Category Archives: Blog

Your blog category

‘ಟಾಕ್ಸಿಕ್’ ಎದುರು ಬರಲು ರೆಡಿ ಆಯ್ತು ಬಾಲಿವುಡ್​​ನ ಸ್ಟಾರ್ ನಟನ ಸಿನಿಮಾ

‘ಟಾಕ್ಸಿಕ್’ ಎದುರು ಬರಲು ರೆಡಿ ಆಯ್ತು ಬಾಲಿವುಡ್​​ನ ಸ್ಟಾರ್ ನಟನ ಸಿನಿಮಾ

‘ಟಾಕ್ಸಿಕ್’ vs ‘ಧುರಂಧರ್ 2’ ಸಿನಿಮಾ ಮಧ್ಯೆ ಕ್ಲ್ಯಾಶ್ ಆಗಲಿದೆ ಎಂದು ಎಲ್ಲರೂ ನಂಬಿದ್ದರು. ಆದರೆ, ಅದು ಸುಳ್ಳಾಯಿತು. ‘ಟಾಕ್ಸಿಕ್’ ಸಿನಿಮಾ ತನ್ನ ರಿಲೀಸ್ ದಿನಾಂಕವನ್ನು ಜೂನ್ 4ಕ್ಕೆ ಮುಂದೂಡಿದೆ. ಈ ಮೂಲಕ ದೊಡ್ಡ ಕ್ಲ್ಯಾಶ್ ತಪ್ಪಿದೆ. ಹೀಗಿರುವಾಗಲೇ ‘ಟಾಕ್ಸಿಕ್’ ಸಿನಿಮಾ (Toxic Movie) ಎದುರು ಒಂದು ದೊಡ್ಡ ಸಿನಿಮಾ ತೆರೆಗೆ ಬರಲು ರೆಡಿ ಆಗಿದೆ. ಅದು ಬೇರೆ ಯಾವೂದು ಅಲ್ಲ,ಸಲ್ಮಾನ್ ಖಾನ್ ನಟನೆಯ ‘ಮಾತೃಭೂಮಿ ಚಿತ್ರ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಬಾರಿ ಈದ್​ಗೆ ‘ಮಾತೃಭೂಮಿ’ ರಿಲೀಸ್ ಆಗಬೇಕಿತ್ತು. ಆದರೆ, ಸಿನಿಮಾ ರೀಶೂಟ್ ಕಾರಣಕ್ಕೆ ರಿಲೀಸ್ ಮುಂದಕ್ಕೆ ಹೋಯಿತು. ಈ ಚಿತ್ರದ ಟೈಟಲ್ (ಮೊದಲ ಟೈಟಲ್ ಬ್ಯಾಟಲ್ ಆಫ್ ಗಲ್ವಾನ್) ಹಾಗೂ ಕಥೆ ಬದಲಿಸಿ 40 ದಿನ ಮರುಚಿತ್ರೀಕರಣ ಮಾಡಲಾಗಿದೆ. ಮೇ 15ರಂದು ಚಿತ್ರ ತೆರೆಗೆ ಬರಲಿದೆ ಎಂದು ಹೇಳಲಾಗಿತ್ತು. ಆದರೆ, ಈ ದಿನಾಂಕ ಕೂಡ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ಮೇ 15 ಎಂದರೆ ಶಾಲಾ-ಕಾಲೇಜಿಗೆ ರಜೆ ಇರುತ್ತದೆ. ಆದರೆ. ಈ ರಜೆಯ ಲಾಭ ಪಡೆಯಲು ಸಲ್ಮಾನ್ ಖಾನ್ ಮುಂದಾಗಿದ್ದರು. ಆದರೆ, ಅದು ಅಸಾಧ್ಯ ಎಂಬ ರೀತಿಯಲ್ಲಿದೆ. ಇದು ಭಾರತ ಹಾಗೂ ಚೀನಾ ನಡುವಿನ ಗಲ್ವಾನ್ ಘರ್ಷಣೆಯ ವಿಷಯ. ಈ ವಿಷಯದಲ್ಲಿ ಕೊಂಚ ಎಡವಟ್ಟಾದರೂ ಭಾರತ ಹಾಗೂ ಚೀನಾ ಸಂಬಂಧ ಹದಗೆಡಬಹುದು. ಹೀಗಾಗಿ ಸೆನ್ಸಾರ್ ಮಂಡಳಿಯವರು ವಿಸ್ತೃತವಾಗಿ ಸಿನಿಮಾ ನೋಡುವ ಸಾಧ್ಯತೆ ಇದೆ.

ಸದ್ಯ ಪೋಸ್ಟ್ ಪ್ರೊಕಡ್ಷನ್ ಕೆಲಸಗಳು ನಡೆಯುತ್ತಿವೆ. ಸಿನಿಮಾ ಸಂಪೂರ್ಣವಾಗಿ ಸಿದ್ಧಗೊಳ್ಳಲು ಇನ್ನೂ ಸಾಕಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ, ಸದ್ಯದ ಮಟ್ಟಿಗೆ ಮಾತೃಭೂಮಿ ಸಿನಿಮಾ ಮೇ 15ರಂದು ರಿಲೀಸ್ ಆಗಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರದಲ್ಲಿ ಯಾವ ಪಾತ್ರ? ಕೊನೆಗೂ ಮೌನ ಮುರಿದ ಟೊವಿನೋ ಥಾಮಸ್

ಈ ಎಲ್ಲಾ ಕಾರಣದಿಂದ ಸಿನಿಮಾ ರಿಲೀಸ್ ಜೂನ್​​ಗೆ ಹೋಗಿದೆ. ಜೂನ್ 4ರಂದು ‘ಟಾಕ್ಸಿಕ್’ ಸಿನಿಮಾ ಬರುತ್ತಿದೆ. ಈ ಸಂದರ್ಭದಲ್ಲೇ ‘ಮಾತೃಭೂಮಿ’ ಕೂಡ ರಿಲೀಸ್ ಆಗಬಹುದು ಎಂದು ಹೇಳಲಾಗುತ್ತಾ ಇದೆ. ಸಲ್ಮಾನ್​ ಖಾನ್​​ಗೆ ಬಾಲಿವುಡ್​​ನಲ್ಲಿ ಬೇಡಿಕೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚಾಮರಾಜನಗರ: ಮಹಿಳೆಯರ ಒಳ ಉಡುಪುಗಳನ್ನೇ ಕದ್ದು ಧರಿಸುವ ಸೈಕೋ! ಸಿಸಿಟಿವಿಯಲ್ಲಿ ಸೆರೆಯಾಯ್ತು ವಿಕೃತಿಯ ದೃಶ್ಯ

ಚಾಮರಾಜನಗರ, ಏಪ್ರಿಲ್ 8: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ವಿಚಿತ್ರ ಸೈಕೋಪಾತ್‌ ಒಬ್ಬನ ಕೈಚಳಕ ಮಹಿಳೆಯರಲ್ಲಿ ಭೀತಿ ಹುಟ್ಟಿಸಿದೆ. ಇಲ್ಲಿನ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯರ ಒಳ ಉಡುಪುಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಮನೆಗಳ ಮುಂದೆ ಒಣಗಲು ಹಾಕಿದ್ದ ಮಹಿಳೆಯರ ಒಳ ಉಡುಪುಗಳು ಪದೇ ಪದೇ ನಾಪತ್ತೆಯಾಗುತ್ತಿದ್ದವು. ಇದರಿಂದ ಸಂಶಯಗೊಂಡ ನಿವಾಸಿಗಳು ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಅಸಲಿ ಸತ್ಯ ಕಂಡು ಬೆಚ್ಚಿಬಿದ್ದಿದ್ದಾರೆ. ತಡರಾತ್ರಿ ಮಹಿಳೆಯ ವೇಷದಲ್ಲಿ ಬರುವ ಈ ವ್ಯಕ್ತಿ, ಒಳ ಉಡುಪುಗಳನ್ನು ಕದ್ದು, ಸ್ಥಳದಲ್ಲೇ ಅವುಗಳನ್ನು ಧರಿಸಿಕೊಂಡು ವಿಕೃತಿ ಮೆರೆಯುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಸೈಕೋಪಾತ್‌ನ ವಿಚಿತ್ರ ವರ್ತನೆಯಿಂದ ಕಾಲೋನಿಯ ಮಹಿಳೆಯರು ಆತಂಕಕ್ಕೊಳಗಾಗಿದ್ದಾರೆ. ಸದ್ಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆರೋಪಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಚಿತ್ರದಲ್ಲಿ ಯಾವ ಪಾತ್ರ? ಕೊನೆಗೂ ಮೌನ ಮುರಿದ ಟೊವಿನೋ ಥಾಮಸ್

ಮಲಯಾಳಂ ನಟ ಟೊವಿನೋ ಥಾಮಸ್ ಅವರು (Tovino Thomas) ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಹೇಳಲಾಗುತ್ತಾ ಇದೆ. ಈ ವಿಷಯ ಸಾಕಷ್ಟು ಚರ್ಚೆಗೆ ಕಾರಣ ಆಗಿದೆ. ‘ಟಾಕ್ಸಿಕ್’ ವಿಕಿಪೀಡಿಯಾ ಪೇಜ್​ ಅಲ್ಲೂ ಅವರ ಹೆಸರು ಇದೆ. ಈ ಬಗ್ಗೆ ಟೊವಿನೋ ಮಾತನಾಡಿದ್ದಾರೆ. ‘ಪಳ್ಳಿಚಟ್ಟಂಬಿ’ ಸಿನಿಮಾದಲ್ಲಿ ಟುವಿನೋ ನಟಿಸಿದ್ದಾರೆ. ಏಪ್ರಿಲ್ 15ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಮಾಹಿತಿ ನೀಡಲು ತಂಡ ಬೆಂಗಳೂರಿಗೆ ಆಗಮಿಸಿತ್ತು. ಈ ವೇಳೆ ‘ಟಾಕ್ಸಿಕ್’ ಸಿನಿಮಾದ ಪಾತ್ರ ಯಾವುದು ಎಂಬ ಬಗ್ಗೆ ಕೇಳಲಾಯಿತು. ಇದಕ್ಕೆ ಅವರು ಉತ್ತರಿಸಿದ್ದಾರೆ.

‘ನನ್ನ ಬಳಿಯೇ ಆ ಬಗ್ಗೆ ಮಾಹಿತಿ ಇದ್ದರೆ ನಾನು ಖಂಡಿತ ಹೇಳುತ್ತೇನೆ. ಸಿನಿಮಾ ತಂಡದವರ ಬಳಿ ಎಕ್ಸ್​​ಕ್ಲೂಸಿವ್ ಸುದ್ದಿ ಇದ್ದರೆ ಖಂಡಿತವಾಗಿಯೂ ಅವರು ಅನೌನ್ಸ್ ಮಾಡುತ್ತಾರೆ. ವದಂತಿಗಳನ್ನು ನಂಬಬೇಡಿ. ನಾನು ನಿಜ ಹೇಳುತ್ತಿದ್ದೇನೆ. ನನಗೂ ಟಾಕ್ಸಿಕ್ ಅಲ್ಲಿ ನಟಿಸಬೇಕು ಎಂಬ ಆಸೆ ಇತ್ತು. ಗೀತು ಮೋಹನ್​ದಾಸ್ ಮಲಯಾಳಂನವರು. ಅವರು ನನಗೆ ಅಕ್ಕನ ರೀತಿ. ಅವರ ಪತಿ ನನಗೆ ತುಂಬಾನೇ ಆಪ್ತ’ ಎಂದರು ಟೊವಿನೋ ಥಮಾಸ್.

‘ಸೋಶಿಯಲ್ ಮೀಡಿಯಾದಲ್ಲಿ ಕಾಣೋದಲ್ಲ ನಿಜವಲ್ಲ. ಸಿನಿಮಾ ರಿಲೀಸ್ ಆದ ಬಳಿಕ ನಿಮಗೇ ಗೊತ್ತಾಗುತ್ತದೆ. ಆಗ ಸುಳ್ಳು ಸುದ್ದಿ ಹಬ್ಬಿಸೋರು ಯಾರು ಅಂತ ತಿಳಿಯುತ್ತದೆ. ಆಗ ಅವರನ್ನು ಬ್ಲ್ಯಾಕ್​​ಲಿಸ್ಟ್​​ಗೆ ಸೇರಿಸಿ. ಮತ್ತೆಂದಿಗೂ ಅವರನ್ನು ನಂಬ ಬೇಡಿ. ಈ ಜಗತ್ತಲ್ಲಿ ಹೀಗೆ ಬದುಕಬೇಕು’ ಎಂದರು ಅವರು.

‘ಸೋಶಿಯಲ್ ಮೀಡಿಯಾದವರು ಯಾರಿಗೂ ಹೆದರಬೇಕಿಲ್ಲ. ಅವರು ಯಾರಿಗೂ ಉತ್ತರಿಸಬೇಕಿಲ್ಲ. ಹೀಗಾಗಿ, ಅವರಿಗೆ ಸುಳ್ಳು ಸುದ್ದಿ ಕೊಟ್ಟರೂ ತೊಂದರೆ ಆಗಲ್ಲ. ಟಾಕ್ಸಿಕ್ ಸಿನಿಮಾದ ವಿಕಿಪೀಡಿಯಾ ಪೇಜ್​​ನಲ್ಲೂ ನನ್ನ ಹೆಸರು ಇದೆ. ವಿಕಿಪೀಡಿಯಾನ ಯಾರು ಬೇಕಾದರೂ ಎಡಿಟ್ ಮಾಡಬಹುದು. ಅವೆಂಜರ್ಸ್ ಸಿನಿಮಾದಲ್ಲಿ ನನ್ನ ಹೆಸರನ್ನು ಕೂಡ ಸೇರಿಸಿಕೊಳ್ಳಬಹುದು’ ಎಂದರು ಟೊವಿನೋ.

ಇದನ್ನೂ ಓದಿ: ರಾಜ್ ಬಿ. ಶೆಟ್ಟಿಗೆ ಕೇಳಿ ರಿಷಬ್ ಶೆಟ್ಟಿ ಫೋನ್ ನಂಬರ್ ತಗೊಂಡೆ: ಟೊವಿನೋ ಥಾಮಸ್

‘ನಾನು ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದರೆ ಹೇಳುತ್ತೇನೆ. ಅದನ್ನು ಹೇಳುತ್ತಿಲ್ಲ ಎಂದರೆ ಅದು ಸರ್​​ಪ್ರೈಸ್ ಇರಬಹುದಲ್ಲ. ಅದನ್ನು ಏಕೆ ಹಾಳು ಮಾಡುತ್ತೀರಿ? ದಯವಿಟ್ಟು ಕಾಯಿರಿ. ಹಾಗಂತ ನಾನು ಟಾಕ್ಸಿಕ್​ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದಲ್ಲ. ಬೇರೆ ಸಿನಿಮಾಗಳ ಬಗ್ಗೆ ನಾನು ಹೇಳಿದ್ದು’ ಎಂದು ಅವರು ಸ್ಪಷ್ಟನೆ ಕೊಟ್ಟರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಲೋಕಾಯುಕ್ತ ಭರ್ಜರಿ ಬೇಟೆ: ಮೀನುಗಾರಿಕೆ ಇಲಾಖೆ ಅಧಿಕಾರಿ ಮನೆಯಲ್ಲಿ ಸೈಟು, ಚಿನ್ನದ ರಾಶಿ! ಬೊಲೆರೋ ಗಾಡಿಯಲ್ಲೂ ರಹಸ್ಯ ಕಡತಗಳು!

ಬಳ್ಳಾರಿ, ಏಪ್ರಿಲ್ 8: ಗಣಿನಾಡು ಬಳ್ಳಾರಿಯಲ್ಲಿ (Ballari) ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ (Lokayukta Raid)  ಮುಂದುವರಿದಿದೆ. ಏಪ್ರಿಲ್ 7ರ ಮಂಗಳವಾರ ಬೆಳ್ಳಂಬೆಳಿಗ್ಗೆ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಿವಣ್ಣ ಅವರ ಮನೆ ಮತ್ತು ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಅಕ್ರಮದ ಜಾಲವನ್ನು ಬಯಲಿಗೆಳೆದಿದ್ದಾರೆ.

ಶಿವಣ್ಣ ಕಳೆದ ಹತ್ತು ವರ್ಷಗಳಿಂದ ಒಂದೇ ಕಡೆಯಲ್ಲಿ ಕೆಲಸ ಮಾಡುತ್ತಿದ್ದು, ಅವರ ವಿರುದ್ಧ ಹತ್ತಕ್ಕೂ ಹೆಚ್ಚು ಭ್ರಷ್ಟಾಚಾರದ ದೂರುಗಳು ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದ್ದವು. ಬಳ್ಳಾರಿ ನಗರದ ಹೊಸಪೇಟೆ ರಸ್ತೆಯಲ್ಲಿರುವ ಅವರ ನಿವಾಸ, ಕಚೇರಿ ಮತ್ತು ಅವರು ಬಳಸುವ ಸರ್ಕಾರಿ ಬೊಲೆರೋ ವಾಹನವನ್ನೂ ಅಧಿಕಾರಿಗಳು ಬಿಡದೆ ತಪಾಸಣೆ ನಡೆಸಿದ್ದಾರೆ. ಸುಮಾರು 12 ಗಂಟೆಗಳ ಸುದೀರ್ಘ ಪರಿಶೀಲನೆಯ ನಂತರ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

ಪತ್ತೆಯಾದ ಅಕ್ರಮ ಆಸ್ತಿಗಳ ವಿವರ

ಲೋಕಾಯುಕ್ತ ದಾಳಿಯ ವೇಳೆ ಅಧಿಕಾರಿಯ ಮನೆಯಲ್ಲಿ ಸಿಕ್ಕಿರುವ ಆಸ್ತಿಗಳ ಪಟ್ಟಿ ಬೆಚ್ಚಿಬೀಳಿಸುವಂತಿದೆ;

  • ಜಮೀನು: ವಿವಿಧೆಡೆ ಒಟ್ಟು 44 ಎಕರೆ ಕೃಷಿ ಭೂಮಿ.
  • ನಿವೇಶನಗಳು: ಬಳ್ಳಾರಿ ನಗರದಲ್ಲಿ 14 ಸೈಟ್‍ಗಳು.
  • ಮನೆಗಳು: ಬಳ್ಳಾರಿ ನಗರದಲ್ಲೇ 3 ಸುಸಜ್ಜಿತ ಮನೆಗಳು.
  • ನಗದು: ಮನೆಯಲ್ಲಿ 8.5 ಲಕ್ಷ ರೂ. ನಗದು ಮತ್ತು ಬ್ಯಾಂಕ್ ಖಾತೆಯಲ್ಲಿ 20 ಲಕ್ಷ ರೂ. ಹಣ.
  • ಚಿನ್ನಾಭರಣ: ಸುಮಾರು 600 ಗ್ರಾಂ ಬಂಗಾರ.
  • ವಾಹನಗಳು: ಮೂರು ದ್ವಿಚಕ್ರ ವಾಹನಗಳು.

ಇದನ್ನೂ ಓದಿ: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ, ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಅಧಿಕಾರಿಗಳು

ಇದಲ್ಲದೆ, ಇನ್ನೂ ಹಲವು ಬೇನಾಮಿ ಆಸ್ತಿಗಳ ಬಗ್ಗೆ ದಾಖಲೆಗಳು ಸಿಕ್ಕಿದ್ದು, ಲೋಕಾಯುಕ್ತ ತಂಡವು ಹೆಚ್ಚಿನ ತನಿಖೆ ಮುಂದುವರಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶರಣ್ಯ ಸಿಕ್ಕ ಬೆನ್ನಲ್ಲೇ ಮತ್ತೋರ್ವ ಬಾಲಕಿ ಕಾಣೆ: ಚಂದ್ರದ್ರೋಣ ಪರ್ವತ ಸರಣಿಯಲ್ಲಿ ಕೇರಳದ ಅಪ್ರಾಪ್ತೆ ನಾಪತ್ತೆ!

ಚಿಕ್ಕಮಗಳೂರು, ಏಪ್ರಿಲ್ 08: ಕೊಡಗಿನಲ್ಲಿ ಚಾರಣಕ್ಕೆಂದು ತೆರಳಿದ್ದ ಶರಣ್ಯ (Sharanya Missing) ನಾಪತ್ತೆಯಾಗಿ ವಾಪಸಾದ ಬೆನ್ನಲ್ಲೇ ಅದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯ ಚಂದ್ರದ್ರೋಣ ಪರ್ವತ ಸರಣಿಯಲ್ಲಿ ಪ್ರವಾಸಕ್ಕೆ ಬಂದಿದ್ದ ಅಪ್ರಾಪ್ತ ಬಾಲಕಿ ಶ್ರೀ ನಂದಾ ನಿನ್ನೆ ಸಂಜೆ ಸುಮಾರು 6 ಗಂಟೆಯಿಂದ ಕಾಣೆಯಾಗಿದ್ದಾಳೆ.

ಪೋಷಕರೊಂದಿಗೆ ಪ್ರವಾಸಕ್ಕೆ ಬಂದಿದ್ದ ಬಾಲಕಿ

ಕೇರಳ ರಾಜ್ಯದ ಪಾಲಕ್ಕಾಡ್ ಮೂಲದ 14 ವರ್ಷದ ಈ ಬಾಲಕಿ ಪೋಷಕರೊಂದಿಗೆ ಸುಮಾರು 40 ಜನರ ತಂಡದೊಂದಿಗೆ ಪ್ರವಾಸಕ್ಕೆ ಬಂದಿದ್ದಳು. ಈ ವೇಳೆ ಚಂದ್ರದ್ರೋಣ ಪರ್ವತ ಸರಣಿಯ ಮಾಣಿಕ್ಯಧಾರಾ ಸಮೀಪದಲ್ಲಿ ಕಾಣೆಯಾಗಿರುವುದು ತಿಳಿದುಬಂದಿದೆ. ಬಾಲಕಿ ಕಾಣೆಯಾಗುತ್ತಿದ್ದಂತೆಯೇ ಸ್ಥಳೀಯರು ಹಾಗೂ ಪ್ರವಾಸಿಗರು ಹುಡುಕಾಟ ಆರಂಭಿಸಿದರೂ ಯಾವುದೇ ಸುಳಿವು ಸಿಗಲಿಲ್ಲ.

ಇದನ್ನೂ ಓದಿ ಪಾಳು ಬಿದ್ದ ಬಂಗಲೆಯಲ್ಲಿ ನಾಲ್ಕು ದಿನ ಆಶ್ರಯ ಪಡೆದಿದ್ದ ಶರಣ್ಯ!

ಮುಂದುವರಿದ ಹುಡುಕಾಟ

ರಾತ್ರಿ ಪೂರ್ತಿ ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಸಂಯುಕ್ತವಾಗಿ ಶೋಧ ಕಾರ್ಯ ನಡೆಸಿದರು. ಇಂದೂ ಡ್ರೋನ್ ಸಹಾಯದಿಂದ ಹುಡುಕಾಟ ಮುಂದುವರಿದಿದ್ದು, ಸಂಪೂರ್ಣ ಹುಲ್ಲುಗಾವಲು ಹಾಗೂ ಇಳಿಜಾರು ಪ್ರದೇಶಗಳಿಂದ ಕೂಡಿರುವ ಈ ಪ್ರದೇಶದಲ್ಲಿ ಕಾರ್ಯಾಚರಣೆ ಸವಾಲಿನದ್ದಾಗಿದೆ. ಈ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕಿ ನಾಪತ್ತೆಯಾಗಿರುವ ಹಿನ್ನೆಲೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಯಶ್ ಮಾಡಿದ ಸಹಾಯ ನೆನದ ಟೊವಿನೋ ಥಾಮಸ್

ಟೊವಿನೋ ಥಾಮಸ್ ಅವರು ‘ಪಳ್ಳಿ ಚಟ್ಟಂಬಿ’ ಹೆಸರಿನ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಪ್ರಚಾರಕ್ಕಾಗಿ ತಂಡ ಬೆಂಗಳೂರಿಗೆ ಬಂದಿತ್ತು. ಈ ವೇಳೆ ಟಿವಿ9 ಕನ್ನಡದ ಜೊತೆ ಮಾತನಾಡಿದರು. ಆ ಸಂದರ್ಭದಲ್ಲಿ ಅವರು ಹಲವು ವಿಷಯಗಳಿಗೆ ಸ್ಪಷ್ಟನೆ ನೀಡಿದ್ದಾರೆ. ‘ಟಾಕ್ಸಿಕ್’ ಹಾಗೂ ‘ಡ್ರ್ಯಾಗನ್’ ಸಿನಿಮಾದ ಭಾಗವಾಗುತ್ತಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಯಶ್ ಮಾಡಿದ ಸಹಾಯ ನೆನೆದಿದ್ದಾರೆ. ‘ಮಿನ್ನಲ್ ಮುರಳಿ’ ಸಿನಿಮಾದ ಟೀಸರ್​​ನ ಯಶ್ ರಿಲೀಸ್ ಮಾಡಿದ್ದರು. ಕೋರಿಕೆ ಇಟ್ಟ ತಕ್ಷಣ ಅವರು ಒಪ್ಪಿಕೊಂಡಿದ್ದರು ಎಂದಿದ್ದರು ಟೊವಿನೋ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

VIDEO: ಬುಮ್ರಾರನ್ನೇ ಬೆಚ್ಚಿ ಬೀಳಿಸಿದ ವೈಭವ್ ಸೂರ್ಯವಂಶಿ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕೊನೆಗೂ ಜಸ್​ಪ್ರೀತ್ ಬುಮ್ರಾ ಹಾಗೂ ವೈಭವ್ ಸೂರ್ಯವಂಶಿಯ ಮುಖಾಮುಖಿಯಾಗಿದೆ. ಈ ಮುಖಾಮುಖಿಯಲ್ಲಿ ಬುಮ್ರಾರನ್ನು ಬೆಂಡೆತ್ತುವಲ್ಲಿ ಯುವ ದಾಂಡಿಗ ಯಶಸ್ವಿಯಾಗಿದ್ದಾನೆ. ಅದು ಸಹ ಮೊದಲ ಎಸೆತದಲ್ಲೇ ಸಿಕ್ಸ್​ ಸಿಡಿಸುವ ಮೂಲಕ ಎಂಬುದು ವಿಶೇಷ.

ಅಂದರೆ ಇದೇ ಮೊದಲ ಬಾರಿ ಯಾರ್ಕರ್ ಸ್ಪೆಷಲಿಸ್ಟ್ ಖ್ಯಾತಿಯ ಜಸ್​ಪ್ರೀತ್ ಬುಮ್ರಾರನ್ನು ಎದುರಿಸಿದ್ದ ವೈಭವ್ ಸೂರ್ಯವಂಶಿ ತಾನೆದುರಿಸಿದ ಮೊದಲ ಬಾಲ್​ನಲ್ಲೇ ಸಿಕ್ಸ್ ಸಿಡಿಸಿ ಎಲ್ಲರ ಹುಬ್ಬೇರಿಸಿದ್ದಾರೆ.

ಗುವಾಹಟಿಯಲ್ಲಿ ನಡೆದ ಈ ಪಂದ್ಯದ ಮೊದಲ ಇನಿಂಗ್ಸ್​ನ ದ್ವಿತೀಯ ಓವರ್​ನಲ್ಲಿ ಬುಮ್ರಾ ದಾಳಿಗಿಳಿದಿದ್ದರು. ಬುಮ್ರಾ ಎಸೆದ ಮೊದಲ ಎಸೆತವನ್ನೇ ಯಾವುದೇ ಭಯವಿಲ್ಲದೆ ಎದುರಿಸಿದ ವೈಭವ್, ಲಾಂಗ್-ಆನ್ ಮೇಲಿಂದ ಭರ್ಜರಿ ಸಿಕ್ಸರ್ ಸಿಡಿಸಿದರು.

ಇದಾದ ಬಳಿಕ ಅದೇ ಓವರ್‌ನಲ್ಲಿ ಬುಮ್ರಾ ಎಸೆದ ಶಾರ್ಟ್ ಪಿಚ್ ಎಸೆತವನ್ನು ಚಾಣಾಕ್ಷತನದಿಂದ ಪುಲ್ ಮಾಡಿದ ವೈಭವ್, ಚೆಂಡನ್ನು ಡೀಪ್ ಬ್ಯಾಕ್ ವರ್ಡ್ ಸ್ಕ್ವೇರ್ ಲೆಗ್ ಸ್ಟ್ಯಾಂಡ್ಸ್ ಗೆ ಅಟ್ಟಿದರು.

ಈ ಮೂಲಕ ಜಸ್​ಪ್ರೀತ್ ಬುಮ್ರಾ ಅವರ ಒಂದೇ ಓವರ್‌ನಲ್ಲಿ 14 ರನ್ ಕಬಳಿಸುವ ಮೂಲಕ ವೈಭವ್ ಸೂರ್ಯವಂಶಿ ತಮ್ಮ ಅಪ್ರತಿಮ ಪ್ರತಿಭೆಯನ್ನು ಸಾಬೀತುಪಡಿಸಿದರು. ಈ ದೃಶ್ಯ ಕಂಡು ಬುಮ್ರಾ ಕೂಡ ಒಂದು ಕ್ಷಣ ದಂಗಾಗಿ, ನಂತರ ಮುಗುಳ್ನಗುತ್ತಾ ಆ ಹುಡುಗನ ಧೈರ್ಯವನ್ನು ಮೆಚ್ಚಿಕೊಂಡರು.

ವೈಭವ್ ಸೂರ್ಯವಂಶಿಯ ಈ ಭರ್ಜರಿ ಸಿಕ್ಸರ್​ಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಯುವ ದಾಂಡಿಗನ ಆರ್ಭಟಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇನ್ನು ಮಳೆಯ ಕಾರಣ 11 ಓವರ್‌ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ವೈಭವ್ ಕೇವಲ 14 ಎಸೆತಗಳಲ್ಲಿ 39 ರನ್ ಚಚ್ಚಿದರು. ಇದರಲ್ಲಿ ಒಟ್ಟು 5 ಸಿಕ್ಸರ್ ಹಾಗೂ 1 ಬೌಂಡರಿ ಸೇರಿತ್ತು. ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ 11 ಓವರ್​ಗಳಲ್ಲಿ 150 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ 11 ಓವರ್​ಗಳಲ್ಲಿ 123 ರನ್​ಗಳಿಸಿ 27 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

 

Source link

ಆಂಧ್ರಪ್ರದೇಶ: ರೈಲಿನಲ್ಲಿ ಮುದ್ದಾದ ಮಗುವಿಗೆ ಜನ್ಮ ನೀಡಿದ ಮಹಿಳೆ, 8 ತಿಂಗಳಿಗೆ ಹೆರಿಗೆ

ವಿಜಯವಾಡ, ಏಪ್ರಿಲ್ 08: ಮಹಿಳೆಯೊಬ್ಬರು ಆಂಧ್ರಪ್ರದೇಶದ ರೈಲಿನಲ್ಲಿ ಮಗು(Baby)ವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ. ರೈಲ್ವೆ ಸಿಬ್ಬಂದಿ ಸಹಾಯಕ್ಕೆ ಬಂದ ಪರಿಣಾಮ ಹೆರಿಗೆ ಸುಸೂತ್ರವಾಗಿ ಆಗಿದ್ದು, ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಎಂಟು ತಿಂಗಳ ಗರ್ಭಿಣಿಯೊಬ್ಬರು ರೈಲು ಹತ್ತಿದರು. ಹೆರಿಗೆಗೆ ಇನ್ನೂ ಒಂದು ತಿಂಗಳು ಬಾಕಿ ಇದೆ ಎಂಬ ವಿಶ್ವಾಸ ಮತ್ತು ಅವರ ಕುಟುಂಬ ಸದಸ್ಯರು ತಮ್ಮ ಪಕ್ಕದಲ್ಲಿದ್ದಾರೆ ಎಂಬ ಧೈರ್ಯದೊಂದಿಗೆ, ಅವರು ರೈಲು ಪ್ರಯಾಣಕ್ಕೆ ಒಪ್ಪಿಕೊಂಡಿದ್ದರು. ಆದರೆ ಅಂದುಕೊಂಡಂತೆ ಎಲ್ಲವೂ ನಡೆಯದು ಎಂಬುದಕ್ಕೆ ಇದೂ ಒಂದು ನಿದರ್ಶನ.

ನಿಧಾನವಾಗಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕುಟುಂಬದವರಿಗೂ ಭಯ ಶುರುವಾಗಿತ್ತು. ಬಳಿಕ ರೈಲಿನ ಟಿಟಿಗೆ ಕರೆ ಮಾಡಲಾಯಿತು.ಇಶಾದ್ ಮತ್ತು ತರನ್ನಮ್ ಖಾತುನ್ ಜಾರ್ಖಂಡ್ ಮೂಲದವರು. ಏಪ್ರಿಲ್ 5 ರಂದು, ಧನಬಾದ್ ಮೂಲದ ಗರ್ಭಿಣಿ, ಅವರ ಕುಟುಂಬವು ರೈಲು ಸಂಖ್ಯೆ 13352 (ಆಲಪ್ಪುಳ-ಧನಬಾದ್ ಎಕ್ಸ್‌ಪ್ರೆಸ್) ನ ಬಿ 1 ಕೋಚ್‌ನಲ್ಲಿ ಚೆನ್ನೈನಿಂದ ಧನಬಾದ್‌ಗೆ ಪ್ರಯಾಣಿಸುತ್ತಿದ್ದಾಗ ರೈಲು ಅನ್ನಾವರಂ ನಿಲ್ದಾಣವನ್ನು ದಾಟಿದ ಸ್ವಲ್ಪ ಸಮಯದ ನಂತರ ಹೆರಿಗೆ ನೋವು ಕಾಣಿಸಿಕೊಂಡಿತ್ತು.

ಅವರ ಕುಟುಂಬ ಸದಸ್ಯರು ತಕ್ಷಣ ಕರ್ತವ್ಯದಲ್ಲಿದ್ದ ಟಿಕೆಟ್ ಪರಿಶೀಲನಾ ಸಿಬ್ಬಂದಿಯನ್ನು ಸಹಾಯಕ್ಕಾಗಿ ಸಂಪರ್ಕಿಸಿದರು. ಪರಿಸ್ಥಿತಿಗೆ ತ್ವರಿತವಾಗಿ ಸ್ಪಂದಿಸಿದ ಜಿ. ಜ್ಯೋತಿ ಗರ್ಭಿಣಿಯ ಸಹಾಯಕ್ಕೆ ಬಂದರು. ಪರಿಸ್ಥಿತಿಯ ತುರ್ತುಸ್ಥಿತಿಯನ್ನು ಅರ್ಥಮಾಡಿಕೊಂಡು, ರೈಲಿಗೆ ಎಲಮಂಚಿಲಿ ನಿಲ್ದಾಣದಲ್ಲಿ ವಿಶೇಷ ನಿಲುಗಡೆ ಕಲ್ಪಿಸಲಾಯಿತು. ಆಂಬ್ಯುಲೆನ್ಸ್​ಗೆ ಕೂಡ ಕರೆ ಮಾಡಿದ್ದರು.

ಮತ್ತಷ್ಟು ಓದಿ: ಬಿಸಿಲಲ್ಲಿ ಕುಸಿದುಬಿದ್ದ ತಾಯಿ, ಯಾರ್ಯಾರನ್ನೋ ಬೇಡಿ ನೀರು ತಂದ ಮಗ, ಜನ ವಿಡಿಯೋ ಮಾಡಿದ್ರು ಸಹಾಯಕ್ಕೆ ಬರ್ಲಿಲ್ಲ

ತಾಯಿ ಮತ್ತು ನವಜಾತ ಶಿಶುವನ್ನು 108 ಆಂಬ್ಯುಲೆನ್ಸ್ ಮೂಲಕ ಎಲಮಂಚಿಲಿಯ ಸರ್ಕಾರಿ ಆಸ್ಪತ್ರೆಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗಲಾಯಿತು. ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ. ಬೊಕಾರೊ ಎಕ್ಸ್‌ಪ್ರೆಸ್ ಅನ್ನು ಸುಮಾರು 40 ನಿಮಿಷಗಳ ಕಾಲ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು.

ಟಿಟಿಇ ಜೊತೆಗೆ, ರೈಲ್ವೆ ಸಿಬ್ಬಂದಿ ಮತ್ತು ರೈಲಿನೊಳಗಿನ ಪುರುಷ ಪ್ರಯಾಣಿಕರನ್ನು ರೈಲು ಕೋಚ್‌ನಿಂದ ಹೊರಗೆ ಕಳುಹಿಸಲಾಯಿತು, ಇದರಿಂದ ಬಿ1 ಕೋಚ್‌ನಲ್ಲಿರುವ ಮಹಿಳೆಗೆ ಸಾಮಾನ್ಯ ಹೆರಿಗೆಯಾಗುವಂತೆ ನೋಡಿಕೊಳ್ಳಲಾಯಿತು. ರೈಲಿನಲ್ಲಿರುವ ಸೌಕರ್ಯ, ಸುರಕ್ಷತೆ ಮತ್ತು ಕಡಿಮೆ ವೆಚ್ಚ ಎನ್ನುವ ಕಾರಣಕ್ಕೆ ಗರ್ಭಿಣಿಯರಿಂದ ಹಿಡಿದು ವೃದ್ಧರವೆಗೂ ಎಲ್ಲರೂ ರೈಲು ಪ್ರಯಾಣವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ಈ ರೈಲು ಪ್ರಯಾಣ ಎಷ್ಟು ಸುರಕ್ಷಿತವೆಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾದಂತಾಗಿದೆ. ರೈಲಿನಲ್ಲಿ ಪ್ರಯಾಣಿಸುವಾಗ, ನಾವು ಅನೇಕ ವಿಚಿತ್ರ ಘಟನೆಗಳನ್ನು ನೋಡುತ್ತೇವೆ. ಆದರೆ ಮಾನವೀಯತೆ ತೋರುವ ಘಟನೆಗಳು ಬಹಳ ಅಪರೂಪ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಲ್ಲು ಅರ್ಜುನ್ ಬೆಳೆಯಲು ಈ ಎಲ್ಲಾ ವ್ಯಕ್ತಿಗಳು ಕಾರಣ

ನಟ ಅಲ್ಲು ಅರ್ಜುನ್ ಅವರು ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ‘ಪುಷ್ಪ 2’ ಬಂದ ಬಳಿಕ ಅವರು ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಜಪಾನ್ ಅಲ್ಲ ಸಿನಿಮಾ ರಿಲೀಸ್ ಆಗಿ ಹಿಟ್ ಆಗಿದೆ. ಅಲ್ಲು ಅರ್ಜುನ್ ಅವರು ಈ ಹಂತಕ್ಕೆ ಬರಲು ಕಾರಣ ಅನೇಕರಿದ್ದಾರೆ. ಈ ಮೊದಲು ಅವರು ಈ ಬಗ್ಗೆ ಮಾಹಿತಿ ನೀಡಿದ್ದರು. ಆ ಬಗ್ಗೆ ಇಲ್ಲಿದೆ ವಿವರ.

ಅಲ್ಲು ಅರ್ಜುನ್ ಅವರಿಗೆ ಸಿನಿಮಾ ಹಿನ್ನೆಲೆ ಇದೆ. ಅವರ ತಂದೆ ಅಲ್ಲು ಅರವಿಂದ್ ಖ್ಯಾತ ನಿರ್ಮಾಪಕರು. ಅವರ ತಾತ ಅಲ್ಲು ರಾಮಲಿಂಗಯ್ಯ ಸಿನಿಮಾ ರಂಗದಲ್ಲಿ ಹೆಸರು ಮಾಡಿದ್ದರು. ಅವರು 1000ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಕಲಾವಿದ ಎಂಬ ಖ್ಯಾತಿ ಅವರಿಗೆ ಇದೆ. ಸಿನಿಮಾ ಬಗ್ಗೆ ಆಸಕ್ತಿ ಮೂಡಲು ಅವರು ಕೂಡ ಕಾರಣ.

ಇಷ್ಟೆಲ್ಲ ಸ್ಟಾರ್​ಗಳು ಇರುವ ಮನೆ ಅವರನ್ನು ವಿನಮ್ರವಾಗಿ ನಡೆದುಕೊಳ್ಳುವಂತೆ ಮಾಡಿತಂತೆ. ‘ನಾನು ಈ ಮಟ್ಟಕ್ಕೆ ಬೆಳೆಯಲು ಕುಟುಂಬಕ್ಕೆ ಇದರ ಕ್ರೆಡಿಟ್ ಕೊಡುತ್ತೇನೆ’ ಎಂದು ಅವರು ಹೇಿದ್ದರು. ‘ನಾನೇ ಬೆಳೆದು ನಿಂತವನಲ್ಲ. ನಾನು ಎಲ್ಲರಿಂದ ಆದವನು. ನನ್ನ ನಿರ್ದೇಶಕರು, ತಂತ್ರಜ್ಞರು, ಕುಟುಂಬದವರು, ಅಭಿಮಾನಿಗಳು ಹಾಗೂ ಎಲ್ಲರೂ ನನ್ನ ಬೆಳವಣಿಗೆಗ ಕಾರಣ. ನಾನು ಬೆಳೆಯಲು ಎಷ್ಟು ಸಹಾಯಬೇಕೋ ಅದನ್ನು ತೆಗೆದುಕೊಳ್ಳುತ್ತೇನೆ’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ತುಂಬಾನೇ ಶ್ರೀಮಂತ ಅಲ್ಲು ಅರ್ಜುನ್; ಅವರ ಬಳಿ ಇರೋ ದುಬಾರಿ ವಸ್ತುಗಳಿವು

ಅಲ್ಲು ಅರ್ಜುನ್ ಹಾಗೂ ಅಟ್ಲಿ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಟೈಟಲ್ ಇಂದು ಅನೌನ್ಸ್ ಆಗುವ ಸಾಧ್ಯತೆ ಇದೆ. ಈ ಸಿನಿಮಾದ ಟೈಟಲ್ ಏನು ಎಂಬುದು ಇಂದು ಗೊತ್ತಾಗಲಿದೆ. ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ ನಾಯಕಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬ್ಯಾಡ್ ನ್ಯೂಸ್: ಮೇ ತಿಂಗಳಿನಲ್ಲಿ ಓಪನ್ ಆಗಲ್ಲ ಪಿಂಕ್ ಲೈನ್! ವಿಳಂಬಕ್ಕೆ ಅಸಲಿ ಕಾರಣವೇನು?

ಬೆಂಗಳೂರು, ಏಪ್ರಿಲ್ 8: ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆಗೆ ಮುಕ್ತಿ ನೀಡಬಲ್ಲ ಬಹುನಿರೀಕ್ಷಿತ ನಮ್ಮ ಮೆಟ್ರೋದ (Namma Metro) ಪಿಂಕ್ ಲೈನ್ (Pink Line) ಲೋಕಾರ್ಪಣೆ ಮತ್ತೆ ಮುಂದಕ್ಕೆ ಹೋಗುವ ಲಕ್ಷಣಗಳು ಕಾಣಿಸುತ್ತಿವೆ. ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ಈ ಮಾರ್ಗದ ಪೈಕಿ, ಮೊದಲ ಹಂತದಲ್ಲಿ 6 ನಿಲ್ದಾಣಗಳನ್ನು ಮೇ ತಿಂಗಳಿನಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ಮತ್ತು ರಾಜ್ಯ ಸರ್ಕಾರ ಯೋಜಿಸಿದ್ದವು. ಆದರೆ, ತಾಂತ್ರಿಕ ಪರೀಕ್ಷೆಗಳು (Testing) ಬಾಕಿ ಇರುವುದರಿಂದ ಜೂನ್ ಅಥವಾ ಜುಲೈನಲ್ಲಿ ಉದ್ಘಾಟನೆಯಾಗುವ ಸಾಧ್ಯತೆಯಿದೆ.

ರೈಲುಗಳಿದ್ದರೂ ವಿಳಂಬ ಏಕೆ?

ಸಾಮಾನ್ಯವಾಗಿ ಹೊಸ ಮೆಟ್ರೋ ಮಾರ್ಗ ಉದ್ಘಾಟನೆಗೆ ರೈಲುಗಳ ಕೊರತೆ ಅಡ್ಡಿಯಾಗುತ್ತಿತ್ತು. ಆದರೆ ಪಿಂಕ್ ಲೈನ್‌ಗಾಗಿ ಈಗಾಗಲೇ ಬಿಇಎಂಎಲ್ (BEML) ನಿಂದ ಐದು ರೈಲುಗಳು ಬಂದಿವೆ. ಒಟ್ಟು 23 ರೈಲುಗಳಿಗೆ ಆರ್ಡರ್ ನೀಡಲಾಗಿದ್ದು, ಹಂತಹಂತವಾಗಿ ಪೂರೈಕೆಯಾಗುತ್ತಿದೆ. ಆದರೆ ಸುರಕ್ಷತಾ ಪರೀಕ್ಷೆ ಮತ್ತು ಸಿಗ್ನಲಿಂಗ್ ಟೆಸ್ಟಿಂಗ್ ಕೆಲಸಗಳು ಪೂರ್ಣಗೊಳ್ಳದ ಕಾರಣ ಪ್ರಯಾಣಿಕರು ಮತ್ತಷ್ಟು ಕಾಲ ಕಾಯುವುದು ಅನಿವಾರ್ಯವಾಗಿದೆ.

ಪಿಂಕ್ ಲೈನ್ ಮೆಟ್ರೋ ವಿಶೇಷತೆ ಏನು?

  • ಒಟ್ಟು ಉದ್ದ: 21.25 ಕಿ.ಮೀ
  • ನಿಲ್ದಾಣಗಳು: ಒಟ್ಟು 18 (12 ಅಂಡರ್ ಗ್ರೌಂಡ್, 6 ಎಲಿವೇಟೆಡ್)
  • ಮೊದಲ ಹಂತ: ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 6 ಮೇಲ್ಸೇತುವೆ ನಿಲ್ದಾಣಗಳು.
  • ಅಂಡರ್ ಗ್ರೌಂಡ್ ಕಾಮಗಾರಿ: 13.76 ಕಿ.ಮೀ ವ್ಯಾಪ್ತಿಯ ಸುರಂಗ ಮಾರ್ಗದ ಕೆಲಸ ನಡೆಯುತ್ತಿದ್ದು, ಈ ವರ್ಷದ ಅಂತ್ಯಕ್ಕೆ ಪೂರ್ಣ ಮಾರ್ಗ ಲಭ್ಯವಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಗುಡ್​​ ನ್ಯೂಸ್​​ ಕೊಟ್ಟ BWSSB: ಮೂರು ತಿಂಗಳ ಅವಧಿಗೆ OTS ಯೋಜನೆ ಜಾರಿ

ಬಿಎಂಆರ್‌ಸಿಎಲ್ ಪ್ರತಿಬಾರಿಯೂ ನೀಡಿದ ಸಮಯಕ್ಕೆ ಕಾಮಗಾರಿ ಮುಗಿಸದೆ ವಿಳಂಬ ಮಾಡುತ್ತಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link