Category Archives: Blog

Your blog category

ಇಷ್ಟು ಫೇಮ್ ಸಿಕ್ಕರೂ ಸಿನಿಮಾಗಳಲ್ಲಿ ಏಕೆ ನಟಿಸಲ್ಲ? ಕಾರಣ ತಿಳಿಸಿದ ಹನುಮಂತ – Kannada News | Why Bigg Boss Fame Hanumantha Rejected Movie Offers? Shocking Reason Revealed

ಸಾಕಷ್ಟು ಫೇಮ್ ಸಿಕ್ಕ ಹೊರತಾಗಿಯೂ ಹನುಮಂತ ಅವರು ಸಿನಿಮಾ ಮಾಡುತ್ತಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ಕಡ್ಡಿ ಮುರಿದಂತೆ ಹೇಳಿದ್ದಾರೆ. ‘ದೊಡ್ಡ ದೊಡ್ಡ ಹೀರೋಗಳ ಸಿನಿಮಾಗಳೇ ಓಡುತ್ತಿಲ್ಲ. ಹೀಗಿರುವಾಗ ನಮ್ಮ ಸಿನಿಮಾಗಳನ್ನು ಯಾರು ನೋಡುತ್ತಾರೆ? ಚೆನ್ನಾಗಿರುವ ಆಫರ್​​​ಗಳೇ ಬಂದಿದ್ದವು. ಆದರೆ, ನಾನು ಒಪ್ಪಿಕೊಂಡಿಲ್ಲ. ನನ್ನ ಬದಲು ಇನ್ಯಾರೋ ಮಾಡ್ತಾರೆ. ಅವರಿಗೂ ಚಾನ್ಸ್ ಸಿಕ್ಕಂತೆ ಆಗುತ್ತದೆ. ನಾನು ಊರಲ್ಲಿ ಇದ್ದೆ. ಮನೆ ಕಟ್ಟಿಸುತ್ತಾ ಇದ್ದೇನೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Gold Rate: ಚಿನ್ನದ ಬೆಲೆ ಸತತ ಎರಡನೇ ದಿನ ಇಳಿಕೆ; 25 ರೂ ತಗ್ಗಿದ ಬಂಗಾರದ ದರ – Kannada News | Gold Price Today on 17th June 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜೂನ್ 17: ಚಿನ್ನದ ಬೆಲೆ ಸತತ ಎರಡನೇ ದಿನ ಇಳಿಕೆಯಾಗಿದೆ. ನಿನ್ನೆಯಂತೆ ಇವತ್ತೂ ಸ್ವಲ್ಪ ತಗ್ಗಿದೆ. ನಿನ್ನೆ ಗ್ರಾಮ್​ಗೆ 15 ರೂ ಇಳಿದಿದ್ದ ಬಂಗಾರದ ದರ (Gold Rates) ಇವತ್ತು 25 ರೂ ಕಡಿಮೆಗೊಂಡಿದೆ. ಎರಡು ದಿನದಲ್ಲಿ 40 ರೂ ಇಳಿದಂತಾಗಿದೆ. ಆದರೆ, ವಿದೇಶಗಳಲ್ಲಿ ಹೆಚ್ಚಿನ ಕಡೆ ಇದರ ಬೆಲೆ ಹೆಚ್ಚಳ ಆಗಿರುವುದು ವಿಶೇಷ. ಬೆಳ್ಳಿ ಬೆಲೆ ನಿನ್ನೆಯಂತೆ ಇವತ್ತೂ ಬದಲಾವಣೆಗೊಂಡಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,38,500 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,51,100 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,38,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 17ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,110 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,850 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,332 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,110 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,850 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 265 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,850 ರೂ
  • ಚೆನ್ನೈ: 14,030 ರೂ
  • ಮುಂಬೈ: 13,850 ರೂ
  • ದೆಹಲಿ: 13,865 ರೂ
  • ಕೋಲ್ಕತಾ: 13,850 ರೂ
  • ಕೇರಳ: 13,850 ರೂ
  • ಅಹ್ಮದಾಬಾದ್: 13,855 ರೂ
  • ಜೈಪುರ್: 13,865 ರೂ
  • ಲಕ್ನೋ: 13,865 ರೂ
  • ಭುವನೇಶ್ವರ್: 13,850 ರೂ

ಇದನ್ನೂ ಓದಿ: E20 ಪೆಟ್ರೋಲ್ ಹಾಕಿಸುವ ವಾಹನಗಳ ಇನ್ಷೂರೆನ್ಸ್ ಕ್ಲೇಮ್ ತಿರಸ್ಕೃತವಾಗುತ್ತದಾ? ಸರ್ಕಾರದ ಸ್ಪಷ್ಟನೆ ಇದು

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 582 ರಿಂಗಿಟ್ (13,515 ರುಪಾಯಿ)
  • ದುಬೈ: 522.25 ಡಿರಾಮ್ (13,427 ರುಪಾಯಿ)
  • ಅಮೆರಿಕ: 142.50 ಡಾಲರ್ (13,460 ರುಪಾಯಿ)
  • ಸಿಂಗಾಪುರ: 190.60 ಸಿಂಗಾಪುರ್ ಡಾಲರ್ (14,049 ರುಪಾಯಿ)
  • ಕತಾರ್: 521.50 ಕತಾರಿ ರಿಯಾಲ್ (13,530 ರೂ)
  • ಸೌದಿ ಅರೇಬಿಯಾ: 536 ಸೌದಿ ರಿಯಾಲ್ (13,493 ರುಪಾಯಿ)
  • ಓಮನ್: 55 ಒಮಾನಿ ರಿಯಾಲ್ (13,496 ರುಪಾಯಿ)
  • ಕುವೇತ್: 43.84 ಕುವೇತಿ ದಿನಾರ್ (13,493 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 265 ರೂ
  • ಚೆನ್ನೈ: 275 ರೂ
  • ಮುಂಬೈ: 265 ರೂ
  • ದೆಹಲಿ: 265 ರೂ
  • ಕೋಲ್ಕತಾ: 265 ರೂ
  • ಕೇರಳ: 275 ರೂ
  • ಅಹ್ಮದಾಬಾದ್: 265 ರೂ
  • ಜೈಪುರ್: 265 ರೂ
  • ಲಕ್ನೋ: 265 ರೂ
  • ಭುವನೇಶ್ವರ್: 275 ರೂ
  • ಪುಣೆ: 265

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಸಹರಾ ಮರುಭೂಮಿಯಲ್ಲಿ ಒಂಟೆ ಮೇಲೆ ಕುಳಿತು ಝೂಮ್ ಮೀಟಿಂಗ್ ಹಾಜರಾದ ಉದ್ಯೋಗಿ – Kannada News | Man sits on camel in Sahara desert to participate in Zoom meeting

ಕೆಲವರಿಗೆ ಕೆಲಸದ ಒತ್ತಡ (Work stress) ಎಷ್ಟು ಇರುತ್ತದೆ ಅಂದ್ರೆ ವೈಯುಕ್ತಿಕ ಜೀವನವನ್ನು ಎಂಜಾಯ್ ಮಾಡಲು ಟೈಮ್ ಇಲ್ಲ. ಇನ್ನು ವರ್ಕ್ ಫ್ರಮ್ ಹೋಮ್ ಉದ್ಯೋಗಿಗಳಂತೂ ಲ್ಯಾಪ್ ಟಾಪ್ ಬಿಟ್ಟು ಕದಲಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿಯು ಸಹರಾ ಮರುಭೂಮಿಯಲ್ಲಿ (Sahara desert) ಒಂಟೆ ಮೇಲೆ ಕುಳಿತು ಆಫೀಸಿನ ಝೂಮ್ ಮೀಟಿಂಗ್‌ಗೆ ಹಾಜರಾಗಿದ್ದಾನೆ. ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದ್ದು, ಕೆಲಸದ ಮೇಲಿನ ಶ್ರದ್ಧೆ ಅಂದ್ರೆ ಇದು ಎಂದು ಕಾಮೆಂಟ್ ಮಾಡಿದ್ದಾರೆ.

ಪ್ರಣವ್‌ (Pranav) ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಅಸಾಮಾನ್ಯ ಕೆಲಸದ ಸೆಟಪ್ ಅನ್ನು ತೋರಿಸುತ್ತದೆ. ಸಹಾರಾ ಮರುಭೂಮಿಯ ಮಧ್ಯದಲ್ಲಿ ಒಂಟೆಯ ಮೇಲೆ ಸವಾರಿ ಮಾಡುತ್ತ ಉದ್ಯೋಗಿ ಝೂಮ್ ಮೀಟಿಂಗ್ ಹಾಜರಾಗಿದ್ದಾನೆ. ಈ ಕ್ಲಿಪಿಂಗ್ ನಲ್ಲಿ ವಿಶಾಲವಾದ ಸಹರಾ ಮರುಭೂಮಿಯ ದೃಶ್ಯವನ್ನು ನೀವು ನೋಡಬಹುದು. ಇಲ್ಲೊಬ್ಬ ವ್ಯಕ್ತಿ ಒಂಟೆಯ ಮೇಲೆ ವ್ಯಕ್ತಿ ಕುಳಿತುಕೊಂಡಿದ್ದಾನೆ. ಒಂಟೆ ಚಲಿಸುತ್ತಿದ್ದರೂ ಆಫೀಸಿನ ಝೂಮ್ ಮೀಟಿಂಗ್ ಭಾಗಿಯಾಗಿ ಅದರಲ್ಲೇ ಮುಳುಗಿ ಹೋಗಿದ್ದಾನೆ‌.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತುರ್ತು ಶಸ್ತ್ರ ಚಿಕಿತ್ಸೆ ಅಂದ್ರು ವಿಚಿತ್ರ ಬೇಡಿಕೆ ಇಟ್ಟ ಬಾಸ್, ಕಹಿ ಅನುಭವ ಹಂಚಿಕೊಂಡ ಉದ್ಯೋಗಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ಮರುಭೂಮಿಯಲ್ಲಿ ಇಂಟರ್ನೆಟ್ ಸಂಪರ್ಕ ಹೇಗೆ ಸಿಕ್ಕಿತು ಎಂದು ಕೇಳಿದ್ದಾರೆ. ಇನ್ನೊಬ್ಬರು, ಕೆಲಸದ ಮೇಲಿನ ಶ್ರದ್ಧೆಗೆ ನನ್ನದೊಂದು ಸಲಾಂ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇದು ರಿಮೋಟ್ ಕೆಲಸದ ಆದರ್ಶ ಆವೃತ್ತಿಯನ್ನು ಪ್ರತಿನಿಧಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪರಿಷತ್ ಚುನಾವಣೆ: ಜೆಡಿಎಸ್​​ನಿಂದ ಕಾಂಗ್ರೆಸ್​​ ಶಾಸಕರ ಸಂಪರ್ಕ ಸುದ್ದಿ ಸುಳ್ಳೆಂದ ಹೆಚ್​​ಡಿಕೆ

ಬೆಂಗಳೂರು, ಜೂನ್​​ 17: ಪರಿಷತ್ ಚುನಾವಣೆಗೆ ಜೆಡಿಎಸ್ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಆಪರೇಷನ್ ನಡೆಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಜೆಡಿಎಸ್ ಪಕ್ಷ ಇಂತಹ ಯಾವುದೇ ಆಪರೇಷನ್ ನಡೆಸುತ್ತಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ. ಸರ್ಕಾರ ಅವರ ಕೈಯಲ್ಲಿದೆ. ಮ್ಯಾನ್ ಪವರ್, ಮಸಲ್ ಪವರ್, ಹಣದ ಪವರ್ ಎಲ್ಲಾ ಇಟ್ಕೊಂಡವ್ರೆ. ಅವರ ಮುಂದೆ ನಾವು ಫೈಟ್ ಮಾಡಕ್ಕಾಗುತ್ತಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಜೆಡಿಎಸ್ ತನ್ನ ಪಕ್ಷದ ಮತಗಳು ಚಲ್ಲಾಪಿಲ್ಲಿ ಆಗಬಾರದು, ಒಟ್ಟಾಗಿರಬೇಕು ಎಂಬ ಉದ್ದೇಶದಿಂದಲೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಗೆಲ್ಲುವ ಉದ್ದೇಶದಿಂದ ಕುತಂತ್ರದ ಮಾರ್ಗ ಅನುಸರಿಸುವ ಪ್ರಶ್ನೆಯೇ ಇಲ್ಲ. ನಮ್ಮ ಅಭ್ಯರ್ಥಿ ಆತ್ಮಸಾಕ್ಷಿ ಮತವನ್ನು ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಸರ್ಪ್ಲಸ್ ಮತಗಳ ಬೆಂಬಲಕ್ಕಾಗಿ ಬಿಜೆಪಿ ನಾಯಕರಿಗೆ ಮನವಿ ಮಾಡಲಾಗಿದೆ. ಇದು ನಮ್ಮ ಮತಗಳನ್ನು ಭದ್ರವಾಗಿ ಇಟ್ಟುಕೊಳ್ಳುವ ಸಲುವಾಗಿ ಮಾಡಿದ ಪ್ರಯತ್ನವಷ್ಟೇ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

‘ನರಗಳು ಬ್ಲಾಕ ಆಗಿವೆ’; ಆರೋಗ್ಯದ ಬಗ್ಗೆ ಸೋನು ನಿಗಮ್ ಆತಂಕಕಾರಿ ಮಾಹಿತಿ – Kannada News | Sonu Nigam’s Nerve Problem: Singer Faces Health Challenge, Vows to Perform

ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರು ಸದ್ಯ ತೀವ್ರವಾದ ನರಗಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದಾಗ್ಯೂ, ಅವರು ತಾವು ಮುಂಚಿತವಾಗಿ ಒಪ್ಪಿಕೊಂಡಿರುವ ಸಂಗೀತ ಕಚೇರಿಯನ್ನು ರದ್ದುಗೊಳಿಸದೆ, ಎಂದಿನಂತೆ ವೇದಿಕೆ ಏರಲು ಸಜ್ಜಾಗಿದ್ದಾರೆ. ಮುಂಬೈನಲ್ಲಿ ನಡೆಯಲಿರುವ ಲೈವ್ ಪರ್ಫಾರ್ಮೆನ್ಸ್‌ಗೂ ಮುನ್ನ ಸೋನು ನಿಗಮ್ ಅವರು ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಆರೋಗ್ಯದ ಸ್ಥಿತಿಯ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

ನೋವಿನ ನಡುವೆ ಚಿಕಿತ್ಸೆ: ಸೋನು ನಿಗಮ್ ಮಾತು

ತಮ್ಮ ಅನಾರೋಗ್ಯದ ಕುರಿತು ಮಾತನಾಡಿರುವ ಸೋನು ನಿಗಮ್, ‘ನನ್ನ ನರಗಳು ಬ್ಲಾಕ್ ಆಗಿವೆ. ಕಳೆದ ಒಂದು ವಾರದಿಂದ ಎಂಆರ್‌ಐ ಮತ್ತು ಸಿಟಿ (CT) ಸ್ಕ್ಯಾನ್‌ಗಳನ್ನು ಮಾಡಿಸಿಕೊಳ್ಳುತ್ತಿದ್ದೇನೆ ಹಾಗೂ ಸಾಕಷ್ಟು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದಾರೆ. ಚಿಕಿತ್ಸೆಯ ಭಾಗವಾಗಿ ನಡೆಯುತ್ತಿರುವ ಫಿಸಿಯೋಥೆರಪಿ ಸೆಷನ್‌ಗಳು ಅತ್ಯಂತ ನೋವಿನಿಂದ ಕೂಡಿವೆ ಎಂದಿರುವ ಅವರು, ಸದ್ಯ ನೋವು ನಿವಾರಕ ಮಾತ್ರೆಗಳ ಸಹಾಯದಿಂದ ನೋವನ್ನು ತಡೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ‘ಕನ್ನಡದ ಹೀರೋಗಳಿಗೆ ಇದನ್ನು ಹೇಳೋ ಗಟ್ಸ್ ಇದೆಯಾ; ಸೋನು ನಿಗಮ್ ಹೀಗೆ ಹೇಳಿದ್ರಾ?

ಗಂಟಲಿನ ಮೇಲೂ ಬಿದ್ದಿದೆ ಪ್ರಭಾವ!

ನರಗಳನ್ನು ಸಡಿಲಗೊಳಿಸಲು ವೈದ್ಯರು ನೀಡಿರುವ ಹೈ-ಡೋಸ್ ಔಷಧಿಗಳಿಂದಾಗಿ ಸೋನು ನಿಗಮ್ ಅವರ ಗಂಟಲಿನ ಧ್ವನಿಯಲ್ಲೂ ಏರುಪೇರಾಗಿದೆ. ‘ಮಾತ್ರೆಗಳ ಕಾರಣದಿಂದಾಗಿ ನನ್ನ ಗಂಟಲು ಕೂಡ ಸ್ವಲ್ಪ ಭಾರವಾದಂತೆ ಅನಿಸುತ್ತಿದೆ’ ಎಂದು ಅವರು ಹೇಳಿದ್ದಾರೆ. ಸಾಮಾನ್ಯವಾಗಿ ಗಾಯಕರಿಗೆ ಲೈವ್ ಶೋ ಇರುವಾಗ ಧ್ವನಿಯಲ್ಲಿ ಸಣ್ಣ ಬದಲಾವಣೆಯಾದರೂ ಆತಂಕ ಮೂಡಿಸುತ್ತದೆ. ಆದರೆ ಸೋನು ನಿಗಮ್ ಮಾತ್ರ ಯಾವುದಕ್ಕೂ ಧೃತಿಗೆಡದೆ ಸ್ಟೇಜ್ ಹತ್ತಲು ನಿರ್ಧರಿಸಿದ್ದಾರೆ.

ಅಭಿಮಾನಿಗಳಿಂದ ಹಾರೈಕೆ:

ತುಂಬಾ ದಿನಗಳ ನಂತರ ಮುಂಬೈನಲ್ಲಿ ವೇದಿಕೆ ಏರುತ್ತಿರುವುದರಿಂದ, ಯಾವುದೇ ಕಾರಣಕ್ಕೂ ಶೋ ಕ್ಯಾನ್ಸಲ್ ಮಾಡುವುದಿಲ್ಲ ಎಂದು ಸೋನು ಸ್ಪಷ್ಟಪಡಿಸಿದ್ದಾರೆ. ಗಾಯಕರ ಈ ವೃತ್ತಿಪರತೆ ಮತ್ತು ಬದ್ಧತೆಯನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಸೋನು ನಿಗಮ್ ಅವರ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಸಾವಿರಾರು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗುಜರಾತ್: ಭೀಕರ ರಸ್ತೆ ಅಪಘಾತ, ಲಾರಿಗೆ ಡಿಕ್ಕಿ ಹೊಡೆದ ಸ್ಲೀಪರ್ ಬಸ್, ಆರು ಪ್ರಯಾಣಿಕರು ಸಾವು – Kannada News | Deadly Highway Collision in Vadodara Leaves Six Dead and Several Injured

ವಡೋದರಾ, ಜೂನ್ 17: ಗುಜರಾತ್‌ನ ವಡೋದರಾ-ಜರೋಡ್ ಹೆದ್ದಾರಿಯಲ್ಲಿ ಇಂದು ಮುಂಜಾನೆ ಅತ್ಯಂತ ಭೀಕರ ರಸ್ತೆ ಅಪಘಾತ(Accident)ವೊಂದು ಸಂಭವಿಸಿದೆ. ಚಲಿಸುತ್ತಿದ್ದ ಟ್ರಕ್‌ಗೆ (ಲಾರಿ) ಐಷಾರಾಮಿ ಸ್ಲೀಪರ್ ಬಸ್ಸೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಎಂಟಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.

ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಐಷಾರಾಮಿ ಖಾಸಗಿ ಬಸ್ ರಾಜಸ್ಥಾನದ ಬನ್ಸ್ವಾರಾದಿಂದ ಗುಜರಾತ್‌ನ ಸೂರತ್ ನಗರಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು. ಜರೋಡ್ ಬಳಿಯ ಹೆದ್ದಾರಿಯಲ್ಲಿರುವ ಕೋಟಂಬಿ ಗ್ರಾಮದ ಹತ್ತಿರ ಬಸ್ ಬಂದಾಗ, ಚಾಲಕನ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಟ್ರಕ್‌ಗೆ ಜೋರಾಗಿ ಡಿಕ್ಕಿ ಹೊಡೆದಿದೆ.

ಅಪಘಾತ ಸಂಭವಿಸಿದ ಮುಂಜಾನೆ ಸಮಯದಲ್ಲಿ ಬಸ್ಸಿನಲ್ಲಿದ್ದ ಬಹುತೇಕ ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದರು. ಹೀಗಾಗಿ ಯಾರಿಗೂ ತಕ್ಷಣಕ್ಕೆ ಏನು ನಡೆಯುತ್ತಿದೆ ಎಂದು ತಿಳಿಯದೇ, ಹಲವರು ಬಸ್ಸಿನ ಒಳಗೆ ಸಿಲುಕಿಕೊಂಡರು.

ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಭೀಕರ ಸರಣಿ ಅಪಘಾತ: ಪ್ರತ್ಯೇಕ ದುರಂತಗಳಲ್ಲಿ ನಾಲ್ವರ ದುರ್ಮರಣ, ಮೂವರಿಗೆ ಗಾಯ

ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ ಬಸ್ಸಿನ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಅಪಘಾತದ ಸುದ್ದಿ ತಿಳಿದ ತಕ್ಷಣ ಜರೋಡ್ ಪೊಲೀಸರು ಮತ್ತು ಎನ್‌ಡಿಆರ್‌ಎಫ್ (NDRF) ರಕ್ಷಣಾ ತಂಡಗಳು ಗ್ಯಾಸ್ ಕಟರ್‌ಗಳೊಂದಿಗೆ ಸ್ಥಳಕ್ಕೆ ಧಾವಿಸಿದವು. ಬಸ್ಸಿನ ಶೀಟ್‌ಗಳನ್ನು ಕತ್ತರಿಸಿ ಒಳಗೆ ಸಿಲುಕಿದ್ದ ಜನರನ್ನು ಹೊರತೆಗೆಯಲಾಯಿತು.

ವಿಡಿಯೋ

ಗಾಯಗೊಂಡಿರುವ ಎಂಟಕ್ಕೂ ಹೆಚ್ಚು ಜನರನ್ನು ತಕ್ಷಣವೇ ಚಿಕಿತ್ಸೆಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸದ್ಯಕ್ಕೆ ಮೃತಪಟ್ಟವರ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದ್ದು, ಚಾಲಕ ನಿದ್ದೆಗಣ್ಣಿನಲ್ಲಿದ್ದದ್ದು ಅಪಘಾತಕ್ಕೆ ಕಾರಣವೇ ಅಥವಾ ತಾಂತ್ರಿಕ ದೋಷವೇ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಡೆಬಿಟ್​​ ಕಾರ್ಡ್​​ ವಂಚನೆ: ಉಡುಪಿಯ ವ್ಯಕ್ತಿಗೆ 2.12 ಲಕ್ಷ ರೂಪಾಯಿ ದೋಖಾ; ದೂರು ದಾಖಲು – Kannada News | Udupi Man Duped of 2.12 Lakh in Debit Card Fraud After Hospital Payment

ಉಡುಪಿ, ಜೂನ್​​ 17: ರಾಜ್ಯದಲ್ಲಿ ಇತ್ತೀಚೆಗೆ ಸೈಬರ್​​ ವಂಚನೆ ಪ್ರಕರಗಳ ಮೇಲಿಂದ ಮೇಲೆ ವರದಿಯಾಗುತ್ತಿದ್ದು, ಪೊಲೀಸರು ಚಾಪೆ ಕೆಳಗೆ ತೂರಿದರೆ ವಂಚಕರು ರಂಗೋಲಿ ಕೆಳಗೆ ನುಗ್ಗುವ ಕೆಲಸ ಮಾಡುತ್ತಿದ್ದಾರೆ. ಸೈಬರ್​​ ಫ್ರಾಡ್​​ಗಳೀಗ ನಾನಾ ರೂಪಗಳನ್ನು ಪಡೆದುಕೊಂಡಿದ್ದು, ಜನಸಾಮಾನ್ಯರನ್ನು ಸುಲಭವಾಗಿ ಯಾಮಾರಿಸುವ ಕೆಲಸಗಳು ನಡೆಯುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಉಡುಪಿಯಲ್ಲೊಂದು ಪ್ರಕರಣ ನಡೆದಿದೆ. ಡೆಬಿಟ್ ಕಾರ್ಡ್ ಮೂಲಕ ವಂಚನೆ ನಡೆಸಿರುವ ಖದೀಮರು ವ್ಯಕ್ತಿಯೋರ್ವರ ಖಾತೆಯಿಂದ ಬರೋಬ್ಬರಿ 2 ಲಕ್ಷ ರೂಪಾಯಿ ಹಣ ದೋಚಿದ್ದಾರೆ.

ದೂರುದಾರರು ಜೂನ್ 3ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ತಮ್ಮ ಡೆಬಿಟ್ ಕಾರ್ಡ್ ಬಳಸಿ ಆಸ್ಪತ್ರೆ ಬಿಲ್ ಪಾವತಿಸಿದ್ದರು. ಬಳಿಕ ಅವರು ಯಾವುದೇ ಹಣಕಾಸು ವ್ಯವಹಾರ ನಡೆಸಿರಲಿಲ್ಲ. ಹೀಗಿದ್ದರೂ ಜೂನ್ 8ರಂದು ಅವರ ಬ್ಯಾಂಕ್ ಖಾತೆಯಿಂದ ಹಣ ಡೆಬಿಟ್ ಆಗಿರುವ ಕುರಿತು ಎಸ್‌ಎಂಎಸ್ ಸಂದೇಶ ಬಂದಿದ್ದು, ಇದರಿಂದ ಅನುಮಾನಗೊಂಡ ಅವರು ಬ್ಯಾಂಕ್‌ಗೆ ತೆರಳಿ ವ್ಯವಹಾರಗಳ ವಿವರ ಪರಿಶೀಲಿಸಿದಾಗ ವಂಚನೆ ನಡೆದಿರೋದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಸಾವು ಹೀಗೂ ಬರಬಹುದು; ಉಡುಪಿಯಲ್ಲಿ ತೆಂಗಿನಕಾಯಿ ಬಿದ್ದು ಹಸುಗೂಸು ಸಾವು

ಪರಿಶೀಲನೆ ವೇಳೆ ಜೂನ್ 5ರಿಂದ 8ರ ನಡುವಿನ ಅವಧಿಯಲ್ಲಿ, ಅವರ ಅರಿವಿಲ್ಲದೆ 2.12 ಲಕ್ಷವನ್ನು ಅಪರಿಚಿತ ಖಾತೆಗೆ ವರ್ಗಾವಣೆ ಮಾಡಿರುವುದು ಗೊತ್ತಾಗಿದೆ. ಹೀಗಾಗಿ ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಗೆ ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(D) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಟೈಮ್ಸ್​​ ಆಫ್​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ರಾಂಚಿಯ ಆರ್‌ಎಸ್‌ಎಸ್ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ – Kannada News | Ranchi RSS Office Petrol Bomb Attack: Investigation Underway After Midnight Incident

ರಾಂಚಿ, ಜೂನ್ 17: ಜಾರ್ಖಂಡ್ ರಾಜಧಾನಿ ರಾಂಚಿಯ ನಿವಾರಣ್‌ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪ್ರಾಂತೀಯ ಕಚೇರಿಯ ಮೇಲೆ ಮಂಗಳವಾರ ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ. ಸಕಾಲದಲ್ಲಿ ಮುನ್ನೆಚ್ಚರಿಕೆ ವಹಿಸಿದ್ದರಿಂದ ಯಾವುದೇ ಪ್ರಾಣಾಪಾಯ ಅಥವಾ ದೊಡ್ಡ ಪ್ರಮಾಣದ ಆಸ್ತಿ ಹಾನಿ ಸಂಭವಿಸಿಲ್ಲ.

ಮಂಗಳವಾರ ಮಧ್ಯರಾತ್ರಿ ಸುಮಾರು 12.36 ರ ವೇಳೆಗೆ ಈ ದಾಳಿ ನಡೆದಿದೆ. ಬುಧವಾರ ಮುಂಜಾನೆ ಆರ್‌ಎಸ್‌ಎಸ್ ಸ್ವಯಂಸೇವಕರು ಪ್ರಾರ್ಥನೆಗಾಗಿ ಸಭಾಂಗಣಕ್ಕೆ ಹೋದಾಗ ಅಲ್ಲಿ ಪೆಟ್ರೋಲ್ ತುಂಬಿದ್ದ ಬಾಟಲಿಗಳು ಪತ್ತೆಯಾಗಿವೆ. ಇದರಿಂದ ಅನುಮಾನಗೊಂಡು ಕಚೇರಿಯ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಇಬ್ಬರು ಯುವಕರು ಕಚೇರಿಯ ಮೇಲೆ ಪೆಟ್ರೋಲ್ ಬಾಂಬ್ ಎಸೆಯುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ದಾಳಿಯ ಸಮಯದಲ್ಲಿ ಕಚೇರಿಯಲ್ಲಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ನಿದ್ರಿಸುತ್ತಿದ್ದರು.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಕೇಂದ್ರ ರಕ್ಷಣಾ ರಾಜ್ಯ ಸಚಿವ ಸಂಜಯ್ ಸೇಠ್, ಜಾರ್ಖಂಡ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ ಹಾಗೂ ನೂರಾರು ಆರ್‌ಎಸ್‌ಎಸ್ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದರು. ಇದು ಅತ್ಯಂತ ಗಂಭೀರವಾದ ವಿಷಯವಾಗಿದ್ದು, ಯಾವುದೋ ದೊಡ್ಡ ಸಂಚಿಗೆ ಸಿದ್ಧತೆ ನಡೆದಂತೆ ಕಾಣುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದು, ಕಠಿಣ ಕ್ರಮಕ್ಕೆ ಒತ್ತಾಯಿಸಲಾಗಿದೆ ಎಂದು ಬಾಬುಲಾಲ್ ಮರಾಂಡಿ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಹಿಂದೂ ಧರ್ಮ ನೋಂದಣಿ ಆಗಿದೆಯೇ? ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಮೋಹನ್‌ ಭಾಗವತ್‌ ತಿರುಗೇಟು

ಮಾಹಿತಿ ಸಿಗುತ್ತಿದ್ದಂತೆಯೇ ಸದರ್ ಡಿಎಸ್‌ಪಿ ನೇತೃತ್ವದ ದೊಡ್ಡ ಪೊಲೀಸ್ ಪಡೆ ಸ್ಥಳಕ್ಕೆ ಆಗಮಿಸಿ ಇಡೀ ಕಚೇರಿಯನ್ನು ಸುತ್ತುವರೆದಿದೆ. ವಿಧಿವಿಜ್ಞಾನ ತಂಡವು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಕಚೇರಿಯ ಸುತ್ತಮುತ್ತಲಿನ ರಸ್ತೆಗಳ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ದಾಳಿಕೋರರ ಪತ್ತೆಗೆ ಜಾಲ ಬೀಸಿದ್ದಾರೆ.

ವಿಡಿಯೋ

ಈ ಘಟನೆಯಿಂದಾಗಿ ಸ್ಥಳೀಯರಲ್ಲಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರಲ್ಲಿ ಆತಂಕ ಮೂಡಿದ್ದು, ಮುಂಜಾಗ್ರತಾ ಕ್ರಮವಾಗಿ ಕಚೇರಿಯ ಸುತ್ತಲೂ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಶಾಂತಿ ಕಾಪಾಡಬೇಕೆಂದು ರಾಂಚಿ ಜಿಲ್ಲಾ ಆಡಳಿತ ಮನವಿ ಮಾಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗೋಲು ಬಾರಿಸಿ ಕ್ಷಮೆಯಾಚಿಸಿದ ಯಾಸಿನ್ ಅಯಾರಿ..! – Kannada News | FIFA Wodld Cup 2026: Yasin Ayari Apologizes After Scoring Against Tunisia

FIFA World Cup 2026: ಫಿಫಾ ವಿಶ್ವಕಪ್‌ನಲ್ಲಿ ಸ್ವೀಡನ್ ಪರ ಮೊದಲ ಪಂದ್ಯದಲ್ಲೇ ಎರಡು ಗೋಲು ಬಾರಿಸಿ ಯಾಸಿನ್ ಅಯಾರಿ ಸಖತ್ ಸುದ್ದಿಯಾಗಿದ್ದಾರೆ. ಹೀಗೆ ಸುದ್ದಿಯಾಗಲು ಮುಖ್ಯ ಕಾರಣ 2 ಭರ್ಜರಿ ಗೋಲು ದಾಖಲಿಸಿದರೂ ಸಂಭ್ರಮಿಸದೇ ಇರುವುದು. ಬದಲಾಗಿ ಎದುರಾಳಿ ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ್ದಾರೆ.

ಮೆಕ್ಸಿಕೋದ ಎಸ್ಟಾಡಿಯೊ ಬಿಬಿವಿಎ ಕ್ರೀಡಾಂಗಣದಲ್ಲಿ ನಡೆದ ಗ್ರೂಪ್ ‘ಎಫ್’ ಪಂದ್ಯದಲ್ಲಿ ಟ್ಯುನಿಝಿಯಾ ಮತ್ತು ಸ್ವೀಡನ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​ನ ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಸ್ವೀಡನ್ ತಂಡವು 5-1 ಅಂತರದಿಂದ ಟ್ಯುನಿಝಿಯಾವನ್ನು ಮಣಿಸಿತು.

ಮೊದಲೇ ಹೇಳಿದಂತೆ,  ಈ ಪಂದ್ಯದ ಪ್ರಮುಖ ಆಕರ್ಷಣೆಯಾಗಿದ್ದು 22 ವರ್ಷದ ಮಿಡ್‌ಫೀಲ್ಡರ್ ಯಾಸಿನ್ ಅಯಾರಿ. ಈ ಪಂದ್ಯದಲ್ಲಿ ಎರಡು ಅದ್ಭುತ ಗೋಲುಗಳನ್ನು ಹೊಡೆದರೂ, ಸಂಭ್ರಮಿಸದಿರುವ ಅವರ ಭಿನ್ನ ನಡವಳಿಕೆ ಇದೀಗ ಎಲ್ಲರ ಮನ ಗೆದ್ದಿದೆ.

ಮೌನಕ್ಕೆ ಶರಣಾದ ಅಯಾರಿ:

ಪಂದ್ಯದ 7ನೇ ನಿಮಿಷದಲ್ಲಿ ಟ್ಯುನಿಝಿಯಾ ಗೋಲ್‌ಕೀಪರ್ ಚಮಾಖ್ ಮಾಡಿದ ತಪ್ಪಿನಿಂದ ಸಿಕ್ಕ ಅವಕಾಶವನ್ನು ಬಳಸಿಕೊಂಡ ಅಯಾರಿ, ಪೆನಾಲ್ಟಿ ಬಾಕ್ಸ್‌ನ ಹೊರಗಿನಿಂದಲೇ ರಾಕೆಟ್ ವೇಗದ ಲಾಂಗ್-ರೇಂಜ್ ಗೋಲ್ ಬಾರಿಸಿದರು. ಇದು ಈ ಬಾರಿಯ ವಿಶ್ವಕಪ್‌ನ ಅತ್ಯಂತ ವೇಗದ ಮತ್ತು ಅತ್ಯುತ್ತಮ ಗೋಲುಗಳಲ್ಲಿ ಒಂದಾಗಿತ್ತು.

ಆದರೆ, ಅಷ್ಟು ದೊಡ್ಡ ಗೋಲು ಹೊಡೆದರೂ ಅಯಾರಿ ಯಾವುದೇ ರೀತಿಯ ಸಂಭ್ರಮಾಚರಣೆ ಮಾಡಲಿಲ್ಲ. ಬದಲಿಗೆ ತಮ್ಮ ಎರಡೂ ಕೈಗಳನ್ನು ಸಾಂಕೇತಿಕವಾಗಿ ಮೇಲೆತ್ತಿ ಟ್ಯುನಿಝಿಯಾ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದರು.

ಕ್ಷಮೆ ಕೇಳಲು ಕಾರಣವೇನು?

ಯಾಸಿನ್ ಅಯಾರಿ ಸ್ವೀಡನ್‌ನಲ್ಲಿ ಹುಟ್ಟಿ ಬೆಳೆದಿದ್ದರೂ, ಅವರ ತಂದೆ ಅಝೌಜ್ ಅಯಾರಿ ಟ್ಯುನಿಝಿಯಾ ಮೂಲದವರಾಗಿದ್ದಾರೆ. ತಮ್ಮ ರಕ್ತಗತ ಸಂಬಂಧವಿರುವ ದೇಶದ ವಿರುದ್ಧವೇ ಗೋಲು ಹೊಡೆದಾಗ, ಅಲ್ಲಿನ ಜನರ ಭಾವನೆಗಳಿಗೆ ಧಕ್ಕೆ ತರಬಾರದು ಎಂದು ಅವರು ಭಾವಿಸಿದ್ದರು. ಹೀಗಾಗಿ ಗೋಲು ಬಾರಿಸಿದ ಬಳಿಕ ಯಾಸಿನ್ ಅಯಾರಿ ಟ್ಯುನಿಝಿಯಾ ಅಭಿಮಾನಿಗಳಿದ್ದ ಗ್ಯಾಲರಿಯತ್ತ ಮುಖ ಮಾಡಿ ಕ್ಷಮೆಯಾಚಿಸಿದ್ದಾರೆ.

ಕುತೂಹಲಕಾರಿ ವಿಷಯ ಎಂದರೆ 2022ರ ವಿಶ್ವಕಪ್‌ಗೂ ಮುನ್ನ ಟ್ಯುನಿಝಿಯಾ ಫುಟ್‌ಬಾಲ್ ಫೆಡರೇಶನ್ ತನ್ನ ದೇಶದ ಪರ ಆಡುವಂತೆ ಅಯಾರಿಗೆ ಮುಕ್ತ ಆಹ್ವಾನ ನೀಡಿತ್ತು. ಆದರೆ ಅಯಾರಿ ತಾವು ಬೆಳೆದ ಸ್ವೀಡನ್ ದೇಶವನ್ನೇ ಆರಿಸಿಕೊಂಡಿದ್ದರು. ಅದರಂತೆ ಇದೀಗ ಸ್ವೀಡನ್ ಪರ ಕಣಕ್ಕಿಳಿದಿರುವ ಯಾಸಿನ್ ಟ್ಯುನಿಝಿಯಾ ವಿರುದ್ಧ 2 ಗೋಲು ದಾಖಲಿಸಿ ಮಿಂಚಿದ್ದಾರೆ.

ತಂದೆಯ ಬೆಂಬಲ:

ಟ್ಯುನಿಝಿಯಾ ಪರ ಕಣಕ್ಕಿಳಿಯಲು ನೀಡಿದ ಆಹ್ವಾನವನ್ನು ತಿರಸ್ಕರಿಸಿದ ಯಾಸಿನ್ ಅಯಾರಿ ನಿರ್ಧಾರವನ್ನು ಅವರ ತಂದೆ ಬೆಂಬಲಿಸಿದ್ದರು. ಅಯಾರಿ ಅವರ ತಂದೆ ಸ್ವೀಡನ್‌ನ ಅಫ್ಟನ್‌ಬ್ಲಾಡೆಟ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, “ತನ್ನನ್ನು ಸಲಹಿದ, ಬೆಳೆಸಿದ ದೇಶಕ್ಕೆ ಮರಳಿ ಏನನ್ನಾದರೂ ನೀಡಲು ಮಗ ಸ್ವೀಡನ್ ಪರ ಆಡಬೇಕೆಂದು ನಾನೇ ಬಯಸಿದ್ದೆ”  ಎಂದು ತಿಳಿಸಿದ್ದರು.

ಇದೀಗ ತಂದೆಯ ಇಚ್ಛೆಯಂತೆ ಸ್ವೀಡನ್ ಪರ ಮೊದಲ ಮ್ಯಾಚ್​ನಲ್ಲೇ 22 ವರ್ಷದ ಯಾಸಿನ್ ಅಯಾರಿ ಕಮಾಲ್ ಮಾಡಿದ್ದಾರೆ. ಈ ಕಮಾಲ್​ನೊಂದಿಗೆ ತಂದೆ ತವರಾದ ಟ್ಯುನಿಝಿಯಾ ಅಭಿಮಾನಿಗಳಲ್ಲಿ ಕ್ಷಮೆಯಾಚಿಸುವ ಮೂಲಕ ಅವರ ಮನಗೆಲ್ಲುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಎರಡನೇ ಬಾರಿ ಸಂಭ್ರಮ:

ಪಂದ್ಯ ಮುಗಿಯಲು ಕೆಲವೇ ಕ್ಷಣಗಳು ಬಾಕಿ ಇರುವಾಗ (90+6ನೇ ನಿಮಿಷದಲ್ಲಿ), ಯಾಸಿನ್ ಅಯಾರಿ ಮತ್ತೊಂದು ಅದ್ಭುತ ಗೋಲ್ ಬಾರಿಸಿ ಸ್ವೀಡನ್‌ನ ಗೆಲುವನ್ನು 5-1 ಕ್ಕೆ ತಂದಿಟ್ಟರು. ಆದರೆ ಈ ಬಾರಿ ಅವರು ಮೊದಲಿನಂತೆ ಸುಮ್ಮನೆ ನಿಲ್ಲಲಿಲ್ಲ.

ಮೈದಾನದಲ್ಲಿ ಮಂಡಿಯೂರಿ ಸ್ಲೈಡ್ ಮಾಡುತ್ತಾ, ತಮ್ಮ ಕಿವಿಗೆ ಕೈಯಿಟ್ಟು ಸ್ವೀಡನ್ ಅಭಿಮಾನಿಗಳ ಕಡೆಗೆ ತಿರುಗಿ ಅತ್ಯಂತ ಉತ್ಸಾಹದಿಂದ ಸಂಭ್ರಮಿಸಿದರು. ಈ ಮೂಲಕ ಸ್ವೀಡನ್ ಫ್ಯಾನ್ಸ್​ಗಳ ಸಂಭ್ರಮ ಹೆಚ್ಚಿಸಿದರು.

ಇದನ್ನೂ ಓದಿ: ಗೋಲುಗಳ ಮೇಲೆ ಗೋಲು… ವಿಶ್ವ ದಾಖಲೆ ಸರಿಗಟ್ಟಿದ ಮೆಸ್ಸಿ..!

ಇತಿಹಾಸ ಬರೆದ ಅಯಾರಿ:

ಈ ಎರಡು ಗೋಲುಗಳ ಮೂಲಕ ಯಾಸಿನ್ ಅಯಾರಿ ವಿಶ್ವಕಪ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಎರಡು ಗೋಲು ಗಳಿಸಿದ ಸ್ವೀಡನ್‌ನ ಮೂರನೇ ಅತ್ಯಂತ ಕಿರಿಯ ಆಟಗಾರ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಇಂಗ್ಲಿಷ್ ಪ್ರೀಮಿಯರ್ ಲೀಗ್‌ನ ಬ್ರೈಟನ್ ಕ್ಲಬ್ ಪರ ಆಡುತ್ತಿರುವ ಈ ಯುವ ಮಿಡ್‌ಫೀಲ್ಡರ್, ಈ ಪಂದ್ಯದ ಮೂಲಕ ಜಾಗತಿಕ ಫುಟ್‌ಬಾಲ್‌ನಲ್ಲಿ ಹೊಸ ಭಾಷ್ಯ ಬರೆಯುವ ಸೂಚನೆ ನೀಡಿದ್ದಾರೆ.

Source link

ಹಸೆಮಣೆ ಏರಲಿದ್ದಾರೆ ಶರ್ಮಿಳಾ ಮಾಂಡ್ರೆ, ವರ ತಮಿಳು ಸಿನಿಮಾ ನಿರ್ಮಾಪಕ – Kannada News | Sharmila Mandre getting married to Tamil movie producer Sudhan

ಕನ್ನಡದ ಜನಪ್ರಿಯ ನಟಿ ಶರ್ಮಿಳಾ ಮಾಂಡ್ರೆ (Sharmila Mandre) ಮದುವೆ ಆಗಲಿದ್ದಾರೆ. ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ನಟಿಸಿರುವ ಶರ್ಮಿಳಾ ಮಾಂಡ್ರೆ ಇದೀಗ ತಮಿಳುನಾಡಿನ ಸೊಸೆ ಆಗಲಿದ್ದಾರೆ. ಶರ್ಮಿಳಾ ಮಾಂಡ್ರೆ ಅವರ ನಿಶ್ಚಿತಾರ್ಥ ನಿಶ್ಚಯವಾಗಿದ್ದು, ಇದೇ ತಿಂಗಳ 25ನೇ ತಾರೀಖಿನಂದು ಕುಟುಂಬಸ್ಥರ ಸಮ್ಮುಖದಲ್ಲಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ ನಡೆಯಲಿದೆ.

ಶರ್ಮಿಳಾ ಮಾಂಡ್ರೆ ಅವರು ತಮಿಳುನಾಡಿನ ಸೊಸೆಯಾಗಿ ಹೋಗಲಿದ್ದು, ತಮಿಳು ಚಿತ್ರರಂಗದ ನಿರ್ಮಾಪಕ ಸುಧನ್ ಸುಂಧರಮ್ ಅವರ ಕೈ ಹಿಡಿಯಲಿದ್ದಾರೆ. ಸುಧನ್ ಅವರು ಕೆಲ ವರ್ಷಗಳ ಹಿಂದೆ ಬಿಡುಗಡೆ ಆಗ ಬ್ಲಾಕ್ ಬಸ್ಟರ್ ಸಿನಿಮಾ ‘ಮಹಾರಾಜ’ದ ನಿರ್ಮಾಪಕ ಆಗಿದ್ದಾರೆ. ‘ಮಹಾರಾಜ’ ಮಾತ್ರವಲ್ಲದೆ ಇತ್ತೀಚೆಗೆ ಸೂಪರ್ ಹಿಟ್ ಆದ ತಮಿಳು ಸಿನಿಮಾ ‘ತಾಕ್ ಕಿಳವಿ’ಗೂ ಇವರು ಸಹ ನಿರ್ಮಾಪಕರು. ಕೆಲವೇ ದಿನಗಳಲ್ಲಿ ಇವರ ನಿಶ್ಚಿತಾರ್ಥ ನಡೆಯಲಿದ್ದು, ಮದುವೆ ಸಹ ಇದೇ ವರ್ಷದಲ್ಲಿ ನೆರವೇರಲಿದೆ.

ಸುಧನ್ ಅವರು ಪ್ಯಾಷನ್ ಸ್ಟುಡಿಯೋಸ್ ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿದ್ದು, ಸಿನಿಮಾ ನಿರ್ಮಾಣ ಮತ್ತು ವಿತರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಮಹಾರಾಜ’ ಮಾತ್ರವಲ್ಲದೆ, ತಮಿಳಿನ ‘ಬೆಂಜ್’, ‘ಇರೈವನ್’, ಇನ್ನೂ ಕೆಲ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಇದೀಗ ನಟಿ ಶರ್ಮಿಳಾ ಮಾಂಡ್ರೆ ಅವರನ್ನು ವಿವಾಹವಾಗುತ್ತಿದ್ದಾರೆ.

ಇದನ್ನೂ ಓದಿ:ಲೈವ್ ಮ್ಯೂಸಿಕ್ ಶೋ ಎಂಜಾಯ್ ಮಾಡಿದ ನಟಿ ಶರ್ಮಿಳಾ ಮಾಂಡ್ರೆ

2007 ರಲ್ಲಿ ಬಿಡುಗಡೆ ಆದ ‘ಸಜನಿ’ ಸಿನಿಮಾ ಮೂಲಕ ನಟನೆ ಆರಂಭಿಸಿದ ಶರ್ಮಿಳಾ ಮಾಂಡ್ರೆ ಹಲವು ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ತಮಿಳಿನ ‘ಅದೃಷ್ಟಶಾಲಿ’ ಮತ್ತು ‘ದಸರಾ’ ಹೆಸರಿನ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ ನಟಿ ಮಾತ್ರವೇ ಅಲ್ಲದೆ ನಿರ್ಮಾಪಕಿಯೂ ಆಗಿದ್ದು ತಮಿಳಿನಲ್ಲಿ ನಾಲ್ಕು ಸಿನಿಮಾ ನಿರ್ಮಿಸಿದ್ದಾರೆ. ಕನ್ನಡದಲ್ಲಿ ‘ದಸರಾ’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ತಮಿಳಿನ ‘ಕಾದಲ್ ಕೊಂಜಂ ತೂಕಲಾ’ ಹೆಸರಿನ ತಮಿಳು ಸಿನಿಮಾವನ್ನೂ ಸಹ ನಿರ್ಮಾಣ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link