Category Archives: Blog

Your blog category

ಕಾಫಿಗೂ ತಟ್ಟಿದ ಯುದ್ಧದ ಬಿಸಿ! ರಫ್ತು ಸ್ಥಗಿತಗೊಂಡು ಕಂಗಾಲಾದ ಬೆಳೆಗಾರ; ಶೇ 20ರಷ್ಟು ಕುಸಿದ ದರ

ಕಾಫಿಗೂ ತಟ್ಟಿದ ಯುದ್ಧದ ಬಿಸಿ! ರಫ್ತು ಸ್ಥಗಿತಗೊಂಡು ಕಂಗಾಲಾದ ಬೆಳೆಗಾರ; ಶೇ 20ರಷ್ಟು ಕುಸಿದ ದರ

ಹಾಸನ, ಏಪ್ರಿಲ್ 8: ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಮಧ್ಯಪ್ರಾಚ್ಯ ಯುದ್ಧದ ಪರಿಣಾಮಗಳು ಈಗ ಕರ್ನಾಟಕದ (Karnataka) ಕಾಫಿ ತೋಟಗಳಿಗೂ ತಟ್ಟಿವೆ. ಅಡುಗೆ ಅನಿಲ ಮತ್ತು ಆಟೋ ಗ್ಯಾಸ್ ಕೊರತೆಯ ನಡುವೆ, ದೇಶಕ್ಕೆ ಅತಿ ಹೆಚ್ಚು ವಿದೇಶಿ ವಿನಿಮಯ ತಂದುಕೊಡುತ್ತಿದ್ದ ಕಾಫಿ ಉದ್ಯಮ ಈಗ ಸಂಕಷ್ಟದ ಸುಳಿಗೆ ಸಿಲುಕಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಭೀಕರ ಕದನದಿಂದಾಗಿ ಕಾಫಿ ರಫ್ತು (Coffee Export) ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಮಾರುಕಟ್ಟೆಯಲ್ಲಿ ಕಾಫಿ ಬೆಲೆ ತೀವ್ರವಾಗಿ ಕುಸಿಯುತ್ತಿದೆ.

ದಶಕದ ಬಳಿಕ ಏರಿದ್ದ ಬೆಲೆ ಈಗ ದಿಢೀರ್ ಕುಸಿತ

ಕಳೆದ ಹಲವು ದಶಕಗಳ ನಂತರ ಕಾಫಿಗೆ ಬಂಪರ್ ಬೆಲೆ ಬಂದಿತ್ತು. ಇದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಬೆಳೆಗಾರರು, ಬೆಲೆ ಮತ್ತಷ್ಟು ಏರಬಹುದು ಎಂಬ ನಿರೀಕ್ಷೆಯಲ್ಲಿ ಕಾಫಿಯನ್ನು ಮಾರಾಟ ಮಾಡದೆ ಸಂಗ್ರಹಿಸಿಟ್ಟುಕೊಂಡಿದ್ದರು. ಆದರೆ, ಯುದ್ಧ ಶುರುವಾದ ಕೇವಲ ಒಂದು ತಿಂಗಳ ಅವಧಿಯಲ್ಲಿ ಬೆಲೆ ಬರೋಬ್ಬರಿ ಶೇಕಡಾ 20 ರಷ್ಟು ಕುಸಿದಿದೆ.

ಕಾಫಿ ದರ ವಿವರ

  • ಅರೇಬಿಕಾ ಕಾಫಿ: ಕಳೆದ ವರ್ಷ 50 ಕೆಜಿ ಚೀಲಕ್ಕೆ 29 ಸಾವಿರ ರೂ. ಇದ್ದ ಬೆಲೆ ಈಗ 23 ಸಾವಿರಕ್ಕೆ ಕುಸಿದಿದೆ.
    ರೊಬಸ್ಟಾ ಕಾಫಿ: 12 ಸಾವಿರ ರೂ. ಇದ್ದ ಬೆಲೆ ಈಗ ಕೇವಲ 8 ಸಾವಿರಕ್ಕೆ ಇಳಿಕೆಯಾಗಿದೆ.
  • ಗಾಯದ ಮೇಲೆ ಬರೆ ಎಳೆದ ವಿದೇಶಿ ಫಸಲು

ಒಂದೆಡೆ ಯುದ್ಧದಿಂದ ರಫ್ತು ನಿಂತಿದ್ದರೆ, ಮತ್ತೊಂದೆಡೆ ಜಗತ್ತಿನ ಅತಿ ದೊಡ್ಡ ಕಾಫಿ ಬೆಳೆಗಾರ ರಾಷ್ಟ್ರಗಳಾದ ಬ್ರೆಜಿಲ್ ಮತ್ತು ವಿಯೆಟ್ನಾಂನಲ್ಲಿ ಈ ಬಾರಿ ಉತ್ತಮ ಫಸಲು ಬಂದಿದೆ. ಕಳೆದ ವರ್ಷ ಅಲ್ಲಿ ಫಸಲು ಕೈಕೊಟ್ಟಿದ್ದರಿಂದ ಭಾರತದ ಕಾಫಿಗೆ ಭಾರಿ ಬೇಡಿಕೆ ಇತ್ತು. ಆದರೆ ಈಗ ಆ ದೇಶಗಳಲ್ಲೂ ಫಸಲು ಚೆನ್ನಾಗಿರುವುದು ಮತ್ತು ಯುದ್ಧದ ಪರಿಣಾಮ ರಫ್ತು ರದ್ದಾಗಿರುವುದು ಬೆಳೆಗಾರರ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕಾಫಿ ಬೆಳೆಗಾರರ ಆಗ್ರಹವೇನು?

ದೇಶದ ಒಟ್ಟು ಕಾಫಿ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ 70 ರಷ್ಟಿದೆ. ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಲಕ್ಷಾಂತರ ಕುಟುಂಬಗಳು ಈ ಉದ್ಯಮವನ್ನೇ ನಂಬಿವೆ. ‘ರಫ್ತುದಾರರಿಗೆ ಕೇಂದ್ರ ಸರ್ಕಾರ ಹೇಗೆ ನೆರವಿನ ಹಸ್ತ ನೀಡುತ್ತದೆಯೋ, ಅದೇ ಮಾದರಿಯಲ್ಲಿ ಕಾಫಿ ಬೆಳೆಗಾರರಿಗೂ ವಿಶೇಷ ಪರಿಹಾರ ಘೋಷಿಸಬೇಕು’ ಎಂದು ಅಂತರಾಷ್ಟ್ರೀಯ ಕಾಫಿ ಸಂಘಟನೆ ಸಲಹಾ ಸಮಿತಿ ಸದಸ್ಯರಾದ ಡಾ. ಎಚ್ ಡಿ ಮೋಹನ್ ಕುಮಾರ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಇರಾನ್ ಮೇಲೆ ಭೀಕರ ದಾಳಿ ನಿರ್ಧಾರದಿಂದ ಹಿಂದೆ ಸರಿದ ಟ್ರಂಪ್: ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ 2 ವಾರಗಳ ಕದನ ವಿರಾಮ ಘೋಷಣೆ!

ಸದಗಯ ಇರಾನ್-ಅಮೆರಿಕ ಯುದ್ಧಕ್ಕೆ 2 ವಾರಗಳ ಕದನ ವಿರಾಮ ಘೋಷಿಸಲಾಗಿದ್ದು, ಇದು ಮುಂದೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಗಲಕೋಟೆ ಉಪ ಚುನಾವಣೆಗೆ ಕೊನೇ ಹಂತದ ಸಿದ್ಧತೆ ಹೇಗಿದೆ ಗೊತ್ತಾ?

ಬಾಗಲಕೋಟೆ, ಏಪ್ರಿಲ್​​ 08: ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ನಾಳೆ ನಡೆಯಲಿರುವ ಮತದಾನ ಪ್ರಕ್ರಿಯೆಗಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸಂಪೂರ್ಣವಾಗಿ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಬಾಗಲಕೋಟೆಯ ನವನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆದಿದ್ದು, ಮತಗಟ್ಟೆಗಳಿಗೆ ನಿಯೋಜಿಸಲಾಗಿರುವ ಸಿಬ್ಬಂದಿಗಳು ಇವಿಎಂ ಯಂತ್ರಗಳನ್ನು ಪಡೆದು ತಮ್ಮ ಬೂತ್‌ಗಳತ್ತ ತೆರಳಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 2,59,797 ಮತದಾರರಿದ್ದು, ಇದರಲ್ಲಿ 1,26,999 ಪುರುಷರು, 1,32,775 ಮಹಿಳೆಯರು ಮತ್ತು 23 ಇತರೆ ಮತದಾರರಿದ್ದಾರೆ. ಒಟ್ಟು 322 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 1564 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಹಿತಕರ ಘಟನೆಗಳನ್ನು ತಪ್ಪಿಸಲು 2,500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಯುವಕರಿಗೆ ರಜನಿಕಾಂತ್ ಕಿವಿಮಾತು: ಸೂಪರ್ ಸ್ಟಾರ್ ಹೇಳಿದ್ದೇನು?

ತಮ್ಮ ವಿಶಿಷ್ಟ ಮ್ಯಾನರಿಸಂ ಮತ್ತು ಅಭಿನಯದ ಮೂಲಕ ದಶಕಗಳಿಂದ ಚಿತ್ರರಂಗವನ್ನು ಆಳುತ್ತಿರುವ ನಟ ರಜನಿಕಾಂತ್ (Rajinikanth), ಭಾರತದ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ ಅವರು. ಕೇವಲ ಸಿನಿಮಾ ಪರದೆಯ ಮೇಲೆ ನಾಯಕನಷ್ಟೇ ಅಲ್ಲದೆ ಸಾಮಾಜಿಕ ಕಾಳಜಿಯುಳ್ಳ ವ್ಯಕ್ತಿಯೂ ಹೌದು ರಜನೀಕಾಂತ್. ಇತ್ತೀಚೆಗಂತೂ ತಮ್ಮ ಸಿನಿಮಾ ಕಾರ್ಯಕ್ರಮಗಳಲ್ಲಿಯೂ ಸಹ ರಜನೀಕಾಂತ್ ಅವರು ಸಾಕಷ್ಟು ಸಂದೇಶಗಳನ್ನು, ಕಿವಿಮಾತುಗಳನ್ನು ಹೇಳುತ್ತಾರೆ. ಇದೀಗ ರಜನೀಕಾಂತ್ ಅವರು ಯುವಕರಿಗಾಗಿ ಸಂದೇಶವೊಂದನ್ನು ನೀಡಿದ್ದಾರೆ.

ಇದೀಗ ನಟ ರಜನೀಕಾಂತ್ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು, ‘ಯುವಜನತೆಯು ತಮ್ಮ ವಿದ್ಯಾಭ್ಯಾಸ ಮತ್ತು ಭವಿಷ್ಯದ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು’ ಎಂದು ಅವರು ಹೇಳಿದ್ದಾರೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಶಿಕ್ಷಣವೇ ಅಡಿಪಾಯ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ. ಇಂದಿನ ಕಾಲಘಟ್ಟದಲ್ಲಿ ಯುವಕರು ಬೇಗನೆ ಆಕರ್ಷಿತರಾಗುತ್ತಿರುವ ಮದ್ಯಪಾನ ಮತ್ತು ಮಾದಕವಸ್ತುಗಳ ಬಗ್ಗೆ ರಜನಿಕಾಂತ್ ಕಳವಳ ವ್ಯಕ್ತಪಡಿಸಿದ್ದಾರೆ.

‘ನಾನು ಯುವಜನತೆಯಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ದಯವಿಟ್ಟು ಮದ್ಯ ಮತ್ತು ಮಾದಕವಸ್ತುಗಳಿಂದ ದೂರವಿರಿ. ಒಂದು ವೇಳೆ ನೀವು ಈ ವ್ಯಸನಕ್ಕೆ ಬಲಿಯಾದರೆ, ನಿಮ್ಮ ಜೀವನ ಕೇವಲ ನಿಮಗಷ್ಟೇ ಅಲ್ಲ, ನಿಮ್ಮನ್ನು ನಂಬಿರುವ ಪೋಷಕರಿಗೆ ಮತ್ತು ಪ್ರೀತಿಪಾತ್ರರಿಗೂ ನರಕವಾಗಿ ಪರಿಣಮಿಸುತ್ತದೆ. ವ್ಯಸನಿಯಾದ ಒಬ್ಬ ವ್ಯಕ್ತಿ ಕೇವಲ ತನ್ನ ಆರೋಗ್ಯವನ್ನಷ್ಟೇ ಹಾಳುಮಾಡಿಕೊಳ್ಳುವುದಿಲ್ಲ, ಬದಲಾಗಿ ಇಡೀ ಕುಟುಂಬವನ್ನು ಬೀದಿಗೆ ತರುತ್ತಾನೆ. ಪೋಷಕರು ತಮ್ಮ ಮಕ್ಕಳ ಮೇಲೆ ಇಟ್ಟಿರುವ ಕನಸುಗಳು ನುಚ್ಚುನೂರಾಗುತ್ತವೆ. ಈ ಭಾವನಾತ್ಮಕ ಅಂಶವನ್ನು ರಜನಿಕಾಂತ್ ತಮ್ಮ ಸಂದೇಶದಲ್ಲಿ ಬಹಳ ತೀಕ್ಷ್ಣವಾಗಿ ಪ್ರಸ್ತಾಪಿಸಿದ್ದಾರೆ’ ಎಂದಿದ್ದಾರೆ ರಜನೀಕಾಂತ್.

ಇದನ್ನೂ ಓದಿ:ರಜನೀಕಾಂತ್​​ಗೆ ಕೈಕೊಟ್ಟ ಶಾರುಖ್ ಖಾನ್, ‘ಜೈಲರ್ 2’ಗೆ ನೋ?

ರಜನೀಕಾಂತ್ ಪ್ರಸ್ತುತ ‘ಜೈಲರ್ 2’ ಸಿನಿಮಾನಲ್ಲಿ ನಟಿಸುತ್ತಿದ್ದು, ಇದೀಗ ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಅದಾದ ಬಳಿಕ ರಜನೀಕಾಂತ್ ಹಾಗೂ ಕಮಲ್ ಹಾಸನ್ ಅವರು ಒಟ್ಟಿಗೆ ಸಿನಿಮಾನಲ್ಲಿ ನಟಿಸಲಿದ್ದು, ಸಿನಿಮಾ ಅನ್ನು ನೆಲ್ಸನ್ ನಿರ್ದೇಶನ ಮಾಡಲಿದ್ದು, ಕಮಲ್ ಹಾಸನ್ ಅವರೇ ನಿರ್ಮಾಣ ಮಾಡಲಿದ್ದಾರೆ. ಅದಾದ ಬಳಿಕ ಐತಿಹಾಸಿಕ ಸಿನಿಮಾ ಒಂದರಲ್ಲಿ ರಜನೀಕಾಂತ್ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

R Ashwin: ನಾ ನಿವೃತ್ತಿ ಘೋಷಿಸಲು ಇದುವೇ ಅಸಲಿ ಕಾರಣ!

ಭಾರತೀಯ ಕ್ರಿಕೆಟ್‌ನ ದಿಗ್ಗಜ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ (IPL 2026) ಸೀಸನ್-19 ಆರಂಭಕ್ಕೂ ಮುನ್ನ ಹಠಾತ್ ವಿದಾಯ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಅತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದರೂ ಅಶ್ವಿನ್ ರಿಟೈನ್ ಪ್ರಕ್ರಿಯೆಗೂ ಮುನ್ನ ನಿವೃತ್ತಿ ಘೋಷಿಸಿದ್ದರು. ಇದಕ್ಕೇನು ಕಾರಣ ಎಂಬುದನ್ನು ಅಶ್ವಿನ್ ತಮ್ಮಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಿಸಿದ್ದಾರೆ.

ಈ ಬಗ್ಗೆ ಮನಬಿಚ್ಚಿ ಮಾತನಾಡಿರುವ ಅಶ್ವಿನ್, ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮೇಲಿನ ಅಭಿಮಾನಕ್ಕಾಗಿ ಈ ಕಠಿಣ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ತನ್ನ ನಿವೃತ್ತಿಯ ಹಿಂದೆ ಕೇವಲ ವಯಸ್ಸಿನ ಕಾರಣವಿಲ್ಲ, ಬದಲಾಗಿ ತಂಡದ ಭವಿಷ್ಯದ ಯೋಜನೆಗಳನ್ನು ಸಹ ನಾನು ಪರಿಗಣಿಸಿದ್ದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಐಪಿಎಲ್ ಮಿನಿ ಹರಾಜಿಗೂ ಮುನ್ನ “ನನ್ನನ್ನು ತಂಡದಲ್ಲಿ ಉಳಿಸಿಕೊಳ್ಳಬೇಕೇ ಅಥವಾ ಕೈಬಿಡಬೇಕೇ ಎಂಬ ಗೊಂದಲ ಸಿಎಸ್‌ಕೆ ಮ್ಯಾನೇಜ್‌ಮೆಂಟ್‌ಗೆ ಬೇಡ ಎಂದು ನಾನು ಭಾವಿಸಿದೆ. ನನ್ನ ನಿವೃತ್ತಿಯಿಂದ ಅವರಿಗೆ ಆ ತಲೆನೋವು ತಪ್ಪಲಿದೆ,” ಎಂದು ನನಗೆ ಗೊತ್ತಿತ್ತು.

ಅಷ್ಟೇ ಅಲ್ಲದೆ ನನ್ನ ಈ ನಿರ್ಧಾರದಿಂದ ಸಿಎಸ್‌ಕೆ ತಂಡಕ್ಕೆ ಬರೋಬ್ಬರಿ 10 ಕೋಟಿ ರೂಪಾಯಿಗಳ ಪರ್ಸ್ ಮೊತ್ತ ಉಳಿತಾಯವಾಗಲಿದೆ. ಈ ಹಣವನ್ನು ತಂಡವು ಹರಾಜಿನಲ್ಲಿ ಯುವ ಪ್ರತಿಭೆಗಳನ್ನು ಖರೀದಿಸಲು ಬಳಸಿಕೊಳ್ಳಬಹುದು ಎಂಬುದು ನನ್ನ ಆಶಯವಾಗಿತ್ತು ಎಂದು ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.

ಇದೇ ವೇಳೆ 2025ರ ಸೀಸನ್ ತಮಗೆ ಮಾನಸಿಕವಾಗಿ ಸ್ವಲ್ಪ ಕಷ್ಟಕರವಾಗಿತ್ತು ಎಂದು ಒಪ್ಪಿಕೊಂಡಿರುವ ಅವರು, ತಂಡಕ್ಕೆ ಆಡುವಾಗ ಪೂರ್ಣ ಪ್ರಮಾಣದ ಭಾವನಾತ್ಮಕ ಬೆಂಬಲ ನೀಡಲು ಸಾಧ್ಯವಾಗುತ್ತಿರಲಿಲ್ಲ. ಹೀಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾಗದ ನೋವು ಕೂಡ ನನ್ನಲ್ಲಿತ್ತು. ಹೀಗಾಗಿ ಐಪಿಎಲ್ ಆರಂಭಕ್ಕೂ ಮುನ್ನವೇ ನಿವೃತ್ತಿ ನಿರ್ಧಾರ ತೆಗೆದುಕೊಂಡೆ ಎಂದು ಅಶ್ವಿನ್ ಸ್ಪಷ್ಟಪಡಿಸಿದ್ದಾರೆ.

ಐಪಿಎಲ್‌ನಲ್ಲಿ ಅಶ್ವಿನ್ ಸಾಧನೆ:

  • ಅಶ್ವಿನ್ ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ಸ್ಪಿನ್ನರ್‌ಗಳಲ್ಲಿ ಒಬ್ಬರು. ಅದರಲ್ಲೂ ಸಿಎಸ್‌ಕೆ ಪರ ಅವರ ಕೊಡುಗೆ ಅಪಾರ
  • ಚೆನ್ನೈ ಸೂಪರ್ ಕಿಂಗ್ಸ್​ ಜೊತೆ ಹಲವು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
  • ಐಪಿಎಲ್ ಕೆರಿಯರ್‌ನಲ್ಲಿ 185ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ.
  • ಬೌಲಿಂಗ್ ಮಾತ್ರವಲ್ಲದೆ, ಕೆಳಕ್ರಮಾಂಕದಲ್ಲಿ ಉಪಯುಕ್ತ ಬ್ಯಾಟಿಂಗ್ ಮೂಲಕವೂ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.
  • ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿಯೂ ಅಶ್ವಿನ್ ಕಾಣಿಸಿಕೊಂಡಿದ್ದಾರೆ.

ಅಶ್ವಿನ್ ಅವರ ಮುಂದಿನ ಹಾದಿ?

ಪ್ರಸ್ತುತ 2026ರ ಐಪಿಎಲ್ ಆವೃತ್ತಿಯಲ್ಲಿ ಅಶ್ವಿನ್ ಅವರು ಹಿಂದಿ ಕಾಮೆಂಟರಿ ಪ್ಯಾನೆಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮೈದಾನದಲ್ಲಿ ಚೆಂಡಿನ ಮೂಲಕ ಮ್ಯಾಜಿಕ್ ಮಾಡುತ್ತಿದ್ದ ಅಶ್ವಿನ್, ಈಗ ತಮ್ಮ ವಿಶ್ಲೇಷಣೆಯ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಇನ್ನು ಐಪಿಎಲ್ ಮುಗಿದ ಬಳಿಕ ಅಮೆರಿಕನ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ಮೇಜರ್ ಲೀಗ್​ ಕ್ರಿಕೆಟ್ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಟೂರ್ನಿಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಪರ ಕಣಕ್ಕಿಳಿಯಲು ಅಶ್ವಿನ್ ಒಪ್ಪಂದ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಮಹಾ ಎಡವಟ್ಟು… ಅವೇಶ್ ಖಾನ್​ಗೆ ಬ್ಯಾನ್ ಭೀತಿ..!

ನಿಸ್ವಾರ್ಥ ನಿರ್ಧಾಕ್ಕೆ ಮೆಚ್ಚುಗೆ:

“ನನಗೆ ಇನ್ನೂ ಐಪಿಎಲ್ ಆಡುವ ಆಸೆ ಇತ್ತು, ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ತಂಡದ ಹಿತದೃಷ್ಟಿಯಿಂದ ನಿವೃತ್ತಿ ಅನಿವಾರ್ಯವಾಗಿತ್ತು,” ಎಂದು ಅವರು ಭಾವುಕರಾಗಿ ನುಡಿದಿದ್ದಾರೆ. ಅಶ್ವಿನ್ ಅವರ ಈ ನಿಸ್ವಾರ್ಥ ನಿರ್ಧಾರಕ್ಕೆ ಕ್ರಿಕೆಟ್ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 

 

Source link

ಹಿಂದೂ ಯುವತಿ ಜೊತೆ ವಿವಾಹಿತ ಮುಸ್ಲಿಂ ವ್ಯಕ್ತಿ ಪರಾರಿ: ಲವ್​​ ಜಿಹಾದ್​​ಗೆ ಒಳಗಾದ ಮಗಳನ್ನು ಹುಡುಕಿಕೊಡಿ ಎಂದು ತಾಯಿಯ ಅಳಲು

ಹುಬ್ಬಳ್ಳಿ, ಏಪ್ರಿಲ್​ 08: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಾಲು ಸಾಲು ಲವ್​​ ಜಿಹಾದ್​​ ಆರೋಪ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದೀಗ ಇವುಗಳ ಸಾಲಿಗೆ ಮತ್ತೊಂದು ಹೊಸ ಸೇರ್ಪಡೆಯಾಗಿದ್ದು, ತನ್ನ ಮಗಳನ್ನು ಮುಸ್ಲಿಂ ಸಮುದಾಯದ ವಿವಾಹಿತ ವ್ಯಕ್ತಿ ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ. ಜೊತಗೆ ಮನೆ ಖರೀದಿಸಲು ನೀಡಿದ್ದ ಹತ್ತು ಲಕ್ಷ ಹಣ ಕೂಡಾ ತೆಗೆದುಕೊಂಡು ಹೋಗಿದ್ದಾನೆ. ಇದೀಗ ಹಣವೂ ಇಲ್ಲ, ಮಗಳೂ ಇಲ್ಲ ಎಂಬಂತಾಗಿದೆ. ದಯವಿಟ್ಟು ಮಗಳನ್ನು ಹುಡುಕಿ ಕೊಡಿ ಎಂದು ತಾಯಿಯೊಬ್ಬಳು ಮನವಿ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಮಗಳಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.

ಧಾರವಾಡದ ಕೆಲಗೇರಿಯ ನಿವಾಸಿ ಇಪ್ಪತ್ತೆರಡು ವರ್ಷದ ತಂಗೆಮ್ಮಾ ಎಂಬ ಯುವತಿ ಮನೆ ಎದುರಿನ ನಿವಾಸಿ ಕಾರು ಚಾಲಕನಾಗಿದ್ದ ಮುಸ್ಲಿಂ ವ್ಯಕ್ತಿಯ ಜೊತೆಗೆ ಓಡಿ ಹೋಗಿದ್ದಾಳಂತೆ. ಈ ಬಗ್ಗೆ ಆಕೆಯ ತಾಯಿ ಮಂಜುಳಾ ಅವರೇ ಮಾಹಿತಿ ನೀಡಿದ್ದು, ತಮ್ಮ ಮಗಳಿಗೆ ಪರಿಚಿತ ಯುವಕನ ಜೊತೆ ವಿವಾಹವಾಗಿತ್ತು. ಆದ್ರೆ ಮಗಳು ನಮ್ಮ ಜೊತೆಯೇ ಇದ್ದಳು. ಆಕೆಯ ಪತಿ ಆಗಾಗ ಬಂದು ಹೋಗುತ್ತಿದ್ದ. ಧಾರವಾಡದ ಕೆಲಗೇರಿಯಲ್ಲಿ ಬಾಡಿಗೆ ಮನೆಯಲ್ಲಿದ್ದಾಗ, ತಮಗೆ ವಕೀಲರೊಬ್ಬರು ಪರಿಚಯವಿದ್ದರು. ಅವರ ಕಾರ್ ಡ್ರೈವರ್ ಆಗಿ ಮುನ್ನಾ ಎಂಬಾತ ಕೆಲಸ ಮಾಡ್ತಿದ್ದ. ಆಗ ನಾವು ನಮಗೆ ಸ್ವಂತದೊಂದು ಮನೆ ಮಾಡಬೇಕು. ಹೀಗಾಗಿ ಮನೆ ಹುಡುಕಿ ಕೊಡಿ ಎಂದು ಮುನ್ನಾ ಮತ್ತು ವಕೀಲರಿಗೆ ಹತ್ತು ಲಕ್ಷ ಹಣ ನೀಡಿದ್ದೆವು.  ಆ ಬಳಿಕ ವಕೀಲರು ಮತ್ತು ಮುನ್ನಾ ಆಗಾಗ ಮನೆಗೆ ಬಂದು ಹೋಗಿ ಮಾಡುತ್ತಿದ್ದರು. ಆದರೆ 2023ರಲ್ಲಿ ನಾವು ಮನೆಯಲ್ಲಿ ಇಲ್ಲದ ಸಂದರ್ಭ ಮುನ್ನಾ ತಮ್ಮ ಮಗಳನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ. ಈ ಬಗ್ಗೆ ಧಾರವಾಡದ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆವು. ಆಗ ಪೊಲೀಸರು ಮುನ್ನಾ ವಿರುದ್ದ ದೂರು ದಾಖಲಿಸಿಕೊಳ್ಳದೇ ಕೇವಲ ಮಿಸ್ಸಿಂಗ್ ಕಂಪ್ಲೇಟ್ ದಾಖಲಿಸಿಕೊಂಡಿದ್ದರು. ಆದ್ರೆ ಇಲ್ಲಿವರಗೆ ಮುನ್ನಾ ಮತ್ತು ತಮ್ಮ ಮಗಳು ಎಲ್ಲಿದ್ದಾರೆ ಎಂದು ಹುಡುಕಿಲ್ಲ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣ; ಮತ್ತೆರಡು ಸ್ಫೋಟಕ ವಿಡಿಯೋ ಬಿಡುಗಡೆ! ಕಾಂಗ್ರೆಸ್ ಮುಖಂಡನ ಕೈವಾಡ ಇದೆ ಎಂದ ಯುವತಿ

ಇನ್ನು ಮುನ್ನಾಗೆ ಬೆಳಗಾವಿ ಜಿಲ್ಲೆಯ ರಾಮದುರ್ಗದ ಮುಸ್ಲಿಂ ಯುವತಿ ಜೊತೆ ಈ ಹಿಂದೆಯೇ ವಿವಾಹವಾಗಿತ್ತಂತೆ. ದಂಪತಿಗೆ ಇಬ್ಬರು ಮಕ್ಕಳು ಕೂಡಾ ಇವೆಯಂತೆ. ಹೀಗಿದ್ದರೂ ಹೆಂಡತಿ ಮಕ್ಕಳನ್ನು ಬಿಟ್ಟು ಮುನ್ನಾ ತಂಗೆಮ್ಮಳನ್ನು ಕರೆದುಕೊಂಡು ನಾಪತ್ತೆಯಾಗಿದ್ದಾನೆ. ಆತನಿಗಾಗಿ ಆರಂಭದಲ್ಲಿ ಪೊಲೀಸರು ಅನೇಕ ಕಡೆ ಹುಡುಕಾಡಿದ್ದರು. ಹೈದ್ರಾಬಾದ್ ಸೇರಿದಂತೆ ಅನೇಕ ಕಡೆ ತೆರಳಿದ್ದರು. ಆದ್ರೆ ಆತ ಸಿಮ್ ಬದಲಾವಣೆ ಮಾಡಿದ್ದು, ಕುಟುಂಬದವರ ಸಂಪರ್ಕ ಕೂಡ ಇಟ್ಟುಕೊಂಡಿಲ್ಲ. ಹೀಗಾಗಿ ಮುನ್ನಾ ಮತ್ತು ತಂಗೆಮ್ಮಾ ಎಲ್ಲಿದ್ದಾರೆಂದು ಪತ್ತೆ ಮಾಡೋದು ಪೊಲೀಸರಿಗೂ ಸವಾಲಾಗಿ ಮಾರ್ಪಟ್ಟಿದೆ. ಇನ್ನು ಮುನ್ನಾ ಮೇಲೆ ದೆಹಲಿಯಲ್ಲಿ ಅತ್ಯಾಚಾರ ಪ್ರಕರಣ ಕೂಡಾ ಇರೋದು ಗೊತ್ತಾಗಿದ್ದು, ಆತ ಕ್ರಿಮಿನಲ್ ಹಿನ್ನೆಲೆಯಳ್ಳ ವ್ಯಕ್ತಿ ಎಂಬುದು ಬಹಿರಂಗಗೊಂಡಿದೆ.  ತಮ್ಮ ಮಗಳನ್ನು ಹುಡುಕಿ ಕೊಡುವಂತೆ ಧಾರವಾಡ ಸಬ್ ಅರ್ಬನ್ ಪೊಲೀಸರಿಗೆ ಹತ್ತಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದ ಕಾರಣ ಹಿಂದೂಪರ ಸಂಘಟನೆಗಳ ಜೊತೆ ಆಗಮಿಸಿ ಪೊಲೀಸ್ ಕಮಿಷನರ್​​ಗೆ ಮಂಜುಳಾ ದೂರು ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video Viral: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಚಂಡೀಗಢ: ವೈದ್ಯಕೀಯ ವೃತ್ತಿ ಎಂದರೆ ಅದೊಂದು ಪವಿತ್ರ ಸೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಕೇವಲ ‘ಹಣ ಮಾಡುವ ಯಂತ್ರ’ಗಳಂತೆ ನೋಡುತ್ತಿವೆ ಎಂಬ ಕಹಿಸತ್ಯವೊಂದನ್ನು ಯುವ ವೈದ್ಯೆಯೊಬ್ಬರು ಧೈರ್ಯವಾಗಿ ಬಯಲಿಗೆಳೆದಿದ್ದಾರೆ. ಚಂಡೀಗಢದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದ ಈ ಘಟನೆ ಈಗ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಏನಿದು ಘಟನೆ?

ಯುವ ವೈದ್ಯೆ ಡಾ. ಪ್ರಭ್ಲೀನ್ ಕೌರ್ ಅವರು ಚಂಡೀಗಢದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದಕ್ಕೆ ವೈದ್ಯೆಯಾಗಿ ಕೆಲಸಕ್ಕೆ ಸೇರಿದ್ದರು. ಆದರೆ, ಕೆಲಸಕ್ಕೆ ಸೇರಿದ ಮೊದಲ ದಿನವೇ ಆಸ್ಪತ್ರೆಯ ಆಡಳಿತ ಮಂಡಳಿಯ ಅಮಾನವೀಯ ಧೋರಣೆಯನ್ನು ಕಂಡು ಬೆಚ್ಚಿಬಿದ್ದ ಅವರು, ಕೂಡಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ.

ಆಸ್ಪತ್ರೆಯ ವಿರುದ್ಧ ಡಾ. ಪ್ರಭ್ಲೀನ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಆಸ್ಪತ್ರೆಯ ‘ಕಲೆಕ್ಷನ್’ ದಂಧೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಆಸ್ಪತ್ರೆಗೆ ಬರುವ ಸಾಮಾನ್ಯ ರೋಗಿಗಳಿಗೂ ಪ್ರಾಥಮಿಕ ಚಿಕಿತ್ಸೆ ನೀಡುವ ಬದಲು, ಹಣ ಸುಲಿಗೆ ಉದ್ದೇಶದಿಂದ ನೇರವಾಗಿ ಐಸಿಯು (ICU) ಗೆ ದಾಖಲಿಸಲಾಗುತ್ತಿದೆ. ಆಸ್ಪತ್ರೆಯ ಆದಾಯವನ್ನು ಹೆಚ್ಚಿಸಲು ವೈದ್ಯರ ಮೇಲೆ ಒತ್ತಡ ಹೇರಲಾಗುತ್ತಿದೆ. ರೋಗಿಗಳಿಗೆ ಅಗತ್ಯವಿಲ್ಲದಿದ್ದರೂ ದುಬಾರಿ ಪರೀಕ್ಷೆ ಮತ್ತು ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಈ ಸಂಪೂರ್ಣ ದಂಧೆಯು ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರ ನೇರ ನಿಯಂತ್ರಣದಲ್ಲಿ ನಡೆಯುತ್ತಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಪಡೆಯುವುದು ಹೇಗೆ? ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ನನಗೆ ವೃತ್ತಿ ನೈತಿಕತೆಯೇ ಮುಖ್ಯ:

ವಿಡಿಯೋದಲ್ಲಿ ಭಾವುಕರಾಗಿಯೇ ಮಾತನಾಡಿದ ಡಾ. ಪ್ರಭ್ಲೀನ್, “ನನಗೆ ಸಂಬಳ ಅಥವಾ ದೊಡ್ಡ ಹುದ್ದೆಗಿಂತ ರೋಗಿಗಳ ಸುರಕ್ಷತೆ ಮತ್ತು ವೈದ್ಯಕೀಯ ವೃತ್ತಿಯ ನೈತಿಕತೆಯೇ ಮುಖ್ಯ. ರೋಗಿಗಳನ್ನು ಲೂಟಿ ಮಾಡುವ ಇಂತಹ ವ್ಯವಸ್ಥೆಯಲ್ಲಿ ನಾನು ಭಾಗಿಯಾಗಲಾರೆ,” ಎಂದು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್:

ಡಾ. ಪ್ರಭ್ಲೀನ್ ಕೌರ್ ಅವರ ಈ ಧೈರ್ಯದ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ವ್ಯಕ್ತವಾಗಿದೆ. ನೆಟ್ಟಿಗರು ಆಸ್ಪತ್ರೆಯ ಹೆಸರನ್ನು ಬಹಿರಂಗಪಡಿಸಿ ಅದರ ಪರವಾನಗಿ ರದ್ದುಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. “ವೈದ್ಯಕೀಯ ಕ್ಷೇತ್ರಕ್ಕೆ ಇಂತಹ ಪ್ರಾಮಾಣಿಕ ವೈದ್ಯರ ಅಗತ್ಯವಿದೆ” ಎಂದು ಸಾವಿರಾರು ಜನರು ಕಮೆಂಟ್ ಮಾಡುತ್ತಿದ್ದಾರೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Assembly Elections 2026 Voting: ನಾಳೆ ಕೇರಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆ, ಮೇ 4ಕ್ಕೆ ಫಲಿತಾಂಶ

ನವದೆಹಲಿ, ಏಪ್ರಿಲ್ 08: ಅಸ್ಸಾಂ ಮತ್ತು ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಏಪ್ರಿಲ್ 9 ರಂದು ವಿಧಾನಸಭಾ ಚುನಾವಣೆ(Assembly Election) ನಡೆಯಲಿದೆ. ಚುನಾವಣೆಯ ಪ್ರಚಾರ ಮಂಗಳವಾರ ಸಂಜೆ ಕೊನೆಗೊಂಡಿದೆ. ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಅಸ್ಸಾಂನ 126 ಸ್ಥಾನಗಳು, ಕೇರಳದ 140 ಸ್ಥಾನಗಳು ಮತ್ತು ಪುದುಚೇರಿಯ 30 ಸ್ಥಾನಗಳಿಗೆ ಗುರುವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ಅಸ್ಸಾಂನಲ್ಲಿ ಎಷ್ಟು ಮತದಾರರಿದ್ದಾರೆ?
ಅಸ್ಸಾಂನಲ್ಲಿ ಒಟ್ಟು 25 ಮಿಲಿಯನ್ ಮತದಾರರಿದ್ದಾರೆ, ಇದರಲ್ಲಿ 12.5 ಮಿಲಿಯನ್ ಪುರುಷರು, 12.5 ಮಿಲಿಯನ್ ಮಹಿಳೆಯರು ಮತ್ತು 343 ತೃತೀಯ ಲಿಂಗಿಗಳಿದ್ದಾರೆ. 18-19 ವರ್ಷ ವಯಸ್ಸಿನ 57.5 ಮಿಲಿಯನ್ ಯುವಕರು ಮೊದಲ ಬಾರಿಗೆ ತಮ್ಮ ಮತದಾನವನ್ನು ಚಲಾಯಿಸಲಿದ್ದಾರೆ. ಅಸ್ಸಾಂನ 126 ವಿಧಾನಸಭಾ ಸ್ಥಾನಗಳಿಗೆ 722 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಬಹುಮತ 64 ಆಗಿದೆ. ರಾಜ್ಯದ 15 ನೇ ವಿಧಾನಸಭೆಯ ಅವಧಿ ಮೇ 20, 2026 ರಂದು ಮುಕ್ತಾಯಗೊಳ್ಳುತ್ತದೆ.

ಕೇರಳದಲ್ಲಿ ಎಷ್ಟು ಮತದಾರರಿದ್ದಾರೆ?
ಕೇರಳ ವಿಧಾನಸಭೆಯ 140 ಸ್ಥಾನಗಳಿಗೆ 890 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ . ಪ್ರಮುಖ ರಾಜಕೀಯ ಪಕ್ಷಗಳ ನಡುವೆ ಸ್ಪರ್ಧೆ ತ್ರಿಕೋನವಾಗಿದೆ. ಸರ್ಕಾರ ರಚಿಸಲು 71 ಸ್ಥಾನಗಳ ಬಹುಮತದ ಅಗತ್ಯವಿದೆ. ರಾಜ್ಯವು ಒಟ್ಟು 27.1 ಮಿಲಿಯನ್ ಮತದಾರರನ್ನು ಹೊಂದಿದ್ದು, ಇದರಲ್ಲಿ 13.2 ಮಿಲಿಯನ್ ಪುರುಷರು, 13.9 ಮಿಲಿಯನ್ ಮಹಿಳೆಯರು ಮತ್ತು 273 ತೃತೀಯ ಲಿಂಗಿ ಮತದಾರರು ಸೇರಿದ್ದಾರೆ.

ಪುದುಚೇರಿಯಲ್ಲಿ ಎಷ್ಟು ಮತದಾರರಿದ್ದಾರೆ?
ಪುದುಚೇರಿಯ 30 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ, ಇದರಲ್ಲಿ ಐದು ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿವೆ. ಸರ್ಕಾರ ರಚಿಸಲು 16 ಸ್ಥಾನಗಳ ಬಹುಮತದ ಅಗತ್ಯವಿದೆ. ಸರಿಸುಮಾರು 4.43 ಲಕ್ಷ ಪುರುಷರು, 5 ಲಕ್ಷ ಮಹಿಳೆಯರು ಮತ್ತು 139 ತೃತೀಯ ಲಿಂಗದ ಮತದಾರರು ಸೇರಿದಂತೆ ಒಟ್ಟು 9.44 ಲಕ್ಷ ಮತದಾರರಿದ್ದಾರೆ.

ಪ್ರಚಾರ ಸ್ಥಗಿತ
ಏಪ್ರಿಲ್ 7 ರಂದು ಸಂಜೆ 6 ಗಂಟೆಗೆ ಎಲ್ಲಾ ಸಾರ್ವಜನಿಕ ಪ್ರಚಾರ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. 1951 ರ ಜನಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 126 ರ ಅಡಿಯಲ್ಲಿ ವಿಧಿಸಲಾದ ಈ ನಿರ್ಬಂಧಗಳು, ಮತದಾನ ಮುಗಿಯುವ ಕೊನೆಯ 48 ಗಂಟೆಗಳ ಮೊದಲು ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಮತ್ತು ಬೆಂಬಲಿಗರು ಸಾರ್ವಜನಿಕ ಸಭೆಗಳು, ರ್ಯಾಲಿಗಳು ಅಥವಾ ಮೆರವಣಿಗೆಗಳನ್ನು ಆಯೋಜಿಸುವುದನ್ನು ಅಥವಾ ಭಾಗವಹಿಸುವುದನ್ನು ನಿಷೇಧಿಸಲಾಗಿದೆ.

ಮತ್ತಷ್ಟು ಓದಿ: Tamil Nadu Assembly elections 2026: ತಮಿಳುನಾಡು ಚುನಾವಣೆಗೆ 27 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ, ಅಣ್ಣಾಮಲೈ ಹೆಸರಿಲ್ಲ

ತಮಿಳುನಾಡು ಮತ್ತು ಬಂಗಾಳದಲ್ಲಿ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಚಾರವನ್ನು ತೀವ್ರಗೊಳಿಸಿವೆ. ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ತಮಿಳುನಾಡಿನಲ್ಲಿ ಏಪ್ರಿಲ್ 23 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ಈ ಅವಧಿಯಲ್ಲಿ ಸಂಗೀತ ಪ್ರದರ್ಶನಗಳು, ನಾಟಕ ಪ್ರದರ್ಶನಗಳು ಅಥವಾ ಮತದಾರರ ಮೇಲೆ ಪ್ರಭಾವ ಬೀರಲು ಉದ್ದೇಶಿಸಿರುವ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ದೂರದರ್ಶನ, ಸಿನಿಮಾ ಅಥವಾ ಅಂತಹುದೇ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಚುನಾವಣೆಗೆ ಸಂಬಂಧಿಸಿದ ವಸ್ತುಗಳನ್ನು ಪ್ರದರ್ಶಿಸುವುದನ್ನು ಅಧಿಕಾರಿಗಳು ನಿಷೇಧಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Karnataka 2nd PUC Result 2026: ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಸಂಜೆ ರಿಸಲ್ಟ್ ಘೋಷಿಸಲಿದ್ದಾರೆ ಸಚಿವ ಮಧು ಬಂಗಾರಪ್ಪ!

ಬೆಂಗಳೂರು, ಏ.8: ದ್ವಿತೀಯ ಪಿಯುಸಿ ಪರೀಕ್ಷೆ ( 2nd PUC Result 2026) ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ನಾಳೆ, ಏಪ್ರಿಲ್ 9 ರಂದು ದ್ವಿತೀಯ ಪಿಯುಸಿ ಫಲಿತಾಂಶ ಅಧಿಕೃತವಾಗಿ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ರಾಜ್ಯದಲ್ಲಿ ನಾಳೆ ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿರುವುದರಿಂದ, ಮತದಾನದ ಪ್ರಕ್ರಿಯೆಗಳು ಮುಕ್ತಾಯವಾದ ನಂತರ ಸಂಜೆ ವೇಳೆಗೆ ಸಚಿವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶದ ವಿವರಗಳನ್ನು ಹಂಚಿಕೊಳ್ಳಲಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಈಗಾಗಲೇ ಅಂಕಪಟ್ಟಿ ಅಪ್‌ಲೋಡ್ ಮಾಡುವ ಎಲ್ಲಾ ತಾಂತ್ರಿಕ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಕರ್ನಾಟಕ ದ್ವಿತೀಯ ಪಿಯುಸಿ 2026 ಪರೀಕ್ಷೆ 1 ಅನ್ನು ಫೆಬ್ರವರಿ 28 ರಿಂದ ಮಾರ್ಚ್ 17, 2026 ರವರೆಗೆ 1,217 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು. ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2026 ಹೊರಬಂದ ನಂತರ, ಕರ್ನಾಟಕ ಮಂಡಳಿಯ ಫಲಿತಾಂಶ 2026 ರಲ್ಲಿ ತಮ್ಮ ಅಂಕಗಳಿಂದ ತೃಪ್ತರಾಗದ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು. ದ್ವಿತೀಯ ಪಿಯುಸಿ ಕರ್ನಾಟಕ ಫಲಿತಾಂಶ 2026 ಘೋಷಣೆಯ ನಂತರ ಮರುಮೌಲ್ಯಮಾಪನ ಮತ್ತು ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಯ ದಿನಾಂಕಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತದೆ. ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿ ಮತ್ತು ಮರು ಎಣಿಕೆ ಅರ್ಜಿಗಾಗಿ ಅರ್ಜಿಯು ಫಲಿತಾಂಶ ಪ್ರಕಟಣೆಯ ನಂತರ ಪ್ರಾರಂಭವಾಗುತ್ತದೆ.

ಇದನ್ನೂ ಓದಿ: ಹಿಂದಿ ಮಾತ್ರವಲ್ಲ, ಕನ್ನಡವೂ ಸೇರಿ 9 ಭಾಷೆಗಳಿಗೆ ಅನ್ವಯವಾಗಲಿದೆ ಗ್ರೇಡಿಂಗ್! ಗ್ರೇಡ್ ಕೊಡೋದು ಹೇಗೆ ಗೊತ್ತಾ?

ಫಲಿತಾಂಶಗಳನ್ನು ಪರಿಶೀಲಿಸುವುದು ಹೇಗೆ?

ಕರ್ನಾಟಕ 2026 ರ ದ್ವಿತೀಯ ಪಿಯುಸಿ ಫಲಿತಾಂಶವನ್ನು ಕೆಎಸ್ಇಎಬಿ ಏಪ್ರಿಲ್ 9, 2026 ರಂದು ಬಿಡುಗಡೆ ಮಾಡುತ್ತದೆ. ಕರ್ನಾಟಕ 2026 ರ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಸಕ್ರಿಯಗೊಳಿಸಿದ ನಂತರ ಫಲಿತಾಂಶವನ್ನು ಡೌನ್‌ಲೋಡ್ ಮಾಡಲು ಕೆಳಗೆ ನೀಡಲಾದ ಹಂತಗಳನ್ನು ಗಮನಿಸಿ.

ಹಂತ 1: ಮೊದಲು ಅಧಿಕೃತ ವೆಬ್‌ಸೈಟ್‌ಗೆ ಹೋಗುವುದು.

ಹಂತ 2: ಈಗ, ಮುಖಪುಟದಲ್ಲಿ, “ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2026” ಎಂದು ಸೂಚಿಸುವ ಲಿಂಕ್ ಅನ್ನು ಕ್ಲಿಕ್ ಮಾಡಿ.

ಹಂತ 3: ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ, ಪರದೆಯ ಮೇಲೆ ಹೊಸ ಲಾಗಿನ್ ವಿಂಡೋ ಕಾಣಿಸಿಕೊಳ್ಳುತ್ತದೆ.

ಹಂತ 4: ನೋಂದಣಿ ಸಂಖ್ಯೆ ಮತ್ತು ವಿಷಯ ಸಂಯೋಜನೆಯಂತಹ ಲಾಗಿನ್ ರುಜುವಾತುಗಳನ್ನು ನಮೂದಿಸಿ.

ಹಂತ 5: ಕರ್ನಾಟಕದ ದ್ವಿತೀಯ ಪಿಯುಸಿ ಅಂಕಗಳ ಮೆಮೊ ನಿಮ್ಮ ಪರದೆಯ ಮೇಲೆ ಪ್ರದರ್ಶನಗೊಳ್ಳುತ್ತದೆ.

ಹಂತ 6: ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಮತ್ತು ಬೇಕಾದರೆ ಅದನ್ನು ಕಾಪಿಯನ್ನು ತೆಗೆದುಕೊಳ್ಳಬಹುದು.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rates: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಏರಿಕೆ; ಇಲ್ಲಿದೆ ದರಪಟ್ಟಿ

ಬೆಂಗಳೂರು, ಏಪ್ರಿಲ್ 8: ಬಹಳ ದಿನಗಳ ನಂತರ ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಕೂಡ ಭಾರೀ ಪ್ರಮಾಣದಲ್ಲಿ ಹೆಚ್ಚಳ ಕಂಡಿವೆ. ಚಿನ್ನದ ಬೆಲೆ (Gold Rates) ಒಂದು ಗ್ರಾಮ್​ಗೆ 300ರಿಂದ 500 ರೂಗಳಷ್ಟು ಏರಿಕೆ ಪಡೆದಿದೆ. ಬೆಳ್ಳಿ ಬೆಲೆಯೂ ಕೂಡ ಒಂದು ಗ್ರಾಮ್​ಗೆ 10 ರೂನಷ್ಟು ದುಬಾರಿಗೊಂಡಿದೆ. ಚೀನಾ ದೇಶದ ಸೆಂಟ್ರಲ್ ಬ್ಯಾಂಕ್ ಸತತವಾಗಿ ಚಿನ್ನದ ಖರೀದಿ ಮಾಡುತ್ತಿರುವುದು ಬೆಲೆ ಹೆಚ್ಚಳಕ್ಕೆ ಒಂದು ಕಾರಣವಾಗಿರಬಹುದು. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,41,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,53,820 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,41,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 8ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,382 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,100 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,537 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,382 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,100 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,100 ರೂ
  • ಚೆನ್ನೈ: 14,200 ರೂ
  • ಮುಂಬೈ: 14,100 ರೂ
  • ದೆಹಲಿ: 14,115 ರೂ
  • ಕೋಲ್ಕತಾ: 14,100 ರೂ
  • ಕೇರಳ: 14,100 ರೂ
  • ಅಹ್ಮದಾಬಾದ್: 14,105 ರೂ
  • ಜೈಪುರ್: 14,115 ರೂ
  • ಲಕ್ನೋ: 14,115 ರೂ
  • ಭುವನೇಶ್ವರ್: 14,100 ರೂ

ಇದನ್ನೂ ಓದಿ: ಅಮೆರಿಕ, ಜಪಾನ್, ಜರ್ಮನಿಗೂ ಸಾಧ್ಯವಾಗದ ಅಡ್ವಾನ್ಸ್ಡ್ ರಿಯಾಕ್ಟರ್ ಸಾಧಿಸಿದ ಭಾರತ; ದೇಶದ ಇಂಧನ ಭವಿಷ್ಯ ಸುರಕ್ಷಿತ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 590 ರಿಂಗಿಟ್ (13,699 ರುಪಾಯಿ)
  • ದುಬೈ: 517.50 ಡಿರಾಮ್ (13,047 ರುಪಾಯಿ)
  • ಅಮೆರಿಕ: 145 ಡಾಲರ್ (13,420 ರುಪಾಯಿ)
  • ಸಿಂಗಾಪುರ: 191.30 ಸಿಂಗಾಪುರ್ ಡಾಲರ್ (13,889 ರುಪಾಯಿ)
  • ಕತಾರ್: 514 ಕತಾರಿ ರಿಯಾಲ್ (13,047 ರೂ)
  • ಸೌದಿ ಅರೇಬಿಯಾ: 530 ಸೌದಿ ರಿಯಾಲ್ (13,063 ರುಪಾಯಿ)
  • ಓಮನ್: 55.20 ಒಮಾನಿ ರಿಯಾಲ್ (13,270 ರುಪಾಯಿ)
  • ಕುವೇತ್: 42.95 ಕುವೇತಿ ದಿನಾರ್ (12,953 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 260 ರೂ
  • ಚೆನ್ನೈ: 265 ರೂ
  • ಮುಂಬೈ: 260 ರೂ
  • ದೆಹಲಿ: 260 ರೂ
  • ಕೋಲ್ಕತಾ: 260 ರೂ
  • ಕೇರಳ: 265 ರೂ
  • ಅಹ್ಮದಾಬಾದ್: 260 ರೂ
  • ಜೈಪುರ್: 260 ರೂ
  • ಲಕ್ನೋ: 260 ರೂ
  • ಭುವನೇಶ್ವರ್: 265 ರೂ
  • ಪುಣೆ: 260

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕಾರ್ಪೊರೇಟ್ ಕೆಲಸ ತೊರೆದು ಕ್ಲೌಡ್ ಕಿಚನ್ ಶುರು ಮಾಡಿದ ಯುವ ಉದ್ಯಮಿ!

ಬೆಂಗಳೂರು, ಏಪ್ರಿಲ್ 08: ಓದು ಮುಗಿಸಿ, ಕೆಲಸ ಹಿಡಿದು, ಆರಾಮದಾಯಕ ಜೀವನ ಕಟ್ಟಿಕೊಂಡರೆ ಸಾಕು ಎನ್ನುವ ಮನೋಭಾವ ಹಲವು ಯುವಕರಿಗಿದೆ. ಆದರೆ ಕೆಲವೇ ಕೆಲವರು ಮಾತ್ರ ರಿಸ್ಕ್ ತೆಗೆದುಕೊಂಡು ತಾವೇ ಒಂದು ಸ್ಟಾರ್ಟ್​ಅಪ್ (Startup) ಮಾಡಲು ಮುಂದಾಗುತ್ತಾರೆ. ಅಂತೆಯೇ ನಗರದಲ್ಲಿ ಯುವ ಉದ್ಯಮಿಯೊಬ್ಬರು ತಮ್ಮ ಕಾರ್ಪೊರೇಟ್ ವೃತ್ತಿಯನ್ನು ತೊರೆದು ಹೊಸ ಪ್ರಯೋಗಕ್ಕೆ ಕೈಹಾಕಿರುವ ಘಟನೆ ಗಮನಸೆಳೆದಿದೆ. ನಗರದ ಎಲೆಕ್ಟ್ರಾನಿಕ್ ಸಿಟಿ ಫೇಸ್ 1 ಪ್ರದೇಶದ 23 ವರ್ಷದ ವ್ಯಕ್ತಿಯೊಬ್ಬರು ತಮ್ಮದೇ ಫ್ಲಾಟ್‌ನಿಂದ ಕ್ಲೌಡ್ ಕಿಚನ್ ಆರಂಭಿಸಿ ಸ್ವಯಂ ಉದ್ಯಮದ ದಾರಿಗೆ ಹೆಜ್ಜೆಯಿಟ್ಟಿದ್ದಾರೆ.

ವ್ಯಕ್ತಿಯ ಪೋಸ್ಟ್​ನಲ್ಲೇನಿದೆ?

ಸ್ವಂತವಾಗಿ ಎಲ್ಲ ಕಾರ್ಯಗಳನ್ನು ನಿರ್ವಹಿಸುವ ಈ ವ್ಯಕ್ತಿ, ಅಡುಗೆ ಮಾಡುವುದರಿಂದ ಹಿಡಿದು ಸ್ವಚ್ಛತೆ, ಪ್ಯಾಕಿಂಗ್ ಮತ್ತು ವಿತರಣೆಯವರೆಗೆ ಎಲ್ಲಾ ಜವಾಬ್ದಾರಿಗಳನ್ನು ತಾನೇ ಹೊರುವುದಾಗಿ ಹೇಳಿದ್ದಾರೆ. ಕಡಿಮೆ ಬಂಡವಾಳದಲ್ಲೇ ಈ ಪ್ರಯತ್ನ ಆರಂಭಿಸಿದ್ದು, ಮುಖ್ಯವಾಗಿ ಆಹಾರ ಪ್ಯಾಕೇಜಿಂಗ್ ಹಾಗೂ ಆನ್‌ಲೈನ್ ಆಹಾರ ವಿತರಣೆ ವೇದಿಕೆ ಜೊಮಾಟೋದಲ್ಲಿ ನೋಂದಣಿ ಮಾಡಲು ಮಾತ್ರ ಹಣ ಬಳಸಿರುವುದಾಗಿ ತಿಳಿಸಿದ್ದಾರೆ.

ತನ್ನ ಈ ನಿರ್ಧಾರವನ್ನು ಅವರು ತಮ್ಮ ರೆಡಿಟ್ ಖಾತೆಯಲ್ಲಿ ಹಂಚಿಕೊಂಡಿದ್ದು, 23ನೇ ವಯಸ್ಸಿನಲ್ಲಿ ಕೆಲಸ ಬಿಟ್ಟು ನಾನು ಇಂದು ಧೈರ್ಯದಿಂದ ಒಂದು ಹೆಜ್ಜೆ ಮುಂದಿಟ್ಟಿದ್ದೇನೆ ಎಂದು ಬರೆದುಕೊಂಡಿದ್ದಾರೆ. ನನ್ನ ಬಳಿ ದೊಡ್ಡ ಯೋಜನೆ ಅಥವಾ ಹೆಚ್ಚಿನ ಹಣವಿಲ್ಲ. ಆದರೆ ಸ್ವಂತವಾಗಿ ಏನಾದರೂ ಮಾಡಲು ಮನಸ್ಸಾಯಿತು ಎಂದು ತನ್ನ ನಿರ್ಧಾರವನ್ನು ವಿವರಿಸಿದ್ದಾರೆ.

ಇದೇ ವೇಳೆ, ಈ ಪ್ರಯತ್ನ ಯಶಸ್ವಿಯಾಗುತ್ತದೆಯೋ ಅಥವಾ ವಿಫಲವಾಗುತ್ತದೆಯೋ ಎಂಬುದು ತಿಳಿದಿಲ್ಲ ಎಂದು ಬರೆದುಕೊಂಡಿರುವ ಬಳಕೆದಾರ, ಯಾವುದೇ ಫಲಿತಾಂಶ ಬಂದರೂ ತನ್ನ ಅನುಭವಗಳನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.

ಈ ಘಟನೆ ಇಂದಿನ ಯುವಜನರಲ್ಲಿ ಹೆಚ್ಚುತ್ತಿರುವ ಸ್ಟಾರ್ಟ್‌ಅಪ್ ಮನೋಭಾವ ಮತ್ತು ಅಪಾಯ ಸ್ವೀಕರಿಸುವ ಧೈರ್ಯವನ್ನು ಪ್ರತಿಬಿಂಬಿಸುತ್ತದೆ. ಸಾಂಪ್ರದಾಯಿಕ ಉದ್ಯೋಗಗಳನ್ನು ಬಿಟ್ಟು ಸ್ವಂತ ಉದ್ಯಮ ಆರಂಭಿಸುವ ಪ್ರವೃತ್ತಿ ನಗರಗಳಲ್ಲಿ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ.

ಇದನ್ನೂ ಓದಿ ಹಿಂದಿ ಮಾತ್ರವಲ್ಲ, ಕನ್ನಡವೂ ಸೇರಿ 9 ಭಾಷೆಗಳಿಗೆ ಅನ್ವಯವಾಗಲಿದೆ ಗ್ರೇಡಿಂಗ್! ಗ್ರೇಡ್ ಕೊಡೋದು ಹೇಗೆ ಗೊತ್ತಾ?

ನೆಟ್ಟಿಗರ ರಿಯಾಕ್ಷನ್ ಏನು?

ವ್ಯಕ್ತಿಯ ಹೊಸ ನಿರ್ಧಾರಕ್ಕೆ ಪ್ರೋತ್ಸಾಹಿಸಿರುವ ನೆಟ್ಟಿಗರು ತರಹೇವಾರಿ ಕಾಮೆಂಟ್ ಹಾಕಿದ್ದಾರೆ. ಒಬ್ಬ ಯೂಸರ್, ನಿಮ್ಮ ಕ್ಲೌಡ್ ಕಿಚನ್ ಹೆಸರು ತಿಳಿಸಿ; ನಾವು ಪ್ರಚಾರ ಮಾಡುತ್ತೇವೆ ಎಂದರೆ, ಇನ್ನೊಬ್ಬ ಯೂಸರ್, ನೀವು ತಯಾರಿಸುವ ಆಹಾರದ ಸುಂದರವಾದ ಫೋಟೋಗಳನ್ನು ಹಾಕಿಕೊಳ್ಳಿ ಮತ್ತು ಆ ತಿನಿಸಿನ ಕುರಿತ ಮಾಹಿತಿ ಹಂಚಿಕೊಳ್ಳಿ ಎಂದಿದ್ದಾರೆ.

ಇನ್ನೂರ್ವ ಕಾಮೆಂಟ್ ಮಾಡಿ, ಇದೇ ರೀತಿಯ ಪ್ರಯತ್ನ ಮಾಡುತ್ತಿದ್ದ ದಂಪತಿಗೆ ತಾನೂ ಏರ್ ಫ್ರೈಯರ್ ಮಾರಾಟ ಮಾಡುದ್ದು, ಇಂದಿನ ಆರ್ಥಿಕತೆಗೆ ನಮ್ಮ ಸ್ವಂತ ವ್ಯವಹಾರ ಇರುವುದು ಒಳಿತು. ಸಂಬಳವನ್ನೇ ನಂಬಿ ಕೂರುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link