Category Archives: Blog

Your blog category

ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ. ದೇವೇಗೌಡ – Kannada News | HDD Pooja at Haradanahalli Temple before Hassan JDS Convention

ಹಾಸನ, ಡಿಸೆಂಬರ್ 29: ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರಿಗೆ ಹಾಗೂ ಹರಪನಹಳ್ಳಿಯ ದೇವೇಶ್ವರಸ್ವಾಮಿ ದೇವಸ್ಥಾನದಲ್ಲಿ ಜೆಡಿಎಸ್ ನಾಯಕ ಎಚ್.ಡಿ.ದೇವೇಗೌಡ ವಿಶೇಷ ಪೂಜೆ ಸಲ್ಲಿಸಿದರು. ಪುತ್ರ ಎಚ್.ಡಿ.ರೇವಣ್ಣ, ಸೊಸೆ ಭವಾನಿ ರೇವಣ್ಣ ಜೊತೆಯಿದ್ದರು. ಹಾಸನದಲ್ಲಿ ನಡೆಯಲಿರುವ ಜೆಡಿಎಸ್ ಕಾರ್ಯಕರ್ತರ ಸಮಾವೇಶಕ್ಕೂ ಮುನ್ನ ಪೂಜೆ ನೆರವೇರಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಧರ್ಮಸ್ಥಳ ಕೇಸ್​: ‘ಬುರುಡೆ’ ಕಾಟಕ್ಕೆ ಬೆಚ್ಚಿಬಿದ್ದಿದ್ದ ಆತ​​; SIT ವರದಿಯಲ್ಲಿ ಸ್ಫೋಟಕ ಮಾಹಿತಿ – Kannada News | Dharmasthala Case: SIT Report Reveals Skull Terrorized Conspirator Jayanth

ಮಂಗಳೂರು, ಡಿಸೆಂಬರ್​​ 29: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಅಪಪ್ರಚಾರ ಆರೋಪ ಪ್ರಕರಣ ಸಂಬಂಧ ಕೋರ್ಟ್​ಗೆ ಎಸ್​ಐಟಿ ಸಲ್ಲಿಸಿದ ಪ್ರಾಥಮಿಕ ವರದಿ ಹಲವಾರು ಕುತೂಹಲಕಾರಿ ಅಂಶಗಳನ್ನು ಬಹಿರಂಗಗೊಳಿಸಿದೆ. ಧರ್ಮಸ್ಥಳದ ವಿರುದ್ಧ ಆರೋಪ ಹೊರಿಸಿದ್ದ ಬುರುಡೆ ಗ್ಯಾಂಗ್​​ ಸದಸ್ಯನೋರ್ವನಿಗೆ ಅವರು ತಂದಿದ್ದ ಬುರುಡೆಯೇ ಕಾಟ ಕೊಟ್ಟಿತ್ತು ಎನ್ನುವ ಮಾಹಿತಿ SIT ವರದಿಯಲ್ಲಿ ಉಲ್ಲೇಖವಾಗಿದೆ.

ಗ್ಯಾಂಗ್​​ ಸದಸ್ಯ ಜಯಂತ್​​ ಬುರುಡೆಯನ್ನ ರೈಲಿನ ಮೂಲಕ ದೆಹಲಿಗೂ ತೆಗೆದುಕೊಂಡು ಹೋಗಿದ್ದ. ಇತರರಾದ ಚಿನ್ನಯ್ಯ, ಗಿರೀಶ್ ಮಟ್ಟಣ್ಣನವರ್ ಮತ್ತು ಸುಜಾತಾ ಫ್ಲೈಟ್​​ ಮೂಲಕ ತೆರಳಿದ್ದರು. ಈ ವೇಳೆ ಒಂದೇ ರೂಂನಲ್ಲಿ ಚಿನ್ನಯ್ಯ, ಮಟ್ಟಣ್ಣನವರ್​ ಮತ್ತು ಜಯಂತ್​ ಮಲಗಿದ್ದ ವೇಳೆ ಕೆಟ್ಟ ಕನಸು ಬಿದ್ದು ಜಯಂತ್​​ ಕಿರುಚಿಕೊಂಡಿದ್ದ. ಇದೇ ಕಅರಣಕ್ಕೆ ಹೆದರಿ ವಾಪಸ್ ಬುರುಡೆ ತರಲು ಒಪ್ಪದೆ ಅದನ್ನು ದೆಹಲಿಯಲ್ಲೇ ಬಿಟ್ಟು ಬೆಂಗಳೂರಿಗೆ ವಾಪಸ್ ಆಗಿದ್ದ. ಬಳಿಕ ಮತ್ತೆ ವಿಮಾನದ ಮೂಲದ ದೆಹಲಿಗೆ ತೆರಳಿದ್ದ ಜಯಂತ್​, ರೈಲಿನ ಮೂಲಕ ದೆಹಲಿಯಿಂದ ನೇರವಾಗಿ ಮಂಗಳೂರಿಗೆ ಬುರುಡೆ ತಂದಿದ್ದ. ತಿಮರೋಡಿ ಮನೆಗೆ ಅದನ್ನು ಕೊಂಡೊಯ್ದಿದ್ದ ಎಂದು ವರದಿಯಲ್ಲಿ ಎಸ್​​ಐಟಿ ಉಲ್ಲೇಖಿಸಿದೆ.

ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್​​ಗೆ ಮೇಜರ್​​ ಟ್ವಿಸ್ಟ್​​; SIT ತನಿಖೆಯಿಂದ ಕೊನೆಗೂ ಬಯಲಾಯ್ತು ಸತ್ಯ!

ಬುರುಡೆ ಜೊತೆ ರಾತ್ರಿ ಕಳೆದಿದ್ದ ಸುಜಾತಾ

ದೆಹಲಿಯಲ್ಲಿ ಪ್ರತ್ಯೇಕ ರೂಮ್​ನಲ್ಲಿ ಇದ್ದ ಸುಜಾತಾ ಭಟ್ ಅರಿವಿಲ್ಲದೇ ಬುರುಡೆ ಜೊತೆ ರಾತ್ರಿ ಕಳೆದಿದ್ದರು. ದೆಹಲಿಯ ವಿಠ್ಠಲ ಮಂದಿರದಲ್ಲಿ ಆರೋಪಿಗಳು ರೂಂ ಮಾಡಿದ್ದು, ಸುಜಾತಾ ಭಟ್ ಇದ್ದ ರೂಂ ಮಂಚದ ಕೆಳಗೆ ಜಯಂತ್ ಬುರುಡೆ ಬಾಕ್ಸ್​​ ಇಟ್ಟಿದ್ದ. ಈ ವೇಳೆ ಬಾಕ್ಸ್​ನಲ್ಲಿ ಏನಿದೆ ಅಂತಾ ಸುಜಾತಾ ಭಟ್ ಕೇಳಿದ್ದು, ಏನಿಲ್ಲ ಅಂತಾ ಹೇಳಿ ಜಯಂತ್ ಸುಮ್ಮನಾಗಿದ್ದ. ಹೀಗಾಗಿ ಅಂದು ರಾತ್ರಿ ಸುಜಾತಾ ಭಟ್ ಮಲಗಿದ್ದ ಮಂಚದ ಕೆಳಗೇ ಬುರುಡೆ ಇತ್ತು. ಅದೇ ರಾತ್ರಿ ಜಯಂತ್​​​ಗೆ ಕೆಟ್ಟ ಕನಸು ಕೂಡ ಬಿದ್ದಿತ್ತು ಎಂದು ಕೋರ್ಟ್​ಗೆ ಎಸ್​ಐಟಿ ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ – Kannada News | Bangladesh: House Set Ablaze in Pirojpur Amid Unrest, Authorities Probe Incident

ಬಾಂಗ್ಲಾದೇಶ, ಡಿಸೆಂಬರ್ 29: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ಮತ್ತಷ್ಟು ಹೆಚ್ಚಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆಗೆ ಬೆಂಕಿ ಹಚ್ಚಲಾಗಿದೆ. ಹಿಂದೂ ಯುವಕ ದೀಪು ಚಂದ್ರ ದಾಸ್‌ ಗುಂಪು ಹತ್ಯೆ ಖಂಡಿಸಿ ಕೋಲ್ಕತ್ತಾ ಮತ್ತು ಪಶ್ಚಿಮ ಬಂಗಾಳದಾದ್ಯಂತ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗಳು ಒಂದೆಡೆ ನಡೆಯುತ್ತಿವೆ. ಪಿರೋಜ್‌ಪುರದ ಡುಮ್ರಿಟೋಲಾ ಗ್ರಾಮದಲ್ಲಿರುವ ಸಹಾ ಅವರ ನಿವಾಸಕ್ಕೆ ಬೆಂಕಿ ಹಚ್ಚಲಾಗಿದೆ.

ಚಟ್ಟೋಗ್ರಾಮ್‌ನ ರೌಜಾನ್‌ನಲ್ಲಿ, ಜಿಹಾದಿಗಳು ಬೆಳಗಿನ ಜಾವ ಹಿಂದೂ ಮನೆಗಳಿಗೆ ಅದೇ ರೀತಿ ಬೆಂಕಿ ಹಚ್ಚಿದ್ದರು. ದೇಶದಲ್ಲಿ ಉಳಿದಿರುವ ಎಲ್ಲಾ ಹಿಂದೂ ಮನೆಗಳನ್ನು ಹೀಗೆಯೇ ಸುಡುತ್ತಾರೆಯೇ? ಹಿಂದೂಗಳನ್ನು ಸಜೀವದಹನ ಮಾಡುವುದೇ ಅವರ ಗುರಿಯೇ ಎನ್ನುವ ಅನುಮಾನ ಮೂಡಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸಿಎಂ ಹೇಳಿ 20 ದಿನವಾದ್ರೂ ಬಂದಿಲ್ಲ ಗೃಹಲಕ್ಷ್ಮಿ ದುಡ್ಡು, ಎಲ್ಲೋಯ್ತು 5 ಸಾವಿರ ಕೋಟಿ ರೂ: ಮಹೇಶ್ ಟೆಂಗಿನಕಾಯಿ ಪ್ರಶ್ನೆ – Kannada News | Gruhalakshmi Scheme money Payment Delay once again Sparks Political Row in Karnataka

ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಹಾಗೂ ಗೃಹಲಕ್ಷ್ಮಿ ಯೋಜನೆ ಸಂಗ್ರಹ ಚಿತ್ರ

ಹುಬ್ಬಳ್ಳಿ, ಡಿಸೆಂಬರ್ 29: ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣ ಬಿಡುಗಡೆಗೆ ಸಂಬಂಧಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ (BJP) ಶಾಸಕ ಮಹೇಶ್ ಟೆಂಗಿನಕಾಯಿ (Mahesh Tenginakai) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನೂ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ ಎಂದು ಆರೋಪಿಸಿದರು.

ಈ ವಿಷಯವನ್ನು ತಾವು ವಿಧಾನಸಭೆ ಅಧಿವೇಶನದಲ್ಲೇ ಪ್ರಸ್ತಾಪಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ತಂದಿರುವುದಾಗಿ ತಿಳಿಸಿದರು. ಅಧಿವೇಶನದ ವೇಳೆ ಸಿಎಂ ಆದಷ್ಟು ಬೇಗ ಹಣ ವರ್ಗಾವಣೆ ಮಾಡುವ ಭರವಸೆ ನೀಡಿದ್ದರು. ಆದರೆ ಸಿಎಂ ಹೇಳಿ ಇಪ್ಪತ್ತು ದಿನಗಳಾದರೂ ಮಹಿಳೆಯರ ಖಾತೆಗೆ ಹಣ ಬಂದಿಲ್ಲ ಎಂದು ಟೀಕಿಸಿದರು.

ಐದು ಸಾವಿರ ಕೋಟಿ ರೂ. ಹಣ ಎಲ್ಲಿ: ಟೆಂಗಿನಕಾಯಿ ಪ್ರಶ್ನೆ

ಪೂರಕ ಬಜೆಟ್‌ನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅಗತ್ಯವಿರುವ ಐದು ಸಾವಿರ ಕೋಟಿ ರೂಪಾಯಿ ಹಣದ ಯಾವುದೇ ಪ್ರಸ್ತಾಪವೇ ಇಲ್ಲ. ಹಾಗಾದರೆ ಆ ಹಣ ಎಲ್ಲಿ ಹೋಯ್ತು ಎಂಬುದು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಟೆಂಗಿನಕಾಯಿ ಆಗ್ರಹಿಸಿದರು.

ಇನ್ನು ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪವಾದ ನಂತರ ಅಧಿಕಾರಿಗಳಿಗೆ ಮಾಹಿತಿ ನೀಡದಂತೆ ತಾಕೀತು ಮಾಡಲಾಗಿದೆ ಎಂದು ಮಹೇಶ್ ಟೆಂಗಿನಕಾಯಿ ಆರೋಪಿಸಿದರು. ಹತ್ತನೇ ತಾರೀಖಿನಿಂದಲೇ ಅಧಿಕಾರಿಗಳಿಗೆ ಮಾಹಿತಿ ನೀಡದಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರಿಗೆ ಫೆಬ್ರವರಿ–ಮಾರ್ಚ್ ತಿಂಗಳ ಹಣದ ಬಗ್ಗೆ ಮಾಹಿತಿ ಕೇಳಿದ್ದರೂ ಸ್ಪಷ್ಟ ಉತ್ತರ ಸಿಕ್ಕಿಲ್ಲ ಎಂದರು.

ಇದನ್ನೂ ಓದಿ: ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ಸದನದಲ್ಲಿ ವಿಷಾದ ವ್ಯಕ್ತಪಡಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಕ್ಷಮೆಗೆ ಪ್ರತಿಪಕ್ಷ ಪಟ್ಟು

ಇತರೆ ಜಿಲ್ಲೆಗಳಿಗೂ ಮಾಹಿತಿ ಕೇಳಿದರೂ ಯಾರೂ ಪ್ರತಿಕ್ರಿಯಿಸಿಲ್ಲ. ಮೊದಲು ಹಣ ಜಮೆಯಾಗಿದೆ ಎಂಬ ಗೊಂದಲಕಾರಿ ಉತ್ತರ ನೀಡಿದ ಅಧಿಕಾರಿಗಳು, ನಂತರ ಕೆಲ ಜಿಲ್ಲೆಗಳಲ್ಲಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಇನ್ನೂ ಜಮೆಯಾಗಿಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ಮಹೇಶ್ ಟೆಂಗಿನಕಾಯಿ ಹೇಳಿದರು. ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು – Kannada News | I Will Never Accept Gilli or Any one as a winner Malu explain

ಮಾಳು ನಿಪನಾಳ್ ಅವರು ಬಿಗ್ ಬಾಸ್ ಅಲ್ಲಿ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಎರಡು ವಾರ ಮಾತ್ರ ಇರಬಹುದು ಎಂಬುದು ಅವರ ಊಹೆ ಆಗಿತ್ತು. ಆದರೆ, ಅವರು 90 ದಿನ ಇದ್ದರು. ‘ಇಷ್ಟು ದಿನ ಜನರು ವೋಟ್ ಹಾಕಿ ಉಳಿಸಿದ್ದಾರೆ. ನಾನು ಫಿನಾಲೆವರೆಗೆ ಇದ್ದು ಕಪ್ ಗೆಲ್ಲಬೇಕಿತ್ತು. ನಾನು ಹೊರ ಬಂದಿದ್ದಕ್ಕೆ ಇಡೀ ಉತ್ತರ ಕರ್ನಾಟಕ ಅಳುತ್ತಿದೆ. ಈ ಬಾರಿ ಯಾರೇ ವಿನ್ ಆದರೂ ಅದನ್ನು ನಾನು ಒಪ್ಪಲ್ಲ’ ಎಂದು ಮಾಳು ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ – Kannada News | Deadly Train Derailment in Southern Mexico Leaves at Least 13 Dead

ಮೆಕ್ಸಿಕೋ, ಡಿಸೆಂಬರ್ 29: ದಕ್ಷಿಣ ಮೆಕ್ಸಿಕೋದಲ್ಲಿ ರೈಲು ಹಳಿ ತಪ್ಪಿದ ಪರಿಣಾಮ 13 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಈ ಅಪಘಾತದಿಂದಾಗಿ ಪೆಸಿಫಿಕ್ ಮಹಾಸಾಗರವನ್ನು ಮೆಕ್ಸಿಕೋ ಕೊಲ್ಲಿಯೊಂದಿಗೆ ಸಂಪರ್ಕಿಸುವ ರೈಲು ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಇಂಟರ್ ಓಷಿಯಾನಿಕ್ ರೈಲು ನಿಜಾಂಡಾ ಪಟ್ಟಣದ ಬಳಿ ಹಾದುಹೋಗುವಾಗ ಹಳಿತಪ್ಪಿತು.

ಓಕ್ಸಾಕ ಮತ್ತು ವೆರಾಕ್ರೂಜ್ ಅನ್ನು ಸಂಪರ್ಕಿಸುವ ರೈಲು ಅಪಘಾತ ಸಂಭವಿಸಿದಾಗ 241 ಪ್ರಯಾಣಿಕರು ಮತ್ತು ಒಂಬತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು. ಇಂಟರ್‌ಓಷಿಯಾನಿಕ್ ರೈಲನ್ನು 2023 ರಲ್ಲಿ ಆಗಿನ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಉದ್ಘಾಟಿಸಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಾಮ್ ಚರಣ್​ನ ಯಶ್ ಎಂದು ಕರೆದ ಕ್ಯಾಮೆರಾ ಮೆನ್; ಮುಂದೇನಾಯ್ತು? – Kannada News | Paparazzi Confused Ram Charan As Yash call Him as Yash Yash

ನಟ ರಾಮ್ ಚರಣ್ ಅವರು ಸದ್ಯ ‘ಪೆದ್ದಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರವನ್ನು ಬುಚ್ಚಿ ಬಾಬು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಈದ್​​ಗೆ ರಿಲೀಸ್ ಆಗಲಿದೆ ಎಂಬ ಟಾಕ್ ಇದೆ. ಈ ಮಧ್ಯೆ ರಾಮ್ ಚರಣ್ ಅವರ ಹೊಸ ವಿಡಿಯೋ ವೈರಲ್ ಆಗಿದೆ. ಲುಕ್ ನೋಡಿ ಅವರನ್ನು ಅನೇಕರು ಯಶ್ (Yash) ಎಂದು ಭಾವಿಸಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.

ಯಶ್ ಹಾಗೂ ರಾಮ್ ಚರಣ್ ಮಧ್ಯೆ ಹೋಲಿಕೆ ಕಂಡು ಬಂದಿದೆ. ರಾಮ್ ಚರಣ್ ಉದ್ದನೆಯ ಗಡ್ಡ ಹಾಗೂ ಕೂದಲು ಬಿಟ್ಟಿದ್ದಾರೆ. ಯಶ್ ಕೂಡ ಇದೇ ಹೇರ್​​ಸ್ಟೈಲ್ ಹಾಗೂ ಉದ್ದನೆಯ ಗಡ್ಡ ಬಿಟ್ಟು ಕಾಣಿಸಿಕೊಳ್ಳುತ್ತಾರೆ. ಈ ಕಾರಣದಿಂದ ರಾಮ್ ಚರಣ್ ಅವರನ್ನು ಕೆಲವರು ಯಶ್ ಎಂದು ಕನ್​​ಫ್ಯೂಸ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್​​’ಗೆ ಹೆದರಿ ಸಂಪ್ರದಾಯ ಮುರಿದ ನಟ ಸಲ್ಮಾನ್ ಖಾನ್; ಇದು ಯಶ್ ಪವರ್

ಮುಂಬೈನಲ್ಲಿ ರಾಮ್​ ಚರಣ್ ಅವರು ಕಾಣಿಸಿಕೊಂಡಿದ್ದರು. ಈ ವೇಳೆ ಕಾರನ್ನು ಮುತ್ತಿಕೊಂಡ ಪಾಪರಾಜಿಗಳು, ‘ಯಶ್ ಯಶ್’ ಎಂದು ಕೂಗಿದ್ದಾರೆ. ಇದರಿಂದ ರಾಮ್ ಚರಣ್​​ಗೆ ಮುಜುಗರ ಆಗಿದೆ. ತಮಗೆ ಬೇರೆ ನಟರ ಹೆಸರಿಂದ ಕರೆಯುತ್ತಿರುವುದಕ್ಕೆ ಅವರು ಬೇಸರ ಮಾಡಿಕೊಂಡಿದ್ದಾರೆ. ನಂತರ ತಪ್ಪಿನ ಅರಿವಾಗಿ, ‘ರಾಮ್ ಚರಣ್’ ಎಂದು ಕರೆಯಲಾಗಿದೆ. ಈ ವಿಡಿಯೋ ವೈರಲ್ ಆಗಿದೆ.

‘ರಾಮ್ ಚರಣ್ ಯಾರು ಹಾಗೂ ಯಶ್ ಯಾರು ಎಂದು ಗೊತ್ತಿಲ್ಲದೆ ಇದ್ದವರು ಮಾಡುವ ಎಡವಟ್ಟು ಅಷ್ಟೇ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ‘ಇಬ್ಬರ ಮಧ್ಯೆ ಸಾಮ್ಯತೆ ಇದೆ’ ಎಂದಿದ್ದಾರೆ. ಇನ್ನೂ ಕೆಲವರು, ಯಶ್ ನಟನೆಯ ‘ಟಾಕ್ಸಿಕ್’ ಹಾಗೂ ‘ಪೆದ್ದಿ’ ಸಿನಿಮಾ ಒಂದೇ ದಿನ ಬರಬಾರದು ಏಕೆ ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

New Year 2026: ಮೋಜು-ಮಸ್ತಿ ಮಾತ್ರವಲ್ಲ, ಈ ರೀತಿಯೂ ಅರ್ಥಪೂರ್ಣವಾಗಿ ಹೊಸ ವರ್ಷವನ್ನು ಆಚರಿಸಬಹುದು – Kannada News | New Year 2026: If you don’t like parties, celebrate New Year this way

2025 ನೇ ವರ್ಷ ಮುಗಿಯುತ್ತಾ ಬಂತು ಇನ್ನೇನೂ ಹೊಸ ಭರವಸೆ, ಉತ್ಸಾಹದೊಂದಿಗೆ 2026 ಕ್ಕೆ ಕಾಲಿಡುತ್ತಿದ್ದೇವೆ. ಹೆಚ್ಚಿನವರು ಹೊಸ ವರ್ಷವನ್ನು (New Year) ಪಾರ್ಟಿ,  ತಮ್ಮ ನೆಚ್ಚಿನ ಸ್ಥಳಕ್ಕೆ ಟ್ರಿಪ್‌ ಹೋಗುವ ಮೂಲಕ ಅಲ್ಲಿ ಮೋಜಿ-ಮಸ್ತಿ ಮಾಡುತ್ತಾ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳುತ್ತಾರೆ. ಆದ್ರೆ ಕೆಲವರಿಗೆ ಈ ಗದ್ದಲಗಳು ಇಷ್ಟವಾಗುವುದಿಲ್ಲ, ಮನಸ್ಸಿಗೆ ನೆಮ್ಮದಿ, ತೃಪ್ತಿ ಸಿಗುವಂತಹ ಕಾರ್ಯಗಳನ್ನು ಮಾಡಲು ಮಾಡಲು ಬಯಸುತ್ತಾರೆ. ನೀವು ಕೂಡ ಈ ಬಾರಿ ತಡರಾತ್ರಿಯ ಮೋಜು-ಮಸ್ತಿನಿಂದ ಕೊಂಚ ದೂರವಿದ್ದು, ಅರ್ಥಪೂರ್ಣವಾಗಿ ಹೊಸ ವರ್ಷವನ್ನು ಆಚರಿಸಲು ಬಯಸುತ್ತೀರಾ? ಹಾಗಿದ್ರೆ ನೀವು ಈ ರೀತಿ ಸರಳವಾಗಿ ನ್ಯೂ ಇಯರ್‌ ಆಚರಿಸಿ.

ಹೊಸ ವರ್ಷವನ್ನು ಈ ರೀತಿ ಅರ್ಥಪೂರ್ಣವಾಗಿ ಆಚರಿಸಿ:

ಪ್ರಕೃತಿಯೊಂದಿಗೆ ಸಮಯವನ್ನು ಕಳೆಯಿರಿ: ಗದ್ದಲಗಳಿಂದ ದೂರವಿದ್ದು, ಶಾಂತ ಮನಸ್ಸಿನಿಂದ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಆಸೆಯಿದ್ದರೆ ನೀವು ಪ್ರಕೃತಿಯೊಂದಿಗೆ ಸಮಯವನ್ನು ಕಳೆಯಬಹುದು. ಹೊಸ ವರ್ಷದ ದಿನದಂದು ಮುಂಜಾನೆ ಬೇಗ ಎದ್ದು, ಒಂದೊಳ್ಳೆ ಸ್ಥಳಕ್ಕೆ ಸೂರ್ಯೋದಯವನ್ನು ವೀಕ್ಷಿಸಲು ಹೋಗಬಹುದು, ಉದ್ಯಾನವನ, ಸರೋವರ  ಸೇರಿದಂತೆ ಪ್ರಕೃತಿಯ ಮಡಿಲಲ್ಲಿ ಸಮಯವನ್ನು ಕಳೆಯಿಯಿ. ಇದು ನಿಮ್ಮ ಮನಸ್ಸಿನ ಒತ್ತಡವನ್ನೆಲ್ಲಾ ದೂರ ಮಾಡಿ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ.

ಡಿಜಿಟಲ್ ಡಿಟಾಕ್ಸ್: ನಾವು ಫೋನನ್ನು ಬಿಟ್ಟು ಇರುವುದೇ ಇಲ್ಲ. ಹೀಗಿರುವಾಗ ಹೊಸ ವರ್ಷವನ್ನು ಡಿಜಿಟಲ್‌ ಡಿಟಾಕ್ಸ್‌ ದಿನವನ್ನಾಗಿ ಮಾಡಿ. ಫೋನ್‌, ಲ್ಯಾಪ್‌ಟಾಪ್‌ ಪರದೆಯಿಂದ ಸ್ವಲ್ಪ ದೂರವಿದ್ದು, ನಿಮ್ಮ ನೆಚ್ಚಿನ ಪುಸ್ತಕವನ್ನು ಓದಿ ಅಥವಾ ಮನಸ್ಸಿಗೆ ಶಾಂತಿ ನೀಡುವ ಸ್ಥಳಕ್ಕೆ ಭೇಟಿ ನೀಡಿ.  ಖಂಡಿತವಾಗಿಯೂ ಇದು ಪಾರ್ಟಿಗಳಿಗಿಂತ ಹೆಚ್ಚಿನ ತೃಪ್ತಿಯನ್ನು ಮನಸ್ಸಿಗೆ ನೀಡುತ್ತದೆ.

ಗುರಿಗಳನ್ನು ಹೊಂದಿಸಿ: ಹೊಸ ವರ್ಷದ ಮೊದಲ ದಿನವು ನಿಮ್ಮೊಂದಿಗೆ ನೀವು ಮಾತನಾಡಲು ಒಂದು ದಿನ. ಒಂದು ಡೈರಿಯನ್ನು ಖರೀದಿಸಿ ಮತ್ತು ಕಳೆದ ವರ್ಷ ಹೇಗೆ ಹೋಯಿತು,  ಮುಂಬರುವ ವರ್ಷದಲ್ಲಿ ನೀವು ಏನನ್ನು ಸಾಧಿಸಲು ಬಯಸುತ್ತೀರಿ, ಜೀವನದಲ್ಲಿ ಏನೆಲ್ಲಾ ಬದಲಾವಣೆಗಳನ್ನು ತರಲು ಬಯಸುತ್ತೀರಿ ಎಂಬುದನ್ನು ಬರೆಯಿರಿ. ಹೀಗೆ ನಿಮ್ಮ ಆಲೋಚನೆಗಳನ್ನು ಪುಸ್ತಕದ ಮೇಲೆ ಗೀಚಿದಾಗ ನಿಮ್ಮ ಮನಸ್ಸು ಸ್ಪಷ್ಟ ಮತ್ತು ಶಾಂತವಾಗಿರುತ್ತದೆ.

ಪ್ರೀತಿಪಾತ್ರರ ಜೊತೆ ಸಮಯ ಕಳೆಯಿರಿ: ಪಾರ್ಟಿ ಪಬ್‌ ಅಂತೆಲ್ಲಾ ಹೋಗಲು ಇಷ್ಟವಿಲ್ಲದಿದ್ದರೆ, ಕುಟುಂಬ ಮತ್ತು ಸ್ನೇಹಿತರೊಂದಿಗೆ ಮನೆಯಲ್ಲಿ ಆಟವಾಡುತ್ತಾ, ಮೂವಿಗಳನ್ನು ನೋಡುತ್ತಾ, ಎಲ್ಲರೂ ಜೊತೆಗೂಡಿ ತಮಾಷೆ ಮಾಡುತ್ತಾ ಸಮಯವನ್ನು ಕಳೆಯಬಹುದು. ಇದು ನಿಮ್ಮ ಒತ್ತಡವನ್ನೆಲ್ಲಾ ದೂರ ಮಾಡಿ, ಮನಸ್ಸಿಗೆ ಖುಷಿ ನೀಡುವಂತೆ ಮಾಡುತ್ತದೆ. ಜೊತೆಗೆ ಹೊಸ ವರ್ಷವನ್ನು ಸಕಾರಾತ್ಮಕತೆಯೊಂದಿಗೆ ಆರಂಭಿಸಲು ಅನುವುಮಾಡಿಕೊಡುತ್ತದೆ.

ಇದನ್ನೂ ಓದಿ: ಕ್ರಿಸ್ಮಸ್‌, ನ್ಯೂ ಇಯರ್‌ಗೆ ಟ್ರಿಪ್‌ ಹೋಗೋ ಪ್ಲಾನ್‌ ಇದ್ಯಾ? ಹಾಗಿದ್ರೆ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ

ಸೇವೆ ಮತ್ತು ದಾನ: ಹೊಸ ವರ್ಷವನ್ನು ವಿಭಿನ್ನವಾಗಿ ಅರ್ಥಪೂರ್ಣವಾಗಿ ಆಚರಿಸಲು ಬಯಸಿದರೆ, ಈ ದಿನದಂದು ಅನಾಥಾಶ್ರಮ, ವೃದ್ಧಾಶ್ರಮ ಅಥವಾ ಪ್ರಾಣಿಗಳ ಆಶ್ರಯ ತಾಣಕ್ಕೆ ಭೇಟಿ ನೀಡಿ, ಅಲ್ಲಿ ಅವರೊಂದಿಗೆ ಸಮಯ ಕಳೆಯುತ್ತಾ ನಿಮ್ಮ ಕೈಲಾದಷ್ಟು ಅವರಿಗೆ ಸಹಾಯ ಮಾಡಿ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿ. ಹೀಗೆ ಇತರರ ಮುಖದಲ್ಲಿ ನಗು ತರಿಸುವುದು ಹೊಸ ವರ್ಷದ ಅತ್ಯಂತ ಸುಂದರ ಮತ್ತು ಅರ್ಥಪೂರ್ಣ ಆರಂಭವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:01 am, Mon, 29 December 25

Source link

Optical Illusion: ಈ ಚಿತ್ರದಲ್ಲಿ ಮರೆಮಾಡಲಾಗಿರುವ ತೆಂಗಿನಕಾಯಿಯನ್ನು ಗುರುತಿಸಿ ನೋಡೋಣ – Kannada News | Optical Illusion: Can you find the hidden coconut in this picture

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಆಪ್ಟಿಕಲ್‌ ಇಲ್ಯೂಷನ್‌ (Optical Illusion), ಬ್ರೈನ್ ಟೀಸರ್ ಸೇರಿದಂತೆ ಒಗಟಿನ ಚಿತ್ರಗಳೇ ಹಾಗೆ, ಒಂದು ಕ್ಷಣ ನಿಮ್ಮ ಕಣ್ಣನ್ನು ಮೋಸಗೊಳಿಸುತ್ತದೆ. ಈ ಚಿತ್ರಗಳು ನಿಮ್ಮ ಮೆದುಳಿಗೆ ಕೆಲಸ ನೀಡುವುದರ ಜತೆಗೆ ನಿಮ್ಮನ್ನು ರಿಲ್ಯಾಕ್ಸ್ ಆಗಿಸುತ್ತದೆ. ಆದರೆ, ಬುದ್ಧಿವಂತರು ಮಾತ್ರ ಕಡಿಮೆ ಸಮಯದಲ್ಲಿ ಉತ್ತರ ಕಂಡುಹಿಡಿಯುತ್ತಾರೆ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿನ ಈ ಒಗಟನ್ನು ಬಿಡಿಸಲು ಸಾಧ್ಯವೇ ಎಂದು ನೋಡಿ.  ನೀವು ಈ ಚಿತ್ರದಲ್ಲಿ ತೆಂಗಿನಕಾಯಿ ಎಲ್ಲಿದೆ ಎಂದು ಹೇಳಬೇಕು. ಈ ಸವಾಲು ಸ್ವೀಕರಿಸಲು ನೀವು ರೆಡಿ ಇದ್ದೀರಾ

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಏನಿದೆ?

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು ನೋಡಿದಾಗ ಕೂಡಲೇ ನಿಮ್ಮನ್ನು ಭ್ರಮೆಗೆ ಸಿಲುಕಿಸುತ್ತದೆ. ಈ ಚಿತ್ರವು ಅದೇ ರೀತಿಯಿದ್ದು, ಇಲ್ಲಿ ಮೇಕೆ, ಹುಂಜ ಹಾಗೂ ಹೆಂಟೆ ಇರುವುದನ್ನು ಕಾಣಬಹುದು. 10 ಸೆಕೆಂಡುಗಳ ಒಳಗೆ ಈ ಚಿತ್ರದಲ್ಲಿ ಮರೆ ಮಾಡಲಾಗಿರುವ ತೆಂಗಿನಕಾಯಿಯನ್ನು ಕಂಡುಹಿಡಿಯಬೇಕು.

ಇದನ್ನೂ ಓದಿ:ನೀವು ಜಾಣರಾಗಿದ್ರೆ ಈ ಚಿತ್ರದಲ್ಲಿರುವ ಸೂಜಿಯನ್ನು ಕಂಡು ಹಿಡಿಯಿರಿ

ತೆಂಗಿನಕಾಯಿಯನ್ನು ಕಂಡು ಹಿಡಿಯಲು ಸಾಧ್ಯವಾಯಿತೇ?

ನೀವು ಎಷ್ಟೇ ಪ್ರಯತ್ನಿಸಿದರೂ ತೆಂಗಿನಕಾಯಿ ನಿಮ್ಮ ಕಣ್ಣಿಗೆ ಬಿದ್ದಿಲ್ಲವೇ. ನಾವು ಹೇಳುವಂತೆ ನೀವು ಮಾಡಿ, ಫೋಟೋವನ್ನು ಭಾಗಗಳಾಗಿ ವಿಂಗಡಿಸಿಕೊಳ್ಳಿ. ಪ್ರತಿಯೊಂದು ಭಾಗಗಳನ್ನು ಸ್ಕ್ಯಾನ್ ಮಾಡಿ. ಒಂದು ವೇಳೆ ತೆಂಗಿನಕಾಯಿ ಗುರುತಿಸಲು ಸಾಧ್ಯವಾಗಿಲ್ಲವೇ. ಈ ಕೆಳಗಿನ ಚಿತ್ರದಲ್ಲಿ ತೆಂಗಿನಕಾಯಿಯನ್ನು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ, ಭಯಾನಕ ವಿಡಿಯೋ – Kannada News | Fatal Road Mishap as Truck Loses Balance and Lands on Vehicle

ರಾಂಪುರ, ಡಿಸೆಂಬರ್ 29: ಲಾರಿಯೊಂದು ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಘಟನೆ ರಾಂಪುರದಲ್ಲಿ ನಡೆದಿದೆ. ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ಭಾನುವಾರ ನೈನಿತಾಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಚಲಿಸುತ್ತಿದ್ದ ಬೊಲೆರೊ ಮೇಲೆ ಉರುಳಿಬಿದ್ದು, ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ದುರಂತ ಘಟನೆ ವರದಿಯಾಗಿದೆ. ಪಹಾಡಿ ಗೇಟ್ ಬಳಿಯ ಗಂಜ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಪೊಲೀಸರ ಪ್ರಕಾರ, ಹೊಟ್ಟು ಸಾಗಿಸುತ್ತಿದ್ದ ಟ್ರಕ್ ಹೆದ್ದಾರಿಯಲ್ಲಿ ಹಾದುಹೋಗುವಾಗ ನಿಯಂತ್ರಣ ತಪ್ಪಿ ಪಕ್ಕದಲ್ಲಿ ಚಲಿಸುತ್ತಿದ್ದ ಬೊಲೆರೊ ವಾಹನದ ಮೇಲೆ ಉರುಳಿಬಿದ್ದಿತು. ಡಿಕ್ಕಿಯ ಪರಿಣಾಮ ಮಾರಕವಾಗಿದ್ದು, ಬೊಲೆರೊ ಚಾಲಕ ತಕ್ಷಣವೇ ಸಾವನ್ನಪ್ಪಿದ್ದಾನೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link