ಗೇಮಿಂಗ್ ಮತ್ತು ರೈ ಸ್ಟಾರ್ ಜೊತೆಯಾಗಿರುವುದು ಕೂಡ ಅರ್ಥಪೂರ್ಣ. ಇಬ್ಬರೂ ಈಗ ಕೇವಲ ವೀಕ್ಷಕರ ಸಂಖ್ಯೆಯ ಹಿಂದೆ ಓಡುವುದಿಲ್ಲ. ಅವರು ದೀರ್ಘಾವಧಿಯ ಬೆಳವಣಿಗೆ, ಸ್ಪರ್ಧಾತ್ಮಕ ಸ್ಥಿರತೆ ಮತ್ತು ಜಾಗತಿಕ ವೇದಿಕೆಯನ್ನು ಗಮನದಲ್ಲಿಟ್ಟುಕೊಂಡಿದ್ದಾರೆ. ಉದ್ಯಮ ತಜ್ಞರ ದೃಷ್ಟಿಯಲ್ಲಿ ಇದು ಮೌನವಾದ ಆದರೆ ದೃಢವಾದ ತಂತ್ರಾತ್ಮಕ ಹೆಜ್ಜೆ.

ಭಾರತೀಯ ಈ-ಸ್ಪೋರ್ಟ್ಸ್ ಕೂಡ ಇದೇ ಹಂತದಲ್ಲಿದೆ. ಪ್ರೇಕ್ಷಕರು ಹೆಚ್ಚು ಪ್ರೌಢರಾಗುತ್ತಿದ್ದಾರೆ. ಆಟವನ್ನು ನೋಡುವ ದೃಷ್ಟಿ ಬದಲಾಗುತ್ತಿದೆ. ಕೇವಲ ಮನರಂಜನೆ ದೃಷ್ಟಿ ಇದ್ದ ಆಟವು ಈಗ ಕೌಶಲ್ಯ, ತಂತ್ರ ಮತ್ತು ತಂಡದ ಸಂಸ್ಕೃತಿಯ ಕಡೆಗೆ ಗಮನ ಹರಿಯುತ್ತಿದೆ.

ಇದನ್ನೂ ಓದಿ: ಷೇರು, ಚಿನ್ನ, ಎಫ್​ಡಿ- ಕಳೆದ 40 ವರ್ಷದಲ್ಲಿ ಅತಿಹೆಚ್ಚು ರಿಟರ್ನ್ ಕೊಟ್ಟ ಹೂಡಿಕೆಗಳ್ಯಾವುವು?

MOBA Legends 5v5 ಈ ಬದಲಾವಣೆಗೆ ಸರಿಹೊಂದುವ ಪ್ಲಾಟ್​ಫಾರ್ಮ್ ಆಗಿದೆ. ಇಲ್ಲಿ ಹೀರೋ ಒಬ್ಬನಲ್ಲ, ತಂಡವೇ ಹೀರೋ. ಇದು ಭಾರತೀಯ ಕ್ರೀಡಾ ಮನೋಭಾವಕ್ಕೆ ಸಹಜವಾಗಿ ಹೊಂದಿಕೊಳ್ಳುವ ರೂಪ.

ಪ್ರಸಿದ್ಧ ಕ್ರಿಯೇಟರ್‌ಗಳು ತಮ್ಮ ಕಂಫರ್ಟ್ ಝೋನ್ ಬಿಟ್ಟು ಹೊಸ ದಾರಿಗೆ ಹೆಜ್ಜೆ ಇಡುವಾಗ, ಬೆಳೆಯಲು ಧೈರ್ಯ ಮತ್ತು ಬದಲಾವಣೆ ಅವಶ್ಯ ಎಂಬ ಸಂದೇಶವು ಅನೇಕ ಯುವ ಗೇಮರ್‌ಗಳಿಗೆ ತಲುಪುತ್ತದೆ.

MOBA Legends 5v5 ಈಗ Android ಮತ್ತು iOS ನಲ್ಲಿ ಲಭ್ಯ. ಆದರೆ ಇದನ್ನು ಕೇವಲ ಹೊಸ ಗೇಮ್ ಎಂದು ನೋಡುವುದು ತಪ್ಪು. ಇದು ಭಾರತೀಯ ಈ-ಸ್ಪೋರ್ಟ್ಸ್ ಕಥೆಯಲ್ಲಿ ಆರಂಭವಾಗುತ್ತಿರುವ ಹೊಸ ಅಧ್ಯಾಯ. ಹೆಚ್ಚು ಆಳವಾದ, ಹೆಚ್ಚು ಶಿಸ್ತಿನ, ಮತ್ತು ಹೆಚ್ಚು ಭವಿಷ್ಯಮುಖಿ ಅಧ್ಯಾಯ ಇದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

VHT 2025-26: ಸಿಕ್ಸ್ ಹೊಡೆಯುವುದರಲ್ಲಿ ವೈಭವ್​ ಸೂರ್ಯವಂಶಿಯನ್ನೇ ಹಿಂದಿಕ್ಕಿದ ರವಿ ಸಿಂಗ್ – Kannada News | Vijay Hazare Trophy: Ravi Singh Smashes 19 Sixes, Outshines Suryavanshi

ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Hazare Trophy) ಅನೇಕ ಬ್ಯಾಟ್ಸ್‌ಮನ್‌ಗಳು ಅಸಾಧಾರಣ ಪ್ರದರ್ಶನ ನೀಡಿದ್ದಾರೆ. ಅದರಲ್ಲಿ ವೈಭವ್ ಸೂರ್ಯವಂಶಿಗಿಂತ (Vaibhav Suryavanshi) ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿರುವ ಒಬ್ಬ ಬ್ಯಾಟ್ಸ್‌ಮನ್ ಕೂಡ ಸೇರಿದ್ದಾರೆ. ಈ ಎಡಗೈ ಬ್ಯಾಟ್ಸ್‌ಮನ್ ಕೇವಲ ಮೂರು ಇನ್ನಿಂಗ್ಸ್‌ಗಳಲ್ಲಿ 19 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ರೈಲ್ವೇಸ್ ತಂಡದ ಪರ ಆಡುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರವಿ ಸಿಂಗ್ (Ravi Singh) ಈ ಸಾಧನೆ ಮಾಡಿದ ಆಟಗಾರರಾಗಿದ್ದಾರೆ. ಈ ಎಡಗೈ ಬ್ಯಾಟ್ಸ್‌ಮನ್ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಎಲ್ಲರನ್ನು ಅಚ್ಚರಿಗೊಳಿಸಿದ್ದು, ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ 136.5 ರ ಸರಾಸರಿ ಮತ್ತು 138 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್​ನಲ್ಲಿ 273 ರನ್ ಗಳಿಸಿದ್ದಾರೆ.

ರವಿ ಸಿಂಗ್ ಹೊಸ ಸಿಕ್ಸರ್ ಕಿಂಗ್

ವಿಜಯ್ ಹಜಾರೆ ಟ್ರೋಫಿಯಲ್ಲಿ ಸಿಕ್ಸರ್ ಕಿಂಗ್ ಎನಿಸಿಕೊಂಡಿರುವ ರವಿ ಸಿಂಗ್ ಸರ್ವಿಸಸ್ ವಿರುದ್ಧದ ಮೂರನೇ ಪಂದ್ಯದಲ್ಲಿ 46 ಎಸೆತಗಳಲ್ಲಿ 88 ರನ್​ಗಳ ಇನ್ನಿಂಗ್ಸ್ ಆಡಿದರು. ಇದರಲ್ಲಿ ಏಳು ಸಿಕ್ಸರ್‌ಗಳು ಸೇರಿದ್ದವು. ಈ ಮೂಲಕ ಅತ್ಯಧಿಕ ಸಿಕ್ಸರ್​ಗಳನ್ನು ಸಿಡಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿಯನ್ನು ಹಿಂದಿಕ್ಕಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಸೂರ್ಯವಂಶಿ 16 ಸಿಕ್ಸರ್‌ಗಳನ್ನು ಬಾರಿಸಿದ್ದರೆ, ರವಿ ಸಿಂಗ್ 19 ಸಿಕ್ಸರ್​ಗಳನ್ನು ಬಾರಿಸಿದ್ದಾರೆ. ರವಿ ಸಿಂಗ್ ಈ ಆವೃತ್ತಿಯಲ್ಲಿ ಆಡಿರುವ ಸತತ ಮೂರು ಪಂದ್ಯಗಳಲ್ಲಿ ಅಬ್ಬರದ ಇನ್ನಿಂಗ್ಸ್ ಆಡಿದ್ದಾರೆ.

3 ಪಂದ್ಯಗಳಲ್ಲೂ ರವಿ ಸಿಂಗ್ ಅಬ್ಬರ

ಹರಿಯಾಣ ವಿರುದ್ಧದ ಮೊದಲ ಪಂದ್ಯದಲ್ಲೇ ಅಬ್ಬರಿಸಿದ್ದ ರವಿ ಸಿಂಗ್ ಕೇವಲ 81 ಎಸೆತಗಳಲ್ಲಿ ಅಜೇಯ 109 ರನ್ ಬಾರಿಸಿದ್ದರು. ರವಿ ಅವರ ಅದ್ಭುತ ಇನ್ನಿಂಗ್ಸ್ ನೆರವಿನಿಂದ ರೈಲ್ವೇಸ್ 43.4 ಓವರ್‌ಗಳಲ್ಲಿ 268 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ನಂತರ ಆಂಧ್ರಪ್ರದೇಶ ವಿರುದ್ಧವೂ ರವಿ 70 ಎಸೆತಗಳಲ್ಲಿ 76 ರನ್ ಸಿಡಿಸಿದ್ದರು. ಇದೀಗ ಸರ್ವಿಸಸ್ ವಿರುದ್ಧ ರವಿ ಸಿಂಗ್ 46 ಎಸೆತಗಳಲ್ಲಿ 88 ರನ್ ಕಲೆಹಾಕಿದ್ದಾರೆ. ಇದರಲ್ಲಿ 7 ಸಿಕ್ಸರ್‌ಗಳು ಮತ್ತು 6 ಬೌಂಡರಿಗಳು ಸೇರಿವೆ.

ಬರೋಬ್ಬರಿ 15 ಸಿಕ್ಸ್; ವಿಶ್ವ ದಾಖಲೆಯ ಶತಕ ಸಿಡಿಸಿದ ವೈಭವ್ ಸೂರ್ಯವಂಶಿ

ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲಿರುವ ರವಿ ಸಿಂಗ್

ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ರವಿ ಸಿಂಗ್ ಅವರನ್ನು ಖರೀದಿ ಮಾಡಿದೆ. ರಾಜಸ್ಥಾನ್ ಅವರನ್ನು 95 ಲಕ್ಷಕ್ಕೆ ಖರೀದಿಸಿದೆ. ಯುಪಿ ಟಿ20 ಲೀಗ್‌ನಲ್ಲಿಯೂ ರವಿ ಸಿಂಗ್ ಅದ್ಭುತ ಇನ್ನಿಂಗ್ಸ್ ಆಡಿದ್ದರು. ರವಿ ವಿಕೆಟ್ ಕೀಪಿಂಗ್ ಮತ್ತು ಮ್ಯಾಚ್-ಫಿನಿಶಿಂಗ್ ಸಾಮರ್ಥ್ಯ ಎರಡನ್ನೂ ಹೊಂದಿದ್ದಾರೆ. ಆದ್ದರಿಂದ ನೀವು ಅವರನ್ನು ಐಪಿಎಲ್ 2026 ರಲ್ಲಿ ರಾಜಸ್ಥಾನದ ಪ್ಲೇಯಿಂಗ್ XI ನಲ್ಲಿ ನೋಡಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಿಲು ಜನರಿಗೆ ಹೊಸ ಸೂರು, ಎಷ್ಟು ಮೊತ್ತದ್ದು ಗೊತ್ತಾ? – Kannada News | Kogilu house demolitions: Siddaramaiah Announces Give new Houses For Eligible evictees In baiyappanahalli

ಬೆಂಗಳೂರು, ಡಿಸೆಂಬರ್ 29): ಕೋಗಿಲು ಲೇಔಟ್​ನಲ್ಲಿ ಅನಧಿಕೃತ ಮನೆಗಳ ತೆರವು ಪ್ರಕರಣ (Kogilu house demolitions) ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಕೇರಳ ಸಿಎಂ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಕೆಸಿ ವೇಣುಗೋಪಾಲ್ ಅವರು ಸಹ ಕೋಗಿಲು ಜನರ ಕೂಗಿಗೆ ಕಿವಿಯಾಗಿದ್ದು, ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುವಂತೆ ತಮ್ಮದೇ ಪಕ್ಷದ ಸಿದ್ದರಾಮಯ್ಯ (Siddaramaiah) ಸರ್ಕಾರಕ್ಕೆ ಸಲಹೆ ನೀಡಿದ್ದರು. ಇದರ ಬೆನ್ನಲ್ಲೇ ಇಂದು (ಡಿಸೆಂಬರ್ 29) ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಿದ್ದು, ಮನೆ ಕಳೆದುಕೊಂಡವರಿಗೆ ಹೊಸ ಸೂರು ಒದಗಿಸುವ ಬಗ್ಗೆ ತೀರ್ಮಾನ ಕೈಗೊಂಡಿದ್ದಾರೆ.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಡಿಸೆಂಬರ್ 20ರಂದು ಸುಮಾರು 167 ಮನೆಗಳನ್ನು ತೆರವುಗೊಳಿಸಲಾಗಿತ್ತು. ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿದ್ದರು.
ನಿನ್ನೆ ಸ್ಥಳಕ್ಕೆ ಸಚಿವ ಜಮೀರ್‌, ಇಂದು ಡಿಸಿಎಂ ಭೇಟಿ ನೀಡಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅರ್ಹರಿಗೆ 7 ಕಿ.ಮೀ ಅಂತರದಲ್ಲಿ 11.2 ಲಕ್ಷ ರೂಪಾಯಿ ವೆಚ್ಚದಲ್ಲಿ ತಲಾ ಒಂದು ಮನೆ ನಿರ್ಮಿಸಿ ಕೊಡುತ್ತೇವೆ ಎಂದು ಘೋಷಿಸಿದರು.

ನಾಳೆ, ನಾಡಿದ್ದು ಪರಿಶೀಲಿಸಿ ಅರ್ಹ ವ್ಯಕ್ತಿಗಳಿಗೆ ಪರ್ಯಾಯ ವ್ಯವಸ್ಥೆಗೆ ಸೂಚನೆ ನೀಡಲಾಗಿದ್ದು, ಡಿಸಿ, ಪಾಲಿಕೆ ಅಧಿಕಾರಿಗಳು ನೀಡುವ ಪಟ್ಟಿ ಆಧರಿಸಿ ಮನೆ ಹಂಚಿಕೆ ಮಾಡಲಾಗುವುದು. ಬೈಯಪ್ಪನಹಳ್ಳಿ ಸರ್ವೆ ನಂಬರ್‌ 23ರಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸಿರುವ ಮನೆಗಳನ್ನು ಹೊಸ ವರ್ಷದ ಆರಂಭದ ದಿನ ಮನೆ ನೀಡಲು ಸಚಿವ ಜಮೀರ್ ಅಹಮ್ಮದ್ ಖಾನ್ ಒಪ್ಪಿದ್ದಾರೆ ಎಂದರು.

ಇದರಲ್ಲಿ ವಿಶೇಷ ಆಸಕ್ತಿ ಇಲ್ಲ. ಕಮ್ಯೂನಿಸ್ಟ್‌ನವರು ಆಸಕ್ತಿ ವಹಿಸಿದ್ದಾರೆ. ಕೇರಳದಲ್ಲಿ ಚುನಾವಣೆ ಬರುತ್ತಿದೆ. ಹೀಗಾಗಿ ಆಸಕ್ತಿ ವಹಿಸಿದ್ದಾರೆ. ಮನುಷ್ಯತ್ವ ಆಧಾರದ ಮೇಲೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ಇನ್ಮುಂದೆ ಈ ರೀತಿ ಯಾರೂ ಒತ್ತುವರಿ ಮಾಡದಂತೆ ಸೂಚಿಸಿದ್ದೇವೆ. ತಹಶೀಲ್ದಾರ್‌ ಹಾಗೂ ವಿಎಗೆ ಗೊತ್ತಿಲ್ಲದೇ ಒತ್ತುವರಿ ಸಾಧ್ಯವೇ ಇಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿ ಕಾಂಗ್ರೆಸ್ ಶಾಸಕ ಮಾಡಿದ್ದೇನು? – Kannada News | Viral video haridwar congress mla cuts off electricity officers power supply know reason

ಹರಿದ್ವಾರ, ಡಿಸೆಂಬರ್ 29: ಉತ್ತರಾಖಂಡದ ಹರಿದ್ವಾರದ ಜಬ್ರೇರಾದ ಕಾಂಗ್ರೆಸ್ (Congress)  ಶಾಸಕ ವೀರೇಂದ್ರ ಜಾತಿ ಅವರು ತಮ್ಮ ಕ್ಷೇತ್ರದಲ್ಲಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿದ ನಂತರ ವಿದ್ಯುತ್ ಇಲಾಖೆಯ ಅಧಿಕಾರಿಗಳ ಮನೆಗಳಿಗೆ ವಿದ್ಯುತ್ ಕಡಿತಗೊಳಿಸಿದ್ದಾರೆ. ನಿವಾಸಿಗಳು ವಿದ್ಯುತ್ ಕಡಿತವನ್ನು ಎದುರಿಸಿದರೆ, ಅದಕ್ಕೆ ಕಾರಣರಾದವರು ಸಹ ವಿದ್ಯುತ್ ವ್ಯತ್ಯಯವನ್ನು ಎದುರಿಸಬೇಕಾಗುತ್ತದೆ ಎಂದು ಶಾಸಕ ವೀರೇಂದ್ರ ಜಾತಿ ಹೇಳಿದ್ದಾರೆ.

ಈ ಘಟನೆಯ ವಿಡಿಯೋ ಎಕ್ಸ್​ನಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಕೆಲವು ಅಧಿಕಾರಿಗಳು ಹಲವಾರು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಈ ವಿಷಯ ಶಾಸಕರ ಗಮನಕ್ಕೆ ಬಂದಾಗ ಅವರೇ ಮಧ್ಯಪ್ರವೇಶಿಸಿದರು. ಯಾವುದೇ ಸಮಸ್ಯೆ ಇದ್ದರೆ ನೋಟಿಸ್ ನೀಡಬೇಕು, ಆದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು ಏಕೆ? ಎಂದು ಅವರು ತಮ್ಮ ಕೋಪವನ್ನು ವ್ಯಕ್ತಪಡಿಸಿದರು.

ವಿದ್ಯುತ್ ಅಧಿಕಾರಿಗಳ ಮನೆಗಳಿಗೆ ವಿದ್ಯುತ್ ಕಡಿತಗೊಳಿಸಿದಾಗ ಅವರೂ ಸಹ ಅನುಭವಿಸುವಂತಾಗಲಿ ಎಂದು ಶಾಸಕರು ಆ ಅಧಿಕಾರಿಗಳ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಈ ಘಟನೆಯ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜವರಾಯನ ಅಟ್ಟಹಾಸಕ್ಕೆ ನಡುರಸ್ತೆಯಲ್ಲೇ ಪ್ರಾಣಬಿಟ್ಟ ಬಾವ-ಬಾಮೈದ: ಆಗಿದ್ದೇನು?

ದೇವನಹಳ್ಳಿ, ಡಿಸೆಂಬರ್​​ 29: ಸಿಮೆಂಟ್​​ ಸಿಮೆಂಟ್ ಬಲ್ಕರ್ ಲಾರಿಗೆ ಹಿಂಬದಿಯಿಂದ ಬೈಕ್​​ ಡಿಕ್ಕಿಯಾದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ನಾಯಕರಂಡನಹಳ್ಳಿ ಬಳಿ ನಡೆದಿದೆ. ಲಾರಿ ಚಾಲಕ ಏಕಾಏಕಿ ಬ್ರೇಕ್​​ ಹಾಕಿದ ಕಾರಣ ಹಿಂಬದಿ ಇದ್ದ ಬೈಕ್​​ ನಿಯಂತ್ರಣ ತಪ್ಪಿ ಡಿಕ್ಕಿಯಾಗಿದೆ. ಅಶೋಕ್ ಮತ್ತು ಪವನ್ ಕುಮಾರ್ ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಮೂಲತಹ ಹಿಂದೂಪುರದವರಾದ ಅಶೋಕ್ ಮತ್ತು ಪವನ್ ಕುಮಾರ್ ವೀಕೆಂಡ್ ಅಂತ ಊರಿಗೆ ಬಂದಿದ್ದು ಗ್ರಾಮದಲ್ಲಿ ಕಾಲ ಕಳೆದಿದ್ದರು. ಪವನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಕಾರಣ ತನಗೆ ಆಫೀಸ್​​ಗೆ ತೆರಳಲು ಬಸ್ ಸಿಗಲ್ಲ ಅಂತ ಬಾಮೈದ ಅಶೋಕನಿಗೆ ಡ್ರಾಪ್ ಕೊಡಲು ಹೇಳಿದ್ದ. ಹೀಗಾಗಿ ಬೈಕ್​​ನಲ್ಲಿ ಹಿಂದೂಪುರದಿಂದ ಯಲಹಂಕದ ಕಡೆ ಇವರಿಬ್ಬರು ಹೊರಟಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ನಾಯಕರಂಡನಹಳ್ಳಿ ಬಳಿ ಇವರು ಬರುತ್ತಿದ್ದಾಗ ರಸ್ತೆಯಲ್ಲಿ ಮುಂದೆ ಸಾಗ್ತಿದ್ದ ಸಿಮೆಂಟ್ ಬಲ್ಕರ್ ಲಾರಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ಬೈಕ್​​ ಲಾರಿಗೆ ಹಿಂಬದಿಯಿಂದ ಡಿಕ್ಕಿಯಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ನಕಲಿ ಗೋಲ್ಡ್​​ ಲೋನ್​​ ಸೃಷ್ಟಿಸಿ ಕೋಟಿ ಕೋಟಿ ವಂಚನೆ; 41 ಗ್ರಾಹಕರಿಗೆ ಟೋಪಿ ಹಾಕಿ ಮ್ಯಾನೇಜರ್ ಎಸ್ಕೇಪ್!

ಸಿಮೆಂಟ್ ಲಾರಿಗೆ ಬೈಕ್ ಡಿಕ್ಕಿ ಹೊಡೆಯುತ್ತಿದ್ದಂತೆ ಸ್ಥಳೀಯರು ಗಾಯಾಳುಗಳನ್ನ ರಕ್ಷಿಸಿ ಆಸ್ವತ್ರೆಗೆ ದಾಖಲಿಸುವ ಯತ್ನ ಮಾಡಿದ್ದಾರೆ. ಆದರೆ ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್​​ ಬಾರದ ಕಾರಣ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಘಟನೆ ಬಳಿಕ ಲಾರಿ ಚಾಲಕ ಎಸ್ಕೇಪ್​​ ಆಗಿದ್ದು, ಮನೆ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಪಘಾತ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪರಾರಿ ಆಗಿರುವ ಲಾರಿ ಚಾಲಕನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link